ಮುಂಗಾರು ಅಧಿವೇಶನದಲ್ಲಿ ಧ್ವನಿ ಇಲ್ಲದ ಹಡಪದ ಸಮಾಜದ ಪರವಾಗಿ ಸದನದಲ್ಲಿ ಧ್ವನಿಯಾಗದ ಸಚಿವರು ಮತ್ತು ಶಾಸಕರಿಗೆ ಧಿಕ್ಕಾರ ಕಲಬುರಗಿ: ಅತ್ಯಂತ ಹಿಂದುಳಿದ ಹಾಗೂ ಧ್ವನಿ ಇಲ್ಲದ ಸಮಾಜಗಳಲ್ಲಿ ಒಂದಾದ ಹಡಪದ ಅಪ್ಪಣ್ಣ ಸಮಾಜದ ಹಿತರಕ್ಷಣೆ, ನ್ಯಾಯಸಮ್ಮತ ಬೇಡಿಕೆಗಳು ಹಾಗೂ ಸಮಾಜಕ್ಕೆ ಆಗುತ್ತಿರುವ ಅನ್ಯಾಯಗಳ ಕುರಿತು ಕರ್ನಾಟಕ ವಿಧಾನಮಂಡಲದ ಮುಂಗಾರು ಅಧಿವೇಶನದಲ್ಲಿ ಸಮರ್ಪಕವಾಗಿ ಧ್ವನಿ ಎತ್ತದ ಜನಪ್ರತಿನಿಧಿಗಳ ವಿರುದ್ಧ ಕಲಬುರಗಿ ಜಿಲ್ಲಾ ಹಡಪದ ಅಪ್ಪಣ್ಣ ಸಮಾಜದ ವತಿಯಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಕುರಿತು ಕಲಬುರಗಿ ಜಿಲ್ಲೆಯ ಹಡಪದ ಅಪ್ಪಣ್ಣ ಸಮಾಜದ ಜಿಲ್ಲಾ ಗೌರವಾಧ್ಯಕ್ಷರು ಹಾಗೂ ರಾಜ್ಯ ಹಡಪದ ಅಪ್ಪಣ್ಣ ಸಮಾಜದ ಜಿಲ್ಲಾ ಪ್ರತಿನಿಧಿಯಾದ ಬಸವರಾಜ ಹಡಪದ ಸುಗೂರ ಎನ್ ಅವರು ಮಾತನಾಡಿ, ಸಮಾಜದ ಪ್ರಮುಖ ಬೇಡಿಕೆಗಳ ಕುರಿತು ಅನೇಕ ಬಾರಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರು, ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರಿಗೆ ಮನವಿ ಪತ್ರ ಸಲ್ಲಿಸಿದ್ದರೂ ಸದನದಲ್ಲಿ ಸಮಾಜದ ಪರವಾಗಿ ಗಟ್ಟಿಯಾದ ಧ್ವನಿ ಎತ್ತದಿರುವುದು ಅತ್ಯಂತ ನೋವಿನ ಹಾಗೂ ಅಕ್ಷಮ್ಯ ಸಂಗತಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಸಾಮಾಜಿಕ ನ್ಯಾಯ ಮತ್ತು ಪ್ರಾತಿನಿಧ್ಯದ ಕೊರತೆ ಹಡಪದ ಸಮಾಜವು ಅತ್ಯಂತ ಹಿಂದುಳಿದ, ಅಲ್ಪಸಂಖ್ಯಾತ ಹಾಗೂ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಸಮುದಾಯವಾಗಿದೆ. ಇಂತಹ ಸಮಾಜಕ್ಕೆ ರಾಜಕೀಯ, ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಸಮರ್ಪಕ ಪ್ರಾತಿನಿಧ್ಯ ಸಿಗುತ್ತಿಲ್ಲ. ಸಮಾಜದ ಯುವಕರ ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ವಿಶೇಷ ಸೌಲಭ್ಯಗಳನ್ನು ಕಲ್ಪಿಸಬೇಕೆಂಬುದು ಬಹುಕಾಲದ ಬೇಡಿಕೆಯಾಗಿದೆ ಎಂದು ಅವರು ಹೇಳಿದರು. ಹಡಪದ ಅಪ್ಪಣ್ಣ ಅಭಿವೃದ್ಧಿ ನಿಗಮಕ್ಕೆ ೧೦೦ ಕೋಟಿ ರೂ. ಮೀಸಲಿಡಬೇಕು ಹಡಪದ ಅಪ್ಪಣ್ಣ ಅಭಿವೃದ್ಧಿ ನಿಗಮವನ್ನು ಹೆಸರಿಗೆ ಮಾತ್ರ ಸೀಮಿತಗೊಳಿಸದೆ, ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಕ್ಕೆ ತರಬೇಕು. ನಿಗಮದ ಮೂಲಕ ಸಮಾಜದ ಜನರಿಗೆ ನೈಜ ಪ್ರಯೋಜನ ದೊರೆಯುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಪ್ರತ್ಯೇಕ ಹಡಪದ ಅಪ್ಪಣ್ಣ ಅಭಿವೃದ್ಧಿ ನಿಗಮಕ್ಕೆ ಕನಿಷ್ಠ ೧೦೦ ಕೋಟಿ ರೂಪಾಯಿ ಅನುದಾನ ಮೀಸಲಿಡಬೇಕು. ನಿಗಮವನ್ನು ಸ್ಥಾಪಿಸಿ, ನಂತರ ಸಮರ್ಪಕ ಅನುದಾನ ನೀಡದೇ ಇರುವುದು ಇಡೀ ಸಮುದಾಯಕ್ಕೆ ಮಾಡುತ್ತಿರುವ ಅನ್ಯಾಯವಾಗಿದೆ ಎಂದು ಅವರು ಆರೋಪಿಸಿದರು. ಬಸವಕಲ್ಯಾಣದ ಶರಣ ಹಡಪದ ಅಪ್ಪಣ್ಣರ ಅರಿವಿನ ಮನೆಗವಿಗೆ ನ್ಯಾಯ ಬೇಕು ಬಸವಕಲ್ಯಾಣದಲ್ಲಿ ಬಸವಣ್ಣನವರ ಅರಿವಿನ ಮನೆಯ ಪಕ್ಕದಲ್ಲಿರುವ ಶರಣ ಹಡಪದ ಅಪ್ಪಣ್ಣರ ಅರಿವಿನ ಮನೆಗವಿಯ ಪಕ್ಕದಲ್ಲಿ ರಾತ್ರೋರಾತ್ರಿ ಅನ್ಯ ಮೂರ್ತಿ ಸ್ಥಾಪಿಸಿರುವ ಕುರಿತು ಹಡಪದ ಸಮಾಜದಿಂದ ಅನೇಕ ಹೋರಾಟಗಳು ಹಾಗೂ ಪ್ರತಿಭಟನೆಗಳನ್ನು ನಡೆಸಲಾಗಿದೆ. ಆದರೂ ಇಂದಿನವರೆಗೂ ಸಮಾಜಕ್ಕೆ ನ್ಯಾಯ ದೊರೆಯದಿರುವುದು ನೋವಿನ ಸಂಗತಿಯಾಗಿದೆ ಎಂದು ಅವರು ತಿಳಿಸಿದರು. ಯಾವುದೇ ಸಮಾಜದ ಇತಿಹಾಸವನ್ನು ಮುಚ್ಚಿಹಾಕುವ ಅಥವಾ ಅಳಿಸುವ ಪ್ರಯತ್ನವನ್ನು ಮಾಡಬಾರದು. ಶರಣ ಹಡಪದ ಅಪ್ಪಣ್ಣರ ಅರಿವಿನ ಮನೆಗವಿಯನ್ನು ಬಿ.ಕೆ.ಡಿ.ಬಿ. ಪ್ರಾಧಿಕಾರಕ್ಕೆ ಸೇರಿಸಿ ಸಮಗ್ರವಾಗಿ ಅಭಿವೃದ್ಧಿಪಡಿಸಬೇಕು ಎಂದು ಒತ್ತಾಯಿಸಿದರು. ಈ ಮಹತ್ವದ ವಿಷಯವನ್ನು ಸದನದಲ್ಲಿ ಪ್ರಸ್ತಾಪಿಸುವಂತೆ ಅನೇಕ ಸಚಿವರು ಮತ್ತು ಶಾಸಕರಿಗೆ ಮನವಿ ಸಲ್ಲಿಸಿದ್ದರೂ, ಯಾರೂ ಸಮಾಜದ ಧ್ವನಿಯಾಗಿ ಮಾತನಾಡದಿರುವುದು ಹಡಪದ ಸಮಾಜಕ್ಕೆ ಆಗಿರುವ ಅನ್ಯಾಯವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಹಡಪದ ಅಪ್ಪಣ್ಣರ ಜನ್ಮಸ್ಥಳಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮಸಬಿನಾಳ ಗ್ರಾಮದಲ್ಲಿರುವ ನಿಜಸುಖಿ ಹಡಪದ ಅಪ್ಪಣ್ಣರ ಜನ್ಮಸ್ಥಳ ಹಾಗೂ ದೇಗಿನಾಳದಲ್ಲಿರುವ ತಾಯಿ ಹಡಪದ ಲಿಂಗಮ್ಮನವರ ಜನ್ಮಸ್ಥಳವನ್ನು ಬಸವನ ಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಸೇರಿಸಿ ಸಮಗ್ರ ಅಭಿವೃದ್ಧಿ ಕೈಗೊಳ್ಳಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದರು. ಕ್ಷೌರಿಕ ಕಾಯಕ ಬಂಧುಗಳಿಗೆ ಮನೆ, ಆರೋಗ್ಯ ಸೌಲಭ್ಯ ಮತ್ತು ಸಾಲ ಸಬ್ಸಿಡಿ ರಾಜ್ಯಾದ್ಯಂತ ಹಡಪದ ಅಪ್ಪಣ್ಣ ಸಮಾಜದ ಕ್ಷೌರಿಕ ಕಾಯಕ ಮಾಡುವ ಪ್ರತಿಯೊಂದು ಕುಟುಂಬಕ್ಕೆ ಗ್ರಾಮ ಪಂಚಾಯಿತಿಗಳ ಮೂಲಕ ಸೂರು ಅಥವಾ ನಿವೇಶನ ಭಾಗ್ಯ ಕಲ್ಪಿಸಬೇಕು. ಅದೇ ರೀತಿ, ಪ್ರತಿಯೊಂದು ಹಡಪದ ಅಪ್ಪಣ್ಣ ಕ್ಷೌರಿಕ ಕುಟುಂಬಕ್ಕೆ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಅನುಕೂಲವಾಗುವಂತೆ ಆರೋಗ್ಯ ಸ್ಮಾರ್ಟ್ ಕಾರ್ಡ್‌ಗಳನ್ನು ನೀಡಬೇಕು. ಕುಟುಂಬ ನಿರ್ವಹಣೆ ಹಾಗೂ ಸ್ವಾವಲಂಬಿ ಜೀವನಕ್ಕಾಗಿ ಹಡಪದ ಅಪ್ಪಣ್ಣ ಕ್ಷೌರಿಕ ಕಾಯಕ ಬಂಧುಗಳಿಗೆ ಬ್ಯಾಂಕ್‌ಗಳ ಮೂಲಕ ೧ ಲಕ್ಷ ರೂಪಾಯಿವರೆಗೆ ಸಾಲ ಮತ್ತು ಸಬ್ಸಿಡಿ ಸೌಲಭ್ಯ ಕಲ್ಪಿಸಬೇಕು ಎಂದು ಅವರು ಆಗ್ರಹಿಸಿದರು. ಮೀಸಲಾತಿ ಮತ್ತು ಜಾತಿ ನಿಂದನೆಗೆ ಕಾನೂನು ರಕ್ಷಣೆ ಪ್ರಸ್ತುತ ಹಡಪದ ಅಪ್ಪಣ್ಣ ಸಮಾಜವು ಪ್ರವರ್ಗ ೨ಎ ಅಡಿಯಲ್ಲಿ ಇದೆ. ಸಮಾಜದ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಹಿಂದುಳಿದ ಸ್ಥಿತಿಯನ್ನು ಪರಿಗಣಿಸಿ ಪ್ರವರ್ಗ–೧ಕ್ಕೆ ಸೇರಿಸುವ ಕುರಿತು ಸರ್ಕಾರ ಗಂಭೀರವಾಗಿ ಪರಿಶೀಲಿಸಬೇಕು. ಹಾಗೆಯೇ, ಹಡಪದ ಅಪ್ಪಣ್ಣ ಸಮಾಜದ ಜನರಿಗೆ ಜಾತಿ ನಿಂದನೆ ಹಾಗೂ ಸಾಮಾಜಿಕ ಅವಮಾನದಿಂದ ಕಾನೂನುಬದ್ಧ ರಕ್ಷಣೆ ದೊರೆಯುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ಒಳಮೀಸಲಾತಿ ಸೇರಿದಂತೆ ಸಮಾಜಕ್ಕೆ ನ್ಯಾಯ ದೊರಕಿಸುವ ಎಲ್ಲಾ ಸಾಧ್ಯತೆಗಳ ಕುರಿತು ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು. ಅಧ್ಯಯನ ಪೀಠಕ್ಕೆ ಪ್ರತ್ಯೇಕ ಕಟ್ಟಡ ನಿರ್ಮಿಸಬೇಕು ಕಲಬುರಗಿ ಜಿಲ್ಲೆಯ ವಿಶ್ವವಿದ್ಯಾಲಯದಲ್ಲಿ ಇರುವ ಹಡಪದ ಅಪ್ಪಣ್ಣ ಅಧ್ಯಯನ ಪೀಠಕ್ಕೆ ಪ್ರತ್ಯೇಕ ಕಟ್ಟಡ ನಿರ್ಮಾಣಕ್ಕಾಗಿ ೨೦ ಕೋಟಿ ರೂಪಾಯಿ ಅನುದಾನ ಮೀಸಲಿಡಬೇಕು ಎಂದು ಸರ್ಕಾರಕ್ಕೆ ಹಲವಾರು ಬಾರಿ ಒತ್ತಾಯಿಸಲಾಗಿದೆ. ಆದರೂ ಈ ಮಹತ್ವದ ಬೇಡಿಕೆಯ ಕುರಿತು ಸಚಿವರು ಮತ್ತು ಶಾಸಕರು ಸದನದಲ್ಲಿ ಪರಿಣಾಮಕಾರಿಯಾಗಿ ಧ್ವನಿ ಎತ್ತದಿರುವುದು ಸಮಾಜಕ್ಕೆ ಮಾಡಿದ ಅನ್ಯಾಯವಾಗಿದೆ ಎಂದು ಬಸವರಾಜ ಹಡಪದ ಸುಗೂರ ಎನ್ ಅವರು ಬೇಸರ ವ್ಯಕ್ತಪಡಿಸಿದರು. ಸಣ್ಣ ಸಮಾಜದ ಗತಿ ಏನು? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕೊನೆಯ ಸಾಲಿನಲ್ಲಿ ನಿಂತಿರುವ, ಧ್ವನಿ ಇಲ್ಲದ ಮತ್ತು ಹಿಂದುಳಿದ ಸಮಾಜಗಳಿಗೆ ನ್ಯಾಯ ದೊರೆಯಬೇಕಾದರೆ ಅವರ ಪರವಾಗಿ ಜನಪ್ರತಿನಿಧಿಗಳು ಸದನದ ಒಳಗೂ ಹೊರಗೂ ನಿರಂತರವಾಗಿ ಧ್ವನಿ ಎತ್ತಬೇಕು. ಸರ್ಕಾರವನ್ನು ಉತ್ತರದಾಯಿಯಾಗಿಸಬೇಕು. ಆದರೆ ಹಡಪದ ಸಮಾಜದ ಪ್ರಮುಖ ಬೇಡಿಕೆಗಳ ಕುರಿತು ಅನೇಕ ಬಾರಿ ಮನವಿ ಸಲ್ಲಿಸಿದ್ದರೂ ಸಮರ್ಪಕವಾಗಿ ಸದನದಲ್ಲಿ ಚರ್ಚೆಯಾಗದಿರುವುದು ಇಡೀ ಸಮಾಜದ ಆತಂಕಕ್ಕೆ ಕಾರಣವಾಗಿದೆ. “ಹಡಪದ ಸಮಾಜದ ಹಿತಾಸಕ್ತಿ, ಅಭಿವೃದ್ಧಿ, ಐತಿಹಾಸಿಕ ತಾಣಗಳ ಸಂರಕ್ಷಣೆ, ಅಭಿವೃದ್ಧಿ ನಿಗಮಕ್ಕೆ ಅನುದಾನ, ಶಿಕ್ಷಣ, ಉದ್ಯೋಗ, ಆರೋಗ್ಯ, ವಸತಿ ಹಾಗೂ ಸಾಮಾಜಿಕ ನ್ಯಾಯದಂತಹ ಪ್ರಮುಖ ಬೇಡಿಕೆಗಳ ಕುರಿತು ಸರ್ಕಾರ ತಕ್ಷಣ ಸ್ಪಂದಿಸಬೇಕು. ಇಲ್ಲವಾದರೆ ಧ್ವನಿ ಇಲ್ಲದ ಸಣ್ಣ ಸಮಾಜಗಳಿಗೆ ನ್ಯಾಯ ಸಿಗುವುದು ಹೇಗೆ?” ಎಂದು ಅವರು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಕಲಬುರಗಿ ಜಿಲ್ಲೆಯ ಹಡಪದ ಅಪ್ಪಣ್ಣ ಸಮಾಜದ ಜಿಲ್ಲಾ ಗೌರವಾಧ್ಯಕ್ಷರು ಹಾಗೂ ರಾಜ್ಯ ಹಡಪದ ಅಪ್ಪಣ್ಣ ಸಮಾಜದ ಜಿಲ್ಲಾ ಪ್ರತಿನಿಧಿಯಾದ ಬಸವರಾಜ ಹಡಪದ ಸುಗೂರ ಎನ್ ಅವರು ಸಮಾಜದ ಪರವಾಗಿ ಸಚಿವರು, ಶಾಸಕರು ಹಾಗೂ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಬೇಸರ ಮತ್ತು ಆಕ್ರೋಶ ವ್ಯಕ್ತಪಡಿಸಿದರು.

- ಲಿಂಗನಬಂಡಿ ಮೌನೇಶ್ವರ ಪೂಜೆಗೆ ಬಾಕುತಿರುವ ವಿಶ್ವಕರ್ಮ ಸಮಾಜದ ಎಲ್ಲರೂ ಒಂದಾಗೋಣ ಬನ್ನಿ ಸನ್ಮಾನ್ಯ ಶ್ರೀ ಕೆಪಿ ನಂಜುಂಡಿ ಇವರ ಕೈ ಕೊಡ್ಸೋಣ ಎಲ್ಲಾ ಮಠ ಅಧ್ಯಕ್ಷರು ಹಾಗೂ ವಿಶ್ವಕರ್ಮ ಸಮಾಜದ ಬಂಧುಗಳು ವಿನಂತಿ1
- ಲೋಕಕಲ್ಯಾಣಕ್ಕಾಗಿ ಸುರಪುರ ತಾಲೂಕಿನ ದೇವಪುರದಿಂದ ಶ್ರೀ ತಿಂಥಣಿ ಮೌನೇಶ್ವರ ದೇವಸ್ಥಾನದವರೆಗೆ ಸರ್ವಧರ್ಮ ಪಾದಯಾತ್ರೆ ಸುರಪುರ : ಹೌದು ಸುರಪುರ ತಾಲೂಕಿನ ದೇವಪುರ ಗ್ರಾಮದಿಂದ ಶ್ರೀ ತಿಂಥಣಿ ಮೌನೇಶ್ವರ ದೇವಸ್ಥಾನಕ್ಕೆ ಸರ್ವ ಧರ್ಮದ ವತಿಯಿಂದ ಭಕ್ತಿ ಪೂರ್ವಕ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿತು. ಶ್ರೀ ರವಿ ಮುತ್ಯಾ ದೇವಪುರ ಹಾಗೂ ಶ್ರೀ ನಾಗರಾಜ ಮುತ್ಯಾ ದೇವಪುರ ಅವರ ದಿವ್ಯ ನೇತೃತ್ವದಲ್ಲಿ ಈ ಪಾದಯಾತ್ರೆ ಅತ್ಯಂತ ಶ್ರದ್ಧಾ ಭಕ್ತಿಯಿಂದ ನಡೆಯಿತು. ಈ ಪಾದಯಾತ್ರೆಯಲ್ಲಿ ವಿವಿಧ ಧರ್ಮಗಳ ಭಕ್ತರು ಪಾಲ್ಗೊಂಡು ಶ್ರೀ ಮೌನೇಶ್ವರ ದೇವರ ಕೃಪೆಗೆ ಪಾತ್ರರಾದರು1
- ಸರಕಾರಿ ಮಾದರಿಯ ಪ್ರಾಥಮಿಕ ಶಾಲೆ ಗೋನಾಳ ಗ್ರಾಮೀಣವಾಗದ ಮಕ್ಕಳ ಪ್ರತಿಭೆ ಸಾರ್ವಜನಿಕರು ವಿಕಿಸಿ1
- ಈದ್ ಮಿಲಾದ್ ಹಬ್ಬವು ಇಸ್ಲಾಂ ಧರ್ಮದ ಕೊನೆಯ ದೂತರಾದ ಪ್ರವಾದಿ ಮುಹಮ್ಮದ್ (ಸ) ಅವರ ಜನ್ಮದಿನವನ್ನು ಸ್ಮರಿಸಲು ಆಚರಿಸುವ ಪವಿತ್ರ ದಿನವಾಗಿದೆ ಗೋಗಿ ಎಲ್ಲಿ ಪಥಸಂಚಲನ ನಡೆಯಿತು ಸ್ಥಳೀಯ ಪೊಲೀಸರು, ಮಹಿಳಾ ಸಿಬ್ಬಂದಿ, ಕೆಎಸ್‌ಆರ್‌ಪಿ (KSRP) ತುಕಡಿಗಳು ಮತ್ತು ಗೃಹ ರಕ್ಷಕ ದಳದವರು.ಮಾರ್ಗ: ಊರಿನ ಪ್ರಮುಖ ವೃತ್ತಗಳು, ಮಾರುಕಟ್ಟೆಗಳು ಮತ್ತು ಸಂವೇದನಾಶೀಲ ಪ್ರದೇಶಗಳ ಮೂಲಕ ಸಾಗುತ್ತದೆ1
- ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ರಾಯಚೂರು: ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಜಿಲ್ಲಾ ಕುರುಬರ ಸಂಘ ಹಾಗೂ ಜಿಲ್ಲಾ ಕನಕ ನೌಕರರ ಸಂಘದ ಸಹಯೋಗದಲ್ಲಿ ಆ.30ರಂದು ಬೆಳಿಗ್ಗೆ 10.30ಕ್ಕೆ ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ನೌಕರರು ಮತ್ತು ವಿಶೇಷ ಸಾಧಕರಿಗೆ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ರಾಯಚೂರು ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಹನುಮಂತಪ್ಪ ಜಾಲಿಬೆಂಚಿ ತಿಳಿಸಿದರು. ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ ಪ್ರೋತ್ಸಾಹಿಸುವುದು ಸಮಾಜದ ಜವಾಬ್ದಾರಿಯಾಗಿದೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವ ನೀಡುವುದರಿಂದ ಅವರಲ್ಲಿ ಇನ್ನಷ್ಟು ಸಾಧನೆ ಮಾಡುವ ಉತ್ಸಾಹ ಮೂಡಲಿದ್ದು, ಇತರ ವಿದ್ಯಾರ್ಥಿಗಳಿಗೂ ಪ್ರೇರಣೆಯಾಗಲಿದೆ ಎಂದರು. ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವುದರ ಜೊತೆಗೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ನೌಕರರು ಹಾಗೂ ವಿಶೇಷ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಗುವುದು. ಸಮಾಜದ ಶೈಕ್ಷಣಿಕ ಪ್ರಗತಿ, ಯುವಜನರ ಸಾಧನೆ ಹಾಗೂ ಸೇವಾ ಮನೋಭಾವವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಪೂಜ್ಯರು, ಸಚಿವರು, ಸಂಸದರು, ಶಾಸಕರು, ಮಾಜಿ ಸಚಿವರು, ಮಾಜಿ ರಾಜ್ಯಸಭಾ ಸದಸ್ಯರು, ಮಾಜಿ ಸಂಸದರು ಹಾಗೂ ಮಾಜಿ ಶಾಸಕರು ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ. ಕುರುಬರ ಸಮಾಜದ ಜಿಲ್ಲಾ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಜಿಲ್ಲಾ ಕನಕ ನೌಕರರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ವಿವಿಧ ತಾಲೂಕುಗಳ ಕುರುಬರ ಸಂಘ ಹಾಗೂ ಕನಕ ನೌಕರರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಮಹಿಳಾ ನೌಕರರ ಸಂಘದ ಪದಾಧಿಕಾರಿಗಳು ಉಪಸ್ಥಿತರಿರುವರು. ಜಿಲ್ಲೆಯ ಕುರುಬ ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದರೊಂದಿಗೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಕೆ. ಬಸವಂತಪ್ಪ, ರಾಮಣ್ಣ ರಘುನಾಥ್ ಹಳ್ಳಿ ಸೇರಿದಂತೆ ಇತರರು ಇದ್ದರು.1
- ನೇಪಾಳ ಪ್ರವಾಹದಲ್ಲಿ ಬದುಕುಳಿದ ಕಾಳಗಿ ತಾಲೂಕಿನ ಮಲ್ಲಿನಾಥ ಕೊಲಕುಂದಿ ಜೊತೆ ಸಿಎಮ್ ವಿಡಿಯೋ ಕಾಲ್ ಮಾತನಾಡಿ ಧೈರ್ಯ ತುಂಬಿದರು ಕಾಳಗಿ ತಾಲೂಕಿನ ಕೋಡ್ಲಿ ಗ್ರಾಮದ ಮಲ್ಲಿನಾಥ ಕೊಲಕುಂದಿ ಅವರು ನೇಪಾಳ ಪ್ರವಾಸಕ್ಕೆ ತೆರಳಿದ ಸಂದರ್ಭದಲ್ಲಿ ಉಂಟಾದ ಭೀಕರ ಪ್ರವಾಹದಿಂದ ಪಾರಾಗಿ ಅದೃಷ್ಟವಶಾತ್ ಬದುಕುಳಿದ ಕನ್ನಡಿಗ ಮಲ್ಲಿನಾಥ ಕೊಲಕುಂದಿ ಅವರೊಂದಿಗೆ ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿಡಿಯೋ ಕಾಲ್ ಮೂಲಕ ಮಾತನಾಡಿ ಧೈರ್ಯ ತುಂಬಿದ್ದಾರೆ.1
- ನೇಪಾಳ ಪ್ರವಾಹದಲ್ಲಿ ಸಾವನಪ್ಪಿದವರಿಗೆ ಕೇಂದ್ರ ಸರ್ಕಾರದಿಂದ ಪರಿಹಾರ ನೀಡಲಿ ಕಲಬುರಗಿಯಲ್ಲಿ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ನೀಡದ್ದು ನೇಪಾಳ ಪ್ರವಾಹದಲ್ಲಿ ಕರ್ನಾಟಕ ಮಾತ್ರ ಅಲ್ಲ ದೇಶದ ಸಾಕಷ್ಟು ಜನ ಸಿಲುಕಿದ್ದಾರೆ ನೂರಾರು ಜನ ಕೊಚ್ಚಿಕೊಂಡು ಕೆಲ ಜನ ಪ್ರಾಣ ಕೊಟ್ಟಿದ್ದಾರೆ. ಅದಕ್ಕಾಗಿ ನಾನು ಶ್ರದ್ಧಾಂಜಲಿ ಅರ್ಪಿಸುತ್ತೆನೆ. ಜೊತೆಗೆ ಪ್ರಧಾನಿಗೆ ಪತ್ರ ಬರೆಯುತ್ತಿದ್ದೆನೆ ಕರ್ನಾಟಕ ಅಷ್ಟೇ ಅಲ್ಲ ದೇಶದ ಎಷ್ಟು ಜನ ಪ್ರಾಣ ಕಳೆದುಕೊಂಡಿದ್ದಾರೆ ಅವರಿಗೆ ಪರಿಹಾರ ಕೊಡಬೇಕು. ಹಾಗೂ ನೇಪಾಳದ ಜೊತೆಗೆ ನಿಲ್ಲುವಂತೆ ಕೂಡ ಪತ್ರ ಬರೆದಿದ್ದನೆ. ಎಂದು ಡಾ- ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದರು. ಸಂಪುಟದಲ್ಲಿ ಕೆಲ ಸಚಿವರ ಬದಲಾವಣೆಗೆ ಡಿಕೆಶಿ ದೆಹಲಿ ಬೇಟಿ ವಿಚಾರ. ನಾನು ಇವಾಗ ಕಲಬುರಗಿಯಲ್ಲಿದ್ದೆನೆ. ನನಗೆ ಯಾವುದೇ ಮಾಹಿತಿ ಇಲ್ಲ ಏನೆ ಬದಲಾವಣೆ ಇದ್ದರು ನನ್ನ ಬಳಿ ಬರಲೇ ಬೇಕು ಅವರು ಏಲ್ಲೆ ಹೋದ್ರು ನನ್ನ ಬಳಿ ಬರಬೇಕು ಬಂದ ಮೇಲೆ ನಿಮಗೆ ಮಾಹಿತಿ ನೀಡುತ್ತೆನೆ ಎಂದು ಹೇಳಿದ್ದಾರೆ1
- ಬಿಹಾರ್ ರಾಜ್ಯದಲ್ಲಿ ಪ್ರತಿ ಭಟನೆ ಮಾಡಿದ 6-ವರ್ಷದ ಬಾಲಕನಿಗೆ ಪೊಲೀಸ್ ಅರೆಸ್ಟ್ ಮಾಡಿದ್ದಾರೆ1