ಮೈಸೂರು ಜಿಲ್ಲಾ ಸುದ್ದಿ:- ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ 2.76 ಲಕ್ಷ ಹುದ್ದೆಗಳ ಭರ್ತಿಗೆ ಶೀಘ್ರ ಕ್ರಮವಹಿಸಬೇಕೆಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಜಿಲ್ಲಾಧ್ಯಕ್ಷ ರಫತ್ ಖಾನ್ ಆಗ್ರಹಿಸಿದರು. ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು.ಸರ್ಕಾರದ ಅಧಿಕೃತ ಅಂಕಿ ಅಂಶಗಳ ಪ್ರಕಾರ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ 2.76 ಲಕ್ಷ ಹುದ್ದೆಗಳು ಖಾಲಿ ಇವೆ. ಆಡಳಿತದಲ್ಲಿನ ಮೂರನೇ ಒಂದು ಭಾಗದಷ್ಟು ಹುದ್ದೆಗಳು ಭರ್ತಿಯಾಗದೇ ಬಾಕಿ ಉಳಿದಿದೆ ಶೀಘ್ರವಾಗಿ ಹುದ್ದೆಗಳು ಭರ್ತಿಮಾಡಬೇಕೆಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಮೈಸೂರು ಜಿಲ್ಲಾ ಅಧ್ಯಕ್ಷರು ರಫತ್ ಖಾನ್ ಸರ್ಕಾರಕ್ಕೆ ಆಗ್ರಹಿಸಿದರು. ವಿವಿಧ ಇಲಾಖೆಗಳಲ್ಲಿ ಸಿಬ್ಬಂದಿಗಳ ಕೊರತೆಯಿಂದ ಸಾರ್ವಜನಿಕ ಕೆಲಸ ಕಾರ್ಯಗಳಿಗೆ ಅಡ್ಡಿಯಾಗುತ್ತಿರುವ ನಡುವೆಯೇ ಭಾರಿ ಪ್ರಮಾಣದಲ್ಲಿ ಹುದ್ದೆಗಳು ಖಾಲಿಯಾಗಿರುವ ವರದಿಗಳು ದಿಗ್ಭ್ರಮೆ ಮೂಡಿಸಿದೆ. ಸರಿ ಸುಮಾರು 2.76 ಲಕ್ಷ ಹುದ್ದೆಗಳು ಖಾಲಿ ಇವೆ ಎಂದು ವರದಿಗಳು ತಿಳಿಸಿವೆ. ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಒಂದು ವರ್ಷದೊಳಗೆ ಎಲ್ಲಾ ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಭರವಸೆ ನೀಡಿತ್ತು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಈಗ ಒಂದು ವರ್ಷಗಳೆ ಕಳೆದರು ಯಾವುದೆ ಹುದ್ದೆಗಳ ಭರ್ತಿಯ ಸದ್ದುವಿಲ್ಲ. ಖಾಲಿ ಹುದ್ದೆಗಳು ಹೆಚ್ಚಿದ್ದು ಎಲ್ಲವನ್ನೂ ಹೊರಗುತ್ತಿಗೆ ನೀಡಲಾಗುತ್ತಿದೆ. "ಸಿ" ಗ್ರೂಪ್, "ಡಿ" ಗ್ರೂಪ್ ಉದ್ಯೋಗಿಗಳು, ಸ್ಪೆನೋಗ್ರಾಫರ್ ಗಳು, ಟೈಪಿಸ್ಟ್ಗಳು, ಡೈವರ್ಗಳು ಇತ್ಯಾದಿ ಹುದ್ದೆಗಳನ್ನು ಹೊರಗುತ್ತಿಗೆ ನೀಡಲಾಗುತ್ತಿದೆ ರಾಜ್ಯದಲ್ಲಿ ಪದವೀಧರರ ಸಂಖ್ಯೆಯು ಗಣನೀಯವಾಗಿ ಏರಿಕೆಯಾಗುತ್ತಿರುವ ಅಂಕಿ ಅಂಶಗಳು ಕಣ್ಮುಂದೆ ಯೇ ಇದೆ ಆದ್ದರಿಂದ ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರೇ ಎಲ್ಲಾ ಇಲಾಖೆಯ ಖಾಲಿ ಇರುವ ಹುದ್ದೆ ಶೀಘ್ರವಾಗಿ ಭರ್ತಿಮಾಡ ಬೇಕೆಂದರು. ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಲ್ಲಿ ಸುಮಾರು 4159 ಹುದ್ದೆಗಳು ಖಾಲಿ ಇದ್ದು ಹೆಸರಿಗೆ ಮಾತ್ರ ನಾವು ಬಡವರ, ದಲಿತರ, ಅಲ್ಪಸಂಖ್ಯಾತರ ಪರ ಎಂದೆ ಮಾತ್ರ ಬಿಂಬಿಸಿಕೊಳ್ಳುವಂತಹದು ಆದರೆ ಇದು ಯಾವುದೇ ಪರಿಣಾಮಕಾರಿಯಗಿಲ್ಲವೆಂದು ರಾಜ್ಯ ಸರ್ಕಾರದ ವಿರುದ್ಧ ಎಸ್.ಡಿ.ಪಿ.ಐ ಜಿಲ್ಲಾಧ್ಯಕ್ಷ ರಫತ್ ಖಾನ್ ವಾಗ್ದಾಳಿ ನಡೆಸಿದರು. ಸುದ್ದಿಗೋಷ್ಠಿಯಲ್ಲಿ ಎಸ್.ಡಿ.ಪಿ.ಐ ರಾಜ್ಯ ಉಪಾಧ್ಯಕ್ಷ ದೇವನೂರು ಪುಟನಂಜಯ್ಯ, ಜಿಲ್ಲಾ ಉಪಾಧ್ಯಕ್ಷ ಎಸ್.ಸ್ವಾಮಿ, ಜಿಲ್ಲಾ ಮುಖಂಡರಾದ ತಬ್ರೇಜ್ ಸೇಠ್, ಮೊಹಮ್ಮದ್ ಜಹೀರ್ ಹಾಜರಿದ್ದರು. ವರದಿ:- ಮುಹಮ್ಮದ್ ಸಬೀರ್, ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ:- 8123792295

- ಶ್ರೀ ಕ್ಷೇತ್ರ ಟಿನರಸೀಪುರ ಮೈಸೂರು ಜಿಲ್ಲೆ ಕರ್ನಾಟಕ ರಾಜ್ಯ,ಒಮ್ಮೆ ಭೇಟಿ1
- ಮೈಸೂರು : ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಕೂಡಲಿ ಸಂಪುಟದಿಂದ ವಜಾ ಮಾಡಬೇಕೆಂದು ಆಗ್ರಹಿಸಿ|NKS TV41
- ಮೈಸೂರು: ಮಾರಕಾಸ್ತ್ರದಿಂದ ಹಲ್ಲೆ ಮಾಡುತ್ತಿರುವ ವೀಡಿಯೋ ಮೊಬೈಲ್ನಲ್ಲಿ ಸೆರೆ | News Karnataka1
- ಮೈಸೂರು : ಮಾರಕಾಸ್ತ್ರದಿಂದ ಎರಡು ಗುಂಪುಗಳ ನಡುವೆ ಹಲ್ಲೆ ವೀಡಿಯೋ ಸೆರೆ.| News Karnataka1
- new Mysore silk Hospet1
- ಮೈಸೂರು Memories || Mysore || Karnataka #mysore #mysorepalace #karnataka RaghuDixitMusic1
- Mysore Hudga | Yellow line metro | ಹಳದಿ ಮಾರ್ಗದ ಮೆಟ್ರೋ ಜನವರಿ 6 ರಿಂದ ಪ್ರಾರಂಭವಾಗುವುದೇ?1
- ಮೈಸೂರು ಕೇಂದ್ರ ಕಾರಾಗೃಹದ ಮೂವರು ಕೈದಿಗಳಿಗೆ ಚಿಕಿತ್ಸೆ ಫಲಕಾರಿಯಾಗದೆ ಸಾವು1
- Just 300 to 1500 aste🤩❤️💯 komalasneha swethus_rental_outfits 🔥💯1