ಭದ್ರಾವತಿ- ಸಂಜೆವರೆಗೂ ಈ ಭಾಗಗಳಲ್ಲಿ ಕರೆಂಟ್ ಇರಲ್ಲ..ಎಲ್ಲೆಲ್ಲಿ.? ಭದ್ರಾವತಿ: ಮೆಸ್ಕಾಂ ನಗರ/ಗ್ರಾಮೀಣ ಉಪವಿಭಾಗಗಳ ಘಟಕ-1 ಹಾಗೂ ಘಟಕ-4 ರ ಶಾಖಾ ವ್ಯಾಪ್ತಿಯಲ್ಲಿ ವಿದ್ಯುತ್ ಮಾರ್ಗ ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡಿರುವು ದರಿಂದ ನಾಳೆ ಶನಿವಾರ ದಂದು ಈ ಕೆಳಕಾಣಿಸಿರುವ ಪ್ರದೇಶಗಳಲ್ಲಿ ಬೆಳಗ್ಗೆ 9:00 ಘಂಟೆಯಿಂದ ಸಂಜೆ 05.30 ಘಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಎಲ್ಲೆಲ್ಲಿ: ತರೀಕೆರೆ ರಸ್ತೆ, ಮಾರುತಿ ನಗರ, ಸಾದತ್ ಕಾಲೋನಿ, ಸುಣ್ಣದಹಳ್ಳಿ, ಜೆಪಿಎಸ್. ಕಾಲೋನಿ, ನೀರು ಸರಬರಾಜು ಘಟಕ, ನ್ಯೂಕಾಲೋನಿ, ಕಾಗದನಗರ,ಉಜ್ಜನೀಪುರ, ಸುರಗೀ ತೋಪು, ಆನೆಕೊಪ್ಪ, ಬುಳ್ಳಾಪುರ, ದೊಡ್ಡಗೊಪ್ಪೇನಹಳ್ಳಿ, ಬಾರಂದೂರು, ಹಳ್ಳಿಕೆರೆ,ಉಕ್ಕುಂದ ತಿರುವು, ಕೆಂಚೇನ ಹಳ್ಳಿ, ಕೆಂಚೇನಹಳ್ಳಿ ಕಾಲೋನಿ, ಬೊಮ್ಮೇನಹಳ್ಳಿ, ಕಾರೇಹಳ್ಳಿ, ದೊಡ್ಡೇರಿ, ಗಂಗೂರು, ಕಾಚಗೊಂಡನ ಹಳ್ಳಿ, ವಿಜಯ ನಗರ, ಅಂತರಗಂಗೆ, ಕಾಳಿಂಗನಹಳ್ಳಿ, ಎರೇಹಳ್ಳಿ, ಭದ್ರಾಕಾಲೋನಿ, ಕಣಕಟ್ಟೆ, ವೀರಾಪುರ, ಸೀಗೇಬಾಗಿ, ಸೈಯ್ಯದ್ ಕಾಲೋನಿ, ಸತ್ಯ ಸಾಯಿ ನಗರ, ಶ್ರೀರಾಮ ನಗರ, ಸಂಜೀವ ನಗರ, ದೇವರಹಳ್ಳಿ, ಕೊಮಾರನಹಳ್ಳಿ, ಗುಡ್ಡದ ನೇರಳೆಕೆರೆ, ಸಿದ್ದರಮಟ್ಟಿ, ಗುಂಡಪ್ಪ ಕ್ಯಾಂಪ್ ಸುತ್ತ ಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯೆಯ ವಾಗಲಿದ್ದು ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಸಹಾಯಕ ಕಾರ್ಯನಿರ್ವಾ ಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಭದ್ರಾವತಿ- ಸಂಜೆವರೆಗೂ ಈ ಭಾಗಗಳಲ್ಲಿ ಕರೆಂಟ್ ಇರಲ್ಲ..ಎಲ್ಲೆಲ್ಲಿ.? ಭದ್ರಾವತಿ: ಮೆಸ್ಕಾಂ ನಗರ/ಗ್ರಾಮೀಣ ಉಪವಿಭಾಗಗಳ ಘಟಕ-1 ಹಾಗೂ ಘಟಕ-4 ರ ಶಾಖಾ ವ್ಯಾಪ್ತಿಯಲ್ಲಿ ವಿದ್ಯುತ್ ಮಾರ್ಗ ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡಿರುವು ದರಿಂದ ನಾಳೆ ಶನಿವಾರ ದಂದು ಈ ಕೆಳಕಾಣಿಸಿರುವ ಪ್ರದೇಶಗಳಲ್ಲಿ ಬೆಳಗ್ಗೆ 9:00 ಘಂಟೆಯಿಂದ ಸಂಜೆ 05.30 ಘಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಎಲ್ಲೆಲ್ಲಿ: ತರೀಕೆರೆ ರಸ್ತೆ, ಮಾರುತಿ ನಗರ, ಸಾದತ್ ಕಾಲೋನಿ, ಸುಣ್ಣದಹಳ್ಳಿ, ಜೆಪಿಎಸ್. ಕಾಲೋನಿ, ನೀರು ಸರಬರಾಜು ಘಟಕ, ನ್ಯೂಕಾಲೋನಿ, ಕಾಗದನಗರ,ಉಜ್ಜನೀಪುರ, ಸುರಗೀ ತೋಪು, ಆನೆಕೊಪ್ಪ, ಬುಳ್ಳಾಪುರ,
ದೊಡ್ಡಗೊಪ್ಪೇನಹಳ್ಳಿ, ಬಾರಂದೂರು, ಹಳ್ಳಿಕೆರೆ,ಉಕ್ಕುಂದ ತಿರುವು, ಕೆಂಚೇನ ಹಳ್ಳಿ, ಕೆಂಚೇನಹಳ್ಳಿ ಕಾಲೋನಿ, ಬೊಮ್ಮೇನಹಳ್ಳಿ, ಕಾರೇಹಳ್ಳಿ, ದೊಡ್ಡೇರಿ, ಗಂಗೂರು, ಕಾಚಗೊಂಡನ ಹಳ್ಳಿ, ವಿಜಯ ನಗರ, ಅಂತರಗಂಗೆ, ಕಾಳಿಂಗನಹಳ್ಳಿ, ಎರೇಹಳ್ಳಿ, ಭದ್ರಾಕಾಲೋನಿ, ಕಣಕಟ್ಟೆ, ವೀರಾಪುರ, ಸೀಗೇಬಾಗಿ, ಸೈಯ್ಯದ್ ಕಾಲೋನಿ, ಸತ್ಯ ಸಾಯಿ ನಗರ, ಶ್ರೀರಾಮ ನಗರ, ಸಂಜೀವ ನಗರ, ದೇವರಹಳ್ಳಿ, ಕೊಮಾರನಹಳ್ಳಿ, ಗುಡ್ಡದ ನೇರಳೆಕೆರೆ, ಸಿದ್ದರಮಟ್ಟಿ, ಗುಂಡಪ್ಪ ಕ್ಯಾಂಪ್ ಸುತ್ತ ಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯೆಯ ವಾಗಲಿದ್ದು ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಸಹಾಯಕ ಕಾರ್ಯನಿರ್ವಾ ಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- ಶಿವಮೊಗ್ಗ: ಜಿಲ್ಲೆಯ ಭದ್ರಾವತಿ ಕ್ಷೇತ್ರದ ಕ್ರೈಸ್ತಭಾಂಧವರಿಂದ ಇಂದು ನಗರದ ಡಾ:ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ರನ್ ಫಾರ್ ಜೀಸಸ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಧರ್ಮ ಕ್ಷೇತ್ರದ ಧರ್ಮಾಧ್ಯಕ್ಷರು ರೈಟ್ ರೆವೆರೆಂಡ್ ಡಾ: ಜೋಸೆಫ್ ಅರಮಚ್ಚಾದತ್ ರವರು ವಿದ್ಯುಕ್ತ ವಾಗಿ ಚಾಲನೆ ನೀಡಿ ಮಾತನಾಡಿ, ಯೇಸು ಕ್ರಿಸ್ತನ ಮಾನವ ಕುಲಕ್ಕೆ ಮಾಡಿದ ತ್ಯಾಗದ ಬಲಿದಾನವನ್ನು ಸ್ಮರಿಸಿದರು. ರನ್ ಫಾರ್ ಜೀಸಸ್ ಮೆರವಣಿಗೆ ಯಲ್ಲಿ ಯೇಸುಕ್ರಿಸ್ತನ ತ್ಯಾಗ, ಬಲಿದಾನ ಜೀವನ ಚರಿತ್ರೆಯನ್ನು ನಾಟಕದ ಮೂಲಕ ಪ್ರದರ್ಶಿಸ ಲಾಯಿತು. ಕಾರ್ಯಕ್ರಮಕ್ಕೂ ಸಂವಿಧಾನ ಶಿಲ್ಪಿ ಡಾ: ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.ಮೆರವಣಿಗೆ ಯಲ್ಲಿ ಯುನೈಟೆಡ್ ಕ್ರಿಶ್ಚಿಯನ್ ಅಸೋಸಿಯೇಷನ್ ಅಧ್ಯಕ್ಷ ಸೆಲ್ವರಾಜ್ ನೇತೃತ್ವದಲ್ಲಿ ನಡೆಯಿತು. ನಗರಸಭಾ ಸದಸ್ಯ ಜಾರ್ಜ್, ವಿಲ್ಸನ್ ಬಾಬು, ಸೂಡ ಸದಸ್ಯ ಫ್ರಾನ್ಸಿಸ್, ಆಶ್ರಯ ಸಮಿತಿ ಸದಸ್ಯ ವೆಂಕಟೇಶ್ ಇಮಾನು ವೇಲ್, ಎಂ.ಜಿ ರಾಮಚಂದ್ರ, ಮೋಸಸ್ ರೋಷಯ್ಯ, ಪಾಸ್ಟರ್ ಗಳಾದ ರೇಮಂಡ್, ಅಂತೋಣಿ ಪ್ರಕಾಶ್ ಸೇರಿದಂತೆ ಸಾವಿರಾರು ಕ್ರೈಸ್ತ ಭಕ್ತರು ಭಾಗವಹಿಸಿದ್ದರು. ಮೆರವಣಿಗೆ ಹಾಲಪ್ಪ ಸರ್ಕಲ್, ಮಾಧವ ಚಾರ್ ಸರ್ಕಲ್, ರಂಗಪ್ಪ ಸರ್ಕಲ್, ಮೂಲಕ ಕನಕ ಮಂಟಪ ಮೈದಾನದಲ್ಲಿ ಮುಕ್ತಾಯ ಗೊಂಡಿತು. ಮಧ್ಯಪ್ರಾಕ್ಷದ ಯುದ್ಧಗಳು ನಿಲ್ಲುವಂತೆ ಎಲ್ಲಾ ವೃತಗಳಲ್ಲಿ ಸಮಾಧಾನಕ್ಕಾಗಿ ಪಾಸ್ಟರ್ ಗಳಿಂದ ಪ್ರಾರ್ಥಿಸಲಾಯಿತು.1
- ಪ್ರಕೃತಿಯಲ್ಲಿ ವಿಸ್ಮಯ ಒಂದೆ ಬುಡ ಎರಡು ಮರ. ಒಂದೆ ಜಾತಿಯ ಎರಡು ಮರಗಳು ಜತೆಯಾಗಿ ಬೆಳೆದಿರುವಂತಹ ಉದಾಹಾರಣೆಗಳಿವ ಮರಗಳ ಕೊಂಬೆಗಳು ಒಂದಕ್ಕೊಂದು ಹತ್ತಿರವಾಗಿ ಬೆಳೆದು, ಒಂದಾಗಿ ಜೋಡಣೆಯಾಗುತ್ತವೆ ಇದು ನೈಸರ್ಗಿಕ ಪ್ರಕ್ರಿಯೆಯಾಗಿದೆ. ಒಂದೇ ಬುಡದಲ್ಲಿ ಎರಡು ವಿಭಿನ್ನ ಪ್ರಕಾರದ ಆಳದ ಮರ ಮತ್ತು ತಾಳೆ ಮರ ಬೆಳೆದಿದ್ದು. ಇದು ಪ್ರಕೃತಿಯ ಸೌಂದರ್ಯ ಮತ್ತು ಜೀವಿಗಳ ನಡುವಿನ ಸಾಮರಸ್ಯವನ್ನು ಎತ್ತಿ ತೋರಿಸುತ್ತದೆ... ಹೀಗೆ ತಾಳೆಮರಕ್ಕೆ ಸುತ್ತಿಕೊಂಡು ಆಲದ ಮರ ಬೆಳೆದಿರುವಂತಹ ದೃಶ್ಯವನ್ನು ಚಳ್ಳಕೆರೆ ತಾಲೂಕಿನ ಕಸ್ತೂರಿ ತಿಮ್ಮನಹಳ್ಳಿ ಗ್ರಾಮದ ಸರ್ಕಾರಿ ಹಿರಿಯಾ ಪ್ರಾಥಮಿಕ ಶಾಲೆಯಲ್ಲಿ ಕಾಣಬಹುದಾಗಿದೆ.. ಶಾಲೆಯ ಆವರಣದಲ್ಲಿನ ಆಲದ ಮರ ಹಾಗೂ ತಾಳೆ ಮರ ಒಂದೇ ಬುಡ ಎರಡು ಮರ ಎನ್ನುವಂತೆ ಬೆಳದಿದ್ದು ಎರಡು ಮರಗಳು ಒಂದಕ್ಕೊಂದು ಅಂಟಿಕೊಂಡು ಪ್ರಕೃತಿಯಲ್ಲಿನ ವಿಸ್ಮಯವನ್ನು ತೋರಿಸುತ್ತಿವೆ .. ಹುಟ್ಟಿದ ಅಣ್ಣ ತಮ್ಮಂದಿರರೇ ದಯಾದಿಗಳಾಗುವಂತಹ ಕಾಲದಲ್ಲಿ ತಾಳೆಮರಕ್ಕೆ ಆಲದ ಮರ ಆಸರೆ ಆಲದ ಮರಕ್ಕೆ ತಾಳೆಮರೆ ಆಸರೆ ಎನ್ನುವಂತೆ ಗೋಚರಿಸುತ್ತಿದೆ..1
- Post by Mayur TV Hangal YouTube c1
- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏಪ್ರಿಲ್ 5 ರಂದು ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಏಪ್ರಿಲ್ 5 ರಂದು ಬೆಂಗಳೂರಿನಿಂದ ಹೊರಟು ಸಂಜೆ 4 ಗಂಟೆಗೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಆಗಮನ, ನಂತರ ಕಾಸರಗೋಡು ಜಿಲ್ಲೆಗೆ ತೆರಳಲಿದ್ದಾರೆ. ರಾತ್ರಿ 8:40- ಮುಖ್ಯಮಂತ್ರಿಗಳು ಮಂಗಳೂರಿನಿಂದ ಬೆಂಗಳೂರಿಗೆ ತೆರಳಲಿದ್ದಾರೆ.1
- Post by Santa Dsouza2
- ಸೂರ್ಯನ ಬಿಸಿಲಿನ ತಾಪಕ್ಕೆ ನೀರನ್ನು ಅರಸಿ ಬಂದ ನಾಯಿಗೆ. ನೀರುಣಿಸಿ ಮಾನವೀಯತೆ ಮೆರೆದ ಮಾನವ ನೀರನ್ನು ಅರಸಿ ಬಂದ ನಾಯಿಗೆ ಬಸ್ಸಿನಲ್ಲಿ ವ್ಯಕ್ತಿಯೊಬ್ಬರು ನಾಯಿ ಯ ಬಾಯಿಗೆ ನೀರುಣಿಸಿ ಮಾನವೀಯತೆ ಮೆರೆದಿದ್ದಾರೆ ಬಿಸಿಲಿನ ತಾಪ ಹೆಚ್ಚಾಗುತ್ತಿದೆ ಸಾರ್ವಜನಿಕರು ತಮ್ಮ ತಮ್ಮ ಮನೆಯ ಮುಂದೆ ಪ್ರಾಣಿ ಪಕ್ಷಿಗಳಿಗೆ ಕುಡಿಯುವುದಕ್ಕೆ ನೀರಿ ನ ವ್ಯವಸ್ಥೆ ಮಾಡಬೇಕಾಗಿರುವುದು ಮಾನವ ಧರ್ಮ ದಯವಿಟ್ಟು ಪ್ರಾಣಿ ಪಕ್ಷಿಗಳಿಗೆ ನಿಮ್ಮ ಮನೆ ಹಾಗೂ ಊರಿನಲ್ಲಿ ಕುಡಿಯುವುದಕ್ಕೆ ವ್ಯವಸ್ಥೆ ಮಾಡಿ .1
- Snake rauf 99164034481
- ಬೀದಿನಾಯಿಗಳಿಗೆ ಆಹಾರ ಇಡಲು ವ್ಯವಸ್ಥೆ.... ಚಳ್ಳಕೆರೆ: ಬೀದಿ ನಾಯಿಗಳ ಕಲ್ಯಾಣ ಮತ್ತು ನಿರ್ವಹಣೆ ಹಾಗೂ ಸಾರ್ವಜನಿಕ ಆರೋಗ್ಯ ರಕ್ಷಣೆ ಹಿನ್ನೆಲೆಯಲ್ಲಿ ಸ್ಟ್ರೀಟ್ ಡಾಗ್ಸ್‌ಗೆ ಆಹಾರ ನೀಡಲು ಚಳ್ಳಕೆರೆ ನಗರದದಲ್ಲಿ 20 ಸ್ಥಳಗಳನ್ನು ‘ಫೀಡಿಂಗ್ ಸ್ಪಾಟ್’ಗಳ ಗುರುತಿಸಲಾಗಿದ್ದು ಈಗಾಗಲೆ 9 ಸ್ಥಳಗಳಲ್ಲಿ ಬೀದಿನಾಯಿಗಳಿಗೆ ಆಹಾರ ಇಡಲು ವ್ಯವಸ್ಥೆ ಮಾಡಲಗಿದೆ ಎಂದು ಪೌರಯುಕ್ತೆ ಡಾ.ನಾಗವೇಣಿ (ಕೆ.ಎ.ಎಸ್)ತಿಳಿಸಿದ್ದಾರೆ ಮಾಧ್ಯಮದೊಂದಿಗೆ ಮಾತನಾಡಿದ ಅವರು ಮಾನವ ಮತ್ತು ಸಮುದಾಯ ಪ್ರಾಣಿಗಳ ನಡುವೆ ಸಹ ಕಾಳ ದ ಗೆ ವೃದ್ಧಿಸಲು ಮತ್ತು ಸಂಘರ್ಷ ಕಡಿಮೆಗೊಳಿಸಲು ಬೀದಿ/ಸಮುದಾಯ ನಾಯಿಗಳಿಗೆ ಆಹಾರ ನೀಡುವ ಕಾರ್ಯವು ಮಹತ್ತರವಾಗಿದೆ. ಈ ರೀತಿ ವ್ಯವಸ್ಥಿತವಾಗಿ ಆಹಾರ ಒದಗಿಸುವುದರಿಂದ ಶ್ವಾನಗಳ ಹಸಿವು ನೀಗಿಸುವ ಮೂಲಕ ಅವುಗಳ ಕ್ರೂರಸ್ವಭಾವ ಮತ್ತು ಕಚ್ಚುವ ಪ್ರವೃತ್ತಿಯನ್ನು ಕಡಿಮೆಗೊಳಿಸಬಹುದಾಗಿದೆ. ಜತೆಗೆ ಬೀದಿನಾಯಿಗಳ ಸಂತಾನಹರಣ ಶಸ್ತಚಿಕಿತ್ಸೆಗೆ ಹಾಗೂ ಸಾಮೂಹಿಕ ಲಸಿಕಾ ಕಾರ್ಯಕ್ರಮವನ್ನು ನಿರ್ವಹಿಸಲು ಇದು ಸಹಕಾರಿಯಾಗಿರುತ್ತದೆ ಎಂದು ತಿಳಿಸಿದ್ದಾರೆ . ಫೀಡಿಂಗ್ ಸ್ಪಾಟ್‌ಗಳನ್ನು ಗುರುತಿಸಿರುವ ರಾಗಗಳಲ್ಲಿ ಸೂಚನಾ ಫಲಕ ಅಳವಡಿಸಿ ನಾಗರಿಕರಿಗೆ ಮಾಹಿತಿ ಒದಗಿಸಲಾಗಿದೆ . ಯೋಜನೆ ಕೇವಲ ಪ್ರಾಣಿಗಳ ಕಲ್ಯಾಣಕ್ಕೆ ಮಾತ್ರವಲ್ಲ, ನಗರದಲ್ಲಿ ಮಾನವ-ಪ್ರಾಣಿ ಸಹಬಾಳ್ವೆಯತ್ತ ಒತ್ತು ನೀಡುತ್ತದೆ. ಬೀದಿ ನಾಯಿಗಳ ಸಮರ್ಥ ನಿರ್ವಹಣೆ ಮತ್ತು ನಿಯಂತ್ರಿತ ಬೆಳವಣಿಗೆ, ರಸ್ತೆ ಅಪಘಾತಗಳು ಮತ್ತು ಜನತೆ ನಡುವಿನ ಸಂಘರ್ಷವನ್ನು ಕಡಿಮೆ ಮಾಡಲು ಸಹಾಯಕ ಮಾಡುತ್ತದೆ. ಜೊತೆಗೆ, ಸಾರ್ವಜನಿಕರಲ್ಲಿ ಪ್ರಾಣಿಗಳ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ಇದು ಪ್ರೇರಣೆಯಾಗಿದೆ. ಜನ ವಸತಿ ಕಡಿಮೆ ಇರುವ ಪ್ರದೇಶಗಳಲ್ಲಿ ನಾಯಿಗಳು ಇರುವಂತಹ ಸ್ಥಳಗಳನ್ನು ಗುರುತಿಸಿ ಅಂತಹ ಸ್ಥಳಗಳಲ್ಲಿ ಆಹಾರಕ್ಕೆ ವ್ಯವಸ್ಥೆ ಮಾಡಲಾಗಿದ್ದು ಸಾರ್ವಜನಿಕರು ಹಾಗೂ ಪ್ರಾಣಿ ಪ್ರಿಯರು ಆಹಾರವನ್ನು ತಂದು ಇಲ್ಲಿ ಹಾಕುವುದರ ಮೂಲಕ ಬೀದಿ ನಾಯಿಗಳ ಬಗ್ಗೆ ಕಾಳಜಿ ವಹಿಸಬೇಕಿದೆ ಎಂದು ಅವರು ಮಾಹಿತಿ ನೀಡಿದರು..1