ಸಮಾಜದ ಅಂಕುಡೊಂಕು ತಿದ್ದುವಲ್ಲಿ ವಚನಕಾರರ ಪಾತ್ರ ಬಹುಮುಖ್ಯವಾದುದು ಶಾಸಕ ಟಿ.ರಘುಮೂರ್ತಿ.. ಚಳ್ಳಕೆರೆ ಕನ್ನಡ ಸಾಹಿತ್ಯಕ್ಕೆ ವಚನಕಾರರ ಕೊಡುಗೆ ಅಪಾರವಾದದ್ದು ಕನ್ನಡ ನಾಡಿನಲ್ಲಿ ಅನೇಕ ಶರಣರು ಸಂತರು ವಚನಕಾರರು ತತ್ವಪದಕಾರರು ಆಗಿ ಹೋಗಿದ್ದಾರೆ. ತಮ್ಮ ಪ್ರಗತಿಪರ ಚಿಂತನೆಯ ಮೂಲಕ ಸಮಾಜದ ಅಂಕುಡೊಂಕು ತಿದ್ದುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು. ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಹಾಗೂ ನೇಕಾರ ಸಮುದಾಯದ ವತಿಯಿಂದ ಹಮ್ಮಿಕೊಂಡಿದ್ದ ಜೇಡರ ದಾಸಿಮಯ್ಯ ಭಾವಚಿತ್ರಕ್ಕೆ ಪುಷ್ಪ ನಮ ಸಲ್ಲಿಸಿ ನಂತರ ಮಾತನಾಡಿ. ಜೇಡರ ದಾಸಿಮಯ್ಯನವರು ಯಾರ ಮರ್ಜಿ ಮುಲಾಜಿಗೂ ಒಳಗಾಗದೇ ನಿರ್ಭಯವಾಗಿ ವಚನಗಳನ್ನು ರಚಿಸಿ ಇದ್ದದ್ದು ಇದ್ದಂಗೇ ಹೇಳುವಲ್ಲಿ ಹಿಂದೆ ಮುಂದೆ ನೋಡಲಿಲ್ಲ. ನುಡಿದಂತೆ ನಡೆದು ಜನ ಮಾನಸದಲ್ಲಿ ಶಾಶ್ವತವಾಗಿ ಉಳಿದುಕೊಂಡಿದ್ದಾರೆ. ಜನರಲ್ಲಿನ ಮೂಢನಂಬಿಕೆ ಕಂದಾಚಾರ ಅನಿಷ್ಟ ಪದ್ಧತಿಗಳನ್ನು ಹೋಗಲಾಡಿಸಲು ಅವಿರತ ಶ್ರಮಿಸಿದ್ದಾರೆ ತಮ್ಮ ಚಿಂತನೆಗಳ ಮೂಲಕ ಜನರನ್ನು ಸರಿದಾರಿಗೆ ತರಲು ಮಾರ್ಗದರ್ಶಕರಾಗಿ ಗುರುವಾಗಿ ಕಾರ್ಯ ನಿರ್ವಹಿಸಿದ್ದಾರೆ. ಶಕ್ತಿ ಇಲ್ಲದವರಿಗೆ ಶಕ್ತಿಯಾಗಿ ಧನಿ ಇಲ್ಲದವರಿಗೆ ಧನಿಯಾಗಿ ಅವರ ಜೊತೆ ಗಟ್ಟಿಯಾಗಿ ನಿಂತು ಆತ್ಮವಿಶ್ವಾಸವೂ ತುಂಬಿದ್ದಾರೆ. ಕಾಯಕದ ಮಹತ್ವ ಸಾರುತ್ತಾ ಕಾಯಕದಲ್ಲಿ ಕೈಲಾಸ ಕಾಣುವಂತೆ ಉಪದೇಶಿಸಿದ್ದಾರೆ. ನಡೆನುಡಿ ಆಚಾರ ವಿಚಾರ ನೈತಿಕ ಮೌಲ್ಯಗಳನ್ನು ಪ್ರತಿಪಾದಿಸಿ ಎಲ್ಲರಿಗೂ ಆದರ್ಶ ಪ್ರಾಯರಾಗಿದ್ದಾರೆ ಎಂದರು. ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಹೆಚ್.ಶಶಿಧರ್ ಮಾತನಾಡಿ ಬಸವಣ್ಣ, ದೇವರದಾಸಿಮಯ್ಯ ಸರ್ವಜ್ಞ ಸೇರಿದಂತೆ ಅನೇಕ ವಚನಕಾರರು ತಮ್ಮ ಕಾಲದಲ್ಲಿಯೇ ಮಹಿಳೆ ಮತ್ತು ಪುರುಷರಿಗೆ ಸಮಾನ ಹಕ್ಕು ನೀಡಿದರು. ವಚನಗಳ ಮೂಲಕ ಸಾಮಾಜಿಕ ಕ್ರಾಂತಿ ಮಾಡಿದರು. ದೇವರ ದಾಸಿಮಯ್ಯ ಅವರ ವಚನಗಳು ಮನುಷ್ಯನ ದಿಕ್ಕನ್ನೇ ಬದಲಿಸುತ್ತವೆ. ಜೀವನದ ಅನುಭವ ಅವರ ವಚನಗಳಲ್ಲಿವೆ. ಜಯಂತಿ ಆಚರಿಸುವ ಮೂಲಕ ಅವರ ಬದುಕಿನ ಅನೇಕ ಮಜಲುಗಳನ್ನು ನಾವೆಲ್ಲರು ಅಳವಡಿಸಿಕೊಳ್ಳಬೇಕು ಎಂದರು. ಈ ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಮಂಜುಳ ಪ್ರಸನ್ನಕುಮಾರ್. ನಗರಸಭೆ ಸದಸ್ಯ ವಿ.ಪ್ರಮೋದ್. ಸಾಹಿತಿ ತೊರೆಕೊಲಂಮ್ಮನಹಳ್ಳಿ ಪೀತಂಬರ್ ಚಂದ್ರಶೇಖರ್ ಮಾತನಾಡಿದರು. ಈ ಕಾರ್ಯಕ್ರದಲ್ಲಿ ನಗರಸಭ ಉಪಾಧ್ಯಕ್ಷೆ ಸುಮಾ ಭರಮಯ್ಯ ,ನಗರಸಭೆ ಸದಸ್ಯ ರಮೇಶಗೌಡ, ಕೆ..ವೀರಭದ್ರಪ್ಪ, ,ಜಿಲ್ಲಾ ಕೆಡಿಪಿ ಸದಸ್ಯ ರಂಗಸ್ವಾಮಿ, ವಕೀಲರು ಹಾಗೂ ಪರಶುರಾಮಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜಿಟಿ. ಶಶಿಧರ್, ಶಿರಸ್ತೆದಾರ್ ಸದಾಶಿವಪ್ಪ, ಪೌರಾಯುಕ್ತ ಜಗರೆಡ್ಡಿ, ಸತ್ಯನಾರಾಯಣ ಇರಿಗೇಷನ್ ಮಾಲೀಕರಾದ ಸತ್ಯನಾರಾಯಣ, ನಿವೃತ್ತ ಪ್ರಾಂಶುಪಾಲ ಶಿವಲಿಂಗಪ್ಪ, ಸಮಾಜದ ಮುಖಂಡರಾದ ರವಿಕುಮಾರ್, ವಿರೇಶ್, ಯರಿಸ್ವಾಮಿ, ಬಾಸ್ಕರ್ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು..

- YZYaseen ZartargharBagalkot, Bagalkote😡on 5 April
- ಬೆಳಗೆರೆ ನ್ಯೂಸ್Chitradurga, Karnataka🙏on 2 April
- Follow us learnenglishwith___nbc for more updates1
- ಕೊನೆವರಿಗೂ ನೋಡಿ 😱 caa_mediaa1
- ಅಕ್ಕ ತಂಗಿ ಬೇಟಿ ಉತ್ಸವ 2025 🙇🌸🫶🌍dodpete ರಾಜ ಬಿಡಿ ಚಿತ್ರದುರ್ಗ instagram #instalike #typ #video #viralreels #akka #tangi🫶🌍❤️ #beti #usthva #chitradurga #trendingaudio #viralpost #konya #karnataka #chitradurga #davangere #bangluru #tumkur #hubli #ballary #shreeekanatheshwaritemple #shreebaragerikotenadu🔥 shree_barageramma_devi1
- Have some patience 💯1
- ನಮ್ಮೂರ ಜಾತ್ರೆ 🚩🥰1
- Mummy Day cafe chitradurga 📍1
- ಹುಲ್ಲೂರು ಕೆಂಡೋತ್ಸವದಲ್ಲಿ ಕಾಳಮ್ಮನ ಒಡಪು#ಚಿತ್ರದುರ್ಗ #chitradurga # festival1
- Water Crisis In Chitradurga: ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಬರ!1