logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಶಿರಾಳಕೊಪ್ಪ: ಜಮಾತೆ ಇಸ್ಲಾಮಿ ಹಿಂದ್ ವತಿಯಿಂದ ಆಯೋಜಿಸಿದ್ದ ‘ಕ್ರಾಂತಿಯ ಜ್ಯೋತಿ ಪ್ರವಾದಿ ಮಹಮ್ಮದ್(ಸ)’ ಸೀರತ್ ಪ್ರವಚನ ಸಾಹಿತಿ ಯೋಗೇಶ್ ಮಾಸ್ಟರ್ ಶಿರಾಳಕೊಪ್ಪ: ಅಕ್ಕಮಹಾದೇವಿ, ಅಲ್ಲಮಪ್ರಭು ಹಾಗೂ ಪ್ರವಾದಿ ಮಹಮ್ಮದ್(ಸ) ಒಂದೇ ಧರ್ಮದವರಲ್ಲ, ಒಂದೇ ಭಾಷೆಯವರಲ್ಲ, ಒಂದೇ ಸೀಮೆಯವರಲ್ಲ. ಆದರೆ ಅವರ ಮನದ ತಲ್ಲಣ ಒಂದೇ ಆಗಿದೆ. ಪ್ರತಿಯೊಂದು ಜೀವಿಗೂ ಬದುಕುವ ಹಕ್ಕಿದೆ. ಪ್ರವಾದಿ ಮಹಮ್ಮದ್ ಅವರು ಕೇವಲ ಬೋಧನೆ ಮಾಡಲಿಲ್ಲ; ಬದುಕಿ ತೋರಿಸಿದರು ಎಂದು ಸಾಹಿತಿ ಯೋಗೇಶ್ ಮಾಸ್ಟರ್ ಹೇಳಿದರು. ಜಮಾತೆ ಇಸ್ಲಾಮಿ ಹಿಂದ್ ವತಿಯಿಂದ ಆಯೋಜಿಸಿದ್ದ ‘ಕ್ರಾಂತಿಯ ಜ್ಯೋತಿ ಪ್ರವಾದಿ ಮಹಮ್ಮದ್(ಸ)’ ಸೀರತ್ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮನುಷ್ಯರನ್ನು ಕೈಯಿಂದಾಗಲಿ, ಮಾತಿನಿಂದಾಗಲಿ ನೋಯಿಸಬಾರದು. ಪ್ರಚೋದನಕಾರಿ ಮಾತುಗಳನ್ನು ಆಡದೆ ಮಾನವೀಯತೆ ಮತ್ತು ಸೌಹಾರ್ದತೆಯನ್ನು ಬೆಳೆಸಬೇಕು ಎಂದರು. ‘ನಿರಾಕಾರ – ಸೌಂದರ್ಯದ ಅರಿವಿನ ಕಡೆಗೆ’ ಎಂಬ ವಿಚಾರದ ಕುರಿತು ಮಾತನಾಡಿದ ಅವರು, ಜನರನ್ನು ಬಳಸಿಕೊಳ್ಳಲಾಗುತ್ತದೆ, ಆದರೆ ವಸ್ತುಗಳನ್ನು ಪ್ರೀತಿಸಲಾಗುತ್ತದೆ. ಶಿಕ್ಷಣ ಪಡೆದ ವ್ಯಕ್ತಿ ಭ್ರಷ್ಟನಾಗಬಹುದು; ಆದರೆ ಸಂಸ್ಕಾರ ಪಡೆದ ವ್ಯಕ್ತಿ ಭ್ರಷ್ಟನಾಗಲಾರ ಎಂದರು. ಪ್ರವಚನಕಾರ ಲಾಲ್ ಹುಸೇನ್ ಕಂದಗಲ್ ಮಾತನಾಡಿ, ಹಿಂದೂ ಸಮುದಾಯದ ಯೋಗೇಶ್ ಮಾಸ್ಟರ್ ಅವರು ‘ನನ್ನ ಅರಿವಿನ ಮಹಮ್ಮದ್’ ಎಂಬ ಕೃತಿ ಬರೆದಿರುವಂತೆ, ಮುಸ್ಲಿಂ ಲೇಖಕರು ಕೂಡ ಬಸವಣ್ಣ, ಸ್ವಾಮಿ ವಿವೇಕಾನಂದ ಹಾಗೂ ಅಕ್ಕಮಹಾದೇವಿ ಅವರ ಕುರಿತು ‘ನನ್ನ ಅರಿವಿನ ಬಸವಣ್ಣ’, ‘ನನ್ನ ಅರಿವಿನ ಸ್ವಾಮಿ ವಿವೇಕಾನಂದ’, ‘ನನ್ನ ಅರಿವಿನ ಅಕ್ಕಮಹಾದೇವಿ’ ಎಂಬ ರೀತಿಯ ಕೃತಿಗಳನ್ನು ಬರೆಯಬೇಕು ಎಂದು ಹೇಳಿದರು. ಕೋಮು ಸೌಹಾರ್ದತೆ, ಮಾನವರ ಸೇವೆ ಹಾಗೂ ಪರಸ್ಪರ ಧರ್ಮ ಗೌರವದ ಮೂಲಕ ಸಮಾಜದಲ್ಲಿ ಸಾಮರಸ್ಯ ಬೆಳೆಸಬೇಕು ಎಂಬ ಸಂದೇಶವನ್ನು ನೀಡಲಾಯಿತು. ಅಕ್ರಮುಲ್ಲಾ ಷರೀಫ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಜಮಾತೆ ಇಸ್ಲಾಮಿಕ್ ಹಿಂದ್ ನ ಪ್ರಮುಖರಾದ ಚಮನ್ ಮಿಯಾಸಾಬ್, ಹುಸೇನ್, ಆಸಿಫ್, ಪುಟ್ಟರಾಜ ಸ್ವಾಮೀಜಿ ತಳೆಬೈಲು, ಜಿಲ್ಲಾ ರೈತ ಸಂಘದ ಗೌರವಾಧ್ಯಕ್ಷ ಪಾರ್ಟಿ ಈರಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.

13 hrs ago
user_Press Narashimha swamy SN
Press Narashimha swamy SN
Newspaper publisher ಶಿಕಾರಿಪುರ, ಶಿವಮೊಗ್ಗ, ಕರ್ನಾಟಕ•
13 hrs ago
f7321850-91ad-47e8-893d-50cd80ac999b

ಶಿರಾಳಕೊಪ್ಪ: ಜಮಾತೆ ಇಸ್ಲಾಮಿ ಹಿಂದ್ ವತಿಯಿಂದ ಆಯೋಜಿಸಿದ್ದ ‘ಕ್ರಾಂತಿಯ ಜ್ಯೋತಿ ಪ್ರವಾದಿ ಮಹಮ್ಮದ್(ಸ)’ ಸೀರತ್ ಪ್ರವಚನ ಸಾಹಿತಿ ಯೋಗೇಶ್ ಮಾಸ್ಟರ್ ಶಿರಾಳಕೊಪ್ಪ: ಅಕ್ಕಮಹಾದೇವಿ, ಅಲ್ಲಮಪ್ರಭು ಹಾಗೂ ಪ್ರವಾದಿ ಮಹಮ್ಮದ್(ಸ) ಒಂದೇ ಧರ್ಮದವರಲ್ಲ, ಒಂದೇ ಭಾಷೆಯವರಲ್ಲ, ಒಂದೇ ಸೀಮೆಯವರಲ್ಲ. ಆದರೆ ಅವರ ಮನದ ತಲ್ಲಣ ಒಂದೇ ಆಗಿದೆ. ಪ್ರತಿಯೊಂದು ಜೀವಿಗೂ ಬದುಕುವ ಹಕ್ಕಿದೆ. ಪ್ರವಾದಿ ಮಹಮ್ಮದ್ ಅವರು ಕೇವಲ ಬೋಧನೆ ಮಾಡಲಿಲ್ಲ; ಬದುಕಿ ತೋರಿಸಿದರು ಎಂದು ಸಾಹಿತಿ ಯೋಗೇಶ್ ಮಾಸ್ಟರ್ ಹೇಳಿದರು. ಜಮಾತೆ ಇಸ್ಲಾಮಿ ಹಿಂದ್ ವತಿಯಿಂದ ಆಯೋಜಿಸಿದ್ದ ‘ಕ್ರಾಂತಿಯ ಜ್ಯೋತಿ ಪ್ರವಾದಿ ಮಹಮ್ಮದ್(ಸ)’ ಸೀರತ್ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮನುಷ್ಯರನ್ನು ಕೈಯಿಂದಾಗಲಿ, ಮಾತಿನಿಂದಾಗಲಿ ನೋಯಿಸಬಾರದು. ಪ್ರಚೋದನಕಾರಿ ಮಾತುಗಳನ್ನು ಆಡದೆ ಮಾನವೀಯತೆ ಮತ್ತು ಸೌಹಾರ್ದತೆಯನ್ನು ಬೆಳೆಸಬೇಕು ಎಂದರು. ‘ನಿರಾಕಾರ – ಸೌಂದರ್ಯದ ಅರಿವಿನ ಕಡೆಗೆ’ ಎಂಬ ವಿಚಾರದ ಕುರಿತು ಮಾತನಾಡಿದ ಅವರು, ಜನರನ್ನು ಬಳಸಿಕೊಳ್ಳಲಾಗುತ್ತದೆ, ಆದರೆ ವಸ್ತುಗಳನ್ನು ಪ್ರೀತಿಸಲಾಗುತ್ತದೆ. ಶಿಕ್ಷಣ ಪಡೆದ ವ್ಯಕ್ತಿ ಭ್ರಷ್ಟನಾಗಬಹುದು; ಆದರೆ ಸಂಸ್ಕಾರ ಪಡೆದ ವ್ಯಕ್ತಿ ಭ್ರಷ್ಟನಾಗಲಾರ ಎಂದರು. ಪ್ರವಚನಕಾರ ಲಾಲ್ ಹುಸೇನ್ ಕಂದಗಲ್ ಮಾತನಾಡಿ, ಹಿಂದೂ ಸಮುದಾಯದ ಯೋಗೇಶ್ ಮಾಸ್ಟರ್ ಅವರು ‘ನನ್ನ ಅರಿವಿನ ಮಹಮ್ಮದ್’ ಎಂಬ ಕೃತಿ ಬರೆದಿರುವಂತೆ, ಮುಸ್ಲಿಂ ಲೇಖಕರು ಕೂಡ ಬಸವಣ್ಣ, ಸ್ವಾಮಿ ವಿವೇಕಾನಂದ ಹಾಗೂ ಅಕ್ಕಮಹಾದೇವಿ ಅವರ ಕುರಿತು ‘ನನ್ನ ಅರಿವಿನ ಬಸವಣ್ಣ’, ‘ನನ್ನ ಅರಿವಿನ ಸ್ವಾಮಿ ವಿವೇಕಾನಂದ’, ‘ನನ್ನ ಅರಿವಿನ ಅಕ್ಕಮಹಾದೇವಿ’ ಎಂಬ ರೀತಿಯ ಕೃತಿಗಳನ್ನು ಬರೆಯಬೇಕು ಎಂದು ಹೇಳಿದರು. ಕೋಮು ಸೌಹಾರ್ದತೆ, ಮಾನವರ ಸೇವೆ ಹಾಗೂ ಪರಸ್ಪರ ಧರ್ಮ ಗೌರವದ ಮೂಲಕ ಸಮಾಜದಲ್ಲಿ ಸಾಮರಸ್ಯ ಬೆಳೆಸಬೇಕು ಎಂಬ ಸಂದೇಶವನ್ನು ನೀಡಲಾಯಿತು. ಅಕ್ರಮುಲ್ಲಾ ಷರೀಫ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಜಮಾತೆ ಇಸ್ಲಾಮಿಕ್ ಹಿಂದ್ ನ ಪ್ರಮುಖರಾದ ಚಮನ್ ಮಿಯಾಸಾಬ್, ಹುಸೇನ್, ಆಸಿಫ್, ಪುಟ್ಟರಾಜ ಸ್ವಾಮೀಜಿ ತಳೆಬೈಲು, ಜಿಲ್ಲಾ ರೈತ ಸಂಘದ ಗೌರವಾಧ್ಯಕ್ಷ ಪಾರ್ಟಿ ಈರಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.

More news from ಕರ್ನಾಟಕ and nearby areas
  • ಶಿವಮೊಗ್ಗದಲ್ಲಿ ಸಂಭ್ರಮದ ಗಣೇಶೋತ್ಸವ; 30ನೇ ವರ್ಷದ ಗಣೇಶ ಪ್ರತಿಷ್ಠಾಪನೆ ಮತ್ತೂರು ರಸ್ತೆಯಲ್ಲಿ ಭಕ್ತಿ ಸಂಭ್ರಮ; 30ನೇ ವರ್ಷದ ಗಣೇಶ ಪ್ರತಿಷ್ಠಾಪನೆ
    1
    ಶಿವಮೊಗ್ಗದಲ್ಲಿ ಸಂಭ್ರಮದ ಗಣೇಶೋತ್ಸವ; 30ನೇ ವರ್ಷದ ಗಣೇಶ ಪ್ರತಿಷ್ಠಾಪನೆ
ಮತ್ತೂರು ರಸ್ತೆಯಲ್ಲಿ ಭಕ್ತಿ ಸಂಭ್ರಮ; 30ನೇ ವರ್ಷದ ಗಣೇಶ ಪ್ರತಿಷ್ಠಾಪನೆ
    user_ಸಿಹಿಮೋಗ್ಗೆ ಸುದ್ಧಿ ಕನ್ನಡ
    ಸಿಹಿಮೋಗ್ಗೆ ಸುದ್ಧಿ ಕನ್ನಡ
    Video Creator ಶಿವಮೊಗ್ಗ, ಶಿವಮೊಗ್ಗ, ಕರ್ನಾಟಕ•
    1 hr ago
  • ಶಿವಮೊಗ್ಗ-ಭದ್ರಾ ನದಿಯ ನೀರು ಎಡ, ಬಲ ಹಾಗೂ ಗೋಂದಿ ನಾಲೆ ಹರಿಸಲು ಬದ್ದ ಶಿವಮೊಗ್ಗ: ಭದ್ರಾ ಎಡನಾಲೆ ಮತ್ತು ಬಲನಾಲೆ ಮತ್ತು ಗೋಂದಿ ನಾಲೆ ನೀರನ್ನು ಆದಷ್ಟು ಬೇಗನೆ ಡ್ಯಾಮ್ ನಿಂದ ನೀರನ್ನು ಬಿಡಲಾಗುವುದು ಈ ವಿಚಾರವಾಗಿ ಮುಖ್ಯಮಂತ್ರಿಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಮಾತುಕತೆ ನಡೆಸಿದ್ದು ರೈತರು ಆತಂಕ ಪಡುವುದು ಬೇಡ ಎಂದು ಭದ್ರಾವತಿ ಶಾಸಕ ಬಿಕೆ. ಸಂಗಮೇಶ್ವರ್ ತಿಳಿಸಿದ್ದಾರೆ. ಅವರಿಂದು ತಮ್ಮ ಗೃಹಕಚೇರಿಯಲ್ಲಿ ನೆರೆದಿದ್ದ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಆಗಮಿಸಿದ್ದ ರೈತರ ಸಭೆಯಲ್ಲಿ ಮಾತನಾಡಿದರು. ಕುಡಿಯುವ ಹಾಗೂ ದನಕರುಗಳಿಗೆ ನೀರು ಅವಶ್ಯಕತೆ ಇದೆ ಎಂಬ ವಿಚಾರ ನನಗೂ ತಿಳಿದಿದೆ. ಆದ್ದರಿಂದ ರೈತರು ಯಾವುದೇ ಆತಂಕಕ್ಕೆ ಒಳಗಾಗುವುದು ಬೇಡವೆಂದು ತಿಳಿಯಪಡಿಸುತ್ತೇನೆ. ಈ ವಿಚಾರವಾಗಿ ಆದಷ್ಟು ಬೇಗನೆ ನಿರ್ಧಾರ ತೆಗೆದುಕೊಳ್ಳುತ್ತೇವೆಂದು ಮುಖ್ಯಮಂತ್ರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿರುತ್ತಾರೆಂದರು.
    1
    ಶಿವಮೊಗ್ಗ-ಭದ್ರಾ ನದಿಯ ನೀರು ಎಡ, ಬಲ ಹಾಗೂ ಗೋಂದಿ ನಾಲೆ ಹರಿಸಲು ಬದ್ದ 
ಶಿವಮೊಗ್ಗ: ಭದ್ರಾ ಎಡನಾಲೆ ಮತ್ತು ಬಲನಾಲೆ ಮತ್ತು ಗೋಂದಿ ನಾಲೆ ನೀರನ್ನು ಆದಷ್ಟು ಬೇಗನೆ ಡ್ಯಾಮ್ ನಿಂದ ನೀರನ್ನು ಬಿಡಲಾಗುವುದು ಈ ವಿಚಾರವಾಗಿ  ಮುಖ್ಯಮಂತ್ರಿಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಮಾತುಕತೆ ನಡೆಸಿದ್ದು ರೈತರು ಆತಂಕ ಪಡುವುದು ಬೇಡ  
ಎಂದು ಭದ್ರಾವತಿ ಶಾಸಕ ಬಿಕೆ. ಸಂಗಮೇಶ್ವರ್ ತಿಳಿಸಿದ್ದಾರೆ.
ಅವರಿಂದು ತಮ್ಮ ಗೃಹಕಚೇರಿಯಲ್ಲಿ ನೆರೆದಿದ್ದ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಆಗಮಿಸಿದ್ದ ರೈತರ ಸಭೆಯಲ್ಲಿ ಮಾತನಾಡಿದರು.
ಕುಡಿಯುವ ಹಾಗೂ ದನಕರುಗಳಿಗೆ ನೀರು ಅವಶ್ಯಕತೆ ಇದೆ ಎಂಬ ವಿಚಾರ ನನಗೂ ತಿಳಿದಿದೆ. ಆದ್ದರಿಂದ ರೈತರು ಯಾವುದೇ ಆತಂಕಕ್ಕೆ  ಒಳಗಾಗುವುದು ಬೇಡವೆಂದು ತಿಳಿಯಪಡಿಸುತ್ತೇನೆ. ಈ ವಿಚಾರವಾಗಿ ಆದಷ್ಟು ಬೇಗನೆ ನಿರ್ಧಾರ ತೆಗೆದುಕೊಳ್ಳುತ್ತೇವೆಂದು ಮುಖ್ಯಮಂತ್ರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿರುತ್ತಾರೆಂದರು.
    user_ಆರ್.ವಿ.ಕೃಷ್ಣ
    ಆರ್.ವಿ.ಕೃಷ್ಣ
    Local News Reporter ಶಿವಮೊಗ್ಗ, ಶಿವಮೊಗ್ಗ, ಕರ್ನಾಟಕ•
    10 hrs ago
  • ಹಾವೇರಿ : ಅಂಬೇಡ್ಕರ್ ಭವನದಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ-ಯುವಸಂಸತ್ ಕಾಯ೯ಕ್ರಮವನ್ನ ಜಿಲ್ಲಾ ಉಸ್ತುವಾರಿ ಹಾಗೂ ಜವಳಿ ಮತ್ತು ಸಕ್ಕರೆ ಸಚಿವರಾದ ರುದ್ರಪ್ಪ ಎಂ ಲಮಾಣಿ ಉದ್ಘಾಟಿಸಿದರು ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು, ಇಲಾಖೆಗಳ ಹಿರಿಯ ಅಧಿಕಾರಿಗಳು, ವಿದ್ಯಾರ್ಥಿಗಳು ದಲಿತ ಸಂಘಟನೆಗಳ ನಾಯಕರು ಹಲವಾರು ಗಣ್ಯರು ಉಪಸ್ಥಿತರಿದ್ದರು
    1
    ಹಾವೇರಿ : ಅಂಬೇಡ್ಕರ್ ಭವನದಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ-ಯುವಸಂಸತ್ ಕಾಯ೯ಕ್ರಮವನ್ನ ಜಿಲ್ಲಾ ಉಸ್ತುವಾರಿ ಹಾಗೂ ಜವಳಿ ಮತ್ತು ಸಕ್ಕರೆ ಸಚಿವರಾದ ರುದ್ರಪ್ಪ ಎಂ ಲಮಾಣಿ ಉದ್ಘಾಟಿಸಿದರು ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು, ಇಲಾಖೆಗಳ ಹಿರಿಯ ಅಧಿಕಾರಿಗಳು, ವಿದ್ಯಾರ್ಥಿಗಳು ದಲಿತ ಸಂಘಟನೆಗಳ ನಾಯಕರು ಹಲವಾರು ಗಣ್ಯರು ಉಪಸ್ಥಿತರಿದ್ದರು
    user_ಸುನೀಲ್ ಲ್ ಬೆಟಗೇರಿ
    ಸುನೀಲ್ ಲ್ ಬೆಟಗೇರಿ
    Spa ಹಾವೇರಿ, ಹಾವೇರಿ, ಕರ್ನಾಟಕ•
    8 hrs ago
  • ಭದ್ರಾ ನಾಲೆಗಳಲ್ಲಿ ತಕ್ಷಣ ನೀರು ಹರಿಸಲು ಆಗ್ರಹಿಸಿ ರೈತರಿಂದ ಶಾಸಕರ ಗೃಹ ಕಛೇರಿಯಲ್ಲಿ ಪ್ರತಿಭಟನೆ ಭದ್ರಾವತಿ ತಾಲೂಕಿನ ರೈತರ ಬೆಳೆಗಳಿಗೆ ತಕ್ಷಣ ನೀರು ಹರಿಸಬೇಕೆಂದು ರೈತರು ಮಂಗಳವಾರ ಶಾಸಕರ ಗೃಹ ಕಛೇರಿಯಲ್ಲಿ ಪ್ರತಿಭಟನೆ ನಡೆಸುವ ಮೂಲಕ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಆಗ್ರಹಿಸಿದರು.  ಭದ್ರಾವತಿ: ತಾಲೂಕಿನ ರೈತರ ಬೆಳೆಗಳಿಗೆ ತಕ್ಷಣ ನೀರು ಹರಿಸಬೇಕೆಂದು ರೈತರು ಮಂಗಳವಾರ ಶಾಸಕರ ಗೃಹ ಕಛೇರಿಯಲ್ಲಿ ಪ್ರತಿಭಟನೆ ನಡೆಸುವ ಮೂಲಕ ಶಾಸಕರಿಗೆ ಆಗ್ರಹಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡ ಕಲ್ಲಹಳ್ಳಿ ಶೇಖರ್ ಭದ್ರಾ ಮೇಲ್ದಂಡೆ ಯೋಜನೆಗೆ ಪ್ರಾಯೋಗಿಕವಾಗಿ ನೀರು ಹರಿಸುವುದನ್ನು ಸರ್ಕಾರ ತಕ್ಷಣ ನಿಲ್ಲಿಸಬೇಕು. ಪ್ರಸ್ತುತ ಮಳೆ ಕೊರೆತೆಯಿಂದಾಗಿ ಜಲಾಶಯದಲ್ಲಿ ನೀರಿನ ಸಂಗ್ರಹ ಕಡಿಮೆ ಇದ್ದು, ಅಲ್ಲದೆ ಇದೀಗ ತಾಲೂಕಿನ ರೈತರ ಬೆಳೆಗಳಿಗೆ ನೀರಿನ ಅಗತ್ಯವಿದೆ. ತಕ್ಷಣ ಕಾಲುವೆಗಳಲ್ಲಿ ನೀರು ಹರಿಸುವ ಮೂಲಕ ರೈತರ ಹಿತಕಾಪಾಡುವಂತೆ ಆಗ್ರಹಿಸಿದರು. ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಮಾತನಾಡಿ, ತಾಲೂಕಿನಲ್ಲಿ ಈ ಬಾರಿ ಮಳೆ ಕೊರತೆಯಾಗಿದೆ. ಇದರಿಂದಾಗಿ ನೀರಿನ ಸಮಸ್ಯೆ ಎದುರಾಗಿದೆ. ಗ್ರಾಮಗಳಲ್ಲಿ ಜನರಿಗೆ ಹಾಗು ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಈ ಹಿನ್ನಲೆಯಲ್ಲಿ ಜಲಸಂಪನ್ಮೂಲ ಖಾತೆ ಸಚಿವರಾದ ಚಲುವರಾಯಸ್ವಾಮಿಯವರಿಗೆ ಪತ್ರ ಬರೆಯಲಾಗಿದ್ದು, ತಕ್ಷಣ ಎಡ ಮತ್ತು ಬಲದಂಡೆ ನಾಲೆ ಹಾಗು ಗೊಂದಿ ಜಲಾಶಯದ ನಾಲೆಗಳಿಗೆ ನೀರು ಹರಿಸುವಂತೆ ಕೋರಲಾಗಿದೆ. ಇದಕ್ಕೆ ಸಚಿವರು ಪೂರಕವಾಗಿ ಸ್ಪಂದಿಸುವ ವಿಶ್ವಾಸವಿದೆ. ಸಚಿವರು ಕೈಗೊಳ್ಳುವ ತೀರ್ಮಾನದ ನಂತರ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದರು. ಅಲ್ಲದೆ ಭದ್ರಾ ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಪ್ರಾಧಿಕಾರ(ಕಾಡಾ)ದ ಅಧ್ಯಕ್ಷರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಈ ಸಂಬಂಧ ೨-೩ ದಿನಗಳಲ್ಲಿ ಸಭೆ ನಡೆಯಲಿದ್ದು, ನೀರು ಬಿಡುವ ತೀರ್ಮಾನ ಕೈಗೊಳ್ಳಲಿದ್ದಾರೆ. ಈ ಹಿನ್ನಲೆಯಲ್ಲಿ ರೈತರು, ಗ್ರಾಮಸ್ಥರು ಆತಂಕಕ್ಕೆ ಒಳಗಾಗದಂತೆ ಮನವಿ ಮಾಡಿದರು.  ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ, ಮಾಜಿ ಸದಸ್ಯರಾದ ಎಸ್. ಕುಮಾರ್, ಎಚ್.ಎಲ್ ಷಡಾಕ್ಷರಿ, ಕಣ್ಣಪ್ಪ, ಶಾಂತಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    1
    ಭದ್ರಾ ನಾಲೆಗಳಲ್ಲಿ ತಕ್ಷಣ ನೀರು ಹರಿಸಲು ಆಗ್ರಹಿಸಿ ರೈತರಿಂದ ಶಾಸಕರ ಗೃಹ ಕಛೇರಿಯಲ್ಲಿ ಪ್ರತಿಭಟನೆ

ಭದ್ರಾವತಿ ತಾಲೂಕಿನ ರೈತರ ಬೆಳೆಗಳಿಗೆ ತಕ್ಷಣ ನೀರು ಹರಿಸಬೇಕೆಂದು ರೈತರು ಮಂಗಳವಾರ ಶಾಸಕರ ಗೃಹ ಕಛೇರಿಯಲ್ಲಿ ಪ್ರತಿಭಟನೆ ನಡೆಸುವ ಮೂಲಕ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಆಗ್ರಹಿಸಿದರು. 
ಭದ್ರಾವತಿ: ತಾಲೂಕಿನ ರೈತರ ಬೆಳೆಗಳಿಗೆ ತಕ್ಷಣ ನೀರು ಹರಿಸಬೇಕೆಂದು ರೈತರು ಮಂಗಳವಾರ ಶಾಸಕರ ಗೃಹ ಕಛೇರಿಯಲ್ಲಿ ಪ್ರತಿಭಟನೆ ನಡೆಸುವ ಮೂಲಕ ಶಾಸಕರಿಗೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡ ಕಲ್ಲಹಳ್ಳಿ ಶೇಖರ್ ಭದ್ರಾ ಮೇಲ್ದಂಡೆ ಯೋಜನೆಗೆ ಪ್ರಾಯೋಗಿಕವಾಗಿ ನೀರು ಹರಿಸುವುದನ್ನು ಸರ್ಕಾರ ತಕ್ಷಣ ನಿಲ್ಲಿಸಬೇಕು. ಪ್ರಸ್ತುತ ಮಳೆ ಕೊರೆತೆಯಿಂದಾಗಿ ಜಲಾಶಯದಲ್ಲಿ ನೀರಿನ ಸಂಗ್ರಹ ಕಡಿಮೆ ಇದ್ದು, ಅಲ್ಲದೆ ಇದೀಗ ತಾಲೂಕಿನ ರೈತರ ಬೆಳೆಗಳಿಗೆ ನೀರಿನ ಅಗತ್ಯವಿದೆ. ತಕ್ಷಣ ಕಾಲುವೆಗಳಲ್ಲಿ ನೀರು ಹರಿಸುವ ಮೂಲಕ ರೈತರ ಹಿತಕಾಪಾಡುವಂತೆ ಆಗ್ರಹಿಸಿದರು.
ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಮಾತನಾಡಿ, ತಾಲೂಕಿನಲ್ಲಿ ಈ ಬಾರಿ ಮಳೆ ಕೊರತೆಯಾಗಿದೆ. ಇದರಿಂದಾಗಿ ನೀರಿನ ಸಮಸ್ಯೆ ಎದುರಾಗಿದೆ. ಗ್ರಾಮಗಳಲ್ಲಿ ಜನರಿಗೆ ಹಾಗು ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಈ ಹಿನ್ನಲೆಯಲ್ಲಿ ಜಲಸಂಪನ್ಮೂಲ ಖಾತೆ ಸಚಿವರಾದ ಚಲುವರಾಯಸ್ವಾಮಿಯವರಿಗೆ ಪತ್ರ ಬರೆಯಲಾಗಿದ್ದು, ತಕ್ಷಣ ಎಡ ಮತ್ತು ಬಲದಂಡೆ ನಾಲೆ ಹಾಗು ಗೊಂದಿ ಜಲಾಶಯದ ನಾಲೆಗಳಿಗೆ ನೀರು ಹರಿಸುವಂತೆ ಕೋರಲಾಗಿದೆ. ಇದಕ್ಕೆ ಸಚಿವರು ಪೂರಕವಾಗಿ ಸ್ಪಂದಿಸುವ ವಿಶ್ವಾಸವಿದೆ. ಸಚಿವರು ಕೈಗೊಳ್ಳುವ ತೀರ್ಮಾನದ ನಂತರ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಅಲ್ಲದೆ ಭದ್ರಾ ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಪ್ರಾಧಿಕಾರ(ಕಾಡಾ)ದ ಅಧ್ಯಕ್ಷರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಈ ಸಂಬಂಧ ೨-೩ ದಿನಗಳಲ್ಲಿ ಸಭೆ ನಡೆಯಲಿದ್ದು, ನೀರು ಬಿಡುವ ತೀರ್ಮಾನ ಕೈಗೊಳ್ಳಲಿದ್ದಾರೆ. ಈ ಹಿನ್ನಲೆಯಲ್ಲಿ ರೈತರು, ಗ್ರಾಮಸ್ಥರು ಆತಂಕಕ್ಕೆ ಒಳಗಾಗದಂತೆ ಮನವಿ ಮಾಡಿದರು. 
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ, ಮಾಜಿ ಸದಸ್ಯರಾದ ಎಸ್. ಕುಮಾರ್, ಎಚ್.ಎಲ್ ಷಡಾಕ್ಷರಿ, ಕಣ್ಣಪ್ಪ, ಶಾಂತಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    user_ಪ್ರವೀಣ್ ಅಧ್ಯಕ್ಷ NAYAKA
    ಪ್ರವೀಣ್ ಅಧ್ಯಕ್ಷ NAYAKA
    Local News Reporter Bhadravati, Shivamogga•
    7 hrs ago
  • "ಗ್ರಾನೈಟ್ ಕಲ್ಲುಗಳಿಂದ ನಿರ್ಮಿಸಲಾದ ಈ ಮಸೀದಿಯ ವಿಶೇಷತೆ ಏನು? "
    1
    "ಗ್ರಾನೈಟ್ ಕಲ್ಲುಗಳಿಂದ ನಿರ್ಮಿಸಲಾದ ಈ ಮಸೀದಿಯ ವಿಶೇಷತೆ ಏನು? "
    user_H M ಹರಕುಣಿ
    H M ಹರಕುಣಿ
    Local News Reporter ಶಿಗ್ಗಾಂವ್, ಹಾವೇರಿ, ಕರ್ನಾಟಕ•
    7 hrs ago
  • ಗೌರಸಮುದ್ರ ಮಾರಮ್ಮ ದೇವರ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡ ಸಾವಿರಾರು ಭಕ್ತರು ಐತಿಹಾಸಿಕ ಶ್ರೀ ಗೌರಸಮುದ್ರ ಮಾರಮ್ಮ ದೇವರ ಜಾತ್ರಾ ಮಹೋತ್ಸವ ಸಾವಿರಾರು ಭಕ್ತರು ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿದೆ. ಗೌರಸಮುದ್ರ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವ ಬುಡಕಟ್ಟು ಸಂಸ್ಕೃತಿ ಮತ್ತು ಧಾರ್ಮಿಕ ಶ್ರದ್ಧಾ ಕೇಂದ್ರವಾದ ಈ ದೇವಸ್ಥಾನ ಐತಿಹಾಸಿಕ ಪರಂಪರೆಗೆ ಸಾಕ್ಷಿಯಾಗಿದೆ.‌ ಭಕ್ತರ ಕಠಿಣ ವ್ರತ ಮತ್ತು ಭಕ್ತಿಯ ನಂಬಿಕೆ ಮುಗಿಲು ಮುಟ್ಟಿದೆ ಇಂತಹ ಪವಿತ್ರ ದೇವಸ್ಥಾನಕ್ಕೆ ಇಲ್ಲಿ ಬರುವಂತ ಭಕ್ತಾದಿಗಳಿಗೆ ಜಿಲ್ಲಾಡಳಿತ ಮೂಲಭೂತ ಸೌಕರ್ಯವನ್ನು ಒದಗಿಸಬೇಕೆಂಬುದು ಭಕ್ತಾದಿಗಳ ಒತ್ತಾಸೆಯಾಗಿದೆ. ಸರಿ ಸುಮಾರು ನಾಲ್ಕರಿಂದ ಐದು ಲಕ್ಷ ಬಕ್ತಾದಿಗಳು ಬರುವಂತಹ ಈ ಶ್ರದ್ದಾ ಕೇಂದ್ರಕ್ಕೆ ಮುಂದಿನ ದಿನಗಳಲ್ಲಿ ಅಗತ್ಯ ಸೌಲಭ್ಯವನ್ನು ಒದಗಿಸುವಂತೆ ಸರ್ಕಾರವನ್ನು ಆಗ್ರಹಿಸಿದರು.
    1
    ಗೌರಸಮುದ್ರ ಮಾರಮ್ಮ ದೇವರ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡ ಸಾವಿರಾರು ಭಕ್ತರು
ಐತಿಹಾಸಿಕ ಶ್ರೀ ಗೌರಸಮುದ್ರ ಮಾರಮ್ಮ ದೇವರ ಜಾತ್ರಾ ಮಹೋತ್ಸವ ಸಾವಿರಾರು ಭಕ್ತರು ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿದೆ. ಗೌರಸಮುದ್ರ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವ ಬುಡಕಟ್ಟು ಸಂಸ್ಕೃತಿ ಮತ್ತು ಧಾರ್ಮಿಕ ಶ್ರದ್ಧಾ ಕೇಂದ್ರವಾದ ಈ ದೇವಸ್ಥಾನ ಐತಿಹಾಸಿಕ ಪರಂಪರೆಗೆ ಸಾಕ್ಷಿಯಾಗಿದೆ.‌ ಭಕ್ತರ ಕಠಿಣ ವ್ರತ ಮತ್ತು ಭಕ್ತಿಯ ನಂಬಿಕೆ ಮುಗಿಲು ಮುಟ್ಟಿದೆ ಇಂತಹ ಪವಿತ್ರ ದೇವಸ್ಥಾನಕ್ಕೆ ಇಲ್ಲಿ ಬರುವಂತ ಭಕ್ತಾದಿಗಳಿಗೆ ಜಿಲ್ಲಾಡಳಿತ ಮೂಲಭೂತ ಸೌಕರ್ಯವನ್ನು ಒದಗಿಸಬೇಕೆಂಬುದು ಭಕ್ತಾದಿಗಳ ಒತ್ತಾಸೆಯಾಗಿದೆ.  ಸರಿ ಸುಮಾರು ನಾಲ್ಕರಿಂದ ಐದು ಲಕ್ಷ ಬಕ್ತಾದಿಗಳು ಬರುವಂತಹ ಈ ಶ್ರದ್ದಾ ಕೇಂದ್ರಕ್ಕೆ ಮುಂದಿನ ದಿನಗಳಲ್ಲಿ ಅಗತ್ಯ ಸೌಲಭ್ಯವನ್ನು ಒದಗಿಸುವಂತೆ ಸರ್ಕಾರವನ್ನು ಆಗ್ರಹಿಸಿದರು.
    user_Vinay P palekar
    Vinay P palekar
    ಮಾಧ್ಯಮ ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    5 hrs ago
  • ಗೌರಸಮುದ್ರ ಜಾತ್ರೆಗೆ ಆಗಮಿಸಿ ದೇವಿಯ ದರ್ಶನ ಪಡೆದ ಜಿಲ್ಲಾ ಉಸ್ತುವಾರಿ ಸಚಿವ ಟಿ .ರಘುಮೂರ್ತಿ ಚಳ್ಳಕೆರೆ ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳ ಜನರನ್ನು ಒಂದೆಡೆ ಬೆಸೆಯುವ ಜಾತ್ರೆ ಎಂಬ ಖ್ಯಾತಿ ಹೊಂದಿರುವ ಚಳ್ಳಕೆರೆ ತಾಲ್ಲೂಕಿನ ತಳಕು ಹೋಬಳಿಯ ಗೌರಸಮುದ್ರ ಮಾರಮ್ಮದೇವಿ ಜಾತ್ರೆ ಇಂದು ಸಡಗರ ಸಂಭ್ರಮದಿಂದ ಜರುಗಿತು. ಪ್ರತಿವರ್ಷ ಶ್ರಾವಣಮಾಸ ಆರಂಭದ ಪ್ರಥಮ ಮಂಗಳವಾರ ಇಲ್ಲಿ ದೇವಿಯ ದೊಡ್ಡ ಪರಿಷೆ ನಡೆಸಿಕೊಂಡು ಬರಲಾಗುತ್ತಿದೆ.ದೇವಿಯ ಮೂಲ ಆಂಧ್ರಪ್ರದೇಶದ ನಿಡಗಲ್ಲು ಆಗಿರುವ ಕಾರಣ ರಾಜ್ಯ ಮತ್ತು ಆಂಧ್ರದ ಸಾವಿರಾರು ಭಕ್ತರು ಜಂಟಿಯಾಗಿ ಜಾತ್ರೆಯಲ್ಲಿ ಭಾಗಿಯಾಗಿ ತಾಯಿ ಮಾರಮ್ಮಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ ಕನ್ನಡ, ತೆಲುಗು ಭಾಷೆಗಳ ಜುಗಲ್‌ ಬಂದಿಯನ್ನು ಜಾತ್ರೆಯಲ್ಲಿ ನಾವು ಕಾಣಬಹುದಾಗಿದಿ 15 ದಿನ ಮುಂಚಿತವಾಗಿ ದೇವಿಯ ಒಪ್ಪಿಗೆ ಪಡೆದು ಜಾತ್ರೆಗೆ ಚಾಲನೆ ನೀಡಲಾಗುತ್ತಿ. ಅನುಮತಿ ಕೋರುವ ದಿನ ಊರಿನಲ್ಲಿ ಸಾರು ಚೆಲ್ಲಲಾಗುತ್ತು ಇದಾದ ನಂತರ ಜಾತ್ರೆ ತನಕ ಗ್ರಾಮಸ್ಥರು ಸ್ನಾನ, ಅಡುಗೆ, ಉಡುಗೆ ತೊಡಿಗೆ ವಿಚಾರದಲ್ಲಿ ಹಲವು ಕಟ್ಟುಪಾಡುಗಳನ್ನು ಕಡ್ಡಾಯಪಾಲಿಸಿಕೊಂಡು ಬಂದಿದ್ದರು.. ಗೌರಸಮುದ್ರ ಮಾರಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ನಂತರ ದೊಡ್ಡ ಜಾತ್ರೆಗೆ ದೇವಿಯ ಉತ್ಸವ ಮೂರ್ತಿಯನ್ನು ಮೆರವಣಿಗೆಯಲ್ಲಿ ತುಂಬಲಿನ ಪ್ರದೇಶಕ್ಕೆ ವಾದ್ಯಗಳೊಂದಿಗೆ ದೇವಿಯಆಭರಣ, ವಸ್ತ್ರಗಳನ್ನು ಬುಡಕಟ್ಟು ಸಂಸ್ಕೃತಿಯ ವಾದ್ಯಗಳೊಂದಿಗೆ ತುಂಬಲಿಗೆ ದೇವಿಯನ್ನು ಕರೆತರಲಾಯಿತು . ಮಾರಮ್ಮ ದೇವಿ ತುಮುಲಗಿ ಬರುವ ದೃಶ್ಯವನ್ನು ನೋಡುವುದು ಜಾತ್ರೆಯ ಪ್ರಮುಖ ಘಟ್ಟ. ದೇವಿ ತುಮುಲು ತುಂಬಿಲಿನ ಲ್ಲಿ ಜಾತ್ರೆ ನಡೆಯುವ ಸ್ಥಳಕ್ಕೆ ಬರುತ್ತಿದ್ದಂತೆ ಭಕ್ತರು ಬೆಳೆದಂತಹ ಈರುಳ್ಳಿ ಕೋಳಿ ಕುರಿಮರಿ ಸೂರಮೆಣಸು ತಾಯಿಯ ಮೇಲೆ ತೂರುವುದು ಮೂಲಕ ತಮ್ಮ ಹರಕೆಯನ್ನಿ ತೀರಿಸಿದರು. ಮಾರಿದೇವತೆಯ ತವರ ಮನೆ ಎಂದು ಕರೆಯಲಾಗುವ ನೀಡಗಲ್ಲಿನಿಂದ ತಂದ ಮೀಸಲು ಹಸಿ ಹಾಲು, ಬೆಳ್ಳಿ ಕಣ್ಣು ಹಾಗೂ ಕೋರೆ ಮಿಸ್ಸೆಯನ್ನು ದೇವಿಗೆ ಭಕ್ತಿಯಿಂದ ಅರ್ಪಿಸಲಾಯಿತು . ನಂತರ ತುಂಬಲಿನ ಮುಂದೆ ಇರುವ ಬೊಮ್ಮಲಿಂಗ ದೇವರ ದೀಪದ ಕಂಬದ ಮೇಲೆ ಏರಿ ದೀಪ ಹಚ್ಚಿದ ಕಷ್ಟ ಕಾರ್ಪಣ್ಯಗಳು ದೂರವಾಗಲಿ, ಮಳೆ ಬೆಳೆ ಚೆನ್ನಾಗಿ ಬರಲಿ ಹಾಗೂ ಜಾನುವಾರುಗಳಿಗೆ ಯಾವುದೇ ರೋಗರುಚಿನ ಬಾರ್ದಿರಲಿ ಎಂದು ಪ್ರಾರ್ಥಿಸಿದರು ಲಕ್ಷಾಂತರ ಭಕ್ತರು ದೇವಿಯ ದರ್ಶನವನ್ನು ಪಡೆದರು. ದೇವಿಯ ದರ್ಶನಕ್ಕೆ ಬಂದಂತಹ ಲಕ್ಷಾಂತರ ಭಕ್ತರ ಯಾವುದೇ ತೊಂದರೆ ಆಗದಂತೆ ಪೊಲೀಸ್ ಇಲಾಖೆ ತಾಲೂಕು ಆಡಳಿತ ಮುಂಜಾಗ್ರತ ಕ್ರಮಗಳನ್ನು ಕೈಗೊಂಡು ಕುಡಿಯುವ ನೀರು ದೇವಯ ದರ್ಶನಕ್ಕೆ ಅನುಕೂಲ ಮಾಡಿಕೊಟ್ಟರು.. ಜಾತ್ರೆಗೆ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಟಿ ರಘುಮೂರ್ತಿ ಮೊಳಕಾಲ್ಮೂರು ಶಾಸಕ ಎನ್ ವೈ ಗೋಪಾಲಕೃಷ್ಣ ಜಿಲ್ಲಾಧಿಕಾರಿ ರಮ್ಯ ಜಿಲ್ಲಾ ಎಸ್ ಪಿ ರಂಜಿತ್ ಕುಮಾರ್ ಬಂಡವರು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಜನಪ್ರತಿನಿಧಿಗಳು ಭಕ್ತರು ಜಾತ್ರೆಯಲ್ಲಿ ಭಾಗವಹಿಸಿದರು. ತಕ್ಷಣವೇ ತುಮಲು ಪ್ರದೇಶ ಬಿಟ್ಟು ಖಾಲಿ ಖಾಲಿ ಮಾಡಿದರು. ಪ್ರತಿವರ್ಷದಂತೆ ಈ ವರ್ಷವೂ ಸಹ ಲಕ್ಷಾಂತರ ಭಕ್ತರು ಈ ಜಾತ್ರೆಯಲ್ಲಿ ಭಾಗಿಯಾದರು..
    2
    ಗೌರಸಮುದ್ರ ಜಾತ್ರೆಗೆ ಆಗಮಿಸಿ ದೇವಿಯ ದರ್ಶನ ಪಡೆದ ಜಿಲ್ಲಾ ಉಸ್ತುವಾರಿ ಸಚಿವ ಟಿ .ರಘುಮೂರ್ತಿ
ಚಳ್ಳಕೆರೆ  ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳ ಜನರನ್ನು ಒಂದೆಡೆ ಬೆಸೆಯುವ ಜಾತ್ರೆ ಎಂಬ ಖ್ಯಾತಿ ಹೊಂದಿರುವ ಚಳ್ಳಕೆರೆ ತಾಲ್ಲೂಕಿನ ತಳಕು ಹೋಬಳಿಯ ಗೌರಸಮುದ್ರ ಮಾರಮ್ಮದೇವಿ  ಜಾತ್ರೆ ಇಂದು ಸಡಗರ ಸಂಭ್ರಮದಿಂದ ಜರುಗಿತು.
ಪ್ರತಿವರ್ಷ ಶ್ರಾವಣಮಾಸ ಆರಂಭದ ಪ್ರಥಮ ಮಂಗಳವಾರ ಇಲ್ಲಿ ದೇವಿಯ ದೊಡ್ಡ ಪರಿಷೆ ನಡೆಸಿಕೊಂಡು ಬರಲಾಗುತ್ತಿದೆ.ದೇವಿಯ ಮೂಲ ಆಂಧ್ರಪ್ರದೇಶದ ನಿಡಗಲ್ಲು ಆಗಿರುವ ಕಾರಣ ರಾಜ್ಯ ಮತ್ತು ಆಂಧ್ರದ ಸಾವಿರಾರು ಭಕ್ತರು ಜಂಟಿಯಾಗಿ ಜಾತ್ರೆಯಲ್ಲಿ ಭಾಗಿಯಾಗಿ ತಾಯಿ ಮಾರಮ್ಮಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ ಕನ್ನಡ, ತೆಲುಗು ಭಾಷೆಗಳ ಜುಗಲ್‌ ಬಂದಿಯನ್ನು ಜಾತ್ರೆಯಲ್ಲಿ ನಾವು ಕಾಣಬಹುದಾಗಿದಿ
15 ದಿನ ಮುಂಚಿತವಾಗಿ ದೇವಿಯ ಒಪ್ಪಿಗೆ ಪಡೆದು ಜಾತ್ರೆಗೆ ಚಾಲನೆ ನೀಡಲಾಗುತ್ತಿ. ಅನುಮತಿ ಕೋರುವ ದಿನ ಊರಿನಲ್ಲಿ ಸಾರು ಚೆಲ್ಲಲಾಗುತ್ತು ಇದಾದ ನಂತರ ಜಾತ್ರೆ ತನಕ ಗ್ರಾಮಸ್ಥರು ಸ್ನಾನ, ಅಡುಗೆ, ಉಡುಗೆ ತೊಡಿಗೆ ವಿಚಾರದಲ್ಲಿ ಹಲವು ಕಟ್ಟುಪಾಡುಗಳನ್ನು ಕಡ್ಡಾಯಪಾಲಿಸಿಕೊಂಡು ಬಂದಿದ್ದರು..
ಗೌರಸಮುದ್ರ ಮಾರಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ನಂತರ ದೊಡ್ಡ ಜಾತ್ರೆಗೆ ದೇವಿಯ ಉತ್ಸವ ಮೂರ್ತಿಯನ್ನು ಮೆರವಣಿಗೆಯಲ್ಲಿ  ತುಂಬಲಿನ ಪ್ರದೇಶಕ್ಕೆ ವಾದ್ಯಗಳೊಂದಿಗೆ  ದೇವಿಯಆಭರಣ, ವಸ್ತ್ರಗಳನ್ನು ಬುಡಕಟ್ಟು ಸಂಸ್ಕೃತಿಯ ವಾದ್ಯಗಳೊಂದಿಗೆ  ತುಂಬಲಿಗೆ ದೇವಿಯನ್ನು ಕರೆತರಲಾಯಿತು . ಮಾರಮ್ಮ ದೇವಿ ತುಮುಲಗಿ ಬರುವ ದೃಶ್ಯವನ್ನು ನೋಡುವುದು ಜಾತ್ರೆಯ ಪ್ರಮುಖ ಘಟ್ಟ. ದೇವಿ ತುಮುಲು ತುಂಬಿಲಿನ ಲ್ಲಿ ಜಾತ್ರೆ ನಡೆಯುವ ಸ್ಥಳಕ್ಕೆ ಬರುತ್ತಿದ್ದಂತೆ ಭಕ್ತರು ಬೆಳೆದಂತಹ ಈರುಳ್ಳಿ ಕೋಳಿ ಕುರಿಮರಿ ಸೂರಮೆಣಸು  ತಾಯಿಯ ಮೇಲೆ ತೂರುವುದು ಮೂಲಕ ತಮ್ಮ ಹರಕೆಯನ್ನಿ ತೀರಿಸಿದರು.
ಮಾರಿದೇವತೆಯ ತವರ ಮನೆ ಎಂದು ಕರೆಯಲಾಗುವ ನೀಡಗಲ್ಲಿನಿಂದ ತಂದ  ಮೀಸಲು ಹಸಿ ಹಾಲು, ಬೆಳ್ಳಿ ಕಣ್ಣು ಹಾಗೂ ಕೋರೆ ಮಿಸ್ಸೆಯನ್ನು ದೇವಿಗೆ ಭಕ್ತಿಯಿಂದ ಅರ್ಪಿಸಲಾಯಿತು
.
ನಂತರ ತುಂಬಲಿನ ಮುಂದೆ ಇರುವ ಬೊಮ್ಮಲಿಂಗ ದೇವರ ದೀಪದ ಕಂಬದ ಮೇಲೆ ಏರಿ ದೀಪ ಹಚ್ಚಿದ ಕಷ್ಟ ಕಾರ್ಪಣ್ಯಗಳು ದೂರವಾಗಲಿ, ಮಳೆ ಬೆಳೆ ಚೆನ್ನಾಗಿ ಬರಲಿ ಹಾಗೂ ಜಾನುವಾರುಗಳಿಗೆ ಯಾವುದೇ ರೋಗರುಚಿನ ಬಾರ್ದಿರಲಿ ಎಂದು ಪ್ರಾರ್ಥಿಸಿದರು ಲಕ್ಷಾಂತರ ಭಕ್ತರು ದೇವಿಯ ದರ್ಶನವನ್ನು ಪಡೆದರು.
ದೇವಿಯ ದರ್ಶನಕ್ಕೆ ಬಂದಂತಹ ಲಕ್ಷಾಂತರ ಭಕ್ತರ ಯಾವುದೇ ತೊಂದರೆ ಆಗದಂತೆ ಪೊಲೀಸ್ ಇಲಾಖೆ ತಾಲೂಕು ಆಡಳಿತ ಮುಂಜಾಗ್ರತ ಕ್ರಮಗಳನ್ನು ಕೈಗೊಂಡು ಕುಡಿಯುವ ನೀರು ದೇವಯ ದರ್ಶನಕ್ಕೆ ಅನುಕೂಲ ಮಾಡಿಕೊಟ್ಟರು.. ಜಾತ್ರೆಗೆ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಟಿ ರಘುಮೂರ್ತಿ ಮೊಳಕಾಲ್ಮೂರು ಶಾಸಕ ಎನ್ ವೈ ಗೋಪಾಲಕೃಷ್ಣ ಜಿಲ್ಲಾಧಿಕಾರಿ ರಮ್ಯ ಜಿಲ್ಲಾ ಎಸ್ ಪಿ ರಂಜಿತ್ ಕುಮಾರ್ ಬಂಡವರು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಜನಪ್ರತಿನಿಧಿಗಳು ಭಕ್ತರು ಜಾತ್ರೆಯಲ್ಲಿ ಭಾಗವಹಿಸಿದರು.
ತಕ್ಷಣವೇ ತುಮಲು ಪ್ರದೇಶ ಬಿಟ್ಟು ಖಾಲಿ ಖಾಲಿ ಮಾಡಿದರು. ಪ್ರತಿವರ್ಷದಂತೆ ಈ ವರ್ಷವೂ ಸಹ ಲಕ್ಷಾಂತರ ಭಕ್ತರು ಈ ಜಾತ್ರೆಯಲ್ಲಿ ಭಾಗಿಯಾದರು..
    user_Suresh Belagere
    Suresh Belagere
    Photographer ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    8 hrs ago
  • ₹3,383 ಕೋಟಿ ಆಸ್ತಿ ಒಡೆಯ ಶಾಸಕ ಬೀದಿಯಲ್ಲಿ ಭಿಕ್ಷೆ ಬೇಡಿದ್ದೇಕೆ? ಕಾರಣ ವೈರಲ್! ಮುಂಬೈ ಬೀದಿಯಲ್ಲಿ ಭಿಕ್ಷುಕನಾದ ಕೋಟ್ಯಾಧೀಶ ಬಿಜೆಪಿ ಶಾಸಕ ಪರಾಗ್ ಶಾ!
    1
    ₹3,383 ಕೋಟಿ ಆಸ್ತಿ ಒಡೆಯ ಶಾಸಕ ಬೀದಿಯಲ್ಲಿ ಭಿಕ್ಷೆ ಬೇಡಿದ್ದೇಕೆ? ಕಾರಣ ವೈರಲ್!
ಮುಂಬೈ ಬೀದಿಯಲ್ಲಿ ಭಿಕ್ಷುಕನಾದ ಕೋಟ್ಯಾಧೀಶ ಬಿಜೆಪಿ ಶಾಸಕ ಪರಾಗ್ ಶಾ!
    user_ಸಿಹಿಮೋಗ್ಗೆ ಸುದ್ಧಿ ಕನ್ನಡ
    ಸಿಹಿಮೋಗ್ಗೆ ಸುದ್ಧಿ ಕನ್ನಡ
    Video Creator ಶಿವಮೊಗ್ಗ, ಶಿವಮೊಗ್ಗ, ಕರ್ನಾಟಕ•
    1 hr ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.