ಚಿಕ್ಕಬಾಸೂರಿನಲ್ಲಿ 3 ಕೋಟಿ ವೆಚ್ಚದಲ್ಲಿ ಆಯುಷ್ಮಾನ್ ಆರೋಗ್ಯ ಕೇಂದ್ರ ಕಟ್ಟಡದ ಶಂಕುಸ್ಥಾಪನೆ ಹಾವೇರಿ(ಬ್ಯಾಡಗಿ) ಆರೋಗ್ಯ ಕ್ಷೇತ್ರದಲ್ಲಿ ವೈದ್ಯಾಧಿಕಾರಿಗಳು ಹಾಗೂ ತಾಂತ್ರಿಕ ಸಿಬ್ಬಂದಿಯ ಕೊರತೆ ದೊಡ್ಡ ಸಮಸ್ಯೆಯಾಗಿದೆ. ದೇಶದಲ್ಲೇ ಅತಿ ಹೆಚ್ಚು ವೈದ್ಯರು ತೇರ್ಗಡೆಯಾಗುತ್ತಿರುವುದು ಕರ್ನಾಟಕದಲ್ಲೇ ಆದರೂ, ವೈದ್ಯರ ಕೊರತೆಯ ಸಮಸ್ಯೆಯನ್ನು ನೀಗಿಸಲು ಇನ್ನೂ ಹೆಚ್ಚಿನ ಪ್ರಯತ್ನಗಳು ಆಗಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ. ಇಂದು ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಚಿಕ್ಕಬಾಸೂರ ಗ್ರಾಮದಲ್ಲಿ ಆಯುಷ್ಮಾನ್ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆಯನ್ನು ನೇರವೇರಿಸಿ ಮಾತನಾಡಿದರು. "ಚಿಕ್ಕಬಾಸೂರು ಹಾಗೂ ಸುತ್ತಮುತ್ತಲಿನ ಗ್ರಾಮೀಣ ಭಾಗದ ಜನರಿಗೆ ಉತ್ತಮ ಆರೋಗ್ಯ ಸೇವೆ ಸಿಗಬೇಕು ಎಂಬ ಉದ್ದೇಶದಿಂದ ಈ ನೂತನ ಆಸ್ಪತ್ರೆಯನ್ನು ಅತ್ಯಂತ ಸುಸಜ್ಜಿತವಾಗಿ ನಿರ್ಮಿಸಲಾಗಿದೆ. ಈ ಆಸ್ಪತ್ರೆಯಲ್ಲಿ ಪುರುಷರಿಗೆ ಮತ್ತು ಸ್ತ್ರೀಯರಿಗೆ ಪ್ರತ್ಯೇಕ ವಾರ್ಡ್‌ಗಳು, 6 ಬೆಡ್‌ಗಳ (ಹಾಸಿಗೆಗಳ) ಸೌಲಭ್ಯ ಹಾಗೂ ಸುಧಾರಿತ ಪ್ರಯೋಗಾಲಯಗಳ (Lab) ವ್ಯವಸ್ಥೆ ಕಲ್ಪಿಸಲಾಗಿದೆ" ಎಂದರು. ಹಾಗೆಯೇ, ಆಸ್ಪತ್ರೆಗೆ ಬರುವ ರೋಗಿಗಳ ಅನುಕೂಲಕ್ಕಾಗಿ ಅತ್ಯಾಧುನಿಕ ಡಿಜಿಟಲ್ ಎಕ್ಸ್-ರೇ ಯೂನಿಟ್ ಅನ್ನು ಶೀಘ್ರದಲ್ಲೇ ಅಳವಡಿಸಲಾಗುವುದು. ಇದರಿಂದಾಗಿ ಗ್ರಾಮೀಣ ಭಾಗದ ಜನರು ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗೂ ದೂರದ ಊರುಗಳಿಗೆ ಅಲೆಯುವುದು ತಪ್ಪಲಿದೆ ಎಂದು ತಿಳಿಸಿದರು.
ಚಿಕ್ಕಬಾಸೂರಿನಲ್ಲಿ 3 ಕೋಟಿ ವೆಚ್ಚದಲ್ಲಿ ಆಯುಷ್ಮಾನ್ ಆರೋಗ್ಯ ಕೇಂದ್ರ ಕಟ್ಟಡದ ಶಂಕುಸ್ಥಾಪನೆ ಹಾವೇರಿ(ಬ್ಯಾಡಗಿ) ಆರೋಗ್ಯ ಕ್ಷೇತ್ರದಲ್ಲಿ ವೈದ್ಯಾಧಿಕಾರಿಗಳು ಹಾಗೂ ತಾಂತ್ರಿಕ ಸಿಬ್ಬಂದಿಯ ಕೊರತೆ ದೊಡ್ಡ ಸಮಸ್ಯೆಯಾಗಿದೆ. ದೇಶದಲ್ಲೇ ಅತಿ ಹೆಚ್ಚು ವೈದ್ಯರು ತೇರ್ಗಡೆಯಾಗುತ್ತಿರುವುದು ಕರ್ನಾಟಕದಲ್ಲೇ ಆದರೂ, ವೈದ್ಯರ ಕೊರತೆಯ ಸಮಸ್ಯೆಯನ್ನು ನೀಗಿಸಲು ಇನ್ನೂ ಹೆಚ್ಚಿನ ಪ್ರಯತ್ನಗಳು ಆಗಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ. ಇಂದು ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಚಿಕ್ಕಬಾಸೂರ ಗ್ರಾಮದಲ್ಲಿ ಆಯುಷ್ಮಾನ್ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆಯನ್ನು ನೇರವೇರಿಸಿ ಮಾತನಾಡಿದರು. "ಚಿಕ್ಕಬಾಸೂರು ಹಾಗೂ ಸುತ್ತಮುತ್ತಲಿನ ಗ್ರಾಮೀಣ ಭಾಗದ ಜನರಿಗೆ ಉತ್ತಮ ಆರೋಗ್ಯ ಸೇವೆ ಸಿಗಬೇಕು ಎಂಬ ಉದ್ದೇಶದಿಂದ ಈ ನೂತನ ಆಸ್ಪತ್ರೆಯನ್ನು ಅತ್ಯಂತ ಸುಸಜ್ಜಿತವಾಗಿ ನಿರ್ಮಿಸಲಾಗಿದೆ. ಈ ಆಸ್ಪತ್ರೆಯಲ್ಲಿ ಪುರುಷರಿಗೆ ಮತ್ತು ಸ್ತ್ರೀಯರಿಗೆ ಪ್ರತ್ಯೇಕ ವಾರ್ಡ್‌ಗಳು, 6 ಬೆಡ್‌ಗಳ (ಹಾಸಿಗೆಗಳ) ಸೌಲಭ್ಯ ಹಾಗೂ ಸುಧಾರಿತ ಪ್ರಯೋಗಾಲಯಗಳ (Lab) ವ್ಯವಸ್ಥೆ ಕಲ್ಪಿಸಲಾಗಿದೆ" ಎಂದರು. ಹಾಗೆಯೇ, ಆಸ್ಪತ್ರೆಗೆ ಬರುವ ರೋಗಿಗಳ ಅನುಕೂಲಕ್ಕಾಗಿ ಅತ್ಯಾಧುನಿಕ ಡಿಜಿಟಲ್ ಎಕ್ಸ್-ರೇ ಯೂನಿಟ್ ಅನ್ನು ಶೀಘ್ರದಲ್ಲೇ ಅಳವಡಿಸಲಾಗುವುದು. ಇದರಿಂದಾಗಿ ಗ್ರಾಮೀಣ ಭಾಗದ ಜನರು ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗೂ ದೂರದ ಊರುಗಳಿಗೆ ಅಲೆಯುವುದು ತಪ್ಪಲಿದೆ ಎಂದು ತಿಳಿಸಿದರು.
- ಕುಂದಗೋಳ ತಾಲೂಕು ಶಿರೂರು ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ತಹಶೀಲ್ದಾರ್ ವಾಹನ ತಡೆದು ಗ್ರಾಮಸ್ಥರ ಆಕ್ರೋಶ! ಕುಂದಗೋಳ ತಾಲೂಕು ಶಿರೂರು ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ತಹಶೀಲ್ದಾರ್ ವಾಹನ ತಡೆದು ಗ್ರಾಮಸ್ಥರ ಆಕ್ರೋಶ! ಹಲವು ತಿಂಗಳಿಂದ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಶಿರೂರು ಗ್ರಾಮದ ನವಗ್ರಾಮದ ನಿವಾಸಿಗಳು, ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಗಳವಾರ ಶಿರೂರು ಮಾರ್ಗವಾಗಿ ತೆರಳುತ್ತಿದ್ದ ಕುಂದಗೋಳ ತಹಶೀಲ್ದಾರ್ ರಾಜು ಮಾವರ್ಕರ್ ಅವರ ವಾಹನವನ್ನು ಮಹಿಳೆಯರು ಸೇರಿದಂತೆ ಗ್ರಾಮಸ್ಥರು ತಡೆದು, ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿದರು. ಸ್ಥಳೀಯ ಆಡಳಿತ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸಮಸ್ಯೆಗೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು , ಅಧಿಕಾರಿಗಳನ್ನು ಪ್ರಶ್ನಿಸಿದರೆ ಉಡಾಫೆಯ ಉತ್ತರ ನೀಡಲಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದರು. ಅಹವಾಲು ಆಲಿಸಿದ ತಹಶೀಲ್ದಾರ್, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಪರಿಶೀಲನೆ ನಡೆಸಿದರು. ಬಳಿಕ ಸಮಸ್ಯಾತ್ಮಕ ಶೀಘ್ರ ಬಗೆಹರಿಯದಿದ್ದರೆ ಜಿಲ್ಲಾ ಅಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.1
- ದೇವರ ಅನುಗ್ರಹ ಪಡೆಯಲು ಸುಲಭ ಮಾರ್ಗ ಭಜನೆ ಡಾ : ಶಿವಕುಮಾರ ಮಹಾಸ್ವಾಮಿಜಿ. ಶ್ರೀ ಮಾರುತೇಶ್ವರ ಭಜನಾ ಮಹಾ ಮಂಗಲ ಕಾರ್ಯಕ್ರಮದಲ್ಲಿ ಶ್ರೀ ಗಳ ಆಶೀರ್ವಚನ. ದೇವರ ಅನುಗ್ರಹ ಪಡೆಯಲು ಸುಲಭ ಮಾರ್ಗ ಭಜನೆ ಡಾ : ಶಿವಕುಮಾರ ಮಹಾಸ್ವಾಮಿಜಿ. ಗದಗ : ಭಾರತೀಯ ಸಂಸ್ಕೃತಿಯಲ್ಲಿ ಪಾವಿತ್ರತೆ ಪಡೆದ ತಿಂಗಳು ಈ ಶ್ರಾವಣ ಮಾಸ,ಮಾಸ ಪರ್ಯಂತ ಭಗವಂತನ ನಾಮಸ್ಮರಣೆಯಿಂದ ಅನುಗ್ರಹ ಪಡೆಯಲು ಸುಲಭವಾದ ಮಾರ್ಗ ಭಜನೆ ಎಂದು ಶ್ರೀ ಡಾ ಶಿವಕುಮಾರ ಮಾಹಾಸ್ವಾಮಿಗಳು ನುಡಿದರು. ತಾಲೂಕಿನ ಕದಡಿ ಗ್ರಾಮದ ಶ್ರೀ ಮಾರುತೇಶ್ವರ ಭಜನಾ ಮಂಡಳಿಯ ಆಯೋಜಿಸಲಾದ ಭಜನಾ ಮಹಾ ಮಂಗಲ ಕಾರ್ಯಕ್ರಮದ ಸಮಾರೋಪ ಸಮಾರಂಭದ saದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿ ನೆರದಿದ್ದ ಭಕ್ತರಿಗೆ ಆಶೀರ್ವಚನದಲ್ಲಿ ಮಾತನಾಡಿದ ಅವರು. ಭಜನೆ ಎಂದರೆ ಭಜ್ ಎಂಬುವ ಧಾತುವಿನಿಂದ ಬಂದಿರುವ ಪದ ಅಂದರೆ ಭಜನೆ ಅಂದರೆ ಭಗವಂತನ ನಾಮಸ್ಮರಣೆ, ಆ ಭಗವಂತನ ಕೃಪೆಗೆ ಪಾತ್ರರಾಗಲು ಭಜನೆ ಅತೀ ಶ್ರೇಷ್ಠ ಮಾರ್ಗ ಎಂದರು. ಯಾರಿಗೂ ನಮ್ಮಿಂದ ನೋವಾಗದ ರೀತಿಯ ಬದುಕುವದು ಅಸಾಧ್ಯ ಆದರೂ ಉದ್ದೇಶ ಪೂರ್ವಕವಾಗಿ ಯಾರಿಗೂ ನೋವುಂಟು ಮಾಡಬಾರದು ಏಕೆಂದರೆ ಈ ಪ್ರಪಂಚದಲ್ಲಿ ನಕಾರಾತ್ಮಕ ಹಾಗೂ ಸಕರಾತ್ಮಕ ಚಿಂತನೆಗಳು ಒಂದಕ್ಕೊಂದು ಅಂಟಿಕೊಂಡೆ ಬಂದಿರುತ್ತವೆ, ಹೇಗೆ ರಾತ್ರಿಯ ಜೊತೆಗೆ ಹಗಲು,ಸುಖದ ಜೊತೆಗೆ ದುಃಖ,ಜನನದ ಜೊತೆಗೆ ಮರಣ ಇದೆಯೋ ಹಾಗೇ ಅದಕ್ಕಾಗಿ ಯಾವುದೇ ವ್ಯಕ್ತಿಗೂ ಬರೀ ಸುಖವೇ ಸಿಗುವದಿಲ್ಲ ಆದರೆ ಜೊತೆಗೆ ದುಃಖ ಬೆನ್ನ ಹತ್ತಿರುತ್ತದೆ ಕಾರಣ ಇಷ್ಟೇ ಪ್ರತಿ ಜೀವಿಗೂ ಹುಟ್ಟು ಅನಿಶ್ಚಿತ ಸಾವು ಖಚಿತ ಅಂತೆಯೇ ತಾವೆಲ್ಲರೂ ಪವಿತ್ರ ಶ್ರಾವಣ ಮಾಸದಲ್ಲಿ ನೀವಷ್ಟೇ ಭಜನೆ ಮಾಡದೇ ಇಡೀ ಗ್ರಾಮದ ಜನರ ಮನ ತಲುಪುವಂತೆ ಭಜನೆಯೊಂದಿಗೆ ಭಕ್ತಿಯ ಗೀತೆಗಳನ್ನು ಹಾಡುತ್ತಾ ವಠಾರಗಳಲ್ಲಿ ಸಂಚರಿಸಿ ಭಕ್ತಿಯ ಪರಾಕಷ್ಠೆ ಮೆರೆದು ಕೊನೆಯ ಹಂತ ಭಜನಾ ಮುಕ್ತಾಯ ಸಮಾರೋಪ ಸಮಾರಂಭ ಹಮ್ಮಿಕೊಂಡಿರುವುದು ತುಂಬಾ ಸಂತೋಷದ ಸಂಭ್ರಮ ವಿಚಾರ ಎಂದರು. ರಾತ್ರಿಯಿಡೀ ಸಪ್ತಾಹ ಮಾಡಿ ಬೆಳಿಗ್ಗೆ ಗ್ರಾಮದ ತುಂಬೆಲ್ಲಾ ಭಜನೆಯೊಂದಿಗೆ ಮಾರುತೇಶ್ವರನ ಎಂಟು ಅಡಿ ಹಾಗೂ ಬಸವೇಶ್ವರನ ಭಾವಚಿತ್ರ ಮೆರವಣಿಗೆ ನೆರವೇರಿಸಿ ನಮ್ಮ ಪ್ರವಚನಕ್ಕಾಗಿ ಶಾಂತಿ ಸಹನೆಯಿಂದ ಕುಳಿತಿದ್ದು ನೋಡಿದರೆ ಆ ಮಾರುತೇಶ್ವರನ ಕೃಪೆಗೆ ತಾವೆಲ್ಲರೂ ಪಾತ್ರರಾಗಿದ್ದಿರಿ ಎನ್ನಬಹುದು. ನಮ್ಮ ರಾಜ್ಯದಲ್ಲಿ ನಿರಂತರ ಸಪ್ತಾಹ ಮಾಡುವ ಏಕೈಕ ಮಠ ಹುಬ್ಬಳ್ಳಿ ಸಿದ್ದಾರೂಢರ ಮಠ ಸುಮಾರು 94 ವರ್ಷಗಳ ಕಾಲ ಪ್ರತಿ ನಿತ್ಯ ಸಪ್ತಾಹ ಮಾಡುತ್ತಿರುವುದು ಇಂದಿಗೂ ಕಾಣಬಹುದು ಎಂದರು. ದಿವ್ಯ ಸಾನಿಧ್ಯವಹಿಸಿದ್ದ ಶ್ರೀ ಮ ನಿ ಪ್ರ ಮುಪ್ಪಿನ ಬಸವಲಿಂಗ ನಿರಂಜನ ಮಹಾಸ್ವಾಮಿಗಳು ಭಜನಾ ಸಮಾರೋಪ ಕುರಿತು ಆಶೀರ್ವಚನ ನೀಡಿದರು ಕಾರ್ಯಕ್ರಮದಲ್ಲಿ ಶ್ರೀ ವೇದ ಮೂರ್ತಿ ಮಹಾದೇವಯ್ಯನವರು ಸಾನಿಧ್ಯ ವಹಿಸಿಕೊಂಡು ಅವರೂ ಕೂಡ ಆಶೀರ್ವಚನ ನೀಡಿದರು. ಕಾರ್ಯಕ್ರಮದ ನಿರೂಪಣೆ ವೀರಭದ್ರಯ್ಯ ಸಾಲಿಮಠ ನೆಡೆಸಿದರೆ ಎಸ್ ಎಸ್ ಅಂಗಡಿ ಶಿಕ್ಷಕರು ಸ್ವಾಗತಿಸಿದರು. ಶಿವಕುಮಾರಗೌಡ ಚಿಕ್ಕನಗೌಡರ ವಂದಿಸಿದರು. ಡಾ ಅಂಬೇಡ್ಕರ್ ಭಜನಾ ಸಂಘದ ಸದಸ್ಯರು, ಶ್ರೀ ದುರ್ಗಾದೇವಿ ಭಜನಾ ಮಂಡಳಿಯವರು ಹಾಗೂ ಹೊನ್ನಾಪುರ ಗ್ರಾಮದ ಶ್ರೀ ಮಲ್ಲಜ್ಜೇಶ್ವರ ಭಜನಾ ಮಂಡಳಿಯವರು,ಗ್ರಾಮದ ಹಿರಿಯರಾದ ವಿ ಎನ್ ಗೊಜನೂರು,ಅಶೋಕ ಗೊಜನೂರು, ಮಹೇಶಗೌಡ ಚಿಕ್ಕನಗೌಡರ ಶೇಕಪ್ಪ ಹುಲಗೂರು, (ಕೆಮ್ಮಣ್ಣವರ )ಭಜನಾ ಮಂಡಳಿ ಅಧ್ಯಕ್ಷ ಸಿದ್ದು ದುಂಡಪ್ಪನವರ, ವಿನೋದ ಗೊಜನೂರು ಪರಪ್ಪ ಬರಡ್ವಾದ ಕುರಗೋಡೆಪ್ಪ ಮುಕ್ಕಣ್ಣವರ ಸಿ ಬಿ ಮುಕ್ಕಣ್ಣವರ, ಬಸವರಾಜ ಹಡಪದ, ವೀರಪ್ಪ ದೇಸಾಯಿ ಸೇರಿದಂತೆ ಇನ್ನುಳಿದ ಸರ್ವ ಸದಸ್ಯರು, ಮಹಿಳೆಯರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.2
- ಶಿವಮೊಗ್ಗ-ಪ್ರಧಾನಮಂತ್ರಿ ಮೋದಿಜಿಯವರ ಜನ್ಮದಿನ: ಬಿಜೆಪಿ ವತಿಯಿಂದ ಭಜನೆ ಕಾರ್ಯಕ್ರಮ ಶಿವಮೊಗ್ಗ: ಪ್ರಧಾನಮಂತ್ರಿ ನರೇಂದ್ರ ಮೋದಿಜಿಯವರ ಜನ್ಮದಿನದ ಪ್ರಯುಕ್ತ ಬಿಜೆಪಿ ನಗರ ಹಾಗೂ ಗ್ರಾಮಾಂತರ ಮಂಡಲಗಳ ವತಿಯಿಂದ ಬಿಜೆಪಿ ಕಾರ್ಯಾಲಯದಲ್ಲಿ ‘ಆಶೀರ್ವಾದದ ದೀಪ’ ಬೆಳಗಿಸುವ ಹಾಗೂ ದೀಪಗಳ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ನಗರ ಮಂಡಲ ಅಧ್ಯಕ್ಷ ಧರ್ಮಪ್ರಸಾದ್ ಜಿ ಹಾಗೂ ಗ್ರಾಮಾಂತರ ಮಂಡಲ ಅಧ್ಯಕ್ಷ ಕೆ.ಹೆಚ್. ತೀರ್ಥಯ್ಯ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಪ್ರಧಾನಮಂತ್ರಿ ನರೇಂದ್ರ ಮೋದಿಜಿಯವರಿಗೆ ದೀರ್ಘಾ ಯುಷ್ಯ, ಉತ್ತಮ ಆರೋಗ್ಯ ಹಾಗೂ ದೇಶ ಸೇವೆಗೆ ಇನ್ನಷ್ಟು ಶಕ್ತಿ ದೊರೆಯಲಿ ಎಂದು ಪ್ರಾರ್ಥಿಸಲಾಯಿತು. ಕಾರ್ಯಕ್ರಮಕ್ಕೆ ವಿವಿಧ ಭಜನಾ ತಂಡಗಳ ಸದಸ್ಯರು ಭಜನೆ ಹಾಗೂ ಭಕ್ತಿಗೀತೆಗಳನ್ನು ಹಾಡುವ ಮೂಲಕ ವಿಶೇಷ ಮೆರುಗು ನೀಡಿದರು.1
- ನರೇಂದ್ರ ಮೋದಿಜೀರವರ 25 ವರ್ಷಗಳ ಸೇವೆ, ಸಮರ್ಪಣೆ, ಅವಿರತ ಪರಿಶ್ರಮ, ಬದ್ಧತೆ, ಇಂದು ಸಂಕಲ್ಪ ದಿನ ಸರಿಸಾಟಿಯಿಲ್ಲದ ವಿಶ್ವನಾಯಕ, ಭಾರತದ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿಜೀರವರ ಒಂದಿನ ಅಂದು ಸಂಜೆ ಆರು ಗಂಟೆಯಿಂದ ಏಳು ಗಂಟೆಯವರೆಗೆ -ದೇಶದ ಎಲ್ಲಾಕಡೆ, ಎಲ್ಲಾ ಮನೆಗಳಲ್ಲೂ ಒಂದು ಅಕ್ಷರೆಯ ಗೌರವದ ದೀಪ ಬೆಳಗಲಿದೆ. ಅದು ನೆಚ್ಚಿನ ನಾಯಕನಿಗೆ ಅಭಿಮಾನದ, ಅತೀರ್ವಾದದ ದೀಪ! ಇದು ಏನೋ ಒಂದು ಆಚರಣೆಯಲ್ಲ, ಇದು ಒಬ್ಬ ಪ್ರಧಾನ ಸೇವಕನ 25 ವರ್ಷಗಳ ಸೇವೆ, ಸಮರ್ಪಣೆ, ಅವಿರತ ಪರಿಶ್ರಮ, ಬದ್ಧತೆ, ಸಾಧನೆ ಮತ್ತು ತ್ಯಾಗಕ್ಕೆ 140ಕೋಟಿ ದೇಶವಾಸಿಗಳ ಸಾಮೂಹಿಕ ಅಭಿನಂದನೆ ಭಾರತೀಯ ಜನತಾ ಪಾರ್ಟಿಯ ಸೇವಾ ಸಂಕಲ್ಪ ಅಭಿಯಾನ', ಇದನ್ನು ಜನ ಚಳುವಳಿಯಾಗಿ ರೂಪಿಸಿದೆ. ಆಶೀರ್ವಾದ್ ಕಾ ದಿಯಾ' (ಆಶೀರ್ವಾದದ ದೀಪ) ಎಂಬ ಕಾರ್ಯಕ್ರಮದಡಿ ಪ್ರತಿಮನೆಯಲ್ಲೂ ಸಂಜೆ ದೇವರದೀವದ ಜೊತೆಗೆ, ನೆಚ್ಚಿನ ನಾಯಕನ ಹೆಸರಿನಲ್ಲಿ ಅವರಿಗೆ ಒಳತನ್ನು ಬಯಸಿ ಒಂದು ದೀಪ ಪತ್ರ ನರೇಂದ್ರ ಮೋದಿಜೀರವರಿಗೆ ನಮ್ಮ ಹೃದಯ ಪೂರ್ವಕ ಹಾರೈಕೆಯನ್ನು ಸಲ್ಲಿಸೋಣ. ಗುಜರಾತ್‌ನ 14ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಆ ಯುವನಾಯಕ ಬಹಳ ಜನರಿಗೆ ಪರಿಚಿತರೂ ಅಲ್ಲ! ಅಂದಿನಿಂದ 2014ರ ಮೇ 26 ರವರೆಗೆ ಸತತವಾಗಿ ಗುಜರಾತ್ ಮುಖ್ಯಮಂತ್ರಿಗಳಾಗಿ, ಜನಮೆಚ್ಚುಗೆಯ 'ಅಭಿವೃದ್ಧಿ ಮಾದರಿ' ಯೊಂದಿಗೆ, ಸುರಾಸನ ನೀಡಿ, ಈಗ ಭಾರತದ ಪ್ರಧಾನ ಸೇವಕರಾಗಿ ಸಚಿತ ಮೂರನೇ ಅವಧಿಗೆ ಜನಾದೇಶ ಪಡೆದು, ಇಡೀ ವಿಶ್ವವೇ ಮೆಚ್ಚುವಂತೆ ದೇಶವನ್ನು ಮುನ್ನಡೆಸುತ್ತಿದ್ದಾರೆ. ವತ್ರಗರದ ರೈಲ್ವೆ ನಿಲ್ದಾಣದಲ್ಲಿ ತಂದರೊಂದಿಗೆ ಚಣಾ ಮಾರಿದ ಬಾಲಕ, ಇ೦ದು ವಿಶ್ವದ ಅತ್ಯಂತ ಪ್ರಭಾವಿನಾಯಕರ ಸಾಲಿನಲ್ಲಿ ನಿಂತಿದ್ದಾರೆ. ಇದು ಭಾರತದ ಪ್ರಜಾಪ್ರಭುತ್ವದ ಶಕ್ತಿ ಮಾತ್ರವಲ್ಲ, ಒಬ್ಬ ನಾಯಕನ ಸಾಧನಾಗಾಥೆ. ಇದುಸಾಮಾನ್ಯ ಕಾರ್ಯಕರ್ತನೊಬ್ಬನಸೇವಾಮನೋಭಾವದಿಂದ ರಾಷ್ಟ್ರದ ಸೇವೆಯವರೆಗೆ, ಜನಸೇವೆಯಿಂದ ದೇಶಸೇವೆಯವರೆಗೆ ಸಾಗಿದ ಅದ್ಭುತ ಯಶೋಗಾಥೆ ಎಂದು ಸಂಸದ ಬಿ ವೈ ರಾಘವೇಂದ್ರ ತಿಳಿಸಿದ್ದಾರೆ.1
- 🚨 ಬೆಂಗಳೂರಿನಲ್ಲಿ ಸಿನಿಮೀಯ ಕಿಡ್ನ್ಯಾಪ್ ಯತ್ನ: ಪ್ರೀತಿಸಿ ಮದುವೆಯಾದ ಮಗಳಿಗೆ ಹೆತ್ತವರೇ ವಿಲನ್? ರಸ್ತೆಯಲ್ಲಿ ಸರಣಿ ಅಪಘಾತ ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸಿನಿಮೀಯ ಮಾದರಿಯಲ್ಲಿ ಯುವತಿಯೊಬ್ಬಳನ್ನು ಅಪಹರಿಸಲು ಯತ್ನಿಸಿದ ಘಟನೆ ನಡೆದಿದೆ. ಯುವತಿಯನ್ನು ಬಲವಂತವಾಗಿ ಕಾರಿನಲ್ಲಿ ಕರೆದೊಯ್ಯುವ ವೇಳೆ ಸಿಕ್ಕ ಸಿಕ್ಕ ವಾಹನಗಳಿಗೆ ಡಿಕ್ಕಿ ಹೊಡೆದು ಸರಣಿ ಅಪಘಾತ ಮಾಡಲಾಗಿದೆ. ಘಟನೆ ವೇಳೆ ಸಾರ್ವಜನಿಕರು ಸಿನಿಮೀಯ ರೀತಿಯಲ್ಲಿ ಕಾರನ್ನು ಚೇಸ್ ಮಾಡಿ ಕೊನೆಗೆ ಅಡ್ಡಗಟ್ಟಿ ಯುವತಿಯನ್ನು ರಕ್ಷಿಸಿದ್ದಾರೆ. ಪ್ರಕರಣದ ಹಿನ್ನೆಲೆ ಏನು? ಪೊಲೀಸ್ ಮೂಲಗಳ ಪ್ರಕಾರ, ರಾಜಸ್ಥಾನ ಮೂಲದ ಯುವತಿಯೊಬ್ಬಳು ಯುವಕನನ್ನು ಪ್ರೀತಿಸಿ ಕುಟುಂಬದ ವಿರೋಧದ ನಡುವೆಯೂ ಮದುವೆಯಾಗಿದ್ದಳು. ರಾಜಸ್ಥಾನದಲ್ಲಿ ಅಪಾಯವಿದೆ ಎಂಬ ಕಾರಣಕ್ಕೆ ನವದಂಪತಿ ಬೆಂಗಳೂರಿಗೆ ಬಂದು ಅಗ್ರಹಾರ ದಾಸರಹಳ್ಳಿಯಲ್ಲಿ ಕಳೆದ 15 ದಿನಗಳಿಂದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು ಎನ್ನಲಾಗಿದೆ. ಮಗಳು ಬೆಂಗಳೂರಿನಲ್ಲಿ ಇರುವ ವಿಚಾರ ತಿಳಿದ ಬಳಿಕ ಆಕೆಯ ಪೋಷಕರು ಎನ್ನಲಾದವರು ರಾತ್ರಿ ಸುಮಾರು 8 ಗಂಟೆ ವೇಳೆಗೆ Hyundai Venue ಕಾರಿನಲ್ಲಿ ಅಗ್ರಹಾರ ದಾಸರಹಳ್ಳಿಗೆ ಬಂದಿದ್ದಾರೆ. ಮನೆಯೊಳಗೆ ನುಗ್ಗಿದ ಮೂವರು ಯುವಕರು ಯುವತಿಯನ್ನು ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಂಡು ತೆರಳಲು ಯತ್ನಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ಯುವತಿ ಪ್ರಾಣಭಯದಿಂದ ಜೋರಾಗಿ ಕಿರುಚಿಕೊಂಡಿದ್ದಾಳೆ. ಇದನ್ನು ಗಮನಿಸಿದ ಸ್ಥಳೀಯರು ಕಾರನ್ನು ತಡೆಯಲು ಮುಂದಾಗಿದ್ದಾರೆ. ಆದರೆ ಕಾರು ಚಾಲಕ ವಾಹನ ನಿಲ್ಲಿಸದೇ ವೇಗವಾಗಿ ಮುನ್ನುಗ್ಗಿದ್ದು, ರಸ್ತೆಯಲ್ಲಿ ಅಡ್ಡಬಂದ ಬೈಕ್‌ಗಳು ಹಾಗೂ ಕಾರುಗಳಿಗೆ ಡಿಕ್ಕಿ ಹೊಡೆದು ಪರಾರಿಯಾಗಲು ಯತ್ನಿಸಿದ್ದಾನೆ ಎನ್ನಲಾಗಿದೆ. ⚠️ ಮಗು ಸೇರಿದಂತೆ ಸಾರ್ವಜನಿಕರಿಗೆ ಗಾಯ ಪರಾರಿಯಾಗುವ ಧಾವಂತದಲ್ಲಿ ಕಾರು ಸಾರ್ವಜನಿಕರಿಗೂ ಡಿಕ್ಕಿ ಹೊಡೆದಿದ್ದು, ಒಂದು ಮಗುವಿನ ಕಾಲಿನ ಮೇಲೂ ಕಾರು ಹರಿದಿದೆ ಎನ್ನಲಾಗಿದೆ. ಘಟನೆಯಲ್ಲಿ ಹಲವು ಸಾರ್ವಜನಿಕರು ಗಾಯಗೊಂಡಿದ್ದಾರೆ. 🏍️ 2–3 ಕಿ.ಮೀ ಸಿನಿಮೀಯ ಚೇಸ್! ಕಾರು ನಿಲ್ಲಿಸದೇ ಸಾಗುತ್ತಿದ್ದಂತೆ ಸಾರ್ವಜನಿಕರು ಬೈಕ್‌ಗಳಲ್ಲಿ ಕಾರನ್ನು ಬೆನ್ನಟ್ಟಿದ್ದಾರೆ. ಅಗ್ರಹಾರ ದಾಸರಹಳ್ಳಿಯಿಂದ ಗೋವಿಂದರಾಜನಗರ, ವಿಜಯನಗರ ಮಾರ್ಗವಾಗಿ ಹೊಸಹಳ್ಳಿಯವರೆಗೆ ಸುಮಾರು 2–3 ಕಿ.ಮೀ. ದೂರ ಸಿನಿಮೀಯ ರೀತಿಯಲ್ಲಿ ಚೇಸ್ ಮಾಡಿದ್ದಾರೆ. ಕೊನೆಗೆ ಹೊಸಹಳ್ಳಿ ಬಳಿ ಟ್ರಾಫಿಕ್‌ನಲ್ಲಿ ಕಾರು ಸಿಲುಕಿಕೊಂಡಿದ್ದು, ಸಾರ್ವಜನಿಕರು ಕಾರನ್ನು ಅಡ್ಡಗಟ್ಟಿ ಯುವತಿಯನ್ನು ರಕ್ಷಿಸಿದ್ದಾರೆ. ಬಳಿಕ ಅಪಹರಣಕ್ಕೆ ಯತ್ನಿಸಿದ ಮೂವರು ಆರೋಪಿಗಳಿಗೆ ಸಾರ್ವಜನಿಕರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ಮಾಗಡಿ ರಸ್ತೆ ಹಾಗೂ ವಿಜಯನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಮೂವರನ್ನು ವಶಕ್ಕೆ ಪಡೆದಿದ್ದಾರೆ. ಅಪಹರಣಕ್ಕೆ ಬಳಸಿದ್ದ ಕಾರನ್ನು ಕೂಡ ಪೊಲೀಸರು ಸೀಜ್ ಮಾಡಿದ್ದಾರೆ. ಯುವತಿ ಹಾಗೂ ವಶದಲ್ಲಿರುವ ಆರೋಪಿಗಳನ್ನು ವಿಜಯನಗರ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದ್ದು, ಗಾಯಗೊಂಡ ಸಾರ್ವಜನಿಕರು ಮತ್ತು ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. 📌 ಯುವತಿಯನ್ನು ಅಪಹರಿಸಲು ಯತ್ನಿಸಿದವರು ನಿಜವಾಗಿಯೂ ಆಕೆಯ ಹೆತ್ತವರೇ? ಪ್ರಕರಣದ ತನಿಖೆಯಿಂದ ಸತ್ಯ ಹೊರಬರಬೇಕಿದೆ.1
- ಎಸ್ ಆರ್ ಕೆ ನಗರದ ಸರಕಾರಿ ಬಾಲಕಿಯರ ವಸತಿ ನಿಲಯ ವಿದ್ಯಾರ್ಥಿನಿಯರಿಗೆ ಬಸ್ ನಿಲ್ಲಿಸುವಂತೆ ಪ್ರತಿಭಟನೆ. ರಾಣಿಬೆನ್ನೂರು: ನಗರದ SRK ನಗರದ ಬಳಿ ಬರುವ ಬಾಲಕಿಯರ ವಸತಿ ನಿಲಯ ವಿದ್ಯಾರ್ಥಿನಿಯರಿಗೆ ಬಸ್ ನಿಲ್ಲಿಸುವಂತೆ ಹಾಗೂ ಬಸ್ ಚಾಲಕ, ಕಂಡಕ್ಟರ್ ವಿದ್ಯಾರ್ಥಿನಿಯರ ಮೇಲೆ ದೌರ್ಜನ್ಯ, ಕೆಟ್ಟಪದಗಳನ್ನು ಮಾತಾಡುವ ಸಿಂಬಂದಿಗಳ ಮೇಲೆ ಕ್ರಮಕೈಗೊಳ್ಳವಂತೆ ಘಟಕದ ವ್ಯವಸ್ಥಕರ ಮೂಲಕ ಮನವಿ ಪತ್ರ ಸಲ್ಲಿಸಿ ಬೃಹತ್ ಪ್ರತಿಭಟನೆ ಮಾಡಲಾಯಿತು.1
- ಶಿವಮೊಗ್ಗದ ಪ್ರತಿಭೆ ಪವನ್ ರಾಮ್: ರಂಗಭೂಮಿಯಿಂದ ಬೆಳ್ಳಿತೆರೆಗೆ.. ಆಟೋ ಚಾಲಕನ ಮಗನಿಂದ ಬೆಳ್ಳಿತೆರೆಗೆ… ಪವನ್ ರಾಮ್ ಅವರ ಕನಸಿನ ಪಯಣ | ಭಾಗ–1 | ಪೂರ್ಣ ವಿಡಿಯೋ ಯೂಟ್ಯೂಬ್‌ನಲ್ಲಿ ಲಭ್ಯ1
- ಗುಡೇಕೋಟೆ : ಆರೋಗ್ಯ ತಪಾಸಣೆಗೈದ ಹಾಗೂ ಒಳಗಾದ ಶಾಸಕ ಡಾ ॥ ಎನ್ ಟಿ ಶ್ರೀನಿವಾಸ್ - ತಾಲೂಕಿನ ಗುಡೇಕೋಟೆ *ಗುಡೇಕೋಟೆ : ಆರೋಗ್ಯ ತಪಾಸಣೆಗೈದ ಹಾಗೂ ಒಳಗಾದ ಶಾಸಕ ಡಾ ॥ ಎನ್ ಟಿ ಶ್ರೀನಿವಾಸ್*- ತಾಲೂಕಿನ ಗುಡೇಕೋಟೆ ಗ್ರಾಮದಲ್ಲಿ , ಶಾಸಕರಾದ ಡಾ ॥ ಎನ್ ಟಿ ಶ್ರೀನಿವಾಸ್ ರವರು. ಆರೋಗ್ಯ ತಪಾಸಣೆಗೈದರು , ಹಾಗೂ ತಪಾಸಣೆಗೆೊಳಗಾದರು. ಅವರು ಜನಸೇವಾ ಆಂದೋಲನ ಕಾರ್ಯಕ್ರಮದಲ್ಲಿ ಭಾಗಿಯಾಗಿದ ನಂತರ , ಆರೋಗ್ಯ ಸಿಬ್ಬಂದಿಯವರಲ್ಲಿ ತೆರಳಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಮತ್ತು ನೆರೆದಿದ್ದ ಹಲವರ ಆಪೇಕ್ಷೆಯ ಮೇರೆಗೆ , ಶಾಸಕರು ಹಲವರ ಕಣ್ಣು ಪರೀಕ್ಷೆ ಮಾಡಿ ಚಿಕಿತ್ಸೆ ಶಿಪಾರಸ್ಸು ಮಾಡಿದರು. ನಂತರ ಅವರು ಸಿ ವಿಟಮಿನ್ ಮಾತ್ರೆ ಸೇವನೆಯ ಮಹತ್ವವನ್ನು , ನೆರೆದವರಲ್ಲಿ ಜಾಗ್ರತೆ ಮೂಡಿಸಿದರು ಹಾಗೂ ಸ್ವತಃ ಅವರೇ ಮಾತ್ರೆ ಸೇವೆನ ಮಾಡಿ ಪ್ರೋತ್ಸಾಹಿಸಿದರು. ಇದಕ್ಕೂ ಮುನ್ನ ಅವರು ಎಸ್ಡಿ ಎಮ್ಸಿ ಪದಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ , ಪ್ರೌಢ ಶಾಲಾ ಪ್ರಾಂಶುಪಾಲರಿಗೆ ಅಗತ್ಯ ಸಲಹೆ ಸೂಚನೆಗಳನ್ನು ನಿರ್ಧೇಶನಗಳನ್ನು ನೀಡಿದರು. ✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ - 9008937428 / 8151937428*4
- ಅಣ್ಣಿಗೇರಿ ಹುಬ್ಬಳ್ಳಿ ರಸ್ತೆ ಕಾರಿನ ಟೈರ ಬ್ಲಾಸ್ಟ್ ಆಗ್ಗಿ ಕಾರ್ ಪಾಲ್ಟಿ ಆಗಿ ಒಬ್ಬ ಸಾವು ಇಬ್ಬರೂ ಗಾಯಾಳುಗಳ ಅಣ್ಣಿಗೇರಿ ಹುಬ್ಬಳ್ಳಿ ರಸ್ತೆ ಕಾರಿನ ಟೈರ ಬ್ಲಾಸ್ಟ್ ಆಗ್ಗಿ ಕಾರ್ ಪಾಲ್ಟಿ ಆಗಿ ಒಬ್ಬ ಸಾವು ಇಬ್ಬರೂ ಗಾಯಾಳುಗಳ1