ಸಿರಿಧಾನ್ಯಗಳ ಜಾಗೃತಿ ಮತ್ತು ಪರಿಕರ ವಿತರಣೆ. ಮಾಗಡಿ: ತಾಲೂಕಿನ ಚಂದೂರಾಯನಹಳ್ಳಿ ಕೃಷಿ ವಿಜ್ಞಾನ ಕೇಂದ್ರ ದಲ್ಲಿ ಸಿರಿಧಾನ್ಯಗಳ ಜಾಗೃತಿ ಮತ್ತು ಪರಿಕರ ವಿತರಣೆ ಕಾರ್ಯಕ್ರಮ ನಡೆಯಿತು. ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥೆ ಡಾ.ಶ್ವೇತ, ಬಿ.ಎಸ್. ಮಾತನಾಡಿ, ಮನುಷ್ಯರ ಆರೋಗ್ಯಕ್ಕೆ ಸಿರಿಧಾನ್ಯಗಳು ಅವಶ್ಯಕವಾಗಿದೆ, ಸಿರಿಧಾನ್ಯ ಬೆಳೆಯನ್ನು ಉತ್ತೇಜಿಸುವುದು, ರೈತರ ಜ್ಞಾನವನ್ನು ವೃದ್ಧಿಸುವುದು ಮತ್ತು ಸುಸ್ಥಿರ ಕೃಷಿ ಪದ್ಧತಿಗಳನ್ನು ಪೆÇ್ರೀತ್ಸಾಹಿಸುವುದು. ಈ ಕಾರ್ಯಕ್ರಮದ ಉದ್ದೇಶವಾಗಿದೆ. ಸಿರಿಧಾನ್ಯ ಆಧಾರಿತ ಕೃಷಿ ವ್ಯವಸ್ಥೆಯ ಮಹತ್ವ, ಹವಾಮಾನ ಆಧಾರಿತ ಕೃಷಿ ಮತ್ತು ಸಿರಿಧಾನ್ಯಗಳಿಂದ ಸಿಗುವ ಪೌಷ್ಟಿಕ ಭದ್ರತೆಯನ್ನು ವಿವರಿಸುತ್ತ ಈ ಯೋಜನೆಯ ಫಲಾನುಭವಿಗಳು ಪಡೆದ ಕೃಷಿ ಪರಿಕರಗಳ ಸದ್ಭಳಕೆ ಮಾಡಿದಾಗ ಮಾತ್ರ ಉದ್ದೇಶ ಸಫಲವಾಗುತ್ತದೆಎಂದು ತಿಳಿಸಿದರು. ತೋಟಗಾರಿಕೆ ಮಹಾವಿದ್ಯಾಲಯ, ಬಾಗಲಕೋಟೆಯ ಸಸ್ಯರೋಗಶಾಸ್ತ್ರದ ಸಹಾಯಕ ಪ್ರಾಧ್ಯಾಪಕ ಡಾ. ಅಂಬಿಕಾ ಮಾತನಾಡಿ, ರಾಗಿ ಮತ್ತು ಅವರೆ ಬೆಳೆಯಲ್ಲಿ ಕಂಡು ಬರುವ ಪ್ರಮುಖ ರೋಗ ಮತ್ತು ಕೀಟಗಳ ನಿರ್ವಹಣೆಗೆ ಕೈಗೊಳ್ಳಬಹುದಾದ ಜೈವಿಕ ಪೀಡೆ ನಿಯಂತ್ರಣ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು ಬಾಗಲಕೋಟೆ ತೋಟಗಾರಿಕೆ ಮಹಾವಿದ್ಯಾಲಯ ಸಹಾಯಕ ಪ್ರಾಧ್ಯಾಪಕ ಡಾ. ಇಟಗಿ ಪ್ರಭಾಕರ್, ಮಾತನಾಡಿ ಉದ್ಯಮಶೀಲತೆ ಮತ್ತು ಮೌಲ್ಯವರ್ಧನೆಯ ಅವಕಾಶಗಳ ಕುರಿತು ಮಾಹಿತಿ ನೀಡಿದರು. ಕೇಂದ್ರದ ಗೃಹ ವಿಜ್ಞಾನದ ವಿಜ್ಞಾನಿ ಡಾ.ಅನಿತಾ.ಎಸ್. ಮಾತನಾಡಿ, ಸಿರಿಧಾನ್ಯಗಳ ಪೌಷ್ಟಿಕತೆ ಮತ್ತು ಆರೋಗ್ಯ ಸುಧಾರಣೆಯಲ್ಲಿ ಅವುಗಳ ಪಾತ್ರದ ಕುರಿತು ತಿಳಿಸಿದರು. ವಿಜ್ಞಾನಿ ಡಾ. ಪ್ರಮೋದ್ ಜಿ. ಮಾತನಾಡಿ, ಸುಧಾರಿತ ಸಿರಿಧಾನ್ಯ ಉತ್ಪನ್ನಾ ತಂತ್ರಜ್ಞಾನಗಳ ಕುರಿತು ಮಾಹಿತಿ ನೀಡಿದರು. ಕೃಷಿ ವಿಜ್ಞಾನಿ ಡಾ, ಸೌಜನ್ಯ,ಎಸ್ ಮಾತನಾಡಿ, ಸಾವಯವ ಪದಾರ್ಥಗಳ ಪ್ರಮಾಣಿಕರಣದ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಜಿಲ್ಲೆಯಾದ್ಯಂತ ಭಾಗವಹಿಸಿದ ರೈತರಿಗೆ ರಾಗಿ (ಕೆ.ಎಂ.ಆರ್.-316), ಅವರೆ (ಹೆಚ್.ಎ.-5) ಬಿತ್ತನೆ ಬೀಜಗಳು, ಜೈವಿಕ ಗೊಬ್ಬರಗಳಾದ (ಟ್ರೈಕೋಡರ್ಮಾ, ಸೂಡೋಮೋನಾಸ್ಸ್, ಸೂಕ್ಷ್ಮಾಣು ಜೀವಿಗಳ ಒಕ್ಕೂಟ (ಎಂ,ಸಿ.), ರೈಜೋಬಿಯಂ, ಅಜೋಸ್ಪೈರಿಲಂ, ಪಿ.ಎಸ್.ಬಿ.), ಬಾಸ್ಕೆಟ್‍ಗಳು, ತರಬೇತಿ ಕಿಟ್ ಮತ್ತು ರಾಗಿ ಬೆಳೆಯಲ್ಲಿ ನೂತನ ಉತ್ಪಾದಾನ ತಂತ್ರಜ್ಞಾನಗಳು, ಸಂಸ್ಕರಣೆ ಮತ್ತು ಮೌಲ್ಯವರ್ಧನೆ” ಎಂಬ ತಾಂತ್ರಿಕ ವಿಸ್ತರಣಾ ಕೈಪಿಡಿಯನ್ನು ವಿತರಿಸಲಾಯಿತು. ಈ ತರಬೇತಿ ಕಾರ್ಯಕ್ರಮವು ಜ್ಞಾನ ಹಂಚಿಕೆ, ಕೌಶಲ್ಯಾಭಿವೃದ್ದಿ ಮತ್ತು ಸಿರಿಧಾನ್ಯ ಆಧಾರಿತ ಸುಸ್ಥಿರ ಕೃಷಿಯ ಪರಿಚಯಕ್ಕೆ ಪರಿಣಾಮಕಾರಿ ವೇದಿಕೆಯಾಯಿತು, ಅಲ್ಲದೇ ಯೋಜನೆಯ ಭಾಗವಾಗಿ ರೈತರಿಗೆ ಸಿರಿಧಾನ್ಯ ಉತ್ಪಾದನೆ, ಮಾರುಕಟ್ಟೆ, ಮೌಲ್ಯವರ್ಧನೆ ಬಗ್ಗೆ ಮಾಹಿತಿಯನ್ನು ನಿರಂತರವಾಗಿ ಫಲಾನುಭವಿ ರೈತರಿಗೆ ಒದಗಿಸಲಾಗುವುದು ಎಂದು ಕೇಂದ್ರದ ಮುಖ್ಯಸ್ಥರು ತಿಳಿಸಿದರು.

- ಖಂಡಿತ, ನೀವು ನೀಡಿದ ಮಾಹಿತಿಯ ಆಧಾರದ ಮೇಲೆ ದಿನಪತ್ರಿಕೆಯ ವರದಿ ಇಲ್ಲಿದೆ: ಮಾಗಡಿ: ಕೆಂಪೇಗೌಡರ ಪ್ರತಿಮೆ ಸ್ಥಳಾಂತರಕ್ಕೆ ಎಚ್.ಎಂ. ಕೃಷ್ಣಮೂರ್ತಿ ತೀವ್ರ ವಿರೋಧ ಮಾಗಡಿ: ಪಟ್ಟಣದ ಅಸ್ಮಿತೆಯಾಗಿರುವ ಕೆಂಪೇಗೌಡರ ಪ್ರತಿಮೆಯನ್ನು ಅಭಿವೃದ್ಧಿಯ ನೆಪದಲ್ಲಿ ಸ್ಥಳಾಂತರಿಸಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಕೆಂಪೇಗೌಡ ಅಭಿವೃದ್ಧಿ ಸಮಿತಿ ರಾಜ್ಯಾಧ್ಯಕ್ಷ ಎಚ್.ಎಂ. ಕೃಷ್ಣಮೂರ್ತಿ ಎಚ್ಚರಿಸಿದ್ದಾರೆ. ಮಂಗಳವಾರ ಪಟ್ಟಣದ ಕೆಂಪೇಗೌಡ ಪ್ರತಿಮೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳ ನಡೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಅಭಿವೃದ್ಧಿಯ ಹೆಸರಲ್ಲಿ ವಿನಾಶ ಸರಿಯಲ್ಲ "ಹೈಕೋರ್ಟ್ ಸೂಚನೆಯ ಮೇರೆಗೆ ಪ್ರತಿಮೆ ತೆರವುಗೊಳಿಸುವ ಬಗ್ಗೆ ಏಪ್ರಿಲ್ 4ರಂದು ಪುರಸಭೆಯಲ್ಲಿ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ನಾನು ಭಾಗವಹಿಸಿ ನನ್ನ ಖಡಕ್ ವಿರೋಧ ದಾಖಲಿಸುತ್ತೇನೆ. ಸರ್ಕಾರಿ ಆಸ್ಪತ್ರೆ ನಿರ್ಮಿಸುವ ನೆಪದಲ್ಲಿ ಉದ್ದೇಶಪೂರ್ವಕವಾಗಿ ಪ್ರತಿಮೆ ತೆರವುಗೊಳಿಸಲು ಮುಂದಾಗಿರುವುದು ಸರಿಯಲ್ಲ. ಈ ಪ್ರತಿಮೆಯಿಂದ ಅಥವಾ ಇಲ್ಲಿರುವ ನೂರಾರು ಮರಗಳಿಂದ ಅಭಿವೃದ್ಧಿಗೆ ಯಾವ ತೊಂದರೆಯಾಗಿದೆ?" ಎಂದು ಅವರು ಪ್ರಶ್ನಿಸಿದರು. ತೆರವುಗೊಳಿಸಿದ ಕಟ್ಟಡಗಳು ಎಲ್ಲಿವೆ? ಈಗಾಗಲೇ ಪಟ್ಟಣದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಭವನ, ಪಶು ಇಲಾಖೆ, ಗುರುಭವನ ಹಾಗೂ ತರಕಾರಿ ಮಾರುಕಟ್ಟೆಗಳನ್ನು ಅಭಿವೃದ್ಧಿಯ ಹೆಸರಲ್ಲಿ ತೆರವುಗೊಳಿಸಲಾಗಿದೆ. ಆದರೆ, ಇಷ್ಟು ದಿನಗಳಾದರೂ ಅವುಗಳನ್ನು ಮರುನಿರ್ಮಾಣ ಮಾಡಿಲ್ಲ. ಈಗ 40 ಕೋಟಿ ವೆಚ್ಚದಲ್ಲಿ ತಾಲೂಕು ಕಚೇರಿ ಒಡೆದು ಹೊಸ ಆಸ್ಪತ್ರೆ ಕಟ್ಟುವ ಅಗತ್ಯವೇನಿದೆ? ಎಂದು ಪ್ರಶ್ನಿಸಿದ ಅವರು, "ಈಗಿರುವ ಆಸ್ಪತ್ರೆಯಲ್ಲೇ ಸರಿಯಾದ ವೈದ್ಯರಿಲ್ಲ, ಶಸ್ತ್ರಚಿಕಿತ್ಸೆಗಳು ನಡೆಯುತ್ತಿಲ್ಲ. ಮೊದಲು ಅದನ್ನು ಸರಿಪಡಿಸಲಿ," ಎಂದರು. ದ್ವೇಷದ ರಾಜಕಾರಣದ ಆರೋಪ "ಎಚ್.ಎಂ. ಕೃಷ್ಣಮೂರ್ತಿ ಕೆಂಪೇಗೌಡರ ಹೆಸರಿನಲ್ಲಿ ಸಮಾಜಮುಖಿ ಕೆಲಸ ಮಾಡಬಾರದು ಎಂಬ ದ್ವೇಷದಿಂದ ಈ ಪಿತೂರಿ ನಡೆಯುತ್ತಿದೆ. ಪಟ್ಟಣದ ಗಬ್ಬು ನಾರುತ್ತಿರುವ ಶೌಚಾಲಯಗಳನ್ನು ಸರಿಪಡಿಸಲಿ, ಮಹಿಳೆಯರಿಗೆ ಅನುಕೂಲ ಮಾಡಿಕೊಡಲಿ. ಅದನ್ನು ಬಿಟ್ಟು ಇತಿಹಾಸವಿರುವ ಗೌರಮ್ಮನಕೆರೆ ಅಭಿವೃದ್ಧಿಯ ಹೆಸರಲ್ಲಿ ಮಣ್ಣು ಮಾರಿಕೊಳ್ಳುವ ಕೀಳು ಮಟ್ಟಕ್ಕೆ ಇಳಿಯಬಾರದು," ಎಂದು ಶಾಸಕರ ಹೆಸರು ಪ್ರಸ್ತಾಪಿಸದೆ ಲೇವಡಿ ಮಾಡಿದರು. ದಶಕಗಳ ಸೇವೆಗೆ ಕುತ್ತು ದಲಿತ ಮುಖಂಡ ಸಿ. ಜಯರಾಮು ಮಾತನಾಡಿ, "ಕೃಷ್ಣಮೂರ್ತಿಯವರು ಕಳೆದ 23 ವರ್ಷಗಳಿಂದ ಯಾವುದೇ ಸರ್ಕಾರಿ ಸಹಾಯವಿಲ್ಲದೆ ಕೆಂಪೇಗೌಡರ ಪ್ರತಿಮೆ ಸ್ಥಾಪಿಸಿ, ಉಚಿತ ಸಾಮೂಹಿಕ ವಿವಾಹ, ಆರೋಗ್ಯ ಶಿಬಿರಗಳಂತಹ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದ್ದಾರೆ. ಅಂತಹ ಪ್ರತಿಮೆಯನ್ನು ತೆರವುಗೊಳಿಸಲು ಮುಂದಾಗಿರುವುದು ದ್ವೇಷದ ರಾಜಕಾರಣದ ಪರಮಾವಧಿ," ಎಂದು ಟೀಕಿಸಿದರು. ಗೋಷ್ಠಿಯಲ್ಲಿ ಮರೂರು ಸಾಗರ್ ಗೌಡ, ಶಂಕ್ರಪ್ಪ, ಕನ್ನಡ ಸಂಘಟನೆಯ ರಂಗೇಶ್, ಮೋಹನ್, ಜೋಡುಗಟ್ಟೆ ರಮೇಶ್, ದೊಡ್ಡಿ ಗೋಪಿ, ಪರಿಸರ ರಕ್ಷಣಾ ಸಮಿತಿ ಅಧ್ಯಕ್ಷ ಶಿವಲಿಂಗಯ್ಯ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.1
- ಇವರು 22 ವರ್ಷದ ಗುಲ್ಜಾರ್ ಶೇಖ್. ಉತ್ತರ ಪ್ರದೇಶದ ಪ್ರಯಾಗ್‌ರಾಜ್ ಜಿಲ್ಲೆಯ ನಿವಾಸಿಯಾಗಿರುವ ಇವರು ‘ಇಂಡಿಯನ್ ಹ್ಯಾಕರ್’ ಎಂಬ ಹೆಸರಿನಲ್ಲಿ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದಾನೆ. ಹೆಚ್ಚು ವ್ಯೂಸ್ ಪಡೆಯುವ ಉದ್ದೇಶದಿಂದ ರೈಲು ಹಳಿಗಳ ಮೇಲೆ ಸೈಕಲ್, ಕಲ್ಲು ಹಾಗೂ ಸಿಲಿಂಡರ್ ಇಟ್ಟು ಅಪಾಯಕಾರಿ ವಿಡಿಯೋಗಳನ್ನು ಚಿತ್ರೀಕರಿಸಿದ್ದಾನೆ. ಈ ಕೃತ್ಯದಿಂದ ರೈಲು ಸಂಚಾರಕ್ಕೆ ಅಪಾಯ ಉಂಟಾಗುವ ಸಾಧ್ಯತೆ ಇದ್ದ ಹಿನ್ನೆಲೆ ಆರ್‌ಪಿಎಫ್ ಅಧಿಕಾರಿಗಳು ಆತನನ್ನು ಬಂಧಿಸಿದ್ದಾರೆ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ವ್ಯೂಸ್‌ಗಾಗಿ ಜೀವಗಳನ್ನು ಅಪಾಯಕ್ಕೆ ತಳ್ಳುವಂತಹ ಕೃತ್ಯಗಳಿಗೆ ತೀವ್ರ ಟೀಕೆ ವ್ಯಕ್ತವಾಗಿದೆ.1
- ತುಮಕೂರು ಜಿಲ್ಲೆಯ ಕೋರ ಹೋಬಳಿಯ ಮಾವುಕೆರೆಯಲ್ಲಿ ಶ್ರೀ ನಂಜುಂಡೇಶ್ವರ ಸ್ವಾಮಿ ಜಾತ್ರಾ ಮಹೋತ್ಸವವು ಮಾರ್ಚ್ 30, 2026 ರಂದು ಅತ್ಯಂತ ವಿಜೃಂಭಣೆಯಿಂದ ನಡೆದಿದ್ದು. ಇದು ಈ ಭಾಗದ ಪ್ರಮುಖ ಧಾರ್ಮಿಕ ಕಾರ್ಯಕ್ರಮವಾಗಿದ್ದು, ಸಾವಿರಾರು ಭಕ್ತರು ಪಾಲ್ಗೊಂಡು ದೇವರ ದರ್ಶನ ಪಡೆದರು ದೇವರ ದರ್ಶನಕ್ಕೆ ಆಗಮಿಸಿದ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಯಿತು .2
- Post by Venu Gopal1
- Post by Md Aleemulla Shariff1
- Madrase Hajira niswan bismilla negar near nisar negar kolar1
- Post by Ayub Pasha1
- ರಾಮನಗರದ ರಾಯರದೊಡ್ಡಿಯಲ್ಲಿ ವೃದ್ಧೆ ಪಾರ್ವತಮ್ಮ ಸಾವನ್ನಪ್ಪಿದರು. ಈ ವೃದ್ಧೆ ಅದೊಂದು ದಿನ ಈ ಹನುಮನಿಗೆ ಹಾಕಿದ್ದ ತುತ್ತಿನ ಅನ್ನದ ಋಣಕ್ಕೆ ಮೃತ ಪಾರ್ವತಮ್ಮನ ಮಗ್ಗಲಿನಲ್ಲಿ ಕುಳಿತು ಮೂಖ ವೇದನೆ ವ್ಯಕ್ತಪಡಿಸಿದ ಪರಿ ಇದು1