Shuru
Apke Nagar Ki App…
ಬೆಳೆ ವಿಮೆಗಾಗಿ ಗದಗದಲ್ಲಿ ರೈತರಿಂದ ಜಿಲ್ಲಾ ಆಡಳಿತದ ಭವನದ ಮುಂದೆ ಪ್ರತಿಭಟನೆ ಗದಗ ಜಿಲ್ಲಾ ಮುಂಡರಗಿ ತಾಲೂಕಿನ ರೈತರಿಂದ ಇನ್ಸೂರೆನ್ಸ್ ಹಣಕ್ಕಾಗಿ ಪ್ರತಿಭಟನೆ ಮಾಡಲ ಮಾಡಿದರು
Ranganath Kandagal
ಬೆಳೆ ವಿಮೆಗಾಗಿ ಗದಗದಲ್ಲಿ ರೈತರಿಂದ ಜಿಲ್ಲಾ ಆಡಳಿತದ ಭವನದ ಮುಂದೆ ಪ್ರತಿಭಟನೆ ಗದಗ ಜಿಲ್ಲಾ ಮುಂಡರಗಿ ತಾಲೂಕಿನ ರೈತರಿಂದ ಇನ್ಸೂರೆನ್ಸ್ ಹಣಕ್ಕಾಗಿ ಪ್ರತಿಭಟನೆ ಮಾಡಲ ಮಾಡಿದರು
More news from ಕರ್ನಾಟಕ and nearby areas
- Post by Onlinetv24x71
- ಏ. 20 : ಅರಸೀಕೆರೆ ತಾಲೂಕು ರಾಮಸಾಗರ ಗ್ರಾಮದ ಬಸವ ತತ್ವ ಪ್ರಸಾರ ಕೇಂದ್ರದಲ್ಲಿ ಶರಣ ಸಿದ್ದಪ್ಪ ಶರಣೆ ಮಲ್ಲಮ್ಮನವರು ಸ್ಥಾಪಿಸಿರುವ ಶ್ರೀ ಬಸವ ತತ್ವ ಪ್ರಸಾರ ಕೇಂದ್ರವನ್ನು 2013ರಲ್ಲಿ 12ನೇ ಶತಮಾನದ ಆಗಿಹೋದ ಶರಣರ ಆಚರಣೆ ಅನುಭಾವ, ಅನುಕರಣೆ, ಪ್ರಚಾರಕ್ಕೋಸ್ಕರ ಸ್ಥಾಪಿಸಲಾಯಿತು. ಅಂದಿನಿಂದ ಇಂದಿನವರೆಗೆ ಯಾರ ಸಹಾಯವಿಲ್ಲದೆ ತನು-ಮನ ಧನವನ್ನು ಬಸವ ತತ್ವ ಪ್ರಚಾರಕ್ಕೆ ಮುಡುಪಾಗಿಟ್ಟಂತಹ ದಂಪತಿಗಳಿವರು. ಈವರು ಸ್ಥಾಪಿಸಲ್ಪಟ್ಟ ಬಸವ ತತ್ವ ಪ್ರಸಾರ ಕೇಂದ್ರದಲ್ಲಿ ಅದ್ದೂರಿಯಾಗಿ ಬಸವ ಜಯಂತಿ ಆಚರಣೆ ಮಾಡಲಾಯಿತು. ಪ್ರತಿ ತಿಂಗಳು ಒಂದರಂದು ಲಿಂಗ ಪೂಜೆ, ಅನುಭಾವ, ಪ್ರಸಾದ, ಪ್ರಚಾರ ಈತರ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದಾರೆ. ಅವರ ಈ ಕಾರ್ಯಕ್ರಮಗಳಿಗೆ ನಾವೆಲ್ಲರೂ ಅಭಿನಂದಿಸೋಣ. ಇಂದು ಈ ಬಸವ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಹಿರಿಯರಾದ ಶ್ರೀ ಶರಣ ಹಾಲಪ್ಪ ಹಿರಿಯೂರ್, ಶರಣ ಸಿದ್ದೇಶ, ಪುಟಾಣಿ ಮಕ್ಕಳು ಹಾಗೂ ಶರಣ ಶ್ರೀ ವಿನಯ್ ಪಾಟೀಲ್ ರವರು ಷಟಸ್ಥಲ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ರಾಮಸಾಗರ ಗ್ರಾಮಸ್ಥರು ಉಪಸ್ಥಿತರಿದ್ದು, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.2
- ಕುಷ್ಟಗಿ:- ಪಟ್ಟಣದ ವಾರ್ಡ ನಂಬರ-20 ಮತ್ತು 19 ರಲ್ಲಿ ಶ್ರೀ ನವನಹಳ್ಳಿ ದುರ್ಗಾದೇವಿ ಜಾತ್ರಾ ಮಹತ್ಸೋವ ಅಂಗವಾಗಿ ಮತ್ತು 893ನೇ ಬಸವ ಜಯಂತಿ ನಿಮಿತ್ಯ ಪ್ರತಿ ವರ್ಷದಂತೆ ಈ ವರ್ಷವು ಕೂಡ ಐದು ದಿನಗಳ ಕಾಲ ಶ್ರೀ ನವನಹಳ್ಳಿ ದುರ್ಗಾದೇವಿಗೆ ನಂದಾದೀಪ ಹಾಕುವ ಮೂಲಕ ಜಾತ್ರಾ ಮಹೋತ್ಸವವನ್ನು ಅತ್ಯಂತ ಅದ್ದೂರಿಯಾಗಿ ಮಾಡಲಾಯಿತು. ಬಸವೇಶ್ವರ ಜಯಂತಿ ದಿನದಂದು ಶ್ರೀ ನವನಹಳ್ಳಿ ದುರ್ಗಾದೇವಿಗೆ ವಿಶೇಷ ಪೂಜೆ, ಹೋಮ ಹವನ ಕುಂಕುಮಾರ್ಚನೆ ಸೇರಿದಂತೆ ನಾನಾ ಪೂಜೆಗಳೊಂದಿಗೆ ಶ್ರೀ ನವನಹಳ್ಳಿ ದುರ್ಗಾದೇವಿಯನ್ನು ಅಲಂಕರಿಸಿ ಪೂಜಿಸಲಾಯಿ. ಅದೇ ದಿನ ರಾತ್ರಿ-8 ಗಂಟೆಗೆ ಪುರುಷರಿಗೆ, ಯುವಕ ಮಿತ್ರರಿಗೆ, ಯುವತಿಯರಿಗೆ, ಚಿಕ್ಕ ಮಕ್ಕಳಿಗೆ, ಹಿರಿಯರಿಗೆ ಸೇಬು, ಸೋನ್ ಪಾಪಡಿ, ಮ್ಯಾಂಗೋ ಜ್ಯೂಸ್, ಬಿಸ್ಕೆಟ್ , ಐಸ್ ಕ್ರೀಮ್ ತಿನ್ನುವ ಸ್ಪರ್ಧೆಯನ್ನು ಏರ್ಪಡಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲಾಯಿತು. ಈ ಸಂದರ್ಭದಲ್ಲಿ ಸ್ಪರ್ಧಾಳಗಳಿಗೆ ಶ್ರೀನವನಹಳ್ಳಿ ದುರ್ಗಾದೇವಿ ಕ್ಷೇಮ ಅಭಿವೃದ್ದಿ ಸಂಘದಿಂದ ಸ್ಪರ್ಧೆಗೆ ಬೇಕಾಗುವ ಎಲ್ಲಾ ಪದಾರ್ಥಗಳನ್ನು ಕಮಿಟಿಯವರು ಉಚಿತವಾಗಿ ಏರ್ಪಡಿಸಿದ್ದರು. ಸ್ಪರ್ದಾಳುಗಳನ್ನು ಆಯ್ಕೆ ಮಾಡಲು ಆಯ್ಕೆ ಸಮಿತಿಯನ್ನು ಮಾಡಲಾಯಿತು. ಆಯ್ಕೆ ಸಮಿತಿ ಸದಸ್ಯರಾದ ಉತ್ತಮ ಜಿಲ್ಲಾ ಶಿಕ್ಷಕ ಪ್ರಶಸ್ತಿ ವಿಜೇತ ನಟರಾಜ್ ಸೋನಾರ್, ಶಿಕ್ಷಕ ಬಸವರಾಜ ಹಕ್ಕಲ್, ಮರಿಯಪ್ಪ ಹಕ್ಕಲ್, ಮುತ್ತಣ್ಣ ಹಕ್ಕಲ್ ಇವರನ್ನು ನೇಮಿಸಲಾಯಿತು. ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ನಟರಾಜ ಸೋನಾರ್ ಇವರು ಸ್ಪರ್ಧೆಯಲ್ಲಿ ಉತ್ತಮವಾಗಿ ಆಟ ಹಾಡಿದ ಪ್ರಥಮ, ದ್ವಿತೀಯ, ತೃತೀಯ ಸ್ಪರ್ದಾಳುಗಳನ್ನು ಆಯ್ಕೆ ಮಾಡಿ ಕೊಟ್ಟರು. ನಂತರ ಆಯ್ಕೆಯಾದ ಸ್ಪರ್ದಾಳುಗಳಿಗೆ ಬಹುಮಾನವನ್ನು ವಿತರಣೆ ಮಾಡಿದರು. ಆ ನಂತರ ಸಕಲ ಸದ್ಭಕ್ತರಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಏರ್ಪಡಿಸಿ ಜಾತ್ರಾ ಮಹೋತ್ಸವದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ನವನಹಳ್ಳಿ ದುರ್ಗಾದೇವಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮರಿಯಪ್ಪ ಹಕ್ಕಲ್, ಶರಣಯ್ಯ ಹಿರೇಮಠ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತಾಲೂಕು ಅಧ್ಯಕ್ಷ ಪವಾಡೆಪ್ಪ ಚೌಡ್ಕಿ, ಕರಿಯಪ್ಪ ಹುಣಸಿಹಾಳ, ಶರಣಪ್ಪ ಕಲಕಬಂಡಿ, ದುರಗಪ್ಪ ಹಕ್ಕಲ್, ಅಡಿಯಪ್ಪ ಗದ್ದಿ, ಯಮನಪ್ಪ ಚೂರಿ, ಮಾರುತಿ ಇಂಗಳಗಿ, ರಮೇಶ ಇಂಗಳಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.4
- ಶಿಗ್ಗಾಂವ ತಾಲೂಕಿನ ಅಂಬೇಡ್ಕರ್ ಸಂಕೀರ್ಣದಲ್ಲಿ ತಾಲೂಕ ಆಡಳಿತದಿಂದ ಹಮ್ಮಿಕೊಂಡಂತ ವಿಶ್ವಗುರು ಜಗಜ್ಯೋತಿ ಬಸವೇಶ್ವರರ ಜಯಂತಿ ಕಾರ್ಯಕ್ರಮದಲ್ಲಿ ಶಿಗ್ಗಾವ ಸವಣೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಯಾಸೀರ್ ಖಾನ್ ಪಠಾಣ ಭಾಗವಹಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು, ಈ ಸಂದರ್ಭದಲ್ಲಿ ಸಂಗನಬಸವ ಪೂಜ್ಯಶ್ರೀಗಳು, ಹಾಗೂ ಮಾಜಿ ಸಂಸದರಾದ ಶ್ರೀ ಮಂಜುನಾಥ ಕುನ್ನೂರ್ ಹಾಗೂ ಗಡಿ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಶ್ರೀ ಸೋಮಣ್ಣ ಬೇವಿನಮರದ, ತಾಲೂಕ ಪಂಚಮಸಾಲಿ ಸಮಾಜದ ಅಧ್ಯಕ್ಷರಾದ ರಾಗಿ ವಕೀಲರು, ಶಿಗ್ಗಾಂವ ತಾಲೂಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಗುಡ್ಡಪ್ಪ ಜಲ್ದಿ, ಗ್ಯಾರೆಂಟಿ ಸಮಿತಿಯ ತಾಲೂಕ ಅಧ್ಯಕ್ಷರಾದ ಎಸ್ ಎಫ್ ಮನಕಟ್ಟಿ, ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು,1
- (Weather News) "ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯು ಮುನ್ಸೂಚನೆಯನ್ನು ನೀಡಿದೆ."3
- ಇಳಕಲ್: ಸಾಂಸ್ಕೃತಿಕ ನಾಯಕ, ಜಗಜ್ಯೋತಿ ಬಸವೇಶ್ವರ ಜಯಂತ್ಯೋತ್ಸವ ಅಂಗವಾಗಿ ಕಂದಗಲ್ಲ ಗ್ರಾಮಸ್ಥರು ಎತ್ತುಗಳ ಮೆರವಣಿಗೆ ಮಾಡುವ ಮೂಲಕ ಬಸವ ಜಯಂತಿಯನ್ನು ಸೋಮವಾರದಂದು ಆಚರಿಸಿದರು. ಬಸವ ಜಯಂತಿ ಪ್ರಯುಕ್ತ ಎತ್ತುಗಳ ಮೈ ತೊಳೆದು, ಕೋಡುಗಳಿಗೆ ಕೊಂಡೆಗಳನ್ನು ಕಟ್ಟಿ, ಕೊರಳಿಗೆ ಗೆಜ್ಜೆಯನ್ನು ಕಟ್ಟಿ, ಹೆಗಲ ಮೇಲೆ ಶೃಂಗರಿಸಿರುವ ಶಾಲನ್ನು ಹಾಕಿ ಪೂಜೆಯನ್ನು ಸಲ್ಲಿಸಿ, ಗ್ರಾಮದ ಪ್ರಮುಖ ಬೀದಿಗಳಲ್ಲಿ ೫೦ ಕ್ಕೂ ಜೋಡಿ ಎತ್ತುಗಳ ಮೆರವಣಿಗೆಯೊಂದಿಗೆ ಬಸವೇಶ್ವರ ಭಾವಚಿತ್ರದ ಮೆರವಣಿಗೆಯನ್ನು ಮಾಡುತ್ತಾ ಕುಣಿದು ಕುಪ್ಪಳ್ಳಿಸುವ ಮೂಲಕ ಸಂಭ್ರಮಿಸಿದರು. ನಂತರ ಬಸವೇಶ್ವರ ವೃತ್ತದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಜಯಂತಿಯ ನೇತೃತ್ವವವನ್ನು ತಿಪ್ಪಣ್ಣ ಧರ್ಮಂತಿ, ಕಳಕಪ್ಪ ಕಡಿವಾಲ, ಶರಣಪ್ಪ ಧರ್ಮಂತಿ, ಅಮರಪ್ಪ ಗೆಜ್ಜಲಗಟ್ಟಿ, ಮದರಸಾಬ ಕಂಬಾರ,ಮAಜುನಾಥ ಗೊಂದಿ, ರಾಜಮಹಮ್ಮದ ನಧಾಫ್ ಸೇರಿದಂತೆ ಗ್ರಾಮಸ್ಥರು ಇದ್ದರು .1
- ಇಳಕಲ್ ತಾಲೂಕಿನ ವಜ್ಜಲ ಗ್ರಾಮದ ಮಹಿಳೆ ಶ್ಯಾವವ್ವ ಮಲ್ಲಪ್ಪ ವಾಲಿಕಾರ ವಯಸ್ಸು 48 ಇವರು ಸಿಡಿಲು ಬಡಿದು ಮೃತ ಪಟ್ಟಿದ್ದರು. ನಿನ್ನೆ ರಾತ್ರಿ ಸ್ಥಳಕ್ಕೆ ತಹಸಿಲ್ದಾರ ಅಮರೇಶ ಪಮ್ಮಾರ ಭೇಟಿ ನೀಡಿದರು1
- Post by Onlinetv24x71