ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿ ಮಹಿಳಾ ದಿನಾಚರಣೆ | ಮಹಿಳಾ ಕೈದಿಗಳಿಗೆ ಮನಪರಿವರ್ತನಾ ಕಾರ್ಯಕ್ರಮ | Ballari Women’s Day Special ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ಮಹಿಳಾ ಕೈದಿಗಳು ಹಾಗೂ ಮಹಿಳಾ ಸಿಬ್ಬಂದಿಗಳಿಗಾಗಿ ಜೀವನ್ ಸಂಗೀತ್ ಸಂಸ್ಥೆ ವತಿಯಿಂದ ವಿಶೇಷ ಮನಪರಿವರ್ತನಾ ಹಾಗೂ ಮನರಂಜನಾ ಕಾರ್ಯಕ್ರಮ ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ಕೇಂದ್ರ ಕಾರಾಗೃಹದ ಅಧೀಕ್ಷಕಿ ಆರ್. ಲತಾ ಅವರು ಮಾತನಾಡಿ, ಕೈದಿಗಳು ಜಗಳಗಳಲ್ಲಿ ಸಮಯ ವ್ಯರ್ಥ ಮಾಡದೇ ಕುಲಕಸುಬುಗಳನ್ನು ಕಲಿಯಬೇಕು, ಧ್ಯಾನ ಮತ್ತು ಯೋಗದ ಮೂಲಕ ಜೀವನದಲ್ಲಿ ಬದಲಾವಣೆ ತರಬೇಕು ಎಂದು ಸಲಹೆ ನೀಡಿದರು. ಮಹಿಳೆಯರು ಯಾವುದೇ ಕ್ಷೇತ್ರದಲ್ಲೂ ಯಾರಿಗಿಂತಲೂ ಕಡಿಮೆ ಇಲ್ಲ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು. ಜೀವನ್ ಸಂಗೀತ್ ಸಂಸ್ಥೆಯ ಸಂಸ್ಥಾಪಕರಾದ ಗೀತಾ ವೀರೇಶ್ ಅವರು ಮಾತನಾಡಿ, ಅಪರಾಧವನ್ನು ಯಾರೂ ಇಷ್ಟಪಟ್ಟು ಮಾಡುವುದಿಲ್ಲ. ಆದರೆ ಅನಿವಾರ್ಯ ಪರಿಸ್ಥಿತಿಗಳು ಕೆಲವೊಮ್ಮೆ ತಪ್ಪುಗಳಿಗೆ ಕಾರಣವಾಗುತ್ತವೆ. ಈ ಸಮಯವನ್ನು ಜೀವನದಲ್ಲಿ ಬದಲಾವಣೆ ತರಿಕೊಳ್ಳಲು ಅವಕಾಶವಾಗಿ ಬಳಸಿಕೊಳ್ಳಬೇಕು ಎಂದು ಕೈದಿಗಳಿಗೆ ಕರೆ ನೀಡಿದರು. ಕಾರ್ಯಕ್ರಮದಲ್ಲಿ ಕೈದಿಗಳಿಗೆ ವಿವಿಧ ಆಟಗಳು ನಡೆಸಿ ಬಹುಮಾನ ವಿತರಿಸಲಾಯಿತು. ಉತ್ತಮ ಸೇವೆ ಸಲ್ಲಿಸಿದ ಸಿಬ್ಬಂದಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಕುಮಾರಿ ಪರಿಮಳ ಅವರ ನೃತ್ಯ ಪ್ರದರ್ಶನ ಕಾರ್ಯಕ್ರಮಕ್ಕೆ ವಿಶೇಷ ಆಕರ್ಷಣೆಯಾಯಿತು. ಮಹಿಳಾ ದಿನಾಚರಣೆ ಅಂಗವಾಗಿ ಬಳ್ಳಾರಿಯ ಮಯೂರ ಹೋಟೆಲ್‌ನಲ್ಲಿ ಮಹಿಳಾ ಕೆಲಸಗಾರರೊಂದಿಗೆ ಕೂಡ ಆಟಗಳು ಆಯೋಜಿಸಿ ಅವರಿಗೆ ಬಹುಮಾನ ನೀಡಿ ಸಂಭ್ರಮಿಸಲಾಯಿತು. 📍 ಸ್ಥಳ: ಬಳ್ಳಾರಿ, ಕರ್ನಾಟಕ 📺 ASN News24 Kannada

- ಭಾಲ್ಕಿಯಲ್ಲಿ ಎ. 20ರಿಂದ ಬಸವ ಜಯಂತಿ ಹಾಗೂ ವಚನ ಜಾತ್ರೆ ಸಂಭ್ರಮ; ಏಪ್ರಿಲ್ 18ಕ್ಕೆ ಬೈಕ್ ರ್‍ಯಾಲಿ #jb_news_kannada #bidar #bhalki1
- ಬಳ್ಳಾರಿ ಮಹಾನಗರ ಪಾಲಿಕೆ 2026-27ನೇ ಸಾಲಿನ ಆಸ್ತಿ ತೆರಿಗೆ ಪಾವತಿದಾರರಿಗೆ ವಿಶೇಷ ರಿಯಾಯಿತಿಗಳನ್ನು ಘೋಷಿಸಿದೆ 💰 👉 ಏಪ್ರಿಲ್ 1 ರಿಂದ 30ರವರೆಗೆ ಪಾವತಿಸಿದರೆ 5% ರಿಯಾಯಿತಿ 👉 ಮೇ 1 ರಿಂದ ಜೂನ್ 30ರವರೆಗೆ ದಂಡವಿಲ್ಲದೆ ಪಾವತಿ ಅವಕಾಶ 👉 ಜುಲೈ 1ರಿಂದ ಪ್ರತಿ ತಿಂಗಳು 2% ದಂಡ ಪಾಲಿಕೆ ಆಯುಕ್ತರು, ನಗರದ ಅಭಿವೃದ್ಧಿಗೆ ನಾಗರಿಕರ ಸಹಕಾರ ಅಗತ್ಯ ಎಂದು ಮನವಿ ಮಾಡಿ, ಸಕಾಲದಲ್ಲಿ ತೆರಿಗೆ ಪಾವತಿಸಿ ಲಾಭ ಪಡೆಯಲು ಕರೆ ನೀಡಿದ್ದಾರೆ.1
- ಮನೆ ಕಳ್ಳತನ ಮಾಡಿದ್ದ ಆರೋಪಿ ಬಂಧನ; ₹1,90,000 ಜಪ್ತಿ ಕೂಡ್ಲಿಗಿ ಮನೆ ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಕಾನಹೊಸಹಳ್ಳಿಯ ಪೊಲೀಸರು ಯಶಸ್ವಿಯಾಗಿದರೆ. ನಜೀರ್ ಶಫಿ ಬಂಧಿತ ಆರೋಪಿ, ಕಾನಹೊಸಹಳ್ಳಿ ಪೊಲೀಸ್ ಠಾಣ ವ್ಯಾಪ್ತಿಯ ಮಂಗಾಪುರ ಗ್ರಾಮದಲ್ಲಿ ಜನವರಿ ಹಾಗು ಡಿಸೆಂಬರ್ ತಿಂಗಳಲ್ಲಿ ಎರಡು ಪ್ರತ್ಯಕ ಮನೆಗಳ್ಳತಾನವಾದ ಕುರಿತು ಪ್ರಕರಣ ದಾಕಲಾಗಿದ್ದವು, ಪ್ರಕರಣದ ಜಾಡು ಹಿಡಿದ ಕಾನಾಹೊಸಹಳ್ಳಿ ಪೊಲೀಸರು ಆರೋಪಿಯನ್ನು ಬಂಧಿಸಿ ₹1,90000 ಹಣವನ್ನು ವಶಕ್ಕೆ ಪಡೆದಿದ್ದಾರೆ. ಮಂಗಪುರದ ಬಸವರಾಜ ಎಂಬುವವರ ಮನೆಯಲ್ಲಿ ಬೀರುವಿನಲ್ಲಿದ್ದ 145000 ಹಾಗೂ ಗುರುಬಸವರಾಜ್ ಎಂಬುವವರ ಮನೆಯಲ್ಲಿ ₹55000 ಹಣವನ್ನು ಯಾರು ಇಲ್ಲದ ವೇಳೆ ಕಳ್ಳತನ ಮಾಡಿರುವ ಬಗ್ಗೆ ಪ್ರಕರಣ ದಾಕಲಾಗಿತ್ತು. ಎಸ್ಪಿ ಜಾಹ್ನವಿ ಎಸ್, ಎಎಸ್ಪಿ ಮಂಜುನಾಥ, ಡಿವೈಸ್ಪಿ ಮಲ್ಲೇಶ್ ದೊಡ್ಡಮನಿ, ಸಿಪಿಐ ಡಿ ದುರುಗಪ್ಪ ಮಾರ್ಗದರ್ಶನದಲ್ಲಿ ಪಿಎಸ್ಐ ಸಿದ್ರಾಮ್ ಬಿದರಾಣಿ ನೇತೃತ್ವದಲ್ಲಿ ಸಿಬಂದ್ದಿ ಕೃಷ್ಣಪ್ಪ, ಸುರೇಶ್, ಕೊಟ್ರೇಶ ಅಂಗಡಿ, ಸಿದ್ದಲಿಂಗಪ್ಪ, ವಿನಾಯಕ್, ಸಂದೀಪ್, ರವಿಚಂದ್ರ ಗೌಡ, ಕೃಷ್ಣ ನಾಯಕ್ ಒಳಗೊಂಡ ತಂಡ ಕಾರ್ಯಾಚರಣೆ ನಡೆಸಿದೆ. ಕಾರ್ಯಾಚರಣೆಯಲ್ಲಿ ಭಾಗಿಯಾದ ಅಧಿಕಾರಿ ಹಾಗೂ ಸಿಬಂದ್ದಿ ವರ್ಗಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್ ಜಾಹ್ನವಿ ಅಭಿನಂದಿಸಿದ್ದಾರೆ.1
- Post by Mouli Varma1
- ಹೊಳಲ್ಕೆರೆ ಅಂಗಡಿ ಹೋಟೆಲ್ ಗಳ ಮೇಲೆ ತಹಶಿಲ್ದಾರ್ ವಿಜಯ್ ಕುಮಾರ್ ನೇತೃತ್ವದಲ್ಲಿ ದಾಳಿ ನಡೆಸಿ ಅಕ್ರಮ ಸಿಲಿಂಡರ್ ಗಳನ್ನ ವಷಕ್ಕೆ ಪಡೆಯಲಾಗಿದೆ. ಇನ್ನೂ ಸಿಲಿಂಡರ್ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಅಕ್ರಮವಾಗಿ ಸಿಲಿಂಡರ್ ಗಳನ್ನ ಏಜೆನ್ಸಿ ಮಾಲೀಕರು ಮಾರಾಟ ಮಾಡುತ್ತಿದ್ದ ಬಗ್ಗೆ ಆರೋಪಗಳು ಕೇಳಿ ಬರುತ್ತಿದ್ದು ಈ ಹಿನ್ನೆಲೆ ದಾಳಿ ನಡೆಸಿ ಸಿಲಿಂಡರ್ ಗಳನ್ನ ವಷಕ್ಕೆ ಪಡೆದಿದ್ದಾರೆ.1
- ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದು ಮರಳುತ್ತಿದ್ದ ಭಕ್ತರ ಬಾಳಿನಲ್ಲಿ ವಿಧಿ ಅಟ್ಟಹಾಸ ಮೆರೆದಿದೆ. ಮಂತ್ರಾಲಯದ ಸಮೀಪ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಚಿಕ್ಕಬಳ್ಳಾಪುರ ಮೂಲದ ಎಂಟು ಮಂದಿ ಭಕ್ತರು ಸ್ಥಳದಲ್ಲೇ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ನಡೆದಿದೆ...ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಮಂತ್ರಾಲಯ ತಾಲೂಕಿನ ಕಲ್ಲುದೇವರಕುಂಟ ಗ್ರಾಮದ ಬಳಿ ಅಪಘಾತ ಸಂಭವಿಸಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಮಂತ್ರಾಲಯಕ್ಕೆ ತೆರಳಿದ್ದ ಭಕ್ತರು ಸಂಚರಿಸುತ್ತಿದ್ದ ಬೊಲೆರೊ ವಾಹನಕ್ಕೆ, ವೇಗವಾಗಿ ಬಂದ ಸಿಮೆಂಟ್ ಮತ್ತು ಜಲ್ಲಿಕಲ್ಲು ಸಾಗಿಸುತ್ತಿದ್ದ ಟ್ಯಾಂಕರ್ ಮುಖಾಮುಖಿ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಬೊಲೆರೊ ವಾಹನ ಸಂಪೂರ್ಣವಾಗಿ ನುಜ್ಜುಗುಜ್ಜಾಗಿದ್ದು, ವಾಹನದಲ್ಲಿದ್ದ ಎಂಟು ಮಂದಿ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಮೃತಪಟ್ಟವರೆಲ್ಲರೂ ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆಯ ನಿವಾಸಿಗಳು ಎಂದು ಗುರುತಿಸಲಾಗಿದೆ.ಟ್ಯಾಂಕರ್ ಡಿಕ್ಕಿಯಾದ ರಭಸಕ್ಕೆ ಬೊಲೆರೊ ವಾಹನ ಅಪ್ಪಚ್ಚಿಯಾಗಿದ್ದು, ಮೃತದೇಹಗಳನ್ನು ಹೊರತೆಗೆಯಲು ಹರಸಾಹಸ ಪಡಬೇಕಾಗಿದೆ.1
- ಬಿಸಿಲಿನ ತೀವ್ರತೆ ಹೆಚ್ಚಿರುವ ಕಾರಣ, ಸರ್ಕಾರಿ ಕಚೇರಿಗಳ ಕಾರ್ಯನಿರ್ವಹಣಾ ಅವಧಿಯನ್ನು ಹೊಸ ಸಮಯ: ಇನ್ಮುಂದೆ ಬೆಳಿಗ್ಗೆ 8:00 ಗಂಟೆಯಿಂದ ಮಧ್ಯಾಹ್ನ 1:30 ರವರೆಗೆ ನಿಗದಿ ಮಾಡಿ ಯಂದು ಕೇಳಿಕೊಳ್ಳುತ್ತಿದ್ದಾರೆ ಮಧ್ಯಾಹ್ನದ ಸುಡುವ ಬಿಸಿಲಿನಿಂದ ನೌಕರರನ್ನು ಮತ್ತು ದೂರದ ಊರುಗಳಿಂದ ಬರುವ ಜನರನ್ನು ರಕ್ಷಿಸುವುದು ಈ ಬದಲಾವಣೆಯ ಹಿಂದಿನ ಮುಖ್ಯ ಉದ್ದೇಶವಾಗಿದೆ. "ಜನಸಾಮಾನ್ಯರ ಆರೋಗ್ಯ ಮತ್ತು ಕೆಲಸದ ದಕ್ಷತೆಯನ್ನು ಕಾಪಾಡಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಬಿಸಿಲು ಕಡಿಮೆಯಾಗುವವರೆಗೆ ಈ ಹೊಸ ವೇಳಾಪಟ್ಟಿ ಜಾರಿಗೆ ತರಬಹುದು ಬಿಸಿಲಿನಿಂದ ರಕ್ಷಿಸಿಕೊಳ್ಳಲು ಜನರು ಹೆಚ್ಚಿನ ಪ್ರಮಾಣದಲ್ಲಿ ನೀರು ಸೇವಿಸಬೇಕು ಮತ್ತು ಅನಗತ್ಯವಾಗಿ ಮಧ್ಯಾಹ್ನ ಹೊರಬರಬಾರದು ಎಂದು ಆರೋಗ್ಯ ಇಲಾಖೆ ಕೂಡ ಸೂಚಿಸಿದೆ. ಈ ಸಮಯದ ಬದಲಾವಣೆಯನ್ನ ಮಾಡುವಂತೆ ಸರ್ಕಾರಕ್ಕೆ ಬಸವರಾಜ ಬಳ್ಳಾರಿ ಗದಗ ಜಿಲ್ಲಾ ನೌಕರರ ಸಂಘದ ಅಧ್ಯಕ್ಷೆರು ಸರ್ಕಾರ ಕ್ಕೆ ಮನವಿ ಮಾಡಿದ್ದಾರೆ ಸರ್ಕಾರ ಸಮಯ ಬದಲಾವಣೆ ಮಾಡುತ್ತಾ ಕಾದು ನೋಡಬೇಕಿದೆ ಮತ್ತು ಸರ್ಕಾರಿ ಕೆಲಸಗಳಿಗೆ ಬರುವ ಜನರಿಗೆ ಎಷ್ಟರ ಮಟ್ಟಿಗೆ ಸಹಕಾರಿಯಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.1
- ಭಾರತೀಯ ಜನತಾ ಪಾರ್ಟಿ ಬಳ್ಳಾರಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷರಾಗಿ ಹಂಪಿ ರಮಣ ಅವರನ್ನು ನೇಮಕ ಮಾಡಲಾಗಿದೆ. ಈ ಕುರಿತು ಮಾತನಾಡಿದ ಹಂಪಿ ರಮಣ ಅವರು, ಈ ಹೊಣೆಗಾರಿಕೆಯನ್ನು ಜವಾಬ್ದಾರಿಯುತವಾಗಿ ನಿರ್ವಹಿಸಿ, ಪಕ್ಷವನ್ನು ತಳಮಟ್ಟದಲ್ಲಿ ಸದೃಡಗೊಳಿಸುವುದಾಗಿ ತಿಳಿಸಿದ್ದಾರೆ. ಮುಂಬರುವ ಸವಾಲುಗಳನ್ನು ಎದುರಿಸಿ, ಪಕ್ಷದ ವರ್ಚಸ್ಸನ್ನು ಹೆಚ್ಚಿಸಲು ಸತತವಾಗಿ ಕೆಲಸ ಮಾಡುವುದಾಗಿ ಅವರು ಭರವಸೆ ನೀಡಿದ್ದಾರೆ.1