ಅಂಗಡಿಗಳ ಬೀಗ ಮುರಿದು ಕಳವು: ಕಾನೂನು ಸಂಘರ್ಷಕ್ಕೊಳಗಾದ ಬಾಲಕನ ಬಂಧನ : ಸಾಹಿಲ್ ಬಾಗ್ಲಾ ಕೊಪ್ಪಳ:ನಗರದ ವಿವಿಧ ಕಿರಾಣಿ ಹಾಗೂ ಜನರಲ್ ಸ್ಟೋರ್‌ಗಳ ಬೀಗ ಮುರಿದು ಕಳವು ಹಾಗೂ ಕಳವಿಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಸಂಘರ್ಷಕ್ಕೊಳಗಾದ ಬಾಲಕನೊಬ್ಬನನ್ನು ಕೊಪ್ಪಳ ನಗರ ಠಾಣೆ ಪೊಲೀಸರು ವಶಕ್ಕೆ ಪಡೆದು, ಆತನಿಂದ ₹60 ಸಾವಿರ ನಗದು ಹಾಗೂ ಕಳವಿಗೆ ಬಳಸಿದ್ದ ಸ್ಕೂಟಿಯನ್ನು ಜಪ್ತಿ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಸಾಹಿಲ್ ಬಾಗ್ಲಾ ಅವರು ತಿಳಿಸಿದರು. ಅವರು (ಸೆ.14) ಸೋಮವಾರದಂದು ಎಸ್ಪಿ ಕಚೇರಿ ಸಭಾಂಗಣದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಸೆಪ್ಟೆಂಬರ್ 6ರಂದು ರಾತ್ರಿ ನಗರದ ತೆಗ್ಗಿನಕೇರಿಯ ಮಂಡಲಗೇರಿ ಕಾಂಪ್ಲೆಕ್ಸ್‌ನಲ್ಲಿರುವ ವೆಂಕಟೇಶ್ವರ ಕಿರಾಣಿ ಸ್ಟೋರ್‌ನ ಶಟರ್ ಕೀಲಿ ಮುರಿದು ಒಳ ಪ್ರವೇಶಿಸಿದ ಕಳ್ಳರು, ಕಬೋರ್ಡ್‌ನಲ್ಲಿದ್ದ ರೂ. 2.30 ಲಕ್ಷ ನಗದು ಹಣವನ್ನು ಕಳವು ಮಾಡಿದ್ದರು. ಅದೇ ರೀತಿ ಸೆಪ್ಟೆಂಬರ್ 11ರಂದು ಬೆಳಗು ಮುಂಜಾನೆ 4 ಗಂಟೆಗೆ ಜೆ.ಪಿ. ಮಾರ್ಕೆಟ್‌ನ ಶ್ರೀ ವೀರಭದ್ರೇಶ್ವರ ಕಿರಾಣಿ ಅಂಗಡಿ ಹಾಗೂ ಆರ್.ಆರ್. ಜನರಲ್ ಸ್ಟೋರ್‌ಗಳ ಬೀಗ ಮುರಿದು ನಗದು, ಬಾದಾಮಿ, ಏಲಕ್ಕಿ ಹಾಗೂ ರೂ.3000 ಹಾಗೂ ಒಂದು ಸ್ಯಾಮ್ಸಂಗ್ ಕಂಪನಿಯ ಗ್ಯಾಲಕ್ಸಿ ಮೊಬೈಲ್ ಎಸ್ -1 ಆಂಡ್ರಾಯ್ಡ್ ಮೊಬೈಲ್ ಸೇರಿದಂತೆ ಒಟ್ಟು 12,100 ರೂ. ಬೆಲೆ ಬಾಳುವ ವಿವಿಧ ವಸ್ತುಗಳನ್ನು ಕಳವು ಮಾಡಲಾಗಿತ್ತು. ನಗರದ ಮೆಹತಾ ಮಾರ್ಕೆಟ್, ಓಸಿಯಾ ಟ್ರೇಡರ್ಸ್ ಹಾಗೂ ಗೌರಿಶಂಕರ್ ಕಿರಾಣಿ ಅಂಗಡಿಗಳಲ್ಲಿಯೂ ಕಳವಿಗೆ ಯತ್ನಿಸಲಾಗಿತ್ತು. ಈ ಸಂಬಂಧ ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ 121/2026 ಕಲಂ 331(4), 305 ಬಿಎನ್ ಎಸ್ ಹಾಗೂ ಗುನ್ನೆ ನಂಬರ್ 125/2026 ಕಲಂ 62,331(4), 305(5) ಬಿ ಎನ್ ಎಸ್ ರಡಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡು ಸೆಪ್ಟೆಂಬರ್ 13ರಂದು ಬೆಳಗಿನ ಜಾವ ಹೊಸಪೇಟೆಯ ಜಂಬುನಾಥ ರಸ್ತೆ ಬೈಪಾಸ್‌ನಲ್ಲಿ ಸ್ಕೂಟಿಯಲ್ಲಿ ತೆರಳುತ್ತಿದ್ದ ಕಾನೂನು ಸಂಘರ್ಷಕ್ಕೊಳಗಾದ ಬಾಲಕರನ್ನು ವಶಕ್ಕೆ ಪಡೆದಿದ್ದು , ಅವರಿಂದ ₹60 ಸಾವಿರ ನಗದು ಹಾಗೂ ಕಳವಿಗೆ ಬಳಸಿದ್ದ ಸುಮಾರು ರೂ. 40 ಸಾವಿರ ಮೌಲ್ಯದ ಹೊಂಡಾ ಡಿಯೋ ಸ್ಕೂಟಿಯನ್ನು ಜಪ್ತಿ ಮಾಡಲಾಗಿದೆ. ಬಾಲಕರನ್ನು ಕೊಪ್ಪಳ ಬಾಲನ್ಯಾಯ ಮಂಡಳಿ ಮುಂದೆ ಹಾಜರುಪಡಿಸಿ, ನ್ಯಾಯಾಲಯದ ಆದೇಶದಂತೆ ಬಳ್ಳಾರಿಯ ಬಾಲಕರ ಸರ್ಕಾರಿ ವೀಕ್ಷಣಾಲಯಕ್ಕೆ ಒಪ್ಪಿಸಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಮತ್ತೊಬ್ಬ ಆರೋಪಿಯ ಪತ್ತೆ ಕಾರ್ಯ ಮುಂದುವರಿದಿದೆ ಎಂದು ತಿಳಿಸಿದರು. ಕೊಪ್ಪಳ ಜಿಲ್ಲಾ ಪೊಲೀಸ್ ಅಧೀಕ್ಷಕ ಸಾಹಿಲ್ ಬಾಗ್ಲಾ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಹೇಮಂತ್ ಕುಮಾರ್ ಹಾಗೂ ಡಿವೈಎಸ್‌ಪಿ ಮುತ್ತಣ್ಣ ಪಿ. ಸರವಗೋಳ ಅವರ ಮಾರ್ಗದರ್ಶನದಲ್ಲಿ ನಗರ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ಸುರೇಶ ಡಿ., ಪಿಎಸ್‌ಐ ಹೀರಪ್ಪ ನಾಯಕ, ಪಿಎಸ್ಐ ರೇವಣ್ಣ ಗುರಿಕಾರ, ಸಿಬ್ಬಂದಿಯಾದ ಮಂಜುನಾಥ್ ಸಿಪಿಸಿ 22, ಮಂಗಳೇಶ ಸಿಪಿಸಿ 459, ಗೂಡಸಾಬ್ ಸಿಪಿಸಿ 175, ತನಿಕಾ ಸಹಾಯಕರಾದ ಹನುಮಂತ ಹಕಾರಿ ಸಿ ಎಚ್ ಸಿ 207, ಕುಮಾರಸ್ವಾಮಿ ಸಿಂಪಡಿಸಿ 604, ಲಕ್ಷ್ಮಿ ದೇವಿ ಕೆ ಮಪಿ ಸಿ 24, ಅಧಿಕಾರಿ ಮತ್ತು ಸಿಬ್ಬಂದಿ ಯವರು ಶ್ರಮಿಸಿದ್ದು, ಪೊಲೀಸ್ ಸಿಬ್ಬಂದಿಯ ತಂಡ ಈ ಪ್ರಕರಣವನ್ನು ಭೇದಿಸಿದೆ. ಯಶಸ್ವಿ ಕಾರ್ಯಾಚರಣೆ ನಡೆಸಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿದರು. ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಹೇಮಂತ್ ಕುಮಾರ್, ಪಿ.ಐ ಸುರೇಶ್ ಡಿ, ಪಿ.ಎಸ್.ಐ ರೇವಣ್ಣ ಗುರಿಕಾರ್ , ಸೇರಿದಂತೆ ಇತರೆ ಪೊಲೀಸ್ ಅಧಿಕಾರಿ ಸಿಬ್ಬಂದಿ ಉಪಸ್ಥಿತರಿದ್ದರು.

- ಕುಷ್ಟಗಿ ತಾಲೂಕನ್ನು ಬರ ಪೀಡಿತ ಪ್ರದೇಶವೆಂದು ಘೋಷಣೆ ಮಾಡುವಂತೆ ಬಿಜೆಪಿ ಪಕ್ಷದ ವತಿಯಿಂದ ನೂರಾರು ಎತ್ತಿನ ಬಂಡಿಯ ಮೂಲಕ ಬೃಹತ್ ಪ್ರತಿಭಟನೆ. ಕುಷ್ಟಗಿ:- ಕುಷ್ಟಗಿ ತಾಲೂಕಿನ ಬಂದ ಬಿಜೆಪಿ ಮಂಡಲ ಹಾಗೂ ರೈತ ಮೋರ್ಚಾ, ಯುವ ಮೋರ್ಚಾ ಸೇರಿದಂತೆ ತಾಲೂಕು ಬಿಜೆಪಿ ಕ್ಷೇತ್ರದ ವತಿಯಿಂದ ಹಾಗೂ ಶಾಸಕ ಹಾಗೂ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ ಇವರ ನೇತೃತ್ವದಲ್ಲಿ ನೂರಾರು ಎತ್ತಿನ ಬಂಡಿಯ ಮೂಲಕ ಕುಷ್ಟಗಿ ತಾಲೂಕನ್ನು ಬರ ಪೀಡಿತ ಪ್ರದೇಶವೆಂದು ಘೋಷಣೆ ಮಾಡಬೇಕು ಎಂದು ಬೃಹತ್ ಪ್ರತಿಭಟನೆ ಬುಧವಾರ ನಡೆಸಲಾಯಿತು. ಈ ಸಂದರ್ಭದಲ್ಲಿ ಪಟ್ಟಣದ ಮಲ್ಲಯ್ಯ ವೃತ್ತದಿಂದ ಬಸ್ ನಿಲ್ದಾಣ, ಮಾರುತಿ ವೃತ್ತ, ಶ್ರೀ ಭಕ್ತ ಶ್ರೇಷ್ಠ ಕನಕದಾಸ ಸರ್ಕಲ್, ಪುರಸಭೆ ಮಾರ್ಗವಾಗಿ ವಾಲ್ಮೀಕಿ ವೃತ್ತದಿಂದ ಬಸವೇಶ್ವರ ಸರ್ಕಲ್ ತಲುಪಿ ಮಾನವ ಸರಪಳಿ ಮಾಡುವ ಮೂಲಕ ಬಹಿರಂಗ ವೇದಿಕೆ ಏರ್ಪಡಿಸಿ ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಘೋಷಣೆ ಕೂಗಿ ಅತ್ಯಂತ ಸಿಗ್ರದಲ್ಲಿ ಕುಷ್ಟಗಿ ತಾಲೂಕನ್ನು ಬರ ಎಂದು ಘೋಷಣೆ ಮಾಡದಿದ್ದರೆ ಮುಂದೆ ಉಗ್ರ ಪ್ರತಿಭಟನೆ ಮಾಡುವುದಾಗಿ ಹೆಚ್ಚರಿಸಿದರು. ಈ ಸಂದರ್ಭದಲ್ಲಿ ಶಾಸಕ ಹಾಗೂ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ, ಸುರಪುರ ಮಾಜಿ ಶಾಸಕ ಹಾಗೂ ಮಾಜಿ ಸಚಿವ ರಾಜುಗೌಡ ನಾಯಕ, ಬಿಜೆಪಿ ಪಕ್ಷದ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಗಿರೇಗೌಡ ಗೌಡ್ರು, ತಾಲೂಕು ಬಿಜೆಪಿ ಮಂಡಲದ ಅಧ್ಯಕ್ಷ ಮಾಹಾಂತೇಶ ಬಾದಾಮಿ, ಮಲ್ಲಪ್ಪ ಪಲ್ಲೇದ್, ಫಕೀರಪ್ಪ ಚಳಗೇರಿ ವಕೀಲರು ಸೇರಿದಂತೆ ಬಿಜೆಪಿ ಪಕ್ಷದ ಮುಖಂಡರು ಹಾಗೂ ರೈತರು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.1
- ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಗಣೇಶನ ಆಶೀರ್ವಾದ ಪಡೆದ ಸಚಿವ ವಿಜಯಾನಂದ ಕಾಶಪ್ಪನವರ ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಗಣೇಶ ಚತುರ್ಥಿಯ ಪಾವನ ಸಂದರ್ಭದಲ್ಲಿ ಕಸಬಾ ಗಣಪತಿ ಹಾಗೂ ಆಜುಭಾ ಗಣಪತಿಗೆ ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವರಾದ ವಿಜಯಾನಂದ ಎಸ್ ಕಾಶಪ್ಪನವರ ಭೇಟಿ ನೀಡಿ, ವಿಘ್ನವಿನಾಶಕನ ದರ್ಶನ ಪಡೆದು ನಾಡಿನ ಸುಭಿಕ್ಷೆ, ಶಾಂತಿ ಹಾಗೂ ಸಮೃದ್ಧಿಗಾಗಿ ಪ್ರಾರ್ಥಿಸಿದರು.3
- 🌾ಗಜೇಂದ್ರಗಡ ನಗರ ಹಾಗೂ ಗ್ರಾಮೀಣ ಅಭಿವೃದ್ಧಿಗಾಗಿ ನಿರಂತರ ಶ್ರಮ… ನನ್ನನ್ನು ಕೆಲವರು ವಿರೋಧಿಸಿದ್ದು ನನ್ನ ವ್ಯಕ್ತಿತ್ವವನ್ನಲ್ಲ… ನನ್ನ ಸಾಮರ್ಥ್ಯವನ್ನು. ಅವರಲ್ಲಿ ಕೆಲವರು ನನ್ನಿಂದ ಅಧಿಕಾರದ ಲಾಭ ಪಡೆದವರೇ ಆಗಿದ್ದರು. “ಸ್ವತಂತ್ರವಾಗಿ ಇದ್ದು ಕೆಲಸ ಮಾಡಿ ತೋರಿಸು” ಎಂದು ನನಗೆ ಸವಾಲು. ಹಾಕಿದವರೂ ಇದ್ದಾರೆ. ನನ್ನಿಂದ ಉಚಿತವಾಗಿ ಸೇವೆ ಪಡೆದವರೂ ಇದ್ದಾರೆ. ನಾನು ಸಲ್ಲಿಸಿದ ಮನವಿಗಳನ್ನು “ಕಸದ ಬುಟ್ಟಿಗೆ ಹಾಕುತ್ತಾರೆ” ಎಂದು ವ್ಯಂಗ್ಯವಾಡಿದವರೂ ಇದ್ದಾರೆ. ಆದರೆ ಇಂದು ಅದೇ ಮನವಿಗಳು ಅಭಿವೃದ್ಧಿಯ ದಿಕ್ಕಿನಲ್ಲಿ ಹಾರುವ ಗಾಳಿಪಟಗಳಾಗಿವೆ. 🪁 ನನಗೆ ಸಾಕಷ್ಟು ತೊಂದರೆ, ಅವಮಾನ, ಅಪಮಾನಗಳನ್ನು ಎದುರಿಸಬೇಕಾಯಿತು. ಆದರೂ ಯಾವುದಕ್ಕೂ ಕುಗ್ಗದೆ, ಯಾರ ಮೇಲೂ ಅವಲಂಬಿತನಾಗದೆ, ನಿಷ್ಠೆಯಿಂದ… ಪ್ರಾಮಾಣಿಕವಾಗಿ…24 ವರ್ಷಗಳ ಕಾಲ ನಿರಂತರವಾಗಿ ಕೆಲಸ ಮಾಡಿದೆ. ಇಂದು ನನ್ನ ಮಾತಿಗಿಂತ ನನ್ನ ಕೆಲಸಗಳೇ ಉತ್ತರ ನೀಡುತ್ತಿವೆ. ಜನರ ಸಮಸ್ಯೆಗಳನ್ನು ಹೇಳುವುದು ಮಾತ್ರ ನನ್ನ ಕೆಲಸವಲ್ಲ; ಪರಿಹಾರ ಸಿಗುವವರೆಗೂ ಹೋರಾಡುವುದು ನನ್ನ ಜವಾಬ್ದಾರಿ. 🔥ನನ್ನನ್ನು ಎಷ್ಟೇ ತುಳಿದರೂ, ನನ್ನ ಶ್ರಮವನ್ನು ತಡೆಯಲು ಸಾಧ್ಯವಾಗಲಿಲ್ಲ. ಮಾತಿಗಿಂತ ಕೆಲಸವೇ ಮುಖ್ಯ — ಅದನ್ನು ನನ್ನ ಕಾರ್ಯಗಳ ಮೂಲಕ ತೋರಿಸುತ್ತಿದ್ದೇನೆ. — @Anil Karne Gajendragad1
- ಮಸ್ಕಿಯಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ: ಯುವ ಸಂಪತ್ತು ಸಭೆಗೆ ಚಾಲನೆ ಮಸ್ಕಿಯಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ: ಯುವ ಸಂಪತ್ತು ಸಭೆಗೆ ಚಾಲನೆ ಮಸ್ಕಿ: ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಹಾಗೂ ಯುವ ಸಂಪತ್ತು ಸಭೆಗೆ ಚಾಲನೆ ನೀಡುವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಮಸ್ಕಿ ಶಾಸಕ **ಆರ್. ಬಸನಗೌಡ ತುರುವಿಹಾಳ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಪ್ರಜಾಪ್ರಭುತ್ವದ ಮೌಲ್ಯಗಳು ಹಾಗೂ ಸಂವಿಧಾನದ ಆಶಯಗಳನ್ನು ಯುವಜನರಿಗೆ ಪರಿಚಯಿಸುವುದು ಅಗತ್ಯವಾಗಿದ್ದು, ಯುವಕರು ದೇಶದ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಹೇಳಿದರು. ಯುವಜನರಲ್ಲಿ ನಾಯಕತ್ವ ಗುಣ, ಸಾಮಾಜಿಕ ಜವಾಬ್ದಾರಿ ಹಾಗೂ ಪ್ರಜಾಪ್ರಭುತ್ವದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ಯುವಕರು ಹಾಗೂ ಸಾರ್ವಜನಿಕರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.1
- ಕಾಗಿನೆಲೆ ಶ್ರೀ ಕನಕ ಗಿರುಪೀಠ ಹೊಸಕೋಟೆಯ ಶ್ರೀ ಈಶ್ವರನಂದಪುರಿ ಸ್ವಾಮಿಜಿಗಳು ಗಣೇಶ ವಿಗ್ರಹಕ್ಕೆ ಆರತಿ ಮಾಡಿದರು. ಲಿಂಗಸುಗೂರು : ಕಾಗಿನೆಲೆ ಶ್ರೀ ಕನಕ ಗಿರುಪೀಠ ಹೊಸಕೋಟೆಯ ಪರಮ ಪೂಜ್ಯ ಶ್ರೀ ಈಶ್ವರನಂದಪುರಿ ಸ್ವಾಮಿಜಿಗಳು ಗಣೇಶ ಚತುರ್ಥಿ ದಿನದ ಹಂಗವಾಗಿ ವಿಘ್ನವಿನಾಶಕ ಶ್ರೀ ವಿನಾಯಕನ ವಿಗ್ರಹಕ್ಕೆ ಸಾಂಪ್ರದಾಯಕ ಪೂಜೆ ಸಲ್ಲಿಸಿ ಮಂಗಳಾರತಿ ಮಾಡಿದರು.1
- ಗಣೇಶ ಚತುರ್ಥಿ ಅಂಗವಾಗಿ ಕಾರಟಗಿಯಲ್ಲಿ ಸ್ಥಳೀಯ ಕಲಾವಿದರಿಂದ ತತ್ವಪದಗಳು2
- ಲಿಂಗಸುಗೂರು ಪಟ್ಟಣದ ವಾರ್ಡ್ ನಂಬರ್ 7 ರ ಕಾ ಮಹಾರಾಜ್ ಗಣೇಶ್ ಮೂರ್ತಿ ಪ್ರತಿಷ್ಠಾಪನೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ಲಿಂಗಸುಗೂರು ಪಟ್ಟಣದ ವಾರ್ಡ್ ನಂಬರ್ 7 ರ ಕಾ ಮಹಾರಾಜ್ ಗಣೇಶ್ ಮೂರ್ತಿ ಪ್ರತಿಷ್ಠಾಪನೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವೇದಿಕೆ ಗಣ್ಯರು ಚಾಲನೆ ನೀಡಿದರು. ವಾರ್ಡಿನ ಮುಖಂಡರಾದ ಅಯ್ಯಪ್ಪ ವಕೀಲರು ಎಕ್ಸ್ಪರ್ಟ್ ಸ್ಕೂಲಿನ ಮುಖ್ಯಸ್ಥರಾದ ನಾಗರೆಡ್ಡಿ ಅವರು ಮಾತನಾಡಿ ವಾರ್ಡಿನ ಯುವಕರು ಗಣೇಶ್ ಮಂಡಳಿಗೆ ಸದಸ್ಯರು ಸಕ್ರಿಯವಾಗಿ ಪಾಲ್ಗೊಂಡು ಯಶಸ್ವಿಯಾಗಿ ಗಣೇಶೋತ್ಸವವನ್ನು ಆಚರಣೆ ಮಾಡುತ್ತ ಬಂದಿದ್ದಾರೆ ಇಂತಹ ಯುವಕ ಮಂಡಳಿ ಸದಸ್ಯರಿಗೆ ವಾರ್ಡಿನ ಪ್ರತಿಯೊಬ್ಬರು ಸರ್ಕಾರದೊಂದಿಗೆ ಒಗ್ಗಟ್ಟಿನಿಂದ ಬೆಂಬಲಿಸಿದರೆ ಮುಂದಿನ ದಿನಗಳಲ್ಲಿ ದೊಡ್ಡಮಟ್ಟದ ಗಣೇಶೋತ್ಸವವನ್ನು ಆಚರಣೆ ಮಾಡಲು ಸರ್ಕಾರಿ ಆಗುತ್ತದೆ ಎಂದು ಅಭಿಪ್ರಾಯಪಟ್ಟರು. ಪತ್ರಕರ್ತ ಸಿದ್ದನಗೌಡ ಪಾಟೀಲ್ ಮಾತನಾಡಿದರು. ಗಣೇಶ ಉತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ವಿವಿಧ ಸಾಂಸ್ಕೃತಿಕ ಹಾಗು ಕ್ರೀಡೆಗಳಲ್ಲಿ ಭಾಗವಹಿಸಿ ಜಯಗಳಿಸಿದ ಮಹಿಳೆಯರಿಗೆ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು. ನಂತರ ಸಂಜೆ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು ವೇದಿಕೆ ಮೇಲೆ ಸಂಗನಗೌಡ ಆರ್ ಎಸ್ ಗೌಡ ಪ್ರಭುಸ್ವಾಮಿ ಕುಪ್ಪಣ್ಣ ಸೇರಿದಂತೆ ಗಣೇಶ್ ಮಂಡಳಿಯ ಸದಸ್ಯರು ವಾರ್ಡಿನ ಗುರುಹಿರಿಯರು ಮಹಿಳೆಯರು ಮಕ್ಕಳು ಭಾಗವಹಿಸಿದ್ದರು. ಈ ಕಾರ್ಯಕ್ರಮವನ್ನು ಬಸವರಾಜ್ ಹಿರೇಮಠ ನಡೆಸಿಕೊಟ್ಟರು.4
- *ಭಕ್ತರ ಇಷ್ಟಾರ್ಥ ಈಡೇರಿಸುವ ದ್ಯಾಮವ್ವನ ಮಗನಾಗಿ ಮೂಡಿಬಂದ ಗೌರಿ-ಗಣೇಶ - ತೆಗ್ಗಿನ ಓಣಿಯಲ್ಲಿ ಭಕ್ತಿ ಸಾಗರ!* ಕುಷ್ಟಗಿ:* ಪಟ್ಟಣದಲ್ಲಿ ಈ ಬಾರಿಯ ಗಣೇಶೋತ್ಸವದಲ್ಲಿ ಎಲ್ಲರ ಗಮನ ಸೆಳೆಯುತ್ತಿರುವುದು ತೆಗ್ಗಿನ ಓಣಿಯ ಸರ್ವ ಧರ್ಮಗಳ ಗೆಳೆಯರ ಬಳಗದ ವಿಶೇಷ ಗಣೇಶ ಮೂರ್ತಿ. ಪ್ರತಿ ವರ್ಷ ಒಂದೊಂದು ವಿಭಿನ್ನ ಪರಿಕಲ್ಪನೆಯಲ್ಲಿ ಗಣೇಶನನ್ನು ಪ್ರತಿಷ್ಠಾಪಿಸುವ ಈ ಬಳಗವು, ಈ ಬಾರಿ ಅತ್ಯಾಧುನಿಕ *ಎಐ ತಂತ್ರಜ್ಞಾನದ* ನೆರವಿನೊಂದಿಗೆ ಅತ್ಯಂತ ಅರ್ಥಗರ್ಭಿತವಾದ ಮೂರ್ತಿಯನ್ನು ಪ್ರತಿಷ್ಠಾಪಿಸಿ ಇಡೀ ಕುಷ್ಟಗಿಯ ಜನರ ಮೆಚ್ಚುಗೆಗೆ ಪಾತ್ರವಾಗಿದೆ. *ಪುರಾಣದೊಂದಿಗೆ ಗ್ರಾಮ ದೇವತೆಯ ಸಮಾಗಮ: ಲೋಕ ಕಲ್ಯಾಣಕ್ಕಾಗಿ ಪಾರ್ವತಿಯು ತನ್ನ ಹಣೆಯ ಬೆವರಿನ ಮಣ್ಣಿನಿಂದ ವರಪುತ್ರ ಗಣೇಶನನ್ನು ಸೃಷ್ಟಿಸಿದ ಪೌರಾಣಿಕ ಕಥೆಯನ್ನೇ ಇಲ್ಲಿ ಮರುಸೃಷ್ಟಿ ಮಾಡಲಾಗಿದೆ. ಕುಷ್ಟಗಿಯ ಜನರ ಪಾಲಿಗೆ ಗ್ರಾಮ ದೇವತೆ ಶ್ರೀ ದ್ಯಾಮಾಂಬಿಕಾ ದೇವಿಯೇ ಸಾಕ್ಷಾತ್ ಪಾರ್ವತಿ. ಆ ದ್ಯಾಮವ್ವನೇ ತನ್ನ ಮಗನಾದ ಗಣೇಶನನ್ನು ಭೂಮಿಗೆ ಕಳುಹಿಸಿದ್ದಾಳೆ ಎಂಬ ಭಾವದಲ್ಲಿ ಈ ಅಲಂಕಾರ ಮೂಡಿಬಂದಿದೆ. ಹಿನ್ನೆಲೆಯಲ್ಲಿ ಕೈಲಾಸವಾಸಿ ಶಿವ, ತಾಯಿ ಪಾರ್ವತಿ (ದ್ಯಾಮವ್ವ) ಮತ್ತು ಮುಂದೆ ಪುಟ್ಟ ಬಾಲ ಗಣೇಶ ಕುಳಿತಿರುವ ದೃಶ್ಯವು ನೋಡುಗರಿಗೆ ದೈವತ್ವದ ಅನುಭೂತಿಯನ್ನು ನೀಡುತ್ತಿದೆ. ಕೇವಲ ಮಣ್ಣಿನ ಮೂರ್ತಿಯಲ್ಲ, ಇದೊಂದು ಜೀವಂತ ಪುರಾಣ ದರ್ಶನವೇ ಸರಿ. ಈ ಅರ್ಥಪೂರ್ಣ ಅಲಂಕಾರವು ಮಾಜಿ ಪುರಸಭೆ ಅಧ್ಯಕ್ಷ *ಮಹಾಂತೇಶ್ ಕಲಬಾವಿ* ಸೇರಿದಂತೆ ತೆಗ್ಗಿನ ಓಣಿಯ ಯುವ ಬಳಗದ ಅವಿರತ ಪರಿಶ್ರಮದ ಫಲವಾಗಿದೆ. ವಿಶೇಷವೆಂದರೆ ಹಿಂದೂ-ಮುಸ್ಲಿಂ ಯುವಕರು ಜಾತಿ ಬೇಧ ಮರೆತು ಒಂದಾಗಿ ಈ ಗಣೇಶನನ್ನು ಪ್ರತಿಷ್ಠಾಪಿಸಿರುವುದು ನಿಜವಾದ ಸರ್ವ ಧರ್ಮ ಸಮನ್ವಯತೆಗೆ ಸಾಕ್ಷಿಯಾಗಿದೆ. ತೆಗ್ಗಿನ ಓಣಿಯ ಯುವಕರ ಈ ಸೃಜನಶೀಲತೆ, ಧಾರ್ಮಿಕ ಚಿಂತನೆ ಮತ್ತು ತಂತ್ರಜ್ಞಾನದ ಬಳಕೆಯು ಇತರ ಮಂಡಳಿಗಳಿಗೆ ಮಾದರಿಯಾಗಿದೆ ಎಂದು ಹೇಳಿದರೆ ತಪ್ಪಾಗಲಾರದು.2