logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಕಡೂರು ತಾಲ್ಲೂಕಿನ ಎಮ್ಮೆದೊಡ್ಡಿ ಭಾಗ-2ರ ಪ್ರದೇಶವನ್ನು 1963ರ ಅರಣ್ಯ ಕಾಯ್ದೆಯಡಿ ಅಧಿಸೂಚಿತ ಅರಣ್ಯ ಪ್ರದೇಶವನ್ನಾಗಿ ಮಾಡಲು ಸರ್ಕಾರಕ್ಕೆ ಸಲ್ಲಿಸಿರುವ ವರದಿಯನ್ನು ಕೈಬಿಡಬೇಕೆಂದು ರೈತಪರ ಹೋರಾಟ ವೇದಿಕೆ ಅಧ್ಯಕ್ಷ ಸಿ.ಸೋಮಶೇಖರ್ ಒತ್ತಾಯಿಸಿದ್ದಾರೆ. ಗುರುವಾರ ಎಮ್ಮೆದೊಡ್ಡಿಯಲ್ಲಿ ರೈತರೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಅರಣ್ಯ ವ್ಯವಸ್ಥಾಪನಾ ಅಧಿಕಾರಿಗಳು ಈಗಾಗಲೇ ಕರ್ನಾಟಕ ಅರಣ್ಯ ಕಾಯ್ದೆಯಡಿ ಎಮ್ಮೆದೊಡ್ಡಿ ಕಾವಲು ಗ್ರಾಮದ 13 ಸಾವಿರ ಎಕರೆ ಪ್ರದೇಶವನ್ನು ಎಮ್ಮೆದೊಡ್ಡಿ ಬ್ಲಾಕ್ ಮೀಸಲು ಅರಣ್ಯವಾಗಿ ರಚಿಸಿಕೊಂಡಿದ್ದಾರೆ ಎಂದು ತಿಳಿಸಿದರು. ಇದರಲ್ಲಿ ಎಮ್ಮೆದೊಡ್ಡಿ ಭಾಗ-1ರಲ್ಲಿ 8,500 ಎಕರೆ ಪ್ರದೇಶ ಅರಣ್ಯ ಪ್ರದೇಶವಾಗಿ ಒಳಗೊಂಡಿದ್ದು, ಉಳಿದ 4,500 ಎಕರೆ ಮೀಸಲು ಅರಣ್ಯವಲ್ಲದ ಪ್ರದೇಶವನ್ನು ಮುಂದಿನ ದಿನಗಳಲ್ಲಿ ಅರಣ್ಯ ಪ್ರದೇಶವಾಗಿಸುವ ಉದ್ದೇಶದಿಂದ ಆದೇಶ ಮಾಡಲು ಹೊರಟಿರುವ ಅಧಿಕಾರಿಗಳ ನಡೆ ಈ ಭಾಗದ ರೈತರಿಗೆ ಮರಣಶಾಸನವಾಗಿ ಪರಿಣಮಿಸಲಿದೆ ಎಂದು ಅವರು ಎಚ್ಚರಿಸಿದರು. ಈ ಆದೇಶವಾಗುವ ವರದಿಯನ್ನು ಸರಿಪಡಿಸಿ, ಎಮ್ಮೆದೊಡ್ಡಿ ಭಾಗ-1ರಲ್ಲಿಯೇ ಪೂರ್ಣ ಪ್ರಮಾಣದ ಮೀಸಲು ಅರಣ್ಯ ಪ್ರದೇಶವೆಂದು ಘೋಷಿಸಬೇಕು ಎಂಬುದು ರೈತರ ಆಗ್ರಹವಾಗಿದೆ. ಈ ಭಾಗದ ರೈತರು ಇಲ್ಲಿನ ನೆಲದೊಂದಿಗೆ ತಮ್ಮ ಬದುಕನ್ನು ಕಟ್ಟಿಕೊಂಡಿದ್ದು, ಅರಣ್ಯ ಇಲಾಖೆಯು ಭಾಗ-2ರ ನಡಾವಳಿಯ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿರುವ ಪರಿಣಾಮದಿಂದ ಇಲ್ಲಿನ ಗ್ರಾಮಗಳು ಕಂದಾಯ ಗ್ರಾಮಗಳಾಗದೆ ಉಳಿದುಬಿಡುತ್ತವೆ. ಇದರಿಂದ ಭವಿಷ್ಯದಲ್ಲಿ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ವಂಚಿತರಾಗಿ, ಹಲವಾರು ಸವಲತ್ತುಗಳು ದೊರೆಯದೆ ಸಾಕಷ್ಟು ಸಮಸ್ಯೆಗಳು ಶಾಶ್ವತವಾಗಿ ಉಳಿಯಲಿವೆ ಎಂದು ಸಿ.ಸೋಮಶೇಖರ್ ತಿಳಿಸಿದರು. ಈ ಅವೈಜ್ಞಾನಿಕವಾದ ಎಮ್ಮೆದೊಡ್ಡಿ-ಭಾಗ 2ರ ನಡಾವಳಿ ಆದೇಶ ಮಾಡಲು ಮುಂದಾಗಿರುವ ವರದಿಯನ್ನು ಹಿಂಪಡೆದು, ರೈತರ ಹಿತ ಕಾಪಾಡಬೇಕಿದೆ ಎಂದು ಅವರು ಒತ್ತಾಯಿಸಿದರು. ಈ ಬಗ್ಗೆ ಅಧಿಕಾರಿಗಳು ಸೂಕ್ತ ಮರುಪರಿಶೀಲನೆ ನಡೆಸಿ ರೈತರಿಗೆ ನ್ಯಾಯ ಒದಗಿಸಿಕೊಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಅರಣ್ಯ ಇಲಾಖೆಯ ವಿರುದ್ಧ ಹೋರಾಟದ ಸ್ವರೂಪ ತೀವ್ರಗೊಳ್ಳಲಿದೆ ಎಂದು ಸಿ.ಸೋಮಶೇಖರ್ ಎಚ್ಚರಿಕೆ ನೀಡಿದರು. ಗ್ರಾಪಂ ಮಾಜಿ ಅಧ್ಯಕ್ಷ ಛಾಯಾಪತಿ ಮಾತನಾಡಿ, ಹಲವಾರು ವರ್ಷಗಳಿಂದ ಸಮಸ್ಯೆಯನ್ನು ಎದುರಿಸುತ್ತಿರುವ ರೈತರಿಗೆ ಅರಣ್ಯ ಕಾಯ್ದೆಯಡಿ ಅನುಷ್ಠಾನಗೊಳ್ಳುವ ಆದೇಶಗಳು ಬದುಕಿಗೆ ಮಾರಕವಾಗುತ್ತಿದ್ದು, ಇದರಿಂದ ಬದುಕಿನ ಆಸೆಯನ್ನೇ ಕಳೆದುಕೊಂಡಂತಾಗಿದೆ ಎಂದರು. ಸಮಸ್ಯೆ ಬಗೆಹರಿಯದಿದ್ದಲ್ಲಿ ಮುಂಬರಲಿರುವ ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಬಹಿಷ್ಕರಿಸುವ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದ ಅವರು, ಜನಪ್ರತಿನಿಧಿಗಳು ಎಮ್ಮೆದೊಡ್ಡಿ ಭಾಗದ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ರೈತರಿಗೆ ನ್ಯಾಯ ಒದಗಿಸಿಕೊಡಬೇಕಿದೆ ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ರೈತ ಮುಖಂಡರಾದ ಕೆ.ವೆಂಕಟೇಶರೆಡ್ಡಿ, ಕೆ. ಹನುಮಂತಪ್ಪ, ಕುಮಾರನಾಯ್ಕ, ಮಂಜಭೋವಿ, ಗೋವಿಂದಪ್ಪ, ಚೇತನ್, ಆನಂದ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

2 hrs ago
user_Kadur News
Kadur News
ಪತ್ರಕರ್ತ Kadur, Chikkamagaluru•
2 hrs ago

ಕಡೂರು ತಾಲ್ಲೂಕಿನ ಎಮ್ಮೆದೊಡ್ಡಿ ಭಾಗ-2ರ ಪ್ರದೇಶವನ್ನು 1963ರ ಅರಣ್ಯ ಕಾಯ್ದೆಯಡಿ ಅಧಿಸೂಚಿತ ಅರಣ್ಯ ಪ್ರದೇಶವನ್ನಾಗಿ ಮಾಡಲು ಸರ್ಕಾರಕ್ಕೆ ಸಲ್ಲಿಸಿರುವ ವರದಿಯನ್ನು ಕೈಬಿಡಬೇಕೆಂದು ರೈತಪರ ಹೋರಾಟ ವೇದಿಕೆ ಅಧ್ಯಕ್ಷ ಸಿ.ಸೋಮಶೇಖರ್ ಒತ್ತಾಯಿಸಿದ್ದಾರೆ. ಗುರುವಾರ ಎಮ್ಮೆದೊಡ್ಡಿಯಲ್ಲಿ ರೈತರೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಅರಣ್ಯ ವ್ಯವಸ್ಥಾಪನಾ ಅಧಿಕಾರಿಗಳು ಈಗಾಗಲೇ ಕರ್ನಾಟಕ ಅರಣ್ಯ ಕಾಯ್ದೆಯಡಿ ಎಮ್ಮೆದೊಡ್ಡಿ ಕಾವಲು ಗ್ರಾಮದ 13 ಸಾವಿರ ಎಕರೆ ಪ್ರದೇಶವನ್ನು ಎಮ್ಮೆದೊಡ್ಡಿ ಬ್ಲಾಕ್ ಮೀಸಲು ಅರಣ್ಯವಾಗಿ ರಚಿಸಿಕೊಂಡಿದ್ದಾರೆ ಎಂದು ತಿಳಿಸಿದರು. ಇದರಲ್ಲಿ ಎಮ್ಮೆದೊಡ್ಡಿ ಭಾಗ-1ರಲ್ಲಿ 8,500 ಎಕರೆ ಪ್ರದೇಶ ಅರಣ್ಯ ಪ್ರದೇಶವಾಗಿ ಒಳಗೊಂಡಿದ್ದು, ಉಳಿದ 4,500 ಎಕರೆ ಮೀಸಲು ಅರಣ್ಯವಲ್ಲದ ಪ್ರದೇಶವನ್ನು ಮುಂದಿನ ದಿನಗಳಲ್ಲಿ ಅರಣ್ಯ ಪ್ರದೇಶವಾಗಿಸುವ ಉದ್ದೇಶದಿಂದ ಆದೇಶ ಮಾಡಲು ಹೊರಟಿರುವ ಅಧಿಕಾರಿಗಳ ನಡೆ ಈ ಭಾಗದ

0a880c95-6995-4f9a-a484-04d2989f4fca

ರೈತರಿಗೆ ಮರಣಶಾಸನವಾಗಿ ಪರಿಣಮಿಸಲಿದೆ ಎಂದು ಅವರು ಎಚ್ಚರಿಸಿದರು. ಈ ಆದೇಶವಾಗುವ ವರದಿಯನ್ನು ಸರಿಪಡಿಸಿ, ಎಮ್ಮೆದೊಡ್ಡಿ ಭಾಗ-1ರಲ್ಲಿಯೇ ಪೂರ್ಣ ಪ್ರಮಾಣದ ಮೀಸಲು ಅರಣ್ಯ ಪ್ರದೇಶವೆಂದು ಘೋಷಿಸಬೇಕು ಎಂಬುದು ರೈತರ ಆಗ್ರಹವಾಗಿದೆ. ಈ ಭಾಗದ ರೈತರು ಇಲ್ಲಿನ ನೆಲದೊಂದಿಗೆ ತಮ್ಮ ಬದುಕನ್ನು ಕಟ್ಟಿಕೊಂಡಿದ್ದು, ಅರಣ್ಯ ಇಲಾಖೆಯು ಭಾಗ-2ರ ನಡಾವಳಿಯ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿರುವ ಪರಿಣಾಮದಿಂದ ಇಲ್ಲಿನ ಗ್ರಾಮಗಳು ಕಂದಾಯ ಗ್ರಾಮಗಳಾಗದೆ ಉಳಿದುಬಿಡುತ್ತವೆ. ಇದರಿಂದ ಭವಿಷ್ಯದಲ್ಲಿ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ವಂಚಿತರಾಗಿ, ಹಲವಾರು ಸವಲತ್ತುಗಳು ದೊರೆಯದೆ ಸಾಕಷ್ಟು ಸಮಸ್ಯೆಗಳು ಶಾಶ್ವತವಾಗಿ ಉಳಿಯಲಿವೆ ಎಂದು ಸಿ.ಸೋಮಶೇಖರ್ ತಿಳಿಸಿದರು. ಈ ಅವೈಜ್ಞಾನಿಕವಾದ ಎಮ್ಮೆದೊಡ್ಡಿ-ಭಾಗ 2ರ ನಡಾವಳಿ ಆದೇಶ ಮಾಡಲು ಮುಂದಾಗಿರುವ ವರದಿಯನ್ನು ಹಿಂಪಡೆದು, ರೈತರ ಹಿತ ಕಾಪಾಡಬೇಕಿದೆ ಎಂದು ಅವರು ಒತ್ತಾಯಿಸಿದರು. ಈ ಬಗ್ಗೆ ಅಧಿಕಾರಿಗಳು ಸೂಕ್ತ ಮರುಪರಿಶೀಲನೆ

a1221c50-62b0-4634-8803-667ba4627689

ನಡೆಸಿ ರೈತರಿಗೆ ನ್ಯಾಯ ಒದಗಿಸಿಕೊಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಅರಣ್ಯ ಇಲಾಖೆಯ ವಿರುದ್ಧ ಹೋರಾಟದ ಸ್ವರೂಪ ತೀವ್ರಗೊಳ್ಳಲಿದೆ ಎಂದು ಸಿ.ಸೋಮಶೇಖರ್ ಎಚ್ಚರಿಕೆ ನೀಡಿದರು. ಗ್ರಾಪಂ ಮಾಜಿ ಅಧ್ಯಕ್ಷ ಛಾಯಾಪತಿ ಮಾತನಾಡಿ, ಹಲವಾರು ವರ್ಷಗಳಿಂದ ಸಮಸ್ಯೆಯನ್ನು ಎದುರಿಸುತ್ತಿರುವ ರೈತರಿಗೆ ಅರಣ್ಯ ಕಾಯ್ದೆಯಡಿ ಅನುಷ್ಠಾನಗೊಳ್ಳುವ ಆದೇಶಗಳು ಬದುಕಿಗೆ ಮಾರಕವಾಗುತ್ತಿದ್ದು, ಇದರಿಂದ ಬದುಕಿನ ಆಸೆಯನ್ನೇ ಕಳೆದುಕೊಂಡಂತಾಗಿದೆ ಎಂದರು. ಸಮಸ್ಯೆ ಬಗೆಹರಿಯದಿದ್ದಲ್ಲಿ ಮುಂಬರಲಿರುವ ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಬಹಿಷ್ಕರಿಸುವ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದ ಅವರು, ಜನಪ್ರತಿನಿಧಿಗಳು ಎಮ್ಮೆದೊಡ್ಡಿ ಭಾಗದ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ರೈತರಿಗೆ ನ್ಯಾಯ ಒದಗಿಸಿಕೊಡಬೇಕಿದೆ ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ರೈತ ಮುಖಂಡರಾದ ಕೆ.ವೆಂಕಟೇಶರೆಡ್ಡಿ, ಕೆ. ಹನುಮಂತಪ್ಪ, ಕುಮಾರನಾಯ್ಕ, ಮಂಜಭೋವಿ, ಗೋವಿಂದಪ್ಪ, ಚೇತನ್, ಆನಂದ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

More news from ಕರ್ನಾಟಕ and nearby areas
  • ಸುಮಾರು ಹತ್ತು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಎಲ್.ಪಿ.ಸಿ (LPC) ಪ್ರಕರಣದ ಆರೋಪಿ ಪ್ರಸಾದ್ ಎಂಬಾತನನ್ನು ಮಂಗಳೂರು ಉತ್ತರ ಪೊಲೀಸರು ಪತ್ತೆ ಹಚ್ಚಿದ್ದಾರೆ. ಜೂನ್ 24, 2026 ರಂದು ಆರೋಪಿಯನ್ನು ಪತ್ತೆ ಮಾಡಿದ ಮಂಗಳೂರು ಉತ್ತರ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಅವರನ್ನು ಮಾನ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ. ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಆರೋಪಿ ಪ್ರಸಾದ್ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಕಾರಣ, ಮಾನ್ಯ ನ್ಯಾಯಾಲಯವು ಈ ಪ್ರಕರಣವನ್ನು ಎಲ್.ಪಿ.ಸಿ ಪ್ರಕರಣವಾಗಿ ಪರಿವರ್ತಿಸಿತ್ತು. ಇದಲ್ಲದೆ, ಪ್ರಸಾದ್ ವಿರುದ್ಧ ಹಿರಿಯಡ್ಕ, ಕೋಣಾಜೆ ಮತ್ತು ಮಣಿಪಾಲ ಪೊಲೀಸ್ ಠಾಣೆಗಳಲ್ಲಿಯೂ ಪ್ರಕರಣಗಳು ದಾಖಲಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
    1
    ಸುಮಾರು ಹತ್ತು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಎಲ್.ಪಿ.ಸಿ (LPC) ಪ್ರಕರಣದ ಆರೋಪಿ ಪ್ರಸಾದ್ ಎಂಬಾತನನ್ನು ಮಂಗಳೂರು ಉತ್ತರ ಪೊಲೀಸರು ಪತ್ತೆ ಹಚ್ಚಿದ್ದಾರೆ. ಜೂನ್ 24, 2026 ರಂದು ಆರೋಪಿಯನ್ನು ಪತ್ತೆ ಮಾಡಿದ ಮಂಗಳೂರು ಉತ್ತರ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಅವರನ್ನು ಮಾನ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.

ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಆರೋಪಿ ಪ್ರಸಾದ್ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಕಾರಣ, ಮಾನ್ಯ ನ್ಯಾಯಾಲಯವು ಈ ಪ್ರಕರಣವನ್ನು ಎಲ್.ಪಿ.ಸಿ ಪ್ರಕರಣವಾಗಿ ಪರಿವರ್ತಿಸಿತ್ತು. ಇದಲ್ಲದೆ, ಪ್ರಸಾದ್ ವಿರುದ್ಧ ಹಿರಿಯಡ್ಕ, ಕೋಣಾಜೆ ಮತ್ತು ಮಣಿಪಾಲ ಪೊಲೀಸ್ ಠಾಣೆಗಳಲ್ಲಿಯೂ ಪ್ರಕರಣಗಳು ದಾಖಲಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
    user_Shamsheer Budoli
    Shamsheer Budoli
    Local News Reporter ಮಂಗಳೂರು, ದಕ್ಷಿಣ ಕನ್ನಡ, ಕರ್ನಾಟಕ•
    12 hrs ago
  • ಚಳ್ಳಕೆರೆ ವಿಜ್ಞಾನಿ ನಗರದ ಜನರು ತಮ್ಮ ನಿತ್ಯದ ಒತ್ತಡದ ಕೆಲಸದಿಂದ ಮುಕ್ತಿ ಪಡೆಯಲು ಇದೀಗ ಒಂದು ತಿಂಗಳ ಕಾಲ ಮನರಂಜನೆಗೆ ಮುಕ್ತ ಅವಕಾಶ ಸಿಕ್ಕಿದೆ. ಚಳ್ಳಕೆರೆ ನಗರದ ವಾಲ್ಮೀಕಿ ಸರ್ಕಲ್ ಬಳಿ, ಕುಂಚಿಟಿಗರ ವಾಣಿಜ್ಯ ಮಳಿಗೆಗಳ ಹಿಂಭಾಗದ ಆವರಣದಲ್ಲಿ 'ದುಬೈ ಸಿಟಿ ಎಕ್ಸಿಬಿಷನ್ ಚಳ್ಳಕೆರೆ ಉತ್ಸವ' ಇಂದಿನಿಂದ (ಕಳೆದ ಸಂಜೆ 25ರಂದು ಉದ್ಘಾಟನೆಗೊಂಡಿದೆ) ಪ್ರಾರಂಭಗೊಂಡಿದೆ. ಈ ಉತ್ಸವದಲ್ಲಿ ಮಕ್ಕಳ ಮನರಂಜನೆಗಾಗಿ ತಿರುಗುವ ರೈಲು, ಏರೋಪ್ಲೇನ್, ಮೇರಿಗೋ ರೌಂಡ್, ಬೈಕ್, ಕಾರು, ಜಂಪಿಂಗ್ ಮತ್ತು ಬೋಟಿಂಗ್‌ನಂತಹ ಆಟಗಳು ಲಭ್ಯವಿವೆ. ಇದರ ಜೊತೆಗೆ, ಯುವಕ ಯುವತಿಯರಿಗೂ ಇಷ್ಟವಾಗುವ ಟೊರೋಟ ಡಿಸ್ಕೋ ಡಾನ್ಸ್, ಜಾಯಿಂಟ್ ವಿಲ್, ಡ್ರ್ಯಾಗನ್ ಟ್ರೈನ್, ಮತ್ತು ಕೊಲಂಬಸ್‌ನಂತಹ ವಿಶೇಷ ಆಟಗಳೂ ಇವೆ. ಕೌಶಲ್ಯ ಆಟಗಳಾದ ರಿಂಗ್ ಟಾಸ್ ಸಹ ಇದ್ದು, ಇಲ್ಲಿ ಫುಡ್ ಫೆಸ್ಟಿವಲ್ ಕೂಡ ನಡೆಯುತ್ತಿದೆ. ಸಾಕಷ್ಟು ವೈವಿಧ್ಯಮಯ ಆಟಿಕೆಗಳು ಕೂಡ ಇಲ್ಲಿ ಲಭ್ಯವಿವೆ. ಈ ಉತ್ಸವವು ಒಂದು ತಿಂಗಳ ಕಾಲ ನಡೆಯಲಿದ್ದು, ಸಂಜೆಯ ಸಮಯದಲ್ಲಿ ಕೇವಲ ₹30 ಪ್ರವೇಶ ಶುಲ್ಕದೊಂದಿಗೆ ಕುಟುಂಬ ಸಮೇತ ಭೇಟಿ ನೀಡಬಹುದು. ಮಕ್ಕಳನ್ನು ಕರೆತಂದು ವಿವಿಧ ಆಟಗಳಲ್ಲಿ ತೊಡಗಿಸಲು ಇದೊಂದು ಸುವರ್ಣಾವಕಾಶವಾಗಿದೆ. ನಿತ್ಯದ ಒತ್ತಡವನ್ನು ಕಳೆಯಲು, ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳಿಂದ ಸ್ವಲ್ಪ ದಿನ ದೂರವಿರಲು ಚಳ್ಳಕೆರೆ ಜನತೆಗೆ ಇದು ಉತ್ತಮ ಅವಕಾಶ ಒದಗಿಸಿದೆ. ಚಳ್ಳಕೆರೆ ನಗರದಲ್ಲಿ 100% ಮನರಂಜನೆ ನೀಡಲು ಈ 'ಚಳ್ಳಕೆರೆ ಉತ್ಸವ' ಸಜ್ಜಾಗಿದೆ.
    1
    ಚಳ್ಳಕೆರೆ ವಿಜ್ಞಾನಿ ನಗರದ ಜನರು ತಮ್ಮ ನಿತ್ಯದ ಒತ್ತಡದ ಕೆಲಸದಿಂದ ಮುಕ್ತಿ ಪಡೆಯಲು ಇದೀಗ ಒಂದು ತಿಂಗಳ ಕಾಲ ಮನರಂಜನೆಗೆ ಮುಕ್ತ ಅವಕಾಶ ಸಿಕ್ಕಿದೆ. ಚಳ್ಳಕೆರೆ ನಗರದ ವಾಲ್ಮೀಕಿ ಸರ್ಕಲ್ ಬಳಿ, ಕುಂಚಿಟಿಗರ ವಾಣಿಜ್ಯ ಮಳಿಗೆಗಳ ಹಿಂಭಾಗದ ಆವರಣದಲ್ಲಿ 'ದುಬೈ ಸಿಟಿ ಎಕ್ಸಿಬಿಷನ್ ಚಳ್ಳಕೆರೆ ಉತ್ಸವ' ಇಂದಿನಿಂದ (ಕಳೆದ ಸಂಜೆ 25ರಂದು ಉದ್ಘಾಟನೆಗೊಂಡಿದೆ) ಪ್ರಾರಂಭಗೊಂಡಿದೆ.

ಈ ಉತ್ಸವದಲ್ಲಿ ಮಕ್ಕಳ ಮನರಂಜನೆಗಾಗಿ ತಿರುಗುವ ರೈಲು, ಏರೋಪ್ಲೇನ್, ಮೇರಿಗೋ ರೌಂಡ್, ಬೈಕ್, ಕಾರು, ಜಂಪಿಂಗ್ ಮತ್ತು ಬೋಟಿಂಗ್‌ನಂತಹ ಆಟಗಳು ಲಭ್ಯವಿವೆ. ಇದರ ಜೊತೆಗೆ, ಯುವಕ ಯುವತಿಯರಿಗೂ ಇಷ್ಟವಾಗುವ ಟೊರೋಟ ಡಿಸ್ಕೋ ಡಾನ್ಸ್, ಜಾಯಿಂಟ್ ವಿಲ್, ಡ್ರ್ಯಾಗನ್ ಟ್ರೈನ್, ಮತ್ತು ಕೊಲಂಬಸ್‌ನಂತಹ ವಿಶೇಷ ಆಟಗಳೂ ಇವೆ. ಕೌಶಲ್ಯ ಆಟಗಳಾದ ರಿಂಗ್ ಟಾಸ್ ಸಹ ಇದ್ದು, ಇಲ್ಲಿ ಫುಡ್ ಫೆಸ್ಟಿವಲ್ ಕೂಡ ನಡೆಯುತ್ತಿದೆ. ಸಾಕಷ್ಟು ವೈವಿಧ್ಯಮಯ ಆಟಿಕೆಗಳು ಕೂಡ ಇಲ್ಲಿ ಲಭ್ಯವಿವೆ.

ಈ ಉತ್ಸವವು ಒಂದು ತಿಂಗಳ ಕಾಲ ನಡೆಯಲಿದ್ದು, ಸಂಜೆಯ ಸಮಯದಲ್ಲಿ ಕೇವಲ ₹30 ಪ್ರವೇಶ ಶುಲ್ಕದೊಂದಿಗೆ ಕುಟುಂಬ ಸಮೇತ ಭೇಟಿ ನೀಡಬಹುದು. ಮಕ್ಕಳನ್ನು ಕರೆತಂದು ವಿವಿಧ ಆಟಗಳಲ್ಲಿ ತೊಡಗಿಸಲು ಇದೊಂದು ಸುವರ್ಣಾವಕಾಶವಾಗಿದೆ. ನಿತ್ಯದ ಒತ್ತಡವನ್ನು ಕಳೆಯಲು, ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳಿಂದ ಸ್ವಲ್ಪ ದಿನ ದೂರವಿರಲು ಚಳ್ಳಕೆರೆ ಜನತೆಗೆ ಇದು ಉತ್ತಮ ಅವಕಾಶ ಒದಗಿಸಿದೆ. ಚಳ್ಳಕೆರೆ ನಗರದಲ್ಲಿ 100% ಮನರಂಜನೆ ನೀಡಲು ಈ 'ಚಳ್ಳಕೆರೆ ಉತ್ಸವ' ಸಜ್ಜಾಗಿದೆ.
    user_Suresh Belagere
    Suresh Belagere
    Video Creator ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    5 hrs ago
  • ಅಡಿಕೆ ಲಾರಿ ಚಾಲಕ ರಾಶಿದ್ ಮೊಹಮ್ಮದ್ ಅವರ ಮೇಲೆ ಹಲ್ಲೆ ನಡೆದಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಅವರು ತಮ್ಮ ಪ್ರತಿಕ್ರಿಯೆಯನ್ನು ಹಂಚಿಕೊಂಡಿದ್ದಾರೆ. ಅಡಿಕೆ ಸಂಬಂಧಿತ ಬಿಲ್‌ನೊಂದಿಗೆ ತಾವು ತೆರಳುತ್ತಿದ್ದ ವೇಳೆ ಈ ದಾಳಿ ನಡೆದಿದೆ ಎಂದು ರಾಶಿದ್ ಮೊಹಮ್ಮದ್ ವಿವರಿಸಿದ್ದಾರೆ. ಡಾಬಾದ ಬಳಿ ಬಂದಾಗ ಏಕಾಏಕಿ ತಮ್ಮ ಲಾರಿಯನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ದಮ್ಕಿ ಹಾಕಿ, ಕೊರಳಿಗೆ ಕೈಹಾಕಿ ಹಲ್ಲೆ ನಡೆಸಿದ್ದಾರೆ ಎಂದು ಚಾಲಕ ತಿಳಿಸಿದ್ದಾರೆ. ಹಲ್ಲೆ ನಡೆದ ನಂತರ, ಮತ್ತಷ್ಟು ಜನರು ಕಾರಿನಲ್ಲಿ ಬಂದರು ಎಂದು ರಾಶಿದ್ ಮೊಹಮ್ಮದ್ ಹೇಳಿದ್ದಾರೆ.
    1
    ಅಡಿಕೆ ಲಾರಿ ಚಾಲಕ ರಾಶಿದ್ ಮೊಹಮ್ಮದ್ ಅವರ ಮೇಲೆ ಹಲ್ಲೆ ನಡೆದಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಅವರು ತಮ್ಮ ಪ್ರತಿಕ್ರಿಯೆಯನ್ನು ಹಂಚಿಕೊಂಡಿದ್ದಾರೆ. ಅಡಿಕೆ ಸಂಬಂಧಿತ ಬಿಲ್‌ನೊಂದಿಗೆ ತಾವು ತೆರಳುತ್ತಿದ್ದ ವೇಳೆ ಈ ದಾಳಿ ನಡೆದಿದೆ ಎಂದು ರಾಶಿದ್ ಮೊಹಮ್ಮದ್ ವಿವರಿಸಿದ್ದಾರೆ.

ಡಾಬಾದ ಬಳಿ ಬಂದಾಗ ಏಕಾಏಕಿ ತಮ್ಮ ಲಾರಿಯನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ದಮ್ಕಿ ಹಾಕಿ, ಕೊರಳಿಗೆ ಕೈಹಾಕಿ ಹಲ್ಲೆ ನಡೆಸಿದ್ದಾರೆ ಎಂದು ಚಾಲಕ ತಿಳಿಸಿದ್ದಾರೆ. ಹಲ್ಲೆ ನಡೆದ ನಂತರ, ಮತ್ತಷ್ಟು ಜನರು ಕಾರಿನಲ್ಲಿ ಬಂದರು ಎಂದು ರಾಶಿದ್ ಮೊಹಮ್ಮದ್ ಹೇಳಿದ್ದಾರೆ.
    user_Vinay P palekar
    Vinay P palekar
    ಮಾಧ್ಯಮ ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    15 hrs ago
  • ಭಾರತದಲ್ಲಿ ವೈರಲ್ ಎಂಬ ಶೀರ್ಷಿಕೆಯಡಿಯಲ್ಲಿ, ಮೈಸೂರಿನ NR ಕ್ಷೇತ್ರದ ಮೂಲಸೌಕರ್ಯ ಅಭಿವೃದ್ಧಿಯ ಕುರಿತು ಸಂಪೂರ್ಣ, ನಿರ್ಬಂಧರಹಿತ ಮತ್ತು ಸ್ಪಷ್ಟವಾದ ಚರ್ಚೆಯನ್ನು #DealsOfMysuru ಜೊತೆ ನಡೆಸಲಾಗುತ್ತಿದೆ. ಈ ಚರ್ಚೆಯು NR ಕ್ಷೇತ್ರದ ಮೂಲಸೌಕರ್ಯಕ್ಕೆ ಸಂಬಂಧಿಸಿದ ಎಲ್ಲಾ ಅಂಶಗಳನ್ನು ಒಳಗೊಂಡಿದೆ.
    1
    ಭಾರತದಲ್ಲಿ ವೈರಲ್ ಎಂಬ ಶೀರ್ಷಿಕೆಯಡಿಯಲ್ಲಿ, ಮೈಸೂರಿನ NR ಕ್ಷೇತ್ರದ ಮೂಲಸೌಕರ್ಯ ಅಭಿವೃದ್ಧಿಯ ಕುರಿತು ಸಂಪೂರ್ಣ, ನಿರ್ಬಂಧರಹಿತ ಮತ್ತು ಸ್ಪಷ್ಟವಾದ ಚರ್ಚೆಯನ್ನು #DealsOfMysuru ಜೊತೆ ನಡೆಸಲಾಗುತ್ತಿದೆ. ಈ ಚರ್ಚೆಯು NR ಕ್ಷೇತ್ರದ ಮೂಲಸೌಕರ್ಯಕ್ಕೆ ಸಂಬಂಧಿಸಿದ ಎಲ್ಲಾ ಅಂಶಗಳನ್ನು ಒಳಗೊಂಡಿದೆ.
    user_Md Aleemulla Shariff
    Md Aleemulla Shariff
    Citizen Reporter ಮೈಸೂರು, ಮೈಸೂರು, ಕರ್ನಾಟಕ•
    14 hrs ago
  • ಮಂಗಳೂರು ನಗರದ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕಿಲ್ಪಾಡಿ ಗ್ರಾಮದ ರೈಲ್ವೆ ನಿಲ್ದಾಣದ ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ದಿನಾಂಕ 25-06-2026 ರಂದು ನಡೆದ ಈ ಕಾರ್ಯಾಚರಣೆಯಲ್ಲಿ, ಆರೋಪಿತ ಅಬ್ಬಾಸ್ (50 ವರ್ಷ), ತಂದೆ ದಿ. ಮೂಸ ಕುಂಞಿ, ವಾಸ ಹಿದಾಯತ ಮಸೀದಿ ಹತ್ತಿರ, ಹಿದಾಯತ್ ನಗರ ಮುಳ್ಳುಗುಡ್ಡೆ, ಕೋಟೆಕಾರ್ ಗ್ರಾಮ ಮತ್ತು ಅಂಚೆ, ಉಳ್ಳಾಲ ತಾಲೂಕು, ಮಂಗಳೂರು ನಗರ ಇವರನ್ನು ವಶಕ್ಕೆ ಪಡೆಯಲಾಗಿದೆ. ಆತನಿಂದ ಸುಮಾರು 2 ಲಕ್ಷ ರೂಪಾಯಿ ಮೌಲ್ಯದ 4 ಕೆ.ಜಿ ಗಾಂಜಾ ಮಾದಕದ್ರವ್ಯವನ್ನು ಜಪ್ತಿ ಮಾಡಲಾಗಿದೆ. ಪಣಂಬೂರು ಎಸಿಪಿ ತಂಡ ಮತ್ತು ಮುಲ್ಕಿ ಠಾಣೆಯ ತಂಡವು ಈ ಕಾರ್ಯಾಚರಣೆಯನ್ನು ನಡೆಸಿದೆ. ಈ ಸಂಬಂಧ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಅ.ಕ್ರ: 45/2026, ಕಲಂ: 8(ಸಿ), 20(ಬಿ) ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬಂಧಿತ ಆರೋಪಿ ಅಬ್ಬಾಸ್ ವಿರುದ್ಧ ಈ ಹಿಂದೆ ಸಹ ಹಲವು ಪ್ರಕರಣಗಳು ದಾಖಲಾಗಿದ್ದವು. ಉಳ್ಳಾಲ ಠಾಣೆಯಲ್ಲಿ ಅ.ಕ್ರ ನಂ: 216/2021 ಕಲಂ 341, 504, 324, 307, 506 r/w 34 ಐಪಿಸಿ ಮತ್ತು ಅ.ಕ್ರ ನಂ: 100/2026 ಕಲಂ 8(c), 20(b) ಎನ್‌ಡಿಪಿಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣಗಳು ದಾಖಲಾಗಿವೆ.
    1
    ಮಂಗಳೂರು ನಗರದ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕಿಲ್ಪಾಡಿ ಗ್ರಾಮದ ರೈಲ್ವೆ ನಿಲ್ದಾಣದ ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ದಿನಾಂಕ 25-06-2026 ರಂದು ನಡೆದ ಈ ಕಾರ್ಯಾಚರಣೆಯಲ್ಲಿ, ಆರೋಪಿತ ಅಬ್ಬಾಸ್ (50 ವರ್ಷ), ತಂದೆ ದಿ. ಮೂಸ ಕುಂಞಿ, ವಾಸ ಹಿದಾಯತ ಮಸೀದಿ ಹತ್ತಿರ, ಹಿದಾಯತ್ ನಗರ ಮುಳ್ಳುಗುಡ್ಡೆ, ಕೋಟೆಕಾರ್ ಗ್ರಾಮ ಮತ್ತು ಅಂಚೆ, ಉಳ್ಳಾಲ ತಾಲೂಕು, ಮಂಗಳೂರು ನಗರ ಇವರನ್ನು ವಶಕ್ಕೆ ಪಡೆಯಲಾಗಿದೆ. ಆತನಿಂದ ಸುಮಾರು 2 ಲಕ್ಷ ರೂಪಾಯಿ ಮೌಲ್ಯದ 4 ಕೆ.ಜಿ ಗಾಂಜಾ ಮಾದಕದ್ರವ್ಯವನ್ನು ಜಪ್ತಿ ಮಾಡಲಾಗಿದೆ. ಪಣಂಬೂರು ಎಸಿಪಿ ತಂಡ ಮತ್ತು ಮುಲ್ಕಿ ಠಾಣೆಯ ತಂಡವು ಈ ಕಾರ್ಯಾಚರಣೆಯನ್ನು ನಡೆಸಿದೆ. ಈ ಸಂಬಂಧ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಅ.ಕ್ರ: 45/2026, ಕಲಂ: 8(ಸಿ), 20(ಬಿ) ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಬಂಧಿತ ಆರೋಪಿ ಅಬ್ಬಾಸ್ ವಿರುದ್ಧ ಈ ಹಿಂದೆ ಸಹ ಹಲವು ಪ್ರಕರಣಗಳು ದಾಖಲಾಗಿದ್ದವು. ಉಳ್ಳಾಲ ಠಾಣೆಯಲ್ಲಿ ಅ.ಕ್ರ ನಂ: 216/2021 ಕಲಂ 341, 504, 324, 307, 506 r/w 34 ಐಪಿಸಿ ಮತ್ತು ಅ.ಕ್ರ ನಂ: 100/2026 ಕಲಂ 8(c), 20(b) ಎನ್‌ಡಿಪಿಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣಗಳು ದಾಖಲಾಗಿವೆ.
    user_Shamsheer Budoli
    Shamsheer Budoli
    Local News Reporter ಮಂಗಳೂರು, ದಕ್ಷಿಣ ಕನ್ನಡ, ಕರ್ನಾಟಕ•
    12 hrs ago
  • ದೈನಂದಿನ ಒತ್ತಡಭರಿತ ಜೀವನದಲ್ಲಿ ಒಂದು ತಿಂಗಳ ಕಾಲ ಮನರಂಜನೆಯನ್ನು ಎಲ್ಲಿ ಕಂಡುಕೊಳ್ಳಬಹುದು ಎಂಬ ಪ್ರಶ್ನೆಯನ್ನು ಈ ಪೋಸ್ಟ್ ಮುಂದಿಡುತ್ತದೆ.
    1
    ದೈನಂದಿನ ಒತ್ತಡಭರಿತ ಜೀವನದಲ್ಲಿ ಒಂದು ತಿಂಗಳ ಕಾಲ ಮನರಂಜನೆಯನ್ನು ಎಲ್ಲಿ ಕಂಡುಕೊಳ್ಳಬಹುದು ಎಂಬ ಪ್ರಶ್ನೆಯನ್ನು ಈ ಪೋಸ್ಟ್ ಮುಂದಿಡುತ್ತದೆ.
    user_Suresh Belagere
    Suresh Belagere
    Video Creator ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    12 hrs ago
  • ಚಿತ್ರದುರ್ಗ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕಾರೇಹಳ್ಳಿ ಉಲ್ಲಾಸ್ ಅವರು ತಮ್ಮ ವಿರುದ್ಧ ಕೇಳಿಬಂದಿರುವ ಆರೋಪಗಳಿಗೆ ಸ್ಪಷ್ಟನೆ ನೀಡಿದ್ದಾರೆ. ನಮ್ಮ ಜಿಲ್ಲೆಯಲ್ಲಿ ಉತ್ತಮ ಗುಣಮಟ್ಟದ ಅಡಿಕೆಯನ್ನು ಬೆಳೆಯಲಾಗುತ್ತಿದ್ದರೂ, ಕೆಲವು ಅಡಿಕೆ ವ್ಯಾಪಾರಿಗಳು ಮತ್ತು ಅರೆಕಾನಟ್ ಕಂಪನಿಗಳ ಮಾಲೀಕರು ಇಂಡೋನೇಷ್ಯಾ, ಬಾಂಗ್ಲಾ ಸೇರಿದಂತೆ ಇತರ ದೇಶಗಳಿಂದ ಕಳಪೆ ಗುಣಮಟ್ಟದ ಅಡಿಕೆಯನ್ನು ತರುತ್ತಿದ್ದಾರೆ ಎಂದು ಅವರು ಆಪಾದಿಸಿದ್ದಾರೆ. ಈ ಆಮದು ಮಾಡಿಕೊಂಡ ಅಡಿಕೆಗೆ ಬಣ್ಣ ಹಾಕಿ, ಅದನ್ನು ಮಿಶ್ರಣ ಮಾಡಿ ಮಹಾರಾಷ್ಟ್ರ, ನಾಗಪುರ, ಮತ್ತು ದೆಹಲಿಯಂತಹ ಸ್ಥಳಗಳಿಗೆ ಮಾರಾಟ ಮಾಡಲಾಗುತ್ತಿದೆ ಎಂದಿದ್ದಾರೆ. ಇಂತಹ ಕಳಪೆ ಅಡಿಕೆಯ ಸೇವನೆಯಿಂದ ಕ್ಯಾನ್ಸರ್ ಬರುತ್ತದೆ ಎಂದು ಉಲ್ಲಾಸ್ ಎಚ್ಚರಿಸಿದ್ದಾರೆ. ಈ ಕಳಪೆ ಅಡಿಕೆ ಮಾರಾಟವನ್ನು ತಡೆಯುವ ಉದ್ದೇಶದಿಂದ, ಬುಧವಾರ ರಾತ್ರಿ ಖಚಿತ ಮಾಹಿತಿ ಆಧರಿಸಿ ಒಂದು ಲಾರಿಯನ್ನು ತಡೆದು ವಿಚಾರಣೆ ನಡೆಸಿದಾಗ, ತಮ್ಮ ವಿರುದ್ಧ ಈ ಆರೋಪಗಳನ್ನು ಮಾಡಲಾಗಿದೆ ಎಂದು ಕಾರೇಹಳ್ಳಿ ಉಲ್ಲಾಸ್ ವಿವರಿಸಿದ್ದಾರೆ. ಈ “ಅಡಿಕೆ ಕಳ್ಳಾಟ”ದ ಬಗ್ಗೆ ಈಗಾಗಲೇ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಹಣಕಾಸು ಆಯುಕ್ತರಿಗೆ ದೂರು ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
    1
    ಚಿತ್ರದುರ್ಗ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕಾರೇಹಳ್ಳಿ ಉಲ್ಲಾಸ್ ಅವರು ತಮ್ಮ ವಿರುದ್ಧ ಕೇಳಿಬಂದಿರುವ ಆರೋಪಗಳಿಗೆ ಸ್ಪಷ್ಟನೆ ನೀಡಿದ್ದಾರೆ. ನಮ್ಮ ಜಿಲ್ಲೆಯಲ್ಲಿ ಉತ್ತಮ ಗುಣಮಟ್ಟದ ಅಡಿಕೆಯನ್ನು ಬೆಳೆಯಲಾಗುತ್ತಿದ್ದರೂ, ಕೆಲವು ಅಡಿಕೆ ವ್ಯಾಪಾರಿಗಳು ಮತ್ತು ಅರೆಕಾನಟ್ ಕಂಪನಿಗಳ ಮಾಲೀಕರು ಇಂಡೋನೇಷ್ಯಾ, ಬಾಂಗ್ಲಾ ಸೇರಿದಂತೆ ಇತರ ದೇಶಗಳಿಂದ ಕಳಪೆ ಗುಣಮಟ್ಟದ ಅಡಿಕೆಯನ್ನು ತರುತ್ತಿದ್ದಾರೆ ಎಂದು ಅವರು ಆಪಾದಿಸಿದ್ದಾರೆ. ಈ ಆಮದು ಮಾಡಿಕೊಂಡ ಅಡಿಕೆಗೆ ಬಣ್ಣ ಹಾಕಿ, ಅದನ್ನು ಮಿಶ್ರಣ ಮಾಡಿ ಮಹಾರಾಷ್ಟ್ರ, ನಾಗಪುರ, ಮತ್ತು ದೆಹಲಿಯಂತಹ ಸ್ಥಳಗಳಿಗೆ ಮಾರಾಟ ಮಾಡಲಾಗುತ್ತಿದೆ ಎಂದಿದ್ದಾರೆ. ಇಂತಹ ಕಳಪೆ ಅಡಿಕೆಯ ಸೇವನೆಯಿಂದ ಕ್ಯಾನ್ಸರ್ ಬರುತ್ತದೆ ಎಂದು ಉಲ್ಲಾಸ್ ಎಚ್ಚರಿಸಿದ್ದಾರೆ.

ಈ ಕಳಪೆ ಅಡಿಕೆ ಮಾರಾಟವನ್ನು ತಡೆಯುವ ಉದ್ದೇಶದಿಂದ, ಬುಧವಾರ ರಾತ್ರಿ ಖಚಿತ ಮಾಹಿತಿ ಆಧರಿಸಿ ಒಂದು ಲಾರಿಯನ್ನು ತಡೆದು ವಿಚಾರಣೆ ನಡೆಸಿದಾಗ, ತಮ್ಮ ವಿರುದ್ಧ ಈ ಆರೋಪಗಳನ್ನು ಮಾಡಲಾಗಿದೆ ಎಂದು ಕಾರೇಹಳ್ಳಿ ಉಲ್ಲಾಸ್ ವಿವರಿಸಿದ್ದಾರೆ. ಈ “ಅಡಿಕೆ ಕಳ್ಳಾಟ”ದ ಬಗ್ಗೆ ಈಗಾಗಲೇ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಹಣಕಾಸು ಆಯುಕ್ತರಿಗೆ ದೂರು ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
    user_Vinay P palekar
    Vinay P palekar
    ಮಾಧ್ಯಮ ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    15 hrs ago
  • ಉತ್ತರಪ್ರದೇಶದ ಮಹಾರಾಜ್ ಗಂಜ್ ಜಿಲ್ಲೆಯಲ್ಲಿ ಅನಿರೀಕ್ಷಿತ ಹಾಗೂ ಆತಂಕಕಾರಿ ಘಟನೆಯೊಂದು ನಡೆದಿದೆ. ಮದ್ಯದ ಅಮಲಿನಲ್ಲಿದ್ದ ಓರ್ವ ವ್ಯಕ್ತಿ 11,000 ವೋಲ್ಟೇಜ್ ಸಾಮರ್ಥ್ಯದ ವಿದ್ಯುತ್ ಕಂಬವನ್ನು ಏರಿ ಅದರ ಮೇಲಿದ್ದ ವಿದ್ಯುತ್ ತಂತಿಗಳ ಮೇಲೆ ಮಲಗಿದ್ದ. ಈ ದೃಶ್ಯವು ಸ್ಥಳೀಯರಲ್ಲಿ ತೀವ್ರ ಆತಂಕವನ್ನು ಸೃಷ್ಟಿಸಿತ್ತು. ಅದೃಷ್ಟವಶಾತ್, ಈ ಘಟನೆ ನಡೆಯುವ ಕೆಲವೇ ನಿಮಿಷಗಳ ಮೊದಲು ಆ ಪ್ರದೇಶದ ವಿದ್ಯುತ್ ಸಂಪರ್ಕವನ್ನು ಸ್ಥಗಿತಗೊಳಿಸಲಾಗಿತ್ತು. ಹೀಗಾಗಿ, ವ್ಯಕ್ತಿಗೆ ಯಾವುದೇ ವಿದ್ಯುತ್ ಆಘಾತ ಸಂಭವಿಸಲಿಲ್ಲ. ವಿಷಯ ತಿಳಿದ ಕೂಡಲೇ ವಿದ್ಯುತ್ ಇಲಾಖೆಯ ಅಧಿಕಾರಿಗಳು ಮತ್ತು ಪೊಲೀಸರು ಸ್ಥಳಕ್ಕೆ ಆಗಮಿಸಿ, ಮದ್ಯದ ಅಮಲಿನಲ್ಲಿದ್ದ ಆ ವ್ಯಕ್ತಿಯನ್ನು ಸುರಕ್ಷಿತವಾಗಿ ವಿದ್ಯುತ್ ಕಂಬದಿಂದ ಕೆಳಗೆ ಇಳಿಸಿದರು.
    1
    ಉತ್ತರಪ್ರದೇಶದ ಮಹಾರಾಜ್ ಗಂಜ್ ಜಿಲ್ಲೆಯಲ್ಲಿ ಅನಿರೀಕ್ಷಿತ ಹಾಗೂ ಆತಂಕಕಾರಿ ಘಟನೆಯೊಂದು ನಡೆದಿದೆ. ಮದ್ಯದ ಅಮಲಿನಲ್ಲಿದ್ದ ಓರ್ವ ವ್ಯಕ್ತಿ 11,000 ವೋಲ್ಟೇಜ್ ಸಾಮರ್ಥ್ಯದ ವಿದ್ಯುತ್ ಕಂಬವನ್ನು ಏರಿ ಅದರ ಮೇಲಿದ್ದ ವಿದ್ಯುತ್ ತಂತಿಗಳ ಮೇಲೆ ಮಲಗಿದ್ದ. ಈ ದೃಶ್ಯವು ಸ್ಥಳೀಯರಲ್ಲಿ ತೀವ್ರ ಆತಂಕವನ್ನು ಸೃಷ್ಟಿಸಿತ್ತು.

ಅದೃಷ್ಟವಶಾತ್, ಈ ಘಟನೆ ನಡೆಯುವ ಕೆಲವೇ ನಿಮಿಷಗಳ ಮೊದಲು ಆ ಪ್ರದೇಶದ ವಿದ್ಯುತ್ ಸಂಪರ್ಕವನ್ನು ಸ್ಥಗಿತಗೊಳಿಸಲಾಗಿತ್ತು. ಹೀಗಾಗಿ, ವ್ಯಕ್ತಿಗೆ ಯಾವುದೇ ವಿದ್ಯುತ್ ಆಘಾತ ಸಂಭವಿಸಲಿಲ್ಲ. ವಿಷಯ ತಿಳಿದ ಕೂಡಲೇ ವಿದ್ಯುತ್ ಇಲಾಖೆಯ ಅಧಿಕಾರಿಗಳು ಮತ್ತು ಪೊಲೀಸರು ಸ್ಥಳಕ್ಕೆ ಆಗಮಿಸಿ, ಮದ್ಯದ ಅಮಲಿನಲ್ಲಿದ್ದ ಆ ವ್ಯಕ್ತಿಯನ್ನು ಸುರಕ್ಷಿತವಾಗಿ ವಿದ್ಯುತ್ ಕಂಬದಿಂದ ಕೆಳಗೆ ಇಳಿಸಿದರು.
    user_ಗಿರೀಶ್ B
    ಗಿರೀಶ್ B
    Local News Reporter ತುಮಕೂರು, ತುಮಕೂರು, ಕರ್ನಾಟಕ•
    17 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.