logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.) ವತಿಯಿಂದ ಮುಂಬರುವ ಜುಲೈ 13 ರಂದು ಹುಳಿಯಾರಿನ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಿರುವ ‘ಮಧ್ಯವರ್ಜನ ಶಿಬಿರ’ದ ಯಶಸ್ಸಿಗಾಗಿ ಪೂರ್ವಭಾವಿ ಸಭೆಯನ್ನು ನಡೆಸಲಾಯಿತು. ಪಟ್ಟಣದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಈ ಸಭೆಯಲ್ಲಿ, ಶಿಬಿರದ ಸುಗಮ ನಿರ್ವಹಣೆಗಾಗಿ ನೂತನ ‘ವ್ಯವಸ್ಥಾಪನಾ ಸಮಿತಿ’ಯನ್ನು ರಚಿಸಲಾಯಿತು. ಎಸ್ ಆರ್ ಎಸ್ ದಯಾನಂದ್ ಅವರನ್ನು ಸರ್ವಾನುಮತದಿಂದ ಈ ಸಮಿತಿಯ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಸಮಿತಿಯ ಗೌರವ ಸಲಹೆಗಾರರಾಗಿ ಬಡಗಿ ರಾಮಣ್ಣ, ಎಲ್. ಆರ್. ಚಂದ್ರಶೇಖರ್, ರವೀಶ್, ತಮ್ಮಯ್ಯ, ಕಿರಣ್ ಕುಮಾರ್ ಹಾಗೂ ಬಿಬಿ ಫಾತಿಮಾ ಅವರನ್ನು ಆಯ್ಕೆ ಮಾಡಲಾಯಿತು. ಗೌಡಿ, ನರೇಂದ್ರ ಬಾಬು, ವೈ.ಎನ್. ನಾಗರಾಜು, ಚಂದ್ರಣ್ಣ, ಫಕ್ರುದ್ದೀನ್, ರಾಮಕೃಷ್ಣಪ್ಪ, ಬೇಕರಿ ಪ್ರಕಾಶ್ ಅವರು ಶಿಬಿರದ ಉಪಾಧ್ಯಕ್ಷರುಗಳಾಗಿ ನೇಮಕಗೊಂಡರು. ಇದರ ಜೊತೆಗೆ, ಪೂಜಿತ ಕೋಶಾಧಿಕಾರಿಯಾಗಿ, ಡಾ. ಸಿದ್ದರಾಮಯ್ಯ ಶಿಬಿರದ ವೈದ್ಯರಾಗಿ, ಮತ್ತು ರವೀಶ್ ಯೋಗ ಶಿಕ್ಷಕರಾಗಿ ಆಯ್ಕೆಯಾದರು.

2 hrs ago
user_Huliyarkiran
Huliyarkiran
ಚಿಕ್ಕನಾಯಕನಹಳ್ಳಿ, ತುಮಕೂರು, ಕರ್ನಾಟಕ•
2 hrs ago
1db52e32-a11c-4e72-92ed-cc6d7770dc2f

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.) ವತಿಯಿಂದ ಮುಂಬರುವ ಜುಲೈ 13 ರಂದು ಹುಳಿಯಾರಿನ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಿರುವ ‘ಮಧ್ಯವರ್ಜನ ಶಿಬಿರ’ದ ಯಶಸ್ಸಿಗಾಗಿ ಪೂರ್ವಭಾವಿ ಸಭೆಯನ್ನು ನಡೆಸಲಾಯಿತು. ಪಟ್ಟಣದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಈ ಸಭೆಯಲ್ಲಿ, ಶಿಬಿರದ ಸುಗಮ ನಿರ್ವಹಣೆಗಾಗಿ ನೂತನ ‘ವ್ಯವಸ್ಥಾಪನಾ ಸಮಿತಿ’ಯನ್ನು ರಚಿಸಲಾಯಿತು. ಎಸ್ ಆರ್ ಎಸ್ ದಯಾನಂದ್ ಅವರನ್ನು ಸರ್ವಾನುಮತದಿಂದ ಈ ಸಮಿತಿಯ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಸಮಿತಿಯ ಗೌರವ ಸಲಹೆಗಾರರಾಗಿ ಬಡಗಿ ರಾಮಣ್ಣ, ಎಲ್. ಆರ್. ಚಂದ್ರಶೇಖರ್, ರವೀಶ್, ತಮ್ಮಯ್ಯ, ಕಿರಣ್ ಕುಮಾರ್ ಹಾಗೂ ಬಿಬಿ ಫಾತಿಮಾ ಅವರನ್ನು ಆಯ್ಕೆ ಮಾಡಲಾಯಿತು. ಗೌಡಿ, ನರೇಂದ್ರ ಬಾಬು, ವೈ.ಎನ್. ನಾಗರಾಜು, ಚಂದ್ರಣ್ಣ, ಫಕ್ರುದ್ದೀನ್, ರಾಮಕೃಷ್ಣಪ್ಪ, ಬೇಕರಿ ಪ್ರಕಾಶ್ ಅವರು ಶಿಬಿರದ ಉಪಾಧ್ಯಕ್ಷರುಗಳಾಗಿ ನೇಮಕಗೊಂಡರು. ಇದರ ಜೊತೆಗೆ, ಪೂಜಿತ ಕೋಶಾಧಿಕಾರಿಯಾಗಿ, ಡಾ. ಸಿದ್ದರಾಮಯ್ಯ ಶಿಬಿರದ ವೈದ್ಯರಾಗಿ, ಮತ್ತು ರವೀಶ್ ಯೋಗ ಶಿಕ್ಷಕರಾಗಿ ಆಯ್ಕೆಯಾದರು.

More news from ಕರ್ನಾಟಕ and nearby areas
  • ಶಿವಮೊಗ್ಗದ ಪ್ರತಿಷ್ಠಿತ ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (SIMS)ಯ 14ನೇ ಪದವಿ ಪ್ರದಾನ ಸಮಾರಂಭ 'ಅನ್ವಯ'ವು ಅದ್ದೂರಿಯಾಗಿ ನೆರವೇರಿತು. ಈ ಸಮಾರಂಭದಲ್ಲಿ ವೈದ್ಯಕೀಯ ಪದವಿ ಪಡೆದ ನೂರಾರು ವಿದ್ಯಾರ್ಥಿಗಳಲ್ಲಿ, ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಬೋರನಕಣಿವೆ ಜಲಾಶಯದ ವ್ಯಾಪ್ತಿಯ ಹೊಯ್ಸಳಕಟ್ಟೆ ಗ್ರಾಮದ ಬಡ ರೈತ ಕುಟುಂಬದ ಸಿಂಧು ಎಚ್.ಎಸ್. ಅವರ ಸಾಧನೆ ಎಲ್ಲರ ಗಮನ ಸೆಳೆಯಿತು. ಸರಳ ರೈತ ದಂಪತಿಗಳಾದ ಶ್ರೀ ಸಿದ್ದಯ್ಯ ಎಚ್.ವಿ. ಹಾಗೂ ಶ್ರೀಮತಿ ತಿಮ್ಮಕ್ಕ ಅವರ ಮೂರನೇ ಪುತ್ರಿಯಾದ ಸಿಂಧು, ಈಗ ವೈದ್ಯಕೀಯ ಪದವಿ ಮುಗಿಸಿ 'ಡಾಕ್ಟರ್ ಸಿಂಧು' ಆಗಿ ಹೊರಹೊಮ್ಮಿದ್ದಾರೆ. ಯಾವುದೇ ಭವ್ಯ ಹಿನ್ನೆಲೆ ಇಲ್ಲದಿದ್ದರೂ, ನಿರಂತರ ಪರಿಶ್ರಮ ಮತ್ತು ಕಠಿಣ ಛಲದ ಮೂಲಕ ಈ ಸಾಧನೆ ಮಾಡಿರುವ ಡಾ. ಸಿಂಧು, ತಮ್ಮ ಕೃಷಿ ಹಿನ್ನೆಲೆಯ ಕುಟುಂಬದಲ್ಲಿ ವೈದ್ಯೆಯಾದ ಮೊದಲ ವ್ಯಕ್ತಿ. ಪದವಿ ಸ್ವೀಕರಿಸಿದ ಈ ಹೆಮ್ಮೆಯ ಕ್ಷಣದಲ್ಲಿ ಅವರ ಪೋಷಕರ ಕಣ್ಣಾಲಿಗಳು ಆನಂದಬಾಷ್ಪದಿಂದ ತುಂಬಿದ್ದವು. ವೇದಿಕೆಯ ಮೇಲೆ ಗಣ್ಯರಿಂದ ಪದವಿ ಪಡೆಯುವಾಗ ಇಡೀ ಸಭಾಂಗಣ ಚಪ್ಪಾಳೆಯ ಸುರಿಮಳೆಗೈಯಿತು. ಡಾ. ಸಿಂಧು ಅವರನ್ನು "ಕಠಿಣ ಪರಿಶ್ರಮ ಮತ್ತು ಸರಳ ವ್ಯಕ್ತಿತ್ವದವರು, ಪ್ರಕೃತಿ ಪ್ರೇಮಿ" ಎಂದು ಬಣ್ಣಿಸಲಾಯಿತು; ಹಸಿರು ಕಣಿವೆಯ ಸಣ್ಣ ಹಳ್ಳಿಯಿಂದ ಬಂದು ಈಗ ವೈದ್ಯೆಯಾಗಿ ಲೋಕಕ್ಕೆ ಬೆಳಕಾಗಲು ಹೊರಟಿರುವುದು ಹೆಮ್ಮೆಯ ಸಂಗತಿ ಎಂದು ಉಲ್ಲೇಖಿಸಲಾಯಿತು. ನೇರ ನುಡಿ ಹಾಗೂ ಕಠಿಣ ಪರಿಶ್ರಮದ ಮೇಲೆ ಅಪಾರ ನಂಬಿಕೆ ಇಟ್ಟಿರುವ ಡಾ. ಸಿಂಧು, ಕಲೆ ಮತ್ತು ಕೈತೋಟದಂತಹ ಹವ್ಯಾಸಗಳನ್ನೂ ಹೊಂದಿದ್ದಾರೆ. ಕೇವಲ ಪದವಿ ಗಳಿಕೆಗೆ ಸೀಮಿತವಾಗದೆ, ಗ್ರಾಮೀಣ ಭಾಗದ ಬಡ ಜನರಿಗೆ ಚಿಕಿತ್ಸೆ ನೀಡುವ ಮೂಲಕ ಸಮಾಜ ಸೇವೆ ಮಾಡುವ ಉದಾತ್ತ ಮನೋಭಾವವನ್ನು ಅವರು ಮೈಗೂಡಿಸಿಕೊಂಡಿದ್ದಾರೆ. ಒಟ್ಟಾರೆಯಾಗಿ, ಈ ಹಳ್ಳಿಯ ಪ್ರತಿಭೆಯು ವೈದ್ಯಕೀಯ ಕಾಲೇಜಿನ ಅತ್ಯುನ್ನತ ವೇದಿಕೆಯಲ್ಲಿ ಮಿಂಚಿ, ಗ್ರಾಮೀಣ ಭಾಗದ ನೂರಾರು ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದೆ. ಸಂಸ್ಥೆಯ ನಿರ್ದೇಶಕರು ಮತ್ತು ಗಣ್ಯರು ಡಾ. ಸಿಂಧು ಅವರ ವೈದ್ಯಕೀಯ ಜೀವನ ಯಶಸ್ಸು ಹಾಗೂ ಕೀರ್ತಿ ತರಲಿ ಎಂದು ಶುಭ ಹಾರೈಸಿದರು.
    1
    ಶಿವಮೊಗ್ಗದ ಪ್ರತಿಷ್ಠಿತ ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (SIMS)ಯ 14ನೇ ಪದವಿ ಪ್ರದಾನ ಸಮಾರಂಭ 'ಅನ್ವಯ'ವು ಅದ್ದೂರಿಯಾಗಿ ನೆರವೇರಿತು. ಈ ಸಮಾರಂಭದಲ್ಲಿ ವೈದ್ಯಕೀಯ ಪದವಿ ಪಡೆದ ನೂರಾರು ವಿದ್ಯಾರ್ಥಿಗಳಲ್ಲಿ, ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಬೋರನಕಣಿವೆ ಜಲಾಶಯದ ವ್ಯಾಪ್ತಿಯ ಹೊಯ್ಸಳಕಟ್ಟೆ ಗ್ರಾಮದ ಬಡ ರೈತ ಕುಟುಂಬದ ಸಿಂಧು ಎಚ್.ಎಸ್. ಅವರ ಸಾಧನೆ ಎಲ್ಲರ ಗಮನ ಸೆಳೆಯಿತು. ಸರಳ ರೈತ ದಂಪತಿಗಳಾದ ಶ್ರೀ ಸಿದ್ದಯ್ಯ ಎಚ್.ವಿ. ಹಾಗೂ ಶ್ರೀಮತಿ ತಿಮ್ಮಕ್ಕ ಅವರ ಮೂರನೇ ಪುತ್ರಿಯಾದ ಸಿಂಧು, ಈಗ ವೈದ್ಯಕೀಯ ಪದವಿ ಮುಗಿಸಿ 'ಡಾಕ್ಟರ್ ಸಿಂಧು' ಆಗಿ ಹೊರಹೊಮ್ಮಿದ್ದಾರೆ.

ಯಾವುದೇ ಭವ್ಯ ಹಿನ್ನೆಲೆ ಇಲ್ಲದಿದ್ದರೂ, ನಿರಂತರ ಪರಿಶ್ರಮ ಮತ್ತು ಕಠಿಣ ಛಲದ ಮೂಲಕ ಈ ಸಾಧನೆ ಮಾಡಿರುವ ಡಾ. ಸಿಂಧು, ತಮ್ಮ ಕೃಷಿ ಹಿನ್ನೆಲೆಯ ಕುಟುಂಬದಲ್ಲಿ ವೈದ್ಯೆಯಾದ ಮೊದಲ ವ್ಯಕ್ತಿ. ಪದವಿ ಸ್ವೀಕರಿಸಿದ ಈ ಹೆಮ್ಮೆಯ ಕ್ಷಣದಲ್ಲಿ ಅವರ ಪೋಷಕರ ಕಣ್ಣಾಲಿಗಳು ಆನಂದಬಾಷ್ಪದಿಂದ ತುಂಬಿದ್ದವು. ವೇದಿಕೆಯ ಮೇಲೆ ಗಣ್ಯರಿಂದ ಪದವಿ ಪಡೆಯುವಾಗ ಇಡೀ ಸಭಾಂಗಣ ಚಪ್ಪಾಳೆಯ ಸುರಿಮಳೆಗೈಯಿತು. ಡಾ. ಸಿಂಧು ಅವರನ್ನು "ಕಠಿಣ ಪರಿಶ್ರಮ ಮತ್ತು ಸರಳ ವ್ಯಕ್ತಿತ್ವದವರು, ಪ್ರಕೃತಿ ಪ್ರೇಮಿ" ಎಂದು ಬಣ್ಣಿಸಲಾಯಿತು; ಹಸಿರು ಕಣಿವೆಯ ಸಣ್ಣ ಹಳ್ಳಿಯಿಂದ ಬಂದು ಈಗ ವೈದ್ಯೆಯಾಗಿ ಲೋಕಕ್ಕೆ ಬೆಳಕಾಗಲು ಹೊರಟಿರುವುದು ಹೆಮ್ಮೆಯ ಸಂಗತಿ ಎಂದು ಉಲ್ಲೇಖಿಸಲಾಯಿತು.

ನೇರ ನುಡಿ ಹಾಗೂ ಕಠಿಣ ಪರಿಶ್ರಮದ ಮೇಲೆ ಅಪಾರ ನಂಬಿಕೆ ಇಟ್ಟಿರುವ ಡಾ. ಸಿಂಧು, ಕಲೆ ಮತ್ತು ಕೈತೋಟದಂತಹ ಹವ್ಯಾಸಗಳನ್ನೂ ಹೊಂದಿದ್ದಾರೆ. ಕೇವಲ ಪದವಿ ಗಳಿಕೆಗೆ ಸೀಮಿತವಾಗದೆ, ಗ್ರಾಮೀಣ ಭಾಗದ ಬಡ ಜನರಿಗೆ ಚಿಕಿತ್ಸೆ ನೀಡುವ ಮೂಲಕ ಸಮಾಜ ಸೇವೆ ಮಾಡುವ ಉದಾತ್ತ ಮನೋಭಾವವನ್ನು ಅವರು ಮೈಗೂಡಿಸಿಕೊಂಡಿದ್ದಾರೆ.

ಒಟ್ಟಾರೆಯಾಗಿ, ಈ ಹಳ್ಳಿಯ ಪ್ರತಿಭೆಯು ವೈದ್ಯಕೀಯ ಕಾಲೇಜಿನ ಅತ್ಯುನ್ನತ ವೇದಿಕೆಯಲ್ಲಿ ಮಿಂಚಿ, ಗ್ರಾಮೀಣ ಭಾಗದ ನೂರಾರು ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದೆ. ಸಂಸ್ಥೆಯ ನಿರ್ದೇಶಕರು ಮತ್ತು ಗಣ್ಯರು ಡಾ. ಸಿಂಧು ಅವರ ವೈದ್ಯಕೀಯ ಜೀವನ ಯಶಸ್ಸು ಹಾಗೂ ಕೀರ್ತಿ ತರಲಿ ಎಂದು ಶುಭ ಹಾರೈಸಿದರು.
    user_Huliyarkiran
    Huliyarkiran
    ಚಿಕ್ಕನಾಯಕನಹಳ್ಳಿ, ತುಮಕೂರು, ಕರ್ನಾಟಕ•
    20 hrs ago
  • ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಚನ್ನರಾಯನದುರ್ಗ ಹೋಬಳಿಯ ಸಿದ್ದರಬೆಟ್ಟದಲ್ಲಿರುವ ಶ್ರೀ ಬಾಳೆಹೊನ್ನೂರು ಖಾಸಾ ಶಾಖಾ ಮಠದಲ್ಲಿ ಭಾನುವಾರ 20ನೇ ವಾರ್ಷಿಕೋತ್ಸವ, ಸಾಮೂಹಿಕ ವಿವಾಹ ಹಾಗೂ ಜನಜಾಗೃತಿ ಧರ್ಮ ಸಮಾರಂಭ ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಬಾಳೆಹೊನ್ನೂರು ಶ್ರೀರಂಭಾಪುರಿ ಜಗದ್ಗುರು ಡಾ. ವೀರಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ ಅವರು, ಮನುಷ್ಯನ ಬದುಕಿಗೆ ಧರ್ಮ, ಸಂಸ್ಕೃತಿ ಮತ್ತು ಸಂಸ್ಕಾರವೇ ನಿಜವಾದ ಆಸ್ತಿ ಎಂದು ಬಣ್ಣಿಸಿದರು. ಬದುಕಿನ ವಿಕಾಸಕ್ಕೆ ಧರ್ಮವೇ ಅಡಿಪಾಯವಾಗಿದ್ದು, ಧರ್ಮ ಪರಿಪಾಲನೆಯಿಂದ ಮಾತ್ರ ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆ ನೆಲೆಸಲು ಸಾಧ್ಯ ಎಂದರು. ಆಧುನಿಕತೆಯ ಭರಾಟೆಯಲ್ಲಿ ಭಾರತೀಯ ಸಂಸ್ಕೃತಿ ಮತ್ತು ಮೌಲ್ಯಗಳು ಕಣ್ಮರೆಯಾಗುತ್ತಿವೆ ಎಂದು ಶ್ರೀಗಳು ಕಳವಳ ವ್ಯಕ್ತಪಡಿಸಿದರು. ಉತ್ತಮ ಉಡುಗೆ ವ್ಯಕ್ತಿತ್ವವನ್ನು ಬದಲಾಯಿಸಬಹುದೇ ಹೊರತು, ಸಂಸ್ಕಾರ ಮತ್ತು ಸರಳತೆಯೇ ಬದುಕನ್ನು ಶ್ರೀಮಂತಗೊಳಿಸುತ್ತವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿಗಳು ಅಲ್ಪಾವಧಿಯಲ್ಲಿ ಭಕ್ತರ ಹೃದಯದಲ್ಲಿ ಸ್ಥಾನ ಗಳಿಸಿ, ಸಮಾಜಮುಖಿ ಕಾರ್ಯಗಳ ಮೂಲಕ ಮಾದರಿಯಾಗಿದ್ದಾರೆ ಎಂದು ಪ್ರಶಂಸಿಸಿದರು. ಸಿದ್ದರಬೆಟ್ಟ ಶ್ರೀಮಠದ ಪೀಠಾಧ್ಯಕ್ಷ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸಾಮೂಹಿಕ ವಿವಾಹಗಳು ಸಮಾಜದಲ್ಲಿ ಸಮಾನತೆ ಮತ್ತು ಸರಳತೆಯ ಸಂದೇಶವನ್ನು ಸಾರುತ್ತವೆ ಎಂದು ತಿಳಿಸಿದರು. ಶ್ರೀಮಠದ ಬೆಳವಣಿಗೆಗೆ ಭಕ್ತರ ಸಹಕಾರವೇ ನಿಜವಾದ ಶಕ್ತಿ ಎಂದು ಹೇಳಿದ ಅವರು, ಪ್ರತಿವರ್ಷ ಸಮಾಜ ಸೇವೆ ಸಲ್ಲಿಸಿದ ಭಕ್ತರನ್ನು 'ಗುರುಸೇವಾ ರತ್ನ' ಪ್ರಶಸ್ತಿಯ ಮೂಲಕ ಗೌರವಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
    4
    ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಚನ್ನರಾಯನದುರ್ಗ ಹೋಬಳಿಯ ಸಿದ್ದರಬೆಟ್ಟದಲ್ಲಿರುವ ಶ್ರೀ ಬಾಳೆಹೊನ್ನೂರು ಖಾಸಾ ಶಾಖಾ ಮಠದಲ್ಲಿ ಭಾನುವಾರ 20ನೇ ವಾರ್ಷಿಕೋತ್ಸವ, ಸಾಮೂಹಿಕ ವಿವಾಹ ಹಾಗೂ ಜನಜಾಗೃತಿ ಧರ್ಮ ಸಮಾರಂಭ ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಬಾಳೆಹೊನ್ನೂರು ಶ್ರೀರಂಭಾಪುರಿ ಜಗದ್ಗುರು ಡಾ. ವೀರಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ ಅವರು, ಮನುಷ್ಯನ ಬದುಕಿಗೆ ಧರ್ಮ, ಸಂಸ್ಕೃತಿ ಮತ್ತು ಸಂಸ್ಕಾರವೇ ನಿಜವಾದ ಆಸ್ತಿ ಎಂದು ಬಣ್ಣಿಸಿದರು. ಬದುಕಿನ ವಿಕಾಸಕ್ಕೆ ಧರ್ಮವೇ ಅಡಿಪಾಯವಾಗಿದ್ದು, ಧರ್ಮ ಪರಿಪಾಲನೆಯಿಂದ ಮಾತ್ರ ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆ ನೆಲೆಸಲು ಸಾಧ್ಯ ಎಂದರು.

ಆಧುನಿಕತೆಯ ಭರಾಟೆಯಲ್ಲಿ ಭಾರತೀಯ ಸಂಸ್ಕೃತಿ ಮತ್ತು ಮೌಲ್ಯಗಳು ಕಣ್ಮರೆಯಾಗುತ್ತಿವೆ ಎಂದು ಶ್ರೀಗಳು ಕಳವಳ ವ್ಯಕ್ತಪಡಿಸಿದರು. ಉತ್ತಮ ಉಡುಗೆ ವ್ಯಕ್ತಿತ್ವವನ್ನು ಬದಲಾಯಿಸಬಹುದೇ ಹೊರತು, ಸಂಸ್ಕಾರ ಮತ್ತು ಸರಳತೆಯೇ ಬದುಕನ್ನು ಶ್ರೀಮಂತಗೊಳಿಸುತ್ತವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿಗಳು ಅಲ್ಪಾವಧಿಯಲ್ಲಿ ಭಕ್ತರ ಹೃದಯದಲ್ಲಿ ಸ್ಥಾನ ಗಳಿಸಿ, ಸಮಾಜಮುಖಿ ಕಾರ್ಯಗಳ ಮೂಲಕ ಮಾದರಿಯಾಗಿದ್ದಾರೆ ಎಂದು ಪ್ರಶಂಸಿಸಿದರು.

ಸಿದ್ದರಬೆಟ್ಟ ಶ್ರೀಮಠದ ಪೀಠಾಧ್ಯಕ್ಷ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸಾಮೂಹಿಕ ವಿವಾಹಗಳು ಸಮಾಜದಲ್ಲಿ ಸಮಾನತೆ ಮತ್ತು ಸರಳತೆಯ ಸಂದೇಶವನ್ನು ಸಾರುತ್ತವೆ ಎಂದು ತಿಳಿಸಿದರು. ಶ್ರೀಮಠದ ಬೆಳವಣಿಗೆಗೆ ಭಕ್ತರ ಸಹಕಾರವೇ ನಿಜವಾದ ಶಕ್ತಿ ಎಂದು ಹೇಳಿದ ಅವರು, ಪ್ರತಿವರ್ಷ ಸಮಾಜ ಸೇವೆ ಸಲ್ಲಿಸಿದ ಭಕ್ತರನ್ನು 'ಗುರುಸೇವಾ ರತ್ನ' ಪ್ರಶಸ್ತಿಯ ಮೂಲಕ ಗೌರವಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
    user_ಗಿರೀಶ್ B
    ಗಿರೀಶ್ B
    Local News Reporter ತುಮಕೂರು, ತುಮಕೂರು, ಕರ್ನಾಟಕ•
    10 hrs ago
  • ಪ್ರಪಂಚವು ಸಂಪೂರ್ಣವಾಗಿ ಸ್ವಾರ್ಥದಿಂದ ತುಂಬಿದೆ ಎಂಬುದು ಸ್ಪಷ್ಟವಾಗಿದೆ. ಮನುಷ್ಯನ ಸ್ವಭಾವವೆಂದರೆ, ಅವನಿಗೆ ಸ್ವಲ್ಪ ಸಿಕ್ಕಿದರೆ ಮತ್ತಷ್ಟು ಬೇಕೆಂದು ಬಯಸುತ್ತಾನೆ, ಮತ್ತು ಇನ್ನಷ್ಟು ಸಿಕ್ಕಿದರೆ ಅದಕ್ಕಿಂತಲೂ ಹೆಚ್ಚಿಗೆ ಬೇಕೆಂದು ಹಂಬಲಿಸುತ್ತಾನೆ.
    1
    ಪ್ರಪಂಚವು ಸಂಪೂರ್ಣವಾಗಿ ಸ್ವಾರ್ಥದಿಂದ ತುಂಬಿದೆ ಎಂಬುದು ಸ್ಪಷ್ಟವಾಗಿದೆ. ಮನುಷ್ಯನ ಸ್ವಭಾವವೆಂದರೆ, ಅವನಿಗೆ ಸ್ವಲ್ಪ ಸಿಕ್ಕಿದರೆ ಮತ್ತಷ್ಟು ಬೇಕೆಂದು ಬಯಸುತ್ತಾನೆ, ಮತ್ತು ಇನ್ನಷ್ಟು ಸಿಕ್ಕಿದರೆ ಅದಕ್ಕಿಂತಲೂ ಹೆಚ್ಚಿಗೆ ಬೇಕೆಂದು ಹಂಬಲಿಸುತ್ತಾನೆ.
    user_Suresh Belagere
    Suresh Belagere
    Video Creator ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    59 min ago
  • ಚಿತ್ರದುರ್ಗ ನಗರದ ಸರ್ಕಾರಿ ವಿಜ್ಞಾನ ಕಾಲೇಜಿನ ಶ್ರೀ ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ 12ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಆಯುಷ್ ಇಲಾಖೆ ವತಿಯಿಂದ 'ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ' ಎಂಬ ಘೋಷವಾಕ್ಯದೊಂದಿಗೆ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಮತ್ತು ಎಂಎಲ್‌ಸಿ ಕೆ.ಎಸ್. ನವೀನ್ ಭಾಗವಹಿಸಿದ್ದರು. ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಎಂಎಲ್‌ಸಿ ಕೆ.ಎಸ್. ನವೀನ್ ಅವರು ಅಂತರಾಷ್ಟ್ರೀಯ ಯೋಗ ದಿನಾಚರಣೆಗೆ ಅಧಿಕೃತವಾಗಿ ಚಾಲನೆ ನೀಡಿದರು.
    1
    ಚಿತ್ರದುರ್ಗ ನಗರದ ಸರ್ಕಾರಿ ವಿಜ್ಞಾನ ಕಾಲೇಜಿನ ಶ್ರೀ ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ 12ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಆಯುಷ್ ಇಲಾಖೆ ವತಿಯಿಂದ 'ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ' ಎಂಬ ಘೋಷವಾಕ್ಯದೊಂದಿಗೆ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಮತ್ತು ಎಂಎಲ್‌ಸಿ ಕೆ.ಎಸ್. ನವೀನ್ ಭಾಗವಹಿಸಿದ್ದರು. ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಎಂಎಲ್‌ಸಿ ಕೆ.ಎಸ್. ನವೀನ್ ಅವರು ಅಂತರಾಷ್ಟ್ರೀಯ ಯೋಗ ದಿನಾಚರಣೆಗೆ ಅಧಿಕೃತವಾಗಿ ಚಾಲನೆ ನೀಡಿದರು.
    user_Vinay P palekar
    Vinay P palekar
    ಮಾಧ್ಯಮ ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    5 hrs ago
  • ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್‌ಕುಮಾರ್ ಅವರು ರಾಜ್ಯದಲ್ಲಿ ರಸಗೊಬ್ಬರ ಪೂರೈಕೆಯಲ್ಲಿ ನಿರಂತರ ವ್ಯತ್ಯಾಸ ಮತ್ತು ಕೃತಕ ಅಭಾವ ಸೃಷ್ಟಿಯಾಗುತ್ತಿದ್ದು, ರೈತರಿಗೆ ರಸಗೊಬ್ಬರ ಪೂರೈಕೆಗೆ ರಾಜ್ಯ ಸರ್ಕಾರ ತಕ್ಷಣ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಸಬ್ಸಿಡಿ ವ್ಯಾಪ್ತಿಗೆ ಬರುವ ಯೂರಿಯಾ ಮತ್ತು ಡಿಎಪಿ ರಸಗೊಬ್ಬರಗಳನ್ನು ಅವುಗಳ ಎಂಆರ್‌ಪಿ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂದು ಅರುಣ್‌ಕುಮಾರ್ ಆರೋಪಿಸಿದರು. ಇದರ ಪರಿಣಾಮವಾಗಿ ಪ್ರತಿವರ್ಷ ಕರ್ನಾಟಕದ ರೈತರಿಂದ ೨ ಸಾವಿರ ಕೋಟಿ ರೂಪಾಯಿಗಳಷ್ಟು ಹಣವನ್ನು ದೋಚಲಾಗುತ್ತಿದೆ ಎಂದರು. ದೇಶದಲ್ಲಿ ಅಗತ್ಯಕ್ಕಿಂತ ಹೆಚ್ಚಿನ ರಸಗೊಬ್ಬರ ದಾಸ್ತಾನಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವರೇ ತಿಳಿಸಿದ್ದಾರೆ. ಈ ಅಕ್ರಮಗಳಿಗೆ ಕೃಷಿ ಅಧಿಕಾರಿಗಳು ಮತ್ತು ರಾಜಕಾರಣಿಗಳು ಅಕ್ರಮ ಡೀಲರ್‌ಗಳಿಗೆ ಹಾಗೂ ರಸಗೊಬ್ಬರ ಕಂಪನಿಗಳಿಗೆ ಬೆಂಬಲ ನೀಡುತ್ತಿದ್ದು, ಇದಕ್ಕೆ ಕಡಿವಾಣ ಹಾಕುವಂತೆ ಕೆಆರ್‌ಎಸ್ ಪಕ್ಷ ಆಗ್ರಹಿಸಿದೆ. ರಾಜ್ಯ ಸರ್ಕಾರವು ಕೂಡಲೇ ಅಗತ್ಯ ರಸಗೊಬ್ಬರ ಪೂರೈಕೆ ಮಾಡಬೇಕು, ಮಾರಾಟಗಾರರು ಎಫ್‌ಸಿಓ ೧೯೮೫ರ ಷರತ್ತುಗಳ ಪ್ರಕಾರ ಬೆಲೆ, ದಾಸ್ತಾನು ಇತ್ಯಾದಿ ಮಾಹಿತಿಯನ್ನು ಪ್ರದರ್ಶಿಸಬೇಕು, ಎಂಆರ್‌ಪಿಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡದಂತೆ ಕ್ರಮ ವಹಿಸಬೇಕು ಎಂದು ಅವರು ಒತ್ತಾಯಿಸಿದರು. ದೂರು ನೀಡಲು ತಾಲ್ಲೂಕುವಾರು ಸಹಾಯಕ ಕೃಷಿ ಅಧಿಕಾರಿಗಳ ಮೊಬೈಲ್ ಸಂಖ್ಯೆಯನ್ನು ಫಲಕದಲ್ಲಿ ನಮೂದಿಸಬೇಕು, ಕಂಪನಿಗಳು ಮಾರಾಟಗಾರರ ಅಂಗಡಿ ಬಾಗಿಲಿಗೆ ರಸಗೊಬ್ಬರ ತಲುಪುವುದನ್ನು ಖಾತ್ರಿಗೊಳಿಸಬೇಕು, ಮತ್ತು ಬಲವಂತವಾಗಿ ಲಿಂಕ್ ಉತ್ಪನ್ನಗಳನ್ನು ಮಾರಾಟ ಮಾಡುವುದನ್ನು ನಿಲ್ಲಿಸಬೇಕು ಎಂದರು. ನಿಯಮಗಳನ್ನು ಮೀರಿದಲ್ಲಿ ಡೀಲರ್‌ಗಳ ಪರವಾನಗಿಯನ್ನು ರದ್ದುಗೊಳಿಸಲು ಕ್ರಮ ಕೈಗೊಳ್ಳಬೇಕೆಂದೂ ಅರುಣ್‌ಕುಮಾರ್ ಆಗ್ರಹಿಸಿದರು. ರಸಗೊಬ್ಬರ ಅಕ್ರಮಗಳ ಬಗ್ಗೆ ಮಾಹಿತಿ ನೀಡಲು ರೈತರು ಕೆಆರ್‌ಎಸ್ ಪಕ್ಷದ ೭೩೪೯೫೭೭೧೩೦ ಸಂಖ್ಯೆಯನ್ನು ಸಂಪರ್ಕಿಸುವಂತೆ ಮನವಿ ಮಾಡಿದರು. ಈ ಗೋಷ್ಠಿಯಲ್ಲಿ ಕೆಆರ್‌ಎಸ್ ಪಕ್ಷದ ಜಿಲ್ಲಾ ಉಸ್ತುವಾರಿ ರಮೇಶ್‌ಗೌಡ, ಜಿಲ್ಲಾಧ್ಯಕ್ಷ ಮಲ್ಲೇಶ್, ಪ್ರಧಾನ ಕಾರ್ಯದರ್ಶಿ ನಾಗರಾಜು, ಹಾಗೂ ಮುಖಂಡರಾದ ಹರೀಶ್, ಮಲ್ಲೇಶ್, ಮಲ್ಲಯ್ಯ ಉಪಸ್ಥಿತರಿದ್ದರು.
    1
    ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್‌ಕುಮಾರ್ ಅವರು ರಾಜ್ಯದಲ್ಲಿ ರಸಗೊಬ್ಬರ ಪೂರೈಕೆಯಲ್ಲಿ ನಿರಂತರ ವ್ಯತ್ಯಾಸ ಮತ್ತು ಕೃತಕ ಅಭಾವ ಸೃಷ್ಟಿಯಾಗುತ್ತಿದ್ದು, ರೈತರಿಗೆ ರಸಗೊಬ್ಬರ ಪೂರೈಕೆಗೆ ರಾಜ್ಯ ಸರ್ಕಾರ ತಕ್ಷಣ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಸಬ್ಸಿಡಿ ವ್ಯಾಪ್ತಿಗೆ ಬರುವ ಯೂರಿಯಾ ಮತ್ತು ಡಿಎಪಿ ರಸಗೊಬ್ಬರಗಳನ್ನು ಅವುಗಳ ಎಂಆರ್‌ಪಿ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂದು ಅರುಣ್‌ಕುಮಾರ್ ಆರೋಪಿಸಿದರು. ಇದರ ಪರಿಣಾಮವಾಗಿ ಪ್ರತಿವರ್ಷ ಕರ್ನಾಟಕದ ರೈತರಿಂದ ೨ ಸಾವಿರ ಕೋಟಿ ರೂಪಾಯಿಗಳಷ್ಟು ಹಣವನ್ನು ದೋಚಲಾಗುತ್ತಿದೆ ಎಂದರು. ದೇಶದಲ್ಲಿ ಅಗತ್ಯಕ್ಕಿಂತ ಹೆಚ್ಚಿನ ರಸಗೊಬ್ಬರ ದಾಸ್ತಾನಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವರೇ ತಿಳಿಸಿದ್ದಾರೆ. ಈ ಅಕ್ರಮಗಳಿಗೆ ಕೃಷಿ ಅಧಿಕಾರಿಗಳು ಮತ್ತು ರಾಜಕಾರಣಿಗಳು ಅಕ್ರಮ ಡೀಲರ್‌ಗಳಿಗೆ ಹಾಗೂ ರಸಗೊಬ್ಬರ ಕಂಪನಿಗಳಿಗೆ ಬೆಂಬಲ ನೀಡುತ್ತಿದ್ದು, ಇದಕ್ಕೆ ಕಡಿವಾಣ ಹಾಕುವಂತೆ ಕೆಆರ್‌ಎಸ್ ಪಕ್ಷ ಆಗ್ರಹಿಸಿದೆ.

ರಾಜ್ಯ ಸರ್ಕಾರವು ಕೂಡಲೇ ಅಗತ್ಯ ರಸಗೊಬ್ಬರ ಪೂರೈಕೆ ಮಾಡಬೇಕು, ಮಾರಾಟಗಾರರು ಎಫ್‌ಸಿಓ ೧೯೮೫ರ ಷರತ್ತುಗಳ ಪ್ರಕಾರ ಬೆಲೆ, ದಾಸ್ತಾನು ಇತ್ಯಾದಿ ಮಾಹಿತಿಯನ್ನು ಪ್ರದರ್ಶಿಸಬೇಕು, ಎಂಆರ್‌ಪಿಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡದಂತೆ ಕ್ರಮ ವಹಿಸಬೇಕು ಎಂದು ಅವರು ಒತ್ತಾಯಿಸಿದರು. ದೂರು ನೀಡಲು ತಾಲ್ಲೂಕುವಾರು ಸಹಾಯಕ ಕೃಷಿ ಅಧಿಕಾರಿಗಳ ಮೊಬೈಲ್ ಸಂಖ್ಯೆಯನ್ನು ಫಲಕದಲ್ಲಿ ನಮೂದಿಸಬೇಕು, ಕಂಪನಿಗಳು ಮಾರಾಟಗಾರರ ಅಂಗಡಿ ಬಾಗಿಲಿಗೆ ರಸಗೊಬ್ಬರ ತಲುಪುವುದನ್ನು ಖಾತ್ರಿಗೊಳಿಸಬೇಕು, ಮತ್ತು ಬಲವಂತವಾಗಿ ಲಿಂಕ್ ಉತ್ಪನ್ನಗಳನ್ನು ಮಾರಾಟ ಮಾಡುವುದನ್ನು ನಿಲ್ಲಿಸಬೇಕು ಎಂದರು. ನಿಯಮಗಳನ್ನು ಮೀರಿದಲ್ಲಿ ಡೀಲರ್‌ಗಳ ಪರವಾನಗಿಯನ್ನು ರದ್ದುಗೊಳಿಸಲು ಕ್ರಮ ಕೈಗೊಳ್ಳಬೇಕೆಂದೂ ಅರುಣ್‌ಕುಮಾರ್ ಆಗ್ರಹಿಸಿದರು. ರಸಗೊಬ್ಬರ ಅಕ್ರಮಗಳ ಬಗ್ಗೆ ಮಾಹಿತಿ ನೀಡಲು ರೈತರು ಕೆಆರ್‌ಎಸ್ ಪಕ್ಷದ ೭೩೪೯೫೭೭೧೩೦ ಸಂಖ್ಯೆಯನ್ನು ಸಂಪರ್ಕಿಸುವಂತೆ ಮನವಿ ಮಾಡಿದರು.

ಈ ಗೋಷ್ಠಿಯಲ್ಲಿ ಕೆಆರ್‌ಎಸ್ ಪಕ್ಷದ ಜಿಲ್ಲಾ ಉಸ್ತುವಾರಿ ರಮೇಶ್‌ಗೌಡ, ಜಿಲ್ಲಾಧ್ಯಕ್ಷ ಮಲ್ಲೇಶ್, ಪ್ರಧಾನ ಕಾರ್ಯದರ್ಶಿ ನಾಗರಾಜು, ಹಾಗೂ ಮುಖಂಡರಾದ ಹರೀಶ್, ಮಲ್ಲೇಶ್, ಮಲ್ಲಯ್ಯ ಉಪಸ್ಥಿತರಿದ್ದರು.
    user_Arunprasad G B
    Arunprasad G B
    Local News Reporter ಮಂಡ್ಯ, ಮಂಡ್ಯ, ಕರ್ನಾಟಕ•
    20 min ago
  • ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ಸೋಮವಾರ ಬೆಳಿಗ್ಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಬಂದಿದ್ದು, ಈ ಹಿನ್ನೆಲೆಯಲ್ಲಿ ಅಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಬೆದರಿಕೆ ಸಂದೇಶದ ಮಾಹಿತಿ ದೊರಕಿದ ತಕ್ಷಣ, ಉಡುಪಿ ನಗರ ಪೊಲೀಸರು, ಶ್ವಾನ ದಳ ಹಾಗೂ ಬಾಂಬ್ ನಿಷ್ಕ್ರಿಯ ದಳವು ನ್ಯಾಯಾಲಯ ಸಂಕೀರ್ಣಕ್ಕೆ ಆಗಮಿಸಿವೆ. ಪ್ರಸ್ತುತ, ನ್ಯಾಯಾಲಯದ ಆವರಣ ಹಾಗೂ ಕಟ್ಟಡದ ವಿವಿಧ ಭಾಗಗಳಲ್ಲಿ ತೀವ್ರ ಶೋಧ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ. ಭದ್ರತಾ ದೃಷ್ಟಿಯಿಂದ, ನ್ಯಾಯಾಲಯ ಸಂಕೀರ್ಣದಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಅನ್ನು ಹೆಚ್ಚಿಸಲಾಗಿದೆ. ಈ ಬೆದರಿಕೆ ಸಂದೇಶದ ಮೂಲವನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಪೊಲೀಸರು ತಮ್ಮ ತನಿಖೆಯನ್ನು ಮುಂದುವರಿಸಿದ್ದಾರೆ.
    2
    ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ಸೋಮವಾರ ಬೆಳಿಗ್ಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಬಂದಿದ್ದು, ಈ ಹಿನ್ನೆಲೆಯಲ್ಲಿ ಅಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಬೆದರಿಕೆ ಸಂದೇಶದ ಮಾಹಿತಿ ದೊರಕಿದ ತಕ್ಷಣ, ಉಡುಪಿ ನಗರ ಪೊಲೀಸರು, ಶ್ವಾನ ದಳ ಹಾಗೂ ಬಾಂಬ್ ನಿಷ್ಕ್ರಿಯ ದಳವು ನ್ಯಾಯಾಲಯ ಸಂಕೀರ್ಣಕ್ಕೆ ಆಗಮಿಸಿವೆ.

ಪ್ರಸ್ತುತ, ನ್ಯಾಯಾಲಯದ ಆವರಣ ಹಾಗೂ ಕಟ್ಟಡದ ವಿವಿಧ ಭಾಗಗಳಲ್ಲಿ ತೀವ್ರ ಶೋಧ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ. ಭದ್ರತಾ ದೃಷ್ಟಿಯಿಂದ, ನ್ಯಾಯಾಲಯ ಸಂಕೀರ್ಣದಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಅನ್ನು ಹೆಚ್ಚಿಸಲಾಗಿದೆ. ಈ ಬೆದರಿಕೆ ಸಂದೇಶದ ಮೂಲವನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಪೊಲೀಸರು ತಮ್ಮ ತನಿಖೆಯನ್ನು ಮುಂದುವರಿಸಿದ್ದಾರೆ.
    user_Lavanya
    Lavanya
    Local News Reporter ಪಾವಗಡ, ತುಮಕೂರು, ಕರ್ನಾಟಕ•
    4 hrs ago
  • ಹುಳಿಯಾರಿನ ಕೆಪಿಎಸ್‌ ಶಾಲೆಯ ಪ್ರೌಢಶಾಲಾ ವಿಭಾಗದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಹಿರಿಯೂರು ಉಡುವಳ್ಳಿ ಜವಾಹರ್‌ ನವೋದಯ ವಿದ್ಯಾಲಯದ ಹಿಂದಿ ಪ್ರಾಧ್ಯಾಪಕ ಓಂಕಾರಮೂರ್ತಿ, ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಲಭ್ಯವಿರುವ ತಂತ್ರಜ್ಞಾನ ಹಾಗೂ ಅತ್ಯಾಧುನಿಕ ಸಾಧನಗಳನ್ನು ಸಕಾರಾತ್ಮಕವಾಗಿ ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು. ಇದೇ ವೇಳೆ, ಅವರು ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಉತ್ತಮವಾಗಿ ಕಾಯ್ದುಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದರು. ಕೆಪಿಎಸ್‌ ಶಾಲೆಯ ಹಳೆಯ ವಿದ್ಯಾರ್ಥಿಯೂ ಆಗಿರುವ ಅವರು, ತಮ್ಮ ಶಾಲಾ ದಿನಗಳ ನೆನಪುಗಳನ್ನು ಮೆಲುಕು ಹಾಕುತ್ತಾ ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಮಾರ್ಗದರ್ಶನ ನೀಡಿದರು. ತಮ್ಮ ಕಾಲದಲ್ಲಿ ಸಿದ್ದಬಸವಣ್ಣ, ಬಸವಲಿಂಗಯ್ಯ, ನಿರಂಜನಮೂರ್ತಿ, ದಾಸಪ್ಪ ಹಾಗೂ ಮುಖ್ಯೋಪಾಧ್ಯಾಯರಾಗಿದ್ದ ಸೀತಾರಾಂ ಭಟ್ ಅವರಂತಹ ಹಿರಿಯ ಗುರುಗಳಿದ್ದರು, ಆದರೆ ಇಂದು ಪಾಠ ಪ್ರವಚನಗಳನ್ನು ಗ್ರಹಿಸಲು ಗೂಗಲ್, ಜೆಮಿನಿ, ಚಾಟ್ ಜಿಪಿಟಿಯಂತಹ ಆಧುನಿಕ ತಂತ್ರಜ್ಞಾನಗಳು ಲಭ್ಯವಿವೆ ಎಂದು ಓಂಕಾರಮೂರ್ತಿ ವಿವರಿಸಿದರು. ವಿದ್ಯಾರ್ಥಿಗಳು ಇವುಗಳನ್ನು ಬಳಸಿಕೊಂಡು ವಿಷಯಗಳೊಂದಿಗೆ ಸಂಪರ್ಕ ಸಾಧಿಸುವ ಮೂಲಕ ಬುದ್ಧಿವಂತಿಕೆ ಮತ್ತು ಅಂಕಗಳನ್ನು ಹೆಚ್ಚಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು. ಆರೋಗ್ಯದ ಮಹತ್ವವನ್ನು ವಿವರಿಸಿದ ಅವರು, ಯಾರು ಆರೋಗ್ಯವಾಗಿದ್ದಾರೋ ಅವರೇ ನಿಜವಾದ ಶ್ರೀಮಂತರು. ಇತ್ತೀಚಿನ ದಿನಗಳಲ್ಲಿ ಜಂಕ್ ಫುಡ್ ಹಾಗೂ ತಪ್ಪು ಆಹಾರ ಪದ್ಧತಿಯಿಂದ ಯುವ ಪೀಳಿಗೆ ಅನೇಕ ರೋಗಗಳಿಗೆ ತುತ್ತಾಗುತ್ತಿದ್ದು, ಉತ್ತಮ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳದಿದ್ದರೆ ಆರೋಗ್ಯ ಕೆಡುವುದು ಖಂಡಿತ ಎಂದರು. ಶೈಕ್ಷಣಿಕ ಸಾಮರ್ಥ್ಯದ ಜೊತೆಗೆ ದೈಹಿಕ ಮತ್ತು ಮಾನಸಿಕ ಆರೋಗ್ಯವೂ ಸಮತೋಲನದಲ್ಲಿರಬೇಕು ಎಂದು ಅವರು ಸಲಹೆ ನೀಡಿದರು. ವಿದ್ಯಾರ್ಥಿಗಳು ಜೀವನದಲ್ಲಿ ಸಣ್ಣಪುಟ್ಟ ಕೆಲಸಗಳನ್ನು ಕೀಳಾಗಿ ಕಾಣಬಾರದು, ಏಕೆಂದರೆ ಗಿಡಕ್ಕೆ ನೀರು ಹಾಕುವುದು, ಸ್ವಚ್ಛತೆ ಕಾಪಾಡುವುದು ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತವೆ ಎಂದು ಓಂಕಾರಮೂರ್ತಿ ಹೇಳಿದರು. ಜೀವನದಲ್ಲಿ ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಿ, ಧನಾತ್ಮಕ ಚಿಂತನೆಯೊಂದಿಗೆ ಮುನ್ನಡೆಯಲು ಅವರು ಕಿವಿಮಾತು ಹೇಳಿದರು. ಜಾಗತಿಕ ತಾಪಮಾನ ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಹೊಣೆಯಾಗಿದೆ ಎಂದ ಓಂಕಾರಮೂರ್ತಿ, ವಿದ್ಯಾರ್ಥಿಗಳು ಕೇವಲ ಮರಗಳನ್ನು ಕಡಿಯುವುದನ್ನು ನೋಡದೆ, ಗಿಡಗಳನ್ನು ನೆಟ್ಟು ಪೋಷಿಸುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಉತ್ತೇಜಿಸಿದರು. ಶಾಲೆ ಮತ್ತು ಗುರುಗಳು ನೀಡುವ ಸಂಸ್ಕಾರ, ಶಿಸ್ತು ಹಾಗೂ ನಮ್ರತೆ ನಮ್ಮನ್ನು ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತದೆ ಎಂದು ಅವರು ವಿವರಿಸಿದರು. ಈ ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಎನ್.ಜಿ. ಕೃಷ್ಣಮೂರ್ತಿ, ಡಾ. ನಾಗರಾಜು, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಗವೀ ರಂಗಯ್ಯ, ಉಪಪ್ರಾಚಾರ್ಯ ಚಂದ್ರಚಾರ್, ಎಸ್‌ಡಿಎಂಸಿ ಸದಸ್ಯರುಗಳಾದ ಚನ್ನಕೇಶವ, ರಾಮಚಂದ್ರಯ್ಯ, ಶೇಖರ್, ರಮೇಶ ಹಾಗೂ ಬಾಲಾಜಿ ಸಿಂಗ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
    1
    ಹುಳಿಯಾರಿನ ಕೆಪಿಎಸ್‌ ಶಾಲೆಯ ಪ್ರೌಢಶಾಲಾ ವಿಭಾಗದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಹಿರಿಯೂರು ಉಡುವಳ್ಳಿ ಜವಾಹರ್‌ ನವೋದಯ ವಿದ್ಯಾಲಯದ ಹಿಂದಿ ಪ್ರಾಧ್ಯಾಪಕ ಓಂಕಾರಮೂರ್ತಿ, ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಲಭ್ಯವಿರುವ ತಂತ್ರಜ್ಞಾನ ಹಾಗೂ ಅತ್ಯಾಧುನಿಕ ಸಾಧನಗಳನ್ನು ಸಕಾರಾತ್ಮಕವಾಗಿ ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು. ಇದೇ ವೇಳೆ, ಅವರು ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಉತ್ತಮವಾಗಿ ಕಾಯ್ದುಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದರು. ಕೆಪಿಎಸ್‌ ಶಾಲೆಯ ಹಳೆಯ ವಿದ್ಯಾರ್ಥಿಯೂ ಆಗಿರುವ ಅವರು, ತಮ್ಮ ಶಾಲಾ ದಿನಗಳ ನೆನಪುಗಳನ್ನು ಮೆಲುಕು ಹಾಕುತ್ತಾ ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಮಾರ್ಗದರ್ಶನ ನೀಡಿದರು.

ತಮ್ಮ ಕಾಲದಲ್ಲಿ ಸಿದ್ದಬಸವಣ್ಣ, ಬಸವಲಿಂಗಯ್ಯ, ನಿರಂಜನಮೂರ್ತಿ, ದಾಸಪ್ಪ ಹಾಗೂ ಮುಖ್ಯೋಪಾಧ್ಯಾಯರಾಗಿದ್ದ ಸೀತಾರಾಂ ಭಟ್ ಅವರಂತಹ ಹಿರಿಯ ಗುರುಗಳಿದ್ದರು, ಆದರೆ ಇಂದು ಪಾಠ ಪ್ರವಚನಗಳನ್ನು ಗ್ರಹಿಸಲು ಗೂಗಲ್, ಜೆಮಿನಿ, ಚಾಟ್ ಜಿಪಿಟಿಯಂತಹ ಆಧುನಿಕ ತಂತ್ರಜ್ಞಾನಗಳು ಲಭ್ಯವಿವೆ ಎಂದು ಓಂಕಾರಮೂರ್ತಿ ವಿವರಿಸಿದರು. ವಿದ್ಯಾರ್ಥಿಗಳು ಇವುಗಳನ್ನು ಬಳಸಿಕೊಂಡು ವಿಷಯಗಳೊಂದಿಗೆ ಸಂಪರ್ಕ ಸಾಧಿಸುವ ಮೂಲಕ ಬುದ್ಧಿವಂತಿಕೆ ಮತ್ತು ಅಂಕಗಳನ್ನು ಹೆಚ್ಚಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು. ಆರೋಗ್ಯದ ಮಹತ್ವವನ್ನು ವಿವರಿಸಿದ ಅವರು, ಯಾರು ಆರೋಗ್ಯವಾಗಿದ್ದಾರೋ ಅವರೇ ನಿಜವಾದ ಶ್ರೀಮಂತರು. ಇತ್ತೀಚಿನ ದಿನಗಳಲ್ಲಿ ಜಂಕ್ ಫುಡ್ ಹಾಗೂ ತಪ್ಪು ಆಹಾರ ಪದ್ಧತಿಯಿಂದ ಯುವ ಪೀಳಿಗೆ ಅನೇಕ ರೋಗಗಳಿಗೆ ತುತ್ತಾಗುತ್ತಿದ್ದು, ಉತ್ತಮ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳದಿದ್ದರೆ ಆರೋಗ್ಯ ಕೆಡುವುದು ಖಂಡಿತ ಎಂದರು. ಶೈಕ್ಷಣಿಕ ಸಾಮರ್ಥ್ಯದ ಜೊತೆಗೆ ದೈಹಿಕ ಮತ್ತು ಮಾನಸಿಕ ಆರೋಗ್ಯವೂ ಸಮತೋಲನದಲ್ಲಿರಬೇಕು ಎಂದು ಅವರು ಸಲಹೆ ನೀಡಿದರು.

ವಿದ್ಯಾರ್ಥಿಗಳು ಜೀವನದಲ್ಲಿ ಸಣ್ಣಪುಟ್ಟ ಕೆಲಸಗಳನ್ನು ಕೀಳಾಗಿ ಕಾಣಬಾರದು, ಏಕೆಂದರೆ ಗಿಡಕ್ಕೆ ನೀರು ಹಾಕುವುದು, ಸ್ವಚ್ಛತೆ ಕಾಪಾಡುವುದು ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತವೆ ಎಂದು ಓಂಕಾರಮೂರ್ತಿ ಹೇಳಿದರು. ಜೀವನದಲ್ಲಿ ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಿ, ಧನಾತ್ಮಕ ಚಿಂತನೆಯೊಂದಿಗೆ ಮುನ್ನಡೆಯಲು ಅವರು ಕಿವಿಮಾತು ಹೇಳಿದರು. ಜಾಗತಿಕ ತಾಪಮಾನ ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಹೊಣೆಯಾಗಿದೆ ಎಂದ ಓಂಕಾರಮೂರ್ತಿ, ವಿದ್ಯಾರ್ಥಿಗಳು ಕೇವಲ ಮರಗಳನ್ನು ಕಡಿಯುವುದನ್ನು ನೋಡದೆ, ಗಿಡಗಳನ್ನು ನೆಟ್ಟು ಪೋಷಿಸುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಉತ್ತೇಜಿಸಿದರು. ಶಾಲೆ ಮತ್ತು ಗುರುಗಳು ನೀಡುವ ಸಂಸ್ಕಾರ, ಶಿಸ್ತು ಹಾಗೂ ನಮ್ರತೆ ನಮ್ಮನ್ನು ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತದೆ ಎಂದು ಅವರು ವಿವರಿಸಿದರು.

ಈ ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಎನ್.ಜಿ. ಕೃಷ್ಣಮೂರ್ತಿ, ಡಾ. ನಾಗರಾಜು, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಗವೀ ರಂಗಯ್ಯ, ಉಪಪ್ರಾಚಾರ್ಯ ಚಂದ್ರಚಾರ್, ಎಸ್‌ಡಿಎಂಸಿ ಸದಸ್ಯರುಗಳಾದ ಚನ್ನಕೇಶವ, ರಾಮಚಂದ್ರಯ್ಯ, ಶೇಖರ್, ರಮೇಶ ಹಾಗೂ ಬಾಲಾಜಿ ಸಿಂಗ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
    user_Huliyarkiran
    Huliyarkiran
    ಚಿಕ್ಕನಾಯಕನಹಳ್ಳಿ, ತುಮಕೂರು, ಕರ್ನಾಟಕ•
    21 hrs ago
  • ಕೇವಲ ಒಂದು ರೂಪಾಯಿಗೆ ಟಿ-ಶರ್ಟ್ ಲಭ್ಯವಿದೆ ಎಂದು ಘೋಷಿಸಿದಾಗ, ಸಾರ್ವಜನಿಕರು ಅದನ್ನು ಪಡೆಯಲು ಭಾರೀ ಸಂಖ್ಯೆಯಲ್ಲಿ ಮುಗಿಬಿದ್ದ ಘಟನೆ ನಡೆದಿದೆ. ಟಿ-ಶರ್ಟ್‌ಗಳನ್ನು ₹1 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಹೊರಬೀಳುತ್ತಿದ್ದಂತೆ, ಜನರು ಆ ಸ್ಥಳಕ್ಕೆ ಧಾವಿಸಿ, ಟಿ-ಶರ್ಟ್‌ಗಳನ್ನು ಪಡೆಯಲು ನೂಕುನುಗ್ಗಲು ಸೃಷ್ಟಿಯಾಯಿತು.
    1
    ಕೇವಲ ಒಂದು ರೂಪಾಯಿಗೆ ಟಿ-ಶರ್ಟ್ ಲಭ್ಯವಿದೆ ಎಂದು ಘೋಷಿಸಿದಾಗ, ಸಾರ್ವಜನಿಕರು ಅದನ್ನು ಪಡೆಯಲು ಭಾರೀ ಸಂಖ್ಯೆಯಲ್ಲಿ ಮುಗಿಬಿದ್ದ ಘಟನೆ ನಡೆದಿದೆ. ಟಿ-ಶರ್ಟ್‌ಗಳನ್ನು ₹1 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಹೊರಬೀಳುತ್ತಿದ್ದಂತೆ, ಜನರು ಆ ಸ್ಥಳಕ್ಕೆ ಧಾವಿಸಿ, ಟಿ-ಶರ್ಟ್‌ಗಳನ್ನು ಪಡೆಯಲು ನೂಕುನುಗ್ಗಲು ಸೃಷ್ಟಿಯಾಯಿತು.
    user_Veega News Kannada
    Veega News Kannada
    Newspaper advertising department ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    1 hr ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.