ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಅಭಿಮತ ಕಲೆ-ಸಾಹಿತ್ಯಕ್ಕೆ ಪ್ರೋತ್ಸಾಹ ಅಗತ್ಯ: ರವಿಕುಮಾರ್ ಕೂಡ್ಲಿಗಿ : ಮೊಬೈಲ್ ಯುಗದಲ್ಲಿ ಸ್ಥಳೀಯ ಕಲೆಗಳು ಕ್ಷೀಣಿಸುತ್ತಿರುವುದು ವಿಷಾದಕರ ಸಂಗತಿ, ನಾಡಿನ ಕಲೆ ಸಾಹಿತ್ಯ ಸಂಗೀತಕ್ಕೆ ಎಲ್ಲರ ಪ್ರೋತ್ಸಾಹ ಅಗತ್ಯ ಎಂದು ಹಿರಿಯ ಸಾಹಿತಿ ಹಾಗೂ ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಎಂ.ರವಿಕುಮಾರ್ ತಿಳಿಸಿದರು. ಸಮೀಪದ ಬಣವೀಕಲ್ಲು ಗ್ರಾಮದ ಕಸ್ತೂರಬಾ ಗಾಂಧಿ ಬಾಲಕಿಯರ ವಸತಿ ಶಾಲೆಯಲ್ಲಿ ತಿಮ್ಮನಹಳ್ಳಿಯ ಕಲ್ಯಾಣ ಕರ್ನಾಟಕ ಸಾಂಸ್ಕೃತಿಕ ಕಲಾ ಸಂಘ(ರಿ) ತಿಮ್ಮನಹಳ್ಳಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು ವತಿಯಿಂದ ಗುರುವಾರ ಆಯೋಜಿಸಿದ್ದ ಸಾಂಸ್ಕೃತಿಕ ಉತ್ಸವ -2026 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ಹಳ್ಳಿಗಳಲ್ಲಿ ಬೀಸುವಾಗ, ಕುಟ್ಟುವಾಗ, ಹುಟ್ಟಿದ ಜಾನಪದ ಹಾಡುಗಳು ಇಂದಿಗೂ ಜೀವಂತವಾಗಿವೆ ಅವುಗಳನ್ನು ಇವತ್ತಿನ ಪೀಳಿಗೆಗೆ ಉಳಿಸುವಂತಹ ಕಾರ್ಯ ಮಾಡಬೇಕಿದೆ ಹಾಗೂ ಗ್ರಾಮೀಣ ಪ್ರತಿಭೆಗಳಿಗೆ ಪರಿಚಯಿಸಿ. ಆ ಪ್ರತಿಭೆಗಳಿಗೆ ಹೆಚ್ಚೆಚ್ಚು ಅವಕಾಶಗಳು ಸಿಗುವಂತಾಗಬೇಕು. ಸಾಂಸ್ಕೃತಿಕ ಸವಿ ಇರುವಂಥ ಕಾರ್ಯಕ್ರಮ ನಡೆಯುತ್ತಿರಬೇಕು. ಕಲಾವಿದರಿಗೆ ಹೆಚ್ಚಿನ ಪ್ರೋತ್ಸಾಹ ಸಿಗಬೇಕಿದೆ ಎಂದರು. ಹಿರಿಯ ಸಾಹಿತಿ ಭೀಮಣ್ಣ ಗಜಾಪುರ ಮಾತನಾಡಿ, ಇವತ್ತಿನ ವಿದ್ಯಾರ್ಥಿಗಳಿಗೆ ಎಲ್ಲರೂ ಸಮಾನರು ಎನ್ನುವ ಶಾಲೆಗಳಲ್ಲಿ ಎನ್ನುವ ಭಾವನೆಯನ್ನು ಶಿಕ್ಷಕರು ಹೊಂದಿರಬೇಕು. ಮಕ್ಕಳಿಗೆ ನಾನು, ನುಡಿ, ಸಂಸ್ಕೃತಿಯ ಪರಿಚಯ ಮಾಡಿಸುವುದು ಶಿಕ್ಷಕರ ಜವಾಬ್ದಾರಿಯಾಗಿದೆ. ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ಕಲಿಕೆಯ ಜತೆಗೆ ಪತ್ಯೇತರ ಚಟುವಟಿಕೆ ಅಗತ್ಯವಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕಲಾ ಸಂಘದಿಂದ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮ ಆಯೋಜಿಸಿರುವುದು ಉತ್ತಮ ಕಾರ್ಯ ಎಂದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಾಸಾಶನ ಮಂಜೂರಾತಿ ಸಮಿತಿ ಮಾಜಿ ಸದಸ್ಯ ಚಿನ್ನೋಬನಹಳ್ಳಿ ಡಿ.ಒ.ಮೊರಾರ್ಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಸ್ತೂರಬಾ ಗಾಂಧಿ ಬಾಲಕಿಯರ ವಸತಿ ಶಾಲೆಯ ಮುಖ್ಯಶಿಕ್ಷಕಿ ರುಬಿನಾ ಖಾನಂ ಅಧ್ಯಕ್ಷತೆ ವಹಿಸಿದ್ದರು. ಕಲ್ಯಾಣ ಕರ್ನಾಟಕ ಸಾಂಸ್ಕೃತಿಕ ಕಲಾ ಸಂಘದ ಕಾರ್ಯದರ್ಶಿ ತಿಮ್ಮನಹಳ್ಳಿ ಡಿ.ಬಿ ನಿಂಗರಾಜ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಹುಡೇಂ ಕೃಷ್ಣಮೂರ್ತಿ, ರಂಗಭೂಮಿ ಹಿರಿಯ ಕಲಾವಿದರಾದಬಣವಿಕಲ್ಲುಬಸವರಾಜಪ್ಪ ಬಿ.ಎಸ್.ಪ್ರಶಾಂತಗೌಡ, ಬಿ.ಚೌಡೇಶ್, ಸಹಿಪ್ರಾ ಶಾಲೆ ಮುಖ್ಯಶಿಕ್ಷಕಿ ಪಾರ್ವತಿ, ಶಿಕ್ಷಕಿಯರಾದ ಮಂಜುಳಾ, ವಿಶಾಲಾಕ್ಷಿ, ಗೀತಾ ಭಾಪ್ರಿ, ವಾರ್ಡನ್ ತೇಜಾವತಿ, ಕಲಾವಿದರಾದ ನಾಗರಹುಣಸೆ ದುರುಗೇಶ್,ಬಣವಿಕಲ್ಲು ಮಂಜುನಾಥ,ಕುರಿಹಟ್ಟಿ ರಾಜು, ಕೋನಸಾಗರ ಶಿವು, ಚಿತ್ರದುರ್ಗ ಎಂ.ಕೆ ಹರೀಶ್, ರಾಯಾಪುರ ತಿಪ್ಪೇಶ್ ಸೇರಿ ಇತರರಿದ್ದರು. ವೀರಗಾಸೆ, ಡೊಳ್ಳು ಕುಣಿತ, ಸೋಬಾನೆ, ಜಾನಪದ, ಸುಗಮ ಸಂಗೀತ, ವಚನ ಗಾಯನ ಸೇರಿ ವಿವಿಧ ಕಾರ್ಯಕ್ರಮ ಪ್ರೇಕ್ಷಕರ ಮನಸೂರೆಗೊಂಡವು.
ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಅಭಿಮತ ಕಲೆ-ಸಾಹಿತ್ಯಕ್ಕೆ ಪ್ರೋತ್ಸಾಹ ಅಗತ್ಯ: ರವಿಕುಮಾರ್ ಕೂಡ್ಲಿಗಿ : ಮೊಬೈಲ್ ಯುಗದಲ್ಲಿ ಸ್ಥಳೀಯ ಕಲೆಗಳು ಕ್ಷೀಣಿಸುತ್ತಿರುವುದು ವಿಷಾದಕರ ಸಂಗತಿ, ನಾಡಿನ ಕಲೆ ಸಾಹಿತ್ಯ ಸಂಗೀತಕ್ಕೆ ಎಲ್ಲರ ಪ್ರೋತ್ಸಾಹ ಅಗತ್ಯ ಎಂದು ಹಿರಿಯ ಸಾಹಿತಿ ಹಾಗೂ ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಎಂ.ರವಿಕುಮಾರ್ ತಿಳಿಸಿದರು. ಸಮೀಪದ ಬಣವೀಕಲ್ಲು ಗ್ರಾಮದ ಕಸ್ತೂರಬಾ ಗಾಂಧಿ ಬಾಲಕಿಯರ ವಸತಿ ಶಾಲೆಯಲ್ಲಿ ತಿಮ್ಮನಹಳ್ಳಿಯ ಕಲ್ಯಾಣ ಕರ್ನಾಟಕ ಸಾಂಸ್ಕೃತಿಕ ಕಲಾ ಸಂಘ(ರಿ) ತಿಮ್ಮನಹಳ್ಳಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು ವತಿಯಿಂದ ಗುರುವಾರ ಆಯೋಜಿಸಿದ್ದ ಸಾಂಸ್ಕೃತಿಕ ಉತ್ಸವ -2026 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ಹಳ್ಳಿಗಳಲ್ಲಿ ಬೀಸುವಾಗ, ಕುಟ್ಟುವಾಗ, ಹುಟ್ಟಿದ ಜಾನಪದ ಹಾಡುಗಳು ಇಂದಿಗೂ ಜೀವಂತವಾಗಿವೆ ಅವುಗಳನ್ನು ಇವತ್ತಿನ ಪೀಳಿಗೆಗೆ ಉಳಿಸುವಂತಹ ಕಾರ್ಯ ಮಾಡಬೇಕಿದೆ ಹಾಗೂ ಗ್ರಾಮೀಣ ಪ್ರತಿಭೆಗಳಿಗೆ ಪರಿಚಯಿಸಿ. ಆ ಪ್ರತಿಭೆಗಳಿಗೆ ಹೆಚ್ಚೆಚ್ಚು ಅವಕಾಶಗಳು ಸಿಗುವಂತಾಗಬೇಕು. ಸಾಂಸ್ಕೃತಿಕ ಸವಿ ಇರುವಂಥ ಕಾರ್ಯಕ್ರಮ ನಡೆಯುತ್ತಿರಬೇಕು. ಕಲಾವಿದರಿಗೆ ಹೆಚ್ಚಿನ ಪ್ರೋತ್ಸಾಹ ಸಿಗಬೇಕಿದೆ ಎಂದರು. ಹಿರಿಯ ಸಾಹಿತಿ ಭೀಮಣ್ಣ ಗಜಾಪುರ ಮಾತನಾಡಿ, ಇವತ್ತಿನ ವಿದ್ಯಾರ್ಥಿಗಳಿಗೆ ಎಲ್ಲರೂ ಸಮಾನರು ಎನ್ನುವ ಶಾಲೆಗಳಲ್ಲಿ ಎನ್ನುವ ಭಾವನೆಯನ್ನು ಶಿಕ್ಷಕರು ಹೊಂದಿರಬೇಕು. ಮಕ್ಕಳಿಗೆ ನಾನು, ನುಡಿ, ಸಂಸ್ಕೃತಿಯ ಪರಿಚಯ ಮಾಡಿಸುವುದು ಶಿಕ್ಷಕರ ಜವಾಬ್ದಾರಿಯಾಗಿದೆ. ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ಕಲಿಕೆಯ ಜತೆಗೆ ಪತ್ಯೇತರ ಚಟುವಟಿಕೆ ಅಗತ್ಯವಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕಲಾ ಸಂಘದಿಂದ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮ ಆಯೋಜಿಸಿರುವುದು ಉತ್ತಮ ಕಾರ್ಯ ಎಂದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಾಸಾಶನ ಮಂಜೂರಾತಿ ಸಮಿತಿ ಮಾಜಿ ಸದಸ್ಯ ಚಿನ್ನೋಬನಹಳ್ಳಿ ಡಿ.ಒ.ಮೊರಾರ್ಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಸ್ತೂರಬಾ ಗಾಂಧಿ ಬಾಲಕಿಯರ ವಸತಿ ಶಾಲೆಯ ಮುಖ್ಯಶಿಕ್ಷಕಿ ರುಬಿನಾ ಖಾನಂ ಅಧ್ಯಕ್ಷತೆ ವಹಿಸಿದ್ದರು. ಕಲ್ಯಾಣ ಕರ್ನಾಟಕ ಸಾಂಸ್ಕೃತಿಕ ಕಲಾ ಸಂಘದ ಕಾರ್ಯದರ್ಶಿ ತಿಮ್ಮನಹಳ್ಳಿ ಡಿ.ಬಿ ನಿಂಗರಾಜ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಹುಡೇಂ ಕೃಷ್ಣಮೂರ್ತಿ, ರಂಗಭೂಮಿ ಹಿರಿಯ ಕಲಾವಿದರಾದಬಣವಿಕಲ್ಲುಬಸವರಾಜಪ್ಪ ಬಿ.ಎಸ್.ಪ್ರಶಾಂತಗೌಡ, ಬಿ.ಚೌಡೇಶ್, ಸಹಿಪ್ರಾ ಶಾಲೆ ಮುಖ್ಯಶಿಕ್ಷಕಿ ಪಾರ್ವತಿ, ಶಿಕ್ಷಕಿಯರಾದ ಮಂಜುಳಾ, ವಿಶಾಲಾಕ್ಷಿ, ಗೀತಾ ಭಾಪ್ರಿ, ವಾರ್ಡನ್ ತೇಜಾವತಿ, ಕಲಾವಿದರಾದ ನಾಗರಹುಣಸೆ ದುರುಗೇಶ್,ಬಣವಿಕಲ್ಲು ಮಂಜುನಾಥ,ಕುರಿಹಟ್ಟಿ ರಾಜು, ಕೋನಸಾಗರ ಶಿವು, ಚಿತ್ರದುರ್ಗ ಎಂ.ಕೆ ಹರೀಶ್, ರಾಯಾಪುರ ತಿಪ್ಪೇಶ್ ಸೇರಿ ಇತರರಿದ್ದರು. ವೀರಗಾಸೆ, ಡೊಳ್ಳು ಕುಣಿತ, ಸೋಬಾನೆ, ಜಾನಪದ, ಸುಗಮ ಸಂಗೀತ, ವಚನ ಗಾಯನ ಸೇರಿ ವಿವಿಧ ಕಾರ್ಯಕ್ರಮ ಪ್ರೇಕ್ಷಕರ ಮನಸೂರೆಗೊಂಡವು.
- ಧರ್ಮಸ್ಥಳ ಬುರುಡೇ ಕೇಸ್ ಫಂಡಿಂಗ್ ಆರೋಪದಿಂದ ರಮಾ ನಾಗರಾಜ್ ನಿರ್ದೋಷಿ ಧರ್ಮಸ್ಥಳ ಬುರುಡೆ ಕೇಸ್ ನಲ್ಲಿ ಚಿತ್ರದುರ್ಗದ ಸಮಾಜಿಕ ಹೋರಾಟಗಾರ್ತಿ ರಮಾ ನಾಗರಾಜ್ ಆರೋಪ ಮುಕ್ತ ಎಂದು ಹೈಕೋರ್ಟ್ ಆದೇಶ ಹೊರಡಿಸಿದೆ. ಇನ್ನೂ ಧರ್ಮಸ್ಥಳದ ಬುರುಡೆ ಕೇಸ್ ಗೆ ಚಿತ್ರದುರ್ಗದ ರಮಾ ನಾಗರಾಜ್ ಫಂಡಿಂಗ್ ಮಾಡಿದ್ದಾಗಿ ಮಾಸ್ಕ್ ಮ್ಯಾನ್ ಚನ್ನಯ್ಯ ಆರೋಪ ಮಾಡಿದ್ದು ಈ ಆರೋಪ ಸುಳ್ಳು ಎಂದು ಉಚ್ಚ ನ್ಯಾಯಾಲಯದಿಂದ ರಮಾ ನಾಗರಾಜ್ ನಿರ್ದೋಷಿ ಎಂದು ತೀರ್ಪು ನೀಡಿದೆ. ರಮಾ ನಾಗರಾಜ್, ಗಿರೀಶ್ ಮಟ್ಟಣ್ಣನವರ್, ಮಹೇಶ್ ಶೆಟ್ಟಿ, ಜಯಂತಿ, ವಿಠ್ಠಲ ಗೌಡ, ಪ್ರಕಾಶ್ ರೈ ಆರೋಪ ಮುಕ್ತ ಎಂದು ಹೈಕೋರ್ಟ್ ಆದೇಶ ನೀಡಿದ್ದು ಈ ಕುರಿತು ಚಿತ್ರದುರ್ಗದಲ್ಲಿ ರಮಾ ನಾಗರಾಜ್ ಹಾಗೂ ಗಿರೀಶ್ ಮಟ್ಟಣ್ಣನವರ್ ಜಂಟಿ ಪತ್ರಿಕಾಗೋಷ್ಠಿ ನಡೆಸಿದ್ದು ಈ ವೇಳೆ ಸಮಾಜಿಕ ಹೋರಾಟಗಾರ್ತಿ ರಮಾ ನಾಗರಾಜ್ ಅವರು ಮಾತನಾಡಿದ್ದು ಧರ್ಮಸ್ಥಳ ಸಂಘದ ಬಗ್ಗೆ ಹೋರಾಟ ಮಾಡಿದ್ದಕ್ಕೆ ನನ್ನ ಮೇಲೆ ವಿನಾಃ ಕಾರಣ ಆರೋಪ ಮಾಡಿದ್ದರು ಎಂದು ರಮಾ ನಾಗರಾಜ್ ಸ್ಪಷ್ಟನೆ ಕೊಟ್ಟಿದ್ದಾರೆ.1
- ಪೊಲೀಸ್ ಕಾನ್ಸ್‍ಟೇಬಲ್(ಸಿವಿಲ್) ನೇಮಕಾತಿ ಪರೀಕ್ಷೆ* *ಕೆ.ಇ.ಎ. ಮಾರ್ಗಸೂಚಿಗಳ ಪಾಲನೆ ಕಡ್ಡಾಯ* *-ಜಿಲ್ಲಾಧಿಕಾರಿ ಟಿ.ವೆಂಕಟೇಶ್* *ಪೊಲೀಸ್ ಕಾನ್ಸ್‍ಟೇಬಲ್(ಸಿವಿಲ್) ನೇಮಕಾತಿ ಪರೀಕ್ಷೆ* *ಕೆ.ಇ.ಎ. ಮಾರ್ಗಸೂಚಿಗಳ ಪಾಲನೆ ಕಡ್ಡಾಯ* *-ಜಿಲ್ಲಾಧಿಕಾರಿ ಟಿ.ವೆಂಕಟೇಶ್* ಚಿತ್ರದುರ್ಗ(ಕರ್ನಾಟಕ ವಾರ್ತೆ)ಆ.01: ನಗರದ 26 ಪರೀಕ್ಷಾ ಕೇಂದ್ರಗಳಲ್ಲಿ ಆಗಸ್ಟ್ 2 ರಂದು ಪೊಲೀಸ್ ಕಾನ್‍ಸ್ಟೇಬಲ್ ಹುದ್ದೆಗಳ ನೇಮಕಾತಿ ಸ್ಪರ್ಧಾತ್ಮಕ ಲಿಖಿತ ಪರೀಕ್ಷೆ ನಡೆಯಲಿದೆ. ಪರೀಕ್ಷಾ ಕಾರ್ಯಕ್ಕೆ ನಿಯೋಜಿಸಿರುವ ಮೇಲ್ವಿಚಾರಕರು, ಅಧಿಕಾರಿಗಳು ಹಾಗೂ ಅಭ್ಯರ್ಥಿಗಳು ಕಡ್ಡಾಯವಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆ.ಇ.ಎ) ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು. ಈ ಕುರಿತು ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಸಭೆ ನಡೆಸಿ ಅವರು ಮಾತನಾಡಿದರು. ಪರೀಕ್ಷಾ ಕೇಂದ್ರಗಳಿಗೆ ಸೂಕ್ತ ಭದ್ರತೆ ಕಲ್ಪಿಸಬೇಕು. ಮಾರ್ಗಾಧಿಕಾರಿಗಳು ಪ್ರಶ್ನೆ ಪತ್ರಿಕೆಗಳನ್ನು ನಿರ್ಧಿಷ್ಟ ಪಡಿಸಿದ ವಾಹನ ಹಾಗೂ ಪೊಲೀಸ್ ಬಂದೋಬಸ್ತ್‌ನೊಂದಿಗೆ ಸಾಗಿಸಬೇಕು. ಪರೀಕ್ಷಾ ಕೇಂದ್ರದ ಮೇಲ್ವಿಚಾರಕರು, ಕೊಠಡಿ ಮೇಲ್ವಾಚರಕರು ಹಾಗೂ ವಸ್ತ್ರಸಂಹಿತೆ ಅಧಿಕಾರಿಗಳು ಸಭೆ ನಡೆಸಿ, ಪರೀಕ್ಷ ಕೇಂದ್ರಗಳಲ್ಲಿ, ನಿರ್ವಹಿಸಬೇಕಾದ ಕರ್ತವ್ಯಗಳು ಬಗ್ಗೆ ತಿಳಿಸಬೇಕು. ಎಲ್ಲಾ ಕೇಂದ್ರಗಳಲ್ಲಿ ಸಿ.ಸಿ.ಟಿ.ವಿ ಹಾಗೂ ಮೊಬೈಲ್ ನೆಟ್‍ವರ್ಕ ಜಾಮರ್‌ಗಳು ಸುಸ್ಥಿತಿಯಲ್ಲಿ ಇದ್ದು ಕಾರ್ಯನಿರ್ವಹಿಸುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.1
- *ಕ್ರೀಡೆ: ರೇಖಲಗೆರೆ ಲಂಬಾಣಿ ಹಟ್ಟಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ತಾಲ್ಲೂಕು ಮಟ್ಟಕ್ಕೆ ಆಯ್ಕೆ *ಕ್ರೀಡೆ: ರೇಖಲಗೆರೆ ಲಂಬಾಣಿ ಹಟ್ಟಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ ಸಮೀಪದ ರೇಖಲಗೆರೆ ಲಂಬಾಣಿ ಹಟ್ಟಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ದಿನಾಂಕ:28-07- 2026 ರಂದು ಚಳ್ಳಕೆರೆ ನಗರದ ಬಿಸಿನೀರು ಮುದ್ದಪ್ಪ ಸರ್ಜಾರಿ ಪ್ರೌಢಶಾಲೆಯ ಅವನದ ಬಯಲು ರಂಗ ಮಂದಿರದ ಮುಂಭಾಗದಲ್ಲಿ ನಡೆದ ನಾಯಕನಹಟ್ಟಿ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಬಾಲಕರ ಕಬಡ್ಡಿ ಮತ್ತು ವಾಲಿಬಾಲ್ ಪಂದ್ಯದಲ್ಲಿ ಪ್ರಥಮ ಸ್ಥಾನವನ್ನು ಪಡೆದು ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಪ್ರಥಮ:ನಿತೀಶ್ ಮತ್ತು ತಂಡ ಕಬಡ್ಡಿ ಕ್ರೀಡೆಯಲ್ಲಿ ಗೆದ್ದು ತಾಲೂಕು ಮಟ್ಟಕ್ಕೆ ಆಯ್ಕೆ ಕ್ರೀಡಾಪಟುಗಳಾಗಿದ್ದಾರೆ ವಿನಯ್ ಕುಮಾರ್ ಮತ್ತು ತಂಡ ವಾಲಿಬಾಲ್ ಕ್ರೀಡೆಯಲ್ಲಿ ಗೆದ್ದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ *ಖೋ ಖೋ* ದ್ವಿತೀಯ: ತ್ರಿಶಾ ಮತ್ತು ತಂಡ *ಎತ್ತರ ಜಿಗಿತ* ತೃತೀಯ : ಮೇಘನಾ *400 ಮೀಟರ್ ಓಟ* ತೃತೀಯ: ತಿಪ್ಪೇಸ್ವಾಮಿ ಎಲ್ಲಾ ಕ್ರೀಡಾಪಟುಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸುರೇಶ್ ಕೆ.ಎಸ್. ಕೆ.ಎಸ್,ಮುಖ್ಯ ಶಿಕ್ಷಕಕರಾದ ನಿರ್ಮಲ B, ಎಸ್ ಡಿ ಎಂ ಸಿ ಅಧ್ಯಕ್ಷರಾದ ಕಾಟಯ್ಯ , ಶಿಕ್ಷಕರಾದ ನಾಗಭೂಷಣ್, B.P ಹಾಗೂ ಊರಿನ ಹಳೆಯ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.1
- ಆಸ್ಪತ್ರೆ ಆರಂಭವಾಗಿ 15 ದಿನಗಳ ಒಳಗಡೆಯೇ 27 ಕೋಟಿ ರೂಪಾಯಿಯ ತಾಯಿ-ಮಕ್ಕಳ ಆಸ್ಪತ್ರೆ ಅವ್ಯವಸ್ಥೆ. ವರದಿ:- ಪವಾಡೆಪ್ಪ ಚೌಡ್ಕಿ ಕುಷ್ಟಗಿ:- ಪಟ್ಟಣದಲ್ಲಿ ನೂತನವಾಗಿ ಆರಂಭವಾಗಿರುವ ಸುಮಾರು 27 ಕೋಟಿ ರೂಪಾಯಿ ವೆಚ್ಚದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಯೋಜನೆ ಅಡಿಯಲ್ಲಿ 100 ಹಾಸಿಗೆಯ ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ಬೇಕಾದ ಮೂಲಭೂತ ಸೌಕರ್ಯಗಳು ಇದ್ದರು ಸಹ ಎಲ್ಲವು ಇಲ್ಲದಂತೆ ಆಗಿದೆ ಕೆಲವು ಇನ್ನು ಸೌಲಭ್ಯಗಳು ಸರಿಯಾಗಿ ಇಲ್ಲದ ಕಾರಣ ಈ ಆಸ್ಪತ್ರೆಯನ್ನು ತರಾತುರಿಯಲ್ಲಿ ಆರಂಭ ಮಾಡಲಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. *ಅವ್ಯವಸ್ಥೆಗಳ ನಡುವೆಯೇ ಹೆರಿಗೆ ಸೇವೆ ಆರಂಭ ಸಾರ್ವಜನಿಕರ ಆಕ್ರೋಶ* ಚಿಕ್ಕಮಕ್ಕಳಿಗೆ ಮತ್ತು ಗರ್ಭಿಣಿಯರಿಗೆ ಹಾಗೂ ಜನತೆಗೆ ಬೇಕಾಗುವ ಗುಣಮಟ್ಟದ ಆರೋಗ್ಯ ಸೇವೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಬಾಣಂತಿರಿಗೆ ಬೇಕಾದ ಬಿಸಿನೀರಿನ ವ್ಯವಸ್ಥೆ ಸರಿಯಾಗಿ ಇಲ್ಲದೆ ಆಸ್ಪತ್ರೆಗೆ ಅಳವಡಿಸಿರುವ ಸೋಲಾರ್ ವಾಟರ್ ಇಟರ್ ಟುಬೂಗಳು ಹೊಡೆದು ಹಾಳಾಗಿ ಹೋಗಿವೆ. ಈ ಎಲ್ಲಾ ಸೋಲಾರ್ ಟುಬೂಗಳು ಅವ್ಯವಸ್ಥೆಯಿಂದ ಕೆಲ ವಸ್ತುಗಳು ಆಸ್ಪತ್ರೆ ಆರಂಭವಾಗಿ 15 ದಿನಗಳ ಒಳಗಡೆಯೇ ಹಾಳಾಗಿ ಒಡೆದು ಹೋಗಿವೆ. ಈ ಆಸ್ಪತ್ರೆಯ ಸ್ಥಿತ ಇದೇ ರೀತಿಯಾಗಿ ಮುಂದುವರೆದರೆ ಇದರಿಂದ ಸಾರ್ವಜನಿಕರು ಮತ್ತು ಗರ್ಭಿಣಿಯರು ಹಾಗೂ ಬಾಣಂತಿಯರು ಮತ್ತು ಚಿಕ್ಕ ಮಕ್ಕಳು ದೊಡ್ಡ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ. *ಆಸ್ಪತ್ರೆಯಲ್ಲಿ ಕೆಲ ವಿದ್ಯುತ್ ಲೈಟ್ ಗಳು ಮತ್ತು ಪ್ಯಾನ್ ಗಳು ಬಂದ್.* ಆಸ್ಪತ್ರೆಯಲ್ಲಿ ಸಮರ್ಪಕ ಕುಡಿಯುವ ನೀರು, ಬಿಸಿನೀರಿನ ವ್ಯವಸ್ಥೆ, ನಿರಂತರ ವಿದ್ಯುತ್ ಪೂರೈಕೆ, ಸೇರಿದಂತೆ ಹಲವು ಅಗತ್ಯ ಸೌಲಭ್ಯಗಳು ಪೂರ್ಣ ಪ್ರಮಾಣದಲ್ಲಿ ಲಭ್ಯವಿಲ್ಲದೆ ಎಲ್ಲವು ಅವ್ಯವಸ್ಥೆಯಾಗಿ ಕೂಡಿದ್ದು ಎಲ್ಲವು ಬಂದ್ ಆಗಿರುವಂತದ್ದು ಕಂಡು ಬಂದಿದೆ. *ವೈದ್ಯರ ಕೊರತೆ ಮತ್ತು ಸಿಬ್ಬಂದಿಗಳ ಕೊರತೆ ಎದುರುಸುತ್ತಿರುವ ಆಸ್ಪತ್ರೆ* ಆಸ್ಪತ್ರೆಗೆ ತಕ್ಕಂತೆ ಬೇಕಾಗುವ ವೈದ್ಯಕೀಯ ಸೇವೆಗೆ ಅಗತ್ಯವಿರುವ ಸಿಬ್ಬಂದಿಯ ಕೊರತೆಯೂ ಆಸ್ಪತ್ರೆಯಲ್ಲಿ ಇಲ್ಲದ ಕಾರಣ ಆಸ್ಪತ್ರೆಯಲ್ಲಿ ಸಿಬ್ಬಂದಿಗಳ ಕೊರತೆ ಮತ್ತು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು ಪ್ರತಿನಿತ್ಯ ಕಾರ್ಯನಿರ್ವಹಣೆಯ ಮೇಲೆ ಮತ್ತು ರೋಗಿಗಳ ಮೇಲೆ ಪರಿಣಾಮ ಬೀರುತ್ತಿದೆ ಎಂದರೆ ತಪ್ಪಾಗಲಾರದು. *ಕೇಂದ್ರ ಬಸ್ ನಿಲ್ದಾಣದಿಂದ 2–3 ಕಿಲೋಮೀಟರ್ ದೂರದಲ್ಲಿರುವ ಆಸ್ಪತ್ರೆಗೆ ಸಾರಿಗೆ ವ್ಯವಸ್ಥೆಗೆ ಆಗ್ರಹ.* ಪಟ್ಟಣದ ಬಸ್ ನಿಲ್ದಾಣದಿಂದ ಸರಿ ಸುಮಾರು ಎರಡು ಮೂರು ಕಿ.ಮಿ. ದೂರವಿದ್ದು ಗರ್ಭಿಣಿಯರಿಗೆ ಮತ್ತು ಸಾರ್ವಜನಿಕರಿಗೆ ನಡೆದುಕೊಂಡು ಹೋಗಲು ಬಹಳ ಕಷ್ಟವಾಗುತ್ತಿದ್ದು ಬಸ್ ನಿಲ್ದಾಣದಿಂದ ಬಸ್ ಸೌಕರ್ಯ ಇಲ್ಲದೆ ಬರಿ ಆಟೋಗಳನ್ನು ನೆಚ್ಚಿಕೊಂಡು ಆಸ್ಪತ್ರೆ ತೆರಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆಟೋ ಚಾಲಕರು ತಮಗೆ ಮನಬಂದಂತೆ ಆಟೋ ಬಾಡಿಗೆ ಏರಿಗೆ ಮಾಡುತ್ತಿದ್ದಾರೆ. ಆದ್ದರಿಂದ ಕೇಂದ್ರೀಯ ಬಸ್ ನಿಲ್ದಾಣದಿಂದ ಆಸ್ಪತ್ರೆಯ ವರಗೆ ಬಸ್ ಬೀಡಬೇಕು ಎಂದು ಸಾರ್ವಜನಿಕರು ಆಗ್ರಹವಾಗಿದೆ. *ಆಸ್ಪತ್ರೆಯಲ್ಲಿ ಮಾರ್ಗ ಸೂಚಿಸುವ ನಾಮ ಫಲಕಗಳು ಇಲ್ಲ.* ಆಸ್ಪತ್ರೆಯ ಒಳಗಡೆ ಹೆರಿಗೆ ಕೊಠಡಿ ಮತ್ತು ರೋಗಿಗಳ ಹತ್ತಿರ ತರಳಬೇಕು ಎಂದರೆ ಸರಿಯಾದ ಮಾರ್ಗವನ್ನು ಸೂಚಿಸುವ ದಿಕ್ಕು ಸೂಚನಾ ಫಲಕಗಳು ಇಲ್ಲದೆ ಆಸ್ಪತ್ರೆಗೆ ಬರುವ ಸಾರ್ವಜನಿಕರು ಕೊರತೆಯನ್ನು ಎದುರಿಸಬೇಕಾಗಿದೆ. ಮತ್ತು ಗ್ರಾಮೀಣ ಪ್ರದೇಶಗಳಿಂದ ಬರುವ ಗರ್ಭಿಣಿಯರು ಹಾಗೂ ಸಾರ್ವಜನಿಕರಿಗೆ ಬಹಳ ತೊಂದರೆಯಾಗುತ್ತಿದೆ ಎಂದು ಆಸ್ಪತ್ರೆಗೆ ಬಂದ ರೋಗಿಗಳು ಅವಳನ್ನು ತೊಂಡಿಕೊಂಡಿದ್ದಾರೆ. *ಆಸ್ಪತ್ರೆಗೆ ಸಂಪರ್ಕ ಕಲ್ಪಿಸುವ ಹದೆಗೆಟ್ಟ ಮಾರ್ಗದ ರಸ್ತೆ.* ತಹಶೀಲ್ದಾರ ಕಚೇರಿಯಿಂದ ವಣಗೇರಾ ಹಳೆ ರಸ್ತೆ ಆಸ್ಪತ್ರೆಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು ಈ ರಸ್ತೆಯು ಹದಗೆಟ್ಟಿದ್ದು, ಸುತ್ತಮುತ್ತಲಿನ ಮೂಲಸೌಕರ್ಯಗಳ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಕೆಲವು ಕಡೆ ವಿದ್ಯುತ್ ವ್ಯವಸ್ಥೆಯೂ ಸಮರ್ಪಕವಾಗಿಲ್ಲ ಮತ್ತು ವಿದ್ಯುತ್ ಕಂಬಗಳು ರಸ್ತೆಯ ಪಕ್ಕದಲ್ಲಿ ಇದ್ದು ಯಾವುದೇ ಎರಡು ಗಾಡಿಗಳು ಬಂದರೆ ಸಾಕು ಅದಲು ಬದಲು ಆದಲು ಮತ್ತು ಹೋಗಲು ಮತ್ತು ಬರಲು ಸರಿಯಾದ ರಸ್ತೆ ಇಲ್ಲದೆ ರಸ್ತೆಯ ಅಕ್ಕ ಪಕ್ಕದಲ್ಲಿ ತೆಗ್ಗು ದಿನ್ನೆಗಳು ಇವೆ ಈ ರಸ್ತೆ ಬಹಳ ಇರ್ಕಟ್ಟಾಗಿದ್ದು ಎದ್ದು ಕಾಣುತ್ತಿದೆ ಎಂಬ ಆರೋಪಗಳಿವೆ. ಕೂಡಲೇ ಸರಿ ಪಡಿಸಬೇಕಾಗಿದೆ. ಇಂತಹ ಪರಿಸ್ಥಿತಿಯಲ್ಲಿಯೇ ಆಸ್ಪತ್ರೆಯಲ್ಲಿ ಹೆರಿಗೆ ಮತ್ತು ಸ್ತ್ರೀರೋಗ ಚಿಕಿತ್ಸಾ ಸೇವೆಗಳು ಆರಂಭಗೊಂಡಿರುವುದು ಪ್ರಶ್ನೆಗೆ ಎಡೆಮಾಡಿಕೊಟ್ಟಿದೆ. ರೋಗಿಗಳ ಸುರಕ್ಷತೆ ಹಾಗೂ ಆರೋಗ್ಯ ಸೇವೆಯ ಗುಣಮಟ್ಟದ ದೃಷ್ಟಿಯಿಂದ ಅಗತ್ಯ ಮೂಲಸೌಲಭ್ಯಗಳನ್ನು ತುರ್ತಾಗಿ ಕಲ್ಪಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ವಾಸ್ತವ ಸ್ಥಿತಿಯನ್ನು ಪರಿಶೀಲಿಸಿ, ಬಾಕಿ ಉಳಿದಿರುವ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಿ ಎಲ್ಲಾ ಮೂಲಸೌಲಭ್ಯಗಳನ್ನು ಒದಗಿಸುವ ಮೂಲಕ ಜನರಿಗೆ ಸುರಕ್ಷಿತ ಹಾಗೂ ಗುಣಮಟ್ಟದ ಆರೋಗ್ಯ ಸೇವೆ ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ. ಆಸ್ಪತ್ರೆಯಿಂದ ಬಾಡಿಯಲ್ಲಿ ಅಳವಡಿಸಲಾಗಿರುವ ಸೋಲಾರ್ ಟುಬೂಗಳು ಹೊಡೆದು ಆಹಾಳಾಗಿ ನುಚ್ಚುನುರಾಗಿದ್ದು ಕಂಡು ಬಂದಿದೆ ನೀರಿನ ಶುದ್ದ ಕುಡಿಯುವ ನೀರಿನ ಘಟದ ಕೋಣಿಯ ಎರಡು ಘಟಕದ ಬಾಗಿಲು ಸಂಪೂರ್ಣ ಕಿತ್ತು ಹೋಗಿವೆ ಘಟಕದ ಮಿಷನ್ ಗಳು ಸುರಕ್ಷೆತೆ ಇಲ್ಲ. ಅವುಗಳನ್ನು ಸುಸಜ್ಜಿತವಾಗಿ ಇಡಬೇಕಾಗಿದೆ ಆಸ್ಪತ್ರೆ ಕಟ್ಟಿದಕ್ಕೆ ಸರಕಾರದ ಹಣ ನಷ್ಟವಾಗದಂತೆ ಮತ್ತು ಯಾವುದೇ ಕಾರಣಕ್ಕು ಆಸ್ಪತ್ರೆಯನ್ನು ಆಳಾಗಲು ಬೀಡಬಾರದು ಎಂಬುವದೆ ಸಾರ್ವಜನಿಕರ ಆಸೆಯಾಗಿದೆ ಎಂದು ಹೇಳಬಹುದು. ಬೈಟ್:- ಆಸ್ಪತ್ರೆಯನ್ನು ಸಂಪೂರ್ಣ ಆಗುವವರೆಗೂ ಹಸ್ತಾಂತರ ಜವಾಬ್ದಾರಿ ತೆಗೆದುಕೊಳ್ಳಬೇಡಿ ಎಂದು ತಾಲೂಕ ವೈದ್ಯಾಧಿಕಾರಿ ತಿಳಿಸಿದ್ದೆ ಆದರೆ ತರಾತೂರಿಯಲ್ಲಿ ಮುಖ್ಯಮಂತ್ರಿ ಸಿದ್ರಾಮಯ್ಯನವರಿಂದ ಕೊಪ್ಪಳದಲ್ಲಿ ಉದ್ಘಾಟನೆ ಮಾಡಿದರು. ಕಾಮಗಾರಿಯನ್ನು ಪೂರ್ಣ ಪ್ರಮಾಣದಲ್ಲಿ ಸರಿಯಾಗಿ ನಿರ್ವಹಿಸದ ಸಂಬಂಧಪಟ್ಟ ಏಜೆನ್ಸಿ ಹಾಗೂ ಗುತ್ತಿಗೆದಾರರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. *ಶಾಸಕ ಹಾಗೂ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ* -------------------------------- ಹೌದು ಆಸ್ಪತ್ರೆಯಲ್ಲಿ ಕೆಲ ಕೊಠಡಿಯಲ್ಲಿ ವಿದ್ಯುತ್ ಲೈಟ್ ಮತ್ತು ಪ್ಯಾನ್ ಇಲ್ಲ ಇದ್ದರು ಸರಿಯಾಗಿ ಕಾರ್ಯನಿರ್ವಸುತ್ತಿಲ್ಲ ಆದರೆ ಈ ಆಸ್ಪತ್ರೆ ಆರಂಭವಾಗಿದ್ದರು ಸಂಬಂಧಿಸಿದ ಏಜೆನ್ಸಿ ಯವರು ಸಹ ನಮಗೆ ಇನ್ನು ಹಸ್ತಾಂತರ ಮಾಡಿಲ್ಲ ಸಂಪೂರ್ಣ ಆಗುವವರೆಗೂ ಜವಾಬ್ದಾರಿ ತೆಗೆದುಕೊಳ್ಳುವದಿಲ್ಲ ಇನ್ನು ಸ್ವಲ್ಪ ಆಸ್ಪತ್ರೆಯಲ್ಲಿ ಸಣ್ಣ ಪುಟ್ಟ ಸಮಸ್ಯೆಗಳು ಇವೆ ಸರಿ ಮಾಡಬೇಕಾಗಿದೆ. *ಡಾ.ಚಂದ್ರಕಲಾ ತಾಲೂಕು ವೈದ್ಯಾಧಿಕಾರಿ.*2
- ಸಚಿವ ಸ್ಥಾನಕ್ಕೆ ₹150 ಕೋಟಿ ಬೇಡಿಕೆ?" | ಡಿ.ಕೆ.ಶಿವಕುಮಾರ್ ವಿರುದ್ಧ ಬಿಜೆಪಿ ಶಾಸಕ ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಸೃಷ್ಟಿಸಿರುವ ಹೇಳಿಕೆಯಲ್ಲಿ ಕುಷ್ಟಗಿ ಕ್ಷೇತ್ರದ ಬಿಜೆಪಿ ಶಾಸಕ ದೊಡ್ಡನಗೌಡ ಪಾಟೀಲ್ ಅವರು ಸಚಿವ ಸ್ಥಾನಕ್ಕಾಗಿ ₹150 ಕೋಟಿ ರೂಪಾಯಿಗಳವರೆಗೆ ಹಣ ಬೇಡಿಕೆ ಇಡಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಸಚಿವ ಸ್ಥಾನಗಳ ಹಂಚಿಕೆ, ಪ್ರಮುಖ ಖಾತೆಗಳ ನೀಡಿಕೆ ಹಾಗೂ ಅಭಿವೃದ್ಧಿ ಅನುದಾನದ ಕೊರತೆ ಕುರಿತು ಸರ್ಕಾರ ಮತ್ತು ಡಿ.ಕೆ. ಶಿವಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಅವರು, ರಾಜ್ಯದ ಆಡಳಿತ ವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. #DKShivakumar #DoddanagoudaPatil #KarnatakaPolitics #Congress #BJP #MinisterPost #PoliticalNews #BreakingNews #KarnatakaNews #ASNNews24Kannada #KannadaNews #LatestNews #ViralNews #karnataka1
- We are authorised distributor for Karnataka for Yodha agricultural equipments ಯೋಧ ರೋಟವೇಟರ್, ಯೋಧ ಮೆಕ್ಕೆ ಜೋಳ ಥ್ರೆಶರ್, ಯೋಧ ಮಲ್ಟಿ ಕ್ರಾಪ್ ಥ್ರೆಷರ್, ಯೋಧ ಮಲ್ಚರ್, ಯೋಧ ರಿವರ್ಸಿಬಲ್ ಪ್ಲೋವ್ ಮತ್ತು ಯೋಧಾ ರೋಟರಿ ಡಿಸ್ಕ್ ಹ್ಯಾರೋ ನಾವು ಕರ್ನಾಟಕ ರಾಜ್ಯದ ಕೃಷಿ ಉಪಕರಣಗಳ ವಿತರಕರು ಶ್ರೀ ಶಿವಬಸವ ಆಗ್ರೋ ಕೇರ್ ಹಾವೇರಿ ಸಂಪರ್ಕಿಸಿ: 7483066169 ಲೊಕೇಶನ್: ಇಂಡಸ್ಟ್ರಿಯಲ್ಲಿ ಏರಿಯಾ, near, TMAE ಕಾಲೇಜ್, ಹುಬ್ಬಳ್ಳಿ ರೋಡ್, ಹಾವೇರಿ. 581110 Yodha Rotavator, yodha maize thresher, yodha multi crop thresher, yodha mulcher, yodha reversible plough and Yodha rotary disc Harrow We are authorised distributor for karnataka Shri shivabasava agro care Haveri Contact us: 7483066169 Location: Industrial area, near, TMAE college, Hubli road, Haveri 5811101
- ಚಿಕ್ಕಜೋಗಿಹಳ್ಳಿ : ಮೂರು ವರೆ ದಶಕಗಳ ಸಾರ್ಥಕ ಸೇವೆ ಸಲ್ಲಿಸಿ ನಿವೃತ್ತರಾದ RNK ನಿಜಲಿಂಗಪ್ಪ ರವರಿಗೆ , ಸಂಘಟನೆಗಳಿಂದ ಗೌರವ ಸನ್ಮಾನ - ಬೀಳ್ಕೊಡುಗೆ_ವಿಜಯನಗರ ಜಿಲ್ಲೆ ಕೂಡ್ಲಿಗಿ *ಚಿಕ್ಕಜೋಗಿಹಳ್ಳಿ : ಮೂರು ವರೆ ದಶಕಗಳ ಸಾರ್ಥಕ ಸೇವೆ ಸಲ್ಲಿಸಿ ನಿವೃತ್ತರಾದ RNK ನಿಜಲಿಂಗಪ್ಪ ರವರಿಗೆ , ಸಂಘಟನೆಗಳಿಂದ ಗೌರವ ಸನ್ಮಾನ - ಬೀಳ್ಕೊಡುಗೆ*_ವಿಜಯನಗರ ಜಿಲ್ಲೆ ಕೂಡ್ಲಿಗಿ : ತಾಲೂಕಿನ ಚಿಕ್ಕಜೋಗಿಹಳ್ಳಿಯಲ್ಲಿ ಜುಲೈ 31ರಂದು , ಉಪ ಆರೋಗ್ಯಕೇಂದ್ರದಲ್ಲಿ ಡಿ ದರ್ಜೆ ನೌಕರರಾದ RNK ನಿಜಲಿಂಗಪ್ಪರವರಿಗೆ. ವಯೋ ನಿವೃತ್ತಿ ಹೊಂದಿದ RNK ನಿಜಲಿಂಗಪ್ಪರವರನ್ನು , ಆರೋಗ್ಯ ಸಿಬ್ಬಂದಿ ಹಾಗೂ ಡಾ ॥ ವಿಷ್ಣು ಸೇನಾ ಸಮಿತಿ ಸೇರಿದಂತೆ. ವಿವಿದ ಸಂಘಟನೆಗಳ ಪದಾಧಿಕಾರಿಗಳು , ಅವರನ್ನು ಸನ್ಮಾನಿಸಿ ಗೌರವ ಪೂರ್ವಕವಾಗಿ ಬಿಳ್ಕೊಟ್ಟರು. ಮೂಲತಃ ಕೊಟ್ಟೂರು ರಾಂಪುರ ಗ್ರಾಮದವರಾದ , ನಿಜಲಿಂಗಪ್ಪರವರು. ಕಳೆದ ಮೂರು ದಶಕಗಳ ಹಿಂದೆಯೇ , ಬಳ್ಳಾರಿಯ ರೇಷ್ಮೆ ಇಲಾಖೆಯಲ್ಲಿ. ಮಾಸಿಕ ಭತ್ಯೆ ಹೊರಗುತ್ತಿಗೆ ಆಧಾರದಂತೆ , ಹತ್ತು ವರ್ಷಗಳ ಕಾಲ ಡಿ ದರ್ಜೆ ನೌಕರರಾಗಿ ಕರ್ಥವ್ಯೆ ನಿರ್ವಹಿಸಿದ್ದರು. ತದನಂತರ ಆರೊಗ್ಯ ಇಲಾಖೆಯಲ್ಲಿ ಕೆಲ ವರ್ಷಗಳ ಕಾಲ , ಹೊರಗುತ್ತಿಗೆ ಡಿ ದರ್ಜೆ ನೌಕರಾಗಿ ಕರ್ಥವ್ಯ ನಿರ್ವಹಿಸಿದರು. ನಂತರ ವಷ್ಠೆ ಸರ್ಕಾರದ ಆರೋಗ್ಯ ಇಲಾಖೆಯಲ್ಲಿ , ಖಾಯಂ ನೌಕರರಾಗಿ ಗುರುತಿಸಿಕೊಂಡು ಮೂರುವರೆ ದಶಕಗಳ ಕಾಲ ಡಿ ದರ್ಜೆ ನೌಕರರಾರಿ ಕರ್ಥವ್ಯ ನಿರ್ವಹಿಸಿ ವಯೋ ನಿವೃತ್ತಿ ಹೊಂದಿದ್ದಾರೆ. ನಿಜಲಿಂಪ್ಪರವರು ಚಿಕ್ಕಜೋಗಳ್ಳಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ , 1998 ರಿಂದ ಸೇವೆ ಆರಂಭಿಸಿ ಜುಲೈ 31 2026 ರವರೆಗೆ. ಅಂದರೆ ಸತತ 34 ವರ್ಷಗಳ ಕಾಲ , ಚಿಕ್ಕಜೋಗಿಹಳ್ಳಿ ಉಪ ಆರೋಗ್ಯಕೇಂದ್ರದಲ್ಲಿ ಸೇವೆ ಸಲ್ಪಿಸಿದ್ದಾರೆ. 31 7 2026ರಂದು , ಅವರು ವಯೋ ನಿವೃತ್ತಿ ಹೊಂದಿರುತ್ತಾರೆ. ಅವರ ಸಾರ್ಥಕ ಸೇವೆ ಹಾಗೂ ಸನ್ನಡತೆ ಮೆಚ್ಚಿದ , ಆರೋಗ್ಯ ಇಲಾಖಾಧಿಕಾರಿಗಳು ಸಿಬ್ಬಂದಿಯವರು. ಮತ್ತು ಡಾ ॥ ವಿಷ್ಣು ಸೇನಾ ಸಮಿತಿ ಸೇರಿದಂತೆ , ವಿವಿದ ಸಂಘಟನೆಗಳ ಪದಾಧಿಕಾರಿಗಳು. ನಿಜಲಿಂಗಪ್ಪರವರನ್ನು ಗೌರವ ಪೂರ್ವಕವಾಗಿ ಸನ್ಮಾನಿಸಿ , ಅಭಿಮಾನದಿಂದ ಹಾರೈಸಿ ಸರಳ ಬೀಳ್ಕೊಡುಗೆ ಸಮಾರಂಭದ ಮೂಲಕ ಬೀಳ್ಕೊಟ್ಟಿದ್ದಾರೆ. ಡಾ ॥ ವಿಷ್ಣು ಸೇನಾ ಸಮಿತಿ ಅಧ್ಯಕ್ಷರಾದ ಮಹಮದ್ ಸಾಧಿಕ್ ರವರು ಮಾತನಾಡಿ , ನಿಜಲಿಂಗಪ್ಪರವರು ಸಜ್ಜನ ಪ್ರಾಮಾಣಿಕ ನೌಕರರಾಗಿದ್ದರು. ಅವರು ಕಿಂಚಿತ್ತು ಯಾವುದೇ ದೋಷರೋಪಗಳಿಲ್ಲದೆ , ನಿಷ್ಕಳಂಕದಿಂದ ಮೂರುವರೆ ದಶಕಗಳ ಕಾಲ ಸೇವೆ ಸಲ್ಲಿಸಿದ್ದು. ನಿಜಲಿಂಗಪ್ಪರವರ ಸಾರ್ಥಕ ಸೇವೆಗಾಗಿ , ಅವರನ್ನು ಅವರ ಮಡದಿಯೊಡಗೂಡಿ ತಾವು ಗೌರವಿಸಿ ಸನ್ಮಾನಿಸುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಅವರಿಗೆ ಮುಂದಿನ ಆರೋಗ್ಯ ಆಯಸ್ಸು ಸುಖಮಯವಾಗಿರಲೆಂದು , ತಾವು ದೇವರಲ್ಲಿ ಕೋರುವುದಾಗಿ ಅವರು ತಿಳಿಸಿದ್ದಾರೆ. ವಿಷ್ಣು ಸೇನಾ ಸಮಿತಿ ಮುಖಂಡರಾದ ಜನನಾಯಕ ಕುರಿಹಟ್ಟಿ ಓಬಣ್ಣ , ಮಲಿಯಪ್ಪ , ರಾಜು ಸೇರಿದಂತೆ. ವಿವಿದ ಸಂಘಟನೆಗಳ ಪದಾಧಿಕಾರಿಗಳು ಸದಸ್ಯರು. ಮತ್ತು ಆರೊಗ್ಯ ಇಲಾಖಾಧಿಕಾರಿಗಳು ಸಿಬ್ಬಂದಿಯವರು ಉಪಸ್ಥಿತರಿದ್ದು. ನಿಜಲಿಂಗಪ್ಪರವರಿಗೆ ನಿವೃತ್ತಿ ಜೀವನ , ಸುಖಮಯವಾಗಿರಲೆಂದು ಶುಭ ಹಾರೈಸಿದ್ದಾರೆ. ✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ - 9008937428 / 8151937428*3
- ತಾಲ್ಲೂಕು ಕಚೇರಿ ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ ತಹಶಿಲ್ದಾರ್ ಕಚೇರಿ ಬಳಿ ಪ್ರತಿಭಟನೆ ತಾಲ್ಲೂಕು ಕಚೇರಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಜಮೀನು ವರ್ಗಾವಣೆ ಮಾಡಿದ್ದು ಇದನ್ನ ಖಂಡಿಸಿ ಕರುನಾಡ ವಿಜಯ ಸೇನೆ ವತಿಯಿಂದ ಚಿತ್ರದುರ್ಗದ ತಹಶಿಲ್ದಾರ್ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು. ಗೂಳಯ್ಯನಹಟ್ಟಿ ಗ್ರಾಮದ ವಾಸಿಯಾದ ಚಂದ್ರಪ್ಪ ಅವರ ಹೆಸರಿಗೆ ಚಿಕ್ಕಪುರ ಗ್ರಾಮದ ರಿ.ಸ. ನಂ:8/1 ರಲ್ಲಿ 2 ಎಕರೆ 20 ಗುಂಟೆ ಜಮೀನು ಇರುತ್ತದೆ. ಜಮೀನಿನ ಪೈಕಿ 1 ಎಕರೆ 20 ಗುಂಟೆ ಜಮೀನನ್ನು ಸರ್ವೆ ಸ್ಟೇಚ್ ನಕ್ಷೆ ಸಂಖ್ಯೆ ಚಿತ್ರದುರ್ಗ ಉಪನೋಂದಣಾಧಿಕಾರಿಗಳ ಕಛೇರಿಯಲ್ಲಿ ನೊಂದಣಿ ಆಗಿರುತ್ತದೆ. ಇದರ ಪ್ರಕಾರ ಕಾನೂನುಬದ್ದವಾಗಿ ಜಯಲಕ್ಷ್ಮಿ ಇವರಿಗೆ 1 ಎಕರೆ 20 ಗುಂಟೆ ಜಮೀನು ಪಹಣಿ ವರ್ಗಾವಣೆಯಾಗಬೇಕಾಗಿದ್ದು, ಆದರೆ ತಾಲ್ಲೂಕು ಕಛೇರಿಯ ಅಧಿಕಾರಿಗಳ ನಿರ್ಲಕ್ಷ್ಯತನ ಮತ್ತು ಬೇಜವಾಬ್ದಾರಿತನದಿಂದ ಪೂರಾ 2 ಎಕರೆ 20 ಗುಂಟೆ ಜಮೀನು ಜಯಲಕ್ಷ್ಮೀ ಇವರ ಹೆಸರಿಗೆ ಪಹಣಿ ಮಾಡಲು ಮುಂದಾಗಿರುತ್ತಾರೆ1
- ಚಿತ್ರದಲ್ಲಿರುವ ಪತ್ರದ ವಿವರಗಳನ್ನು ಆಧರಿಸಿ ಸಿದ್ಧಪಡಿಸಲಾದ ಸುದ್ದಿ ವರದಿ ಇಲ್ಲಿದೆ: ಚಿತ್ರದಲ್ಲಿರುವ ಪತ್ರದ ವಿವರಗಳನ್ನು ಆಧರಿಸಿ ಸಿದ್ಧಪಡಿಸಲಾದ ಸುದ್ದಿ ವರದಿ ಇಲ್ಲಿದೆ: ಚಿತ್ರದುರ್ಗ: ಆಗಸ್ಟ್ 3 ರೊಳಗೆ ಕ್ರಮ ಕೈಗೊಳ್ಳದಿದ್ದರೆ ತಹಶೀಲ್ದಾರ್ ಕಚೇರಿ ಮುಂದೆ ಧರಣಿ ಸತ್ಯಾಗ್ರಹದ ಎಚ್ಚರಿಕೆ ಚಿತ್ರದುರ್ಗ: ತಾಲೂಕಿನ ಹಿರೇಗುಂಟನೂರು ಹೋಬಳಿ, ಗೂಳಯ್ಯನಹಟ್ಟಿ ಗ್ರಾಮದ ಜಮೀನು ವರ್ಗಾವಣೆಯಲ್ಲಿ ನಡೆದಿರುವ ಅಧಿಕಾರ ದುರುಪಯೋಗ ಮತ್ತು ಅನ್ಯಾಯವನ್ನು ಖಂಡಿಸಿ, ಬರುವ ಆಗಸ್ಟ್ 3 ರೊಳಗೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ತಾಲೂಕು ದಂಡಾಧಿಕಾರಿಗಳಾದ ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿ ಧರಣಿ ಸತ್ಯಾಗ್ರಹ ನಡೆಸುವುದಾಗಿ ಕರುನಾಡು ವಿಜಯ ಸೇನೆ ಹಾಗೂ ಬಿ.ಜೆ.ಪಿ. ನಗರ ಉಪಾಧ್ಯಕ್ಷರಾದ ಬಿ.ಆರ್. ನಾಗರಾಜ್ ಮತ್ತು ರೈತರು ಜಿಲ್ಲಾಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಈ ಕುರಿತು ಚಿತ್ರದುರ್ಗ ಜಿಲ್ಲಾಧಿಕಾರಿಗಳಿಗೆ ಲಿಖಿತ ಮನವಿ ಸಲ್ಲಿಸಲಾಗಿದ್ದು, ಅದರ ಪ್ರಮುಖ ವಿವರಗಳು ಈ ಕೆಳಗಿನಂತಿವೆ: ಪ್ರಕರಣದ ಹಿನ್ನೆಲೆ: ಗೂಳಯ್ಯನಹಟ್ಟಿ ಗ್ರಾಮದ ನಿವಾಸಿಯಾದ ಚಂದ್ರಪ್ಪ ಬಿನ್ ಈರಪ್ಪ ಎಂಬುವವರ ಹೆಸರಿಗೆ ಚಿತ್ರದುರ್ಗ ತಾಲೂಕಿನ ಹಿರೇಗುಂಟನೂರು ಹೋಬಳಿಯ ಸ. ನಂ: 8/1 ರಲ್ಲಿ ಒಟ್ಟು 2 ಎಕರೆ 20 ಗುಂಟೆ ಜಮೀನು ಇರುತ್ತದೆ. ಜಮೀನು ವರ್ಗಾವಣೆ: ಈ ಜಮೀನಿನ ಪೈಕಿ 1 ಎಕರೆ 20 ಗುಂಟೆ ಜಮೀನನ್ನು ಸರ್ವೆ ಸ್ಕೆಚ್ ನಕ್ಷೆ ಸಂಖ್ಯೆ: 13030925111232001 ರ ಪ್ರಕಾರ ದಿನಾಂಕ 19-05-2026 ರಂದು ಶ್ರೀಮತಿ ಜಯಲಕ್ಷ್ಮಿ ಎಂಬುವವರಿಗೆ ಚಿತ್ರದುರ್ಗ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿ ಮಾಡಿಕೊಡಲಾಗಿತ್ತು. ಕಾನೂನುಬದ್ಧವಾಗಿ ಕೇವಲ 1 ಎಕರೆ 20 ಗುಂಟೆ ಜಮೀನು ಮಾತ್ರ ವರ್ಗಾವಣೆಯಾಗಬೇಕಿತ್ತು. ಅಧಿಕಾರಿಗಳ ನಿರ್ಲಕ್ಷ್ಯದ ಆರೋಪ: ತಾಲೂಕು ಕಚೇರಿಯ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನದಿಂದಾಗಿ, ಇಡೀ 2 ಎಕರೆ 20 ಗುಂಟೆ ಜಮೀನನ್ನು ಶ್ರೀಮತಿ ಜಯಲಕ್ಷ್ಮಿ ಅವರ ಹೆಸರಿಗೆ ಪಹಣಿ ಮಾಡಲು ಮುಂದಾಗಿದ್ದಾರೆ ಎಂದು ಮನವಿಯಲ್ಲಿ ದೂರಲಾಗಿದೆ. ಇದರಿಂದಾಗಿ ಚಂದ್ರಪ್ಪ ಅವರಿಗೆ ಉಳಿಯಬೇಕಾದ 1 ಎಕರೆ ಜಮೀನು ಕೈತಪ್ಪಿ ಅನ್ಯಾಯವಾಗುತ್ತಿದೆ. ಅರ್ಜಿ ತಿರಸ್ಕಾರ: ಈ ಅನ್ಯಾಯದ ವಿರುದ್ಧ ಚಂದ್ರಪ್ಪ ಅವರು ದಿನಾಂಕ 31-08-2026 ರಂದು (ಪತ್ರದಲ್ಲಿ ಉಲ್ಲೇಖಿಸಿರುವಂತೆ) ಸಂಬಂಧಪಟ್ಟ ಅಧಿಕಾರಿಗಳಿಗೆ ಲಿಖಿತವಾಗಿ ಆಕ್ಷೇಪಣೆ ಸಲ್ಲಿಸಿದ್ದರೂ ಸಹ, ಅಧಿಕಾರಿಗಳು ಯಾವುದೇ ಆನ್‌ಲೈನ್ ಅರ್ಜಿಯನ್ನು ಸ್ವೀಕರಿಸದೆ ತಿರಸ್ಕರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಪ್ರತಿಭಟನೆಯ ಎಚ್ಚರಿಕೆ: ಈ ಗಂಭೀರ ಜಮೀನು ಅಕ್ರಮ ಹಾಗೂ ರೈತರಿಗೆ ಆಗಿರುವ ಅನ್ಯಾಯದ ವಿರುದ್ಧ ದಿನಾಂಕ 03-08-2026 ರ ಒಳಗಾಗಿ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ, ಸಮಾಜ ಸೇವಕರು ಹಾಗೂ ಬಿ.ಜೆ.ಪಿ. ನಗರ ಉಪಾಧ್ಯಕ್ಷರಾದ ಬಿ.ಆರ್. ನಾಗರಾಜ್ ಮತ್ತು ಸಮಸ್ತ ರೈತರು ಒಟ್ಟಾಗಿ ತಾಲೂಕು ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳುವುದಾಗಿ ಪತ್ರದ ಮೂಲಕ ಕರುನಾಡು ವಿಜಯ ಸೇನೆಯ ಜಿಲ್ಲಾಧ್ಯಕ್ಷರಾದ ಕೆ.ಟಿ. ಶಿವಕುಮಾರ್ ಎಚ್ಚರಿಸಿದ್ದಾರೆ. ಮನವಿ ಪತ್ರಕ್ಕೆ ಹಲವು ರೈತರು ಸಹಿ ಹಾಕಿ ಬೆಂಬಲ ಸೂಚಿಸಿದ್ದಾರೆ.2