ಶಿಕ್ಷಕರ ನೇಮಕಾತಿಯಲ್ಲಿ SC/ST ಅಭ್ಯರ್ಥಿಗಳಿಗೆ 10 ವರ್ಷ ವಯೋಸಡಿಲಿಕೆಗೆ ಆಗ್ರಹ ಬಳ್ಳಾರಿ: ರಾಜ್ಯದಲ್ಲಿ ನಡೆಯಲಿರುವ 15 ಸಾವಿರ ಶಿಕ್ಷಕರ ನೇಮಕಾತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಕನಿಷ್ಠ 10 ವರ್ಷ ವಯೋಮಿತಿ ಸಡಿಲಿಕೆ ನೀಡಬೇಕು ಎಂದು ಮಹಾನಾಯಕ ಡಾ. ಬಿ.ಆರ್. ಅಂಬೇಡ್ಕರ್ ಸಂಘರ್ಷ ಸಮಿತಿ (ರಿ) ಆಗ್ರಹಿಸಿದೆ. ಈ ಕುರಿತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಹಾಗೂ ಶಾಲಾ ಶಿಕ್ಷಣ ಇಲಾಖೆ ಆಯುಕ್ತರಿಗೆ, ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿರುವ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಕೆ.ಎಚ್. ಮಹೇಶ್ ಕುರುವಳ್ಳಿ, ಪ್ರಸ್ತುತ ಶಿಕ್ಷಕರ ನೇಮಕಾತಿ ಅಧಿಸೂಚನೆಯಲ್ಲಿ SC/ST ಅಭ್ಯರ್ಥಿಗಳಿಗೆ ನೀಡಿರುವ ವಯೋಮಿತಿ ಸಡಿಲಿಕೆ ಅತ್ಯಂತ ಅಲ್ಪವಾಗಿದೆ ಎಂದು ತಿಳಿಸಿದ್ದಾರೆ. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 40 ವರ್ಷ ವಯೋಮಿತಿ ನಿಗದಿಪಡಿಸಿ, SC/ST ಅಭ್ಯರ್ಥಿಗಳಿಗೆ ಕೇವಲ ಐದು ವರ್ಷ ಸಡಿಲಿಕೆ ನೀಡಿ 45 ವರ್ಷಕ್ಕೆ ಮಿತಿಗೊಳಿಸಿರುವುದು ಅನ್ಯಾಯವಾಗಿದೆ. ಹಲವು ವರ್ಷಗಳಿಂದ ಶಿಕ್ಷಕರ ನೇಮಕಾತಿ ನಡೆಯದ ಹಿನ್ನೆಲೆಯಲ್ಲಿ ಅನೇಕ ಅರ್ಹ SC/ST ಅಭ್ಯರ್ಥಿಗಳು ವಯೋಮಿತಿ ದಾಟಿದ್ದು, ಉದ್ಯೋಗಾವಕಾಶದಿಂದ ವಂಚಿತರಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಹೇಳಿದ್ದಾರೆ. ಸಂವಿಧಾನದ ಅನುಚ್ಛೇದ 16(4), 335 ಮತ್ತು 46ರ ಆಶಯದಂತೆ ಹಿಂದುಳಿದ ಸಮುದಾಯಗಳಿಗೆ ಉದ್ಯೋಗದಲ್ಲಿ ಸಮರ್ಪಕ ಪ್ರಾತಿನಿಧ್ಯ ಹಾಗೂ ಅಗತ್ಯ ಸೌಲಭ್ಯ ಕಲ್ಪಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಹೀಗಾಗಿ ಕರ್ನಾಟಕದಲ್ಲಿಯೂ SC/ST ಅಭ್ಯರ್ಥಿಗಳಿಗೆ ಕನಿಷ್ಠ 10 ವರ್ಷ ವಯೋಸಡಿಲಿಕೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಸಮಿತಿಯ ಪ್ರಮುಖ ಬೇಡಿಕೆಗಳು SC/ST ಅಭ್ಯರ್ಥಿಗಳಿಗೆ ವಯೋಮಿತಿಯನ್ನು 50 ವರ್ಷಕ್ಕೆ ಹೆಚ್ಚಿಸಬೇಕು. ಕಲ್ಯಾಣ ಕರ್ನಾಟಕ ಭಾಗದ SC/ST ಅಭ್ಯರ್ಥಿಗಳಿಗೆ ಹೆಚ್ಚುವರಿ 3 ವರ್ಷ ಸಡಿಲಿಕೆ ನೀಡಬೇಕು. ಈಗಾಗಲೇ ಹೊರಡಿಸಿರುವ ನೇಮಕಾತಿ ಅಧಿಸೂಚನೆಗೆ ತಿದ್ದುಪಡಿ ಮಾಡಿ ಮರು-ಅಧಿಸೂಚನೆ ಹೊರಡಿಸಬೇಕು. ಈ ಬೇಡಿಕೆಗಳನ್ನು ಏಳು ದಿನಗಳೊಳಗೆ ಈಡೇರಿಸದಿದ್ದರೆ ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಹಾಗೂ ರಾಜ್ಯವ್ಯಾಪಿ ಹೋರಾಟ ನಡೆಸಲಾಗುವುದು ಎಂದು ಮಹೇಶ್ ಕುರುವಳ್ಳಿ ಎಚ್ಚರಿಸಿದ್ದಾರೆ.
ಶಿಕ್ಷಕರ ನೇಮಕಾತಿಯಲ್ಲಿ SC/ST ಅಭ್ಯರ್ಥಿಗಳಿಗೆ 10 ವರ್ಷ ವಯೋಸಡಿಲಿಕೆಗೆ ಆಗ್ರಹ ಬಳ್ಳಾರಿ: ರಾಜ್ಯದಲ್ಲಿ ನಡೆಯಲಿರುವ 15 ಸಾವಿರ ಶಿಕ್ಷಕರ ನೇಮಕಾತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಕನಿಷ್ಠ 10 ವರ್ಷ ವಯೋಮಿತಿ ಸಡಿಲಿಕೆ ನೀಡಬೇಕು ಎಂದು ಮಹಾನಾಯಕ ಡಾ. ಬಿ.ಆರ್. ಅಂಬೇಡ್ಕರ್ ಸಂಘರ್ಷ ಸಮಿತಿ (ರಿ) ಆಗ್ರಹಿಸಿದೆ. ಈ ಕುರಿತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಹಾಗೂ ಶಾಲಾ ಶಿಕ್ಷಣ ಇಲಾಖೆ ಆಯುಕ್ತರಿಗೆ, ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿರುವ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಕೆ.ಎಚ್. ಮಹೇಶ್ ಕುರುವಳ್ಳಿ, ಪ್ರಸ್ತುತ ಶಿಕ್ಷಕರ ನೇಮಕಾತಿ ಅಧಿಸೂಚನೆಯಲ್ಲಿ SC/ST ಅಭ್ಯರ್ಥಿಗಳಿಗೆ ನೀಡಿರುವ ವಯೋಮಿತಿ ಸಡಿಲಿಕೆ ಅತ್ಯಂತ ಅಲ್ಪವಾಗಿದೆ ಎಂದು ತಿಳಿಸಿದ್ದಾರೆ. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 40 ವರ್ಷ ವಯೋಮಿತಿ ನಿಗದಿಪಡಿಸಿ, SC/ST ಅಭ್ಯರ್ಥಿಗಳಿಗೆ ಕೇವಲ ಐದು ವರ್ಷ ಸಡಿಲಿಕೆ ನೀಡಿ 45 ವರ್ಷಕ್ಕೆ ಮಿತಿಗೊಳಿಸಿರುವುದು ಅನ್ಯಾಯವಾಗಿದೆ. ಹಲವು ವರ್ಷಗಳಿಂದ ಶಿಕ್ಷಕರ ನೇಮಕಾತಿ ನಡೆಯದ ಹಿನ್ನೆಲೆಯಲ್ಲಿ ಅನೇಕ ಅರ್ಹ SC/ST ಅಭ್ಯರ್ಥಿಗಳು ವಯೋಮಿತಿ ದಾಟಿದ್ದು, ಉದ್ಯೋಗಾವಕಾಶದಿಂದ ವಂಚಿತರಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಹೇಳಿದ್ದಾರೆ. ಸಂವಿಧಾನದ ಅನುಚ್ಛೇದ 16(4), 335 ಮತ್ತು 46ರ ಆಶಯದಂತೆ ಹಿಂದುಳಿದ ಸಮುದಾಯಗಳಿಗೆ ಉದ್ಯೋಗದಲ್ಲಿ ಸಮರ್ಪಕ ಪ್ರಾತಿನಿಧ್ಯ ಹಾಗೂ ಅಗತ್ಯ ಸೌಲಭ್ಯ ಕಲ್ಪಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಹೀಗಾಗಿ ಕರ್ನಾಟಕದಲ್ಲಿಯೂ SC/ST ಅಭ್ಯರ್ಥಿಗಳಿಗೆ ಕನಿಷ್ಠ 10 ವರ್ಷ ವಯೋಸಡಿಲಿಕೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಸಮಿತಿಯ ಪ್ರಮುಖ ಬೇಡಿಕೆಗಳು SC/ST ಅಭ್ಯರ್ಥಿಗಳಿಗೆ ವಯೋಮಿತಿಯನ್ನು 50 ವರ್ಷಕ್ಕೆ ಹೆಚ್ಚಿಸಬೇಕು. ಕಲ್ಯಾಣ ಕರ್ನಾಟಕ ಭಾಗದ SC/ST ಅಭ್ಯರ್ಥಿಗಳಿಗೆ ಹೆಚ್ಚುವರಿ 3 ವರ್ಷ ಸಡಿಲಿಕೆ ನೀಡಬೇಕು. ಈಗಾಗಲೇ ಹೊರಡಿಸಿರುವ ನೇಮಕಾತಿ ಅಧಿಸೂಚನೆಗೆ ತಿದ್ದುಪಡಿ ಮಾಡಿ ಮರು-ಅಧಿಸೂಚನೆ ಹೊರಡಿಸಬೇಕು. ಈ ಬೇಡಿಕೆಗಳನ್ನು ಏಳು ದಿನಗಳೊಳಗೆ ಈಡೇರಿಸದಿದ್ದರೆ ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಹಾಗೂ ರಾಜ್ಯವ್ಯಾಪಿ ಹೋರಾಟ ನಡೆಸಲಾಗುವುದು ಎಂದು ಮಹೇಶ್ ಕುರುವಳ್ಳಿ ಎಚ್ಚರಿಸಿದ್ದಾರೆ.
- ಬಳ್ಳಾರಿಯಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಸಂಜೆ ತರಗತಿ! ಗಣೇಶೋತ್ಸವದಂದು ಊಟ–ಪ್ರಸಾದ ವಿತರಣೆ ಬಳ್ಳಾರಿ ಸಮೀಪದ ಸಂಗನಕಲ್ಲು ಗ್ರಾಮದ ಅಂಬೇಡ್ಕರ್ ನಗರದಲ್ಲಿ ವಿಶ್ವಚೇತನ ಸಮೃದ್ಧಿ ಸೇವಾ ಟ್ರಸ್ಟ್ ವತಿಯಿಂದ ಸರ್ಕಾರಿ ಶಾಲಾ ಮಕ್ಕಳಿಗಾಗಿ ಉಚಿತ ಸಂಜೆ ತರಗತಿ ಹಾಗೂ ಊಟ/ತಿಂಡಿ ವ್ಯವಸ್ಥೆ ಮಾಡಲಾಯಿತು. ಗಣೇಶ ಚತುರ್ಥಿ ಅಂಗವಾಗಿ ಟ್ಯೂಷನ್ ಕೇಂದ್ರದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ, ಮಕ್ಕಳಿಂದ ಸಾಮೂಹಿಕ ಪ್ರಾರ್ಥನೆ ಹಾಗೂ ಶಾಂತಿ ಮಂತ್ರ ಪಠಣ ನಡೆಸಲಾಯಿತು. ಬಳಿಕ ಮಕ್ಕಳಿಗೆ ಸಿಹಿ ಪ್ರಸಾದ ವಿತರಿಸಲಾಯಿತು. ಮಕ್ಕಳಿಗೆ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ಮತ್ತು ಸಾಮಾಜಿಕ ಮೌಲ್ಯಗಳನ್ನು ಬೆಳೆಸುವ ಉದ್ದೇಶದಿಂದ ಈ ಸೇವಾ ಕಾರ್ಯ ನಡೆಯುತ್ತಿದೆ ಎಂದು ಟ್ರಸ್ಟ್ ಅಧ್ಯಕ್ಷ ಟಿ.ನಾಗರಾಜ್ ತಿಳಿಸಿದ್ದಾರೆ. 📍 ಸಂಗನಕಲ್ಲು, ಬಳ್ಳಾರಿ 📅 15-09-2026 ASN NEWS24 ಕನ್ನಡ — ಸುತ್ತಮುತ್ತ ನಡೆಯುವ ಸುದ್ದಿ, ಸಾರ್ವಜನಿಕ ಸಮಸ್ಯೆಗಳು ಮತ್ತು ಜನರ ಧ್ವನಿ. #Ballari #Bellary #Karnataka #KannadaNews #BreakingNews #Education #GovernmentSchool #GovernmentSchoolStudents #FreeEducation #FreeTuition #GaneshChaturthi #GaneshFestival #Ganeshotsav #SocialService #StudentSupport #Sanganakallu #BallariNews #KarnatakaNews #ASNNews24 #ASNNews24Kannada #ಕರ್ನಾಟಕ #ಬಳ್ಳಾರಿ #ಕನ್ನಡಸುದ್ದಿ #ಗಣೇಶೋತ್ಸವ1
- ಬರದ ಬೇಗುದಿ: ಶೇಂಗಾ ಬೆಳೆ ಉಳಿಸಲು ಟ್ಯಾಂಕರ್ ನೀರಿನ ಮೊರೆ: ಸಾಲ ಮಾಡಿ ನೀರುಣಿಸುತ್ತಿರುವ ರೈತರು ಕೂಡ್ಲಿಗಿ: ಮಳೆ ಕೈಕೊಟ್ಟ ಪರಿಣಾಮ ಬಿತ್ತನೆ ಮಾಡಿರುವ ಶೇಂಗಾ ಬೆಳೆ ಒಣಗುವ ಹಂತಕ್ಕೆ ತಲುಪಿದ್ದು, ಬೆಳೆ ಉಳಿಸಿಕೊಳ್ಳಲು ರೈತರು ಪರದಾಡುವಂತಾಗಿದೆ. ಗುಡೇಕೋಟೆ ಗ್ರಾಮದ ರೈತ ಶಾಮ್ ರಾವ್ ಅವರು ಮಳೆಯ ನಿರೀಕ್ಷೆಯಲ್ಲಿದ್ದ ಶೇಂಗಾ ಬೆಳೆಗೆ ಟ್ಯಾಂಕರ್ ಮೂಲಕ ನೀರುಣಿಸುತ್ತಿರುವ ದೃಶ್ಯ ರೈತರ ಸಂಕಷ್ಟಕ್ಕೆ ಕನ್ನಡಿ ಹಿಡಿದಂತಾಗಿದೆ. ಶಾಮ್ ರಾವ್ ಅವರು ತಮ್ಮ ಮೂರುವರೆ ಎಕರೆ ಜಮೀನಿನಲ್ಲಿ ಶೇಂಗಾ ಬಿತ್ತನೆ ಮಾಡಿದ್ದು, ಉತ್ತಮ ಮಳೆಯ ನಿರೀಕ್ಷೆಯಲ್ಲಿದ್ದರು. ಆದರೆ ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಬೆಳೆ ತೇವಾಂಶದ ಕೊರತೆಯಿಂದ ಒಣಗುವ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಬೆಳೆ ಉಳಿಸಿಕೊಳ್ಳುವ ಕೊನೆಯ ಪ್ರಯತ್ನವಾಗಿ ಟ್ರ್ಯಾಕ್ಟರ್ ಮೂಲಕ ಟ್ಯಾಂಕರ್ ನೀರನ್ನು ಹೊಲಕ್ಕೆ ಸಾಗಿಸಿ ಶೇಂಗಾ ಬೆಳೆಗೆ ನೀರು ಹಾಯಿಸುತ್ತಿದ್ದಾರೆ. ಈಗಾಗಲೇ ಒಂದು ಟ್ಯಾಂಕರ್ ನೀರಿಗೆ ₹500ರಂತೆ 10 ಟ್ಯಾಂಕರ್ ನೀರು ಹಾಕಲಾಗಿದ್ದು, ನೀರಿಗಾಗಿಯೇ ಸುಮಾರು ₹5,000 ವೆಚ್ಚವಾಗಿದೆ. ಮುಂದಿನ ದಿನಗಳಲ್ಲಿಯೂ ಮಳೆ ಬಾರದಿದ್ದರೆ ಇನ್ನಷ್ಟು ನೀರು ಹಾಕಬೇಕಾದ ಅನಿವಾರ್ಯತೆ ರೈತನ ಮುಂದಿದೆ.1
- *ಕೂಡ್ಲಿಗಿ : ನಾಗರೀಕ ಹಿತರಕ್ಷಣಾ ವೇದಿಕೆಯಿಂದ , ಅದ್ಧೂರಿ ಊರಗಣಪ ಪ್ರತಿಷ್ಠಾನೆ*-ವಿಜಯನಗರ ಜಿಲ್ಲೆ ಕೂಡ್ಲಿಗಿ : ಸೆಪ್ಟೆಂಬರ್ 14ರಂದು ಪಟ್ಟಣದ ಮೇನ್ ಬಾಯ್ಸ್ ಶಾಲೆಯ ಆವರಣದಲ್ಲಿ , ಶ್ರೀಗಣೇಶ ಚತುರ್ಥಿ ಪ್ರಯುಕ್ತ ನಾಗರೀಕ ಹಿತರಕ್ಷಣೆ ವೇದಿಕೆ ವತಿಯಿಂದ ಗಣೇಶ ಮೂರ್ತಿ ಪ್ರತಿಷ್ಠಾಮನೆ ಅದ್ಧೂರಿಯಾಗಿ ಜರುಗಿತು. ನಾಗರೀಕ ಹಿತರಕ್ಷಣ ವೇದಿಕೆ ಅಧ್ಯಕ್ಷರಾದ ಕಾವಲ್ಲಿ ಶಿವಪ್ಪನಾಯಕ ನೇತೃತ್ವದಲ್ಲಿ , ಪ್ರತಿ ವರ್ಷಗಳಂತೆಯೇ ಗಣೇಶ ಮೂರ್ತಿ ದಾನಿಗಳು. ಹಾಗೂ ಗೌಡ ಮನೆತನದ ಮುಖಂಡರಾದ , ಪಟ್ಟಣದ ಹೆಚ್.ವೀರನಗೌಡ ರವರ ಮನೆಯಿಂದ , ಗಣೇಶನ ಬೃಹತ್ ಗಾತ್ರದ ಗಣೇಶ ಮೂರ್ತಿಯನ್ನು. ಶಾಸ್ತ್ರೋಕ್ತವಾಗಿ ಪೂಜಿಸಿ ವಾಹನದಲ್ಲಿರಿಸಿಕೊಂಡು , ಪಟ್ಟಣದ ಪ್ರಮುಖ ರಸ್ತೆಯ ಮೂಲಕ ಬಹು ಅದ್ಧೂರಿಯಾಗಿ ಮೆರವಣಿಗೆ ಸಾಗಿ ವೇದಿಕೆಗೆ ಕರೆತರಲಾಯಿತು. ಪಟ್ಟಣದ ಶ್ರೀಚಂದ್ರಶೇಖರ ಆಜಾದ್ ರಂಗಮಂದಿರದ ವೇದಿಕೆ ಯಲ್ಲಿ , ಪುರೋಹಿತರಾದ ಎಮ್ ಎಮ್ ಉಮೇಶರವರ ನೇತೃತ್ವದಲ್ಲಿ. ಧಾರ್ಮಿಕ ವಿಧಿ ವಿಧಾನದೊಂದಿಗೆ ಪೂಜಿಸಿ ಪ್ರತಿಷ್ಠಾಪಿಸಲಾಯಿತು, ತದನಂತರ ಗಣೇಶ ಮೂರ್ತಿಯನ್ನು ಪ್ರತಿಷ್ಟಾಪಿಸಲಾಯಿತು. ನಂತರ ವೇದಭ್ರಾಹ್ಮಣ ಆರಾಧಕರಾದ ಬ್ರಹ್ಮಲಿಂಗಾಚಾರಿಗಳ ಪುರೋಹಿತ್ವದಲ್ಲಿ , ಪೂಜಾ ಕೈಂ ಕರ್ಯಗಳಾದಿಗಳನ್ನು ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ನಾಗರೀಕರ ಹಿತರಕ್ಷಣಾ ಸಮಿತಿಯ ಎಲ್ಲಾ ಪದಾಧಿಕಾರಿಗಳು ಸದಸ್ಯರು , ಹಿರಿಯನಾಗರೀಕರು , ಹಿರಿಯರು , ಗಣ್ಯರು ಮುಖಂಡರು , ನೂರಾರು ಸಾರ್ವಜನಿಕರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ - 9008937428 / 8151937428*4
- ಅಳವಂಡಿ-ಬೆಟ್ಟಗೇರಿ ಏತ ನೀರಾವರಿ ಯೋಜನೆಯಡಿ ಶೀಘ್ರವೇ 9000 ಎಕರೆ ಜಮೀನಿಗೆ ನೀರು: ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಕೊಪ್ಪಳ : ತಾಲೂಕಿನ ಬಹುನಿರೀಕ್ಷಿತ ಅಳವಂಡಿ-ಬೆಟ್ಟಗೇರಿ ಏತ ನೀರಾವರಿ ಯೋಜನೆಯ ಕಾಮಗಾರಿಗಳು ಭರದಿಂದ ಸಾಗುತ್ತಿದ್ದು, ಶೀಘ್ರದಲ್ಲೇ ಒಟ್ಟು 9000 ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು ಎಂದು ಕೊಪ್ಪಳ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ್ ಅವರು ಹೇಳಿದರು. ನಗರದ ಎಸ್.ಎಫ್. ಶಾಲೆಯ ಎದುರುಗಡೆಯಿರುವ ತಮ್ಮ ಕಾರ್ಯಾಲಯದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಅಳವಂಡಿ ಬೇಟಗೇರಿ ಏತ ನೀರಾವರಿ ಯೋಜನೆಯು ಕೊಪ್ಪಳ ತಾಲ್ಲೂಕಿನ ಹನಕುಂಟಿ ಗ್ರಾಮದಿಂದ 2 ಕಿ.ಮೀ. ಹತ್ತಿರದಲ್ಲಿರುತ್ತದೆ. ಸದರಿ ಯೋಜನೆಗೆ ಮೂಲತಃ ಕೃಷ್ಣ ಕೊಳ್ಳದ ವ್ಯಾಪ್ತಿಯಲ್ಲಿ ಬರುವ ತುಂಗಭದ್ರ ನದಿಯಿಂದ 0.50 ಟಿ.ಎಂ.ಸಿ ನೀರನ್ನು ಹಂಚಿಕೆ ಮಾಡಲಾಗಿದೆ. ಈ ಯೋಜನೆಯಿಂದ ಕೊಪ್ಪಳ ಜಿಲ್ಲೆಯ ವ್ಯಾಪ್ತಿಗೆ ಒಳಪಡುವ ಒಟ್ಟು 9000 ಏಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಬಹುದಾಗಿರುತ್ತದೆ. ಈ ಯೋಜನೆಗೆ ಈ ಹಿಂದೆ 87.10 ಕೋಟಿಗಳಿಗೆ ಡಿ.ಪಿ.ಆರ್ ಅನ್ನು ಸರ್ಕಾರಕ್ಕೆ ಸಲ್ಲಸಿ ದಿನಾಂಕ: 30.12.2014 ರಂದು ಆಡಳಿತಾತ್ಮಕ ಅನುಮೋದನೆ ನೀಡಲಾಗಿರುತ್ತದೆ ಎಂದರು. ಜಾಕ್‌ವೆಲ್, ಇನ್‌ಟೇಕ್ ಕಾಲುವೆ. ರೈಸಿಂಗ್ ಮೇನ್, ಡೆಲಿವರಿ ಚೇಂಬರ್ ಹಾಗೂ ಟ್ರಾನ್ಸ್‌ಮಿಷನ್ ಲೈನ್, 33 ಕೆವಿ ಸಬ್ ಸ್ಟೇಷನ್ ನಿರ್ಮಾಣ ಕಾಮಗಾರಿಗಳನ್ನು ಗುತ್ತಿಗೆದಾರರಾದ ಜಿ.ಶಂಕರ್ ರವರಿಗೆ ಟೆಂಡರ್ ಆಧಾರದ ಮೇಲೆ 61.30 ಕೋಟಿಗಳಿಗೆ 21.02.2016 ರಂದು ವಹಿಸಲಾಗಿತ್ತು. ಈ ಯೋಜನೆಯಡಿ ಜಾಕ್‌ವೆಲ್, ಇನ್‌ಟೀಕ್ ಕಾಲುವೆ ಉದ್ದ 1.02 ಕಿ.ಮೀ. 16.50ಕಿ.ಮೀ ಉದ್ದ ಎಂಎಸ್ ರೈಸಿಂಗ್ ಮೇನ್, 1760 ಹೆಚ್.ಪಿ ಸಾಮರ್ಥ್ಯದ 2+1 ಪಂಪ್ ಮತ್ತು ಮೋಟಾರಗಳು, 2 ಡೆಲವರಿ ಚೇಂಬರ್‌ಗಳು. ಜಾಕ್‌ವೆಲ್ ಪಕ್ಕದಲ್ಲಿ 33/6.6 ಕೆವಿ ಸಬ್ ಸ್ಟೇಷನ್, 6.10 ಕಿ.ಮೀ ಉದ್ದ ಟ್ರಾನ್ಸ್‌ಮಿಷನ್ ಲೈನ್ ಹಾಗೂ ಟರ್ಮಿನಲ್ ಬೇ ಸಿರ್ಮಿಸಲಾಗಿರುತ್ತದೆ. ದಿನಾಂಕ 10.09.2026 ರಂದು ಸಬ್ ಸ್ಟೇಷನ್ ಚಾರ್ಜ್ ಮಾಡಲಾಗಿರುತ್ತದೆ ಎಂದು ಹೇಳಿದರು. ಪ್ರತಿ ಪಂಪ್‌ನಿಂದ 28.28 ಕ್ಯೂಸೆಕ್ಸ್ ರಂತೆ ಒಟ್ಟು 56.56 ಕ್ಯೂಸೆಕ್ಸ್ ನೀರನ್ನು ಹರಿಸಲಾಗುವುದು ಹಾಗೂ ಜಲಾಶಯದ ನೀರಿನ ಮಟ್ಟ 1605.00 ಅಡಿ (ಜಲಾಶಯದ ಸಾಮರ್ಥ್ಯ 28.70 ಟಿ.ಎಂ.ಸಿ ವರೆಗು) ತಲುಪುವವರೆಗೆ ಲಭ್ಯವಿರುವ ನೀರನ್ನು ಪಡೆಯಬಹುದು. ಈ ಯೋಜನೆಯ ಹೆಚ್ಚುವರಿ 3000 ಎಕರೆ ಕ್ಷೇತ್ರದ ನೀರಾವರಿ ಕಲ್ಪಿಸುವ ಕಾಮಗಾರಿಯನ್ನು ಎ ವಿಆರ್ ಕನ್ಸಟ್ರಕ್ಷನ್ಸ್ ಇವರಿಗೆ ರೂ:4.59 ಕೋಟಿಗಳಿಗೆ ದಿನಾಂಕ: 30/03/2021 ರಂದು (9 ತಿಂಗಳ ಅವಧಿಗೆ) ಟರ್ನಕೀ ಆಧಾರದ ಮೇಲೆ ವಹಿಸಿದ್ದು, ಈ ಕಾಮಗಾರಿಯಲ್ಲಿ ರೈಸಿಂಗ್ ಮೇನ್ ಪೂರ್ಣಗೊಂಡಿದೆ ಮತ್ತು ಪಂಪುಗಳನ್ನು ಅಳವಡಿಸುವುದು ಹಾಗೂ ಸಬ್‌ಸ್ಟೇಷನ್ ಕಾಮಗಾರಿಗಳು ಬಾಕಿ ಉಳಿದಿರುತ್ತದೆ ಎಂದರು. ಪ್ರಸ್ತುತ ಅಳವಂಡಿ-ಬೆಟ್ಟಗೇರಿ ಏತ ನೀರಾವರಿ ಯೋಜನೆಯ ಪರಿಷ್ಕೃತ ಡಿ.ಪಿ.ಆರ್ ಅನ್ನು ಕರ್ನಾಟಕ ನೀರಾವರಿ ನಿಗಮದ ನಿರ್ದೇಶಕರ ಮಂಡಳಿಯ 105ನೇ ಸಭೆಯಲ್ಲಿ ಮಂಡಿಸಿದ್ದು. ರೂ.211.00 ಕೋಟಿಗಳಿಗೆ ಅನುಮೋದನೆ ನೀಡಿರುತ್ತಾರೆ. ಯೋಜನೆಯಡಿ 6000 ಎಕರೆ ಜಮೀನುಗಳಗೆ ಈಗಾಗಲೇ ಒಟ್ಟಾರೆ 39.78 ಕಿ.ಮೀ ಉದ್ದದ ಮುಖ್ಯ ಕಾಲುವೆ ಹಾಗೂ ಉಪ ಕಾಲುವೆಗಳ ನಿರ್ಮಾಣ ಪೂರ್ಣಗೊಂಡಿರುತ್ತದೆ ಎಂದು ತಿಳಿಸಿದರು. 3000 ಏಕರೆ ಜಮೀನುಗಳಗೆ ಮಧ್ಯ ಪ್ರದೇಶ ಮಾದರಿಯ ಮುಖ್ಯ ಪೈಪ್‌ಲೈನ್ ಹಾಗೂ ವಿತರಣಾ ಕಾಲುವೆ ಪೈಪ್‌ಲೈನ್ ಕಾಮಗಾರಿಯನ್ನು ರೂ. 11.50 ಕೋಟಿಗಳಿಗೆ ಟೆಂಡರ್ ಕರೆಯಲಾಗಿದ್ದು, ಚಿದು ಇನ್ಫ್ರಾಟೆಕ್ ಪ್ರೈ.ಲಿ (CHIDU INFRATECH PRIVATE LIMITED) ಇವರಿಗೆ ರೂ:11.80 ಕೋಟಿಗಳಿಗೆ ದಿನಾಂಕ: 22/08/2025 ರಂದು (9 ತಿಂಗಳ ಅವಧಿಗೆ) ಟರ್ನಕೀ ಆಧಾರದ ಮೇಲೆ ವಹಿಸಲಾಗಿರುತ್ತದೆ. ಈ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿರುತ್ತದೆ ಎಂದರು. ಡೆಲಿವರಿ ಚೇಂಬರ್ ನಿಂದ ಬ್ಲಾಕ್-1 ಗೆ ಹೆ.ಡಿ.ಪಿ.ಇ ಪೈಪ್ (Dia-355 to 125) ನ ಒಟ್ಟು ಉದ್ದ 8.7 ಕಿ.ಮೀ, ಪೈಪ್ ನೆಟ್‌ವರ್ಕ್ ನಿಂದ 1243 ಎಕರೆ ಬ್ಲಾಕ್-2 ಗೆ ಎಂಎಸ್ ಪೈಪ್ (Dia-380, 360, 330) ಹಾಗೂ ಹೆ.ಡಿ.ಪಿ.ಇ ಪೈಪ್ (Dia-355 to 125)ನ ಒಟ್ಟು ಉದ್ದ 16.82 ಕಿ.ಮೀ ಪೈಪ್ ನೆಟ್‌ವರ್ಕ್ ನಿಂದ 1757 ಎಕರೆ ಒಟ್ಟಾರೆ 3000 ಎಕರೆ ಪ್ರದೇಶಕ್ಕೆ ನೀರಾವರಿ ಕಲ್ಪಸಲು ಯೋಜಿಸಲಾಗಿರುತ್ತದೆ. ಪ್ರತಿ 20 ಹೆಕ್ಟೇರ್ ಜಮೀನುಗಳಗೆ ಪೈಪ್ ಗಳಂದ ಚೆಕ್ ಓಟ್ ಲೆಟ್ ನಿಂದಾ ನೀರನ್ನು ಒದಗಿಸಲಾಗುವುದು ಎಂದು ಹೇಳಿದರು. *ಒಟ್ಟು 9 ಹಳ್ಳಿಗಳಿಗೆ ಅನುಕೂಲ:* ಅಳವಂಡಿ-ಬೆಟ್ಟಗೇರಿ ಏತ ನೀರಾವರಿ ಯೋಜನೆಯಿಂದ ಕೊಪ್ಪಳ ತಾಲೂಕಿನ ಮೈನಾಳ್ಳಿ, ಹಂದ್ರಾಳ, ಅಳವಂಡಿ, ಕವಲೂರು, ಹಿರೇಸಿಂದೋಗಿ, ಬಿಕ್ಕನಹಳ್ಳಿ, ಬೆಟ್ಟಗೇರಿ ಹಾಗೂ ಕುಕನೂರು ತಾಲೂಕಿನ ತಳಕಲ್ಲು, ಕೋಮಲಾಪುರ ಸೇರಿದಂತೆ ಒಟ್ಟು 9 ಗ್ರಾಮಗಳ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ದೊರೆಯಲಿದೆ. ಅಲ್ಲದೆ, 9000 ಎಕರೆ ಹೊಲಗಾಲುವೆಗಳ ನಿರ್ಮಾಣಕ್ಕಾಗಿ 47 ಕೋಟಿ ರೂ. ಅನುದಾನ ಅಗತ್ಯವಿದೆ ಎಂದು ಶಾಸಕರು ವಿವರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಂಸದರಾದ ಕರಡಿ ಸಂಗಣ್ಣ, ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರಸನ್ನ ಗಡಾದ, ಜಿ.ಪಂ ಮಾಜಿ ಅಧ್ಯಕ್ಷರಾದ ಎಸ್.ಬಿ. ನಾಗರಳ್ಳಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.1
- *ಭಕ್ತರ ಇಷ್ಟಾರ್ಥ ಈಡೇರಿಸುವ ದ್ಯಾಮವ್ವನ ಮಗನಾಗಿ ಮೂಡಿಬಂದ ಗೌರಿ-ಗಣೇಶ - ತೆಗ್ಗಿನ ಓಣಿಯಲ್ಲಿ ಭಕ್ತಿ ಸಾಗರ!* ಕುಷ್ಟಗಿ:* ಪಟ್ಟಣದಲ್ಲಿ ಈ ಬಾರಿಯ ಗಣೇಶೋತ್ಸವದಲ್ಲಿ ಎಲ್ಲರ ಗಮನ ಸೆಳೆಯುತ್ತಿರುವುದು ತೆಗ್ಗಿನ ಓಣಿಯ ಸರ್ವ ಧರ್ಮಗಳ ಗೆಳೆಯರ ಬಳಗದ ವಿಶೇಷ ಗಣೇಶ ಮೂರ್ತಿ. ಪ್ರತಿ ವರ್ಷ ಒಂದೊಂದು ವಿಭಿನ್ನ ಪರಿಕಲ್ಪನೆಯಲ್ಲಿ ಗಣೇಶನನ್ನು ಪ್ರತಿಷ್ಠಾಪಿಸುವ ಈ ಬಳಗವು, ಈ ಬಾರಿ ಅತ್ಯಾಧುನಿಕ *ಎಐ ತಂತ್ರಜ್ಞಾನದ* ನೆರವಿನೊಂದಿಗೆ ಅತ್ಯಂತ ಅರ್ಥಗರ್ಭಿತವಾದ ಮೂರ್ತಿಯನ್ನು ಪ್ರತಿಷ್ಠಾಪಿಸಿ ಇಡೀ ಕುಷ್ಟಗಿಯ ಜನರ ಮೆಚ್ಚುಗೆಗೆ ಪಾತ್ರವಾಗಿದೆ. *ಪುರಾಣದೊಂದಿಗೆ ಗ್ರಾಮ ದೇವತೆಯ ಸಮಾಗಮ: ಲೋಕ ಕಲ್ಯಾಣಕ್ಕಾಗಿ ಪಾರ್ವತಿಯು ತನ್ನ ಹಣೆಯ ಬೆವರಿನ ಮಣ್ಣಿನಿಂದ ವರಪುತ್ರ ಗಣೇಶನನ್ನು ಸೃಷ್ಟಿಸಿದ ಪೌರಾಣಿಕ ಕಥೆಯನ್ನೇ ಇಲ್ಲಿ ಮರುಸೃಷ್ಟಿ ಮಾಡಲಾಗಿದೆ. ಕುಷ್ಟಗಿಯ ಜನರ ಪಾಲಿಗೆ ಗ್ರಾಮ ದೇವತೆ ಶ್ರೀ ದ್ಯಾಮಾಂಬಿಕಾ ದೇವಿಯೇ ಸಾಕ್ಷಾತ್ ಪಾರ್ವತಿ. ಆ ದ್ಯಾಮವ್ವನೇ ತನ್ನ ಮಗನಾದ ಗಣೇಶನನ್ನು ಭೂಮಿಗೆ ಕಳುಹಿಸಿದ್ದಾಳೆ ಎಂಬ ಭಾವದಲ್ಲಿ ಈ ಅಲಂಕಾರ ಮೂಡಿಬಂದಿದೆ. ಹಿನ್ನೆಲೆಯಲ್ಲಿ ಕೈಲಾಸವಾಸಿ ಶಿವ, ತಾಯಿ ಪಾರ್ವತಿ (ದ್ಯಾಮವ್ವ) ಮತ್ತು ಮುಂದೆ ಪುಟ್ಟ ಬಾಲ ಗಣೇಶ ಕುಳಿತಿರುವ ದೃಶ್ಯವು ನೋಡುಗರಿಗೆ ದೈವತ್ವದ ಅನುಭೂತಿಯನ್ನು ನೀಡುತ್ತಿದೆ. ಕೇವಲ ಮಣ್ಣಿನ ಮೂರ್ತಿಯಲ್ಲ, ಇದೊಂದು ಜೀವಂತ ಪುರಾಣ ದರ್ಶನವೇ ಸರಿ. ಈ ಅರ್ಥಪೂರ್ಣ ಅಲಂಕಾರವು ಮಾಜಿ ಪುರಸಭೆ ಅಧ್ಯಕ್ಷ *ಮಹಾಂತೇಶ್ ಕಲಬಾವಿ* ಸೇರಿದಂತೆ ತೆಗ್ಗಿನ ಓಣಿಯ ಯುವ ಬಳಗದ ಅವಿರತ ಪರಿಶ್ರಮದ ಫಲವಾಗಿದೆ. ವಿಶೇಷವೆಂದರೆ ಹಿಂದೂ-ಮುಸ್ಲಿಂ ಯುವಕರು ಜಾತಿ ಬೇಧ ಮರೆತು ಒಂದಾಗಿ ಈ ಗಣೇಶನನ್ನು ಪ್ರತಿಷ್ಠಾಪಿಸಿರುವುದು ನಿಜವಾದ ಸರ್ವ ಧರ್ಮ ಸಮನ್ವಯತೆಗೆ ಸಾಕ್ಷಿಯಾಗಿದೆ. ತೆಗ್ಗಿನ ಓಣಿಯ ಯುವಕರ ಈ ಸೃಜನಶೀಲತೆ, ಧಾರ್ಮಿಕ ಚಿಂತನೆ ಮತ್ತು ತಂತ್ರಜ್ಞಾನದ ಬಳಕೆಯು ಇತರ ಮಂಡಳಿಗಳಿಗೆ ಮಾದರಿಯಾಗಿದೆ ಎಂದು ಹೇಳಿದರೆ ತಪ್ಪಾಗಲಾರದು.2
- ಗೌರಸಮುದ್ರ ಮಾರಮ್ಮ ದೇವರ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡ ಸಾವಿರಾರು ಭಕ್ತರು ಐತಿಹಾಸಿಕ ಶ್ರೀ ಗೌರಸಮುದ್ರ ಮಾರಮ್ಮ ದೇವರ ಜಾತ್ರಾ ಮಹೋತ್ಸವ ಸಾವಿರಾರು ಭಕ್ತರು ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿದೆ. ಗೌರಸಮುದ್ರ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವ ಬುಡಕಟ್ಟು ಸಂಸ್ಕೃತಿ ಮತ್ತು ಧಾರ್ಮಿಕ ಶ್ರದ್ಧಾ ಕೇಂದ್ರವಾದ ಈ ದೇವಸ್ಥಾನ ಐತಿಹಾಸಿಕ ಪರಂಪರೆಗೆ ಸಾಕ್ಷಿಯಾಗಿದೆ. ಭಕ್ತರ ಕಠಿಣ ವ್ರತ ಮತ್ತು ಭಕ್ತಿಯ ನಂಬಿಕೆ ಮುಗಿಲು ಮುಟ್ಟಿದೆ ಇಂತಹ ಪವಿತ್ರ ದೇವಸ್ಥಾನಕ್ಕೆ ಇಲ್ಲಿ ಬರುವಂತ ಭಕ್ತಾದಿಗಳಿಗೆ ಜಿಲ್ಲಾಡಳಿತ ಮೂಲಭೂತ ಸೌಕರ್ಯವನ್ನು ಒದಗಿಸಬೇಕೆಂಬುದು ಭಕ್ತಾದಿಗಳ ಒತ್ತಾಸೆಯಾಗಿದೆ. ಸರಿ ಸುಮಾರು ನಾಲ್ಕರಿಂದ ಐದು ಲಕ್ಷ ಬಕ್ತಾದಿಗಳು ಬರುವಂತಹ ಈ ಶ್ರದ್ದಾ ಕೇಂದ್ರಕ್ಕೆ ಮುಂದಿನ ದಿನಗಳಲ್ಲಿ ಅಗತ್ಯ ಸೌಲಭ್ಯವನ್ನು ಒದಗಿಸುವಂತೆ ಸರ್ಕಾರವನ್ನು ಆಗ್ರಹಿಸಿದರು.1
- ಮೇಣದ ಬತ್ತಿ ಹಚ್ಚಿ ಮೆರವಣಿಗೆ ಮೂಲಕ ಪ್ರೇಮ್ ಸುಂದರ್ ಗೆ ನಮನ ಸಲ್ಲಿಕೆ. ಮೇಣದ ಬತ್ತಿ ಹಚ್ಚಿ ಮೆರವಣಿಗೆ ಮೂಲಕ ಪ್ರೇಮ್ ಸುಂದರ್ ಗೆ ನಮನ ಸಲ್ಲಿಕೆ. ಸಿರವಾರ: ಗಣೇಶ ಮೂರ್ತಿ ತರುವ ವೇಳೆ ವಿದ್ಯುತ್ ಅವಘಡ ಸಂಭವಿಸಿ ಸಿರವಾರ ತಾಲೂಕಿನ ಅತ್ತನೂರು ಗ್ರಾಮದಲ್ಲಿ ಮೃತಪಟ್ಟಿದ್ದ ಸಿರವಾರ ಪಟ್ಟಣದ ಯುವಕ ಪ್ರೇಮ್ ಸುಂದರ್ ಅವರ ಸ್ಮರಣಾರ್ಥದ ಪ್ರಯುಕ್ತ ಸಿರವಾರ ಪಟ್ಟಣದಲ್ಲಿ ಮಂಗಳವಾರ ಸಂಜೆ ಮೇಣದ ಬತ್ತಿ ಹಚ್ಚಿ ಮೆರವಣಿಗೆ ಮಾಡುವ ಮೂಲಕ ಅಗಲಿದ ಚೇತನಕ್ಕೆ ನಮನ ಸಲ್ಲಿಸಲಾಯಿತು. ಪಟ್ಟಣದ ಬಸವೇಶ್ವರ ವೃತ್ತದಿಂದ ಆರಂಭಗೊಂಡ ಮೆರವಣಿಗೆ ವಾಲ್ಮೀಕಿ ವೃತ್ತದ ವರೆಗೆ ನಡೆಯಿತು. ಪ್ರೇಮ್ ಸುಂದರ ಅವರ ಸರಳತೆ, ನಡೆ, ನುಡಿ ಮತ್ತು ವ್ಯಕ್ತಿತ್ವವನ್ನು ಸ್ಮರಿಸಿದರು. ಪ್ರೇಮ್ ಸುಂದರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮೃತರ ಆತ್ಮಕ್ಕೆ ಶಾಂತಿ ಕೋರಿದರು. ಈ ವೇಳೆ ಪಟ್ಟಣದ ಗಣ್ಯರು, ಕುಟುಂಬಸ್ಥರು, ಸ್ನೇಹಿತರು ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು.1
- ಪಕ್ಕ ಲವರ್’ ಸಿನಿಮಾ ಶುರು! 🎬 ಸ್ಥಳೀಯ ಪ್ರತಿಭೆಗಳಿಗೆ ದೊಡ್ಡ ಅವಕಾಶ! ಸಿನಿಮಾ ನಿರ್ಮಾಣಕ್ಕಿಂತ ಪ್ರಮೋಷನ್ ಮುಖ್ಯ! ಬಳ್ಳಾರಿಯ ಸ್ಥಳೀಯ ಪ್ರತಿಭೆಗಳನ್ನೇ ಒಳಗೊಂಡು ನಿರ್ಮಾಣವಾಗುತ್ತಿರುವ ‘ಪಕ್ಕ ಲವರ್’ ಕನ್ನಡ ಚಲನಚಿತ್ರದ ಟೈಟಲ್ ಹಾಗೂ ಹಾಡು ಬಿಡುಗಡೆಗೊಂಡಿದೆ. 🎬 ಸ್ಥಳೀಯ ಕಲಾವಿದರು ಹಾಗೂ ಪ್ರತಿಭೆಗಳಿಗೆ ಅವಕಾಶ ನೀಡಿ ಪ್ರೋತ್ಸಾಹಿಸುವ ಅಗತ್ಯವಿದೆ ಎಂದು ಚಿತ್ರದ ನಿರ್ದೇಶಕ ಕೋಳೂರು ಶೇಖರ್ ಹೇಳಿದ್ದಾರೆ. ಚಿತ್ರದ ಶೇ.30ರಷ್ಟು ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದ್ದು, ಉಳಿದ ಚಿತ್ರೀಕರಣವನ್ನು ಬಳ್ಳಾರಿ ಮತ್ತು ಬೆಂಗಳೂರಿನಲ್ಲಿ ನಡೆಸಲಾಗಲಿದೆ. ಚಿತ್ರದ ನಾಯಕ ನಟ ಅವಿನಾಶ್, ‘ಪಕ್ಕ ಲವರ್’ ಸಿನಿಮಾ ಯಶಸ್ವಿಯಾಗುವ ಸಂಪೂರ್ಣ ವಿಶ್ವಾಸವಿದೆ ಎಂದು ಹೇಳಿದ್ದಾರೆ. ಉದ್ಯಮಿ ಹಾಗೂ ನಿರ್ಮಾಪಕ ಪೋಲಾ ಪ್ರವೀಣ್ ಕುಮಾರ್, ಸಿನಿಮಾ ನಿರ್ಮಾಣದಷ್ಟೇ ಪ್ರಮೋಷನ್‌ಗೂ ಆದ್ಯತೆ ನೀಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. 👉 ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ಸಿಗಬೇಕು ಎನ್ನುವ ನಿಮ್ಮ ಅಭಿಪ್ರಾಯವೇನು? ಕಾಮೆಂಟ್ ಮಾಡಿ. ASN NEWS24 ಕನ್ನಡ – ಸುತ್ತಮುತ್ತ ನಡೆಯುವ ಸುದ್ದಿ ನಿಮ್ಮ ಮುಂದೆ. #PakkaLover #PakkaLoverMovie #KannadaMovie #KannadaCinema #KannadaFilm #Ballari #BallariNews #Bellary #KannadaNews #KannadaFilmIndustry #LocalTalent #LocalArtists #Avinash #KannadaActor #FilmPromotion #Sandalwood #SandalwoodNews #KarnatakaNews #ASNNews24 #ASNNews24Kannada1