ಕೌಂಟರ್ ನಿಂದ ಮೊಬೈಲ್‌ಗೆ ; ಸಾರಿಗೆ ಸೇವೆಗೆ ಡಿಜಿಟಲ್ ಸ್ಪರ್ಶ ಟಿಕೆಟ್ ಕಾಯ್ದಿರಿಸುವುದರಿಂದ ರದ್ದತಿಯವರೆಗೆ ಹಲವು ಸೇವೆಗಳು ಈಗ ಒಂದೇ ವೇದಿಕೆಯಲ್ಲಿ ಲಭ್ಯ. ಅದರಲ್ಲೂ ವಾಟ್ಸ್‌ಆ್ಯಪ್‌ನಲ್ಲೇ ಬಸ್ ಟಿಕೆಟ್ ಕಾಯ್ದಿರಿಸುವ ಸೌಲಭ್ಯದಿಂದ ಕೆಎಸ್‌ಆರ್‌ಟಿಸಿ ಸೇವೆ ಪ್ರಯಾಣಿಕರ ಕೈಬೆರಳ ತುದಿಗೆ ಬಂದಿದೆ. ತಂತ್ರಜ್ಞಾನ ಮತ್ತು ಸಾರಿಗೆಯ ಈ ಸಂಗಮವು ಪ್ರಯಾಣವನ್ನು ಮತ್ತಷ್ಟು ಸುಲಭ, ವೇಗದ ಹಾಗೂ ಜನಸ್ನೇಹಿಯಾಗಿಸುತ್ತಿದೆ. ** * ಸಾರಿಗೆ ಸೇವೆ ಪಡೆಯಲು ಇನ್ನು ಮುಂದೆ ಕೌಂಟರ್‌ಗೆ ತೆರಳಿ ಸರತಿ ಸಾಲಿನಲ್ಲಿ ನಿಲ್ಲಬೇಕಾದ ಅನಿವಾರ್ಯತೆ ಕ್ರಮೇಣ ಕಡಿಮೆಯಾಗುತ್ತಿದೆ. ಮೊಬೈಲ್‌ನಲ್ಲೇ ಟಿಕೆಟ್ ಬುಕ್ ಮಾಡುವುದು, ಪಾವತಿ ಮಾಡುವುದು, ಇ-ಟಿಕೆಟ್ ಪಡೆಯುವುದು, ಅಗತ್ಯವಿದ್ದರೆ ಟಿಕೆಟ್ ರದ್ದುಪಡಿಸುವುದು – ಇವೆಲ್ಲವೂ ಡಿಜಿಟಲ್ ಮೂಲಕವೇ ಸಾಧ್ಯವಾಗುತ್ತಿದೆ. “ಸಾರಿಗೆ ಸೇವೆ ಜನರ ಬಳಿಗೆ ಹೋಗುವುದಲ್ಲ… ಈಗ ಸಾರಿಗೆ ಸೇವೆಯೇ ಜನರ ಮೊಬೈಲ್‌ಗೆ ಬರುತ್ತಿದೆ.” ಎಂಬ ಹೊಸ ಪರಿಕಲ್ಪನೆಯೊಂದಿಗೆ ಕರ್ನಾಟಕವು ಸಾರ್ವಜನಿಕ ಸಾರಿಗೆಯನ್ನು ಮತ್ತಷ್ಟು ಸರಳ ಮತ್ತು ಪ್ರಯಾಣಿಕ ಸ್ನೇಹಿಯಾಗಿಸುವತ್ತ ಹೆಜ್ಜೆ ಇಡುತ್ತಿದೆ. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ವಾಟ್ಸ್‌ಆ್ಯಪ್ ಆಧಾರಿತ ಮುಂಗಡ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆಯನ್ನು ಪರಿಚಯಿಸುತ್ತಿದೆ. ಜನರು ಪ್ರತಿದಿನ ಬಳಸುವ ವಾಟ್ಸ್‌ಆ್ಯಪ್ ವೇದಿಕೆಯಲ್ಲೇ ಬಸ್ ಟಿಕೆಟ್ ಕಾಯ್ದಿರಿಸುವ ಅವಕಾಶ ದೊರೆಯುವುದರಿಂದ, ಸಾರ್ವಜನಿಕ ಸಾರಿಗೆ ಸೇವೆ ಮತ್ತಷ್ಟು ಸುಲಭವಾಗಿ ಜನರ ಕೈಗೆ ತಲುಪಲಿದೆ. *ಒಂದೇ ವೇದಿಕೆಯಲ್ಲಿ ನಾಲ್ಕು ಸಾರಿಗೆ ಸಂಸ್ಥೆಗಳು* ರಾಜ್ಯದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟು ಸಮಗ್ರಗೊಳಿಸುವ ಉದ್ದೇಶದಿಂದ ‘ಒಂದು ಕರ್ನಾಟಕ ಮೊಬಿಲಿಟಿ ಆಪ್’ ಅಭಿವೃದ್ಧಿಪಡಿಸಲಾಗಿದೆ. ಈ ವೇದಿಕೆಯಲ್ಲಿ ರಾಜ್ಯದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ), ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಎನ್‌ಡಬ್ಲ್ಯೂಕೆಆರ್‌ಟಿಸಿ), ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಕೆಕೆಆರ್‌ಟಿಸಿ) ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಈ ನಾಲ್ಕು ಪ್ರಮುಖ ಸಾರಿಗೆ ಸಂಸ್ಥೆಗಳನ್ನು ಒಗ್ಗೂಡಿಸುವ ವ್ಯವಸ್ಥೆ ರೂಪಿಸಲಾಗಿದೆ. 2026ರ ಸೆಪ್ಟೆಂಬರ್ 10ರಂದು ವಿಧಾನಸೌಧದಲ್ಲಿ ನಡೆದ ಸರ್ಕಾರದ 100 ದಿನಗಳ ಕಾರ್ಯಕ್ರಮದ ಅಂಗವಾಗಿ ನವೀಕೃತ ‘ಒಂದು ಕರ್ನಾಟಕ ಮೊಬಿಲಿಟಿ ಆಪ್’ ಹಾಗೂ ವಾಟ್ಸ್‌ಆ್ಯಪ್ ಮೂಲಕ ಟಿಕೆಟ್ ಬುಕ್ಕಿಂಗ್ ಸೌಲಭ್ಯವನ್ನು ಲೋಕಾರ್ಪಣೆಗೊಳಿಸಲಾಯಿತು. *ವಾಟ್ಸ್‌ಆ್ಯಪ್‌ನಲ್ಲೇ ಟಿಕೆಟ್ ಬುಕ್ಕಿಂಗ್* ಪ್ರಯಾಣಿಕರು ಮುಂಗಡವಾಗಿ ಬಸ್ ಟಿಕೆಟ್ ಕಾಯ್ದಿರಿಸಲು ಕೆಎಸ್‌ಆರ್‌ಟಿಸಿಯ AWATAR – Advanced Web and Android Ticketing and Reservation ವ್ಯವಸ್ಥೆಯನ್ನು ಬಳಸಬಹುದಾಗಿದೆ. ಈಗಾಗಲೇ ಆನ್‌ಲೈನ್, ಮೊಬೈಲ್ ಹಾಗೂ ಮುಂಗಡ ಟಿಕೆಟ್ ಕಾಯ್ದಿರಿಸುವ ಕೌಂಟರ್‌ಗಳ ಮೂಲಕ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆ ಲಭ್ಯವಿದೆ. ಇದರ ಮುಂದುವರಿದ ಭಾಗವಾಗಿ ವಾಟ್ಸ್‌ಆ್ಯಪ್ ಮೂಲಕವೂ ಟಿಕೆಟ್ ಕಾಯ್ದಿರಿಸುವ ಸೌಲಭ್ಯ ಒದಗಿಸಲಾಗುತ್ತಿದೆ. ಇದರಿಂದ ಪ್ರಯಾಣಿಕರು ತಮ್ಮ ಮೊಬೈಲ್‌ನಲ್ಲೇ ಪ್ರಯಾಣದ ವಿವರಗಳನ್ನು ನಮೂದಿಸಿ, ಸೂಕ್ತ ಬಸ್ ಮತ್ತು ಆಸನವನ್ನು ಆಯ್ಕೆ ಮಾಡಿಕೊಂಡು ಟಿಕೆಟ್ ಬುಕ್ ಮಾಡಬಹುದು. ಪಾವತಿ ಪೂರ್ಣಗೊಂಡ ನಂತರ ಇ-ಟಿಕೆಟ್ ಪಡೆಯಲು ಸಾಧ್ಯವಾಗುತ್ತದೆ. *30 ದಿನಗಳ ಮುಂಚಿತವಾಗಿ ಟಿಕೆಟ್ ಕಾಯ್ದಿರಿಸಿ* ಪ್ರಯಾಣಿಕರು ತಮ್ಮ ಪ್ರಯಾಣವನ್ನು ಮುಂಚಿತವಾಗಿಯೇ ಯೋಜಿಸಿಕೊಳ್ಳಲು 30 ದಿನಗಳ ಮುಂಚಿತವಾಗಿ ಟಿಕೆಟ್ ಕಾಯ್ದಿರಿಸುವ ಅವಕಾಶವಿದೆ. ದೂರದ ಪ್ರಯಾಣ, ಕುಟುಂಬದೊಂದಿಗೆ ಪ್ರವಾಸ, ಹಬ್ಬ-ಹರಿದಿನಗಳ ಪ್ರಯಾಣ ಅಥವಾ ಮುಂಚಿತ ಯೋಜನೆ ಅಗತ್ಯವಿರುವ ಸಂದರ್ಭಗಳಲ್ಲಿ ಈ ಸೌಲಭ್ಯ ಹೆಚ್ಚು ಅನುಕೂಲಕರವಾಗಲಿದೆ. *ಡಿಜಿಟಲ್ ಪಾವತಿ – ಇ-ಟಿಕೆಟ್ ನೇರವಾಗಿ ಮೊಬೈಲ್‌ಗೆ* ಟಿಕೆಟ್ ಬುಕ್ಕಿಂಗ್ ಸಂದರ್ಭದಲ್ಲಿ UPI, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಹಾಗೂ ವಾಲೆಟ್ ಸೇರಿದಂತೆ ವಿವಿಧ ಡಿಜಿಟಲ್ ಪಾವತಿ ವಿಧಾನಗಳನ್ನು ಬಳಸಬಹುದು. ಪಾವತಿ ಯಶಸ್ವಿಯಾದ ನಂತರ ಬುಕ್ಕಿಂಗ್ ದೃಢೀಕರಣ ಮತ್ತು ಇ-ಟಿಕೆಟ್ ಅನ್ನು ವಾಟ್ಸ್‌ಆ್ಯಪ್ ಹಾಗೂ ಇ-ಮೇಲ್ ಮೂಲಕ ಪ್ರಯಾಣಿಕರಿಗೆ ಕಳುಹಿಸಲಾಗುತ್ತದೆ. ಹೀಗಾಗಿ ಕಾಗದದ ಟಿಕೆಟ್‌ನ್ನು ಪ್ರತ್ಯೇಕವಾಗಿ ತೆಗೆದುಕೊಂಡು ಹೋಗುವ ಅಗತ್ಯವೂ ಇರುವುದಿಲ್ಲ. *ವಾಟ್ಸ್‌ಆ್ಯಪ್‌ನಲ್ಲೇ ಟಿಕೆಟ್ ರದ್ದುಪಡಿಸಿ* ಟಿಕೆಟ್ ಬುಕ್ ಮಾಡಿದ ನಂತರ ಪ್ರಯಾಣ ರದ್ದುಪಡಿಸುವ ಪರಿಸ್ಥಿತಿ ಬಂದರೂ ಕೌಂಟರ್‌ಗೆ ತೆರಳಬೇಕಾಗಿಲ್ಲ. ವಾಟ್ಸ್‌ಆ್ಯಪ್ ಮೂಲಕ ಬುಕ್ ಮಾಡಿರುವ ಟಿಕೆಟ್‌ನ್ನು ಅದೇ ಸಂಖ್ಯೆಯ ಮೂಲಕ ರದ್ದುಪಡಿಸಬಹುದು. ಇದಕ್ಕಾಗಿ ವಾಟ್ಸ್‌ಆ್ಯಪ್‌ನಲ್ಲಿ ‘Ticket Cancellation’ ಆಯ್ಕೆಯನ್ನು ಆರಿಸಿ, PNR ಸಂಖ್ಯೆ, ಮೊಬೈಲ್ ಸಂಖ್ಯೆ ಮತ್ತು ಬುಕ್ಕಿಂಗ್ ಸಂದರ್ಭದಲ್ಲಿ ಪಡೆದ Transaction Password ಅನ್ನು ನಮೂದಿಸಿ ರದ್ದತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು. *ದೂರುಗಳಿಗೂ ಒಂದೇ ಡಿಜಿಟಲ್ ವೇದಿಕೆ* ‘ಒಂದು ಕರ್ನಾಟಕ ಮೊಬಿಲಿಟಿ ಆಪ್’ನ ಮತ್ತೊಂದು ಪ್ರಮುಖ ಸೌಲಭ್ಯವೆಂದರೆ ದೂರು ನಿರ್ವಹಣೆ. ಕೆಎಸ್‌ಆರ್‌ಟಿಸಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗಳಿಗೆ ಸಂಬಂಧಿಸಿದ ದೂರುಗಳನ್ನು ಒಂದೇ ವೇದಿಕೆಯಲ್ಲಿ ದಾಖಲಿಸಬಹುದು. ದೂರು ದಾಖಲಿಸಿದ ನಂತರ ಅದರ ಸ್ಥಿತಿ ಏನು, ಯಾವ ಹಂತದಲ್ಲಿದೆ ಹಾಗೂ ಪರಿಹಾರದ ಪ್ರಗತಿ ಹೇಗಿದೆ ಎಂಬುದನ್ನು ಪ್ರಯಾಣಿಕರು ಪರಿಶೀಲಿಸಬಹುದು. ಅಗತ್ಯವಿದ್ದಲ್ಲಿ ದೂರುವನ್ನು ಮೇಲ್ದರ್ಜೆಯ ಅಧಿಕಾರಿಗಳ ಗಮನಕ್ಕೂ ಕೊಂಡೊಯ್ಯುವ ವ್ಯವಸ್ಥೆ ಇದೆ. ಇದರಿಂದ ದೂರು ನೀಡುವುದಷ್ಟೇ ಅಲ್ಲದೆ, “ನನ್ನ ದೂರು ಈಗ ಯಾವ ಹಂತದಲ್ಲಿದೆ?” ಎಂಬುದನ್ನು ಪ್ರಯಾಣಿಕನೇ ತಿಳಿದುಕೊಳ್ಳಲು ಸಾಧ್ಯವಾಗಲಿದೆ. *ಬುಕ್ಕಿಂಗ್ ಮಾಹಿತಿಯಲ್ಲೂ ಪಾರದರ್ಶಕತೆ* ವಾಟ್ಸ್‌ಆ್ಯಪ್ ಮೂಲಕ ಮಾಡಲಾದ ಎಲ್ಲಾ ಬುಕ್ಕಿಂಗ್‌ಗಳನ್ನು ಪ್ರತ್ಯೇಕವಾಗಿ “WhatsApp Booking” ಎಂದು ಗುರುತಿಸಲಾಗುತ್ತದೆ. ಈ ಬುಕ್ಕಿಂಗ್‌ಗಳ ಮಾಹಿತಿಯನ್ನು Mode-wise Booking Report, Trip Sheet ಹಾಗೂ Track Ticket ವರದಿಗಳಲ್ಲಿಯೂ ಪ್ರತ್ಯೇಕವಾಗಿ ಪ್ರದರ್ಶಿಸುವ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಟಿಕೆಟ್ ಬುಕ್ಕಿಂಗ್ ಮತ್ತು ಬಸ್ ಕಾರ್ಯಾಚರಣೆಗೆ ಸಂಬಂಧಿಸಿದ ಮಾಹಿತಿಯನ್ನು ವ್ಯವಸ್ಥಿತವಾಗಿ ನಿರ್ವಹಿಸಲು ಅನುಕೂಲವಾಗಲಿದೆ. *ಸಿಬ್ಬಂದಿಗೂ ಡಿಜಿಟಲ್ ನೆರವು* ಡಿಜಿಟಲ್ ವ್ಯವಸ್ಥೆಯ ಪ್ರಯೋಜನ ಪ್ರಯಾಣಿಕರಿಗೆ ಮಾತ್ರ ಸೀಮಿತವಾಗಿಲ್ಲ. ಬಸ್ ನಿಲ್ದಾಣಗಳು, ನಿಗಮದ ಘಟಕಗಳು, ಟಿಕೆಟ್ ಕೌಂಟರ್‌ಗಳು ಹಾಗೂ ಸಂಬಂಧಿತ ಸಿಬ್ಬಂದಿಗೂ ಅಗತ್ಯ ಮಾಹಿತಿಯನ್ನು ತ್ವರಿತವಾಗಿ ಪಡೆಯಲು ಇದು ನೆರವಾಗಲಿದೆ. ಟಿಕೆಟ್ ನಿರ್ವಹಣೆ, ಬುಕ್ಕಿಂಗ್ ಮಾಹಿತಿ ಹಾಗೂ ಪ್ರಯಾಣಿಕರ ಸೇವೆಗೆ ಸಂಬಂಧಿಸಿದ ಮಾಹಿತಿಯನ್ನು ಡಿಜಿಟಲ್ ರೂಪದಲ್ಲಿ ನಿರ್ವಹಿಸುವುದರಿಂದ ಆಡಳಿತಾತ್ಮಕ ಕಾರ್ಯಗಳು ಮತ್ತಷ್ಟು ಸರಳವಾಗಲಿವೆ. ಮಾಹಿತಿಯ ನಿಖರತೆ ಹೆಚ್ಚುವುದರ ಜೊತೆಗೆ ಸೇವೆ ನೀಡುವಲ್ಲಿ ಆಗುವ ವಿಳಂಬವನ್ನು ಕಡಿಮೆ ಮಾಡುವ ನಿರೀಕ್ಷೆಯಿದೆ. *ಮುಂದಿನ ಹೆಜ್ಜೆ – ಡಿಜಿಟಲ್ ಬಸ್ ಪಾಸ್* ಸಾರ್ವಜನಿಕ ಸಾರಿಗೆಯ ಡಿಜಿಟಲೀಕರಣವು ಟಿಕೆಟ್ ಬುಕ್ಕಿಂಗ್‌ನಲ್ಲೇ ನಿಲ್ಲುವುದಿಲ್ಲ. ಮುಂದಿನ ಹಂತದಲ್ಲಿ ಡಿಜಿಟಲ್ ಮಾಸಿಕ ಬಸ್ ಪಾಸ್ ವ್ಯವಸ್ಥೆಯನ್ನು ಜಾರಿಗೆ ತರಲು ಉದ್ದೇಶಿಸಲಾಗಿದೆ. ಆನ್‌ಲೈನ್‌ನಲ್ಲಿಯೇ ಬಸ್ ಪಾಸ್ ಬುಕ್ಕಿಂಗ್, ವಿತರಣೆ ಮತ್ತು ನಿರ್ವಹಣೆ ಮಾಡುವ ವ್ಯವಸ್ಥೆ ರೂಪುಗೊಳ್ಳಲಿದ್ದು, QR ಕೋಡ್ ಆಧಾರಿತ ಡಿಜಿಟಲ್ ಪರಿಶೀಲನೆಗೂ ಅವಕಾಶ ಕಲ್ಪಿಸುವ ಉದ್ದೇಶವಿದೆ. *ಹೊಸ ಡಿಜಿಟಲ್ ಪಯಣ* ಸಾರ್ವಜನಿಕ ಸಾರಿಗೆಯ ಯಶಸ್ಸು ಕೇವಲ ಬಸ್‌ಗಳ ಸಂಖ್ಯೆ ಅಥವಾ ಮಾರ್ಗಗಳ ವಿಸ್ತರಣೆಯಿಂದ ಮಾತ್ರ ನಿರ್ಧಾರವಾಗುವುದಿಲ್ಲ. ಪ್ರಯಾಣಿಕರಿಗೆ ಸೇವೆ ಎಷ್ಟು ಸುಲಭ, ವೇಗ, ವಿಶ್ವಾಸಾರ್ಹ ಮತ್ತು ಪಾರದರ್ಶಕವಾಗಿ ದೊರೆಯುತ್ತದೆ ಎಂಬುದೂ ಅಷ್ಟೇ ಮುಖ್ಯ. ಪ್ರತಿದಿನ ಮೊಬೈಲ್ ಮತ್ತು ಡಿಜಿಟಲ್ ಸೇವೆಗಳನ್ನು ಬಳಸುವ ಜನರಿಗೆ ಪರಿಚಿತವಾಗಿರುವ ವಾಟ್ಸ್‌ಆ್ಯಪ್‌ನಲ್ಲೇ ಟಿಕೆಟ್ ಬುಕ್ಕಿಂಗ್ ಸೌಲಭ್ಯ ಕಲ್ಪಿಸುವುದು ಈ ಬದಲಾವಣೆಯ ಪ್ರಮುಖ ಹೆಜ್ಜೆಯಾಗಿದೆ. ಕೌಂಟರ್‌ಗೆ ಹೋಗುವ ಸಮಯವನ್ನು ಉಳಿಸುವುದು, ಪ್ರಯಾಣವನ್ನು ಮುಂಚಿತವಾಗಿ ಯೋಜಿಸಲು ನೆರವಾಗುವುದು, ಡಿಜಿಟಲ್ ಪಾವತಿಗೆ ಅವಕಾಶ ನೀಡುವುದು, ಇ-ಟಿಕೆಟ್ ನೇರವಾಗಿ ಮೊಬೈಲ್‌ಗೆ ತಲುಪಿಸುವುದು ಮತ್ತು ಟಿಕೆಟ್ ರದ್ದತಿಯನ್ನೂ ಸುಲಭಗೊಳಿಸುವುದು – ಇವೆಲ್ಲವೂ ಪ್ರಯಾಣಿಕರ ಅನುಭವವನ್ನು ಉತ್ತಮಗೊಳಿಸುವ ಉದ್ದೇಶ ಹೊಂದಿವೆ. ‘ಪ್ರಯಾಣಿಕರ ಕೈಯಲ್ಲೇ ಸಾರಿಗೆ ಸೇವೆ’ ಎಂಬ ಪರಿಕಲ್ಪನೆಯೊಂದಿಗೆ ಕರ್ನಾಟಕದ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಡಿಜಿಟಲ್ ಪಯಣದಲ್ಲಿ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ತಂತ್ರಜ್ಞಾನವನ್ನು ಕೇವಲ ಕಚೇರಿ ಕೆಲಸಕ್ಕೆ ಬಳಸುವುದಕ್ಕಿಂತ, ಅದನ್ನು ನೇರವಾಗಿ ಪ್ರಯಾಣಿಕರ ದಿನನಿತ್ಯದ ಬದುಕಿಗೆ ತಲುಪಿಸುವ ಪ್ರಯತ್ನ ಇದಾಗಿದೆ. ವಿಶೇಷ ಲೇಖನ: -ಭಾಗ್ಯ ಎಂ. ಮುಖ್ಯ ವರದಿಗಾರರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಬೆಂಗಳೂರು ***

- ಸೆಪ್ಟೆಂಬರ್ 20: .ಉಡುಪಿಯಲ್ಲಿ ಕೇರಳ ಕಲ್ಚರಲ್ ಅಂಡ್ ಸೋಶಿಯಲ್ ಸೆಂಟರ್ (ರಿ)ವತಿಯಿಂದ ಓಣಂ ಆಚರಣೆ ಉಡುಪಿ : ಉಡುಪಿ ಮಳಯಾಳಿಗಳ ಹೆಮ್ಮೆಯ ಪ್ರತಿಷ್ಠಿತ ಸಂಸ್ಥೆಯಾದ ಕೇರಳ ಕಲ್ಚರಲ್ ಅಂಡ್ ಸೋಶಿಯಲ್ ಸೆಂಟರ್ (ರಿ) ಉಡುಪಿ, ಸಂಸ್ಥೆಯು ಕೇರಳದ ಮಣ್ಣಿನಲ್ಲಿ ಹುಟ್ಟಿ ಬೆಳೆದು ಉದ್ಯೋಗವನ್ನರಸುತ್ತಾ ಉಡುಪಿಗೆ ಬಂದು ನೆಲೆಸಿದ ಮಲೆಯಾಳಿಗಳು ಒಟ್ಟು ಸೇರಿ ಕಟ್ಟಿದ ಸಂಘಟನೆಯಾಗಿದೆ . ಕೆಸಿಎಸ್ ಸಿ. ಹಲವಾರು ದಶಕಗಳಿಂದ ಇಲ್ಲಿಯೇ ಇರುವುದರಿಂದ ಅವರ ಮಕ್ಕಳು ಮೊಮ್ಮಕ್ಕಳಿಗೆ ಮಲೆಯಾಳಕ್ಕಿಂತ ಹೆಚ್ಚು ಕನ್ನಡದ ಸಂಸ್ಕೃತಿಯ ಪರಿಚಯವೇ ಹೆಚ್ಚು. ಹುಟ್ಟೂರ ಮಣ್ಣಿನ ಸಂಸ್ಕೃತಿ , ಸಂಪ್ರದಾಯ ಹಾಗೂ ಜೀವನಕ್ರಮದ ಪರಿಚಯವನ್ನು ಮಕ್ಕಳಿಗೆ ಮಾತ್ರವಲ್ಕದೆ ತಾವು ಬದುಕುತ್ತಿರುವ ಪರಿಸರದಲ್ಲಿರುವ ಇತರರಿಗೂ ಪರಿಚಯಿಸುವ ಸದುದ್ದೇಶದಿಂದ ಈ ಸಂಘವು ಓಣಂ ಆಚರಣೆಯಂತಹ ಹಲವಾರು ಕಾರ್ಯಕ್ರಮಗಳನ್ನು ಕಳೆದ ೩೨ ವರ್ಷಗಳಿಂದ ಆಚರಿಸುತ್ತ ಬಂದಿದೆ.. ಈ ಬಾರಿಯೂ ಕೂಡ ಉಡುಪಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಮೆಮೋರಿಯಲ್ ಹಾಲ್ ನಲ್ಲಿ ಕೇರಳ ಕಲ್ಚರಲ್ ಅಂಡ್ ಸೋಶಿಯಲ್ ಸೆಂಟರ್ (ರಿ)ನ 32ನೆ ವಾರ್ಷಿಕೋತ್ಸವ ಹಾಗೂ ಓಣಂ ಆಚರಣೆ ಸೆಪ್ಟೆಂಬರ್ 20 ರಂದು ವಿಜೃಂಭಣೆ ಯಿಂದ ನಡೆಯಲಿದೆ ಎಂದು ಕೆ ಸಿ ಎಸ್ ಸಿ ಕಾರ್ಯಕಾರಿ ಸಮಿತಿ ಸದಸ್ಯೆ ಡಾ ಪಾರ್ವತಿ ಐತಾಳ್ ತಿಳಿಸಿದರು ಉಡುಪಿ ಪತ್ರಿಕಾ ಭವನದಲ್ಲಿ ಗುರುವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಕಾರ್ಯಕ್ರಮದಲ್ಲಿ ಅರೋಗ್ಯ ಸಚಿವ ಯು ಟಿ ಖಾದರ್ ಪರೀದ್, ಉಡುಪಿ ಶಾಸಕ ಯಶಪಾಲ್ ಸುವರ್ಣ, ಜಿಲ್ಲಾಧಿಕಾರಿ ಸ್ವರೂಪ ಟಿ ಕೆ. ಐ ಎ ಎಸ್ , ಜಿಲ್ಲಾ ಪೊಲೀಸ್ ವರಿಸ್ಟಾಧಿಕಾರಿ ಹರಿರಾಮ್ ಶಂಕರ್ ಐ ಪಿ ಎಸ್, ಮಾಹೆ ಹೆಲ್ತ್ ಸೈನ್ಸ್ ಪ್ರೊ ವೈಸ್ ಚಾನ್ಸೆಲ್ಲರ್ ಡಾ ಮಾತ್ಯುಸ್ ಜಾಕೋಬ್, ನೋರ್ಕ ಸಂಸ್ಥೆಯ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಎಂ ಕೆ, ಕೇರಳ ಸಮಾಜo ಮಂಗಳೂರು ಅಧ್ಯಕ್ಷ ಟಿ ಕೆ ರಾಜನ್, ಓಣಂ ಸಮಿತಿ ಅಧ್ಯಕ್ಷ ಶಿನೋದ್ ಟಿ ಆರ್, ಕೆ ಸಿ ಎಸ್ ಸಿ ಕಾರ್ಯದರ್ಶಿ ಬಿನೇಶ್ ವಿ ಸಿ, ಕೋಶಾಧಿಕಾರಿ ಶಾಜಿ ವಿ ಕರುಣ್, ಕೆ ಸಿ ಎಸ್ ಸಿ ನಿಕಟ ಪೂರ್ವ ಅಧ್ಯಕ್ಷ ಸುಗುಣ ಕುಮಾರ್ ಎಂ ಜೆ ಎಫ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಕೆ ಸಿ ಎಸ್ ಸಿ ಅಧ್ಯಕ್ಷ ರಾಜನ್ ಪಿಲಿಪ್ಸ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ಡಾ ವಿನೋದ್ ವಿ ತೋಮಸ್, ಅರೋಗ್ಯ ಕ್ಷೇತ್ರದಲ್ಲಿ ಸಾಧನೆಗೈದ ಡಾ ರಾಜೇಶ್ ನಾಯರ್, ಕೃಷಿ ಕ್ಷೇತ್ರದಲ್ಲಿ ಸಾಧನೆಗೈದ ಎಂ ಎಲ್ ಜೋಸೆಫ್, ಕಲೆ ಸಂಸ್ಕೃತಿ ಕ್ಷೇತ್ರದಲ್ಲಿ ಸಿ ಸಾಧನೆಗೈದ ಲಿಯಾಕತ್ ಅಲಿ, ಯುವ ನ್ರತ್ಯಗಾತಿ ಸಾನ್ವಿ ರಾಜೇಶ್ ರವರಿಗೆ 2026ರ ಸಾಲಿನ ಕೆ ಸಿ ಎಸ್ ಸಿ ಪಂಚರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಕೆ ಸಿ ಎಸ್ ಸಿ ಸದಸ್ಯರ ಕುಟುಂಬದ ಪಿ ಯು ಸಿ ಹಾಗೂ ಎಸ್ ಎಸ್ ಎಲ್ ಸಿ ಯಲ್ಲಿ ಅತ್ಯಧಿಕ ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡುವ ಮೂಲಕ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುತ್ತಿದೆ. ಅಶಕ್ತರಿಗೆ ಧನ ಸಹಾಯ, ಕೇರಳದಿಂದ ಇಲ್ಲಿಗೆ ಬಂದು ದಾರಿ ತಪ್ಪಿದವರನ್ನು ಊರಿನವರೊಂದಿಗೆ ಸೇರಿಸುವ ಸಹಾಯ ಮತ್ತು ಅಗತ್ಯ ಬಂದಾಗ ಹಲವಾರು ರೀತಿಯ ಸಹಾಯಗಳನ್ನು ಮಾಡುತ್ತಿದೆ. ಮಲೆಯಾಳಂ ಮಿಶನ್ ಮೂಲಕ ಮಲೆಯಾಳ ಭಾಷೆಯನ್ನು ಕಲಿಸುವ ವ್ಯವಸ್ಥೆ, ಕೇರಳ ಸರಕಾರವು ಪರವೂರಿನಲ್ಲಿ ನೆಲೆಸಿದವರಿಗೆ ನೀಡುವ ನೋರ್ಕಾ ಮೂಲಕ ನೀಡುವ ಹೆಲ್ತ್ ಇನ್ಶುರೆನ್ಸ್ ಅನ್ನು ಈ ಬಾರಿ ಸಂಘದ ಸದಸ್ಯರ ಕುಟುಂಬಗಳಿಗೆ ಪಡೆಯುವ ವ್ಯವಸ್ಥೆಯನ್ನು ಸಂಘದ ಮುಖಂತರ ನೀಡುವ ವ್ಯವಸ್ಥೆ ಮಾಡಲಾಗುವುದು ಎಪ್ಪತ್ತು ಮತ್ತು ಎಪ್ಪತ್ತಕ್ಕಿಂತ ಹೆಚ್ಚು ವಯಸ್ಸಾದ ಜತೆ ಜತೆಯಾಗಿ ಉಲ್ಲಾಸದಿಂದ ಬದುಕುವ ವ್ಯವಸ್ಥೆ ಮಾಡಲು "ಸೂಪರ್ ಸೆವೆಂಟಿ" ಎಂಬ ಒಂದು ಶಾಖೆಯನ್ನೂ ಸಂಘವು ಸದಾ ಕಾಲ ಲವಲವಿಕೆಯಿಂದ ಕೂಡಿರಲು ಹಾಗೂ ನಮ್ಮ ಯುವ ಸಮುದಾಯ ಸಮಾಜ ಸೇವಾ ಚಟುವಟಿಕೆ ತೊಡಗಿಸಿಕೊಳ್ಳಲು ಪೂರಕವಾಗಿ "ಯೂಥ್ ವಿಂಗ" ನ್ನು ಆರಂಭಿಸುತ್ತಿದೆ. ಸಮಾರಂಭದಲ್ಲಿ ವಿಶೇಷ ಆಕರ್ಷಣೆಯಾಗಿ ಸೆಲೆಬ್ರಿಟಿ ಮಲಯಾಳಂ ನಟ ರಾಜೇಶ್ ಹೆಬ್ಬಾರ್ ಭಾಗವಹಿಸಲಿದ್ದು, ಕಲಾ ಭವನ್ ರಾಜೇಶ್ ನೇತೃತ್ವದಲ್ಲಿ ಕಿರುತೆರೆಯ ಪ್ರಸಿದ್ಧ ಗಾಯಕರಿಂದ ಆರ್ಕೆಸ್ಟ್ರಾ ನಡೆಯಲಿದೆ ಕೆ ಸಿ ಎಸ್ ಸಿ ಕುಟುಂಬ ಸದಸ್ಯರಿಂದ ಸ್ವಾಗತ ನ್ರತ್ಯ, ಪುಷ್ಪಾoಜಲಿ, ತಿರುವಾದಿರ ಕಳಿ, ಭರತನಾಟ್ಯ, ಮೋಹಿನಿಯಟ್ಟo, ಫುಷನ್ ಡಾನ್ಸ್, ಕೊಯಿತು ಪಾಟ್ಟು ಡಾನ್ಸ್, ಕೈಕೊಟ್ಟಿಕಲಿ, ಮಹಾಭಾರತ ಥೀಮ್, ಸಿನೆಮಾಟಿಕ್ ಡಾನ್ಸ್ ನಡೆಯಲಿದೆ ಕಾಲೇಜು ವಿದ್ಯಾರ್ಥಿನಿಯರಿಗಾಗಿ "ಅತ್ತಾಪೂಕಲಂ" ಹೂವಿನ ರಂಗೋಲಿ ಸ್ಪರ್ಧೆ ನಡೆಯಲಿದೆ ಬೆಳಿಗ್ಗೆ 10.00ರಿಂದ 12.30 ರವರೆಗೆ ಮಿತ್ರ ಹಾಸ್ಪಿಟಲ್ ಸಹಯೋಗದಲ್ಲಿ ಉಚಿತ ವೈದ್ಯಕೀಯ ಶಿಬಿರ ನಡೆಯಲಿದೆ ಮಧ್ಯಾಹ್ನ ಓಣo ಸದ್ಯ-ಅಂದರೆ ಕೇರಳದ ಅಪರೂಪದ ಖಾದ್ಯ ಪದಾರ್ಥಗಳ ಭರ್ಜರಿ ಭೋಜನವಿದೆ ಎಂದರು ಪತ್ರಿಕಾಗೋಷ್ಠಿಯಲ್ಲಿ ಕೆ ಸಿ ಎಸ್ ಸಿ ಅಧ್ಯಕ್ಷ ರಾಜನ್ ಫಿಲಿಪ್ಸ್, ಕೆ ಸಿ ಎಸ್ ಸಿ ಓಣಂ ಸಮಿತಿ ಅಧ್ಯಕ್ಷ ಶಿನೋದ್ ಟಿ ಆರ್, ಕೆ ಸಿ ಎಸ್ ಸಿ ಕಾರ್ಯದರ್ಶಿ ಬಿನೇಶ್ ವಿ ಸಿ,ಕಾರ್ಯಕಾರಿ ಸಮಿತಿ ಅಧ್ಯಕ್ಷ ಮೊಹಮ್ಮದ್ ಶರೀಫ್ ಉಪಸ್ಥಿತರಿದ್ದರು2
- ಕೊರಟಗೆರೆ ತಾಲೂಕಿನ ತುಮಕೂರು ಜಿಲ್ಲೆ ನರಸಯ್ಯನಪಾಳ್ಯ ಕುರುಕ್ಷೇತ್ರ ನಾಟಕ1
- ಜಾತ್ಯಾತೀತವಾಗಿ ಕೂಡಿ ಬಾಳಿದರೆ ಸ್ವರ್ಗ ಸುಖ ಈ ವಿಡಿಯೋದಲ್ಲಿ ಕೂಡಿ ಬಾಳಿ ಎಂಬ ಒಳ್ಳೆ ಸಂದೇಶವಿದೆ1
- ಚಿತ್ರದುರ್ಗ ಜಿಲ್ಲಾ ಯೂತ್ ಕಾಂಗ್ರೆಸ್ ನಿಂದ ಆಚರಣೆ ಮೋದಿ ಹುಟ್ಟು ದಿನವನ್ನು ನಿರುದ್ಯೋಗಿ ದಿನವನ್ನಾಗಿ ಘೋಷಿಸಿ ಚಿತ್ರದುರ್ಗ ಜಿಲ್ಲಾ ಯೂತ್ ಕಾಂಗ್ರೆಸ್ ನಿಂದ ಆಚರಣೆ ಮೋದಿ ಹುಟ್ಟು ದಿನವನ್ನು ನಿರುದ್ಯೋಗಿ ದಿನವನ್ನಾಗಿ ಘೋಷಿಸಿ ತರಕಾರಿ ಮಾರುವ ಮೂಲಕ ವಿನೂತ ಪ್ರತಿಭಟನೆ ಕಳೆದ 12 ವರ್ಷಗಳ ಹಿಂದೆ ಪ್ರಧಾನಿ ಮೋದಿ ಘೋಷಿಸಿದಂತೆ 2 ಕೋಟಿ ಉದ್ಯೋಗ ಸೃಷ್ಠಿಸದೆ ಯುವಕರಿಗೆ ಅನ್ಯಾಯ ಮಾಡಿದ್ದು, ಅವರ ಹುಟ್ಟು ಹಬ್ಬವಾದ ಇಂದಿನ ದಿನವನ್ನು, ನಿರುದ್ಯೋಗ ದಿನವನ್ನಾಗಿ ಘೋಷಿಸುವಂತೆ ಒತ್ತಾಯಿಸಿ ಚಿತ್ರದುರ್ಗ ಜಿಲ್ಲಾ ಯೂತ್ ಕಾಂಗ್ರೆಸ್ ಡಿಸಿ ಕಚೇರಿ ಬಳಿ ತರಕಾರಿ ಮಾರುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು.ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪದವೀಧರ ಯುವಕರ ಮೇಲೆ ನಿರುದ್ಯೋಗ ಎಂಬ ಗಧಾ ಪ್ರಹಾರ ನಡೆಸುತ್ತಿದೆ. ಉದ್ಯೋಗ್ಯವಿಲ್ಲದೆ ಯುವಕರು ಅತಂಕಕ್ಕೀಡಾಗಿದ್ದಾರೆ ಎಂದು ಆರೋಪಿಸಿ, ಸಾರ್ವಜನಿಕರಿಗೆ ತರಕಾರಿಯನ್ನು ಮಾರಾಟ ಮಾಡಿದರು.1
- ರಾಜ್ಯ ಸರ್ಕಾರಿ ನೌಕರರಿಗೆ ಶೀಘ್ರದಲ್ಲೇ ‘ಒಪಿಎಸ್’ ಜಾರಿ ಮುರಿತು ಶಶಿ ಹುಲಿಕುಂಟೆ ಅವರು ತಿಳಿಸಿದ್ದಾರೆ. ರಾಜ್ಯ ಸರ್ಕಾರಿ ನೌಕರರಿಗೆ ಶೀಘ್ರದಲ್ಲೇ ‘ಒಪಿಎಸ್’ ಜಾರಿ ಮುರಿತು ಶಶಿ ಹುಲಿಕುಂಟೆ ಅವರು ತಿಳಿಸಿದ್ದಾರೆ. ರಾಜ್ಯ ಸರ್ಕಾರಿ ನೌಕರರಿಗೆ ಎನ್‌ಪಿಎಸ್ (NPS) ರದ್ದುಗೊಳಿಸಿ ಹಳೆಯ ಪಿಂಚಣಿ ಪದ್ಧತಿಯನ್ನು (OPS) ಶೀಘ್ರದಲ್ಲೇ ಆರನೇ ಗ್ಯಾರಂಟಿಯಾಗಿ ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸಿದೆ ಎಂದು ಆಗ್ನೇಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಶಿ ಹುಲಿಕುಂಟೆ ತಿಳಿಸಿದ್ದಾರೆ. ತಾಲೂಕಿನ ವಿವಿಧ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಶಿಕ್ಷಕರೊಂದಿಗೆ ಸಂವಾದ ನಡೆಸಿ ತದ ನಂತರ ಹೊಳಲ್ಕೆರೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿದ ಅವರು, "ಹಿಂದೆ ಎನ್‌ಪಿಎಸ್ ಜಾರಿಗೆ ತಂದವರೇ ಇಂದು ವಾಪಸ್‌ಗೆ ಒತ್ತಾಯಿಸುತ್ತಿರುವುದು ಮೊಸಳೆ ಕಣ್ಣೀರು. ಕಾಂಗ್ರೆಸ್ ಪಕ್ಷವು ಎಲ್ಲರನ್ನೂ ಸಮಾನತೆಯಿಂದ ಕಾಣುವ ಅಭಿವೃದ್ಧಿಪರ ಪಕ್ಷವಾಗಿದೆ. ನಾನು ಕೇವಲ ಚುನಾವಣೆಗೆ ಸೀಮಿತವಾಗದೆ, ಈ ಭಾಗದ ಪದವೀಧರರ ಸಂಘಟನೆ, ಉದ್ಯೋಗ, ಹಾಗೂ ಕೌಶಲ್ಯಾಭಿವೃದ್ಧಿ ತರಬೇತಿ ಮೂಲಕ ಪ್ರತಿಯೊಬ್ಬರಿಗೂ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡಲಿದ್ದೇನೆ" ಎಂದರು. ರಾಜ್ಯ ಸರ್ಕಾರವು ಯುವಕರಿಗೆ ಉದ್ಯೋಗ ಕಲ್ಪಿಸಲು 75,000 ಹುದ್ದೆಗಳ ಭರ್ತಿಗೆ ಸಿದ್ಧತೆ ನಡೆಸಿದ್ದು, ಈಗಾಗಲೇ 15,000 ಶಿಕ್ಷಕರ ನೇಮಕಾತಿಗೆ ಆದೇಶಿಸಿದೆ. ಪೊಲೀಸ್, ಅರಣ್ಯ, ಆರೋಗ್ಯ ಸೇರಿದಂತೆ ವಿವಿಧ ಇಲಾಖೆಗಳ ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಹೇಳಿದರು. "ಆಗ್ನೇಯ ಪದವೀಧರ ಕ್ಷೇತ್ರದಲ್ಲಿ 1,20,000 ಹಾಗೂ ಹೊಳಲ್ಕೆರೆಯಲ್ಲಿ 4,300 ಮತದಾರರಿದ್ದಾರೆ. ಈ ಹಿಂದೆ ಗೆದ್ದ ಬಿಜೆಪಿ ಶಾಸಕರು ಕ್ಷೇತ್ರಕ್ಕೆ ಯಾವುದೇ ಕೊಡುಗೆ ನೀಡಿಲ್ಲ ಎಂಬ ಆಕ್ರೋಶ ಮತದಾರರಲ್ಲಿದೆ. ನಾನು ಗೆದ್ದು ಬಂದರೆ ಪ್ರತಿ ತಿಂಗಳು ಕ್ಷೇತ್ರಕ್ಕೆ ಭೇಟಿ ನೀಡಿ ಶಿಕ್ಷಕರ ಮತ್ತು ಪದವೀಧರರ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಧವಿಧರ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಎ, ಜಯಪ್ಪ ತಾಲೂಕು ಮುಖಂಡರಾದ ನಾಗರಾಜಯ್ಯ, ರವಿಕುಮಾರ್, ಶಿವಕುಮಾರ್, ಚಂದ್ರಪ್ಪ, ಚಿತ್ತಪ್ಪ, ನಿವೃತ್ತ ನೌಕರರ ಸಂಘದ ಹೇಮಂತ್ ಗೌಡ, ವೆಂಕಟೇಶ್, ನೌಕರ ಸಂಘದ ಕಾರ್ಯದರ್ಶಿ ಶ್ರೀಧರ್, ಮೃತ್ಯುಂಜಯಪ್ಪ, ಮದ್ದೇರು ಶಿವಕುಮಾರ್, ಮಲ್ಲೇಶಪ್ಪ, ಉಪ್ಪರಿಗೇನಹಳ್ಳಿ ಹೇಮಂತ್ ಸೇರಿದಂತೆ ನೂರಾರು ಬೆಂಬಲಿಗರು ಉಪಸ್ಥಿತರಿದ್ದರು.1
- ಸರ್ವಧರ್ಮ ಸಮಾನತೆ ಸಾರುವ ದೇವನು ಒಬ್ಬನೇ ನಾಮ ಹಲವು ಸರ್ವ ಧರ್ಮ ಸಮಾನತೆ ಸಾರುವ. ಚಳ್ಳಕೆರೆ ನಗರದ ಮಹದೇವಿಯ ರಸ್ತೆಯ ಇಬ್ರಾಹಿಂಪುರ ಓಂ ಗಣಪತಿ ಯುವಕ ಬಳಗದ ವತಿಯಿಂದ ದೇವನು ಒಬ್ಬನೇ ನಾಮವು ಹಲವು ಎನ್ನುವ ವಿನಾಯಕನ ಪ್ರತಿಷ್ಠಾಪನೆ ಮಾಡಲಾಗಿತ್ತು.1
- ಹುಳಿಯಾರು ಪಟ್ಟಣ ಪಂಚಾಯಿತಿಯ ಕಸ ವಿಲೇವಾರಿ ಘಟಕ ನಿರ್ಮಾಣಕ್ಕೆ ಕೆರೆ ಸೂರಗೊಂಡನಹಳ್ಳಿ ಸರ್ವೆ ನಂಬರ್ 32 ರ ಹೊಸಹಳ್ಳಿ ಕೈಮರದ ಬಳಿ ಐದು ಎಕರೆ ಜಾಗ ಮಂಜೂರು1
- ಊರ್ಡಿಗೆರೆಯಲ್ಲಿ ನೂತನ ನಂದಿನಿ ಕ್ಷೀರ ಮಳಿಗೆ: ಭೇಟಿ ನೀಡಿ ಚಹಾ ಸವಿದ ಡಾ. ಜಿ. ಪರಮೇಶ್ವರ್! ಊರ್ಡಿಗೆರೆಯಲ್ಲಿ ನೂತನ ನಂದಿನಿ ಕ್ಷೀರ ಮಳಿಗೆ: ಭೇಟಿ ನೀಡಿ ಚಹಾ ಸವಿದ ಡಾ. ಜಿ. ಪರಮೇಶ್ವರ್! ಸಮಾಜ ಸೇವಕ ದುರ್ಗಪ್ಪ ಸ್ಥಾಪಿಸಿರುವ ನಂದಿನಿ ಕ್ಷೀರ ಮಳಿಗೆಗೆ ಡಿಸಿಎಂ ಭೇಟಿ ನಂದಿನಿ ಕರ್ನಾಟಕದ ಉತ್ತಮ ಬ್ರಾಂಡ್: ಡಾ. ಜಿ. ಪರಮೇಶ್ವರ್ ರೈತರು ಹಾಗೂ ಗ್ರಾಹಕರಿಗೆ ನಂದಿನಿಯಿಂದ ಉತ್ತಮ ಸೇವೆ: ಡಿಸಿಎಂ ಮೆಚ್ಚುಗೆ ತುಮಕೂರು ತಾಲೂಕಿನ ಊರ್ಡಿಗೆರೆಯಲ್ಲಿ ನೂತನವಾಗಿ ಸ್ಥಾಪಿಸಿರುವ ನಂದಿನಿ ಕ್ಷೀರ ಮಳಿಗೆಗೆ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಭೇಟಿ ನೀಡಿ ಚಹಾ ಸವಿದರು. ಸಮಾಜ ಸೇವಕ ಹಾಗೂ ಮುಖಂಡ ದುರ್ಗಪ್ಪ ಅವರು ನೂತನವಾಗಿ ಆರಂಭಿಸಿರುವ ಕ್ಷೀರ ಮಳಿಗೆಗೆ ಭೇಟಿ ನೀಡಿದ ಡಿಸಿಎಂ, ನಂದಿನಿ ಸಂಸ್ಥೆಯ ಕಾರ್ಯವೈಖರಿ ಹಾಗೂ ಗುಣಮಟ್ಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ತುಮಕೂರು ತಾಲೂಕಿನ ಊರ್ಡಿಗೆರೆಯಲ್ಲಿ ಸಮಾಜ ಸೇವಕ ಹಾಗೂ ಮುಖಂಡ ದುರ್ಗಪ್ಪ ಅವರು ನೂತನವಾಗಿ ಸ್ಥಾಪಿಸಿರುವ ನಂದಿನಿ ಕ್ಷೀರ ಮಳಿಗೆಗೆ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಕ್ಷೀರ ಮಳಿಗೆಯಲ್ಲಿ ಚಹಾ ಸವಿದ ಡಾ. ಜಿ. ಪರಮೇಶ್ವರ್, ನಂದಿನಿ ಕರ್ನಾಟಕ ರಾಜ್ಯದ ಉತ್ತಮ ಬ್ರಾಂಡ್ ಆಗಿ ಗುರುತಿಸಿಕೊಂಡಿದೆ ಎಂದು ಹೇಳಿದರು. ರೈತರು ಹಾಗೂ ಗ್ರಾಹಕರಿಗೆ ನಂದಿನಿ ಸಂಸ್ಥೆ ಉತ್ತಮ ಸೇವೆ ನೀಡುತ್ತಿದ್ದು, ಗುಣಮಟ್ಟವನ್ನು ಕಾಪಾಡಿಕೊಂಡು ಸ್ಥಳೀಯ ಬ್ರಾಂಡ್ ಆಗಿ ಉತ್ತಮ ಹೆಸರು ಗಳಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ನೂತನವಾಗಿ ನಂದಿನಿ ಕ್ಷೀರ ಮಳಿಗೆ ಆರಂಭಿಸಿರುವ ದುರ್ಗಪ್ಪ ಅವರಿಗೆ ಶುಭವಾಗಲಿ. ವ್ಯಾಪಾರ ಉತ್ತಮವಾಗಿ ನಡೆಯಲಿ ಹಾಗೂ ಗ್ರಾಹಕರಿಗೆ ಗುಣಮಟ್ಟದ ಸೇವೆ ದೊರೆಯಲಿ ಎಂದು ಡಾ. ಜಿ. ಪರಮೇಶ್ವರ್ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಜಿಎಂ ಶಿವಾನಂದ್, ನಿರ್ದೇಶಕ ರಾಜಣ್ಣ, ಮುಖಂಡರಾದ ಕಾರ್ ಮಹೇಶ್, ತಿಲಕ್, ಮಲ್ಲಿಕಾರ್ಜುನ್, ರವಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.2