Shuru
Apke Nagar Ki App…
ನಿಮ್ಮ ವಿದ್ಯುತ್ ಸಮಸ್ಯೆಗಳನ್ನು ಹಂಚಿಕೊಳ್ಳಲು ಮುಕ್ತ ವೇದಿಕೆ #HESCOM #Helpline1912 @followers HESCOM Energy Department - Government of Karnataka #ಹೆಸ್ಕಾಂ ನಿಮ್ಮ ವಿದ್ಯುತ್ ಸಮಸ್ಯೆಗಳನ್ನು ಹಂಚಿಕೊಳ್ಳಲು ಮುಕ್ತ ವೇದಿಕೆ #HESCOM #Helpline1912 @followers HESCOM Energy Department - Government of Karnataka #ಹೆಸ್ಕಾಂ
Ilahi kaladagi
ನಿಮ್ಮ ವಿದ್ಯುತ್ ಸಮಸ್ಯೆಗಳನ್ನು ಹಂಚಿಕೊಳ್ಳಲು ಮುಕ್ತ ವೇದಿಕೆ #HESCOM #Helpline1912 @followers HESCOM Energy Department - Government of Karnataka #ಹೆಸ್ಕಾಂ ನಿಮ್ಮ ವಿದ್ಯುತ್ ಸಮಸ್ಯೆಗಳನ್ನು ಹಂಚಿಕೊಳ್ಳಲು ಮುಕ್ತ ವೇದಿಕೆ #HESCOM #Helpline1912 @followers HESCOM Energy Department - Government of Karnataka #ಹೆಸ್ಕಾಂ
More news from ಕರ್ನಾಟಕ and nearby areas
- |ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ)ಜೈ ಭೀಮ ಯುವ ಘರ್ಜನೆ ಹಳೇ ಮುರನಾಳ ಗ್ರಾಮದಲ್ಲಿ ಗ್ರಾಮ ಘಟಕ ಉದ್ಘಾಟನೆ|1
- ಗುಳೇದಗುಡ್ಡ: ಜಗತ್ತಿನಲ್ಲಿ ತುಂಬಿದ್ದ ಅಜ್ಞಾನ, ಮೂಢನಂಬಿಕೆ, ಕಂದಾಚಾರ, ಜಾತಿಯತೆಯಂತಹ ಅಂಧಕಾರವನ್ನು ಓಡಿಸಿ ಜ್ಞಾನದ ಬೆಳಕನ್ನು ನೀಡಿದ ಜಗಜ್ಯೋತಿ ಬಸವಣ್ಣನವರು ಸಮಾಜದಲ್ಲಿ ಸಮಾನತೆಯನ್ನು ಸಾರಿದವರು. ವಚನಗಳ ಮೂಲಕ ಸಾಮಾಜಿಕ ಕ್ರಾಂತಿಯನ್ನು ಮಾಡಿದ ಬಸವಣ್ಣ ಈ ನೆಲದ ಸಾಂಸ್ಕೃತಿಕ ನಾಯಕರು ಎಂದು ಸಾಹಿತಿ ರವಿ ಕಂಗಳ ಹೇಳಿದರು. ಅವರು ಸೋಮವಾರ ಪಟ್ಟಣದ ಬಸವ ಕೇಂದ್ರ ವತಿಯಿಂದ ಬಸಮ್ಮ ಮಂಗಳಗುಡ್ಡ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, 12ನೇ ಶತಮಾನದಲ್ಲಿ ವಚನಗಳ ಮೂಲಕ ಸಮಾನತೆ ಸಾರಿದ ಕ್ರಾಂತಿ ಪುರುಷ ಬಸವಣ್ಣನವರು. ಕಾಯಕವೇ ಕೈಲಾಸ ಎಂಬ ತತ್ವಬೋಧಿಸಿ, ಸರ್ವಜಾತಿ ಜನಾಂಗಗಳ ಸಮಾನತೆಯ ಕನಸು ಕಂಡು ಕಲ್ಯಾಣದಲ್ಲಿ ಕಟ್ಟಿದ ಅನುಭವ ಮಂಟಪ ಜಗತ್ತಿಗೆ ಸರ್ವಧರ್ಮ ಸಮಾನತೆ ಸಾರುತ್ತಿದೆ ಎಂದರು. ಪ್ರೊ.ಸಿದ್ದಲಿಂಗಪ್ಪ ಬರಗುಂಡಿ ಮಾತನಾಡಿ, ನಮ್ಮೆಲ್ಲರ ಮನೆಯೂ ಮಹಾಮನೆಯಾಗವ ಮೂಲಕ ಶರಣ ವಚನ,ತತ್ವಗಳು ಮನೆಮನೆಗೂ ಪಸರಿಸಬೇಕು ಎಂಬ ಉದ್ದೇಶದಿಂದ ಬಸವಕೇಂದ್ರದಿಂದ ಪಟ್ಟಣದಲ್ಲಿ ಪ್ರತಿವಾರವೂ ಒಬ್ಬೊಬ್ಬ ಶರಣರ ಮನೆಯಲ್ಲಿ ಮಹಾಮನೆಕಾರ್ಯಕ್ರಮ ಕಳೆದ 30 ವರ್ಷಗಳಿಂದ ನಡೆಸಲಾಗುತ್ತಿದೆ ಎಂದರು. ಕಾರ್ಯಕ್ರಮಕ್ಕೂ ಮೊದಲು ಮುರಗೇಶ ಶೇಖಾ, ಗೀತಾ ತಿಪ್ಪಾ ಅವರಿಂದ ಸಾಮೂಹಿಕ ಸಹಜ ಶಿವಯೋಗ ಕಾರ್ಯಕ್ರಮ ನಡೆಯಿತು. ಅಕ್ಕಮಹಾದೇವಿ ದೇವಸ್ಥಾನದ ಶರಣಮ್ಮತಾಯಿ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದರು. ಬಸವ ಕೇಂದ್ರದ ಗೌರವಾಧ್ಯಕ್ಷ ಎಚ್.ಎಸ್. ಹುಳಿಪಲ್ಲೇದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ರಾಚಣ್ಣ ಕೆರೂರ, ರವೀಂದ್ರ ಪಟ್ಟಣಶೆಟ್ಟಿ, ರವಿ ಅಂಗಡಿ, ಪ್ರೊ.ಎಸ್.ಐ.ರಾಜನಾಳ, ಪ್ರೊ.ಜಿ.ಜಿ.ಹೂಗಾರ, ಶಿವಾನಂದ ಸಿಂದಗಿ, ಬಸವರಾಜ ಬರಗುಂಡಿ, ಸುರೇಶ ರಾಜನಾಳ, ರಾಚಪ್ಪ ಯಂಡಿಗೇರಿ, ಶಿವಕುಮಾರ ಶಿಪ್ರಿ, ಮಹಾಲಿಂಗಪ್ಪ ಕರನಂದಿ, ಗಿರೀಶ ನೀಲಕಂಠಮಠ, ಬಸವರಾಜ ಗೆದ್ದಲಮರಿ, ಸಂಗಮೇಶ ಯಳಮೇಲಿ, ಮಹಾಂತೇಶ ಸಿಂದಗಿ, ಶ್ರೀದೇವಿ ಶೇಖಾ, ಜಯಶ್ರೀ ಬರಗುಂಡಿ, ಚನ್ನಮ್ಮ ಜವಳಿ, ಸುರೇಖಾ ಗೆದ್ದಲಮರಿ, ನಿರ್ಮಲಾ ಬರಗುಂಡಿ, ಕವಿತಾ ಬರಗುಂಡಿ, ವಿಶಾಲಾಕ್ಷಿ ಗಾಳಿ, ಗಾಯತ್ರಿ ಕಲ್ಯಾಣಿ, ಸುರೇಖಾ ಕಲ್ಯಾಣಿ, ಸೌಮ್ಯಾ ಯಳಮೇಲಿ, ಲಕ್ಷ್ಮೀ ತೊರಲಿ ಮತ್ತಿತರರು ಇದ್ದರು.1
- ಬೇಸಿಗೆ ಕಾಲದಲ್ಲಿ ಒಬ್ಬ ಮನುಷ್ಯನಿಗೆ ನೀರು ಎಷ್ಟು ಮುಖ್ಯವು ಪ್ರಾಣಿ ಪಕ್ಷಿಗಳಿಗೆ ಅಷ್ಠೆ ಮುಖ್ಯ ಇಂಥ ಕೆಲಸ ಬಾಲಕರು ಮಾಡುತಿರುವದು ಹೆಮ್ಮಯ ವಿಷಯ ಮಕ್ಕಳಗೆ ಒಳ್ಳೆ ಸಂಸ್ಕೃತಿ ಕಲಿಸಿ1
- Post by @april14news1
- ಇಳಕಲ್: ಸಾಂಸ್ಕೃತಿಕ ನಾಯಕ, ಜಗಜ್ಯೋತಿ ಬಸವೇಶ್ವರ ಜಯಂತ್ಯೋತ್ಸವ ಅಂಗವಾಗಿ ಕಂದಗಲ್ಲ ಗ್ರಾಮಸ್ಥರು ಎತ್ತುಗಳ ಮೆರವಣಿಗೆ ಮಾಡುವ ಮೂಲಕ ಬಸವ ಜಯಂತಿಯನ್ನು ಸೋಮವಾರದಂದು ಆಚರಿಸಿದರು. ಬಸವ ಜಯಂತಿ ಪ್ರಯುಕ್ತ ಎತ್ತುಗಳ ಮೈ ತೊಳೆದು, ಕೋಡುಗಳಿಗೆ ಕೊಂಡೆಗಳನ್ನು ಕಟ್ಟಿ, ಕೊರಳಿಗೆ ಗೆಜ್ಜೆಯನ್ನು ಕಟ್ಟಿ, ಹೆಗಲ ಮೇಲೆ ಶೃಂಗರಿಸಿರುವ ಶಾಲನ್ನು ಹಾಕಿ ಪೂಜೆಯನ್ನು ಸಲ್ಲಿಸಿ, ಗ್ರಾಮದ ಪ್ರಮುಖ ಬೀದಿಗಳಲ್ಲಿ ೫೦ ಕ್ಕೂ ಜೋಡಿ ಎತ್ತುಗಳ ಮೆರವಣಿಗೆಯೊಂದಿಗೆ ಬಸವೇಶ್ವರ ಭಾವಚಿತ್ರದ ಮೆರವಣಿಗೆಯನ್ನು ಮಾಡುತ್ತಾ ಕುಣಿದು ಕುಪ್ಪಳ್ಳಿಸುವ ಮೂಲಕ ಸಂಭ್ರಮಿಸಿದರು. ನಂತರ ಬಸವೇಶ್ವರ ವೃತ್ತದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಜಯಂತಿಯ ನೇತೃತ್ವವವನ್ನು ತಿಪ್ಪಣ್ಣ ಧರ್ಮಂತಿ, ಕಳಕಪ್ಪ ಕಡಿವಾಲ, ಶರಣಪ್ಪ ಧರ್ಮಂತಿ, ಅಮರಪ್ಪ ಗೆಜ್ಜಲಗಟ್ಟಿ, ಮದರಸಾಬ ಕಂಬಾರ,ಮAಜುನಾಥ ಗೊಂದಿ, ರಾಜಮಹಮ್ಮದ ನಧಾಫ್ ಸೇರಿದಂತೆ ಗ್ರಾಮಸ್ಥರು ಇದ್ದರು .1
- ಇಳಕಲ್ ತಾಲೂಕಿನ ವಜ್ಜಲ ಗ್ರಾಮದ ಮಹಿಳೆ ಶ್ಯಾವವ್ವ ಮಲ್ಲಪ್ಪ ವಾಲಿಕಾರ ವಯಸ್ಸು 48 ಇವರು ಸಿಡಿಲು ಬಡಿದು ಮೃತ ಪಟ್ಟಿದ್ದರು. ನಿನ್ನೆ ರಾತ್ರಿ ಸ್ಥಳಕ್ಕೆ ತಹಸಿಲ್ದಾರ ಅಮರೇಶ ಪಮ್ಮಾರ ಭೇಟಿ ನೀಡಿದರು1
- ಕುಷ್ಟಗಿ:- ಪಟ್ಟಣದಲ್ಲಿ 893ನೇ ಬಸವೇಶ್ವರ ಜಯಂತಿ ಕಾರ್ಯಕ್ರಮ ಅತ್ಯಂತ ಅದ್ಧೂರಿಯಾಗಿ ನೆಡೆಯಿತು. ಬೆಳಿಗ್ಗೆ ೧೦ ಗಂಟೆಗೆ ಬಸವೇಶ್ವರ ಸರ್ಕಲ್ ನಲ್ಲಿನ ಶ್ರೀ ಬಸವಣ್ಣನವರ ಪುತ್ತಳಿಗೆ ವಿಶೇಷವಾಗಿ ಪೂಜೆ ಸಲ್ಲಿಸುವ ಮೂಲಕ ಗಣ್ಯರಿಂದ ಮಾಲಾರ್ಪಣೆ ಮಾಡುವ ಮೂಲಕ ಮೆರವಣಿಗೆಗೆ ಅದ್ದೂರಿ ಚಾಲನೆ ನೀಡಲಾಯಿತು . ಬಸವೇಶ್ವರ ಸರ್ಕಲ್ ಮಾರ್ಗವಾಗಿ, ತೆರೆದ ವಾಹನದಲ್ಲಿ ಬಸವೇಶ್ವರ ಭಾವಚಿತ್ರದೊಂದಿಗೆ ಹಾಗೂ ಮಹಿಳೆಯರಿಂದ ವಚನ ಪುಸ್ತಕವತ್ತ ಬುತ್ತಿಯನ್ನು ತಲೆ ಮೇಲೆ ಇಟ್ಟುಕೊಂಡು ಪಟ್ಟಣದ ಪ್ರಮುಖ ಬೀದಿಗಳಲ್ಲಿ, ಮಾರುತಿ ವೃತ್ತ, ಕನಕಸರ ವೃತ್ತ, ಪುರಸಭೆ ಸೇರಿದಂತೆ ಪಟ್ಟಣದ ಅನೇಕ ವೃತ್ತಗಳಲ್ಲಿ ಸಂಚರಿಸಿ ಬಸವ ಭವನದ ವರಗೆ ಮೆರವಣಿಗೆಯನ್ನು ಕರೆತರಲಾಯಿತು. ನಂತರ ಬಸವ ಭವದಲ್ಲಿ ವೇದಿಕೆ ಕಾರ್ಯಕ್ರಮ ಏರ್ಪಡಿಸಿ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಶಾಸಕ ಹಾಗೂ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್ ಅವರು ಚಾಲನೆ ನೀಡಿದರು. ತದನಂತರ ಮಾತನಾಡಿ ಈ ಬಸವ ಭವನ ಸಮಗ್ರ ಅಭಿವೃದ್ಧಿಗೆ ಸುಮಾರು ೨೦ ಲಕ್ಷ ರೂ. ನೀಡುವುದಾಗಿ ಭರವಸೆ ನೀಡಿದರು. ಸಮಾನತೆಗಾಗಿ ಹೋರಾಡಿ ಮಹಾನ್ ದಾರ್ಶನಿಕರನ್ನು ಸದಾ ಸ್ಮರಿಸಬೇಕಿದೆ. ಕೇವಲ ಜಾತಿ ಆಧಾರಿತ ಮೇಲೆ ಜಯಂತಿ ನಡೆಯುತ್ತಿದ್ದು, ಮಹಾನ್ ವ್ಯಕ್ತಿಗಳ ಕಾರ್ಯಕ್ರಮ ಸೀಮಿತವಾಗಬಾರದು. ಹನ್ನೆರಡನೇ ಶತಮಾನದಲ್ಲಿ ಸಾಮಾಜಿಕ ಕ್ರಾಂತಿ ಮೂಲಕ ಸಮಾನತೆಗೆ ಸಾರಿದ ವಿಶ್ವಗುರು ಬಸವಣ್ಣನವರ ಆದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕಿದೆ.ಮಹಾನ್ ಮೇಧಾವಿಗಳಾದ ಸಿದ್ದೇಶ್ವರ ಸ್ವಾಮೀಜಿ, ಪುಟ್ಟರಾಜ ಗವಾಯಿಗಳ ಪುಣ್ಯ ಜನಭೂಮಿಯಲ್ಲಿ ಜನಸಿದ ನಾವೆಲ್ಲರೂ ಪುಣ್ಯ ಪಡೆದಿದ್ದೇವೆ. ಕಾಯಕವೇ ಕೈಲಾಸ* ಇವನಾರವ ಇವನಾರವ ಇವನಮ್ಮವ ಎಂದು ಸಾರಿದ ಬಸವಣ್ಣನವರ ಕೊಡುಗೆ ಹಿರಿದು. ಬಸವ ಶ್ರೇಯೋಭಿವೃದ್ಧಿಗೆ ಶ್ರಮಿಸುವ ಪ್ರಾಮಾಣಿಕ ಕಾರ್ಯ ಮಾಡಲಾಗವುದು. ಬಸವ ಸಮಿತಿಯವರು ಭವನದಲ್ಲಿ ಆರಂಭಿಸಿದ ಜ್ಞಾನಭಂಡಾರದ ಕೇಂದ್ರದಲ್ಲಿ ಸಮಯ ಕಳೆಯಲು ಮುಂದಾಗಬೇಕು ಎಂದರು. ನಿವೃತ್ತ ಶಿಕ್ಷಕ ಹಂಪಣ್ಣ ಗುಡದೂರು ಮಾತನಾಡಿ, ಇಡೀ ನಾಡಿಗೆ ವಚನ ಮೂಲಕ ಸಾರಿದ ಬಸವಣ್ಣನವರ ಕಾರ್ಯ ಎಲ್ಲರೂ ಮೆಚ್ಚಿಗೆಗೆ ಪಾತ್ರರಾಗಿದ್ದಾರೆ. ಸಮಾನತೆಗೆ ಅನುಭವ ಮಂಟಪ ಮಾದರಿ ಮಾಡಿದ ಬಸವಣ್ಣನವರ ಸಾರಿದ್ದಾರೆ. ವಚನ ಕ್ರಾಂತಿ ಮೂಲಕ ನಾಡಿಗೆ ಕೀರ್ತಿ ಸಾರಿದ ಫ.ಗು.ಹಳಕಟ್ಟಿ, ಅಲ್ಲಮಪ್ರಭು, ಹರ್ಡೇಕರ್ ಮಂಜಪ್ಪ, ಆಯ್ದಕ್ಕಿ ಲಕ್ಕಮ್ಮ, ಮುಕ್ತಾಯಕ್ಕ ಸೇರಿದಂತೆ ನೂರಾರು ಶರಣರಿಗೆ ಸಲ್ಲುತ್ತದೆ ಎಂದರು. ಸಿಪಿಐ ವಿಶ್ವನಾಥ್ ಹಿರೇಗೌಡ್ರ ಮಾತನಾಡಿದರು.ಲಾಲ್‌ಸಾಬ್ ಕಂದಗಲ್ ಉಪನ್ಯಾಸ ನೀಡಿದರು. ಮಾಜಿ ಶಾಸಕ ಕೆ.ಶರಣಪ್ಪ ವಕೀಲರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಹಸೀಲ್ದಾರ್ ಅಶೋಕ್ ಶಿಗ್ಗಾಂವಿ, ಬಿಇಒ ಉಮಾದೇವಿ ಬಸಾಪೂರ, ಸಿಡಿಪಿಒ ಯಲ್ಲಮ್ಮ ಹಂಡಿ, ತಾಪಂ ಇಒ ಪಂಪಾಪತಿ ಹಿರೇಮಠ, ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಟಿ.ಬಸವರಾಜ್, ಬಸವ ಸಮಿತಿ ಅಧ್ಯಕ್ಷ ಶಿವಸಂಗಪ್ಪ ಬಿಜಕಲ್, ಜಾಗತಿಕ ಲಿಂಗಾಯತ ಸಮಿತಿ ಸದಸ್ಯೆ ಗೌರಮ್ಮ ಕುಡತಿನಿ,ಮುಖಂಡ ವಸಂತಕುಮಾರ ಮೇಲಿನಮನಿ, ಸಮಿತಿ ಪದಾಧಿಕಾರಿಗಳಾದ ರವೀಂದ್ರಸ್ವಾಮಿ, ಶಂಕರಗೌಡ ಪಾಟೀಲ್, ಮಹೇಶ ಹಡಪದ,ಶಿವಾಜಿ ಹಡಪದ, ತಾಲೂಕು ವಕೀಲರ ಮಾಜಿ ಸಂಘದ ಅಧ್ಯಕ್ಷ ಸಂಗನಗೌಡ ಪಾಟೀಲ್ ಹಾಗೂ ಸಮಿತಿ ಪದಾಧಿಕಾರಿಗಳು, ಮುಖಂಡರು ಇನ್ನಿತರರು ಭಾಗವಹಿಸಿದ್ದರು. ಈ ವೇಳೆ ಬಸವ ಜಯಂತಿ ನಿಮಿತ್ತ ಹಮ್ಮಿಕೊಂಡ ವಚನ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಿ ಸನ್ಮಾನಿಸಲಾಯಿತು ----------------------------------4
- ಗುಳೇದಗುಡ್ಡ: ಬಿಸಿಲಿನ ತಾಪಮಾನದಿಂದ ಕಂಗೆಟ್ಟಿದ್ದ ಪಟ್ಟಣದ ಜನರಿಗೆ ಸೋಮವಾರ ಸಂಜೆ ಸುರಿದ ಆನೆಕಲ್ಲು ಮಳೆ ತಂಪೆರೆಯಿತು. ಚಿಕ್ಕ ಚಿಕ್ಕ ಮಕ್ಕಳು ಆನೆಕಲ್ಲು ಹಿಡಿದು ಸವಿದರು.1