ತಾಲೂಕ ಮಟ್ಟದ ಪದವಿ ಪೂರ್ವ ಕಾಲೇಜು ಕ್ರೀಡಾಕೂಟ - ಜವಾಹರಲಾಲ್ ನೆಹರು ಮೈದಾನ ಗುರುಮಟಕಲ್ ಪಟ್ಟಣದ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಮಂಗಳವಾರ ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ), ಯಾದಗಿರಿ ಹಾಗೂ ಪ್ರಗತಿ ಪದವಿಪೂರ್ವ ಕಾಲೇಜು, ಗುರುಮಠಕಲ್ ಇವರ ಸಂಯುಕ್ತಾಶ್ರಯದಲ ತಾಲೂಕಾ ಮಟ್ಟದ ಪದವಿಪೂರ್ವ ಕ್ರೀಡಾಕೂಟವನ್ನು ಉದ್ಘಾಟನೆ . ಈ ಸಂದರ್ಭದಲ್ಲಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಸಂತೋಷಕುಮಾರ ನೀರೆಟಿ, ಡೆಕ್ಕನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಗೋವಿಂದರಾಜು ಕಾಮಿನ್, ಸಂಜೀವಕುಮಾರ ಚಂದಾಪುರ, ನಾಗೇಂದ್ರ ಪ್ರಸನ್ನ, ಪ್ರಗತಿ ಕಾಲೇಜಿನ ಪ್ರಾಂಶುಪಾಲ ಶಿವಕುಮಾರ ರೆಡ್ಡಿ, ಮಲ್ಲಿಕಾರ್ಜುನ ಹೊಸಮನಿ, ಶಿವಾರೆಡ್ಡಿ, ಸುದರ್ಶನರೆಡ್ಡಿ, ಜ್ಞಾನೇಶ್ವರರೆಡ್ಡಿ, ದೇವೇಂದ್ರಪ್ಪ, ಅಕ್ತರ್ ಪ್ಯಾರೆ, ನಾರಾಯಣರೆಡ್ಡಿ, ಲಕ್ಷ್ಮೀಕಾಂತರೆಡ್ಡಿ, ಅಂಜನೇಯುಲು, ಸುನೀಲ್ ಶುಕ್ಲಾ, ನಂದಕಿಶೋರ್, ಗೋಪಾಲರೆಡ್ಡಿ, ಮಹೇಶಗೌಡ, ವಿಜಯಕುಮಾರ, ಲಕ್ಷ್ಮಣ ದೊಡ್ಡಾ, ಮಹೇಶ, ನವಾಜರೆಡ್ಡಿ, ಸಾಬಾರೆಡ್ಡಿ ಸ್ವಾಗತಿಸಿದರು,ಜ್ಯೋತಿಲತಾ ತಡಿಬಿಡಿ ನಿರೂಪಿಸಿದರು. ವಿವಿಧ ಕಾಲೇಜಿನ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ತಾಲೂಕ ಮಟ್ಟದ ಪದವಿ ಪೂರ್ವ ಕಾಲೇಜು ಕ್ರೀಡಾಕೂಟ - ಜವಾಹರಲಾಲ್ ನೆಹರು ಮೈದಾನ ಗುರುಮಟಕಲ್ ಪಟ್ಟಣದ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಮಂಗಳವಾರ ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ), ಯಾದಗಿರಿ ಹಾಗೂ ಪ್ರಗತಿ ಪದವಿಪೂರ್ವ ಕಾಲೇಜು, ಗುರುಮಠಕಲ್ ಇವರ ಸಂಯುಕ್ತಾಶ್ರಯದಲ ತಾಲೂಕಾ ಮಟ್ಟದ ಪದವಿಪೂರ್ವ ಕ್ರೀಡಾಕೂಟವನ್ನು ಉದ್ಘಾಟನೆ . ಈ ಸಂದರ್ಭದಲ್ಲಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಸಂತೋಷಕುಮಾರ ನೀರೆಟಿ, ಡೆಕ್ಕನ್ ಶಿಕ್ಷಣ
ಸಂಸ್ಥೆಯ ಅಧ್ಯಕ್ಷ ಗೋವಿಂದರಾಜು ಕಾಮಿನ್, ಸಂಜೀವಕುಮಾರ ಚಂದಾಪುರ, ನಾಗೇಂದ್ರ ಪ್ರಸನ್ನ, ಪ್ರಗತಿ ಕಾಲೇಜಿನ ಪ್ರಾಂಶುಪಾಲ ಶಿವಕುಮಾರ ರೆಡ್ಡಿ, ಮಲ್ಲಿಕಾರ್ಜುನ ಹೊಸಮನಿ, ಶಿವಾರೆಡ್ಡಿ, ಸುದರ್ಶನರೆಡ್ಡಿ, ಜ್ಞಾನೇಶ್ವರರೆಡ್ಡಿ, ದೇವೇಂದ್ರಪ್ಪ, ಅಕ್ತರ್ ಪ್ಯಾರೆ, ನಾರಾಯಣರೆಡ್ಡಿ, ಲಕ್ಷ್ಮೀಕಾಂತರೆಡ್ಡಿ, ಅಂಜನೇಯುಲು, ಸುನೀಲ್ ಶುಕ್ಲಾ, ನಂದಕಿಶೋರ್, ಗೋಪಾಲರೆಡ್ಡಿ, ಮಹೇಶಗೌಡ, ವಿಜಯಕುಮಾರ, ಲಕ್ಷ್ಮಣ ದೊಡ್ಡಾ, ಮಹೇಶ, ನವಾಜರೆಡ್ಡಿ, ಸಾಬಾರೆಡ್ಡಿ ಸ್ವಾಗತಿಸಿದರು,ಜ್ಯೋತಿಲತಾ ತಡಿಬಿಡಿ ನಿರೂಪಿಸಿದರು. ವಿವಿಧ ಕಾಲೇಜಿನ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
- ಗುರುಮಠಕಲ್ ಪಟ್ಟಣದ ಕಾಕಲವಾರ ಬೇಸ್ ಆಂಜನೇಯ ಸನ್ನಿಧಿಯಲ್ಲಿ ನಡೆಯುವ ಗಡಿ ಭಾಗದ ಪ್ರಸಿದ್ಧ ಗ್ರಾಮೀಣ ಕ್ರೀಡೆಯಾದ ಕೈಕುಸ್ತಿ ಪಂದ್ಯಾವಳಿಯು ನೆರೆದ ಸಾವಿರಾರು ನೋಡುಗರ ಮನ ಸೆಳೆಯಿತು. ಗುರುಮಠಕಲ್‌ನಲ್ಲಿ ಭಕ್ತಿಭಾವದ ಆಂಜನೇಯ ಸ್ವಾಮಿ ಉತ್ಸವ ಪಲ್ಲಕ್ಕಿ ಮೆರವಣಿಗೆ, ವಿಶೇಷ ಪೂಜೆ; ಕೈಕುಸ್ತಿ ಪಂದ್ಯಾವಳಿ ಕಣ್ತುಂಬಿಕೊಂಡ ಸಾವಿರಾರು ಜನ ಗುರುಮಠಕಲ್: ಶ್ರಾವಣ ಮಾಸದ ಕೊನೆಯ ದಿನವಾದ ಬೆನಕನ ಅಮಾವಾಸ್ಯೆ ಅಂಗವಾಗಿ ಪಟ್ಟಣದ ಕಾಕಲವಾರ ಬೇಸ್ ಆಂಜನೇಯ ಸ್ವಾಮಿ ಸನ್ನಿಧಿಯಲ್ಲಿ ನಡೆದ ಉತ್ಸವವು ಭಕ್ತಿಭಾವ ಹಾಗೂ ಸಂಭ್ರಮದಿಂದ ವಿಜೃಂಭಣೆಯಿಂದ ಜರುಗಿತು. ಉತ್ಸವದ ಅಂಗವಾಗಿ ಬೆಳಿಗ್ಗೆ ಆಂಜನೇಯ ಸ್ವಾಮಿಗೆ ವಿಶೇಷ ಅಭಿಷೇಕ, ಪೂಜೆ ಹಾಗೂ ಅಲಂಕಾರ ನೆರವೇರಿಸಲಾಯಿತು. ಬಳಿಕ ಉತ್ಸವ ಮೂರ್ತಿಯ ಪಲ್ಲಕ್ಕಿ ಸೇವೆ ಹಾಗೂ ಮೆರವಣಿಗೆ ನಡೆಯಿತು. ಭಜನಾ ತಂಡಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿದ ಮೆರವಣಿಗೆಯಲ್ಲಿ ಭಕ್ತರು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡರು. ಕೈಕುಸ್ತಿ ಪಂದ್ಯಾವಳಿಗೆ ಕಳೆ ಕಾಕಲವಾರ ಬೇಸ್ ಆಂಜನೇಯ ಸನ್ನಿಧಿಯಲ್ಲಿ ನಡೆಯುವ ಗಡಿ ಭಾಗದ ಪ್ರಸಿದ್ಧ ಗ್ರಾಮೀಣ ಕ್ರೀಡೆಯಾದ ಕೈಕುಸ್ತಿ ಪಂದ್ಯಾವಳಿ ಉತ್ಸವದ ಪ್ರಮುಖ ಆಕರ್ಷಣೆಯಾಗಿತ್ತು. ಪಂದ್ಯಾವಳಿ ವೀಕ್ಷಿಸಲು ಸಾವಿರಾರು ಜನರು ಸೇರಿದ್ದು, ನೆರೆದಿದ್ದ ನೋಡುಗರ ಮನರಂಜಿಸಿತು. ಸುತ್ತಮುತ್ತಲಿನ ಗ್ರಾಮಗಳ ಜನರು ಮಾತ್ರವಲ್ಲದೆ ತೆಲಂಗಾಣ ರಾಜ್ಯದಿಂದಲೂ ಭಕ್ತರು ಆಗಮಿಸಿ ಆಂಜನೇಯ ಸ್ವಾಮಿಯ ದರ್ಶನ ಪಡೆದು, ಬಳಿಕ ಕೈಕುಸ್ತಿ ಪಂದ್ಯಾವಳಿಯನ್ನು ವೀಕ್ಷಿಸಿದರು. ಇದರಿಂದ ದೇವಸ್ಥಾನ ಸುತ್ತಮುತ್ತ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಭಕ್ತರಿಗೆ ಅನ್ನದಾಸೋಹ ಉತ್ಸವಕ್ಕೆ ಆಗಮಿಸಿದ ಭಕ್ತರಿಗೆ ದೇವಸ್ಥಾನದ ಕಮಿಟಿ ವತಿಯಿಂದ ಅನ್ನದಾಸೋಹದ ವ್ಯವಸ್ಥೆ ಮಾಡಲಾಗಿತ್ತು. ಭಕ್ತರು ಪ್ರಸಾದ ಸ್ವೀಕರಿಸಿ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾದರು. ಇದೇ ವೇಳೆ ಪಟ್ಟಣದ ಪಂಚಾಯತ್ ಮೊಹಲ್ಲಾ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿಯೂ ಉತ್ಸವವು ಏಳು ದಿನಗಳ ಅಖಂಡ ಸಪ್ತ ಭಜನೆಯ ಮೂಲಕ ಭಕ್ತಿಭಾವದಿಂದ ಸಂಪನ್ನಗೊಂಡಿತು.3
- ಸೈದಾಪುರ ಎಪಿಎಂಸಿಯಲ್ಲಿ ಮೂಲಸೌಕರ್ಯಗಳು ಒದಗಿಸಿ-ಉಮೇಶ್ ಮುದ್ನಾಳ ಆಗ್ರಹ ಸೈದಾಪೂರ ದನಗಳ, ಕುರಿ, ಆಡಳು, ಕೋಳಿ ಸಂತೆ ಪ್ರಾರಂಭ ಮಾಡಿ, ಆ ಸ್ಥಳದಲ್ಲಿ ಕುಡಿಯುವ ನೀರು ಮತ್ತು ರೈತರಿಗೆ ಮೂಲಭೂತ ಸೌಕರ್ಯಗಳು ಒದಗಿಸಲು ಉಮೇಶ ಮುದ್ನಾಳ ಆಗ್ರಹ, ಜಿಲ್ಲಾಡಳಿತಕ್ಕೆ ಒಂದು ವಾರದ ಗಡುವು. ಸೈದಾಪೂರ : ಪಟ್ಟಣದ ಉಪ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಆವರಣದಲ್ಲಿ ಪ್ರತಿ ಗುರುವಾರ ನಡೆಯುತ್ತಿರುವ ಸಂತೆಯಲ್ಲಿ ದನ, ಆಡು, ಕುರಿ, ಕೋಳಿ ಮಾರಾಟಕ್ಕೆ ಪ್ರಾರಂಭ ಮಾಡಿ, ಸಂತೆ ಸ್ಥಳದಲ್ಲಿ ಕುಡಿಯುವ ನೀರು & ಮೂಲಭೂತ ಸೌಕರ್ಯ ಒದಗಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಸಾಮಾಜಿಕ ಹೋರಾಟಗಾರ ಉಮೇಶ.ಕೆ.ಮುದ್ನಾಳ 1 ವಾರದ ಗಡುವು ನೀಡಿ ಜಿಲ್ಲಾಡಳಿತಕ್ಕೆ ಹೋರಾಟದ ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಳ್ಳಂ ಬೆಳಿಗ್ಗೆ ಸಂತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಮಾತನಾಡಿದ ಅವರು ಅಖಿಲ ಭಾರತೀಯ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ್ ಕೆ. ಮುದ್ನಾಳ ಅವರು ಉಪ ಎಪಿಎಂಸಿ ಅಧಿಕಾರಿಗಳ ನಿರ್ಲಕ್ಷ್ಯವನ್ನು ತೀವ್ರವಾಗಿ ಖಂಡಿಸಿದರು. ಸ್ಥಳದಲ್ಲಿ ರೈತರೊಂದಿಗೆ ಚರ್ಚಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲೇ ಅತಿದೊಡ್ಡ ಜಾನುವಾರು ಸಂತೆಗಳಾದ ಶುಕ್ರವಾರ-ಶಹಾಪೂರ, ಮಂಗಳವಾರ-ಯಾದಗಿರಿ, ಸೋಮವಾರ-ಗುರುಮಠಕಲ್, ಗುರುವಾರ-ಸೈದಾಪೂರದಲ್ಲಿ ಪ್ರಾರಂಭ ಮಾಡಬೇಕೆಂದು ಒತ್ತಾಯಿಸಿದರು. ಸಂತೆ ಆವರಣದಲ್ಲಿ ದನ-ಕರುಗಳ, ಕುರಿ, ಆಡು, ಕೋಳಿ ಮಾರಾಟಕ್ಕೆ ಬಂದ ರೈತರಿಗೆ ಸೂಕ್ತ ಸ್ಥಳಾವಕಾಶವಿಲ್ಲದೇ ಜಾಲಿ ಕಂಟಿಗಳು ಬೆಳೆದು, ವಿಷ-ಜಂತುಗಳು ಸೇರಿಕೊಂಡಿವೆ. ಚರಂಡಿಯಲ್ಲಿ ತುಂಬಿ ನಿಂತು ಗಬ್ಬೆದ್ದು ನಾರುತ್ತಿದೆ. ಕುಡುಕರ ಹಾವಳಿ, ಅಕ್ರಮ ಚಟುವಟಿಕೆ ನಡೆಯುತ್ತಿದ್ದು, ಎಲ್ಲೆಡೆ ಅಸ್ವಚ್ಛತೆ ಆವರಿಸಿದ್ದು, ದುರ್ವಾಸನೆ ಬೀರುತ್ತಿದೆ. ಕೆಲವೆಡೆ ಭಿಕ್ಷುಕರು ಹಾಗೂ ಪುಂಡ-ಪೊಕರಿಗಳ ತಂಗುದಾಣವಾಗಿ ಮಾರ್ಪಟ್ಟಿರುವುದು ರೈತರು ಮತ್ತು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಸಂತೆಗೆ ಆಗಮಿಸುವ ರೈತರು ಹಾಗೂ ವ್ಯಾಪಾರಿಗಳು ಹಲವು ತೊಂದರೆಗಳನ್ನು ಎದುರಿಸುತ್ತಿದ್ದಾರೆ ಎಂದು ಅವರು ತಿಳಿಸಿದರು. ಬಿರುಬಿಸಿಲಿನ ನಡುವೆಯೂ ಜನ-ಜಾನುವಾರುಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಗೆ ಅಗತ್ಯ ಕ್ರಮ ಕೈಗೊಂಡು ಜನ-ಜಾನುವಾರುಗಳಿಗೆ ರೋಗ-ರುಜಿನ ಹರಡದಂತೆ ನೋಡಿಕೊಳ್ಳಬೇಕೆಂದು ಆಗ್ರಹಿಸಿದರು. ಸಂತೆ ಪ್ರಾರಂಭವಾದ ನಂತರ ಸಂತೆ ಒಳಗಡೆ ನಡೆಯುತ್ತಿರುವ ಪ್ರತಿ ವಾರ ಪಶುವೈದ್ಯರನ್ನು ಕಡ್ಡಾಯವಾಗಿ ನಿಯೋಜಿಸಿ, ಜಾನುವಾರುಗಳ ಆರೋಗ್ಯ ತಪಾಸಣೆ ನಡೆಸಬೇಕು. ಸಾಂಕ್ರಾಮಿಕ ರೋಗಗಳ ಹರಡುವಿಕೆಯನ್ನು ತಡೆಯಲು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಜಾನುವಾರುಗಳನ್ನು ಕಟ್ಟಲು ಸಾಲುಸಾಲಾಗಿ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ನೆರಳಿಗಾಗಿ ಮರಗಳನ್ನು ನೆಡುವುದು ಅಥವಾ ಶೆಡ್ ನಿರ್ಮಿಸುವುದು ಅಗತ್ಯವಾಗಿದೆ. ಅಲ್ಲದೆ ಮಾರುಕಟ್ಟೆ ಆವರಣದಲ್ಲಿ ಉದ್ಯಾನ ನಿರ್ಮಿಸಿ ಪರಿಸರವನ್ನು ಸುಂದರ ಹಾಗೂ ಸ್ವಚ್ಛವಾಗಿಡಲು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು. ಜಿಲ್ಲಾಧಿಕಾರಿಗಳು ಹಾಗೂ ಸಂಬAಧಪಟ್ಟ ಎಪಿಎಂಸಿ ಅಧಿಕಾರಿಗಳು ಕೂಡಲೇ ಸಂತೆ ಆವರಣಕ್ಕೆ ಭೇಟಿ ನೀಡಿ ವಾಸ್ತವ ಸ್ಥಿತಿಯನ್ನು ಪರಿಶೀಲಿಸಿ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಬೇಕು. ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡು ರೈತರು ಮತ್ತು ಜಾನುವಾರುಗಳಿಗೆ ಅನುಕೂಲಕರ ವಾತಾವರಣ ಕಲ್ಪಿಸಬೇಕು ಎಂದು ಉಮೇಶ್ ಕೆ. ಮುದ್ನಾಳ ಆಗ್ರಹಿಸಿದರು. ಪ್ರತಿ ಗುರುವಾರ ಸಾವಿರಾರು ರೈತರು ಆಗಮಿಸುವ ಈ ಸಂತೆಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು ಅತ್ಯಗತ್ಯವಾಗಿದೆ. ಸಂಬAಧಪಟ್ಟ ಅಧಿಕಾರಿಗಳು ಶೀಘ್ರವೇ ಅಗತ್ಯ ಕ್ರಮ ಕೈಗೊಂಡು ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು. ಆವರಣದಲ್ಲಿ ಖಾಸಗಿ ಅಂಗಡಿ ಮಾಲೀಕರು ಎ.ಪಿ.ಎಂ.ಸಿ ಶೆಡ್ ನಲ್ಲಿ ಅಕ್ರಮವಾಗಿ ದಾಸ್ತಾನಿಗಾಗಿ ಬಳಸುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕು. ಒಂದು ನಿರ್ಲಕ್ಷ್ಯ ವಹಿಸಿದರೆ ಉಪ ಕೃಷಿ ಉತ್ಪನ್ನ ಮಾರುಕಟ್ಟೆ ಮುಂಬಾಗದಲ್ಲಿರುವ ಯಾದಗಿರಿ – ರಾಯಚೂರು ಕರಿಬೆಟ್ಟ ಸರ್ಕಲನ ಮುಖ್ಯ ರಸ್ತೆ ಬಂದ್ ಮಾಡಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.3
- ರೈತರ ಹೋರಾಟ ಬರಗಾಲ ಹೋರಾಟ ನಮ್ಮ ಯಾದಗಿರಿ ಜಿಲ್ಲಾ ಬರಗಾಲ ಘೋಷಣೆ ಮಾಡು ಅಂತ ಹೋರಾಟ ನಡೆದಿದೆ ಮುಖಂಡ ಅಮಿನ್ ರೆಡ್ಡಿ ಅಳಿಗೆ ರೈತರ ಹೋರಾಟ ಬರಗಾಲ ಹೋರಾಟ ನಮ್ಮ ಯಾದಗಿರಿ ಜಿಲ್ಲಾ ಬರಗಾಲ ಘೋಷಣೆ ಮಾಡು ಅಂತ ಹೋರಾಟ ನಡೆದಿದೆ ಮುಖಂಡ ಅಮಿನ್ ರೆಡ್ಡಿ ಅಳಿಗೆ1
- ರಾತ್ರಿಯಾದರೂ ನಿರಂತರ ರೈತರ ಹೋರಾಟ. ರಸ್ತೆಯುದ್ದಕ್ಕೂ ನಿಂತ ವಾಹನಗಳು ಸೇಡಂನಲ್ಲಿ ರೈತರು ತಮ್ಮ ಬೇಡಿಕೆಗಳಿಗಾಗಿ ಬೃಹತ್ ಹೋರಾಟ ನಡೆಸಿದ್ದಾರೆ. ಚಿಂಚೋಳಿ ಕ್ರಾಸ್ ಬಳಿ ರಾಜ್ಯ ಹೆದ್ದಾರಿ ತಡೆದು ನಿರಂತರ ಪ್ರತಿಭಟನೆಗೆ ಇಳಿದಿದ್ದಾರೆ. ರಾತ್ರಿಯಾದರೂ ಸಹ ರೈತರು ರಸ್ತೆ ತಡೆಯಲ್ಲಿ ತೊಡಗಿದ್ದು, ಕಿಮಿಗಟ್ಟಲೆ ವಾಹನಗಳು ನಿಂತಿವೆ.1
- ಚಿಂಚೋಳಿ & ಕಾಳಗಿ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಿ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನೆ ಮಾಡಲಾಯಿತು ಚಿಂಚೋಳಿ : ಭಾರತೀಯ ಜನತಾ ಪಾರ್ಟಿ ರೈತ ಮೋರ್ಚಾ ಚಿಂಚೋಳಿ ಮಂಡಲ ವತಿಯಿಂದ ಕಾಳಗಿ ಪಟ್ಟಣದ ಮುಖ್ಯ ಬಜಾರ್ ಇಂದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಚಿಂಚೋಳಿ- ಕಲಬುರಗಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆಯನ್ನು ಉದ್ದೇಶಿಸಿ ಶಾಸಕರಾದ ಡಾಕ್ಟರ್ ಅವಿನಾಶ್ ಜಾದವ್ ಅವರು ಮಾತನಾಡಿ ಮಳೆ ಕೈಕೊಟ್ಟು ಬೆಳೆಗಳು ಒಣಗಿ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರೂ ಸರ್ಕಾರ ಕಣ್ಣುಮುಚ್ಚಿ ಕುಳಿತಿದೆ.ಕಾಳಗಿ ಹಾಗೂ ಚಿಂಚೋಳಿ ತಾಲೂಕುಗಳನ್ನು ತಕ್ಷಣ ಬರಪೀಡಿತ ತಾಲೂಕುಗಳೆಂದು ಘೋಷಿಸಿ ರೈತರಿಗೆ ಸೂಕ್ತ ಬೆಳೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.ಮಳೆಯ ಅಭಾವದಿಂದ ಜಮೀನುಗಳಲ್ಲಿ ಬೆಳೆಗಳು ಒಣಗುತ್ತಿದ್ದು, ರೈತರು ಹಾಕಿರುವ ಬಂಡವಾಳವೇ ಮರಳದ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೂ ಸರ್ಕಾರ ರೈತರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಶರಣಪ್ಪ ತಳವಾರ.ಮಂಡಲ ಅಧ್ಯಕ್ಷ ಕುಮಾರ ಚೇಂಗಟ್ಟಿ. ಪ್ರಶಾಂತ ಕದಮ್.ರೇವಣಸಿದ್ಧ ಬಡಾ.ರಾಜಶೇಖರ್ ಗುಡ್ಡದಾ.ಸದ್ದಾಮ್ ವಜೀರಗಾವ.ಜಗದೀಶ ಪಾಟೀಲ.ಮಲ್ಲಿನಾಥ್ ಪಾಟೀಲ.ಭೀಮರಾಯ ಮಲಘಣ. ಶಿವರಾಜ ಪಾಟೀಲ. ಜಗನಾಥ ತೇಲಿ.ಶಶಿಕಲಾ ಟೆಂಗಳಿ.ಮಲ್ಲು ಮರಗುತ್ತಿ.ಗೋಪಾಲರಾವ ಕಟೀಮನಿ.ಸೇರಿದಂತೆ ಅನೇಕರು ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.4
- ಕಾಳಗಿಯಲ್ಲಿ ಬರಗಾಲ ಘೋಷಣೆಗೆ ಆಗ್ರಹಿಸಿ ಬಿಜೆಪಿ,ಯಿಂದ ಪ್ರತಿಭಟನೆ ಕಾಳಗಿ : ಪಟ್ಟಣದಲ್ಲಿ ಕಾಳಗಿ ಹಾಗೂ ಚಿಂಚೋಳಿ ತಾಲೂಕುಗಳನ್ನು ಬರಗಾಲ ಘೋಷಣೆ ಮಾಡುವಂತೆ ಶಾಸಕ ಡಾ ಅವಿನಾಶ್ ಜಾಧವ್ ನೇತೃತ್ವದಲ್ಲಿ ಬಿಜೆಪಿ ಮುಖಂಡರು ಕಾರ್ಯಕರ್ತರು ಹಾಗೂ ರೈತರು ಬೃಹತ್ ಪ್ರತಿಭಟನೆ ಮಾಡಿದರು. ಕಾಳಗಿ ಹಾಗೂ ಚಿಂಚೋಳಿ ತಾಲೂಕಿನಲ್ಲಿ ಮಳೆ ಇಲ್ಲದೆ ರೈತರ ಬಿತ್ತಿದ ಬೆಳೆಗಳು ಒಣಗಿ ಹೋಗಿ ರೈತರು ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ಆದರೂ ಕಾಂಗ್ರೆಸ್ ಸರ್ಕಾರ ಮಾತ್ರ ಚಿಂಚೋಳಿ- ಕಾಳಗಿ ತಾಲೂಕಿನ ರೈತರಿಗೆ ಅನ್ಯಾಯ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಇದ್ದರು.1
- ಕಲಬುರಗಿ:ನಾನು ಕೇವಲ ನಾಲ್ಕು ಸೆಲ್ ನ ಗೃಹ ಮಂತ್ರಿ ಅಲ್ಲ-ಹೆಚ್ ಡಿಕೆ ಹೇಳಿಕೆಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತೀರುಗೇಟು ಕಲಬುರಗಿಯಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ನೀಡಿದ್ದು ಬಿಡದಿ ವಿಚಾರ ಡೈವಟ್೯ ಮಾಡೋಕೆ ಜೈಲು ರೈಡ್ ಮಾಡಿಲ್ಲ ನಾನು ಕೇವಲ ನಾಲ್ಕು ಸೆಲ್ ನ ಗೃಹ ಮಂತ್ರಿ ಅಲ್ಲ ಎಂದು ಹೆಚ್ ಡಿಕೆ ಹೇಳಿಕೆಗೆ ಕಲಬುರಗಿಯಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತೀರುಗೇಟು ನೀಡಿದ್ದಾರೆ. ರಾಜ್ಯದ ಹಲವು ಜೈಲುಗಳ ಮೇಲೆ ರೇಡ್ ಮಾಡಿದ್ದೆವೆ. ಅದನ್ನ ನಾವು ಮಾಡಬಾರದ? ಪ್ರಜ್ವಲ್ ನಿರಂತರವಾಗಿ ಪೋನ್ ನಲ್ಲಿ ಮಾತನಾಡಿದ್ದು ಯಾರಿಗೆ? ಇಷ್ಟೆಲ್ಲಾ ಮಾತನಾಡೋರು ಯಾಕೆ ಮಾಹಿತಿ ನೀಡಿಲ್ಲ. ಕುಟುಂಬದವರ ಜೊತೆ ತಾನೇ ಆತ ಮಾತನಾಡಿದ್ದು. ಹಾಸನದಲ್ಲಿ ಏನಾಗಿತ್ತು ಅದರ ಬಗ್ಗೆ ಒಂದು ಭಾರಿಯಾದ್ರು ಮಾತನಾಡಿದ್ದಾರಾ..? ಮೊದಲು ಆ ಕುಟುಂಬಗಳಿಗೆ ಕ್ಷೆಮೆ ಕೇಳಬೇಕು. ಆ ನೊಂದ ಹೆಣ್ಮಕ್ಕಳ ಕ್ಷೇಮೆ ಕೇಳಲಿ. ವಿಜಯದಶಮಿಯಿಂದ ಯುದ್ದ ಸ್ಟಾಟ್೯ ಎಂದ ಹೆಚ್ ಡಿಕೆ ಹೇಳಿಕೆ ವಿಚಾರ. ಮಾತನಾಡಿದ ಅವರು ಅಲ್ಲೋಲ ಕಲ್ಲೋಲ ಆಗೋದು ಮುಂದಕ್ಕೆ ಹೋಯ್ತಾ ಅಂತ ವ್ಯಂಗ್ಯವಾಡಿದ ಪ್ರಿಯಾಂಕ್. ನಮ್ಮ ಕುಟುಂಬವನ್ನ ಮುಗಿಸೋಕೆ ಪ್ಲ್ಯಾನ್ ಮಾಡಿದ್ದಾರೆ ಎನ್ನೋ ಹೆಚ್ ಡಿಕೆ ಹೇಳಿಕೆ ಯಾರು ಪ್ರಯತ್ನ ಮಾಡ್ತಿದ್ದಾರೆ. ನಾವ್ಯಕೆ ಅದನ್ನ ಮಾಡೋಣ ಟಿ.ನರಸಿಪುರ ಇನ್ಸಪೆಕ್ಟರ್ ವಿರದ್ದು ಹಳೇ ಕೇಸ್ ವಿಚಾರ.ಅವರ ಮೇಲೆ ಇಲಾಖೆ ವಿಚಾರಣೆ ಆಗಿರಬೇಕು. ಅದಕ್ಕೂ ಇದಕ್ಕೂ ಏನ್ ಸಂಬಂಧ. ಗಣೇಶ ವಿಚಾರವಾಗಿ ಅವರ ಇಲಾಖೆಯ ಎಸ್ ಓಪಿ ಹೇಳಬಾರದಾ..? ಅವರ ಮೇಲೆ ಆರೋಪ ಇದ್ರೆ ದೂರು ಕೊಡಲಿ. ನಾವೇ ತನೀಖೆ ಮಾಡ್ತೆವೆ. ಅದು ಬಿಟ್ಟು ಆ ಮಾಜಿ ಸಂಸದರು ಏನಾದ್ರು ಮಾಡಿದ್ರೆ ನಡಿಯುತ್ತಾ..? ನಮ್ಮ ಸಂಭ್ರಮ ಬೇರೆಯವರಿಗೆ ಆತಂಕ ಆಗಬಾರದು. ಎಲ್ಲರೂ ವಿಜೃಂಭ್ರಣೆಯಿಂದ ಹಬ್ಬ ಮಾಡಿ. ಇವರಿಗೆ ಬೆಂಕಿ ಹಚ್ಚೋದೆ ಕೆಲಸ ಎಂದು ಕಿಡಿಕಾರಿದರು ಉಮರ ಖಾಲಿದ್ ಅವರನ್ನ ರಾಷ್ಟ್ರೀಯವಾದಿ ಅಂತ ಹರಿಪ್ರಸಾದ್ ಬಿಂಬಿಸೋ ವಿಚಾರಯು ಮಾತನಾಡಿದ ಅವರು ಉಮರ್ ಖಲಿದ್ ಎಷ್ಟು ದಿನದಿಂದ ಜೈಲಿನಲ್ಲಿದ್ದಾನೆ. ಯಾಕೆ ಕೇಂದ್ರ ಸರ್ಕಾರ ಟ್ರಯಲ್ ಮಾಡ್ತಿಲ್ಲ, ಟ್ರಯಲ್ ಮಾಡಿ ಕೋಟ್೯ ಘೋಷಣೆ ಮಾಡಲಿ. ಅವಾಗ ಎಲ್ಲರೂ ಆತ ಅಪರಾಧಿ ಅಂತ ಒಪ್ಪಕೊಳ್ಳುತ್ತಾರೆ. ಬಿಜೆಪಿ ಹೇಳಿದ್ರೆ ನಾವು ಒಪ್ಕೊಳ್ಳಬೇಕಾ.? ಎಂದು ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು1
- ಚಿಂಚೋಳಿ : ವಂದೇಮಾತರಂ ಗಾಯನದ ಮೂಲಕ ದೇಶಭಕ್ತಿ ಸಾರಿದ ಗ್ರಾಮಸ್ಥರು ಗಣೇಶ ಚತುರ್ಥಿ ಅಂಗವಾಗಿ ಮಿರಿಯಾಣದಲ್ಲಿ ಗ್ರಾಮದೇವತೆ ಯುವಕ ಸಂಘದ ವತಿಯಿಂದ ವಂದೇಮಾತರಂ ಗೀತೆಯ ರಚನೆಯ 150ನೇ ವರ್ಷದ ಸ್ಮರಣಾರ್ಥ ವಿಶೇಷ ಕಾರ್ಯಕ್ರಮ ನಡೆಯಿತು. ಪಾಪನಾಶ ವಿದ್ಯಾಮಂದಿರ ಶಾಲೆಯ ವಿದ್ಯಾರ್ಥಿಗಳು, ಯುವಕರು ಹಾಗೂ ಗ್ರಾಮಸ್ಥರು ಸಾಮೂಹಿಕವಾಗಿ ವಂದೇಮಾತರಂ ಗಾಯನ ಮಾಡುವ ಮೂಲಕ ದೇಶಭಕ್ತಿಯ ಸಂದೇಶ ಸಾರಿದರು. ಕಾಶಿನಾಥ ಮಡಿವಾಳ ವಿಶೇಷ ಉಪನ್ಯಾಸಕರು ಮಾತನಾಡಿ ವಂದೇಮಾತರಂ ದೇಶಭಕ್ತಿಯ ಜಾಗೃತಿ ಮೂಡಿಸಿದ ರಾಷ್ಟ್ರೀಯ ಚೇತನೆಯ ಸಂಕೇತವಾಗಿದೆ. ಬಂಕಿಮಚಂದ್ರ ಚಟ್ಟೋಪಾಧ್ಯಾಯರ ಆನಂದಮಠ ಕಾದಂಬರಿಯಲ್ಲಿ ಈ ಗೀತೆಯ ಉಲ್ಲೇಖವಿದ್ದು, ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ದೇಶಭಕ್ತರಿಗೆ ಸ್ಫೂರ್ತಿ ನೀಡಿದೆ ಎಂದು ಹೇಳಿದರು. ವಂದೇಮಾತರಂ ಮಾತೃಭೂಮಿಗೆ ಸಲ್ಲಿಸುವ ಗೌರವದ ಸಂಕೇತವಾಗಿದ್ದು, ದೇಶಪ್ರೇಮ, ಸ್ವಾಭಿಮಾನ ಹಾಗೂ ರಾಷ್ಟ್ರೀಯ ಏಕತೆಯ ಸಂದೇಶ ಸಾರುತ್ತದೆ. ಇಂತಹ ಕಾರ್ಯಕ್ರಮಗಳ ಮೂಲಕ ಯುವಜನರಲ್ಲಿ ದೇಶದ ಇತಿಹಾಸ ಹಾಗೂ ಸ್ವಾತಂತ್ರ್ಯ ಹೋರಾಟದ ಅರಿವು ಮೂಡಿಸಬೇಕು ಎಂದರು. ವಿಶ್ವಹಿಂದು ಪರಿಷದ್ ಜಿಲ್ಲಾ ಕಾರ್ಯದರ್ಶಿ ರೇವಣಸಿದ್ಧ ಮೊಘ ಮಾತನಾಡಿ, ಯುವಪೀಳಿಗೆ ದೇಶದ ಇತಿಹಾಸ, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಹಾಗೂ ರಾಷ್ಟ್ರಭಕ್ತಿಯ ಮೌಲ್ಯಗಳನ್ನು ಅರಿಯಬೇಕು. ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರ ಸಾಮೂಹಿಕ ಗಾಯನ ದೇಶಭಕ್ತಿಯ ಭಾವನೆಗೆ ಮತ್ತಷ್ಟು ಬಲ ನೀಡಿದೆ ಎಂದರು. ಗಣೇಶೋತ್ಸವವು ಧಾರ್ಮಿಕ ಆಚರಣೆಗೆ ಸೀಮಿತವಾಗದೆ ಯುವಜನರಲ್ಲಿ ದೇಶಭಕ್ತಿ, ಸಂಸ್ಕೃತಿ ಹಾಗೂ ಸಾಮಾಜಿಕ ಜಾಗೃತಿ ಮೂಡಿಸುವ ವೇದಿಕೆಯಾಗಬೇಕು ಎಂಬ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದರು. ಕಾರ್ಯಕ್ರಮದಲ್ಲಿ ಬಸವರಾಜ್ ಕಲ್ಲೂರ್, ಅರವಿಂದ್ ಚಂದಿಮನಿ, ನರೇಶ್ ಗೌಡ, ರತ್ನಾಕರ್ ರೆಡ್ಡಿ, ರವಿ ಗೌಡ, ಮಹೇಶ್ ಪೂಜಾರಿ, ಸತೀಶ್ ಶರ್ಮ,ಆಂಜನೇಯಲು ಗೌಡ, ಮಹೇಶ್ ಯಾದವ್, ಶಿವು ಯಂಪಳ್ಳಿ, ಸಾಯಿ ಗಣೇಶ, ಸೋಮನಾಥ್ ಸೇರಿದಂತೆ ಸಂಘದ ಪದಾಧಿಕಾರಿಗಳು, ಸದಸ್ಯರು, ಯುವಕರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.3