*ಲ್ಯಾಮ್ಸ್ ಮಹಾಮಂಡಳ ನಿರ್ದೇಶಕರ ಆಯ್ಕೆ: ಮಾಜಿ ಶಾಸಕ ನರೇಂದ್ರ ಅವರಿಗೆ ಸನ್ಮಾನ* *ಲ್ಯಾಮ್ಸ್ ಮಹಾಮಂಡಳ ನಿರ್ದೇಶಕರ ಆಯ್ಕೆ: ಮಾಜಿ ಶಾಸಕ ನರೇಂದ್ರ ಅವರಿಗೆ ಸನ್ಮಾನ* ಹನೂರು:ಕರ್ನಾಟಕ ರಾಜ್ಯ ಲ್ಯಾಮ್ಸ್ ಸಹಕಾರ ಮಹಾಮಂಡಳದ (ಮೈಸೂರು) ನಿರ್ದೇಶಕರ ಚುನಾವಣೆಯಲ್ಲಿ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದ ಮಂಜುನಾಥ ಬಿ. ಅವರು ನಿರ್ದೇಶಕರಾಗಿ ನೂತನವಾಗಿ ಆಯ್ಕೆಯಾಗಿದ್ದಾರೆ. ಅಲ್ಲದೆ, ಹನೂರು ತಾಲೂಕಿನ ಸತ್ತಿಮಂಗಲ ಗ್ರಾಮದ ಶ್ರೀ ಸಿದ್ದಮರಿಗೌಡ ಅವರು ಸರ್ಕಾರದ ನಾಮನಿರ್ದೇಶಿತ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಹನೂರು ತಾಲೂಕಿನ ಸತ್ತಿಮಂಗಲ ಗ್ರಾಮದ ಶ್ರೀ ಸಿದ್ದಮರಿಗೌಡ ನಾಮ ನಿರ್ದೇಶಕ ಸದಸ್ಯರಾಗಿ ಆಯ್ಕೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿ ಮಾರ್ಗದರ್ಶನ ನೀಡಿದ ಮಾಜಿ ಶಾಸಕರಾದ ಶ್ರೀ ನರೇಂದ್ರ ಅವರನ್ನು ಇಂದು ಅಭಿಮಾನಿಗಳು ಹಾಗೂ ಗಿರಿಜನ ಮುಖಂಡರು ಆತ್ಮೀಯವಾಗಿ ಸನ್ಮಾನಿಸಿ, ಅಭಿನಂದನೆ ಸಲ್ಲಿಸಿದರು. ಗಣ್ಯರ ಉಪಸ್ಥಿತಿ: ಈ ಸಂದರ್ಭದಲ್ಲಿ ಗಿರಿಜನ ಮುಖಂಡರಾದ ಚಂದ್ರಪ್ಪ, ರಾಜಪ್ಪ, ಮಹಾದೇವಮ್ಮ, ಮಹಾದೇವ, ಶಿವನಯ್ಯ ಹಾಗೂ ನೂತನ ನಾಮನಿರ್ದೇಶಿತ ಸದಸ್ಯರಾದ ಸಿದ್ದಮರಿಗೌಡರು, ದೊಡ್ವೀರ ಶೆಟ್ಟಿ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಮಾಜಿ ಶಾಸಕ ನರೇಂದ್ರ ಅವರು, "ಸಹಕಾರ ಕ್ಷೇತ್ರದಲ್ಲಿ ಗಿರಿಜನರ ಏಳಿಗೆಗಾಗಿ ಹಾಗೂ ಲ್ಯಾಮ್ಸ್ ಸಂಸ್ಥೆಯ ಬಲವರ್ಧನೆಗೆ ನೂತನ ನಿರ್ದೇಶಕರು ಶ್ರಮಿಸಲಿ" ಎಂದು ಆಶಿಸಿದರು.
*ಲ್ಯಾಮ್ಸ್ ಮಹಾಮಂಡಳ ನಿರ್ದೇಶಕರ ಆಯ್ಕೆ: ಮಾಜಿ ಶಾಸಕ ನರೇಂದ್ರ ಅವರಿಗೆ ಸನ್ಮಾನ* *ಲ್ಯಾಮ್ಸ್ ಮಹಾಮಂಡಳ ನಿರ್ದೇಶಕರ ಆಯ್ಕೆ: ಮಾಜಿ ಶಾಸಕ ನರೇಂದ್ರ ಅವರಿಗೆ ಸನ್ಮಾನ* ಹನೂರು:ಕರ್ನಾಟಕ ರಾಜ್ಯ ಲ್ಯಾಮ್ಸ್ ಸಹಕಾರ ಮಹಾಮಂಡಳದ (ಮೈಸೂರು) ನಿರ್ದೇಶಕರ ಚುನಾವಣೆಯಲ್ಲಿ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದ ಮಂಜುನಾಥ ಬಿ. ಅವರು ನಿರ್ದೇಶಕರಾಗಿ ನೂತನವಾಗಿ ಆಯ್ಕೆಯಾಗಿದ್ದಾರೆ. ಅಲ್ಲದೆ, ಹನೂರು ತಾಲೂಕಿನ ಸತ್ತಿಮಂಗಲ ಗ್ರಾಮದ ಶ್ರೀ ಸಿದ್ದಮರಿಗೌಡ ಅವರು ಸರ್ಕಾರದ ನಾಮನಿರ್ದೇಶಿತ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಹನೂರು ತಾಲೂಕಿನ ಸತ್ತಿಮಂಗಲ ಗ್ರಾಮದ ಶ್ರೀ ಸಿದ್ದಮರಿಗೌಡ ನಾಮ ನಿರ್ದೇಶಕ ಸದಸ್ಯರಾಗಿ ಆಯ್ಕೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿ ಮಾರ್ಗದರ್ಶನ ನೀಡಿದ ಮಾಜಿ ಶಾಸಕರಾದ ಶ್ರೀ ನರೇಂದ್ರ ಅವರನ್ನು ಇಂದು ಅಭಿಮಾನಿಗಳು ಹಾಗೂ ಗಿರಿಜನ ಮುಖಂಡರು ಆತ್ಮೀಯವಾಗಿ ಸನ್ಮಾನಿಸಿ, ಅಭಿನಂದನೆ ಸಲ್ಲಿಸಿದರು. ಗಣ್ಯರ ಉಪಸ್ಥಿತಿ: ಈ ಸಂದರ್ಭದಲ್ಲಿ ಗಿರಿಜನ ಮುಖಂಡರಾದ ಚಂದ್ರಪ್ಪ, ರಾಜಪ್ಪ, ಮಹಾದೇವಮ್ಮ, ಮಹಾದೇವ, ಶಿವನಯ್ಯ ಹಾಗೂ ನೂತನ ನಾಮನಿರ್ದೇಶಿತ ಸದಸ್ಯರಾದ ಸಿದ್ದಮರಿಗೌಡರು, ದೊಡ್ವೀರ ಶೆಟ್ಟಿ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಮಾಜಿ ಶಾಸಕ ನರೇಂದ್ರ ಅವರು, "ಸಹಕಾರ ಕ್ಷೇತ್ರದಲ್ಲಿ ಗಿರಿಜನರ ಏಳಿಗೆಗಾಗಿ ಹಾಗೂ ಲ್ಯಾಮ್ಸ್ ಸಂಸ್ಥೆಯ ಬಲವರ್ಧನೆಗೆ ನೂತನ ನಿರ್ದೇಶಕರು ಶ್ರಮಿಸಲಿ" ಎಂದು ಆಶಿಸಿದರು.
- ಹನೂರು: ತಾಲ್ಲೂಕಿನ ರೈತರು ಎದುರಿಸುತ್ತಿರುವ ವಿವಿಧ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಹನೂರು ಶಾಖೆ) ವತಿಯಿಂದ ಇಂದು (ದಿನಾಂಕ: 15-04-2026) ಬೆಳಿಗ್ಗೆ 10 ಗಂಟೆಗೆ ಹನೂರು ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಹಾಗೂ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗಿದೆ. ರೈತ ವಿರೋಧಿ ಧೋರಣೆ ಅನುಸರಿಸುತ್ತಿರುವ ಸರ್ಕಾರ ಹಾಗೂ ಮೌನವಾಗಿರುವ ಅಧಿಕಾರಿಗಳನ್ನು ಎಚ್ಚರಿಸಲು ಈ 'ಬೃಹತ್ ಚಳುವಳಿ'ಯನ್ನು ಹಮ್ಮಿಕೊಳ್ಳಲಾಗಿದ್ದು, ಪ್ರಮುಖವಾಗಿ ಈ ಕೆಳಗಿನ ಬೇಡಿಕೆಗಳನ್ನು ಮುಂದಿಡಲಾಗಿದೆ: ಜಲಮೂಲಗಳ ಸಂರಕ್ಷಣೆ: ಗುಂಡಾಲ್ ಜಲಾಶಯದಿಂದ ಹನೂರು ತಾಲ್ಲೂಕಿನ ಎಲ್ಲಾ ಕೆರೆ-ಕಟ್ಟೆಗಳಿಗೆ ನೀರು ತುಂಬಿಸಿ ಅಂತರ್ಜಲ ಮಟ್ಟ ಹೆಚ್ಚಿಸಬೇಕು. ಅಧಿಕಾರಿಗಳ ನಿರ್ಲಕ್ಷ್ಯ: ತಹಶೀಲ್ದಾರ್ ಕಚೇರಿಯಲ್ಲಿನ ಅವ್ಯವಹಾರಗಳನ್ನು ತಡೆಗಟ್ಟಬೇಕು ಹಾಗೂ ಸಾಗುವಳಿ ಚೀಟಿ ವಿತರಣೆ, ಪೋಡಿ ವಿಳಂಬ ಮತ್ತು ರಸ್ತೆ ಸೌಕರ್ಯಗಳ ಬಗ್ಗೆ ಅಧಿಕಾರಿಗಳು ತೋರುತ್ತಿರುವ ಬೇಜವಾಬ್ದಾರಿಯನ್ನು ಖಂಡಿಸಲಾಗಿದೆ. ಮೂಲಸೌಕರ್ಯ: ಮಲೆ ಮಹದೇಶ್ವರ ಬೆಟ್ಟದ ಸುತ್ತಮುತ್ತಲ ಗ್ರಾಮಗಳಿಗೆ ಕನಿಷ್ಠ ಮೂಲಭೂತ ಸೌಕರ್ಯ ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಪಶುಸಂಗೋಪನೆ: ಸಾಂಕ್ರಾಮಿಕ ರೋಗಗಳಿಂದ ಸಾಯುತ್ತಿರುವ ಕುರಿ, ಮೇಕೆ ಹಾಗೂ ಜಾನುವಾರುಗಳಿಗೆ ಸೂಕ್ತ ಔಷಧ ಮತ್ತು ಚಿಕಿತ್ಸಾ ಸೌಲಭ್ಯ ಒದಗಿಸಬೇಕು. ವನ್ಯಜೀವಿ ಸಂಘರ್ಷ: ಅರಣ್ಯ ಇಲಾಖೆಯ ನಿರ್ಲಕ್ಷ್ಯದಿಂದ ರೈತರ ಮೇಲೆ ನಡೆಯುತ್ತಿರುವ ಕಾಡುಪ್ರಾಣಿಗಳ ದಾಳಿ ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಬೆಳೆ ಹಾನಿಗೆ ಸೂಕ್ತ ಪರಿಹಾರ ನೀಡಬೇಕು. ಯೋಜನೆಗಳ ಅನುಷ್ಠಾನ: ಉಡುತೊರೆಹಳ್ಳದ ನೀರಾವರಿ ಯೋಜನೆಯ ವಿಳಂಬ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು. "ರೈತರು ಇಂದು ಸಂಕಷ್ಟದಲ್ಲಿದ್ದಾರೆ. ನಮ್ಮ ನ್ಯಾಯಯುತ ಬೇಡಿಕೆಗಳಿಗಾಗಿ ಈ ಹೋರಾಟ ಅನಿವಾರ್ಯವಾಗಿದೆ," ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ. ಈ ಪ್ರತಿಭಟನೆಯಲ್ಲಿ ತಾಲ್ಲೂಕಿನ ಸಾವಿರಾರು ರೈತರು, ಯುವಜನರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದಾರೆ.4
- ಹನೂರು :ಪಟ್ಟಣದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಕಚೇರಿ ಆವರಣದಲ್ಲಿ 135 ನೇ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ ಜಯಂತಿಯನ್ನ ಆಚರಣೆ ಮಾಡಲಾಯಿತು. ಇದಕ್ಕೂ ಮುನ್ನ ಅಂಬೇಡ್ಕರ್ ವೃತ್ತಕ್ಕೆ ತೆರಳಿ ಡಾ. ಬಿ ಆರ್ ಅಂಬೇಡ್ಕರ್ ರವರ ಪ್ರತಿಮಗೆ ಮಾಲಾರ್ಪಣೆ ಮಾಡಿ, ನಂತರ ಪ್ರಮುಖ ಬೀದಿಗಳಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ ಭಾವಚಿತ್ರವನ್ನ ಮೆರವಣಿಗೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಸೆಸ್ಕ್ ಕಚೇರಿಯ ಸಿಬ್ಬಂದಿಗಳು ತಮಟೆ ಸದ್ದಿಗೆ ಕುಣಿದು ಕುಪ್ಪಳಿಸಿದರು. ಇದೇ ಸಂದರ್ಭದಲ್ಲಿ aee ರಂಗಸ್ವಾಮಿ, ae ಆನಂದ್ ಕುಮಾರ್, ಜೈ ಗಳು,ಲೈನ್ ಮ್ಯಾನಗಳು ಸೇರಿದಂತೆ ಕಚೇರಿಯ ಸಿಬ್ಬಂದಿಗಳು ಇದ್ದರು.3
- *ಭಾರತ ನಲ್ಲಿ ವೈರಲ್*1
- ಮೈಸೂರಿನಲ್ಲಿ ಅದ್ಧೂರಿಯಾಗಿ ಡಾ ಅಂಬೇಡ್ಕರ್ ಜಯಂತಿ ಆಚರಣೆ1
- ಬೆಂಗಳೂರು ಏರ್ಪೋರ್ಟ್‌ನಿಂದ ಹುಬ್ಬಳ್ಳಿಗೆ ತೆರಳುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಎಂಎಲ್ಸಿ ನಾಜಿರ್ ಅಹಮದ್ ರಾಜ್ಯ ರಾಜಕಾರಣದ ಪ್ರಚಲಿತ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯೆ ನೀಡಿದರು. ಸಚಿವ ಸಂಪುಟ ವಿಸ್ತರಣೆ ಕುರಿತು ಚರ್ಚಿಸಲು ಶಾಸಕರು ದೆಹಲಿಗೆ ತೆರಳಿ ವರಿಷ್ಠರನ್ನು ಭೇಟಿ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ದಾವಣಗೆರೆ ಉಪಚುನಾವಣೆ ಹಾಗೂ ಮುಸ್ಲಿಂ ಮುಖಂಡರ ನಡುವಿನ ಭಿನ್ನಾಭಿಪ್ರಾಯದ ಪ್ರಶ್ನೆಗೆ ಉತ್ತರಿಸಿದ ಅವರು, ಹೈಕಮಾಂಡ್ ಎಲ್ಲಾ ಬೆಳವಣಿಗೆಗಳನ್ನು ಗಮನಿಸುತ್ತಿದೆ ಎಂದು ಹೇಳಿದರು. ಈ ಹೇಳಿಕೆ ರಾಜ್ಯ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.1
- ನೆಲಮಂಗಲದಲ್ಲಿ ಬಾಲಕಿಯ ಬಾಲ್ಯವಿವಾಹಕ್ಕೆ ಯತ್ನ! 17 ವರ್ಷದ ಬಾಲಕಿಯ ಬಲವಂತ ವಿವಾಹಕ್ಕೆ ತಡೆ ನೆಲಮಂಗಲ ಕವಾಡಿಮಠದ ವೀರಭದ್ರೇಶ್ವರದಲ್ಲಿ ಕಲ್ಯಾಣ ಮಂಟಪದಲ್ಲಿ ಘಟನೆ ಮಧ್ಯರಾತ್ರಿ 1098 ಮಕ್ಕಳ ಸಹಾಯವಾಣಿಗೆ ಕರೆಮಾಡಿ ಮಾಹಿತಿ ಮಾಹಿತಿ ತಿಳಿಯುತ್ತಿದ್ದಂತೆ ಅಧಿಕಾರಿಗಳ ದಾಳಿ, ಪರಿಶೀಲನೆ ಬಾಲಕಿ ದಾಖಲೆ ಪರಿಶೀಲನೆ ವೇಳೆ ಅಪ್ರಾಪ್ತತೆ ಎಂದು ಬಹಿರಂಗ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ತಂಡದಿಂದ ಕಾರ್ಯಾಚರಣೆ ನೆಲಮಂಗಲ ಟೌನ್ ಪೊಲೀಸರ ಸಹಾಯದಲ್ಲಿ ದಾಳಿ 18 ವರ್ಷದ ಒಳಗಿನ ಬಾಲಕಿ ಆದ್ದರಿಂದ ಬಾಲ್ಯ ವಿವಾಹವೆಂದು ಪರಿಗಣಿಸಿ ಪ್ರಕರಣ ಮಧ್ಯರಾತ್ರಿ 3 ಗಂಟೆಗೆ ದಾಳಿ ನಡೆಸಿ ಬಾಲಕಿ ರಕ್ಷಣೆ ತಾಯಿಯೊಂದಿಗೆ ಸುರಕ್ಷಿತ ಸ್ಥಳಕ್ಕೆ ಬಾಲಕಿ ಸ್ಥಳಾಂತರ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಲು ಕ್ರಮ ನೆಲಮಂಗಲ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲು.4
- ಹನೂರು ಪಟ್ಟಣದ ಪಶು ಇಲಾಖೆ ಕಚೇರಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಹನೂರು ತಾಲೂಕಿನ ಹಲವು ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿ ಹನಿಹನಿ ನೀರಿಗೂ ಹಾಹಾಕಾರ ಉಂಟಾಗಿದೆ. 153 ದಿನಗಳ ಅಹೋರಾತ್ರಿ ಧರಣಿಯಲ್ಲಿ ಸಮರ್ಪಕ ಕುಡಿಯುವ ನೀರು, ನೀವು ಪೂರೈಕೆ ಮಾಡುವಂತೆ ಪ್ರತಿಭಟನೆ ಮಾಡಲಾಗಿತ್ತು. ಪ್ರತಿ ಮನುಷ್ಯನಿಗೆ ಸರ್ಕಾರ 70 ಲೀಟರ್ ನೀರು, ಪೂರೈಕೆ ಮಾಡಬೇಕು ಎಂಬ ನಿಯಮವಿದೆ ಆದರೆ ಗ್ರಾಮ ಪಂಚಾಯಿತಿ 7 ಲೀಟರ್ ಸಹ ನೀರು ನೀಡುತ್ತಿಲ್ಲ ಎಂದರು. ಇದಲ್ಲದೆ ಕಳೆದ ಹಲವಾರು ವರ್ಷಗಳಿಂದ ಸಮರ್ಪಕ ಮಳೆಯಾಗದೆ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗಿದೆ ಆದರೂ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು. ಹನೂರು ತಾಲೂಕು ವ್ಯಾಪ್ತಿಯಲ್ಲಿ ರೈತರು ವ್ಯವಸಾಯದ ಜೊತೆಗೆ ಹೈನುಗಾರಿಕೆಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಒಂದು ಲೋಡ್ ಮೇವು ಖರೀದಿಸಲು ಹದಿನೈದು ಸಾವಿರ ಖರ್ಚಾಗುತ್ತಿದೆ. ಈಗಾಗಲೇ ಸಾಲದ ಸುಳಿಗೆ ಸಿಲುಕಿರುವ ರೈತ ಇಷ್ಟು ಹಣ ನೀಡಿ ಯಾವ ರೀತಿ ಮೇವು ಖರೀದಿಸಲು ಸಾಧ್ಯ ಈ ಕೂಡಲೇ ಜಿಲ್ಲಾಡಳಿತ ಗೋಶಾಲೆಗಳನ್ನು ತೆರೆದು ಹಸುಗಳಿಗೆ ಮೇವು ಪೂರೈಕೆ ಮಾಡಬೇಕು ಇದಲ್ಲದೆ ಇಲಾಖೆ ಹಸುಗಳಿಗೆ ರೈತರಿಗೆ ನೇರವಾಗಿ ಪೂರೈಕೆ ಮಾಡಬೇಕು ಎಂದು ಆಗ್ರಹಿಸಿದರು. ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಿ : ಕಳೆದ ಹಲವಾರು ವರ್ಷಗಳಿಂದ ಹನೂರು ತಾಲೂಕು ವ್ಯಾಪ್ತಿಯಲ್ಲಿ ಸಮರ್ಪಕ ಮಳೆಯಾಗಿದೆ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಿಸುವ ನಿಟ್ಟಿನಲ್ಲಿ ಶಾಸಕರು ಹಾಗೂ ಜಿಲ್ಲಾಧಿಕಾರಿಗಳು ವಿಫಲರಾಗಿದ್ದಾರೆ. ಸಮರ್ಪಕ ಮಳೆಯಾಗದಿರುವ ಬಗ್ಗೆ ಹಾಗೂ ಮೇವಿನ ಕೊರತೆ ಇರುವ ಬಗ್ಗೆ ಅಧಿಕಾರಿಗಳು ಸರ್ಕಾರದ ಗಮನಕ್ಕೆ ಸಾರದೆ ಇರುವುದರಿಂದ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ ಇದಲ್ಲದೆ ಈ ಸಂಬಂಧ ಬಜೆಟ್ ನಲ್ಲಿ ಯಾವುದೇ ಪ್ರಸ್ತಾಪವಾಗಿಲ್ಲ, ಈ ಕೂಡಲೇ ಸರ್ಕಾರ ಹನೂರು ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಿ ಹೆಚ್ಚಿನ ಅನುದಾನ ನೀಡಿ ಸಮರ್ಪಕ ಮೇವು ಕುಡಿಯುವ ನೀರು ಪೂರೈಕೆ ಮಾಡಬೇಕು ಎಂದರು. ಮಾಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಧಿಕಾರಿಗಳ ನಿರ್ಲಕ್ಷದಿಂದ ಈ ಸ್ವತ್ತು ನೀಡುತ್ತಿಲ್ಲ ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದ್ದು ಸಮಸ್ಯೆಯನ್ನು ಬಗೆಹರಿಸಬೇಕು. ಹನೂರು ತಾಲೂಕು ವ್ಯಾಪ್ತಿಯಲ್ಲಿ ಪಹಣಿಗಳಿಗೆ ಪ್ರತ್ಯೇಕ ಪೋಡು ಮಾಡದೇ ಇರುವುದರಿಂದ ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಈ ನಿಟ್ಟಿನಲ್ಲಿ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿದರು. ಜಿಲ್ಲಾ ಮಟ್ಟದ ಅಧಿಕಾರಿಗಳು ವರದಿ ನೀಡಬೇಕು : ಸರ್ಕಾರದ 42 ಇಲಾಖೆಗಳಿಂದ ಸಾರ್ವಜನಿಕರಿಗೆ ಸರ್ಕಾರದಿಂದ ಯಾವೆಲ್ಲ ಸೌಲಭ್ಯಗಳು ಸಿಗುತ್ತಿದೆ ಎಂಬುದರ ಬಗ್ಗೆ ಸಮಗ್ರ ಮಾಹಿತಿ ನೀಡಬೇಕು. ಈಗಾಗಲೇ ಎಲ್ಲ ಇಲಾಖೆಯ ಅಧಿಕಾರಿಗಳಿಗೂ ಮಾಹಿತಿ ನೀಡಲಾಗಿದೆ. ಪ್ರತಿಭಟನೆಯ ದಿನ ಎಲ್ಲಾ ಇಲಾಖೆಯ ಅಧಿಕಾರಿಗಳು ತಾವೇ ಖುದ್ದು ಹಾಜರಾಗಿ ಮಾಹಿತಿ ನೀಡಬೇಕು ಎಂದರು. ಸಭೆಯಲ್ಲಿ ಗ್ರಾಮ ಘಟಕದ ಅಧ್ಯಕ್ಷ ಅರ್ಪುದರಾಜ್, ಎಂ ಈ ಬಸವರಾಜು ವಸಂತ್ ಕುಮಾರ್,ಪುಟ್ಟಸ್ವಾಮಿ,ಡೇವಿಡ್ ಸಾಗಾಯರಾಜ್ , ಲಾರೆನ್ಸ್ ರಾಜಸ್ವಾಮಿ ವಲ್ಲಬದಾಸ್ ಸಂದನಮೇರಿ, ಜೆಸಿಂತಾ ಹಾಜರಿದ್ದರು.4
- *ಭಾರತ ನಲ್ಲಿ ವೈರಲ್*1
- ಮೈಸೂರು ನಾ ನರಸಿಂಹರಾಜ ಕ್ಷೇತ್ರದಲ್ಲಿ ಅದ್ಧೂರಿಯಾಗಿ ಡಾ ಅಂಬೇಡ್ಕರ್ ಜಯಂತಿ ಆಚರಣೆ1