Shuru
Apke Nagar Ki App…
ಬಸವರಾಜ ಬೊಮ್ಮಾಯಿ ಅವರಿಂದ ಬಸಾಪುರ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನ ಉದ್ಘಾಟನೆ *21-4-2026 ಮಂಗಳವಾರ* ರಂದು ನಮ್ಮ ರಾಜ್ಯದ ಮಾಜಿ ಮುಖ್ಯಮಂತ್ರಿಗಳು ಹಾವೇರಿ ಗದಗ ಲೋಕಸಭಾ ಸದಸ್ಯರಾದ *ಸನ್ಮಾನ್ಯ ಶ್ರೀ ಬಸವರಾಜ ಬೊಮ್ಮಾಯಿ ಸಾಹೇಬರು* ಲಕ್ಷ್ಮೇಶ್ವರದಲ್ಲಿ ನಮ್ಮ ಹೆಮ್ಮೆಯ ಶಾಸಕರು *ಸನ್ಮಾನ್ಯ ಶ್ರೀ ಡಾ,, ಚಂದ್ರು .ಕೆ .ಲಮಾಣಿ ಅವರ ನೂತನ ಗೃಹಪ್ರವೇಶ* ಮುಗಿಸಿಕೊಂಡು (ದೊಡ್ಡೂರು ಸುರುಣಿಗಿ ಬೆಳ್ಳಹಟ್ಟಿ ಬಾಗೇವಾಡಿ ಕಲಕೇರಿ ಮಾರ್ಗವಾಗಿ ಮುಂಡರಗಿ ತಾಲೂಕು) *(ಬಸಾಪುರ)* ಗ್ರಾಮದ *ಶ್ರೀ ಬಸವೇಶ್ವರ ದೇವಸ್ಥಾನ* ಉದ್ಘಾಟನಾದ ಕಾರ್ಯಕ್ರಮದಲ್ಲಿ ಭಾಗವಹಿಸುವರು ಇಂತಿ ನಿಮ್ಮ ಮುಂಡರಗಿ ಮಂಡಲದ *ಬಿಜೆಪಿ ಅಧ್ಯಕ್ಷರು ಶ್ರೀ ಡಾ ,,ಕುಮಾರಸ್ವಾಮಿ ಹಿರೇಮಠ....🙏🙏*
Ranganath Kandagal
ಬಸವರಾಜ ಬೊಮ್ಮಾಯಿ ಅವರಿಂದ ಬಸಾಪುರ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನ ಉದ್ಘಾಟನೆ *21-4-2026 ಮಂಗಳವಾರ* ರಂದು ನಮ್ಮ ರಾಜ್ಯದ ಮಾಜಿ ಮುಖ್ಯಮಂತ್ರಿಗಳು ಹಾವೇರಿ ಗದಗ ಲೋಕಸಭಾ ಸದಸ್ಯರಾದ *ಸನ್ಮಾನ್ಯ ಶ್ರೀ ಬಸವರಾಜ ಬೊಮ್ಮಾಯಿ ಸಾಹೇಬರು* ಲಕ್ಷ್ಮೇಶ್ವರದಲ್ಲಿ ನಮ್ಮ ಹೆಮ್ಮೆಯ ಶಾಸಕರು *ಸನ್ಮಾನ್ಯ ಶ್ರೀ ಡಾ,, ಚಂದ್ರು .ಕೆ .ಲಮಾಣಿ ಅವರ ನೂತನ ಗೃಹಪ್ರವೇಶ* ಮುಗಿಸಿಕೊಂಡು (ದೊಡ್ಡೂರು ಸುರುಣಿಗಿ ಬೆಳ್ಳಹಟ್ಟಿ ಬಾಗೇವಾಡಿ ಕಲಕೇರಿ ಮಾರ್ಗವಾಗಿ ಮುಂಡರಗಿ ತಾಲೂಕು) *(ಬಸಾಪುರ)* ಗ್ರಾಮದ *ಶ್ರೀ ಬಸವೇಶ್ವರ ದೇವಸ್ಥಾನ* ಉದ್ಘಾಟನಾದ ಕಾರ್ಯಕ್ರಮದಲ್ಲಿ ಭಾಗವಹಿಸುವರು ಇಂತಿ ನಿಮ್ಮ ಮುಂಡರಗಿ ಮಂಡಲದ *ಬಿಜೆಪಿ ಅಧ್ಯಕ್ಷರು ಶ್ರೀ ಡಾ ,,ಕುಮಾರಸ್ವಾಮಿ ಹಿರೇಮಠ....🙏🙏*
More news from ಕರ್ನಾಟಕ and nearby areas
- Post by Onlinetv24x71
- Post by ಗದಗ್ ಜಿಲ್ಲಾ ಸ್ನೇಕ್ ರಹ್ಮನ್ 80957823861
- ರೋಣ ಮತಕ್ಷೇತ್ರದ ವ್ಯಾಪ್ತಿಗೆ ಬರುವಂತ ಎಲ್ಲಾ ಗ್ರಾಮಗಳಿಗೂ ಮತ್ತು ಪಟ್ಟಣಗಳಿಗೂ ಬೇಸಿಗೆ ಯಲ್ಲಿ ಯಾವುದೇ ರೀತಿಯ ಕುಡಿಯುವ ನೀರಿನ ಅಭಾವ ಆಗದಂತೆ ಎಲ್ಲಾ ಇಲಾಖೆ ಅಧಿಕಾರಿಗಳು ನೋಡಿಕೊಳ್ಳಬೇಕು ಹಾಗೂ ಜಾನುವಾರು ಗಳಿಗೆ ಕುಡಿಯುವ ನೀರು ಮೇವುನ ಕೊರತೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ರೋಣ ಮತಕ್ಷೇತ್ರದ ಶಾಸಕ ಜಿ ಎಸ್ ಪಾಟೀಲ್ ಹೇಳಿದರು, ಅವರು ರೋಣ ಪಟ್ಟಣದ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ರವಿವಾರ ರೋಣ ಮತಕ್ಷೇತ್ರಕ್ಕೆ ಒಳಪಡುವ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಬೇಸಿಗೆ ನಿರ್ವಹಣೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು, ರೋಣ ಮತಕ್ಷೇತ್ರಕ್ಕೆ ಒಳಪಡುವ ವಿವಿಧ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದಿದ್ದು ಅದರಲ್ಲೂ ಡಿಬಿ ಓಟಿ ನೀರು ಸರಿಯಾಗಿ ಪೂರೈಕೆ ಆಗುತ್ತಿಲ್ಲ ತಹಸೀಲ್ದಾರರು ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗಳು ಮತ್ತು ಎಲ್ಲಾ ಇಲಾಖೆ ಅಧಿಕಾರಿಗಳು ಕೂಡಿಕೊಂಡು ಬೇಸಿಗೆ ಮುಗಿಯುವವರೆಗೆ ನೀರಿನ ಅಭಾವ ಆಗದಂತೆ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಎಚ್ಚರಿಕೆ ನೀಡಿದರು,ಬಾಸಲಾಪುರ, ಮುಗಳಿ, ಗುಳಗುಳಿ ಪಂಚಾಯತಿ ಅಮರಗಟ್ಟಿ,ರುದ್ರಾಪುರ,ರಾಂಪುರ, ನೀರಿನ ಸಮಸ್ಯೆ ಇದೆ ಎಂದು ಅಧಿಕಾರಿಗಳು ತಿಳಿಸಿದರು,ಬಾಸಲಾಪುರಲ್ಲಿ ಡಿಬಿಒಟಿ ನೀರು ಪೂರೈಕೆ ಸರಿಯಿಲ್ಲ ಎಂದು ಪಿಡಿಒ ಸಭೆಗೆ ತಿಳಿಸಿದರು, ಚಿಕ್ಕಮನ್ನೂರು ವ್ಯಾಪ್ತಿಯ ಗ್ರಾಮಗಳಲ್ಲಿ ಡಿಬಿಒಟಿ ನೀರು ಪೂರೈಕೆ ಸರಿ ಇಲ್ಲ ಎಂದು ಪಿಡಿಒ ಕಲ್ಪನಾ ಕಡಗದ ತಿಳಿಸಿದರು,ಅಧಿಕಾರಿಗಳು ಎಲ್ಲರೂ ಕೂಡಿಕೊಂಡು ನೀರಿನ ಸಮಸ್ಯೆ ಬಗ್ಗೆ ಚರ್ಚಿಸಿ ಸರಿಪಡಿಸಿ ಎಂದು ಶಾಸಕರು ತಿಳಿಸಿದರು ,ವಿದ್ಯುತ್ ವ್ಯತ್ಯಯಗಳಿಂದ ಸಹ ನೀರಿನ ಸರಬರಾಜು ಮಾಡಲು ಸಮಸ್ಯೆ ಉಂಟಾಗುತ್ತದೆ ಎಂದು ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿ ರಶ್ಮಿ ನಡುವಿನಮನಿ ಹೇಳಿದರು,ಸವಡಿ ಪಂಚಾಯತಿ ವ್ಯಾಪ್ತಿಯಲ್ಲಿ ಆರು ದಿನಕ್ಕೊಂದು ಸರಿ ನೀರನ್ನು ಬಿಡಲಾಗುತ್ತದೆ, ಐದು ಲಕ್ಷ ಲೀಟರ ಬದಲು ಕೇವಲ ಎರಡು ಲಕ್ಷ ಲೀಟರ್ ನೀರು ಬರುತ್ತಿದೆ ಎಂದು ಪಿಡಿಒ ಮೆಣಸಗಿ ತಿಳಿಸಿದರು,ಹಿರೇಹಾಳ ಪಂಚಾಯತಿ ವ್ಯಾಪ್ತಿಯ ಯರೇಕುರುಬಾನಾಳ ನೀರಿನ ಸಮಸ್ಯೆ ಇದೆ,ನೈನಾಪುರ ,ಬಸರಕೋಡ ನವಗ್ರಾಮ,ಚಿಕ್ಕಳಗುಂಡಿ ಹಿರೇಅಳಗುಂಡಿ,ಹಾಲಕೆರೆ,ಮಾಟರಂಗಿ, ಗೊಗೇರಿ, ಸೇರಿದಂತೆ ಅನೇಕ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದೆ ಎಂದು ಅಧಿಕಾರಿಗಳು ತಿಳಿಸಿದರು, ಯಾವ ಯಾವ ಗ್ರಾಮಗಳಲ್ಲಿ ನೀರಿನ ಕೊರತೆ ಇದೆ ಅಧಿಕಾರಿಗಳು ಕೂಡಲೇ ಗ್ರಾಮಗಳಿಗೆ ತೆರಳಿ ಪರಿಶೀಲಿಸಿ ನೀರಿನ ಅಭಾವ ಉಂಟಾಗದಂತೆ ಕ್ರಮ ವಹಿಸಬೇಕು, ನೀರನ್ನು ಪರೀಕ್ಷೆ ಮಾಡದೇ ಸರಬರಾಜು ಮಾಡಬಾರದು ಶುದ್ಧ ನೀರನ್ನು ಸರಬರಾಜು ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು ಪಂಚಾಯತಿ ಆಡಳಿತ ಅಧಿಕಾರಿಗಳು ಸಹ ಹೆಚ್ಚಿನ ಜವಾಬ್ದಾರರಾಗಿದ್ದಿರಿ ನೀರಿನ ಸಮಸ್ಯೆ ಬಾರದ ಹಾಗೆ ನೀವು ಜಾಗೃತ ವಹಿಸಬೇಕು,ಜಾನುವಾರುಗಳಿಗೆ ಮೇವು ನೀರು ಕೊರತೆಯಾಗದಂತೆ ನೋಡಿಕೊಳ್ಳಿ ಎಂದರು, ಸಭೆಯಲ್ಲಿ ರೋಣ ತಾಲೂಕು ಗಜೇಂದ್ರಗಡ ತಾಲೂಕು ಮುಂಡರಗಿ ತಾಲೂಕು ತಹಸೀಲ್ದಾರರು ತಾಲೂಕು ಪಂಚಾಯಿತಿ ಕಾರ್ಯನಿರ್ವಣ ಅಧಿಕಾರಿಗಳು ಪುರಸಭೆ ಮುಖ್ಯ ಅಧಿಕಾರಿಗಳು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸಿಬ್ಬಂದಿಗಳು ಪಾಲ್ಗೊಂಡಿದ್ದರು1
- ಶಿಗ್ಗಾಂವ ತಾಲೂಕಿನ ಅಂಬೇಡ್ಕರ್ ಸಂಕೀರ್ಣದಲ್ಲಿ ತಾಲೂಕ ಆಡಳಿತದಿಂದ ಹಮ್ಮಿಕೊಂಡಂತ ವಿಶ್ವಗುರು ಜಗಜ್ಯೋತಿ ಬಸವೇಶ್ವರರ ಜಯಂತಿ ಕಾರ್ಯಕ್ರಮದಲ್ಲಿ ಶಿಗ್ಗಾವ ಸವಣೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಯಾಸೀರ್ ಖಾನ್ ಪಠಾಣ ಭಾಗವಹಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು, ಈ ಸಂದರ್ಭದಲ್ಲಿ ಸಂಗನಬಸವ ಪೂಜ್ಯಶ್ರೀಗಳು, ಹಾಗೂ ಮಾಜಿ ಸಂಸದರಾದ ಶ್ರೀ ಮಂಜುನಾಥ ಕುನ್ನೂರ್ ಹಾಗೂ ಗಡಿ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಶ್ರೀ ಸೋಮಣ್ಣ ಬೇವಿನಮರದ, ತಾಲೂಕ ಪಂಚಮಸಾಲಿ ಸಮಾಜದ ಅಧ್ಯಕ್ಷರಾದ ರಾಗಿ ವಕೀಲರು, ಶಿಗ್ಗಾಂವ ತಾಲೂಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಗುಡ್ಡಪ್ಪ ಜಲ್ದಿ, ಗ್ಯಾರೆಂಟಿ ಸಮಿತಿಯ ತಾಲೂಕ ಅಧ್ಯಕ್ಷರಾದ ಎಸ್ ಎಫ್ ಮನಕಟ್ಟಿ, ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು,1
- Post by ✍ 𝕾𝖆𝖉𝖆𝖓𝖆𝖓𝖉𝕿𝖎𝖐𝖆𝖗𝖊1
- ಧಾರವಾಡ: ಧಾರವಾಡ ಆಕಾಶವಾಣಿ ಕೇಂದ್ರದ ಪ್ರಾದೇಶಿಕ ಸುದ್ದಿ ವಿಭಾಗವನ್ನು ಬೆಂಗಳೂರು ಆಕಾಶವಾಣಿ ಕೇಂದ್ರಕ್ಕೆ ಸ್ಥಳಾಂತರಿಸುವುದಾಗಿ ಆದೇಶವನ್ನು ಕೂಡಲೇ ರದ್ದುಪಡಿಸಬೇಕು ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯಾಧ್ಯಕ್ಷ ಬಸವಪ್ರಭು ಹೊಸಕೆರೆ ಆಗ್ರಹಿಸಿದರು. ಧಾರವಾಡ ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧಾರವಾಡ ಪ್ರಾದೇಶಿಕ ಸುದ್ದಿ ವಿಭಾಗಕ್ಕೆ 45 ವರ್ಷಗಳ ಇತಿಹಾಸವಿದೆ. ಈ ಕೇಂದ್ರವನ್ನು ಬೆಂಗಳೂರಿಗೆ ಸ್ಥಳಾಂತರ ಮಾಡಿದರೆ ಉತ್ತರ ಕರ್ನಾಟಕ ಭಾಗದ ಜನರಿಗೆ ಅನ್ಯಾಯ ಆಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆಕಾಶವಾಣಿ ಸುದ್ದಿ ವಿಭಾಗವನ್ನು ಧಾರವಾಡದಲ್ಲಿ ಉಳಿಸಿಕೊಳ್ಳಲು ಕೇಂದ್ರ ಸಚಿವರಿಗೆ ಹಾಗೂ ಶಾಸಕರಿಗೆ ಮನವಿ ಪತ್ರ ಸಲ್ಲಿಸಿ ಒತ್ತಡ ತರಲಾಗುವುದು. ಈ ಕುರಿತು ಕರ್ನಾಟಕ ವಿದ್ಯಾವರ್ಧಕ ಸಂಘವು ಶೀಘ್ರ ಸಭೆ ಕರೆದು ನಿರ್ಧಾರ ಕೈಗೊಳ್ಳಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಡಾ.ಸಂಜೀವ ಕುಲಕರ್ಣಿ, ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಸತೀಶ ತುರಮರಿ, ಶಿವಾನಂದ ಭಾವಿಕಟ್ಟಿ, ವಿಶ್ವೇಶ್ವರಿ ಹಿರೇಮಠ, ವೀರಣ್ಣ ಒಡ್ಡೀನ ಸೇರಿದಂತೆ ಇತರರಿದ್ದರು.1
- ಜಗಳೂರು:ಜಗಳೂರು ತಾಲ್ಲೂಕಿನಾಧ್ಯಂತ ಬಿಸಿಲಿನತಾಪಮಾನಹೆಚ್ಚುತ್ತಿದ್ದು ಜನರ ಆತಂಕಕೂಡ ಹೆಚ್ಚುತ್ತಾ ಹೋಗುತ್ತಿದೆ. ಅಬ್ಬಾ..ಅಬ್ಬಾ ಏನು ಬಿಸಿಲು ಮಾರಾಯ... ಒಂದು ಎಲೆಯೂ ಮುಸುಕುತ್ತಿಲ್ಲಾ ಎನ್ನುವ ಮಾತು ಜನರ ಬಾಯಲ್ಲಿ ಸರ್ವೆಸಾಮಾನ್ಯವಾಗಿ ಬಿಟ್ಟಿದೆ ! ಎಂದು ಕಾಣವೋ ಇಂತದೊಂದು ಬಿಸಿಲು ಎನ್ನುತ್ತ ಅವರಿಗೆ ಮನಸ್ಸಿಗೆ ಎಲ್ಲಿ ನೆಮ್ಮದಿ ಅನ್ನಿಸುತ್ತದೊ ಅಲ್ಲಿ ಕುಳಿತು ಉಸ್ಸು ಬುಸ್ಸು ಎನ್ನುತ್ತಾ ಗಾಳಿ ಹೊಡೆದು ಕೊಳ್ಳುತ್ತಾ ಮುಂದೆ ಸಾಗುತ್ತಾರೆ... ಇಂತಾ ಬಿಸಿಲಿನ ಜಳಕ್ಕೆ ಕುಳಿತೊವರು ಉಂಟೆ ಎಂಬಂತೆ ಮೈಹಿಗೆ ತೀಟೆ ಸೊಪ್ಪು ಅಚ್ಚಿಸಿಕೊಂಡವರ ರೀತಿ... ಗಾಳಿಯನ್ನು ಹೊಡೆದು ಕೊಳ್ಳುತ್ತಾ ಕಾಲಕಳೆಯುವ ಪರಿಸ್ಥಿತಿಯಾಗಿದೆ ನಮ್ಮ ಜನರ ಪಾಡು.... ಇನ್ನೂ ಮುಂಗಾರು ಎಂಟ್ರಿಕೊಟ್ರೆ... ತುಸು ಸೆಕೆ ಕಡಿಮೆಯಾಗುತ್ತದೆ ಎಂಬುವುದು ಕೆಲವರ ಅಭಿಪ್ರಾಯವಾಗಿದೆ.2
- ಕಲಘಟಗಿ: ಮಧ್ಯಪಾನ ಸೇವಿಸಿ ವಿದ್ಯುತ್ ಕಂಬ ಏರಿ ಕುಳಿತ ಯುವಕನನ್ನು ಅಗ್ನಿಶಾಮಕ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಯುವಕನ ಮನವೊಲಿಸಿ ಸುರಕ್ಷಿತವಾಗಿ ಕೆಳಗೆ ಇಳಿಸಿದ ಘಟನೆ ಶನಿವಾರ ರಾತ್ರಿ ಜರುಗಿದೆ. ತಾಲ್ಲೂಕಿನ ಕಾಡನಕೊಪ್ಪ ಗ್ರಾಮದ ಮಂಜುನಾಥ ಸಿದ್ದಪ್ಪ ಜಮ್ಮಿಹಾಳ (20) ಎಂಬ ಯುವಕನೇ ಮಾನಸಿಕ ಅಸ್ವಸ್ಥ ಸ್ಥಿತಿಯಲ್ಲಿ ಹೈ ವೋಲ್ಟೇಜ್ ವಿದ್ಯುತ್ ಕಂಬದ 150 ಅಡಿ ಎತ್ತರದಲ್ಲಿ ಏರಿ ಕುಳಿತ್ತಿದ್ದನು. 2 ಘಂಟೆಗಳ ಕಾಲ ಅಗ್ನಿ ಶಾಮಕ ಅಧಿಕಾರಿಗಳು ಮನವೊಲಿಸಿದ ನಂತರ ಯುವಕನಿಗೆ ತೊಂದರೆಯಾಗದಂತೆ ಸುರಕ್ಷಿತವಾಗಿ ಕೆಳಗೆ ಇಳಿಸಿ ರಕ್ಷಣೆ ಮಾಡಿ ಪೊಲೀಸರಿಗೆ ಒಪ್ಪಿಸಲಾಗಿದೆ ಎಂದು ತಾಲ್ಲೂಕ ಅಗ್ನಿಶಾಮಕ ಠಾಣಾಧಿಕಾರಿ ಅರುಣ ಮಾಳುದೇ ತಿಳಿಸಿದರು. ಅಗ್ನಿಶಾಮಕ ಠಾಣೆ ಸಿಬ್ಬಂದಿಗಳಾದ ಥಾವರು ರಾಠೋಡ ಮಹೇಶ ವಡ್ಡರ,ಉಮೇಶ ತೆಂಬದ,ಸಂಜು ದೊಡಮನಿ, ಸಂತೋಷ ಉಗ್ನಿಕೇರಿ,ಈರಣ್ಣ ಮಠದ,ಅನಿಲ ಲೋಖಂಡೆ ಇದ್ದರು.1