logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಭದ್ರಾವತಿ-ಸರ್ಕಾರಿ ಶಾಲೆಗೆ ಸೇರಿದ ಜಾಗ ಖಾಸಗಿ ವ್ಯಕ್ತಿಗಳು ಕಬಳಿಸುವ ಹುನ್ನಾರ: ಆರೋಪ ಭದ್ರಾವತಿ: ಹಳೇ ನಗರದ ಬಿ.ಇ.ಒ ಕಛೇರಿ ಮತ್ತು ಡಾ|| ಬಿ.ಆರ್.ಅಂಬೇಡ್ಕರ್ ಭವನದ ಮಧ್ಯಭಾಗದಲ್ಲಿ ಇರುವ ಪ್ರಾಥಮಿಕ ಶಾಲೆಯ ಆವರಣದ ಖಾಲಿ ಜಾಗವನ್ನು ಶಾಲಾ ಮಕ್ಕಳಿಗಾಗಿ ಉದ್ಯಾನವನ ನಿರ್ಮಾಣ ಮಾಡಲು ಒತ್ತಾಯಿಸಿ ಮಾನವ ಹಕ್ಕುಗಳ ಹೋರಾಟ ಸಮಿತಿ, ದಲಿತ, ಕ್ರಿಶ್ಚಿಯನ್, ಮುಸ್ಲಿಂ ಸಂಘಟನೆ ಹಾಗೂ ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ದೇಶದ ಎಲ್ಲಾ ಪ್ರಜೆಗಳಿಗೂ ಉಚಿತ ಶಿಕ್ಷಣ ನೀಡಬೇಕೆಂದು ಸಂವಿಧಾನ ತಿಳಿಸಿದ್ದರು ಸಹ ಸರ್ಕಾರಿ ಶಾಲೆ, ಕಾಲೇಜುಗಳು ಕಸದ ಗುಂಡಿ ಯಂತೆ, ನಿರ್ಲಕ್ಷ್ಯತನದಿಂದ ಬಡ ಜನರು ವಿಧ್ಯಾಭ್ಯಾಸ ಮಾಡುತ್ತಿದ್ದು, ಸಮಾನ ಶಿಕ್ಷಣ ಎಂಬ ಕಾಯ್ದೆಯನ್ನು ಉಲ್ಲಂಘಿಸುತ್ತಿರುವ ಸರ್ಕಾರಗಳು ಮಾನವ ಹಕ್ಕುಗಳ ಉಲ್ಲಂಘನೆ ಮಾಡುತ್ತಿರುವುದು ವಿಷಾದಕರ ಸಂಗತಿಯಾಗಿದೆ ಎಂದು ಪ್ರತಿಭಟನಾ ಕಾರರು ಕಿಡಿಕಾರಿದರು. ಶಿಕ್ಷಣ ಸಚಿವರ ಜಿಲ್ಲೆಯಲ್ಲಿಯೇ ಸರ್ಕಾರಿ ಶಾಲೆಗಳು ಅದಪತನದತ್ತ ಸಾಗುತ್ತಿರುವುದು ಶೋಚನೀಯವಾಗಿದೆ. ಸರ್ಕಾರಿ ಶಾಲೆಗಳು ಕಸದ ಗುಂಡಿಯಾಗಿ ಪರಿವರ್ತನೆ ಗೊಂಡಿದೆ. ಶಿಕ್ಷಕರಿಲ್ಲದೆ. ಮೂಲಭೂತ ಸೌಕರ್ಯ ಗಳಾದ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ, ಕಟ್ಟಡದ ವ್ಯವಸ್ಥೆ ಇಲ್ಲದೆ ಹದಗೆಟ್ಟಿದ್ದು, ಸರ್ಕಾರಿ ಶಾಲೆಗೆ ಸೇರಿದ ಜಾಗಗಳನ್ನು ಕಬಳಿಸುವ ನಿಟ್ಟಿನಲ್ಲಿ ಖಾಸಗಿ ವ್ಯಕ್ತಿಗಳು ಕನ್ನ ಹಾಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪಕ್ಕದ ನಗರದ ಹೃದಯ ಭಾಗದಲ್ಲಿ ಇರುವ ಪ್ರಾಥಮಿಕ ಪಾಠಶಾಲೆಯ ಆವರಣದ ಜಾಗವನ್ನು ಕಬಳಿಸಲು ಖಾಸಗಿ ವ್ಯಕ್ತಿಗಳು ಸಂಚು ನಡೆಸುತ್ತಿದ್ದು ಆ ಜಾಗದಲ್ಲಿ ಕಳೆದ 20 ವರ್ಷಗಳಿಂದಲೂ ಕಸದ ಗುಂಡಿ ಯಂತಿತ್ತು. ಈ ಬಗ್ಗೆ ಎಚ್ಚರಿಸಿದ್ದರು ಸಹ ಸಂಬಂಧ ಪಟ್ಟ ಅಧಿಕಾರಿಗಳು ಸ್ವಚ್ಚಗೊಳಿ ಸದೆ ಕನಿಷ್ಟ ಶಾಲೆಯ ಜಾಗಕ್ಕೆ ಕಾಂಪೌಂಡ್ ನಿರ್ಮಿಸಿ , ಮಕ್ಕಳ ಆಟಿಕೆಗಳನ್ನು ಅಳವಡಿಸಿದ್ದಲ್ಲಿ ಸರ್ಕಾರಿ ಶಾಲೆಗೆ ಬರುವ ಬಡ ಕುಟುಂಬಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಅನುಕೂಲ ವಾಗಲಿದೆ ಈ ಹಿನ್ನಲೆಯಲ್ಲಿ ಒಂದು ವಾರದಲ್ಲಿ ಖಾಲಿ ಜಾಗಕ್ಕೆ ಬೇಲಿ ನಿರ್ಮಿಸಿ ಆಟಿಕೆ ಅಳವಡಿಸಲು ಒತ್ತಾಯಿಸಲಾಯಿತು. ನಂತರ ಬಿ ಇ ಓ ಹಾಗೂ ನಗರಸಭೆ ಆಯುಕ್ತರುಗಳ ಮೂಲಕ ಮುಖ್ಯಮಂತ್ರಿ ಗಳು, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು,ಸಂಸದರು, ಜಿಲ್ಲಾಧಿಕಾರಿಗಳು, ಜಿಲ್ಲಾ ರಕ್ಷಣಾಧಿಕಾರಿಗಳು,ತಹಶೀಲ್ದಾರ್ ರವರುಗಳಿಗೆ ಮನವಿ ಸಲ್ಲಿಸಿದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ನಗರಸಭೆ ಪೌರಾಯುಕ್ತರು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು. ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ ಎನ್ ರಾಜು ಪ್ರತಿಭಟನೆ ನೇತೃತ್ವವಹಿಸಿದ್ದರು. ಡಿಸಿಎಂ ರಾಜ್ಯಾಧ್ಯಕ್ಷ ಪ್ರಮೋದ್ ಕುಮಾರ್, ಪ್ರಮುಖರಾದ ತೀರ್ಥೇಶ್, ಬ್ರಹ್ಮಲಿಂಗಯ್ಯ , ಸೋಮಣ್ಣ, ಚಂದ್ರಶೇಖರ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.

1 day ago
user_ಆರ್.ವಿ.ಕೃಷ್ಣ
ಆರ್.ವಿ.ಕೃಷ್ಣ
Local News Reporter ಶಿವಮೊಗ್ಗ, ಶಿವಮೊಗ್ಗ, ಕರ್ನಾಟಕ•

  • user_User6721
    User6721
    Shivamogga, Karnataka
    😡
    20 hrs ago
More news from ಕರ್ನಾಟಕ and nearby areas
  • ತೀರ್ಥಹಳ್ಳಿ: ತಾಲೂಕಿನ ಪಟ್ಟಣದ ಆಗುಂಬೆ ಬಸ್ ನಿಲ್ದಾಣದ ಬಳಿ ಬೆಳಿಗ್ಗೆ ಅಪಘಾತವಾಗಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿರುವುದಿಲ್ಲ ಎಂಬುದು ತಿಳಿದು ಬಂದಿದೆ.
    1
    ತೀರ್ಥಹಳ್ಳಿ: ತಾಲೂಕಿನ ಪಟ್ಟಣದ ಆಗುಂಬೆ ಬಸ್ ನಿಲ್ದಾಣದ ಬಳಿ ಬೆಳಿಗ್ಗೆ ಅಪಘಾತವಾಗಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿರುವುದಿಲ್ಲ ಎಂಬುದು ತಿಳಿದು ಬಂದಿದೆ.
    user_ರಶ್ಮಿ ಶ್ರೀಕಾಂತ್ ನಾಯಕ್
    ರಶ್ಮಿ ಶ್ರೀಕಾಂತ್ ನಾಯಕ್
    Local News Reporter ತೀರ್ಥಹಳ್ಳಿ, ಶಿವಮೊಗ್ಗ, ಕರ್ನಾಟಕ•
    2 hrs ago
  • "ಶ್ರೀಶಾರದಾಶ್ರಮದಿಂದ ಬುಡಗ ಜಂಗಮ‌ ಅಲೆಮಾರಿ ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ":- ಮಾತಾಜೀ ತ್ಯಾಗಮಯೀ. ಚಳ್ಳಕೆರೆ:-ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದಿಂದ ಪ್ರತಿ ತಿಂಗಳು ಚಳ್ಳಕೆರೆ ತಾಲೂಕಿನ ಅಲೆಮಾರಿ ಕುಟುಂಬಗಳಿಗೆ ದಿನಬಳಕೆಯ ವಸ್ತುಗಳನ್ನು ವಿತರಣೆ ಮಾಡಲಾಗುತ್ತದೆ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ತಿಳಿಸಿದರು. ನಗರದ ಹೊರವಲಯದ ಭರಮಸಾಗರ ರಸ್ತೆಯ ಮೈರಾಡ್ ಕಾಲೋನಿಯ ಬುಡಗ ಜಂಗಮ‌ ಅಲೆಮಾರಿ ಕುಟುಂಬಗಳಿಗೆ ದಿನಸಿ ಕಿಟ್ ಮತ್ತು ಪಾತ್ರೆ-ತಟ್ಟೆ-ಲೋಟ ವಿತರಿಸಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಬುಡಗ ಜಂಗಮ‌ ಅಲೆಮಾರಿಗಳ ಮುಖಂಡ ಬಲರಾಮ ಮಾತನಾಡಿ ದಾನದಿಂದ ಮನುಷ್ಯ ಧನ್ಯತೆಯನ್ನು ಪಡೆಯುತ್ತಾನೆ. ಇಂತಹ ಪವಿತ್ರವಾದ ಕಾರ್ಯಕ್ರಮವನ್ನು ನಗರದ ಶ್ರೀಶಾರದಾಶ್ರಮವು ಮಾಡುತ್ತಿರುವುದು ನಮ್ಮಂತಹ ಅಲೆಮಾರಿ ಕುಟುಂಬಗಳಿಗೆ ಉಪಯೋಗವಾಗುತ್ತಿದ್ದು ನೆಮ್ಮದಿಯ ಜೀವನ ನಡೆಸಲು ಸಹಾಯವಾಗುತ್ತಿದೆ ಎಂದು ಕೃತಜ್ಞತೆ ಸಲ್ಲಿಸಿದರು. ಸಮಾಜ ಸೇವಕ ಮತ್ತು ಶ್ರೀಶಾರದಾಶ್ರಮದ ಸದ್ಭಕ್ತ ಯತೀಶ್ ಎಂ ಸಿದ್ದಾಪುರ ಮಾತನಾಡಿ ಸ್ವಾಮಿ ವಿವೇಕಾನಂದರು ತಿಳಿಸಿದಂತೆ ಇಂದು ಬುಡಗ ಜಂಗಮ‌ ಅಲೆಮಾರಿ ಕುಟುಂಬಗಳಿಗೆ ದಿನಬಳಕೆಯ ವಸ್ತುಗಳ ವಿತರಣೆಯ ಮೂಲಕ "ಜೀವ ಸೇವೆಯೇ ಈಶ ಸೇವೆ"ಯ ಸಿದ್ಧಾಂತವನ್ನು ಶ್ರೀಶಾರದಾಶ್ರಮವು ಅನುಸರಿಸಿ ಅನುಷ್ಠಾನಕ್ಕೆ ತರುತ್ತಿರುವುದು ಉತ್ತಮ ಬೆಳವಣಿಗೆ ಎಂದು ಶ್ಲಾಘಿಸಿದರು. ದಿನಸಿ ಕಿಟ್ ಗಳ ವಿತರಣಾ ಸಮಾರಂಭದಲ್ಲಿ ಶ್ರೀಮತಿ ಎಚ್ ಲಕ್ಷ್ಮೀದೇವಮ್ಮ, ಎಂ ಗೀತಾ ನಾಗರಾಜ್,ಪಿ.ಎಸ್.ಮಾಣಿಕ್ಯ ಸತ್ಯನಾರಾಯಣ,ಗೀತಾ ಪ್ರಕಾಶ್, ಅಂಬುಜಾ,ವಿದ್ಯಾ,ಕವಿತಾ, ಸರಸ್ವತಿ, ಸಂತೋಷ್, ಚೆನ್ನಕೇಶವ, ಹೃತಿಕ್,ಭಾವನಾ, ರಾಘವೇಂದ್ರ,ಡಾ.ಭೂಮಿಕ ಸೇರಿದಂತೆ ಬುಡಗ ಜಂಗಮ‌ ನಿವಾಸಿಗಳು ಉಪಸ್ಥಿತರಿದ್ದರು.
    1
    "ಶ್ರೀಶಾರದಾಶ್ರಮದಿಂದ ಬುಡಗ ಜಂಗಮ‌ ಅಲೆಮಾರಿ ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ":- ಮಾತಾಜೀ ತ್ಯಾಗಮಯೀ.                     ಚಳ್ಳಕೆರೆ:-ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದಿಂದ ಪ್ರತಿ ತಿಂಗಳು ಚಳ್ಳಕೆರೆ ತಾಲೂಕಿನ ಅಲೆಮಾರಿ ಕುಟುಂಬಗಳಿಗೆ ದಿನಬಳಕೆಯ ವಸ್ತುಗಳನ್ನು ವಿತರಣೆ ಮಾಡಲಾಗುತ್ತದೆ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ತಿಳಿಸಿದರು.                         ನಗರದ ಹೊರವಲಯದ ಭರಮಸಾಗರ ರಸ್ತೆಯ ಮೈರಾಡ್ ಕಾಲೋನಿಯ ಬುಡಗ ಜಂಗಮ‌ ಅಲೆಮಾರಿ ಕುಟುಂಬಗಳಿಗೆ ದಿನಸಿ ಕಿಟ್ ಮತ್ತು ಪಾತ್ರೆ-ತಟ್ಟೆ-ಲೋಟ ವಿತರಿಸಿ  ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.                    ಬುಡಗ ಜಂಗಮ‌ ಅಲೆಮಾರಿಗಳ ಮುಖಂಡ ಬಲರಾಮ ಮಾತನಾಡಿ ದಾನದಿಂದ ಮನುಷ್ಯ ಧನ್ಯತೆಯನ್ನು ಪಡೆಯುತ್ತಾನೆ. ಇಂತಹ ಪವಿತ್ರವಾದ ಕಾರ್ಯಕ್ರಮವನ್ನು ನಗರದ ಶ್ರೀಶಾರದಾಶ್ರಮವು  ಮಾಡುತ್ತಿರುವುದು ನಮ್ಮಂತಹ ಅಲೆಮಾರಿ ಕುಟುಂಬಗಳಿಗೆ ಉಪಯೋಗವಾಗುತ್ತಿದ್ದು ನೆಮ್ಮದಿಯ ಜೀವನ ನಡೆಸಲು ಸಹಾಯವಾಗುತ್ತಿದೆ ಎಂದು ಕೃತಜ್ಞತೆ ಸಲ್ಲಿಸಿದರು.                     ಸಮಾಜ ಸೇವಕ ಮತ್ತು ಶ್ರೀಶಾರದಾಶ್ರಮದ ಸದ್ಭಕ್ತ ಯತೀಶ್ ಎಂ ಸಿದ್ದಾಪುರ ಮಾತನಾಡಿ ಸ್ವಾಮಿ ವಿವೇಕಾನಂದರು ತಿಳಿಸಿದಂತೆ ಇಂದು ಬುಡಗ ಜಂಗಮ‌ ಅಲೆಮಾರಿ ಕುಟುಂಬಗಳಿಗೆ ದಿನಬಳಕೆಯ ವಸ್ತುಗಳ ವಿತರಣೆಯ ಮೂಲಕ "ಜೀವ ಸೇವೆಯೇ ಈಶ ಸೇವೆ"ಯ ಸಿದ್ಧಾಂತವನ್ನು ಶ್ರೀಶಾರದಾಶ್ರಮವು ಅನುಸರಿಸಿ ಅನುಷ್ಠಾನಕ್ಕೆ ತರುತ್ತಿರುವುದು ಉತ್ತಮ ಬೆಳವಣಿಗೆ ಎಂದು ಶ್ಲಾಘಿಸಿದರು.                          ದಿನಸಿ ಕಿಟ್ ಗಳ ವಿತರಣಾ ಸಮಾರಂಭದಲ್ಲಿ ಶ್ರೀಮತಿ ಎಚ್ ಲಕ್ಷ್ಮೀದೇವಮ್ಮ, ಎಂ ಗೀತಾ ನಾಗರಾಜ್,ಪಿ.ಎಸ್.ಮಾಣಿಕ್ಯ ಸತ್ಯನಾರಾಯಣ,ಗೀತಾ ಪ್ರಕಾಶ್, ಅಂಬುಜಾ,ವಿದ್ಯಾ,ಕವಿತಾ, ಸರಸ್ವತಿ, ಸಂತೋಷ್, ಚೆನ್ನಕೇಶವ, ಹೃತಿಕ್,ಭಾವನಾ, ರಾಘವೇಂದ್ರ,ಡಾ.ಭೂಮಿಕ ಸೇರಿದಂತೆ ಬುಡಗ ಜಂಗಮ‌ ನಿವಾಸಿಗಳು ಉಪಸ್ಥಿತರಿದ್ದರು.
    user_Suresh Belagere
    Suresh Belagere
    Video Creator ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    3 hrs ago
  • ಕಲ್ಕುಂಟೆ ಗೇಟ್ ಬಳಿ ರಸ್ತೆ ಬದಿಯ ಕಂಬಕ್ಕೆ ಬೈಕ್ ಡಿಕ್ಕಿ ಹೊಡೆದು ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಚಿತ್ರದುರ್ಗ ತಾಲೂಕಿನ ಕಲ್ಕುಂಟೆ ಗೇಟ್ ಬಳಿ ಘಟನೆ ನಡೆದಿದ್ದು ಬೈ್ಕ ಸವಾರ ಗಂಬೀರವಾಗಿ ಗಾಯಗೊಂಡಿದ್ದು ಆತ‌ನನ್ನ ಚಿಕಿತ್ಸೆಗೆಂದು ಆಸ್ಪತ್ರೆಗೆ ಧಾಖಲಿಸಲಾಗಿದೆ
    1
    ಕಲ್ಕುಂಟೆ ಗೇಟ್ ಬಳಿ ರಸ್ತೆ ಬದಿಯ ಕಂಬಕ್ಕೆ ಬೈಕ್ ಡಿಕ್ಕಿ ಹೊಡೆದು ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಚಿತ್ರದುರ್ಗ ತಾಲೂಕಿನ ಕಲ್ಕುಂಟೆ ಗೇಟ್ ಬಳಿ ಘಟನೆ ನಡೆದಿದ್ದು ಬೈ್ಕ ಸವಾರ ಗಂಬೀರವಾಗಿ ಗಾಯಗೊಂಡಿದ್ದು ಆತ‌ನನ್ನ ಚಿಕಿತ್ಸೆಗೆಂದು ಆಸ್ಪತ್ರೆಗೆ ಧಾಖಲಿಸಲಾಗಿದೆ
    user_Vinay P palekar
    Vinay P palekar
    ಮಾಧ್ಯಮ ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    4 hrs ago
  • ಸಮರ್ಥ ಶಿವಯೋಗಿ ಕಾಗಿನಲ್ಲಿ ಎಂಬ ಆರು ವರ್ಷದ ಬಾಲಕ ಗುತ್ತಲ ಪಟ್ಟಣದಿಂದ ಕುರವತ್ತಿ ಬಸವೇಶ್ವರ ರಥೋತ್ಸವಕ್ಕೆ ಬರಿಗಾಲಲ್ಲಿ ಪಾದಯಾತ್ರೆಯನ್ನು 2. ತಾಸು 30 ನಿಮಿಷ್ಯಕ್ಕೆ ಕುರವತ್ತಿ ತಲುಪಿ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.
    4
    ಸಮರ್ಥ ಶಿವಯೋಗಿ ಕಾಗಿನಲ್ಲಿ  ಎಂಬ ಆರು ವರ್ಷದ ಬಾಲಕ ಗುತ್ತಲ ಪಟ್ಟಣದಿಂದ ಕುರವತ್ತಿ ಬಸವೇಶ್ವರ ರಥೋತ್ಸವಕ್ಕೆ ಬರಿಗಾಲಲ್ಲಿ ಪಾದಯಾತ್ರೆಯನ್ನು 2. ತಾಸು 30 ನಿಮಿಷ್ಯಕ್ಕೆ ಕುರವತ್ತಿ ತಲುಪಿ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.
    user_GURUSHANTH HIREMATH
    GURUSHANTH HIREMATH
    ಪತ್ರಕರ್ತ ಹಾವೇರಿ, ಹಾವೇರಿ, ಕರ್ನಾಟಕ•
    10 hrs ago
  • Post by ಚಂದು ಕನ್ನಡಿಗ ಚಳ್ಳಕೆರೆ
    1
    Post by ಚಂದು ಕನ್ನಡಿಗ ಚಳ್ಳಕೆರೆ
    user_ಚಂದು ಕನ್ನಡಿಗ ಚಳ್ಳಕೆರೆ
    ಚಂದು ಕನ್ನಡಿಗ ಚಳ್ಳಕೆರೆ
    ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    13 hrs ago
  • ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಬಾಲೇನಹಳ್ಳಿ ಗ್ರಾಮದ ಕಾಡುಗೊಲ್ಲ ಸಮಾಜದ ಪ್ರತಿಭಾನ್ವಿತ ಯುವತಿ ಶ್ರೀಮತಿ ಕಾವ್ಯ ಟಿ. ಅವರು ಕೃಷಿ ವಿಜ್ಞಾನ ಕ್ಷೇತ್ರದಲ್ಲಿ ಕೈಗೊಂಡಿರುವ ಮಹತ್ವದ ಸಂಶೋಧನೆಗಾಗಿ ನವದೆಹಲಿಯ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯು (ICAR-IARI) 'ಡಾಕ್ಟರ್ ಆಫ್ ಫಿಲಾಸಫಿ' (Ph.D) ಪದವಿಯನ್ನು ನೀಡಿ ಗೌರವಿಸಿದೆ. ನವದೆಹಲಿಯಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ಐಸಿಎಆರ್–ಐಎಆರ್‌ಐ ಸಂಸ್ಥೆಯ ಭವ್ಯ ಘಟಿಕೋತ್ಸವ ಸಮಾರಂಭದಲ್ಲಿ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಕಾವ್ಯ ಅವರಿಗೆ ಅಧಿಕೃತವಾಗಿ ಡಾಕ್ಟರೇಟ್ ಪದವಿಯನ್ನು ಪ್ರದಾನ ಮಾಡಿ ಅಭಿನಂದಿಸಿದರು. ಡಾ. ಕಾವ್ಯ ಅವರು "ಭತ್ತದ ಗದ್ದೆಗಳಿಂದ ಮೀಥೈಲೋಟ್ರೋಫಿಕ್ ಬ್ಯಾಕ್ಟೀರಿಯಾಗಳ ಪ್ರತ್ಯೇಕತೆ ಮತ್ತು ಗುಣಲಕ್ಷಣಗಳು ಹಾಗೂ ಸಸ್ಯ ಬೆಳವಣಿಗೆಯ ಉತ್ತೇಜನ ಮತ್ತು ಮಣ್ಣಿನ ಇಂಗಾಲದ ಸ್ವಾಧೀನದಲ್ಲಿ ಅವುಗಳ ಪಾತ್ರ" ಎಂಬ ವಿಷಯದ ಕುರಿತು ಪ್ರೌಢ ಪ್ರಬಂಧವನ್ನು ಮಂಡಿಸಿದ್ದರು. ನವದೆಹಲಿಯ ಪ್ರತಿಷ್ಠಿತ ಐಸಿಎಆರ್–ಐಎಆರ್‌ಐ ಸಂಸ್ಥೆಯ ಪ್ರಧಾನ ವಿಜ್ಞಾನಿ ಡಾ. ಗೀತಾ ಸಿಂಗ್ ಅವರ ಮಾರ್ಗದರ್ಶನದಲ್ಲಿ ಈ ಸಂಶೋಧನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಮಣ್ಣಿನ ಫಲವತ್ತತೆಯನ್ನು ಕಾಪಾಡುವಲ್ಲಿ ಮತ್ತು ಹವಾಮಾನ ಬದಲಾವಣೆಯ ಸವಾಲುಗಳ ನಡುವೆ ಸುಸ್ಥಿರ ಕೃಷಿಯನ್ನು ಉತ್ತೇಜಿಸುವಲ್ಲಿ ಈ ಸಂಶೋಧನೆಯು ಬಹಳ ಮುಖ್ಯವಾಗಿದೆ. ವಿಶೇಷವಾಗಿ ಭತ್ತದ ಬೆಳೆಯ ಸಸ್ಯಗಳ ಬೆಳವಣಿಗೆಯನ್ನು ನೈಸರ್ಗಿಕವಾಗಿ ಹೆಚ್ಚಿಸುವ ಮತ್ತು ಮಣ್ಣಿನಲ್ಲಿ ಇಂಗಾಲದ ಅಂಶವನ್ನು ಸಂಗ್ರಹಿಸುವ ಬ್ಯಾಕ್ಟೀರಿಯಾಗಳ ಪಾತ್ರವನ್ನು ಇವರ ಸಂಶೋಧನೆಯು ಸಾಬೀತುಪಡಿಸಿದೆ. ಇದು ಕೃಷಿ ಕ್ಷೇತ್ರದಲ್ಲಿ ಮಣ್ಣಿನ ಆರೋಗ್ಯ ವೃದ್ಧಿಗೆ ಹೊಸ ದಾರಿಯನ್ನು ತೋರಿಸಿಕೊಟ್ಟಿದೆ. ಗ್ರಾಮೀಣ ಭಾಗದ ಹಿನ್ನೆಲೆಯ ಯುವತಿಯೊಬ್ಬರು ರಾಷ್ಟ್ರಮಟ್ಟದ ಉನ್ನತ ಸಂಸ್ಥೆಯಲ್ಲಿ ಸಂಶೋಧನೆ ನಡೆಸಿ ಸಾಧನೆ ಮಾಡಿರುವುದು ಹಿರಿಯೂರು ತಾಲೂಕು ಮತ್ತು ಚಿತ್ರದುರ್ಗ ಜಿಲ್ಲೆಗೆ ಕೀರ್ತಿ ತಂದಿದೆ. ಕೃಷಿ ಪ್ರಧಾನವಾದ ಚಿತ್ರದುರ್ಗದ ಮಣ್ಣಿನ ಮಗಳ ಈ ಸಾಧನೆಯು ಈ ಭಾಗದ ರೈತ ಸಮುದಾಯಕ್ಕೆ ಹಾಗೂ ಸಂಶೋಧನಾ ಕ್ಷೇತ್ರದಲ್ಲಿ ಆಸಕ್ತಿಯಿರುವ ಯುವಕ-ಯುವತಿಯರಿಗೆ ಸ್ಫೂರ್ತಿಯಾಗಿದೆ.
    1
    ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಬಾಲೇನಹಳ್ಳಿ ಗ್ರಾಮದ ಕಾಡುಗೊಲ್ಲ ಸಮಾಜದ ಪ್ರತಿಭಾನ್ವಿತ ಯುವತಿ ಶ್ರೀಮತಿ ಕಾವ್ಯ ಟಿ. ಅವರು ಕೃಷಿ ವಿಜ್ಞಾನ ಕ್ಷೇತ್ರದಲ್ಲಿ ಕೈಗೊಂಡಿರುವ ಮಹತ್ವದ ಸಂಶೋಧನೆಗಾಗಿ ನವದೆಹಲಿಯ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯು (ICAR-IARI) 'ಡಾಕ್ಟರ್ ಆಫ್ ಫಿಲಾಸಫಿ' (Ph.D) ಪದವಿಯನ್ನು ನೀಡಿ ಗೌರವಿಸಿದೆ.
ನವದೆಹಲಿಯಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ಐಸಿಎಆರ್–ಐಎಆರ್‌ಐ ಸಂಸ್ಥೆಯ ಭವ್ಯ ಘಟಿಕೋತ್ಸವ ಸಮಾರಂಭದಲ್ಲಿ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಕಾವ್ಯ ಅವರಿಗೆ ಅಧಿಕೃತವಾಗಿ ಡಾಕ್ಟರೇಟ್ ಪದವಿಯನ್ನು ಪ್ರದಾನ ಮಾಡಿ ಅಭಿನಂದಿಸಿದರು.
ಡಾ. ಕಾವ್ಯ ಅವರು "ಭತ್ತದ ಗದ್ದೆಗಳಿಂದ ಮೀಥೈಲೋಟ್ರೋಫಿಕ್ ಬ್ಯಾಕ್ಟೀರಿಯಾಗಳ ಪ್ರತ್ಯೇಕತೆ ಮತ್ತು ಗುಣಲಕ್ಷಣಗಳು ಹಾಗೂ ಸಸ್ಯ ಬೆಳವಣಿಗೆಯ ಉತ್ತೇಜನ ಮತ್ತು ಮಣ್ಣಿನ ಇಂಗಾಲದ ಸ್ವಾಧೀನದಲ್ಲಿ ಅವುಗಳ ಪಾತ್ರ" ಎಂಬ ವಿಷಯದ ಕುರಿತು ಪ್ರೌಢ ಪ್ರಬಂಧವನ್ನು ಮಂಡಿಸಿದ್ದರು. ನವದೆಹಲಿಯ ಪ್ರತಿಷ್ಠಿತ ಐಸಿಎಆರ್–ಐಎಆರ್‌ಐ ಸಂಸ್ಥೆಯ ಪ್ರಧಾನ ವಿಜ್ಞಾನಿ ಡಾ. ಗೀತಾ ಸಿಂಗ್ ಅವರ ಮಾರ್ಗದರ್ಶನದಲ್ಲಿ ಈ ಸಂಶೋಧನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.
ಮಣ್ಣಿನ ಫಲವತ್ತತೆಯನ್ನು ಕಾಪಾಡುವಲ್ಲಿ ಮತ್ತು ಹವಾಮಾನ ಬದಲಾವಣೆಯ ಸವಾಲುಗಳ ನಡುವೆ ಸುಸ್ಥಿರ ಕೃಷಿಯನ್ನು ಉತ್ತೇಜಿಸುವಲ್ಲಿ ಈ ಸಂಶೋಧನೆಯು ಬಹಳ ಮುಖ್ಯವಾಗಿದೆ. ವಿಶೇಷವಾಗಿ ಭತ್ತದ ಬೆಳೆಯ ಸಸ್ಯಗಳ ಬೆಳವಣಿಗೆಯನ್ನು ನೈಸರ್ಗಿಕವಾಗಿ ಹೆಚ್ಚಿಸುವ ಮತ್ತು ಮಣ್ಣಿನಲ್ಲಿ ಇಂಗಾಲದ ಅಂಶವನ್ನು ಸಂಗ್ರಹಿಸುವ ಬ್ಯಾಕ್ಟೀರಿಯಾಗಳ ಪಾತ್ರವನ್ನು ಇವರ ಸಂಶೋಧನೆಯು ಸಾಬೀತುಪಡಿಸಿದೆ. ಇದು ಕೃಷಿ ಕ್ಷೇತ್ರದಲ್ಲಿ ಮಣ್ಣಿನ ಆರೋಗ್ಯ ವೃದ್ಧಿಗೆ ಹೊಸ ದಾರಿಯನ್ನು ತೋರಿಸಿಕೊಟ್ಟಿದೆ.
ಗ್ರಾಮೀಣ ಭಾಗದ ಹಿನ್ನೆಲೆಯ ಯುವತಿಯೊಬ್ಬರು ರಾಷ್ಟ್ರಮಟ್ಟದ ಉನ್ನತ ಸಂಸ್ಥೆಯಲ್ಲಿ ಸಂಶೋಧನೆ ನಡೆಸಿ ಸಾಧನೆ ಮಾಡಿರುವುದು ಹಿರಿಯೂರು ತಾಲೂಕು ಮತ್ತು ಚಿತ್ರದುರ್ಗ ಜಿಲ್ಲೆಗೆ ಕೀರ್ತಿ ತಂದಿದೆ. 
ಕೃಷಿ ಪ್ರಧಾನವಾದ ಚಿತ್ರದುರ್ಗದ ಮಣ್ಣಿನ ಮಗಳ ಈ ಸಾಧನೆಯು ಈ ಭಾಗದ ರೈತ ಸಮುದಾಯಕ್ಕೆ ಹಾಗೂ ಸಂಶೋಧನಾ ಕ್ಷೇತ್ರದಲ್ಲಿ ಆಸಕ್ತಿಯಿರುವ ಯುವಕ-ಯುವತಿಯರಿಗೆ ಸ್ಫೂರ್ತಿಯಾಗಿದೆ.
    user_Power focus
    Power focus
    ಹಿರಿಯೂರು, ಚಿತ್ರದುರ್ಗ, ಕರ್ನಾಟಕ•
    9 hrs ago
  • ಈ ಸರ್ಕಾರಿ ಭೂಮಿ ಇದು ಜಾಗ ಮನೆಯನ್ನು ಕಟ್ಟಿಕೊಂಡರೆ ಇದು ವಿಜಯನಗರ ಜಿಲ್ಲೆ ಇಟಗಿ ಗ್ರಾಮದಲ್ಲಿರುವ ಸರ್ಕಾರಿ ಜಾಗ ಗ್ರಾಮ ಪಂಚಾಯತಿ ಇಟಗಿ ಕೋಟೆ ಸರ್ಕಾರಿ ಭೂಮಿಯಲ್ಲಿ ಗ್ರಾಮ ಸರ್ಕಾರಿ ಜಾಗವನ್ನು ಸರ್ಕಾರಿ ಜಾಗವನ್ನು ಕಟ್ಟಿಕೊಂಡಿದ್ದಾರೆ ಇದು ಅಂಗನವಾಡಿ ಶಾಲೆ ಮತ್ತು ಆಸ್ಪತ್ರೆ ಆಗಬೇಕೈತಿ ಇದು ಪಂಚಾಯತಿ ಅಧ್ಯಕ್ಷರ ಎಲ್ಲಾ ಸೇರಿಕೊಂಡು ಅಕ್ರಮವಾಗಿ ಬರೆದು ಕೊಟ್ಟಿದ್ದಾರೆ ಗ್ರಾಮ್ ಪಂಚಾಯ್ತಿ ನಂಬರ್ಸಿಗೆ ಬರೆದುಕೊಟ್ಟಿದ್ದಾರೆ
    1
    ಈ ಸರ್ಕಾರಿ ಭೂಮಿ ಇದು ಜಾಗ ಮನೆಯನ್ನು ಕಟ್ಟಿಕೊಂಡರೆ ಇದು ವಿಜಯನಗರ ಜಿಲ್ಲೆ ಇಟಗಿ ಗ್ರಾಮದಲ್ಲಿರುವ ಸರ್ಕಾರಿ ಜಾಗ ಗ್ರಾಮ ಪಂಚಾಯತಿ ಇಟಗಿ ಕೋಟೆ ಸರ್ಕಾರಿ ಭೂಮಿಯಲ್ಲಿ ಗ್ರಾಮ ಸರ್ಕಾರಿ ಜಾಗವನ್ನು ಸರ್ಕಾರಿ ಜಾಗವನ್ನು ಕಟ್ಟಿಕೊಂಡಿದ್ದಾರೆ ಇದು ಅಂಗನವಾಡಿ ಶಾಲೆ ಮತ್ತು ಆಸ್ಪತ್ರೆ ಆಗಬೇಕೈತಿ ಇದು ಪಂಚಾಯತಿ ಅಧ್ಯಕ್ಷರ ಎಲ್ಲಾ ಸೇರಿಕೊಂಡು ಅಕ್ರಮವಾಗಿ ಬರೆದು ಕೊಟ್ಟಿದ್ದಾರೆ ಗ್ರಾಮ್ ಪಂಚಾಯ್ತಿ ನಂಬರ್ಸಿಗೆ ಬರೆದುಕೊಟ್ಟಿದ್ದಾರೆ
    user_Basavaraja A
    Basavaraja A
    ಹಡಗಲ್ಲಿ, ವಿಜಯನಗರ, ಕರ್ನಾಟಕ•
    2 hrs ago
  • ತೀರ್ಥಹಳ್ಳಿ: ತಾಲೂಕಿನ ಪಟ್ಟಣದ ಹೃದಯ ಭಾಗದಲ್ಲಿರುವ ಶ್ರೀ ಮಾರಿಕಾಂಬ ದೇವಿಯ ಜಾತ್ರೆಯು ಇಂದಿನಿಂದ ಪ್ರಾರಂಭವಾಗಿದ್ದು ಏನೆಲ್ಲಾ ವಿಶೇಷತೆ ಇರುತ್ತದೆ ಎಂಬುದನ್ನು ದೇವಸ್ಥಾನದ ಪ್ರಧಾನ ಅರ್ಚಕರಾದ ಐತಾಳ್‌ರವರು ತಿಳಿಸಿದ್ದಾರೆ.
    3
    ತೀರ್ಥಹಳ್ಳಿ: ತಾಲೂಕಿನ ಪಟ್ಟಣದ ಹೃದಯ ಭಾಗದಲ್ಲಿರುವ ಶ್ರೀ ಮಾರಿಕಾಂಬ ದೇವಿಯ ಜಾತ್ರೆಯು ಇಂದಿನಿಂದ ಪ್ರಾರಂಭವಾಗಿದ್ದು ಏನೆಲ್ಲಾ ವಿಶೇಷತೆ ಇರುತ್ತದೆ ಎಂಬುದನ್ನು ದೇವಸ್ಥಾನದ ಪ್ರಧಾನ ಅರ್ಚಕರಾದ ಐತಾಳ್‌ರವರು ತಿಳಿಸಿದ್ದಾರೆ.
    user_ರಶ್ಮಿ ಶ್ರೀಕಾಂತ್ ನಾಯಕ್
    ರಶ್ಮಿ ಶ್ರೀಕಾಂತ್ ನಾಯಕ್
    Local News Reporter ತೀರ್ಥಹಳ್ಳಿ, ಶಿವಮೊಗ್ಗ, ಕರ್ನಾಟಕ•
    3 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.