logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಬಸವಣ್ಣನವರ ತತ್ವಗಳು ಸರ್ವಕಾಲಕ್ಕೂ ಪ್ರಸ್ತುತ : ಶಾಸಕ ಪ್ರಭು ಚವ್ಹಾಣ* ಔರಾದ್ ಅಸಮಾನತೆ, ಅಂಧಶ್ರದ್ಧೆ ಹಾಗೂ ಸಾಮಾಜಿಕ ಅನ್ಯಾಯಗಳನ್ನು ನಿರ್ಮೂಲನೆ ಮಾಡಲು ಜೀವನದುದ್ದಕ್ಕೂ ಶ್ರಮಿಸಿದ್ದ ವಿಶ್ವಗುರು ಬಸವಣ್ಣನವರು ನೀಡಿದ ಕಾಯಕ ಸಿದ್ದಾಂತ ಸೇರಿದಂತೆ ಎಲ್ಲ ತತ್ವಗಳು ಸರ್ವಕಾಲಕ್ಕೂ ಪ್ರಸ್ತುತ ಎಂದು ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ತಿಳಿಸಿದರು. ತಾಲ್ಲೂಕು ಆಡಳಿತದ ವತಿಯಿಂದ ಔರಾದ(ಬಿ) ತಹಸೀಲ್ ಕಛೇರಿ ಆವರಣದಲ್ಲಿ ಏಪ್ರಿಲ್ 20 ರಂದು ಆಯೋಜಿಸಲಾದ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವಣ್ಣನವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜಾತಿ-ಮತ ಭೇದಗಳನ್ನು ದೂರ ಮಾಡಿ ಸಮಾನತೆಯ ನೆಲೆಯಲ್ಲಿ ಬದುಕುವ ಸಂದೇಶವನ್ನು ಬಸವಣ್ಣನವರು ನೀಡಿದ್ದಾರೆ. ಅವರು ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ವಚನಗಳನ್ನು ರಚಿಸುವ ಮೂಲಕ ಸಾಮಾಜಿಕ ಸಮಸ್ಯೆಗಳ ಬಗ್ಗೆ ತಿಳುವಳಿಕೆ ಮೂಡಿಸುವ ಜೊತೆಗೆ ಸಾಮಾಜದಲ್ಲಿರುವ ಅಂಕುಡೊAಕುಗಳನ್ನು ಸರಿಪಡಿಸಲು ತನ್ನದೇ ಆದ ಕೊಡುಗೆ ನೀಡಿದ್ದರು. ಬಸವಣ್ಣನವರ ವಚನಗಳು ಮಾನವೀಯ ಮೌಲ್ಯಗಳನ್ನು ಬಲಪಡಿಸುವ ದಾರಿದೀಪವಾಗಿದ್ದು, ಇವುಗಳನ್ನು ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು. ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪವು ಜಗತ್ತಿನ ಮೊದಲ ಪಾರ್ಲಿಮೆಂಟ್ ಆಗಿದೆ. ಅಲ್ಲಿ ಎಲ್ಲ ವರ್ಗದ ಜನರಿಗೆ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸಲು ಅವಕಾಶ ನೀಡಲಾಗುತ್ತಿತ್ತು. ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ನೀಡಿದ ಮಹಾನ್ ಸಮಾಜ ಸುಧಾರಕರಾಗಿ ಬಸವಣ್ಣನವರು ಗುರುತಿಸಿಕೊಂಡಿದ್ದಾರೆ ಎಂದು ಹೇಳಿದರು. ಬಸವಣ್ಣನವರು ಜಗತ್ತಿಗೆ ಪಾರ್ಲಿಮೆಂಟ್ ಪರಿಕಲ್ಪನೆಯನ್ನು ನೀಡಿದ ಮಹಾನ್ ವ್ಯಕ್ತಿ. ಅವರ ಚಿಂತನೆಗಳನ್ನು ವಿಶ್ವದ ಮಟ್ಟದಲ್ಲಿ ಪಸರಿಸಬೇಕೆಂಬ ಉದ್ದೇಶದಿಂದ ತಾವು ಸಚಿವರಾಗಿದ್ದಾಗ ಬಸವಕಲ್ಯಾಣದಲ್ಲಿ ನೂತನ ಅನುಭವ ಮಂಟಪ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೆ. ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಈ ಯೋಜನೆಗೆ ಒಪ್ಪಿಗೆ ನೀಡಿದಷ್ಟೇ ಅಲ್ಲದೆ ಅವಶ್ಯಕ ಅನುದಾನ ನೀಡಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು ಎಂದು ತಿಳಿಸಿದರು. ಹೈದ್ರಾಬಾದ ಕರ್ನಾಟಕವೆಂದು ಕರೆಸಿಕೊಳ್ಳುತ್ತಿದ್ದ ಈ ಭಾಗವನ್ನು ಕಲ್ಯಾಣ ಕರ್ನಾಟಕವೆಂದು ನಾಮಕರಣ ಮಾಡಿರುವುದು, ಬೀದರ ಜಿಲ್ಲಾ ರಂಗಮAದಿರಕ್ಕೆ ಚನ್ನಬಸವ ಪಟ್ಟದೇವರು ರಂಗಮAದಿರವೆAದು ನಾಮಕರಣ ಮಾಡಿರುವುದು ನನ್ನ ಸೌಭಾಗ್ಯ. ಮುಂದಿನ ದಿನಗಳಲ್ಲಿ ಬಸವಣ್ಣನವರ ನಾಡು ಅಂತಾರಾಷ್ಟಿçÃಯ ಪ್ರವಾಸಿ ತಾಣವಾಗುವತ್ತ ಸಾಗುತ್ತಿರುವುದಕ್ಕೆ ಬಹಳಷ್ಟು ಸಂತೋಷವಾಗುತ್ತದೆ ಎಂದರು. ಹಂದಿಗುAದ ಸಿದ್ದೇಶ್ವರ ಮಠದ ಪೂಜ್ಯ ಶಿವಾನಂದ ಮಹಾಸ್ವಾಮಿಗಳು ವಿಶೇಷ ಉಪನ್ಯಾಸ ನೀಡಿ, ಬಸವಣ್ಣನವರನ್ನು ಪೂಜೆ ಮಾಡಿ ದೇವರನ್ನಾಗಿ ಮಾಡುವುದು ಬೇಕಾಗಿಲ್ಲ. ಅವರ ತತ್ವ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಅವರಿಗೆ ಗೌರವ ಸಲ್ಲಿಸಿದಂತಾಗುತ್ತದೆ. ಮತ್ತು ನಾಡಿನಲ್ಲಿ ಶಾಂತಿ, ಸಮೃದ್ಧಿ ಕಾಣಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ತಹಸೀಲ್ದಾರರಾದ ಮಹೇಶ ಪಾಟೀಲ, ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಕಿರಣ ಪಾಟೀಲ, ಆರಕ್ಷಕ ವೃತ್ತ ನಿರೀಕ್ಷಕರಾದ ರಘುವೀರಸಿಂಗ್ ಠಾಕೂರ, ಪುರಸಭೆ ಮುಖ್ಯಾಧಿಕಾರಿ ರವಿ ಸುಕುಮಾರ, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಾಶ ರಾಠೋಡ, ತಾಲ್ಲೂಕು ಆರೋಗ್ಯಾಧಿಕಾರಿ ಅನೀಲಕುಮಾರ, ಲೋಕೋಪಯೋಗಿ ಇಲಾಖೆ ಎಇಇ ಪ್ರೇಮಸಾಗರ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಉತ್ತಮ ಸಂಘನಾಯಕ ಸೇರಿದಂತೆ ಸಮಾಜದ ಮುಖಂಡರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ತಾಲ್ಲೂಕು ಪಂಚಾಯತ ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ ನಿರೂಪಿಸಿ ವಂದಿಸಿದರು. *ಶಾಸಕರ ಕಛೇರಿಯಲ್ಲಿ ಜಯಂತಿ:* ಶಾಸಕರ ಕಚೇರಿಯಲ್ಲಿ ನಡೆದ ಬಸವಣ್ಣನವರ ಜಯಂತಿಯಲ್ಲಿ ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ವಿಶ್ವಗುರು ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಗೌರವ ಸಮರ್ಪಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಮಾರುತಿ ಚವ್ಹಾಣ, ಶಿವಾಜಿರಾವ ಪಾಟೀಲ ಮುಂಗನಾಳ, ರಾಮಶೆಟ್ಟಿ ಪನ್ನಾಳೆ, ಶಿವರಾಜ ಅಲ್ಮಾಜೆ, ಪ್ರಕಾಶ ಅಲ್ಮಾಜೆ, ಖಂಡೋಬಾ ಕಂಗಟೆ, ನಾರಾಯಣ ಮೂಳೆ, ಬಸವರಾಜ ಹಳ್ಳೆ, ಸಿದ್ರಾಮಪ್ಪ ನಿಡೋದೆ, ಅಶೋಕ ಶಂಬೆಳ್ಳಿ, ಬಂಟಿ ರಾಂಪೂರೆ, ಬಾಲಾಜಿ ವಾಗ್ಮಾರೆ, ಮಹೇಶ ಭಾಲ್ಕೆ, ಸಂದೀಪ ಪಾಟೀಲ, ಶ್ರೀನಿವಾಸ ಖೂಬಾ, ರಮೇಶ ಗೌಡಾ, ಪ್ರಕಾಶ ಭಂಗಾರೆ, ಸಂಜು ಮಾನಕಾರೆ, ವೀರಶೆಟ್ಟಿ ಅಲ್ಮಾಜೆ, ಸಂತೋಷ ಜೊನ್ನಿಕೇರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

7 hrs ago
user_Sudhir Kumar Pandhare
Sudhir Kumar Pandhare
Aurad, Bidar•
7 hrs ago
f74d107d-3251-40e6-936a-adf61622472f

More news from ಕರ್ನಾಟಕ and nearby areas
  • ಹೆರಿಗೆಯ ನಂತರ ರಕ್ತಸ್ರಾವ ಆಂಬುಲೆನ್ಸ್ ಸಿಗದೆ ತೊಂದರೆ ದೇವಲ ಗಾಣಗಾಪೂರ ಸರ್ಕಾರಿ ಆಸ್ಪತ್ರೆಯಲ್ಲಿ ಅವ್ಯವಸ್ಥೆ ಆರೋಪ #afzalpur #devalganagapur #priyakkharge #mlaafzalpur #arunkumarmypatil #dho #thoafzalpur #health department
    1
    ಹೆರಿಗೆಯ ನಂತರ ರಕ್ತಸ್ರಾವ ಆಂಬುಲೆನ್ಸ್ ಸಿಗದೆ ತೊಂದರೆ ದೇವಲ ಗಾಣಗಾಪೂರ ಸರ್ಕಾರಿ ಆಸ್ಪತ್ರೆಯಲ್ಲಿ ಅವ್ಯವಸ್ಥೆ ಆರೋಪ #afzalpur #devalganagapur #priyakkharge #mlaafzalpur #arunkumarmypatil #dho #thoafzalpur #health department
    user_Nava Karnataka TV News Channel Mahesh Bhovi
    Nava Karnataka TV News Channel Mahesh Bhovi
    ಚಿತ್ತಾಪುರ, ಕಲಬುರಗಿ, ಕರ್ನಾಟಕ•
    2 hrs ago
  • Post by Jevargi suddi no1
    1
    Post by Jevargi suddi no1
    user_Jevargi suddi no1
    Jevargi suddi no1
    Newspaper publisher ಜೇವರ್ಗಿ, ಕಲಬುರಗಿ, ಕರ್ನಾಟಕ•
    11 hrs ago
  • ಎಲ್ಲಿ ಧರ್ಮವಿರುತ್ತೋ ಅಲ್ಲಿ ಜಯವಿರುತ್ತೆ." ಧರ್ಮವನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ: ಶ್ರೀಶೈಲ ಜಗದ್ಗುರುಗಳು.!
    1
    ಎಲ್ಲಿ ಧರ್ಮವಿರುತ್ತೋ ಅಲ್ಲಿ ಜಯವಿರುತ್ತೆ." ಧರ್ಮವನ್ನು 
ಜೀವನದಲ್ಲಿ ಅಳವಡಿಸಿಕೊಳ್ಳಿ: ಶ್ರೀಶೈಲ ಜಗದ್ಗುರುಗಳು.!
    user_Kisan news kannada
    Kisan news kannada
    Local News Reporter ಅಫ್ಜಲಪುರ, ಕಲಬುರಗಿ, ಕರ್ನಾಟಕ•
    47 min ago
  • YADGIR NEWS' ಯಾದಗಿರಿ || ನಗರದಲ್ಲಿ ಬಸವ ಜಯಂತಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ
    1
    YADGIR NEWS' ಯಾದಗಿರಿ || ನಗರದಲ್ಲಿ ಬಸವ ಜಯಂತಿ  ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ
    user_YADGIR NEWS
    YADGIR NEWS
    Video Creator ಯಾದಗಿರಿ, ಯಾದಗಿರಿ, ಕರ್ನಾಟಕ•
    1 hr ago
  • ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಇನ್ಸ್‌ಪೆಕ್ಟರ್ ಕಣ್ಣೀರು
    1
    ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಇನ್ಸ್‌ಪೆಕ್ಟರ್ ಕಣ್ಣೀರು
    user_ಪುಲಿಯನ್ ಸಾಮ್ರಾಜ್ಯ ಪತ್ರಿಕೆ
    ಪುಲಿಯನ್ ಸಾಮ್ರಾಜ್ಯ ಪತ್ರಿಕೆ
    Newspaper publisher ಅಳಮೇಲ, ವಿಜಯಪುರ, ಕರ್ನಾಟಕ•
    1 hr ago
  • Post by ABU NEWS CHANNEL
    1
    Post by ABU NEWS CHANNEL
    user_ABU NEWS CHANNEL
    ABU NEWS CHANNEL
    Pharmacist Sindgi, Vijayapura•
    8 hrs ago
  • ರಾಯಚೂರು ಮಹಾನಗರ ಪಾಲಿಕೆ, ಜಿಲ್ಲಾ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ ಹಾಗೂ ಐಎಮ್ಎ ರಾಯಚೂರು ವತಿಯಿಂದ ನಗರದ ಹಳೆ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಏಪ್ರಿಲ್ 20ರ ಸೋಮವಾರ ದಂದು ರಾಷ್ಟ್ರೀಯ ಜನಗಣತಿ ಕಾರ್ಯಕ್ಕೆ ನಿಯೋಜನೆಗೊಂಡ ಸಿಬ್ಬಂದಿಗಳಿಗೆ ಸೋಮವಾರ 11 ಗಂಟೆಗೆ ಓ.ಆರ್.ಎಸ್. ವಿತರಣೆ ಮಾಡಲಾಯಿತು. ರಾಯಚೂರು ನಗರದಲ್ಲಿ ಇದ್ದರೂ ಬಿಸಿಲಿನಲ್ಲಿ ಸಮೀಕ್ಷೆ ಕಾರ್ಯ ಮಾಡುತ್ತಿರುವ ಎಲ್ಲರಿಗೂ ಕೂಡ ಅನುಕೂಲವಾಗುವ ನಿಟ್ಟಿನಲ್ಲಿ ಈ ಒಂದು 1500 ಓ ಆರ್ ಎಸ್ ಪೌಚ್ ಗಳನ್ನ ನೀಡಲಾಯಿತು.
    1
    ರಾಯಚೂರು ಮಹಾನಗರ ಪಾಲಿಕೆ, ಜಿಲ್ಲಾ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ ಹಾಗೂ ಐಎಮ್ಎ ರಾಯಚೂರು ವತಿಯಿಂದ ನಗರದ ಹಳೆ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಏಪ್ರಿಲ್ 20ರ ಸೋಮವಾರ ದಂದು ರಾಷ್ಟ್ರೀಯ ಜನಗಣತಿ ಕಾರ್ಯಕ್ಕೆ ನಿಯೋಜನೆಗೊಂಡ ಸಿಬ್ಬಂದಿಗಳಿಗೆ ಸೋಮವಾರ 11 ಗಂಟೆಗೆ ಓ.ಆರ್.ಎಸ್. ವಿತರಣೆ ಮಾಡಲಾಯಿತು. ರಾಯಚೂರು ನಗರದಲ್ಲಿ ಇದ್ದರೂ ಬಿಸಿಲಿನಲ್ಲಿ ಸಮೀಕ್ಷೆ ಕಾರ್ಯ ಮಾಡುತ್ತಿರುವ ಎಲ್ಲರಿಗೂ ಕೂಡ ಅನುಕೂಲವಾಗುವ ನಿಟ್ಟಿನಲ್ಲಿ ಈ ಒಂದು 1500 ಓ ಆರ್ ಎಸ್ ಪೌಚ್ ಗಳನ್ನ ನೀಡಲಾಯಿತು.
    user_K2 kannada News
    K2 kannada News
    ಪತ್ರಕರ್ತ ರಾಯಚೂರು, ರಾಯಚೂರು, ಕರ್ನಾಟಕ•
    2 hrs ago
  • 24 ಗಂಟೆಯಲ್ಲಿ ಹ್ಯಾಂಡ್ ಪಂಪ್ ನಿರ್ಮಾಣ ಮಾಡಿದ ಗ್ರಾಮ ಪಂಚಾಯತಿಯ ಪಿಡಿಯೋ ಅನುಸೂಯ ಆಸ್ಟಗಿ. #NewsUpdate #kalaburagi #afzalpur #video #karnataka #priyanka #ಗ್ರಾಮಪಂಚಾತಿ. Arunkumar M Y Patil ವಿಠ್ಠಲ ಹೇರೂರ ಯುವ ಬ್ರಿಗೇಡ್ Shivakumar Natikar Nitin Guttedar Followers Hosur ನವ ಕರ್ನಾಟಕ ನ್ಯೂಸ್ /Nava Karnataka News Priyank Kharge NewsFirst Kannada.
    1
    24 ಗಂಟೆಯಲ್ಲಿ ಹ್ಯಾಂಡ್ ಪಂಪ್ ನಿರ್ಮಾಣ ಮಾಡಿದ
ಗ್ರಾಮ ಪಂಚಾಯತಿಯ ಪಿಡಿಯೋ  ಅನುಸೂಯ ಆಸ್ಟಗಿ. #NewsUpdate #kalaburagi #afzalpur #video #karnataka #priyanka #ಗ್ರಾಮಪಂಚಾತಿ. Arunkumar M Y Patil ವಿಠ್ಠಲ ಹೇರೂರ ಯುವ ಬ್ರಿಗೇಡ್ Shivakumar Natikar Nitin Guttedar Followers Hosur ನವ ಕರ್ನಾಟಕ ನ್ಯೂಸ್ /Nava Karnataka News Priyank Kharge NewsFirst Kannada.
    user_Nava Karnataka TV News Channel Mahesh Bhovi
    Nava Karnataka TV News Channel Mahesh Bhovi
    ಚಿತ್ತಾಪುರ, ಕಲಬುರಗಿ, ಕರ್ನಾಟಕ•
    4 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.