logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಕೊರಟಗೆರೆ ಪಟ್ಟಣದ ಕರುನಾಡು ಹೋಟೆಲ್ ಕೆಳಭಾಗದಲ್ಲಿ ಬಿಜೆಪಿ ಪಕ್ಷದ ನೂತನ ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಂಡಲ ಅಧ್ಯಕ್ಷ ರುದ್ರೇಶ್ ಸೇರಿದಂತೆ ಇತರರು ಇದ್ದರು. ಕೊರಟಗೆರೆಯಲ್ಲಿ ನೂತನ ಬಿಜೆಪಿ ಪಕ್ಷದ ಕಚೇರಿ ಉದ್ಘಾಟನೆ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಸಂಘಟನೆಗೆ ಕಾರ್ಯಕರ್ತರು ಸಜ್ಜಾಗಿ; ರುದ್ರೇಶ್. ಕೊರಟಗೆರೆ:- ಪಟ್ಟಣದ ಕರುನಾಡು ಹೋಟೆಲ್ ಕೆಳಭಾಗದಲ್ಲಿ ಬಿಜೆಪಿ ಪಕ್ಷದ ನೂತನ ಕಚೇರಿ ಇಂದು ಗಣ್ಯರ ಸಮ್ಮುಖದಲ್ಲಿ ಉದ್ಘಾಟನೆಗೊಂಡು. ಪಕ್ಷ ಸಂಘಟನೆ ಹಾಗೂ ಎಲ್ಲಾ ಚಟುವಟಿಕೆಗಳಿಗೆ ಅಧಿಕೃತವಾಗಿ ಬಳಸಿಕೊಳ್ಳಲು ಚಾಲನೆ ನೀಡಲಾಯಿತು. ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಬಿಜೆಪಿ ಪಕ್ಷದ ಮುಖಂಡರು, ಪದಾಧಿಕಾರಿಗಳು, ಮಹಿಳಾ ಮುಖಂಡರು ಹಾಗೂ ಕಾರ್ಯಕರ್ತರು ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಇದೇ ವೇಳೆ ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರದ ಯೋಜನೆಗಳನ್ನ ಜನರಿಗೆ ತಿಳಿಸಲು ಹಾಗೂ ಪಕ್ಷದ ಸಂಘಟನೆ ಬಲಪಡಿಸುವುದು, ಕಾರ್ಯಕರ್ತರನ್ನು ಒಗ್ಗೂಡಿಸುವುದು ಹಾಗೂ ಮತದಾರರನ್ನು ತಲುಪುವ ಕುರಿತು ಮುಖಂಡರು ಚರ್ಚಿಸಿದರು. ಬಿಜೆಪಿ ಮಂಡಲ ಅಧ್ಯಕ್ಷ ರುದ್ರೇಶ್ ಮಾತನಾಡಿ, ಪ್ರತಿ ಚುನಾವಣೆಯಲ್ಲೂ ಹೊಸ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಸಂದರ್ಭದಲ್ಲಿ ಪಕ್ಷದ ಸಂಘಟನೆಗೆ ಹಲವು ಸವಾಲುಗಳು ಎದುರಾಗುತ್ತಿವೆ. ಪಕ್ಷವನ್ನು ತಳಮಟ್ಟದಿಂದ ಮತ್ತಷ್ಟು ಬಲಪಡಿಸುವ ಉದ್ದೇಶದಿಂದಲೇ ನೂತನ ಕಚೇರಿಯನ್ನು ಆರಂಭಿಸಲಾಗಿದೆ. ಕಾರ್ಯಕರ್ತರನ್ನು ಒಗ್ಗೂಡಿಸಿ, ಪಕ್ಷದ ಸಂಘಟನೆಯನ್ನು ಸದೃಢಗೊಳಿಸುವ ಮೂಲಕ ಮುಂಬರುವ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯನ್ನು ಗೆಲ್ಲಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಸಜ್ಜಾಗಿ ಎಂದು ಕರೆ ನೀಡಿದರು. ಆಗ್ನೇಯ ಪದವೀಧರ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಕೆ.ಎಂ. ಸುರೇಶ್ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪದವೀಧರರಿಗೆ ಆಗುತ್ತಿರುವ ಅನ್ಯಾಯ ಹಾಗೂ ಸಮಸ್ಯೆಗಳನ್ನು ಗಮನಿಸುತ್ತಿದ್ದೇವೆ. ಪದವೀಧರರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ದೊರೆಯಬೇಕಾದರೆ, ಈ ಬಾರಿ ಪದವೀಧರರು ತಮ್ಮ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಒಳ್ಳೆಯ ನಿರ್ಧಾರ ಕೈಗೊಳ್ಳಬೇಕು. ಪದವೀಧರರ ಪರವಾಗಿ ಕೆಲಸ ಮಾಡುವ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಮೂಲಕ ತಮ್ಮ ಮತದಾನದ ಹಕ್ಕನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು. ಬಿಜೆಪಿ ಮುಖಂಡ ವಿಜಯಕುಮಾರ್ ಮಾತನಾಡಿ, ಕೊರಟಗೆರೆಯಲ್ಲಿ ಪಕ್ಷದ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ನೂತನ ಕಚೇರಿ ಪ್ರಮುಖ ಪಾತ್ರ ವಹಿಸಲಿದೆ. ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಒಂದೇ ವೇದಿಕೆಯಲ್ಲಿ ಸೇರಿ ಸಂಘಟನಾತ್ಮಕ ಚಟುವಟಿಕೆಗಳನ್ನು ರೂಪಿಸಲು ಈ ಕಚೇರಿ ಸಹಕಾರಿಯಾಗಲಿದೆ. ಮುಂಬರುವ ದಿನಗಳಲ್ಲಿ ಪಕ್ಷದ ಕಾರ್ಯಕರ್ತರನ್ನು ಮತ್ತಷ್ಟು ಸಕ್ರಿಯಗೊಳಿಸಿ, ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು. ಬಿಜೆಪಿ ಮಹಿಳಾ ಜಿಲ್ಲಾಧ್ಯಕ್ಷರು ಮಾತನಾಡಿ, ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆಯರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಪಕ್ಷದ ಸಂಘಟನೆ ಹಾಗೂ ಚುನಾವಣಾ ಪ್ರಕ್ರಿಯೆಯಲ್ಲಿ ಮಹಿಳಾ ಕಾರ್ಯಕರ್ತರು ಸಕ್ರಿಯವಾಗಿ ಭಾಗವಹಿಸಬೇಕು. ಕೊರಟಗೆರೆ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಪಕ್ಷಕ್ಕೆ ಹೆಚ್ಚಿನ ಬೆಂಬಲ ನೀಡುವ ಮೂಲಕ ಎನ್‌ಡಿಎ ಅಭ್ಯರ್ಥಿಯನ್ನು ಹೆಚ್ಚಿನ ಮತಗಳ ಅಂತರದಿAದ ಗೆಲ್ಲಿಸಬೇಕು. ಉತ್ತಮ ನಾಯಕತ್ವ ಹಾಗೂ ಅಭಿವೃದ್ಧಿಯ ದೃಷ್ಟಿಯಿಂದ ಕ್ಷೇತ್ರದಲ್ಲಿ ಬದಲಾವಣೆ ತರಲು ಮತದಾರರು ನಿರ್ಧಾರ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. ಇದೆ ಸಂದರ್ಭದಲ್ಲಿ ಪರ್ವ ಗ್ರೂಪ್ ಸಂಸ್ಥಾಪಕ ನೀಲೇಶ್, ಮುಖಂಡರಾದ ಕಾಂತರಾಜು, ಓಂಕಾರ್, ಯಶಸ್, ಪವನ್‌ಕುಮಾರ್, ನಟರಾಜು, ಸುಶೀಲಮ್ಮ, ಚಂದ್ರಣ್ಣ, ಶ್ರೀಧರ್, ಅರುಣ್, ರತ್ನಮ್ಮ, ರವಿ, ಲತಾಪ್ರದೀಪ್, ರಾಜೇಂದ್ರ, ಮಂಜಣ್ಣ, ಮಹೇಂದ್ರ, ಗುರುದತ್, ಹನುಮಂತರಾಜು, ಶಿವಕುಮಾರ್, ಸಿದ್ದನಂಜಪ್ಪ, ಮಮತಾ, ಜಯಪ್ಪ, ನಾಗರಾಜು, ಆನಂದ್, ಶ್ರೀನಿವಾಸ್, ಸಿದ್ದರಾಜು, ವಿಜಿಕುಮಾರ್, ಯತೀಶ್, ರಾಜಕುಮಾರ್, ಸುರೇಶ್, ಮೂರ್ತಿ, ಬಾಲರಾಜು, ಮಂಜಣ್ಣ, ಆಟೋಗೋಪಿ, ಹೇಮಂತ್, ರವಿಶಂಕರ್, ಸಂತೋಷ್, ಜಗದೀಶ್, ಶಶಿ, ರಂಜಿತ್, ಮಧು, ನಯನಗೌಡ, ಸಿದ್ದೇಶ್, ವಿನೋದ್, ಸೇರಿದಂತೆ ಇತರರು ಇದ್ದರು.

4 hrs ago
user_Mutthuraj Raj
Mutthuraj Raj
Electrician ಕೊರಟಗೆರೆ, ತುಮಕೂರು, ಕರ್ನಾಟಕ•
4 hrs ago
51b0b2d5-78cf-4b42-822d-7e6eab2e2e2b

ಕೊರಟಗೆರೆ ಪಟ್ಟಣದ ಕರುನಾಡು ಹೋಟೆಲ್ ಕೆಳಭಾಗದಲ್ಲಿ ಬಿಜೆಪಿ ಪಕ್ಷದ ನೂತನ ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಂಡಲ ಅಧ್ಯಕ್ಷ ರುದ್ರೇಶ್ ಸೇರಿದಂತೆ ಇತರರು ಇದ್ದರು. ಕೊರಟಗೆರೆಯಲ್ಲಿ ನೂತನ ಬಿಜೆಪಿ ಪಕ್ಷದ ಕಚೇರಿ ಉದ್ಘಾಟನೆ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಸಂಘಟನೆಗೆ ಕಾರ್ಯಕರ್ತರು ಸಜ್ಜಾಗಿ; ರುದ್ರೇಶ್. ಕೊರಟಗೆರೆ:- ಪಟ್ಟಣದ ಕರುನಾಡು ಹೋಟೆಲ್ ಕೆಳಭಾಗದಲ್ಲಿ ಬಿಜೆಪಿ ಪಕ್ಷದ ನೂತನ ಕಚೇರಿ ಇಂದು ಗಣ್ಯರ ಸಮ್ಮುಖದಲ್ಲಿ ಉದ್ಘಾಟನೆಗೊಂಡು. ಪಕ್ಷ ಸಂಘಟನೆ ಹಾಗೂ ಎಲ್ಲಾ ಚಟುವಟಿಕೆಗಳಿಗೆ ಅಧಿಕೃತವಾಗಿ ಬಳಸಿಕೊಳ್ಳಲು ಚಾಲನೆ ನೀಡಲಾಯಿತು. ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಬಿಜೆಪಿ ಪಕ್ಷದ ಮುಖಂಡರು, ಪದಾಧಿಕಾರಿಗಳು, ಮಹಿಳಾ ಮುಖಂಡರು ಹಾಗೂ ಕಾರ್ಯಕರ್ತರು ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಇದೇ ವೇಳೆ ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರದ ಯೋಜನೆಗಳನ್ನ ಜನರಿಗೆ ತಿಳಿಸಲು ಹಾಗೂ ಪಕ್ಷದ ಸಂಘಟನೆ ಬಲಪಡಿಸುವುದು, ಕಾರ್ಯಕರ್ತರನ್ನು ಒಗ್ಗೂಡಿಸುವುದು ಹಾಗೂ ಮತದಾರರನ್ನು ತಲುಪುವ ಕುರಿತು ಮುಖಂಡರು ಚರ್ಚಿಸಿದರು. ಬಿಜೆಪಿ ಮಂಡಲ ಅಧ್ಯಕ್ಷ ರುದ್ರೇಶ್ ಮಾತನಾಡಿ, ಪ್ರತಿ ಚುನಾವಣೆಯಲ್ಲೂ ಹೊಸ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಸಂದರ್ಭದಲ್ಲಿ ಪಕ್ಷದ ಸಂಘಟನೆಗೆ ಹಲವು ಸವಾಲುಗಳು ಎದುರಾಗುತ್ತಿವೆ. ಪಕ್ಷವನ್ನು ತಳಮಟ್ಟದಿಂದ ಮತ್ತಷ್ಟು ಬಲಪಡಿಸುವ ಉದ್ದೇಶದಿಂದಲೇ ನೂತನ ಕಚೇರಿಯನ್ನು ಆರಂಭಿಸಲಾಗಿದೆ. ಕಾರ್ಯಕರ್ತರನ್ನು ಒಗ್ಗೂಡಿಸಿ, ಪಕ್ಷದ ಸಂಘಟನೆಯನ್ನು ಸದೃಢಗೊಳಿಸುವ ಮೂಲಕ ಮುಂಬರುವ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯನ್ನು ಗೆಲ್ಲಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಸಜ್ಜಾಗಿ ಎಂದು ಕರೆ ನೀಡಿದರು. ಆಗ್ನೇಯ ಪದವೀಧರ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಕೆ.ಎಂ. ಸುರೇಶ್ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪದವೀಧರರಿಗೆ ಆಗುತ್ತಿರುವ ಅನ್ಯಾಯ ಹಾಗೂ ಸಮಸ್ಯೆಗಳನ್ನು ಗಮನಿಸುತ್ತಿದ್ದೇವೆ. ಪದವೀಧರರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ದೊರೆಯಬೇಕಾದರೆ, ಈ ಬಾರಿ ಪದವೀಧರರು ತಮ್ಮ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಒಳ್ಳೆಯ ನಿರ್ಧಾರ ಕೈಗೊಳ್ಳಬೇಕು. ಪದವೀಧರರ ಪರವಾಗಿ ಕೆಲಸ ಮಾಡುವ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಮೂಲಕ ತಮ್ಮ ಮತದಾನದ ಹಕ್ಕನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು. ಬಿಜೆಪಿ ಮುಖಂಡ ವಿಜಯಕುಮಾರ್ ಮಾತನಾಡಿ, ಕೊರಟಗೆರೆಯಲ್ಲಿ ಪಕ್ಷದ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ನೂತನ ಕಚೇರಿ ಪ್ರಮುಖ ಪಾತ್ರ ವಹಿಸಲಿದೆ. ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಒಂದೇ ವೇದಿಕೆಯಲ್ಲಿ ಸೇರಿ ಸಂಘಟನಾತ್ಮಕ ಚಟುವಟಿಕೆಗಳನ್ನು ರೂಪಿಸಲು ಈ ಕಚೇರಿ ಸಹಕಾರಿಯಾಗಲಿದೆ. ಮುಂಬರುವ ದಿನಗಳಲ್ಲಿ ಪಕ್ಷದ ಕಾರ್ಯಕರ್ತರನ್ನು ಮತ್ತಷ್ಟು ಸಕ್ರಿಯಗೊಳಿಸಿ, ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು. ಬಿಜೆಪಿ ಮಹಿಳಾ ಜಿಲ್ಲಾಧ್ಯಕ್ಷರು ಮಾತನಾಡಿ, ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆಯರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಪಕ್ಷದ ಸಂಘಟನೆ ಹಾಗೂ ಚುನಾವಣಾ ಪ್ರಕ್ರಿಯೆಯಲ್ಲಿ ಮಹಿಳಾ ಕಾರ್ಯಕರ್ತರು ಸಕ್ರಿಯವಾಗಿ ಭಾಗವಹಿಸಬೇಕು. ಕೊರಟಗೆರೆ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಪಕ್ಷಕ್ಕೆ ಹೆಚ್ಚಿನ ಬೆಂಬಲ ನೀಡುವ ಮೂಲಕ ಎನ್‌ಡಿಎ ಅಭ್ಯರ್ಥಿಯನ್ನು ಹೆಚ್ಚಿನ ಮತಗಳ ಅಂತರದಿAದ ಗೆಲ್ಲಿಸಬೇಕು. ಉತ್ತಮ ನಾಯಕತ್ವ ಹಾಗೂ ಅಭಿವೃದ್ಧಿಯ ದೃಷ್ಟಿಯಿಂದ ಕ್ಷೇತ್ರದಲ್ಲಿ ಬದಲಾವಣೆ ತರಲು ಮತದಾರರು ನಿರ್ಧಾರ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. ಇದೆ ಸಂದರ್ಭದಲ್ಲಿ ಪರ್ವ ಗ್ರೂಪ್ ಸಂಸ್ಥಾಪಕ ನೀಲೇಶ್, ಮುಖಂಡರಾದ ಕಾಂತರಾಜು, ಓಂಕಾರ್, ಯಶಸ್, ಪವನ್‌ಕುಮಾರ್, ನಟರಾಜು, ಸುಶೀಲಮ್ಮ, ಚಂದ್ರಣ್ಣ, ಶ್ರೀಧರ್, ಅರುಣ್, ರತ್ನಮ್ಮ, ರವಿ, ಲತಾಪ್ರದೀಪ್, ರಾಜೇಂದ್ರ, ಮಂಜಣ್ಣ, ಮಹೇಂದ್ರ, ಗುರುದತ್, ಹನುಮಂತರಾಜು, ಶಿವಕುಮಾರ್, ಸಿದ್ದನಂಜಪ್ಪ, ಮಮತಾ, ಜಯಪ್ಪ, ನಾಗರಾಜು, ಆನಂದ್, ಶ್ರೀನಿವಾಸ್, ಸಿದ್ದರಾಜು, ವಿಜಿಕುಮಾರ್, ಯತೀಶ್, ರಾಜಕುಮಾರ್, ಸುರೇಶ್, ಮೂರ್ತಿ, ಬಾಲರಾಜು, ಮಂಜಣ್ಣ, ಆಟೋಗೋಪಿ, ಹೇಮಂತ್, ರವಿಶಂಕರ್, ಸಂತೋಷ್, ಜಗದೀಶ್, ಶಶಿ, ರಂಜಿತ್, ಮಧು, ನಯನಗೌಡ, ಸಿದ್ದೇಶ್, ವಿನೋದ್, ಸೇರಿದಂತೆ ಇತರರು ಇದ್ದರು.

More news from ಕರ್ನಾಟಕ and nearby areas
  • ಸರಕಾರ ಕೂಡಲೇ ಬರದಿಂದ ಸಂಕಷ್ಟದಲ್ಲಿರುವ ರೈತರಿಗೆ ಬಾಕಿ ಹಣ ಬಿಡುಗಡೆ ಮಾಡಬೇಕು ತುಮಕೂರು:ಜಿಲ್ಲೆಯಲ್ಲಿ ತೀವ್ರ ಬರಗಾಲ ಕಾಣಿಸಿಕೊಂಡಿದ್ದು,ಜಿಲ್ಲೆಯ ತಿಪಟೂರು ಹೊರತು ಪಡಿಸಿ ಎಲ್ಲಾ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಸರಕಾರ ಘೋಷಣೆ ಮಾಡಿದ್ದರೂ ಇದುವರೆಗೂ ಬರಪರಿಹಾರ ಕಾಮಗಾರಿಗಳನ್ನು ಕೈಗೆತ್ತಿ ಕೊಂಡಿಲ್ಲ.ಇದರಿAದ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆ ಕಾಣಿಸಿಕೊಂಡಿದ್ದು, ಕೂಡಲೇ ಜಿಲ್ಲಾಡಳಿತ ಬರಪರಿಹಾರ ಕಾಮಗಾರಿಗಳನ್ನು ಕೈಗೊಳ್ಳಬೇಕೆಂದು ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಹಾಗೂ ತುಮಕೂರು ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಒತ್ತಾಯಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಮಳೆಯಿಲ್ಲದ ಕಾರಣ ಜಿಲ್ಲೆಯ ಶೇ70 ರಷ್ಟು ಭೂಮಿಯಲ್ಲಿ ಭಿತ್ತನೆ ಮಾಡಲು ಸಾಧ್ಯವಾಗಿಲ್ಲ. ಬಿತ್ತನೆ ಮಾಡಿದ ಶೇ30ರಷ್ಟು ಭೂಮಿಯಲ್ಲಿನ ಫಸಲು ಸಹ ಸಕಾಲಕ್ಕೆ ಮಳೆಯಿಲ್ಲದೆ ಒಣಗಿದ್ದು,ದಿನದಿಂದ ದಿನಕ್ಕೆ ಅಂತರಜಲ ಕುಸಿಯುತ್ತಿದ್ದು,ಮುಂದಿನ 15-20 ದಿನಗಳಲ್ಲಿ ತೀವ್ರ ನೀರಿನ ಕೊರತೆ ಉಂಟಾಗುವ ಸಾಧ್ಯತೆ ಇದ್ದು, ಜಿಲ್ಲಾಡಳಿತ ತಕ್ಷಣವೇ ಕುಡಿಯುವ ನೀರಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಹಾಗೆಯೇ ಜಾನುವಾರುಗಳ ಮೇವಿಗೆ ಗೋಶಾಲೆ ತೆರೆಯುವುದು.ಎಕರೆಗೆ ತಲಾ 50 ಸಾವಿರ ಬೆಳೆ ಪರಿಹಾರ,ಕೃಷಿಕರು ಮತ್ತು ಕೃಷಿ ಕೂಲಿ ಕಾರ್ಮಿಕರು ಗುಳೆ ಹೋಗದಂತೆ ವಿಬಿಜಿ ರಾಮಜಿ ಅಡಿಯಲ್ಲಿ ಕೆಲಸ ನೀಡಿ ಜನರ ನೆರವಿಗೆ ಬರಬೇಕೆಂದು ಆಗ್ರಹಿಸಿದರು. ಈ ಬಾರಿ ಹೇಮಾವತಿ ಜಲಾಶಯದಲ್ಲಿ ಶೇ75ರಷ್ಟು ನೀರಿನ ಸಂಗ್ರಹವಿತ್ತು. ಆಗ ಜಿಲ್ಲೆಯ ಉಸ್ತುವಾರಿ ಸಚಿವರು, ಶಾಸಕರುಗಳು ಎಚ್ಚೆತ್ತುಕೊಂಡು ನಮ್ಮ ಕೆರೆ, ಕೆಟ್ಟೆಗಳಿಗೆ ನೀರು ಹರಿಸಿಕೊಂಡಿದ್ದರೆ ಅಂತರ ಜಲ ಕುಸಿತ ತಡೆಯಬಹುದಿತ್ತು. ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳ ನಿರ್ಲಕ್ಷದ ಫಲವಾಗಿ ನಮ್ಮ ಜಿಲ್ಲೆಗೆ ಬರಬೇಕಾದ ನೀರು ತೆಮಿಳು ನಾಡಿಗೆ ಹರಿಸಿ,ಸರಕಾರ ತನ್ನ ಖರ್ಚಿ ಉಳಿಸಿಕೊಂಡಿದೆ.ನಮ್ಮ ತೋಟ, ತುಡಿಕೆಗಳು ಒಣಗಿ, ರೈತರು ಕಂಗಾಲಾಗಿದ್ದಾರೆ.ಈಗಲಾದರೂ ಜಿಲ್ಲಾಡಳಿತ ಎಲ್ಲಾ ಕೆರೆ, ಕಟ್ಟೆಗಳಿಗೆ ನೀರು ಹರಿಸುವ ಕೆಲಸ ಮಾಡಬೇಕು ಎಂದು ಎ.ಗೋವಿಂದರಾಜು ನುಡಿದರು. ಈಲ್ಲೆಯಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ ಆಟ ಶುರುವಾಗಿದ್ದು, ದಿನದಲ್ಲಿ ಒಂದು ಗಂಟೆ ರೈತರ ಪಂಪ್‌ಸೆಟ್‌ಗಳಿಗೆ ಗುಣಮಟ್ಟದ ವಿದ್ಯುತ್ ದೊರೆಯುತ್ತಿಲ್ಲ.ನಿರ್ಮಾಣವಾಗಿರುವ 220 ಕೆ.ವಿ.ಉಪಸ್ಥಾವರಗಳು ಕಾರ್ಯಾರಂಭಗೊAಡಿಲ್ಲ.ಬೇಸ್ಕಾA ಅಧಿಕಾರಿಗಳು ಅಸಹಾಯಕರಾಗಿದ್ದಾರೆ.ಹಾಗಾಗಿ ಬೆಸ್ಕಾಂ ಸೂಪರಿಂಡೆAಟ್ ಇಂಜಿನಿಯರ್, ಮುಖ್ಯ ಇಂಜಿನಿಯರ್ ಹಾಗೂ ಕಾರ್ಯಪಾಲಕ ಇಂಜಿನಿಯರ್‌ಗಳು ಸೆಪ್ಟಂಬರ್ 21ರೊಳಗೆ ರೈತರು,ರೈತ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿ, ಸಮಸ್ಯೆಗೆ ಪರಿಹಾರ ಒದಗಿಸದಿದ್ದರೆ ಸೆಪ್ಟಂಬರ್ 23 ರಿಂದ ಹಂತ ಹಂತವಾಗಿ ಎಲ್ಲಾ ತಾಲೂಕು ಬೆಸ್ಕಾಂ ಕಚೇರಿ ಮತ್ತು ತಹಶೀಲ್ದಾರರ ಕಚೇರಿಯ ಮುಂದೆ ಪಿಕೇಟಿಗ್ ನಡೆಸಲಾಗುವುದು. ಮಧುಗಿರಿ ಉಪವಿಭಾಗಕ್ಕೆ ಸಂಬAಧಿಸಿ ದಂತೆ ಸೆಪ್ಟಂಬರ್ 23 ರಂದು ಮಧುಗಿರಿ ಎ.ಸಿ.ಕಚೇರಿ ಎದುರು ರೈತರು ಪ್ರತಿಭಟನೆ ನಡೆಸಲಿದ್ದಾರೆ ಎಂದರು. ಈಲ್ಲೆಯಲ್ಲಿ ಸರಕಾರದ ಯೋಜನೆಗಳಾದ ಹೇಮಾವತಿ ನಾಲೆ, ಎತ್ತಿನಹೊಳೆ ಯೋಜನೆ, ರೈಲ್ವೆಗೆ ಸೇರಿ ರೈತರ ಸಾಕಷ್ಟು ಫಲವತ್ತಾ ಭೂಮಿಯನ್ನು ವಶಪಡಿಸಿಕೊಂಡು 20-30 ವರ್ಷಗಳು ಕಳೆದರು ವೈಜ್ಞಾನಿಕ ಪರಿಹಾರ ನೀಡಿಲ್ಲ. ನ್ಯಾಯಾಲಯಕ್ಕೆ ಹೋದ ರೈತರಿಗೆ ಕೋರ್ಟ್ ಆದೇಶದಂತೆ ಸುಮಾರು 500 ಕೋಟಿ ರೂಗಳಿಗೆ ಹೆಚ್ಚಿನ ಬಾಕಿ ನೀಡಬೇಕಿದೆ.ಆದರೆ ಇದುವರೆಗೂ ಒಂದು ನೈಯಾಫೈಸೆ ನೀಡಿಲ್ಲ. ಹಲವು ಮೂಲ ಜಮೀನುದಾರರು ಸಾವನ್ನಪ್ಪಿದ್ದಾರೆ.ಸರಕಾರ ಕೂಡಲೇ ಬಾಕಿ ಹಣ ಬಿಡುಗಡೆ ಮಾಡಬೇಕು. ಹಾಗೆಯೇ ಕಳೆದ ಸಾಲಿನಲ್ಲಿ ನ್ಯಾಫೇಡ್ ಮೂಲಕ ಖರೀದಿಸಿದ್ದ ರಾಗಿಯ ಬಾಬ್ತು ಸುಮಾರು 400 ಕೋಟಿ ರೂ ಬಾಕಿ ಬರಬೇಕಾಗಿದೆ. ಸರಕಾರ ಕೂಡಲೇ ಬರದಿಂದ ಸಂಕಷ್ಟದಲ್ಲಿರುವ ರೈತರಿಗೆ ಬಾಕಿ ಹಣ ಬಿಡುಗಡೆ ಮಾಡಬೇಕು ಎಂದು ಎ.ಗೋವಿಂದರಾಜು ಆಗ್ರಹಿಸಿದರು. ಬರದಿಂದ ರೈತರು ಸಂಕಷ್ಟಕ್ಕೆ ಸಿಲುಕಿದೆ.ಡಾ.ಎಂ.ಎಸ್.ಸ್ವಾಮಿನಾಥನ್ ವರದಿಯನ್ನು ಜಾರಿಗೆ ತರದ ಕಾರಣ, ಉತ್ಪಾಧನಾ ವೆಚ್ಚ ಹೆಚ್ಚಾಗಿ,ನಷ್ಟಕ್ಕೆ ಒಳಗಾಗಿ ಆತ್ಮಹತ್ಯೆಯ ದಾರಿ ತುಳಿಯುತ್ತಿದ್ದಾನೆ.ಇದನ್ನು ತಪ್ಪಿಸುವ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಸಂಸದರು ಒಂದು ಬಾರಿಗೆ ರೈತರ ಸಾಲಮನ್ನಾಕ್ಕೆ ಕೇಂದ್ರ ಸರಕಾರವನ್ನು ಒತ್ತಾಯಿಸಬೇಕು.ಹಾಗೆಯೇ ಬ್ಯಾಂಕುಗಳು, ಕಿರು ಹಣಕಾಸು ಸಂಸ್ಥೆಗಳು ಬಲವಂತದ ವಸೂಲಿ ಮಾಡದಂತೆ ಸುತ್ತೋಲೆ ಹೊರಡಿಸಬೇಕೆಂದು ಆಗ್ರಹಿಸಿದರು. ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಸಿ.ಶಂಕರಪ್ಪ ಮಾತನಾಡಿ,ಬರದಿಂದ ಬೆಳೆ ನಷ್ಟದಿಂದ ಜನರು ಸಂಕಷ್ಟದಲ್ಲಿದ್ದು,ಸರಕಾರ ಕೇರಳ ಮಾದರಿಯಲ್ಲಿ ಪಡಿತರ ಅಕ್ಕಿಯ ಜೊತೆಗೆ, ಬೇಳೆ, ಬೆಲ್ಲ ಸೇರಿದಂತೆ ದಿನ ಬಳಕೆಯ ವಸ್ತುಗಳನ್ನು ರಿಯಾಯತಿ ದರದಲ್ಲಿ ನೀಡಬೇಕು.ಹಾಗೆಯೇ ಪಶುಸಂಗೋಪನೆಗೆ ಪೂರಕವಾಗಿ ಬೂಸ್ ಮತ್ತು ಹಿಂಡಿಯನ್ನು ಶೇ50ರ ರಿಯಾಯಿತಿ ದರದಲ್ಲಿ ನೀಡಬೇಕು. ಲೀಟರ್ ಹಾಲಿಗೆ 40 ರೂ ನೀಡಬೇಕೆಂದು ಒತ್ತಾಯಿಸಿದರು. ನಂದಿಹಳ್ಳಿ-ಮಲ್ಲಸAದ್ರ-ವಸAತನರಸಾಪುರ ಔಟರ್ ರಿಂಗ್ ರಸ್ತೆಗೆ ರೈತರ ವಿರೋಧದ ನಡುವೆಯೂ ಭೂಸ್ವಾಧೀನಕ್ಕೆ ಅಧಿಕಾರಿಗಳು ಮುಂದಾಗುತ್ತಲೇ ಇದ್ದಾರೆ.ಜನರಿಗೆ ಹೆಚ್ಚು ಉಪಯೋಗವಿಲ್ಲದ ಔಟರ್‌ರಿಂಗ್ ರಸ್ತೆ ಯೋಜನೆಯನ್ನು ಕೈಬಿಡಬೇಕು.ಹಾಗೆಯೇ ಜಿಲ್ಲೆಯ 7-8 ತಾಲೂಕುಗಳಿಗೆ ಮರಣ ಶಾಸನವಾಗಿರುವ ಏಕ್ಸ್ಪ್ರೆಸ್ ಕೇನಾಲ್ ಯೋಜನೆಯನ್ನು ಸರಕಾರ ರದ್ದು ಮಾಡಬೇಕು. ಕುಣಿಗಲ್ ನೆಪದಲ್ಲಿ ಬಿಡದಿಯೇ ಎಐ ಡೇಟಾ ಸೆಂಟರ್‌ಗೆ ನೀರು ತೆಗೆದುಕೊಂಡು ಹೋಗಲು ಅವಕಾಶ ನೀಡುವುದಿಲ್ಲ ಎಂದು ಜಿ.ಸಿ.ಶಂಕರಪ್ಪ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ವಿವಿಧ ತಾಲೂಕುಗಳ ಅಧ್ಯಕ್ಷರಾದ ಚಿಕ್ಕಬೋರೇಗೌಡ, ಲೋಕೇಶ್, ರಂಗಹನುಮಯ್ಯ, ಷಬ್ಬೀರ್ ಪಾಷ, ಯುವಘಟಕದ ಮಂಜುನಾಥ್, ಜಟ್ಟಿ, ತಿಮ್ಮೇಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.
    1
    ಸರಕಾರ ಕೂಡಲೇ ಬರದಿಂದ ಸಂಕಷ್ಟದಲ್ಲಿರುವ ರೈತರಿಗೆ ಬಾಕಿ ಹಣ ಬಿಡುಗಡೆ ಮಾಡಬೇಕು 
ತುಮಕೂರು:ಜಿಲ್ಲೆಯಲ್ಲಿ ತೀವ್ರ ಬರಗಾಲ ಕಾಣಿಸಿಕೊಂಡಿದ್ದು,ಜಿಲ್ಲೆಯ ತಿಪಟೂರು ಹೊರತು ಪಡಿಸಿ ಎಲ್ಲಾ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಸರಕಾರ ಘೋಷಣೆ ಮಾಡಿದ್ದರೂ ಇದುವರೆಗೂ ಬರಪರಿಹಾರ ಕಾಮಗಾರಿಗಳನ್ನು ಕೈಗೆತ್ತಿ ಕೊಂಡಿಲ್ಲ.ಇದರಿAದ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆ ಕಾಣಿಸಿಕೊಂಡಿದ್ದು, ಕೂಡಲೇ ಜಿಲ್ಲಾಡಳಿತ ಬರಪರಿಹಾರ ಕಾಮಗಾರಿಗಳನ್ನು ಕೈಗೊಳ್ಳಬೇಕೆಂದು ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಹಾಗೂ ತುಮಕೂರು ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಮಳೆಯಿಲ್ಲದ ಕಾರಣ ಜಿಲ್ಲೆಯ ಶೇ70 ರಷ್ಟು ಭೂಮಿಯಲ್ಲಿ ಭಿತ್ತನೆ ಮಾಡಲು ಸಾಧ್ಯವಾಗಿಲ್ಲ. ಬಿತ್ತನೆ ಮಾಡಿದ ಶೇ30ರಷ್ಟು ಭೂಮಿಯಲ್ಲಿನ ಫಸಲು ಸಹ ಸಕಾಲಕ್ಕೆ ಮಳೆಯಿಲ್ಲದೆ ಒಣಗಿದ್ದು,ದಿನದಿಂದ ದಿನಕ್ಕೆ ಅಂತರಜಲ ಕುಸಿಯುತ್ತಿದ್ದು,ಮುಂದಿನ 15-20 ದಿನಗಳಲ್ಲಿ ತೀವ್ರ ನೀರಿನ ಕೊರತೆ ಉಂಟಾಗುವ ಸಾಧ್ಯತೆ ಇದ್ದು, ಜಿಲ್ಲಾಡಳಿತ ತಕ್ಷಣವೇ ಕುಡಿಯುವ ನೀರಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಹಾಗೆಯೇ ಜಾನುವಾರುಗಳ ಮೇವಿಗೆ ಗೋಶಾಲೆ ತೆರೆಯುವುದು.ಎಕರೆಗೆ ತಲಾ 50 ಸಾವಿರ ಬೆಳೆ ಪರಿಹಾರ,ಕೃಷಿಕರು ಮತ್ತು ಕೃಷಿ ಕೂಲಿ ಕಾರ್ಮಿಕರು ಗುಳೆ ಹೋಗದಂತೆ ವಿಬಿಜಿ ರಾಮಜಿ ಅಡಿಯಲ್ಲಿ ಕೆಲಸ ನೀಡಿ ಜನರ ನೆರವಿಗೆ ಬರಬೇಕೆಂದು ಆಗ್ರಹಿಸಿದರು.
ಈ ಬಾರಿ ಹೇಮಾವತಿ ಜಲಾಶಯದಲ್ಲಿ ಶೇ75ರಷ್ಟು ನೀರಿನ ಸಂಗ್ರಹವಿತ್ತು. ಆಗ ಜಿಲ್ಲೆಯ ಉಸ್ತುವಾರಿ ಸಚಿವರು, ಶಾಸಕರುಗಳು ಎಚ್ಚೆತ್ತುಕೊಂಡು ನಮ್ಮ ಕೆರೆ, ಕೆಟ್ಟೆಗಳಿಗೆ ನೀರು ಹರಿಸಿಕೊಂಡಿದ್ದರೆ ಅಂತರ ಜಲ ಕುಸಿತ ತಡೆಯಬಹುದಿತ್ತು. ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳ ನಿರ್ಲಕ್ಷದ ಫಲವಾಗಿ ನಮ್ಮ ಜಿಲ್ಲೆಗೆ ಬರಬೇಕಾದ ನೀರು ತೆಮಿಳು ನಾಡಿಗೆ ಹರಿಸಿ,ಸರಕಾರ ತನ್ನ ಖರ್ಚಿ ಉಳಿಸಿಕೊಂಡಿದೆ.ನಮ್ಮ ತೋಟ, ತುಡಿಕೆಗಳು ಒಣಗಿ, ರೈತರು ಕಂಗಾಲಾಗಿದ್ದಾರೆ.ಈಗಲಾದರೂ ಜಿಲ್ಲಾಡಳಿತ ಎಲ್ಲಾ ಕೆರೆ, ಕಟ್ಟೆಗಳಿಗೆ ನೀರು ಹರಿಸುವ ಕೆಲಸ ಮಾಡಬೇಕು ಎಂದು ಎ.ಗೋವಿಂದರಾಜು ನುಡಿದರು.
ಈಲ್ಲೆಯಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ ಆಟ ಶುರುವಾಗಿದ್ದು, ದಿನದಲ್ಲಿ ಒಂದು ಗಂಟೆ ರೈತರ ಪಂಪ್‌ಸೆಟ್‌ಗಳಿಗೆ ಗುಣಮಟ್ಟದ ವಿದ್ಯುತ್ ದೊರೆಯುತ್ತಿಲ್ಲ.ನಿರ್ಮಾಣವಾಗಿರುವ 220 ಕೆ.ವಿ.ಉಪಸ್ಥಾವರಗಳು ಕಾರ್ಯಾರಂಭಗೊAಡಿಲ್ಲ.ಬೇಸ್ಕಾA ಅಧಿಕಾರಿಗಳು ಅಸಹಾಯಕರಾಗಿದ್ದಾರೆ.ಹಾಗಾಗಿ ಬೆಸ್ಕಾಂ ಸೂಪರಿಂಡೆAಟ್ ಇಂಜಿನಿಯರ್, ಮುಖ್ಯ ಇಂಜಿನಿಯರ್ ಹಾಗೂ ಕಾರ್ಯಪಾಲಕ ಇಂಜಿನಿಯರ್‌ಗಳು ಸೆಪ್ಟಂಬರ್ 21ರೊಳಗೆ ರೈತರು,ರೈತ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿ, ಸಮಸ್ಯೆಗೆ ಪರಿಹಾರ ಒದಗಿಸದಿದ್ದರೆ ಸೆಪ್ಟಂಬರ್ 23 ರಿಂದ ಹಂತ ಹಂತವಾಗಿ ಎಲ್ಲಾ ತಾಲೂಕು ಬೆಸ್ಕಾಂ ಕಚೇರಿ ಮತ್ತು ತಹಶೀಲ್ದಾರರ ಕಚೇರಿಯ ಮುಂದೆ ಪಿಕೇಟಿಗ್ ನಡೆಸಲಾಗುವುದು. ಮಧುಗಿರಿ ಉಪವಿಭಾಗಕ್ಕೆ ಸಂಬAಧಿಸಿ ದಂತೆ ಸೆಪ್ಟಂಬರ್ 23 ರಂದು ಮಧುಗಿರಿ ಎ.ಸಿ.ಕಚೇರಿ ಎದುರು ರೈತರು ಪ್ರತಿಭಟನೆ ನಡೆಸಲಿದ್ದಾರೆ ಎಂದರು.
ಈಲ್ಲೆಯಲ್ಲಿ ಸರಕಾರದ ಯೋಜನೆಗಳಾದ ಹೇಮಾವತಿ ನಾಲೆ, ಎತ್ತಿನಹೊಳೆ ಯೋಜನೆ, ರೈಲ್ವೆಗೆ ಸೇರಿ ರೈತರ ಸಾಕಷ್ಟು ಫಲವತ್ತಾ ಭೂಮಿಯನ್ನು ವಶಪಡಿಸಿಕೊಂಡು 20-30 ವರ್ಷಗಳು ಕಳೆದರು ವೈಜ್ಞಾನಿಕ ಪರಿಹಾರ ನೀಡಿಲ್ಲ. ನ್ಯಾಯಾಲಯಕ್ಕೆ ಹೋದ ರೈತರಿಗೆ ಕೋರ್ಟ್ ಆದೇಶದಂತೆ ಸುಮಾರು 500 ಕೋಟಿ ರೂಗಳಿಗೆ ಹೆಚ್ಚಿನ ಬಾಕಿ ನೀಡಬೇಕಿದೆ.ಆದರೆ ಇದುವರೆಗೂ ಒಂದು ನೈಯಾಫೈಸೆ ನೀಡಿಲ್ಲ. ಹಲವು ಮೂಲ ಜಮೀನುದಾರರು ಸಾವನ್ನಪ್ಪಿದ್ದಾರೆ.ಸರಕಾರ ಕೂಡಲೇ ಬಾಕಿ ಹಣ ಬಿಡುಗಡೆ ಮಾಡಬೇಕು. ಹಾಗೆಯೇ ಕಳೆದ ಸಾಲಿನಲ್ಲಿ ನ್ಯಾಫೇಡ್ ಮೂಲಕ ಖರೀದಿಸಿದ್ದ ರಾಗಿಯ ಬಾಬ್ತು ಸುಮಾರು 400 ಕೋಟಿ ರೂ ಬಾಕಿ ಬರಬೇಕಾಗಿದೆ. ಸರಕಾರ ಕೂಡಲೇ ಬರದಿಂದ ಸಂಕಷ್ಟದಲ್ಲಿರುವ ರೈತರಿಗೆ ಬಾಕಿ ಹಣ ಬಿಡುಗಡೆ ಮಾಡಬೇಕು ಎಂದು ಎ.ಗೋವಿಂದರಾಜು ಆಗ್ರಹಿಸಿದರು.
ಬರದಿಂದ ರೈತರು ಸಂಕಷ್ಟಕ್ಕೆ ಸಿಲುಕಿದೆ.ಡಾ.ಎಂ.ಎಸ್.ಸ್ವಾಮಿನಾಥನ್ ವರದಿಯನ್ನು ಜಾರಿಗೆ ತರದ ಕಾರಣ, ಉತ್ಪಾಧನಾ ವೆಚ್ಚ ಹೆಚ್ಚಾಗಿ,ನಷ್ಟಕ್ಕೆ ಒಳಗಾಗಿ ಆತ್ಮಹತ್ಯೆಯ ದಾರಿ ತುಳಿಯುತ್ತಿದ್ದಾನೆ.ಇದನ್ನು ತಪ್ಪಿಸುವ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಸಂಸದರು ಒಂದು ಬಾರಿಗೆ ರೈತರ ಸಾಲಮನ್ನಾಕ್ಕೆ ಕೇಂದ್ರ ಸರಕಾರವನ್ನು ಒತ್ತಾಯಿಸಬೇಕು.ಹಾಗೆಯೇ ಬ್ಯಾಂಕುಗಳು, ಕಿರು ಹಣಕಾಸು ಸಂಸ್ಥೆಗಳು ಬಲವಂತದ ವಸೂಲಿ ಮಾಡದಂತೆ ಸುತ್ತೋಲೆ ಹೊರಡಿಸಬೇಕೆಂದು ಆಗ್ರಹಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಸಿ.ಶಂಕರಪ್ಪ ಮಾತನಾಡಿ,ಬರದಿಂದ ಬೆಳೆ ನಷ್ಟದಿಂದ ಜನರು ಸಂಕಷ್ಟದಲ್ಲಿದ್ದು,ಸರಕಾರ ಕೇರಳ ಮಾದರಿಯಲ್ಲಿ ಪಡಿತರ ಅಕ್ಕಿಯ ಜೊತೆಗೆ, ಬೇಳೆ, ಬೆಲ್ಲ ಸೇರಿದಂತೆ ದಿನ ಬಳಕೆಯ ವಸ್ತುಗಳನ್ನು ರಿಯಾಯತಿ ದರದಲ್ಲಿ ನೀಡಬೇಕು.ಹಾಗೆಯೇ ಪಶುಸಂಗೋಪನೆಗೆ ಪೂರಕವಾಗಿ ಬೂಸ್ ಮತ್ತು ಹಿಂಡಿಯನ್ನು ಶೇ50ರ ರಿಯಾಯಿತಿ ದರದಲ್ಲಿ ನೀಡಬೇಕು. ಲೀಟರ್ ಹಾಲಿಗೆ 40 ರೂ ನೀಡಬೇಕೆಂದು ಒತ್ತಾಯಿಸಿದರು.
ನಂದಿಹಳ್ಳಿ-ಮಲ್ಲಸAದ್ರ-ವಸAತನರಸಾಪುರ ಔಟರ್ ರಿಂಗ್ ರಸ್ತೆಗೆ ರೈತರ ವಿರೋಧದ ನಡುವೆಯೂ ಭೂಸ್ವಾಧೀನಕ್ಕೆ ಅಧಿಕಾರಿಗಳು ಮುಂದಾಗುತ್ತಲೇ ಇದ್ದಾರೆ.ಜನರಿಗೆ ಹೆಚ್ಚು ಉಪಯೋಗವಿಲ್ಲದ ಔಟರ್‌ರಿಂಗ್ ರಸ್ತೆ ಯೋಜನೆಯನ್ನು ಕೈಬಿಡಬೇಕು.ಹಾಗೆಯೇ ಜಿಲ್ಲೆಯ 7-8 ತಾಲೂಕುಗಳಿಗೆ ಮರಣ ಶಾಸನವಾಗಿರುವ ಏಕ್ಸ್ಪ್ರೆಸ್ ಕೇನಾಲ್ ಯೋಜನೆಯನ್ನು ಸರಕಾರ ರದ್ದು ಮಾಡಬೇಕು. ಕುಣಿಗಲ್ ನೆಪದಲ್ಲಿ ಬಿಡದಿಯೇ ಎಐ ಡೇಟಾ ಸೆಂಟರ್‌ಗೆ ನೀರು ತೆಗೆದುಕೊಂಡು ಹೋಗಲು ಅವಕಾಶ ನೀಡುವುದಿಲ್ಲ ಎಂದು ಜಿ.ಸಿ.ಶಂಕರಪ್ಪ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ವಿವಿಧ ತಾಲೂಕುಗಳ ಅಧ್ಯಕ್ಷರಾದ ಚಿಕ್ಕಬೋರೇಗೌಡ, ಲೋಕೇಶ್, ರಂಗಹನುಮಯ್ಯ, ಷಬ್ಬೀರ್ ಪಾಷ, ಯುವಘಟಕದ ಮಂಜುನಾಥ್, ಜಟ್ಟಿ, ತಿಮ್ಮೇಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.
    user_E ಮಾಹಿತಿ ನಿಮಗಾಗಿ
    E ಮಾಹಿತಿ ನಿಮಗಾಗಿ
    ತುಮಕೂರು, ತುಮಕೂರು, ಕರ್ನಾಟಕ•
    1 hr ago
  • ಬೇಸಿಗೆ ಬಂದರೆ ನಮ್ಮಲ್ಲಿ ಜಾನುವಾರುಗಳಿಗೆ ಹುಲ್ಲು ಸಿಗುವುದೇಲ ಕಷ್ಟ ಹೊರ ರಾಷ್ಟ್ರದಲ್ಲಿ ಇಂತಹ ಆಹಾರ ನೀಡುತ್ತಿದ್ದಾರೆ.
    1
    ಬೇಸಿಗೆ ಬಂದರೆ ನಮ್ಮಲ್ಲಿ ಜಾನುವಾರುಗಳಿಗೆ ಹುಲ್ಲು ಸಿಗುವುದೇಲ ಕಷ್ಟ ಹೊರ ರಾಷ್ಟ್ರದಲ್ಲಿ ಇಂತಹ ಆಹಾರ ನೀಡುತ್ತಿದ್ದಾರೆ.
    user_Onlinetv24x7
    Onlinetv24x7
    ತುಮಕೂರು, ತುಮಕೂರು, ಕರ್ನಾಟಕ•
    8 hrs ago
  • ಹೆದ್ದಾರಿಯಲ್ಲಿ ಭೀಕರ ಅಪಘಾತ. ಹೊಂಡಾಸಿಟಿ ಕಾರು ಡಿವೈಡರ್ ದಾಟಿ ಆಲ್ಟೋ 800 ಕಾರಿಗೆ ಡಿಕ್ಕಿ. ದೇವನಹಳ್ಳಿ ಹೆದ್ದಾರಿಯಲ್ಲಿ ತಡರಾತ್ರಿ ಭೀಕರ ಅಪಘಾತ. ಹೊಂಡಾಸಿಟಿ ಕಾರು ಡಿವೈಡರ್ ದಾಟಿ ಆಲ್ಟೋ 800 ಕಾರಿಗೆ ಡಿಕ್ಕಿ. ಬರ್ತಿದ್ದ ರಸ್ತೆಯಿಂದ ಡಿವೈಡರ್ ದಾಟಿ ಮತ್ತೊಂದು ರಸ್ತೆಯಲ್ಲಿ ಬರ್ತಿದ್ದ ಕಾರಿಗೆ ಡಿಕ್ಕಿ. ಡಿಕ್ಕಿಯ ರಭಸಕ್ಕೆ ಆಲ್ಟೋ ಕಾರಿನಲ್ಲಿದ್ದ ಒರ್ವ ಸಾವು ಮೂವರಿಗೆ ಗಂಭೀರ ಗಾಯ. ದೇವನಹಳ್ಳಿ ತಾಲೂಕಿನ ಚಪ್ಪರಕಲ್ಲು ಗ್ರಾಮದ ಬಳಿ ಘಟನೆ. ಹೊಸಕೋಟೆ ದಾಬಸ್ ಪೇಟೆ ರಾಷ್ಟ್ರಿಯ ಹೆದ್ದಾರಿ 648 ರಲ್ಲಿ ಘಟನೆ. ಶಿಡ್ಲಘಟ್ಟ ಮೂಲಕ ವೆಂಕಟೇಶಪ್ಪ ( 75 ) ಮೃತ ವ್ಯಕ್ತಿ. ಮುನಿಅಕ್ಕಯಮ್ಮ, ಮಾಲಾ ಮತ್ತು ಪವನ್ ಕುಮಾರ್ ಗೆ ಗಂಭೀರ ಗಾಯ. ಗಾಯಾಳುಗಳಿಗೆ ದೊಡ್ಡಬಳ್ಳಾಪುರದ ಖಾಸಗಿ ಆಸ್ವತ್ರೆಯಲ್ಲಿ ಚಿಕಿತ್ಸೆ. ವಿಶ್ವನಾಥಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಚಪ್ಪರಕಲ್ಲು ಗ್ರಾಮ.
    2
    ಹೆದ್ದಾರಿಯಲ್ಲಿ ಭೀಕರ ಅಪಘಾತ. 
ಹೊಂಡಾಸಿಟಿ ಕಾರು ಡಿವೈಡರ್ ದಾಟಿ ಆಲ್ಟೋ 800 ಕಾರಿಗೆ ಡಿಕ್ಕಿ. 
ದೇವನಹಳ್ಳಿ 
ಹೆದ್ದಾರಿಯಲ್ಲಿ ತಡರಾತ್ರಿ ಭೀಕರ ಅಪಘಾತ. 
ಹೊಂಡಾಸಿಟಿ ಕಾರು ಡಿವೈಡರ್ ದಾಟಿ ಆಲ್ಟೋ 800 ಕಾರಿಗೆ ಡಿಕ್ಕಿ. 
ಬರ್ತಿದ್ದ ರಸ್ತೆಯಿಂದ ಡಿವೈಡರ್ ದಾಟಿ  ಮತ್ತೊಂದು ರಸ್ತೆಯಲ್ಲಿ ಬರ್ತಿದ್ದ ಕಾರಿಗೆ ಡಿಕ್ಕಿ. 
ಡಿಕ್ಕಿಯ ರಭಸಕ್ಕೆ ಆಲ್ಟೋ ಕಾರಿನಲ್ಲಿದ್ದ ಒರ್ವ ಸಾವು ಮೂವರಿಗೆ ಗಂಭೀರ ಗಾಯ. 
ದೇವನಹಳ್ಳಿ ತಾಲೂಕಿನ ಚಪ್ಪರಕಲ್ಲು ಗ್ರಾಮದ ಬಳಿ ಘಟನೆ. 
ಹೊಸಕೋಟೆ ದಾಬಸ್ ಪೇಟೆ ರಾಷ್ಟ್ರಿಯ ಹೆದ್ದಾರಿ 648 ರಲ್ಲಿ ಘಟನೆ. 
ಶಿಡ್ಲಘಟ್ಟ ಮೂಲಕ ವೆಂಕಟೇಶಪ್ಪ ( 75 ) ಮೃತ ವ್ಯಕ್ತಿ. 
ಮುನಿಅಕ್ಕಯಮ್ಮ, ಮಾಲಾ ಮತ್ತು ಪವನ್ ಕುಮಾರ್ ಗೆ ಗಂಭೀರ ಗಾಯ. 
ಗಾಯಾಳುಗಳಿಗೆ ದೊಡ್ಡಬಳ್ಳಾಪುರದ ಖಾಸಗಿ ಆಸ್ವತ್ರೆಯಲ್ಲಿ ಚಿಕಿತ್ಸೆ. 
ವಿಶ್ವನಾಥಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ. 
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಚಪ್ಪರಕಲ್ಲು ಗ್ರಾಮ.
    user_Bengaluru Rural News
    Bengaluru Rural News
    ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ, ಕರ್ನಾಟಕ•
    3 hrs ago
  • ಪಾವಗಡ: ತಾಲೂಕಿನಾದ್ಯಂತ ಸಂಭ್ರಮದ ಗಣೇಶೋತ್ಸವ – ಶ್ರದ್ಧಾ-ಭಕ್ತಿಯಿಂದ ಪೂಜೆ, ಪ್ರಸಾದ ವಿನಿಯೋಗ ಪಾವಗಡ: ತಾಲೂಕಿನಾದ್ಯಂತ ಸಂಭ್ರಮದ ಗಣೇಶೋತ್ಸವ – ಶ್ರದ್ಧಾ-ಭಕ್ತಿಯಿಂದ ಪೂಜೆ, ಪ್ರಸಾದ ವಿನಿಯೋಗ ​ಪಾವಗಡ: ತಾಲೂಕಿನಾದ್ಯಂತ ಗಣೇಶ ಚತುರ್ಥಿ ಹಬ್ಬದ ಅಂಗವಾಗಿ ವಿವಿಧ ಗ್ರಾಮಗಳು ಹಾಗೂ ಪಟ್ಟಣದ ಪ್ರಮುಖ ವೃತ್ತಗಳಲ್ಲಿ ನೂರಾರು ಗಣಪತಿ ಮೂರ್ತಿಗಳನ್ನು ಅತ್ಯಂತ ವಿಜೃಂಭಣೆಯಿಂದ ಪ್ರತಿಷ್ಠಾಪಿಸಲಾಯಿತು. ಭಕ್ತಾದಿಗಳು ಧಾರ್ಮಿಕ ವಿಧಿ-ವಿಧಾನಗಳ ಮೂಲಕ ಗಣೇಶನಿಗೆ ವಿಶೇಷ ಪೂಜೆ ಹಾಗೂ ಮಹಾಮಂಗಳಾರತಿ ನೆರವೇರಿಸಿದರು. ​ವಿಶೇಷ ಪೂಜೆ ಹಾಗೂ ದರ್ಶನ: ಪಟ್ಟಣ ಹಾಗೂ ಗ್ರಾಮೀಣ ಭಾಗಗಳಲ್ಲಿ ಸುಂದರವಾಗಿ ಅಲಂಕೃತಗೊಂಡ ಪಂಡಾಲ್‌ಗಳಲ್ಲಿ ಗಣೇಶ ಮೂರ್ತಿಗಳನ್ನು ಕೂಡಿಸಿ, ಬೆಳಗಿನಿಂದಲೇ ಸಾರ್ವಜನಿಕರು ಕುಟುಂಬ ಸಮೇತರಾಗಿ ಆಗಮಿಸಿ ದೇವರ ದರ್ಶನ ಪಡೆದರು. ಭಕ್ತರ ಸಮ್ಮುಖದಲ್ಲಿ ಗಣಪತಿಗೆ ಸಹಸ್ರನಾಮಾರ್ಚನೆ, ಹೋಮ-ಹವನ ಹಾಗೂ ವಿಶೇಷ ಪುಷ್ಪಾಲಂಕಾರ ಸೇವೆಗಳು ಜರುಗಿದವು. ​ಬೃಹತ್ ಪ್ರಸಾದ ವಿನಿಯೋಗ: ಪೂಜಾ ಕಾರ್ಯಕ್ರಮದ ನಂತರ ಪ್ರತಿಷ್ಠಾಪನಾ ಸಮಿತಿಗಳು ಹಾಗೂ ಸಾರ್ವಜನಿಕರ ಸಹಯೋಗದಲ್ಲಿ ಆಗಮಿಸಿದ್ದ ಸಾವಿರಾರು ಭಕ್ತಾದಿಗಳಿಗೆ ಅನ್ನಸಂತರ್ಪಣೆ ಹಾಗೂ ಮಹಾಪ್ರಸಾದ ವಿನಿಯೋಗ ಮಾಡಲಾಯಿತು. ಹಬ್ಬದ ವಾತಾವರಣದಿಂದ ತಾಲೂಕಿನಾದ್ಯಂತ ಭಕ್ತಿರಸ ಪ್ರವಾಹ ಹರಿದಂತಾಗಿತ್ತು. ಪಾವಗಡ ವರದಿ
    4
    ಪಾವಗಡ: ತಾಲೂಕಿನಾದ್ಯಂತ ಸಂಭ್ರಮದ ಗಣೇಶೋತ್ಸವ – ಶ್ರದ್ಧಾ-ಭಕ್ತಿಯಿಂದ ಪೂಜೆ, ಪ್ರಸಾದ ವಿನಿಯೋಗ

ಪಾವಗಡ: ತಾಲೂಕಿನಾದ್ಯಂತ ಸಂಭ್ರಮದ ಗಣೇಶೋತ್ಸವ – ಶ್ರದ್ಧಾ-ಭಕ್ತಿಯಿಂದ ಪೂಜೆ, ಪ್ರಸಾದ ವಿನಿಯೋಗ
​ಪಾವಗಡ: ತಾಲೂಕಿನಾದ್ಯಂತ ಗಣೇಶ ಚತುರ್ಥಿ ಹಬ್ಬದ ಅಂಗವಾಗಿ ವಿವಿಧ ಗ್ರಾಮಗಳು ಹಾಗೂ ಪಟ್ಟಣದ ಪ್ರಮುಖ ವೃತ್ತಗಳಲ್ಲಿ ನೂರಾರು ಗಣಪತಿ ಮೂರ್ತಿಗಳನ್ನು ಅತ್ಯಂತ ವಿಜೃಂಭಣೆಯಿಂದ ಪ್ರತಿಷ್ಠಾಪಿಸಲಾಯಿತು. ಭಕ್ತಾದಿಗಳು ಧಾರ್ಮಿಕ ವಿಧಿ-ವಿಧಾನಗಳ ಮೂಲಕ ಗಣೇಶನಿಗೆ ವಿಶೇಷ ಪೂಜೆ ಹಾಗೂ ಮಹಾಮಂಗಳಾರತಿ ನೆರವೇರಿಸಿದರು.
​ವಿಶೇಷ ಪೂಜೆ ಹಾಗೂ ದರ್ಶನ:
ಪಟ್ಟಣ ಹಾಗೂ ಗ್ರಾಮೀಣ ಭಾಗಗಳಲ್ಲಿ ಸುಂದರವಾಗಿ ಅಲಂಕೃತಗೊಂಡ ಪಂಡಾಲ್‌ಗಳಲ್ಲಿ ಗಣೇಶ ಮೂರ್ತಿಗಳನ್ನು ಕೂಡಿಸಿ, ಬೆಳಗಿನಿಂದಲೇ ಸಾರ್ವಜನಿಕರು ಕುಟುಂಬ ಸಮೇತರಾಗಿ ಆಗಮಿಸಿ ದೇವರ ದರ್ಶನ ಪಡೆದರು. ಭಕ್ತರ ಸಮ್ಮುಖದಲ್ಲಿ ಗಣಪತಿಗೆ ಸಹಸ್ರನಾಮಾರ್ಚನೆ, ಹೋಮ-ಹವನ ಹಾಗೂ ವಿಶೇಷ ಪುಷ್ಪಾಲಂಕಾರ ಸೇವೆಗಳು ಜರುಗಿದವು.
​ಬೃಹತ್ ಪ್ರಸಾದ ವಿನಿಯೋಗ:
ಪೂಜಾ ಕಾರ್ಯಕ್ರಮದ ನಂತರ ಪ್ರತಿಷ್ಠಾಪನಾ ಸಮಿತಿಗಳು ಹಾಗೂ ಸಾರ್ವಜನಿಕರ ಸಹಯೋಗದಲ್ಲಿ ಆಗಮಿಸಿದ್ದ ಸಾವಿರಾರು ಭಕ್ತಾದಿಗಳಿಗೆ ಅನ್ನಸಂತರ್ಪಣೆ ಹಾಗೂ ಮಹಾಪ್ರಸಾದ ವಿನಿಯೋಗ ಮಾಡಲಾಯಿತು. ಹಬ್ಬದ ವಾತಾವರಣದಿಂದ ತಾಲೂಕಿನಾದ್ಯಂತ ಭಕ್ತಿರಸ ಪ್ರವಾಹ ಹರಿದಂತಾಗಿತ್ತು.  ಪಾವಗಡ ವರದಿ
    user_Ctv news
    Ctv news
    Voice of people ಪಾವಗಡ, ತುಮಕೂರು, ಕರ್ನಾಟಕ•
    23 hrs ago
  • ಗೌರಿ-ಗಣೇಶ ಹಬ್ಬ: ಸಮಾಜ ಸೇವಕ ಕೊತ್ತನೂರು ಪಂಚಾಕ್ಷರಿ ರೆಡ್ಡಿ ತೋಟದ ಮನೆಯಲ್ಲಿ ವಿಶೇಷ ಪೂಜೆ ಹಾಗೂ ಶುಭಾಶಯ ಸಲ್ಲಿಕೆ
    1
    ಗೌರಿ-ಗಣೇಶ ಹಬ್ಬ: ಸಮಾಜ ಸೇವಕ ಕೊತ್ತನೂರು ಪಂಚಾಕ್ಷರಿ ರೆಡ್ಡಿ ತೋಟದ ಮನೆಯಲ್ಲಿ ವಿಶೇಷ ಪೂಜೆ ಹಾಗೂ ಶುಭಾಶಯ ಸಲ್ಲಿಕೆ
    user_Lokesh bvINCHARATV
    Lokesh bvINCHARATV
    ಶಿಡ್ಲಘಟ್ಟ, ಚಿಕ್ಕಬಳ್ಳಾಪುರ, ಕರ್ನಾಟಕ•
    23 hrs ago
  • ರಸ್ತೆ ಬದಿಯಲ್ಲೇ ಮದ್ಯಪಾನ; ಪೊಲೀಸರ ವಿರುದ್ಧ ಸಾರ್ವಜನಿಕರ ಆಕ್ರೋಶ ಕಾನೂನಿನ ಭಯವಿಲ್ಲವೇ? ಕ್ರಮಕ್ಕೆ ಸ್ಥಳೀಯರಿಂದ ಆಗ್ರಹ ರಸ್ತೆ ಬದಿಯಲ್ಲೇ ಮದ್ಯಪಾನ; ಪೊಲೀಸರ ವಿರುದ್ಧ ಸಾರ್ವಜನಿಕರ ಆಕ್ರೋಶ ಕಾನೂನಿನ ಭಯವಿಲ್ಲವೇ? ಕ್ರಮಕ್ಕೆ ಸ್ಥಳೀಯರಿಂದ ಆಗ್ರಹ
    1
    ರಸ್ತೆ ಬದಿಯಲ್ಲೇ ಮದ್ಯಪಾನ; ಪೊಲೀಸರ ವಿರುದ್ಧ ಸಾರ್ವಜನಿಕರ ಆಕ್ರೋಶ
ಕಾನೂನಿನ ಭಯವಿಲ್ಲವೇ? ಕ್ರಮಕ್ಕೆ ಸ್ಥಳೀಯರಿಂದ ಆಗ್ರಹ
ರಸ್ತೆ ಬದಿಯಲ್ಲೇ ಮದ್ಯಪಾನ; ಪೊಲೀಸರ ವಿರುದ್ಧ ಸಾರ್ವಜನಿಕರ ಆಕ್ರೋಶ
ಕಾನೂನಿನ ಭಯವಿಲ್ಲವೇ? ಕ್ರಮಕ್ಕೆ ಸ್ಥಳೀಯರಿಂದ ಆಗ್ರಹ
    user_Veega News Kannada
    Veega News Kannada
    Technical service ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    1 hr ago
  • ಕೆಆರ್ ಪುರ : ಐಟಿಐ ಭೂಮಿ ಹರಾಜು ವಿರೋಧಿಸಿ ಸ್ಥಳೀಯರಿಂದ ಕಾಲ್ನಡಿಗೆ ಜಾಥಾ ಐಟಿಐ ಸಂಸ್ಥೆಗೆ ಸೇರಿದ 44 ಎಕರೆ ಭೂಮಿ ಹರಾಜಿಗೆ ಕೇಂದ್ರ ಸರ್ಕಾರದ ಪ್ರಕಟಣೆ . ಹರಾಜು ನಿರ್ಧಾರಕ್ಕೆ ಸ್ಥಳೀಯ ಸಂಘಟನೆಗಳು ಹಾಗೂ ಸಾರ್ವಜನಿಕರಿಂದ ತೀವ್ರ ವಿರೋಧ . 44 ಎಕರೆ ಭೂಮಿಯನ್ನು ಹರಾಜು ಮಾಡದೆ ಸಾರ್ವಜನಿಕ ಬಳಕೆಗೆ ಉಳಿಸುವಂತೆ ಆಗ್ರಹ ಖಾಸಗೀಕರಣದಿಂದ ಪರಿಸರಕ್ಕೆ ಹಾನಿಯಾಗುವ ಆತಂಕ .ಐಟಿಐ ಕೈಗಾರಿಕೆಯನ್ನು ಆಧುನಿಕ ತಂತ್ರಜ್ಞಾನದೊಂದಿಗೆ ಪುನಶ್ಚೇತನಗೊಳಿಸುವಂತೆ ಒತ್ತಾಯ.ಮೊಬೈಲ್, ಲ್ಯಾಪ್‌ಟಾಪ್ ಸೇರಿದಂತೆ ಅಗತ್ಯ ಉತ್ಪನ್ನಗಳನ್ನು ಕೈಗೆಟುಕುವ ದರದಲ್ಲಿ ಉತ್ಪಾದಿಸಲು ಆಗ್ರಹ .ಐಟಿಐ ಪುನಶ್ಚೇತನದಿಂದ ಲಕ್ಷಾಂತರ ಉದ್ಯೋಗ ಸೃಷ್ಟಿಗೆ ಅವಕಾಶ ಎಂದು ಸ್ಥಳೀಯರ ಅಭಿಪ್ರಾಯ .ಸಾರ್ವಜನಿಕ ಆಸ್ತಿಯನ್ನು ಖಾಸಗೀಕರಣದ ಹೆಸರಿನಲ್ಲಿ ಮಾರಾಟ ಮಾಡದಂತೆ ಕೇಂದ್ರ ಸರ್ಕಾರಕ್ಕೆ ಆಗ್ರಹ 44 ಎಕರೆ ಭೂಮಿ ಹರಾಜು ಪ್ರಕ್ರಿಯೆ ಕೂಡಲೇ ಕೈಬಿಡುವಂತೆ ಒತ್ತಾಯ .ಜಾಥಾ ಬಳಿಕ ಐಟಿಐ ಮುಖ್ಯ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಲು ನಿರ್ಧಾರ
    1
    ಕೆಆರ್ ಪುರ : ಐಟಿಐ ಭೂಮಿ ಹರಾಜು ವಿರೋಧಿಸಿ ಸ್ಥಳೀಯರಿಂದ ಕಾಲ್ನಡಿಗೆ ಜಾಥಾ
ಐಟಿಐ ಸಂಸ್ಥೆಗೆ ಸೇರಿದ 44 ಎಕರೆ ಭೂಮಿ ಹರಾಜಿಗೆ ಕೇಂದ್ರ ಸರ್ಕಾರದ ಪ್ರಕಟಣೆ .
ಹರಾಜು ನಿರ್ಧಾರಕ್ಕೆ ಸ್ಥಳೀಯ ಸಂಘಟನೆಗಳು ಹಾಗೂ ಸಾರ್ವಜನಿಕರಿಂದ ತೀವ್ರ ವಿರೋಧ .
44 ಎಕರೆ ಭೂಮಿಯನ್ನು ಹರಾಜು ಮಾಡದೆ ಸಾರ್ವಜನಿಕ ಬಳಕೆಗೆ ಉಳಿಸುವಂತೆ ಆಗ್ರಹ 
ಖಾಸಗೀಕರಣದಿಂದ ಪರಿಸರಕ್ಕೆ ಹಾನಿಯಾಗುವ ಆತಂಕ .ಐಟಿಐ ಕೈಗಾರಿಕೆಯನ್ನು ಆಧುನಿಕ ತಂತ್ರಜ್ಞಾನದೊಂದಿಗೆ ಪುನಶ್ಚೇತನಗೊಳಿಸುವಂತೆ ಒತ್ತಾಯ.ಮೊಬೈಲ್, ಲ್ಯಾಪ್‌ಟಾಪ್ ಸೇರಿದಂತೆ ಅಗತ್ಯ ಉತ್ಪನ್ನಗಳನ್ನು ಕೈಗೆಟುಕುವ ದರದಲ್ಲಿ ಉತ್ಪಾದಿಸಲು ಆಗ್ರಹ .ಐಟಿಐ ಪುನಶ್ಚೇತನದಿಂದ ಲಕ್ಷಾಂತರ ಉದ್ಯೋಗ ಸೃಷ್ಟಿಗೆ ಅವಕಾಶ ಎಂದು ಸ್ಥಳೀಯರ ಅಭಿಪ್ರಾಯ .ಸಾರ್ವಜನಿಕ ಆಸ್ತಿಯನ್ನು ಖಾಸಗೀಕರಣದ ಹೆಸರಿನಲ್ಲಿ ಮಾರಾಟ ಮಾಡದಂತೆ ಕೇಂದ್ರ ಸರ್ಕಾರಕ್ಕೆ ಆಗ್ರಹ
44 ಎಕರೆ ಭೂಮಿ ಹರಾಜು ಪ್ರಕ್ರಿಯೆ ಕೂಡಲೇ ಕೈಬಿಡುವಂತೆ ಒತ್ತಾಯ .ಜಾಥಾ ಬಳಿಕ ಐಟಿಐ ಮುಖ್ಯ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಲು ನಿರ್ಧಾರ
    user_Darshan
    Darshan
    Local News Reporter ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    2 hrs ago
  • ನೂರ ಒಂದು ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ವಿಸರ್ಜನೆ ಎತ್ತಿನ ಗಾಡಿಯಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ಮೆರವಣಿಗೆ ಮಾಡಿ ವಿಸರ್ಜಿಸಿದ ಗ್ರಾಮಸ್ಥರು ದೇವನಹಳ್ಳಿ ನೂರ ಒಂದು ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ವಿಸರ್ಜನೆ ಎತ್ತಿನ ಗಾಡಿಯಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ಮೆರವಣಿಗೆ ಮಾಡಿ ವಿಸರ್ಜಿಸಿದ ಗ್ರಾಮಸ್ಥರು ದೇವನಹಳ್ಳಿಯ ಪ್ರಸನ್ನಹಳ್ಳಿಯ ಜಟಾಯು ಯುವಸೇನೆವತಿಯಿಂದ ಗಣೇಶೋತ್ಸವ ಆಯೋಜನೆ ಯಾವುದೆ ಡಿಜೆ ಬಳಕೆ ಮಾಡದೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಂಗಳ ವಾದ್ಯಗಳೊಂದಿಗೆ ಸಾಂಪ್ರದಾಯಿಕವಾಗಿ ಮೆರವಣಿಗೆ ಎತ್ತಿನಗಾಡಿ ಮತ್ತು ಮಹಿಳೆಯರಿಂದ ತಟ್ಟೆಗಳಲ್ಲಿ ಗಣಪತಿ ಮೂರ್ತಿಗಳ ಹೊತ್ತು ಮೆರವಣಿಗೆ ಪ್ರಸನ್ನಹಳ್ಳಿ ಇಂದ ಚಿಕ್ಕಕೆರೆವರೆಗೆ ಮೆರವಣಿಗೆ ಮಾಡಿ ಪರಿಸರ ಸ್ನೇಹಿ ಮೂರ್ತಿಗಳ ವಿಸರ್ಜನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಪ್ರಸನ್ನ ಹಳ್ಳಿ
    3
    ನೂರ ಒಂದು ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ವಿಸರ್ಜನೆ 
ಎತ್ತಿನ ಗಾಡಿಯಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ಮೆರವಣಿಗೆ ಮಾಡಿ ವಿಸರ್ಜಿಸಿದ  ಗ್ರಾಮಸ್ಥರು
ದೇವನಹಳ್ಳಿ
ನೂರ ಒಂದು ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ವಿಸರ್ಜನೆ 
ಎತ್ತಿನ ಗಾಡಿಯಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ಮೆರವಣಿಗೆ ಮಾಡಿ ವಿಸರ್ಜಿಸಿದ  ಗ್ರಾಮಸ್ಥರು
ದೇವನಹಳ್ಳಿಯ ಪ್ರಸನ್ನಹಳ್ಳಿಯ ಜಟಾಯು ಯುವಸೇನೆವತಿಯಿಂದ ಗಣೇಶೋತ್ಸವ ಆಯೋಜನೆ
ಯಾವುದೆ ಡಿಜೆ ಬಳಕೆ ಮಾಡದೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಂಗಳ ವಾದ್ಯಗಳೊಂದಿಗೆ ಸಾಂಪ್ರದಾಯಿಕವಾಗಿ ಮೆರವಣಿಗೆ 
ಎತ್ತಿನಗಾಡಿ ಮತ್ತು ಮಹಿಳೆಯರಿಂದ ತಟ್ಟೆಗಳಲ್ಲಿ ಗಣಪತಿ ಮೂರ್ತಿಗಳ ಹೊತ್ತು ಮೆರವಣಿಗೆ
ಪ್ರಸನ್ನಹಳ್ಳಿ ಇಂದ ಚಿಕ್ಕಕೆರೆವರೆಗೆ ಮೆರವಣಿಗೆ ಮಾಡಿ ಪರಿಸರ ಸ್ನೇಹಿ ಮೂರ್ತಿಗಳ ವಿಸರ್ಜನೆ 
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಪ್ರಸನ್ನ ಹಳ್ಳಿ
    user_Bengaluru Rural News
    Bengaluru Rural News
    ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ, ಕರ್ನಾಟಕ•
    22 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.