ಲಕ್ಷ್ಮೀರಂಗನಾಥ ಪತ್ತಿನ ಸೌಹಾರ್ದ ಸಹಕಾರಿಗೆ 78.30 ಲಕ್ಷ ನಿವ್ವಳ ಲಾಭ : ರವಿಕುಮಾರ ಪಾಟೀಲ್. ಮಾನ್ವಿ, : ಶ್ರೀ ಲಕ್ಷ್ಮೀರಂಗನಾಥ ಪತ್ತಿನ ಸೌಹಾರ್ದ ಸಹಕಾರಿ ಸಂಘವು ಒಟ್ಟು 52.95 ಕೋಟಿ ರೂ. ವ್ಯವಹಾರ ನಡೆಸಿ 78.30 ಲಕ್ಷ ರೂ. ನಿವ್ವಳ ಲಾಭ ಗಳಿಸಿದ್ದು ಎಲ್ಲಾ ಗ್ರಾಹಕರು, ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದವರ ಸಹಕಾರವೇ ಪ್ರಮುಖ ಕಾರಣವಾಗಿದೆ ಎಂದು ಅಧ್ಯಕ್ಷ ರವಿಕುಮಾರ ಪಾಟೀಲ್ ವಕೀಲ ಹೇಳಿದರು. ಪಟ್ಟಣದ ಶ್ರೀ ಲಕ್ಷ್ಮೀ ರಂಗನಾಥ ಪತ್ತಿನ ಸೌಹಾರ್ದ ಸಹಕಾರಿ ಸಂಘದ ಸಭಾಂಗಣದಲ್ಲಿ ನಡೆದ 8 ನೇ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಶ್ರೀ ಲಕ್ಷ್ಮೀರಂಗನಾಥ ಪತ್ತಿನ ಸೌಹಾರ್ದ ಸಹಕಾರಿಯು ಸಾವಿರಕ್ಕೂ ಅಧಿಕ ಸದಸ್ಯರನ್ನು ಹೊಂದಿದ್ದು ಪ್ರಸ್ತುತ ಸಾಲಿನಲ್ಲಿ ಸಹಕಾರಿಯ ಒಟ್ಟು ಷೇರು ಬಂಡವಾಳ 59.58 ಲಕ್ಷ, ಒಟ್ಟು ದುಡಿಯುವ ಬಂಡವಾಳ 28.17 ಕೋಟಿ ರೂ.ಗಳಿದ್ದು ಸಹಕಾರಿಯ ಠೇವಣಿಗಳು 24.77 ಕೋಟಿ ಹಾಗೂ ಸಾಲ ಮತ್ತು ಮುಂಗಡಗಳು 22.10 ಮತ್ತು ಹೂಡಿಕೆಗಳು 5.93 ಕೋಟಿ ಸೇರಿದಂತೆ ಒಟ್ಟು 52.95 ಕೋಟಿ ರೂ. ವ್ಯವಹಾರದ ವಹಿವಾಟು ನಡೆಸಿ 78.30 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ. ಈ ಸಹಕಾರಿ ಆರ್ಥಿಕ ವ್ಯವಹಾರದ ಜೊತೆಗೆ ಸಾಮಾಜಿಕ, ಶೈಕ್ಷಣಿಕ, ಸಾಹಿತ್ಯ, ಸಾಂಸ್ಕೃತಿಕ, ಆರೋಗ್ಯ ಕ್ಷೇತ್ರಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದೆ ಎಂದು ಹೇಳಿದರು.ಜೀವನಕ್ಕೆ ಆರ್ಥಿಕ ಆಸರೆ ಎನ್ನುವ ಸಹಕಾರದ ತತ್ವದಡಿಯಲ್ಲಿ ಸಾಮಾಜಿಕವಾಗಿ ಹಿಂದುಳಿದ ವರ್ಗಗಳು, ಸಣ್ಣಪುಟ್ಟ ವ್ಯಾಪಾರಸ್ಥರು, ಉದ್ದಿಮೆದಾರರು ಸೇರಿದಂತೆ ಇನ್ನಿತರ ವರ್ಗದ ಆರ್ಥಿಕ ಪ್ರಗತಿಗಾಗಿ ಶ್ರೀ ಲಕ್ಷ್ಮೀರಂಗನಾಥ ಸಹಕಾರಿ ಸದಾ ಶ್ರಮಿಸುತ್ತಿದೆ. ನಮ್ಮ ಸಹಕಾರಿಯಲ್ಲಿ ಸಾಲ ಸೌಲಭ್ಯ ಪಡೆದಿರುವವರು ಸಕಾಲದಲ್ಲಿ ಸಾಲ ಮರುಪಾವತಿ ಮಾಡುತ್ತಿದ್ದು ಜೊತೆಗೆ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದವರು ಅತ್ಯಂತ ಪ್ರಾಮಾಣಿಕತೆಯಿಂದ ಸಹಕಾರ ನೀಡುತ್ತಿರುವುದರಿಂದ ಪ್ರಗತಿ ಸಾಧಿಸಲು ಸಾಧ್ಯವಾಗಿದೆ ಎಂದು ರವಿಕುಮಾರ ಪಾಟೀಲ್ ವಕೀಲ ತಿಳಿಸಿದರು. ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂಪಾದಕ ಲಕ್ಷಣರಾಯ್ ಕಪಗಲ್ ಅವರು ಸಹಕಾರದಿಂದ ಸಮೃದ್ಧಿ ಎಂಬ ತತ್ವವೇ ನಮ್ಮ ಭಾರತದ ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬು. ಇಂದು ಸಹಕಾರಿ ಸಂಘಗಳ ಕುರಿತು ಮಾತನಾಡಲು ಅವಕಾಶ ಮಾಡಿಕೊಟ್ಟ ಶ್ರೀಲಕ್ಷ್ಮೀ ರಂಗನಾಥ ಸಹಕಾರಿ ಅಧ್ಯಕ್ಷರಿಗೆ, ಆಡಳಿತ ಮಂಡಳಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದರು. ಶ್ರೀಲಕ್ಷ್ಮೀರಂಗನಾಥ ಪತ್ತಿನ ಸೌಹಾರ್ದ ಸಹಕಾರಿ ಸಂಘವು ಸಾವಿರಾರು ಬಡವರಿಗೆ ಸಣ್ಣ ವ್ಯಾಪಾರಿಗಳಿಗೆ, ರೈತರಿಗೆ ಆರ್ಥಿಕ ಆಸರೆಯಾಗಿದೆ. ಒಟ್ಟು 52.95 ಕೋಟಿ ರೂ. ವ್ಯವಹಾರ ನಡೆಸಿ 78.30 ಲಕ್ಷ ರೂ. ನಿವ್ವಳ ಲಾಭ ಗಳಿಸಿದ್ದು ಎಲ್ಲಾ ಗ್ರಾಹಕರು, ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದವರ ಸಹಕಾರವೇ ಪ್ರಮುಖವಾಗಿದೆ. ಆರ್ಥಿಕ ಕ್ಷೇತ್ರದ ಬಲವರ್ಧನೆಗಾಗಿ ಅತ್ಯಂತ ದೊರದೃಷ್ಠಿಯನ್ನು ಹೊಂದಿರುವ ರವಿಕುಮಾರ ಪಾಟೀಲ್ ಅವರು ಅತಿ ಚಿಕ್ಕ ವಯಸ್ಸಿನಲ್ಲೇ ಸಹಕಾರಿ ಸಂಘವನ್ನು ಸ್ಥಾಪಿಸಿ ಸಂಘವನ್ನು ಆರ್ಥಿಕ ಪ್ರಗತಿಯತ್ತ ಮುನ್ನೆಡೆಸುತ್ತಿರುವುದು ತುಂಬಾ ಹೆಮ್ಮೆಯ ವಿಷಯ ಎಂದರು.ಸಹಕಾರಿ ಸಂಘಗಳು ಕೇವಲ ಬ್ಯಾಂಕುಗಳಲ್ಲ ಅವು ನಮ್ಮ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಅಭಿವೃದ್ಧಿಯ ಕೇಂದ್ರಗಳು. ಡಾ. ಅಂಬೇಡ್ಕರ್ ರವರು ಹೇಳಿದಂತೆ ಆರ್ಥಿಕ ಸಮಾನತೆ ಇಲ್ಲದೆ ಸಾಮಾಜಿಕ ಸಮಾನತೆ ಸಾಧ್ಯವಿಲ್ಲ. ಆರ್ಥಿಕ ಸಮಾನತೆಯನ್ನು ತರುವ ಶಕ್ತಿ ಸಹಕಾರ ಸಂಘಗಳಿಗಿದೆ. ಆದ್ದರಿಂದ ನಾವೆಲ್ಲರೂ ಸಹಕಾರಿ ಸಂಘಗಳನ್ನು ಬೆಳೆಸೋಣ, ಉಳಿಸೋಣ ಮತ್ತು ಸಮೃದ್ಧ ಭಾರತವನ್ನು ಕಟ್ಟೋಣ ಎಂದು ಲಕ್ಷಣರಾಯ್ ಕಪಗಲ್ ಕರೆ ನೀಡಿದರು. ಮುಖ್ಯೋಪಾಧ್ಯಾಯ ಬಸವರಾಜ ಜಂಗಮರಹಳ್ಳಿ ಮಾತನಾಡಿ ಸಹಕಾರ ಎಂದರೆ ಒಬ್ಬರಿಗೊಬ್ಬರು ಸಹಾಯ ಮಾಡಿಕೊಳ್ಳುವುದು. ಒಬ್ಬ ವ್ಯಕ್ತಿ ಮಾಡಲು ಸಾಧ್ಯವಾಗದ ಕೆಲಸವನ್ನು ಅನೇಕ ಜನರು ಒಟ್ಟು ಸೇರಿ ಮಾಡಿದಾಗ ಅದಕ್ಕೆ ಸಹಕಾರ ಎನ್ನುತ್ತೇವೆ. ಒಬ್ಬರಿಗಾಗಿ ಎಲ್ಲರೂ, ಎಲ್ಲರಿಗಾಗಿ ಒಬ್ಬರು ಎನ್ನುವುದು ಸಹಕಾರದ ಮೂಲ ಮಂತ್ರ. ರೈತರನ್ನು ಸಾಹುಕಾರರ ಶೋಷಣೆಯಿಂದ ಪಾರು ಮಾಡುವ ಮುಖ್ಯ ಉದ್ದೇಶದಿಂದ ಸಹಕಾರಿ ಸಂಘಗಳ ಪಿತಾಮಹ ಕಣಗಿನಹಾಳದ ಸಿದ್ದನಗೌಡ ಪಾಟೀಲ್ ಅವರು ಇಡೀ ಏಷ್ಯಾ ಖಂಡದಲ್ಲೇ ಮೊದಲ ಸಹಕಾರ ಸಂಘವನ್ನು 1905 ರಲ್ಲಿ ಕಣಗಿನಹಾಳದಲ್ಲಿ ಸ್ಥಾಪಿಸಿದವರು. ಇದೇ ಕಾರಣಕ್ಕೆ ಇವರನ್ನು ಕರ್ನಾಟಕದ ಸಹಕಾರಿ ಪಿತಾಮಹ ಎಂದು ಕರೆಯುತ್ತಾರೆ. ಇಂದು ದೇಶದಲ್ಲಿ 8 ಲಕ್ಷಕ್ಕೂ ಹೆಚ್ಚು ಸಹಕಾರಿ ಸಂಘಗಳಿವೆ. ಅದರಲ್ಲೂ ಕರ್ನಾಟಕ ಸಹಕಾರಿ ಚಳುವಳಿಯಲ್ಲಿ ಮುಂಚೂಣಿಯಲ್ಲಿದೆ. ಇಂತಹ ಸಹಕಾರಿ ಕ್ಷೇತ್ರಗಳನ್ನು ಉಳಿಸಿ ಬೆಳೆಸಲು ನಾವೆಲ್ಲರೂ ಸಹಕಾರಿಸೋಣ ಎಂದರು. ಶ್ರೀ ಲಕ್ಷ್ಮೀರಂಗನಾಥ ಪತ್ತಿನ ಸೌಹಾರ್ದದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಸವರಾಜ ಪಾಟೀಲ್ ವಾರ್ಷಿಕ ವರದಿಯನ್ನು ಮಂಡಿಸಿದರು. ವ್ಯವಸ್ಥಾಪಕ ಸಂಜೀವಕುಮಾರ ಕುಲಕರ್ಣಿ ಲಾಭ ನಷ್ಟ ಹಾಗೂ ಕ್ಯಾಷಿಯರ್ ಸುರೇಶ ಚರ್ಚಿಸುವ ವಿಷಯಗಳು ಕುರಿತು ಮತ್ತು ಶಾಖಾ ವ್ಯವಸ್ಥಾಪಕ ಮಂಜುನಾಥ ಮತ್ತು ಲಕ್ಷಣನಾಯಕ ವಿವಿಧ ವರದಿಗಳನ್ನು ಮಂಡಿಸಿದರು. ಈ ಸಂದರ್ಭದಲ್ಲಿ ಶ್ರೀಲಕ್ಷ್ಮೀರಂಗನಾಥ ಪತ್ತಿನ ಸೌಹಾರ್ದ ಸಹಕಾರಿ ಉಪಾಧ್ಯಕ್ಷ ಸತ್ಯನಾರಾಯಣ ಶೆಟ್ಟಿ, ನಿರ್ದೇಶಕರಾದ ಶ್ಯಾಮಸುಂದರ ಶೆಟ್ಟಿ, ಮಲ್ಲನಗೌಡ, ಬ್ರಿಷ್ಣಪ್ಪ ಅಬ್ಬಿಗೇರಿ, ಮಾರುತಿ, ಫರೀದ್, ಪಂಪಾಪತಿ, ವೆಂಕಟೇಶ ಪೂಜಾರಿ, ಭೀಮನಗೌಡ, ರಂಗಾರೆಡ್ಡಿ, ಉರುಕುಂದಪ್ಪ ಸೇರಿದಂತೆ ಅನೇಕ ಗ್ರಾಹಕರು, ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿ ವರ್ಗದವರು ಇದ್ದರು.ಸುಜಾತಾ ಪ್ರಾರ್ಥಿಸಿದರು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಪಾಟೀಲ್ ಸ್ವಾಗತಿಸಿದರು ಅರ್ಜುನ ರೆಡ್ಡಿ ನಿರೂಪಿಸಿದರು ಉರುಕುಂದಪ್ಪ ವಂದಿಸಿದರು.

- ಕಾರಟಗಿಯ ಸ್ಥಳೀಯ ಕಲಾವಿದರಿಂದ ಗಣೇಶ ಚತುರ್ಥಿ ಅಂಗವಾಗಿ ಜನಪದ ಸಂಭ್ರಮ ಕಾರ್ಯಕ್ರಮ4
- ಯಾದಗಿರಿ ನಾಳೆ ಸೆಪ್ಟೆಂಬರ್ 17 ರಂದು ಸೃಷ್ಟಿಕರ್ತ ಭಗವಾನ್ ವಿಶ್ವಕರ್ಮ ಜಯಂತಿಯ ಶುಭಾಶಯಗಳು ಸನ್ಮಾನ್ಯ ಶ್ರೀ ಕೆ ಪಿ ನಂಜುಂಡಿ ವಿಶ್ವಕರ್ಮ ಇವರ ಶ್ರಮ ದಿಂದ ವಿಶ್ವಕರ್ಮ ಜಯಂತಿಯ ಆಚರಿಸುವಂತೆ ಅದು ಸೆಪ್ಟೆಂಬರ್ 17 ರಂದು ವಿಶ್ವಕರ್ಮರ ಹಬ್ಬ ಅಂತೆ ಮನೆ ಮನೆಯಲ್ಲಿ ವಿಶ್ವಕರ್ಮರು ಭಾವಚಿತ್ರಕ್ಕೆ ಪೂಜ್ಯ ಮಾಡಲು ಸೃಷ್ಟಿಕರ್ತನಾದ ಪ್ರೀತಿ ನಂಜುಂಡಿ ಇವರ ಶ್ರಮ1
- ಯಾದಗೀರ್ ರಾಜಕಾರಣದಲ್ಲಿ ಹೊಸ ಹೆಜ್ಜೆ: ಕೆಆರ್‌ಎಸ್‌ಗೆ ಯಾದ್ಗೀರ್ ನ್ಯೂಸ್ ಸಂಪಾದಕ ರಫಿಕ್ ಪಟೇಲ್ ಸೇರ್ಪಡೆ! ಯಾದಗಿರಿ: ಯಾದ್ಗೀರ್ ನ್ಯೂಸ್ ಸಂಪಾದಕರಾದ ಮೊಮ್ಮದ್ ರಫಿಕ್ ಪಟೇಲ್ ಅವರು ಇಂದು ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಪಕ್ಷಕ್ಕೆ ಸೇರ್ಪಡೆಯಾಗುವ ಮೂಲಕ ರಾಜಕೀಯ ಅಖಾಡಕ್ಕೆ ಅಧಿಕೃತ ಪ್ರವೇಶ ಮಾಡಿದ್ದಾರೆ. ಕೆಆರ್‌ಎಸ್ ಪಕ್ಷದ ರಾಜ್ಯ ಗೌರವಾಧ್ಯಕ್ಷರಾದ ರವಿ ಕೃಷ್ಣಾರೆಡ್ಡಿ ಅವರ ಸಮ್ಮುಖದಲ್ಲಿ ರಫಿಕ್ ಪಟೇಲ್ ಅವರು ಪಕ್ಷದ ಸದಸ್ಯತ್ವ ಸ್ವೀಕರಿಸಿದರು. “ಜನರ ಸಮಸ್ಯೆಗಳನ್ನು ಪ್ರಶ್ನಿಸುವ ಧ್ವನಿ ಇನ್ನು ಮುಂದೆ ರಾಜಕೀಯ ವೇದಿಕೆಯಲ್ಲೂ ಮೊಳಗಲಿದೆ” ಎಂಬ ಸಂದೇಶದೊಂದಿಗೆ ಅವರ ರಾಜಕೀಯ ಪ್ರವೇಶ ಕುತೂಹಲ ಮೂಡಿಸಿದೆ. ಯಾದಗಿರಿ ಜಿಲ್ಲೆಯ ಅಭಿವೃದ್ಧಿ, ಜನರ ಸಮಸ್ಯೆಗಳು ಹಾಗೂ ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ರಾಜಕೀಯ ವೇದಿಕೆಯನ್ನು ಬಳಸಿಕೊಳ್ಳುವ ಉದ್ದೇಶದಿಂದ ಕೆಆರ್‌ಎಸ್ ಪಕ್ಷ ಸೇರಿರುವುದಾಗಿ ರಫಿಕ್ ಪಟೇಲ್ ತಿಳಿಸಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ ಜನರ ಧ್ವನಿಯಾಗಿ ಗುರುತಿಸಿಕೊಂಡಿರುವ ರಫಿಕ್ ಪಟೇಲ್ ಅವರ ರಾಜಕೀಯ ಪ್ರವೇಶವು ಯಾದಗಿರಿ ರಾಜಕೀಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆಯೇ? ಎಂಬ ಪ್ರಶ್ನೆ ಇದೀಗ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ಯಾದಗೀರ್ ರಾಜಕಾರಣದಲ್ಲಿ ಹೊಸ ಹೆಜ್ಜೆ: ಕೆಆರ್‌ಎಸ್‌ಗೆ ಯಾದ್ಗೀರ್ ನ್ಯೂಸ್ ಸಂಪಾದಕ ರಫಿಕ್ ಪಟೇಲ್ ಸೇರ್ಪಡೆ! ಯಾದಗಿರಿ: ಯಾದ್ಗೀರ್ ನ್ಯೂಸ್ ಸಂಪಾದಕರಾದ ಮೊಮ್ಮದ್ ರಫಿಕ್ ಪಟೇಲ್ ಅವರು ಇಂದು ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಪಕ್ಷಕ್ಕೆ ಸೇರ್ಪಡೆಯಾಗುವ ಮೂಲಕ ರಾಜಕೀಯ ಅಖಾಡಕ್ಕೆ ಅಧಿಕೃತ ಪ್ರವೇಶ ಮಾಡಿದ್ದಾರೆ. ಕೆಆರ್‌ಎಸ್ ಪಕ್ಷದ ರಾಜ್ಯ ಗೌರವಾಧ್ಯಕ್ಷರಾದ ರವಿ ಕೃಷ್ಣಾರೆಡ್ಡಿ ಅವರ ಸಮ್ಮುಖದಲ್ಲಿ ರಫಿಕ್ ಪಟೇಲ್ ಅವರು ಪಕ್ಷದ ಸದಸ್ಯತ್ವ ಸ್ವೀಕರಿಸಿದರು. “ಜನರ ಸಮಸ್ಯೆಗಳನ್ನು ಪ್ರಶ್ನಿಸುವ ಧ್ವನಿ ಇನ್ನು ಮುಂದೆ ರಾಜಕೀಯ ವೇದಿಕೆಯಲ್ಲೂ ಮೊಳಗಲಿದೆ” ಎಂಬ ಸಂದೇಶದೊಂದಿಗೆ ಅವರ ರಾಜಕೀಯ ಪ್ರವೇಶ ಕುತೂಹಲ ಮೂಡಿಸಿದೆ. ಯಾದಗಿರಿ ಜಿಲ್ಲೆಯ ಅಭಿವೃದ್ಧಿ, ಜನರ ಸಮಸ್ಯೆಗಳು ಹಾಗೂ ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ರಾಜಕೀಯ ವೇದಿಕೆಯನ್ನು ಬಳಸಿಕೊಳ್ಳುವ ಉದ್ದೇಶದಿಂದ ಕೆಆರ್‌ಎಸ್ ಪಕ್ಷ ಸೇರಿರುವುದಾಗಿ ರಫಿಕ್ ಪಟೇಲ್ ತಿಳಿಸಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ ಜನರ ಧ್ವನಿಯಾಗಿ ಗುರುತಿಸಿಕೊಂಡಿರುವ ರಫಿಕ್ ಪಟೇಲ್ ಅವರ ರಾಜಕೀಯ ಪ್ರವೇಶವು ಯಾದಗಿರಿ ರಾಜಕೀಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆಯೇ? ಎಂಬ ಪ್ರಶ್ನೆ ಇದೀಗ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.1
- ಅವೈಜ್ಞಾನಿಕವಾಗಿ ಟೋಲ್ ಗೇಟ್ ನಿರ್ಮಾಣ ಮಾಡಿದ್ದು ತೆರವುಗೊಳಿಸಲು ಆಗ್ರಹ ಅವೈಜ್ಞಾನಿಕವಾಗಿ ಟೋಲ್ ತುರ್ತಾಗಿ ತೆರವುಗೊಳಿಸಿ ಮುಂದಾಗುವ ಅವಘಡಗಳನ್ನು ತಪ್ಪಿಸಲು ಸರ್ಕಾರಗಳು ಮುಂದಾಗಬೇಕು ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ್ ಒತ್ತಾಯ. ಅವೈಜ್ಞಾನಿಕವಾಗಿ ಟೋಲ್‌ನಿಂದ ಸಾಕಷ್ಟು ಬಡ ಚಾಲಕರು ಜೀವ ಬಲಿಯಾಗಿದ್ದು ಇನ್ನಷ್ಟು ಜೀವ ಬಲಿಯಾಗಬೇಕು ? ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ್ ಆರೋಪಿಸಿದ್ದಾರೆ. ಯಾದಗಿರಿ : ಬಡ ವಾಹನ ಚಾಲಕರ ನಿರಂತರ ಜೀವ ತೆಗೆಯುತ್ತಿರುವ ಯಾದಗಿರಿ ರಾಯಚೂರು ಹೆದ್ದಾರಿಗೆ ಅವೈಜ್ಞಾನಿಕವಾಗಿ ನಿರ್ಮಿಸಿದ ಟೋಲ್‌ನ್ನು ತುರ್ತಾಗಿ ತೆರವುಗೊಳ್ಳಿಸಿ ಇಂದೇ ಆದ ಅನಾವುತಗಳನ್ನು ಇನ್ನು ಮುಂದೇ ಅನಾವುತಗಳನ್ನು ಆಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸಾಮಾಜಿಕ ಹೋರಾಟಗಾರ ಉಮೇಶ ಕೆ ಮುದ್ನಾಳ ಆಗ್ರಹಿಸಿದ್ದಾರೆ ಯಾದಗಿರಿ ತಾಲ್ಲೂಕಿನ ಆರ್.ಹೊಸಳ್ಳಿ ಮತ್ತು ನಾಗಲಾಪುರ ಮಧ್ಯದಲ್ಲಿ ಬರುವ ಯಾದಗಿರಿ ರಾಯಚೂರು ಹೋಗುವ ಹೆದ್ದಾರಿಯಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಿದ ಟೋಲ್ ಸ್ಥಳಕ್ಕೆ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ್ ಬೇಟಿ ನೀಡಿ ಪರಿಶೀಲಿಸಿದ ನಂತರ ರೈತರ ಮತ್ತು ವಾಹನ ಸವಾರರ ಜೊತೆ ಚರ್ಚಿಸಿ ನಂತರ ದೀಡಿರ್‌ನ ಸ್ಥಳದಲ್ಲಿ ಪ್ರತಿಭಟನೆ ನಡೆಸಿ ಮಾತನಾಡಿದ ಅವರು ಈ ಟೋಲ್‌ನಲ್ಲಿ ವಿದ್ಯುತ್ ಲೈಟ್, ಸ್ಟೀಕರ್ ಸರಿಯಾಗಿ ಅಳವಡಸದೆ ಅವೈಜ್ಞಾನಿಕವಾಗಿ ನಿರ್ಮಿಸಿ ಈ ಟೋಲ್‌ನಲ್ಲಿ ಈಗಾಗಲೇ ಸಾಕಷ್ಟು ಜೀವಗಳು ಬಲಿಯಾಗಿದ್ದು ಕೇಂದ್ರ ಮತ್ತು ರಾಜ್ಯ ಸರ್ಕಾರ ಇಲ್ಲಿವರೆಗೆ ಯಾವುದೇ ಕ್ರಮ ಕೈಗೊಳ್ಳದೇ ದಿವ್ಯ ನಿರ್ಲಕ್ಷವಹಿಸಿರುವುದು ಇದು ನಾಚೀಗೇಡಿನ ಸಂಗತಿ ಎಂದು ದಿನ ನಿತ್ಯ ಈ ರಸ್ತೆಯಲ್ಲಿ ಸಾವಿರಾರೂ ವಾಹನಗಳು ಸಂಚಾರ ಮಾಡುತ್ತಿದ್ದು ಅವೈಜ್ಞಾನಿಕವಾಗಿ ನಿರ್ಮಿಸಿದ ಟೋಲನ ಕಾರಣ ಬಡವ ಜೀವಗಳು ಬಲಿಯಾಗುತ್ತಿದ್ದು ಸಂಬAಧಪಟ್ಟ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತು ಇನ್ನೆಷ್ಟು ಬಡಜೀವಿಗಳನ್ನು ಬಲಿಪಶು ಮಾಡುತ್ತಿದ್ದಿರಿ ಎಂದು ಕಾರವಾಗಿ ಪ್ರಶ್ನಿಸಿದರು. ತಕ್ಷಣ ಟೋಲ್‌ನ್ನು ತೆರವುಗೊಳ್ಳಿಸಿ ಮುಂದಾಗುವ ಅವಗಡಗಳನ್ನು ತಪ್ಪಿಸಲು ಸರ್ಕಾರಗಳು ಮುಂದಾಗಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಈ ಟೋಲ್ ಸ್ಥಳದಲ್ಲೇ ಮುಖ್ಯ ರಸ್ತೆ ತಡೆದ ಬೃಹತ್ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಸರ್ಕಾರಗಳಿಗೆ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ್ ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ. ಇದೇ ಸಂದರ್ಬದಲ್ಲಿ ಮಲ್ಲೇಶಿ, ಪವನ. ತಿಪ್‌ಣ್ಣ, ಬಸಲಿಂಗಪ್ಪ, ಹಣಮಂತ, ಮರಲಿಂಗಪ್ಪ, ಮಹಾದೇವಪ್ಪ ಮೋನಪ್ಪ ಮಲ್ಲಪ್ಪ ಚಂದ್ರು ಸಿದ್ದು ತಿಮ್ಮಪ್ಪ ಮಲ್ಲಪ್ಪ ಆನಂದ ಭೀಮಪ್ಪ ಮಲ್ಲಪ್ಪ ಸಾಬು ಮಲ್ಲಪ್ಪ ಸೇರಿದಂತೆ ಅನೇಕು ಇದ್ದರು2
- ನಾಳೆ ದೇಶದ ಹೆಮ್ಮೆಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜಿ ಅವರ ಜನ್ಮದಿನ. ಕುಷ್ಟಗಿ : ದೇಶದ ಅಭಿವೃದ್ಧಿ, ಜನಸೇವೆ ಹಾಗೂ ರಾಷ್ಟ್ರ ನಿರ್ಮಾಣಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿರುವ ದೇಶದ ಹೆಮ್ಮೆಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜಿ ಅವರಿಗೆ ನಾಳೆ ಜನ್ಮದಿನವಾಗಿರುವುದರಿಂದ ಅವರಿಗೆ ಇಂದು ಮುಂಚಿತವಾಗಿ ಹೃತ್ಪೂರ್ವಕವಾದ ಹುಟ್ಟುಹಬ್ಬದ ಶುಭಾಶಯಗಳನ್ನು ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಹಾಗೂ ಕುಷ್ಟಗಿ ಕ್ಷೇತ್ರದ ಶಾಸಕರಾದ ದೊಡ್ಡನಗೌಡ ಹೆಚ್ ಪಾಟೀಲ್ ಅವರು ತಿಳಿಸಿದ್ದಾರೆ. ನಾಳೆ ಸೆಪ್ಟೆಂಬರ್ 17ರಂದು ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ದೀಪ ಬೆಳಗಿಸಿ, ಮೋದಿಜಿ ಅವರಿಗೆ ಇನ್ನಷ್ಟು ಹೆಚ್ಚು ದೇಶ ಸೇವೆ ಮಾಡುವ ಶಕ್ತಿ, ಆರೋಗ್ಯ, ಆಯುಷ್ಯ ಹಾಗೂ ಯಶಸ್ಸನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸೋಣ ಹಾಗೂ ಸೇವೆಯ ಸಂಕಲ್ಪದೊಂದಿಗೆ, ರಾಷ್ಟ್ರ ನಿರ್ಮಾಣದ ಪಯಣಕ್ಕೆ ನಮ್ಮ ನಿಮ್ಮೆಲ್ಲರ ಬೆಂಬಲ ಇರಲಿ ಎಂದು ಶಾಸಕರು ಹೇಳಿದ್ದಾರೆ.2
- ಹಿರೇಓತಗೇರಿ ಗ್ರಾಮದಲ್ಲಿ ಭಕ್ತಿಭಾವದಿಂದ ವಿಘ್ನನಿವಾರಕನ ವಿಸಜ೯ನೆ ಇಳಕಲ್ ; ತಾಲೂಕಿನ ಹಿರೇಓತಗೇರಿ ಗ್ರಾಮದಲ್ಲಿಶ್ರೀ ಸಿದ್ಧಿವಿನಾಯಕ ಸೇವಾ ಸಮಿತಿ ಬಳಗದ ವತಿಯಿಂದ ಪ್ರತಿಷ್ಠಾಪನೆ ಮಾಡುದ್ದ ಗಣೇಶನನ್ನ ಇಂದು ಭಕ್ತಿ ಭಾವದಿಂದ ಪೂಜಿಸಿ ವಿಸಜ೯ನೆ ಮಾಡಿದರು.3
- ಸತೀಶ್ ಜಾರಕಿಹೊಳಿ ವಿರುದ್ಧದ ED ದಾಳಿ ಖಂಡಿಸಿ ಮಸ್ಕಿ ಪಟ್ಟಣದಲ್ಲಿ ಪ್ರತಿಭಟನೆ ಸತೀಶ್ ಜಾರಕಿಹೊಳಿ ವಿರುದ್ಧದ ED ದಾಳಿ ಖಂಡಿಸಿ ಪ್ರತಿಭಟನೆ ಮಸ್ಕಿ: ಪಟ್ಟಣದ ಸರ್ಕಿಟ್ ಹೌಸ್‌ನಲ್ಲಿ ವಾಲ್ಮೀಕಿ ಸಮಾಜದ ವತಿಯಿಂದ ಪೂರ್ವಭಾವಿ ಸಭೆ ನಡೆಯಿತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ವಾಲ್ಮೀಕಿ ಸಮಾಜದ ಮುಖಂಡರು ಮಾತನಾಡಿದರು , ಸಚಿವ ಸತೀಶ್ ಜಾರಕಿಹೊಳಿ ಅವರ ವಿರುದ್ಧ ನಡೆದಿರುವ ED ದಾಳಿಯನ್ನು ಖಂಡಿಸಿ, ವಾಲ್ಮೀಕಿ ಸಮಾಜದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಶುಕ್ರವಾರ 18ರಂದು ಮಸ್ಕಿ ಪಟ್ಟಣದ ವಾಲ್ಮೀಕಿ ಸರ್ಕಲ್‌ನಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿ, ಮಸ್ಕಿ ಹಳೆ ಬಸ್ ನಿಲ್ದಾಣದ ಅಂಬೇಡ್ಕರ್ ಸರ್ಕಲ್‌ವರೆಗೆ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು. ED ದಾಳಿ ರಾಜಕೀಯ ಉದ್ದೇಶದಿಂದ ನಡೆಯುತ್ತಿದೆ ಎಂಬ ಆರೋಪ ಕೇಳಿಬರುತ್ತಿದ್ದು, ಈ ಹಿನ್ನೆಲೆಯಲ್ಲಿ ವಾಲ್ಮೀಕಿ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಬೇಕು ಭೀಮಣ್ಣ ನಾಯಕ ಕರೆ ನೀಡಿದರು. ಸಭೆಯಲ್ಲಿ ವಾಲ್ಮೀಕಿ ಸಮಾಜದ ಮುಖಂಡರು, ಪದಾಧಿಕಾರಿಗಳು ಹಾಗೂ ಸಮಾಜದ ಸದಸ್ಯರು ಉಪಸ್ಥಿತರಿದ್ದರು.1
- ಶಾರ್ಟ್ ಸರ್ಕ್ಯೂಟ್‌ಗೆ 7.5 ಎಕರೆ ಕಬ್ಬು ಬೆಂಕಿಗಾಹುತಿ; ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ ಕಲಬುರಗಿ: ಜಿಲ್ಲೆಯ ಕಾಳಗಿ ತಾಲೂಕಿನ ಬೆಣ್ಣೂರ (ಬಿ) ಗ್ರಾಮದಲ್ಲಿ ಟ್ರಾನ್ಸ್‌ಫಾರ್ಮರ್‌ನಲ್ಲಿ ಉಂಟಾದ ಶಾರ್ಟ್ ಸರ್ಕ್ಯೂಟ್‌ನ ಪರಿಣಾಮ ಸುಮಾರು 7.5 ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿಯಾಗಿದೆ. ಘಟನೆಯಿಂದ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ. ಗ್ರಾಮದ ಜಗದೇವಿ ಈಶ್ವರಪ್ಪ ಬೆನಕನಹಳ್ಳಿ ಹಾಗೂ ಸಿದ್ಧಲಿಂಗ ಬೆನಕನಹಳ್ಳಿ ಅವರಿಗೆ ಸೇರಿದ ಜಮೀನಿನಲ್ಲಿ ಬೆಳೆದಿದ್ದ ಕಬ್ಬಿಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಬೆಂಕಿ ವ್ಯಾಪಕವಾಗಿ ಹರಡಿ ಬೆಳೆ ಸಂಪೂರ್ಣ ಸುಟ್ಟುಹೋಗಿದೆ. ಟ್ರಾನ್ಸ್‌ಫಾರ್ಮರ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾದ ಪರಿಣಾಮವೇ ಅವಘಡ ಸಂಭವಿಸಿದೆ ಎಂದು ರೈತರು ಆರೋಪಿಸಿದ್ದು, ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ದೂರಿದ್ದಾರೆ. ಘಟನೆಯ ಮಾಹಿತಿ ತಿಳಿದು ಕಾಳಗಿ ತಹಶೀಲ್ದಾರ್ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಾನಿಗೊಳಗಾದ ಜಮೀನು ಹಾಗೂ ನಾಶವಾದ ಬೆಳೆಯ ಮಾಹಿತಿಯನ್ನು ಅಧಿಕಾರಿಗಳು ಸಂಗ್ರಹಿಸಿದರು. ಈ ಕುರಿತು ಆಲ್ ಇಂಡಿಯಾ ಕಿಸಾನ್ ಸಭಾದ ಜಿಲ್ಲಾಧ್ಯಕ್ಷ ಭೀಮಾಶಂಕರ ಮಾಡಿಯಾಳ ಮಾತನಾಡಿ, ಬೆಂಕಿ ಅವಘಡದಿಂದ ನಷ್ಟ ಅನುಭವಿಸಿದ ರೈತರಿಗೆ ತಲಾ ₹10 ಲಕ್ಷ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಜೆಸ್ಕಾಂ ಇಲಾಖೆ ಸಮಗ್ರ ತನಿಖೆ ನಡೆಸಿ ವಿಶೇಷ ಪರಿಹಾರ ಘೋಷಿಸಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಟ್ರಾನ್ಸ್‌ಫಾರ್ಮರ್‌ಗಳು ಹಾಗೂ ವಿದ್ಯುತ್ ಮಾರ್ಗಗಳ ಸುರಕ್ಷತಾ ಪರಿಶೀಲನೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು. #Kalaburagi #ಕಲಬುರಗಿ #ಕಾಳಗಿ #Bennur #ಕಬ್ಬುಬೆಳೆ #ರೈತರು #ಶಾರ್ಟ್ಸರ್ಕ್ಯೂಟ್ #ಜೆಸ್ಕಾಂ #ಬೆಂಕಿಅವಘಡ #ರೈತನಷ್ಟ #ಪರಿಹಾರ #YadgirNews ಶಾರ್ಟ್ ಸರ್ಕ್ಯೂಟ್‌ಗೆ 7.5 ಎಕರೆ ಕಬ್ಬು ಬೆಂಕಿಗಾಹುತಿ; ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ ಕಲಬುರಗಿ: ಜಿಲ್ಲೆಯ ಕಾಳಗಿ ತಾಲೂಕಿನ ಬೆಣ್ಣೂರ (ಬಿ) ಗ್ರಾಮದಲ್ಲಿ ಟ್ರಾನ್ಸ್‌ಫಾರ್ಮರ್‌ನಲ್ಲಿ ಉಂಟಾದ ಶಾರ್ಟ್ ಸರ್ಕ್ಯೂಟ್‌ನ ಪರಿಣಾಮ ಸುಮಾರು 7.5 ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿಯಾಗಿದೆ. ಘಟನೆಯಿಂದ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ. ಗ್ರಾಮದ ಜಗದೇವಿ ಈಶ್ವರಪ್ಪ ಬೆನಕನಹಳ್ಳಿ ಹಾಗೂ ಸಿದ್ಧಲಿಂಗ ಬೆನಕನಹಳ್ಳಿ ಅವರಿಗೆ ಸೇರಿದ ಜಮೀನಿನಲ್ಲಿ ಬೆಳೆದಿದ್ದ ಕಬ್ಬಿಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಬೆಂಕಿ ವ್ಯಾಪಕವಾಗಿ ಹರಡಿ ಬೆಳೆ ಸಂಪೂರ್ಣ ಸುಟ್ಟುಹೋಗಿದೆ. ಟ್ರಾನ್ಸ್‌ಫಾರ್ಮರ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾದ ಪರಿಣಾಮವೇ ಅವಘಡ ಸಂಭವಿಸಿದೆ ಎಂದು ರೈತರು ಆರೋಪಿಸಿದ್ದು, ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ದೂರಿದ್ದಾರೆ. ಘಟನೆಯ ಮಾಹಿತಿ ತಿಳಿದು ಕಾಳಗಿ ತಹಶೀಲ್ದಾರ್ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಾನಿಗೊಳಗಾದ ಜಮೀನು ಹಾಗೂ ನಾಶವಾದ ಬೆಳೆಯ ಮಾಹಿತಿಯನ್ನು ಅಧಿಕಾರಿಗಳು ಸಂಗ್ರಹಿಸಿದರು. ಈ ಕುರಿತು ಆಲ್ ಇಂಡಿಯಾ ಕಿಸಾನ್ ಸಭಾದ ಜಿಲ್ಲಾಧ್ಯಕ್ಷ ಭೀಮಾಶಂಕರ ಮಾಡಿಯಾಳ ಮಾತನಾಡಿ, ಬೆಂಕಿ ಅವಘಡದಿಂದ ನಷ್ಟ ಅನುಭವಿಸಿದ ರೈತರಿಗೆ ತಲಾ ₹10 ಲಕ್ಷ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಜೆಸ್ಕಾಂ ಇಲಾಖೆ ಸಮಗ್ರ ತನಿಖೆ ನಡೆಸಿ ವಿಶೇಷ ಪರಿಹಾರ ಘೋಷಿಸಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಟ್ರಾನ್ಸ್‌ಫಾರ್ಮರ್‌ಗಳು ಹಾಗೂ ವಿದ್ಯುತ್ ಮಾರ್ಗಗಳ ಸುರಕ್ಷತಾ ಪರಿಶೀಲನೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು. #Kalaburagi #ಕಲಬುರಗಿ #ಕಾಳಗಿ #Bennur #ಕಬ್ಬುಬೆಳೆ #ರೈತರು #ಶಾರ್ಟ್ಸರ್ಕ್ಯೂಟ್ #ಜೆಸ್ಕಾಂ #ಬೆಂಕಿಅವಘಡ #ರೈತನಷ್ಟ #ಪರಿಹಾರ #YadgirNews1
- ನಾಳೆ ಅದ್ದೂರಿಯಾಗಿ ನಡೆಯಲಿರುವ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ ಆಚರಿಸಲು ಕುಷ್ಟಗಿ ಕ್ಷೇತ್ರದ ಶಾಸಕರಾದ ದೊಡ್ಡನಗೌಡ ಹೆಚ್ ಪಾಟೀಲ್ ಕರೆ. ಕುಷ್ಟಗಿ : ನಾಳೆ ಸೆಪ್ಟೆಂಬರ್ 17 ನಮ್ಮ ಕಲ್ಯಾಣ ಕರ್ನಾಟಕದ ಇತಿಹಾಸದಲ್ಲೇ ಅತ್ಯಂತ ಪವಿತ್ರ ಮತ್ತು ಹೆಮ್ಮೆಯ ದಿನ! ನಾಳೆ ನಾವು ‘ಕಲ್ಯಾಣ ಕರ್ನಾಟಕ ವಿಮೋಚನಾ ದಿನ’ವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸೋಣವೆಂದು ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಹಾಗೂ ಕುಷ್ಟಗಿ ಕ್ಷೇತ್ರದ ಶಾಸಕರಾದ ದೊಡ್ಡನಗೌಡ ಹೆಚ್ ಪಾಟೀಲ್ ಅವರು ಹೇಳಿದರು. 1947ರಲ್ಲಿ ಇಡೀ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕರೂ, ನಮ್ಮ ಕಲಬುರಗಿ, ಬೀದರ್, ರಾಯಚೂರು, ಕೊಪ್ಪಳ, ಯಾದಗಿರಿ, ಬಳ್ಳಾರಿ ಮತ್ತು ವಿಜಯನಗರದ ಜನತೆ ನಿಜಾಮರ ಹಾಗೂ ರಜಾಕಾರರ ಕೌರ್ಯವನ್ನು ಎದುರಿಸಬೇಕಾಯಿತು. ಭಾರತ ಸರ್ಕಾರದ ‘ಆಪರೇಷನ್ ಪೋಲೋ’ ಕಾರ್ಯಾಚರಣೆಯ ಫಲವಾಗಿ, 1948ರ ಸೆಪ್ಟೆಂಬರ್ 17ರಂದು ನಮಗೆ ನಿಜವಾದ ಸ್ವಾತಂತ್ರ್ಯ ದೊರೆಯಿತು. ಈ ಮಹಾನ್ ವಿಮೋಚನೆಗಾಗಿ ಹೋರಾಡಿ, ತ್ಯಾಗ ಮತ್ತು ಬಲಿದಾನ ನೀಡಿದ ಪ್ರತಿಯೊಬ್ಬ ಅಮರ ವೀರರಿಗೂ, ಸ್ವಾತಂತ್ರ್ಯ ಹೋರಾಟಗಾರರಿಗೂ ನನ್ನ ಗೌರವಪೂರ್ವಕ ಶ್ರದ್ಧಾಂಜಲಿಗಳು. ನಾಳೆ ಪ್ರತಿಯೊಬ್ಬರೂ ನಮ್ಮ ನಾಡಿನ ಈ ಐತಿಹಾಸಿಕ ದಿನವನ್ನು ಕೇವಲ ಒಂದು ಸರ್ಕಾರಿ ಕಾರ್ಯಕ್ರಮವಾಗಿ ನೋಡದೆ, ಪ್ರತಿಯೊಂದು ಮನೆಯಲ್ಲೂ, ಪ್ರತಿಯೊಂದು ಊರಲ್ಲೂ ಅತ್ಯಂತ ಅದ್ಧೂರಿಯಾಗಿ ಆಚರಿಸೋಣ. ಈ ಭಾಗದ ಶಿಕ್ಷಣ, ಉದ್ಯೋಗ, ನೀರಾವರಿ ಹಾಗೂ ಸಮಗ್ರ ಅಭಿವೃದ್ಧಿಗೆ ನಾವೆಲ್ಲರೂ ಒಂದಾಗಿ ಶ್ರಮಿಸುವ ಸಂಕಲ್ಪ ಮಾಡೋಣ ಎಂದು ಶಾಸಕರು ಕರೆ ನೀಡಿದರು.2