Shuru
Apke Nagar Ki App…
ಯುಗಾದಿ ರಂಜಾನ್ ಹಬ್ಬಕ್ಕೆ ಶುಭಾಶಯಗಳು ತಿಳಿಸಿದ ಶಾಸಕ ಬಿಎನ್ ರವಿಕುಮಾರ್ ಕ್ಷೇತ್ರದ ಅನುದಾನದ ವಿಚಾರದಲ್ಲಿ ಕಂದಾಯ ಸಚಿವರು ವಿಳಂಬ . ಕ್ಷೇತ್ರದ ಅಭಿವೃದ್ಧಿಗೆ 2000 ಕೋಟಿ ಅವಶ್ಯಕತೆಯಿದೆ
Venu Gopal
ಯುಗಾದಿ ರಂಜಾನ್ ಹಬ್ಬಕ್ಕೆ ಶುಭಾಶಯಗಳು ತಿಳಿಸಿದ ಶಾಸಕ ಬಿಎನ್ ರವಿಕುಮಾರ್ ಕ್ಷೇತ್ರದ ಅನುದಾನದ ವಿಚಾರದಲ್ಲಿ ಕಂದಾಯ ಸಚಿವರು ವಿಳಂಬ . ಕ್ಷೇತ್ರದ ಅಭಿವೃದ್ಧಿಗೆ 2000 ಕೋಟಿ ಅವಶ್ಯಕತೆಯಿದೆ
More news from ಕರ್ನಾಟಕ and nearby areas
- Post by ಅರವಿಂದ್ ರಾಜೀವ್1
- ಮಳವಳ್ಳಿ ಹಂಗ್ರಾಪುರ ಗ್ರಾಮದಲ್ಲಿ ಯುಗಾದಿ ಹಬ್ಬದ ಹೊನ್ನೇರು ಪೂಜಾ ಕಾರ್ಯಕ್ರಮ ಸಂಪನ್ನ ಮಳವಳ್ಳಿ ತಾಲೂಕಿನ ಹಂಗ್ರಾಪುರ ಗ್ರಾಮದ ಶ್ರೀ ಮಠದಲ್ಲಿ ಸಂಪ್ರದಾಯ ಬದ್ಧ ಆಚರಣೆಯಂತೆ ಹೊಸ ವರ್ಷದ ಯುಗಾದಿ ಸಂವತ್ಸರದಲ್ಲಿ ಹೊನ್ನೇರು ಪೂಜಾ ಕಾರ್ಯಕ್ರಮ ಅಪಾರ ಭಕ್ತರ ಗುರುವಾರ ಸಂಪನ್ನಗೊಂಡಿತು. ಪ್ರತಿವರ್ಷದಂತೆ ಈ ವರ್ಷವೂ ಹಂಗ್ರಾಪುರ ಮಠದ ಶ್ರೀ ಬಸವ ಲಿಂಗ ದೇಸಿ ಕೇಂದ್ರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಆಯೋಜಿಸಿದ್ದ ಯುಗಾದಿ ಸಂವತ್ಸರದ ಹೊನ್ನೇರು ಪೂಜಾ ಕಾರ್ಯಕ್ರಮಗಳು ಸಂಪ್ರದಾಯ ಬದ್ಧವಾಗಿ ಜರುಗಿದವು. ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು ಈ ಸಂದರ್ಭದಲ್ಲಿ ಹೊನ್ನೇರುಗಳಿಗೆ ಭಕ್ತರು ವಿಶೇಷ ಪೂಜೆ ಸಲ್ಲಿಸಿ ಮಹಾಮಂಗಳಾರತಿ ನೀಡಿದರು ನಂತರ ಆಗಮಿಸಿದ ಜನರಿಗೆ ಶ್ರೀಮಠದಲ್ಲಿ ಪ್ರಸಾದ ವಿತರಣೆ ಮಾಡಲಾಯಿತು1
- ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ 2026 ನೆಯ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಮಾದಪ್ಪನ ಮಹಾರಥೋತ್ಸವ ವಿಜೃಂಭಣೆ ಜರುಗಿತು. #ಮಲೆಗಳಲ್ಲಿ ಮೈದಳೆದ ಮಾದೇವನ ಸನ್ನಿಧಿಯಲ್ಲಿ ಹೊಸ ವರ್ಷದ ಸಂಭ್ರಮ! 🌿 ಬೇವು-ಬೆಲ್ಲದ ಸವಿ ಒಂದೆಡೆಯಾದರೆ, ಬೆಟ್ಟದ ದಾರಿಯಲ್ಲಿ ಮಾದಪ್ಪನ ಸಾರಥ್ಯದ ಸಡಗರ ಇನ್ನೊಂದೆಡೆ. ಯುಗಾದಿ ಹಬ್ಬ ಹಾಗೂ ಮಹದೇಶ್ವರ ಬೆಟ್ಟದ ಜಾತ್ರೆಯ ಹಾರ್ದಿಕ ಶುಭಾಶಯಗಳು.1
- ಮಲೆ ಮಹದೇಶ್ವರ ಬೆಟ್ಟದಲ್ಲಿ ಯುಗಾದಿ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ಮಹಾರಥೋತ್ಸವವು ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿತು. ಈ ಮೂಲಕ ಜಾತ್ರಾ ಮಹೋತ್ಸವ ಯಶಸ್ವಿಯಾಗಿ ಸಂಪನ್ನಗೊಂಡಿತು. ಸಾಲೂರು ಬೃಹನ್ಮಠದ ಪೀಠಾಧಿಪತಿ ಡಾ. ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿಯವರ ನೇತೃತ್ವದಲ್ಲಿ ವಿಶೇಷ ಪೂಜೆಗಳು ಜರುಗಿದವು. ಸಂಪ್ರದಾಯಬದ್ಧ ವಿಧಿವಿಧಾನಗಳೊಂದಿಗೆ ರಥೋತ್ಸವ, ಗುರು ಬ್ರಹ್ಮೋತ್ಸವ ಹಾಗೂ ಅನ್ನ ಬ್ರಹ್ಮೋತ್ಸವವೂ ಭಕ್ತಿಭಾವದಿಂದ ನೆರವೇರಿತು.2
- ಯುಗಾದಿ ಹಬ್ಬದಲ್ಲೂ ಜೂಜಾಟಕ್ಕೆ ಬ್ರೇಕ್: ಚಳ್ಳಕೆರೆಯಲ್ಲಿ ಇಸ್ಪೀಟ್ ಅಡ್ಡೆ ಮೇಲೆ ಪೊಲೀಸರ ದಾಳಿ ಪ್ರಕರಣ ದಾಖಲು ಯುಗಾದಿ ಹಬ್ಬದ ನೆಪದಲ್ಲಿ ಇಸ್ಪೀಟ್ (ಜೂಜಾಟ) ಆಡದಂತೆ ಜಿಲ್ಲಾ ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ಪ್ರಕಟಣೆ ನೀಡಿದ್ದರೂ, ಕೆಲವರು ಅದನ್ನು ಉಲ್ಲಂಘಿಸಿ ಜೂಜಾಟದಲ್ಲಿ ತೊಡಗಿದ್ದರು. ಈ ಹಿನ್ನೆಲೆಯಲ್ಲಿ ಚಳ್ಳಕೆರೆ ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಇಸ್ಪೀಟ್ ಅಡ್ಡೆಗಳ ಮೇಲೆ ಪೊಲೀಸರು ವಿಶೇಷ ದಾಳಿ ನಡೆಸಿದ್ದಾರೆ. ಎಸ್ಪಿ ರಂಜಿತ್ ಕುಮಾರ್ ಬಂಡಾರ್ ಹಾಗೂ ಡಿವೈಎಸ್ಪಿ ಸತ್ಯನಾರಾಯಣರಾವ್ ಅವರ ಮಾರ್ಗದರ್ಶನದಲ್ಲಿ, ಚಳ್ಳಕೆರೆ ಠಾಣಾಧಿಕಾರಿ ಕೆ. ಕುಮಾರ್ ನೇತೃತ್ವದಲ್ಲಿ ಪಿಎಸ್‌ಐ ಮತ್ತು ಸಿಬ್ಬಂದಿಗಳು ಮಾರ್ಚ್ 18ರಿಂದ 19ರವರೆಗೆ ಕಾರ್ಯಾಚರಣೆ ನಡೆಸಿದರು. ದಾಳಿಯ ವೇಳೆ ಕಾನೂನುಬಾಹಿರವಾಗಿ ಜೂಜಾಟದಲ್ಲಿ ತೊಡಗಿದ್ದ 58 ಮಂದಿಯನ್ನು ಬಂಧಿಸಲಾಗಿದ್ದು, ಒಟ್ಟು 17 ಪ್ರಕರಣಗಳು ದಾಖಲಾಗಿವೆ. ಜೊತೆಗೆ ಪಣಕ್ಕಿಟ್ಟಿದ್ದ ₹85,390 ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಇಂತಹ ದಾಳಿಗಳು ಮುಂದುವರಿಯುತ್ತವೆ ಎಂದು ಠಾಣಾಧಿಕಾರಿ ಕೆ. ಕುಮಾರ್ ಎಚ್ಚರಿಕೆ ನೀಡಿದ್ದಾರೆ.1
- SIDDIQA HANDICAPPED WELFARE TRUST Wilson Garden Bangalore Distrubuted Ration to the members of KAVERI PHYSICALLY DISABLED WELFARE TRUST #kvnews1
- ಮಳವಳ್ಳಿ ತಾಲೂಕಿನ ಬಿಜಿಪುರ ಗ್ರಾಮದ ಇತಿಹಾಸ ಪ್ರಸಿದ್ಧ ಮಂಟೇಸ್ವಾಮಿ ಪುಣ್ಯಕ್ಷೇತ್ರದ ಯುಗಾದಿ ಜಾತ್ರಾ ಮಹೋತ್ಸವ ಮತ್ತು ಮಠಕ್ಕೆ ನುಗ್ಗುವ ಸೇವೆ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಬುಧವಾರ ಸಂಜೆ ಸಂಪ್ರದಾಯಪದ್ಧ ಆಚರಣೆಗಳೊಂದಿಗೆ ಸಂಪನ್ನಗೊಂಡಿತು1
- ಹನೂರು: ಚೈತ್ರ ಮಾಸದ ಆಗಮನದೊಂದಿಗೆ ಪ್ರಕೃತಿಯಲ್ಲಿ ಹೊಸ ಕಳೆ ಬಂದಿದೆ. ಸುಗ್ಗಿ ಕಾಲದ ಸಂಭ್ರಮವನ್ನು ಹೊತ್ತು ತರುವ 'ಕ್ರೋಧಿ ನಾಮ ಸಂವತ್ಸರ' ಯುಗಾದಿ ಹಬ್ಬವನ್ನು ನಾಡಿನಾದ್ಯಂತ ಸಡಗರದಿಂದ ಆಚರಿಸಲಾಗುತ್ತಿದೆ. ಸುದ್ದಿಯ ಮುಖ್ಯಾಂಶಗಳು: ಬೇವು-ಬೆಲ್ಲದ ಸಾರ: ಜೀವನದ ಸುಖ-ದುಃಖಗಳನ್ನು ಸಮಾನವಾಗಿ ಸ್ವೀಕರಿಸುವ ಸಂಕೇತವಾಗಿ ಮನೆಮನೆಗಳಲ್ಲಿ ಬೇವು-ಬೆಲ್ಲ ಹಂಚಿ ಸಂಭ್ರಮಿಸಲಾಗುತ್ತಿದೆ. ಹೊಸ ವರ್ಷದ ಆರಂಭ: ಹಿಂದೂ ಪಂಚಾಂಗದ ಪ್ರಕಾರ ಇಂದಿನಿಂದ ಹೊಸ ವರ್ಷ ಆರಂಭವಾಗುತ್ತಿದ್ದು, ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಹಾಗೂ ಪಂಚಾಂಗ ಶ್ರವಣ ಕಾರ್ಯಕ್ರಮಗಳು ನಡೆಯುತ್ತಿವೆ. ಸಂಭ್ರಮದ ಆಚರಣೆ: ಹಬ್ಬದ ಪ್ರಯುಕ್ತ ಮನೆಗಳ ಮುಂದೆ ರಂಗೋಲಿ, ತೋರಣಗಳ ಅಲಂಕಾರದೊಂದಿಗೆ ಹೋಳಿಗೆ (ಒಬ್ಬಟ್ಟು) ಸೇರಿದಂತೆ ವೈವಿಧ್ಯಮಯ ಖಾದ್ಯಗಳ ಸವಿ ಉಣಲಾಗುತ್ತಿದೆ. "ಕಹಿ-ಸಿಹಿ ಸಮ್ಮಿಲನದ ಈ ಯುಗಾದಿ ಎಲ್ಲರ ಜೀವನದಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿಯನ್ನು ತರಲಿ ಎಂದು ಆಶಿಸುತ್ತೇವೆ." ವರದಿ: ಉಸ್ಮಾನ್ ಖಾನ್,1
- ಚಳ್ಳಕೆರೆ ತಾಲೂಕಿನ ದೊಡ್ಡೇರಿ ಶ್ರೀಕನ್ನೇಶ್ವರ ಆಶ್ರಮದಲ್ಲಿ ಯುಗಾದಿ ಅಂಗವಾಗಿ ಪಲ್ಲಕ್ಕಿ ಉತ್ಸವ ದೊಂದಿಗೆ ಯುಗಾದಿ ಸಂಭ್ರಮಾಚರಣೆ ನಡೆಯಿತು1