ಶಿಕಾರಿಪುರ ತಾಲ್ಲೂಕು ಅಂಗನವಾಡಿ ನೌಕರರ ಹಲವು ಬೇಡಿಕೆ ಈಡೇರಿಕೆಗಾಗಿ ಬೃಹತ್ ಪ್ರತಿಭಟನಾ ಮೆರವಣಿಗೆ. ಶಿಕಾರಿಪುರ. ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಶಿವಮೊಗ್ಗ ಜಿಲ್ಲಾ ಸಮಿತಿ ಹಾಗೂ ಶಿಕಾರಿಪುರ ತಾಲೂಕು ಸಮಿತಿ ವತಿಯಿಂದ ಒಂದು ದಿನ ಕೆಲಸವನ್ನು ಸ್ಥಗಿತಗೊಳಿಸಿ ಹಲವು ಬೇಡಿಕೆಗಳ ಈಡೇರಿಕೆಗಾಗಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಪಟ್ಟಣದ ಡಾll ಬಿ ಆರ್ ಅಂಬೇಡ್ಕರ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ನಂತರ ತಾಲ್ಲೂಕು ಕಚೇರಿಯ ವರೆಗೆ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಂಡು ತಾಲ್ಲೂಕು ಕಚೇರಿಯ ಆವರಣದಲ್ಲಿ ಧರಣಿ ನಡೆಸಿ ತಮ್ಮ ಬಹುದಿನಗಳ ಬೇಡಿಕೆಗಳನ್ನು ಕೂಡಲೇ ಸರ್ಕಾರ ಈಡೇರಿಸಬೇಕೆಂದು ಆಗ್ರಹಿಸಿದರು. ನಂತರ ತಹಶೀಲ್ದಾರ್ ರವರ ಮುಖೇನ ನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೆಂಗಳೂರು ಇವರಿಗೆ ಮನವಿಯನ್ನು ಸಲ್ಲಿಸಿದರು. 1) ಶಿಕ್ಷಣ ಇಲಾಖೆ ಎಲ್ ಕೆ ಜಿ - ಯು ಕೆ ಜಿ ನಡೆಸುವುದನ್ನು ನಿಲ್ಲಿಸಿ. ಅಂಗನವಾಡಿ ಕೇಂದ್ರದಲ್ಲಿಯೇ ನಡೆಸಬೇಕು ಮತ್ತು ಅಗತ್ಯವಿರುವ ಬಜೆಟ್ ಕೊಡಬೇಕು. 2) ಅಂಗನವಾಡಿ ನೌಕರರಿಗೆ ದ್ರೋಹ ಬಗೆದ ನಾಲ್ಕು ಕಾರ್ಮಿಕ ಸಂಹಿತೆಗಳು ರದ್ದಾಗಬೇಕು. 3) ಶಾಸನಬದ್ಧ ಸವಲತ್ತುಗಳನ್ನು ನೀಡಿದ "ಶ್ರಮಶಕ್ತಿ ನೀತಿ" 2025 ಬೇಡವೇ ಬೇಡ. 4) ಅಂಗನವಾಡಿ ನೌಕರರಿಗೂ ಮುಟ್ಟಿನ ರಜೆ ನೀಡಬೇಕು. 5) 56 ಲಕ್ಷ ಸ್ಕೀಮ್ ಕಾರ್ಮಿಕರ ಸೇವಾ ಷರತ್ತುಗಳ ಸುಧಾರಣೆಗೆ ಪ್ರತ್ಯೇಕ ವೇತನ ಆಯೋಗ ರಚಿಸಿ. 6) ಐ ಸಿ ಡಿ ಎಸ್ ಯೋಜನೆಯನ್ನು ಖಾಯಂ ಮಾಡಬೇಕು. ಖಾಯಂ ಮಾಡುವ ತನಕ ಪ್ರತ್ಯೇಕ ನಿರ್ದೇಶನಾಲಯವನ್ನು ರಚಿಸಬೇಕು. 7) 2018 ರಿಂದ ಫಲಾನುಭವಿಗಳ ಘಟಕ ವೆಚ್ಚ ಹೆಚ್ಚಳ ಮಾಡಿಲ್ಲ. ಕೂಡಲೇ ಘಟಕ ವೆಚ್ಚ ಹೆಚ್ಚಳ ಮಾಡಬೇಕು ಮತ್ತು ಸ್ಥಳೀಯ ಆಹಾರ ಪದಾರ್ಥಗಳನ್ನು ನೀಡಬೇಕು. 2018 ರಿಂದ ಅಂಗನವಾಡಿ ನೌಕರರಿಗೆ ಕೇಂದ್ರ ಸರ್ಕಾರ ವೇತನ ಹೆಚ್ಚಳ ಮಾಡಲಿಲ್ಲ. ಇಂದಿಗೂ ಅಂಗನವಾಡಿ ಕಾರ್ಯಕರ್ತೆಗೆ 2700 ರೂಪಾಯಿಗಳು. ಸಹಾಯಕಿಗೆ 1350 ರೂಪಾಯಿಗಳನ್ನು ಮಾತ್ರವೇ ನೀಡುತ್ತಿದೆ. ಆದ್ದರಿಂದ ಕೇಂದ್ರ ಸರ್ಕಾರ ಕೂಡಲೇ ಕನಿಷ್ಠ ವೇತನವನ್ನು ಆದರೂ ಜಾರಿ ಮಾಡಬೇಕು. 9) ಎಫ್ ಆರ್ ಎಸ್ ಅನ್ನು ರದ್ದು ಮಾಡಬೇಕು. ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ವೈ ಫೈ ವ್ಯವಸ್ಥೆ ನೀಡಬೇಕು. 10) ಅಂಗನವಾಡಿ ನೌಕರರನ್ನು ಚುನಾವಣಾ ಕೆಲಸದಿಂದ ಬಿಡುಗಡೆಗೊಳಿಸಬೇಕು. ಚುನಾವಣಾ ಅಧಿಕಾರಿಗಳು ಅಂಗನವಾಡಿ ಕಾರ್ಯಕರ್ತರ ಮೇಲೆ ಶಿಸ್ತುಕ್ರಮ ಜರುಗಿಸಬಾರದು. 11) ಖಾಸಗಿ ವಿಚಾರಗಳಲ್ಲಿ ಅಂಗನವಾಡಿ ನೌಕರರ ಬಂಧನವಾದಾಗ ವಿಚಾರಣೆ ನಡೆಸದೆ ಏಕಮುಖವಾಗಿ ಕೆಲಸದಿಂದ ವಜಾ ಮಾಡುವುದನ್ನು ನಿಲ್ಲಿಸಬೇಕು. 12) ಅಂಗನವಾಡಿ ನೌಕರರನ್ನು ಮೂರು ಮತ್ತು ನಾಲ್ಕನೇ ದರ್ಜೆಯ ನೌಕರರನ್ನಾಗಿ ಪರಿಗಣಿಸಬೇಕು. 13) ಅಂಗನವಾಡಿ ನೌಕರರನ್ನು ಕಾಯಂ ಮಾಡುವ ತನಕ 26,000 /- ರೂಪಾಯಿಗಳ ಕನಿಷ್ಠ ವೇತನ ಹೆಚ್ಚಿಸಬೇಕು. ಈ ಮೇಲಿನ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ, ಕೇಂದ್ರ ಕಾರ್ಮಿಕ ಸಂಘಟನೆಗಳ ಕರೆಯ ಮೇರೆಗೆ ಇಂದು ಒಂದು ದಿನ ಕೆಲಸವನ್ನು ಸ್ಥಗಿತಗೊಳಿಸಿ ಮುಷ್ಕರದಲ್ಲಿ ಪಾಲ್ಗೊಳ್ಳುತ್ತಿದ್ದೇವೆ ಎಂದು ಸಮಿತಿಯ ಜಿಲ್ಲಾಧ್ಯಕ್ಷರಾದ ಜಿ ಶೈಲಜಾ ರವರು ತಿಳಿಸಿದರು. ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಶಿವಮೊಗ್ಗ ಜಿಲ್ಲಾ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಜಿ ಶೈಲಜಾ ಹಾಗೂ ಶಿಕಾರಿಪುರ ತಾಲೂಕು ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಶಾವಲಾ. ತಾಲ್ಲೂಕು ಕಾರ್ಯದರ್ಶಿ ದೀಪಾ. ತಾಲ್ಲೂಕು ಉಪಾಧ್ಯಕ್ಕೆ ಆರತಿ. ಮುಖಂಡರುಗಳಾದ ನೇತ್ರ. ಸುಮಿತ್ರ. ಅನಿತಾ. ಲಲಿತಾ ಸೇರಿದಂತೆ ನೂರಾರು ಅಂಗನವಾಡಿ ನೌಕರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಶಿಕಾರಿಪುರ ತಾಲ್ಲೂಕು ಅಂಗನವಾಡಿ ನೌಕರರ ಹಲವು ಬೇಡಿಕೆ ಈಡೇರಿಕೆಗಾಗಿ ಬೃಹತ್ ಪ್ರತಿಭಟನಾ ಮೆರವಣಿಗೆ. ಶಿಕಾರಿಪುರ. ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಶಿವಮೊಗ್ಗ ಜಿಲ್ಲಾ ಸಮಿತಿ ಹಾಗೂ ಶಿಕಾರಿಪುರ ತಾಲೂಕು ಸಮಿತಿ ವತಿಯಿಂದ ಒಂದು ದಿನ ಕೆಲಸವನ್ನು ಸ್ಥಗಿತಗೊಳಿಸಿ ಹಲವು ಬೇಡಿಕೆಗಳ ಈಡೇರಿಕೆಗಾಗಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಪಟ್ಟಣದ ಡಾll ಬಿ ಆರ್ ಅಂಬೇಡ್ಕರ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ನಂತರ ತಾಲ್ಲೂಕು ಕಚೇರಿಯ ವರೆಗೆ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಂಡು ತಾಲ್ಲೂಕು ಕಚೇರಿಯ ಆವರಣದಲ್ಲಿ ಧರಣಿ ನಡೆಸಿ ತಮ್ಮ ಬಹುದಿನಗಳ ಬೇಡಿಕೆಗಳನ್ನು ಕೂಡಲೇ ಸರ್ಕಾರ ಈಡೇರಿಸಬೇಕೆಂದು ಆಗ್ರಹಿಸಿದರು. ನಂತರ ತಹಶೀಲ್ದಾರ್ ರವರ ಮುಖೇನ ನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೆಂಗಳೂರು ಇವರಿಗೆ ಮನವಿಯನ್ನು ಸಲ್ಲಿಸಿದರು. 1) ಶಿಕ್ಷಣ ಇಲಾಖೆ ಎಲ್ ಕೆ ಜಿ
- ಯು ಕೆ ಜಿ ನಡೆಸುವುದನ್ನು ನಿಲ್ಲಿಸಿ. ಅಂಗನವಾಡಿ ಕೇಂದ್ರದಲ್ಲಿಯೇ ನಡೆಸಬೇಕು ಮತ್ತು ಅಗತ್ಯವಿರುವ ಬಜೆಟ್ ಕೊಡಬೇಕು. 2) ಅಂಗನವಾಡಿ ನೌಕರರಿಗೆ ದ್ರೋಹ ಬಗೆದ ನಾಲ್ಕು ಕಾರ್ಮಿಕ ಸಂಹಿತೆಗಳು ರದ್ದಾಗಬೇಕು. 3) ಶಾಸನಬದ್ಧ ಸವಲತ್ತುಗಳನ್ನು ನೀಡಿದ "ಶ್ರಮಶಕ್ತಿ ನೀತಿ" 2025 ಬೇಡವೇ ಬೇಡ. 4) ಅಂಗನವಾಡಿ ನೌಕರರಿಗೂ ಮುಟ್ಟಿನ ರಜೆ ನೀಡಬೇಕು. 5) 56 ಲಕ್ಷ ಸ್ಕೀಮ್ ಕಾರ್ಮಿಕರ ಸೇವಾ ಷರತ್ತುಗಳ ಸುಧಾರಣೆಗೆ ಪ್ರತ್ಯೇಕ ವೇತನ ಆಯೋಗ ರಚಿಸಿ. 6) ಐ ಸಿ ಡಿ ಎಸ್ ಯೋಜನೆಯನ್ನು ಖಾಯಂ ಮಾಡಬೇಕು. ಖಾಯಂ ಮಾಡುವ ತನಕ ಪ್ರತ್ಯೇಕ ನಿರ್ದೇಶನಾಲಯವನ್ನು ರಚಿಸಬೇಕು. 7) 2018 ರಿಂದ ಫಲಾನುಭವಿಗಳ ಘಟಕ ವೆಚ್ಚ ಹೆಚ್ಚಳ ಮಾಡಿಲ್ಲ. ಕೂಡಲೇ ಘಟಕ ವೆಚ್ಚ ಹೆಚ್ಚಳ ಮಾಡಬೇಕು
ಮತ್ತು ಸ್ಥಳೀಯ ಆಹಾರ ಪದಾರ್ಥಗಳನ್ನು ನೀಡಬೇಕು. 2018 ರಿಂದ ಅಂಗನವಾಡಿ ನೌಕರರಿಗೆ ಕೇಂದ್ರ ಸರ್ಕಾರ ವೇತನ ಹೆಚ್ಚಳ ಮಾಡಲಿಲ್ಲ. ಇಂದಿಗೂ ಅಂಗನವಾಡಿ ಕಾರ್ಯಕರ್ತೆಗೆ 2700 ರೂಪಾಯಿಗಳು. ಸಹಾಯಕಿಗೆ 1350 ರೂಪಾಯಿಗಳನ್ನು ಮಾತ್ರವೇ ನೀಡುತ್ತಿದೆ. ಆದ್ದರಿಂದ ಕೇಂದ್ರ ಸರ್ಕಾರ ಕೂಡಲೇ ಕನಿಷ್ಠ ವೇತನವನ್ನು ಆದರೂ ಜಾರಿ ಮಾಡಬೇಕು. 9) ಎಫ್ ಆರ್ ಎಸ್ ಅನ್ನು ರದ್ದು ಮಾಡಬೇಕು. ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ವೈ ಫೈ ವ್ಯವಸ್ಥೆ ನೀಡಬೇಕು. 10) ಅಂಗನವಾಡಿ ನೌಕರರನ್ನು ಚುನಾವಣಾ ಕೆಲಸದಿಂದ ಬಿಡುಗಡೆಗೊಳಿಸಬೇಕು. ಚುನಾವಣಾ ಅಧಿಕಾರಿಗಳು ಅಂಗನವಾಡಿ ಕಾರ್ಯಕರ್ತರ ಮೇಲೆ ಶಿಸ್ತುಕ್ರಮ ಜರುಗಿಸಬಾರದು. 11) ಖಾಸಗಿ ವಿಚಾರಗಳಲ್ಲಿ ಅಂಗನವಾಡಿ ನೌಕರರ ಬಂಧನವಾದಾಗ ವಿಚಾರಣೆ ನಡೆಸದೆ ಏಕಮುಖವಾಗಿ ಕೆಲಸದಿಂದ ವಜಾ ಮಾಡುವುದನ್ನು ನಿಲ್ಲಿಸಬೇಕು. 12) ಅಂಗನವಾಡಿ ನೌಕರರನ್ನು ಮೂರು
ಮತ್ತು ನಾಲ್ಕನೇ ದರ್ಜೆಯ ನೌಕರರನ್ನಾಗಿ ಪರಿಗಣಿಸಬೇಕು. 13) ಅಂಗನವಾಡಿ ನೌಕರರನ್ನು ಕಾಯಂ ಮಾಡುವ ತನಕ 26,000 /- ರೂಪಾಯಿಗಳ ಕನಿಷ್ಠ ವೇತನ ಹೆಚ್ಚಿಸಬೇಕು. ಈ ಮೇಲಿನ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ, ಕೇಂದ್ರ ಕಾರ್ಮಿಕ ಸಂಘಟನೆಗಳ ಕರೆಯ ಮೇರೆಗೆ ಇಂದು ಒಂದು ದಿನ ಕೆಲಸವನ್ನು ಸ್ಥಗಿತಗೊಳಿಸಿ ಮುಷ್ಕರದಲ್ಲಿ ಪಾಲ್ಗೊಳ್ಳುತ್ತಿದ್ದೇವೆ ಎಂದು ಸಮಿತಿಯ ಜಿಲ್ಲಾಧ್ಯಕ್ಷರಾದ ಜಿ ಶೈಲಜಾ ರವರು ತಿಳಿಸಿದರು. ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಶಿವಮೊಗ್ಗ ಜಿಲ್ಲಾ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಜಿ ಶೈಲಜಾ ಹಾಗೂ ಶಿಕಾರಿಪುರ ತಾಲೂಕು ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಶಾವಲಾ. ತಾಲ್ಲೂಕು ಕಾರ್ಯದರ್ಶಿ ದೀಪಾ. ತಾಲ್ಲೂಕು ಉಪಾಧ್ಯಕ್ಕೆ ಆರತಿ. ಮುಖಂಡರುಗಳಾದ ನೇತ್ರ. ಸುಮಿತ್ರ. ಅನಿತಾ. ಲಲಿತಾ ಸೇರಿದಂತೆ ನೂರಾರು ಅಂಗನವಾಡಿ ನೌಕರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
- ಶಿವಮೊಗ್ಗ: ನಗರದಲ್ಲಿ ಜೀವ ತೆಗೆಯುತ್ತಿರುವ ಹಂಪ್ ಗಳ ಹಿಂದೆ ಇದೀಗ ಪೊಲೀಸ್ ಇಲಾಖೆ ಮತ್ತು ಮಹಾನಗರ ಪಾಲಿಕೆ ಪ್ರತ್ಯೇಕ ಪ್ರತ್ಯೇಕವಾಗಿಯೇ ಬೆನ್ನು ಬಿದ್ದು ಹಂಪ್ ಗಳ ನಿರ್ಮಾಣಗಳಲ್ಲಿ ಆಗಿರುವ ತಪ್ಪು ಹುಡುಕಿ ಸರಿ ಮಾಡುತ್ತಿವೆ. ಒಂದು ಕಡೆ ಮಹಾನಗರ ಪಾಲಿಕೆಯ ಆಯುಕ್ತ ಮಾಯಣ್ಣ ಗೌಡರು ಶಿವಮೊಗ್ಗದ ಹಂಪ್ ಗಳನ್ನು ಹುಡುಕಿ ಪರಿಶೀಲಿಸುತ್ತಿ ದ್ದಾರೆ. ಮತ್ತೊಂದು ಕಡೆ ಪೊಲೀಸ್ ಇಲಾಖೆಯ ಎಸ್ ಪಿ ನಿಖಿಲ್ ಬಿ. ಮತ್ತು ಟ್ರಾಫಿಕ್ ಇನ್ಸ್ ಪೆಕ್ಟರ್ ದೇವರಾಜ್ ಸಿಬ್ಬಂದಿ ಗಳೊಂದಿಗೆ ಅವೈಜ್ಞಾನಿಕ ಹಂಪ್ ಗಳ ಹುಡುಕಾಟ ಆರಂಭಿಸಿ ಸ್ಥಳ ಪರಿಶೀಲಿಸಿ, ಸರಿ ಪಡಿಸುತ್ತಿದ್ದಾರೆ. ಶಿವಮೊಗ್ಗದಲ್ಲಿ ಅಪಘಾತಗಳ ಸಂಖ್ಯೆ ಕಡಿಮೆಯಾಗಿಸುವ ಉದ್ದೇಶದಿಂದ ಹಾಕಲಾದ ಹಂಪ್ ಗಳೇ ಜನರ ಜೀವಗಳ ಜೊತೆ ಆಟವಾಡಲಾರಂಭಿಸಿದ್ದು ಜನಾಕ್ರೋಶಕ್ಕೆ ಕಾರಣವಾಗುತ್ತಿದೆ. ಒಂದೆರಡು ಕಡೆ ಪ್ರಮುಖ ಜಾಗಗಳಲ್ಲಿ ಹಂಪ್ ಗಳನ್ನು ಹಾಕಲು ಪೊಲೀಸ್ ಇಲಾಖೆ, ಮಹಾನಗರ ಪಾಲಿಕೆ ಜಂಟಿ ಕಾರ್ಯಾಚರಣೆ ಆರಂಭಿಸಿದಾಗ ಕೆಲವು ಕಡೆ ಜನರೇ ಒತ್ತಡ ಮಾಡಿ ಹಲವು ಕಡೆ ಹಂಪ್ ಗಳನ್ನು ಹಾಕಿಸಿಕೊಂಡಿದ್ದರು. ಅಪಘಾತ ಸಂಭವಿಸಿದ ರಸ್ತೆಗಳಲ್ಲಿರುವ ಹಂಪ್ ಗಳ ಬಳಿ ಎರಡೂ ಇಲಾಖೆಯ ಅಧಿಕಾರಿಗಳು ತೆರಳಿ ಪರಿಶೀಲಿಸಿ ಅವುಗಳನ್ನು ತೆಗೆಸುವ ಅಥವಾ ಸರಿ ಮಾಡುವ ಕೆಲಸ ತಕ್ಷಣದಿಂದ ಮಾಡುತ್ತಿರುವುದರಿಂದ ಬಹಳಷ್ಟು ಜೀವಗಳು ಉಳಿಯುವುದರಲ್ಲಿ ಸಂದೇಹವಿಲ್ಲ.1
- ತೀರ್ಥಹಳ್ಳಿ: ಪಟ್ಟಣದ ಹೃದಯ ಭಾಗದಲ್ಲಿ ಶ್ರೀ ಮಾರಿಕಾಂಬ ದೇವಿಯ ಜಾತ್ರೆಯು ನಿನ್ನೆಯಿಂದ ನಡೆಯುತ್ತಿದ್ದು ಎರಡನೇ ದಿನವಾದ ಇಂದು ಬುಧವಾರದ ಶ್ರೀ ದೇವಿಯ ಅಲಂಕಾರ ಮತ್ತು ಪೂಜೆ2
- ಭದ್ರಾವತಿ ತಾಲ್ಲೂಕು ಬಂಜಾರ ಸಂಘ ಹಾಗೂ ಸಮಾಜದ ವತಿಯಿಂದ ಅದ್ದೂರಿಯಾಗಿ ಶ್ರೀ ಸಂತ ಸೇವಾಲಾಲ್ ಮಹಾರಾಜರ ಜಯಂತಿ ಆಚರಣೆ1
- ದಾವಣಗೆರೆ : ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ಜಾತ್ರೆ ಹಿನ್ನೆಲೆಯಲ್ಲಿ ಕಾನೂನು & ಸುವ್ಯವಸ್ಥೆ ಕಾಪಾಡುವ ಹಾಗೂ ಜನರಲ್ಲಿ ಸುರಕ್ಷತೆ ಭಾವನೆ ಕಾಪಾಡುವ ನಿಟ್ಟಿನಲ್ಲಿ ಇಂದು ಬೆಳಗ್ಗೆ ದಾವಣಗೆರೆ ನಗರದಲ್ಲಿ ಎಸ್ಪಿ ಶೇಖರ್ ಹೆಚ್ ಟಿ ಐಪಿಎಸ್ ರವರ ನೇತೃತ್ವದಲ್ಲಿ ಪೊಲೀಸ್ ಪಥ ಸಂಚಲನ ಹಮ್ಮಿಕೊಳ್ಳಲಾಗಿತ್ತು. ಪೊಲೀಸ್ ಫಥ ಸಂಚಲನವು ನಗರದ ಹೊಂಡದ ವೃತ್ತದಿಂದ ಆರಂಭವಾಗಿ ಅಂಬೇಡ್ಕರ್ ವೃತ್ತ, ಹಗೆದಿಬ್ಬ ವೃತ್ತ, ಕಾಳಿಕ ದೇವಿ ರಸ್ತೆ, ಗ್ಯಾಸ್ ಕಟ್ಟೆ ವೃತ್ತ, ಎಸ್ ಕೆ ಪಿ ರಸ್ತೆ ಮೂಲಕ ದರ್ಗಾಂಬಿಕಾ ದೇವಾಸ್ಥಾನ ಮೂಲಕ ನೇರವಾಗಿ ಹೊಂಡದ ವೃತ್ತಕ್ಕೆ ಮುಕ್ತಾಯವಾಗಿತು. ಹಗೆದಿಬ್ಬ ವೃತ್ತ, ಕಾಳಿಕ ದೇವಿ ರಸ್ತೆ, ಗ್ಯಾಸ್ ಕಟ್ಟೆ ವೃತ್ತ, ಎಸ್ ಕೆ ಪಿ ರಸ್ತೆ ಮೂಲಕ ದರ್ಗಾಂಬಿಕಾ ದೇವಾಸ್ಥಾನ ಮೂಲಕ ನೇರವಾಗಿ ಹೊಂಡದ ವೃತ್ತದಲ್ಲಿ ಸಮಾಪ್ತಿಯಾಯಿತು. ಪೊಲೀಸ್ ಪಥ ಸಂಚಲನದಲ್ಲಿ ನಗರ ಡಿವೈಎಸ್ಪಿ ಶರಣಬಸವೇಶ್ವರ ಬಿ ರವರು, ಪೊಲೀಸ್ ನಿರೀಕ್ಷಕರಾದ ಶ್ರೀ ವಸಂತ್, ಶ್ರೀ ಸುನೀಲ್ ಕುಮಾರ್, ಶ್ರೀಮತಿ ಶಿಲ್ಪಾ, ಶ್ರೀ ನಂಜುಂಡಸ್ವಾಮಿ, ಶ್ರೀ ಮಂಜುನಾಥ ಕುಪ್ಪೇಲೂರು, ಪಿ ಎಸ್ ಐ ರವರಾದ ಶ್ರೀ ರವಿನಾಯ್ಕ, ಶ್ರೀ ಸಚಿನ್, ಶ್ರೀ ಮತಿ ಶಕುಂತಲಾ ಇತರರು, ಆರ್ ಎ ಎಫ್ ತಂಡದ ಪೊಲೀಸ್ ನಿರೀಕ್ಷಕರಾದ ಶ್ರೀ ರಾಜು ಹಾಗೂ ಸಿಬ್ಬಂದಿಗಳು, ನಗರ ಪೊಲೀಸ್ ಹಾಗೂ ಡಿ ಎ ಆರ್ ಅಧಿಕಾರಿ ಸಿಬ್ಬಂದಿಗಳು ಭಾಗವಹಿಸಿದ್ದರು. ರಾಜು4
- ಹಾವೇರಿ ಜಿಲ್ಲೆ, ಸವಣೂರು ತಾಲೂಕ್ ಮಾದಾಪುರ ಗ್ರಾಮದ ಲಾಲ್ ಸಾಬ ಉಡೆದ ಎಂಬುವರಿಗೆ ಸೇರಿದ ಗುಡಿಸಲು 5 ಕೆಜಿ ಗ್ಯಾಸ್ ಲೀಕ್ ಆಗಿ ಹೊತ್ತಿ ಉರಿದ ಪರಿಣಾಮ , ಗುಡಿಸಿಲಲ್ಲಿ ಇದ್ದ ಮೆಕ್ಕೆಜೋಳದ ಪಟ್ಟಿ ಗುಡಿಸಲಲ್ಲಿದ್ದ ವಸ್ತುಗಳೆಲ್ಲ ಸುಟ್ಟು ಬಸ್ಮ ಮನೆ ಇಲ್ಲದೆ ಬೀದಿಗೆ ಬಂದ ಕುಟುಂಬ, ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಬೀದಿಗೆ ಬಂದ ಕುಟುಂಬಕ್ಕೆ ಆಸರೆ ನೀಡಬೇಕೆಂದು ನಮ್ಮ ಕಳಕಳಿ,4
- ಭಂದುಗಳೇ. 🙏 ದಿನಾಂಕ 18-2-26ರಂದು 5:30 ಸಮಯ ದಂದು ಹೊಳಲ್ಕೆರೆ -ದಾವಣಗೆರೆ ಮುಖ್ಯ ರಸ್ತೆ ಚಿಕ್ಕಜಾಜೂರು ರೈಲ್ವೆ ಗೇಟ್ ಹತ್ತಿರ ಪೊಲೀಸ್ ರವರು ವಾಹನ ನಿಲ್ಲಿಸಿ ಫೈನ್ ಹಾಕುತ್ತಿದ್ದಾರೆ ಆದರೆ ಇಲ್ಲಿ ಗಮನಿಸಬಹುದು ಎಷ್ಟು ಬೈಕ್ ಸವಾರರು ಹೆಲ್ಮೆಟ್ ಇಲ್ಲದೆ ಪ್ರಯಾಣ ಮಾಡುತ್ತಿದ್ದಾರೆ ಹಾಗೂ ಎಷ್ಟು ಇತರೆ ವಾಹನ ಹೋಗುತ್ತಿದವೇ ಪೋಲೀಸ್ ಅಧಿಕಾರಿಗಳು ಕೇವಲ ಹೊರ ಜಿಲ್ಲೆಯ ವಾಹನ ನಿಲ್ಲಿಸಿ ಫೈನ್ ಹಾಕುವುದು ಎಷ್ಟು ಸರಿ. ಜೈ ಕೆ ಆರ್ ಎಸ್4
- ಬೆಳಗಾವಿ ನಗರದ ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಬಲು ಜೋರಾಗಿ ನಡೆಯುತ್ತಿರುವ ಮಟಕಾ ದಂಧೆ ಕಡಿವಾಣ ಯಾವಾಗ1
- ಬೀಡಾಡಿ ದನಗಳ ಕಾಟಕ್ಕೆ ಬೆಸತ್ತ ಸಾರ್ವಜನಿಕರು. ಬೀಡಾಡಿ ದನಗಳನ್ನ ಹಿಡಿದು ಗೋಶಾಲೆಗೆ ಬಿಡಲು ಮುಂದಾದ ನಗರಸಭೆ.. ಚಳ್ಳಕೆರೆ ನಗರದ ತರಕಾರಿ ಮಾರುಕಟ್ಟೆ ಮುಖ್ಯರಸ್ತೆ ಸೇರಿದಂತೆ ನಗರದ ತುಂಬೆಲ್ಲಾ ಸಾರ್ವಜನಿಕರಿಗೆ ಉಪಟಲ ನೀಡುತ್ತಿದ್ದ ಬೀಡಾಡಿದನಗಳನ್ನ ಹಿಡಿದು ಗೋಶಾಲೆಗೆ ಬೀಡಲು ನಗರಸಭೆ ಮುಂದಾಗಿದೆ. ನಗರಸಭೆ ಪ್ರಭಾರ ಪೌರಯಯಕರಾದ ಡಾ.ನಾಗವೇಣಿ (ಕೆಎಎಸ್) ಇವರ ಸೂಚನೆ ಮೇರೆಗೆ ನಗರಸಭೆ ಇಂಜಿನಿಯರ್ ನರೇಂದ್ರಬಾಬು ಆರೋಗ್ಯ ನಿರೀಕ್ಷಕರಾದ ಗೀತಾ, ಗಣೇಶ್ ಹಾಗೂ ಸಾಗರ್ ಇವರ ನೇತೃತ್ವದಲ್ಲಿ ಚಳ್ಳಕೆರೆ ಪಶು ಸಂಗೋಪನ ಇಲಾಖೆ ಹಾಗೂ ಪೋಲಿಸ್ ಇಲಾಖೆ ಸಹಯೋಗದೊಂದಿಗೆ ಇಂದು ಬೀದಿ ದನಗಳನ್ನು ಹಿಡಿದು ಗೋಶಾಲೆಗೆ ಸಾಗಿಸಲು ಮುಂದಾಗಿದ್ದಾರೆ.. ಇದೆ ತಿಂಗಳು 24 ನೇ ತಾರೀಖಿನ ವರೆಗೆ ಬೀಡಾಡಿದನಗಳನ್ನ ಹಿಡಿದು ಗೋಶಾಲೆಗೆ ಬಿಡಲಾಗುವುದು ಬೀಡಾಡಿದನಗಳ ಮಾಲೀಕರು ಹೆಚ್ಚೆತ್ತುಕೊಂಡು ತಮ್ಮ ಜಾನುವಾರುಗಳನ್ನ ಬೀದಿಗೆ ಬೀಡದಂತೆ ನೋಡಿಕೊಳ್ಳಬೇಕು ಇಲ್ಲವಾದರೆ ಬೀದಿದನಗಳನ್ನ ಮಾಲೀಕರ ಮೇಲೆ ಪ್ರಕರಣ ದಾಖಲಿಸಲಾಗುವುದು ಎಂದು ಪ್ರಬಾರಿ ಪೌರಯುಕ್ತೆ ಡಾ.ನಾಗವೇಣಿ ಎಚ್ಚರಿಕೆ ನೀಡಿದ್ದಾರೆ..1