ಬೆಂಗಳೂರಿನ ಸದ್ಗುರು ಸನ್ನಿಧಿಯಲ್ಲಿ, ಆದಿಯೋಗಿಯ ಸನ್ನಿಧಿಯಲ್ಲಿ 12ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಅತ್ಯಂತ ಉತ್ಸಾಹದಿಂದ ಆಚರಿಸಲಾಯಿತು. ಈ ಬೃಹತ್ ಕಾರ್ಯಕ್ರಮದಲ್ಲಿ ಗಡಿ ಭದ್ರತಾ ಪಡೆಯ (BSF) ಯೋಧರು, ಸೇನೆಯ ಮದ್ರಾಸ್ ಇಂಜಿನಿಯರ್ ಗ್ರೂಪ್ ಆಂಡ್ ಸೆಂಟರ್, ವಾಯುಪಡೆ ಹಾಗೂ ಎನ್‌ಸಿಸಿ ಕೆಡೆಟ್‌ಗಳು, ವಿದ್ಯಾರ್ಥಿಗಳು, ಗ್ರಾಮಸ್ಥರು, ಸ್ವಯಂಸೇವಕರು ಮತ್ತು ಸಾರ್ವಜನಿಕರು ಸೇರಿದಂತೆ 3,000ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು. ಯೋಗದ ಮಹತ್ವದ ಬಗ್ಗೆ ಸದ್ಗುರುಗಳು ಸಾಮಾಜಿಕ ಮಾಧ್ಯಮವಾದ X ನಲ್ಲಿ ತಿಳಿಸಿದ್ದು, ಅಂತರರಾಷ್ಟ್ರೀಯ ಯೋಗ ದಿನವು ಯೋಗವು ಯಾವುದೇ ಫಿಲಾಸಫಿ, ಸಿದ್ಧಾಂತ, ನಂಬಿಕೆಯ ಚೌಕಟ್ಟು ಅಥವಾ ಮತಧರ್ಮವಲ್ಲ ಎಂಬುದನ್ನು ನೆನಪಿಸುತ್ತದೆ ಎಂದಿದ್ದಾರೆ. ಇದು ಆಂತರಿಕ ಯೋಗಕ್ಷೇಮಕ್ಕಾಗಿ ಇರುವ ವಿಜ್ಞಾನ ಮತ್ತು ಸಾಧನವಾಗಿದ್ದು, ವ್ಯಕ್ತಿಯ ಮತಧರ್ಮ, ಜನಾಂಗ, ಜಾತಿ, ಪಂಥ, ಲಿಂಗ ಯಾವುದೇ ಇರಲಿ, ಈ ಸಾಧನಗಳು ದೇಹ, ಮನಸ್ಸು, ಭಾವನೆ, ಬುದ್ಧಿಶಕ್ತಿ ಮತ್ತು ಚೈತನ್ಯವನ್ನು ಅತ್ಯುನ್ನತ ಮಟ್ಟದಲ್ಲಿ ಕಾರ್ಯನಿರ್ವಹಿಸುವಂತೆ ಸಜ್ಜುಗೊಳಿಸಿ, ಪ್ರತಿ ಮನುಷ್ಯನಲ್ಲೂ ಅಡಗಿರುವ ಅದ್ಭುತ ಸಾಮರ್ಥ್ಯವನ್ನು ಹೊರತರುತ್ತದೆ. ಈ ಬಾರಿಯ ಆಚರಣೆಯ ಪ್ರಮುಖಾಂಶವೆಂದರೆ, ಸದ್ಗುರುಗಳ ಮಾರ್ಗದರ್ಶನದ ಧ್ಯಾನ ಪ್ರಕ್ರಿಯೆಯಾದ 'ಮಿರಾಕಲ್ ಆಫ್ ಮೈಂಡ್' ಆಪ್‌ನ ಕನ್ನಡ ಆವೃತ್ತಿಯನ್ನು ಬಿಡುಗಡೆ ಮಾಡಲಾಗಿದ್ದು, ಇದು ಕೋಟ್ಯಾಂತರ ಕನ್ನಡಿಗರಿಗೆ ಉಚಿತವಾಗಿ ಲಭ್ಯವಾಗಲಿದೆ. ಮಾನಸಿಕ ಸ್ಪಷ್ಟತೆ ಮತ್ತು ಯೋಗಕ್ಷೇಮವನ್ನು ಉತ್ತಮಗೊಳಿಸುವ ಈ ಧ್ಯಾನವನ್ನು ಕಲಿಯಲು ಯೋಗದ ಯಾವುದೇ ಪೂರ್ವ ಅನುಭವ ಅಥವಾ ಜ್ಞಾನದ ಅಗತ್ಯವಿಲ್ಲ. ಈ ಆಪ್ ಅನ್ನು ಜೀವಿತಾವಧಿಯವರೆಗೆ ಉಚಿತವಾಗಿ ಬಳಸಬಹುದಾಗಿದೆ. ಕಾರ್ಯಕ್ರಮದಲ್ಲಿ ಗಡಿ ಭದ್ರತಾ ಪಡೆ (BSF) ಮತ್ತು ನ್ಯಾಷನಲ್ ಕೆಡೆಟ್ ಕಾರ್ಪ್ಸ್‌ನ (NCC) ಹಿರಿಯ ಅಧಿಕಾರಿಗಳಾದ ಶ್ರೀ ತ್ಸೆವಾಂಗ್ ನಾಮ್ಗ್ಯಾಲ್ (ಹೆಚ್ಚುವರಿ ಮಹಾನಿರ್ದೇಶಕರು, BSF), ಶ್ರೀ ದಿನೇಶ್ ಕುಮಾರ್ ಯಾದವ್ (ಮಹಾನಿರೀಕ್ಷಕರು, BSF), ಶ್ರೀ ಸಂಜಯ್ ಯಾದವ್ (ಉಪ ಮಹಾನಿರೀಕ್ಷಕರು, BSF), ಶ್ರೀ ಸತೀಶ್ ಕುಮಾರ್ ಮಿಶ್ರಾ (BSF), ಶ್ರೀ ಶಿವ ಆಧಾರ್ ಶ್ರೀವಾಸ್ತವ (ಮಹಾನಿರೀಕ್ಷಕರು, BSF), ಶ್ರೀ ಅಮರೇಂದ್ರ ಕುಮಾರ್ ಸಿಂಗ್ (ಉಪ ಮಹಾನಿರೀಕ್ಷಕರು, BSF), ಮತ್ತು ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯದ (NCC) ಉಪ ಮಹಾನಿರ್ದೇಶಕರಾದ ಏರ್ ಕಮೋಡೋರ್ ಕಮಲ್ ಚಡ್ಡಾ ಅವರು ಉಪಸ್ಥಿತರಿದ್ದರು. ಈ ಕಾರ್ಯಕ್ರಮವು 'ಸೌಂಡ್ಸ್ ಆಫ್ ಈಶ' ಮತ್ತು 'ಪ್ರಾಜೆಕ್ಟ್ ಸಂಸ್ಕೃತಿ' ತಂಡಗಳ ಸಾಂಸ್ಕೃತಿಕ ಪ್ರದರ್ಶನಗಳೊಂದಿಗೆ ಆರಂಭಗೊಂಡಿತು. ನಂತರ ಮುಖ್ಯ ಅತಿಥಿಗಳು ಸಭೆಯನ್ನುದ್ದೇಶಿಸಿ ಮಾತನಾಡಿದರು. ಇದೇ ವೇಳೆ ಭಾಗವಹಿಸಿದ್ದ ಜನರಿಗೆ ಯೋಗ ನಮಸ್ಕಾರ ಮತ್ತು ಕುತ್ತಿಗೆಯ ವ್ಯಾಯಾಮಗಳು ಸೇರಿದಂತೆ ಉಪ-ಯೋಗವನ್ನು ಕಲಿಸಿಕೊಡಲಾಯಿತು. ಜೊತೆಗೆ, ಸರಳ ಧ್ಯಾನವಾದ 'ಮಿರಾಕಲ್ ಆಫ್ ಮೈಂಡ್' ಪ್ರಕ್ರಿಯೆಯ ಮಾರ್ಗದರ್ಶನವನ್ನು ನೀಡಲಾಯಿತು. ಬೆಂಗಳೂರಿನ ಸದ್ಗುರು ಸನ್ನಿಧಿಯು ಅಂತರರಾಷ್ಟ್ರೀಯ ಯೋಗ ದಿನದ ಆಚರಣೆಗೆ ಮಾತ್ರ ಸೀಮಿತವಾಗಿಲ್ಲ; ಪ್ರತಿದಿನ ಕನ್ನಡ, ಇಂಗ್ಲಿಷ್, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಉಚಿತ ಯೋಗ ಸೆಶನ್‌ಗಳನ್ನು ನಡೆಸುತ್ತಿದೆ. ಇದರೊಂದಿಗೆ, ಶಾಸ್ತ್ರೀಯ ಹಠ ಯೋಗ ಕಾರ್ಯಕ್ರಮಗಳು ಹಾಗೂ ಸದ್ಗುರು ಗುರುಕುಲದಲ್ಲಿ ತರಬೇತಿ ಪಡೆದ ಶಿಕ್ಷಕರಿಂದ ವಸತಿ ಕಾರ್ಯಕ್ರಮಗಳನ್ನೂ ಆಯೋಜಿಸುತ್ತಿದೆ. ಈ ಪ್ರಯತ್ನಗಳ ಮೂಲಕ ಈ ಕೇಂದ್ರವು ಈಗಾಗಲೇ ಒಂದು ಲಕ್ಷಕ್ಕೂ ಹೆಚ್ಚು ಜನರಿಗೆ ಉಚಿತವಾಗಿ ಯೋಗವನ್ನು ತಲುಪಿಸಿದ್ದು, ಶಾಸ್ತ್ರೀಯ ಹಠ ಯೋಗ ಕಾರ್ಯಕ್ರಮಗಳಿಂದ ಪ್ರತಿ ವರ್ಷ ನೂರಾರು ಜನರು ಪ್ರಯೋಜನ ಪಡೆಯುತ್ತಿದ್ದಾರೆ. ಅಂತರರಾಷ್ಟ್ರೀಯ ಯೋಗ ದಿನದ ರಾಷ್ಟ್ರಮಟ್ಟದ ಅಭಿಯಾನದ ಭಾಗವಾಗಿ, ಈಶ ಫೌಂಡೇಶನ್ ದೇಶದಾದ್ಯಂತ ಕಾರ್ಪೊರೇಟ್ ಕಂಪನಿಗಳು, ಶಿಕ್ಷಣ, ವೈದ್ಯಕೀಯ, ಸರ್ಕಾರಿ ಸಂಸ್ಥೆಗಳು, ರಕ್ಷಣಾ ಪಡೆಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸುಮಾರು 1,000 ಯೋಗ ಮತ್ತು ಧ್ಯಾನ ತರಗತಿಗಳನ್ನು ನಡೆಸುತ್ತಿದ್ದು, ಇದರಲ್ಲಿ ಸುಮಾರು 50,000 ಜನರು ಭಾಗವಹಿಸುವ ನಿರೀಕ್ಷೆಯಿದೆ. ಬೆಂಗಳೂರಿನ ಸದ್ಗುರು ಸನ್ನಿಧಿಯು ಸದ್ಗುರುಗಳಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರವಾಗಿದ್ದು, ಇಲ್ಲಿಗೆ ಬರುವ ಜನರಿಗೆ ವಿವಿಧ ಉಚಿತ ಹಾಗೂ ವಸತಿ ಕಾರ್ಯಕ್ರಮಗಳ ಮೂಲಕ ಯೋಗ, ಧ್ಯಾನ, ಭಕ್ತಿ ಮತ್ತು ಆಂತರಿಕ ರೂಪಾಂತರವನ್ನು ಅನುಭವಿಸುವ ಅಪೂರ್ವ ಅವಕಾಶವನ್ನು ನೀಡುತ್ತಿದೆ.
ಬೆಂಗಳೂರಿನ ಸದ್ಗುರು ಸನ್ನಿಧಿಯಲ್ಲಿ, ಆದಿಯೋಗಿಯ ಸನ್ನಿಧಿಯಲ್ಲಿ 12ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಅತ್ಯಂತ ಉತ್ಸಾಹದಿಂದ ಆಚರಿಸಲಾಯಿತು. ಈ ಬೃಹತ್ ಕಾರ್ಯಕ್ರಮದಲ್ಲಿ ಗಡಿ ಭದ್ರತಾ ಪಡೆಯ (BSF) ಯೋಧರು, ಸೇನೆಯ ಮದ್ರಾಸ್ ಇಂಜಿನಿಯರ್ ಗ್ರೂಪ್ ಆಂಡ್ ಸೆಂಟರ್, ವಾಯುಪಡೆ ಹಾಗೂ ಎನ್‌ಸಿಸಿ ಕೆಡೆಟ್‌ಗಳು, ವಿದ್ಯಾರ್ಥಿಗಳು, ಗ್ರಾಮಸ್ಥರು, ಸ್ವಯಂಸೇವಕರು ಮತ್ತು ಸಾರ್ವಜನಿಕರು ಸೇರಿದಂತೆ 3,000ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು. ಯೋಗದ ಮಹತ್ವದ ಬಗ್ಗೆ ಸದ್ಗುರುಗಳು ಸಾಮಾಜಿಕ ಮಾಧ್ಯಮವಾದ X ನಲ್ಲಿ ತಿಳಿಸಿದ್ದು, ಅಂತರರಾಷ್ಟ್ರೀಯ ಯೋಗ ದಿನವು ಯೋಗವು ಯಾವುದೇ ಫಿಲಾಸಫಿ, ಸಿದ್ಧಾಂತ, ನಂಬಿಕೆಯ ಚೌಕಟ್ಟು ಅಥವಾ ಮತಧರ್ಮವಲ್ಲ ಎಂಬುದನ್ನು ನೆನಪಿಸುತ್ತದೆ ಎಂದಿದ್ದಾರೆ. ಇದು ಆಂತರಿಕ ಯೋಗಕ್ಷೇಮಕ್ಕಾಗಿ ಇರುವ ವಿಜ್ಞಾನ ಮತ್ತು ಸಾಧನವಾಗಿದ್ದು, ವ್ಯಕ್ತಿಯ ಮತಧರ್ಮ, ಜನಾಂಗ, ಜಾತಿ, ಪಂಥ, ಲಿಂಗ ಯಾವುದೇ ಇರಲಿ, ಈ ಸಾಧನಗಳು ದೇಹ, ಮನಸ್ಸು, ಭಾವನೆ, ಬುದ್ಧಿಶಕ್ತಿ ಮತ್ತು ಚೈತನ್ಯವನ್ನು ಅತ್ಯುನ್ನತ ಮಟ್ಟದಲ್ಲಿ
ಕಾರ್ಯನಿರ್ವಹಿಸುವಂತೆ ಸಜ್ಜುಗೊಳಿಸಿ, ಪ್ರತಿ ಮನುಷ್ಯನಲ್ಲೂ ಅಡಗಿರುವ ಅದ್ಭುತ ಸಾಮರ್ಥ್ಯವನ್ನು ಹೊರತರುತ್ತದೆ. ಈ ಬಾರಿಯ ಆಚರಣೆಯ ಪ್ರಮುಖಾಂಶವೆಂದರೆ, ಸದ್ಗುರುಗಳ ಮಾರ್ಗದರ್ಶನದ ಧ್ಯಾನ ಪ್ರಕ್ರಿಯೆಯಾದ 'ಮಿರಾಕಲ್ ಆಫ್ ಮೈಂಡ್' ಆಪ್‌ನ ಕನ್ನಡ ಆವೃತ್ತಿಯನ್ನು ಬಿಡುಗಡೆ ಮಾಡಲಾಗಿದ್ದು, ಇದು ಕೋಟ್ಯಾಂತರ ಕನ್ನಡಿಗರಿಗೆ ಉಚಿತವಾಗಿ ಲಭ್ಯವಾಗಲಿದೆ. ಮಾನಸಿಕ ಸ್ಪಷ್ಟತೆ ಮತ್ತು ಯೋಗಕ್ಷೇಮವನ್ನು ಉತ್ತಮಗೊಳಿಸುವ ಈ ಧ್ಯಾನವನ್ನು ಕಲಿಯಲು ಯೋಗದ ಯಾವುದೇ ಪೂರ್ವ ಅನುಭವ ಅಥವಾ ಜ್ಞಾನದ ಅಗತ್ಯವಿಲ್ಲ. ಈ ಆಪ್ ಅನ್ನು ಜೀವಿತಾವಧಿಯವರೆಗೆ ಉಚಿತವಾಗಿ ಬಳಸಬಹುದಾಗಿದೆ. ಕಾರ್ಯಕ್ರಮದಲ್ಲಿ ಗಡಿ ಭದ್ರತಾ ಪಡೆ (BSF) ಮತ್ತು ನ್ಯಾಷನಲ್ ಕೆಡೆಟ್ ಕಾರ್ಪ್ಸ್‌ನ (NCC) ಹಿರಿಯ ಅಧಿಕಾರಿಗಳಾದ ಶ್ರೀ ತ್ಸೆವಾಂಗ್ ನಾಮ್ಗ್ಯಾಲ್ (ಹೆಚ್ಚುವರಿ ಮಹಾನಿರ್ದೇಶಕರು, BSF), ಶ್ರೀ ದಿನೇಶ್ ಕುಮಾರ್ ಯಾದವ್ (ಮಹಾನಿರೀಕ್ಷಕರು, BSF), ಶ್ರೀ ಸಂಜಯ್ ಯಾದವ್ (ಉಪ ಮಹಾನಿರೀಕ್ಷಕರು, BSF), ಶ್ರೀ ಸತೀಶ್ ಕುಮಾರ್ ಮಿಶ್ರಾ (BSF), ಶ್ರೀ ಶಿವ ಆಧಾರ್ ಶ್ರೀವಾಸ್ತವ
(ಮಹಾನಿರೀಕ್ಷಕರು, BSF), ಶ್ರೀ ಅಮರೇಂದ್ರ ಕುಮಾರ್ ಸಿಂಗ್ (ಉಪ ಮಹಾನಿರೀಕ್ಷಕರು, BSF), ಮತ್ತು ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯದ (NCC) ಉಪ ಮಹಾನಿರ್ದೇಶಕರಾದ ಏರ್ ಕಮೋಡೋರ್ ಕಮಲ್ ಚಡ್ಡಾ ಅವರು ಉಪಸ್ಥಿತರಿದ್ದರು. ಈ ಕಾರ್ಯಕ್ರಮವು 'ಸೌಂಡ್ಸ್ ಆಫ್ ಈಶ' ಮತ್ತು 'ಪ್ರಾಜೆಕ್ಟ್ ಸಂಸ್ಕೃತಿ' ತಂಡಗಳ ಸಾಂಸ್ಕೃತಿಕ ಪ್ರದರ್ಶನಗಳೊಂದಿಗೆ ಆರಂಭಗೊಂಡಿತು. ನಂತರ ಮುಖ್ಯ ಅತಿಥಿಗಳು ಸಭೆಯನ್ನುದ್ದೇಶಿಸಿ ಮಾತನಾಡಿದರು. ಇದೇ ವೇಳೆ ಭಾಗವಹಿಸಿದ್ದ ಜನರಿಗೆ ಯೋಗ ನಮಸ್ಕಾರ ಮತ್ತು ಕುತ್ತಿಗೆಯ ವ್ಯಾಯಾಮಗಳು ಸೇರಿದಂತೆ ಉಪ-ಯೋಗವನ್ನು ಕಲಿಸಿಕೊಡಲಾಯಿತು. ಜೊತೆಗೆ, ಸರಳ ಧ್ಯಾನವಾದ 'ಮಿರಾಕಲ್ ಆಫ್ ಮೈಂಡ್' ಪ್ರಕ್ರಿಯೆಯ ಮಾರ್ಗದರ್ಶನವನ್ನು ನೀಡಲಾಯಿತು. ಬೆಂಗಳೂರಿನ ಸದ್ಗುರು ಸನ್ನಿಧಿಯು ಅಂತರರಾಷ್ಟ್ರೀಯ ಯೋಗ ದಿನದ ಆಚರಣೆಗೆ ಮಾತ್ರ ಸೀಮಿತವಾಗಿಲ್ಲ; ಪ್ರತಿದಿನ ಕನ್ನಡ, ಇಂಗ್ಲಿಷ್, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಉಚಿತ ಯೋಗ ಸೆಶನ್‌ಗಳನ್ನು ನಡೆಸುತ್ತಿದೆ. ಇದರೊಂದಿಗೆ, ಶಾಸ್ತ್ರೀಯ ಹಠ ಯೋಗ ಕಾರ್ಯಕ್ರಮಗಳು ಹಾಗೂ ಸದ್ಗುರು ಗುರುಕುಲದಲ್ಲಿ
ತರಬೇತಿ ಪಡೆದ ಶಿಕ್ಷಕರಿಂದ ವಸತಿ ಕಾರ್ಯಕ್ರಮಗಳನ್ನೂ ಆಯೋಜಿಸುತ್ತಿದೆ. ಈ ಪ್ರಯತ್ನಗಳ ಮೂಲಕ ಈ ಕೇಂದ್ರವು ಈಗಾಗಲೇ ಒಂದು ಲಕ್ಷಕ್ಕೂ ಹೆಚ್ಚು ಜನರಿಗೆ ಉಚಿತವಾಗಿ ಯೋಗವನ್ನು ತಲುಪಿಸಿದ್ದು, ಶಾಸ್ತ್ರೀಯ ಹಠ ಯೋಗ ಕಾರ್ಯಕ್ರಮಗಳಿಂದ ಪ್ರತಿ ವರ್ಷ ನೂರಾರು ಜನರು ಪ್ರಯೋಜನ ಪಡೆಯುತ್ತಿದ್ದಾರೆ. ಅಂತರರಾಷ್ಟ್ರೀಯ ಯೋಗ ದಿನದ ರಾಷ್ಟ್ರಮಟ್ಟದ ಅಭಿಯಾನದ ಭಾಗವಾಗಿ, ಈಶ ಫೌಂಡೇಶನ್ ದೇಶದಾದ್ಯಂತ ಕಾರ್ಪೊರೇಟ್ ಕಂಪನಿಗಳು, ಶಿಕ್ಷಣ, ವೈದ್ಯಕೀಯ, ಸರ್ಕಾರಿ ಸಂಸ್ಥೆಗಳು, ರಕ್ಷಣಾ ಪಡೆಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸುಮಾರು 1,000 ಯೋಗ ಮತ್ತು ಧ್ಯಾನ ತರಗತಿಗಳನ್ನು ನಡೆಸುತ್ತಿದ್ದು, ಇದರಲ್ಲಿ ಸುಮಾರು 50,000 ಜನರು ಭಾಗವಹಿಸುವ ನಿರೀಕ್ಷೆಯಿದೆ. ಬೆಂಗಳೂರಿನ ಸದ್ಗುರು ಸನ್ನಿಧಿಯು ಸದ್ಗುರುಗಳಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರವಾಗಿದ್ದು, ಇಲ್ಲಿಗೆ ಬರುವ ಜನರಿಗೆ ವಿವಿಧ ಉಚಿತ ಹಾಗೂ ವಸತಿ ಕಾರ್ಯಕ್ರಮಗಳ ಮೂಲಕ ಯೋಗ, ಧ್ಯಾನ, ಭಕ್ತಿ ಮತ್ತು ಆಂತರಿಕ ರೂಪಾಂತರವನ್ನು ಅನುಭವಿಸುವ ಅಪೂರ್ವ ಅವಕಾಶವನ್ನು ನೀಡುತ್ತಿದೆ.
- ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಸಂದರ್ಭದಲ್ಲಿ, ಅಕ್ಷರ ದಿ ಶಾಲೆಯ ವಿದ್ಯಾರ್ಥಿಗಳು ಯೋಗ ಪ್ರದರ್ಶನ ನೀಡಿದರು.1
- ಪರೀಕ್ಷೆ ಅಥವಾ ತರಗತಿಗೆ ತಡವಾಗಿ ಪ್ರವೇಶಿಸುವ ಕುರಿತ ನಿಯಮಗಳ ವಿರುದ್ಧ ವಿದ್ಯಾರ್ಥಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಂದು ನಿಮಿಷ ತಡವಾದರೂ ತಮ್ಮ ಭವಿಷ್ಯಕ್ಕೆ ಕತ್ತರಿ ಬೀಳುತ್ತದೆ ಎಂದು ವಿದ್ಯಾರ್ಥಿಗಳು ಕಳವಳ ವ್ಯಕ್ತಪಡಿಸುತ್ತಿದ್ದಾರೆ.1
- ರಾಜಸ್ಥಾನದಲ್ಲಿ ನೀಟ್ ಪರೀಕ್ಷೆಗೆ ಬುರ್ಖಾ ಧರಿಸಿ ಬಂದಿದ್ದ ವಿದ್ಯಾರ್ಥಿನಿಯನ್ನು ಪರೀಕ್ಷಾ ಕೇಂದ್ರದ ಅಧಿಕಾರಿಗಳು ತಡೆದ ಘಟನೆ ನಡೆದಿದ್ದು, ಈ ವೇಳೆ ಗದ್ದಲ ಸೃಷ್ಟಿಯಾಗಿದೆ. ವಿದ್ಯಾರ್ಥಿನಿಯ ಆರೋಪದ ಪ್ರಕಾರ, ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ನೀಡಲು ಅಧಿಕಾರಿಗಳು ಆಕೆಯ ಬುರ್ಖಾವನ್ನು ತೆಗೆಯುವಂತೆ ಒತ್ತಾಯಿಸಿದ್ದಾರೆ. ಆದರೆ, ಬುರ್ಖಾ ತನ್ನ ಗುರುತಿನ ಅವಿಭಾಜ್ಯ ಅಂಗವಾಗಿದ್ದು, ಅದನ್ನು ತೆಗೆಯುವ ಅಗತ್ಯವಿಲ್ಲ ಎಂದು ವಾದಿಸಿದ ವಿದ್ಯಾರ್ಥಿನಿ, ಹೊರಗೆ ನಿಂತುಕೊಂಡಿದ್ದಳು. ಬಳಿಕ, ಪೊಲೀಸ್ ಅಧಿಕಾರಿಗಳು ನಿಯಮಗಳನ್ನು ಪರಿಶೀಲಿಸಿದ ನಂತರ ಆ ವಿದ್ಯಾರ್ಥಿನಿಗೆ ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸಲು ಅವಕಾಶ ಮಾಡಿಕೊಟ್ಟರು.1
- ಕೋಲಾರ್ ಕಿ.ಆವಾಜ್ ಕೌಸರ್ ನ್ಯೂಸ್ ಎಂದು ಹೆಸರಿಸಲಾದ ಈ ಮೂಲದಿಂದ ಲಭ್ಯವಿರುವ ಮಾಹಿತಿ ಇಲ್ಲಿದೆ.1
- ಕೋಲಾರ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಓಂ ಶಕ್ತಿ ಚಲಪತಿ ಅವರ ಹುಟ್ಟುಹಬ್ಬವನ್ನು ಆಚರಿಸಲಾಯಿತು.1
- ಒಂದು ರೂಪಾಯಿಗೆ ಬಟ್ಟೆ ನೀಡುವ ವಿಶೇಷ ಆಫರ್ ಘೋಷಣೆ ಮಾಡಿದ ತಕ್ಷಣವೇ ಗ್ರಾಹಕರು ಖರೀದಿಗೆ ಮುಗಿಬಿದ್ದಿದ್ದಾರೆ. ಈ ಅನಿರೀಕ್ಷಿತ ಬೃಹತ್ ಜನಸಂದಣಿಯನ್ನು ನಿಯಂತ್ರಿಸಲು ಆಯೋಜಕರು ತೀವ್ರ ಹರಸಾಹಸ ಪಡಬೇಕಾಯಿತು.1
- ಬೆಂಗಳೂರುನಲ್ಲಿ ನೀಟ್ ಪರೀಕ್ಷೆಗೆ ಹಾಜರಾಗಲು ಬಂದಿದ್ದ ಕೆಲವು ಅಭ್ಯರ್ಥಿನಿಯರು ಪರೀಕ್ಷಾ ಕೇಂದ್ರದ ಹೊರಗೆ ಕಣ್ಣೀರು ಹಾಕುತ್ತಾ ಅಳುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ವರದಿಗಳ ಪ್ರಕಾರ, ಈ ವಿದ್ಯಾರ್ಥಿನಿಯರು ನಿಗದಿತ ಸಮಯಕ್ಕಿಂತ ತಡವಾಗಿ ಆಗಮಿಸಿದ್ದರಿಂದ ಪರೀಕ್ಷಾ ಕೇಂದ್ರಕ್ಕೆ ಪ್ರವೇಶವನ್ನು ನಿರಾಕರಿಸಲಾಗಿದೆ. ಕೆಲವೇ ನಿಮಿಷಗಳ ತಡದಿಂದಾಗಿ ಒಂದು ವರ್ಷದ ಕಠಿಣ ಪರಿಶ್ರಮ, ಭವಿಷ್ಯದ ಕನಸುಗಳು ಮತ್ತು ನಿರೀಕ್ಷೆಗಳು ಕೈತಪ್ಪಿದ ನೋವು ಈ ದೃಶ್ಯದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಅನೇಕರು ವಿದ್ಯಾರ್ಥಿನಿಯರ ಪರವಾಗಿ ಆಳವಾದ ಸಹಾನುಭೂತಿಯನ್ನು ವ್ಯಕ್ತಪಡಿಸುತ್ತಿದ್ದಾರೆ. ಮತ್ತೊಂದೆಡೆ, ಪರೀಕ್ಷಾ ನಿಯಮಗಳು ಹಾಗೂ ಸಮಯಪಾಲನೆಯ ಮಹತ್ವದ ಬಗ್ಗೆಯೂ ವ್ಯಾಪಕ ಚರ್ಚೆ ನಡೆಯುತ್ತಿದೆ. ಸಾರ್ವಜನಿಕರು ಈ ಘಟನೆ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವಂತೆ ಮೂಲ ಪೋಸ್ಟ್ ಮನವಿ ಮಾಡಿದೆ.1