logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಕಲಬುರಗಿಯ ನೆಹರು ಗಂಜ್‌ನ ಎಸ್.ಬಿ. ಪಾಟೀಲ್ ಆಡಿಟೋರಿಯಂನಲ್ಲಿ ಭಾನುವಾರ ಗುಲ್ಬರ್ಗ ಡಾಲ್ ಮಿಲ್ಲರ್ಸ್ ಅಸೋಸಿಯೇಷನ್ ವತಿಯಿಂದ, APEDA ಬೆಂಬಲ ಹಾಗೂ ಪುಣೆಯ ಅಷ್ಟಂ ಟ್ರೇಡಿಂಗ್ ಸಹಯೋಗದೊಂದಿಗೆ ಡಾಲ್ ಮಿಲ್ಲರ್‌ಗಳಿಗಾಗಿ ಹಮ್ಮಿಕೊಂಡಿದ್ದ ವಿಶೇಷ 'ರಫ್ತು ಮತ್ತು ಆಮದು ಜಾಗೃತಿ ತರಬೇತಿ ಕಾರ್ಯಕ್ರಮ' ಯಶಸ್ವಿಯಾಗಿ ಜರುಗಿತು. ಈ ಕಾರ್ಯಕ್ರಮವನ್ನು ಕಲಬುರಗಿ ಉತ್ತರ ಕ್ಷೇತ್ರದ ಶಾಸಕಿ ಕನೀಜ್ ಫಾತಿಮಾ ಅವರು ಉದ್ಘಾಟಿಸಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕಿ ಕನೀಜ್ ಫಾತಿಮಾ ಅವರು, ಕಲಬುರಗಿ ಜಿಲ್ಲೆಯ ದಾಲ್ ಉದ್ಯಮಕ್ಕೆ ದೇಶ-ವಿದೇಶಗಳಲ್ಲಿ ಅತ್ಯುತ್ತಮ ಮಾರುಕಟ್ಟೆ ಅವಕಾಶಗಳಿದ್ದು, ಇಂತಹ ತರಬೇತಿಗಳು ಉದ್ಯಮಿಗಳಿಗೆ ಹೊಸ ದಿಕ್ಕು ತೋರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದರಲ್ಲದೆ, ಸರ್ಕಾರದ ಯೋಜನೆಗಳ ಸದುಪಯೋಗ ಪಡೆದು ರಫ್ತು ಚಟುವಟಿಕೆ ವಿಸ್ತರಿಸುವಂತೆ ಕರೆ ನೀಡಿದರು. ವಿಧಾನ ಪರಿಷತ್ ಸದಸ್ಯ ಡಾ. ಬಿ.ಜಿ. ಪಾಟೀಲ ಮಾತನಾಡಿ, ಕಲ್ಯಾಣ ಕರ್ನಾಟಕದ ಆರ್ಥಿಕ ಬೆಳವಣಿಗೆಯಲ್ಲಿ ದಾಲ್ ಉದ್ಯಮ ಪ್ರಮುಖ ಪಾತ್ರ ವಹಿಸುತ್ತಿದ್ದು, ಗುಣಮಟ್ಟದ ಉತ್ಪನ್ನಗಳನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗೆ ತಲುಪಿಸಲು ಅಗತ್ಯವಾದ ಜ್ಞಾನ ಮತ್ತು ತರಬೇತಿ ಅತ್ಯವಶ್ಯಕವಾಗಿದೆ ಎಂದು ಹೇಳಿದರು. ತರಬೇತಿಯನ್ನು ಅಷ್ಟಂ ಟ್ರೇಡಿಂಗ್ ಸಂಸ್ಥಾಪಕ ರಮೇಶ್ ಕಡಗಂಚಿ, ನಿರ್ದೇಶಕ ಯು. ಧರ್ಮರಾವ್ ಹಾಗೂ ಬೆಂಗಳೂರಿನ ಡಿಟಿಸಿ ತರಬೇತುದಾರ ಸುರೇಶ್ ಪೂಜಾರ್ ಅವರು ನಡೆಸಿಕೊಟ್ಟರು. ಅವರು ರಫ್ತು-ಆಮದು ಪ್ರಕ್ರಿಯೆಗಳು, ಅಂತರರಾಷ್ಟ್ರೀಯ ಮಾರುಕಟ್ಟೆಯ ಅವಕಾಶಗಳು, ಗುಣಮಟ್ಟದ ಮಾನದಂಡಗಳು, ಅಗತ್ಯ ದಾಖಲೆಗಳು, ಸರ್ಕಾರಿ ಯೋಜನೆಗಳು, ರಫ್ತು ವಿಸ್ತರಣೆಗೆ ಸಂಬಂಧಿಸಿದ ವಿವಿಧ ವಿಷಯಗಳು ಹಾಗೂ ರಫ್ತು ವ್ಯವಹಾರದಲ್ಲಿ ಎದುರಾಗುವ ಸವಾಲುಗಳು ಮತ್ತು ಅವುಗಳನ್ನು ಯಶಸ್ವಿಯಾಗಿ ಎದುರಿಸುವ ಮಾರ್ಗಗಳ ಕುರಿತು ಸಮಗ್ರ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅಭ್ಯರ್ಥಿಗಳಿಗೆ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ಅಧ್ಯಕ್ಷರಾದ ಅರುಣ್ ಕುಮಾರ್ ಪಾಟೀಲ್ ಅವರು ಪ್ರಮಾಣ ಪತ್ರ ವಿತರಿಸಿದರು. ಈ ಸಂದರ್ಭದಲ್ಲಿ ಕೆಕೆಸಿಸಿಐ ಅಧ್ಯಕ್ಷ ಶರಣಬಸಪ್ಪ ಪಪ್ಪ, ಕಾಂಗ್ರೆಸ್ ಮುಖಂಡ ಫರಾಜುಲ್ ಇಸ್ಲಾಂ, ಆಹಾರ ಧಾನ್ಯ ಮತ್ತು ಬೀಜ ವ್ಯಾಪಾರಿ ಸಂಘದ ಅಧ್ಯಕ್ಷ ಸಂತೋಷ್ ಲ್ಯಾಂಗರ್, ಗುಲ್ಬರ್ಗ ಡಾಲ್ ಮಿಲ್ಲರ್ಸ್ ಅಸೋಸಿಯೇಷನ್ ಅಧ್ಯಕ್ಷ ಚಂದ್ರಶೇಖರ್ ಕೋಬಾಲ್, ಜಿಡಿಎಂಎ ಕಾರ್ಯದರ್ಶಿ ಹಣಮಂತರಾಯ ಎಂ ತೋಟನಳ್ಳಿ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಅನೇಕ ಡಾಲ್ ಮಿಲ್ಲರ್‌ಗಳು ಮತ್ತು ಗಣ್ಯರು ಉಪಸ್ಥಿತರಿದ್ದು ಕಾರ್ಯಕ್ರಮದ ಪ್ರಯೋಜನ ಪಡೆದರು.

2 hrs ago
user_R. Koasti
R. Koasti
ಗುಂಜ್ ಕಾಲೋನಿ, ಕಲಬುರಗಿ•
2 hrs ago
2eea6979-04a7-41e7-b219-055c64fa0c0e

ಕಲಬುರಗಿಯ ನೆಹರು ಗಂಜ್‌ನ ಎಸ್.ಬಿ. ಪಾಟೀಲ್ ಆಡಿಟೋರಿಯಂನಲ್ಲಿ ಭಾನುವಾರ ಗುಲ್ಬರ್ಗ ಡಾಲ್ ಮಿಲ್ಲರ್ಸ್ ಅಸೋಸಿಯೇಷನ್ ವತಿಯಿಂದ, APEDA ಬೆಂಬಲ ಹಾಗೂ ಪುಣೆಯ ಅಷ್ಟಂ ಟ್ರೇಡಿಂಗ್ ಸಹಯೋಗದೊಂದಿಗೆ ಡಾಲ್ ಮಿಲ್ಲರ್‌ಗಳಿಗಾಗಿ ಹಮ್ಮಿಕೊಂಡಿದ್ದ ವಿಶೇಷ 'ರಫ್ತು ಮತ್ತು ಆಮದು ಜಾಗೃತಿ ತರಬೇತಿ ಕಾರ್ಯಕ್ರಮ' ಯಶಸ್ವಿಯಾಗಿ ಜರುಗಿತು. ಈ ಕಾರ್ಯಕ್ರಮವನ್ನು ಕಲಬುರಗಿ ಉತ್ತರ ಕ್ಷೇತ್ರದ ಶಾಸಕಿ ಕನೀಜ್ ಫಾತಿಮಾ ಅವರು ಉದ್ಘಾಟಿಸಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕಿ ಕನೀಜ್ ಫಾತಿಮಾ ಅವರು, ಕಲಬುರಗಿ ಜಿಲ್ಲೆಯ ದಾಲ್ ಉದ್ಯಮಕ್ಕೆ ದೇಶ-ವಿದೇಶಗಳಲ್ಲಿ ಅತ್ಯುತ್ತಮ ಮಾರುಕಟ್ಟೆ ಅವಕಾಶಗಳಿದ್ದು, ಇಂತಹ ತರಬೇತಿಗಳು ಉದ್ಯಮಿಗಳಿಗೆ ಹೊಸ ದಿಕ್ಕು ತೋರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದರಲ್ಲದೆ, ಸರ್ಕಾರದ ಯೋಜನೆಗಳ ಸದುಪಯೋಗ ಪಡೆದು ರಫ್ತು ಚಟುವಟಿಕೆ ವಿಸ್ತರಿಸುವಂತೆ ಕರೆ ನೀಡಿದರು. ವಿಧಾನ ಪರಿಷತ್ ಸದಸ್ಯ ಡಾ. ಬಿ.ಜಿ. ಪಾಟೀಲ ಮಾತನಾಡಿ, ಕಲ್ಯಾಣ ಕರ್ನಾಟಕದ ಆರ್ಥಿಕ ಬೆಳವಣಿಗೆಯಲ್ಲಿ ದಾಲ್ ಉದ್ಯಮ ಪ್ರಮುಖ ಪಾತ್ರ ವಹಿಸುತ್ತಿದ್ದು, ಗುಣಮಟ್ಟದ ಉತ್ಪನ್ನಗಳನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗೆ ತಲುಪಿಸಲು ಅಗತ್ಯವಾದ ಜ್ಞಾನ ಮತ್ತು ತರಬೇತಿ ಅತ್ಯವಶ್ಯಕವಾಗಿದೆ ಎಂದು ಹೇಳಿದರು. ತರಬೇತಿಯನ್ನು ಅಷ್ಟಂ ಟ್ರೇಡಿಂಗ್

91a3bd53-158d-45ab-94d4-49dff4ea5601

ಸಂಸ್ಥಾಪಕ ರಮೇಶ್ ಕಡಗಂಚಿ, ನಿರ್ದೇಶಕ ಯು. ಧರ್ಮರಾವ್ ಹಾಗೂ ಬೆಂಗಳೂರಿನ ಡಿಟಿಸಿ ತರಬೇತುದಾರ ಸುರೇಶ್ ಪೂಜಾರ್ ಅವರು ನಡೆಸಿಕೊಟ್ಟರು. ಅವರು ರಫ್ತು-ಆಮದು ಪ್ರಕ್ರಿಯೆಗಳು, ಅಂತರರಾಷ್ಟ್ರೀಯ ಮಾರುಕಟ್ಟೆಯ ಅವಕಾಶಗಳು, ಗುಣಮಟ್ಟದ ಮಾನದಂಡಗಳು, ಅಗತ್ಯ ದಾಖಲೆಗಳು, ಸರ್ಕಾರಿ ಯೋಜನೆಗಳು, ರಫ್ತು ವಿಸ್ತರಣೆಗೆ ಸಂಬಂಧಿಸಿದ ವಿವಿಧ ವಿಷಯಗಳು ಹಾಗೂ ರಫ್ತು ವ್ಯವಹಾರದಲ್ಲಿ ಎದುರಾಗುವ ಸವಾಲುಗಳು ಮತ್ತು ಅವುಗಳನ್ನು ಯಶಸ್ವಿಯಾಗಿ ಎದುರಿಸುವ ಮಾರ್ಗಗಳ ಕುರಿತು ಸಮಗ್ರ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅಭ್ಯರ್ಥಿಗಳಿಗೆ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ಅಧ್ಯಕ್ಷರಾದ ಅರುಣ್ ಕುಮಾರ್ ಪಾಟೀಲ್ ಅವರು ಪ್ರಮಾಣ ಪತ್ರ ವಿತರಿಸಿದರು. ಈ ಸಂದರ್ಭದಲ್ಲಿ ಕೆಕೆಸಿಸಿಐ ಅಧ್ಯಕ್ಷ ಶರಣಬಸಪ್ಪ ಪಪ್ಪ, ಕಾಂಗ್ರೆಸ್ ಮುಖಂಡ ಫರಾಜುಲ್ ಇಸ್ಲಾಂ, ಆಹಾರ ಧಾನ್ಯ ಮತ್ತು ಬೀಜ ವ್ಯಾಪಾರಿ ಸಂಘದ ಅಧ್ಯಕ್ಷ ಸಂತೋಷ್ ಲ್ಯಾಂಗರ್, ಗುಲ್ಬರ್ಗ ಡಾಲ್ ಮಿಲ್ಲರ್ಸ್ ಅಸೋಸಿಯೇಷನ್ ಅಧ್ಯಕ್ಷ ಚಂದ್ರಶೇಖರ್ ಕೋಬಾಲ್, ಜಿಡಿಎಂಎ ಕಾರ್ಯದರ್ಶಿ ಹಣಮಂತರಾಯ ಎಂ ತೋಟನಳ್ಳಿ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಅನೇಕ ಡಾಲ್ ಮಿಲ್ಲರ್‌ಗಳು ಮತ್ತು ಗಣ್ಯರು ಉಪಸ್ಥಿತರಿದ್ದು ಕಾರ್ಯಕ್ರಮದ ಪ್ರಯೋಜನ ಪಡೆದರು.

More news from ಕರ್ನಾಟಕ and nearby areas
  • ಕಲಬುರಗಿ ಜಿಲ್ಲೆಯ ಚಿತಾಪುರ ವ್ಯಾಪ್ತಿಯಲ್ಲಿ ರವಿವಾರದಂದೂ ಸಹ ಬಿಎಲ್‌ಒಗಳು (BLO) ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಿಮ್ಮ ವ್ಯಾಪ್ತಿಯ ಬಿಎಲ್‌ಒಗಳು ಕೆಲಸ ಮಾಡುತ್ತಿದ್ದು, ಪ್ರತಿಯೊಬ್ಬರೂ ತಪ್ಪದೇ ತಮ್ಮ ಬಿಎಲ್‌ಒಗಳನ್ನು ಭೇಟಿ ಮಾಡುವಂತೆ ತಿಳಿಸಲಾಗಿದೆ.
    1
    ಕಲಬುರಗಿ ಜಿಲ್ಲೆಯ ಚಿತಾಪುರ ವ್ಯಾಪ್ತಿಯಲ್ಲಿ ರವಿವಾರದಂದೂ ಸಹ ಬಿಎಲ್‌ಒಗಳು (BLO) ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಿಮ್ಮ ವ್ಯಾಪ್ತಿಯ ಬಿಎಲ್‌ಒಗಳು ಕೆಲಸ ಮಾಡುತ್ತಿದ್ದು, ಪ್ರತಿಯೊಬ್ಬರೂ ತಪ್ಪದೇ ತಮ್ಮ ಬಿಎಲ್‌ಒಗಳನ್ನು ಭೇಟಿ ಮಾಡುವಂತೆ ತಿಳಿಸಲಾಗಿದೆ.
    user_Rajkumar Mugali
    Rajkumar Mugali
    ಚಿತ್ತಾಪುರ, ಕಲಬುರಗಿ, ಕರ್ನಾಟಕ•
    16 hrs ago
  • ವಿಧಾನ ಪರಿಷತ್ ಚುನಾವಣೆಯ ಹಿನ್ನೆಲೆಯಲ್ಲಿ ಬೀದರ್ ನಗರದಲ್ಲಿ ಬಿಜೆಪಿಯಿಂದ ಪೂರ್ವಭಾವಿ ಸಭೆಯನ್ನು ಹಮ್ಮಿಕೊಳ್ಳಲಾಗಿದೆ.
    1
    ವಿಧಾನ ಪರಿಷತ್ ಚುನಾವಣೆಯ ಹಿನ್ನೆಲೆಯಲ್ಲಿ ಬೀದರ್ ನಗರದಲ್ಲಿ ಬಿಜೆಪಿಯಿಂದ ಪೂರ್ವಭಾವಿ ಸಭೆಯನ್ನು ಹಮ್ಮಿಕೊಳ್ಳಲಾಗಿದೆ.
    user_Udayakumar Mule
    Udayakumar Mule
    ವರದಿಗಾರ Basavakalyan, Bidar•
    6 min ago
  • ಯಾದಗಿರಿ ಜಿಲ್ಲೆಯಾದ್ಯಂತ ಸಮರ್ಪಕ ಮಳೆಯ ಕೊರತೆಯಿಂದಾಗಿ ರೈತ ಸಮುದಾಯ ಆತಂಕಕ್ಕೆ ಒಳಗಾಗಿರುವ ಹಿನ್ನೆಲೆಯಲ್ಲಿ, ಗುರುಮಠಕಲ್ ವಲಯದ ರಾಮಸಮುದ್ರ ಗ್ರಾಮದ ಭಕ್ತರು ಮಳೆಗಾಗಿ ದೇವರ ಮೊರೆ ಹೋಗಿದ್ದಾರೆ. ರಾಜ್ಯದಲ್ಲಿ ಉತ್ತಮ ಮಳೆ ಸುರಿದು ಬೆಳೆಗಳು ಸಮೃದ್ಧಿಯಾಗಲಿ ಎಂಬ ಸಂಕಲ್ಪದೊಂದಿಗೆ ಗ್ರಾಮಸ್ಥರು ಯಾದಗಿರಿ ತಾಲೂಕಿನ ಮೈಲಾರಪುರದ ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನಕ್ಕೆ ಪಾದಯಾತ್ರೆ ನಡೆಸಿ ವಿಶೇಷ ಪೂಜೆ ಸಲ್ಲಿಸಿದರು. ಭಕ್ತರು ಗ್ರಾಮದಿಂದಲೇ ಭಜನೆ, ನಾಮಸ್ಮರಣೆ ಹಾಗೂ ದೇವರ ಕೀರ್ತನೆಗಳನ್ನು ಹಾಡುತ್ತಾ ಮೈಲಾರಪುರದವರೆಗೆ ಪಾದಯಾತ್ರೆ ನಡೆಸಿದರು. ದೇವಸ್ಥಾನ ತಲುಪಿದ ಬಳಿಕ ಮೈಲಾರಲಿಂಗೇಶ್ವರನ ಸನ್ನಿಧಿಯಲ್ಲಿ ಸಾಮೂಹಿಕ ಭಜನೆ ನಡೆಸಿ, ರಾಜ್ಯದಲ್ಲಿ ಉತ್ತಮ ಮಳೆಯಾಗಿ ಕೆರೆ-ಕಟ್ಟೆಗಳು ತುಂಬಲಿ, ಬೆಳೆಗಳು ಸಮೃದ್ಧಿಯಾಗಿ ಬೆಳೆಯಲಿ ಹಾಗೂ ಅನ್ನದಾತರ ಬದುಕು ಹಸನಾಗಲಿ ಎಂದು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಮಳೆಯ ಅಭಾವದ ಈ ಸಂಕಷ್ಟದ ಸಮಯದಲ್ಲಿ ಸಾಂಪ್ರದಾಯಿಕ ನಂಬಿಕೆಯನ್ನು ಮುಂದುವರಿಸಿಕೊಂಡು ಹೋಗಿರುವ ಈ ಪೂಜೆಯಲ್ಲಿ ಗ್ರಾಮದ ಹಿರಿಯರು, ಯುವಕರು, ಮಹಿಳೆಯರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
    4
    ಯಾದಗಿರಿ ಜಿಲ್ಲೆಯಾದ್ಯಂತ ಸಮರ್ಪಕ ಮಳೆಯ ಕೊರತೆಯಿಂದಾಗಿ ರೈತ ಸಮುದಾಯ ಆತಂಕಕ್ಕೆ ಒಳಗಾಗಿರುವ ಹಿನ್ನೆಲೆಯಲ್ಲಿ, ಗುರುಮಠಕಲ್ ವಲಯದ ರಾಮಸಮುದ್ರ ಗ್ರಾಮದ ಭಕ್ತರು ಮಳೆಗಾಗಿ ದೇವರ ಮೊರೆ ಹೋಗಿದ್ದಾರೆ. ರಾಜ್ಯದಲ್ಲಿ ಉತ್ತಮ ಮಳೆ ಸುರಿದು ಬೆಳೆಗಳು ಸಮೃದ್ಧಿಯಾಗಲಿ ಎಂಬ ಸಂಕಲ್ಪದೊಂದಿಗೆ ಗ್ರಾಮಸ್ಥರು ಯಾದಗಿರಿ ತಾಲೂಕಿನ ಮೈಲಾರಪುರದ ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನಕ್ಕೆ ಪಾದಯಾತ್ರೆ ನಡೆಸಿ ವಿಶೇಷ ಪೂಜೆ ಸಲ್ಲಿಸಿದರು.

ಭಕ್ತರು ಗ್ರಾಮದಿಂದಲೇ ಭಜನೆ, ನಾಮಸ್ಮರಣೆ ಹಾಗೂ ದೇವರ ಕೀರ್ತನೆಗಳನ್ನು ಹಾಡುತ್ತಾ ಮೈಲಾರಪುರದವರೆಗೆ ಪಾದಯಾತ್ರೆ ನಡೆಸಿದರು. ದೇವಸ್ಥಾನ ತಲುಪಿದ ಬಳಿಕ ಮೈಲಾರಲಿಂಗೇಶ್ವರನ ಸನ್ನಿಧಿಯಲ್ಲಿ ಸಾಮೂಹಿಕ ಭಜನೆ ನಡೆಸಿ, ರಾಜ್ಯದಲ್ಲಿ ಉತ್ತಮ ಮಳೆಯಾಗಿ ಕೆರೆ-ಕಟ್ಟೆಗಳು ತುಂಬಲಿ, ಬೆಳೆಗಳು ಸಮೃದ್ಧಿಯಾಗಿ ಬೆಳೆಯಲಿ ಹಾಗೂ ಅನ್ನದಾತರ ಬದುಕು ಹಸನಾಗಲಿ ಎಂದು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಮಳೆಯ ಅಭಾವದ ಈ ಸಂಕಷ್ಟದ ಸಮಯದಲ್ಲಿ ಸಾಂಪ್ರದಾಯಿಕ ನಂಬಿಕೆಯನ್ನು ಮುಂದುವರಿಸಿಕೊಂಡು ಹೋಗಿರುವ ಈ ಪೂಜೆಯಲ್ಲಿ ಗ್ರಾಮದ ಹಿರಿಯರು, ಯುವಕರು, ಮಹಿಳೆಯರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
    user_Nagaraj PATANGE
    Nagaraj PATANGE
    Local News Reporter ಗುರುಮಿಟ್ಕಲ್, ಯಾದಗಿರಿ, ಕರ್ನಾಟಕ•
    1 hr ago
  • ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮದಭಾವಿ ಗ್ರಾಮದಲ್ಲಿ ಮುಂಗಾರು ಮಳೆ ಕೈಕೊಟ್ಟು ಭೀಕರ ಬರಗಾಲದ ಛಾಯೆ ಆವರಿಸುತ್ತಿರುವ ಹಿನ್ನೆಲೆಯಲ್ಲಿ, ಸಕಾಲಕ್ಕೆ ಮಳೆ ಬಂದು ನಾಡು ಸುಭಿಕ್ಷವಾಗಲಿ ಎಂದು ಆಶಿಸಿ ಕತ್ತೆಗಳ ಮದುವೆಯನ್ನು ಅತ್ಯಂತ ವಿಜೃಂಭಣೆ ಹಾಗೂ ಅದ್ದೂರಿಯಾಗಿ ನೆರವೇರಿಸಲಾಗಿದೆ. ಗ್ರಾಮೀಣ ಭಾಗದ ವಿಶಿಷ್ಟ ಜನಪದ ನಂಬಿಕೆಯಂತೆ, ಮಳೆ ದೇವರಾದ ವರುಣ ದೇವನನ್ನು ಒಲಿಸಿಕೊಳ್ಳಲು ಸಾರ್ವಜನಿಕರು ಹಾಗೂ ರೈತ ಬಾಂಧವರು ಒಗ್ಗೂಡಿ ಈ ವಿಶಿಷ್ಟ ಆಚರಣೆಯನ್ನು ಹಮ್ಮಿಕೊಂಡಿದ್ದರು. ಊರಿನ ಗೌಡರ ಮನೆಯಲ್ಲಿ ಶಾಸ್ತ್ರೋಕ್ತವಾಗಿ ಜರುಗಿದ ಈ ಕಲ್ಯಾಣ ಮಹೋತ್ಸವಕ್ಕೆ ಮಹಾದೇವ ಗೌಡರು ಹಾಗೂ ಪ್ರವೀಣ ಗೌಡರು ಪೂಜೆ ಸಲ್ಲಿಸಿದರು. ಮಲ್ಲಿಕಾರ್ಜುನ ಮಠಪತಿ, ಗಿರೀಶ ಜೋಶಿ ಹಾಗೂ ಅಪ್ಪಯ್ಯ ಹಿರೇಮಠ ಅವರ ನೇತೃತ್ವದಲ್ಲಿ ಸಾಮಾನ್ಯ ಮದುವೆಯಂತೆಯೇ ಸಕಲ ಸಂಪ್ರದಾಯಗಳೊಂದಿಗೆ ಕತ್ತೆಗಳ ವಿವಾಹ ಕಾರ್ಯ ನೆರವೇರಿತು. ಕತ್ತೆಗಳಿಗೆ ಮಂಗಲ ಸ್ನಾನ ಮಾಡಿಸಿ, ಅರಿಶಿನ-ಕುಂಕುಮ ಹಚ್ಚಿ, ನೂತನ ವಸ್ತ್ರ ಹಾಗೂ ಹೂವಿನ ಹಾರಗಳಿಂದ ಶೃಂಗರಿಸಲಾಗಿತ್ತು. ಮಂಗಲ ವಾದ್ಯಗಳ ಭಿನ್ನ ಧ್ವನಿ ಹಾಗೂ ಮಂತ್ರಘೋಷಗಳ ನಡುವೆ ಕತ್ತೆಗಳ ಮದುವೆ ಶಾಸ್ತ್ರೋಕ್ತವಾಗಿ ಸಂಪನ್ನಗೊಂಡಿತು. ಮದುವೆಯ ನಂತರ ಶೃಂಗರಿತ ಕತ್ತೆಗಳನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಅತ್ಯಂತ ಅದ್ದೂರಿಯಾಗಿ ಮೆರವಣಿಗೆ ಮಾಡಲಾಯಿತು. ಈ ಮೆರವಣಿಗೆಯಲ್ಲಿ ಗ್ರಾಮಸ್ಥರು, ಮಹಿಳೆಯರು ಹಾಗೂ ಯುವಕರು ಸಂಭ್ರಮದಿಂದ ಪಾಲ್ಗೊಂಡಿದ್ದರು. 'ಹೊತ್ತ ಬಂದಾಗ ಕತ್ತೆ ಕಾಲು ಹಿಡಿಯಬೇಕು' ಎಂಬ ಗಾದೆ ಮಾತಿನಂತೆ, ಗ್ರಾಮದ ಅಗಸಿಯಲ್ಲಿ ಪ್ರವೀಣ ಗೌಡರು ಹಾಗೂ ಖಂಡೇರಾವ ಘೋರ್ಪಡೆ ಅವರು ಕತ್ತೆಗಳ ಕಾಲನ್ನು ಹಿಡಿದು ವರುಣ ದೇವನು ಪ್ರಸನ್ನನಾಗಿ ಸಕಾಲಕ್ಕೆ ಉತ್ತಮ ಮಳೆ ಕರುಣಿಸಲಿ ಎಂದು ಭಕ್ತಿಭಾವದಿಂದ ಪ್ರಾರ್ಥಿಸಿದರು. ಬರಗಾಲ ಎದುರಾದಾಗ ಕತ್ತೆಗಳ ಮದುವೆ ಮಾಡುವ ಮೂಲಕ ಪ್ರಕೃತಿ ಮಾತೆಯನ್ನು ಬೇಡಿಕೊಳ್ಳುವುದು ಹಿರಿಯರ ಕಾಲದಿಂದಲೂ ನಡೆದುಬಂದ ಸಂಪ್ರದಾಯವಾಗಿದ್ದು, ಇದರಿಂದ ಸದ್ಯದಲ್ಲೇ ಉತ್ತಮ ಮಳೆಯಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡಲಿದೆ ಎಂದು ಗ್ರಾಮಸ್ಥರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಅಪೂರ್ವ ಧಾರ್ಮಿಕ ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರಾದ ಸಿದರಾಯ ತೋಡಕರ, ಅಸ್ಲಾಂ ಮುಲ್ಲಾ, ಅಶೋಕ ಪೂಜಾರಿ, ರಾಮಣ್ಣ ಮಗದುಮ್ಮ, ಆರ್ ಎಂ ಪಾಟೀಲ, ಚಿದಾನಂದ ಜಾಲಿಹಾಳ ಸೇರಿದಂತೆ ಹಲವು ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು ಎಂದು ವಿಶೇಷ ಪ್ರತಿನಿಧಿ ಮಹೇಶ್ ಶರ್ಮಾ ವರದಿ ಮಾಡಿದ್ದಾರೆ.
    1
    ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮದಭಾವಿ ಗ್ರಾಮದಲ್ಲಿ ಮುಂಗಾರು ಮಳೆ ಕೈಕೊಟ್ಟು ಭೀಕರ ಬರಗಾಲದ ಛಾಯೆ ಆವರಿಸುತ್ತಿರುವ ಹಿನ್ನೆಲೆಯಲ್ಲಿ, ಸಕಾಲಕ್ಕೆ ಮಳೆ ಬಂದು ನಾಡು ಸುಭಿಕ್ಷವಾಗಲಿ ಎಂದು ಆಶಿಸಿ ಕತ್ತೆಗಳ ಮದುವೆಯನ್ನು ಅತ್ಯಂತ ವಿಜೃಂಭಣೆ ಹಾಗೂ ಅದ್ದೂರಿಯಾಗಿ ನೆರವೇರಿಸಲಾಗಿದೆ. ಗ್ರಾಮೀಣ ಭಾಗದ ವಿಶಿಷ್ಟ ಜನಪದ ನಂಬಿಕೆಯಂತೆ, ಮಳೆ ದೇವರಾದ ವರುಣ ದೇವನನ್ನು ಒಲಿಸಿಕೊಳ್ಳಲು ಸಾರ್ವಜನಿಕರು ಹಾಗೂ ರೈತ ಬಾಂಧವರು ಒಗ್ಗೂಡಿ ಈ ವಿಶಿಷ್ಟ ಆಚರಣೆಯನ್ನು ಹಮ್ಮಿಕೊಂಡಿದ್ದರು.

ಊರಿನ ಗೌಡರ ಮನೆಯಲ್ಲಿ ಶಾಸ್ತ್ರೋಕ್ತವಾಗಿ ಜರುಗಿದ ಈ ಕಲ್ಯಾಣ ಮಹೋತ್ಸವಕ್ಕೆ ಮಹಾದೇವ ಗೌಡರು ಹಾಗೂ ಪ್ರವೀಣ ಗೌಡರು ಪೂಜೆ ಸಲ್ಲಿಸಿದರು. ಮಲ್ಲಿಕಾರ್ಜುನ ಮಠಪತಿ, ಗಿರೀಶ ಜೋಶಿ ಹಾಗೂ ಅಪ್ಪಯ್ಯ ಹಿರೇಮಠ ಅವರ ನೇತೃತ್ವದಲ್ಲಿ ಸಾಮಾನ್ಯ ಮದುವೆಯಂತೆಯೇ ಸಕಲ ಸಂಪ್ರದಾಯಗಳೊಂದಿಗೆ ಕತ್ತೆಗಳ ವಿವಾಹ ಕಾರ್ಯ ನೆರವೇರಿತು. ಕತ್ತೆಗಳಿಗೆ ಮಂಗಲ ಸ್ನಾನ ಮಾಡಿಸಿ, ಅರಿಶಿನ-ಕುಂಕುಮ ಹಚ್ಚಿ, ನೂತನ ವಸ್ತ್ರ ಹಾಗೂ ಹೂವಿನ ಹಾರಗಳಿಂದ ಶೃಂಗರಿಸಲಾಗಿತ್ತು. ಮಂಗಲ ವಾದ್ಯಗಳ ಭಿನ್ನ ಧ್ವನಿ ಹಾಗೂ ಮಂತ್ರಘೋಷಗಳ ನಡುವೆ ಕತ್ತೆಗಳ ಮದುವೆ ಶಾಸ್ತ್ರೋಕ್ತವಾಗಿ ಸಂಪನ್ನಗೊಂಡಿತು. ಮದುವೆಯ ನಂತರ ಶೃಂಗರಿತ ಕತ್ತೆಗಳನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಅತ್ಯಂತ ಅದ್ದೂರಿಯಾಗಿ ಮೆರವಣಿಗೆ ಮಾಡಲಾಯಿತು. ಈ ಮೆರವಣಿಗೆಯಲ್ಲಿ ಗ್ರಾಮಸ್ಥರು, ಮಹಿಳೆಯರು ಹಾಗೂ ಯುವಕರು ಸಂಭ್ರಮದಿಂದ ಪಾಲ್ಗೊಂಡಿದ್ದರು.

'ಹೊತ್ತ ಬಂದಾಗ ಕತ್ತೆ ಕಾಲು ಹಿಡಿಯಬೇಕು' ಎಂಬ ಗಾದೆ ಮಾತಿನಂತೆ, ಗ್ರಾಮದ ಅಗಸಿಯಲ್ಲಿ ಪ್ರವೀಣ ಗೌಡರು ಹಾಗೂ ಖಂಡೇರಾವ ಘೋರ್ಪಡೆ ಅವರು ಕತ್ತೆಗಳ ಕಾಲನ್ನು ಹಿಡಿದು ವರುಣ ದೇವನು ಪ್ರಸನ್ನನಾಗಿ ಸಕಾಲಕ್ಕೆ ಉತ್ತಮ ಮಳೆ ಕರುಣಿಸಲಿ ಎಂದು ಭಕ್ತಿಭಾವದಿಂದ ಪ್ರಾರ್ಥಿಸಿದರು. ಬರಗಾಲ ಎದುರಾದಾಗ ಕತ್ತೆಗಳ ಮದುವೆ ಮಾಡುವ ಮೂಲಕ ಪ್ರಕೃತಿ ಮಾತೆಯನ್ನು ಬೇಡಿಕೊಳ್ಳುವುದು ಹಿರಿಯರ ಕಾಲದಿಂದಲೂ ನಡೆದುಬಂದ ಸಂಪ್ರದಾಯವಾಗಿದ್ದು, ಇದರಿಂದ ಸದ್ಯದಲ್ಲೇ ಉತ್ತಮ ಮಳೆಯಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡಲಿದೆ ಎಂದು ಗ್ರಾಮಸ್ಥರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಅಪೂರ್ವ ಧಾರ್ಮಿಕ ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರಾದ ಸಿದರಾಯ ತೋಡಕರ, ಅಸ್ಲಾಂ ಮುಲ್ಲಾ, ಅಶೋಕ ಪೂಜಾರಿ, ರಾಮಣ್ಣ ಮಗದುಮ್ಮ, ಆರ್ ಎಂ ಪಾಟೀಲ, ಚಿದಾನಂದ ಜಾಲಿಹಾಳ ಸೇರಿದಂತೆ ಹಲವು ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು ಎಂದು ವಿಶೇಷ ಪ್ರತಿನಿಧಿ ಮಹೇಶ್ ಶರ್ಮಾ ವರದಿ ಮಾಡಿದ್ದಾರೆ.
    user_YADGIR NEWS
    YADGIR NEWS
    Video Creator ಯಾದಗಿರಿ, ಯಾದಗಿರಿ, ಕರ್ನಾಟಕ•
    9 hrs ago
  • ಯಾದಗಿರಿಯಲ್ಲಿ ವ್ಯಕ್ತಿಯೊಬ್ಬರು ತಾವು ಸಾವಯವ ವಸ್ತುಗಳನ್ನು ಬಳಕೆ ಮಾಡುತ್ತಿರುವುದಾಗಿ ತಿಳಿಸಿದ್ದು, ಇತರರಿಗೂ ಸಹ ಇವುಗಳನ್ನು ಬಳಸುವಂತೆ ಪ್ರೋತ್ಸಾಹಿಸಿದ್ದಾರೆ. ನಮ್ಮ ಭೂಮಿಗಾಗಿ ಸಾವಯವ ವಸ್ತುಗಳನ್ನು ಬಳಕೆ ಮಾಡಿ ಎಂದು ಕರೆ ನೀಡಿರುವ ಇವರು, ಆಸಕ್ತರು ಸಂಪರ್ಕಿಸಲು 9008959177 ಮೊಬೈಲ್ ಸಂಖ್ಯೆಯನ್ನು ಹಂಚಿಕೊಂಡಿದ್ದಾರೆ.
    1
    ಯಾದಗಿರಿಯಲ್ಲಿ ವ್ಯಕ್ತಿಯೊಬ್ಬರು ತಾವು ಸಾವಯವ ವಸ್ತುಗಳನ್ನು ಬಳಕೆ ಮಾಡುತ್ತಿರುವುದಾಗಿ ತಿಳಿಸಿದ್ದು, ಇತರರಿಗೂ ಸಹ ಇವುಗಳನ್ನು ಬಳಸುವಂತೆ ಪ್ರೋತ್ಸಾಹಿಸಿದ್ದಾರೆ. ನಮ್ಮ ಭೂಮಿಗಾಗಿ ಸಾವಯವ ವಸ್ತುಗಳನ್ನು ಬಳಕೆ ಮಾಡಿ ಎಂದು ಕರೆ ನೀಡಿರುವ ಇವರು, ಆಸಕ್ತರು ಸಂಪರ್ಕಿಸಲು 9008959177 ಮೊಬೈಲ್ ಸಂಖ್ಯೆಯನ್ನು ಹಂಚಿಕೊಂಡಿದ್ದಾರೆ.
    user_ಶರಣಪ್ಪ ರೈತ ಸಂಘದ ಗೌರವಾಧ್ಯಕ್ಷ N
    ಶರಣಪ್ಪ ರೈತ ಸಂಘದ ಗೌರವಾಧ್ಯಕ್ಷ N
    ಯಾದಗಿರಿ, ಯಾದಗಿರಿ, ಕರ್ನಾಟಕ•
    12 hrs ago
  • ಯಾದಗಿರಿ ಜಿಲ್ಲೆಯಾದ್ಯಂತ ಮನೆಗಳು, ದ್ವಿಚಕ್ರ ವಾಹನಗಳು, ದನ-ಕರುಗಳು ಹಾಗೂ ಕುರಿಗಳ ಕಳ್ಳತನ ಪ್ರಕರಣಗಳು ತೀವ್ರವಾಗಿ ಹೆಚ್ಚುತ್ತಿದ್ದು, ಸಾರ್ವಜನಿಕರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಕಳ್ಳತನ ಪ್ರಕರಣಗಳನ್ನು ಪತ್ತೆಹಚ್ಚಿ ಕಾನೂನು ಕ್ರಮ ಜರುಗಿಸಲು ಅನುಭವಿ ಹಾಗೂ ನುರಿತ ಅಧಿಕಾರಿಗಳನ್ನೊಳಗೊಂಡ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸುವಂತೆ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಜಾನುವಾರುಗಳ ಬೆಲೆ ಗಣನೀಯವಾಗಿ ಏರಿಕೆಯಾಗಿರುವ ಕಾರಣ ಅವುಗಳನ್ನು ಕಳವು ಮಾಡಿ ಮಾರಾಟ ಮಾಡುವ ಸಂಘಟಿತ ಜಾಲ ಕಾರ್ಯನಿರ್ವಹಿಸುತ್ತಿರುವ ಶಂಕೆ ವ್ಯಕ್ತವಾಗಿದ್ದು, ರೈತರು ಭಯದ ನೆರಳಿನಲ್ಲಿ ಬದುಕುವಂತಾಗಿದೆ. ಇತ್ತೀಚೆಗೆ ಬಳಿಚಕ್ರ ಗ್ರಾಮದಲ್ಲಿ ಮಧ್ಯರಾತ್ರಿ ಸುಮಾರು 3 ಗಂಟೆಯವರೆಗೆ ಜೀವದ ಹಂಗು ತೊರೆದು ಬೈಕ್ ಕಳ್ಳನನ್ನು ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಸಾಹಸಮಯ ಘಟನೆಯನ್ನು ಉಲ್ಲೇಖಿಸಿರುವ ಉಮೇಶ್ ಮುದ್ನಾಳ, ಅಲ್ಲಿಂದ ಪರಾರಿಯಾಗಿರುವ ಇತರ ಆರೋಪಿಗಳನ್ನು ಪತ್ತೆಹಚ್ಚಲು ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ. ಜಿಲ್ಲೆಯಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕೆಳಮಟ್ಟದ ಪೊಲೀಸ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನಗಳನ್ನು ನೀಡುವಂತೆ ಒತ್ತಾಯಿಸಲಾಗಿದ್ದು, ಈ ಮನವಿಯ ಪ್ರತಿಯನ್ನು ಕರ್ನಾಟಕ ಸರ್ಕಾರದ ಗೃಹ ಸಚಿವರು, ಕಲಬುರಗಿ ಪ್ರಾದೇಶಿಕ ಆಯುಕ್ತರು ಹಾಗೂ ಯಾದಗಿರಿ ಜಿಲ್ಲಾಧಿಕಾರಿಗಳಿಗೆ ಅಗತ್ಯ ಕ್ರಮಕ್ಕಾಗಿ ಸಲ್ಲಿಸಲಾಗಿದೆ. ಈ ಸಂದರ್ಭದಲ್ಲಿ ವೀರಭದ್ರಪ್ಪ, ಪರಸಪ್ಪ, ಈರಪ್ಪಗೌಡ, ಮಲ್ಲಿಕಾರ್ಜುನ, ಸಾಯಿಬಣ್ಣ, ಗನ್ ಶಾಮ್, ಆಕಾಶ, ಅಕ್ರಮ, ನಯಿಮ್, ಅಜೀಜ್, ವೆಂಕಟೇಶ, ಅಯ್ಯಣ್ಣ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
    1
    ಯಾದಗಿರಿ ಜಿಲ್ಲೆಯಾದ್ಯಂತ ಮನೆಗಳು, ದ್ವಿಚಕ್ರ ವಾಹನಗಳು, ದನ-ಕರುಗಳು ಹಾಗೂ ಕುರಿಗಳ ಕಳ್ಳತನ ಪ್ರಕರಣಗಳು ತೀವ್ರವಾಗಿ ಹೆಚ್ಚುತ್ತಿದ್ದು, ಸಾರ್ವಜನಿಕರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಕಳ್ಳತನ ಪ್ರಕರಣಗಳನ್ನು ಪತ್ತೆಹಚ್ಚಿ ಕಾನೂನು ಕ್ರಮ ಜರುಗಿಸಲು ಅನುಭವಿ ಹಾಗೂ ನುರಿತ ಅಧಿಕಾರಿಗಳನ್ನೊಳಗೊಂಡ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸುವಂತೆ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಜಾನುವಾರುಗಳ ಬೆಲೆ ಗಣನೀಯವಾಗಿ ಏರಿಕೆಯಾಗಿರುವ ಕಾರಣ ಅವುಗಳನ್ನು ಕಳವು ಮಾಡಿ ಮಾರಾಟ ಮಾಡುವ ಸಂಘಟಿತ ಜಾಲ ಕಾರ್ಯನಿರ್ವಹಿಸುತ್ತಿರುವ ಶಂಕೆ ವ್ಯಕ್ತವಾಗಿದ್ದು, ರೈತರು ಭಯದ ನೆರಳಿನಲ್ಲಿ ಬದುಕುವಂತಾಗಿದೆ. ಇತ್ತೀಚೆಗೆ ಬಳಿಚಕ್ರ ಗ್ರಾಮದಲ್ಲಿ ಮಧ್ಯರಾತ್ರಿ ಸುಮಾರು 3 ಗಂಟೆಯವರೆಗೆ ಜೀವದ ಹಂಗು ತೊರೆದು ಬೈಕ್ ಕಳ್ಳನನ್ನು ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಸಾಹಸಮಯ ಘಟನೆಯನ್ನು ಉಲ್ಲೇಖಿಸಿರುವ ಉಮೇಶ್ ಮುದ್ನಾಳ, ಅಲ್ಲಿಂದ ಪರಾರಿಯಾಗಿರುವ ಇತರ ಆರೋಪಿಗಳನ್ನು ಪತ್ತೆಹಚ್ಚಲು ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ಜಿಲ್ಲೆಯಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕೆಳಮಟ್ಟದ ಪೊಲೀಸ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನಗಳನ್ನು ನೀಡುವಂತೆ ಒತ್ತಾಯಿಸಲಾಗಿದ್ದು, ಈ ಮನವಿಯ ಪ್ರತಿಯನ್ನು ಕರ್ನಾಟಕ ಸರ್ಕಾರದ ಗೃಹ ಸಚಿವರು, ಕಲಬುರಗಿ ಪ್ರಾದೇಶಿಕ ಆಯುಕ್ತರು ಹಾಗೂ ಯಾದಗಿರಿ ಜಿಲ್ಲಾಧಿಕಾರಿಗಳಿಗೆ ಅಗತ್ಯ ಕ್ರಮಕ್ಕಾಗಿ ಸಲ್ಲಿಸಲಾಗಿದೆ. ಈ ಸಂದರ್ಭದಲ್ಲಿ ವೀರಭದ್ರಪ್ಪ, ಪರಸಪ್ಪ, ಈರಪ್ಪಗೌಡ, ಮಲ್ಲಿಕಾರ್ಜುನ, ಸಾಯಿಬಣ್ಣ, ಗನ್ ಶಾಮ್, ಆಕಾಶ, ಅಕ್ರಮ, ನಯಿಮ್, ಅಜೀಜ್, ವೆಂಕಟೇಶ, ಅಯ್ಯಣ್ಣ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
    user_Nizamuddin
    Nizamuddin
    Local News Reporter ಯಾದಗಿರಿ, ಯಾದಗಿರಿ, ಕರ್ನಾಟಕ•
    14 hrs ago
  • ಹಿರೇಕೆರೂರಿನಲ್ಲಿ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಲು ಪೊಲೀಸ್ ಇಲಾಖೆಯು ವಿಶೇಷ ಅಭಿಯಾನವೊಂದನ್ನು ಹಮ್ಮಿಕೊಂಡಿದೆ. "ನಿಮ್ಮ ಸಮಸ್ಯೆ – ನಮ್ಮ ಜವಾಬ್ದಾರಿ" ಎಂಬ ಈ ವಿಶೇಷ ಉಪಕ್ರಮದ ಅಡಿಯಲ್ಲಿ ಹಿರೇಕೆರೂರು ಪೊಲೀಸರು ಬೀಟ್ ಸಂಚರಣೆ ನಡೆಸಲಿದ್ದು, ಜನರ ಮನೆ ಬಾಗಿಲಿಗೇ ಬಂದು ಅವರ ಸಮಸ್ಯೆಗಳನ್ನು ಆಲಿಸಲಿದ್ದಾರೆ.
    1
    ಹಿರೇಕೆರೂರಿನಲ್ಲಿ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಲು ಪೊಲೀಸ್ ಇಲಾಖೆಯು ವಿಶೇಷ ಅಭಿಯಾನವೊಂದನ್ನು ಹಮ್ಮಿಕೊಂಡಿದೆ. "ನಿಮ್ಮ ಸಮಸ್ಯೆ – ನಮ್ಮ ಜವಾಬ್ದಾರಿ" ಎಂಬ ಈ ವಿಶೇಷ ಉಪಕ್ರಮದ ಅಡಿಯಲ್ಲಿ ಹಿರೇಕೆರೂರು ಪೊಲೀಸರು ಬೀಟ್ ಸಂಚರಣೆ ನಡೆಸಲಿದ್ದು, ಜನರ ಮನೆ ಬಾಗಿಲಿಗೇ ಬಂದು ಅವರ ಸಮಸ್ಯೆಗಳನ್ನು ಆಲಿಸಲಿದ್ದಾರೆ.
    user_Jk ಕನ್ನಡ news
    Jk ಕನ್ನಡ news
    Media company ಹೋಮ್ನಾಬಾದ್, ಬೀದರ್, ಕರ್ನಾಟಕ•
    10 hrs ago
  • ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಕರಜಗಿ ಗ್ರಾಮದಲ್ಲಿ ದುಷ್ಕರ್ಮಿಗಳು ಪೆಟ್ರೋಲ್ ಸುರಿದು ಶೆಡ್‌ಗೆ ಬೆಂಕಿ ಹಚ್ಚಿರುವ ಕೃತ್ಯ ಎಸಗಿದ್ದಾರೆ. ದುಷ್ಕರ್ಮಿಗಳ ಈ ವಿಕೃತ ಕೃತ್ಯದಿಂದಾಗಿ ಶೆಡ್‌ನಲ್ಲಿದ್ದ ದವಸ-ಧಾನ್ಯಗಳು ಸಂಪೂರ್ಣವಾಗಿ ಸುಟ್ಟು ಹೋಗಿದ್ದು, ಎಮ್ಮೆ ಕರುವೊಂದು ಬೆಂಕಿಗೆ ಆಹುತಿಯಾಗಿದೆ.
    1
    ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಕರಜಗಿ ಗ್ರಾಮದಲ್ಲಿ ದುಷ್ಕರ್ಮಿಗಳು ಪೆಟ್ರೋಲ್ ಸುರಿದು ಶೆಡ್‌ಗೆ ಬೆಂಕಿ ಹಚ್ಚಿರುವ ಕೃತ್ಯ ಎಸಗಿದ್ದಾರೆ. ದುಷ್ಕರ್ಮಿಗಳ ಈ ವಿಕೃತ ಕೃತ್ಯದಿಂದಾಗಿ ಶೆಡ್‌ನಲ್ಲಿದ್ದ ದವಸ-ಧಾನ್ಯಗಳು ಸಂಪೂರ್ಣವಾಗಿ ಸುಟ್ಟು ಹೋಗಿದ್ದು, ಎಮ್ಮೆ ಕರುವೊಂದು ಬೆಂಕಿಗೆ ಆಹುತಿಯಾಗಿದೆ.
    user_Jk ಕನ್ನಡ news
    Jk ಕನ್ನಡ news
    Media company ಹೋಮ್ನಾಬಾದ್, ಬೀದರ್, ಕರ್ನಾಟಕ•
    1 hr ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.