ನಾಳೆಯಿಂದ ಅಡಹಳ್ಳಟ್ಟಿ ಶ್ರೀ ಬಸವೇಶ್ವರ ಜಾತ್ರೆ ಅಥಣಿ : ತಾಲೂಕಿನ ಅಡಹಳ್ಳಟ್ಟಿ ಗ್ರಾಮದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವ ಏ.20 ರಿಂದ 24ರವರೆಗೆ ಹಲ್ಯಾಳ ವಿರಕ್ತಮಠದ ಮ.ನಿ.ಪ್ರ ಸಿದ್ದರಾಮೆಶ್ವರ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ಜರುಗಲಿದೆ. 20 ರಂದು ಶ್ರೀ ಬಸವೇಶ್ವರ ಮೂರ್ತಿಗೆ ರುದ್ರಾಭಿಷೇಕ, ಮಹಾಪೂಜೆ ಜರುಗುವುದು. ಸಂಜೆ 6 ಕ್ಕೆ ಖಿಳೇಗಾಂವ ಬಸವಣ್ಣನವರ ಭಾವಚಿತ್ರ ಮೆರವಣಿಗೆ, ಬಳಿಕ ಸುಮಂಗಲಿಯರಿಂದ ಬಸವೇಶ್ವರ ನಾಮಕರಣ ಜರುಗುವುದು. ರಾತ್ರಿ 10ಕ್ಕೆ ಶ್ರೀ ದಾನಮ್ಮದೇವಿ ಮಹಾತ್ಮೆ ನಾಟಕ ಪ್ರದರ್ಶನಗೊಳ್ಳಲಿದೆ. 21ರಂದು ಬೆಳಗ್ಗೆ 10 ಗಂಟೆಗೆ ಬಸವಶ್ರೀ ಸೇವಾ ಸಂಘದಿಂದ ವಚನಸ್ಪರ್ಧೆ ಹಾಗೂ ರಸಪ್ರಶ್ನೆ ಜರುಗುವುದು. ಸಂಜೆ 6 ಗಂಟೆಗೆ ಶಿವಬಸವ ಹಾಗೂ ಶಿಕ್ಷಕರ ಬಳಗದಿಂದ ಕನ್ನಡ ಕೋಟ್ಯಾಧಿಪತಿ ಮಾದರಿಯಲ್ಲಿ ಜಾಣಕನ್ನಡಿಗ ರಸಪ್ರಶ್ನೆ ಸ್ಪರ್ಧೆ ನಡೆಯಲಿದೆ. ರಾತ್ರಿ 10 ಗಂಟೆಗೆ ಹರದೇಶಿ, ನಾಗೇಶಿ ಹಾಗೂ ಗೀಗೀ ಪದಗಳು ಜರುಗಲಿವೆ. 22ರಂದು ಬೆಳಗ್ಗೆ 10 ರಿಂದ ಚೀಲ, ಗುಂಡು ಹಾಗೂ ಸಂಗ್ರಾಮ ಕಲ್ಲು ಎತ್ತುವ ಸ್ಪರ್ಧೆಗಳು ಜರುಗಲಿವೆ. ಸಂಜೆ 7 ಗಂಟೆಗೆ ನಡೆಯುವ ಸಮಾರಂಭದಲ್ಲಿ ಸಂಕದ ಶಿವಲಿಂಗೇಶ್ವರ ಸ್ವಾಮೀಜಿ, ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ಅಥಣಿ ಶಾಸಕ ಲಕ್ಷ್ಮಣ ಸವದಿ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳಿದ್ದಾರೆ. 23 ರಂದು ಸಂಜೆ 4 ಗಂಟೆಗೆ ರಾಷ್ಟ್ರಮಟ್ಟದ ಜಂಗಿ ನಿಕಾಲಿ ಕುಸ್ತಿ ಪಂದ್ಯಾವಳಿ ಜರುಗಲಿದೆ. ರಾತ್ರಿ 10ಕ್ಕೆ ಹೆತ್ತವರ ಕನಸು ನಾಟಕ ಪ್ರದರ್ಶನಗೊಳ್ಳಲಿದೆ. 24ರಂದು ಬೆಳಗ್ಗೆ 10 ರಿಂದ 12 ಗಂಟೆವರೆಗೆ ಪಲ್ಕಕ್ಕಿ ಉತ್ಸವ ಹಾಗೂ ಸಂಗೀತ ರಸಮಂಜರಿ ಕಾರ್ಯಕ್ರಮ ಜರುಗಲಿವೆ ಎಂದು ಜಾತ್ರಾ ಕಮಿಟಿ ತಿಳಿಸಿದೆ,

- ಬೆವನೂರ ಗ್ರಾಮದಲ್ಲಿ ರವಿವಾರ ಗಾಳಿ ಮಳೆಗೆ ನೆಲಕ್ಕುರುಳಿದ 50 ಕ್ಕೂ ಅಧಿಕ ಲೈಟ್ ಕಂಬಗಳು . ಅಥಣಿ :ಬೆವನೂರ ಗ್ರಾಮದಲ್ಲಿ ರವಿವಾರ ಗಾಳಿ ಮಳೆಗೆ 50 ಕ್ಕೂ ಅಧಿಕ ಲೈಟ್ ಕಂಬಗಳು ನೆಲಕ್ಕುರುಳಿವೆ. ಅಕಸ್ಮಾತ್ ಅಷ್ಟೇ ಅಲ್ಲ ಸುದೈವ ವಶಾತ ಜೀವಹಾನಿ ಸಂಭವಿಸಿಲ್ಲ.1
- Post by @april14news1
- ಮುಧೋಳ: ಬಿಸಿಲಿನ ಬೇಗೆಯಿಂದ ಕಂಗಾಲಾಗಿದ್ದ ಮುಧೋಳ ನಗರ ಸೇರಿದಂತೆ ತಾಲೂಕಿನಾದ್ಯಂತ ಭಾನುವಾರ ಸಂಜೆ ಹಠಾತ್ ಗಾಳಿ ಸಮೇತ ಸುರಿದ ಆಲಿಕಲ್ಲು ಮಳೆ ಜನತೆಗೆ ತಂಪೆರೆಯುವ ಜೊತೆಗೆ ರೈತರ ಎದೆಯಲ್ಲಿ ನಡುಕ ಹುಟ್ಟಿಸಿದೆ. ಮಧ್ಯಾಹ್ನದವರೆಗೆ ಸುಡುವ ಬಿಸಿಲಿನಿಂದ ಕೂಡಿದ್ದ ವಾತಾವರಣವು ಸಂಜೆ ಹೊತ್ತಿಗೆ ಏಕಾಏಕಿ ಬದಲಾಗಿ, ಗುಡುಗು ಸಿಡಿಲಿನ ಆರ್ಭಟದೊಂದಿಗೆ ಭಾರಿ ಮಳೆ ಸುರಿಯಿತು. ಮಳೆಯ ಜೊತೆಗೆ ಗೋಲಿ ಗಾತ್ರದ ಆಲಿಕಲ್ಲುಗಳು ಬಿಳಿಯ ಹಾಸಿನಂತೆ ರಸ್ತೆ ಹಾಗೂ ತೋಟಗಳಲ್ಲಿ ಬಿದ್ದಿರುವುದು ಕಂಡುಬಂತು. ಆಲಿಕಲ್ಲು ಮಳೆಯ ಹೊಡೆತಕ್ಕೆ ಈ ಭಾಗದ ಪ್ರಮುಖ ಬೆಳೆಗಳಾದ ಕಬ್ಬು, ದ್ರಾಕ್ಷಿ ಮತ್ತು ಬಾಳೆ ತೋಟಗಳಿಗೆ ಹಾನಿಯಾದ ವರದಿಯಾಗಿದೆ. ವಿಶೇಷವಾಗಿ ಕಟಾವಿಗೆ ಬಂದಿರುವ ಬೆಳೆಗಳು ನೆಲಕಚ್ಚುವ ಭೀತಿ ಎದುರಾಗಿದ್ದು, ಅನ್ನದಾತರು ಆತಂಕಕ್ಕೀಡಾಗಿದ್ದಾರೆ. ನಗರದ ತಗ್ಗು ಪ್ರದೇಶಗಳ ರಸ್ತೆಗಳಲ್ಲಿ ನೀರು ನುಗ್ಗಿ1
- ಚಿಕ್ಕೋಡಿ : ಬಿರುಗಾಳಿಯಿಂದ ರಸ್ತೆ ಮೇಲೆ ಬಿದ್ದ ಮರ ಮತ್ತು ಲೈಟ್ ಕಂಬ ಕುಸಿತ,ಚಿಕ್ಕೋಡಿ ಟು ಜೋಡಕುರಳಿ ರಸ್ತೆ ಬಂದ, ಸ್ಥಳಕೆ ಭೇಟೆ ನೀಡಿದ ಹೆಸ್ಕಾಂ ಸಿಬ್ಬಂದಿ2
- ಬಸವ ಜಯಂತಿ ನಿಮಿತ್ತ ಈ ದಿನ ವಿಜಯಪುರ ನಗರದಲ್ಲಿನ ಬಸವಣ್ಣನವರ ಪುತ್ಥಳಿಗೆ ವಿವಿಧ ಗಣ್ಯರು ಭಕ್ತಿಯಿಂದ ಮಾಲಾರ್ಪಣೆ ಮಾಡಿದರು. ಆ ಮೇರು ಪುರುಷನ ಆದರ್ಶಗಳು ಹಾಗೂ ವಚನ ಸಂದೇಶಗಳನ್ನು ಸ್ಮರಿಸುತ್ತಾ ನಮಸ್ಕರಿಸಿದರು. ವಿಜಯಪುರ ಜಿಲ್ಲೆಯ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ, ಶಾಸಕ ಬಸನಗೌಡ ಪಾಟೀಲ ಯತ್ನಾಳ, ಮಹಾನಗರ ಪಾಲಿಕೆ ಮೇಯರ್ ಎಂ.ಎಸ್.ಕರಡಿ ಸೇರಿದಂತೆ ಹಲವು ಗಣ್ಯರು ಗೌರವ ಸಲ್ಲಿಸಿದರು. ವಿಶ್ವಗುರು ಬಸವಣ್ಣನವರ ಜನ್ಮಸ್ಥಳ ಬಸವನ ಬಾಗೇವಾಡಿಯಿಂದ ಬಸವ ಜ್ಯೋತಿಯನ್ನು ಹಿಡಿದು, ವಿಜಯಪುರ ಬಸವೇಶ್ವರ ವೃತ್ತದವರೆಗೆ ಪಾದಯಾತ್ರೆ ಕೈಗೊಂಡಿದ್ದ ವಿಜಯಪುರ ಸೈಕ್ಲಿಂಗ್ ಗ್ರೂಪ್ ಸದಸ್ಯರನ್ನು, ವಿವಿಧ ಸಂಘಟನೆಗಳ ಕಾರ್ಯಕರ್ತರನ್ನು ಹಾಗೂ ನೂರಾರು ಬಸವಭಕ್ತರನ್ನು ಈ ಸಂದರ್ಭದಲ್ಲಿ ಆತ್ಮೀಯವಾಗಿ ಸ್ವಾಗತಿಸಲಾಯಿತು ಈ ಐತಿಹಾಸಿಕ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದ ಉತ್ಸಾಹಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಿ ಗೌರವಿಸಿದರು. ಭಕ್ತಿಪೂರ್ವಕ ಪಾದಯಾತ್ರೆಯು ನಮ್ಮ ನಾಡಿನಲ್ಲಿ ಬಸವ ತತ್ವದ ಜಾಗೃತಿಯನ್ನು ಮತ್ತಷ್ಟು ಹೆಚ್ಚಿಸಲಿ ಎಂಬ ಆಶಯ ವ್ಯಕ್ತವಾಯಿತು.1
- ಭಾಲ್ಕಿಯಲ್ಲಿ ಬೃಹತ್ ಆರೋಗ್ಯ ಶಿಬಿರ: 180 ಜನರಿಗೆ ತಪಾಸಣೆ, 101 ಯುವಕರಿಂದ ರಕ್ತದಾನ ಆರೋಗ್ಯವೇ ಭಾಗ್ಯ: ಭಾಲ್ಕಿಯ ಚನ್ನಬಸವಾಶ್ರಮದಲ್ಲಿ ಮಾನವೀಯತೆಯ ಮೆರಗು; 101 ಯುನಿಟ್ ರಕ್ತ ಸಂಗ್ರಹ #JB_News_Kannada1
- *ರಾಯಬಾಗದಲ್ಲಿ ಬಸವ ಜಯಂತಿಯ ಹಳ್ಳಿ ಸೊಬಗು: ಶಿಕ್ಷಣ ಪ್ರೇಮಿ ಪಾಟೀಲ ಪರಿವಾರದ ಜನಸೇವೆಗೆ ಸಾಕ್ಷಿಯಾದ ಶೋಭಾಯಾತ್ರೆ* ಕಾಯಕವೇ ಕೈಲಾಸ ಎಂದು ಸಾರಿದ ಜಗಜ್ಯೋತಿ ಬಸವಣ್ಣನವರ ಜಯಂತಿಯ ನಿಮಿತ್ತ ಇಂದು ರಾಯಬಾಗ ಪಟ್ಟಣ ಭಕ್ತಿ ಮತ್ತು ಸಂಭ್ರಮದ ಕಡಲಲ್ಲಿ ತೇಲಿತು. ಪಟ್ಟಣದಾದ್ಯಂತ ಹಮ್ಮಿಕೊಳ್ಳಲಾಗಿದ್ದ ಭವ್ಯ ಶೋಭಾಯಾತ್ರೆಯು ಹಳ್ಳಿಯ ಸೊಬಗನ್ನು ಮರುಸೃಷ್ಟಿಸಿ ನೋಡುಗರ ಕಣ್ಮನ ಸೆಳೆಯಿತು. ಹಿಂದೂ ಧರ್ಮದಲ್ಲಿ ಬಸವಣ್ಣ ಅಥವಾ ನಂದಿ ಎಂದು ಪೂಜಿಸಲ್ಪಡುವ ಸುಮಾರು 170ಕ್ಕೂ ಹೆಚ್ಚು ಎತ್ತುಗಳನ್ನು ಅತ್ಯಂತ ಸುಂದರವಾಗಿ ಅಲಂಕರಿಸಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವಂತೆ ಮಾಡಲಾಗಿತ್ತು. ಸಾಲು ಸಾಲಾಗಿ ಸಾಗುತ್ತಿದ್ದ ಈ ಎತ್ತುಗಳ ಗಾಂಭೀರ್ಯವು ಗ್ರಾಮೀಣ ಸೊಬಗನ್ನು ಎತ್ತಿ ತೋರಿಸುವಂತಿತ್ತು. ಮೆರವಣಿಗೆಯ ಮುಂಚೂಣಿಯಲ್ಲಿ ಕಂಗೊಳಿಸುತ್ತಿದ್ದ ಬಸವಣ್ಣನವರ ಬೃಹತ್ ಪುತ್ಥಳಿಯು ಭಕ್ತರ ಪಾಲಿಗೆ ದರ್ಶನ ಭಾಗ್ಯವನ್ನೇ ನೀಡಿತು. ರಾಯಬಾಗದ ಇತಿಹಾಸದಲ್ಲಿ ವಸಂತರಾವ್ ಪಾಟೀಲ್ ಅವರ ಕುಟುಂಬದ ಹೆಸರು ಅಚ್ಚಳಿಯದಂತದ್ದು. ಅಜ್ಜನ ಕಾಲದಿಂದಲೂ ಬಡವರಿಗೆ ಅಕ್ಷರ ದಾಸೋಹ ಮಾಡುತ್ತಾ ಬಂದಿರುವ ಈ ಕುಟುಂಬ, ಸಾವಿರಾರು ಜನ ಶಿಕ್ಷಣ ಪಡೆದು ಉನ್ನತ ಹುದ್ದೆಗಳನ್ನು ಅಲಂಕರಿಸಲು ಕಾರಣವಾಗಿದೆ. ಇಂದಿಗೂ ಶಿಕ್ಷಣ ಪ್ರೇಮಿಯಾಗಿ ಬಡ ಮಕ್ಕಳ ಪಾಲಿನ ಆಶಾಕಿರಣವಾಗಿರುವ ವಸಂತರಾವ್ ಪಾಟೀಲ್ ಅವರ ಸರಳತೆ ಎಲ್ಲರಿಗೂ ಮಾದರಿ. ಈ ಮೆರವಣಿಗೆಯ ವಿಶೇಷ ಆಕರ್ಷಣೆಯೆಂದರೆ, ಹಿರಿಯರು ಮತ್ತು ಯುವಕರ ಹೃದಯದಲ್ಲಿ ಸ್ಥಾನ ಪಡೆದಿರುವ ಯುವ ನಾಯಕ ಪ್ರಣಯ್ ಅಣ್ಣ ಪಾಟೀಲ್ ಅವರ ಮೇಲಿನ ಅಭಿಮಾನ. ಸಮಾಜ ಸೇವೆಯಲ್ಲಿ ಸದಾ ಮುಂಚೂಣಿಯಲ್ಲಿರುವ ಅವರ ಭಾವಚಿತ್ರವನ್ನು ಎತ್ತುಗಳ ಮೇಲೆ ಕಲಾತ್ಮಕವಾಗಿ ಬಿಡಿಸಿದ್ದು, ಜನರ ವಿಶೇಷ ಗಮನ ಸೆಳೆಯಿತು. "ಶಿಕ್ಷಣದ ಮೂಲಕ ಬದುಕು ಕಟ್ಟಿಕೊಟ್ಟ ಹಿರಿಯರು ಒಂದೆಡೆಯಾದರೆ, ಸಮಾಜ ಸೇವೆಯ ಮೂಲಕ ಯುವ ಶಕ್ತಿಯನ್ನು ಸಂಘಟಿಸುತ್ತಿರುವ ಪ್ರಣಯ್ ಅಣ್ಣ ಪಾಟೀಲ್ ಅವರ ನಾಯಕತ್ವ ರಾಯಬಾಗಕ್ಕೆ ಹೆಮ್ಮೆ."1
- 'ಶ್ರಮಿಕ ವಸತಿ ಶಾಲೆ'ಯ ನಿರ್ಮಾಣಕ್ಕೆ ಅಥಣಿ ಶಾಸಕ ಲಕ್ಷ್ಮಣ ಸವದಿ ಭೂಮಿಪೂಜೆ. ಅಥಣಿ : ಕರ್ನಾಟಕ ಸರ್ಕಾರದ ಕಾರ್ಮಿಕ ಇಲಾಖೆ ವತಿಯಿಂದ ಅಥಣಿ ತಾಲ್ಲೂಕಿನಲ್ಲಿ ಅತ್ಯಾಧುನಿಕ ಸೌಲಭ್ಯವುಳ್ಳ 'ಶ್ರಮಿಕ ವಸತಿ ಶಾಲೆ'ಯ ನಿರ್ಮಾಣಕ್ಕೆ ಮಾಜಿ ಉಪಮುಖ್ಯ ಮಂತ್ರಿಗಳು ಹಾಗೂ ಅಥಣಿ ಶಾಸಕರಾದ ಲಕ್ಷ್ಮಣ ಸಂಗಪ್ಪ ಸವದಿ ಅವರು ಭೂಮಿ ಪೂಜೆ ನೆರವೇರಿಸಿದರು. ಕರ್ನಾಟಕ ಸರ್ಕಾರದ ಕಾರ್ಮಿಕ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯ ವತಿಯಿಂದ ಅಥಣಿಯ ಚಿಕ್ಕಟ್ಟಿ ಗ್ರಾಮದ ಸತ್ತಿ ರಸ್ತೆ ಬಳಿ ನಿರ್ಮಿಸಲಾಗುತ್ತಿರುವ 'ಶ್ರಮಿಕ ವಸತಿ ಶಾಲೆ'ಗೆ ಭೂಮಿಪೂಜೆ ನೆರವೇರಿಸಿದರು. ನಮ್ಮ ತಾಲೂಕಿನಲ್ಲಿ ಇರುವ ಏಳು ಸಾವಿರ ಕಾರ್ಮಿಕರ ಕಾರ್ಮಿಕ ವರ್ಗದ ಮಕ್ಕಳು ಆರ್ಥಿಕ ಸಂಕಷ್ಟದಿಂದ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಶ್ರಮಿಕ ವಸತಿ ಶಾಲೆಯನ್ನು ಅಥಣಿಯಲ್ಲಿ ಸ್ಥಾಪಿಸಲಾಗುತ್ತಿದೆ. ಅಥಣಿ ತಾಲ್ಲೂಕಿನಲ್ಲಿ 36.25 ಕೋಟಿ ರೂಪಾಯಿಗಳ ಬೃಹತ್ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಶಾಲೆ 6ರಿಂದ 12 ನೇ ತರಗತಿ ಓದುವ ಈ ಭಾಗದ ನೂರಾರು ಕಾರ್ಮಿಕ ಕುಟುಂಬಗಳ ಮಕ್ಕಳಿಗೆ ಉಚಿತವಾಗಿ ಗುಣಮಟ್ಟದ ಶಿಕ್ಷಣ ಹಾಗೂ ವಸತಿ ಸೌಲಭ್ಯವನ್ನು ಒದಗಿಸಲಿದೆ.ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳು ಈ ಶಾಲೆಯ ಫಲಾನುಭವಿಗಳಾಗಿದ್ದು ಬಡ ದುರ್ಬಲ ವರ್ಗದ ಮಕ್ಕಳ ಪಾಲಿಗೆ ಶೈಕ್ಷಣಿಕವಾಗಿ ಕಾರ್ಮಿಕರು ಇದರ ಸೌಲಭ್ಯ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಶಾಸಕ ಸವದಿ ಹೇಳಿದರು. ಈ ಸಂದರ್ಭದಲ್ಲಿ ಶೆಟ್ಟರ್ ಮಠದ ಪರಮಪೂಜ್ಯ ಮರುಳಸಿದ್ದ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು ,ಪುರಸಭೆ ಉಪಾಧ್ಯಕ್ಷರಾದ ಭುವನೇಶ್ವರಿ ಯಕ್ಕಂಚಿ, ಸ್ಥಾಯಿ ಸಮಿತಿ ಅಧ್ಯಕ್ಷ ದತ್ತಾ ವಾಸ್ಟರ್, ಡಿ ಜಿ ನಾಗೇಶ ಉಪನಿರ್ದೇಶಕರು,ಜಿಲ್ಲಾ ಅಧಿಕಾರಿ ಮಲ್ಲಿಕಾರ್ಜುನ ಜೋಗುರ , ಅಥಣಿ ತಾಲೂಕು ಕಾರ್ಮಿಕ ಇಲಾಖೆಯ ಅಧಿಕಾರಿ ಭುವನೇಶ್ವರಿ ಢಾಲೇ,ಪ್ರಕಾಶ ಮಹಾಜನ, ಪುರಸಭೆ ಚುನಾಯಿತ ಹಾಗೂ ನಾಮನಿರ್ದೆಶೀತ ಸದಸ್ಯರು ,ಮುಖಂಡರು ಉಪಸ್ಥಿತರಿದ್ದರು.3