ಮುಳ್ಳಿನ ಗಿಡಗಳ ನಡುವೆ ಸಂಚಾರ; ಶಿಡ್ಲಘಟ್ಟ ಗೌಡನ ಕೆರೆ ಏರಿ ರಸ್ತೆಯಲ್ಲಿ ವಾಹನ ಸವಾರರ ಪರದಾಟ....! ವಾಹನ ದಟ್ಟಣೆ ಹೆಚ್ಚಾದರೂ ಕಿರಿದಾಗಿಯೇ ಉಳಿದ ಗೌಡನ ಕೆರೆ ಏರಿ ರಸ್ತೆ...! ಶಿಡ್ಲಘಟ್ಟ: ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಗರದ ಪ್ರಮುಖ ಸಂಪರ್ಕ ರಸ್ತೆಗಳ ಪೈಕಿ ಒಂದಾದ ಗೌಡನ ಕೆರೆ ಏರಿ ರಸ್ತೆಯ ಅವ್ಯವಸ್ಥೆ ವಾಹನ ಸವಾರರನ್ನು ಆತಂಕಕ್ಕೆ ದೂಡಿದೆ. ವಾಯುಪುತ್ರ ಹೋಟೆಲ್ ಸಮೀಪದಿಂದ ಜಂಗಮಕೋಟೆ, ಕೈವಾರ ಹಾಗೂ ಹೆಚ್.ಕ್ರಾಸ್ ಕಡೆಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯಲ್ಲಿ ಸಂಚಾರ ದಟ್ಟಣೆ ಹೆಚ್ಚಾಗುತ್ತಿದ್ದರೂ, ರಸ್ತೆಯ ಅಗಲ ಮಾತ್ರ ಹಲವು ವರ್ಷಗಳಿಂದ ಬದಲಾಗದೆ ಉಳಿದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಗೌಡನ ಕೆರೆ ಏರಿ ಮೇಲಿನ ರಸ್ತೆ ಸಮೀಪದ ಆನೂರು ಕ್ರಾಸ್ ವರೆಗೂ ಕಿರಿದಾಗಿದ್ದು, ಎರಡು ಬೃಹತ್ ವಾಹನಗಳು ಪರಸ್ಪರ ಎದುರಾದ ಸಂದರ್ಭದಲ್ಲಿ ಸೈಡ್ ನೀಡಲು ಚಾಲಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದೆಡೆ ಕೆರೆ ಏರಿ, ಮತ್ತೊಂದೆಡೆ ರಸ್ತೆ ಬದಿಗೆ ಚಾಚಿಕೊಂಡಿರುವ ಗಿಡಗಂಟಿಗಳಿರುವುದರಿಂದ ವಾಹನಗಳನ್ನು ಬದಿಗೆ ತೆಗೆದುಕೊಳ್ಳುವುದೇ ಸವಾಲಾಗಿದೆ.. ಈ ರಸ್ತೆಯ ಮತ್ತೊಂದು ಪ್ರಮುಖ ಸಮಸ್ಯೆಯೆಂದರೆ ಅಂಕುಡೊಂಕಾದ ರಸ್ತೆಯಲ್ಲಿ ಎಚ್ಚರಿಕೆಯಿಂದ ಸಂಚರಿಸಬೇಕಾದ ಅನಿವಾರ್ಯ, ವಿಶೇಷವಾಗಿ ರಾತ್ರಿ ವೇಳೆಯಲ್ಲಿ ಎದುರಿನಿಂದ ಬರುವ ವಾಹನಗಳು ರಸ್ತೆ ಬದಿಯ ಗಿಡಗಂಟಿಗಳಿಂದಾಗಿ ಅಪಾಯದ ಪರಿಸ್ಥಿತಿ ಮತ್ತಷ್ಟು ಹೆಚ್ಚಾಗಿದೆ. ರಸ್ತೆಯ ಎರಡೂ ಬದಿಗಳಲ್ಲಿ ಜಾಲಿ ಗಿಡಗಳು, ಮುಳ್ಳಿನ ಗಿಡಗಳು ಹಾಗೂ ಗಿಡಗಂಟಿಗಳು ಬೆಳೆದು ರಸ್ತೆ ಕಡೆಗೆ ಚಾಚಿಕೊಂಡಿವೆ. ಎರಡು ವಾಹನಗಳು ಎದುರಾದಾಗ ಸೈಡ್ ನೀಡುವ ಸಂದರ್ಭದಲ್ಲಿ ದ್ವಿಚಕ್ರ ವಾಹನ ಸವಾರರು ಈ ಗಿಡಗಂಟಿಗಳ ನಡುವೆ ಸಂಚರಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಮುಳ್ಳಿನ ಗಿಡಗಳು ಕೈ, ಕಾಲು ಹಾಗೂ ಮುಖಕ್ಕೆ ತಾಗುವ ಸಾಧ್ಯತೆಯಿದ್ದು, ರಾತ್ರಿ ವೇಳೆ ಅವು ಸ್ಪಷ್ಟವಾಗಿ ಕಾಣಿಸದ ಕಾರಣ ಅಪಾಯ ಇನ್ನಷ್ಟು ಹೆಚ್ಚಾಗಿದೆ. ಜಂಗಮಕೋಟೆ, ಕೈವಾರ ಹಾಗೂ ಹೆಚ್.ಕ್ರಾಸ್ ಭಾಗಗಳಿಗೆ ತೆರಳುವ ಸಾರ್ವಜನಿಕರು, ರೈತರು, ವಿದ್ಯಾರ್ಥಿಗಳು ಹಾಗೂ ವಿವಿಧ ಉದ್ಯೋಗಗಳಿಗೆ ತೆರಳುವವರಿಗೆ ಈ ರಸ್ತೆ ಪ್ರಮುಖ ಸಂಪರ್ಕ ಮಾರ್ಗವಾಗಿದೆ. ದಿನದಿಂದ ದಿನಕ್ಕೆ ಈ ಮಾರ್ಗದಲ್ಲಿ ಕಾರು, ಬಸ್, ಲಾರಿ, ಸರಕು ಸಾಗಣೆ ವಾಹನಗಳು ಹಾಗೂ ದ್ವಿಚಕ್ರ ವಾಹನಗಳ ಸಂಚಾರ ಹೆಚ್ಚಾಗುತ್ತಿದೆ. ರೇಷ್ಮೆ ನಗರಿ ಎಂಬ ಹೆಗ್ಗಳಿಕೆ ಹೊಂದಿರುವ ಶಿಡ್ಲಘಟ್ಟದಲ್ಲಿ ರೇಷ್ಮೆ, ಕೃಷಿ ಹಾಗೂ ವ್ಯಾಪಾರ ಚಟುವಟಿಕೆಗಳಿಗೆ ಸಂಬಂಧಿಸಿದ ಸರಕು ಸಾಗಣೆ ವಾಹನಗಳ ಓಡಾಟವೂ ಹೆಚ್ಚಿನ ಪ್ರಮಾಣದಲ್ಲಿದೆ. ಹೀಗಿರುವಾಗ ಇಂತಹ ಪ್ರಮುಖ ಸಂಪರ್ಕ ರಸ್ತೆಯೇ ಕಿರಿದಾಗಿ ಉಳಿದಿರುವುದು ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಗಂಭೀರ ಪ್ರಶ್ನೆ ಮೂಡಿಸಿದೆ. ರಸ್ತೆ ಬದಿಯ ಗಿಡಗಂಟಿಗಳನ್ನು ತೆರವುಗೊಳಿಸಿ, ರಸ್ತೆ ಬದಿಯನ್ನು ಸ್ವಚ್ಛಗೊಳಿಸುವುದರ ಜೊತೆಗೆ ಅಗತ್ಯವಿರುವ ಕಡೆ ರಸ್ತೆ ಅಗಲೀಕರಣಕ್ಕೆ ಕ್ರಮ ಕೈಗೊಳ್ಳಬೇಕು. ಅಪಾಯಕಾರಿ ತಿರುವುಗಳ ಬಳಿ ಸೂಕ್ತ ಎಚ್ಚರಿಕೆ ಫಲಕಗಳನ್ನು ಅಳವಡಿಸುವುದು, ರಾತ್ರಿ ವೇಳೆ ವಾಹನ ಸವಾರರಿಗೆ ರಸ್ತೆ ಸ್ಪಷ್ಟವಾಗಿ ಗೋಚರಿಸುವಂತೆ ಅಗತ್ಯ ಸುರಕ್ಷತಾ ವ್ಯವಸ್ಥೆ ಕಲ್ಪಿಸುವುದು ಸೇರಿದಂತೆ ಮೂಲಭೂತ ಕ್ರಮಗಳನ್ನು ಕೈಗೊಳ್ಳಬೇಕೆಂದು ವಾಹನ ಸವಾರರು ಹಾಗೂ ಸಾರ್ವಜನಿಕರು ಒತ್ತಾಯಿಸಿದ್ದಾರೆ... ಈ ಹಿಂದೆ ಕೂಡ ರಸ್ತೆ ಬದಿಗೆ ಬೆಳೆದಿದ್ದ ಜಾಲಿ ಹಾಗೂ ಮುಳ್ಳಿನ ಗಿಡಗಂಟಿಗಳಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿ, ದ್ವಿಚಕ್ರ ವಾಹನ ಸವಾರರಿಗೆ ಮುಳ್ಳುಗಳು ತಾಗಿ ಗಾಯಗಳಾದ ಘಟನೆಗಳು ನಡೆದಿವೆ ಎನ್ನಲಾಗುತ್ತಿದೆ. ಹೀಗಿದ್ದರೂ ಸಮಸ್ಯೆ ಮುಂದುವರಿದಿರುವುದು ಸಂಬಂಧಪಟ್ಟ ಇಲಾಖೆಯ ನಿರ್ಲಕ್ಷ್ಯಕ್ಕೆ ಕಾರಣವೇ ಎಂಬ ಪ್ರಶ್ನೆಯನ್ನು ಸಾರ್ವಜನಿಕರು ಮುಂದಿಟ್ಟಿದ್ದಾರೆ. ನಗರದ ಪ್ರಮುಖ ಸಂಪರ್ಕ ರಸ್ತೆಯಾಗಿರುವ ಗೌಡನ ಕೆರೆ ಏರಿ ರಸ್ತೆಯ ಸಮಸ್ಯೆ ಸ್ಥಳೀಯ ಆಡಳಿತ ಹಾಗೂ ಸಂಬಂಧಪಟ್ಟ ರಸ್ತೆ ನಿರ್ವಹಣಾ ಇಲಾಖೆಯ ಗಮನಕ್ಕೆ ಬಂದಿಲ್ಲವೇ ಎಂಬ ಪ್ರಶ್ನೆಯೂ ಸಾರ್ವಜನಿಕರಲ್ಲಿ ಮೂಡಿದೆ. ಪ್ರತಿನಿತ್ಯ ನೂರಾರು ವಾಹನಗಳು ಸಂಚರಿಸುವ ಈ ರಸ್ತೆಯಲ್ಲಿ ದೊಡ್ಡ ಮಟ್ಟದ ಅಪಘಾತ ಸಂಭವಿಸುವ ಮುನ್ನವೇ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕೆಂಬ ಆಗ್ರಹ ಕೇಳಿಬಂದಿದೆ. ಅಪಘಾತ ಸಂಭವಿಸಿದ ನಂತರ ಕ್ರಮ ಕೈಗೊಳ್ಳುವ ಬದಲು, ಅಪಾಯದ ಮುನ್ಸೂಚನೆ ಇರುವ ಸಂದರ್ಭದಲ್ಲೇ ರಸ್ತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಗೌಡನ ಕೆರೆ ಏರಿ ರಸ್ತೆಯನ್ನು ಸುಗಮ ಹಾಗೂ ಸುರಕ್ಷಿತ ಸಂಚಾರಕ್ಕೆ ಅನುಕೂಲವಾಗುವಂತೆ ಅಭಿವೃದ್ಧಿಪಡಿಸುವ ಮೂಲಕ ಸಾರ್ವಜನಿಕರ ಬಹುದಿನಗಳ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕಿದೆ. ವಾಹನಗಳ ಸಂಖ್ಯೆ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ರಸ್ತೆ ಮಾತ್ರ ಹಿಂದಿನ ಸ್ಥಿತಿಯಲ್ಲೇ ಉಳಿದರೆ ಮುಂದಿನ ದಿನಗಳಲ್ಲಿ ಸಂಚಾರ ದಟ್ಟಣೆ ಹಾಗೂ ಅಪಘಾತದ ಅಪಾಯ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸ್ಥಳ ಪರಿಶೀಲನೆ ನಡೆಸಿ ರಸ್ತೆ ಅಗಲೀಕರಣ, ಗಿಡಗಂಟಿಗಳ ತೆರವು ಹಾಗೂ ಅಗತ್ಯ ಸುರಕ್ಷತಾ ಕ್ರಮಗಳಿಗೆ ಮುಂದಾಗಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ...
ಮುಳ್ಳಿನ ಗಿಡಗಳ ನಡುವೆ ಸಂಚಾರ; ಶಿಡ್ಲಘಟ್ಟ ಗೌಡನ ಕೆರೆ ಏರಿ ರಸ್ತೆಯಲ್ಲಿ ವಾಹನ ಸವಾರರ ಪರದಾಟ....! ವಾಹನ ದಟ್ಟಣೆ ಹೆಚ್ಚಾದರೂ ಕಿರಿದಾಗಿಯೇ ಉಳಿದ ಗೌಡನ ಕೆರೆ ಏರಿ ರಸ್ತೆ...! ಶಿಡ್ಲಘಟ್ಟ: ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಗರದ ಪ್ರಮುಖ ಸಂಪರ್ಕ ರಸ್ತೆಗಳ ಪೈಕಿ ಒಂದಾದ ಗೌಡನ ಕೆರೆ ಏರಿ ರಸ್ತೆಯ ಅವ್ಯವಸ್ಥೆ ವಾಹನ ಸವಾರರನ್ನು ಆತಂಕಕ್ಕೆ ದೂಡಿದೆ. ವಾಯುಪುತ್ರ ಹೋಟೆಲ್ ಸಮೀಪದಿಂದ ಜಂಗಮಕೋಟೆ, ಕೈವಾರ ಹಾಗೂ ಹೆಚ್.ಕ್ರಾಸ್ ಕಡೆಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯಲ್ಲಿ ಸಂಚಾರ ದಟ್ಟಣೆ ಹೆಚ್ಚಾಗುತ್ತಿದ್ದರೂ, ರಸ್ತೆಯ ಅಗಲ ಮಾತ್ರ ಹಲವು ವರ್ಷಗಳಿಂದ ಬದಲಾಗದೆ ಉಳಿದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಗೌಡನ ಕೆರೆ ಏರಿ ಮೇಲಿನ ರಸ್ತೆ ಸಮೀಪದ ಆನೂರು ಕ್ರಾಸ್ ವರೆಗೂ ಕಿರಿದಾಗಿದ್ದು, ಎರಡು ಬೃಹತ್ ವಾಹನಗಳು ಪರಸ್ಪರ ಎದುರಾದ ಸಂದರ್ಭದಲ್ಲಿ ಸೈಡ್ ನೀಡಲು ಚಾಲಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದೆಡೆ ಕೆರೆ ಏರಿ, ಮತ್ತೊಂದೆಡೆ ರಸ್ತೆ ಬದಿಗೆ ಚಾಚಿಕೊಂಡಿರುವ ಗಿಡಗಂಟಿಗಳಿರುವುದರಿಂದ ವಾಹನಗಳನ್ನು ಬದಿಗೆ ತೆಗೆದುಕೊಳ್ಳುವುದೇ ಸವಾಲಾಗಿದೆ.. ಈ ರಸ್ತೆಯ ಮತ್ತೊಂದು ಪ್ರಮುಖ ಸಮಸ್ಯೆಯೆಂದರೆ ಅಂಕುಡೊಂಕಾದ ರಸ್ತೆಯಲ್ಲಿ ಎಚ್ಚರಿಕೆಯಿಂದ ಸಂಚರಿಸಬೇಕಾದ ಅನಿವಾರ್ಯ, ವಿಶೇಷವಾಗಿ ರಾತ್ರಿ ವೇಳೆಯಲ್ಲಿ ಎದುರಿನಿಂದ ಬರುವ ವಾಹನಗಳು ರಸ್ತೆ ಬದಿಯ ಗಿಡಗಂಟಿಗಳಿಂದಾಗಿ ಅಪಾಯದ ಪರಿಸ್ಥಿತಿ ಮತ್ತಷ್ಟು ಹೆಚ್ಚಾಗಿದೆ. ರಸ್ತೆಯ ಎರಡೂ ಬದಿಗಳಲ್ಲಿ ಜಾಲಿ ಗಿಡಗಳು, ಮುಳ್ಳಿನ ಗಿಡಗಳು ಹಾಗೂ ಗಿಡಗಂಟಿಗಳು ಬೆಳೆದು ರಸ್ತೆ ಕಡೆಗೆ ಚಾಚಿಕೊಂಡಿವೆ. ಎರಡು ವಾಹನಗಳು ಎದುರಾದಾಗ
ಸೈಡ್ ನೀಡುವ ಸಂದರ್ಭದಲ್ಲಿ ದ್ವಿಚಕ್ರ ವಾಹನ ಸವಾರರು ಈ ಗಿಡಗಂಟಿಗಳ ನಡುವೆ ಸಂಚರಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಮುಳ್ಳಿನ ಗಿಡಗಳು ಕೈ, ಕಾಲು ಹಾಗೂ ಮುಖಕ್ಕೆ ತಾಗುವ ಸಾಧ್ಯತೆಯಿದ್ದು, ರಾತ್ರಿ ವೇಳೆ ಅವು ಸ್ಪಷ್ಟವಾಗಿ ಕಾಣಿಸದ ಕಾರಣ ಅಪಾಯ ಇನ್ನಷ್ಟು ಹೆಚ್ಚಾಗಿದೆ. ಜಂಗಮಕೋಟೆ, ಕೈವಾರ ಹಾಗೂ ಹೆಚ್.ಕ್ರಾಸ್ ಭಾಗಗಳಿಗೆ ತೆರಳುವ ಸಾರ್ವಜನಿಕರು, ರೈತರು, ವಿದ್ಯಾರ್ಥಿಗಳು ಹಾಗೂ ವಿವಿಧ ಉದ್ಯೋಗಗಳಿಗೆ ತೆರಳುವವರಿಗೆ ಈ ರಸ್ತೆ ಪ್ರಮುಖ ಸಂಪರ್ಕ ಮಾರ್ಗವಾಗಿದೆ. ದಿನದಿಂದ ದಿನಕ್ಕೆ ಈ ಮಾರ್ಗದಲ್ಲಿ ಕಾರು, ಬಸ್, ಲಾರಿ, ಸರಕು ಸಾಗಣೆ ವಾಹನಗಳು ಹಾಗೂ ದ್ವಿಚಕ್ರ ವಾಹನಗಳ ಸಂಚಾರ ಹೆಚ್ಚಾಗುತ್ತಿದೆ. ರೇಷ್ಮೆ ನಗರಿ ಎಂಬ ಹೆಗ್ಗಳಿಕೆ ಹೊಂದಿರುವ ಶಿಡ್ಲಘಟ್ಟದಲ್ಲಿ ರೇಷ್ಮೆ, ಕೃಷಿ ಹಾಗೂ ವ್ಯಾಪಾರ ಚಟುವಟಿಕೆಗಳಿಗೆ ಸಂಬಂಧಿಸಿದ ಸರಕು ಸಾಗಣೆ ವಾಹನಗಳ ಓಡಾಟವೂ ಹೆಚ್ಚಿನ ಪ್ರಮಾಣದಲ್ಲಿದೆ. ಹೀಗಿರುವಾಗ ಇಂತಹ ಪ್ರಮುಖ ಸಂಪರ್ಕ ರಸ್ತೆಯೇ ಕಿರಿದಾಗಿ ಉಳಿದಿರುವುದು ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಗಂಭೀರ ಪ್ರಶ್ನೆ ಮೂಡಿಸಿದೆ. ರಸ್ತೆ ಬದಿಯ ಗಿಡಗಂಟಿಗಳನ್ನು ತೆರವುಗೊಳಿಸಿ, ರಸ್ತೆ ಬದಿಯನ್ನು ಸ್ವಚ್ಛಗೊಳಿಸುವುದರ ಜೊತೆಗೆ ಅಗತ್ಯವಿರುವ ಕಡೆ ರಸ್ತೆ ಅಗಲೀಕರಣಕ್ಕೆ ಕ್ರಮ ಕೈಗೊಳ್ಳಬೇಕು. ಅಪಾಯಕಾರಿ ತಿರುವುಗಳ ಬಳಿ ಸೂಕ್ತ ಎಚ್ಚರಿಕೆ ಫಲಕಗಳನ್ನು ಅಳವಡಿಸುವುದು, ರಾತ್ರಿ ವೇಳೆ ವಾಹನ ಸವಾರರಿಗೆ ರಸ್ತೆ ಸ್ಪಷ್ಟವಾಗಿ ಗೋಚರಿಸುವಂತೆ ಅಗತ್ಯ ಸುರಕ್ಷತಾ ವ್ಯವಸ್ಥೆ ಕಲ್ಪಿಸುವುದು ಸೇರಿದಂತೆ ಮೂಲಭೂತ ಕ್ರಮಗಳನ್ನು ಕೈಗೊಳ್ಳಬೇಕೆಂದು ವಾಹನ ಸವಾರರು ಹಾಗೂ ಸಾರ್ವಜನಿಕರು ಒತ್ತಾಯಿಸಿದ್ದಾರೆ... ಈ ಹಿಂದೆ ಕೂಡ ರಸ್ತೆ ಬದಿಗೆ ಬೆಳೆದಿದ್ದ ಜಾಲಿ
ಹಾಗೂ ಮುಳ್ಳಿನ ಗಿಡಗಂಟಿಗಳಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿ, ದ್ವಿಚಕ್ರ ವಾಹನ ಸವಾರರಿಗೆ ಮುಳ್ಳುಗಳು ತಾಗಿ ಗಾಯಗಳಾದ ಘಟನೆಗಳು ನಡೆದಿವೆ ಎನ್ನಲಾಗುತ್ತಿದೆ. ಹೀಗಿದ್ದರೂ ಸಮಸ್ಯೆ ಮುಂದುವರಿದಿರುವುದು ಸಂಬಂಧಪಟ್ಟ ಇಲಾಖೆಯ ನಿರ್ಲಕ್ಷ್ಯಕ್ಕೆ ಕಾರಣವೇ ಎಂಬ ಪ್ರಶ್ನೆಯನ್ನು ಸಾರ್ವಜನಿಕರು ಮುಂದಿಟ್ಟಿದ್ದಾರೆ. ನಗರದ ಪ್ರಮುಖ ಸಂಪರ್ಕ ರಸ್ತೆಯಾಗಿರುವ ಗೌಡನ ಕೆರೆ ಏರಿ ರಸ್ತೆಯ ಸಮಸ್ಯೆ ಸ್ಥಳೀಯ ಆಡಳಿತ ಹಾಗೂ ಸಂಬಂಧಪಟ್ಟ ರಸ್ತೆ ನಿರ್ವಹಣಾ ಇಲಾಖೆಯ ಗಮನಕ್ಕೆ ಬಂದಿಲ್ಲವೇ ಎಂಬ ಪ್ರಶ್ನೆಯೂ ಸಾರ್ವಜನಿಕರಲ್ಲಿ ಮೂಡಿದೆ. ಪ್ರತಿನಿತ್ಯ ನೂರಾರು ವಾಹನಗಳು ಸಂಚರಿಸುವ ಈ ರಸ್ತೆಯಲ್ಲಿ ದೊಡ್ಡ ಮಟ್ಟದ ಅಪಘಾತ ಸಂಭವಿಸುವ ಮುನ್ನವೇ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕೆಂಬ ಆಗ್ರಹ ಕೇಳಿಬಂದಿದೆ. ಅಪಘಾತ ಸಂಭವಿಸಿದ ನಂತರ ಕ್ರಮ ಕೈಗೊಳ್ಳುವ ಬದಲು, ಅಪಾಯದ ಮುನ್ಸೂಚನೆ ಇರುವ ಸಂದರ್ಭದಲ್ಲೇ ರಸ್ತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಗೌಡನ ಕೆರೆ ಏರಿ ರಸ್ತೆಯನ್ನು ಸುಗಮ ಹಾಗೂ ಸುರಕ್ಷಿತ ಸಂಚಾರಕ್ಕೆ ಅನುಕೂಲವಾಗುವಂತೆ ಅಭಿವೃದ್ಧಿಪಡಿಸುವ ಮೂಲಕ ಸಾರ್ವಜನಿಕರ ಬಹುದಿನಗಳ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕಿದೆ. ವಾಹನಗಳ ಸಂಖ್ಯೆ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ರಸ್ತೆ ಮಾತ್ರ ಹಿಂದಿನ ಸ್ಥಿತಿಯಲ್ಲೇ ಉಳಿದರೆ ಮುಂದಿನ ದಿನಗಳಲ್ಲಿ ಸಂಚಾರ ದಟ್ಟಣೆ ಹಾಗೂ ಅಪಘಾತದ ಅಪಾಯ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸ್ಥಳ ಪರಿಶೀಲನೆ ನಡೆಸಿ ರಸ್ತೆ ಅಗಲೀಕರಣ, ಗಿಡಗಂಟಿಗಳ ತೆರವು ಹಾಗೂ ಅಗತ್ಯ ಸುರಕ್ಷತಾ ಕ್ರಮಗಳಿಗೆ ಮುಂದಾಗಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ...
- ಶಿಡ್ಲಘಟ್ಟ ದಲ್ಲಿ ಭೀಕರ ಅಪಘಾತ ಒಬ್ಬ ವ್ಯಕ್ತಿ ಸಾವು ಮತ್ತೊಬ್ಬ ಗಂಬೀರ ಟಾಕ್ಸಿಕ್ ಸಿನಿಮಾ ನೋಡಲು ಹೋದಾಗ ನಡೆದ ಘಟನೆ1
- ಶಿಡ್ಲಘಟ್ಟದ ಹಂಡಿಗನಾಳ ಬಳಿ ಭೀಕರ ಅಪಘಾತ ; ಓರ್ವ ವ್ಯಕ್ತಿ ಸಾವು1
- ಶಿಡ್ಲಘಟ್ಟ ತಾಲ್ಲೂಕಿನ ಹಂಡಿಗನಾಳದ ಬಳಿ ಭೀಕರ ಅಪಘಾತ : ಓರ್ವ ವ್ಯಕ್ತಿ ಸಾವು! ಹಂಡಿಗನಾಳ ಸೇತುವೆ ಬಳಿ ಅಪಘಾತ; ಓರ್ವ ಸಾವು...!ಶಿಡ್ಲಘಟ್ಟ ತಾಲೂಕಿನ ಹಂಡಿಗನಾಳ ಗ್ರಾಮದ ಸೇತುವೆ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಇಬ್ಬರು ವ್ಯಕ್ತಿಗಳ ಪೈಕಿ ಓರ್ವ ಮೃತಪಟ್ಟಿರುವ ಘಟನೆ ನಡೆದಿದೆ.1
- ಝೆಡ್ ನ್ಯೂಸ್ ಎಂ ಡಿ ಮನ್ಸೂರ್ ಅಹ್ಮದ್ ಚಿಂತಾಮಣಿ ವಾಣಿಜ್ಯ ನಗರಿ ಚಿಂತಾಮಣಿಯಲ್ಲಿ ಈದ್ ಮಿಲಾದ್ ಸಂಭ್ರಮ:ಪ್ರವಾದಿ ಪೈಗಂಬರರ ಜನ್ಮದಿನಾಚರಣೆ1
- ಈದ್ ಮಿಲಾದ್ ಅಂಗವಾಗಿ ಹೊಸಕೋಟೆಯಲ್ಲಿ ಬೃಹತ್ ಮೆರವಣಿಗೆ ಪ್ರವಾದಿ ಮೊಹಮ್ಮದ್ ಅವರ ಆದರ್ಶಗಳನ್ನು ಸಾರುವ ಸ್ಥಬ್ಧ ಚಿತ್ರಗಳನ್ನು ಹೊಸಕೋಟೆ: ಈದ್ ಮಿಲಾದ್ ಹಬ್ಬದ ಅಂಗವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ನಗರದಲ್ಲಿ ಅದ್ದೂರಿ ಬೃಹತ್ ಮೆರವಣಿಗೆ ನಡೆಯಿತು. ನಗರದ ಹಳೆ ಬಸ್ ನಿಲ್ದಾಣದಿಂದ ಆರಂಭವಾದ ಮೆರವಣಿಗೆ, ಪ್ರಮುಖ ರಸ್ತೆಗಳಲ್ಲಿ ಸಾಗಿತು. ಪ್ರವಾದಿ ಮೊಹಮ್ಮದ್ ಅವರ ಆದರ್ಶಗಳನ್ನು ಸಾರುವ ಸ್ಥಬ್ಧ ಚಿತ್ರಗಳನ್ನು ಮೆರವಣಿಗೆಯಲ್ಲಿ ಪ್ರದರ್ಶಿಸಲಾಯಿತು. ಜಾಮೀಯಾ ಮಸೀದಿ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಮೆರವಣಿಗೆಗೆ ಮುಸ್ಲಿಂ ಮುಖಂಡರು ನೇತೃತ್ವ ವಹಿಸಿದ್ದರು. ಮಹಿಳೆಯರು, ಮಕ್ಕಳು ಸೇರಿದಂತೆ ಹಿಂದೂ-ಮುಸ್ಲಿಂ ಸಮುದಾಯದ ಮುಖಂಡರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದರು. ಡಿವೈಎಸ್ಪಿ ನೇತೃತ್ವದಲ್ಲಿ 400ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು.4
- ಎಂ. ಶ್ರೀನಿವಾಸನ್ ಸ್ಮರಣಾರ್ಥ ಆ.27ರಂದು ಶ್ರೀನಿವಾಸಪುರದಲ್ಲಿ ಬಡ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ.. ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಎಸ್‌ಎಸ್‌ಎಲ್‌ಸಿ, ಪಿಯುಸಿ ಸಾಧಕರಿಗೆ ಸನ್ಮಾನ ಹಾಗೂ ಸಹಾಯಧನ ಪ್ರತಿ ಹೋಬಳಿಯ ಇಬ್ಬರು ಬಡ ಎಸ್‌ಸಿ ವಿದ್ಯಾರ್ಥಿಗಳಿಗೆ ನೆರವು.1
- MBBS students felicitation function1
- ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹುಸಿ ಬಾಂಬ್ ಬೆದರಿಕೆ ಟರ್ಮಿನಲ್-1ರಲ್ಲಿ ಹುಸಿ ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ಭದ್ರತಾ ಸಿಬ್ಬಂದಿಯಿಂದ ಕಟ್ಟೆಚ್ಚರ ದೇವನಹಳ್ಳಿ :ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹುಸಿ ಬಾಂಬ್ ಬೆದರಿಕೆ ಟರ್ಮಿನಲ್-1ರಲ್ಲಿ ಹುಸಿ ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ಭದ್ರತಾ ಸಿಬ್ಬಂದಿಯಿಂದ ಕಟ್ಟೆಚ್ಚರ ಲಖನೌದಿಂದ ಬೆಂಗಳೂರಿಗೆ ಆಗಮಿಸಿದ 6E-231 ವಿಮಾನಕ್ಕೆ ಬಾಂಬ್ ಹುಸಿ ಬೆದರಿಕೆ ಕರೆ ಅನಾಮಧೇಯ ವ್ಯಕ್ತಿಯಿಂದ ಬಾಂಬ್ ಬೆದರಿಕೆ. ಬಾಂಬ್ ಬೆದರಿಕೆ ಮಾಹಿತಿ ಹಿನ್ನೆಲೆಯಲ್ಲಿ ಟರ್ಮಿನಲ್-1ರ ಟರ್ಮಿನಲ್ ಮ್ಯಾನೇಜರ್ ಕಚೇರಿಯಲ್ಲಿ BTAC ಸಭೆ ಬೆದರಿಕೆ ಆಧರಿಸಿ ಅಗತ್ಯ ಭದ್ರತಾ ಕ್ರಮವಹಿಸಿ ತಪಾಸಣೆ ವಿಮಾನ ಹಾಗೂ ಟರ್ಮಿನಲ್ ಪ್ರದೇಶದಲ್ಲಿ ಸಿಐಎಸ್ಎಫ್ ಸಿಬ್ಬಂದಿಯಿಂದ ತೀವ್ರ ಭದ್ರತೆ ಪರಿಶೀಲನೆ ಪ್ರಯಾಣಿಕರ ಸುರಕ್ಷತೆಗಾಗಿ ಏರ್‌ಪೋರ್ಟ್‌ನಲ್ಲಿ ಕಟ್ಟೆಚ್ಚರವಹಿಸಿ ನಿಗಾ ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ3