logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಶಿಗ್ಗಾವಿ ತಾಲೂಕಿನ ತಡಸ ಮತ್ತು ಹುಲಗೂರ ಪೋಲಿಸ್ ಠಾಣೆಗಳಿಗೆ ಎರಡು ಸುಸಜ್ಜಿತ ಮಹಿಂದ್ರಾ ಬೋಲೇರೊ ವಾಹನಗಳ ಹಸ್ತಾಂತರ. ಶಿಗ್ಗಾವಿ : ಸಮಾಜದ ಭದ್ರತೆ, ಕಾನೂನು ಸುವ್ಯವಸ್ಥೆ ಮತ್ತು ನಾಗರಿಕರ ವಿಶ್ವಾಸವನ್ನು ಉಳಿಸಿಕೊಳ್ಳಲು ಪೋಲೀಸರ ಕಾರ್ಯಕ್ಷಮತೆ ಅತ್ಯಗತ್ಯ, ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳು ಕೇವಲ ಅಪರಾಧ ತಡೆಗಟ್ಟುವವರಲ್ಲ, ಅವರು ಸಮಾಜದ ಕಾವಲುಗಾರರು ಎಂದು ಶಾಸಕ ಯಾಸೀರ ಅಹ್ಮದಖಾನ ಪಠಾಣ ಹೇಳಿದರು. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಗುಜರಾತ್ ಅಂಬುಜಾ ಎಕ್ಸ್ಪೋರ್ಟ ಲಿಮಿಟೆಡ್ ಕಂಪನಿಯ ಪ್ರಾಯೋಜಕತ್ವದಲ್ಲಿ ಎರಡು ಸುಸಜ್ಜಿತ ಮಹಿಂದ್ರಾ ಬೋಲೇರೊ ವಾಹನಗಳನ್ನು ತಾಲೂಕಿನ ತಡಸ ಮತ್ತು ಹುಲಗೂರ ಪೋಲಿಸ್ ಠಾಣೆಗಳಿಗೆ ಹಸ್ತಾಂತರಿಸಿ ಅವರು ಮಾತನಾಡಿದರು. ನಾವು ನೆಮ್ಮದಿಯಿಂದ ನಿದ್ರಿಸಲು ಪೊಲೀಸರು ಕಾರಣ, ಅವರು ಪ್ರಾಮಾಣಿಕ ಸೇವೆ ಸಮಾಜಕ್ಕೆ ಅವಶ್ಯ, ಕ್ರೆöÊಂಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಅವರಿಗೆ ಬೆಂಬಲ ಮತ್ತು ಸಹಕಾರ ನೀಡಬೇಕು, ಈ ವಾಹನಗಳು ನಮ್ಮ ಕ್ಷೇತ್ರದಲ್ಲಿಯೇ ತಿರುಗಬೇಕು ಎಂದು ಎಸ್‌ಪಿಯರವರಿಗೆ ಸೂಚಿಸಿದರು. ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿ, ಜನರ ಸುರಕ್ಷತೆ ಮತ್ತು ರಕ್ಷಣೆಗೆ ನಿಲ್ಲಬೇಕು ಇದು ಪ್ರಾಮಾಣಿಕ ಸೇವೆಯ ಲಕ್ಷಣವು ಆಗಿದೆ, ಪೋಲೀಸರು ತ್ಯಾಗ ಮತ್ತು ಸಮರ್ಪಣಾ ಮನೋಭಾವದಿಂದ ಸೇವೆ ಸಲ್ಲಿಸುವಂತವರಾಗಬೇಕು ಎಂದರು. ಹಾವೇರಿ ಪೋಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಮಾತನಾಡಿ, ಪೊಲೀಸ್ ಇಲಾಖೆಗೆ ವಾಹನಗಳು ಅವಶ್ಯ, ಠಾಣೆಗೆ ಅವಶ್ಯವಿದ್ದ ಎರಡು ವಾಹನಗಳನ್ನು ಒದಗಿಸಿದ ಅಂಬುಜಾ ಕಂಪನಿಗೆ ಧನ್ಯವಾದಗಳನ್ನು ಅರ್ಪಿಸುತ್ತೆವೆ, ಜೊತೆಗೆ ಈ ಮೊದಲು ಅವರು ಕಾಗದ ಮುಕ್ತ ಸೇವೆ ನೀಡಲು ಸಹಕರಿಸಿ ಹತ್ತು ಕಂಪ್ಯೂಟಗಳನ್ನು ನೀಡಿದ್ದಾರೆ ಎಂದು ಸ್ಮರಿಸಿ, ಮುಂದಿನ ದಿನಗಳಲ್ಲಿ ಶಿಗ್ಗಾವಿ ಠಾಣೆಗೂ ನೂತನ ವಾಹನ ನೀಡಲಾಗುವದು ಎಂದರು. ಅಂಬುಜಾ ಕಂಪನಿಯ ಉಪಾಧ್ಯಕ್ಷ ರಾಜೇಂದ್ರ ಹೊಸಮಠ ಮಾತನಾಡಿ, ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ನಮ್ಮ ಕರ್ನಾಟಕ ಪೊಲೀಸರು ಶ್ರೇಷ್ಟ, ಅಂಬುಜಾ ಕಂಪನಿಯಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಿ ಉದ್ಯೋಗ ಒದಗಿಸುತ್ತೇವೆ ಎಂದರು. ತಾಲೂಕಾ ಗ್ಯಾರಂಟಿ ಸಮಿತಿ ಅದ್ಯಕ್ಷ ಎಸ್ ಎಫ್ ಮಣಕಟ್ಟಿ, ಡಿವೈಎಸ್ ಪಿ ಗುರುಶಾಂತಪ್ಪ ಕೆ ವಿ, ಪಿಐವಿ ಎಸ್ ಹಿರೇಮಠ, ಪಿಎಸ್‌ಐ ಪಿ ಎಫ್ ನಿರೊಳ್ಳಿ, ಎಮ್ ಎಸ್ ದೊಡ್ಡಮನಿ, ತಾಲೂಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುಡ್ಡಪ್ಪ ಜಲದಿ, ಶಹರ ಮಹಿಳಾ ಕಾಂಗ್ರೇಸ್ ಅಧ್ಯಕ್ಷೆ ಮಲ್ಲಮ್ಮ ಸೋಮನಕಟ್ಟಿ, ಮುಖಂಡರಾದ ಗೌಸಖಾನ ಮುನತಿ, ಮಾಂತೇಶ ಸಾಲಿ, ಅಣ್ಣಪ್ಪ ಲಮಾಣಿ, ಗುರುನಗೌಡ ಪಾಟೀಲ್, ವಸಂತಾ ಬಾಗೂರ, ಚಂದ್ರು ಕೊಡ್ಲಿದಾಡ. ಫಯಾಜ್ ಸವಣೂರ, ಬಾಬರ ಬೋವಾಜಿ, ಶಂಭು ಆಜೂರ ಸೇರಿದಂತೆ ಪೋಲಿಸ್ ಅಧಿಕಾರಿಗಳು ಸಿಬ್ಬಂದಿಗಳು, ಪಕ್ಷದ ಮುಖಂಡರು ಕಾರ್ಯಕರ್ತರು ಇದ್ದರು.

1 hr ago
user_ಬಸವರಾಜ ವೀ ಎಚ್
ಬಸವರಾಜ ವೀ ಎಚ್
ಶಿಗ್ಗಾಂವ್, ಹಾವೇರಿ, ಕರ್ನಾಟಕ•
1 hr ago
da202013-7b74-4633-8195-83a81adc26c4

ಶಿಗ್ಗಾವಿ ತಾಲೂಕಿನ ತಡಸ ಮತ್ತು ಹುಲಗೂರ ಪೋಲಿಸ್ ಠಾಣೆಗಳಿಗೆ ಎರಡು ಸುಸಜ್ಜಿತ ಮಹಿಂದ್ರಾ ಬೋಲೇರೊ ವಾಹನಗಳ ಹಸ್ತಾಂತರ. ಶಿಗ್ಗಾವಿ : ಸಮಾಜದ ಭದ್ರತೆ, ಕಾನೂನು ಸುವ್ಯವಸ್ಥೆ ಮತ್ತು ನಾಗರಿಕರ ವಿಶ್ವಾಸವನ್ನು ಉಳಿಸಿಕೊಳ್ಳಲು ಪೋಲೀಸರ ಕಾರ್ಯಕ್ಷಮತೆ ಅತ್ಯಗತ್ಯ, ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳು ಕೇವಲ ಅಪರಾಧ ತಡೆಗಟ್ಟುವವರಲ್ಲ, ಅವರು ಸಮಾಜದ ಕಾವಲುಗಾರರು ಎಂದು ಶಾಸಕ ಯಾಸೀರ ಅಹ್ಮದಖಾನ ಪಠಾಣ ಹೇಳಿದರು. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಗುಜರಾತ್ ಅಂಬುಜಾ ಎಕ್ಸ್ಪೋರ್ಟ ಲಿಮಿಟೆಡ್ ಕಂಪನಿಯ ಪ್ರಾಯೋಜಕತ್ವದಲ್ಲಿ ಎರಡು ಸುಸಜ್ಜಿತ ಮಹಿಂದ್ರಾ ಬೋಲೇರೊ ವಾಹನಗಳನ್ನು ತಾಲೂಕಿನ ತಡಸ ಮತ್ತು ಹುಲಗೂರ ಪೋಲಿಸ್ ಠಾಣೆಗಳಿಗೆ ಹಸ್ತಾಂತರಿಸಿ ಅವರು ಮಾತನಾಡಿದರು. ನಾವು ನೆಮ್ಮದಿಯಿಂದ ನಿದ್ರಿಸಲು ಪೊಲೀಸರು ಕಾರಣ, ಅವರು ಪ್ರಾಮಾಣಿಕ ಸೇವೆ ಸಮಾಜಕ್ಕೆ ಅವಶ್ಯ, ಕ್ರೆöÊಂಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಅವರಿಗೆ ಬೆಂಬಲ ಮತ್ತು ಸಹಕಾರ ನೀಡಬೇಕು, ಈ ವಾಹನಗಳು ನಮ್ಮ ಕ್ಷೇತ್ರದಲ್ಲಿಯೇ ತಿರುಗಬೇಕು ಎಂದು ಎಸ್‌ಪಿಯರವರಿಗೆ ಸೂಚಿಸಿದರು. ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿ, ಜನರ ಸುರಕ್ಷತೆ ಮತ್ತು ರಕ್ಷಣೆಗೆ ನಿಲ್ಲಬೇಕು ಇದು ಪ್ರಾಮಾಣಿಕ ಸೇವೆಯ ಲಕ್ಷಣವು ಆಗಿದೆ, ಪೋಲೀಸರು ತ್ಯಾಗ ಮತ್ತು ಸಮರ್ಪಣಾ ಮನೋಭಾವದಿಂದ ಸೇವೆ ಸಲ್ಲಿಸುವಂತವರಾಗಬೇಕು ಎಂದರು. ಹಾವೇರಿ ಪೋಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಮಾತನಾಡಿ, ಪೊಲೀಸ್ ಇಲಾಖೆಗೆ

94368dbe-cad6-456c-a3c6-888b059a695d

ವಾಹನಗಳು ಅವಶ್ಯ, ಠಾಣೆಗೆ ಅವಶ್ಯವಿದ್ದ ಎರಡು ವಾಹನಗಳನ್ನು ಒದಗಿಸಿದ ಅಂಬುಜಾ ಕಂಪನಿಗೆ ಧನ್ಯವಾದಗಳನ್ನು ಅರ್ಪಿಸುತ್ತೆವೆ, ಜೊತೆಗೆ ಈ ಮೊದಲು ಅವರು ಕಾಗದ ಮುಕ್ತ ಸೇವೆ ನೀಡಲು ಸಹಕರಿಸಿ ಹತ್ತು ಕಂಪ್ಯೂಟಗಳನ್ನು ನೀಡಿದ್ದಾರೆ ಎಂದು ಸ್ಮರಿಸಿ, ಮುಂದಿನ ದಿನಗಳಲ್ಲಿ ಶಿಗ್ಗಾವಿ ಠಾಣೆಗೂ ನೂತನ ವಾಹನ ನೀಡಲಾಗುವದು ಎಂದರು. ಅಂಬುಜಾ ಕಂಪನಿಯ ಉಪಾಧ್ಯಕ್ಷ ರಾಜೇಂದ್ರ ಹೊಸಮಠ ಮಾತನಾಡಿ, ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ನಮ್ಮ ಕರ್ನಾಟಕ ಪೊಲೀಸರು ಶ್ರೇಷ್ಟ, ಅಂಬುಜಾ ಕಂಪನಿಯಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಿ ಉದ್ಯೋಗ ಒದಗಿಸುತ್ತೇವೆ ಎಂದರು. ತಾಲೂಕಾ ಗ್ಯಾರಂಟಿ ಸಮಿತಿ ಅದ್ಯಕ್ಷ ಎಸ್ ಎಫ್ ಮಣಕಟ್ಟಿ, ಡಿವೈಎಸ್ ಪಿ ಗುರುಶಾಂತಪ್ಪ ಕೆ ವಿ, ಪಿಐವಿ ಎಸ್ ಹಿರೇಮಠ, ಪಿಎಸ್‌ಐ ಪಿ ಎಫ್ ನಿರೊಳ್ಳಿ, ಎಮ್ ಎಸ್ ದೊಡ್ಡಮನಿ, ತಾಲೂಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುಡ್ಡಪ್ಪ ಜಲದಿ, ಶಹರ ಮಹಿಳಾ ಕಾಂಗ್ರೇಸ್ ಅಧ್ಯಕ್ಷೆ ಮಲ್ಲಮ್ಮ ಸೋಮನಕಟ್ಟಿ, ಮುಖಂಡರಾದ ಗೌಸಖಾನ ಮುನತಿ, ಮಾಂತೇಶ ಸಾಲಿ, ಅಣ್ಣಪ್ಪ ಲಮಾಣಿ, ಗುರುನಗೌಡ ಪಾಟೀಲ್, ವಸಂತಾ ಬಾಗೂರ, ಚಂದ್ರು ಕೊಡ್ಲಿದಾಡ. ಫಯಾಜ್ ಸವಣೂರ, ಬಾಬರ ಬೋವಾಜಿ, ಶಂಭು ಆಜೂರ ಸೇರಿದಂತೆ ಪೋಲಿಸ್ ಅಧಿಕಾರಿಗಳು ಸಿಬ್ಬಂದಿಗಳು, ಪಕ್ಷದ ಮುಖಂಡರು ಕಾರ್ಯಕರ್ತರು ಇದ್ದರು.

More news from ಕರ್ನಾಟಕ and nearby areas
  • ಬಳ್ಳಾರಿ: ಸಚಿವ ಡಿ. ಸುಧಾಕರ್ ನಿಧನ: "ಎಲ್ಲವೂ ವಿಧಿಯಾಟ'' ಎಂದು ಭಾವುಕರಾದ ಸಚಿವ ಜಮೀ‌ರ್ ಅಹಮದ್! ಸಚಿವ ಡಿ. ಸುಧಾಕರ್ ಅವರ ಅಕಾಲಿಕ ನಿಧನಕ್ಕೆ ಬಳ್ಳಾರಿ ಉಸ್ತುವಾರಿ ಸಚಿವ ಜಮೀರ್ ಅಹಮದ್ ಚಳ್ಳಕೆರೆಯಲ್ಲಿ ಸೋಮವಾರ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. "ಯಾರು ಯಾವಾಗ ನಮ್ಮನ್ನು ಬಿಟ್ಟು ಹೋಗುತ್ತಾರೆ ಎಂದು ತಿಳಿಯುವುದಿಲ್ಲ, ಎಲ್ಲವೂ ವಿಧಿಯಾಟ' ಎಂದು ಅವರು ಭಾವುಕರಾಗಿ ನುಡಿದರು. ಕೇವಲ ಮಂಡಿ ನೋವಿನ ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದ ಸುಧಾಕ‌ರ್ ಅವರಿಗೆ ನಂತರ ಶ್ವಾಸಕೋಶದ ಸಮಸ್ಯ ೆ ಕಾಣಿಸಿಕೊಂಡಿತ್ತು. ಸದಾ ಹಸನ್ಮುಖಿಯಾಗಿದ್ದ ಅವರು ಇಷ್ಟು ಬೇಗ ನಮ್ಮನ್ನು ಅಗಲುತ್ತಾರೆ ಎಂದು ನಿರೀಕ್ಷಿಸಿರಲಿಲ್ಲ ಎಂದು ಜಮೀರ್ ಸ್ಮರಿಸಿದರು. ಮೃತರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಅವರು ದೇವರಲ್ಲಿ ಪ್ರಾರ್ಥಿಸಿದರು.
    1
    ಬಳ್ಳಾರಿ: ಸಚಿವ ಡಿ. ಸುಧಾಕರ್ ನಿಧನ: "ಎಲ್ಲವೂ ವಿಧಿಯಾಟ'' ಎಂದು ಭಾವುಕರಾದ ಸಚಿವ ಜಮೀ‌ರ್ ಅಹಮದ್!
ಸಚಿವ ಡಿ. ಸುಧಾಕರ್ ಅವರ ಅಕಾಲಿಕ ನಿಧನಕ್ಕೆ ಬಳ್ಳಾರಿ ಉಸ್ತುವಾರಿ ಸಚಿವ ಜಮೀರ್ ಅಹಮದ್ ಚಳ್ಳಕೆರೆಯಲ್ಲಿ ಸೋಮವಾರ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
"ಯಾರು ಯಾವಾಗ ನಮ್ಮನ್ನು ಬಿಟ್ಟು ಹೋಗುತ್ತಾರೆ ಎಂದು ತಿಳಿಯುವುದಿಲ್ಲ, ಎಲ್ಲವೂ ವಿಧಿಯಾಟ' ಎಂದು ಅವರು ಭಾವುಕರಾಗಿ ನುಡಿದರು. ಕೇವಲ ಮಂಡಿ ನೋವಿನ ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದ ಸುಧಾಕ‌ರ್ ಅವರಿಗೆ ನಂತರ ಶ್ವಾಸಕೋಶದ ಸಮಸ್ಯ ೆ ಕಾಣಿಸಿಕೊಂಡಿತ್ತು. ಸದಾ ಹಸನ್ಮುಖಿಯಾಗಿದ್ದ ಅವರು ಇಷ್ಟು ಬೇಗ ನಮ್ಮನ್ನು ಅಗಲುತ್ತಾರೆ ಎಂದು ನಿರೀಕ್ಷಿಸಿರಲಿಲ್ಲ ಎಂದು ಜಮೀರ್ ಸ್ಮರಿಸಿದರು. ಮೃತರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಅವರು ದೇವರಲ್ಲಿ ಪ್ರಾರ್ಥಿಸಿದರು.
    user_YSRmedia vijayanagaraupsates
    YSRmedia vijayanagaraupsates
    Mobile Phone Accessory Shop ಹೊಸಪೇಟೆ, ವಿಜಯನಗರ, ಕರ್ನಾಟಕ•
    1 hr ago
  • ವಿಜಯನಗರ ಜಿಲ್ಲೆಯ ಕೂಡ್ಲಿಗಿಯಲ್ಲಿ ಮೇ 10ರಂದು ತಾಯಿ ದಿನವನ್ನು ತಾಲೂಕಿನಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಸೇರಿದಂತೆ ಹಿರಿಯ ಸಾಹಿತಿಗಳು, ಪತ್ರಕರ್ತರು ಮತ್ತು ಸಾರ್ವಜನಿಕರು ತಮ್ಮ ತಾಯಂದಿರನ್ನು ಗೌರವಿಸಿ, ಸಿಹಿ ಹಂಚಿ ವಂದಿಸಿದರು. ಈ ದಿನ ತಾಯಿಯ ಆದರ್ಶ ಗುಣಗಳನ್ನು ಸ್ಮರಿಸಿ, ಪೋಷಕರನ್ನು ಪೂಜಿಸುವುದರ ಮಹತ್ವವನ್ನು ಸಾರಲಾಯಿತು.
    4
    ವಿಜಯನಗರ ಜಿಲ್ಲೆಯ ಕೂಡ್ಲಿಗಿಯಲ್ಲಿ ಮೇ 10ರಂದು ತಾಯಿ ದಿನವನ್ನು ತಾಲೂಕಿನಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಸೇರಿದಂತೆ ಹಿರಿಯ ಸಾಹಿತಿಗಳು, ಪತ್ರಕರ್ತರು ಮತ್ತು ಸಾರ್ವಜನಿಕರು ತಮ್ಮ ತಾಯಂದಿರನ್ನು ಗೌರವಿಸಿ, ಸಿಹಿ ಹಂಚಿ ವಂದಿಸಿದರು. ಈ ದಿನ ತಾಯಿಯ ಆದರ್ಶ ಗುಣಗಳನ್ನು ಸ್ಮರಿಸಿ, ಪೋಷಕರನ್ನು ಪೂಜಿಸುವುದರ ಮಹತ್ವವನ್ನು ಸಾರಲಾಯಿತು.
    user_ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ
    ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ
    ವರದಿಗಾರ ಕೂಡ್ಲಿಗಿ, ವಿಜಯನಗರ, ಕರ್ನಾಟಕ•
    9 hrs ago
  • ಬಾಯಲ್ಲಿ ನೀರೂರಿಸುವ ಮಾವಿನಕಾಯಿ ಒಗ್ಗರಣೆ ಉಪ್ಪಿನಕಾಯಿ ಮಾಡುವ ಸುಲಭ ವಿಧಾನ ಇಲ್ಲಿದೆ. ಈ ದಿಢೀರ್ ಉಪ್ಪಿನಕಾಯಿಯನ್ನು ಮಾಡಿದ ತಕ್ಷಣವೇ ಅಥವಾ ಒಂದೆರಡು ಗಂಟೆಗಳ ನಂತರ ಅನ್ನ, ದೋಸೆ ಮತ್ತು ಚಪಾತಿ ಜೊತೆ ಸವಿಯಬಹುದು. ಮನೆಯಲ್ಲಿ ಕೇವಲ 2 ಮಾವಿನಕಾಯಿಗಳಿದ್ದರೆ, ನಿಮಿಷಗಳಲ್ಲಿ ಇದನ್ನು ತಯಾರಿಸಬಹುದು.
    1
    ಬಾಯಲ್ಲಿ ನೀರೂರಿಸುವ ಮಾವಿನಕಾಯಿ ಒಗ್ಗರಣೆ ಉಪ್ಪಿನಕಾಯಿ ಮಾಡುವ ಸುಲಭ ವಿಧಾನ ಇಲ್ಲಿದೆ. ಈ ದಿಢೀರ್ ಉಪ್ಪಿನಕಾಯಿಯನ್ನು ಮಾಡಿದ ತಕ್ಷಣವೇ ಅಥವಾ ಒಂದೆರಡು ಗಂಟೆಗಳ ನಂತರ ಅನ್ನ, ದೋಸೆ ಮತ್ತು ಚಪಾತಿ ಜೊತೆ ಸವಿಯಬಹುದು. ಮನೆಯಲ್ಲಿ ಕೇವಲ 2 ಮಾವಿನಕಾಯಿಗಳಿದ್ದರೆ, ನಿಮಿಷಗಳಲ್ಲಿ ಇದನ್ನು ತಯಾರಿಸಬಹುದು.
    user_Chethana Muniswamygowda
    Chethana Muniswamygowda
    Press advisory Hosanagara, Shivamogga•
    10 hrs ago
  • ಬಾಬಾಸಾಹೇಬ್ ಅಂಬೇಡ್ಕರ್ ಅವರ ಪ್ರಕಾರ, ರಾಜಕೀಯ ಶಕ್ತಿಯು ಪ್ರಗತಿ ಮತ್ತು ಸ್ವಾಭಿಮಾನದ ಎಲ್ಲಾ ಬಾಗಿಲುಗಳನ್ನು ತೆರೆಯುವ ಮಾಸ್ಟರ್ ಕೀ ಆಗಿದೆ. ಸಕಲ ಸಿದ್ಧಿಯನ್ನು ಸಾಧಿಸಲು ಇದೊಂದು ಅತಿ ಮುಖ್ಯ ಸಾಧನವಾಗಿದೆ.
    1
    ಬಾಬಾಸಾಹೇಬ್ ಅಂಬೇಡ್ಕರ್ ಅವರ ಪ್ರಕಾರ, ರಾಜಕೀಯ ಶಕ್ತಿಯು ಪ್ರಗತಿ ಮತ್ತು ಸ್ವಾಭಿಮಾನದ ಎಲ್ಲಾ ಬಾಗಿಲುಗಳನ್ನು ತೆರೆಯುವ ಮಾಸ್ಟರ್ ಕೀ ಆಗಿದೆ. ಸಕಲ ಸಿದ್ಧಿಯನ್ನು ಸಾಧಿಸಲು ಇದೊಂದು ಅತಿ ಮುಖ್ಯ ಸಾಧನವಾಗಿದೆ.
    user_SAMATA NEWS KANNADA 1
    SAMATA NEWS KANNADA 1
    Advertising agency ಬೆಳಗಾವಿ, ಬೆಳಗಾವಿ, ಕರ್ನಾಟಕ•
    11 hrs ago
  • ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ವಿಶೇಷ ಸನ್ಮಾನ. ಕುಷ್ಟಗಿ:- ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಕುಷ್ಟಗಿ ಪಟ್ಟಣದಲ್ಲಿ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿ ಪರೀಕ್ಷೆಯಲ್ಲಿ ಪ್ರಥಮ, ದ್ವೀತಿಯ ಮತ್ತು ಅತಿ ಹೆಚ್ಚು ಅಂಕಪಡೆದ ಕಲಾ, ವಾಣಿಜ್ಯ, ವಿಜ್ಞಾನ ವಿಭಾಗದ ವಿಧ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ ಏರ್ಪಡಿಸಲಾಗಿದೆ ಎಂದು ಕುಷ್ಟಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಲೆಂಕಪ್ಪ ವಾಲಿಕಾರ ತಿಳಿಸಿದರು. ಇಲ್ಲಿನ ಹಳೆ ಪ್ರವಾಸಿ ಮಂದಿರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದ ಅವರು 2025- 2026ನೇ ಸಾಲಿನ ಈ ವರ್ಷದ ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ತಾಲೂಕಿನ ಮುದೇನೂರು ಗ್ರಾಮದಲ್ಲಿ ಹಮ್ಮಿಕೊಳ್ಳಬೇಕಾಗಿತ್ತು. ಕಾರಣಾಂತರಗಳಿಂದ ಮುದೇನೂರು ಗ್ರಾಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಮಾಡಲು ಆಗುವುದಿಲ್ಲ ಆದರೆ ಮುಂದಿನ ತಿಂಗಳಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಮಾಡಲು ಕನ್ನಡ ಸಾಹಿತ್ಯ ಪರಿಷತ್ತಿನ ಎಲ್ಲಾ ಪದಾಧಿಕಾರಿಗಳಿಂದ ಮತ್ತು ಎಲ್ಲಾ ಸದಸ್ಯರಿಂದ ಒಪ್ಪಿಗೆ ಪಡೆಯಲಾಗಿದೆ. ಮುಂದಿನ ದಿನಮಾನದಲ್ಲಿ ಯಾವ ಕಡೆ ಸಮ್ಮೇಳನ ನೆಡೆಸಿದರೆ ಸೂಕ್ತ ಆಗುತ್ತದೆ ಎಂಬ ತೀರ್ಮಾನ ತೆಗೆದುಕೊಂಡು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಮಾಡಲಾಗುವದು ಎಂದರು. ಅದರಂತೆ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಎಸ್.ಎಸ್‌ಎಲ್.ಸಿ. ಮತ್ತು ಯುಪಿಸಿ ಮಕ್ಕಳಿಗೆ ವಿಶೇಷ ಸನ್ಮಾನ ಸಮಾರಂಭ ಏರ್ಪಡಿಸಿಲಾಗುತ್ತಿದೆ ಆದ್ದರಿಂದ ತಾಲೂಕಿನ ಪ್ರಥಮ, ದ್ವೀತಿಯ ಸ್ಥಾನದಲ್ಲಿ ಹಾಗೂ ಅತಿ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಸನ್ಮಾನಿಸಲಾಗುವದು ಈ ಒಂದು ಕಾರ್ಯಕ್ರಮಕ್ಕೆ ಪ್ರತಿಯೊಬ್ಬರ ಸಲಹೆ ಸಹಕಾರ ಬಹಳ ಅಗತ್ಯವಾಗಿದ್ದು ಈ ಒಂದು ಸಮಾರಂಭವನ್ನು ಯಶಸ್ವಿಗೊಳಿಸಬೇಕಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶರಣೇಗೌಡ ಪಾಟೀಲ ಮಾತನಾಡಿ ಯಾವುದೇ ಕಾರ್ಯಕ್ರಮ ಮಾಡಬೇಕಾದರೆ ಮೊದಲು ಸೂಕ್ತ ತೀರ್ಮಾನ ತೆಗೆದುಕೊಂಡು ಸಭೆ ಸಮಾರಂಭ ಏರ್ಪಡಿಸಬೇಕಾಗುತ್ತದೆ ಈ ವರ್ಷದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಕುಷ್ಟಗಿ ತಾಲೂಕಿನಲ್ಲಿ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ ಆದರೆ ಪ್ರತಿಯೊಬ್ಬರ ಸಲಹೆ ಸಹಕಾರ ಅಗತ್ಯವಾಗಿದೆ ಸೂಕ್ತ ನಿರ್ಧಾರದೊಂದಿಗೆ ಜಿಲ್ಲಾ ಸಮ್ಮೇಳನ ನಡೆಸಲಾಗುವದು ಎಂಬ ಹೇಳಿದರು. ಈ ಸಂದರ್ಭದಲ್ಲಿ ರಾಜ್ಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಶರಣಪ್ಪ ವಡಗೇರಿ, ನಿಕಟ ಪೂರ್ವ ‌ಕನ್ನಡ ಸಾಹಿತ್ಯ ಪರಿಷತ್ತಿನ ‌ಅಧ್ಯಕ್ಷ ಹನಮೇಶ ಗುಮಗೇರಾ, ರವೀಂದ್ರ ಬಾಕಳೆ, ಉಮೇಶ ಹಿರೇಮಠ, ಸಾಹಿತಿಗಳಾದ ಅಮರೇಗೌಡ ಪಾಟೀಲ ಜಾಲಿಹಾಳ, ದೇವರಾಜ ವಿಶ್ವ ಕರ್ಮ, ದೊಡ್ಡಪ್ಪ ಕೈಲವಾಡಗಿ, ಹ.ಯ.ಈಟಿಯವರ್, ಆರ್.ಕೆ.ಸುಬೇದಾರ, ವಿದ್ಯಾ ಕಂಪಾಪೂರಮಠ, ಎಸ್.ಜೆ.ಕಡೆಮನಿ, ಶ್ರೀನಿವಾಸ ಕಟ್ಲಿ, ನಿಂಗಪ್ಪ ಸಜ್ಜನ್, ಚನ್ನಪ್ಪ ಬಾವಿಮನಿ, ಸಂತೋಷ ತೋಟದ್, ಹನಮೇಶ ‌ಶಾಖಾಪೂರ, ಕ.ಕಾ.ಪ.ಸ.ತಾಲೂಕು ಅಧ್ಯಕ್ಷ ಪವಾಡೆಪ್ಪ ಚೌಡ್ಕಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ‌ರಾಜ್ಯ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ವಿಜೇತ ಲಲಿತಮ್ಮ ಹಿರೇಮಠ ಇವರಿಗೆ ಸನ್ಮಾನಿಸಿ ಗೌರವಿಸಿದರು.
    2
    ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ವಿಶೇಷ ಸನ್ಮಾನ.

ಕುಷ್ಟಗಿ:- ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಕುಷ್ಟಗಿ ಪಟ್ಟಣದಲ್ಲಿ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿ ಪರೀಕ್ಷೆಯಲ್ಲಿ ಪ್ರಥಮ, ದ್ವೀತಿಯ ಮತ್ತು ಅತಿ ಹೆಚ್ಚು ಅಂಕಪಡೆದ ಕಲಾ, ವಾಣಿಜ್ಯ, ವಿಜ್ಞಾನ ವಿಭಾಗದ ವಿಧ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ ಏರ್ಪಡಿಸಲಾಗಿದೆ ಎಂದು ಕುಷ್ಟಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಲೆಂಕಪ್ಪ ವಾಲಿಕಾರ ತಿಳಿಸಿದರು.
ಇಲ್ಲಿನ ಹಳೆ ಪ್ರವಾಸಿ ಮಂದಿರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದ ಅವರು 2025- 2026ನೇ ಸಾಲಿನ  ಈ ವರ್ಷದ ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ತಾಲೂಕಿನ ಮುದೇನೂರು ಗ್ರಾಮದಲ್ಲಿ ಹಮ್ಮಿಕೊಳ್ಳಬೇಕಾಗಿತ್ತು. ಕಾರಣಾಂತರಗಳಿಂದ ಮುದೇನೂರು ಗ್ರಾಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಮಾಡಲು ಆಗುವುದಿಲ್ಲ ಆದರೆ ಮುಂದಿನ ತಿಂಗಳಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಮಾಡಲು ಕನ್ನಡ ಸಾಹಿತ್ಯ ಪರಿಷತ್ತಿನ ಎಲ್ಲಾ  ಪದಾಧಿಕಾರಿಗಳಿಂದ ಮತ್ತು ಎಲ್ಲಾ ಸದಸ್ಯರಿಂದ ಒಪ್ಪಿಗೆ ಪಡೆಯಲಾಗಿದೆ. ಮುಂದಿನ ದಿನಮಾನದಲ್ಲಿ ಯಾವ ಕಡೆ ಸಮ್ಮೇಳನ ನೆಡೆಸಿದರೆ ಸೂಕ್ತ ಆಗುತ್ತದೆ ಎಂಬ ತೀರ್ಮಾನ ತೆಗೆದುಕೊಂಡು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಮಾಡಲಾಗುವದು ಎಂದರು.
ಅದರಂತೆ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಎಸ್.ಎಸ್‌ಎಲ್.ಸಿ. ಮತ್ತು ಯುಪಿಸಿ ಮಕ್ಕಳಿಗೆ ವಿಶೇಷ  ಸನ್ಮಾನ ಸಮಾರಂಭ ಏರ್ಪಡಿಸಿಲಾಗುತ್ತಿದೆ ಆದ್ದರಿಂದ ತಾಲೂಕಿನ ಪ್ರಥಮ, ದ್ವೀತಿಯ ಸ್ಥಾನದಲ್ಲಿ ಹಾಗೂ ಅತಿ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಸನ್ಮಾನಿಸಲಾಗುವದು ಈ ಒಂದು ಕಾರ್ಯಕ್ರಮಕ್ಕೆ ಪ್ರತಿಯೊಬ್ಬರ ಸಲಹೆ ಸಹಕಾರ ಬಹಳ ಅಗತ್ಯವಾಗಿದ್ದು ಈ ಒಂದು ಸಮಾರಂಭವನ್ನು ಯಶಸ್ವಿಗೊಳಿಸಬೇಕಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶರಣೇಗೌಡ ಪಾಟೀಲ ಮಾತನಾಡಿ ಯಾವುದೇ ಕಾರ್ಯಕ್ರಮ ಮಾಡಬೇಕಾದರೆ ಮೊದಲು ಸೂಕ್ತ ತೀರ್ಮಾನ ತೆಗೆದುಕೊಂಡು ಸಭೆ ಸಮಾರಂಭ ಏರ್ಪಡಿಸಬೇಕಾಗುತ್ತದೆ ಈ ವರ್ಷದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಕುಷ್ಟಗಿ ತಾಲೂಕಿನಲ್ಲಿ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ ಆದರೆ ಪ್ರತಿಯೊಬ್ಬರ ಸಲಹೆ ಸಹಕಾರ ಅಗತ್ಯವಾಗಿದೆ ಸೂಕ್ತ ನಿರ್ಧಾರದೊಂದಿಗೆ ಜಿಲ್ಲಾ ಸಮ್ಮೇಳನ ನಡೆಸಲಾಗುವದು ಎಂಬ ಹೇಳಿದರು.
ಈ ಸಂದರ್ಭದಲ್ಲಿ ರಾಜ್ಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಶರಣಪ್ಪ ವಡಗೇರಿ, ನಿಕಟ ಪೂರ್ವ ‌ಕನ್ನಡ ಸಾಹಿತ್ಯ ಪರಿಷತ್ತಿನ ‌ಅಧ್ಯಕ್ಷ ಹನಮೇಶ ಗುಮಗೇರಾ, ರವೀಂದ್ರ ಬಾಕಳೆ, ಉಮೇಶ ಹಿರೇಮಠ, ಸಾಹಿತಿಗಳಾದ ಅಮರೇಗೌಡ ಪಾಟೀಲ ಜಾಲಿಹಾಳ, ದೇವರಾಜ ವಿಶ್ವ ಕರ್ಮ, ದೊಡ್ಡಪ್ಪ ಕೈಲವಾಡಗಿ, ಹ.ಯ.ಈಟಿಯವರ್, ಆರ್.ಕೆ.ಸುಬೇದಾರ, ವಿದ್ಯಾ ಕಂಪಾಪೂರಮಠ, ಎಸ್.ಜೆ.ಕಡೆಮನಿ, ಶ್ರೀನಿವಾಸ ಕಟ್ಲಿ, ನಿಂಗಪ್ಪ ಸಜ್ಜನ್, ಚನ್ನಪ್ಪ ಬಾವಿಮನಿ, ಸಂತೋಷ ತೋಟದ್, ಹನಮೇಶ ‌ಶಾಖಾಪೂರ, ಕ.ಕಾ.ಪ.ಸ.ತಾಲೂಕು ಅಧ್ಯಕ್ಷ ಪವಾಡೆಪ್ಪ ಚೌಡ್ಕಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ‌ರಾಜ್ಯ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ವಿಜೇತ ಲಲಿತಮ್ಮ ಹಿರೇಮಠ ಇವರಿಗೆ ಸನ್ಮಾನಿಸಿ ಗೌರವಿಸಿದರು.
    user_Pavadeppa c choudiki
    Pavadeppa c choudiki
    ಕುಷ್ಟಗಿ, ಕೊಪ್ಪಳ, ಕರ್ನಾಟಕ•
    2 hrs ago
  • ರೈಲ್ವೆ ಕಾಮಗಾರಿಯ ಕಂದಕದಲ್ಲಿ ಮುಳುಗಿ 17 ವರ್ಷದ ಬಾಲಕ ಸಾವು: ಗ್ರಾಮಸ್ಥರಲ್ಲಿ ಆತಂಕ ಕುಷ್ಟಗಿ: ತಾಲೂಕಿನ ವಿವಿಧೆಡೆ ರೈಲ್ವೆ ಇಲಾಖೆಯ ಕಾಮಗಾರಿಗಾಗಿ ಮಣ್ಣು (ಮರಂ) ತೆಗೆಯಲು ನಿರ್ಮಿಸಲಾಗಿರುವ ಆಳವಾದ ಕಂದಕಗಳು ಇದೀಗ ಸಾವಿನ ಬಲೆಗಳಾಗಿ ಪರಿಣಮಿಸುತ್ತಿರುವ ಆತಂಕಕಾರಿ ಘಟನೆಗಳು ಬೆಳಕಿಗೆ ಬರುತ್ತಿವೆ. ವಣಗೇರಿ ಗ್ರಾಮದ ವ್ಯಾಪ್ತಿಯಲ್ಲಿ ನಿರ್ಮಾಣಗೊಂಡಿದ್ದ ನೀರು ತುಂಬಿದ ಕಂದಕದಲ್ಲಿ ಈಜಲು ತೆರಳಿದ್ದ ಕೆ.ಬೋದೂರು ಗ್ರಾಮದ 17 ವರ್ಷದ ಬಾಲಕ ನೀರಿನಲ್ಲಿ ಮುಳುಗಿ ಮೃತಪಟ್ಟ ದುರ್ಘಟನೆ ನಡೆದಿದೆ. ವಣಗೇರಿ ಗ್ರಾಮದ ಸರ್ವೇ ನಂ. 24/1/3ರ ಜಮೀನಿನಲ್ಲಿ ರೈಲ್ವೆ ಕಾಮಗಾರಿಗಾಗಿ ಸುಮಾರು 6 ಎಕರೆ ಪ್ರದೇಶದಲ್ಲಿ ಮಣ್ಣು ತೆಗೆಯಲಾಗಿತ್ತು. ಇದರಿಂದ ಸುಮಾರು 45ರಿಂದ 50 ಅಡಿ ಆಳದ ಬೃಹತ್ ಕಂದಕ ನಿರ್ಮಾಣವಾಗಿದ್ದು, ಮಳೆ ಹಾಗೂ ಬಸಿ ನೀರು ತುಂಬಿ ಸಂಪೂರ್ಣ ಜಲಾವೃತಗೊಂಡಿತ್ತು. ಕೆ.ಬೋದೂರು ಗ್ರಾಮದ ಹನುಮಂತಪ್ಪ ತಂದೆ ಬಸವರಾಜ ಗೊರೆಬಾಳ (17) ಹಾಗೂ ಇನ್ನೊಬ್ಬ ಬಾಲಕ ಈಜಲು ಕಂದಕದ ಬಳಿ ತೆರಳಿದ್ದ ವೇಳೆ, ಆಳದ ಅರಿವಿಲ್ಲದೆ ನೀರಿನ ಸೆಳೆತಕ್ಕೆ ಸಿಲುಕಿ ಹನುಮಂತಪ್ಪ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ತಹಶೀಲ್ದಾರ ಅಶೋಕ ಶಿಗ್ಗಾಂವಿ, ಅಗ್ನಿಶಾಮಕ ಠಾಣಾಧಿಕಾರಿ ಮಾಳಿಂಗರಾಯ ಹಾಗೂ ಸಿಬ್ಬಂದಿ, ಕುಷ್ಟಗಿ ಪಿಎಸ್‌ಐ ಹನಮಂತಪ್ಪ ತಳವಾರ ನೇತೃತ್ವದ ಪೊಲೀಸ್ ತಂಡ ಸ್ಥಳಕ್ಕೆ ಭೇಟಿ ನೀಡಿ ಶೋಧ ಕಾರ್ಯಾಚರಣೆ ಆರಂಭಿಸಿತು. ನಿನ್ನೆ ಆರಂಭವಾದ ನಿರಂತರ ಕಾರ್ಯಾಚರಣೆಯ ಬಳಿಕ ಇಂದು ಬೆಳಿಗ್ಗೆ ಸುಮಾರು 9.30ಕ್ಕೆ ಬಾಲಕನ ಮೃತದೇಹ ಪತ್ತೆಯಾಯಿತು. ವಣಗೇರಿ ಮಾತ್ರವಲ್ಲದೆ ತಾಲೂಕಿನ ಟೆಂಗುಂಟಿ, ಕೆ.ಹೊಸೂರು, ಕಂದಕೂರು ಹಾಗೂ ಜಿ.ಗಂಗನಾಳ ಸೇರಿದಂತೆ ಹಲವು ಪ್ರದೇಶಗಳಲ್ಲಿ ರೈಲ್ವೆ ಯೋಜನೆಗಾಗಿ ಮಣ್ಣು ಮತ್ತು ಮರಳು ತೆಗೆಯಲಾಗಿದ್ದು, ಆಳವಾದ ಕಂದಕಗಳು ನಿರ್ಮಾಣಗೊಂಡಿವೆ. ಕೆಲವೆಡೆ ನೀರು ತುಂಬಿಕೊಂಡಿದ್ದು, ಇನ್ನೂ ಕೆಲವು ಸ್ಥಳಗಳಲ್ಲಿ ಅಪಾಯಕಾರಿಯಾಗಿ ತೆರೆದ ಸ್ಥಿತಿಯಲ್ಲಿವೆ. ಇದರಿಂದ ಗ್ರಾಮಸ್ಥರು ಹಾಗೂ ಜಾನುವಾರುಗಳಿಗೆ ಪ್ರಾಣಾಪಾಯ ಎದುರಾಗುವ ಭೀತಿ ಹೆಚ್ಚಾಗಿದೆ. ಸುರಕ್ಷತಾ ಕ್ರಮಗಳಿಲ್ಲದೆ ಕಂದಕಗಳನ್ನು ಬಿಟ್ಟಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಮೀನಿನ ಮಾಲೀಕರು ಹಾಗೂ ರೈಲ್ವೆ ಕಾಮಗಾರಿ ನಿರ್ವಹಣೆಯ ನಿರ್ಲಕ್ಷ್ಯವೇ ಈ ದುರ್ಘಟನೆಗೆ ಕಾರಣ ಎಂದು ಆರೋಪಿಸಿರುವ ಸ್ಥಳೀಯರು, ಮೃತ ಬಾಲಕನ ಕುಟುಂಬಕ್ಕೆ ಸರ್ಕಾರ ಹಾಗೂ ರೈಲ್ವೆ ಇಲಾಖೆ ತಕ್ಷಣ ಸೂಕ್ತ ಪರಿಹಾರ ಘೋಷಿಸಬೇಕು ಎಂದು ಒತ್ತಾಯಿಸಿದ್ದಾರೆ. ಇದಲ್ಲದೆ, ಅಪಾಯಕಾರಿ ಕಂದಕಗಳ ಸುತ್ತ ತಂತಿ ಬೇಲಿ ಅಳವಡಿಸುವುದು, ಎಚ್ಚರಿಕೆ ಫಲಕಗಳನ್ನು ಸ್ಥಾಪಿಸುವುದು ಸೇರಿದಂತೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೂಡಲೇ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
    4
    ರೈಲ್ವೆ ಕಾಮಗಾರಿಯ ಕಂದಕದಲ್ಲಿ ಮುಳುಗಿ 17 ವರ್ಷದ ಬಾಲಕ ಸಾವು: ಗ್ರಾಮಸ್ಥರಲ್ಲಿ ಆತಂಕ
ಕುಷ್ಟಗಿ: ತಾಲೂಕಿನ ವಿವಿಧೆಡೆ ರೈಲ್ವೆ ಇಲಾಖೆಯ ಕಾಮಗಾರಿಗಾಗಿ ಮಣ್ಣು (ಮರಂ) ತೆಗೆಯಲು ನಿರ್ಮಿಸಲಾಗಿರುವ ಆಳವಾದ ಕಂದಕಗಳು ಇದೀಗ ಸಾವಿನ ಬಲೆಗಳಾಗಿ ಪರಿಣಮಿಸುತ್ತಿರುವ ಆತಂಕಕಾರಿ ಘಟನೆಗಳು ಬೆಳಕಿಗೆ ಬರುತ್ತಿವೆ. ವಣಗೇರಿ ಗ್ರಾಮದ ವ್ಯಾಪ್ತಿಯಲ್ಲಿ ನಿರ್ಮಾಣಗೊಂಡಿದ್ದ ನೀರು ತುಂಬಿದ ಕಂದಕದಲ್ಲಿ ಈಜಲು ತೆರಳಿದ್ದ ಕೆ.ಬೋದೂರು ಗ್ರಾಮದ 17 ವರ್ಷದ ಬಾಲಕ ನೀರಿನಲ್ಲಿ ಮುಳುಗಿ ಮೃತಪಟ್ಟ ದುರ್ಘಟನೆ ನಡೆದಿದೆ.
ವಣಗೇರಿ ಗ್ರಾಮದ ಸರ್ವೇ ನಂ. 24/1/3ರ ಜಮೀನಿನಲ್ಲಿ ರೈಲ್ವೆ ಕಾಮಗಾರಿಗಾಗಿ ಸುಮಾರು 6 ಎಕರೆ ಪ್ರದೇಶದಲ್ಲಿ ಮಣ್ಣು ತೆಗೆಯಲಾಗಿತ್ತು. ಇದರಿಂದ ಸುಮಾರು 45ರಿಂದ 50 ಅಡಿ ಆಳದ ಬೃಹತ್ ಕಂದಕ ನಿರ್ಮಾಣವಾಗಿದ್ದು, ಮಳೆ ಹಾಗೂ ಬಸಿ ನೀರು ತುಂಬಿ ಸಂಪೂರ್ಣ ಜಲಾವೃತಗೊಂಡಿತ್ತು.
ಕೆ.ಬೋದೂರು ಗ್ರಾಮದ ಹನುಮಂತಪ್ಪ ತಂದೆ ಬಸವರಾಜ ಗೊರೆಬಾಳ (17) ಹಾಗೂ ಇನ್ನೊಬ್ಬ ಬಾಲಕ ಈಜಲು ಕಂದಕದ ಬಳಿ ತೆರಳಿದ್ದ ವೇಳೆ, ಆಳದ ಅರಿವಿಲ್ಲದೆ ನೀರಿನ ಸೆಳೆತಕ್ಕೆ ಸಿಲುಕಿ ಹನುಮಂತಪ್ಪ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ತಹಶೀಲ್ದಾರ ಅಶೋಕ ಶಿಗ್ಗಾಂವಿ, ಅಗ್ನಿಶಾಮಕ ಠಾಣಾಧಿಕಾರಿ ಮಾಳಿಂಗರಾಯ ಹಾಗೂ ಸಿಬ್ಬಂದಿ, ಕುಷ್ಟಗಿ ಪಿಎಸ್‌ಐ ಹನಮಂತಪ್ಪ ತಳವಾರ ನೇತೃತ್ವದ ಪೊಲೀಸ್ ತಂಡ ಸ್ಥಳಕ್ಕೆ ಭೇಟಿ ನೀಡಿ ಶೋಧ ಕಾರ್ಯಾಚರಣೆ ಆರಂಭಿಸಿತು. ನಿನ್ನೆ ಆರಂಭವಾದ ನಿರಂತರ ಕಾರ್ಯಾಚರಣೆಯ ಬಳಿಕ ಇಂದು ಬೆಳಿಗ್ಗೆ ಸುಮಾರು 9.30ಕ್ಕೆ ಬಾಲಕನ ಮೃತದೇಹ ಪತ್ತೆಯಾಯಿತು.
ವಣಗೇರಿ ಮಾತ್ರವಲ್ಲದೆ ತಾಲೂಕಿನ ಟೆಂಗುಂಟಿ, ಕೆ.ಹೊಸೂರು, ಕಂದಕೂರು ಹಾಗೂ ಜಿ.ಗಂಗನಾಳ ಸೇರಿದಂತೆ ಹಲವು ಪ್ರದೇಶಗಳಲ್ಲಿ ರೈಲ್ವೆ ಯೋಜನೆಗಾಗಿ ಮಣ್ಣು ಮತ್ತು ಮರಳು ತೆಗೆಯಲಾಗಿದ್ದು, ಆಳವಾದ ಕಂದಕಗಳು ನಿರ್ಮಾಣಗೊಂಡಿವೆ. ಕೆಲವೆಡೆ ನೀರು ತುಂಬಿಕೊಂಡಿದ್ದು, ಇನ್ನೂ ಕೆಲವು ಸ್ಥಳಗಳಲ್ಲಿ ಅಪಾಯಕಾರಿಯಾಗಿ ತೆರೆದ ಸ್ಥಿತಿಯಲ್ಲಿವೆ. ಇದರಿಂದ ಗ್ರಾಮಸ್ಥರು ಹಾಗೂ ಜಾನುವಾರುಗಳಿಗೆ ಪ್ರಾಣಾಪಾಯ ಎದುರಾಗುವ ಭೀತಿ ಹೆಚ್ಚಾಗಿದೆ.
ಸುರಕ್ಷತಾ ಕ್ರಮಗಳಿಲ್ಲದೆ ಕಂದಕಗಳನ್ನು ಬಿಟ್ಟಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಮೀನಿನ ಮಾಲೀಕರು ಹಾಗೂ ರೈಲ್ವೆ ಕಾಮಗಾರಿ ನಿರ್ವಹಣೆಯ ನಿರ್ಲಕ್ಷ್ಯವೇ ಈ ದುರ್ಘಟನೆಗೆ ಕಾರಣ ಎಂದು ಆರೋಪಿಸಿರುವ ಸ್ಥಳೀಯರು, ಮೃತ ಬಾಲಕನ ಕುಟುಂಬಕ್ಕೆ ಸರ್ಕಾರ ಹಾಗೂ ರೈಲ್ವೆ ಇಲಾಖೆ ತಕ್ಷಣ ಸೂಕ್ತ ಪರಿಹಾರ ಘೋಷಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇದಲ್ಲದೆ, ಅಪಾಯಕಾರಿ ಕಂದಕಗಳ ಸುತ್ತ ತಂತಿ ಬೇಲಿ ಅಳವಡಿಸುವುದು, ಎಚ್ಚರಿಕೆ ಫಲಕಗಳನ್ನು ಸ್ಥಾಪಿಸುವುದು ಸೇರಿದಂತೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೂಡಲೇ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
    user_Maruti Gumagera
    Maruti Gumagera
    Farmer ಕುಷ್ಟಗಿ, ಕೊಪ್ಪಳ, ಕರ್ನಾಟಕ•
    4 hrs ago
  • ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹಾವೇರಿ ಜಿಲ್ಲೆಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಬ್ಯಾಡಗಿ ಶಾಸಕರು ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು.
    1
    ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹಾವೇರಿ ಜಿಲ್ಲೆಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಬ್ಯಾಡಗಿ ಶಾಸಕರು ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು.
    user_ಬಸವರಾಜ ವೀ ಎಚ್
    ಬಸವರಾಜ ವೀ ಎಚ್
    ಶಿಗ್ಗಾಂವ್, ಹಾವೇರಿ, ಕರ್ನಾಟಕ•
    7 hrs ago
  • Jai Bheem sir Chetan ahinsa social worker and Samanthawadi Jai Bheem sir
    1
    Jai Bheem sir Chetan ahinsa social worker and Samanthawadi
Jai Bheem sir
    user_SAMATA NEWS KANNADA 1
    SAMATA NEWS KANNADA 1
    Advertising agency ಬೆಳಗಾವಿ, ಬೆಳಗಾವಿ, ಕರ್ನಾಟಕ•
    12 hrs ago
  • ಹೊಸನಗರ ಪ್ರದೇಶದಲ್ಲಿ ಕಳ್ಳರ ಹಾವಳಿ ಹೆಚ್ಚಿರುವ ಬಗ್ಗೆ ಎಚ್ಚರಿಕೆ ನೀಡಲಾಗಿದೆ, ಇದರಿಂದ ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ. ನಿಮ್ಮ ಮನೆ ಮತ್ತು ಕುಟುಂಬದ ಸುರಕ್ಷತೆಗಾಗಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ.
    3
    ಹೊಸನಗರ ಪ್ರದೇಶದಲ್ಲಿ ಕಳ್ಳರ ಹಾವಳಿ ಹೆಚ್ಚಿರುವ ಬಗ್ಗೆ ಎಚ್ಚರಿಕೆ ನೀಡಲಾಗಿದೆ, ಇದರಿಂದ ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ. ನಿಮ್ಮ ಮನೆ ಮತ್ತು ಕುಟುಂಬದ ಸುರಕ್ಷತೆಗಾಗಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ.
    user_Chethana Muniswamygowda
    Chethana Muniswamygowda
    Press advisory Hosanagara, Shivamogga•
    19 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.