logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಲಕ್ಕಿ ಸ್ಕೀಮ್ ಹೆಸರಲ್ಲಿ ಹಣದ ಮೋಸ: ಮಂಗಳೂರಲ್ಲಿ ಪ್ರತಿಭಟನೆ ಜನರಿಗೆ ಮನೆ, ಕಾರು, ಚಿನ್ನದ ಆಮಿಷ ಒಡ್ಡಿ ಜನರಿಂದ ಸಾವಿರಾರು ಮಂದಿಗೆ ಪಂಗನಾಮ ಹಾಕುತ್ತಿರುವ ಲಕ್ಕಿ ಸ್ಕೀಮ್ ಕಂಪೆನಿಗಳಿಗೆ ಬೀಗ ಜಡಿಯಿರಿ ಎಂದು ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ.ಕೆ ಇಮ್ತಿಯಾಜ್ ಆಗ್ರಹಿಸಿದ್ದಾರೆ. ಅವರು ಇಂದು ನ್ಯೂ ಇಂಡಿಯಾ ಲಕ್ಕಿ ಸ್ಕೀಮ್ ಕಂಪೆನಿಯಿಂದ ವಂಚನೆಗೆ ಒಳಗಾದ ಸಂತ್ರಸ್ತರ ಪ್ರತಿಭಟನೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾರ್ಗಸೂಚಿಗಳನ್ನು ಧಿಕ್ಕರಿಸಿ ಸಾರ್ವಜನಿಕರಿಂದ ಹಣ ಸಂಗ್ರಹಿಸಲಾಗಿದೆ ಮಂಗಳೂರಲ್ಲಿ ಸುಮಾರು 100ಕ್ಕೂ ಹೆಚ್ಚು ಬ್ಲೇಡ್ ಕಂಪೆನಿಗಳು ಸಾವಿರಾರು ಕೋಟಿ ಜನರಿಂದ ಸಂಗ್ರಹಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ಬೇರೆ ಜಿಲ್ಲೆಗಳಿಗೆ ಇವರ ವಂಚನಾ ಜಾಲ ವಿಸ್ತರಣೆಯಾಗಿದೆ. ಜಿಲ್ಲೆಯಲಿರುವ ಎಲ್ಲಾ ಲಕ್ಕಿ ಸ್ಕೀಮ್ ಗಳು ಕಾನೂನು ಬಾಹಿರವಾಗಿ ಕಾರ್ಯಚರಿಸುತ್ತಿದೆ ಇವರ ವಿರುದ್ಧ ಕಠಿಣ ಕಾನೂನು ಕ್ರಮ ಜರಗಿಸಬೇಕೆಂದು ಒತ್ತಾಯಿಸಿದರು. ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮಾತನಾಡಿ, ಬಡವರ ಪ್ರಾಮಾಣಿಕತೆಯನ್ನು ಹೈಜಾಕ್ ಮಾಡಲಾಗಿದೆ, ಮಕ್ಕಳ ವಿದ್ಯಾಭ್ಯಾಸ, ಹೆಣ್ಣು ಮಕ್ಕಳ ಮದುವೆಗೆ ಸಹಾಯ ಆಗಲೆಂದು ಹೂಡಿಕೆ ಮಾಡಿದ್ದ ಬಡಪಾಯಿಗಳಿಗೆ ಅನ್ಯಾಯ ಆಗಿದೆ. ನ್ಯೂ ಇಂಡಿಯಾ ಕಂಪೆನಿ ಮಾಲೀಕನಿಂದ 50ಕೋಟಿಯ ವಂಚನೆ ಆಗಿದೆ. ಪ್ರಭಾವಿ ರಾಜಕಾರಣಿಗಳ ಸಹಕಾರದಿಂದಾಗಿ ಈ ರೀತಿಯ ವಂಚನೆ ಮಾಡಲು ಸಾಧ್ಯವಾಗಿದೆ. ಪೊಲೀಸರು ಮತ್ತು ಲೀಡ್ ಬ್ಯಾಂಕ್ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಕ್ರಮ ಕೈಗೊಂಡಿದ್ದಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ವಂಚನೆ ಆಗುತ್ತಿರಲಿಲ್ಲ ಎಂದು ಅವರು ಹೇಳಿದರು. ಸಿಐಟಿಯು ಮುಖಂಡರಾದ ಯೋಗೀಶ್ ಜಪ್ಪಿನಮೊಗರು, ಡಿವೈಎಫ್ಐ ಮುಖಂಡ ತಯ್ಯುಬ್ ಬೆಂಗ್ರೆ ಮಾತನಾಡಿದರು. ಸಂತ್ರಸ್ತರ ವೇದಿಕೆಯ ಸಹ ಸಂಚಾಲಕ ಸಮದ್ ಕಾಟಿಪಳ್ಳ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರತಿಭಟನೆಯ ನೇತೃತ್ವವನ್ನು ಸಂತ್ರಸ್ತರ ವೇದಿಕೆಯ ಪ್ರಮುಖರಾದ ಪರ್ವೀಜ್ ಬಂದರ್, ಖಲೀಲ್ ಬೆಂಗ್ರೆ, ನಟೇಶ್, ರಾಮ್ ಸುರತ್ಕಲ್, ಮನ್ಸೂರ್ ಅಡ್ಡೂರು, ಫಾರೂಕ್ ಕುಕ್ಕಾಜೆ, ಅಬ್ದುಲ್ ಅಜೀಜ್ ಕೃಷ್ಣಾಪುರ, ಖಾಸಿಂ ಕಾಟಿಪಳ್ಳ, ಸನಾ ಮಣಿಪಾಲ, ಜಯಲಕ್ಷ್ಮಿ ಉಳ್ಳಾಲ, ಖೈರುನ್ನಿಸ ಉಚ್ಚಿಲ, ಸುಜಾತ ಮಧ್ಯಪಾದವು, ಸುಹಾನಾ ಬೆಂಗಳೂರು, ಫೈಝಲ್ ಚಿಕ್ಕಮಗಳೂರು, ಮುಹಮ್ಮದ್ ಪಾಷ ಶಿವಮೊಗ್ಗ ವಹಿಸಿದ್ದರು. ವರದಿ: ಶಂಶೀರ್ ಬುಡೋಳಿ

on 16 January
user_Shamsheer Budoli
Shamsheer Budoli
Local News Reporter ಮಂಗಳೂರು, ದಕ್ಷಿಣ ಕನ್ನಡ, ಕರ್ನಾಟಕ•
on 16 January
797251bf-d796-478b-91da-45ea42be5b21

ಲಕ್ಕಿ ಸ್ಕೀಮ್ ಹೆಸರಲ್ಲಿ ಹಣದ ಮೋಸ: ಮಂಗಳೂರಲ್ಲಿ ಪ್ರತಿಭಟನೆ ಜನರಿಗೆ ಮನೆ, ಕಾರು, ಚಿನ್ನದ ಆಮಿಷ ಒಡ್ಡಿ ಜನರಿಂದ ಸಾವಿರಾರು ಮಂದಿಗೆ ಪಂಗನಾಮ ಹಾಕುತ್ತಿರುವ ಲಕ್ಕಿ ಸ್ಕೀಮ್ ಕಂಪೆನಿಗಳಿಗೆ ಬೀಗ ಜಡಿಯಿರಿ ಎಂದು ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ.ಕೆ ಇಮ್ತಿಯಾಜ್ ಆಗ್ರಹಿಸಿದ್ದಾರೆ. ಅವರು ಇಂದು ನ್ಯೂ ಇಂಡಿಯಾ ಲಕ್ಕಿ ಸ್ಕೀಮ್ ಕಂಪೆನಿಯಿಂದ ವಂಚನೆಗೆ ಒಳಗಾದ ಸಂತ್ರಸ್ತರ ಪ್ರತಿಭಟನೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾರ್ಗಸೂಚಿಗಳನ್ನು ಧಿಕ್ಕರಿಸಿ ಸಾರ್ವಜನಿಕರಿಂದ ಹಣ

5fc7a236-3aa2-4dff-9515-b54ed33d1cb2

ಸಂಗ್ರಹಿಸಲಾಗಿದೆ ಮಂಗಳೂರಲ್ಲಿ ಸುಮಾರು 100ಕ್ಕೂ ಹೆಚ್ಚು ಬ್ಲೇಡ್ ಕಂಪೆನಿಗಳು ಸಾವಿರಾರು ಕೋಟಿ ಜನರಿಂದ ಸಂಗ್ರಹಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ಬೇರೆ ಜಿಲ್ಲೆಗಳಿಗೆ ಇವರ ವಂಚನಾ ಜಾಲ ವಿಸ್ತರಣೆಯಾಗಿದೆ. ಜಿಲ್ಲೆಯಲಿರುವ ಎಲ್ಲಾ ಲಕ್ಕಿ ಸ್ಕೀಮ್ ಗಳು ಕಾನೂನು ಬಾಹಿರವಾಗಿ ಕಾರ್ಯಚರಿಸುತ್ತಿದೆ ಇವರ ವಿರುದ್ಧ ಕಠಿಣ ಕಾನೂನು ಕ್ರಮ ಜರಗಿಸಬೇಕೆಂದು ಒತ್ತಾಯಿಸಿದರು. ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮಾತನಾಡಿ, ಬಡವರ ಪ್ರಾಮಾಣಿಕತೆಯನ್ನು ಹೈಜಾಕ್ ಮಾಡಲಾಗಿದೆ, ಮಕ್ಕಳ ವಿದ್ಯಾಭ್ಯಾಸ,

7cba355e-da95-453a-8150-c5ca518899b1

ಹೆಣ್ಣು ಮಕ್ಕಳ ಮದುವೆಗೆ ಸಹಾಯ ಆಗಲೆಂದು ಹೂಡಿಕೆ ಮಾಡಿದ್ದ ಬಡಪಾಯಿಗಳಿಗೆ ಅನ್ಯಾಯ ಆಗಿದೆ. ನ್ಯೂ ಇಂಡಿಯಾ ಕಂಪೆನಿ ಮಾಲೀಕನಿಂದ 50ಕೋಟಿಯ ವಂಚನೆ ಆಗಿದೆ. ಪ್ರಭಾವಿ ರಾಜಕಾರಣಿಗಳ ಸಹಕಾರದಿಂದಾಗಿ ಈ ರೀತಿಯ ವಂಚನೆ ಮಾಡಲು ಸಾಧ್ಯವಾಗಿದೆ. ಪೊಲೀಸರು ಮತ್ತು ಲೀಡ್ ಬ್ಯಾಂಕ್ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಕ್ರಮ ಕೈಗೊಂಡಿದ್ದಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ವಂಚನೆ ಆಗುತ್ತಿರಲಿಲ್ಲ ಎಂದು ಅವರು ಹೇಳಿದರು. ಸಿಐಟಿಯು ಮುಖಂಡರಾದ ಯೋಗೀಶ್ ಜಪ್ಪಿನಮೊಗರು, ಡಿವೈಎಫ್ಐ ಮುಖಂಡ ತಯ್ಯುಬ್ ಬೆಂಗ್ರೆ

4c4f8126-4268-4fa6-a2d9-8619bfcd2f39

ಮಾತನಾಡಿದರು. ಸಂತ್ರಸ್ತರ ವೇದಿಕೆಯ ಸಹ ಸಂಚಾಲಕ ಸಮದ್ ಕಾಟಿಪಳ್ಳ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರತಿಭಟನೆಯ ನೇತೃತ್ವವನ್ನು ಸಂತ್ರಸ್ತರ ವೇದಿಕೆಯ ಪ್ರಮುಖರಾದ ಪರ್ವೀಜ್ ಬಂದರ್, ಖಲೀಲ್ ಬೆಂಗ್ರೆ, ನಟೇಶ್, ರಾಮ್ ಸುರತ್ಕಲ್, ಮನ್ಸೂರ್ ಅಡ್ಡೂರು, ಫಾರೂಕ್ ಕುಕ್ಕಾಜೆ, ಅಬ್ದುಲ್ ಅಜೀಜ್ ಕೃಷ್ಣಾಪುರ, ಖಾಸಿಂ ಕಾಟಿಪಳ್ಳ, ಸನಾ ಮಣಿಪಾಲ, ಜಯಲಕ್ಷ್ಮಿ ಉಳ್ಳಾಲ, ಖೈರುನ್ನಿಸ ಉಚ್ಚಿಲ, ಸುಜಾತ ಮಧ್ಯಪಾದವು, ಸುಹಾನಾ ಬೆಂಗಳೂರು, ಫೈಝಲ್ ಚಿಕ್ಕಮಗಳೂರು, ಮುಹಮ್ಮದ್ ಪಾಷ ಶಿವಮೊಗ್ಗ ವಹಿಸಿದ್ದರು. ವರದಿ: ಶಂಶೀರ್ ಬುಡೋಳಿ

More news from ಕರ್ನಾಟಕ and nearby areas
  • *ಭಾರತ ನಲ್ಲಿ ವೈರಲ್*
    1
    *ಭಾರತ ನಲ್ಲಿ ವೈರಲ್*
    user_Md Aleemulla Shariff
    Md Aleemulla Shariff
    Citizen Reporter ಮೈಸೂರು, ಮೈಸೂರು, ಕರ್ನಾಟಕ•
    18 hrs ago
  • ಚಳ್ಳಕೆರೆ ತಾಲೂಕಿನ ಬೆಳಗೆರೆ ಗ್ರಾಮದಲ್ಲಿ ಇಂದು ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿ ಬ್ರಹ್ಮರಥೋತ್ಸವ ಸಡಗರ ಸಂಭ್ರಮದಿಂದ ಜರಗಿತು. ಸಾವಿರಾರು ಭಕ್ತರು ಈ ಜಾತ್ರೆಯಲ್ಲಿ ಭಾಗಿಯಾಗಿ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿಯ ದರ್ಶನ ಪಡೆದರು. ಬ್ರಹ್ಮರಥವನ್ನು ಎಳೆಯುವುದರು ಮೂಲಕ ತಮ್ಮ ಭಕ್ತಿಯನ್ನ ಸಮರ್ಪಸಿದರು..
    1
    ಚಳ್ಳಕೆರೆ ತಾಲೂಕಿನ ಬೆಳಗೆರೆ ಗ್ರಾಮದಲ್ಲಿ ಇಂದು ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿ ಬ್ರಹ್ಮರಥೋತ್ಸವ ಸಡಗರ ಸಂಭ್ರಮದಿಂದ ಜರಗಿತು. ಸಾವಿರಾರು ಭಕ್ತರು ಈ ಜಾತ್ರೆಯಲ್ಲಿ ಭಾಗಿಯಾಗಿ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿಯ ದರ್ಶನ ಪಡೆದರು.  ಬ್ರಹ್ಮರಥವನ್ನು ಎಳೆಯುವುದರು ಮೂಲಕ ತಮ್ಮ ಭಕ್ತಿಯನ್ನ ಸಮರ್ಪಸಿದರು..
    user_Suresh Belagere
    Suresh Belagere
    Video Creator ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    14 hrs ago
  • ಮಳವಳ್ಳಿ: ಇತಿಹಾಸ ಪ್ರಸಿದ್ದ ತಾಲೂಕಿನ ೩ ದಿನಗಳ ಚಿಲ್ಲಾಪುರ ಸಿದ್ದಪ್ಪಾಜಿ ಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಚಾಲನೆ. ಮಳವಳ್ಳಿ:ತಾಲೂಕಿನ ಇತಿಹಾಸ ಪ್ರಸಿದ್ದ ಚಿಲ್ಲಾಪುರ ಸಿದ್ದಪ್ಪಾಜಿ ಮೂರು ದಿನಗಳ ಜಾತ್ರಾ ಮಹೋತ್ಸವಕ್ಕೆ ಸಂಪ್ರದಾಯಬದ್ದವಾಗಿ ಖಂಡಾಯಗಳಿಗೆ ಗುರುವಾರ ವಿಶೇಷ ಪೂಜೆಯೊಂದಿಗೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು. ಏ.೨ ರಂದು ಬೆಳಿಗ್ಗೆ ೭.೩೦ ರಿಂದ ೮.೪೫ ಗಂಟೆಗೆ ಪುಣ್ಯಾಹ, ಅಭಿಷೇಕ, ನವಗ್ರಹ ಪೂಜೆ, ಹೋಮ, ಧ್ವಜಾರೋಹಣ, ಮಧ್ಯಾಹ್ನ ೧೨ ಗಂಟೆಗೆ ಸ್ವಾಮಿಯ ಗದ್ದಿಗೆ ಪೂಜೆ, ಮಹಾಮಂಗಳಾರತಿಯೊAದಿಗೆ ಅರಂಭಗೊAಡು ಏ.೫ ರವರೆಗೆ ಭಕ್ತಿಪೂರ್ವಕವಾಗಿ ನಡೆಯುವ ಸಿದ್ದಪ್ಪಾಜಿ ಜಾತ್ರಾ ಮಹೋತ್ಸವ ಮುತ್ತತ್ತಿರಸ್ತೆಯಲ್ಲಿರುವ ಕಾಳಿಕಾಂಬ ದೇವಸ್ಥಾನದಿಂದ ಅರಂಭಗೊAಡಿತ್ತು. ಶ್ರೀ ಸಿದ್ದಪ್ಪಾಜಿ ಸ್ವಾಮಿಯ ಕಂಡಾಯಕ್ಕೆ ಹೂ ಹೊಂಬಾಳೆ ಸಲ್ಲಿಸಿ, ಗಂಗಾ ಸ್ನಾನನಂತರ ಉತ್ಸವದೊಂದಿಗೆ ಸ್ವಾಮಿಯವರನ್ನು ಮುತ್ತತ್ತಿ ರಸ್ತೆಯಲ್ಲಿರುವ ಕಾಳಿಕಾಂಬ ದೇವಸ್ಥಾನಕ್ಕೆ ಕರೆತರಲಾಯಿತು,ನಂತರ ಹಲಗೂರು ವಿಶ್ವಕರ್ಮ ಕುಲಭಾಂದವರು ಚಂದ್ರಮAಡೋಲೋತ್ಸವ ಬೆಳಗಿಸಲಿದ್ದು ,ವಿವಿಧ ಪುಷ್ಪಗಳಿಂದ ಅಲಂಕರಿಸಿ ವಿಶೇಷವಾಗಿ ಪೂಜಾ ಕಾರ್ಯಕ್ರಮವನ್ನು ನಡೆಸಿ, ಟ್ರ‍್ಯಾಕ್ಟರ್ ಮುಖಾಂತರ ಹಲಗೂರಿನ ಪಂಚವಾಲರ ಬೀದಿಯಲ್ಲಿ ಮೆರವಣಿಗೆ ನಡೆಸಿದ ನಂತರ ಚಿಲ್ಲಾಪುರ ದೇವಸ್ಥಾನಕ್ಕೆ ಮೆರವಣಿಗೆಯಲ್ಲಿ ಸ್ವಾಮಿ ಮೂರ್ತಿಯನ್ನು ಕೊಂಡೊಯ್ಯಲಾಯಿತು. ಚಿಲ್ಲಾಪುರ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದ ನಂತರ ಬಂದ ಭಕ್ತಾದಿಗಳಿಗೆ ರಾತ್ರಿ ಫಲಹಾರ ನಡೆಸಲಾಯಿತು. ದೇವಸ್ಥಾನದ ಕಾರ್ಯದರ್ಶಿ ರಾಮಚಂದ್ರಚಾರಿ ಮಾತನಾಡುತಾ ್ತ೧೨ನೇ ಶತಮಾನದಲ್ಲಿ ಸಿದ್ದಪ್ಪಾಜಿಯವರು ಹಲಗೂರಿನ ಚಿಲ್ಲಾಪುರಕ್ಕೆ ಕಬ್ಬಿಣದ ಭಿಕ್ಷೆಗಾಗಿ ಬರುತ್ತಾರೆ.ಆ ಸಮಯದಲ್ಲಿ ಹಲವಾರು ಪವಾಡಗಳು ನಡೆದು ಸಿದ್ದಪ್ಪಾಜಿಯವರು ಗೆದ್ದು ಕಬ್ಬಿಣವನ್ನು ತೆಗೆದುಕೊಂಡು ಹಾರೆ ಗುದ್ದಲಿಗಳನ್ನು ಮಾಡಿಕೊಂಡು ತಮ್ಮ ಗುರುಗಳಾದ ಮಂಟೇಸ್ವಾಮಿಯವರ ನೆಲಮಾಳಿಗೆ ಗದ್ದುಗೆಗೆ ಹೋಗುತ್ತಾರೆ .ಹಲಗೂರು ಪವಾಡ ಕ್ಷೇತ್ರವಾಗಿದೆ.ಇದು ೪೪ನೇ ವಾರ್ಷಿಕೋತ್ಸವ. ನಾವು ಹಲಗೂರಿನವರು ಮತ್ತು ಜಿಲ್ಲಾಪುರದವರು ಸೇರಿ ಈ ವಾರ್ಷಿಕೋತ್ಸವವನ್ನು ಅದ್ದೂರಿಯಾಗಿ ಮಾಡುತ್ತೇವೆ ಎಂದು ತಿಳಿಸಿದರು ಏಪ್ರಿಲ್ ೩ ರಂದು ಶುಕ್ರವಾರ ಬೆ.೬ ಗಂಟೆಗೆ ಹೆಜ್ಜೆ ನಮಸ್ಕಾರ, ಉರುಳು ಸೇವೆ, ಮುಡಿ ಸೇವೆ, ನೀಲಗಾರಿಕೆ, ದೊಡ್ಡಮ್ಮ ತಾಯಿಯ ಗದ್ದಿಗೆಗೆ ಅಭಿಷೇಕ ಮತ್ತು ಹೂವಿನ ಅಲಂಕಾರ ಮಹಾಮಂಗಳಾರತಿಯು ನಡೆಯಲಿದೆ.ನಂದಿ ಬಸವೇಶ್ವರನಿಗೆ ಹಾಲು ಅಭಿಷೇಕ, ಎಣ್ಣೆ ಮಜ್ಜನ ಸೇವೆ, ಕಾದಗಟ್ಟಿಗೆ ಫಲಹಾರ ಪೂಜೆ, ಮಧ್ಯಾಹ್ನ ೧೨ ಗಂಟೆಗೆ ಉಪ್ಪರಿಗೆ ಬಸವೇಶ್ವರನಿಗೆ ಎಣ್ಣೆ ಮಜ್ಜನ, ಸೇವೆಯನ್ನು ಎರ್ಪಡಿಸಿದೆ. ಎಂದರು. ಏಪ್ರಿಲ್ ೪ ರಂದು ಶನಿವಾರ ಬೆಳಿಗ್ಗೆ ೬ ಗಂಟೆಯಿAದ ಚಿಲ್ಲಾಪುರದ ಕುಲಬಾಂಧವರಿAದ ಪಂಕ್ತಿಸೇವೆ, ಪ್ರಸಾದ ವಿನಿಯೋಗ, ಬೆ.೯ ಗಂಟೆಗೆ ಹಲಗೂರು ಕುಲಭಾಂದವರಿAದ ಶ್ರೀ ಸ್ವಾಮಿಯ ಜಯಂತ್ಯೋತ್ಸವ, ಶ್ರೀ ಮುತ್ತಾಂಜನೇಯೋತ್ಸವ ಸೇವೆ ಮತ್ತು ಅನ್ನ ಸಂತರ್ಪಣೆ ನಡೆಸುವುದರ ಜೊತೆಗೆ ಚಂದ್ರಮAಡಲ, ಸಾಲಗತ್ತಿ ಪೂಜೆ ಬಸಪ್ಪನ ಪೂಜೆ ಸಂಜೆ ನಾಟಕವಿರುತ್ತದೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಟ್ರಸ್ಟಿನ ಅಧ್ಯಕ್ಷರಾದ ಪಿ.ಈಶಕುಮಾರ್ ,ಕಾರ್ಯದರ್ಶಿ ರಾಮಚಂದ್ರ ,ಎಚ್. ಕೆ. ಶಿವಾಚಾರಿ, ಕಾರ್ಯದರ್ಶಿ ಸೇರಿದಂತೆ ಅನಂತಸ್ವಾಮಿ, ಅಪ್ಪಾಜಿ ,ಉಮೇಶ ಮತ್ತು ಇತರರು ಇದ್ದರು.
    1
    ಮಳವಳ್ಳಿ: ಇತಿಹಾಸ ಪ್ರಸಿದ್ದ ತಾಲೂಕಿನ ೩ ದಿನಗಳ ಚಿಲ್ಲಾಪುರ ಸಿದ್ದಪ್ಪಾಜಿ ಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಚಾಲನೆ.
ಮಳವಳ್ಳಿ:ತಾಲೂಕಿನ ಇತಿಹಾಸ ಪ್ರಸಿದ್ದ ಚಿಲ್ಲಾಪುರ  ಸಿದ್ದಪ್ಪಾಜಿ ಮೂರು ದಿನಗಳ ಜಾತ್ರಾ ಮಹೋತ್ಸವಕ್ಕೆ ಸಂಪ್ರದಾಯಬದ್ದವಾಗಿ ಖಂಡಾಯಗಳಿಗೆ ಗುರುವಾರ ವಿಶೇಷ ಪೂಜೆಯೊಂದಿಗೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.
ಏ.೨ ರಂದು ಬೆಳಿಗ್ಗೆ ೭.೩೦ ರಿಂದ ೮.೪೫ ಗಂಟೆಗೆ ಪುಣ್ಯಾಹ, ಅಭಿಷೇಕ, ನವಗ್ರಹ ಪೂಜೆ, ಹೋಮ, ಧ್ವಜಾರೋಹಣ, ಮಧ್ಯಾಹ್ನ ೧೨ ಗಂಟೆಗೆ ಸ್ವಾಮಿಯ ಗದ್ದಿಗೆ ಪೂಜೆ, ಮಹಾಮಂಗಳಾರತಿಯೊAದಿಗೆ ಅರಂಭಗೊAಡು ಏ.೫ ರವರೆಗೆ ಭಕ್ತಿಪೂರ್ವಕವಾಗಿ ನಡೆಯುವ ಸಿದ್ದಪ್ಪಾಜಿ ಜಾತ್ರಾ ಮಹೋತ್ಸವ ಮುತ್ತತ್ತಿರಸ್ತೆಯಲ್ಲಿರುವ ಕಾಳಿಕಾಂಬ ದೇವಸ್ಥಾನದಿಂದ ಅರಂಭಗೊAಡಿತ್ತು.
ಶ್ರೀ ಸಿದ್ದಪ್ಪಾಜಿ ಸ್ವಾಮಿಯ ಕಂಡಾಯಕ್ಕೆ ಹೂ ಹೊಂಬಾಳೆ ಸಲ್ಲಿಸಿ, ಗಂಗಾ ಸ್ನಾನನಂತರ ಉತ್ಸವದೊಂದಿಗೆ ಸ್ವಾಮಿಯವರನ್ನು ಮುತ್ತತ್ತಿ ರಸ್ತೆಯಲ್ಲಿರುವ ಕಾಳಿಕಾಂಬ ದೇವಸ್ಥಾನಕ್ಕೆ ಕರೆತರಲಾಯಿತು,ನಂತರ ಹಲಗೂರು ವಿಶ್ವಕರ್ಮ ಕುಲಭಾಂದವರು ಚಂದ್ರಮAಡೋಲೋತ್ಸವ ಬೆಳಗಿಸಲಿದ್ದು ,ವಿವಿಧ ಪುಷ್ಪಗಳಿಂದ ಅಲಂಕರಿಸಿ ವಿಶೇಷವಾಗಿ ಪೂಜಾ ಕಾರ್ಯಕ್ರಮವನ್ನು ನಡೆಸಿ, ಟ್ರ‍್ಯಾಕ್ಟರ್ ಮುಖಾಂತರ ಹಲಗೂರಿನ ಪಂಚವಾಲರ ಬೀದಿಯಲ್ಲಿ  ಮೆರವಣಿಗೆ ನಡೆಸಿದ ನಂತರ ಚಿಲ್ಲಾಪುರ ದೇವಸ್ಥಾನಕ್ಕೆ ಮೆರವಣಿಗೆಯಲ್ಲಿ ಸ್ವಾಮಿ ಮೂರ್ತಿಯನ್ನು ಕೊಂಡೊಯ್ಯಲಾಯಿತು. ಚಿಲ್ಲಾಪುರ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದ ನಂತರ ಬಂದ ಭಕ್ತಾದಿಗಳಿಗೆ ರಾತ್ರಿ  ಫಲಹಾರ  ನಡೆಸಲಾಯಿತು.
ದೇವಸ್ಥಾನದ ಕಾರ್ಯದರ್ಶಿ ರಾಮಚಂದ್ರಚಾರಿ ಮಾತನಾಡುತಾ ್ತ೧೨ನೇ ಶತಮಾನದಲ್ಲಿ ಸಿದ್ದಪ್ಪಾಜಿಯವರು ಹಲಗೂರಿನ ಚಿಲ್ಲಾಪುರಕ್ಕೆ ಕಬ್ಬಿಣದ ಭಿಕ್ಷೆಗಾಗಿ ಬರುತ್ತಾರೆ.ಆ ಸಮಯದಲ್ಲಿ ಹಲವಾರು ಪವಾಡಗಳು ನಡೆದು ಸಿದ್ದಪ್ಪಾಜಿಯವರು ಗೆದ್ದು ಕಬ್ಬಿಣವನ್ನು ತೆಗೆದುಕೊಂಡು ಹಾರೆ ಗುದ್ದಲಿಗಳನ್ನು ಮಾಡಿಕೊಂಡು ತಮ್ಮ ಗುರುಗಳಾದ ಮಂಟೇಸ್ವಾಮಿಯವರ ನೆಲಮಾಳಿಗೆ ಗದ್ದುಗೆಗೆ ಹೋಗುತ್ತಾರೆ .ಹಲಗೂರು ಪವಾಡ  ಕ್ಷೇತ್ರವಾಗಿದೆ.ಇದು ೪೪ನೇ ವಾರ್ಷಿಕೋತ್ಸವ. ನಾವು ಹಲಗೂರಿನವರು ಮತ್ತು ಜಿಲ್ಲಾಪುರದವರು ಸೇರಿ ಈ ವಾರ್ಷಿಕೋತ್ಸವವನ್ನು ಅದ್ದೂರಿಯಾಗಿ ಮಾಡುತ್ತೇವೆ ಎಂದು ತಿಳಿಸಿದರು
ಏಪ್ರಿಲ್ ೩ ರಂದು ಶುಕ್ರವಾರ ಬೆ.೬ ಗಂಟೆಗೆ ಹೆಜ್ಜೆ ನಮಸ್ಕಾರ, ಉರುಳು ಸೇವೆ, ಮುಡಿ ಸೇವೆ, ನೀಲಗಾರಿಕೆ, ದೊಡ್ಡಮ್ಮ ತಾಯಿಯ ಗದ್ದಿಗೆಗೆ ಅಭಿಷೇಕ ಮತ್ತು ಹೂವಿನ ಅಲಂಕಾರ ಮಹಾಮಂಗಳಾರತಿಯು ನಡೆಯಲಿದೆ.ನಂದಿ ಬಸವೇಶ್ವರನಿಗೆ ಹಾಲು ಅಭಿಷೇಕ, ಎಣ್ಣೆ ಮಜ್ಜನ ಸೇವೆ, ಕಾದಗಟ್ಟಿಗೆ ಫಲಹಾರ ಪೂಜೆ, ಮಧ್ಯಾಹ್ನ ೧೨ ಗಂಟೆಗೆ ಉಪ್ಪರಿಗೆ ಬಸವೇಶ್ವರನಿಗೆ ಎಣ್ಣೆ ಮಜ್ಜನ, ಸೇವೆಯನ್ನು ಎರ್ಪಡಿಸಿದೆ. ಎಂದರು.
ಏಪ್ರಿಲ್ ೪ ರಂದು ಶನಿವಾರ ಬೆಳಿಗ್ಗೆ ೬ ಗಂಟೆಯಿAದ ಚಿಲ್ಲಾಪುರದ ಕುಲಬಾಂಧವರಿAದ ಪಂಕ್ತಿಸೇವೆ, ಪ್ರಸಾದ ವಿನಿಯೋಗ, ಬೆ.೯ ಗಂಟೆಗೆ ಹಲಗೂರು ಕುಲಭಾಂದವರಿAದ ಶ್ರೀ ಸ್ವಾಮಿಯ ಜಯಂತ್ಯೋತ್ಸವ, ಶ್ರೀ ಮುತ್ತಾಂಜನೇಯೋತ್ಸವ ಸೇವೆ ಮತ್ತು ಅನ್ನ ಸಂತರ್ಪಣೆ  ನಡೆಸುವುದರ ಜೊತೆಗೆ ಚಂದ್ರಮAಡಲ, ಸಾಲಗತ್ತಿ ಪೂಜೆ ಬಸಪ್ಪನ ಪೂಜೆ ಸಂಜೆ ನಾಟಕವಿರುತ್ತದೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಟ್ರಸ್ಟಿನ ಅಧ್ಯಕ್ಷರಾದ ಪಿ.ಈಶಕುಮಾರ್ ,ಕಾರ್ಯದರ್ಶಿ ರಾಮಚಂದ್ರ ,ಎಚ್. ಕೆ. ಶಿವಾಚಾರಿ, ಕಾರ್ಯದರ್ಶಿ ಸೇರಿದಂತೆ ಅನಂತಸ್ವಾಮಿ, ಅಪ್ಪಾಜಿ ,ಉಮೇಶ ಮತ್ತು ಇತರರು ಇದ್ದರು.
    user_ಮಾಗನೂರು ಎಂ ಶಿವಕುಮಾರ್
    ಮಾಗನೂರು ಎಂ ಶಿವಕುಮಾರ್
    ಮಳವಳ್ಳಿ, ಮಂಡ್ಯ, ಕರ್ನಾಟಕ•
    12 hrs ago
  • ಮಾಗಡಿ : ​ ಕೆಂಪೇಗೌಡ ಪ್ರತಿಮೆ ಸ್ಥಳಾಂತರ ವಿಚಾರದಲ್ಲಿ ಕುಚೋದ್ಯನೇ, ಗಲಭೆ, ಪ್ರಚೋದನೆ ಸೃಷ್ಠಿಸಬಾರದು ಇದರಿಂದ ಶಾಂತಿ ಹದೆಗೆಡುತ್ತದೆ ಎಂದು ಮಾಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಕೃಷ್ಣಮೂರ್ತಿ ಎಚ್.ಎಂ.ಕೃಷ್ಣಮೂರ್ತಿಗೆ ತಿರುಗೇಟ್ ನೀಡಿದರು. ಪಟ್ಟಣದ ಕಾಂಗ್ರೆಸ್ ಭವನದಲ್ಲಿ ಗುರುವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಜನರ ಆರೋಗ್ಯ ದೃಷ್ಠಿಯಿಂದ 42 ಕೋಟಿರೂ ವೆಚ್ಚದಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಗುದ್ದಲ್ಲಿ ಪೂಜೆ ನೆರವೇರಿಸಲಾಗಿದೆ ಟೆಂಡರ್ ಪ್ರಕ್ರಿಯೆಯೂ ಆಗಿದ್ದು ಜಾಗವನ್ನು ಬಿಟ್ಟುಕೊಡಬೇಕಿದೆ ಆಸ್ಪತ್ರೆ ನಿರ್ಮಾಣದ ಜಾಗದಲ್ಲಿ ಕೆಂಪೇಗೌಡ ಪ್ರತಿಮೆ ಇದ್ದು ಈ ಪ್ರತಿಮೆಯನ್ನು ತೆರವುಗೊಳಿಸದಂತೆ ಎಚ್.ಎಂ.ಕೃಷ್ಣಮೂರ್ತಿ ಹೈಕೋರ್ಟ್ ಮೊರೆಹೊಗಿದ್ದು ಪ್ರತಿಮೆ ಗೆ ಧಕ್ಕೆ ಆಗದಂತೆ ಸ್ಥಳಾಂತರಿಸಲು ಹೈಕೋರ್ಟ್ ಸೂಚಿಸಿದಂತೆ ಸ್ಥಳಾಂತರಿಸಲು ಮೆಟ್ಟಿಲು ತೆರವುಗೊಳಿಸುವುದಕ್ಕೆ ಇಲ್ಲಸಲ್ಲದ ಆರೋಪಮಾಡುವುದು ಸರಿಯಲ್ಲ, ಕಾನೂನಾತ್ಮಕವಾಗಿ ಮರಗಳನ್ನು ತೆರವುಗೊಳಿಸಿ ಎಂದು ಆದೇಶವಿದೆ ಒರೆತು ಸ್ಟೇ ನೀಡಿಲ್ಲ ಎಂದರು. ಈಗಿರುವ ಪ್ರತಿಮೆಗೆ ಯಾವುದೇ ಧಕ್ಕೆ ಬಾರದಂತೆ ಪೂರ್ವಾಭಿಮುಖದಿಂದ ಉತ್ತರಾಭಿ ಮುಖವಾಗಿ ಸ್ಥಾಪಿಸಲಾಗುವುದು ಎಂದರು. ಶ್ರೀಮಂತರು ನಗರ ಪ್ರದೇಶದ ಆಸ್ಪತ್ರೆಗೆ ಹೋಗುತ್ತಾರೆ ಶ್ರೀಸಾಮಾನ್ಯರು ಎಲ್ಲಿಗೆ ಹೋಗಲು ಸಾಧ್ಯ, ಶಾಸಕರು ಮನೆ ನಿರ್ಮಿಸುತ್ತಿಲ್ಲ ಆಸ್ಪತ್ರೆ ನಿರ್ಮಾಣಕ್ಕೆ ಮುಂದಾಗಿದ್ದಾರೆ ಆಸ್ಪತ್ರೆ ನಿರ್ಮಾಣವಾದ ನಂತರ ಶಾಸಕರ ಸಂಬಂಧಿಕರು ಚಿಕಿತ್ಸೆಪಡೆಯಲು ಬರುವುದಿಲ್ಲ ಆಸ್ಪತ್ರೆ ನಿರ್ಮಾಣಕ್ಕೆ ಸಹಕಾರ ನೀಡಲಿ ಅಡೆ,ತಡೆಹೊಡ್ಡುವುದು, ಜನರಿಗೆ ಧಿಕ್ಕು ತಪ್ಪಿಸುವ ಹೇಳಿಕೆ ನೀಡುವುದು ಬೇಡ ಎಂದು ಕೆಂಪೇಗೌಡ ಅಭಿವೃದ್ದಿ ಸಮಿತಿ ರಾಜ್ಯಾಧ್ಯಕ್ಷ ಎಚ್.ಎಂ.ಕೃಷ್ಣನಮೂರ್ತಿಗೆ ಮನವಿ ಮಾಡಿದರು. ಡಾ.ಬಿ.ಆರ್.ಅಂಬೇಡ್ಕರ್ ಭವನ ಶಿಥಿಲವಾದ ಕಾರಣ ತರವುಗೊಳಿಸಿ ಹೊಸ ಭವನ ನಿರ್ಮಾಣಮಾಡಲಾಗುತ್ತಿದೆ. ಸರಕಾರಿ ಇಲಾಖೆಗಳನ್ನು ತೆರವುಗೊಳಿಸಿ ಶಾಸಕರ ಕಿಸೆಸೇರುತ್ತಿದೆ ಎಂದು ಆರೋಪಿಸುವುದು ಸರಿಯಲ್ಲ, 2018ರಲ್ಲಿ ಕೋಟೆ ಜಾಗ ಕೆಶಿಫ್ ರಸ್ತೆಗೆ ಭೂಸ್ವಾಧಿನವಾಗಿದೆ ಈ ಹಣ ಸೋಮೇಶ್ವರ ದೇವಾಲಯದ ಖಾತೆಗೆ 70 ಲಕ್ಷರೂ ಜಮೆಯಾಗಿದೆ ಆ ವೇಳೆ ಎಚ್.ಸಿ.ಬಾಲಕೃಷ್ಣ ಶಾಸಕರಾಗಿರಲಿಲ್ಲ ಈ ಹಣ ಎಲ್ಲಿದೆ ಎಂದು ಖಚಿತಪಡಿಸಿಕೊಳ್ಳುವುದನ್ನು ಬಿಟ್ಟು ಶಾಸಕರ ವಿರುದ್ದ ಆರೋಪಮಾಡುವುದು ಸರಿಯಲ್ಲ ಎಂದು ಲೇವಡಿ ಮಾಡಿದರು. ಆಸ್ಪತ್ರೆ ಕಾಮಗಾರಿ ಇನ್ನೂ ಆರಂಭಿಸಿಲ್ಲ ಈಗಿರುವಾಗ ಎರಡು ವರ್ಷದಲ್ಲಿ ಆಸ್ಪತ್ರೆ ಕಾಮಗಾರಿ ಪೂರ್ಣಗೊಳಿಸಿ ಎನ್ನುತ್ತಾರೆ ಅವರಿಗೆ ಕಳಕಳಿ ಇದ್ದರೆ ಕಾಮಗಾರಿ ನಡೆಯುವ ವೇಳೆ ವೀಕ್ಷಿಸಲಿ ಅದನ್ನು ಬಿಟ್ಟು ಬಿಟ್ಟು ಇಲ್ಲಸಲ್ಲದ ಆರೋಪಮಾಡುವುದು ಎಷ್ಟು ಸರಿ. ಅಭಿವೃದ್ದಿ ವಿಚಾರದಲ್ಲಿ ಚರ್ಚೆಗೆ ಬರಲಿ ಚರ್ಚೆಗೆ ನಾವು ಸಿದ್ದರಿದ್ದೇವೆ ದಿನಾಂಕ, ಸ್ಥಳ, ಸಮಯ ನಿಗಧಿಪಡಿಸಿ ಎಂದು ಸವಾಲು ಹಾಕಿದರು. ಪುರಸಭಾ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಶಿವಕುಮಾರು ಮಾತನಾಡಿ, ಎಚ್.ಎಂ.ಕೃಷ್ಣಮೂರ್ತಿ ಅಭಿವೃದ್ದಿ ವಿಚಾರದಲ್ಲಿ ಚರ್ಚಿಸಲಿ ಅದನ್ನು ಬಿಟ್ಟು ಶಾಸಕರ ಬಗ್ಗೆ ಅಗುರವಾಗಿ, ಏಕವಚನದಲ್ಲಿ ಮಾತನಾಡಿದರೆ ತಕ್ಕಪಾಠ ಕಲಿಸಲಾಗುವುದು, ಅಭಿವೃದ್ದಿಗೆ ಸಹಕಾರ ನೀಡಲಿ ಆಸ್ಪತ್ರೆ ನಿರ್ಮಾಣಕ್ಕೆ ಸಹಕಾರ ನೀಡದೆ ಆಸ್ಪತ್ರೆ ನಿರ್ಮಾಣಕ್ಕೆ ವಿರೊಧಿಸುವುದು ಸರಿಯಲ್ಲ ಇದು ಸಾರ್ವಜನಿಕರ ಸ್ವತ್ತು. ಕಾನೂನಾತ್ಮಕವಾಗಿಯೇ ಆಸ್ಪತ್ರೆ ನಿರ್ಮಾಣಕ್ಕೆ ಶಾಸಕರು ಮುಂದಾಗಿದ್ದಾರೆ ಜೇಡ್ರಹಳ್ಳಿ ಕೃಷ್ಣಪ್ಪ, ಮರೂರು ಸಾಗರ್ ಗೌಡ ಮಾಗಡಿ ಸರಕಾರಿ ಆಸ್ಪತ್ರೆಯಲ್ಲಿ ಎಷ್ಟು ದಿನ ಚಿಕಿತ್ಸೆ ಪಡೆದಿದ್ದಾರೆ ತಿಳಿಸಲಿ ಆಸ್ಪತ್ರೆ ನಿರ್ಮಾಣದ ವಿಚಾರದಲ್ಲಿ ಮಾತನಾಡಲು ಇವರಿಗೆ ಹಕ್ಕಿಲ್ಲ ಎಂದು ಲೇವಡಿ ಮಾಡಿದರು. ಕುದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ್ ಮಾತನಾಡಿ, ಕೆಂಪೇಗೌಡರ ಬಗ್ಗೆ ಎಲ್ಲರಿಗೂ ಅಭಿಮಾನ, ಗೌರವವಿದೆ ಅದರಂತೆ ಆಸ್ಪತ್ರೆಯೂ ಪ್ರಮುಖವಾಗಿದೆ ಯಾವುದೇ ಧಕ್ಕೆ ಬಾರದಂತೆ ಪ್ರತಿಮೆ ಸ್ಥಳಾಂತರಿಸಲಾಗುತ್ತಿದೆ, ಆಸ್ಪತ್ರೆ ನಿರ್ಮಾಣಕ್ಕೆ ಯಾರು ಅಡ್ಡಿಪಡಿಸಬಾರದು. 100 ಕೋಟಿರೂ ವೆಚ್ಚದಲ್ಲಿ ಕೋಟೆ ಅಭಿವೃದ್ದಿಪಡಿಸಿ ಮಧ್ಯದಲ್ಲಿ ಕೆಂಪೇಗೌಡರ ಪ್ರತಿಮೆ ನಿರ್ಮಾಣದ ಉದ್ದೇಶವಿದೆ, ರಾಮನಗರದಲ್ಲಿ ರಾಜೀವ್ ಗಾಂಧಿ ಆರೋಗ್ಯ ಯೂನಿವರ್ ಸಿಟಿ ಆಗುತ್ತಿರುವುದರಿಂದ ಮಾಗಡಿಯಲ್ಲಿ ಸುಸರ್ಜಿತ ಆಸ್ಪತ್ರೆ ನಿರ್ಮಾಣವಾಗುವುದರಿಂದ ನುರಿತ ವೈದ್ಯರು ಬರಲಿದ್ದಾರೆ ಇದರಿಂದ ಬಡವರಿಗೆ ಉತ್ತಮ ಆರೋಗ್ಯ ಸೇವೆ ಸಲ್ಲಿಸಬಹುದು ಅಭಿವೃದ್ದಿಗೆ ಕಾಲು ಏಳೆಯದೆ ಕೈಜೋಡಿಸಿ ಎಂದು ಮನವಿ ಮಾಡಿದರು. ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆಗ್ರೋಪುರುಷೋತ್ತಮ್, ಗ್ಯಾರಂಟಿ ಯೋಜನೆ ಅಧ್ಯಕ್ಷ ಕಲ್ಕೆರೆ ಶಿವಣ್ಣ, ಪುರಸಭೆ ಮಾಜಿ ಅಧ್ಯಕ್ಷ ರಂಗಹನುಮಯ್ಯ, ಮಾಜಿ ಸದಸ್ಯರಾದ ರೂಪೇಶ್, ಆಶ್ವಥ್, ಟಿಎಪಿಸಿಎಂಎಸ್ ನಿರ್ದೆಶಕ ರಮೇಶ್, ದೊಡ್ಡಿ ಲೋಕೇಶ್, ತಿರುಮಲೆ ವೆಂಕಟೇಶ್ ಇದ್ದರು.
    3
    ಮಾಗಡಿ : ​  ಕೆಂಪೇಗೌಡ ಪ್ರತಿಮೆ ಸ್ಥಳಾಂತರ ವಿಚಾರದಲ್ಲಿ ಕುಚೋದ್ಯನೇ, ಗಲಭೆ, ಪ್ರಚೋದನೆ ಸೃಷ್ಠಿಸಬಾರದು ಇದರಿಂದ ಶಾಂತಿ ಹದೆಗೆಡುತ್ತದೆ  ಎಂದು ಮಾಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಕೃಷ್ಣಮೂರ್ತಿ  ಎಚ್.ಎಂ.ಕೃಷ್ಣಮೂರ್ತಿಗೆ ತಿರುಗೇಟ್ ನೀಡಿದರು. 
ಪಟ್ಟಣದ ಕಾಂಗ್ರೆಸ್ ಭವನದಲ್ಲಿ ಗುರುವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಜನರ ಆರೋಗ್ಯ ದೃಷ್ಠಿಯಿಂದ 42 ಕೋಟಿರೂ ವೆಚ್ಚದಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಗುದ್ದಲ್ಲಿ ಪೂಜೆ ನೆರವೇರಿಸಲಾಗಿದೆ ಟೆಂಡರ್ ಪ್ರಕ್ರಿಯೆಯೂ ಆಗಿದ್ದು ಜಾಗವನ್ನು ಬಿಟ್ಟುಕೊಡಬೇಕಿದೆ ಆಸ್ಪತ್ರೆ ನಿರ್ಮಾಣದ ಜಾಗದಲ್ಲಿ  ಕೆಂಪೇಗೌಡ ಪ್ರತಿಮೆ ಇದ್ದು ಈ ಪ್ರತಿಮೆಯನ್ನು ತೆರವುಗೊಳಿಸದಂತೆ ಎಚ್.ಎಂ.ಕೃಷ್ಣಮೂರ್ತಿ ಹೈಕೋರ್ಟ್ ಮೊರೆಹೊಗಿದ್ದು ಪ್ರತಿಮೆ ಗೆ ಧಕ್ಕೆ ಆಗದಂತೆ ಸ್ಥಳಾಂತರಿಸಲು ಹೈಕೋರ್ಟ್ ಸೂಚಿಸಿದಂತೆ ಸ್ಥಳಾಂತರಿಸಲು ಮೆಟ್ಟಿಲು ತೆರವುಗೊಳಿಸುವುದಕ್ಕೆ ಇಲ್ಲಸಲ್ಲದ ಆರೋಪಮಾಡುವುದು ಸರಿಯಲ್ಲ, ಕಾನೂನಾತ್ಮಕವಾಗಿ ಮರಗಳನ್ನು ತೆರವುಗೊಳಿಸಿ ಎಂದು ಆದೇಶವಿದೆ ಒರೆತು ಸ್ಟೇ ನೀಡಿಲ್ಲ ಎಂದರು.
ಈಗಿರುವ ಪ್ರತಿಮೆಗೆ ಯಾವುದೇ ಧಕ್ಕೆ ಬಾರದಂತೆ ಪೂರ್ವಾಭಿಮುಖದಿಂದ  ಉತ್ತರಾಭಿ ಮುಖವಾಗಿ ಸ್ಥಾಪಿಸಲಾಗುವುದು ಎಂದರು. 
ಶ್ರೀಮಂತರು ನಗರ ಪ್ರದೇಶದ ಆಸ್ಪತ್ರೆಗೆ ಹೋಗುತ್ತಾರೆ ಶ್ರೀಸಾಮಾನ್ಯರು ಎಲ್ಲಿಗೆ ಹೋಗಲು ಸಾಧ್ಯ, ಶಾಸಕರು ಮನೆ ನಿರ್ಮಿಸುತ್ತಿಲ್ಲ ಆಸ್ಪತ್ರೆ ನಿರ್ಮಾಣಕ್ಕೆ ಮುಂದಾಗಿದ್ದಾರೆ ಆಸ್ಪತ್ರೆ ನಿರ್ಮಾಣವಾದ ನಂತರ ಶಾಸಕರ ಸಂಬಂಧಿಕರು ಚಿಕಿತ್ಸೆಪಡೆಯಲು ಬರುವುದಿಲ್ಲ ಆಸ್ಪತ್ರೆ ನಿರ್ಮಾಣಕ್ಕೆ ಸಹಕಾರ ನೀಡಲಿ ಅಡೆ,ತಡೆಹೊಡ್ಡುವುದು, ಜನರಿಗೆ ಧಿಕ್ಕು ತಪ್ಪಿಸುವ ಹೇಳಿಕೆ ನೀಡುವುದು  ಬೇಡ ಎಂದು  ಕೆಂಪೇಗೌಡ ಅಭಿವೃದ್ದಿ ಸಮಿತಿ ರಾಜ್ಯಾಧ್ಯಕ್ಷ ಎಚ್.ಎಂ.ಕೃಷ್ಣನಮೂರ್ತಿಗೆ ಮನವಿ ಮಾಡಿದರು.
ಡಾ.ಬಿ.ಆರ್.ಅಂಬೇಡ್ಕರ್ ಭವನ ಶಿಥಿಲವಾದ ಕಾರಣ ತರವುಗೊಳಿಸಿ ಹೊಸ ಭವನ ನಿರ್ಮಾಣಮಾಡಲಾಗುತ್ತಿದೆ. ಸರಕಾರಿ ಇಲಾಖೆಗಳನ್ನು ತೆರವುಗೊಳಿಸಿ ಶಾಸಕರ ಕಿಸೆಸೇರುತ್ತಿದೆ ಎಂದು ಆರೋಪಿಸುವುದು ಸರಿಯಲ್ಲ, 2018ರಲ್ಲಿ  ಕೋಟೆ ಜಾಗ ಕೆಶಿಫ್ ರಸ್ತೆಗೆ ಭೂಸ್ವಾಧಿನವಾಗಿದೆ ಈ ಹಣ ಸೋಮೇಶ್ವರ ದೇವಾಲಯದ  ಖಾತೆಗೆ 70  ಲಕ್ಷರೂ ಜಮೆಯಾಗಿದೆ ಆ ವೇಳೆ ಎಚ್.ಸಿ.ಬಾಲಕೃಷ್ಣ ಶಾಸಕರಾಗಿರಲಿಲ್ಲ  ಈ ಹಣ ಎಲ್ಲಿದೆ ಎಂದು ಖಚಿತಪಡಿಸಿಕೊಳ್ಳುವುದನ್ನು ಬಿಟ್ಟು ಶಾಸಕರ ವಿರುದ್ದ ಆರೋಪಮಾಡುವುದು ಸರಿಯಲ್ಲ ಎಂದು ಲೇವಡಿ ಮಾಡಿದರು.
ಆಸ್ಪತ್ರೆ ಕಾಮಗಾರಿ ಇನ್ನೂ ಆರಂಭಿಸಿಲ್ಲ ಈಗಿರುವಾಗ ಎರಡು ವರ್ಷದಲ್ಲಿ ಆಸ್ಪತ್ರೆ ಕಾಮಗಾರಿ ಪೂರ್ಣಗೊಳಿಸಿ ಎನ್ನುತ್ತಾರೆ ಅವರಿಗೆ ಕಳಕಳಿ ಇದ್ದರೆ ಕಾಮಗಾರಿ ನಡೆಯುವ ವೇಳೆ ವೀಕ್ಷಿಸಲಿ ಅದನ್ನು ಬಿಟ್ಟು ಬಿಟ್ಟು ಇಲ್ಲಸಲ್ಲದ ಆರೋಪಮಾಡುವುದು ಎಷ್ಟು ಸರಿ.  ಅಭಿವೃದ್ದಿ ವಿಚಾರದಲ್ಲಿ ಚರ್ಚೆಗೆ ಬರಲಿ ಚರ್ಚೆಗೆ  ನಾವು ಸಿದ್ದರಿದ್ದೇವೆ  ದಿನಾಂಕ, ಸ್ಥಳ, ಸಮಯ ನಿಗಧಿಪಡಿಸಿ ಎಂದು ಸವಾಲು ಹಾಕಿದರು. 
ಪುರಸಭಾ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಶಿವಕುಮಾರು ಮಾತನಾಡಿ, ಎಚ್.ಎಂ.ಕೃಷ್ಣಮೂರ್ತಿ ಅಭಿವೃದ್ದಿ ವಿಚಾರದಲ್ಲಿ ಚರ್ಚಿಸಲಿ ಅದನ್ನು ಬಿಟ್ಟು  ಶಾಸಕರ ಬಗ್ಗೆ ಅಗುರವಾಗಿ, ಏಕವಚನದಲ್ಲಿ ಮಾತನಾಡಿದರೆ ತಕ್ಕಪಾಠ ಕಲಿಸಲಾಗುವುದು, ಅಭಿವೃದ್ದಿಗೆ ಸಹಕಾರ ನೀಡಲಿ ಆಸ್ಪತ್ರೆ ನಿರ್ಮಾಣಕ್ಕೆ ಸಹಕಾರ ನೀಡದೆ ಆಸ್ಪತ್ರೆ ನಿರ್ಮಾಣಕ್ಕೆ ವಿರೊಧಿಸುವುದು ಸರಿಯಲ್ಲ ಇದು ಸಾರ್ವಜನಿಕರ ಸ್ವತ್ತು. ಕಾನೂನಾತ್ಮಕವಾಗಿಯೇ ಆಸ್ಪತ್ರೆ ನಿರ್ಮಾಣಕ್ಕೆ ಶಾಸಕರು ಮುಂದಾಗಿದ್ದಾರೆ ಜೇಡ್ರಹಳ್ಳಿ ಕೃಷ್ಣಪ್ಪ, ಮರೂರು ಸಾಗರ್ ಗೌಡ ಮಾಗಡಿ  ಸರಕಾರಿ ಆಸ್ಪತ್ರೆಯಲ್ಲಿ ಎಷ್ಟು ದಿನ ಚಿಕಿತ್ಸೆ ಪಡೆದಿದ್ದಾರೆ ತಿಳಿಸಲಿ  ಆಸ್ಪತ್ರೆ ನಿರ್ಮಾಣದ ವಿಚಾರದಲ್ಲಿ ಮಾತನಾಡಲು ಇವರಿಗೆ ಹಕ್ಕಿಲ್ಲ ಎಂದು ಲೇವಡಿ ಮಾಡಿದರು.
ಕುದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ್ ಮಾತನಾಡಿ, ಕೆಂಪೇಗೌಡರ ಬಗ್ಗೆ ಎಲ್ಲರಿಗೂ ಅಭಿಮಾನ, ಗೌರವವಿದೆ ಅದರಂತೆ ಆಸ್ಪತ್ರೆಯೂ ಪ್ರಮುಖವಾಗಿದೆ ಯಾವುದೇ ಧಕ್ಕೆ ಬಾರದಂತೆ ಪ್ರತಿಮೆ ಸ್ಥಳಾಂತರಿಸಲಾಗುತ್ತಿದೆ, ಆಸ್ಪತ್ರೆ ನಿರ್ಮಾಣಕ್ಕೆ ಯಾರು ಅಡ್ಡಿಪಡಿಸಬಾರದು. 100 ಕೋಟಿರೂ ವೆಚ್ಚದಲ್ಲಿ ಕೋಟೆ ಅಭಿವೃದ್ದಿಪಡಿಸಿ ಮಧ್ಯದಲ್ಲಿ ಕೆಂಪೇಗೌಡರ ಪ್ರತಿಮೆ ನಿರ್ಮಾಣದ ಉದ್ದೇಶವಿದೆ, ರಾಮನಗರದಲ್ಲಿ  ರಾಜೀವ್ ಗಾಂಧಿ ಆರೋಗ್ಯ ಯೂನಿವರ್ ಸಿಟಿ ಆಗುತ್ತಿರುವುದರಿಂದ ಮಾಗಡಿಯಲ್ಲಿ ಸುಸರ್ಜಿತ ಆಸ್ಪತ್ರೆ ನಿರ್ಮಾಣವಾಗುವುದರಿಂದ ನುರಿತ ವೈದ್ಯರು ಬರಲಿದ್ದಾರೆ ಇದರಿಂದ ಬಡವರಿಗೆ ಉತ್ತಮ ಆರೋಗ್ಯ ಸೇವೆ ಸಲ್ಲಿಸಬಹುದು ಅಭಿವೃದ್ದಿಗೆ ಕಾಲು ಏಳೆಯದೆ ಕೈಜೋಡಿಸಿ ಎಂದು ಮನವಿ ಮಾಡಿದರು.
ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆಗ್ರೋಪುರುಷೋತ್ತಮ್, ಗ್ಯಾರಂಟಿ ಯೋಜನೆ ಅಧ್ಯಕ್ಷ ಕಲ್ಕೆರೆ ಶಿವಣ್ಣ, ಪುರಸಭೆ ಮಾಜಿ ಅಧ್ಯಕ್ಷ ರಂಗಹನುಮಯ್ಯ, ಮಾಜಿ ಸದಸ್ಯರಾದ ರೂಪೇಶ್, ಆಶ್ವಥ್, ಟಿಎಪಿಸಿಎಂಎಸ್ ನಿರ್ದೆಶಕ ರಮೇಶ್, ದೊಡ್ಡಿ ಲೋಕೇಶ್, ತಿರುಮಲೆ ವೆಂಕಟೇಶ್ ಇದ್ದರು.
    user_Siddalinga siddalinga
    Siddalinga siddalinga
    ಮಾಗಡಿ, ರಾಮನಗರ, ಕರ್ನಾಟಕ•
    14 hrs ago
  • Post by Nitin 9071795156 press reporte
    2
    Post by Nitin 9071795156 press reporte
    user_Nitin 9071795156 press reporte
    Nitin 9071795156 press reporte
    Press advisory ಕಳಘಟಗಿ, ಧಾರವಾಡ, ಕರ್ನಾಟಕ•
    19 hrs ago
  • ಬಂಡಾಯ ಅಭ್ಯರ್ಥಿಗಳಿಗೆ ಪಠಾಣ್ ಶಾಕ್? ಸಮರ್ಥ್ ಶಾಮನೂರು ಗೆಲುವು ಫಿಕ್ಸ್? | Yasir Khan Pathan Speech in DavanagereKeywords (ಟ್ಯಾಗ್‌ಗಳು / ಕೀವರ್ಡ್‌ಗಳು) ಈ ಕೀವರ್ಡ್‌ಗಳನ್ನು ನಿಮ್ಮ ವೀಡಿಯೋ ಡಿಸ್ಕ್ರಿಪ್ಶನ್ ಮತ್ತು ಟ್ಯಾಗ್ ಸೆಕ್ಷನ್‌ನಲ್ಲಿ ಬಳಸಿ: ಪ್ರಮುಖ ವ್ಯಕ್ತಿಗಳು: Yasir Khan Pathan, Samarth Shamanur, Shamanur Shivashankarapur, SS Mallikarjun, Basavaraj Bommai. ಸ್ಥಳ ಮತ್ತು ಚುನಾವಣೆ: Davanagere South Byelection 2026, Davanagere Politics, Karnataka Byelection 2026, ದಾವಣಗೆರೆ ಉಪಚುನಾವಣೆ. ಪಕ್ಷಗಳು: Congress Campaign Davanagere, INC Karnataka, BJP vs Congress Davanagere. ವಿಷಯಗಳು: Yasir Pathan Speech, Muslim Votes in Davanagere, Samarth Shamanur Campaign, ಬಂಡಾಯ ಅಭ್ಯರ್ಥಿಗಳ ಮನವೊಲಿಕೆ. Video Description (ಸಣ್ಣ ವಿವರಣೆ) "ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಣ ರಂಗೇರಿದೆ. ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಮಲ್ಲಿಕಾರ್ಜುನ್ ಪರವಾಗಿ ಶಿಗ್ಗಾಂವಿ ಶಾಸಕ ಯಾಸೀರ್ ಖಾನ್ ಪಠಾಣ್ ಅವರು ಭರ್ಜರಿ ಪ್ರಚಾರ ನಡೆಸಿದ್ದಾರೆ. ಬಂಡಾಯ ಅಭ್ಯರ್ಥಿಗಳ ಮನವೊಲಿಕೆ ಮತ್ತು ಅಲ್ಪಸಂಖ್ಯಾತ ಮತಗಳ ಕ್ರೋಡೀಕರಣದ ಬಗ್ಗೆ ಅವರು ನೀಡಿದ ರೋಚಕ ಹೇಳಿಕೆಗಳು ಇಲ್ಲಿವೆ." Hashtags: #DavanagereByelection #YasirKhanPathan #SamarthShamanur #CongressKarnataka #DavanagerePolitics #KarnatakaNews #ByElection2026
    2
    ಬಂಡಾಯ ಅಭ್ಯರ್ಥಿಗಳಿಗೆ ಪಠಾಣ್ ಶಾಕ್? ಸಮರ್ಥ್ ಶಾಮನೂರು ಗೆಲುವು ಫಿಕ್ಸ್? | Yasir Khan Pathan Speech in DavanagereKeywords (ಟ್ಯಾಗ್‌ಗಳು / ಕೀವರ್ಡ್‌ಗಳು)
ಈ ಕೀವರ್ಡ್‌ಗಳನ್ನು ನಿಮ್ಮ ವೀಡಿಯೋ ಡಿಸ್ಕ್ರಿಪ್ಶನ್ ಮತ್ತು ಟ್ಯಾಗ್ ಸೆಕ್ಷನ್‌ನಲ್ಲಿ ಬಳಸಿ:
ಪ್ರಮುಖ ವ್ಯಕ್ತಿಗಳು: Yasir Khan Pathan, Samarth Shamanur, Shamanur Shivashankarapur, SS Mallikarjun, Basavaraj Bommai.
ಸ್ಥಳ ಮತ್ತು ಚುನಾವಣೆ: Davanagere South Byelection 2026, Davanagere Politics, Karnataka Byelection 2026, ದಾವಣಗೆರೆ ಉಪಚುನಾವಣೆ.
ಪಕ್ಷಗಳು: Congress Campaign Davanagere, INC Karnataka, BJP vs Congress Davanagere.
ವಿಷಯಗಳು: Yasir Pathan Speech, Muslim Votes in Davanagere, Samarth Shamanur Campaign, ಬಂಡಾಯ ಅಭ್ಯರ್ಥಿಗಳ ಮನವೊಲಿಕೆ.
Video Description (ಸಣ್ಣ ವಿವರಣೆ)
"ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಣ ರಂಗೇರಿದೆ. ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಮಲ್ಲಿಕಾರ್ಜುನ್ ಪರವಾಗಿ ಶಿಗ್ಗಾಂವಿ ಶಾಸಕ ಯಾಸೀರ್ ಖಾನ್ ಪಠಾಣ್ ಅವರು ಭರ್ಜರಿ ಪ್ರಚಾರ ನಡೆಸಿದ್ದಾರೆ. ಬಂಡಾಯ ಅಭ್ಯರ್ಥಿಗಳ ಮನವೊಲಿಕೆ ಮತ್ತು ಅಲ್ಪಸಂಖ್ಯಾತ ಮತಗಳ ಕ್ರೋಡೀಕರಣದ ಬಗ್ಗೆ ಅವರು ನೀಡಿದ ರೋಚಕ ಹೇಳಿಕೆಗಳು ಇಲ್ಲಿವೆ."
Hashtags:
#DavanagereByelection #YasirKhanPathan #SamarthShamanur #CongressKarnataka #DavanagerePolitics #KarnatakaNews #ByElection2026
    user_Yusuf Bepari
    Yusuf Bepari
    Local News Reporter ಹುಬ್ಬಳ್ಳಿ, ಧಾರವಾಡ, ಕರ್ನಾಟಕ•
    2 hrs ago
  • ವರ್ಷದ ಹಿಂದೆ ಬಡಗನ್ನೂರು ಗ್ರಾಮದಲ್ಲಿ ಅಪ್ರಾಪ್ತ ಬಾಲಕನಿಗೆ ಹಲ್ಲೆ ನಡೆಸಿದ ಆರೋಪಿತ ತಪ್ಪಿತಸ್ಥನೆಂದು ಪುತ್ತೂರು ನ್ಯಾಯಾಲಯ ಆದೇಶಿಸಿದೆ. 2025ರ ಜೂ.2ರಂದು ಬಡಗನ್ನೂರು ಗ್ರಾಮದ 15 ವರ್ಷ ಪ್ರಾಯದ ಅಪ್ರಾಪ್ತ ಬಾಲಕನಿಗೆ ಕೈಯಿಂದ ಕೆನ್ನೆಗೆ, ಕುತ್ತಿಗೆಗೆ ಹೊಡೆದು ಅವಾಚ್ಯ ಶಬ್ದದಿಂದ ನಿಂದಿಸಿ, ಜೀವ ಬೆದರಿಕೆಯೊಡ್ಡಿರುವ ಆರೋಪದಲ್ಲಿ ಅಬ್ದುಲ್ ರವೂಫ್ (25ವ.)ಎಂಬಾತನ ವಿರುದ್ಧ ಬಾಲರ್ಕ ತಾಯಿ ರಮ್ಲ ಎಂಬವರು ದೂರು ನೀಡಿದ್ದರು.
    1
    ವರ್ಷದ ಹಿಂದೆ ಬಡಗನ್ನೂರು ಗ್ರಾಮದಲ್ಲಿ ಅಪ್ರಾಪ್ತ ಬಾಲಕನಿಗೆ ಹಲ್ಲೆ ನಡೆಸಿದ ಆರೋಪಿತ ತಪ್ಪಿತಸ್ಥನೆಂದು ಪುತ್ತೂರು ನ್ಯಾಯಾಲಯ ಆದೇಶಿಸಿದೆ.
2025ರ ಜೂ.2ರಂದು ಬಡಗನ್ನೂರು ಗ್ರಾಮದ 15 ವರ್ಷ ಪ್ರಾಯದ ಅಪ್ರಾಪ್ತ ಬಾಲಕನಿಗೆ ಕೈಯಿಂದ ಕೆನ್ನೆಗೆ, ಕುತ್ತಿಗೆಗೆ ಹೊಡೆದು ಅವಾಚ್ಯ ಶಬ್ದದಿಂದ ನಿಂದಿಸಿ, ಜೀವ ಬೆದರಿಕೆಯೊಡ್ಡಿರುವ ಆರೋಪದಲ್ಲಿ ಅಬ್ದುಲ್ ರವೂಫ್ (25ವ.)ಎಂಬಾತನ ವಿರುದ್ಧ ಬಾಲರ್ಕ ತಾಯಿ ರಮ್ಲ ಎಂಬವರು ದೂರು ನೀಡಿದ್ದರು.
    user_Shamsheer Budoli
    Shamsheer Budoli
    Local News Reporter ಮಂಗಳೂರು, ದಕ್ಷಿಣ ಕನ್ನಡ, ಕರ್ನಾಟಕ•
    14 hrs ago
  • ಮಳವಳ್ಳಿ:ಮಾತೃಶ್ರೀ ಅಮ್ಮನವರು ಜ್ಞಾನವಿಕಾಸ ಯೋಜನೆಯ ಮೂಲಕ ಲಕ್ಷಾಂತರ ಬಡಮಹಿಳೆಯರಿಗೆ ನೆರವು-ಯೋಜನಾಧಿಕಾರಿ ಲೋಕೇಶ್ ಹೇಳಿಕೆ • ಮಾತೃಶ್ರೀ ಅಮ್ಮನವರ ಹುಟ್ಟುಹಬ್ಬ –ಜಿಲ್ಲೆಯ ೫೨೭ ಪಲಾನುಭವಿಗಳಿಗೆ ಹಣ್ಣು-ಹಂಪಲ ವಿತರಣೆ- ಎಂ.ಶಿವಕುಮಾರ್ ಹೇಳಿಕೆ ಮಳವಳ್ಳಿ:ಜ್ಞಾನ ವಿಕಾಸ ಯೋಜನೆಯ ಮೂಲಕ ರಾಜ್ಯದ ಲಕ್ಷಾಂತರ ಬಡ ನಿರ್ಗತಿಕ ಮಹಿಳೆಯರಿಗೆ ಜೀವನ ರೂಪಿಸಿದ ಶ್ರೀ ಕ್ಷೇತ್ರ ದರ್ಮಸ್ಥಳದ ಮಾತೃಶ್ರೀ ಅಮ್ಮನವರ ಜೀವನ , ಸೇವೆ,ಕೊಡುಗೆ,ಯೋಜನೆಗಳು ದಾರಿದೀಪವಾಗಿವೆ ಎಂದು ಯೋಜನಾಧಿಕಾರಿ ಲೋಕೇಶ್ ಹೇಳಿದರು. ಪಟ್ಟಣದ ಎನ್‌ಇ.ಎಸ್.ಬಡಾವಣೆಯಲ್ಲಿ ಶ್ರೀ ಕ್ಷೇತ್ರ ದರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆವತಿಯಿಂದ ಮಾತೃಶ್ರೀ ಅಮ್ಮನವರ ಜನ್ಮ ದಿನದ ಅಂಗವಾಗಿ ಅಯೋಜಿಸಿದ್ದ ಮಾಶಾಸನ ಪಲಾನುಭವಿಗಳಿಗೆ ಹಣ್ಣು-ಹಂಪಲ ವಿತರಣೆ ಕಾರ್ಯಕ್ರಮದಲ್ಲಿ ಬಾಗವಹಿಸಿ ಮಾತನಾಡಿದ ಅವರು ಮಾತೃಶ್ರೀ ಅಮ್ಮನವರು ಜ್ಞಾನ ವಿಕಾಸ ಯೋಜನೆಯಡಿಯಲ್ಲಿ ಸುಮಾರು ೩೦ ಕಾರ್ಯಕ್ರಮಗಳ ಮೂಲಕ ಬಡ,ನಿರ್ಗತಿಕ ಮಹಿಳಾ ಸಮುದಾಯಕ್ಕೆ ನೆರವಾಗುವಂತಹ ಸೌಲಭ್ಯಗಳನ್ನು ಅವರ ಮನೆ ಬಾಗಿಲಿಗೆ ನೀಡುತ್ತಿದ್ದಾರೆಂದರು. ಬಾಕ್ಸ್ ಸುದ್ದಿ: ಜ್ಞಾನವಿಕಾಸ ಯೋಜನೆಗಳ ಅನುಷ್ಠಾನ: ರಾಜ್ಯದಾದ್ಯಂತ ಜ್ಞಾನವಿಕಾಸ ಯೋಜನೆಯಡಿಯಲ್ಲಿ ಮಾತೃಶ್ರೀ ಅಮ್ಮನವರು ಮಹಿಳಾ ಸಬಲೀಕರಣಕ್ಕಾಗಿ ಜ್ವಲಂತ ವಿಷಯಗಳ ಮಾಹಿತಿ ಸಂಗ್ರಹಣೆ,ನಾನು ಓದಿದ ಪುಸ್ತಕಗಳ ವಿಮರ್ಶೆ,ಸರಕಾರಿ ಯೋಜನೆಗಳು,ಶಿಕ್ಷಣ,ಆರೋಗ್ಯ ಮತ್ತು ನೈರ್ಮಲ್ಯ ಕಾರ್ಯಕ್ರಮ,ನಹಿಳೆಯರ ಹಕ್ಕ ಮತ್ತು ಕಾನೂನು ,ಪೌಷ್ಠಿಕ ಅಹಾರ ಅರಿವು ಕಾರ್ಯಕ್ರಮ,ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ,ಮಹಿಳಾ ಕೇಂದ್ರಗಳ ವಾರ್ಷಿಕೋತ್ಸವ,ಮಹಿಳೆಯರಿಗೆ ಅರಿವು ಮೂಡಿಸುವ ಚಲನಚಿತ್ರ ಕಾರ್ಯಕ್ರಮ,ಮಹಿಳೆಯರಿಗಾಗಿ ಆದ್ಯಯನ ಪ್ರವಾಸ,ಸಾರ್ವಜನಿಕರಿಗೆ ಅರಿವು ಮೂಡಿಸಲು ಬೀದಿ ನಾಟಕ ಅಯೋಜನೆ,ಸೃಜನ ಶೀಲ ಕಾರ್ಯಕ್ರಮ,ಮಕ್ಕಳಿಗೆ ಟ್ಯೂಷನ್ ಕ್ಲಾಸ್,ಮಹಿಳೆಯರಿಗೆ ಹೊಲಿಗೆ ತರಬೇತಿ,ಸ್ವುದ್ಯೋಗ ಪ್ರೇರಣಾ ಶಿಬಿರ,ಜ್ಞಾನ ವಿಕಾಸ ಯುಟ್ಯೂಬ್ ಅಭಿಯಾನ,ಅಜ್ಜಿ ಕೈತುತ್ತು, ಕಾರ್ಯಕ್ರಮ,ಕ್ಷೇತ್ರ ಅದ್ಯಯನ ಪ್ರವಾಸ,ವಿಶೇಷ ದಿನಗಳ ಆಚರಣೆ,ಆರೋಗ್ಯ ತಪಾಸಣೆ ಶಿಬಿರ,ಮೆನ್ಸೆ÷್ಟöÊಲ್ ಕಪ್ ಅಭಿಯಾನ,ವಾತ್ಸಲ್ಯ ಮಾಹಿತಿ ಕಾರ್ಯಕ್ರಮ,ಗೆಳತಿ ಮಾಹಿತಿ ಕಾರ್ಯಕ್ರಮ,ವಾತ್ಸಲ್ಯ ಪಲಾನುಭವಿಗಳಿಗೆ ವಾತ್ಸಲ್ಯ ಮನೆ ರಚನೆ,ವಾತ್ಸಲ್ಯ ಪಲಾನುಭವಿಗಳಿಗೆ ಶೌಚಾಲಯ ರಚನೆ,ವಾತ್ಸಲ್ಯ ಪಾತ್ರೆ ಹಾಗೂ ಬಟ್ಟೆಕಿಟ್ ವಿತರಣೆ ಕಾರ್ಯಕ್ರಮ,ವಾತ್ಸಲ್ಯ ಫುಡ್ ಮಿಕ್ಸ್ ಕಾರ್ಯಕ್ರಮ,ವಾತ್ಸಲ್ಯ ಪಲಾನುಭವಿಗಳಿಗೆ ಪ್ರತಿ ತಿಂಗಳು ಮಾಶಾಸನ ವಿತರಣೆ,ಜನಮಂಗಳ ಪರಿಕರ ವಿತರಣೆ ಸೇರಿದಮತೆ ಮಾತೃಸ್ರೀ ಅಮ್ಮನವರು ಸುಮಾರು ೩೦ ಕ್ಕೂ ಹೆಚ್ಚು ಕಾರ್ಯಕ್ರಮಗಳ ಮೂಲಕ ರಾಜ್ಯದ ಲಕ್ಷಾಂತರ ಬಡ ನಿರ್ಗತಿಕೆ ಮಹಿಳೆಯರಿಗೆ ಅಸರಯಾಗಿದ್ದಾರೆಂದರು. ಕಾರ್ಯಕ್ರಮದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಎಂ.ಶಿವಕುಮಾರ ಪಲಾನುಭವಿಗಳಿಗೆ ಹಣ್ಣು-ಹಂಪಲ ವಿತರಿಸಿ ಮಾತನಾಡಿ ಮಾತೃಸ್ರೀ ಅಮ್ಮನವರ ಹುಟ್ಟು ಹಬ್ಬವನ್ನು ರಾಜ್ಯದಾದ್ಯಂತ ಅಚರಣೆ ಮಾಡುತ್ತಿದ್ದು ಅದರಲ್ಲೂ ಮಂಡ್ಯ ಜಿಲ್ಲೆಯ ಮಳವಳ್ಳಿ,ಮಂಡ್ಯ,ನಾಗಮAಗಲ,ಮದ್ದೂರು,ಹೊಸಹಳ್ಳಿ,ಭಾರತಿನಗರ ಸೇರಿದಂತೆ ೬ ವಲಯ ವ್ಯಾಪ್ತಿಯಲ್ಲಿ ಒಟ್ಟು ೫೨೭ ಮಾಶಾಸನ ಪಲಾನುಭವಿಗಳಿಗೆ ಅಭಿಮಾನಿಗಳು,ಸೇವಾ ಕಾರ್ಯಕರ್ತರು ವಿತರಣೆ ಮಾಡುತ್ತಿದ್ದಾರೆ. ಮಾತೃಶ್ರೀ ಅಮ್ಮನವರ ಜನ್ಮ ದಿನ ಆಚರಣೆ ಮಾಡುತ್ತಿರುವುದು ನಮ್ಮೆಲ್ಲರ ಪುಣ್ಯವಾಗಿದೆ,ಪೂಜ್ಯ ಖಾವಂದರ ದಿವ್ಯಶಕ್ತಿಯಾಗಿ ಶ್ರೀ ಕ್ಷೇತ್ರ ದರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮೂಲಕ ಜ್ಞಾನ ವಿಕಾಸ ಯೋಜನೆಗಳನ್ನು ಅನುಷ್ಟಾಗೊಳಿಸುವ ಮೂಲಕ ಸಮಾಜದ ಕಟ್ಟ ಕಡೆಯ ನಿರ್ಗತಿಕ ಮಹಿಳೆಯರಿಗೆ ಅಸರೆಯಾಗಿ ಸಾಮಾಜಿಕ ನ್ಯಾಯ ಒದಗಿಸುವಲ್ಲಿ ಕೆಲಸ ಮಾಡುತ್ತಿರುವುದು ಮಾದರಿಎ ಂದರು. ಕಾರ್ಯಕ್ರಮದಲ್ಲಿ ಕೃಷಿ ಅಧಿಕಾರಿ ಶೈಲ,ಮೇಲ್ವಿಚಾರಕಿ ಪ್ರಮೀಳ,ಸೇವಾ ಪ್ರತಿನಿಧಿ ರುಕ್ಮಿಣಿ ಸೇರಿದಂತೆ ಮಾಶಾಸನ ಪಲಾನುಭವಿಗಳು ಸ್ಥಳಿಯ ಮುಖಂಡರು,ಸ್ವಸಹಾಯ ಸಂಘದ ಮಹಿಳಾ ಸದಸ್ಯರು ಉಪಸ್ಥಿತರಿದ್ದರು. ಚಿತ್ರ-೨ ಎಂ ಎಲ್ ವಿ೧ ಮಳವಳ್ಳಿ ಪಟ್ಟಣದಲ್ಲಿ ಮಾತೃಶ್ರೀ ಅಮ್ಮನವರ ಹುಟ್ಟುಹಬ್ಬದ ಅಂಗವಾಗಿ ಮಾಶಾಸನ ಪಲಾನುಭವಿಗೆ ಯೋಜನಾಧಿಕಾರಿ ಲೋಕೆಶ್ ಮತ್ತು ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಎಂ.ಶಿವಕುಮಾರ್ ಹಣ್ಣು ಹಂಪಲ ವಿತರಿಸಿದರು
    1
    ಮಳವಳ್ಳಿ:ಮಾತೃಶ್ರೀ ಅಮ್ಮನವರು ಜ್ಞಾನವಿಕಾಸ ಯೋಜನೆಯ ಮೂಲಕ ಲಕ್ಷಾಂತರ ಬಡಮಹಿಳೆಯರಿಗೆ ನೆರವು-ಯೋಜನಾಧಿಕಾರಿ ಲೋಕೇಶ್ ಹೇಳಿಕೆ
•	 ಮಾತೃಶ್ರೀ ಅಮ್ಮನವರ ಹುಟ್ಟುಹಬ್ಬ –ಜಿಲ್ಲೆಯ ೫೨೭ ಪಲಾನುಭವಿಗಳಿಗೆ ಹಣ್ಣು-ಹಂಪಲ ವಿತರಣೆ- ಎಂ.ಶಿವಕುಮಾರ್ ಹೇಳಿಕೆ
ಮಳವಳ್ಳಿ:ಜ್ಞಾನ ವಿಕಾಸ ಯೋಜನೆಯ ಮೂಲಕ ರಾಜ್ಯದ ಲಕ್ಷಾಂತರ ಬಡ ನಿರ್ಗತಿಕ ಮಹಿಳೆಯರಿಗೆ ಜೀವನ ರೂಪಿಸಿದ ಶ್ರೀ ಕ್ಷೇತ್ರ ದರ್ಮಸ್ಥಳದ ಮಾತೃಶ್ರೀ ಅಮ್ಮನವರ ಜೀವನ , ಸೇವೆ,ಕೊಡುಗೆ,ಯೋಜನೆಗಳು ದಾರಿದೀಪವಾಗಿವೆ ಎಂದು ಯೋಜನಾಧಿಕಾರಿ ಲೋಕೇಶ್ ಹೇಳಿದರು.
ಪಟ್ಟಣದ ಎನ್‌ಇ.ಎಸ್.ಬಡಾವಣೆಯಲ್ಲಿ ಶ್ರೀ ಕ್ಷೇತ್ರ ದರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆವತಿಯಿಂದ ಮಾತೃಶ್ರೀ ಅಮ್ಮನವರ ಜನ್ಮ ದಿನದ ಅಂಗವಾಗಿ ಅಯೋಜಿಸಿದ್ದ  ಮಾಶಾಸನ ಪಲಾನುಭವಿಗಳಿಗೆ ಹಣ್ಣು-ಹಂಪಲ ವಿತರಣೆ ಕಾರ್ಯಕ್ರಮದಲ್ಲಿ ಬಾಗವಹಿಸಿ ಮಾತನಾಡಿದ ಅವರು ಮಾತೃಶ್ರೀ ಅಮ್ಮನವರು ಜ್ಞಾನ ವಿಕಾಸ ಯೋಜನೆಯಡಿಯಲ್ಲಿ ಸುಮಾರು ೩೦ ಕಾರ್ಯಕ್ರಮಗಳ ಮೂಲಕ ಬಡ,ನಿರ್ಗತಿಕ ಮಹಿಳಾ ಸಮುದಾಯಕ್ಕೆ ನೆರವಾಗುವಂತಹ ಸೌಲಭ್ಯಗಳನ್ನು  ಅವರ ಮನೆ ಬಾಗಿಲಿಗೆ ನೀಡುತ್ತಿದ್ದಾರೆಂದರು.
ಬಾಕ್ಸ್ ಸುದ್ದಿ:
ಜ್ಞಾನವಿಕಾಸ ಯೋಜನೆಗಳ ಅನುಷ್ಠಾನ: 
ರಾಜ್ಯದಾದ್ಯಂತ ಜ್ಞಾನವಿಕಾಸ ಯೋಜನೆಯಡಿಯಲ್ಲಿ ಮಾತೃಶ್ರೀ ಅಮ್ಮನವರು ಮಹಿಳಾ ಸಬಲೀಕರಣಕ್ಕಾಗಿ  ಜ್ವಲಂತ ವಿಷಯಗಳ ಮಾಹಿತಿ ಸಂಗ್ರಹಣೆ,ನಾನು ಓದಿದ ಪುಸ್ತಕಗಳ ವಿಮರ್ಶೆ,ಸರಕಾರಿ ಯೋಜನೆಗಳು,ಶಿಕ್ಷಣ,ಆರೋಗ್ಯ ಮತ್ತು ನೈರ್ಮಲ್ಯ ಕಾರ್ಯಕ್ರಮ,ನಹಿಳೆಯರ ಹಕ್ಕ ಮತ್ತು ಕಾನೂನು ,ಪೌಷ್ಠಿಕ ಅಹಾರ ಅರಿವು ಕಾರ್ಯಕ್ರಮ,ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ,ಮಹಿಳಾ ಕೇಂದ್ರಗಳ ವಾರ್ಷಿಕೋತ್ಸವ,ಮಹಿಳೆಯರಿಗೆ ಅರಿವು ಮೂಡಿಸುವ ಚಲನಚಿತ್ರ ಕಾರ್ಯಕ್ರಮ,ಮಹಿಳೆಯರಿಗಾಗಿ ಆದ್ಯಯನ ಪ್ರವಾಸ,ಸಾರ್ವಜನಿಕರಿಗೆ ಅರಿವು ಮೂಡಿಸಲು ಬೀದಿ ನಾಟಕ ಅಯೋಜನೆ,ಸೃಜನ ಶೀಲ ಕಾರ್ಯಕ್ರಮ,ಮಕ್ಕಳಿಗೆ ಟ್ಯೂಷನ್ ಕ್ಲಾಸ್,ಮಹಿಳೆಯರಿಗೆ ಹೊಲಿಗೆ ತರಬೇತಿ,ಸ್ವುದ್ಯೋಗ ಪ್ರೇರಣಾ ಶಿಬಿರ,ಜ್ಞಾನ ವಿಕಾಸ ಯುಟ್ಯೂಬ್ ಅಭಿಯಾನ,ಅಜ್ಜಿ ಕೈತುತ್ತು, ಕಾರ್ಯಕ್ರಮ,ಕ್ಷೇತ್ರ ಅದ್ಯಯನ ಪ್ರವಾಸ,ವಿಶೇಷ ದಿನಗಳ ಆಚರಣೆ,ಆರೋಗ್ಯ ತಪಾಸಣೆ ಶಿಬಿರ,ಮೆನ್ಸೆ÷್ಟöÊಲ್ ಕಪ್ ಅಭಿಯಾನ,ವಾತ್ಸಲ್ಯ ಮಾಹಿತಿ ಕಾರ್ಯಕ್ರಮ,ಗೆಳತಿ ಮಾಹಿತಿ ಕಾರ್ಯಕ್ರಮ,ವಾತ್ಸಲ್ಯ ಪಲಾನುಭವಿಗಳಿಗೆ ವಾತ್ಸಲ್ಯ ಮನೆ ರಚನೆ,ವಾತ್ಸಲ್ಯ ಪಲಾನುಭವಿಗಳಿಗೆ ಶೌಚಾಲಯ ರಚನೆ,ವಾತ್ಸಲ್ಯ ಪಾತ್ರೆ ಹಾಗೂ ಬಟ್ಟೆಕಿಟ್ ವಿತರಣೆ ಕಾರ್ಯಕ್ರಮ,ವಾತ್ಸಲ್ಯ ಫುಡ್ ಮಿಕ್ಸ್ ಕಾರ್ಯಕ್ರಮ,ವಾತ್ಸಲ್ಯ ಪಲಾನುಭವಿಗಳಿಗೆ ಪ್ರತಿ ತಿಂಗಳು ಮಾಶಾಸನ ವಿತರಣೆ,ಜನಮಂಗಳ ಪರಿಕರ ವಿತರಣೆ ಸೇರಿದಮತೆ ಮಾತೃಸ್ರೀ ಅಮ್ಮನವರು ಸುಮಾರು ೩೦ ಕ್ಕೂ ಹೆಚ್ಚು ಕಾರ್ಯಕ್ರಮಗಳ ಮೂಲಕ ರಾಜ್ಯದ ಲಕ್ಷಾಂತರ ಬಡ ನಿರ್ಗತಿಕೆ ಮಹಿಳೆಯರಿಗೆ ಅಸರಯಾಗಿದ್ದಾರೆಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಎಂ.ಶಿವಕುಮಾರ ಪಲಾನುಭವಿಗಳಿಗೆ ಹಣ್ಣು-ಹಂಪಲ ವಿತರಿಸಿ ಮಾತನಾಡಿ ಮಾತೃಸ್ರೀ ಅಮ್ಮನವರ ಹುಟ್ಟು ಹಬ್ಬವನ್ನು ರಾಜ್ಯದಾದ್ಯಂತ ಅಚರಣೆ ಮಾಡುತ್ತಿದ್ದು ಅದರಲ್ಲೂ ಮಂಡ್ಯ ಜಿಲ್ಲೆಯ  ಮಳವಳ್ಳಿ,ಮಂಡ್ಯ,ನಾಗಮAಗಲ,ಮದ್ದೂರು,ಹೊಸಹಳ್ಳಿ,ಭಾರತಿನಗರ ಸೇರಿದಂತೆ  ೬ ವಲಯ ವ್ಯಾಪ್ತಿಯಲ್ಲಿ ಒಟ್ಟು ೫೨೭ ಮಾಶಾಸನ ಪಲಾನುಭವಿಗಳಿಗೆ ಅಭಿಮಾನಿಗಳು,ಸೇವಾ ಕಾರ್ಯಕರ್ತರು ವಿತರಣೆ ಮಾಡುತ್ತಿದ್ದಾರೆ. ಮಾತೃಶ್ರೀ ಅಮ್ಮನವರ ಜನ್ಮ ದಿನ ಆಚರಣೆ ಮಾಡುತ್ತಿರುವುದು ನಮ್ಮೆಲ್ಲರ ಪುಣ್ಯವಾಗಿದೆ,ಪೂಜ್ಯ ಖಾವಂದರ ದಿವ್ಯಶಕ್ತಿಯಾಗಿ ಶ್ರೀ ಕ್ಷೇತ್ರ ದರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮೂಲಕ ಜ್ಞಾನ ವಿಕಾಸ ಯೋಜನೆಗಳನ್ನು ಅನುಷ್ಟಾಗೊಳಿಸುವ ಮೂಲಕ ಸಮಾಜದ ಕಟ್ಟ ಕಡೆಯ ನಿರ್ಗತಿಕ ಮಹಿಳೆಯರಿಗೆ ಅಸರೆಯಾಗಿ ಸಾಮಾಜಿಕ ನ್ಯಾಯ ಒದಗಿಸುವಲ್ಲಿ ಕೆಲಸ ಮಾಡುತ್ತಿರುವುದು ಮಾದರಿಎ ಂದರು.
ಕಾರ್ಯಕ್ರಮದಲ್ಲಿ ಕೃಷಿ ಅಧಿಕಾರಿ ಶೈಲ,ಮೇಲ್ವಿಚಾರಕಿ ಪ್ರಮೀಳ,ಸೇವಾ ಪ್ರತಿನಿಧಿ ರುಕ್ಮಿಣಿ ಸೇರಿದಂತೆ ಮಾಶಾಸನ ಪಲಾನುಭವಿಗಳು ಸ್ಥಳಿಯ ಮುಖಂಡರು,ಸ್ವಸಹಾಯ ಸಂಘದ ಮಹಿಳಾ ಸದಸ್ಯರು ಉಪಸ್ಥಿತರಿದ್ದರು.
ಚಿತ್ರ-೨ ಎಂ ಎಲ್ ವಿ೧
ಮಳವಳ್ಳಿ ಪಟ್ಟಣದಲ್ಲಿ ಮಾತೃಶ್ರೀ  ಅಮ್ಮನವರ ಹುಟ್ಟುಹಬ್ಬದ ಅಂಗವಾಗಿ ಮಾಶಾಸನ ಪಲಾನುಭವಿಗೆ ಯೋಜನಾಧಿಕಾರಿ ಲೋಕೆಶ್ ಮತ್ತು ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಎಂ.ಶಿವಕುಮಾರ್ ಹಣ್ಣು ಹಂಪಲ ವಿತರಿಸಿದರು
    user_ಮಾಗನೂರು ಎಂ ಶಿವಕುಮಾರ್
    ಮಾಗನೂರು ಎಂ ಶಿವಕುಮಾರ್
    ಮಳವಳ್ಳಿ, ಮಂಡ್ಯ, ಕರ್ನಾಟಕ•
    16 hrs ago
  • Post by Nitin 9071795156 press reporte
    1
    Post by Nitin 9071795156 press reporte
    user_Nitin 9071795156 press reporte
    Nitin 9071795156 press reporte
    Press advisory ಕಳಘಟಗಿ, ಧಾರವಾಡ, ಕರ್ನಾಟಕ•
    21 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.