ನಾಗಮಲೆಯಲ್ಲಿ ಚಿರತೆ ದಾಳಿ: ಬಾಲಕನ ದುರ್ಮರಣ ಆಡಳಿತದ ವೈಫಲ್ಯಕ್ಕೆ ಕನ್ನಡಿ ಮಲೆ ಮಹದೇಶ್ವರ ಬೆಟ್ಟದ ನಾಗಮಲೆಯಲ್ಲಿ ನಡೆದ ಚಿರತೆ ದಾಳಿಯಲ್ಲಿ ಬೆಂಗಳೂರು ಮೂಲದ 10 ವರ್ಷದ ಬಾಲಕ ಹರ್ಷಿತ್ ದುರ್ಮರಣಕ್ಕೀಡಾದ ಘಟನೆ ರಾಜ್ಯದ ಜನರನ್ನು ಬೆಚ್ಚಿಬೀಳಿಸಿದೆ. ದೇವರ ದರ್ಶನಕ್ಕೆ ಬಂದಿದ್ದ ಪುಟ್ಟ ಬಾಲಕನ ಜೀವ ಹೀಗೆ ಕಳೆದುಹೋಗಿರುವುದು ಅತ್ಯಂತ ಬೇಸರದ ಮತ್ತು ತಲೆ ತಗ್ಗಿಸುವ ಸಂಗತಿಯಾಗಿದೆ. ಈ ಘಟನೆ ಕೇವಲ ಒಂದು ದುರಂತವಲ್ಲ, ಭಕ್ತರ ಸುರಕ್ಷತೆ ವಿಚಾರದಲ್ಲಿ ಸರ್ಕಾರ ಮತ್ತು ಅರಣ್ಯ ಇಲಾಖೆಯ ನಿರ್ಲಕ್ಷ್ಯಕ್ಕೆ ಸ್ಪಷ್ಟ ಉದಾಹರಣೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಕಾಡುಪ್ರಾಣಿಗಳು ಜನವಸತಿ ಹಾಗೂ ಯಾತ್ರಾ ಮಾರ್ಗಗಳತ್ತ ಬರುತ್ತಿರುವ ಘಟನೆಗಳು ಹೆಚ್ಚಾಗುತ್ತಿದ್ದರೂ, ನಾಗಮಲೆಯಂತಹ ಕಾಲುನಡಿಗೆ ದಾರಿಗಳಲ್ಲಿ ಸಮರ್ಪಕ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಭಕ್ತರು ಸಂಚರಿಸುವ ಪ್ರದೇಶಗಳಲ್ಲಿ ಸಿಸಿಟಿವಿ ಅಳವಡಿಕೆ, ಎಚ್ಚರಿಕೆ ಫಲಕಗಳು, ಅರಣ್ಯ ಸಿಬ್ಬಂದಿ ಹೆಚ್ಚಳ ಹಾಗೂ ರಾತ್ರಿ ಪಾಳಿಯ ಕಾವಲು ವ್ಯವಸ್ಥೆ ಕಡ್ಡಾಯವಾಗಬೇಕಿತ್ತು. ಆದರೆ ಒಂದು ಮಗು ಜೀವ ಕಳೆದುಕೊಂಡ ಬಳಿಕ ಮಾತ್ರ ವ್ಯವಸ್ಥೆ ಎಚ್ಚರಗೊಳ್ಳುತ್ತಿರುವುದು ಆಡಳಿತದ ಹೊಣೆಗಾರಿಕೆಯನ್ನು ಪ್ರಶ್ನಿಸುವಂತಾಗಿದೆ. ಮೃತ ಬಾಲಕನ ಕುಟುಂಬಕ್ಕೆ ಸರ್ಕಾರ ತಕ್ಷಣ ಪರಿಹಾರ ನೀಡಬೇಕು. ಜೊತೆಗೆ ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಹಾಗೂ ಶಾಶ್ವತ ಕ್ರಮಗಳನ್ನು ಜಾರಿಗೆ ತರಬೇಕು. ಭಕ್ತರ ಜೀವ ರಕ್ಷಣೆ ಪ್ರತಿಯೊಂದು ಇಲಾಖೆಯ ಮೊದಲ ಆದ್ಯತೆಯಾಗಬೇಕು ಎಂಬುದೇ ಈ ದುರ್ಘಟನೆ ನೀಡಿರುವ ದೊಡ್ಡ ಸಂದೇಶವಾಗಿದೆ. ಹರ್ಷಿತ್ ಆತ್ಮಕ್ಕೆ ಶಾಂತಿ ಸಿಗಲಿ. ಆತನ #ಕುಟುಂಬಕ್ಕೆ ಈ ನೋವನ್ನು ಭರಿಸುವ ಶಕ್ತಿ ದೊರಕಲಿ.
ನಾಗಮಲೆಯಲ್ಲಿ ಚಿರತೆ ದಾಳಿ: ಬಾಲಕನ ದುರ್ಮರಣ ಆಡಳಿತದ ವೈಫಲ್ಯಕ್ಕೆ ಕನ್ನಡಿ ಮಲೆ ಮಹದೇಶ್ವರ ಬೆಟ್ಟದ ನಾಗಮಲೆಯಲ್ಲಿ ನಡೆದ ಚಿರತೆ ದಾಳಿಯಲ್ಲಿ ಬೆಂಗಳೂರು ಮೂಲದ 10 ವರ್ಷದ ಬಾಲಕ ಹರ್ಷಿತ್ ದುರ್ಮರಣಕ್ಕೀಡಾದ ಘಟನೆ ರಾಜ್ಯದ ಜನರನ್ನು ಬೆಚ್ಚಿಬೀಳಿಸಿದೆ. ದೇವರ ದರ್ಶನಕ್ಕೆ ಬಂದಿದ್ದ ಪುಟ್ಟ ಬಾಲಕನ ಜೀವ ಹೀಗೆ ಕಳೆದುಹೋಗಿರುವುದು ಅತ್ಯಂತ ಬೇಸರದ ಮತ್ತು ತಲೆ ತಗ್ಗಿಸುವ ಸಂಗತಿಯಾಗಿದೆ. ಈ ಘಟನೆ ಕೇವಲ ಒಂದು ದುರಂತವಲ್ಲ, ಭಕ್ತರ ಸುರಕ್ಷತೆ ವಿಚಾರದಲ್ಲಿ
ಸರ್ಕಾರ ಮತ್ತು ಅರಣ್ಯ ಇಲಾಖೆಯ ನಿರ್ಲಕ್ಷ್ಯಕ್ಕೆ ಸ್ಪಷ್ಟ ಉದಾಹರಣೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಕಾಡುಪ್ರಾಣಿಗಳು ಜನವಸತಿ ಹಾಗೂ ಯಾತ್ರಾ ಮಾರ್ಗಗಳತ್ತ ಬರುತ್ತಿರುವ ಘಟನೆಗಳು ಹೆಚ್ಚಾಗುತ್ತಿದ್ದರೂ, ನಾಗಮಲೆಯಂತಹ ಕಾಲುನಡಿಗೆ ದಾರಿಗಳಲ್ಲಿ ಸಮರ್ಪಕ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಭಕ್ತರು ಸಂಚರಿಸುವ ಪ್ರದೇಶಗಳಲ್ಲಿ ಸಿಸಿಟಿವಿ ಅಳವಡಿಕೆ, ಎಚ್ಚರಿಕೆ ಫಲಕಗಳು, ಅರಣ್ಯ ಸಿಬ್ಬಂದಿ ಹೆಚ್ಚಳ ಹಾಗೂ ರಾತ್ರಿ ಪಾಳಿಯ ಕಾವಲು ವ್ಯವಸ್ಥೆ ಕಡ್ಡಾಯವಾಗಬೇಕಿತ್ತು. ಆದರೆ ಒಂದು ಮಗು ಜೀವ ಕಳೆದುಕೊಂಡ
ಬಳಿಕ ಮಾತ್ರ ವ್ಯವಸ್ಥೆ ಎಚ್ಚರಗೊಳ್ಳುತ್ತಿರುವುದು ಆಡಳಿತದ ಹೊಣೆಗಾರಿಕೆಯನ್ನು ಪ್ರಶ್ನಿಸುವಂತಾಗಿದೆ. ಮೃತ ಬಾಲಕನ ಕುಟುಂಬಕ್ಕೆ ಸರ್ಕಾರ ತಕ್ಷಣ ಪರಿಹಾರ ನೀಡಬೇಕು. ಜೊತೆಗೆ ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಹಾಗೂ ಶಾಶ್ವತ ಕ್ರಮಗಳನ್ನು ಜಾರಿಗೆ ತರಬೇಕು. ಭಕ್ತರ ಜೀವ ರಕ್ಷಣೆ ಪ್ರತಿಯೊಂದು ಇಲಾಖೆಯ ಮೊದಲ ಆದ್ಯತೆಯಾಗಬೇಕು ಎಂಬುದೇ ಈ ದುರ್ಘಟನೆ ನೀಡಿರುವ ದೊಡ್ಡ ಸಂದೇಶವಾಗಿದೆ. ಹರ್ಷಿತ್ ಆತ್ಮಕ್ಕೆ ಶಾಂತಿ ಸಿಗಲಿ. ಆತನ #ಕುಟುಂಬಕ್ಕೆ ಈ ನೋವನ್ನು ಭರಿಸುವ ಶಕ್ತಿ ದೊರಕಲಿ.
- ಚೆನ್ನೈನ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ದಳಪತಿ ವಿಜಯ್ ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ಅವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಈ ಐತಿಹಾಸಿಕ ಕ್ಷಣಕ್ಕೆ ರಾಹುಲ್ ಗಾಂಧಿ ಸೇರಿದಂತೆ ರಾಷ್ಟ್ರಮಟ್ಟದ ಗಣ್ಯರು ಸಾಕ್ಷಿಯಾದರು.1
- ಕೂಡ್ಲಿಗಿ : ಪಟ್ಟಣ ಸೇರಿದಂತೆ ತಾಲೂಕಿನಾಧ್ಯಂತ ತಾಯಿ ದಿನ ಆಚರಣೆ *ಕೂಡ್ಲಿಗಿ : ಪಟ್ಟಣ ಸೇರಿದಂತೆ ತಾಲೂಕಿನಾಧ್ಯಂತ ತಾಯಿ ದಿನ ಆಚರಣೆ*- ವಿಜಯನಗರ ಜಿಲ್ಲೆ ಕೂಡ್ಲಿಗಿ : ಮೇ 10 ರಂದು ತಾಯಿ ದಿನ ಪ್ರಯುಕ್ತ , ಪಟ್ಟಣ ಸೇರಿದಂತೆ ತಾಲೂಕಿನಾಧ್ಯಂತ ತಾಯಿ ದಿನಾಚರಣೆ ಆಚರಿಸಲಾಯಿತು. ಪಟ್ಟಣದಲ್ಲಿನ ಹಿರಿಯ ಸಾಹಿತಿಗಳು , ಹಿರಿಯ ಪತ್ರಕರ್ತರು , ನಿವೃತ್ತ ಉಪನ್ಯಾಸಕರಾದ ಸಿದ್ಧರಾಮ ಹಿರೇಮಠ ರವರು. ತಾಯಿಯನ್ನು ಸ್ಮರಿಸಿದರು ಹಾಗೂ ಅವರೊಂದಿಗಿನ ವಾತ್ಸಲ್ಯಯುತ ಅಮೂಲ್ಯ ಕ್ಷಣಗಳನ್ನು ನೆನೆದರು. ತಾಯಿಯವರ ಆದರ್ಶ ಗುಣಗಳನ್ನು ಕೊಂಡಾಡುತ್ತ , ಅವರಿಗೆ ಶ್ರದ್ಧಾಪೂರ್ವಕ ಭಾವುಕತೆಯಿಂದ ನುಡಿನಮನ ಸಲ್ಲಿಸಿ ವಂದಿಸಿದರು. ಅವರು ಮಾತನಾಡಿ , ತಾಯಿಗೆ ತಾಯಿನೇ ಸಾಟಿ ಅವರ ಹೊರತು ಯಾರೂ ಇಲ್ಲ ಬೇರೆನು ಸಮನಲ್ಲ ಎಂದರು. ಪ್ರತ್ಯಕ್ಷ ಆರಾಧ್ಯ ದೇವ ವೆಂದರೆ , ಹೆತ್ತ ತಾಯಿ ತಂದೆಯರು. ಅವರನ್ನು ಪ್ರತಿಯೊಬ್ಬರೂ ಗೌರವಿಸಬೇಕು ಪ್ರೀತಿಸಬೇಕು , ಅವರನ್ನು ಗೌರವಿಸುವುದರೊಂದಿಗೆ ನಮ್ಮ ಮಕ್ಕಳಂತೆ ಪೋಷಿಸಬೇಕು. ಅವರ ಮನದಾಳದ ಆಸೆ ಆಕಾಂಕ್ಷೆ ಒತ್ತಾಸೆಗಳನ್ನು , ಪ್ರೀತಿ ಪೂರ್ವಕವಾಗಿ ಈಡೇರಿಸಬೇಕಿದೆ ಎಂದರು. ತಂದೆ ತಾಯಿಯರನ್ನು ಪ್ರೀತಿಸದವರು ಮನುಷ್ಯರಾಗಿರಲು ಸಾಧ್ಯವೇ ಇಲ್ಲ. ತಂದೆ ತಾಯಿಯರನ್ನು ಸಂತೋಷ ನೆಮ್ಮದಿಯಿಂದ ನೋಡಿಕೊಳ್ಳದವರು , ಕೋಟಿ ತೀರ್ಥಗಳನ್ನು ದೇಗುಲಗಳನ್ನು ಸಂದರ್ಶಿಸಿದರೇನು ಫಲ.. ದಾನ ಧರ್ಮಾದಿ ಯಜ್ಞ ಯಾಗಾದಿಗಳನ್ನು ಮಾಡಿಸರೇನು ಫಲ ಎಂದು ಪ್ರೆಶ್ನಿಸಿದ್ದಾರೆ. ಶಾಸಕರಾದ ಡಾ ॥ ಎನ್ ಟಿ ಶ್ರೀನಿವಾಸ್ ರವರು , ಹಾಗೂ ಅವರ ಸಹೋದರರಾದ ಎನ್ ಟಿ ತಮ್ಮಣ್ಣ ನವರು. ತಮ್ಮ ತಾಯಿಗೆ ಸಿಹಿ ತಿನಿಸಿ ಸಂಭ್ರಮಿಸಿದ್ದಾರೆ , ಹಾಗೂ ತಾಯಿಯ ಪಾದಕ್ಕೆ ಸಾಷ್ಟಾಂಗ ನಮಸ್ಕಾರಗಳನ್ನು ಅರ್ಪಿಸಿದ್ದಾರೆ. ಕಾರ್ಮಿಕ ಮುಖಂಡರಾದ ಗುನ್ನಳ್ಳಿ ರಾಘವೇಂದ್ರ ರವರು , ಮನೆಯಲ್ಲಿರುವ ತಮ್ಮ ಮಾತೆಯ ಭಾವಚಿತ್ರಕ್ಕೆ ಭಕ್ತಿಯಿಂದ ನಮಿಸಿ ಅವರಿಗೆ ನುಡಿನಮನ ಸಲ್ಲಿಸಿದರು. ಅಂತೆಯೇ ಪತ್ರಕರ್ತರು ಹಾಗೂ ವಂದೇ ಮಾತರಂ ಜಾಗೃತಿ ವೇದಿಕೆ ಮುಖಂಡರಾದ , ವಿ.ಜಿ.ವೃಷಭೇಂದ್ರರವರು ತಮ್ಮ ತಾಯಿಯ ಪಾದಕ್ಕೆರಗಿ ಸಾಷ್ಟಾಂಗ ನಮಸ್ಕಾರಗಳನ್ನು ಮಾಡಿ , ಅವರಿಗೆ ಉಡುಗೊರೆಯನ್ನಿತ್ತು ಸಿಹಿ ತಿಸಿದರು. ಈ ಸಂದರ್ಭದಲ್ಲಿ ಸಹೋದರಿ ಅಕ್ಕಮಹಾದೇವಿ , ಹಾಗೂ ಸಹೋದರಿಯ ಪುತ್ರ ಇದ್ದರು. ಮತ್ತು ಅವರೂ ಕೂಡ ಸಿಹಿ ಹಂಚಿ ತಾಯಿ ದಿನಾಚರಣೆ ಆಚರಿಸಿದರು. ಅದೇ ರೀತಿ ಪಟ್ಟಣ ಸೇರಿದಂತೆ , ತಾಲೂಕಿನ ವಿವಿದೆಡೆಗಳಲ್ಲಿ. ಗಣ್ಯರು ವಿವಿದ ಮುಖಂಡರು. ಹೋರಾಟಗಾರರು , ಅನೇಕ ಸಾರ್ವಜನಿಕರು ತಾಯಿಗೆ ಸಿಹಿ ಹಂಚಿ ಉಡುಗೊರೆ ನೀಡಿದ್ದಾರೆ ಹಲವರು ತಾಯಿ ಪಾದಪೂಜೆ ಮಾಡಿ ತಾಯಿಗೆ ನಮಿಸಿದ್ದಾರೆ. ಬಹುತೇಕರು ದೇವರಲ್ಲಿ ವಿಶೇಷ ಅರ್ಚನೆ ಪೂಜೆಗಳನ್ನು ಮಾಡಿಸುವ ಮೂಲಕ ಪ್ರಾರ್ಥಿಸಿ ಶುಭ ಕೋರಿದ್ದಾರೆ. ಬಹು ಸಂಭ್ರಮದಿಂದ ಸಡಗರದಿಂದ , ತಾಯಿ ದಿನಾಚರಣೆ ಆಚರಿಸಿದರು. ✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ - 9008937428 / 8151937428*4
- ಗದಗ ಜಿಲ್ಲಾ ಮುಂಡರಗಿ ತಾಲೂಕಿನ ನಾಗರಹಳ್ಳಿ ಗ್ರಾಮದಲ್ಲಿ ರೈತರ ಜಮೀನುಗಳಿಗೆ ಭೇಟಿ ನೀಡಿದ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀ ಉದಯ್ ಕುಮಾರ್ ಎಲಿವಾಳ1
- ಕುಷ್ಟಗಿ ತಹಸೀಲ್ ಕಚೇರಿಯಲ್ಲಿ ತಾಲೂಕಾಡಳಿತದಿಂದ ಹೇಮರೆಡ್ಡಿ ಮಲ್ಲಮ್ಮ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ಈ ವೇಳೆ ಮಾತನಾಡಿದ ಮುಖಂಡರು, 14ನೇ ಶತಮಾನದ ಈ ಭಕ್ತೆಯು ತಮ್ಮ ತ್ಯಾಗ, ಭಕ್ತಿ ಹಾಗೂ ಧಾರ್ಮಿಕ ನಿಷ್ಠೆಯಿಂದ ಸಮಾಜಕ್ಕೆ ಆದರ್ಶಪ್ರಾಯರಾಗಿದ್ದಾರೆ ಎಂದು ಸ್ಮರಿಸಿದರು. ಅವರು ಮಹಿಳೆಯರಲ್ಲಿ ಧೈರ್ಯ, ಸಹನೆ, ನಿಸ್ವಾರ್ಥ ಸೇವೆ ಹಾಗೂ ಭಕ್ತಿಯ ಸಂದೇಶವನ್ನು ಸಾರಿದರು.1
- ಗದಗದಲ್ಲಿ ಪೊಲೀಸರು ₹14 ಲಕ್ಷ ಮೌಲ್ಯದ ಅನ್ನಭಾಗ್ಯ ಅಕ್ಕಿ ಮತ್ತು ₹29 ಲಕ್ಷ ಮೌಲ್ಯದ ಲಾರಿಯನ್ನು ಜಪ್ತಿ ಮಾಡಿದ್ದಾರೆ. ಕರ್ನಾಟಕದ ಹರಪನಹಳ್ಳಿಯಿಂದ ಹೊರಟಿದ್ದ ಈ ಅಕ್ಕಿ ಅಕ್ರಮವಾಗಿ ಗುಜರಾತ್‌ಗೆ ಸಾಗಾಟವಾಗುತ್ತಿತ್ತು. ಲಾರಿ ಚಾಲಕನನ್ನು ಬಂಧಿಸಲಾಗಿದ್ದು, ಬೆಟಗೇರಿ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.1
- ನಾಗೇಶ್ ಎಸ್ ಅವರು ಶ್ರೀ ಬಂಜಾರ ಲಂಬಾಣಿ ಸಮುದಾಯ ದಿಗ್ವಿಜಯ ಭಾರತ ಪಕ್ಷದ ರಾಜ್ಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಲಂಬಾಣಿ ಸಮುದಾಯಗಳ ಹಿತಾಸಕ್ತಿ ಮತ್ತು ಅಭಿವೃದ್ಧಿಗಾಗಿ ಪಕ್ಷದ ಮೂಲಕ ಶ್ರಮಿಸಲು ಅವರು ಮುಂದಾಗಿದ್ದಾರೆ.2
- ತಮಿಳುನಾಡಿನಲ್ಲಿ ನೂತನ ಮುಖ್ಯಮಂತ್ರಿಯಾಗಿ ವಿಜಯ್‌ಗೆ ರಾಹುಲ್ ಗಾಂಧಿ ತಮ್ಮ ಬೆಂಬಲ ನೀಡಿದ್ದಾರೆ. ಈ ರಾಜಕೀಯ ಬೆಳವಣಿಗೆ ರಾಜ್ಯದಾದ್ಯಂತ ತೀವ್ರ ಕುತೂಹಲ ಮೂಡಿಸಿದ್ದು, ರಾಷ್ಟ್ರಮಟ್ಟದಲ್ಲೂ ಚರ್ಚೆಗೆ ಗ್ರಾಸವಾಗಿದೆ.1
- ಉತ್ತರ ಪ್ರದೇಶದ ಲಕ್ನೋದಲ್ಲಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಶ್ಯಾಮ್ ಚೇತನ್ ತಿವಾರಿ ಅವರಿಗೆ ಗುಂಡು ಹಾರಿಸಿ ಗಾಯಗೊಳಿಸಲಾಗಿದೆ. ಇದೇ ಸಂಘಟನೆಯ ಸಹ ಸದಸ್ಯ ವೈಭವ್ ಬಾ ಎಂಬಾತ ಗುಂಡು ಹಾರಿಸಿದ್ದು, ಆತನನ್ನು ಬಂಧಿಸಲಾಗಿದೆ.1