logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಕೆ.ಜಿ.ಎಫ್ ತಾಲ್ಲೂಕಿನ ರಾಮಸಾಗರ ಗ್ರಾಪಂ ವ್ಯಾಪ್ತಿಯ ಪಾಪೇನಹಳ್ಳಿ ಗ್ರಾಮದ ಸರ್ಕಾರಿ ರಾಜಕಾಲುವೆಯಲ್ಲಿದ್ದ ಬೆಲೆಬಾಳುವ ಹುಣಸೆ ಮರಗಳನ್ನು ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ಕಟಾವು ಮಾಡಿ ಸಾಗಿಸುತ್ತಿರುವುದಕ್ಕೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಗ್ರಾಮದ ವಿವಿಧ ಸರ್ವೆ ನಂಬರ್‌ಗಳ ಮಧ್ಯೆ ಹಾದುಹೋಗುವ ರಾಜಕಾಲುವೆಯ ಆಜುಬಾಜು ಬೃಹತ್ ಮರಗಳು ಬೆಳೆದಿದ್ದು, ತಹಶೀಲ್ದಾರ್ ಆದೇಶದನ್ವಯ ಕಂದಾಯ ಅಧಿಕಾರಿಗಳು ಈ ಹಿಂದೆ ಮಹಜರು ನಡೆಸಿ ಒಟ್ಟು 18 ಬೃಹತ್ ಮರಗಳನ್ನು ಗುರುತಿಸಿದ್ದರು. ಸಾರ್ವಜನಿಕ ಆಸ್ತಿಯಾದ ಈ ಮರಗಳನ್ನು ಸಂರಕ್ಷಿಸುವ ಜವಾಬ್ದಾರಿಯನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ (ಪಿಡಿಒ) ವಹಿಸಲಾಗಿತ್ತು ಎನ್ನಲಾಗಿದೆ. ಆದರೆ, ಕಳೆದ 15 ದಿನಗಳಿಂದ ಖಾಸಗಿ ವ್ಯಕ್ತಿಗಳು ಕಾನೂನುಬಾಹಿರವಾಗಿ ಎರಡು ಬೃಹತ್ ಹುಣಸೆ ಮರಗಳನ್ನು ಕಡಿದು ಸಾಗಿಸುತ್ತಿದ್ದರೂ ತಡೆಯದ ಪಂಚಾಯಿತಿ ಅಧಿಕಾರಿಗಳು ಸರ್ಕಾರಿ ಸ್ವತ್ತನ್ನು ಕಾಪಾಡುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಆಕ್ರೋಶದ ಸಂದರ್ಭದಲ್ಲಿ ಗ್ರಾಮಸ್ಥರಾದ ರಮೇಶ್, ಮಲ್ಲನ್ನ ಹಾಗೂ ನಾರಾಯಣಪ್ಪ ಉಪಸ್ಥಿತರಿದ್ದರು.

2 hrs ago
user_Prashanth  Vibes
Prashanth Vibes
Video Creator ಕೋಲಾರ ಗೋಲ್ಡ್ ಫೀಲ್ಡ್, ಕೋಲಾರ, ಕರ್ನಾಟಕ•
2 hrs ago

ಕೆ.ಜಿ.ಎಫ್ ತಾಲ್ಲೂಕಿನ ರಾಮಸಾಗರ ಗ್ರಾಪಂ ವ್ಯಾಪ್ತಿಯ ಪಾಪೇನಹಳ್ಳಿ ಗ್ರಾಮದ ಸರ್ಕಾರಿ ರಾಜಕಾಲುವೆಯಲ್ಲಿದ್ದ ಬೆಲೆಬಾಳುವ ಹುಣಸೆ ಮರಗಳನ್ನು ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ಕಟಾವು ಮಾಡಿ ಸಾಗಿಸುತ್ತಿರುವುದಕ್ಕೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಗ್ರಾಮದ ವಿವಿಧ ಸರ್ವೆ ನಂಬರ್‌ಗಳ ಮಧ್ಯೆ ಹಾದುಹೋಗುವ ರಾಜಕಾಲುವೆಯ ಆಜುಬಾಜು ಬೃಹತ್ ಮರಗಳು ಬೆಳೆದಿದ್ದು, ತಹಶೀಲ್ದಾರ್ ಆದೇಶದನ್ವಯ ಕಂದಾಯ ಅಧಿಕಾರಿಗಳು ಈ ಹಿಂದೆ ಮಹಜರು ನಡೆಸಿ ಒಟ್ಟು 18 ಬೃಹತ್ ಮರಗಳನ್ನು ಗುರುತಿಸಿದ್ದರು. ಸಾರ್ವಜನಿಕ ಆಸ್ತಿಯಾದ ಈ ಮರಗಳನ್ನು ಸಂರಕ್ಷಿಸುವ ಜವಾಬ್ದಾರಿಯನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ (ಪಿಡಿಒ) ವಹಿಸಲಾಗಿತ್ತು ಎನ್ನಲಾಗಿದೆ. ಆದರೆ, ಕಳೆದ 15 ದಿನಗಳಿಂದ ಖಾಸಗಿ ವ್ಯಕ್ತಿಗಳು ಕಾನೂನುಬಾಹಿರವಾಗಿ ಎರಡು ಬೃಹತ್ ಹುಣಸೆ ಮರಗಳನ್ನು ಕಡಿದು ಸಾಗಿಸುತ್ತಿದ್ದರೂ ತಡೆಯದ ಪಂಚಾಯಿತಿ ಅಧಿಕಾರಿಗಳು ಸರ್ಕಾರಿ ಸ್ವತ್ತನ್ನು ಕಾಪಾಡುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಆಕ್ರೋಶದ ಸಂದರ್ಭದಲ್ಲಿ ಗ್ರಾಮಸ್ಥರಾದ ರಮೇಶ್, ಮಲ್ಲನ್ನ ಹಾಗೂ ನಾರಾಯಣಪ್ಪ ಉಪಸ್ಥಿತರಿದ್ದರು.

More news from ಕರ್ನಾಟಕ and nearby areas
  • ಬಂಗಾರಪೇಟೆ ತಾಲೂಕಿನ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಜಿ ಸಂಸದ ಎಸ್ ಮುನಿಸ್ವಾಮಿ ಅವರ ಹೇಳಿಕೆಯು ಕುಣಿಯಲಾರದವನಿಗೆ ನೆಲ ಡೊಂಕು ಎಂಬಂತಿದೆ ಎಂದು ಪಿಎಪಿಎಂಎಸ್ ಉಪಾಧ್ಯಕ್ಷ ಅ.ನಾ ಹರೀಶ್ ತೀವ್ರವಾಗಿ ಗುಡುಗಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾಜಿ ಸಂಸದ ಎಸ್ ಮುನಿಸ್ವಾಮಿ ಅವರು ತಮ್ಮ ಅಧಿಕಾರ ಅವಧಿಯಲ್ಲಿ ಕ್ಷೇತ್ರಕ್ಕೆ ಯಾವುದೇ ಅನುದಾನವನ್ನು ತರದೆ ಅನಗತ್ಯವಾಗಿ ಕಾಲಹರಣ ಮಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿದರು. ಇಂದು ಶಾಸಕ ಎಸ್ ಎನ್ ನಾರಾಯಣಸ್ವಾಮಿ ಅವರ ಅಭಿವೃದ್ಧಿ ಕಾರ್ಯಗಳನ್ನು ಕಂಡು ಸಹಿಸದೆ, ಮಾಜಿ ಸಂಸದರು ಅನಗತ್ಯವಾಗಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ದುರುದ್ದೇಶದಿಂದ ಈ ಅಭಿವೃದ್ಧಿ ಕಾರ್ಯಗಳಿಗೆ ಆಕ್ಷೇಪ ವ್ಯಕ್ತಪಡಿಸುತ್ತಿರುವುದು ಯಾವುದೇ ರೀತಿಯಲ್ಲೂ ಸಮಂಜಸವಲ್ಲ ಎಂದು ಹರೀಶ್ ಕಿಡಿಕಾರಿದ್ದಾರೆ. ಈ ಸಂದರ್ಭದಲ್ಲಿ ಬಂಗಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಣಿಂಬೆಲೆ ಶ್ರೀನಿವಾಸ್, ಮಾಜಿ ಪುರಸಭೆ ಅಧ್ಯಕ್ಷ ಗೋವಿಂದ, ಮಾಜಿ ಪುರಸಭೆ ಸದಸ್ಯ ಸುಹೇಲ್, ಯುವ ಮುಖಂಡರಾದ ಶಫೀಕ್, ಅರುಣ್ ಹಾಗೂ ಶಿವರಾಜ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.
    1
    ಬಂಗಾರಪೇಟೆ ತಾಲೂಕಿನ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಜಿ ಸಂಸದ ಎಸ್ ಮುನಿಸ್ವಾಮಿ ಅವರ ಹೇಳಿಕೆಯು ಕುಣಿಯಲಾರದವನಿಗೆ ನೆಲ ಡೊಂಕು ಎಂಬಂತಿದೆ ಎಂದು ಪಿಎಪಿಎಂಎಸ್ ಉಪಾಧ್ಯಕ್ಷ ಅ.ನಾ ಹರೀಶ್ ತೀವ್ರವಾಗಿ ಗುಡುಗಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾಜಿ ಸಂಸದ ಎಸ್ ಮುನಿಸ್ವಾಮಿ ಅವರು ತಮ್ಮ ಅಧಿಕಾರ ಅವಧಿಯಲ್ಲಿ ಕ್ಷೇತ್ರಕ್ಕೆ ಯಾವುದೇ ಅನುದಾನವನ್ನು ತರದೆ ಅನಗತ್ಯವಾಗಿ ಕಾಲಹರಣ ಮಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

ಇಂದು ಶಾಸಕ ಎಸ್ ಎನ್ ನಾರಾಯಣಸ್ವಾಮಿ ಅವರ ಅಭಿವೃದ್ಧಿ ಕಾರ್ಯಗಳನ್ನು ಕಂಡು ಸಹಿಸದೆ, ಮಾಜಿ ಸಂಸದರು ಅನಗತ್ಯವಾಗಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ದುರುದ್ದೇಶದಿಂದ ಈ ಅಭಿವೃದ್ಧಿ ಕಾರ್ಯಗಳಿಗೆ ಆಕ್ಷೇಪ ವ್ಯಕ್ತಪಡಿಸುತ್ತಿರುವುದು ಯಾವುದೇ ರೀತಿಯಲ್ಲೂ ಸಮಂಜಸವಲ್ಲ ಎಂದು ಹರೀಶ್ ಕಿಡಿಕಾರಿದ್ದಾರೆ. ಈ ಸಂದರ್ಭದಲ್ಲಿ ಬಂಗಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಣಿಂಬೆಲೆ ಶ್ರೀನಿವಾಸ್, ಮಾಜಿ ಪುರಸಭೆ ಅಧ್ಯಕ್ಷ ಗೋವಿಂದ, ಮಾಜಿ ಪುರಸಭೆ ಸದಸ್ಯ ಸುಹೇಲ್, ಯುವ ಮುಖಂಡರಾದ ಶಫೀಕ್, ಅರುಣ್ ಹಾಗೂ ಶಿವರಾಜ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.
    user_Vishnu Press
    Vishnu Press
    Local News Reporter ಬಂಗಾರಪೇಟೆ, ಕೋಲಾರ, ಕರ್ನಾಟಕ•
    16 hrs ago
  • ಕೋಲಾರ ಜಿಲ್ಲೆಯ ವೇಮಗಲ್ ಪಟ್ಟಣ ಪಂಚಾಯತಿ ವ್ಯಾಪ್ತಿಯ ಬೆಟ್ಟಹೊಸಪುರ ವಾರ್ಡ್ 2 ರ ಬಳಿ ಇರುವ ಆರ್.ಎಸ್. ರಾಕ್ ಸ್ಯಾಂಡ್ ಕ್ರಷರ್ ಘಟಕದಲ್ಲಿ ಭೀಕರ ಅವಘಡ ಸಂಭವಿಸಿದೆ. ಪಶ್ಚಿಮ ಬಂಗಾಳದಿಂದ ಹೊಟ್ಟೆಪಾಡಿಗಾಗಿ ವಲಸೆ ಬಂದಿದ್ದ ಟಿಪ್ಪರ್ ಚಾಲಕ ಸುಬೇದ್, ನೂರು ಅಡಿ ಆಳದ ಕಲ್ಲು ಕ್ವಾರಿಗೆ ಟಿಪ್ಪರ್ ಸಮೇತ ಉರುಳಿ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಜುಲೈ 5 ರಂದು ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಕ್ರಷರ್ ನಿರ್ವಹಣೆಯ ಬೇಜವಾಬ್ದಾರಿ ಹಾಗೂ ಅಗತ್ಯ ಸುರಕ್ಷತಾ ಕ್ರಮಗಳ ಕೊರತೆಯೇ ಈ ದುರಂತಕ್ಕೆ ಕಾರಣ ಎಂದು ಆರೋಪಿಸಲಾಗಿದೆ. ಈ ಭೀಕರ ದುರಂತವನ್ನು ಮುಚ್ಚಿಹಾಕಲು ಕ್ರಷರ್ ಮಾಲೀಕರು ತೀವ್ರ ಯತ್ನ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಮಾಧ್ಯಮಗಳು ಮತ್ತು ಸಂಘಟನೆಗಳಿಗೆ ವಿಷಯ ತಿಳಿಯದಂತೆ ಎರಡು ದಿನಗಳ ಕಾಲ ಕ್ರಷರ್ ಒಳಗೆ ಯಾರಿಗೂ ಪ್ರವೇಶ ನೀಡದೆ ಬಂದೋಬಸ್ತ್ ಮಾಡಲಾಗಿತ್ತು. ಅಲ್ಲದೆ, ಮೃತ ಚಾಲಕನ ಬಡ ಕುಟುಂಬಕ್ಕೆ ಹಣದ ಆಮಿಷ ಒಡ್ಡಿ ಅವರಿಂದಲೇ ದೂರು ಕೊಡಿಸಲು ಮಾಲೀಕರು ಸಂಚು ರೂಪಿಸಿದ್ದರು ಎಂದು ತಿಳಿದುಬಂದಿದೆ. ಪ್ರಕರಣ ಬಹಿರಂಗವಾಗುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ದೊಡ್ಡ ಮಟ್ಟದ ಆಕ್ರೋಶ ವ್ಯಕ್ತವಾಗಿದ್ದು, ಕಾನೂನು ರಕ್ಷಕರೆನ್ನಿಸಿಕೊಂಡವರೇ ಭಕ್ಷಕರ ರಕ್ಷಣೆಗೆ ನಿಂತಿದ್ದಾರಾ ಎಂಬ ಗಂಭೀರ ಪ್ರಶ್ನೆಗಳು ಕೇಳಿಬರುತ್ತಿವೆ. ಇದರ ಬೆನ್ನಲ್ಲೇ, ನೊಂದ ಕುಟುಂಬಕ್ಕೆ ನ್ಯಾಯ ಹಾಗೂ ಸೂಕ್ತ ಪರಿಹಾರ ದೊರಕಿಸಿಕೊಡಬೇಕೆಂದು ಆಗ್ರಹಿಸಿ ಮೇಡಿಹಾಳ ಮುನಿಆಂಜಿನಪ್ಪ ಹಾಗೂ ಕಲ್ವಮಂಜಲಿ ರಾಮುಶಿವಣ್ಣ ನೇತೃತ್ವದಲ್ಲಿ ಪ್ರಗತಿಪರ ಸಂಘಟನೆಗಳು ವೇಮಗಲ್ ಪೊಲೀಸ್ ಠಾಣೆಯ ಮುಂದೆ ಧರಣಿ ನಡೆಸಿವೆ. ಕ್ರಷರ್ ಮಾಲೀಕನ ವಿರುದ್ಧ ದೂರು ದಾಖಲಿಸುವುದರ ಜೊತೆಗೆ, ಸರ್ಕಾರದ ನಿಯಮಗಳನ್ನು ಪಾಲಿಸದ ಮಾಲೀಕನ ವಿರುದ್ಧ ಕ್ರಮ ಕೈಗೊಳ್ಳಲು ವಿಫಲರಾಗಿ ಜಾಣ ಕುರುಡರಂತೆ ವರ್ತಿಸುತ್ತಿರುವ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೋದಂಡರಾಮಯ್ಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ. ನಾರಾಯಣಸ್ವಾಮಿ, ನಾಗನಾಳ ಶಂಕರ್, ರಾಂಪುರ ಮುನಿರಾಜು, ಚನ್ನಪ್ಪನಹಳ್ಳಿ ನಾಗರಾಜ್, ಸುಳದೇನಹಳ್ಳಿ ವೆಂಕಟರಾಜು ಮತ್ತು ವೇಮಗಲ್ ಬಹದ್ದೂರ್ ಖಾನ್ ಉಪಸ್ಥಿತರಿದ್ದರು.
    3
    ಕೋಲಾರ ಜಿಲ್ಲೆಯ ವೇಮಗಲ್ ಪಟ್ಟಣ ಪಂಚಾಯತಿ ವ್ಯಾಪ್ತಿಯ ಬೆಟ್ಟಹೊಸಪುರ ವಾರ್ಡ್ 2 ರ ಬಳಿ ಇರುವ ಆರ್.ಎಸ್. ರಾಕ್ ಸ್ಯಾಂಡ್ ಕ್ರಷರ್ ಘಟಕದಲ್ಲಿ ಭೀಕರ ಅವಘಡ ಸಂಭವಿಸಿದೆ. ಪಶ್ಚಿಮ ಬಂಗಾಳದಿಂದ ಹೊಟ್ಟೆಪಾಡಿಗಾಗಿ ವಲಸೆ ಬಂದಿದ್ದ ಟಿಪ್ಪರ್ ಚಾಲಕ ಸುಬೇದ್, ನೂರು ಅಡಿ ಆಳದ ಕಲ್ಲು ಕ್ವಾರಿಗೆ ಟಿಪ್ಪರ್ ಸಮೇತ ಉರುಳಿ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಜುಲೈ 5 ರಂದು ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಕ್ರಷರ್ ನಿರ್ವಹಣೆಯ ಬೇಜವಾಬ್ದಾರಿ ಹಾಗೂ ಅಗತ್ಯ ಸುರಕ್ಷತಾ ಕ್ರಮಗಳ ಕೊರತೆಯೇ ಈ ದುರಂತಕ್ಕೆ ಕಾರಣ ಎಂದು ಆರೋಪಿಸಲಾಗಿದೆ.

ಈ ಭೀಕರ ದುರಂತವನ್ನು ಮುಚ್ಚಿಹಾಕಲು ಕ್ರಷರ್ ಮಾಲೀಕರು ತೀವ್ರ ಯತ್ನ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಮಾಧ್ಯಮಗಳು ಮತ್ತು ಸಂಘಟನೆಗಳಿಗೆ ವಿಷಯ ತಿಳಿಯದಂತೆ ಎರಡು ದಿನಗಳ ಕಾಲ ಕ್ರಷರ್ ಒಳಗೆ ಯಾರಿಗೂ ಪ್ರವೇಶ ನೀಡದೆ ಬಂದೋಬಸ್ತ್ ಮಾಡಲಾಗಿತ್ತು. ಅಲ್ಲದೆ, ಮೃತ ಚಾಲಕನ ಬಡ ಕುಟುಂಬಕ್ಕೆ ಹಣದ ಆಮಿಷ ಒಡ್ಡಿ ಅವರಿಂದಲೇ ದೂರು ಕೊಡಿಸಲು ಮಾಲೀಕರು ಸಂಚು ರೂಪಿಸಿದ್ದರು ಎಂದು ತಿಳಿದುಬಂದಿದೆ. ಪ್ರಕರಣ ಬಹಿರಂಗವಾಗುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ದೊಡ್ಡ ಮಟ್ಟದ ಆಕ್ರೋಶ ವ್ಯಕ್ತವಾಗಿದ್ದು, ಕಾನೂನು ರಕ್ಷಕರೆನ್ನಿಸಿಕೊಂಡವರೇ ಭಕ್ಷಕರ ರಕ್ಷಣೆಗೆ ನಿಂತಿದ್ದಾರಾ ಎಂಬ ಗಂಭೀರ ಪ್ರಶ್ನೆಗಳು ಕೇಳಿಬರುತ್ತಿವೆ.

ಇದರ ಬೆನ್ನಲ್ಲೇ, ನೊಂದ ಕುಟುಂಬಕ್ಕೆ ನ್ಯಾಯ ಹಾಗೂ ಸೂಕ್ತ ಪರಿಹಾರ ದೊರಕಿಸಿಕೊಡಬೇಕೆಂದು ಆಗ್ರಹಿಸಿ ಮೇಡಿಹಾಳ ಮುನಿಆಂಜಿನಪ್ಪ ಹಾಗೂ ಕಲ್ವಮಂಜಲಿ ರಾಮುಶಿವಣ್ಣ ನೇತೃತ್ವದಲ್ಲಿ ಪ್ರಗತಿಪರ ಸಂಘಟನೆಗಳು ವೇಮಗಲ್ ಪೊಲೀಸ್ ಠಾಣೆಯ ಮುಂದೆ ಧರಣಿ ನಡೆಸಿವೆ. ಕ್ರಷರ್ ಮಾಲೀಕನ ವಿರುದ್ಧ ದೂರು ದಾಖಲಿಸುವುದರ ಜೊತೆಗೆ, ಸರ್ಕಾರದ ನಿಯಮಗಳನ್ನು ಪಾಲಿಸದ ಮಾಲೀಕನ ವಿರುದ್ಧ ಕ್ರಮ ಕೈಗೊಳ್ಳಲು ವಿಫಲರಾಗಿ ಜಾಣ ಕುರುಡರಂತೆ ವರ್ತಿಸುತ್ತಿರುವ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೋದಂಡರಾಮಯ್ಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ. ನಾರಾಯಣಸ್ವಾಮಿ, ನಾಗನಾಳ ಶಂಕರ್, ರಾಂಪುರ ಮುನಿರಾಜು, ಚನ್ನಪ್ಪನಹಳ್ಳಿ ನಾಗರಾಜ್, ಸುಳದೇನಹಳ್ಳಿ ವೆಂಕಟರಾಜು ಮತ್ತು ವೇಮಗಲ್ ಬಹದ್ದೂರ್ ಖಾನ್ ಉಪಸ್ಥಿತರಿದ್ದರು.
    user_ಎಸ್.ಎನ್.ಪ್ರಕಾಶ್
    ಎಸ್.ಎನ್.ಪ್ರಕಾಶ್
    ಕೋಲಾರ, ಕೋಲಾರ, ಕರ್ನಾಟಕ•
    16 hrs ago
  • ಎಸ್. ಜಾನಕಿ ಅವರಿಗೆ ಕಣ್ಣೀರಿನ ವಿದಾಯ ಹೇಳಲಾಗಿದ್ದು, ಅವರ ಅಂತ್ಯಸಂಸ್ಕಾರದ ಕಾರ್ಯಗಳು ಅತ್ಯಂತ ವಿಧಿವತ್ತಾಗಿ ನೆರವೇರಿವೆ.
    1
    ಎಸ್. ಜಾನಕಿ ಅವರಿಗೆ ಕಣ್ಣೀರಿನ ವಿದಾಯ ಹೇಳಲಾಗಿದ್ದು, ಅವರ ಅಂತ್ಯಸಂಸ್ಕಾರದ ಕಾರ್ಯಗಳು ಅತ್ಯಂತ ವಿಧಿವತ್ತಾಗಿ ನೆರವೇರಿವೆ.
    user_Veega News Kannada
    Veega News Kannada
    Technical service ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    5 hrs ago
  • ಮನುಷ್ಯನ ಜೀವನ ಎಂದರೆ ಏನು ಎಂಬುದನ್ನು ಮತ್ತು ಈ ಸಂದೇಶದ ಮಹತ್ವವನ್ನು ಅರಿಯಬೇಕಾಗಿದೆ. ಮನುಷ್ಯನ ಜೀವನವೆಂದರೇನು ಎಂಬ ಕುರಿತು ಈ ಸಂದೇಶವು ಅತ್ಯಂತ ಮಹತ್ವದ ಜೀವನದ ಪಾಠವನ್ನು ಹೇಳಿಕೊಡಲಿದೆ.
    1
    ಮನುಷ್ಯನ ಜೀವನ ಎಂದರೆ ಏನು ಎಂಬುದನ್ನು ಮತ್ತು ಈ ಸಂದೇಶದ ಮಹತ್ವವನ್ನು ಅರಿಯಬೇಕಾಗಿದೆ. ಮನುಷ್ಯನ ಜೀವನವೆಂದರೇನು ಎಂಬ ಕುರಿತು ಈ ಸಂದೇಶವು ಅತ್ಯಂತ ಮಹತ್ವದ ಜೀವನದ ಪಾಠವನ್ನು ಹೇಳಿಕೊಡಲಿದೆ.
    user_ಮಾಗನೂರು ಎಂ ಶಿವಕುಮಾರ್
    ಮಾಗನೂರು ಎಂ ಶಿವಕುಮಾರ್
    Agriculture cooperative ಮಳವಳ್ಳಿ, ಮಂಡ್ಯ, ಕರ್ನಾಟಕ•
    1 hr ago
  • ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣದ ಹೊರವಲಯದ ಶ್ರೀ ಕನ್ವೆನ್ಷನ್ ಹಾಲ್ ಬಳಿ ನಿಲ್ಲಿಸಿದ್ದ ಕಾರಿನ ಗ್ಲಾಸ್ ಒಡೆದು, ಅದರ ಸೀಟ್ ಮೇಲೆ ಇಟ್ಟಿದ್ದ ಚಿನ್ನಾಭರಣಗಳಿದ್ದ ಬ್ಯಾಗ್ ಕಳವು ಮಾಡಿಕೊಂಡು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಕನಕಪುರ ನಿವಾಸಿ ಸಿದ್ದೇಗೌಡ ಎಂಬುವರು ಒಡವೆ ಕಳೆದುಕೊಂಡವರಾಗಿದ್ದು, ಶನಿವಾರ ಸಂಜೆ 9:30 ರ ಸುಮಾರಿಗೆ ಈ ಘಟನೆ ಜರುಗಿದೆ. ಬಸವಪುರದ ಸಂಬಂಧಿಕರೊಬ್ಬರ ಮದುವೆ ಆರತಕ್ಷತೆ ಕಾರ್ಯಕ್ರಮಕ್ಕಾಗಿ ಸಿದ್ದೇಗೌಡ ಅವರು ಕುಟುಂಬ ಸಮೇತ ಬಂದಿದ್ದರು. ಕಾರನ್ನು ಹೊರಾವರಣದಲ್ಲಿ ನಿಲ್ಲಿಸಿ ಅವರು ಆರತಕ್ಷತೆಗೆ ತೆರಳಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳು ಕಾರಿನ ಗ್ಲಾಸ್ ಒಡೆದು ಹಾಕಿದ್ದಾರೆ. ಈ ವೇಳೆ ಕಾರಿನ ಮುಂಭಾಗದ ಸೀಟಿನ ಮೇಲೆ ಇಟ್ಟಿದ್ದ ಸುಮಾರು 76 ಗ್ರಾಂ ತೂಕದ ಕತ್ತಿನ ಸರ, ಜುಮುಕಿ, ಓಲೆ ಸೇರಿದಂತೆ ಇನ್ನಿತರ ಒಡವೆಗಳಿದ್ದ ಬ್ಯಾಗ್ ಅನ್ನು ಎಗರಿಸಿಕೊಂಡು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಕಳುವಾಗಿರುವ ಒಡವೆಗಳ ಮೌಲ್ಯ ಸುಮಾರು ₹13 ಲಕ್ಷ ಎಂದು ಅಂದಾಜಿಸಲಾಗಿದೆ. ಈ ಸಂಬಂಧ ಸಿದ್ದೇಗೌಡ ಅವರು ನೀಡಿದ ದೂರಿನ ಮೇರೆಗೆ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
    1
    ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣದ ಹೊರವಲಯದ ಶ್ರೀ ಕನ್ವೆನ್ಷನ್ ಹಾಲ್ ಬಳಿ ನಿಲ್ಲಿಸಿದ್ದ ಕಾರಿನ ಗ್ಲಾಸ್ ಒಡೆದು, ಅದರ ಸೀಟ್ ಮೇಲೆ ಇಟ್ಟಿದ್ದ ಚಿನ್ನಾಭರಣಗಳಿದ್ದ ಬ್ಯಾಗ್ ಕಳವು ಮಾಡಿಕೊಂಡು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಕನಕಪುರ ನಿವಾಸಿ ಸಿದ್ದೇಗೌಡ ಎಂಬುವರು ಒಡವೆ ಕಳೆದುಕೊಂಡವರಾಗಿದ್ದು, ಶನಿವಾರ ಸಂಜೆ 9:30 ರ ಸುಮಾರಿಗೆ ಈ ಘಟನೆ ಜರುಗಿದೆ.

ಬಸವಪುರದ ಸಂಬಂಧಿಕರೊಬ್ಬರ ಮದುವೆ ಆರತಕ್ಷತೆ ಕಾರ್ಯಕ್ರಮಕ್ಕಾಗಿ ಸಿದ್ದೇಗೌಡ ಅವರು ಕುಟುಂಬ ಸಮೇತ ಬಂದಿದ್ದರು. ಕಾರನ್ನು ಹೊರಾವರಣದಲ್ಲಿ ನಿಲ್ಲಿಸಿ ಅವರು ಆರತಕ್ಷತೆಗೆ ತೆರಳಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳು ಕಾರಿನ ಗ್ಲಾಸ್ ಒಡೆದು ಹಾಕಿದ್ದಾರೆ. ಈ ವೇಳೆ ಕಾರಿನ ಮುಂಭಾಗದ ಸೀಟಿನ ಮೇಲೆ ಇಟ್ಟಿದ್ದ ಸುಮಾರು 76 ಗ್ರಾಂ ತೂಕದ ಕತ್ತಿನ ಸರ, ಜುಮುಕಿ, ಓಲೆ ಸೇರಿದಂತೆ ಇನ್ನಿತರ ಒಡವೆಗಳಿದ್ದ ಬ್ಯಾಗ್ ಅನ್ನು ಎಗರಿಸಿಕೊಂಡು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಕಳುವಾಗಿರುವ ಒಡವೆಗಳ ಮೌಲ್ಯ ಸುಮಾರು ₹13 ಲಕ್ಷ ಎಂದು ಅಂದಾಜಿಸಲಾಗಿದೆ. ಈ ಸಂಬಂಧ ಸಿದ್ದೇಗೌಡ ಅವರು ನೀಡಿದ ದೂರಿನ ಮೇರೆಗೆ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
    user_B mallikarjunaswamy
    B mallikarjunaswamy
    ಮಳವಳ್ಳಿ, ಮಂಡ್ಯ, ಕರ್ನಾಟಕ•
    9 hrs ago
  • ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಪಿ.ಜಿ.ಪಾಳ್ಯದ ಅರಣ್ಯ ಪ್ರದೇಶವು ಪ್ರಕೃತಿ ಪ್ರಿಯರಿಗೆ ಹಾಗೂ ಪ್ರವಾಸಿಗರಿಗೆ ಅದ್ಭುತ ದೃಶ್ಯವೈಭವವನ್ನು ಉಣಬಡಿಸುತ್ತಿದೆ. ಇಲ್ಲಿನ ಸಫಾರಿಯಲ್ಲಿ ವನ್ಯಜೀವಿಗಳ ಸ್ವಚ್ಛಂದ ವಿಹಾರವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಪ್ರವಾಸಿಗರಲ್ಲಿ ಸಂಭ್ರಮ ಮನೆಮಾಡಿದೆ. ಇತ್ತೀಚೆಗೆ ಸಫಾರಿಯ ವೇಳೆ ದಟ್ಟ ಅರಣ್ಯದ ನಡುವೆ ಹಿಂಡು ಹಿಂಡಾಗಿ ಜಿಂಕೆಗಳು ಕಂಗೊಳಿಸುತ್ತಿರುವ ಮನಮೋಹಕ ದೃಶ್ಯಗಳು ಕಂಡುಬಂದಿವೆ. ಜಿಂಕೆಗಳ ಜೊತೆಗೆ ಆನೆಗಳು ಮತ್ತು ಕಾಡೆಮ್ಮೆಗಳು ಕೂಡ ತಮ್ಮ ಸಹಜ ಆವಾಸಸ್ಥಾನದಲ್ಲಿ ಸಂಚರಿಸುತ್ತಿರುವುದು ಪ್ರವಾಸಿಗರಿಗೆ ರೋಚಕ ಅನುಭವ ನೀಡಿದೆ. ದಟ್ಟ ಹಸಿರಿನ ನಡುವೆ ಮುಕ್ತವಾಗಿ ಸಂಚರಿಸುತ್ತಿರುವ ವನ್ಯಜೀವಿಗಳ ಸುಂದರ ದೃಶ್ಯಗಳನ್ನು ಪ್ರವಾಸಿಗರು ತಮ್ಮ ಕ್ಯಾಮರಾಗಳಲ್ಲಿ ಸೆರೆಹಿಡಿದಿದ್ದಾರೆ. ಪಿ.ಜಿ.ಪಾಳ್ಯದ ಈ ಸಫಾರಿ ಪ್ರದೇಶವು ಜಿಲ್ಲೆಯ ಪ್ರಮುಖ ಪ್ರವಾಸೀ ಆಕರ್ಷಣೆಯಾಗಿ ಹೊರಹೊಮ್ಮುತ್ತಿದ್ದು, ವನ್ಯಜೀವಿ ಪ್ರಿಯರಿಗೆ ಕಾಡಿನ ಸೌಂದರ್ಯವನ್ನು ಸವಿಯಲು ಉತ್ತಮ ಅವಕಾಶ ಕಲ್ಪಿಸಿದೆ.
    1
    ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಪಿ.ಜಿ.ಪಾಳ್ಯದ ಅರಣ್ಯ ಪ್ರದೇಶವು ಪ್ರಕೃತಿ ಪ್ರಿಯರಿಗೆ ಹಾಗೂ ಪ್ರವಾಸಿಗರಿಗೆ ಅದ್ಭುತ ದೃಶ್ಯವೈಭವವನ್ನು ಉಣಬಡಿಸುತ್ತಿದೆ. ಇಲ್ಲಿನ ಸಫಾರಿಯಲ್ಲಿ ವನ್ಯಜೀವಿಗಳ ಸ್ವಚ್ಛಂದ ವಿಹಾರವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಪ್ರವಾಸಿಗರಲ್ಲಿ ಸಂಭ್ರಮ ಮನೆಮಾಡಿದೆ.

ಇತ್ತೀಚೆಗೆ ಸಫಾರಿಯ ವೇಳೆ ದಟ್ಟ ಅರಣ್ಯದ ನಡುವೆ ಹಿಂಡು ಹಿಂಡಾಗಿ ಜಿಂಕೆಗಳು ಕಂಗೊಳಿಸುತ್ತಿರುವ ಮನಮೋಹಕ ದೃಶ್ಯಗಳು ಕಂಡುಬಂದಿವೆ. ಜಿಂಕೆಗಳ ಜೊತೆಗೆ ಆನೆಗಳು ಮತ್ತು ಕಾಡೆಮ್ಮೆಗಳು ಕೂಡ ತಮ್ಮ ಸಹಜ ಆವಾಸಸ್ಥಾನದಲ್ಲಿ ಸಂಚರಿಸುತ್ತಿರುವುದು ಪ್ರವಾಸಿಗರಿಗೆ ರೋಚಕ ಅನುಭವ ನೀಡಿದೆ. ದಟ್ಟ ಹಸಿರಿನ ನಡುವೆ ಮುಕ್ತವಾಗಿ ಸಂಚರಿಸುತ್ತಿರುವ ವನ್ಯಜೀವಿಗಳ ಸುಂದರ ದೃಶ್ಯಗಳನ್ನು ಪ್ರವಾಸಿಗರು ತಮ್ಮ ಕ್ಯಾಮರಾಗಳಲ್ಲಿ ಸೆರೆಹಿಡಿದಿದ್ದಾರೆ. ಪಿ.ಜಿ.ಪಾಳ್ಯದ ಈ ಸಫಾರಿ ಪ್ರದೇಶವು ಜಿಲ್ಲೆಯ ಪ್ರಮುಖ ಪ್ರವಾಸೀ ಆಕರ್ಷಣೆಯಾಗಿ ಹೊರಹೊಮ್ಮುತ್ತಿದ್ದು, ವನ್ಯಜೀವಿ ಪ್ರಿಯರಿಗೆ ಕಾಡಿನ ಸೌಂದರ್ಯವನ್ನು ಸವಿಯಲು ಉತ್ತಮ ಅವಕಾಶ ಕಲ್ಪಿಸಿದೆ.
    user_ಉಸ್ಮಾನ್ ಖಾನ್
    ಉಸ್ಮಾನ್ ಖಾನ್
    Local News Reporter ಹನೂರು, ಚಾಮರಾಜನಗರ, ಕರ್ನಾಟಕ•
    9 hrs ago
  • ಹಲಗೂರು ಸಮೀಪದ ಗೊಲ್ಲರಹಳ್ಳಿ ಗ್ರಾಮದಲ್ಲಿರುವ ಶ್ರೀ ಮಲೆ ಮಾದೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭಕ್ತಾದಿಗಳು ಒಟ್ಟಾಗಿ ಸೇರಿ ನೂತನವಾಗಿ ಮಲೆ ಮಾದೇಶ್ವರ ಸ್ವಾಮಿಯ ಕೊಳಗವನ್ನು (ಮುಖವಾಡ) ಮಾಡಿಸಿಕೊಟ್ಟಿದ್ದು, ಇದಕ್ಕೆ ಶನಿವಾರ ವಿಶೇಷ ಪೂಜಾ ಪುನಸ್ಕಾರಗಳನ್ನು ನಡೆಸಿ ಪ್ರಸಾದ ವಿನಿಯೋಗಿಸಲಾಯಿತು. ಮಳವಳ್ಳಿ ತಾಲೂಕಿನ ಗೊಲ್ಲರಹಳ್ಳಿಯಲ್ಲಿ ಜರುಗಿದ ಈ ಕೊಳಗ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯ ಭಕ್ತಾದಿಗಳು ಪಾಲ್ಗೊಂಡು ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದರು. ಗ್ರಾಮದ ಅರ್ಚಕರಾದ ಮಹಾದೇವ ಅವರು ಮಾತನಾಡಿ, ಭಕ್ತರು ಸೇರಿ ಮಾಡಿಸಿಕೊಟ್ಟಿರುವ ಈ ಮಹದೇಶ್ವರ ಸ್ವಾಮಿಯ ಕೊಳಗದ ಮೂರ್ತಿಯನ್ನು ಮಲೆ ಮಹದೇಶ್ವರ ಬೆಟ್ಟಕ್ಕೆ ತೆಗೆದುಕೊಂಡು ಹೋಗಿ ದೇವಸ್ಥಾನದ ಆವರಣದಲ್ಲಿ ಸ್ವಾಮಿಯ ಮುಂದೆ ಪೂಜೆ ಮಾಡಿಸಲಾಗುತ್ತದೆ. ಆ ನಂತರ ಸಾಲೂರು ಮಠದ ಸ್ವಾಮೀಜಿಯವರ ಸನ್ನಿಧಿಯಲ್ಲಿ ಹೂವು ಹೊಂಬಾಳೆ ಮಾಡಿಸಿ, ಅವರ ಅನುಮತಿ ಹಾಗೂ ಆಶೀರ್ವಾದದೊಂದಿಗೆ ಗೊಲ್ಲರಹಳ್ಳಿ ಗ್ರಾಮದ ದೇವಸ್ಥಾನದಲ್ಲಿ ಕೊಳಗವನ್ನು ಧರಿಸಲಾಗುತ್ತದೆ ಎಂದು ವಿವರಿಸಿದರು. ಈ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಮಲೆ ಮಾದೇಶ್ವರ ಬೆಟ್ಟದಲ್ಲಿ ಅನ್ನ ಸಂತರ್ಪಣೆಯನ್ನು ಸಹ ಏರ್ಪಡಿಸಲಾಗಿದ್ದು, ಗೊಲ್ಲರಹಳ್ಳಿ, ನಂಜಾಪುರ, ಮಡಳ್ಳಿ ಹಾಗೂ ಚಿಕ್ಕ ಏಳಚೆಗೆರೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತಾದಿಗಳು ಪೂಜೆ ಮುಗಿಸಿಕೊಂಡು ಬರಲು ಬೆಟ್ಟಕ್ಕೆ ತೆರಳಿದ್ದಾರೆ.
    1
    ಹಲಗೂರು ಸಮೀಪದ ಗೊಲ್ಲರಹಳ್ಳಿ ಗ್ರಾಮದಲ್ಲಿರುವ ಶ್ರೀ ಮಲೆ ಮಾದೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭಕ್ತಾದಿಗಳು ಒಟ್ಟಾಗಿ ಸೇರಿ ನೂತನವಾಗಿ ಮಲೆ ಮಾದೇಶ್ವರ ಸ್ವಾಮಿಯ ಕೊಳಗವನ್ನು (ಮುಖವಾಡ) ಮಾಡಿಸಿಕೊಟ್ಟಿದ್ದು, ಇದಕ್ಕೆ ಶನಿವಾರ ವಿಶೇಷ ಪೂಜಾ ಪುನಸ್ಕಾರಗಳನ್ನು ನಡೆಸಿ ಪ್ರಸಾದ ವಿನಿಯೋಗಿಸಲಾಯಿತು. ಮಳವಳ್ಳಿ ತಾಲೂಕಿನ ಗೊಲ್ಲರಹಳ್ಳಿಯಲ್ಲಿ ಜರುಗಿದ ಈ ಕೊಳಗ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯ ಭಕ್ತಾದಿಗಳು ಪಾಲ್ಗೊಂಡು ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದರು.

ಗ್ರಾಮದ ಅರ್ಚಕರಾದ ಮಹಾದೇವ ಅವರು ಮಾತನಾಡಿ, ಭಕ್ತರು ಸೇರಿ ಮಾಡಿಸಿಕೊಟ್ಟಿರುವ ಈ ಮಹದೇಶ್ವರ ಸ್ವಾಮಿಯ ಕೊಳಗದ ಮೂರ್ತಿಯನ್ನು ಮಲೆ ಮಹದೇಶ್ವರ ಬೆಟ್ಟಕ್ಕೆ ತೆಗೆದುಕೊಂಡು ಹೋಗಿ ದೇವಸ್ಥಾನದ ಆವರಣದಲ್ಲಿ ಸ್ವಾಮಿಯ ಮುಂದೆ ಪೂಜೆ ಮಾಡಿಸಲಾಗುತ್ತದೆ. ಆ ನಂತರ ಸಾಲೂರು ಮಠದ ಸ್ವಾಮೀಜಿಯವರ ಸನ್ನಿಧಿಯಲ್ಲಿ ಹೂವು ಹೊಂಬಾಳೆ ಮಾಡಿಸಿ, ಅವರ ಅನುಮತಿ ಹಾಗೂ ಆಶೀರ್ವಾದದೊಂದಿಗೆ ಗೊಲ್ಲರಹಳ್ಳಿ ಗ್ರಾಮದ ದೇವಸ್ಥಾನದಲ್ಲಿ ಕೊಳಗವನ್ನು ಧರಿಸಲಾಗುತ್ತದೆ ಎಂದು ವಿವರಿಸಿದರು. ಈ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಮಲೆ ಮಾದೇಶ್ವರ ಬೆಟ್ಟದಲ್ಲಿ ಅನ್ನ ಸಂತರ್ಪಣೆಯನ್ನು ಸಹ ಏರ್ಪಡಿಸಲಾಗಿದ್ದು, ಗೊಲ್ಲರಹಳ್ಳಿ, ನಂಜಾಪುರ, ಮಡಳ್ಳಿ ಹಾಗೂ ಚಿಕ್ಕ ಏಳಚೆಗೆರೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತಾದಿಗಳು ಪೂಜೆ ಮುಗಿಸಿಕೊಂಡು ಬರಲು ಬೆಟ್ಟಕ್ಕೆ ತೆರಳಿದ್ದಾರೆ.
    user_ಮಾಗನೂರು ಎಂ ಶಿವಕುಮಾರ್
    ಮಾಗನೂರು ಎಂ ಶಿವಕುಮಾರ್
    Agriculture cooperative ಮಳವಳ್ಳಿ, ಮಂಡ್ಯ, ಕರ್ನಾಟಕ•
    1 hr ago
  • ಮಂಡ್ಯದಲ್ಲಿ 35 ವರ್ಷಗಳ ಕಾಲ ಸಂಸಾರಕ್ಕಾಗಿ ದುಡಿದು ಮನೆ ಕಟ್ಟಿದ ವ್ಯಕ್ತಿಯೊಬ್ಬರು, ಈಗ ತಮ್ಮದೇ ಪತ್ನಿ ಮತ್ತು ಮಕ್ಕಳಿಂದ ತೀವ್ರ ಕಿರುಕುಳಕ್ಕೆ ಒಳಗಾಗಿದ್ದಾರೆ ಎಂದು ಆರೋಪಿಸಿದ್ದಾರೆ. ತಮಗೆ ಅನಾರೋಗ್ಯವಿದ್ದರೂ ಯಾವುದೇ ನೆರವು ನೀಡದೆ, ಕನಿಷ್ಠ ಊಟ ಮತ್ತು ನೀರನ್ನೂ ಕೊಡದೆ ಮನೆಯಿಂದ ಹೊರಹಾಕಲಾಗಿದೆ ಎಂದು ಅವರು ಅಳಲು ತೋಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಂತ್ರಸ್ತ ಪತಿಯು ಮಂಡ್ಯದಲ್ಲಿರುವ ರಾಷ್ಟ್ರೀಯ ಪುರುಷರ ಹಿತರಕ್ಷಣಾ ಸಮಿತಿಗೆ ದೂರು ನೀಡಿದ್ದಾರೆ. ಅಲ್ಲದೆ, ತಮ್ಮ ಪತ್ನಿಯ ವಿರುದ್ಧ ಅಕ್ರಮ ಸಂಬಂಧ ಹೊಂದಿರುವ ಗಂಭೀರ ಆರೋಪ ಸೇರಿದಂತೆ ಹಲವು ಆರೋಪಗಳನ್ನು ಅವರು ಮಾಡಿದ್ದಾರೆ.
    1
    ಮಂಡ್ಯದಲ್ಲಿ 35 ವರ್ಷಗಳ ಕಾಲ ಸಂಸಾರಕ್ಕಾಗಿ ದುಡಿದು ಮನೆ ಕಟ್ಟಿದ ವ್ಯಕ್ತಿಯೊಬ್ಬರು, ಈಗ ತಮ್ಮದೇ ಪತ್ನಿ ಮತ್ತು ಮಕ್ಕಳಿಂದ ತೀವ್ರ ಕಿರುಕುಳಕ್ಕೆ ಒಳಗಾಗಿದ್ದಾರೆ ಎಂದು ಆರೋಪಿಸಿದ್ದಾರೆ. ತಮಗೆ ಅನಾರೋಗ್ಯವಿದ್ದರೂ ಯಾವುದೇ ನೆರವು ನೀಡದೆ, ಕನಿಷ್ಠ ಊಟ ಮತ್ತು ನೀರನ್ನೂ ಕೊಡದೆ ಮನೆಯಿಂದ ಹೊರಹಾಕಲಾಗಿದೆ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.

ಈ ಹಿನ್ನೆಲೆಯಲ್ಲಿ ಸಂತ್ರಸ್ತ ಪತಿಯು ಮಂಡ್ಯದಲ್ಲಿರುವ ರಾಷ್ಟ್ರೀಯ ಪುರುಷರ ಹಿತರಕ್ಷಣಾ ಸಮಿತಿಗೆ ದೂರು ನೀಡಿದ್ದಾರೆ. ಅಲ್ಲದೆ, ತಮ್ಮ ಪತ್ನಿಯ ವಿರುದ್ಧ ಅಕ್ರಮ ಸಂಬಂಧ ಹೊಂದಿರುವ ಗಂಭೀರ ಆರೋಪ ಸೇರಿದಂತೆ ಹಲವು ಆರೋಪಗಳನ್ನು ಅವರು ಮಾಡಿದ್ದಾರೆ.
    user_AsnNews24Kannada
    AsnNews24Kannada
    Local News Reporter ಮಂಡ್ಯ, ಮಂಡ್ಯ, ಕರ್ನಾಟಕ•
    9 hrs ago
  • ನಟ ಸಾಧು ಕೋಕಿಲ ಅವರು ಜಾನಕಿ ಅವರ ನಿಧನಕ್ಕೆ ತಮ್ಮ ತೀವ್ರ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.
    1
    ನಟ ಸಾಧು ಕೋಕಿಲ ಅವರು ಜಾನಕಿ ಅವರ ನಿಧನಕ್ಕೆ ತಮ್ಮ ತೀವ್ರ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.
    user_Veega News Kannada
    Veega News Kannada
    Technical service ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    8 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.