logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

"ಕೈ" ತಪ್ಪಿದ ಹಳದಿ, ಸತೀಶ್ ಗೌಡರ ಹೆಗಲ ಮೇಲೆ 'ಅಹಿಂದ' ಕಲಿ ಬಣ್ಣದ ಬಸಣ್ಣ, ಹಿರಿಯೂರು ಬ್ಯೂರೋ.😄😄😄 ​ ​ಇಲ್ಲಿನ ರಾಜಕೀಯ ಅಖಾಡದಲ್ಲಿ ಈಗ 'ಸಿದ್ಧಾಂತ'ಗಳಿಗಿಂತ 'ಬಣ್ಣದ ಬಟ್ಟೆ'ಗಳದ್ದೇ ದೊಡ್ಡ ಫೈಟು! ಮೊನ್ನೆ ಮೊನ್ನೆಯಷ್ಟೇ ನಡೆದ ಶಕ್ತಿ ಗಣಪತಿ ಹಬ್ಬದಲ್ಲಿ ಬಿಜೆಪಿ ಅವರಿಗೆ ಸರಿಯಾಗಿ 'ಟಾಕ್ಕರ್' ಕೊಡಬೇಕು ಅಂತ ಕಾಂಗ್ರೆಸ್ಸಿಗರು ಒಂದು ಭರ್ಜರಿ ಮಾಸ್ಟರ್ ಪ್ಲಾನ್ ಹಾಕಿದ್ದರು.​"ಕೇಸರಿ ಬಣ್ಣ ಅವರದಾದರೆ, ಹಳದಿ ಬಣ್ಣ ನಮ್ಮದು! ಇದು ಅಹಿಂದ ಶಕ್ತಿ!" ಅಂತ ಪಣತೊಟ್ಟು, ಕೇಸರಿ ಬಾವುಟಗಳನ್ನೆಲ್ಲ ಪಕ್ಕಕ್ಕೆ ಸರಿಸಿ ಮುಖ್ಯರಸ್ತೆ ತುಂಬಾ ಹಳದಿ ಬಾವುಟ ಕಟ್ಟಿ , ಕೈಯಲ್ಲಿ ಹಳದಿ ಟವಲ್ ಹಿಡಿದು, ಹಳದಿ ಬಾವುಟ ಹಾರಿಸಿ "ನೋಡಿ ನಮ್ಮ ಪವರ್" ಅಂತ ಪೋಸ್ ಕೊಟ್ಟಿದ್ದರು. ಕಾಂಗ್ರೆಸ್ಸಿಗರು "ಹಳದಿ ಅಂದ್ರೆ ಅಹಿಂದ, ಅಹಿಂದ ಅಂದ್ರೆ ನಾವೇ" ಅಂತ ಎದೆಯುಬ್ಬಿಸಿ ಓಡಾಡುತ್ತಿದ್ದರು. ​ಆದರೆ, ಕಾಂಗ್ರೆಸ್ಸಿಗರ ಈ 'ಹಳದಿ ತಂತ್ರ'ಕ್ಕೆ ವಿಧಿಯಾಟ ಬೇರೆಯೇ ಇತ್ತು! ನಿನ್ನೆ ಮೊನ್ನೆಯಷ್ಟೇ ರಾಜಕೀಯಕ್ಕೆ ಎಂಟ್ರಿ ಕೊಟ್ಟ ಪಕ್ಷೇತರ ಅಭ್ಯರ್ಥಿ ಸತೀಶ್ ಗೌಡರು ಬಂದಿದ್ದೇ ತಡ, ಕಾಂಗ್ರೆಸ್ಸಿಗರು "ನಮ್ಮದು" ಅಂತ ಜಪಿಸುತ್ತಿದ್ದ ಅದೇ ಹಳದಿ ಶಾಲು ಈಗ ಗೌಡರ ಹೆಗಲ ಮೇಲೆ ಆರಾಮವಾಗಿ ವಿರಾಜಮಾನವಾಗಿದೆ! ​"ಬಿತ್ತಿದವನು ಒಬ್ಬ, ಬೆಳೆದವನು ಇನ್ನೊಬ್ಬ... ಕೈಲಿ ಹಳದಿ ಹಿಡಿದು ಕಾಂಗ್ರೆಸ್ ಪೋಸ್ ಕೊಟ್ಟರೆ, ಅದೇ ಹಳದಿ ಶಾಲು ಹಾಕ್ಕೊಂಡು ಗೌಡ್ರು ಮಾಸ್ ಎಂಟ್ರಿ ಕೊಟ್ಟರಲ್ಲಪ್ಪಾ! ಈಗ ಹಿರಿಯೂರು ಮಾರುಕಟ್ಟೆಯಲ್ಲಿ ಪಕ್ಷಕ್ಕಿಂತ 'ಶಾಲು' ಬದಲಿಸೋ ಸ್ಪೀಡ್ ಜಾಸ್ತಿ ಆಗಿದೆ!" 🤣 ಹಿರಿಯೂರಿನಲ್ಲಿ ಈಗ ರಾಜಕಾರಣಿಗಳಿಗೆ ಸಿದ್ಧಾಂತಕ್ಕಿಂತ ಮುಖ್ಯವಾಗಿದ್ದು 'ಬಟ್ಟೆ ಬಣ್ಣ '! ಯಾಕಂದ್ರೆ ಯಾವತ್ತು ಯಾವ ಬಣ್ಣದ ಶಾಲು ಹಾಕಿಕೊಳ್ಳಬೇಕಾಗುತ್ತೋ ಅಂತ ಯಾರಿಗೂ ಗೊತ್ತಿಲ್ಲ! ಟ್ವಿಸ್ಟ್ ಅಂದ್ರೆ ಈಗ - ಕೈ ಕೆಳಗೆ ಕುಳಿತಿದ್ದ ಹಳದಿ, ಗೌಡರ ಹೆಗಲ ಮೇಲೆ😄😄😄😄 ಜಸ್ಟ್ fun - ಅರ್ಜುನ್ ಬ್ಯಾಡರಹಳ್ಳಿ -🙏

on 17 February
user_Power focus
Power focus
ಹಿರಿಯೂರು, ಚಿತ್ರದುರ್ಗ, ಕರ್ನಾಟಕ•
on 17 February
5ddeb6c3-cc1e-45bb-b4b6-cbab29fa318a

"ಕೈ" ತಪ್ಪಿದ ಹಳದಿ, ಸತೀಶ್ ಗೌಡರ ಹೆಗಲ ಮೇಲೆ 'ಅಹಿಂದ' ಕಲಿ ಬಣ್ಣದ ಬಸಣ್ಣ, ಹಿರಿಯೂರು ಬ್ಯೂರೋ.😄😄😄 ​ ​ಇಲ್ಲಿನ ರಾಜಕೀಯ ಅಖಾಡದಲ್ಲಿ ಈಗ 'ಸಿದ್ಧಾಂತ'ಗಳಿಗಿಂತ 'ಬಣ್ಣದ ಬಟ್ಟೆ'ಗಳದ್ದೇ ದೊಡ್ಡ ಫೈಟು! ಮೊನ್ನೆ ಮೊನ್ನೆಯಷ್ಟೇ ನಡೆದ ಶಕ್ತಿ ಗಣಪತಿ ಹಬ್ಬದಲ್ಲಿ ಬಿಜೆಪಿ ಅವರಿಗೆ ಸರಿಯಾಗಿ 'ಟಾಕ್ಕರ್' ಕೊಡಬೇಕು ಅಂತ ಕಾಂಗ್ರೆಸ್ಸಿಗರು ಒಂದು ಭರ್ಜರಿ ಮಾಸ್ಟರ್ ಪ್ಲಾನ್ ಹಾಕಿದ್ದರು.​"ಕೇಸರಿ ಬಣ್ಣ ಅವರದಾದರೆ, ಹಳದಿ ಬಣ್ಣ ನಮ್ಮದು! ಇದು ಅಹಿಂದ ಶಕ್ತಿ!" ಅಂತ ಪಣತೊಟ್ಟು, ಕೇಸರಿ ಬಾವುಟಗಳನ್ನೆಲ್ಲ ಪಕ್ಕಕ್ಕೆ ಸರಿಸಿ ಮುಖ್ಯರಸ್ತೆ ತುಂಬಾ ಹಳದಿ ಬಾವುಟ ಕಟ್ಟಿ , ಕೈಯಲ್ಲಿ ಹಳದಿ ಟವಲ್ ಹಿಡಿದು, ಹಳದಿ ಬಾವುಟ ಹಾರಿಸಿ "ನೋಡಿ ನಮ್ಮ ಪವರ್" ಅಂತ ಪೋಸ್ ಕೊಟ್ಟಿದ್ದರು. ಕಾಂಗ್ರೆಸ್ಸಿಗರು "ಹಳದಿ ಅಂದ್ರೆ ಅಹಿಂದ, ಅಹಿಂದ ಅಂದ್ರೆ ನಾವೇ" ಅಂತ ಎದೆಯುಬ್ಬಿಸಿ ಓಡಾಡುತ್ತಿದ್ದರು. ​ಆದರೆ, ಕಾಂಗ್ರೆಸ್ಸಿಗರ ಈ 'ಹಳದಿ ತಂತ್ರ'ಕ್ಕೆ ವಿಧಿಯಾಟ ಬೇರೆಯೇ ಇತ್ತು! ನಿನ್ನೆ ಮೊನ್ನೆಯಷ್ಟೇ ರಾಜಕೀಯಕ್ಕೆ ಎಂಟ್ರಿ ಕೊಟ್ಟ ಪಕ್ಷೇತರ ಅಭ್ಯರ್ಥಿ ಸತೀಶ್ ಗೌಡರು ಬಂದಿದ್ದೇ ತಡ, ಕಾಂಗ್ರೆಸ್ಸಿಗರು "ನಮ್ಮದು" ಅಂತ ಜಪಿಸುತ್ತಿದ್ದ ಅದೇ ಹಳದಿ ಶಾಲು ಈಗ ಗೌಡರ ಹೆಗಲ ಮೇಲೆ ಆರಾಮವಾಗಿ ವಿರಾಜಮಾನವಾಗಿದೆ! ​"ಬಿತ್ತಿದವನು ಒಬ್ಬ, ಬೆಳೆದವನು ಇನ್ನೊಬ್ಬ... ಕೈಲಿ ಹಳದಿ ಹಿಡಿದು ಕಾಂಗ್ರೆಸ್ ಪೋಸ್ ಕೊಟ್ಟರೆ, ಅದೇ ಹಳದಿ ಶಾಲು ಹಾಕ್ಕೊಂಡು ಗೌಡ್ರು ಮಾಸ್ ಎಂಟ್ರಿ ಕೊಟ್ಟರಲ್ಲಪ್ಪಾ! ಈಗ ಹಿರಿಯೂರು ಮಾರುಕಟ್ಟೆಯಲ್ಲಿ ಪಕ್ಷಕ್ಕಿಂತ 'ಶಾಲು' ಬದಲಿಸೋ ಸ್ಪೀಡ್ ಜಾಸ್ತಿ ಆಗಿದೆ!" 🤣 ಹಿರಿಯೂರಿನಲ್ಲಿ ಈಗ ರಾಜಕಾರಣಿಗಳಿಗೆ ಸಿದ್ಧಾಂತಕ್ಕಿಂತ ಮುಖ್ಯವಾಗಿದ್ದು 'ಬಟ್ಟೆ ಬಣ್ಣ '! ಯಾಕಂದ್ರೆ ಯಾವತ್ತು ಯಾವ ಬಣ್ಣದ ಶಾಲು ಹಾಕಿಕೊಳ್ಳಬೇಕಾಗುತ್ತೋ ಅಂತ ಯಾರಿಗೂ ಗೊತ್ತಿಲ್ಲ! ಟ್ವಿಸ್ಟ್ ಅಂದ್ರೆ ಈಗ - ಕೈ ಕೆಳಗೆ ಕುಳಿತಿದ್ದ ಹಳದಿ, ಗೌಡರ ಹೆಗಲ ಮೇಲೆ😄😄😄😄 ಜಸ್ಟ್ fun - ಅರ್ಜುನ್ ಬ್ಯಾಡರಹಳ್ಳಿ -🙏

More news from ಕರ್ನಾಟಕ and nearby areas
  • ರೈತ ಮುಖಂಡ ಕೆ ಟಿ ತಿಪ್ಪೇಸ್ವಾಮಿ ಅಸ್ವಸ್ಥರಾಗಲು ಜಿಲ್ಲಾಡಳಿತ ಹೊಣೆ ಎಂದು ಆರೋಪಿಸಿ ಹೆದ್ದರಿ ತಡೆದು ರೈತ ಮುಖಂಡರು ಪ್ರತಿಭಟನೆ ನಡೆಸಿದ್ದಾರೆ. ಭದ್ರೆಗೆ ಅನುದಾನ ನೀಡುವಂತೆ ಆಗ್ರಹಿಸಿ ಡಿಸಿ ಕಚೇರಿ ಬಳಿ ಉಪವಾಸ ನಿರತ ರೈತನಾಯಕ ತಿಪ್ಪೇಸ್ವಾಮಿ ತೀವ್ರ ಅಸ್ವಸ್ಥರಾಗಲು ಜಿಲ್ಲಾಧಿಕಾರಿ ಅವರೇ ನೇರ ಹೊಣೆ ಎಂದು ಆರೋಪಿಸಿ ಹಾಗೂ ಭದ್ರಾ ಮೇಲ್ದಂಡೆ ಯೋಜನೆ ಶೀಘ್ರ ಮುಗಿಸುವಂತೆ ರೈತಸಂಘದ ಕಾರ್ಯಕರ್ತರು ಹೆದ್ದಾರಿ ತಡೆ ನಡೆಸಿದರು
    1
    ರೈತ ಮುಖಂಡ ಕೆ ಟಿ ತಿಪ್ಪೇಸ್ವಾಮಿ ಅಸ್ವಸ್ಥರಾಗಲು ಜಿಲ್ಲಾಡಳಿತ ಹೊಣೆ ಎಂದು ಆರೋಪಿಸಿ ಹೆದ್ದರಿ ತಡೆದು ರೈತ ಮುಖಂಡರು ಪ್ರತಿಭಟನೆ ನಡೆಸಿದ್ದಾರೆ. 
ಭದ್ರೆಗೆ ಅನುದಾನ ನೀಡುವಂತೆ ಆಗ್ರಹಿಸಿ ಡಿಸಿ ಕಚೇರಿ ಬಳಿ ಉಪವಾಸ ನಿರತ ರೈತನಾಯಕ ತಿಪ್ಪೇಸ್ವಾಮಿ ತೀವ್ರ ಅಸ್ವಸ್ಥರಾಗಲು ಜಿಲ್ಲಾಧಿಕಾರಿ ಅವರೇ ನೇರ ಹೊಣೆ ಎಂದು ಆರೋಪಿಸಿ ಹಾಗೂ ಭದ್ರಾ ಮೇಲ್ದಂಡೆ ಯೋಜನೆ ಶೀಘ್ರ ಮುಗಿಸುವಂತೆ ರೈತಸಂಘದ ಕಾರ್ಯಕರ್ತರು ಹೆದ್ದಾರಿ ತಡೆ ನಡೆಸಿದರು
    user_Vinay P palekar
    Vinay P palekar
    ಮಾಧ್ಯಮ ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    13 hrs ago
  • ಗೌರಸಮುದ್ರ ಮಾರಮ್ಮ ದೇವಿ ದರ್ಶನಕ್ಕೆ ಭಕ್ತರ ಹರಿವು – ಕಾಯಿನ್ ಅಂಟಿಸಿ ಬೇಡಿಕೆ ಈಡೇರಿಕೆಗಾಗಿ ಪ್ರಾರ್ಥನೆ ಹೌದು ಇದು ಚಳ್ಳಕೆರೆ ತಾಲೂಕಿನ ಮಧ್ಯಾಹ್ನದ ಮಾರಮ್ಮ ಎಂದೇ ಖ್ಯಾತಿ ಪಡೆದ ಗೌರಸಮುದ್ರ ಮಾರಮ್ಮ ದೇವಿ ದರ್ಶನಕ್ಕಾಗಿ ಮಂಗಳವಾರ ಭಕ್ತರು ಭಾರೀ ಸಂಖ್ಯೆಯಲ್ಲಿ ಆಗಮಿಸಿದರು. ತಮ್ಮ ಇಷ್ಟಾರ್ಥಗಳು ಈಡೇರಲಿ ಎಂಬ ನಂಬಿಕೆಯಿಂದ ಭಕ್ತರು ದೇವಿಯ ಗರ್ಭಗುಡಿಯ ಹಿಂಭಾಗದಲ್ಲಿ ಕಾಯಿನ್ ಅಂಟಿಸುವ ಮೂಲಕ ಅರಕೆ ತೀರಿಸಿಕೊಳ್ಳುತ್ತಿರುವ ದೃಶ್ಯ ಕಂಡುಬಂದಿತು. ದೇವಿಯ ಕೃಪೆಯಿಂದ ಮನಸಿನ ಬೇಡಿಕೆಗಳು ಈಡೇರುತ್ತವೆ ಎಂಬ ನಂಬಿಕೆಯಿಂದ ಹಲವರು ಈ ವಿಧಿ ಪಾಲಿಸುತ್ತಿದ್ದಾರೆ. ಇದೇ ವೇಳೆ ದೇವಾಲಯದ ಸುತ್ತಮುತ್ತಲಿನ ಪ್ರದೇಶದಲ್ಲಿ ತಮ್ಮ ಇಷ್ಟಾರ್ಥಗಳು ಈಡೇರಿದ ಹಿನ್ನೆಲೆಯಲ್ಲಿ ಮಕ್ಕಳ ಜವಳ, ನಾಮಕರಣ ಸೇರಿದಂತೆ ವಿವಿಧ ಪೂಜೆಗಳನ್ನು ನೆರವೇರಿಸಿ ಬಾಡೂಟ ಮಾಡಿಸುವ ಸಂಪ್ರದಾಯವೂ ನಡೆಯುತ್ತಿತ್ತು. ಬಂಧು-ಬಳಗ ಹಾಗೂ ಸ್ನೇಹಿತರನ್ನು ಆಹ್ವಾನಿಸಿ ಊಟ ಬಡಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
    1
    ಗೌರಸಮುದ್ರ ಮಾರಮ್ಮ ದೇವಿ ದರ್ಶನಕ್ಕೆ ಭಕ್ತರ ಹರಿವು – ಕಾಯಿನ್ ಅಂಟಿಸಿ ಬೇಡಿಕೆ ಈಡೇರಿಕೆಗಾಗಿ ಪ್ರಾರ್ಥನೆ
ಹೌದು ಇದು ಚಳ್ಳಕೆರೆ ತಾಲೂಕಿನ ಮಧ್ಯಾಹ್ನದ ಮಾರಮ್ಮ ಎಂದೇ ಖ್ಯಾತಿ ಪಡೆದ ಗೌರಸಮುದ್ರ ಮಾರಮ್ಮ ದೇವಿ ದರ್ಶನಕ್ಕಾಗಿ ಮಂಗಳವಾರ ಭಕ್ತರು ಭಾರೀ ಸಂಖ್ಯೆಯಲ್ಲಿ ಆಗಮಿಸಿದರು.
ತಮ್ಮ ಇಷ್ಟಾರ್ಥಗಳು ಈಡೇರಲಿ ಎಂಬ ನಂಬಿಕೆಯಿಂದ ಭಕ್ತರು ದೇವಿಯ ಗರ್ಭಗುಡಿಯ ಹಿಂಭಾಗದಲ್ಲಿ ಕಾಯಿನ್ ಅಂಟಿಸುವ ಮೂಲಕ ಅರಕೆ ತೀರಿಸಿಕೊಳ್ಳುತ್ತಿರುವ ದೃಶ್ಯ ಕಂಡುಬಂದಿತು. ದೇವಿಯ ಕೃಪೆಯಿಂದ ಮನಸಿನ ಬೇಡಿಕೆಗಳು ಈಡೇರುತ್ತವೆ ಎಂಬ ನಂಬಿಕೆಯಿಂದ ಹಲವರು ಈ ವಿಧಿ ಪಾಲಿಸುತ್ತಿದ್ದಾರೆ.
ಇದೇ ವೇಳೆ ದೇವಾಲಯದ ಸುತ್ತಮುತ್ತಲಿನ ಪ್ರದೇಶದಲ್ಲಿ ತಮ್ಮ ಇಷ್ಟಾರ್ಥಗಳು ಈಡೇರಿದ ಹಿನ್ನೆಲೆಯಲ್ಲಿ ಮಕ್ಕಳ ಜವಳ, ನಾಮಕರಣ ಸೇರಿದಂತೆ ವಿವಿಧ ಪೂಜೆಗಳನ್ನು ನೆರವೇರಿಸಿ ಬಾಡೂಟ ಮಾಡಿಸುವ ಸಂಪ್ರದಾಯವೂ ನಡೆಯುತ್ತಿತ್ತು. ಬಂಧು-ಬಳಗ ಹಾಗೂ ಸ್ನೇಹಿತರನ್ನು ಆಹ್ವಾನಿಸಿ ಊಟ ಬಡಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
    user_ಗೋಪನಹಳ್ಳಿಶಿವಣ್ಣ
    ಗೋಪನಹಳ್ಳಿಶಿವಣ್ಣ
    Local News Reporter ಚಳ್ಳಕೆರೆ, ಚಿತ್ರದುರ್ಗ, ಕರ್ನಾಟಕ•
    13 hrs ago
  • KOLAR KI.AWAAZ KOUSAR NEWS
    1
    KOLAR KI.AWAAZ KOUSAR NEWS
    user_KOLAR KI.AWAAZ KOUSAR NEWS
    KOLAR KI.AWAAZ KOUSAR NEWS
    Rock shop ದೊಡ್ ಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಕರ್ನಾಟಕ•
    9 hrs ago
  • ಹಳೆ ಮೀಸಲಾತಿಯಂತೆಯೇ 56 ಸಾವಿರ ಉದ್ಯೋಗಳ ನೇಮಕಾತಿ ಮಾಡಿ ಬಾಗೇಪಲ್ಲಿ:- ಒಳಮೀಸಲಾತಿಗೆ ಸಂಬಂಧಿಸಿದಂತೆ ಇರುವ ಗೊಂದಲಗಳು, ಸಮಸ್ಯೆಗಳು ಹಾಗೂ ನ್ಯಾಯಾಲಯದ ಅಡೆತಡೆಗಳು ನಿವಾರಣೆಯಾಗುವ ತನಕ ಒಳಮೀಸಲಾತಿ ಕೈ ಬಿಟ್ಟು ಹಳೆ ಮೀಸಲಾತಿ ಜಾರಿಗೆ ತಂದು ರಾಜ್ಯ ಕಾಂಗ್ರೆಸ್ ಸರ್ಕಾರ ಬಜೆಟ್ ನಲ್ಲಿ 56 ಸಾವಿರ ಉದ್ಯೋಗಗಳನ್ನು ನೇಮಕಾತಿ ಮತ್ತು ಶಿಕ್ಷಣಕ್ಕೆ ತೊಂದರೆ ಆಗದಂತೆ ಸೂಕ್ತ ಆದೇಶ ಹೊರಡಿಸಬೇಕು ಎಂದು ಬಾಗೇಪಲ್ಲಿ ತಾಲ್ಲೂಕು ಲಂಬಾಣಿ (ಗೋರ್ ಬಂಜಾರ್)ಅಭಿವೃದ್ಧಿ ಸಂಘ ರಾಜ್ಯ ಸರ್ಕಾರಕ್ಕೆ ಲಂಬಾಣಿ ಜಿಲ್ಲಾದ್ಯಕ್ಷ ಶ್ರೀರಾಮ ನಾಯಕ್ ಒತ್ತಾಯಿಸಿದರು. ಅವರು ಬಾಗೇಪಲ್ಲಿ ಪಟ್ಟಣದ ಕಾರ್ಯನಿರತ ಪತ್ರಕರ್ತರ ಸಂಘದ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ನಿವೃತ್ತ ನ್ಯಾ. ನಾಗಮೋಹನ್ ದಾಸ್ ವರದಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸಲು ಜಾರಿ ಮಾಡಿರುವ ಕಾಯ್ದೆಯಲ್ಲಿ ಪರಿಶಿಷ್ಟ ಜಾತಿಗಳನ್ನು 3 ಗುಂಪುಗಳಾಗಿ ವಿಂಗಡಿಸಲಾಗಿದೆ. ಬಲಗೈ ಸಮುದಾಯವನ್ನು ಬಿ ಗುಂಪಿಗೆ ಸೇರಿಸಿ ರೋಸ್ಟರ್ ಬಿಂದುವನಲ್ಲಿ 9ನೇ ಸ್ಥಾನಕ್ಕೆ ಇಳಿಸಲಾಗಿದೆ. ಇದರಿಂದ ಬಲಗೈ ಸಂಬಂಧಿತ ಜಾತಿಗಳಿಗೆ ಅನ್ಯಾಯವಾಗಿದೆ. ಸರ್ಕಾರಿ ನೇಮಕಾತಿಯಲ್ಲಿ ಉದ್ಯೋಗಗಳನ್ನು ನೇಮಕ ಮಾಡಿದಾಗ ಬಲಗೈ ಸಂಬಂಧಿತ ಜಾತಿಗಳಿಗೆ ಯಾವುದೇ ಉದ್ಯೋಗ ದೊರಕುವುದಿಲ್ಲ. ಉನ್ನತ ಶಿಕ್ಷಣ ಪ್ರವೇಶಾತಿ, ಸರ್ಕಾರಿ ಅಧಿಕಾರಿಗಳು ಹಾಗೂ ನೌಕರರ ಬಡ್ತಿಯಲ್ಲಿಯೂ ಅವಕಾಶ ಸಿಗುವುದಿಲ್ಲ. ಹಾಗಾಗೀ ಸರ್ಕಾರ ಇಂತಹ ಅವೈಜ್ಞಾನಿಕ ಪರಿಶಿಷ್ಟ ಜಾತಿಗಳ ಕಾಯ್ದೆಯನ್ನು ತಿರಸ್ಕರಿಸಬೇಕು' ಎಂದು ಆಗ್ರಹಿಸಿದರು. ಈಗ ಜಾರಿ ಮಾಡಿರುವ ಒಳ ಮೀಸಲಾತಿಯಲ್ಲಿ ಬಲಗೈ ಸಮುದಾಯದ 101 ಜಾತಿಗಳಿಗೆ ಭಾರಿ ಅನ್ಯಾಯವಾಗಿದ್ದು, ನೇಮಕಾತಿ ಬಿಂದು ಪದ್ದತಿಯಲ್ಲಿ ಭಾರಿ ನ್ಯಾಯವಾಗಿದೆ. ಎ, ಬಿ, ಸಿ ಪ್ರವರ್ಗಗಳಿಗೆ ನಿಗಧಿ ಪಡಿಸುವ ಉದ್ಯೋಗದಲ್ಲಿ ಅನ್ಯಾಯವಾಗುತ್ತದೆ. ವಿವಿಧ ಇಲಾಖೆಯ ಹಾಗೂ ವಿಭಾಗದಲ್ಲಿ ಕಡಿಮೆ ಸಂಖ್ಯೆಯಲ್ಲಿ ಹುದ್ದೆಗಳು ನೇಮಕಾತಿ ನಡೆದಾಗ ಪರಿಶಿಷ್ಟ ಜಾತಿಯಲ್ಲಿಯೇ ಪ್ರವರ್ಗ ಎ ಗೆ ಹೆಚ್ಚು ಹುದ್ದೆಗಳು ಹೋಗುವ ಜೊತೆಗೆ ಇತರೇ ಬಿ ಮತ್ತು ಸಿ ವರ್ಗಗಳಿಗೆ ಅನ್ಯಾಯವಾಗುತ್ತಿದೆ. ಇದರಿಂದ ಸಾಮಾಜಿಕ ನ್ಯಾಯದ ಬದಲಾಗಿ ಪರಿಶಿಷ್ಟ ಜಾತಿ ಬಲಗೈ ಸಮುದಾಯಕ್ಕೆ ಅನ್ಯಾಯವಾಗುತ್ತದೆ. ಅಂಬೇಡ್ಕರ್ ಅವರ ಆಶಯದಂತೆ ಸಮಾನ ಅವಕಾಶಗಳು ದೊರೆಯುವುದಿಲ್ಲ ಎಂದು ಅವರು ಕಳವಳ ವ್ಯಕ್ತಪಡಿಸಿದರು. ಲಂಬಾಣಿ (ಗೋರ್ ಬಂಜಾರ್) ಅಭಿವೃದ್ಧಿ ಸಂಘ ಪ್ರಧಾನ ಕಾರ್ಯದರ್ಶಿ ಎಸ್.ಜಿ.ಶಂಕರ್ ನಾಯಕ್ ಮಾತನಾಡಿ ಶಿಕ್ಷಣ, ಹಾಸ್ಟೆಲ್ ಹಾಗೂ ಉದ್ಯೋಗ ನೇಮಕಾತಿ ರೋಸ್ಟರ್ ಹಂಚಿಕೆ ಮಾಡಿ ಈ ಹಿಂದೆ ಸರ್ಕಾರ ಹೊರಡಿಸಿರುವ ಎಲ್ಲಾ ಆದೇಶಗಳನ್ನು ಹಿಂಪಡೆಯಬೇಕು, ರಾಜ್ಯ ಸರ್ಕಾರ ಹೊಸದಾಗಿ ನೀಡುತ್ತಿರುವ ಜಾತಿ ಪ್ರಮಾಣಪತ್ರವನ್ನು ತುರ್ತಾಗಿ ನಿಲ್ಲಿಸಿ ಹಳೆ ಜಾತಿ ಪ್ರಮಾಣಪತ್ರವನ್ನು ಮುಂದುವರಿಸಬೇಕು. ಒಳ ಮೀಸಲಾತಿಗೆ ಅನ್ವಯಿಸುವ ರೋಸ್ಟರ್ ಬಿಂದುವನ್ನು ಪರಿಷ್ಕರಿಸಿ ಆಗಿರುವ ನ್ಯಾಯವನ್ನು ಸರಿಪಡಿಸಬೇಕು. ಇಲ್ಲದಿದ್ದರೆ ರಾಜ್ಯದಾದ್ಯಂತ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಲಂಬಾಣಿ (ಗೋರ್ ಬಂಜಾರ್) ಅಭಿವೃದ್ಧಿ ಸಂಘದ ಅಧ್ಯಕ್ಷ ನಾರಾಯಣ್ ನಾಯಕ್(ಬಾಂಬೆ), ಉಪಾಧ್ಯಕ್ಷ ಶಿವಶಂಕರ್, ಖಜಾಂಚಿ ಸುರೇಶ್ ನಾಯಕ್,ಮಂಜುನಾಥ್ ನಾಯಕ್,ಬಾಲು ನಾಯಕ್,ನಾಗೇ ನಾಯಕ್,ಶ್ರೀನಿವಾಸ್ ನಾಯಕ್,ರಮೇಶ್ ನಾಯಕ್, ಆರ್.ನಾರಾಯಣ್ ನಾಯಕ್, ರಾಮಾಂಜಿ ನಾಯಕ್, ನರಸಿಂಹ ನಾಯಕ್, ಬಾಬು ನಾಯಕ್ ಹಾಗೂ ಲಂಬಾಣಿ ಸಮುದಾಯದವರು ಹಾಜರಿದ್ದರು.
    1
    ಹಳೆ ಮೀಸಲಾತಿಯಂತೆಯೇ
56 ಸಾವಿರ ಉದ್ಯೋಗಳ ನೇಮಕಾತಿ ಮಾಡಿ
ಬಾಗೇಪಲ್ಲಿ:- ಒಳಮೀಸಲಾತಿಗೆ ಸಂಬಂಧಿಸಿದಂತೆ ಇರುವ ಗೊಂದಲಗಳು, ಸಮಸ್ಯೆಗಳು ಹಾಗೂ ನ್ಯಾಯಾಲಯದ ಅಡೆತಡೆಗಳು ನಿವಾರಣೆಯಾಗುವ ತನಕ ಒಳಮೀಸಲಾತಿ ಕೈ ಬಿಟ್ಟು ಹಳೆ ಮೀಸಲಾತಿ ಜಾರಿಗೆ ತಂದು ರಾಜ್ಯ ಕಾಂಗ್ರೆಸ್ ಸರ್ಕಾರ ಬಜೆಟ್ ನಲ್ಲಿ 56 ಸಾವಿರ ಉದ್ಯೋಗಗಳನ್ನು ನೇಮಕಾತಿ ಮತ್ತು ಶಿಕ್ಷಣಕ್ಕೆ ತೊಂದರೆ ಆಗದಂತೆ ಸೂಕ್ತ ಆದೇಶ ಹೊರಡಿಸಬೇಕು ಎಂದು 
ಬಾಗೇಪಲ್ಲಿ ತಾಲ್ಲೂಕು ಲಂಬಾಣಿ (ಗೋರ್ ಬಂಜಾರ್)ಅಭಿವೃದ್ಧಿ ಸಂಘ ರಾಜ್ಯ ಸರ್ಕಾರಕ್ಕೆ  ಲಂಬಾಣಿ ಜಿಲ್ಲಾದ್ಯಕ್ಷ ಶ್ರೀರಾಮ ನಾಯಕ್ ಒತ್ತಾಯಿಸಿದರು.
ಅವರು ಬಾಗೇಪಲ್ಲಿ
ಪಟ್ಟಣದ ಕಾರ್ಯನಿರತ ಪತ್ರಕರ್ತರ ಸಂಘದ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ನಿವೃತ್ತ ನ್ಯಾ. ನಾಗಮೋಹನ್ ದಾಸ್ ವರದಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸಲು ಜಾರಿ ಮಾಡಿರುವ ಕಾಯ್ದೆಯಲ್ಲಿ ಪರಿಶಿಷ್ಟ ಜಾತಿಗಳನ್ನು 3 ಗುಂಪುಗಳಾಗಿ ವಿಂಗಡಿಸಲಾಗಿದೆ. ಬಲಗೈ ಸಮುದಾಯವನ್ನು ಬಿ ಗುಂಪಿಗೆ ಸೇರಿಸಿ ರೋಸ್ಟರ್ ಬಿಂದುವನಲ್ಲಿ 9ನೇ ಸ್ಥಾನಕ್ಕೆ ಇಳಿಸಲಾಗಿದೆ. ಇದರಿಂದ ಬಲಗೈ ಸಂಬಂಧಿತ ಜಾತಿಗಳಿಗೆ ಅನ್ಯಾಯವಾಗಿದೆ. ಸರ್ಕಾರಿ ನೇಮಕಾತಿಯಲ್ಲಿ ಉದ್ಯೋಗಗಳನ್ನು ನೇಮಕ ಮಾಡಿದಾಗ ಬಲಗೈ ಸಂಬಂಧಿತ ಜಾತಿಗಳಿಗೆ ಯಾವುದೇ ಉದ್ಯೋಗ ದೊರಕುವುದಿಲ್ಲ. ಉನ್ನತ ಶಿಕ್ಷಣ ಪ್ರವೇಶಾತಿ, ಸರ್ಕಾರಿ ಅಧಿಕಾರಿಗಳು ಹಾಗೂ ನೌಕರರ ಬಡ್ತಿಯಲ್ಲಿಯೂ ಅವಕಾಶ ಸಿಗುವುದಿಲ್ಲ. ಹಾಗಾಗೀ ಸರ್ಕಾರ ಇಂತಹ ಅವೈಜ್ಞಾನಿಕ ಪರಿಶಿಷ್ಟ ಜಾತಿಗಳ ಕಾಯ್ದೆಯನ್ನು ತಿರಸ್ಕರಿಸಬೇಕು' ಎಂದು ಆಗ್ರಹಿಸಿದರು.
ಈಗ ಜಾರಿ ಮಾಡಿರುವ ಒಳ ಮೀಸಲಾತಿಯಲ್ಲಿ ಬಲಗೈ ಸಮುದಾಯದ 101 ಜಾತಿಗಳಿಗೆ ಭಾರಿ ಅನ್ಯಾಯವಾಗಿದ್ದು, ನೇಮಕಾತಿ ಬಿಂದು ಪದ್ದತಿಯಲ್ಲಿ ಭಾರಿ ನ್ಯಾಯವಾಗಿದೆ. ಎ, ಬಿ, ಸಿ ಪ್ರವರ್ಗಗಳಿಗೆ ನಿಗಧಿ ಪಡಿಸುವ ಉದ್ಯೋಗದಲ್ಲಿ ಅನ್ಯಾಯವಾಗುತ್ತದೆ. ವಿವಿಧ ಇಲಾಖೆಯ ಹಾಗೂ ವಿಭಾಗದಲ್ಲಿ ಕಡಿಮೆ ಸಂಖ್ಯೆಯಲ್ಲಿ ಹುದ್ದೆಗಳು ನೇಮಕಾತಿ ನಡೆದಾಗ ಪರಿಶಿಷ್ಟ ಜಾತಿಯಲ್ಲಿಯೇ ಪ್ರವರ್ಗ ಎ ಗೆ ಹೆಚ್ಚು ಹುದ್ದೆಗಳು ಹೋಗುವ ಜೊತೆಗೆ ಇತರೇ ಬಿ ಮತ್ತು ಸಿ ವರ್ಗಗಳಿಗೆ ಅನ್ಯಾಯವಾಗುತ್ತಿದೆ. ಇದರಿಂದ ಸಾಮಾಜಿಕ ನ್ಯಾಯದ ಬದಲಾಗಿ ಪರಿಶಿಷ್ಟ ಜಾತಿ ಬಲಗೈ ಸಮುದಾಯಕ್ಕೆ ಅನ್ಯಾಯವಾಗುತ್ತದೆ. ಅಂಬೇಡ್ಕರ್ ಅವರ ಆಶಯದಂತೆ ಸಮಾನ ಅವಕಾಶಗಳು ದೊರೆಯುವುದಿಲ್ಲ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಲಂಬಾಣಿ (ಗೋರ್ ಬಂಜಾರ್) ಅಭಿವೃದ್ಧಿ ಸಂಘ ಪ್ರಧಾನ ಕಾರ್ಯದರ್ಶಿ ಎಸ್.ಜಿ.ಶಂಕರ್ ನಾಯಕ್ ಮಾತನಾಡಿ
ಶಿಕ್ಷಣ, ಹಾಸ್ಟೆಲ್ ಹಾಗೂ ಉದ್ಯೋಗ ನೇಮಕಾತಿ ರೋಸ್ಟರ್ ಹಂಚಿಕೆ ಮಾಡಿ ಈ ಹಿಂದೆ ಸರ್ಕಾರ ಹೊರಡಿಸಿರುವ ಎಲ್ಲಾ ಆದೇಶಗಳನ್ನು ಹಿಂಪಡೆಯಬೇಕು,
ರಾಜ್ಯ ಸರ್ಕಾರ ಹೊಸದಾಗಿ ನೀಡುತ್ತಿರುವ ಜಾತಿ ಪ್ರಮಾಣಪತ್ರವನ್ನು ತುರ್ತಾಗಿ ನಿಲ್ಲಿಸಿ ಹಳೆ ಜಾತಿ ಪ್ರಮಾಣಪತ್ರವನ್ನು ಮುಂದುವರಿಸಬೇಕು. ಒಳ ಮೀಸಲಾತಿಗೆ ಅನ್ವಯಿಸುವ ರೋಸ್ಟರ್ ಬಿಂದುವನ್ನು ಪರಿಷ್ಕರಿಸಿ ಆಗಿರುವ ನ್ಯಾಯವನ್ನು ಸರಿಪಡಿಸಬೇಕು. ಇಲ್ಲದಿದ್ದರೆ ರಾಜ್ಯದಾದ್ಯಂತ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ
ಲಂಬಾಣಿ (ಗೋರ್ ಬಂಜಾರ್) ಅಭಿವೃದ್ಧಿ ಸಂಘದ ಅಧ್ಯಕ್ಷ ನಾರಾಯಣ್ ನಾಯಕ್(ಬಾಂಬೆ), ಉಪಾಧ್ಯಕ್ಷ ಶಿವಶಂಕರ್, ಖಜಾಂಚಿ ಸುರೇಶ್ ನಾಯಕ್,ಮಂಜುನಾಥ್ ನಾಯಕ್,ಬಾಲು ನಾಯಕ್,ನಾಗೇ ನಾಯಕ್,ಶ್ರೀನಿವಾಸ್ ನಾಯಕ್,ರಮೇಶ್ ನಾಯಕ್, ಆರ್.ನಾರಾಯಣ್ ನಾಯಕ್, ರಾಮಾಂಜಿ ನಾಯಕ್, ನರಸಿಂಹ ನಾಯಕ್, ಬಾಬು ನಾಯಕ್ ಹಾಗೂ ಲಂಬಾಣಿ ಸಮುದಾಯದವರು ಹಾಜರಿದ್ದರು.
    user_Gopala Reddy R N
    Gopala Reddy R N
    Press advisory ಬಾಗೇಪಲ್ಲಿ, ಚಿಕ್ಕಬಳ್ಳಾಪುರ, ಕರ್ನಾಟಕ•
    15 hrs ago
  • ಬಳ್ಳಾರಿ ನಗರದ 3ನೇ ವಾರ್ಡ್ ವ್ಯಾಪ್ತಿಯ ಮುಸ್ಲಿಂ ಖಬರಸ್ತಾನದ ಕಂಪೌಂಡ್ ನಿರ್ಮಾಣ ಹಾಗೂ ಸಿಸಿ ರಸ್ತೆ ಕಾಮಗಾರಿಗೆ ಶಾಸಕ ನಾರಾ ಭರತ್ ರೆಡ್ಡಿ ಭೂಮಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಡ್ಡರಬಂಡೆ ಪ್ರದೇಶದಲ್ಲಿ ಶೀಘ್ರದಲ್ಲೇ ಶಾದಿ ಮಹಲ್ ಕಾಮಗಾರಿ ಆರಂಭವಾಗಲಿದೆ ಎಂದು ತಿಳಿಸಿದರು. ರಾಜ್ಯಸಭಾ ಸದಸ್ಯ ಡಾ. ಸಯ್ಯದ್ ನಾಸಿರ್ ಹುಸೇನ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಅವರ ಸಹಯೋಗದಲ್ಲಿ ನಗರದಲ್ಲಿ ಎರಡು ಶಾದಿ ಮಹಲ್ ನಿರ್ಮಾಣ ಮಾಡುವ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು. ಬಡ ಕುಟುಂಬಗಳ ಮಕ್ಕಳ ಮದುವೆ ಕಾರ್ಯಕ್ರಮಗಳಿಗೆ ಶಾದಿ ಮಹಲ್ ಸಹಾಯಕವಾಗಲಿದೆ ಎಂದರು. ಇದೇ ವೇಳೆ ಈದ್ಗಾ ಮತ್ತು ಖಬರಸ್ತಾನದ ಸ್ವಚ್ಛತೆ ಹಾಗೂ ಹಸೀರಿಕರಣದಲ್ಲಿ ತೊಡಗಿದ್ದ ಯುವಕರ ಕಾರ್ಯವನ್ನು ಮೆಚ್ಚಿ ಯೂತ್ ರೆವಲ್ಯೂಷನ್ ತಂಡದ ಸದಸ್ಯರನ್ನು ಸನ್ಮಾನಿಸಿದರು.
    1
    ಬಳ್ಳಾರಿ ನಗರದ 3ನೇ ವಾರ್ಡ್ ವ್ಯಾಪ್ತಿಯ ಮುಸ್ಲಿಂ ಖಬರಸ್ತಾನದ ಕಂಪೌಂಡ್ ನಿರ್ಮಾಣ ಹಾಗೂ ಸಿಸಿ ರಸ್ತೆ ಕಾಮಗಾರಿಗೆ ಶಾಸಕ ನಾರಾ ಭರತ್ ರೆಡ್ಡಿ ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಡ್ಡರಬಂಡೆ ಪ್ರದೇಶದಲ್ಲಿ ಶೀಘ್ರದಲ್ಲೇ ಶಾದಿ ಮಹಲ್ ಕಾಮಗಾರಿ ಆರಂಭವಾಗಲಿದೆ ಎಂದು ತಿಳಿಸಿದರು. ರಾಜ್ಯಸಭಾ ಸದಸ್ಯ ಡಾ. ಸಯ್ಯದ್ ನಾಸಿರ್ ಹುಸೇನ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಅವರ ಸಹಯೋಗದಲ್ಲಿ ನಗರದಲ್ಲಿ ಎರಡು ಶಾದಿ ಮಹಲ್ ನಿರ್ಮಾಣ ಮಾಡುವ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.
ಬಡ ಕುಟುಂಬಗಳ ಮಕ್ಕಳ ಮದುವೆ ಕಾರ್ಯಕ್ರಮಗಳಿಗೆ ಶಾದಿ ಮಹಲ್ ಸಹಾಯಕವಾಗಲಿದೆ ಎಂದರು. ಇದೇ ವೇಳೆ ಈದ್ಗಾ ಮತ್ತು ಖಬರಸ್ತಾನದ ಸ್ವಚ್ಛತೆ ಹಾಗೂ ಹಸೀರಿಕರಣದಲ್ಲಿ ತೊಡಗಿದ್ದ ಯುವಕರ ಕಾರ್ಯವನ್ನು ಮೆಚ್ಚಿ ಯೂತ್ ರೆವಲ್ಯೂಷನ್ ತಂಡದ ಸದಸ್ಯರನ್ನು ಸನ್ಮಾನಿಸಿದರು.
    user_ASN News24Kannada
    ASN News24Kannada
    Newsagent Ballari, Karnataka•
    12 hrs ago
  • ಬಳ್ಳಾರಿ ಕೋಟೆಯ ಪ್ರದೇಶದಲ್ಲಿ ಬೆಂಕಿ ಅವಘಡ.
    1
    ಬಳ್ಳಾರಿ  ಕೋಟೆಯ ಪ್ರದೇಶದಲ್ಲಿ ಬೆಂಕಿ ಅವಘಡ.
    user_Voice news Kannada
    Voice news Kannada
    ಬಳ್ಳಾರಿ, ಬಳ್ಳಾರಿ, ಕರ್ನಾಟಕ•
    17 hrs ago
  • ಚಳ್ಳಕೆರೆ ಪಾವಗಡರಸ್ತೆಯ ರೈಲ್ವೇ ಮೇಲು ಸೇತುವೆ ವಿಳಂಬ ವಾಹನಗಳ ಸಂಚಾರಕ್ಕೆ ಕಿರಿಕಿರಿ ಮೇಲ್ಸೇತುವೆ ಕಾಮಗಾರಿ ಆರಂಭ ಯಾವಗ
    1
    ಚಳ್ಳಕೆರೆ ಪಾವಗಡರಸ್ತೆಯ ರೈಲ್ವೇ ಮೇಲು ಸೇತುವೆ ವಿಳಂಬ ವಾಹನಗಳ ಸಂಚಾರಕ್ಕೆ ಕಿರಿಕಿರಿ ಮೇಲ್ಸೇತುವೆ ಕಾಮಗಾರಿ ಆರಂಭ ಯಾವಗ
    user_ಗೋಪನಹಳ್ಳಿಶಿವಣ್ಣ
    ಗೋಪನಹಳ್ಳಿಶಿವಣ್ಣ
    Local News Reporter ಚಳ್ಳಕೆರೆ, ಚಿತ್ರದುರ್ಗ, ಕರ್ನಾಟಕ•
    13 hrs ago
  • KOLAR KI.AWAAZ KOUSAR NEWS
    1
    KOLAR KI.AWAAZ KOUSAR NEWS
    user_KOLAR KI.AWAAZ KOUSAR NEWS
    KOLAR KI.AWAAZ KOUSAR NEWS
    Rock shop ದೊಡ್ ಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಕರ್ನಾಟಕ•
    23 hrs ago
  • ದೇವನಹಳ್ಳಿ ದೇವನಹಳ್ಳಿ ಹೊಟೇಲ್ ಮಾಲೀಕರಿಗೂ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬಿಸಿ. ಕೆಂಪೇಗೌಡ ಏರ್ ಪೋರ್ಟ್ ಸುತ್ತಲಿರುವ ಹೊಟೇಲ್ ಉದ್ಯಮಕ್ಕೆ ಭಾರೀ ಹೊಡೆತ. ಗ್ಯಾಸ್ ಸಿಲಿಂಡರ್ ಸಮರ್ಪಕ ಪೂರೈಕಿಯಿಂದ ಕಂಗಾಲಾದ ಹೊಟೇಲ್ ಮಾಲೀಕರು. ದೇವನಹಳ್ಳಿ ಪಟ್ಟಣದ 100ಕ್ಕೂ ಹೆಚ್ಚು ಹೊಟೇಲ್ ಗಳಿಗ ಪೂರೈಕೆ ಹಾಗದ ಸಿಲಿಂಡರ್. ಹತ್ತು ಸಿಲಿಂಡರ್ ಪೂರೈಕೆ ಆಗ್ತಿದ್ದ ಹೊಟೇಲ್ ಗಳಿಗೆ ಈಗ ಒಂದೆರಡು ಸಿಲಿಂಡರ್ ಪೂರೈಕೆ. ಗ್ರಾಹಕರಿಗೆ ಪೂರ್ಣ ಪ್ರಮಾಣದಲ್ಲಿ ಆಹಾರ ಕೊಡಲು ಆಗ್ತಿಲ್ಲ ಎಂದು ಹೆಡ್ ಕುಕ್ ಅಳಲು ಇದರ ನಡುವೆ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೆಲೆ ಕೂಡ ಹೆಚ್ಚು ಒಂದು ಸಿಲಿಂಡರ್ ಮೇಲೆ ಹೆಚ್ಚುವರಿ ಬೆಲೆ ಕೊಟ್ಟು ಖರೀದಿಸುತ್ತಿರುವ ಮಾಲೀಕರು. ಕೂಡಲೇ ಸಿಲಿಂಡರ್ ಸಮಸ್ಯೆ ಬಗೆಹರಿಸಲು ಸರ್ಕಾರಕ್ಕೆ ಒತ್ತಾಯ. ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ಭಾಗದ ಹೊಟೇಲ್ ಮಾಲೀಕರಿಗೆ ಸಂಕಷ್ಟ. ................
    1
    ದೇವನಹಳ್ಳಿ
ದೇವನಹಳ್ಳಿ ಹೊಟೇಲ್ ಮಾಲೀಕರಿಗೂ ಕಮರ್ಷಿಯಲ್ ಗ್ಯಾಸ್  ಸಿಲಿಂಡರ್ ಬಿಸಿ.
ಕೆಂಪೇಗೌಡ ಏರ್ ಪೋರ್ಟ್ ಸುತ್ತಲಿರುವ ಹೊಟೇಲ್ ಉದ್ಯಮಕ್ಕೆ ಭಾರೀ ಹೊಡೆತ.
ಗ್ಯಾಸ್ ಸಿಲಿಂಡರ್ ಸಮರ್ಪಕ ಪೂರೈಕಿಯಿಂದ ಕಂಗಾಲಾದ ಹೊಟೇಲ್ ಮಾಲೀಕರು.
ದೇವನಹಳ್ಳಿ ಪಟ್ಟಣದ 100ಕ್ಕೂ ಹೆಚ್ಚು ಹೊಟೇಲ್ ಗಳಿಗ ಪೂರೈಕೆ ಹಾಗದ ಸಿಲಿಂಡರ್.
ಹತ್ತು ಸಿಲಿಂಡರ್ ಪೂರೈಕೆ ಆಗ್ತಿದ್ದ ಹೊಟೇಲ್ ಗಳಿಗೆ ಈಗ ಒಂದೆರಡು ಸಿಲಿಂಡರ್ ಪೂರೈಕೆ.
ಗ್ರಾಹಕರಿಗೆ ಪೂರ್ಣ ಪ್ರಮಾಣದಲ್ಲಿ ಆಹಾರ ಕೊಡಲು ಆಗ್ತಿಲ್ಲ ಎಂದು ಹೆಡ್ ಕುಕ್ ಅಳಲು
ಇದರ ನಡುವೆ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೆಲೆ ಕೂಡ ಹೆಚ್ಚು
ಒಂದು ಸಿಲಿಂಡರ್ ಮೇಲೆ ಹೆಚ್ಚುವರಿ ಬೆಲೆ ಕೊಟ್ಟು ಖರೀದಿಸುತ್ತಿರುವ ಮಾಲೀಕರು.
ಕೂಡಲೇ ಸಿಲಿಂಡರ್ ಸಮಸ್ಯೆ ಬಗೆಹರಿಸಲು ಸರ್ಕಾರಕ್ಕೆ ಒತ್ತಾಯ.
ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ಭಾಗದ ಹೊಟೇಲ್ ಮಾಲೀಕರಿಗೆ ಸಂಕಷ್ಟ.
................
    user_Bengaluru Rural News
    Bengaluru Rural News
    ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ, ಕರ್ನಾಟಕ•
    11 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.