ಹೆಣ್ಣುಮಕ್ಕಳ ರಕ್ಷಣೆಗೆ ಎಚ್‌ಪಿವಿ ಲಸಿಕೆ ಅತ್ಯಗತ್ಯ; ಗರ್ಭಕಂಠ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ ಹೆಣ್ಣುಮಕ್ಕಳ ರಕ್ಷಣೆಗೆ ಎಚ್‌ಪಿವಿ ಲಸಿಕೆ ಅತ್ಯಗತ್ಯ; ಗರ್ಭಕಂಠ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ ಚಳ್ಳಕೆರೆ: ವೇದ ಸಮೂಹ ಶಿಕ್ಷಣ ಸಂಸ್ಥೆ, ರೋಟರಿ ಕ್ಲಬ್ ಚಳ್ಳಕೆರೆ ಹಾಗೂ ಆರೋಗ್ಯ ಇಲಾಖೆ ಚಳ್ಳಕೆರೆ ಇವರ ಸಂಯುಕ್ತ ಆಶ್ರಯದಲ್ಲಿ ಸಾಣಿಕೆರೆಯ ವೇದ ಸಮೂಹ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಎಚ್‌ಪಿವಿ ಗರ್ಭಕಂಠ ಕ್ಯಾನ್ಸರ್ ಲಸಿಕಾ ಜಾಗೃತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಚಿತ್ರದುರ್ಗದ ಆರ್.ಸಿ.ಎಚ್ ಅಧಿಕಾರಿ ಡಾ. ಅಭಿನವ್, 14 ವರ್ಷದೊಳಗಿನ ಬಾಲಕಿಯರಿಗೆ ಎಚ್‌ಪಿವಿ ಲಸಿಕೆ ನೀಡುವುದರ ಮಹತ್ವವನ್ನು ವಿವರಿಸಿದರು. ಸಕಾಲದಲ್ಲಿ ಈ ಲಸಿಕೆಯನ್ನು ಹಾಕಿಸಿಕೊಳ್ಳುವುದರಿಂದ ಭವಿಷ್ಯದಲ್ಲಿ ಕಾಡಬಹುದಾದ ಗರ್ಭಕಂಠ ಕ್ಯಾನ್ಸರ್‌ನಂತಹ ಮಾರಕ ಕಾಯಿಲೆಯಿಂದ ಹೆಣ್ಣುಮಕ್ಕಳು ಸಂಪೂರ್ಣ ರಕ್ಷಣೆ ಪಡೆಯಬಹುದು ಎಂದು ವಿದ್ಯಾರ್ಥಿಗಳಿಗೆ ವಿಸ್ತೃತವಾಗಿ ಮಾಹಿತಿ ನೀಡಿದರು. ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನಾಡಿದ ಸಂಸ್ಥೆಯ ಕಾರ್ಯದರ್ಶಿ ಡಿ.ಟಿ. ಕಿರಣ್ ಅವರು, ಇಂದಿನ ದಿನಗಳಲ್ಲಿ ಮಕ್ಕಳು ತಮ್ಮ ಆರೋಗ್ಯದ ಬಗ್ಗೆ ಅದರಲ್ಲೂ ಪ್ರಮುಖವಾಗಿ ಲಸಿಕೆಗಳ ಬಗ್ಗೆ ಹೆಚ್ಚಿನ ಜಾಗೃತಿ ಹೊಂದಿರಬೇಕು ಎಂದರು. ಉತ್ತಮ ಆರೋಗ್ಯಕ್ಕಾಗಿ ವಿದ್ಯಾರ್ಥಿಗಳು ಪ್ರತಿನಿತ್ಯ ದೈಹಿಕ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಹಾಗೂ ಜಂಕ್ ಫುಡ್‌ಗಳಿಂದ ಸಂಪೂರ್ಣವಾಗಿ ದೂರವಿರಬೇಕು ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು. ಈ ಸಂದರ್ಭದಲ್ಲಿ ಚಳ್ಳಕೆರೆ ರೋಟರಿ ಕ್ಲಬ್ ಅಧ್ಯಕ್ಷರಾದ ಡಾ. ಎನ್.ಪಿ. ನಾಗರಾಜು, ಸ್ತ್ರೀರೋಗ ತಜ್ಞೆಯಾದ ಡಾ. ಪೂಜಾ ಜಯಂತ್, ಡಾ. ಜಯಕುಮಾರ್, ಡಾ. ಎಲ್.ಎಸ್. ವೀರೇಶ್, ಸಾಹಿತಿ ಮೀರಾಸಾಬಳ್ಳಿ ಶಿವಣ್ಣ, ರೋಟರಿಯನ್ ಪ್ರಹ್ಲಾದ್, ನಾಗೇಶ್, ಜಯಪ್ರಕಾಶ್, ಕಿರಣ್ ವಿ., ಮುರುಗೇಶ್ ಆರ್., ತಿಪ್ಪೇಸ್ವಾಮಿ ಸೇರಿದಂತೆ ಆರೋಗ್ಯ ಇಲಾಖೆಯ ಆಶಾ ಕಾರ್ಯಕರ್ತೆಯರು ಹಾಗೂ ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು.

- ಗೌರಸಮುದ್ರ ಜಾತ್ರೆಗೆ ಆಗಮಿಸಿ ದೇವಿಯ ದರ್ಶನ ಪಡೆದ ಜಿಲ್ಲಾ ಉಸ್ತುವಾರಿ ಸಚಿವ ಟಿ .ರಘುಮೂರ್ತಿ ಚಳ್ಳಕೆರೆ ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳ ಜನರನ್ನು ಒಂದೆಡೆ ಬೆಸೆಯುವ ಜಾತ್ರೆ ಎಂಬ ಖ್ಯಾತಿ ಹೊಂದಿರುವ ಚಳ್ಳಕೆರೆ ತಾಲ್ಲೂಕಿನ ತಳಕು ಹೋಬಳಿಯ ಗೌರಸಮುದ್ರ ಮಾರಮ್ಮದೇವಿ ಜಾತ್ರೆ ಇಂದು ಸಡಗರ ಸಂಭ್ರಮದಿಂದ ಜರುಗಿತು. ಪ್ರತಿವರ್ಷ ಶ್ರಾವಣಮಾಸ ಆರಂಭದ ಪ್ರಥಮ ಮಂಗಳವಾರ ಇಲ್ಲಿ ದೇವಿಯ ದೊಡ್ಡ ಪರಿಷೆ ನಡೆಸಿಕೊಂಡು ಬರಲಾಗುತ್ತಿದೆ.ದೇವಿಯ ಮೂಲ ಆಂಧ್ರಪ್ರದೇಶದ ನಿಡಗಲ್ಲು ಆಗಿರುವ ಕಾರಣ ರಾಜ್ಯ ಮತ್ತು ಆಂಧ್ರದ ಸಾವಿರಾರು ಭಕ್ತರು ಜಂಟಿಯಾಗಿ ಜಾತ್ರೆಯಲ್ಲಿ ಭಾಗಿಯಾಗಿ ತಾಯಿ ಮಾರಮ್ಮಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ ಕನ್ನಡ, ತೆಲುಗು ಭಾಷೆಗಳ ಜುಗಲ್ ಬಂದಿಯನ್ನು ಜಾತ್ರೆಯಲ್ಲಿ ನಾವು ಕಾಣಬಹುದಾಗಿದಿ 15 ದಿನ ಮುಂಚಿತವಾಗಿ ದೇವಿಯ ಒಪ್ಪಿಗೆ ಪಡೆದು ಜಾತ್ರೆಗೆ ಚಾಲನೆ ನೀಡಲಾಗುತ್ತಿ. ಅನುಮತಿ ಕೋರುವ ದಿನ ಊರಿನಲ್ಲಿ ಸಾರು ಚೆಲ್ಲಲಾಗುತ್ತು ಇದಾದ ನಂತರ ಜಾತ್ರೆ ತನಕ ಗ್ರಾಮಸ್ಥರು ಸ್ನಾನ, ಅಡುಗೆ, ಉಡುಗೆ ತೊಡಿಗೆ ವಿಚಾರದಲ್ಲಿ ಹಲವು ಕಟ್ಟುಪಾಡುಗಳನ್ನು ಕಡ್ಡಾಯಪಾಲಿಸಿಕೊಂಡು ಬಂದಿದ್ದರು.. ಗೌರಸಮುದ್ರ ಮಾರಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ನಂತರ ದೊಡ್ಡ ಜಾತ್ರೆಗೆ ದೇವಿಯ ಉತ್ಸವ ಮೂರ್ತಿಯನ್ನು ಮೆರವಣಿಗೆಯಲ್ಲಿ ತುಂಬಲಿನ ಪ್ರದೇಶಕ್ಕೆ ವಾದ್ಯಗಳೊಂದಿಗೆ ದೇವಿಯಆಭರಣ, ವಸ್ತ್ರಗಳನ್ನು ಬುಡಕಟ್ಟು ಸಂಸ್ಕೃತಿಯ ವಾದ್ಯಗಳೊಂದಿಗೆ ತುಂಬಲಿಗೆ ದೇವಿಯನ್ನು ಕರೆತರಲಾಯಿತು . ಮಾರಮ್ಮ ದೇವಿ ತುಮುಲಗಿ ಬರುವ ದೃಶ್ಯವನ್ನು ನೋಡುವುದು ಜಾತ್ರೆಯ ಪ್ರಮುಖ ಘಟ್ಟ. ದೇವಿ ತುಮುಲು ತುಂಬಿಲಿನ ಲ್ಲಿ ಜಾತ್ರೆ ನಡೆಯುವ ಸ್ಥಳಕ್ಕೆ ಬರುತ್ತಿದ್ದಂತೆ ಭಕ್ತರು ಬೆಳೆದಂತಹ ಈರುಳ್ಳಿ ಕೋಳಿ ಕುರಿಮರಿ ಸೂರಮೆಣಸು ತಾಯಿಯ ಮೇಲೆ ತೂರುವುದು ಮೂಲಕ ತಮ್ಮ ಹರಕೆಯನ್ನಿ ತೀರಿಸಿದರು. ಮಾರಿದೇವತೆಯ ತವರ ಮನೆ ಎಂದು ಕರೆಯಲಾಗುವ ನೀಡಗಲ್ಲಿನಿಂದ ತಂದ ಮೀಸಲು ಹಸಿ ಹಾಲು, ಬೆಳ್ಳಿ ಕಣ್ಣು ಹಾಗೂ ಕೋರೆ ಮಿಸ್ಸೆಯನ್ನು ದೇವಿಗೆ ಭಕ್ತಿಯಿಂದ ಅರ್ಪಿಸಲಾಯಿತು . ನಂತರ ತುಂಬಲಿನ ಮುಂದೆ ಇರುವ ಬೊಮ್ಮಲಿಂಗ ದೇವರ ದೀಪದ ಕಂಬದ ಮೇಲೆ ಏರಿ ದೀಪ ಹಚ್ಚಿದ ಕಷ್ಟ ಕಾರ್ಪಣ್ಯಗಳು ದೂರವಾಗಲಿ, ಮಳೆ ಬೆಳೆ ಚೆನ್ನಾಗಿ ಬರಲಿ ಹಾಗೂ ಜಾನುವಾರುಗಳಿಗೆ ಯಾವುದೇ ರೋಗರುಚಿನ ಬಾರ್ದಿರಲಿ ಎಂದು ಪ್ರಾರ್ಥಿಸಿದರು ಲಕ್ಷಾಂತರ ಭಕ್ತರು ದೇವಿಯ ದರ್ಶನವನ್ನು ಪಡೆದರು. ದೇವಿಯ ದರ್ಶನಕ್ಕೆ ಬಂದಂತಹ ಲಕ್ಷಾಂತರ ಭಕ್ತರ ಯಾವುದೇ ತೊಂದರೆ ಆಗದಂತೆ ಪೊಲೀಸ್ ಇಲಾಖೆ ತಾಲೂಕು ಆಡಳಿತ ಮುಂಜಾಗ್ರತ ಕ್ರಮಗಳನ್ನು ಕೈಗೊಂಡು ಕುಡಿಯುವ ನೀರು ದೇವಯ ದರ್ಶನಕ್ಕೆ ಅನುಕೂಲ ಮಾಡಿಕೊಟ್ಟರು.. ಜಾತ್ರೆಗೆ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಟಿ ರಘುಮೂರ್ತಿ ಮೊಳಕಾಲ್ಮೂರು ಶಾಸಕ ಎನ್ ವೈ ಗೋಪಾಲಕೃಷ್ಣ ಜಿಲ್ಲಾಧಿಕಾರಿ ರಮ್ಯ ಜಿಲ್ಲಾ ಎಸ್ ಪಿ ರಂಜಿತ್ ಕುಮಾರ್ ಬಂಡವರು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಜನಪ್ರತಿನಿಧಿಗಳು ಭಕ್ತರು ಜಾತ್ರೆಯಲ್ಲಿ ಭಾಗವಹಿಸಿದರು. ತಕ್ಷಣವೇ ತುಮಲು ಪ್ರದೇಶ ಬಿಟ್ಟು ಖಾಲಿ ಖಾಲಿ ಮಾಡಿದರು. ಪ್ರತಿವರ್ಷದಂತೆ ಈ ವರ್ಷವೂ ಸಹ ಲಕ್ಷಾಂತರ ಭಕ್ತರು ಈ ಜಾತ್ರೆಯಲ್ಲಿ ಭಾಗಿಯಾದರು..2
- ಶಿವಮೊಗ್ಗದಲ್ಲಿ ಸಂಭ್ರಮದ ಗಣೇಶೋತ್ಸವ; 30ನೇ ವರ್ಷದ ಗಣೇಶ ಪ್ರತಿಷ್ಠಾಪನೆ ಮತ್ತೂರು ರಸ್ತೆಯಲ್ಲಿ ಭಕ್ತಿ ಸಂಭ್ರಮ; 30ನೇ ವರ್ಷದ ಗಣೇಶ ಪ್ರತಿಷ್ಠಾಪನೆ1
- ಬ್ರೇಕಿಂಗ್ ನ್ಯೂಸ್ : ಪಾವಗಡ ಪೊಲೀಸರ ಭರ್ಜರಿ ಬೇಟೆ: ಬಲೆಗೆ ಬಿದ್ದ ನಕ್ಸಲ್ ವೆಂಕಟೇಶ್1
- ಪದೇ ಪದೇ ಕಾಣಿಸಿಕೊಳ್ಳುತ್ತಿರುವ ಚಿರತೆಗಳು: ಆತಂಕದಲ್ಲಿ ರೈತರು MADHUGIRI ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿ ಹೋಬಳಿಯ ದೊಡ್ಡ ಮಾಲೂರು ಭೂದೇನಹಳ್ಳಿ ವ್ಯಾಪ್ತಿಯಲ್ಲಿ ನಿತ್ಯ ಚಿರತೆಗಳು ಕಂಡುಬರುತ್ತಿದ್ದು ರೈತರು ಆತಂಕಕೊಳಗಾಗಿದ್ದಾರೆ. ಸಂಬಂಧಪಟ್ಟ ಅರಣ್ಯ ಇಲಾಖೆಯ ಅಧಿಕಾರಿಗಳು ತುರ್ತಾಗಿ ಬೋನು ಅಳವಡಿಸಿ ಚಿರತೆಗಳನ್ನು ಸೆರೆ ಹಿಡಿಯುವಂತೆ ಒತ್ತಾಯಿಸಿದ್ದಾರೆ.1
- ಕೊರಟಗೆರೆಯಲ್ಲಿ ಅಂಗನವಾಡಿ ಕಾರ್ಯಕರ್ತೆ ಅಸ್ವಸ್ಥ : ತಾಲ್ಲೂಕು ಅಧಿಕಾರಿ ನಿಂದಿಸಿದ್ದಕ್ಕೆ ಬಿ.ಪಿ ಲೋ ಆಗಿ ಕುಸಿದುಬಿದ್ದು ಹೃದಯಾಘಾತ!!! *ಕೊರಟಗೆರೆಯಲ್ಲಿ ಅಂಗನವಾಡಿ ಕಾರ್ಯಕರ್ತೆ ಅಸ್ವಸ್ಥ : ತಾಲ್ಲೂಕು ಅಧಿಕಾರಿ ನಿಂದಿಸಿದ್ದಕ್ಕೆ ಬಿ.ಪಿ ಲೋ ಆಗಿ ಕುಸಿದುಬಿದ್ದು ಹೃದಯಾಘಾತ* *ಕೊರಟಗೆರೆ, ಸೆ.16:* ಕೊರಟಗೆರೆ ತಾಲ್ಲೂಕು ಹೊಳವನಹಳ್ಳಿ ಹೋಬಳಿ ಕರಕಲ್ಲಘಟ್ಟ ಗ್ರಾಮದ ಅಂಗನವಾಡಿ ಕಾರ್ಯಕರ್ತೆ ರಾಮಕ್ಕ (BLO) ಅವರು ಕರ್ತವ್ಯದ ವೇಳೆ ಬಿ.ಪಿ ಲೋ ಆಗಿ ಕುಸಿದುಬಿದ್ದು ಹೃದಯ ತೊಂದರೆಗೆ ಒಳಗಾಗಿರುವ ಘಟನೆ ನಡೆದಿದೆ. ಹೊಳವನಹಳ್ಳಿ 1ನೇ ಬ್ಲಾಕ್ ವ್ಯಾಪ್ತಿಯಲ್ಲಿ ಬಿ.ಎಲ್.ಓ ಆಗಿ ಕೆಲಸ ನಿರ್ವಹಿಸುತ್ತಿದ್ದ ರಾಮಕ್ಕ ಅವರು ನಿನ್ನೆ ದಿನಾಂಕ 15-09-2026 ರಂದು ಕೈಬಿಟ್ಟ ಮತದಾರರಿಗೆ ನೋಟಿಸ್ ನೀಡುವ ಕಾರ್ಯದಲ್ಲಿದ್ದರು. ಈ ವೇಳೆ ತಾಲ್ಲೂಕು ನಿರ್ವಹಣಾಧಿಕಾರಿ ಅಪೂರ್ವ ಅನಂತರಾಮು ಅವರು ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ. ಇದರಿಂದ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾದ ರಾಮಕ್ಕ ಅವರು ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಹೊಳವನಹಳ್ಳಿಯ ಸಿದ್ದಗಂಗಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇ.ಸಿ.ಜಿ ಪರೀಕ್ಷೆಯಲ್ಲಿ ಹೃದಯದ ತೊಂದರೆ ಇರುವುದು ದೃಢಪಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಗೆ ಕರೆತರಲಾಗಿದೆ. ವೈದ್ಯರು ಪ್ರಥಮ ಚಿಕಿತ್ಸೆ ನೀಡಿ ತುಮಕೂರು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದ್ದಾರೆ. ಆದರೆ ಕುಟುಂಬದ ಆರ್ಥಿಕ ಸಂಕಷ್ಟದಿಂದಾಗಿ ಅವರು ಇನ್ನೂ ಕೊರಟಗೆರೆ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆಗೆ ತಾಲ್ಲೂಕು ಅಧಿಕಾರಿಗಳೇ ನೇರ ಹೊಣೆ ಎಂದು ಅಂಗನವಾಡಿ ನೌಕರರ ಸಂಘ ಆಕ್ರೋಶ ವ್ಯಕ್ತಪಡಿಸಿದ್ದು, ರಾಮಕ್ಕ ಅವರಿಗೆ ಏನಾದರೂ ಅನಾಹುತವಾದರೆ ಅಧಿಕಾರಿಗಳೇ ಜವಾಬ್ದಾರರು ಎಂದು ಎಚ್ಚರಿಕೆ ನೀಡಿದೆ. ಹಾಗೂ ಇನ್ನು ಮುಂದೆ ಯಾವುದೇ ಅಂಗನವಾಡಿ ಕಾರ್ಯಕರ್ತೆಯರಿಗೆ ಈ ರೀತಿ ಮಾನಸಿಕ ಕಿರುಕುಳ ನೀಡದಂತೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದೆ.4
- ಬಳ್ಳಾರಿಯಲ್ಲಿ ಶಾಸಕ ಬಿ.ನಾಗೇಂದ್ರ ಹುಟ್ಟುಹಬ್ಬ ಸಂಭ್ರಮ: ಬಿಮ್ಸ್‌ನಲ್ಲಿ ಅನ್ನದಾನ! ಬಳ್ಳಾರಿಯಲ್ಲಿ ಶಾಸಕ ಬಿ.ನಾಗೇಂದ್ರ ಅವರ ಹುಟ್ಟುಹಬ್ಬದ ಪ್ರಯುಕ್ತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಬಿಮ್ಸ್ ಆಸ್ಪತ್ರೆ ಆವರಣದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಹಾಗೂ ಸಮಾಜಸೇವಕ ಡಿ.ಅಯಾಜ್ ಅಹ್ಮದ್ ನೇತೃತ್ವದಲ್ಲಿ ರೋಗಿಗಳು ಹಾಗೂ ಸಾರ್ವಜನಿಕರಿಗೆ ಅನ್ನದಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಶಾಸಕರ ಸಹೋದರ ಬಿ.ವೆಂಕಟೇಶ್ ಪ್ರಸಾದ್ ಸೇರಿದಂತೆ ಕಾಂಗ್ರೆಸ್ ಮುಖಂಡರು, ಪಾಲಿಕೆ ಮೇಯರ್, ಸದಸ್ಯರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ನಾಗೇಂದ್ರ ಅವರಿಗೆ ಹುಟ್ಟುಹಬ್ಬದ ಶುಭಾಶಯ ಸಲ್ಲಿಸಿ, ಮುಂದಿನ ದಿನಗಳಲ್ಲಿ ಇನ್ನಷ್ಟು ಜವಾಬ್ದಾರಿ ಹಾಗೂ ಉನ್ನತ ಸ್ಥಾನ ದೊರೆಯಲಿ ಎಂದು ಮುಖಂಡರು ಆಶಿಸಿದರು. 📍 ಬಳ್ಳಾರಿ | ASN News24 ಕನ್ನಡ #BNagendra #ಬಿನಾಗೇಂದ್ರ #Ballari #ಬಳ್ಳಾರಿ #BallariNews #ಬಳ್ಳಾರಿನ್ಯೂಸ್ #KarnatakaNews #KannadaNews #Congress #CongressKarnataka #BirthdayCelebration #Annadana #ಅನ್ನದಾನ #BIMS #BallariUpdates #ASNNews24Kannada #KannadaNewsToday #KarnatakaPolitics1
- ಲಕ್ಷಾಂತರ ಭಕ್ತರ ನಡುವೆ ಸಡಗರ ಸಂಭ್ರಮದಿಂದ ಜರುಗಿದ ಎರಡು ರಾಜ್ಯಗಳನ್ನು ಬೆಸುವ ಗೌರಸಮುದ್ರ ಮಾರಮ್ಮ ಜಾತ್ರೆ1
- ₹3,383 ಕೋಟಿ ಆಸ್ತಿ ಒಡೆಯ ಶಾಸಕ ಬೀದಿಯಲ್ಲಿ ಭಿಕ್ಷೆ ಬೇಡಿದ್ದೇಕೆ? ಕಾರಣ ವೈರಲ್! ಮುಂಬೈ ಬೀದಿಯಲ್ಲಿ ಭಿಕ್ಷುಕನಾದ ಕೋಟ್ಯಾಧೀಶ ಬಿಜೆಪಿ ಶಾಸಕ ಪರಾಗ್ ಶಾ!1
- ಶಿವಮೊಗ್ಗ,: ತನು ಜ್ಯೂಸ್ ಸೆಂಟರ್ ಬೇಟಿ ನೀಡಿದ ಅಧಿಕಾರಿಗಳ ತಂಡ ಜ್ಯೂಸ್ ಮಾಲಿಕನ ಮೇಲೆ ಅಧಿಕಾರಿಗಳು ಕ್ರಮ ಕೈಗೊಳ್ಳಲಾಗಿದೆ. ಶಿವಮೊಗ್ಗ ತನು ಜ್ಯೂಸ್ ಸೆಂಟರ್ ಗೆ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಿದಾಗ ಕೊಳೆತ ಹಣ್ಣುಗಳನ್ನು ಶೇಖರಿಸಿಟ್ಟಿದ್ದ ಬ್ರಿಡ್ಜ್ ತಪಾಸಣೆ ಮಾಡಿದಾಗ ಸೇಬು, ಮೂಸಂಬಿ, ಕಲ್ಲಂಗಡಿ, ಅವಕೊಡ,ದ್ರಾಕ್ಷಿ, ಬಾಳೆಹಣ್ಣು, ಮಾವಿನಹಣ್ಣು , ಬೆಣ್ಣೆ ಹಣ್ಣು,ಹೀಗೆ ಹಲವಾರು ಹಣ್ಣುಗಳಿಂದ ಜ್ಯೂಸ್ ತಯಾರಿಸಿ ಸಾರ್ವಜನಿಕರಿಗೆ ಕೊಡುತ್ತಿರುವುದು ಕಂಡುಬಂದಿದ್ದು ಹಾಗೂ ಕೆಲವರು ಆಸ್ಪತ್ರೆಯ ರೋಗಿಗಳಿಗೂ ಸಹ ಇದೇ ಕೊಳೆತ ಹಣ್ಣಿನಿಂದ ಜ್ಯೂಸ್ ತೆಗೆದುಕೊಂಡು ಹೋಗಿರುವುದು ಕೂಡ ಗಮನಕ್ಕೆ ಬಂದಿರುವುದು ಕಂಡು ಅಧಿಕಾರಿಗಳು ಬೆಚ್ಚಿಬಿದ್ದಿದ್ದಾರೆ ಕೂಡಲೇ ಇದನ್ನು ಸೀಜ್ ಮಾಡಲಾಗಿದೆ. ಜ್ಯೂಸ್ ಮಾಲಿಕನ ಮೇಲೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.1