ವಾಲ್ಮೀಕಿ ಗುರುಪೀಠದ ಪೀಠಾಧ್ಯಕ್ಷರಾದ ಪ್ರಸನ್ನಾನಂದ ಪುರಿ ಸ್ವಾಮೀಜಿಯ ಆರೋಗ್ಯದಲ್ಲಿ ಏರುಪೇರು ಆಸ್ಪತ್ರೆಗೆ ದಾಖಲು ಚಿತ್ರದುರ್ಗ : ದಾವಣಗೆರೆ ಜಿಲ್ಲೆಯ ರಜಾನಹಳ್ಳಿ ವಾಲ್ಮೀಕಿ ಗುರುಪೀಠದ ಪೀಠಾಧ್ಯಕ್ಷರಾದ (Valmiki Peeth) ಪ್ರಸನ್ನಾನಂದಪುರಿ ಸ್ವಾಮೀಜಿ ಅವರಿಗೆ ಹೃದಯಾಘಾತ ಸಂಭವಿಸಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ..ಮಾಹಿತಿಯ ಪ್ರಕಾರ, ಇತ್ತೀಚೆಗೆ ಆರೋಗ್ಯದಲ್ಲಿ ಏರುಪೇರು ಕಂಡುಬಂದ ಹಿನ್ನೆಲೆಯಲ್ಲಿ ಸ್ವಾಮೀಜಿಯವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪ್ರಸ್ತುತ ಅವರು ಚಿತ್ರದುರ್ಗ ನಗರದ ಬಸವೇಶ್ವರ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ವೈದ್ಯರು ಅಗತ್ಯ ಪರೀಕ್ಷೆಗಳನ್ನು ನಡೆಸಿ, ತೀವ್ರ ನಿಗಾದಲ್ಲಿ ಇಟ್ಟಿದ್ದಾರೆ ಎಂದು ತಿಳಿದುಬಂದಿದೆ. ವಾಲ್ಮೀಕಿ ಗುರುಪೀಠದ ಮೂಲಗಳ ಪ್ರಕಾರ, ಸ್ವಾಮೀಜಿಗಳ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಆತಂಕ ಪಡುವ ಅಗತ್ಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಹೆಚ್ಚಿನ ಚಿಕಿತ್ಸೆ ಮತ್ತು ಮೇಲ್ವಿಚಾರಣೆ ಮುಂದುವರಿದಿದೆ. ಸ್ವಾಮೀಜಿಗಳ ಆರೋಗ್ಯ ವಿಚಾರ ತಿಳಿಯುತ್ತಿದ್ದಂತೆಯೇ ಭಕ್ತರು ಮತ್ತು ಅಭಿಮಾನಿಗಳು ಆಸ್ಪತ್ರೆಗೆ ಭೇಟಿ ನೀಡುತ್ತಿದ್ದು, ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಆಸ್ಪತ್ರೆ ಆವರಣದಲ್ಲಿ ಅಗತ್ಯ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

- ರಾಯಚೂರು - ಲಿಂಗಸುಗೂರು: ತಾಲೂಕಿನ ಗುಲಬರ್ಗಾ ರಸ್ತೆಯ ಪಕ್ಕದಲ್ಲಿರುವ ಹೋಟೆಲ್‌ವೊಂದಕ್ಕೆ ಅಪ್ರಾಪ್ತರು ಚಲಾಯಿಸುತ್ತಿದ್ದ ಕಾರು ನುಗ್ಗಿ ಭೀಕರ ಅಪಘಾತ ಸಂಭವಿಸಿದೆ. ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಅಪಘಾತಕ್ಕೀಡಾದ ಕಾರು ದೇವದುರ್ಗ ಎ.ಪಿ.ಎಂ.ಸಿ ಅಧ್ಯಕ್ಷ ಆದನಗೌಡ ಅವರಿಗೆ ಸೇರಿದ್ದಾಗಿದೆ ಎಂದು ತಿಳಿದುಬಂದಿದೆ. ಅವರ ಅಪ್ರಾಪ್ತ ವಯಸ್ಸಿನ ಮಕ್ಕಳು ಅತಿ ವೇಗವಾಗಿ ಕಾರನ್ನು ಚಲಾಯಿಸಿದ ಪರಿಣಾಮ, ನಿಯಂತ್ರಣ ತಪ್ಪಿ ರಸ್ತೆ ಬದಿಯ ಹೋಟೆಲ್ ಒಳಕ್ಕೆ ನುಗ್ಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಈವರೆಗೆ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ. ಇತ್ತೀಚಿನ ದಿನಗಳಲ್ಲಿ ಪಟ್ಟಣ ಪ್ರದೇಶಗಳಲ್ಲಿ ಅಪ್ರಾಪ್ತ ವಯಸ್ಕರು ವಾಹನಗಳನ್ನು ಚಲಾಯಿಸುವುದು ಮಿತಿಮೀರಿದ್ದು, ಸಾರ್ವಜನಿಕರ ಪ್ರಾಣಕ್ಕೆ ಸಂಚಕಾರ ತರುತ್ತಿದೆ. ಮೋಟಾರು ವಾಹನ ಕಾಯ್ದೆಯ ಪ್ರಕಾರ, ಅಪ್ರಾಪ್ತರು ವಾಹನ ಚಲಾಯಿಸಿ ಅಪಘಾತಕ್ಕೀಡಾದರೆ ಅದರ ಸಂಪೂರ್ಣ ಹೊಣೆಯನ್ನು ವಾಹನ ಮಾಲೀಕರು ಅಥವಾ ಪೋಷಕರು ಹೊರಬೇಕಾಗುತ್ತದೆ. ಅಪ್ರಾಪ್ತರಿಗೆ ವಾಹನ ನೀಡಿದ ಪೋಷಕರಿಗೆ ₹25,000 ವರೆಗೆ ದಂಡ ಮತ್ತು 3 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ. ವಾಹನದ ನೋಂದಣಿಯನ್ನು 12 ತಿಂಗಳ ಕಾಲ ರದ್ದುಗೊಳಿಸಬಹುದು. ಅಪ್ರಾಪ್ತ ವಯಸ್ಕನಿಗೆ 25 ವರ್ಷ ತುಂಬುವವರೆಗೆ ಡ್ರೈವಿಂಗ್ ಲೈಸೆನ್ಸ್ ಸಿಗದಂತೆ ನಿರ್ಬಂಧ ಹೇರಬಹುದು.1
- Post by User52941
- ಮಂಗಳಮುಖಿ ಸುಹಾಸಿನಿ, ಯುವಕ ಶೇಖರ್ ಸಾವು ಆತ್ಮಹತ್ಯೆನಾ?ಪ್ರಕರಣ ಪೊಲೀಸ್ ತನಿಖೆ ಚುರುಕು ಮಂಗಳಮುಖಿ ಸುಹಾಸಿನಿ,ಯುವಕ ಶೇಖರ್ ಸಾವು ಆತ್ಮಹತ್ಯೆನಾ?ಪ್ರಕರಣ ಪೊಲೀಸ್ ತನಿಖೆ ಚುರುಕು1
- ನಾವು ಭೂಮಿ ಪೂಜೆ ಮಾಡಿ ಹೋಗುವ ಗಿರಾಕಿಗಳು ಅಲ್ಲ : ಮಾಜಿ ಶಾಸಕ ಬಸವರಾಜ್ ದಡೆಸಗೂರು ವಿರುದ್ಧ ಸಚಿವ ಶಿವರಾಜ್ ತಂಗಡಗಿ ವಾಗ್ದಾಳಿ #ಕೊಪ್ಪಳ #koppal #karatagi #ಕಾರಟಗಿ #kanakagiri #ಕನಕಗಿರಿ #ಬಸವರಾಜ_ದಡೆಸಗೂರು #ಶಿವರಾಜ_ತಂಗಡಗಿ #ಗಂಗಾವತಿ #Gangavati #ಕುಕನೂರು #ಯಲಬುರ್ಗಾ #ಕುಷ್ಟಗಿ #mla1
- ತೀರ್ಥಹಳ್ಳಿ: ರಾಷ್ಟ್ರೀಯ ಹೆದ್ದಾರಿ ೧೬೯ ರಲ್ಲಿರುವ ತುಂಗಾ ಕಮಾನು ಸೇತುವೆ ಬಳಿ ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಚಲಿಸುತ್ತಿದ್ದ ಕಾರಿನ ಟೈಯರ್ ಬ್ಲಾಸ್ಟ್ ಆಗಿರುವುದು ಈ ಅಪಘಾತಕ್ಕೆ ಕಾರಣವಾಗಿದ್ದು ಯಾವುದೇ ಪ್ರಾಣಾಪಾಯವಾಗಿಲ್ಲ ಎಂದು ತಿಳಿದು ಬಂದಿದೆ.1
- ತುಮಕೂರು ನಗರ ಪಾಲಿಕೆ ಮತ್ತು ಶಾಸಕರ ವಿರುದ್ಧ ಜನಕ್ರೋಶ1
- ಚಳ್ಳಕೆರೆ ನಗರದಲ್ಲಿ ಸಾರ್ವಜನಿಕರಿಗೆ ಉಪಟಾಳ ನೀಡುತ್ತಿದ್ದ ಬೀದಿ ದನಗಳನ್ನು ಹಿಡಿದು ಗೋಶಾಲೆಗೆ ಬಿಡುವ ಕಾರ್ಯ ಇಂದು ಸಹ ಮುಂದುವರೆದಿದೆ. ಇಂದು ಸುಮಾರು 20ಕ್ಕೂ ಹೆಚ್ಚು ಬಿಡಾಡಿದನಗಳನ್ನು ಹಿಡಿದು ವಾಹನಗಳ ಮೂಲಕ ಗೋಶಾಲೆಗೆ ಸಾಗಿಸಲಾಗಿದೆ..1
- ಮಾಜಿ ಶಾಸಕ ಭೀಮಾ ನಾಯಕ್ ವಿರುದ್ಧ ಸಿಡಿದೆದ್ದ ತಂಗಿ..!1
- ತೀರ್ಥಹಳ್ಳಿ: ತಾಲೂಕಿನ ಬೀಸು ಗ್ರಾಮದಲ್ಲಿ ಅರಣ್ಯಾಧಿಕಾರಿಗಳ ದರ್ಪವನ್ನು ನೋಡಿ ಶಾಸಕ ಆರಗ ಜ್ಞಾನೇಂದ್ರರವರು ಕೆಂಡಾಮಂಡಲರಾಗಿದ್ದಾರೆ. ಟ1