logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

​ಕೋಲ್ಕತ್ತಾದಲ್ಲಿ ಕುಂದಗೋಳದ ಬಿಎಸ್‌ಎಫ್ ಯೋಧ ಅಕಾಲಿಕ ನಿಧನ: ನಾಳೆ ಸಂಜೆ ಶಿರೂರ ಗ್ರಾಮಕ್ಕೆ ಪಾರ್ಥಿವ ಶರೀರ ಆಗಮನ ​ಕುಂದಗೋಳ: ತಾಲ್ಲೂಕಿನ ಶಿರೂರ ಗ್ರಾಮದ ಹೆಮ್ಮೆಯ ಪುತ್ರ, ಗಡಿ ಭದ್ರತಾ ಪಡೆಯ (ಬಿಎಸ್‌ಎಫ್) ಯೋಧ ಸಂತೋಷ ರಾಮಪ್ಪ ಹೊನ್ನಪ್ಪನವರ ಅವರು ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಕರ್ತವ್ಯದಲ್ಲಿದ್ದಾಗ ಬುಧವಾರ ರಾತ್ರಿ ಅಕಾಲಿಕವಾಗಿ ನಿಧನರಾಗಿದ್ದಾರೆ. ​ಕಳೆದ ೧೩-೧೪ ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಸಂತೋಷ ಅವರು, ದೇಶದ ವಿವಿಧ ಗಡಿ ಭಾಗಗಳಲ್ಲಿ ಅತ್ಯಂತ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿದ್ದರು. ಸದ್ಯ ಕೋಲ್ಕತ್ತಾದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅವರು, ನಿನ್ನೆ ರಾತ್ರಿ ಕೊನೆಯುಸಿರೆಳೆದಿದ್ದಾರೆ ಎಂಬ ಸುದ್ದಿ ತಿಳಿದು ಗ್ರಾಮಸ್ಥರು ಹಾಗೂ ಕುಟುಂಬದವರು ಆಘಾತಕ್ಕೊಳಗಾಗಿದ್ದಾರೆ. ​ಕುಟುಂಬದ ಆಧಾರಸ್ತಂಭ: ಮೃತ ಯೋಧ ಸಂತೋಷ ಅವರು ಅಂದಾಜು ೭-೮ ವರ್ಷಗಳ ಹಿಂದೆ ವಿವಾಹವಾಗಿದ್ದರು. ಇವರಿಗೆ ಪತ್ನಿ ಹಾಗೂ ಒಂದು ಪುಟ್ಟ ಮಗು ಇದೆ. ದೇಶಸೇವೆಯಲ್ಲಿದ್ದ ಯುವಕನ ಅಕಾಲಿಕ ನಿರ್ಗಮನದಿಂದ ಶಿರೂರ ಗ್ರಾಮದಲ್ಲಿ ಶೋಕದ ಛಾಯೆ ಆವರಿಸಿದೆ. ​ನಾಳೆ ಅಂತ್ಯಕ್ರಿಯೆ ಸಾಧ್ಯತೆ: ಯೋಧನ ಪಾರ್ಥಿವ ಶರೀರವು ಶುಕ್ರವಾರ (ನಾಳೆ) ಸಂಜೆಯ ವೇಳೆಗೆ ಸ್ವಗ್ರಾಮ ಶಿರೂರಕ್ಕೆ ಆಗಮಿಸುವ ನಿರೀಕ್ಷೆಯಿದೆ. ಗ್ರಾಮಕ್ಕೆ ಪಾರ್ಥಿವ ಶರೀರ ಬಂದ ನಂತರ ಸಕಲ ಸರ್ಕಾರಿ ಹಾಗೂ ಮಿಲಿಟರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಲಿದೆ ಎಂದು ಮೂಲಗಳು ತಿಳಿಸಿವೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ತಾಲ್ಲೂಕಿನ ಗಣ್ಯರು ಹಾಗೂ ಸಾರ್ವಜನಿಕರು ಕಂಬನಿ ಮಿಡಿದಿದ್ದಾರೆ.

4 hrs ago
user_Girish Ghatage
Girish Ghatage
Reporter in media line ಧಾರವಾಡ, ಧಾರವಾಡ, ಕರ್ನಾಟಕ•
4 hrs ago
0b77858b-339d-4dca-b4ac-71e88cba6975

​ಕೋಲ್ಕತ್ತಾದಲ್ಲಿ ಕುಂದಗೋಳದ ಬಿಎಸ್‌ಎಫ್ ಯೋಧ ಅಕಾಲಿಕ ನಿಧನ: ನಾಳೆ ಸಂಜೆ ಶಿರೂರ ಗ್ರಾಮಕ್ಕೆ ಪಾರ್ಥಿವ ಶರೀರ ಆಗಮನ ​ಕುಂದಗೋಳ: ತಾಲ್ಲೂಕಿನ ಶಿರೂರ ಗ್ರಾಮದ ಹೆಮ್ಮೆಯ ಪುತ್ರ, ಗಡಿ ಭದ್ರತಾ ಪಡೆಯ (ಬಿಎಸ್‌ಎಫ್) ಯೋಧ ಸಂತೋಷ ರಾಮಪ್ಪ ಹೊನ್ನಪ್ಪನವರ ಅವರು ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಕರ್ತವ್ಯದಲ್ಲಿದ್ದಾಗ ಬುಧವಾರ ರಾತ್ರಿ ಅಕಾಲಿಕವಾಗಿ ನಿಧನರಾಗಿದ್ದಾರೆ. ​ಕಳೆದ ೧೩-೧೪ ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಸಂತೋಷ ಅವರು, ದೇಶದ ವಿವಿಧ ಗಡಿ ಭಾಗಗಳಲ್ಲಿ ಅತ್ಯಂತ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿದ್ದರು. ಸದ್ಯ ಕೋಲ್ಕತ್ತಾದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅವರು, ನಿನ್ನೆ ರಾತ್ರಿ ಕೊನೆಯುಸಿರೆಳೆದಿದ್ದಾರೆ ಎಂಬ ಸುದ್ದಿ ತಿಳಿದು ಗ್ರಾಮಸ್ಥರು ಹಾಗೂ ಕುಟುಂಬದವರು ಆಘಾತಕ್ಕೊಳಗಾಗಿದ್ದಾರೆ. ​ಕುಟುಂಬದ ಆಧಾರಸ್ತಂಭ: ಮೃತ ಯೋಧ ಸಂತೋಷ ಅವರು ಅಂದಾಜು ೭-೮ ವರ್ಷಗಳ ಹಿಂದೆ ವಿವಾಹವಾಗಿದ್ದರು. ಇವರಿಗೆ ಪತ್ನಿ ಹಾಗೂ ಒಂದು ಪುಟ್ಟ ಮಗು ಇದೆ. ದೇಶಸೇವೆಯಲ್ಲಿದ್ದ ಯುವಕನ ಅಕಾಲಿಕ ನಿರ್ಗಮನದಿಂದ ಶಿರೂರ ಗ್ರಾಮದಲ್ಲಿ ಶೋಕದ ಛಾಯೆ ಆವರಿಸಿದೆ. ​ನಾಳೆ ಅಂತ್ಯಕ್ರಿಯೆ ಸಾಧ್ಯತೆ: ಯೋಧನ ಪಾರ್ಥಿವ ಶರೀರವು ಶುಕ್ರವಾರ (ನಾಳೆ) ಸಂಜೆಯ ವೇಳೆಗೆ ಸ್ವಗ್ರಾಮ ಶಿರೂರಕ್ಕೆ ಆಗಮಿಸುವ ನಿರೀಕ್ಷೆಯಿದೆ. ಗ್ರಾಮಕ್ಕೆ ಪಾರ್ಥಿವ ಶರೀರ ಬಂದ ನಂತರ ಸಕಲ ಸರ್ಕಾರಿ ಹಾಗೂ ಮಿಲಿಟರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಲಿದೆ ಎಂದು ಮೂಲಗಳು ತಿಳಿಸಿವೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ತಾಲ್ಲೂಕಿನ ಗಣ್ಯರು ಹಾಗೂ ಸಾರ್ವಜನಿಕರು ಕಂಬನಿ ಮಿಡಿದಿದ್ದಾರೆ.

More news from ಕರ್ನಾಟಕ and nearby areas
  • ​ಕುಂದಗೋಳ: ಗ್ರಾಮೀಣ ಭಾಗದ ಜನರಿಗೆ ವಿಶೇಷವಾಗಿ ಮಳೆಗಾಲದಲ್ಲಿ ಎದುರಾಗುವ ಸಂಚಾರದ ಸಂಕಷ್ಟಗಳನ್ನು ತಪ್ಪಿಸಲು, ಗ್ರಾಮದಿಂದ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳ ನಿರ್ಮಾಣಕ್ಕೆ ನನ್ನ ಅಧಿಕಾರ ಅವಧಿಯಲ್ಲಿ ಮೊದಲ ಆದ್ಯತೆ ನೀಡಲಾಗುತ್ತಿದೆ ಎಂದು ಶಾಸಕ ಎಂ.ಆರ್. ಪಾಟೀಲ್ ಅವರು ಪ್ರತಿಪಾದಿಸಿದರು. ಮಂಗಳವಾರದಂದು ​ತಾಲ್ಲೂಕಿನ ಕಳಸ-ಸಂಕ್ಲೀಪೂರ ರಸ್ತೆಯ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಈ ಭಾಗದ ರಸ್ತೆ ಅಭಿವೃದ್ಧಿಗಾಗಿ ಗ್ರಾಮಸ್ಥರು ಮನವಿ ಸಲ್ಲಿಸಿದಾಗ ಉತ್ತಮ ರಸ್ತೆ ನಿರ್ಮಿಸಿಕೊಡುವ ಭರವಸೆ ನೀಡಿದ್ದೆ. ಅದರಂತೆ ಇಂದು ರಾಜ್ಯ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯ ಲೆಕ್ಕ ಶೀರ್ಷಿಕೆ 5054ರ ಅಡಿಯಲ್ಲಿ ಅಂದಾಜು 1 ಕೋಟಿ 50 ಲಕ್ಷ ರೂಪಾಯಿಗಳ ವೆಚ್ಚದ ಸಿಸಿ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಲಾಗುತ್ತಿದೆ ಎಂದು ತಿಳಿಸಿದರು. ​ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಈ ರಸ್ತೆ ಬೇಡಿಕೆ ಈಗ ಈಡೇರುತ್ತಿರುವುದು ಗ್ರಾಮಸ್ಥರಲ್ಲಿ ಸಂತಸ ತಂದಿದೆ. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮಹಮ್ಮದ್ ಅಲಿ ಚಾಂದಖಾನವರ, ಮಲ್ಲಿಕಾರ್ಜುನ ಪ್ಯಾಟಿ, ಯಲ್ಲರೆಡ್ಡಿ ಯರಗುಪ್ಪಿ, ಅಖಂಡಪ್ಪ ಕಳಸೂರ, ಯಲ್ಲಪ್ಪ ಹೊಸಮನಿ, ಬಸವರಾಜ ಅಂಗಡಿ, ಅಶೋಕ ದೊಡ್ಡಮಲ್ಲಪ್ಪನವರ, ಸತೀಶ್ ಪಾಟೀಲ್ ಸೇರಿದಂತೆ ಪ್ರಮುಖರು ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು
    1
    ​ಕುಂದಗೋಳ: ಗ್ರಾಮೀಣ ಭಾಗದ ಜನರಿಗೆ ವಿಶೇಷವಾಗಿ ಮಳೆಗಾಲದಲ್ಲಿ ಎದುರಾಗುವ ಸಂಚಾರದ ಸಂಕಷ್ಟಗಳನ್ನು ತಪ್ಪಿಸಲು, ಗ್ರಾಮದಿಂದ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳ ನಿರ್ಮಾಣಕ್ಕೆ ನನ್ನ ಅಧಿಕಾರ ಅವಧಿಯಲ್ಲಿ ಮೊದಲ ಆದ್ಯತೆ ನೀಡಲಾಗುತ್ತಿದೆ ಎಂದು ಶಾಸಕ ಎಂ.ಆರ್. ಪಾಟೀಲ್ ಅವರು ಪ್ರತಿಪಾದಿಸಿದರು.
ಮಂಗಳವಾರದಂದು ​ತಾಲ್ಲೂಕಿನ ಕಳಸ-ಸಂಕ್ಲೀಪೂರ ರಸ್ತೆಯ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಈ ಭಾಗದ ರಸ್ತೆ ಅಭಿವೃದ್ಧಿಗಾಗಿ ಗ್ರಾಮಸ್ಥರು ಮನವಿ ಸಲ್ಲಿಸಿದಾಗ ಉತ್ತಮ ರಸ್ತೆ ನಿರ್ಮಿಸಿಕೊಡುವ ಭರವಸೆ ನೀಡಿದ್ದೆ. ಅದರಂತೆ ಇಂದು ರಾಜ್ಯ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯ ಲೆಕ್ಕ ಶೀರ್ಷಿಕೆ 5054ರ ಅಡಿಯಲ್ಲಿ ಅಂದಾಜು 1 ಕೋಟಿ 50 ಲಕ್ಷ ರೂಪಾಯಿಗಳ ವೆಚ್ಚದ ಸಿಸಿ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಲಾಗುತ್ತಿದೆ ಎಂದು ತಿಳಿಸಿದರು.
​ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಈ ರಸ್ತೆ ಬೇಡಿಕೆ ಈಗ ಈಡೇರುತ್ತಿರುವುದು ಗ್ರಾಮಸ್ಥರಲ್ಲಿ ಸಂತಸ ತಂದಿದೆ. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮಹಮ್ಮದ್ ಅಲಿ ಚಾಂದಖಾನವರ, ಮಲ್ಲಿಕಾರ್ಜುನ ಪ್ಯಾಟಿ, ಯಲ್ಲರೆಡ್ಡಿ ಯರಗುಪ್ಪಿ, ಅಖಂಡಪ್ಪ ಕಳಸೂರ, ಯಲ್ಲಪ್ಪ ಹೊಸಮನಿ, ಬಸವರಾಜ ಅಂಗಡಿ, ಅಶೋಕ ದೊಡ್ಡಮಲ್ಲಪ್ಪನವರ, ಸತೀಶ್ ಪಾಟೀಲ್ ಸೇರಿದಂತೆ ಪ್ರಮುಖರು ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು
    user_Girish Ghatage
    Girish Ghatage
    Reporter in media line ಧಾರವಾಡ, ಧಾರವಾಡ, ಕರ್ನಾಟಕ•
    12 hrs ago
  • ಧಾರವಾಡ: ಎಲ್ಲ ಶಾಸಕರು ಸಚಿವರಾಗಲು ಅರ್ಹತೆ ಪಡೆದಿದ್ದಾರೆ. ಶಾಸಕರು ಸಚಿವ ಸ್ಥಾನ ಕೇಳುವುದು ತಪ್ಪಲ್ಲ ಎಂದು ಸಚಿವ ಸಂತೋಷ ಲಾಡ್ ಹೇಳಿದರು. ಧಾರವಾಡ ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಎಲ್ಲ ಶಾಸಕರಿಗೂ ಸಚಿವರಾಗುವ ಅರ್ಹತೆ ಇದೆ. ಅದು ಹೊಸಬರಿರಲಿ, ಫಸ್ಟ್ ಟೈಮ್ ಶಾಸಕರಾದವರಿರಲಿ. ಅವರಿಗೆ ಸಚಿವರಾಗಬೇಕು ಎಂಬ ಆಸೆ ಇದೆ. ಡಿಕೆಶಿ ಅವರ ಹೇಳಿಕೆ ಕೂಡ ನಾನು ನೋಡಿದೆ. ಏನೇ ಮಾಡಿದರೂ ಒಂದು ಲಿಮಿಟ್ಸ್ ಹಾಗೂ ಪಾರ್ಟಿ ಚೌಕಟ್ಟಿನಲ್ಲೇ ಎಲ್ಲವನ್ನೂ ಮಾತನಾಡಬೇಕು ಎಂದಿದ್ದಾರೆ. ಪಾರ್ಟಿ ಚೌಕಟ್ಟು ಬಿಟ್ಟು ವಿಷಯಗಳು ಹೊರ ಹೋಗಬಾರದು ಎಂದು ಅವರು ಹೇಳಿದ್ದಾರೆ. ಹೈಕಮಾಂಡ್‌ಗೆ ನಮ್ಮನ್ನೂ ಸಚಿವರನ್ನಾಗಿ ಮಾಡಲಿ ಎಂದು ಶಾಸಕರು ಹೋಗಿದ್ದಾರೆ. ಕೇಳುವ ಅಧಿಕಾರ ಎಲ್ಲರಿಗೂ ಇದೆ. ಅದೇ ಕಾರಣಕ್ಕೆ ಶಾಸಕರು ಹೋಗಿದ್ದಾರೆ ಅದೇನು ತಪ್ಪಲ್ಲ ಎಂದು ತಿಳಿಸಿದರು.
    1
    ಧಾರವಾಡ: ಎಲ್ಲ ಶಾಸಕರು ಸಚಿವರಾಗಲು ಅರ್ಹತೆ ಪಡೆದಿದ್ದಾರೆ. ಶಾಸಕರು ಸಚಿವ ಸ್ಥಾನ ಕೇಳುವುದು ತಪ್ಪಲ್ಲ ಎಂದು ಸಚಿವ ಸಂತೋಷ ಲಾಡ್ ಹೇಳಿದರು. ಧಾರವಾಡ ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಎಲ್ಲ ಶಾಸಕರಿಗೂ ಸಚಿವರಾಗುವ ಅರ್ಹತೆ ಇದೆ. ಅದು ಹೊಸಬರಿರಲಿ, ಫಸ್ಟ್ ಟೈಮ್ ಶಾಸಕರಾದವರಿರಲಿ. ಅವರಿಗೆ ಸಚಿವರಾಗಬೇಕು ಎಂಬ ಆಸೆ ಇದೆ. ಡಿಕೆಶಿ ಅವರ ಹೇಳಿಕೆ ಕೂಡ ನಾನು ನೋಡಿದೆ. ಏನೇ ಮಾಡಿದರೂ ಒಂದು ಲಿಮಿಟ್ಸ್ ಹಾಗೂ ಪಾರ್ಟಿ ಚೌಕಟ್ಟಿನಲ್ಲೇ ಎಲ್ಲವನ್ನೂ ಮಾತನಾಡಬೇಕು ಎಂದಿದ್ದಾರೆ. ಪಾರ್ಟಿ ಚೌಕಟ್ಟು ಬಿಟ್ಟು ವಿಷಯಗಳು ಹೊರ ಹೋಗಬಾರದು ಎಂದು ಅವರು ಹೇಳಿದ್ದಾರೆ. ಹೈಕಮಾಂಡ್‌ಗೆ ನಮ್ಮನ್ನೂ ಸಚಿವರನ್ನಾಗಿ ಮಾಡಲಿ ಎಂದು ಶಾಸಕರು ಹೋಗಿದ್ದಾರೆ. ಕೇಳುವ ಅಧಿಕಾರ ಎಲ್ಲರಿಗೂ ಇದೆ. ಅದೇ ಕಾರಣಕ್ಕೆ ಶಾಸಕರು ಹೋಗಿದ್ದಾರೆ ಅದೇನು ತಪ್ಪಲ್ಲ  ಎಂದು ತಿಳಿಸಿದರು.
    user_Manjunath kavali
    Manjunath kavali
    Local News Reporter ಧಾರವಾಡ, ಧಾರವಾಡ, ಕರ್ನಾಟಕ•
    22 hrs ago
  • ನಡೆಸಿರುವ ದಬ್ಬಾಳಿಕೆ ದೌರ್ಜನ್ಯದ ವಿರುದ್ಧ ಪ್ರಜಾಪ್ರಭುತ್ವದ ದಲ್ಲಿಪ್ರಶ್ನೆ ಕೇಳಿಕೊಂಡು ಪತ್ರ ಕೊಡಲು ಬಂದಿರುವ ಕೆಆರ್‌ಎಸ್ ಪಕ್ಷದ ಸೈನಿಕರು
    1
    ನಡೆಸಿರುವ ದಬ್ಬಾಳಿಕೆ ದೌರ್ಜನ್ಯದ ವಿರುದ್ಧ ಪ್ರಜಾಪ್ರಭುತ್ವದ ದಲ್ಲಿಪ್ರಶ್ನೆ ಕೇಳಿಕೊಂಡು ಪತ್ರ ಕೊಡಲು ಬಂದಿರುವ ಕೆಆರ್‌ಎಸ್ ಪಕ್ಷದ ಸೈನಿಕರು
    user_874792
    874792
    Farmer ಹಳಿಯಾಳ, ಉತ್ತರ ಕನ್ನಡ, ಕರ್ನಾಟಕ•
    22 hrs ago
  • Post by Onlinetv24x7
    1
    Post by Onlinetv24x7
    user_Onlinetv24x7
    Onlinetv24x7
    ಹಾಸನ, ಹಾಸನ, ಕರ್ನಾಟಕ•
    8 hrs ago
  • ಬಿಸಿಲಿನ ತೀವ್ರತೆ ಹೆಚ್ಚಿರುವ ಕಾರಣ, ಸರ್ಕಾರಿ ಕಚೇರಿಗಳ ಕಾರ್ಯನಿರ್ವಹಣಾ ಅವಧಿಯನ್ನು ​ಹೊಸ ಸಮಯ: ಇನ್ಮುಂದೆ ಬೆಳಿಗ್ಗೆ 8:00 ಗಂಟೆಯಿಂದ ಮಧ್ಯಾಹ್ನ 1:30 ರವರೆಗೆ ನಿಗದಿ ಮಾಡಿ ಯಂದು ಕೇಳಿಕೊಳ್ಳುತ್ತಿದ್ದಾರೆ ಮಧ್ಯಾಹ್ನದ ಸುಡುವ ಬಿಸಿಲಿನಿಂದ ನೌಕರರನ್ನು ಮತ್ತು ದೂರದ ಊರುಗಳಿಂದ ಬರುವ ಜನರನ್ನು ರಕ್ಷಿಸುವುದು ಈ ಬದಲಾವಣೆಯ ಹಿಂದಿನ ಮುಖ್ಯ ಉದ್ದೇಶವಾಗಿದೆ. ​ "ಜನಸಾಮಾನ್ಯರ ಆರೋಗ್ಯ ಮತ್ತು ಕೆಲಸದ ದಕ್ಷತೆಯನ್ನು ಕಾಪಾಡಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಬಿಸಿಲು ಕಡಿಮೆಯಾಗುವವರೆಗೆ ಈ ಹೊಸ ವೇಳಾಪಟ್ಟಿ ಜಾರಿಗೆ ತರಬಹುದು ​ ಬಿಸಿಲಿನಿಂದ ರಕ್ಷಿಸಿಕೊಳ್ಳಲು ಜನರು ಹೆಚ್ಚಿನ ಪ್ರಮಾಣದಲ್ಲಿ ನೀರು ಸೇವಿಸಬೇಕು ಮತ್ತು ಅನಗತ್ಯವಾಗಿ ಮಧ್ಯಾಹ್ನ ಹೊರಬರಬಾರದು ಎಂದು ಆರೋಗ್ಯ ಇಲಾಖೆ ಕೂಡ ಸೂಚಿಸಿದೆ. ಈ ಸಮಯದ ಬದಲಾವಣೆಯನ್ನ ಮಾಡುವಂತೆ ಸರ್ಕಾರಕ್ಕೆ ಬಸವರಾಜ ಬಳ್ಳಾರಿ ಗದಗ ಜಿಲ್ಲಾ ನೌಕರರ ಸಂಘದ ಅಧ್ಯಕ್ಷೆರು ಸರ್ಕಾರ ಕ್ಕೆ ಮನವಿ ಮಾಡಿದ್ದಾರೆ ಸರ್ಕಾರ ಸಮಯ ಬದಲಾವಣೆ ಮಾಡುತ್ತಾ ಕಾದು ನೋಡಬೇಕಿದೆ ಮತ್ತು ಸರ್ಕಾರಿ ಕೆಲಸಗಳಿಗೆ ಬರುವ ಜನರಿಗೆ ಎಷ್ಟರ ಮಟ್ಟಿಗೆ ಸಹಕಾರಿಯಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
    1
    ಬಿಸಿಲಿನ ತೀವ್ರತೆ ಹೆಚ್ಚಿರುವ ಕಾರಣ, ಸರ್ಕಾರಿ ಕಚೇರಿಗಳ ಕಾರ್ಯನಿರ್ವಹಣಾ ಅವಧಿಯನ್ನು 
​ಹೊಸ ಸಮಯ: ಇನ್ಮುಂದೆ ಬೆಳಿಗ್ಗೆ 8:00 ಗಂಟೆಯಿಂದ ಮಧ್ಯಾಹ್ನ 1:30 ರವರೆಗೆ ನಿಗದಿ ಮಾಡಿ ಯಂದು ಕೇಳಿಕೊಳ್ಳುತ್ತಿದ್ದಾರೆ 
ಮಧ್ಯಾಹ್ನದ ಸುಡುವ ಬಿಸಿಲಿನಿಂದ ನೌಕರರನ್ನು ಮತ್ತು ದೂರದ ಊರುಗಳಿಂದ ಬರುವ ಜನರನ್ನು ರಕ್ಷಿಸುವುದು ಈ ಬದಲಾವಣೆಯ ಹಿಂದಿನ ಮುಖ್ಯ ಉದ್ದೇಶವಾಗಿದೆ.
​
"ಜನಸಾಮಾನ್ಯರ ಆರೋಗ್ಯ ಮತ್ತು ಕೆಲಸದ ದಕ್ಷತೆಯನ್ನು ಕಾಪಾಡಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಬಿಸಿಲು ಕಡಿಮೆಯಾಗುವವರೆಗೆ ಈ ಹೊಸ ವೇಳಾಪಟ್ಟಿ ಜಾರಿಗೆ ತರಬಹುದು 
​
ಬಿಸಿಲಿನಿಂದ ರಕ್ಷಿಸಿಕೊಳ್ಳಲು ಜನರು ಹೆಚ್ಚಿನ ಪ್ರಮಾಣದಲ್ಲಿ ನೀರು ಸೇವಿಸಬೇಕು ಮತ್ತು ಅನಗತ್ಯವಾಗಿ ಮಧ್ಯಾಹ್ನ ಹೊರಬರಬಾರದು ಎಂದು ಆರೋಗ್ಯ ಇಲಾಖೆ ಕೂಡ ಸೂಚಿಸಿದೆ. ಈ ಸಮಯದ ಬದಲಾವಣೆಯನ್ನ ಮಾಡುವಂತೆ ಸರ್ಕಾರಕ್ಕೆ ಬಸವರಾಜ ಬಳ್ಳಾರಿ ಗದಗ ಜಿಲ್ಲಾ ನೌಕರರ ಸಂಘದ ಅಧ್ಯಕ್ಷೆರು ಸರ್ಕಾರ ಕ್ಕೆ ಮನವಿ ಮಾಡಿದ್ದಾರೆ ಸರ್ಕಾರ ಸಮಯ ಬದಲಾವಣೆ ಮಾಡುತ್ತಾ ಕಾದು ನೋಡಬೇಕಿದೆ ಮತ್ತು ಸರ್ಕಾರಿ ಕೆಲಸಗಳಿಗೆ ಬರುವ ಜನರಿಗೆ ಎಷ್ಟರ ಮಟ್ಟಿಗೆ ಸಹಕಾರಿಯಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
    user_Udachappa tigari
    Udachappa tigari
    Photographer ಮುಂಡರಗಿ, ಗದಗ, ಕರ್ನಾಟಕ•
    18 hrs ago
  • |ಕೊ*ಲೆ ಪ್ರಕರಣದಲ್ಲಿ ದೋಷಿ ಎಂದು ತೀರ್ಪು ಬಂದ ಬೆನ್ನಲ್ಲೇ ಬೆಳಗಾವಿಯ 2ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ದೋಷಿಗಳ ದರ್ಪ ಟಿವಿ ಮಾಧ್ಯಮದವರ ಮೇಲೆ ದರ್ಪ|
    1
    |ಕೊ*ಲೆ ಪ್ರಕರಣದಲ್ಲಿ ದೋಷಿ ಎಂದು ತೀರ್ಪು ಬಂದ ಬೆನ್ನಲ್ಲೇ ಬೆಳಗಾವಿಯ 2ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ದೋಷಿಗಳ ದರ್ಪ ಟಿವಿ ಮಾಧ್ಯಮದವರ ಮೇಲೆ ದರ್ಪ|
    user_ಭೀಮ ಬಲ ನ್ಯೂಸ್ 24×7 ಕನ್ನಡ
    ಭೀಮ ಬಲ ನ್ಯೂಸ್ 24×7 ಕನ್ನಡ
    ಬಾಗಲಕೋಟೆ, ಬಾಗಲಕೋಟೆ, ಕರ್ನಾಟಕ•
    56 min ago
  • ಗುಳೇದಗುಡ್ಡ: ಪಟ್ಟಣದ ಶ್ರೀಕಾಡಸಿದ್ದೇಶ್ವರ ಮರಡಿಮಠದ ಮೌನಯೋಗಿ 10ನೇ ಶ್ರೀ ಕಾಡಸಿದ್ದೇಶ್ವರರ ಪುಣ್ಯಸ್ಮರಣೋತ್ಸವ ಹಾಗೂ ರಥೋತ್ಸವದ ಅಂಗವಾಗಿ ಗುರುವಾರ ಬೆಳಿಗ್ಗೆ ಮರಡಿಮಠದಲ್ಲಿ ಜಂಗಮ ಸಮಾಜದ ವಟುಗಳಿಗೆ ಅಯ್ಯಾಚಾರ ಹಾಗೂ ಶಿವಧೀಕ್ಷೆ ನಡೆಯಿತು. ಕಾರ್ಯಕ್ರಮದಲ್ಲಿ ಮರಡಿಮಠದ ಅಭಿನವ ಕಾಡಸಿದ್ದೇಶ್ವರ ಶ್ರೀಗಳು, ರುದ್ರಮುನಿ ದೇವರು, ಚರಮೂರ್ತಿ ದೇವರು ನಿರುಪಾದಿ,ದೇವರು, ಶಿವಾನಂದ ದೇವರು ಸಾನಿಧ್ಯ ವಹಿಸಿದ್ದರು. ಈ ಸಂದರ್ಭದಲ್ಲಿ ಗಂಗಯ್ಯ ಪೂಜಾರಿ, ವಿ.ಎಸ್ ಹಿರೇಮಠ, ಸಿದ್ದಲಿಂಗಯ್ಯ ಬೂದಿಹಾಳಮಠ, ಚಂದ್ರಶೇಖರ ಜಂಗಮರ ಮತ್ತಿತರರು ಇದ್ದರು.
    1
    ಗುಳೇದಗುಡ್ಡ: ಪಟ್ಟಣದ ಶ್ರೀಕಾಡಸಿದ್ದೇಶ್ವರ ಮರಡಿಮಠದ  ಮೌನಯೋಗಿ 10ನೇ ಶ್ರೀ ಕಾಡಸಿದ್ದೇಶ್ವರರ ಪುಣ್ಯಸ್ಮರಣೋತ್ಸವ ಹಾಗೂ ರಥೋತ್ಸವದ ಅಂಗವಾಗಿ ಗುರುವಾರ ಬೆಳಿಗ್ಗೆ ಮರಡಿಮಠದಲ್ಲಿ  ಜಂಗಮ ಸಮಾಜದ ವಟುಗಳಿಗೆ ಅಯ್ಯಾಚಾರ ಹಾಗೂ ಶಿವಧೀಕ್ಷೆ ನಡೆಯಿತು.
ಕಾರ್ಯಕ್ರಮದಲ್ಲಿ ಮರಡಿಮಠದ ಅಭಿನವ ಕಾಡಸಿದ್ದೇಶ್ವರ ಶ್ರೀಗಳು,  ರುದ್ರಮುನಿ ದೇವರು, ಚರಮೂರ್ತಿ ದೇವರು ನಿರುಪಾದಿ,ದೇವರು,  ಶಿವಾನಂದ  ದೇವರು ಸಾನಿಧ್ಯ ವಹಿಸಿದ್ದರು.
ಈ ಸಂದರ್ಭದಲ್ಲಿ ಗಂಗಯ್ಯ ಪೂಜಾರಿ, ವಿ.ಎಸ್  ಹಿರೇಮಠ, ಸಿದ್ದಲಿಂಗಯ್ಯ ಬೂದಿಹಾಳಮಠ, ಚಂದ್ರಶೇಖರ ಜಂಗಮರ ಮತ್ತಿತರರು ಇದ್ದರು.
    user_ಹುಚ್ಚೇಶ ಮಲ್ಲಪ್ಪ ಯಂಡಿಗೇರಿ
    ಹುಚ್ಚೇಶ ಮಲ್ಲಪ್ಪ ಯಂಡಿಗೇರಿ
    ಗೂಳೇದಗುಡ್ಡ, ಬಾಗಲಕೋಟೆ, ಕರ್ನಾಟಕ•
    5 hrs ago
  • ಧಾರವಾಡ: ಮನೆ ಮುಂದೆ ನಿಲ್ಲಿಸಿದ್ದ ಎರಡು ಬೈಕ್‌ಗಳಿಗೆ ದುಷ್ಕರ್ಮಿಗಳು ಬೆಂಕಿ ಇಟ್ಟ ಪರಿಣಾಮ ಎರಡೂ ಬೈಕ್‌ಗಳು ಸಂಪೂರ್ಣ ಸುಟ್ಟು ಕರಕಲಾದ ಘಟನೆ ಧಾರವಾಡದ ಮೆಹಬೂಬ್‌ನಗರದಲ್ಲಿ ನಡೆದಿದೆ. ಸಾದಿಕ್ ಶೆರೆವಾಡ ಎಂಬುವವರ ಮನೆ ಎದುರು ನಿಲ್ಲಿಸಿದ್ದ ಎರಡು ಬೈಕ್‌ಗಳಿಗೆ ಬೆಂಕಿ ಹಚ್ಚಲಾಗಿದೆ. ಮೊದಲು ಮನೆ ಮೇಲೆ ಕಲ್ಲು ತೂರಾಟ ನಡೆಸಿದ ದುಷ್ಕರ್ಮಿಗಳು ಆನಂತರ ಎರಡೂ ಬೈಕ್‌ಗಳಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ತಡರಾತ್ರಿ ಏಳೆಂಟು ಜನರ ತಂಡದಿಂದ ಈ ಕೃತ್ಯ ನಡೆದಿದೆ. ಸದ್ಯ ಸ್ಥಳಕ್ಕೆ ಎಸಿಪಿ ಪ್ರಶಾಂತ ಸಿದ್ಧನಗೌಡರ, ಸಿಪಿಐ ಪ್ರಭು ಗಂಗೇನಳ್ಳಿ ಅವರು ಭೇಟಿ ನೀಡಿ ಸಿಸಿಟಿವಿ ದೃಶ್ಯ ಸೇರಿದಂತೆ ಇತರ ಸಾಕ್ಷ್ಯಗಳ ಪರಿಶೀಲನೆ ನಡೆಸಿದ್ದಾರೆ. ಧಾರವಾಡ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
    1
    ಧಾರವಾಡ: ಮನೆ ಮುಂದೆ ನಿಲ್ಲಿಸಿದ್ದ ಎರಡು ಬೈಕ್‌ಗಳಿಗೆ ದುಷ್ಕರ್ಮಿಗಳು ಬೆಂಕಿ ಇಟ್ಟ ಪರಿಣಾಮ ಎರಡೂ ಬೈಕ್‌ಗಳು ಸಂಪೂರ್ಣ ಸುಟ್ಟು ಕರಕಲಾದ ಘಟನೆ ಧಾರವಾಡದ ಮೆಹಬೂಬ್‌ನಗರದಲ್ಲಿ ನಡೆದಿದೆ.
ಸಾದಿಕ್ ಶೆರೆವಾಡ ಎಂಬುವವರ ಮನೆ ಎದುರು ನಿಲ್ಲಿಸಿದ್ದ ಎರಡು ಬೈಕ್‌ಗಳಿಗೆ ಬೆಂಕಿ ಹಚ್ಚಲಾಗಿದೆ. ಮೊದಲು ಮನೆ ಮೇಲೆ ಕಲ್ಲು ತೂರಾಟ ನಡೆಸಿದ ದುಷ್ಕರ್ಮಿಗಳು ಆನಂತರ ಎರಡೂ ಬೈಕ್‌ಗಳಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ.
ತಡರಾತ್ರಿ ಏಳೆಂಟು ಜನರ ತಂಡದಿಂದ ಈ ಕೃತ್ಯ ನಡೆದಿದೆ. ಸದ್ಯ ಸ್ಥಳಕ್ಕೆ ಎಸಿಪಿ ಪ್ರಶಾಂತ ಸಿದ್ಧನಗೌಡರ, ಸಿಪಿಐ ಪ್ರಭು ಗಂಗೇನಳ್ಳಿ ಅವರು ಭೇಟಿ ನೀಡಿ ಸಿಸಿಟಿವಿ ದೃಶ್ಯ ಸೇರಿದಂತೆ ಇತರ ಸಾಕ್ಷ್ಯಗಳ ಪರಿಶೀಲನೆ ನಡೆಸಿದ್ದಾರೆ. ಧಾರವಾಡ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
    user_Manjunath kavali
    Manjunath kavali
    Local News Reporter ಧಾರವಾಡ, ಧಾರವಾಡ, ಕರ್ನಾಟಕ•
    22 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.