logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಸಹಕಾರಿ ಬ್ಯಾಂಕಗಳಿಂದ ಆರ್ಥಿಕ ದುರ್ಬಲರಿಗೆ ಅನುಕೂಲ : ಸಚಿವ ತಿಮ್ಮಾಪೂರ ಗುಳೇದಗುಡ್ಡ : ರಾಷ್ಟ್ರೀಯಕೃತ ಬ್ಯಾಂಕ್‌ಗಳಲ್ಲಿ ಸಣ್ಣ ವ್ಯಾಪಾರಸ್ಥರು, ಕಾರ್ಮಿಕರು, ರೈತರು, ನೇಕಾರರು ಸಾಲ ಪಡೆಯಲು ಸಾಕಷ್ಟು ಅಲೆದಾಡಬೇಕಾಗುತ್ತದೆ. ಆದರೆ ಗ್ರಾಮೀಣ ಭಾಗದಲ್ಲಿರುವ ಸಹಕಾರಿ ಬ್ಯಾಂಕ್‌ಗಳು ಇಂತವರಿಗೆ ವರದಾನವಾಗಿವೆ. ಇದರಿಂದ ಹಿಂದುಳಿದ, ಬಡವರು, ಸಣ್ಣ ವ್ಯಾಪಾರಿಗಳು ಆರ್ಥಿಕವಾಗಿ ಸಬಲಗೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ಈ ಭಾಗದಲ್ಲಿನ ಬಸವೇಶ್ವರ ಪತ್ತಿನ ಸಹಕಾರಿ ಸಂಘ ಕಳೆದ ಇಪ್ಪತೈದು ವರ್ಷಗಳಿಂದ ಉತ್ತಮ ಕಾರ್ಯ ನಿರ್ವಹಿಸುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದರು. ಅವರು ಶನಿವಾರ ಪಟ್ಟಣದ ಬಸವೇಶ್ವರ ಪತ್ತಿನ ಸಹಕಾರಿ ಸಂಘದ ನೂತನ ಕಟ್ಟಡದ ಉದ್ಘಾಟನೆ ಹಾಗೂ ರಜತ ಮಹೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿ, ಸಹಕಾರಿ ಸಂಘಗಳ ಬೆಳವಣಿಗೆಗಾಗಿ ಕೆಲವು ಬಾರಿ ನಿಷ್ಟುರ ಕ್ರಮಕೈಗೊಳ್ಳಬೇಕಾಗುತ್ತದೆ. ಸಾಲ ನೀಡುವುದು ಹಾಗೂ ಠೇವಣಿ ಸಂಗ್ರಹ ಎರಡನ್ನು ಸಮತೋಲನ ಕಾಯ್ದುಕೊಂಡು ಸಹಕಾರಿ ಸಂಘಗಳು ಬೆಳೆಯಬೇಕು. ಆ ಮೂಲಕ ಹಿಂದುಳಿದ ವರ್ಗಗಳ, ಬಡಜನರ ಆರ್ಥಿಕ ಸ್ವಾವಲಂಬಿ ಜೀವನಕ್ಕೆ ಸಹಕಾರಿ ಸಂಘಗಳು ನೆರವಾಗಬೇಕು ಎಂದರು. ಇದೇ ಸಂದರ್ಭದಲ್ಲಿ ಸೇಫ್ ಲಾಕರ್, ವಾಣಿಜ್ಯ ಮಳಿಗೆ, ಗಣಕ ಯಂತ್ರಗಳನ್ನು ಉದ್ಘಾಟಿಸಲಾಯಿತು. ಶಾಸಕ ಭೀಮಸೇನ ಚಿಮ್ಮನಕಟ್ಟಿ ಕಾರ್ಯಕ್ರದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ಕೈಗಾರಿಕಾ ಹಾಗೂ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ, ಸಂಘದ ಅಧ್ಯಕ್ಷ ಸಂಜಯ ಬರಗುಂಡಿ, ಉಪಾಧ್ಯಕ್ಷ ಉಮೇಶ ಹುನಗುಂದ, ರಾಚಣ್ಣ ಕೆರೂರ, ಚಂದ್ರಶೇಖರ ಹರವಿ, ಮುಪ್ಪಣ್ಣ ಶೀಲವಂತ, ಸಂಗಪ್ಪ ಹಡಪದ, ಚಂದ್ರಶೇಖರ ಪಟ್ಟಣಶೆಟ್ಟಿ, ವಿರೂಪಾಕ್ಷಪ್ಪ ಮೊರಬದ, ನಾಗಪ್ಪ ಚಿಂದಿ, ಬಸವರಾಜ ಬಂಡಿವಡ್ಡರ, ರಮೇಶ ಅಗಸಿಮನಿ, ಫಕೀರಪ್ಪ ತಳವಾರ, ರಾಮಲಿಂಗಪ್ಪ ತಳವಾರ, ಪ್ರಕಾಶ ಮೇಟಿ, ಭಾಗ್ಯಶ್ರೀ ಕಾರಕೂನ, ಕವಿತಾ ಬರಗುಂಡಿ, ರಮೇಶ ಹಡಪದ, ರಾಜು ಸಂಗಮ, ಗೋಪಾಲ ಭಟ್ಟಡ, ಸಂಗಮೇಶ ಜೋಗೂರ, ವಿಷ್ಣು ಬಳಿಗೇರ, ಮತ್ತಿತರರು ಉಪಸ್ಥಿತರಿದ್ದರು.

1 hr ago
user_ಹುಚ್ಚೇಶ ಮಲ್ಲಪ್ಪ ಯಂಡಿಗೇರಿ
ಹುಚ್ಚೇಶ ಮಲ್ಲಪ್ಪ ಯಂಡಿಗೇರಿ
ಗೂಳೇದಗುಡ್ಡ, ಬಾಗಲಕೋಟೆ, ಕರ್ನಾಟಕ•
1 hr ago
0e0cb185-9be3-4e45-8c3b-c9e244327e99

More news from ಕರ್ನಾಟಕ and nearby areas
  • ಗುಳೇದಗುಡ್ಡದ ಸೈಂಟ್ ಝೇವಿಯರ್ಸ್ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಹಳೆಯ ವಿದ್ಯಾರ್ಥಿಗಳು ಮೇ 10ರಂದು ಗುರುವಂದನಾ ಹಾಗೂ ಸ್ನೇಹ ಸಮ್ಮೇಳನ ಆಯೋಜಿಸಿದ್ದಾರೆ. ಆಸಂಗಿ ರಸ್ತೆಯ ಕಾಟವಾ ಫಾರ್ಮಹೌಸ್‌ನಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯಸ್ಥರು, ನಿವೃತ್ತ ಶಿಕ್ಷಕರು ಪಾಲ್ಗೊಳ್ಳಲಿದ್ದಾರೆ. ಇದು ಗುರುಗಳಿಗೆ ಗೌರವ ಸಲ್ಲಿಸಿ, ಹಳೆಯ ನೆನಪುಗಳನ್ನು ಮೆಲುಕು ಹಾಕುವ ಅದ್ಭುತ ಅವಕಾಶವಾಗಿದೆ.
    1
    ಗುಳೇದಗುಡ್ಡದ ಸೈಂಟ್ ಝೇವಿಯರ್ಸ್ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಹಳೆಯ ವಿದ್ಯಾರ್ಥಿಗಳು ಮೇ 10ರಂದು ಗುರುವಂದನಾ ಹಾಗೂ ಸ್ನೇಹ ಸಮ್ಮೇಳನ ಆಯೋಜಿಸಿದ್ದಾರೆ. ಆಸಂಗಿ ರಸ್ತೆಯ ಕಾಟವಾ ಫಾರ್ಮಹೌಸ್‌ನಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯಸ್ಥರು, ನಿವೃತ್ತ ಶಿಕ್ಷಕರು ಪಾಲ್ಗೊಳ್ಳಲಿದ್ದಾರೆ. ಇದು ಗುರುಗಳಿಗೆ ಗೌರವ ಸಲ್ಲಿಸಿ, ಹಳೆಯ ನೆನಪುಗಳನ್ನು ಮೆಲುಕು ಹಾಕುವ ಅದ್ಭುತ ಅವಕಾಶವಾಗಿದೆ.
    user_ಹುಚ್ಚೇಶ ಮಲ್ಲಪ್ಪ ಯಂಡಿಗೇರಿ
    ಹುಚ್ಚೇಶ ಮಲ್ಲಪ್ಪ ಯಂಡಿಗೇರಿ
    ಗೂಳೇದಗುಡ್ಡ, ಬಾಗಲಕೋಟೆ, ಕರ್ನಾಟಕ•
    11 hrs ago
  • ಬಾಗಲಕೋಟೆ ಮೂಲದ ಭೀಮ ಬಲ ನ್ಯೂಸ್ 24×7 ಕನ್ನಡ ವಾಹಿನಿಯ ಸಂಪಾದಕರಾಗಿ ಹನಮಂತ ಸಂಗೊಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಸ್ಥಳೀಯ ಸುದ್ದಿಗಳಿಗೆ ಒತ್ತು ನೀಡುವ ಈ ವಾಹಿನಿಗೆ ಇವರು ನೇತೃತ್ವ ವಹಿಸಿದ್ದಾರೆ.
    1
    ಬಾಗಲಕೋಟೆ ಮೂಲದ ಭೀಮ ಬಲ ನ್ಯೂಸ್ 24×7 ಕನ್ನಡ ವಾಹಿನಿಯ ಸಂಪಾದಕರಾಗಿ ಹನಮಂತ ಸಂಗೊಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಸ್ಥಳೀಯ ಸುದ್ದಿಗಳಿಗೆ ಒತ್ತು ನೀಡುವ ಈ ವಾಹಿನಿಗೆ ಇವರು ನೇತೃತ್ವ ವಹಿಸಿದ್ದಾರೆ.
    user_ಭೀಮ ಬಲ ನ್ಯೂಸ್ 24×7 ಕನ್ನಡ
    ಭೀಮ ಬಲ ನ್ಯೂಸ್ 24×7 ಕನ್ನಡ
    Newsagent ಬಾಗಲಕೋಟೆ, ಬಾಗಲಕೋಟೆ, ಕರ್ನಾಟಕ•
    22 hrs ago
  • ವಿಜಯಪುರ ಜಿಲ್ಲೆಯಲ್ಲಿ ಹೆಣ್ಣು ಮಗು ಜನಿಸಿದ್ದಕ್ಕೆ ಆಸ್ಪತ್ರೆಯಲ್ಲೇ ಪತ್ನಿಯನ್ನು ಬಿಟ್ಟು ಪತಿ ಪರಾರಿಯಾಗಿದ್ದಾನೆ. ರಾಜ್ಯದಲ್ಲಿ ಹೆಣ್ಣು ಮಕ್ಕಳ ಜನಸಂಖ್ಯೆ ಕಡಿಮೆ ಇದ್ದರೂ ಇಂತಹ ಕೃತ್ಯ ನಡೆದಿರುವುದು ಆಘಾತ ಮೂಡಿಸಿದೆ.
    1
    ವಿಜಯಪುರ ಜಿಲ್ಲೆಯಲ್ಲಿ ಹೆಣ್ಣು ಮಗು ಜನಿಸಿದ್ದಕ್ಕೆ ಆಸ್ಪತ್ರೆಯಲ್ಲೇ ಪತ್ನಿಯನ್ನು ಬಿಟ್ಟು ಪತಿ ಪರಾರಿಯಾಗಿದ್ದಾನೆ. ರಾಜ್ಯದಲ್ಲಿ ಹೆಣ್ಣು ಮಕ್ಕಳ ಜನಸಂಖ್ಯೆ ಕಡಿಮೆ ಇದ್ದರೂ ಇಂತಹ ಕೃತ್ಯ ನಡೆದಿರುವುದು ಆಘಾತ ಮೂಡಿಸಿದೆ.
    user_Sharanugouda Patil
    Sharanugouda Patil
    Muddebihal, Vijayapura•
    10 hrs ago
  • ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನಲ್ಲಿ ಕಬ್ಬು ಕೃಷಿಯು ಸ್ಥಳೀಯ ರೈತರ ಪ್ರಮುಖ ಆದಾಯ ಮೂಲವಾಗಿದೆ. ಸದ್ಯ ಕಬ್ಬು ಬೆಳೆಗಾರರು ಇಳುವರಿ ಮತ್ತು ಬೆಲೆಯಂತಹ ಹಲವು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಈ ವರ್ಷ ಉತ್ತಮ ಇಳುವರಿ ಹಾಗೂ ಲಾಭದಾಯಕ ಬೆಲೆ ಸಿಗುವ ನಿರೀಕ್ಷೆಯಲ್ಲಿ ರೈತರಿದ್ದಾರೆ.
    1
    ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನಲ್ಲಿ ಕಬ್ಬು ಕೃಷಿಯು ಸ್ಥಳೀಯ ರೈತರ ಪ್ರಮುಖ ಆದಾಯ ಮೂಲವಾಗಿದೆ. ಸದ್ಯ ಕಬ್ಬು ಬೆಳೆಗಾರರು ಇಳುವರಿ ಮತ್ತು ಬೆಲೆಯಂತಹ ಹಲವು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಈ ವರ್ಷ ಉತ್ತಮ ಇಳುವರಿ ಹಾಗೂ ಲಾಭದಾಯಕ ಬೆಲೆ ಸಿಗುವ ನಿರೀಕ್ಷೆಯಲ್ಲಿ ರೈತರಿದ್ದಾರೆ.
    user_Ganesh Khsatri
    Ganesh Khsatri
    ಮುದ್ದೇಬಿಹಾಳ, ವಿಜಯಪುರ, ಕರ್ನಾಟಕ•
    12 hrs ago
  • ತಮಿಳುನಾಡಿನಲ್ಲಿ ನೂತನ ಸಿಎಂ ಆಗಿ ವಿಜಯ್ ಗೆ ರಾಹುಲ್ ಗಾಂಧಿ ಸಾತ್ ನೀಡಿದರು
    1
    ತಮಿಳುನಾಡಿನಲ್ಲಿ ನೂತನ ಸಿಎಂ ಆಗಿ ವಿಜಯ್ ಗೆ
 ರಾಹುಲ್ ಗಾಂಧಿ ಸಾತ್ ನೀಡಿದರು
    user_Onlinetv24x7
    Onlinetv24x7
    ಹಾಸನ, ಹಾಸನ, ಕರ್ನಾಟಕ•
    4 hrs ago
  • ಶ್ರೀ ಕೃಷ್ಣ ಪಾರಿಜಾತ ರುಕ್ಮಿಣಿ ಸನ್ನಿವೇಶ ಹಾಡು
    1
    ಶ್ರೀ ಕೃಷ್ಣ ಪಾರಿಜಾತ ರುಕ್ಮಿಣಿ ಸನ್ನಿವೇಶ ಹಾಡು
    user_SK news Bijapur
    SK news Bijapur
    ವಿಜಯಪುರ, ವಿಜಯಪುರ, ಕರ್ನಾಟಕ•
    4 hrs ago
  • ಶಾಸಕ ಉಮೇಶ್ ಮೇಟಿ ತಮ್ಮ ಗೆಲುವಿನ ಹಿಂದಿನ ಕಾರಣವನ್ನು ಕರ್ನಾಟಕದಲ್ಲಿ ಬಹಿರಂಗಪಡಿಸಿದ್ದಾರೆ. ತಮ್ಮ ಕುಟುಂಬದಲ್ಲಿ ಯಾವುದೇ ಗೊಂದಲವಿಲ್ಲ, ಎಲ್ಲರೂ ಒಟ್ಟಾಗಿ ಚುನಾವಣೆಯಲ್ಲಿ ಕೆಲಸ ಮಾಡಿದ್ದರಿಂದ ಗೆಲುವು ಸಾಧ್ಯವಾಯಿತು ಎಂದು ಅವರು ಹೇಳಿದ್ದಾರೆ.
    1
    ಶಾಸಕ ಉಮೇಶ್ ಮೇಟಿ ತಮ್ಮ ಗೆಲುವಿನ ಹಿಂದಿನ ಕಾರಣವನ್ನು ಕರ್ನಾಟಕದಲ್ಲಿ ಬಹಿರಂಗಪಡಿಸಿದ್ದಾರೆ. ತಮ್ಮ ಕುಟುಂಬದಲ್ಲಿ ಯಾವುದೇ ಗೊಂದಲವಿಲ್ಲ, ಎಲ್ಲರೂ ಒಟ್ಟಾಗಿ ಚುನಾವಣೆಯಲ್ಲಿ ಕೆಲಸ ಮಾಡಿದ್ದರಿಂದ ಗೆಲುವು ಸಾಧ್ಯವಾಯಿತು ಎಂದು ಅವರು ಹೇಳಿದ್ದಾರೆ.
    user_T NEWS BIJAPUR
    T NEWS BIJAPUR
    ವಿಜಯಪುರ, ವಿಜಯಪುರ, ಕರ್ನಾಟಕ•
    10 hrs ago
  • ಬಾಗಲಕೋಟೆ ಜಿಲ್ಲೆಯ ಬೆಣ್ಣೂರು ಗ್ರಾಮದಲ್ಲಿ ಕುಡಿಯುವ ನೀರಿನ ಟ್ಯಾಂಕ್ ಸ್ವಚ್ಛತೆ ಇಲ್ಲದೆ ಕಲುಷಿತಗೊಂಡಿದೆ. ಇದರಿಂದಾಗಿ ಗ್ರಾಮಸ್ಥರು ಸೊಳ್ಳೆಗಳ ಕಾಟದಿಂದ ಹೈರಾಣಾಗಿದ್ದು, ಗ್ರಾಮ ಪಂಚಾಯಿತಿ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳು ಕೂಡಲೇ ಗಮನಹರಿಸಿ ಶುದ್ಧ ಕುಡಿಯುವ ನೀರು ಒದಗಿಸುವಂತೆ ಒತ್ತಾಯಿಸಿದ್ದಾರೆ.
    1
    ಬಾಗಲಕೋಟೆ ಜಿಲ್ಲೆಯ ಬೆಣ್ಣೂರು ಗ್ರಾಮದಲ್ಲಿ ಕುಡಿಯುವ ನೀರಿನ ಟ್ಯಾಂಕ್ ಸ್ವಚ್ಛತೆ ಇಲ್ಲದೆ ಕಲುಷಿತಗೊಂಡಿದೆ. ಇದರಿಂದಾಗಿ ಗ್ರಾಮಸ್ಥರು ಸೊಳ್ಳೆಗಳ ಕಾಟದಿಂದ ಹೈರಾಣಾಗಿದ್ದು, ಗ್ರಾಮ ಪಂಚಾಯಿತಿ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳು ಕೂಡಲೇ ಗಮನಹರಿಸಿ ಶುದ್ಧ ಕುಡಿಯುವ ನೀರು ಒದಗಿಸುವಂತೆ ಒತ್ತಾಯಿಸಿದ್ದಾರೆ.
    user_ಭೀಮ ಬಲ ನ್ಯೂಸ್ 24×7 ಕನ್ನಡ
    ಭೀಮ ಬಲ ನ್ಯೂಸ್ 24×7 ಕನ್ನಡ
    Newsagent ಬಾಗಲಕೋಟೆ, ಬಾಗಲಕೋಟೆ, ಕರ್ನಾಟಕ•
    23 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.