logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಬೆಳ್ಳಂ ಬೆಳಗೆ ಸ್ಕೌಟ್ಸ್ ಕ್ಯಾಂಪ್ ರಸ್ತೆಯಲ್ಲಿ ಅಪಘಾತ........ ಬೆಳ್ಳಂ ಬೆಳಗೆ ಸ್ಕೌಟ್ಸ್ ಕ್ಯಾಂಪ್ ರಸ್ತೆಯಲ್ಲಿ ಅಪಘಾತ. ದೊಡ್ಡಬಳ್ಳಾಪುರ: ನಗರದ ಸ್ಕೌಟ್ ಕ್ಯಾಂಪ್ ರಸ್ತೆಯಲ್ಲಿ ಇಂದು ಬೆಳಗಿನ ಜಾವ ಅಪಘಾತ ಸಂಭವಿಸಿ ಥಾರ್ ಕಾರಿನಲ್ಲಿದ್ದವರಿಗೆ ಗಂಭೀರ ಗಾಯಗಳಾಗಿದ್ದು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇಂದು ಬೆಳಗ್ಗೆ ಸುಮಾರು 5.30 ರ ವೇಳೆ ಕ್ಯಾಂಪ್ ಕಡೆಯಿಂದ ಬಂದ ಕಾರು ಖಾಸಗಿ ಬ್ಯಾಂಕ್ ಸಮೀಪ, ನಾಯಿ ಅಡ್ಡ ಬಂದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ. ಈ ವೇಳೆ ಕಾರಿನಲ್ಲಿದ್ದ ಮೂವರು ಯುವತಿಯರು, ಇಬ್ಬರು ಯುವಕರಿಗೆ ತೀವ್ರ ಗಾಯಗಳಾಗಿದೆ. ಕಾರಿನ ಚಾಲಕ ಹಾಗೂ ಮತ್ತೋರ್ವ ಯುವಕನ ಸ್ಥಿತಿ ಚಿಂತಾಜನಕ ಎನ್ನಲಾಗಿದೆ. ಇನ್ನೂ ಅಪಘಾತಕ್ಕೆ ಒಳಗಾದವರು ಆಂಧ್ರಪ್ರದೇಶದ ಮೂಲದವರು ಎಂದು ತಿಳಿದುಬಂದಿದ್ದು, ಬಾಶೆಟ್ಟಿಹಳ್ಳಿ ಸಮೀಪದ ಪಿಜಿಯಲ್ಲಿ ವಾಸವಿದ್ದರು ಎನ್ನಲಾಗಿದೆ. ಭಾನುವಾರದ ರಜೆ ಹಿನ್ನೆಲೆ ಸ್ವಂತ ಊರಿಗೆ ತೆರಳಿ ಇಂದು ಹಿಂತಿರುಗಿ ಬರುವ ವೇಳೆ ಈ ದುರ್ಘಟನೆ ಸಂಭವಿಸಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ದುರ್ಘಟನೆ ಸಂಭವಿಸಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. #ejagathu #doddaballapuraone #accident #doddabalapura #bangalore

2 hrs ago
user_YSRmedia vijayanagaraupsates
YSRmedia vijayanagaraupsates
Mobile Phone Accessory Shop ಹೊಸಪೇಟೆ, ವಿಜಯನಗರ, ಕರ್ನಾಟಕ•
2 hrs ago
0b060e02-adeb-49c5-abe1-384ba2697f0d

ಬೆಳ್ಳಂ ಬೆಳಗೆ ಸ್ಕೌಟ್ಸ್ ಕ್ಯಾಂಪ್ ರಸ್ತೆಯಲ್ಲಿ ಅಪಘಾತ........ ಬೆಳ್ಳಂ ಬೆಳಗೆ ಸ್ಕೌಟ್ಸ್ ಕ್ಯಾಂಪ್ ರಸ್ತೆಯಲ್ಲಿ ಅಪಘಾತ. ದೊಡ್ಡಬಳ್ಳಾಪುರ: ನಗರದ ಸ್ಕೌಟ್ ಕ್ಯಾಂಪ್ ರಸ್ತೆಯಲ್ಲಿ ಇಂದು ಬೆಳಗಿನ ಜಾವ ಅಪಘಾತ ಸಂಭವಿಸಿ ಥಾರ್ ಕಾರಿನಲ್ಲಿದ್ದವರಿಗೆ ಗಂಭೀರ ಗಾಯಗಳಾಗಿದ್ದು ನಗರದ ಖಾಸಗಿ

d4ad000e-9052-49e8-8cc4-32f01ac6aced

ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇಂದು ಬೆಳಗ್ಗೆ ಸುಮಾರು 5.30 ರ ವೇಳೆ ಕ್ಯಾಂಪ್ ಕಡೆಯಿಂದ ಬಂದ ಕಾರು ಖಾಸಗಿ ಬ್ಯಾಂಕ್ ಸಮೀಪ, ನಾಯಿ ಅಡ್ಡ ಬಂದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ. ಈ

4c943e5b-af06-4410-83ff-184b3257fbc2

ವೇಳೆ ಕಾರಿನಲ್ಲಿದ್ದ ಮೂವರು ಯುವತಿಯರು, ಇಬ್ಬರು ಯುವಕರಿಗೆ ತೀವ್ರ ಗಾಯಗಳಾಗಿದೆ. ಕಾರಿನ ಚಾಲಕ ಹಾಗೂ ಮತ್ತೋರ್ವ ಯುವಕನ ಸ್ಥಿತಿ ಚಿಂತಾಜನಕ ಎನ್ನಲಾಗಿದೆ. ಇನ್ನೂ ಅಪಘಾತಕ್ಕೆ ಒಳಗಾದವರು ಆಂಧ್ರಪ್ರದೇಶದ ಮೂಲದವರು ಎಂದು ತಿಳಿದುಬಂದಿದ್ದು, ಬಾಶೆಟ್ಟಿಹಳ್ಳಿ ಸಮೀಪದ ಪಿಜಿಯಲ್ಲಿ ವಾಸವಿದ್ದರು ಎನ್ನಲಾಗಿದೆ. ಭಾನುವಾರದ

42531fcc-17ad-48cc-9bb9-2ead42e3ce3e

ರಜೆ ಹಿನ್ನೆಲೆ ಸ್ವಂತ ಊರಿಗೆ ತೆರಳಿ ಇಂದು ಹಿಂತಿರುಗಿ ಬರುವ ವೇಳೆ ಈ ದುರ್ಘಟನೆ ಸಂಭವಿಸಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ದುರ್ಘಟನೆ ಸಂಭವಿಸಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. #ejagathu #doddaballapuraone #accident #doddabalapura #bangalore

More news from ಕರ್ನಾಟಕ and nearby areas
  • ಚೆನ್ನೈನ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ದಳಪತಿ ವಿಜಯ್ ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕ‌ರ್ ಅವರು ಅವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಈ ಐತಿಹಾಸಿಕ ಕ್ಷಣಕ್ಕೆ ರಾಹುಲ್ ಗಾಂಧಿ ಸೇರಿದಂತೆ ರಾಷ್ಟ್ರಮಟ್ಟದ ಗಣ್ಯರು ಸಾಕ್ಷಿಯಾದರು.
    1
    ಚೆನ್ನೈನ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ದಳಪತಿ ವಿಜಯ್ ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕ‌ರ್ ಅವರು ಅವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಈ ಐತಿಹಾಸಿಕ ಕ್ಷಣಕ್ಕೆ ರಾಹುಲ್ ಗಾಂಧಿ ಸೇರಿದಂತೆ ರಾಷ್ಟ್ರಮಟ್ಟದ ಗಣ್ಯರು ಸಾಕ್ಷಿಯಾದರು.
    user_YSRmedia vijayanagaraupsates
    YSRmedia vijayanagaraupsates
    Mobile Phone Accessory Shop ಹೊಸಪೇಟೆ, ವಿಜಯನಗರ, ಕರ್ನಾಟಕ•
    19 hrs ago
  • ಕೂಡ್ಲಿಗಿ : ಪಟ್ಟಣ ಸೇರಿದಂತೆ ತಾಲೂಕಿನಾಧ್ಯಂತ ತಾಯಿ ದಿನ ಆಚರಣೆ *ಕೂಡ್ಲಿಗಿ : ಪಟ್ಟಣ ಸೇರಿದಂತೆ ತಾಲೂಕಿನಾಧ್ಯಂತ ತಾಯಿ ದಿನ ಆಚರಣೆ*- ವಿಜಯನಗರ ಜಿಲ್ಲೆ ಕೂಡ್ಲಿಗಿ : ಮೇ 10 ರಂದು ತಾಯಿ ದಿನ ಪ್ರಯುಕ್ತ , ಪಟ್ಟಣ ಸೇರಿದಂತೆ ತಾಲೂಕಿನಾಧ್ಯಂತ ತಾಯಿ ದಿನಾಚರಣೆ ಆಚರಿಸಲಾಯಿತು. ಪಟ್ಟಣದಲ್ಲಿನ ಹಿರಿಯ ಸಾಹಿತಿಗಳು , ಹಿರಿಯ ಪತ್ರಕರ್ತರು , ನಿವೃತ್ತ ಉಪನ್ಯಾಸಕರಾದ ಸಿದ್ಧರಾಮ ಹಿರೇಮಠ ರವರು. ತಾಯಿಯನ್ನು ಸ್ಮರಿಸಿದರು ಹಾಗೂ ಅವರೊಂದಿಗಿನ ವಾತ್ಸಲ್ಯಯುತ ಅಮೂಲ್ಯ ಕ್ಷಣಗಳನ್ನು ನೆನೆದರು. ತಾಯಿಯವರ ಆದರ್ಶ ಗುಣಗಳನ್ನು ಕೊಂಡಾಡುತ್ತ , ಅವರಿಗೆ ಶ್ರದ್ಧಾಪೂರ್ವಕ ಭಾವುಕತೆಯಿಂದ ನುಡಿನಮನ ಸಲ್ಲಿಸಿ ವಂದಿಸಿದರು. ಅವರು ಮಾತನಾಡಿ , ತಾಯಿಗೆ ತಾಯಿನೇ ಸಾಟಿ ಅವರ ಹೊರತು ಯಾರೂ ಇಲ್ಲ ಬೇರೆನು ಸಮನಲ್ಲ ಎಂದರು. ಪ್ರತ್ಯಕ್ಷ ಆರಾಧ್ಯ ದೇವ ವೆಂದರೆ , ಹೆತ್ತ ತಾಯಿ ತಂದೆಯರು. ಅವರನ್ನು ಪ್ರತಿಯೊಬ್ಬರೂ ಗೌರವಿಸಬೇಕು ಪ್ರೀತಿಸಬೇಕು , ಅವರನ್ನು ಗೌರವಿಸುವುದರೊಂದಿಗೆ ನಮ್ಮ ಮಕ್ಕಳಂತೆ ಪೋಷಿಸಬೇಕು. ಅವರ ಮನದಾಳದ ಆಸೆ ಆಕಾಂಕ್ಷೆ ಒತ್ತಾಸೆಗಳನ್ನು , ಪ್ರೀತಿ ಪೂರ್ವಕವಾಗಿ ಈಡೇರಿಸಬೇಕಿದೆ ಎಂದರು. ತಂದೆ ತಾಯಿಯರನ್ನು ಪ್ರೀತಿಸದವರು ಮನುಷ್ಯರಾಗಿರಲು ಸಾಧ್ಯವೇ ಇಲ್ಲ. ತಂದೆ ತಾಯಿಯರನ್ನು ಸಂತೋಷ ನೆಮ್ಮದಿಯಿಂದ ನೋಡಿಕೊಳ್ಳದವರು , ಕೋಟಿ ತೀರ್ಥಗಳನ್ನು ದೇಗುಲಗಳನ್ನು ಸಂದರ್ಶಿಸಿದರೇನು ಫಲ.. ದಾನ ಧರ್ಮಾದಿ ಯಜ್ಞ ಯಾಗಾದಿಗಳನ್ನು ಮಾಡಿಸರೇನು ಫಲ ಎಂದು ಪ್ರೆಶ್ನಿಸಿದ್ದಾರೆ. ಶಾಸಕರಾದ ಡಾ ॥ ಎನ್ ಟಿ ಶ್ರೀನಿವಾಸ್ ರವರು , ಹಾಗೂ ಅವರ ಸಹೋದರರಾದ ಎನ್ ಟಿ ತಮ್ಮಣ್ಣ ನವರು. ತಮ್ಮ ತಾಯಿಗೆ ಸಿಹಿ ತಿನಿಸಿ ಸಂಭ್ರಮಿಸಿದ್ದಾರೆ , ಹಾಗೂ ತಾಯಿಯ ಪಾದಕ್ಕೆ ಸಾಷ್ಟಾಂಗ ನಮಸ್ಕಾರಗಳನ್ನು ಅರ್ಪಿಸಿದ್ದಾರೆ. ಕಾರ್ಮಿಕ ಮುಖಂಡರಾದ ಗುನ್ನಳ್ಳಿ ರಾಘವೇಂದ್ರ ರವರು , ಮನೆಯಲ್ಲಿರುವ ತಮ್ಮ ಮಾತೆಯ ಭಾವಚಿತ್ರಕ್ಕೆ ಭಕ್ತಿಯಿಂದ ನಮಿಸಿ ಅವರಿಗೆ ನುಡಿನಮನ ಸಲ್ಲಿಸಿದರು. ಅಂತೆಯೇ ಪತ್ರಕರ್ತರು ಹಾಗೂ ವಂದೇ ಮಾತರಂ ಜಾಗೃತಿ ವೇದಿಕೆ ಮುಖಂಡರಾದ , ವಿ.ಜಿ.ವೃಷಭೇಂದ್ರರವರು ತಮ್ಮ ತಾಯಿಯ ಪಾದಕ್ಕೆರಗಿ ಸಾಷ್ಟಾಂಗ ನಮಸ್ಕಾರಗಳನ್ನು ಮಾಡಿ , ಅವರಿಗೆ ಉಡುಗೊರೆಯನ್ನಿತ್ತು ಸಿಹಿ ತಿಸಿದರು. ಈ ಸಂದರ್ಭದಲ್ಲಿ ಸಹೋದರಿ ಅಕ್ಕಮಹಾದೇವಿ , ಹಾಗೂ ಸಹೋದರಿಯ ಪುತ್ರ ಇದ್ದರು. ಮತ್ತು ಅವರೂ ಕೂಡ ಸಿಹಿ ಹಂಚಿ ತಾಯಿ ದಿನಾಚರಣೆ ಆಚರಿಸಿದರು. ಅದೇ ರೀತಿ ಪಟ್ಟಣ ಸೇರಿದಂತೆ , ತಾಲೂಕಿನ ವಿವಿದೆಡೆಗಳಲ್ಲಿ. ಗಣ್ಯರು ವಿವಿದ ಮುಖಂಡರು. ಹೋರಾಟಗಾರರು , ಅನೇಕ ಸಾರ್ವಜನಿಕರು ತಾಯಿಗೆ ಸಿಹಿ ಹಂಚಿ ಉಡುಗೊರೆ ನೀಡಿದ್ದಾರೆ ಹಲವರು ತಾಯಿ ಪಾದಪೂಜೆ ಮಾಡಿ ತಾಯಿಗೆ ನಮಿಸಿದ್ದಾರೆ. ಬಹುತೇಕರು ದೇವರಲ್ಲಿ ವಿಶೇಷ ಅರ್ಚನೆ ಪೂಜೆಗಳನ್ನು ಮಾಡಿಸುವ ಮೂಲಕ ಪ್ರಾರ್ಥಿಸಿ ಶುಭ ಕೋರಿದ್ದಾರೆ. ಬಹು ಸಂಭ್ರಮದಿಂದ ಸಡಗರದಿಂದ , ತಾಯಿ ದಿನಾಚರಣೆ ಆಚರಿಸಿದರು. ✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ - 9008937428 / 8151937428*
    4
    ಕೂಡ್ಲಿಗಿ : ಪಟ್ಟಣ ಸೇರಿದಂತೆ ತಾಲೂಕಿನಾಧ್ಯಂತ ತಾಯಿ ದಿನ ಆಚರಣೆ
*ಕೂಡ್ಲಿಗಿ : ಪಟ್ಟಣ ಸೇರಿದಂತೆ ತಾಲೂಕಿನಾಧ್ಯಂತ ತಾಯಿ ದಿನ ಆಚರಣೆ*- ವಿಜಯನಗರ ಜಿಲ್ಲೆ ಕೂಡ್ಲಿಗಿ  : ಮೇ 10 ರಂದು ತಾಯಿ ದಿನ ಪ್ರಯುಕ್ತ , ಪಟ್ಟಣ ಸೇರಿದಂತೆ ತಾಲೂಕಿನಾಧ್ಯಂತ ತಾಯಿ ದಿನಾಚರಣೆ ಆಚರಿಸಲಾಯಿತು. ಪಟ್ಟಣದಲ್ಲಿನ ಹಿರಿಯ ಸಾಹಿತಿಗಳು , ಹಿರಿಯ ಪತ್ರಕರ್ತರು , ನಿವೃತ್ತ ಉಪನ್ಯಾಸಕರಾದ ಸಿದ್ಧರಾಮ ಹಿರೇಮಠ ರವರು. ತಾಯಿಯನ್ನು ಸ್ಮರಿಸಿದರು ಹಾಗೂ ಅವರೊಂದಿಗಿನ ವಾತ್ಸಲ್ಯಯುತ ಅಮೂಲ್ಯ ಕ್ಷಣಗಳನ್ನು ನೆನೆದರು. ತಾಯಿಯವರ ಆದರ್ಶ ಗುಣಗಳನ್ನು ಕೊಂಡಾಡುತ್ತ , ಅವರಿಗೆ ಶ್ರದ್ಧಾಪೂರ್ವಕ ಭಾವುಕತೆಯಿಂದ ನುಡಿನಮನ ಸಲ್ಲಿಸಿ ವಂದಿಸಿದರು. ಅವರು ಮಾತನಾಡಿ , ತಾಯಿಗೆ ತಾಯಿನೇ ಸಾಟಿ ಅವರ ಹೊರತು ಯಾರೂ ಇಲ್ಲ ಬೇರೆನು ಸಮನಲ್ಲ ಎಂದರು. ಪ್ರತ್ಯಕ್ಷ ಆರಾಧ್ಯ ದೇವ ವೆಂದರೆ , ಹೆತ್ತ ತಾಯಿ ತಂದೆಯರು. ಅವರನ್ನು ಪ್ರತಿಯೊಬ್ಬರೂ ಗೌರವಿಸಬೇಕು ಪ್ರೀತಿಸಬೇಕು , ಅವರನ್ನು ಗೌರವಿಸುವುದರೊಂದಿಗೆ ನಮ್ಮ ಮಕ್ಕಳಂತೆ ಪೋಷಿಸಬೇಕು. ಅವರ ಮನದಾಳದ ಆಸೆ ಆಕಾಂಕ್ಷೆ ಒತ್ತಾಸೆಗಳನ್ನು , ಪ್ರೀತಿ ಪೂರ್ವಕವಾಗಿ ಈಡೇರಿಸಬೇಕಿದೆ ಎಂದರು.  ತಂದೆ ತಾಯಿಯರನ್ನು ಪ್ರೀತಿಸದವರು ಮನುಷ್ಯರಾಗಿರಲು ಸಾಧ್ಯವೇ ಇಲ್ಲ. ತಂದೆ ತಾಯಿಯರನ್ನು ಸಂತೋಷ ನೆಮ್ಮದಿಯಿಂದ ನೋಡಿಕೊಳ್ಳದವರು , ಕೋಟಿ ತೀರ್ಥಗಳನ್ನು  ದೇಗುಲಗಳನ್ನು ಸಂದರ್ಶಿಸಿದರೇನು ಫಲ.. ದಾನ ಧರ್ಮಾದಿ ಯಜ್ಞ ಯಾಗಾದಿಗಳನ್ನು ಮಾಡಿಸರೇನು ಫಲ ಎಂದು ಪ್ರೆಶ್ನಿಸಿದ್ದಾರೆ.  ಶಾಸಕರಾದ ಡಾ ॥ ಎನ್ ಟಿ ಶ್ರೀನಿವಾಸ್ ರವರು , ಹಾಗೂ ಅವರ ಸಹೋದರರಾದ ಎನ್ ಟಿ  ತಮ್ಮಣ್ಣ ನವರು.  ತಮ್ಮ ತಾಯಿಗೆ ಸಿಹಿ ತಿನಿಸಿ ಸಂಭ್ರಮಿಸಿದ್ದಾರೆ ,  ಹಾಗೂ ತಾಯಿಯ ಪಾದಕ್ಕೆ ಸಾಷ್ಟಾಂಗ ನಮಸ್ಕಾರಗಳನ್ನು ಅರ್ಪಿಸಿದ್ದಾರೆ. ಕಾರ್ಮಿಕ ಮುಖಂಡರಾದ ಗುನ್ನಳ್ಳಿ ರಾಘವೇಂದ್ರ ರವರು , ಮನೆಯಲ್ಲಿರುವ ತಮ್ಮ ಮಾತೆಯ ಭಾವಚಿತ್ರಕ್ಕೆ ಭಕ್ತಿಯಿಂದ ನಮಿಸಿ ಅವರಿಗೆ ನುಡಿನಮನ ಸಲ್ಲಿಸಿದರು. ಅಂತೆಯೇ ಪತ್ರಕರ್ತರು ಹಾಗೂ ವಂದೇ ಮಾತರಂ ಜಾಗೃತಿ ವೇದಿಕೆ ಮುಖಂಡರಾದ , ವಿ.ಜಿ.ವೃಷಭೇಂದ್ರರವರು ತಮ್ಮ ತಾಯಿಯ ಪಾದಕ್ಕೆರಗಿ ಸಾಷ್ಟಾಂಗ ನಮಸ್ಕಾರಗಳನ್ನು ಮಾಡಿ , ಅವರಿಗೆ ಉಡುಗೊರೆಯನ್ನಿತ್ತು ಸಿಹಿ ತಿಸಿದರು. ಈ ಸಂದರ್ಭದಲ್ಲಿ ಸಹೋದರಿ ಅಕ್ಕಮಹಾದೇವಿ , ಹಾಗೂ ಸಹೋದರಿಯ ಪುತ್ರ ಇದ್ದರು. ಮತ್ತು ಅವರೂ ಕೂಡ ಸಿಹಿ ಹಂಚಿ ತಾಯಿ ದಿನಾಚರಣೆ ಆಚರಿಸಿದರು. ಅದೇ ರೀತಿ ಪಟ್ಟಣ ಸೇರಿದಂತೆ , ತಾಲೂಕಿನ ವಿವಿದೆಡೆಗಳಲ್ಲಿ. ಗಣ್ಯರು ವಿವಿದ ಮುಖಂಡರು. ಹೋರಾಟಗಾರರು , ಅನೇಕ ಸಾರ್ವಜನಿಕರು ತಾಯಿಗೆ ಸಿಹಿ ಹಂಚಿ ಉಡುಗೊರೆ ನೀಡಿದ್ದಾರೆ ಹಲವರು ತಾಯಿ ಪಾದಪೂಜೆ ಮಾಡಿ ತಾಯಿಗೆ ನಮಿಸಿದ್ದಾರೆ. ಬಹುತೇಕರು ದೇವರಲ್ಲಿ ವಿಶೇಷ ಅರ್ಚನೆ ಪೂಜೆಗಳನ್ನು ಮಾಡಿಸುವ ಮೂಲಕ ಪ್ರಾರ್ಥಿಸಿ ಶುಭ ಕೋರಿದ್ದಾರೆ. ಬಹು ಸಂಭ್ರಮದಿಂದ ಸಡಗರದಿಂದ , ತಾಯಿ ದಿನಾಚರಣೆ ಆಚರಿಸಿದರು. ✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ - 9008937428 / 8151937428*
    user_ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ
    ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ
    ವರದಿಗಾರ ಕೂಡ್ಲಿಗಿ, ವಿಜಯನಗರ, ಕರ್ನಾಟಕ•
    3 hrs ago
  • ಗದಗ ಜಿಲ್ಲಾ ಮುಂಡರಗಿ ತಾಲೂಕಿನ ನಾಗರಹಳ್ಳಿ ಗ್ರಾಮದಲ್ಲಿ ರೈತರ ಜಮೀನುಗಳಿಗೆ ಭೇಟಿ ನೀಡಿದ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀ ಉದಯ್ ಕುಮಾರ್ ಎಲಿವಾಳ
    1
    ಗದಗ ಜಿಲ್ಲಾ ಮುಂಡರಗಿ ತಾಲೂಕಿನ ನಾಗರಹಳ್ಳಿ ಗ್ರಾಮದಲ್ಲಿ ರೈತರ ಜಮೀನುಗಳಿಗೆ ಭೇಟಿ ನೀಡಿದ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀ ಉದಯ್ ಕುಮಾರ್ ಎಲಿವಾಳ
    user_Ranganath Kandagal
    Ranganath Kandagal
    TV News Anchor ಮುಂಡರಗಿ, ಗದಗ, ಕರ್ನಾಟಕ•
    5 hrs ago
  • ಕುಷ್ಟಗಿ ತಹಸೀಲ್ ಕಚೇರಿಯಲ್ಲಿ ತಾಲೂಕಾಡಳಿತದಿಂದ ಹೇಮರೆಡ್ಡಿ ಮಲ್ಲಮ್ಮ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ಈ ವೇಳೆ ಮಾತನಾಡಿದ ಮುಖಂಡರು, 14ನೇ ಶತಮಾನದ ಈ ಭಕ್ತೆಯು ತಮ್ಮ ತ್ಯಾಗ, ಭಕ್ತಿ ಹಾಗೂ ಧಾರ್ಮಿಕ ನಿಷ್ಠೆಯಿಂದ ಸಮಾಜಕ್ಕೆ ಆದರ್ಶಪ್ರಾಯರಾಗಿದ್ದಾರೆ ಎಂದು ಸ್ಮರಿಸಿದರು. ಅವರು ಮಹಿಳೆಯರಲ್ಲಿ ಧೈರ್ಯ, ಸಹನೆ, ನಿಸ್ವಾರ್ಥ ಸೇವೆ ಹಾಗೂ ಭಕ್ತಿಯ ಸಂದೇಶವನ್ನು ಸಾರಿದರು.
    1
    ಕುಷ್ಟಗಿ ತಹಸೀಲ್ ಕಚೇರಿಯಲ್ಲಿ ತಾಲೂಕಾಡಳಿತದಿಂದ ಹೇಮರೆಡ್ಡಿ ಮಲ್ಲಮ್ಮ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ಈ ವೇಳೆ ಮಾತನಾಡಿದ ಮುಖಂಡರು, 14ನೇ ಶತಮಾನದ ಈ ಭಕ್ತೆಯು ತಮ್ಮ ತ್ಯಾಗ, ಭಕ್ತಿ ಹಾಗೂ ಧಾರ್ಮಿಕ ನಿಷ್ಠೆಯಿಂದ ಸಮಾಜಕ್ಕೆ ಆದರ್ಶಪ್ರಾಯರಾಗಿದ್ದಾರೆ ಎಂದು ಸ್ಮರಿಸಿದರು. ಅವರು ಮಹಿಳೆಯರಲ್ಲಿ ಧೈರ್ಯ, ಸಹನೆ, ನಿಸ್ವಾರ್ಥ ಸೇವೆ ಹಾಗೂ ಭಕ್ತಿಯ ಸಂದೇಶವನ್ನು ಸಾರಿದರು.
    user_Bhimasenrao Kulkarni Kushtagi
    Bhimasenrao Kulkarni Kushtagi
    ಕುಷ್ಟಗಿ, ಕೊಪ್ಪಳ, ಕರ್ನಾಟಕ•
    13 hrs ago
  • ಗದಗದಲ್ಲಿ ಪೊಲೀಸರು ₹14 ಲಕ್ಷ ಮೌಲ್ಯದ ಅನ್ನಭಾಗ್ಯ ಅಕ್ಕಿ ಮತ್ತು ₹29 ಲಕ್ಷ ಮೌಲ್ಯದ ಲಾರಿಯನ್ನು ಜಪ್ತಿ ಮಾಡಿದ್ದಾರೆ. ಕರ್ನಾಟಕದ ಹರಪನಹಳ್ಳಿಯಿಂದ ಹೊರಟಿದ್ದ ಈ ಅಕ್ಕಿ ಅಕ್ರಮವಾಗಿ ಗುಜರಾತ್‌ಗೆ ಸಾಗಾಟವಾಗುತ್ತಿತ್ತು. ಲಾರಿ ಚಾಲಕನನ್ನು ಬಂಧಿಸಲಾಗಿದ್ದು, ಬೆಟಗೇರಿ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
    1
    ಗದಗದಲ್ಲಿ ಪೊಲೀಸರು ₹14 ಲಕ್ಷ ಮೌಲ್ಯದ ಅನ್ನಭಾಗ್ಯ ಅಕ್ಕಿ ಮತ್ತು ₹29 ಲಕ್ಷ ಮೌಲ್ಯದ ಲಾರಿಯನ್ನು ಜಪ್ತಿ ಮಾಡಿದ್ದಾರೆ. ಕರ್ನಾಟಕದ ಹರಪನಹಳ್ಳಿಯಿಂದ ಹೊರಟಿದ್ದ ಈ ಅಕ್ಕಿ ಅಕ್ರಮವಾಗಿ ಗುಜರಾತ್‌ಗೆ ಸಾಗಾಟವಾಗುತ್ತಿತ್ತು. ಲಾರಿ ಚಾಲಕನನ್ನು ಬಂಧಿಸಲಾಗಿದ್ದು, ಬೆಟಗೇರಿ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
    user_Udachappa tigari
    Udachappa tigari
    Photographer ಮುಂಡರಗಿ, ಗದಗ, ಕರ್ನಾಟಕ•
    19 hrs ago
  • ನಾಗೇಶ್ ಎಸ್ ಅವರು ಶ್ರೀ ಬಂಜಾರ ಲಂಬಾಣಿ ಸಮುದಾಯ ದಿಗ್ವಿಜಯ ಭಾರತ ಪಕ್ಷದ ರಾಜ್ಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಲಂಬಾಣಿ ಸಮುದಾಯಗಳ ಹಿತಾಸಕ್ತಿ ಮತ್ತು ಅಭಿವೃದ್ಧಿಗಾಗಿ ಪಕ್ಷದ ಮೂಲಕ ಶ್ರಮಿಸಲು ಅವರು ಮುಂದಾಗಿದ್ದಾರೆ.
    2
    ನಾಗೇಶ್ ಎಸ್ ಅವರು ಶ್ರೀ ಬಂಜಾರ ಲಂಬಾಣಿ ಸಮುದಾಯ ದಿಗ್ವಿಜಯ ಭಾರತ ಪಕ್ಷದ ರಾಜ್ಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಲಂಬಾಣಿ ಸಮುದಾಯಗಳ ಹಿತಾಸಕ್ತಿ ಮತ್ತು ಅಭಿವೃದ್ಧಿಗಾಗಿ ಪಕ್ಷದ ಮೂಲಕ ಶ್ರಮಿಸಲು ಅವರು ಮುಂದಾಗಿದ್ದಾರೆ.
    user_ನಾಗೇಶ್ ಎಸ್
    ನಾಗೇಶ್ ಎಸ್
    ಹಾಸನ, ಹಾಸನ, ಕರ್ನಾಟಕ•
    14 hrs ago
  • ತಮಿಳುನಾಡಿನಲ್ಲಿ ನೂತನ ಮುಖ್ಯಮಂತ್ರಿಯಾಗಿ ವಿಜಯ್‌ಗೆ ರಾಹುಲ್ ಗಾಂಧಿ ತಮ್ಮ ಬೆಂಬಲ ನೀಡಿದ್ದಾರೆ. ಈ ರಾಜಕೀಯ ಬೆಳವಣಿಗೆ ರಾಜ್ಯದಾದ್ಯಂತ ತೀವ್ರ ಕುತೂಹಲ ಮೂಡಿಸಿದ್ದು, ರಾಷ್ಟ್ರಮಟ್ಟದಲ್ಲೂ ಚರ್ಚೆಗೆ ಗ್ರಾಸವಾಗಿದೆ.
    1
    ತಮಿಳುನಾಡಿನಲ್ಲಿ ನೂತನ ಮುಖ್ಯಮಂತ್ರಿಯಾಗಿ ವಿಜಯ್‌ಗೆ ರಾಹುಲ್ ಗಾಂಧಿ ತಮ್ಮ ಬೆಂಬಲ ನೀಡಿದ್ದಾರೆ. ಈ ರಾಜಕೀಯ ಬೆಳವಣಿಗೆ ರಾಜ್ಯದಾದ್ಯಂತ ತೀವ್ರ ಕುತೂಹಲ ಮೂಡಿಸಿದ್ದು, ರಾಷ್ಟ್ರಮಟ್ಟದಲ್ಲೂ ಚರ್ಚೆಗೆ ಗ್ರಾಸವಾಗಿದೆ.
    user_Onlinetv24x7
    Onlinetv24x7
    ಹಾಸನ, ಹಾಸನ, ಕರ್ನಾಟಕ•
    19 hrs ago
  • ಉತ್ತರ ಪ್ರದೇಶದ ಲಕ್ನೋದಲ್ಲಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಶ್ಯಾಮ್ ಚೇತನ್ ತಿವಾರಿ ಅವರಿಗೆ ಗುಂಡು ಹಾರಿಸಿ ಗಾಯಗೊಳಿಸಲಾಗಿದೆ. ಇದೇ ಸಂಘಟನೆಯ ಸಹ ಸದಸ್ಯ ವೈಭವ್‌ ಬಾ ಎಂಬಾತ ಗುಂಡು ಹಾರಿಸಿದ್ದು, ಆತನನ್ನು ಬಂಧಿಸಲಾಗಿದೆ.
    1
    ಉತ್ತರ ಪ್ರದೇಶದ ಲಕ್ನೋದಲ್ಲಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಶ್ಯಾಮ್ ಚೇತನ್ ತಿವಾರಿ ಅವರಿಗೆ ಗುಂಡು ಹಾರಿಸಿ ಗಾಯಗೊಳಿಸಲಾಗಿದೆ. ಇದೇ ಸಂಘಟನೆಯ ಸಹ ಸದಸ್ಯ ವೈಭವ್‌ ಬಾ ಎಂಬಾತ ಗುಂಡು ಹಾರಿಸಿದ್ದು, ಆತನನ್ನು ಬಂಧಿಸಲಾಗಿದೆ.
    user_YSRmedia vijayanagaraupsates
    YSRmedia vijayanagaraupsates
    Mobile Phone Accessory Shop ಹೊಸಪೇಟೆ, ವಿಜಯನಗರ, ಕರ್ನಾಟಕ•
    19 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.