logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಚಾಮರಾಜನಗರ ನಗರದ ಯಡಬೆಟ್ಟದಲ್ಲಿರುವ ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಸಿಮ್ಸ್) ಆವರಣದಲ್ಲಿ 5ನೇ ಘಟಿಕೋತ್ಸವ ಸಮಾರಂಭವು ವೈದ್ಯಕೀಯ ಜ್ಞಾನಾರ್ಜನೆ ಮಾಡಿದ ವಿದ್ಯಾರ್ಥಿಗಳ ಕಲರವದೊಂದಿಗೆ ನಡೆಯಿತು. ಈ ಅಪರೂಪದ ಕ್ಷಣಕ್ಕೆ ಎಂಬಿಬಿಎಸ್ ಪದವಿ ಪೂರ್ಣಗೊಳಿಸಿ ಮುಂದಿನ ಹಾದಿ ಹಿಡಿದ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಸಾಕ್ಷಿಯಾದರು. ಈ ಸಮಾರಂಭದಲ್ಲಿ ಒಟ್ಟು 143 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಮಾಜ ಸೇವಕರು, ಆದಿವಾಸಿಗಳ ಪರ ಹೋರಾಟಗಾರರು ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರ್ಯಪಡೆಯ ಮಾಜಿ ಅಧ್ಯಕ್ಷರಾದ ಪದ್ಮಶ್ರೀ ಡಾ. ಹೆಚ್.ಸುದರ್ಶನ್ ಅವರು ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿದರು. ವೈದ್ಯಕೀಯ ವೃತ್ತಿಯು ಅತ್ಯಂತ ಶ್ರೇಷ್ಠವಾಗಿದ್ದು, ಭಾವಿ ವೈದ್ಯರು ವೈದ್ಯಕೀಯ ಜ್ಞಾನದ ಜೊತೆಗೆ ನಿಸ್ವಾರ್ಥ ಸೇವಾ ಮನೋಭಾವ ಮತ್ತು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ಅತ್ಯಂತ ಅವಶ್ಯಕ ಎಂದು ಡಾ. ಸುದರ್ಶನ್ ಸಲಹೆ ನೀಡಿದರು. ಭಾರತದಲ್ಲಿ ವೈದ್ಯರಾಗಿ ನೋಂದಾಯಿಸಿಕೊಳ್ಳಲು ಒಂದು ವರ್ಷದ ಇಂಟರ್ನ್‌ಶಿಪ್ ಕಡ್ಡಾಯವಾಗಿ ಮುಗಿಸಬೇಕು ಎಂದು ತಿಳಿಸಿದ ಅವರು, ನಂತರ ವೃತ್ತಿಜೀವನವನ್ನು ಮುಂದುವರಿಸಲು ವೈದ್ಯಕೀಯ ಅಭ್ಯಾಸ, ಸ್ನಾತಕೋತ್ತರ ಪದವಿ, ಸಂಶೋಧನೆ ಮಾಡಬಹುದು ಎಂದರು. ಕೇವಲ ಆಸ್ಪತ್ರೆಗಳಿಗೆ ಸೀಮಿತವಾಗದೆ ಗ್ರಾಮೀಣ ಪ್ರದೇಶದ ಜನರಿಗೆ, ಬಡವರಿಗೆ ಉಚಿತ ಆರೋಗ್ಯ ಶಿಬಿರಗಳ ಮೂಲಕ ಸೇವೆ ಸಲ್ಲಿಸುವಂತೆ ಕರೆ ನೀಡಿದ ಡಾ. ಸುದರ್ಶನ್, ವಿದ್ಯಾರ್ಥಿಗಳ ಮುಂದಿನ ಜೀವನ ಸುಖಕರವಾಗಿರಲಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಿಮ್ಸ್‌ನ ಡೀನ್ ಮತ್ತು ನಿರ್ದೇಶಕ ಹೆಚ್.ಜಿ. ಮಂಜುನಾಥ್ ಮಾತನಾಡಿ, ನಮ್ಮ ಕಾಲೇಜಿನಲ್ಲಿ 5ನೇ ಘಟಿಕೋತ್ಸವ ನಡೆದಿದೆ. 2016-17ನೇ ಸಾಲಿನಲ್ಲಿ ವೈದ್ಯಕೀಯ ಕಾಲೇಜು ಆರಂಭವಾಯಿತು ಎಂದು ತಿಳಿಸಿದರು. 150 ವಿದ್ಯಾರ್ಥಿಗಳು ಕಾಲೇಜು ಪ್ರವೇಶ ಪಡೆದು ಕಠಿಣ ಅಭ್ಯಾಸ ಪೂರ್ಣಗೊಳಿಸಿ, ಜ್ಞಾನಾರ್ಜನೆ ಮತ್ತು ಕೌಶಲ್ಯ ಬೆಳೆಸಿಕೊಂಡು ವೈದ್ಯರಾಗಿ ಮುಂದಿನ ಹಂತಕ್ಕೆ ಹೋಗುತ್ತಾರೆ. ಇಂದು 143 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗಿದೆ ಎಂದು ಹೇಳಿದರು. ಪದವಿ ಪಡೆದ ವಿದ್ಯಾರ್ಥಿಗಳು ಮುಂದೆ ಅಭ್ಯಾಸ ಮಾಡಬಹುದು, ಸಂಶೋಧನೆ ಮಾಡಬಹುದು ಮತ್ತು ಸಮಾಜಕ್ಕೆ ಉತ್ತಮ ವೈದ್ಯರಾಗಿ ಸೇವೆ ಸಲ್ಲಿಸಲಿ ಎಂದು ಶುಭ ಕೋರಿದರು. ರೋಗಿಗಳೊಂದಿಗೆ ಸಂಯಮ ಮತ್ತು ಶಾಂತಿಯಿಂದ ವರ್ತಿಸಿ ಉತ್ತಮ ಚಿಕಿತ್ಸೆ ನೀಡಿ, ಸಿಮ್ಸ್‌ಗೆ ಒಳ್ಳೆಯ ಹೆಸರು ತಂದುಕೊಡಿ ಎಂದು ವಿದ್ಯಾರ್ಥಿಗಳಿಗೆ ಹಿತವಚನ ನುಡಿದರು. ಆಸ್ಪತ್ರೆಯಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆಯೂ ಮಂಜುನಾಥ್ ಮಾಹಿತಿ ನೀಡಿದರು. ಈ ಸಮಾರಂಭದಲ್ಲಿ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಪ್ರಾಂಶುಪಾಲ ಡಾ. ಕೆ.ಟಿ. ಅಜಯ್, ಜಿಲ್ಲಾ ವೈದ್ಯಕೀಯ ಅಧೀಕ್ಷಕ ಡಾ. ಸಿ.ವಿ. ಮಾರುತಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಎಂ. ಚಿನ್ನಬೋವಿ, ನಿವಾಸಿ ವೈದ್ಯಾಧಿಕಾರಿ ಡಾ. ಏಜಾಝುಲ್ಲಾ ಖಾನ್, ಡಾ. ಅಭಿಷೇಕ್, ಡಾ. ಪ್ರದೀಪ್, ಡಾ. ಚಂದ್ರಿಕಬಾಬು, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಡಾ. ಎನ್.ಪಿ. ಅಭಿಲಾಷ, ಆರ್ಥಿಕ ಸಲಹೆಗಾರ ರವಿ ಹೊಸಮನಿ, ವಿವಿಧ ವಿಭಾಗಗಳ ಮುಖ್ಯಸ್ಥರು, ಎಲ್ಲ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿ ವೃಂದ ಮತ್ತು ಪೋಷಕರು ಭಾಗವಹಿಸಿದ್ದರು.

6 hrs ago
user_S.Puttaswamyhonnur
S.Puttaswamyhonnur
Press reporter ಯಳಂದೂರು, ಚಾಮರಾಜನಗರ, ಕರ್ನಾಟಕ•
6 hrs ago
e47a4716-77ee-4f15-b80f-dfedf165147f

ಚಾಮರಾಜನಗರ ನಗರದ ಯಡಬೆಟ್ಟದಲ್ಲಿರುವ ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಸಿಮ್ಸ್) ಆವರಣದಲ್ಲಿ 5ನೇ ಘಟಿಕೋತ್ಸವ ಸಮಾರಂಭವು ವೈದ್ಯಕೀಯ ಜ್ಞಾನಾರ್ಜನೆ ಮಾಡಿದ ವಿದ್ಯಾರ್ಥಿಗಳ ಕಲರವದೊಂದಿಗೆ ನಡೆಯಿತು. ಈ ಅಪರೂಪದ ಕ್ಷಣಕ್ಕೆ ಎಂಬಿಬಿಎಸ್ ಪದವಿ ಪೂರ್ಣಗೊಳಿಸಿ ಮುಂದಿನ ಹಾದಿ ಹಿಡಿದ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಸಾಕ್ಷಿಯಾದರು. ಈ ಸಮಾರಂಭದಲ್ಲಿ ಒಟ್ಟು 143 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಮಾಜ ಸೇವಕರು, ಆದಿವಾಸಿಗಳ ಪರ ಹೋರಾಟಗಾರರು ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರ್ಯಪಡೆಯ ಮಾಜಿ ಅಧ್ಯಕ್ಷರಾದ ಪದ್ಮಶ್ರೀ ಡಾ. ಹೆಚ್.ಸುದರ್ಶನ್ ಅವರು ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿದರು. ವೈದ್ಯಕೀಯ ವೃತ್ತಿಯು ಅತ್ಯಂತ ಶ್ರೇಷ್ಠವಾಗಿದ್ದು, ಭಾವಿ ವೈದ್ಯರು ವೈದ್ಯಕೀಯ ಜ್ಞಾನದ ಜೊತೆಗೆ ನಿಸ್ವಾರ್ಥ ಸೇವಾ ಮನೋಭಾವ ಮತ್ತು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ಅತ್ಯಂತ ಅವಶ್ಯಕ ಎಂದು ಡಾ. ಸುದರ್ಶನ್ ಸಲಹೆ ನೀಡಿದರು. ಭಾರತದಲ್ಲಿ ವೈದ್ಯರಾಗಿ ನೋಂದಾಯಿಸಿಕೊಳ್ಳಲು ಒಂದು ವರ್ಷದ ಇಂಟರ್ನ್‌ಶಿಪ್ ಕಡ್ಡಾಯವಾಗಿ ಮುಗಿಸಬೇಕು ಎಂದು ತಿಳಿಸಿದ ಅವರು, ನಂತರ ವೃತ್ತಿಜೀವನವನ್ನು ಮುಂದುವರಿಸಲು ವೈದ್ಯಕೀಯ ಅಭ್ಯಾಸ, ಸ್ನಾತಕೋತ್ತರ ಪದವಿ, ಸಂಶೋಧನೆ ಮಾಡಬಹುದು ಎಂದರು. ಕೇವಲ ಆಸ್ಪತ್ರೆಗಳಿಗೆ ಸೀಮಿತವಾಗದೆ ಗ್ರಾಮೀಣ ಪ್ರದೇಶದ ಜನರಿಗೆ, ಬಡವರಿಗೆ ಉಚಿತ ಆರೋಗ್ಯ ಶಿಬಿರಗಳ ಮೂಲಕ ಸೇವೆ ಸಲ್ಲಿಸುವಂತೆ ಕರೆ ನೀಡಿದ ಡಾ. ಸುದರ್ಶನ್, ವಿದ್ಯಾರ್ಥಿಗಳ ಮುಂದಿನ ಜೀವನ ಸುಖಕರವಾಗಿರಲಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಿಮ್ಸ್‌ನ

1643da0b-bf90-4fd1-895b-3e89612bb764

ಡೀನ್ ಮತ್ತು ನಿರ್ದೇಶಕ ಹೆಚ್.ಜಿ. ಮಂಜುನಾಥ್ ಮಾತನಾಡಿ, ನಮ್ಮ ಕಾಲೇಜಿನಲ್ಲಿ 5ನೇ ಘಟಿಕೋತ್ಸವ ನಡೆದಿದೆ. 2016-17ನೇ ಸಾಲಿನಲ್ಲಿ ವೈದ್ಯಕೀಯ ಕಾಲೇಜು ಆರಂಭವಾಯಿತು ಎಂದು ತಿಳಿಸಿದರು. 150 ವಿದ್ಯಾರ್ಥಿಗಳು ಕಾಲೇಜು ಪ್ರವೇಶ ಪಡೆದು ಕಠಿಣ ಅಭ್ಯಾಸ ಪೂರ್ಣಗೊಳಿಸಿ, ಜ್ಞಾನಾರ್ಜನೆ ಮತ್ತು ಕೌಶಲ್ಯ ಬೆಳೆಸಿಕೊಂಡು ವೈದ್ಯರಾಗಿ ಮುಂದಿನ ಹಂತಕ್ಕೆ ಹೋಗುತ್ತಾರೆ. ಇಂದು 143 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗಿದೆ ಎಂದು ಹೇಳಿದರು. ಪದವಿ ಪಡೆದ ವಿದ್ಯಾರ್ಥಿಗಳು ಮುಂದೆ ಅಭ್ಯಾಸ ಮಾಡಬಹುದು, ಸಂಶೋಧನೆ ಮಾಡಬಹುದು ಮತ್ತು ಸಮಾಜಕ್ಕೆ ಉತ್ತಮ ವೈದ್ಯರಾಗಿ ಸೇವೆ ಸಲ್ಲಿಸಲಿ ಎಂದು ಶುಭ ಕೋರಿದರು. ರೋಗಿಗಳೊಂದಿಗೆ ಸಂಯಮ ಮತ್ತು ಶಾಂತಿಯಿಂದ ವರ್ತಿಸಿ ಉತ್ತಮ ಚಿಕಿತ್ಸೆ ನೀಡಿ, ಸಿಮ್ಸ್‌ಗೆ ಒಳ್ಳೆಯ ಹೆಸರು ತಂದುಕೊಡಿ ಎಂದು ವಿದ್ಯಾರ್ಥಿಗಳಿಗೆ ಹಿತವಚನ ನುಡಿದರು. ಆಸ್ಪತ್ರೆಯಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆಯೂ ಮಂಜುನಾಥ್ ಮಾಹಿತಿ ನೀಡಿದರು. ಈ ಸಮಾರಂಭದಲ್ಲಿ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಪ್ರಾಂಶುಪಾಲ ಡಾ. ಕೆ.ಟಿ. ಅಜಯ್, ಜಿಲ್ಲಾ ವೈದ್ಯಕೀಯ ಅಧೀಕ್ಷಕ ಡಾ. ಸಿ.ವಿ. ಮಾರುತಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಎಂ. ಚಿನ್ನಬೋವಿ, ನಿವಾಸಿ ವೈದ್ಯಾಧಿಕಾರಿ ಡಾ. ಏಜಾಝುಲ್ಲಾ ಖಾನ್, ಡಾ. ಅಭಿಷೇಕ್, ಡಾ. ಪ್ರದೀಪ್, ಡಾ. ಚಂದ್ರಿಕಬಾಬು, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಡಾ. ಎನ್.ಪಿ. ಅಭಿಲಾಷ, ಆರ್ಥಿಕ ಸಲಹೆಗಾರ ರವಿ ಹೊಸಮನಿ, ವಿವಿಧ ವಿಭಾಗಗಳ ಮುಖ್ಯಸ್ಥರು, ಎಲ್ಲ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿ ವೃಂದ ಮತ್ತು ಪೋಷಕರು ಭಾಗವಹಿಸಿದ್ದರು.

More news from ಕರ್ನಾಟಕ and nearby areas
  • ಹನೂರು ತಾಲ್ಲೂಕಿನ ಪೊನ್ನಾಚಿ ಗ್ರಾಮದಲ್ಲಿ ಹಲವು ತಿಂಗಳುಗಳಿಂದ ಗ್ರಾಮಸ್ಥರು ಮತ್ತು ರೈತರಲ್ಲಿ ತೀವ್ರ ಆತಂಕ ಮೂಡಿಸಿದ್ದ ಚಿರತೆಯೊಂದು ಅಂತಿಮವಾಗಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದಿದೆ. ಪೊನ್ನಾಚಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಕ್ಕೆಹೊಲದಲ್ಲಿ ಚಿರತೆಯ ಉಪಟಳ ಮಿತಿಮೀರಿತ್ತು; ಇದು ಪದೇ ಪದೇ ಜಾನುವಾರುಗಳ ಮೇಲೆ ದಾಳಿ ನಡೆಸಿ ಅವುಗಳನ್ನು ಕೊಂದು ಹಾಕುತ್ತಿತ್ತು. ಇದರಿಂದ ಕಂಗೆಟ್ಟ ಸ್ಥಳೀಯ ರೈತರು ಮತ್ತು ಗ್ರಾಮಸ್ಥರು, ಚಿರತೆಯನ್ನು ಶೀಘ್ರವಾಗಿ ಹಿಡಿಯುವಂತೆ ಅರಣ್ಯ ಇಲಾಖೆಗೆ ಹಲವು ಬಾರಿ ಮನವಿ ಮಾಡಿದ್ದರು. ರೈತರ ಒತ್ತಾಯಕ್ಕೆ ಮಣಿದ ಅರಣ್ಯ ಇಲಾಖೆಯು ಎರಡು ದಿನಗಳ ಹಿಂದೆ ಗ್ರಾಮದ ಜಮೀನಿನಲ್ಲಿ ಚಿರತೆಯನ್ನು ಸೆರೆಹಿಡಿಯಲು ಬೋನನ್ನು ಇರಿಸಿತ್ತು. ಇಲಾಖೆಯ ಕಾರ್ಯಾಚರಣೆ ಯಶಸ್ವಿಯಾಗಿದ್ದು, ನಿನ್ನೆ ತಡರಾತ್ರಿ ಸುಮಾರು 10:00 ಗಂಟೆಗೆ ಚಿರತೆಯು ಬೋನಿಗೆ ಬಿದ್ದಿದೆ. ಚಿರತೆ ಬೋನಿಗೆ ಬಿದ್ದಿರುವ ವಿಷಯ ತಿಳಿಯುತ್ತಿದ್ದಂತೆಯೇ ಅರಣ್ಯ ಇಲಾಖೆಯ ಸಿಬ್ಬಂದಿ ಸಕಲ ಸಿದ್ಧತೆಯೊಂದಿಗೆ ಸ್ಥಳಕ್ಕೆ ದೌಡಾಯಿಸಿದ್ದಾರೆ. ಇಂದು ಮುಂಜಾನೆ ಸುಮಾರು 4:00 ಗಂಟೆಗೆ ಅರಣ್ಯ ಇಲಾಖೆಯ ವಾಹನದಲ್ಲಿ ಚಿರತೆಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಸೆರೆಯಾದ ಚಿರತೆಯನ್ನು ಮೊದಲು ಆರೋಗ್ಯ ತಪಾಸಣೆಗೆ ಒಳಪಡಿಸಲಾಗುವುದು. ಬಳಿಕ ನಿಯಮದಂತೆ ಅದನ್ನು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಅರಣ್ಯ ಪ್ರದೇಶದಲ್ಲಿ ಬಿಡಲು ಇಲಾಖೆ ನಿರ್ಧರಿಸಿದೆ. ಈ ನಡುವೆ, ಪೊನ್ನಾಚಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಚಿರತೆಗಳು ಇರಬಹುದೆಂಬ ಅನುಮಾನವನ್ನು ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ. ಆದ್ದರಿಂದ, ಈಗಿರುವ ಬೋನನ್ನು ಇಲ್ಲಿಯೇ ಉಳಿಸಿಕೊಳ್ಳಬೇಕು ಮತ್ತು ಮುಂದಿನ ದಿನಗಳಲ್ಲಿ ಉಳಿದ ಚಿರತೆಗಳನ್ನು ಸೆರೆಹಿಡಿಯಲು ಅರಣ್ಯ ಇಲಾಖೆಯು ನಿರಂತರ ಕಾರ್ಯಾಚರಣೆಯನ್ನು ಮುಂದುವರಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
    3
    ಹನೂರು ತಾಲ್ಲೂಕಿನ ಪೊನ್ನಾಚಿ ಗ್ರಾಮದಲ್ಲಿ ಹಲವು ತಿಂಗಳುಗಳಿಂದ ಗ್ರಾಮಸ್ಥರು ಮತ್ತು ರೈತರಲ್ಲಿ ತೀವ್ರ ಆತಂಕ ಮೂಡಿಸಿದ್ದ ಚಿರತೆಯೊಂದು ಅಂತಿಮವಾಗಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದಿದೆ. ಪೊನ್ನಾಚಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಕ್ಕೆಹೊಲದಲ್ಲಿ ಚಿರತೆಯ ಉಪಟಳ ಮಿತಿಮೀರಿತ್ತು; ಇದು ಪದೇ ಪದೇ ಜಾನುವಾರುಗಳ ಮೇಲೆ ದಾಳಿ ನಡೆಸಿ ಅವುಗಳನ್ನು ಕೊಂದು ಹಾಕುತ್ತಿತ್ತು. ಇದರಿಂದ ಕಂಗೆಟ್ಟ ಸ್ಥಳೀಯ ರೈತರು ಮತ್ತು ಗ್ರಾಮಸ್ಥರು, ಚಿರತೆಯನ್ನು ಶೀಘ್ರವಾಗಿ ಹಿಡಿಯುವಂತೆ ಅರಣ್ಯ ಇಲಾಖೆಗೆ ಹಲವು ಬಾರಿ ಮನವಿ ಮಾಡಿದ್ದರು.

ರೈತರ ಒತ್ತಾಯಕ್ಕೆ ಮಣಿದ ಅರಣ್ಯ ಇಲಾಖೆಯು ಎರಡು ದಿನಗಳ ಹಿಂದೆ ಗ್ರಾಮದ ಜಮೀನಿನಲ್ಲಿ ಚಿರತೆಯನ್ನು ಸೆರೆಹಿಡಿಯಲು ಬೋನನ್ನು ಇರಿಸಿತ್ತು. ಇಲಾಖೆಯ ಕಾರ್ಯಾಚರಣೆ ಯಶಸ್ವಿಯಾಗಿದ್ದು, ನಿನ್ನೆ ತಡರಾತ್ರಿ ಸುಮಾರು 10:00 ಗಂಟೆಗೆ ಚಿರತೆಯು ಬೋನಿಗೆ ಬಿದ್ದಿದೆ. ಚಿರತೆ ಬೋನಿಗೆ ಬಿದ್ದಿರುವ ವಿಷಯ ತಿಳಿಯುತ್ತಿದ್ದಂತೆಯೇ ಅರಣ್ಯ ಇಲಾಖೆಯ ಸಿಬ್ಬಂದಿ ಸಕಲ ಸಿದ್ಧತೆಯೊಂದಿಗೆ ಸ್ಥಳಕ್ಕೆ ದೌಡಾಯಿಸಿದ್ದಾರೆ. ಇಂದು ಮುಂಜಾನೆ ಸುಮಾರು 4:00 ಗಂಟೆಗೆ ಅರಣ್ಯ ಇಲಾಖೆಯ ವಾಹನದಲ್ಲಿ ಚಿರತೆಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ.

ಸೆರೆಯಾದ ಚಿರತೆಯನ್ನು ಮೊದಲು ಆರೋಗ್ಯ ತಪಾಸಣೆಗೆ ಒಳಪಡಿಸಲಾಗುವುದು. ಬಳಿಕ ನಿಯಮದಂತೆ ಅದನ್ನು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಅರಣ್ಯ ಪ್ರದೇಶದಲ್ಲಿ ಬಿಡಲು ಇಲಾಖೆ ನಿರ್ಧರಿಸಿದೆ. ಈ ನಡುವೆ, ಪೊನ್ನಾಚಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಚಿರತೆಗಳು ಇರಬಹುದೆಂಬ ಅನುಮಾನವನ್ನು ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ. ಆದ್ದರಿಂದ, ಈಗಿರುವ ಬೋನನ್ನು ಇಲ್ಲಿಯೇ ಉಳಿಸಿಕೊಳ್ಳಬೇಕು ಮತ್ತು ಮುಂದಿನ ದಿನಗಳಲ್ಲಿ ಉಳಿದ ಚಿರತೆಗಳನ್ನು ಸೆರೆಹಿಡಿಯಲು ಅರಣ್ಯ ಇಲಾಖೆಯು ನಿರಂತರ ಕಾರ್ಯಾಚರಣೆಯನ್ನು ಮುಂದುವರಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
    user_ಉಸ್ಮಾನ್ ಖಾನ್
    ಉಸ್ಮಾನ್ ಖಾನ್
    Local News Reporter ಹನೂರು, ಚಾಮರಾಜನಗರ, ಕರ್ನಾಟಕ•
    16 hrs ago
  • ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣದ ಹೊರವಲಯದ ಶೆಟ್ಟಹಳ್ಳಿ ರಸ್ತೆಯಲ್ಲಿರುವ ಬಿ.ಎಂ. ಪಬ್ಲಿಕ್ ಶಾಲೆಯ ಆವರಣದಲ್ಲಿ ವಿಶ್ವ ಯೋಗ ದಿನಾಚರಣೆ ಮತ್ತು ವಿಶ್ವ ಸಂಗೀತ ದಿನಾಚರಣೆಯನ್ನು ಸಂಭ್ರಮದಿಂದ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಬಿ.ಎಂ. ಪಬ್ಲಿಕ್ ಶಾಲೆಯ ಕಾರ್ಯದರ್ಶಿ ಎಂ. ರಾಮಕೃಷ್ಣ ಅವರು ಮಾತನಾಡಿ, ಮಕ್ಕಳ ಸರ್ವತೋಮುಖ ಸಾಧನೆಗೆ ಯೋಗಾಭ್ಯಾಸವು ದಾರಿದೀಪವಾಗಿದೆ ಎಂದು ಹೇಳಿಕೆ ನೀಡಿದರು ಹಾಗೂ ಪ್ರತಿಯೊಬ್ಬರೂ ಯೋಗಾಭ್ಯಾಸ ಮಾಡಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಂ. ರಾಮಕೃಷ್ಣ ಅವರು, ವಿದ್ಯಾರ್ಥಿಗಳು ಶೈಕ್ಷಣಿಕ ಹಂತದಲ್ಲಿ ಪ್ರತಿನಿತ್ಯ ಯೋಗ ಮಾಡುವುದರಿಂದ ಏಕಾಗ್ರತೆ, ಜ್ಞಾನ, ಸದೃಢ ಆರೋಗ್ಯ ಹಾಗೂ ಶೈಕ್ಷಣಿಕ ಗುರಿ ಸಾಧನೆಗೆ ಸ್ಫೂರ್ತಿಯಾಗಲಿದೆ ಎಂದು ವಿವರಿಸಿದರು. ಇದೇ ಸಂದರ್ಭದಲ್ಲಿ ಪ್ರಾಂಶುಪಾಲರಾದ ಗಾಯತ್ರಿ ಜೋಶಿ ಅವರು ಯೋಗದ ಮಹತ್ವದ ಕುರಿತು ಮಾಹಿತಿ ಮತ್ತು ಮಾರ್ಗದರ್ಶನ ನೀಡಿದರು. ಯೋಗ ಗುರು ದೊಡ್ಡಣ್ಣನವರು ಮಕ್ಕಳಿಗೆ ಯೋಗಾಭ್ಯಾಸ ಹೇಳಿಕೊಡುವ ಮೂಲಕ ಯೋಗ ಮಾಡುವುದರಿಂದ ಸಿಗುವ ಅನುಕೂಲಗಳ ಬಗ್ಗೆ ಜಾಗೃತಿ ಮೂಡಿಸಿದರು. ವಿಶ್ವ ಸಂಗೀತ ದಿನದ ಅಂಗವಾಗಿ ಮಕ್ಕಳಿಂದ ಹಾಡುಗಳನ್ನು ಹಾಡಿಸಲಾಯಿತು. ಈ ಕಾರ್ಯಕ್ರಮದಲ್ಲಿ ಯೋಗ ಶಿಕ್ಷಕಿ ಶಶಿಕಲಾ, ಸಹ ಶಿಕ್ಷಕರು, ಮಕ್ಕಳು ಮತ್ತು ಶಾಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.
    1
    ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣದ ಹೊರವಲಯದ ಶೆಟ್ಟಹಳ್ಳಿ ರಸ್ತೆಯಲ್ಲಿರುವ ಬಿ.ಎಂ. ಪಬ್ಲಿಕ್ ಶಾಲೆಯ ಆವರಣದಲ್ಲಿ ವಿಶ್ವ ಯೋಗ ದಿನಾಚರಣೆ ಮತ್ತು ವಿಶ್ವ ಸಂಗೀತ ದಿನಾಚರಣೆಯನ್ನು ಸಂಭ್ರಮದಿಂದ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಬಿ.ಎಂ. ಪಬ್ಲಿಕ್ ಶಾಲೆಯ ಕಾರ್ಯದರ್ಶಿ ಎಂ. ರಾಮಕೃಷ್ಣ ಅವರು ಮಾತನಾಡಿ, ಮಕ್ಕಳ ಸರ್ವತೋಮುಖ ಸಾಧನೆಗೆ ಯೋಗಾಭ್ಯಾಸವು ದಾರಿದೀಪವಾಗಿದೆ ಎಂದು ಹೇಳಿಕೆ ನೀಡಿದರು ಹಾಗೂ ಪ್ರತಿಯೊಬ್ಬರೂ ಯೋಗಾಭ್ಯಾಸ ಮಾಡಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಂ. ರಾಮಕೃಷ್ಣ ಅವರು, ವಿದ್ಯಾರ್ಥಿಗಳು ಶೈಕ್ಷಣಿಕ ಹಂತದಲ್ಲಿ ಪ್ರತಿನಿತ್ಯ ಯೋಗ ಮಾಡುವುದರಿಂದ ಏಕಾಗ್ರತೆ, ಜ್ಞಾನ, ಸದೃಢ ಆರೋಗ್ಯ ಹಾಗೂ ಶೈಕ್ಷಣಿಕ ಗುರಿ ಸಾಧನೆಗೆ ಸ್ಫೂರ್ತಿಯಾಗಲಿದೆ ಎಂದು ವಿವರಿಸಿದರು. ಇದೇ ಸಂದರ್ಭದಲ್ಲಿ ಪ್ರಾಂಶುಪಾಲರಾದ ಗಾಯತ್ರಿ ಜೋಶಿ ಅವರು ಯೋಗದ ಮಹತ್ವದ ಕುರಿತು ಮಾಹಿತಿ ಮತ್ತು ಮಾರ್ಗದರ್ಶನ ನೀಡಿದರು. ಯೋಗ ಗುರು ದೊಡ್ಡಣ್ಣನವರು ಮಕ್ಕಳಿಗೆ ಯೋಗಾಭ್ಯಾಸ ಹೇಳಿಕೊಡುವ ಮೂಲಕ ಯೋಗ ಮಾಡುವುದರಿಂದ ಸಿಗುವ ಅನುಕೂಲಗಳ ಬಗ್ಗೆ ಜಾಗೃತಿ ಮೂಡಿಸಿದರು. ವಿಶ್ವ ಸಂಗೀತ ದಿನದ ಅಂಗವಾಗಿ ಮಕ್ಕಳಿಂದ ಹಾಡುಗಳನ್ನು ಹಾಡಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಯೋಗ ಶಿಕ್ಷಕಿ ಶಶಿಕಲಾ, ಸಹ ಶಿಕ್ಷಕರು, ಮಕ್ಕಳು ಮತ್ತು ಶಾಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.
    user_ಮಾಗನೂರು ಎಂ ಶಿವಕುಮಾರ್
    ಮಾಗನೂರು ಎಂ ಶಿವಕುಮಾರ್
    Agriculture cooperative ಮಳವಳ್ಳಿ, ಮಂಡ್ಯ, ಕರ್ನಾಟಕ•
    24 min ago
  • ಮಂಡ್ಯ ಜಿಲ್ಲಾ ಕಾರ್ಯನಿರತ‌ ಪತ್ರಕರ್ತರ ಸಂಘವು ಇಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ಅವರೊಂದಿಗೆ ವಿಶೇಷ ಸಂವಾದ ಕಾರ್ಯಕ್ರಮವನ್ನು ಆಯೋಜಿಸಿತ್ತು. ಮಾಜಿ ಮುಖ್ಯಮಂತ್ರಿಯವರ ಪುತ್ರರಾಗಿರುವ, ಹಿಂದೆ ಆ್ಯಕ್ಷನ್ ಚಿತ್ರಗಳಿಂದ ಹೆಸರು ಮಾಡಿದ್ದ ಮತ್ತು ಹಾಲಿ ಕ್ರೀಡಾಪಟು ಆಗಿರುವ ಕುಮಾರ್ ಬಂಗಾರಪ್ಪ, ಮಾಧ್ಯಮ ಮಿತ್ರರೊಂದಿಗೆ ಒಂದಿಷ್ಟು ಮಾತುಕತೆ ನಡೆಸಿ, ಒಂದು ಕಾಫಿ ಸೇವಿಸಿದರು. ಈ ಸಂವಾದದಲ್ಲಿ ಕುಮಾರ್ ಬಂಗಾರಪ್ಪ ರಾಜಕೀಯ, ಕ್ರೀಡೆ ಮತ್ತು ನಟನೆ ವಿಷಯಗಳ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಅತ್ಯಂತ ಸಂತೋಷದಿಂದ ಉತ್ತರ ನೀಡಿದರು. ಕಾವೇರಿ ನೀರು ವಿಚಾರದಲ್ಲಿ ತಮಿಳುನಾಡಿಗೆ ತರಾಟೆ ಮತ್ತು ಕೊಂಕು ನುಡಿದರು, ಹಾಗೂ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ ಎಂದು ತಿಳಿಸಿದರು. ಇದಲ್ಲದೆ, ಕ್ರೀಡಾ ಲೋಕದಲ್ಲಿ ಆಗುತ್ತಿರುವ ಬದಲಾವಣೆಗಳು, ರಾಜಕೀಯದಲ್ಲಿನ ಇಂದಿನ ಹಗ್ಗಜಗ್ಗಾಟ, ಬೀಡಿ ಟೌನ್‌ಶಿಪ್‌ನ ಪರಾಮರ್ಶೆಯ ಅಗತ್ಯತೆ ಮತ್ತು ಮುಂದಿನ ಚುನಾವಣೆಗಳಲ್ಲಿ ಬಿಜೆಪಿಯ ಆಂತರಿಕ ರಾಜಕೀಯದ ಕುರಿತು ಹರಟೆ ನಡೆಸಿದರು. ಈ ವೇಳೆ, ಕುಮಾರ್ ಬಂಗಾರಪ್ಪ ಹೆಚ್ಚು ಓದಿಕೊಂಡಿರುವ, ಸರಳ ಮತ್ತು ಮೃದುಭಾಷಿ ವ್ಯಕ್ತಿ ಎಂದು ತಿಳಿದುಬಂತು. ಸಂವಾದದ ಕೊನೆಯಲ್ಲಿ, ಪ್ರೆಸ್ ಕ್ಲಬ್‌ನಿಂದ ಕುಮಾರ್ ಬಂಗಾರಪ್ಪ ಅವರಿಗೆ ಸಣ್ಣ ಅಭಿನಂದನೆ ಸಲ್ಲಿಸಲಾಯಿತು. ಈ ಅಪರೂಪದ ಒಳ್ಳೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅರುಣ ಪ್ರಸಾದ್ ಗರುಡನಹಳ್ಳಿ ಅವರು, ಕುಮಾರ್ ಬಂಗಾರಪ್ಪ ನಗುತ್ತಲೇ ಪ್ರೆಸ್ ಕ್ಲಬ್‌ನಿಂದ ಹೊರಟರು ಎಂದು ತಿಳಿಸಿದ್ದು, ಪ್ರತಿ ದಿನವೂ ಇಂತಹ ಉತ್ತಮ ವಾತಾವರಣ ಪ್ರೆಸ್ ಕ್ಲಬ್‌ನಲ್ಲಿ ಇರಲಿ ಎಂಬ ಆಶಯ ವ್ಯಕ್ತಪಡಿಸಿದ್ದಾರೆ.
    1
    ಮಂಡ್ಯ ಜಿಲ್ಲಾ ಕಾರ್ಯನಿರತ‌ ಪತ್ರಕರ್ತರ ಸಂಘವು ಇಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ಅವರೊಂದಿಗೆ ವಿಶೇಷ ಸಂವಾದ ಕಾರ್ಯಕ್ರಮವನ್ನು ಆಯೋಜಿಸಿತ್ತು. ಮಾಜಿ ಮುಖ್ಯಮಂತ್ರಿಯವರ ಪುತ್ರರಾಗಿರುವ, ಹಿಂದೆ ಆ್ಯಕ್ಷನ್ ಚಿತ್ರಗಳಿಂದ ಹೆಸರು ಮಾಡಿದ್ದ ಮತ್ತು ಹಾಲಿ ಕ್ರೀಡಾಪಟು ಆಗಿರುವ ಕುಮಾರ್ ಬಂಗಾರಪ್ಪ, ಮಾಧ್ಯಮ ಮಿತ್ರರೊಂದಿಗೆ ಒಂದಿಷ್ಟು ಮಾತುಕತೆ ನಡೆಸಿ, ಒಂದು ಕಾಫಿ ಸೇವಿಸಿದರು.

ಈ ಸಂವಾದದಲ್ಲಿ ಕುಮಾರ್ ಬಂಗಾರಪ್ಪ ರಾಜಕೀಯ, ಕ್ರೀಡೆ ಮತ್ತು ನಟನೆ ವಿಷಯಗಳ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಅತ್ಯಂತ ಸಂತೋಷದಿಂದ ಉತ್ತರ ನೀಡಿದರು. ಕಾವೇರಿ ನೀರು ವಿಚಾರದಲ್ಲಿ ತಮಿಳುನಾಡಿಗೆ ತರಾಟೆ ಮತ್ತು ಕೊಂಕು ನುಡಿದರು, ಹಾಗೂ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ ಎಂದು ತಿಳಿಸಿದರು. ಇದಲ್ಲದೆ, ಕ್ರೀಡಾ ಲೋಕದಲ್ಲಿ ಆಗುತ್ತಿರುವ ಬದಲಾವಣೆಗಳು, ರಾಜಕೀಯದಲ್ಲಿನ ಇಂದಿನ ಹಗ್ಗಜಗ್ಗಾಟ, ಬೀಡಿ ಟೌನ್‌ಶಿಪ್‌ನ ಪರಾಮರ್ಶೆಯ ಅಗತ್ಯತೆ ಮತ್ತು ಮುಂದಿನ ಚುನಾವಣೆಗಳಲ್ಲಿ ಬಿಜೆಪಿಯ ಆಂತರಿಕ ರಾಜಕೀಯದ ಕುರಿತು ಹರಟೆ ನಡೆಸಿದರು. ಈ ವೇಳೆ, ಕುಮಾರ್ ಬಂಗಾರಪ್ಪ ಹೆಚ್ಚು ಓದಿಕೊಂಡಿರುವ, ಸರಳ ಮತ್ತು ಮೃದುಭಾಷಿ ವ್ಯಕ್ತಿ ಎಂದು ತಿಳಿದುಬಂತು.

ಸಂವಾದದ ಕೊನೆಯಲ್ಲಿ, ಪ್ರೆಸ್ ಕ್ಲಬ್‌ನಿಂದ ಕುಮಾರ್ ಬಂಗಾರಪ್ಪ ಅವರಿಗೆ ಸಣ್ಣ ಅಭಿನಂದನೆ ಸಲ್ಲಿಸಲಾಯಿತು. ಈ ಅಪರೂಪದ ಒಳ್ಳೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅರುಣ ಪ್ರಸಾದ್ ಗರುಡನಹಳ್ಳಿ ಅವರು, ಕುಮಾರ್ ಬಂಗಾರಪ್ಪ ನಗುತ್ತಲೇ ಪ್ರೆಸ್ ಕ್ಲಬ್‌ನಿಂದ ಹೊರಟರು ಎಂದು ತಿಳಿಸಿದ್ದು, ಪ್ರತಿ ದಿನವೂ ಇಂತಹ ಉತ್ತಮ ವಾತಾವರಣ ಪ್ರೆಸ್ ಕ್ಲಬ್‌ನಲ್ಲಿ ಇರಲಿ ಎಂಬ ಆಶಯ ವ್ಯಕ್ತಪಡಿಸಿದ್ದಾರೆ.
    user_Arunprasad G B
    Arunprasad G B
    Local News Reporter ಮಂಡ್ಯ, ಮಂಡ್ಯ, ಕರ್ನಾಟಕ•
    4 hrs ago
  • ಕರ್ನಾಟಕದ ಗೌರವಾನ್ವಿತ ಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಅವರಿಗೆ ಮೈಸೂರು ಮತ್ತು ಮಂಡ್ಯ ಜಿಲ್ಲಾ ವಕ್ಫ್ ಸಲಹಾ ಸಮಿತಿಗಳಲ್ಲಿ ನಡೆದಿರುವ ಎಲ್ಲಾ ಅಕ್ರಮಗಳ ಕುರಿತು ತನಿಖೆಯನ್ನು ಪ್ರಾರಂಭಿಸುವಂತೆ ವಿನಮ್ರವಾಗಿ ಮನವಿ ಮಾಡಲಾಗಿದೆ. ಈ ಮನವಿಯು ಮೈಸೂರು ಮತ್ತು ಮಂಡ್ಯ ಜಿಲ್ಲೆಗಳ ವಕ್ಫ್ ಸಲಹಾ ಸಮಿತಿಯಲ್ಲಿರುವ ಅಕ್ರಮಗಳನ್ನು ತನಿಖೆಗೊಳಪಡಿಸುವಂತೆ ಮುಖ್ಯಮಂತ್ರಿಯನ್ನು ಕೋರಿದೆ.
    1
    ಕರ್ನಾಟಕದ ಗೌರವಾನ್ವಿತ ಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಅವರಿಗೆ ಮೈಸೂರು ಮತ್ತು ಮಂಡ್ಯ ಜಿಲ್ಲಾ ವಕ್ಫ್ ಸಲಹಾ ಸಮಿತಿಗಳಲ್ಲಿ ನಡೆದಿರುವ ಎಲ್ಲಾ ಅಕ್ರಮಗಳ ಕುರಿತು ತನಿಖೆಯನ್ನು ಪ್ರಾರಂಭಿಸುವಂತೆ ವಿನಮ್ರವಾಗಿ ಮನವಿ ಮಾಡಲಾಗಿದೆ. ಈ ಮನವಿಯು ಮೈಸೂರು ಮತ್ತು ಮಂಡ್ಯ ಜಿಲ್ಲೆಗಳ ವಕ್ಫ್ ಸಲಹಾ ಸಮಿತಿಯಲ್ಲಿರುವ ಅಕ್ರಮಗಳನ್ನು ತನಿಖೆಗೊಳಪಡಿಸುವಂತೆ ಮುಖ್ಯಮಂತ್ರಿಯನ್ನು ಕೋರಿದೆ.
    user_Md Aleemulla Shariff
    Md Aleemulla Shariff
    Citizen Reporter ಮೈಸೂರು, ಮೈಸೂರು, ಕರ್ನಾಟಕ•
    13 hrs ago
  • love yuteyjfhjjbgfdshkknhhggdawuokbbbukkklohfexhinklhgk love post
    1
    love yuteyjfhjjbgfdshkknhhggdawuokbbbukkklohfexhinklhgk
love post
    user_Md
    Md
    ಬೆಂಗಳೂರು ದಕ್ಷಿಣ, ಬೆಂಗಳೂರು ನಗರ, ಕರ್ನಾಟಕ•
    8 hrs ago
  • ಅಬೀಬಾ ಟೆಂಟ್ ಹೌಸ್ ಬೆಂಗಳೂರಿನಲ್ಲಿ ಬಾಡಿಗೆ ಸೇವೆಗಳನ್ನು ಒದಗಿಸುತ್ತದೆ. ಈ ಸೇವೆಗಳ ಕುರಿತು ಹೆಚ್ಚಿನ ಮಾಹಿತಿಗಾಗಿ, ಗ್ರಾಹಕರು 7760976887 ಅಥವಾ 9900619376 ಸಂಖ್ಯೆಗಳಿಗೆ ಸಂಪರ್ಕಿಸಬಹುದು.
    1
    ಅಬೀಬಾ ಟೆಂಟ್ ಹೌಸ್ ಬೆಂಗಳೂರಿನಲ್ಲಿ ಬಾಡಿಗೆ ಸೇವೆಗಳನ್ನು ಒದಗಿಸುತ್ತದೆ. ಈ ಸೇವೆಗಳ ಕುರಿತು ಹೆಚ್ಚಿನ ಮಾಹಿತಿಗಾಗಿ, ಗ್ರಾಹಕರು 7760976887 ಅಥವಾ 9900619376 ಸಂಖ್ಯೆಗಳಿಗೆ ಸಂಪರ್ಕಿಸಬಹುದು.
    user_Sahir sarakar
    Sahir sarakar
    Bengaluru South, Bengaluru Urban•
    17 hrs ago
  • ಮಳವಳ್ಳಿ ತಾಲ್ಲೂಕಿನ ಹಲಗೂರಿನ ಜೆ.ಜೆ. ಪಬ್ಲಿಕ್ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಗಿದ್ದು, ಶಾಲೆಯ ಮೇಲ್ವಿಚಾರಕ ವಿಕಾಸ್ ಅವರು ಯೋಗದಿಂದ ದೈಹಿಕ ಮತ್ತು ಮಾನಸಿಕ ಸಮತೋಲನವನ್ನು ಸಾಧಿಸಬಹುದೆಂದು ಪ್ರತಿಪಾದಿಸಿದರು. ಯೋಗವು ಸರ್ವ ರೋಗಗಳಿಗೂ ಮದ್ದಾಗಿದ್ದು, ಮಕ್ಕಳು ಶೈಕ್ಷಣಿಕ ಹಂತದಲ್ಲೇ ಯೋಗಾಭ್ಯಾಸ ಮಾಡುವುದರಿಂದ ದೈಹಿಕ-ಮಾನಸಿಕ ಸಮತೋಲನ ಕಾಪಾಡುವುದರೊಂದಿಗೆ ಗುರಿ ಸಾಧಿಸಲು ಸಾಧ್ಯ ಎಂದು ವಿಕಾಸ್ ತಿಳಿಸಿದರು. ಜೂನ್ ೨೧ ರಂದು ನಡೆಯುವ ಯೋಗ ದಿನಾಚರಣೆಯ ಅಂಗವಾಗಿ, ರಜಾ ದಿನವಾದ ಭಾನುವಾರವನ್ನು ಹೊರತುಪಡಿಸಿ, ಶನಿವಾರವೇ ಮಕ್ಕಳಿಗೆ ಯೋಗಾಭ್ಯಾಸ ಹೇಳಿಕೊಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಯೋಗವು ನಮ್ಮ ಆರೋಗ್ಯವನ್ನು ವೃದ್ಧಿಸುವ ಸನಾತನ ಸಂಸ್ಕೃತಿಯ ಪದ್ಧತಿಯಾಗಿದ್ದು, ಸುಸ್ಥಿರ ಆರೋಗ್ಯವನ್ನು ನೀಡುತ್ತದೆ ಎಂದು ಅವರು ವಿವರಿಸಿದರು. ಪ್ರತಿ ವರ್ಷ ಜೂನ್ ೨೧ ರಂದು ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು 'ಉತ್ತಮ ಆರೋಗ್ಯಕ್ಕಾಗಿ ಯೋಗ' ಎಂಬ ಘೋಷವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. ಈ ಬಾರಿ ೨೦೨೬ ರಲ್ಲಿ 'ಉತ್ತಮ ಉತ್ಸಾಹಕ್ಕಾಗಿ ಯೋಗ' ಎಂಬ ಧ್ಯೇಯವಾಕ್ಯದೊಂದಿಗೆ ಆಚರಿಸಲು ಕರೆ ನೀಡಿದರು. ಯೋಗವು ಕೇವಲ ದೈಹಿಕ ಆರೋಗ್ಯಕ್ಕೆ ಮಾತ್ರವಲ್ಲದೆ, ಮಾನಸಿಕ ಆರೋಗ್ಯಕ್ಕೂ ಉತ್ತಮವಾಗಿದ್ದು, ಸುಸ್ಥಿರ ದೈಹಿಕ ಹಾಗೂ ಮಾನಸಿಕ ಆರೋಗ್ಯ ಸಮತೋಲನೆಗಾಗಿ ಯೋಗ ಮಾಡಬೇಕು ಎಂದರು. ಯೋಗವನ್ನು ಪರಿಚಯಿಸಿದ ಪತಂಜಲಿ ಮಹರ್ಷಿಗಳನ್ನು ಪ್ರತಿದಿನ ಸ್ಮರಿಸುತ್ತಾ, ಅರ್ಧ ಗಂಟೆ ಯೋಗ ಮಾಡುವುದರಿಂದ ಉತ್ತಮ ಆರೋಗ್ಯ ಗಳಿಸಬಹುದೆಂದು ವಿಕಾಸ್ ತಿಳಿಸಿದರು. ಅನಾರೋಗ್ಯ ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ, ಜೆ.ಜೆ. ಪಬ್ಲಿಕ್ ಶಾಲಾ ವಿದ್ಯಾರ್ಥಿಗಳಿಗೆ ಯೋಗ ಶಿಕ್ಷಣ ನೀಡಲಾಗುತ್ತಿದೆ. ಇದು ಮಕ್ಕಳ ದೈಹಿಕ ಹಾಗೂ ಮಾನಸಿಕ ಆರೋಗ್ಯಪೂರ್ಣ ಬೆಳವಣಿಗೆಗೆ ಸಹಕಾರಿಯಾಗಿದೆ. ಈ ಮೂಲಕ ಪ್ರತಿದಿನ ಎಲ್ಲರೂ ಯೋಗ ಮಾಡಿ ಸುಸ್ಥಿರ ಭಾರತವನ್ನು ಕಟ್ಟಿ ಎಂದು ವಿಕಾಸ್ ಕರೆ ನೀಡಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಯೋಗ ಅಭ್ಯಾಸದ ಮೂಲಕ ಪತಂಜಲಿ ಮಹರ್ಷಿಗಳ ಚಿತ್ರವನ್ನು ರಚಿಸಿದ್ದು, ಇದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಕಾರ್ಯಕ್ರಮದಲ್ಲಿ ಶಾಲೆಯ ಸಂಸ್ಥಾಪಕರಾದ ಕೆ. ಜೆ. ಸೋಮಶೇಖರ್, ಪ್ರಾಂಶುಪಾಲರಾದ ಕೆ.ಎನ್. ಲಲಿತಾಂಬ ಸೋಮಶೇಖರ್, ದೈಹಿಕ ಶಿಕ್ಷಕರಾದ ರಾಜಶೇಖರ್ ಮೂರ್ತಿ, ಸಹ ಶಿಕ್ಷಕರಾದ ಶಿವಮಣಿ, ವಿಕಾಸ್, ನೇತ್ರ, ತ್ರಿವೇಣಿ, ಸೀಮಾ, ಮಧು, ಹೇಮಾ, ಪುಷ್ಪ, ಸುದರ್ಶನ್, ಸುಮಂತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
    1
    ಮಳವಳ್ಳಿ ತಾಲ್ಲೂಕಿನ ಹಲಗೂರಿನ ಜೆ.ಜೆ. ಪಬ್ಲಿಕ್ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಗಿದ್ದು, ಶಾಲೆಯ ಮೇಲ್ವಿಚಾರಕ ವಿಕಾಸ್ ಅವರು ಯೋಗದಿಂದ ದೈಹಿಕ ಮತ್ತು ಮಾನಸಿಕ ಸಮತೋಲನವನ್ನು ಸಾಧಿಸಬಹುದೆಂದು ಪ್ರತಿಪಾದಿಸಿದರು. ಯೋಗವು ಸರ್ವ ರೋಗಗಳಿಗೂ ಮದ್ದಾಗಿದ್ದು, ಮಕ್ಕಳು ಶೈಕ್ಷಣಿಕ ಹಂತದಲ್ಲೇ ಯೋಗಾಭ್ಯಾಸ ಮಾಡುವುದರಿಂದ ದೈಹಿಕ-ಮಾನಸಿಕ ಸಮತೋಲನ ಕಾಪಾಡುವುದರೊಂದಿಗೆ ಗುರಿ ಸಾಧಿಸಲು ಸಾಧ್ಯ ಎಂದು ವಿಕಾಸ್ ತಿಳಿಸಿದರು.

ಜೂನ್ ೨೧ ರಂದು ನಡೆಯುವ ಯೋಗ ದಿನಾಚರಣೆಯ ಅಂಗವಾಗಿ, ರಜಾ ದಿನವಾದ ಭಾನುವಾರವನ್ನು ಹೊರತುಪಡಿಸಿ, ಶನಿವಾರವೇ ಮಕ್ಕಳಿಗೆ ಯೋಗಾಭ್ಯಾಸ ಹೇಳಿಕೊಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಯೋಗವು ನಮ್ಮ ಆರೋಗ್ಯವನ್ನು ವೃದ್ಧಿಸುವ ಸನಾತನ ಸಂಸ್ಕೃತಿಯ ಪದ್ಧತಿಯಾಗಿದ್ದು, ಸುಸ್ಥಿರ ಆರೋಗ್ಯವನ್ನು ನೀಡುತ್ತದೆ ಎಂದು ಅವರು ವಿವರಿಸಿದರು. ಪ್ರತಿ ವರ್ಷ ಜೂನ್ ೨೧ ರಂದು ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು 'ಉತ್ತಮ ಆರೋಗ್ಯಕ್ಕಾಗಿ ಯೋಗ' ಎಂಬ ಘೋಷವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. ಈ ಬಾರಿ ೨೦೨೬ ರಲ್ಲಿ 'ಉತ್ತಮ ಉತ್ಸಾಹಕ್ಕಾಗಿ ಯೋಗ' ಎಂಬ ಧ್ಯೇಯವಾಕ್ಯದೊಂದಿಗೆ ಆಚರಿಸಲು ಕರೆ ನೀಡಿದರು. ಯೋಗವು ಕೇವಲ ದೈಹಿಕ ಆರೋಗ್ಯಕ್ಕೆ ಮಾತ್ರವಲ್ಲದೆ, ಮಾನಸಿಕ ಆರೋಗ್ಯಕ್ಕೂ ಉತ್ತಮವಾಗಿದ್ದು, ಸುಸ್ಥಿರ ದೈಹಿಕ ಹಾಗೂ ಮಾನಸಿಕ ಆರೋಗ್ಯ ಸಮತೋಲನೆಗಾಗಿ ಯೋಗ ಮಾಡಬೇಕು ಎಂದರು. ಯೋಗವನ್ನು ಪರಿಚಯಿಸಿದ ಪತಂಜಲಿ ಮಹರ್ಷಿಗಳನ್ನು ಪ್ರತಿದಿನ ಸ್ಮರಿಸುತ್ತಾ, ಅರ್ಧ ಗಂಟೆ ಯೋಗ ಮಾಡುವುದರಿಂದ ಉತ್ತಮ ಆರೋಗ್ಯ ಗಳಿಸಬಹುದೆಂದು ವಿಕಾಸ್ ತಿಳಿಸಿದರು.

ಅನಾರೋಗ್ಯ ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ, ಜೆ.ಜೆ. ಪಬ್ಲಿಕ್ ಶಾಲಾ ವಿದ್ಯಾರ್ಥಿಗಳಿಗೆ ಯೋಗ ಶಿಕ್ಷಣ ನೀಡಲಾಗುತ್ತಿದೆ. ಇದು ಮಕ್ಕಳ ದೈಹಿಕ ಹಾಗೂ ಮಾನಸಿಕ ಆರೋಗ್ಯಪೂರ್ಣ ಬೆಳವಣಿಗೆಗೆ ಸಹಕಾರಿಯಾಗಿದೆ. ಈ ಮೂಲಕ ಪ್ರತಿದಿನ ಎಲ್ಲರೂ ಯೋಗ ಮಾಡಿ ಸುಸ್ಥಿರ ಭಾರತವನ್ನು ಕಟ್ಟಿ ಎಂದು ವಿಕಾಸ್ ಕರೆ ನೀಡಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಯೋಗ ಅಭ್ಯಾಸದ ಮೂಲಕ ಪತಂಜಲಿ ಮಹರ್ಷಿಗಳ ಚಿತ್ರವನ್ನು ರಚಿಸಿದ್ದು, ಇದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಕಾರ್ಯಕ್ರಮದಲ್ಲಿ ಶಾಲೆಯ ಸಂಸ್ಥಾಪಕರಾದ ಕೆ. ಜೆ. ಸೋಮಶೇಖರ್, ಪ್ರಾಂಶುಪಾಲರಾದ ಕೆ.ಎನ್. ಲಲಿತಾಂಬ ಸೋಮಶೇಖರ್, ದೈಹಿಕ ಶಿಕ್ಷಕರಾದ ರಾಜಶೇಖರ್ ಮೂರ್ತಿ, ಸಹ ಶಿಕ್ಷಕರಾದ ಶಿವಮಣಿ, ವಿಕಾಸ್, ನೇತ್ರ, ತ್ರಿವೇಣಿ, ಸೀಮಾ, ಮಧು, ಹೇಮಾ, ಪುಷ್ಪ, ಸುದರ್ಶನ್, ಸುಮಂತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
    user_ಮಾಗನೂರು ಎಂ ಶಿವಕುಮಾರ್
    ಮಾಗನೂರು ಎಂ ಶಿವಕುಮಾರ್
    Agriculture cooperative ಮಳವಳ್ಳಿ, ಮಂಡ್ಯ, ಕರ್ನಾಟಕ•
    26 min ago
  • ಗುಂಡ್ಲುಪೇಟೆ ವ್ಯಾಪ್ತಿಯ ಬಂಡೀಪುರದಲ್ಲಿ ಕೆರೆಯಲ್ಲಿ ದಾಹ ನೀಗಿಸಿಕೊಳ್ಳಲು ಬಂದ ಕಾಡೆಮ್ಮೆಯ ಮೇಲೆ ಹುಲಿಯು ಎರಗಿ ಬೇಟೆಯಾಡಿದ ರೋಚಕ ಘಟನೆ ಪ್ರವಾಸಿಗರನ್ನು ರೋಮಾಂಚನಗೊಳಿಸಿದೆ. ಇಂದು ಬಂಡೀಪುರದಲ್ಲಿ ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ವ್ಯಾಘ್ರವು ಕಾಡೆಮ್ಮೆಯನ್ನು ಬೇಟೆಯಾಡುವ ಅಪರೂಪದ ದೃಶ್ಯ ಕಾಣಸಿಕ್ಕಿದೆ. ಬಂಡೀಪುರದ ಆಲಘಟ್ಟ ಕೆರೆಯ ಬಳಿ ಹೊಂಚುಹಾಕಿ ಕುಳಿತಿದ್ದ ಹುಲಿಯು ಕಾಡೆಮ್ಮೆಯನ್ನು ಎಳೆದೊಯ್ದ ದೃಶ್ಯವನ್ನು ಪ್ರವಾಸಿಗರು ತಮ್ಮ ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
    1
    ಗುಂಡ್ಲುಪೇಟೆ ವ್ಯಾಪ್ತಿಯ ಬಂಡೀಪುರದಲ್ಲಿ ಕೆರೆಯಲ್ಲಿ ದಾಹ ನೀಗಿಸಿಕೊಳ್ಳಲು ಬಂದ ಕಾಡೆಮ್ಮೆಯ ಮೇಲೆ ಹುಲಿಯು ಎರಗಿ ಬೇಟೆಯಾಡಿದ ರೋಚಕ ಘಟನೆ ಪ್ರವಾಸಿಗರನ್ನು ರೋಮಾಂಚನಗೊಳಿಸಿದೆ. ಇಂದು ಬಂಡೀಪುರದಲ್ಲಿ ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ವ್ಯಾಘ್ರವು ಕಾಡೆಮ್ಮೆಯನ್ನು ಬೇಟೆಯಾಡುವ ಅಪರೂಪದ ದೃಶ್ಯ ಕಾಣಸಿಕ್ಕಿದೆ. ಬಂಡೀಪುರದ ಆಲಘಟ್ಟ ಕೆರೆಯ ಬಳಿ ಹೊಂಚುಹಾಕಿ ಕುಳಿತಿದ್ದ ಹುಲಿಯು ಕಾಡೆಮ್ಮೆಯನ್ನು ಎಳೆದೊಯ್ದ ದೃಶ್ಯವನ್ನು ಪ್ರವಾಸಿಗರು ತಮ್ಮ ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
    user_Prasad Prasad
    Prasad Prasad
    TV News Anchor ಗುಂಡ್ಲುಪೇಟೆ, ಚಾಮರಾಜನಗರ, ಕರ್ನಾಟಕ•
    9 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.