Shuru
Apke Nagar Ki App…
ಹಿಂದೂ ಸಮಾಜ ಜಾಗೃತಿಗಾಗಿ ಬೈಕ್ ರ್ಯಾಲಿ ಚಿತ್ರದುರ್ಗ ನಗರದಲ್ಲಿಂದು ಹಿಂದೂ ಸಮಾಜದ ಜಾಗೃತಿಗಾಗಿ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು. ಶುಕ್ರವಾರ ಸಂಜೆ 5.30 ಕ್ಕೆ ಹಿಂದೂ ಸಂಗಮ ಆಯೋಜನಾ ಸಮಿತಿಯ ವತಿಯಿಂದ ದವಳಗಿರಿ ಬಡಾವಣೆಯ ಕೋಟೆ ಪೊಲೀಸ್ ಠಾಣೆ ಬಳಿ ಬೈಕ್ ರ್ಯಾಲಿಗೆ ಹಸಿರು ನಿಶಾನೆ ತೋರಿಸುವ ಮೂಲಕ ಬೈಕ್ ರ್ಯಾಲಿಗೆ ಚಾಲನೆ ನೀಡಿದರು
Vinay P palekar
ಹಿಂದೂ ಸಮಾಜ ಜಾಗೃತಿಗಾಗಿ ಬೈಕ್ ರ್ಯಾಲಿ ಚಿತ್ರದುರ್ಗ ನಗರದಲ್ಲಿಂದು ಹಿಂದೂ ಸಮಾಜದ ಜಾಗೃತಿಗಾಗಿ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು. ಶುಕ್ರವಾರ ಸಂಜೆ 5.30 ಕ್ಕೆ ಹಿಂದೂ ಸಂಗಮ ಆಯೋಜನಾ ಸಮಿತಿಯ ವತಿಯಿಂದ ದವಳಗಿರಿ ಬಡಾವಣೆಯ ಕೋಟೆ ಪೊಲೀಸ್ ಠಾಣೆ ಬಳಿ ಬೈಕ್ ರ್ಯಾಲಿಗೆ ಹಸಿರು ನಿಶಾನೆ ತೋರಿಸುವ ಮೂಲಕ ಬೈಕ್ ರ್ಯಾಲಿಗೆ ಚಾಲನೆ ನೀಡಿದರು
More news from ಕರ್ನಾಟಕ and nearby areas
- ಚಳ್ಳಕೆರೆ ಶ್ರೀಕ್ಷೇತ್ರ ನಾಯಕನಹಟ್ಟಿ ಪಟ್ಟಣದಲ್ಲಿ 5 ಹಾಗೂ 6 ರಂದು ನಡೆಯಲಿರುವ ಶ್ರೀ ಗುರುತಿಪ್ಪೆರುದ್ರಸ್ವಾಮಿ ಜಾತ್ರೆಯಲ್ಲಿ ಯಾವುದೆ ಅಹಿತಕರ ಘಟನೆಗಳು ನಡೆಯದಂತೆ ತುಂಭ ಎಚ್ಚರಿಕೆ ವಹಿಸಬೇಕು ಎಂದು ಡಿವೈಎಸ್ಪಿ ಎಂ.ಜೆ.ಸತ್ಯ ನಾರಾಯಣರಾವ್ ತಿಳಿಸಿದ್ದಾರೆ . ಚಳ್ಳಕೆರೆ ಉಪವಿಭಾಗ ವ್ಯಾಪ್ತಿಯ ಮೊಳಕಾಲ್ಮೂರು ,ರಾಂಪುರ,ನಾಯಕನಹಟ್ಟಿ, ತಳಕು,ಪರಶುರಾಮಪು, ಪೋಲೀಸ್ ಠಾಣೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.. ಚಳ್ಳಕೆರೆ ನಗರದ ಬಿಸಿನೀರು ಮುದ್ದಪ್ಪ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ನಡೆದ ಪೆರೆಡ್ ನಂತರ ಅವರು ಮಾತನಾಡಿದರು.. ಈಗಾಗಲೇ ಜಾತ್ರೆಗೆ ಸಕಲ ಸಿದ್ಧತೆಗಳನ್ನ ಮಾಡಿಕೊಂಡಿದ್ದು ವಾಹನ ಸಂಚಾರ ಹೆಚ್ಚಾಗುವುದರಿಂದ ವಾಹನ ನಿಲುಗಡೆ ಸ್ಥಳಗಳಲ್ಲಿ ವಾಹನಗಳನ್ನು ನಿಲ್ಲುವಂತೆ ನೋಡಿಕೊಳ್ಳಬೇಕು. ರಥೋತ್ಸವ ನಡೆಯುತ್ತಿರುವ ವೇಳೆ ವಾಹನಗಳು ಒಳಗೆ ಸಂಚಾರ ಆಗದಂತೆ ನೋಡಿಕೊಳ್ಳಬೇಕು. ಜಾತ್ರೆಯಲ್ಲಿ ಮೊಬೈಲ್ ಒಡವೆ ಇತರೆ ವಸ್ತುಗಳ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು, ತೇರು ಹೋಗಿ ಬರುವ ಸ್ಥಳದಲ್ಲಿ ನುಕನುಗ್ಗಲು ಆಗದಂತೆ ತುಂಬಾ ಜಾಗೃತಿ ವಹಿಸಬೇಕು ಎಂದು ಸೂಚನೆ ನೀಡಿದರು. ಈ ಸಮಯದಲ್ಲಿ ತಳಕು ವೃತ್ತ ನಿರೀಕ್ಷಕರಾದ ಹನುಮಂತಪ್ಪ ಶಿರೆಹಳ್ಳಿ, ಮೊಳಕಾಲ್ಮೂರು ಪಿಎಸ್ಐ ಮಹೇಶ್ ಲಕ್ಷ್ಮಣ್ ಹೊಸಪೇಟೆ.ರಾಂಪುರ ಪಿಎಸ್ ಐ ಬಾಹುಬಲಿ ನಾಯಕನಹಟ್ಟಿ ಪಿಎಸ್ಐ ಪಾಂಡುರಂಗಪ್ಪ ಚಳ್ಳಕೆರೆ ಪಿಎಸ್ ಐಗಳಾದ ಶಿವರಾಜ್. ವಿರೇಶ ಸೇರಿದಂತೆ ಎಎಸ್ ಐಗಳು ಹಾಗೂ ಸಿಬ್ಬಂದಿಗಳು ಇದ್ದರು..1
- ಚಳ್ಳಕೆರೆ ನಗರದ ಹೊರಹೊಲಯದ ಹಿರಿಯೂರು ರಸ್ತೆಯ ನಿಸರ್ಗ ಡಾಬಾದ ಬೆಲಿಗ ಆಕಸ್ಮಿಕ ಬೆಂಕಿ ಬಿದ್ದು ನಿಸರ್ಗ ಡಬಾದ 8 ತೆಂಗಿನ ಗರಿಗಳಿಂದ ನಿರ್ಮಾಣ ಮಾಡಲಾಗಿದ್ದ ಶೆಡ್ ಗಳು ಸುಟ್ಟಿದ್ದು ಶೆಡ್ ನಲ್ಲಿ ಇದ್ದಂತಹ ಕುರ್ಚಿ ಹಾಗೂ ಚೇರುಗಳು ಸುಟ್ಟು ಸುಮಾರು ಒಂದುವರೆ ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ..1
- ಶ್ರೀನಾಯಕನಹಟ್ಟಿ ಜಾತ್ರಾಮಹೋತ್ಸವ ಅಂಗವಾಗಿ ದೇವಸ್ಥಾನ ಹಾಗೂ ಪ್ರಮುಖ ಬೀದಿಗಳಲ್ಲಿ ವಿದ್ಯುತ್ ದೀಪಗಳ ಅಲಾಂಕಾರದಿಂದ ಜಗಮಗಿಸುತ್ತಿದ್ದು ಜಾತ್ರೆಗೆ ಬರುವ ಭಕ್ತರನ್ನು ಕೈ ಬೀಸಿ ಕೆರೆಯುವಂತಿದೆ6
- ದಾವಣಗೆರೆ : ಡಿಕೆಶಿ ಸಿಎಂ ಆಗುವ ವಿಚಾರಕ್ಕೆ ಹಿನ್ನಡೆಯಾಗುತ್ತಿಲ್ಲ ಎಲ್ಲಾ ಒಳ್ಳೇಯದಾಗುತ್ತೆ ಎಂದು ಶಾಸಕ ಶಿವಗಂಗಾ ಬಸವರಾಜ್ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹೈಕಮಾಂಡ್ ತೀರ್ಮಾನ ಮಾಡಿದರೆ ಇಂದೇ ಡಿಕೆಶಿ ಸಿಎಂ ಆಗಯತ್ತಾರೆ. ಸೂರ್ಯ ಪಥ ಬದಲಾವಣೆಯಾದಾಗ ನಮ್ಮ ಮಾತುಗಳು ಕೂಡ ಬದಲಾವಣೆಯಾಗುತ್ತವೆ. ಹೈಕಮಾಂಡ್ ತಲೆಯಲ್ಲಿ ಏನ್ ಇದ್ಯೋ ಗೊತ್ತಿಲ್ಲ ಅವರನ್ನೇ ಕೇಳಬೇಕು. ಸಿಎಂ ಬದಲಾವಣೆ ವಿಚಾರವಾಗಿ ನಾವು ಎಲ್ಲರಿಗೂ ಉತ್ತರ ಕೊಡಬೇಕು. ಎಲ್ಲಾ ಕಡೆ ಹೋದಾಗ ಜನರು ಕೂಡ ಕೇಳುತ್ತಾರೆ. ಒಪ್ಪಂದ ಆಗಿದ್ಯೋ ಇಲ್ವೋ ಅನ್ನೋದು ಹೈಕಮಾಂಡ್ ಸ್ಪಷ್ಟಪಡಿಸಲಿ. ಈ ಎಲ್ಲಾ ಗೊಂದಲಕ್ಕೆ ತೆರೆ ಎಳೆಯುವ ಕೆಲಸ ಹೈಕಮಾಂಡ್ ಮಾಡಬೇಕಿದೆ. ಸಿಎಂ ಸ್ಥಾನ ಸಿದ್ದರಾಮಯ್ಯನವರು ಅಂತ ಅಲ್ಲ ಪಕ್ಷದಲ್ಲಿ ಯಾರಿಗೇ ಕೊಟ್ಟರು ನಾವು ಬದ್ದ ಎಂದರು. ಮನಃಪೂರ್ವಕವಾಗಿ ಹೈಕಮಾಂಡ್ ತೀರ್ಮಾನಕ್ಕೆ ನಾವು ಬದ್ದ.ಶಾಸಕ ಬಾಲಕೃಷ್ಣ ರವರು ಹೇಳಿದ್ದು ಸರಿ ಇದೆ.ಕೂಡಲೇ ನಿರ್ಧಾರ ತೆಗೆದುಕೊಳ್ಳದಿದ್ದರೆ ಅಧಿಕಾರಕ್ಕೆ ಬರೋದು ಕಷ್ಟ ಆಗುತ್ತದೆ ಎನ್ನುವ ಹೇಳಿಕೆಗೆ ಸತ್ಯ ಇದೆ 2028 ಕ್ಕೆ ಕಾಂಗ್ರೇಸ್ ಮತ್ತೆ ಅಧಿಕಾರಕ್ಕೆ ಬರಲು ಉತ್ತಮವಾದ ವಾತಾವರಣ ಇದೆ. ಗ್ಯಾರೆಂಟಿ ಯೋಜನೆಗಳಿಂದ ಮತ್ತೆ ಈಗ ಘೋಷಣೆ ಮಾಡಿದ ಗ್ಯಾರೆಂಟಿಗಳು ಜಾರಿಗೆ ಬಂದರೆ ವಿರೋಧ ಪಕ್ಷವೇ ಇರೋದಿಲ್ಲ. ಅ ರೀತಿ ಜನರ ಬೆಂಬಲ ಸಿಗುತ್ತದೆ ಮತ್ತೆ ಅಧಿಕಾರಕ್ಕೆ ಬರುತ್ತೇವೆ.ಆದರೆ ನಮ್ಮಲ್ಲಿರುವ ಕುರ್ಚಿ ಕಿತ್ತಾಟದ ಎನ್ನುವ ಅರೋಪವಿದೆ.*ಕಳೆದ ಬಿಜೆಪಿ ಸರ್ಕಾರದಲ್ಲಿ ಖುರ್ಚಿ ಕಿತ್ತಾಟದಿಂದ ಜನರು ಕಾಂಗ್ರೆಸ್ ಕಡೆ ಒಲವು ತೋರಿಸಿದ್ದರು.ಈಗ ನಾವು ಕೂಡ ಅದೇ ದಾರಿಯಲ್ಲಿ ಹೋದರೆ ಅದರ ಎಫೆಕ್ಟ್ ನಮಗೂ ಕೂಡ ತಟ್ಟಬಹುದು ಎನ್ನುವ ರೀತಿ ಬಾಲಕೃಷ್ಣ ಹೇಳಿರಬಹುದು ಎಂದು ವಿವರಿಸಿದರು. ಡಿಕೆಶಿ ಬಣದಿಂದ ಡಿನ್ನರ್ ಪಾರ್ಟಿ ವಿಚಾರ ಮಾತನಾಡಿ, ಇದರಲ್ಲಿ ಯಾವುದೇ ರಾಜಕೀಯ ಮಾಡೋದು ಬೇಡ.ಬಾಲಕೃಷ್ಣ ರವರ ಹುಟ್ಟು ಹಬ್ಬದ ಹಿನ್ನೆಲೆ ಊಟಕ್ಕೆ ಸೇರಿದ್ದೇವು.ಊಟಕ್ಕೆ ಕರೆದಿದ್ದರು ಊಟಕ್ಕೆ ಹೋಗಿದ್ದೇವು. 40 ಜನ ಶಾಸಕರು ಕೂಡ ಒಂದೇ ಕಡೆ ಸೇರಿದ್ದವು. ಈ ಡಿನ್ನರ್ ಪಾರ್ಟಿ ಮುಗಿದ ಮೇಲೆ ದೆಹಲಿಗೆ ಹೋಗುತ್ತಾರೆ ಎನ್ನುವ ಸುದ್ದಿ ಬಂದಿದೆ.ನಾವು ಯಾವುದೇ ಕಾರಣಕ್ಕೂ ದೆಹಲಿಗೆ ಹೋಗೋದಿಲ್ಲ. ಏನಾದರೂ ವೈಯಕ್ತಿಕ ಕೆಲಸಗಳು ಇದ್ದರೆ ದೆಹಲಿಗೆ ಹೋಗುತ್ತಾರೆ ಎಂದು ಶಾಸಕ ಶಿವಗಂಗಾ ಹೇಳಿದರು. ಸಚಿವ ಸ್ಥಾನ ನೀಡಿ ಎಂದು ಹೊಸ ಶಾಸಕರು ಪತ್ರ ಬರೆದಿದ್ದೇವು.ಅದರಲ್ಲಿ ನಾನು ಕೂಡ ಸಹಿ ಹಾಕಿದ್ದೇನೆ ಮಂಡ್ಯದಲ್ಲಿ ರವಿ ಗಣಿಗ ಇದಾರೆ ಅವರು ಅಕ್ಟಿವ್ ಪರ್ಸನ್ ಅವರಿಗಾದ್ರು ಕೊಡ್ಲಿ. ಮೊದಲ ಬಾರಿ ಗೆದ್ದ ಶಾಸಕರು ಇದ್ದೇವೆ ನಮಗೆ ಕೊಟ್ಟರೆ ಒಳ್ಳೇದು. ಹಳೇ ಬೇರು ಹೊಸ ಚಿಗುರು ಎನ್ನುವಂತೆ ಕೆಲಸ ಮಾಡುತ್ತೇವೆ. ಸಿದ್ದರಾಮಯ್ಯನವರು ಈ ವಿಚಾರದಲ್ಲಿ ಅವರ ಅಭಿಪ್ರಾಯ ಹೇಳಿದ್ದಾರೆ ಕೊಟ್ಟರೆ ಒಳ್ಳೇಯದು ಇಲ್ಲವಾದ್ರೆ ಕೆಲಸ ಮಾಡಿಕೊಂಡು ಹೋಗುತ್ತೇವೆ ಎಂದು ಶಿವಗಂಗಾ ಬಸವರಾಜ್ ಹೇಳಿದರು.1
- ಮಾರ್ಚ್ 31.ಯಶಸ್ವಿನಿ ಯೋಜನೆಯ ನೋಂದಣಿ ಕಡೆ ದಿನ.1
- Post by ALTAF,❤️🙏1
- ಶಿವಮೊಗ್ಗ: ಭದ್ರಾವತಿ ನಗರದ ನ್ಯೂಟೌನ್ ಮೆಸ್ ರಸ್ತೆಯ ಸುರಕ್ಷಾ ಜೀವನ ಸೇವಾ ಟ್ರಸ್ಟ್ ವತಿಯಿಂದ ಸುರಕ್ಷಾ ಜೀವನ ವೃದ್ಧಾಶ್ರಮ ಮತ್ತು ಅನಾಥಾಶ್ರಮ ದ 5 ನೇ ವಾರ್ಷಿಕೋತ್ಸವ ಮಾ.4 ರ ನಾಳೆ ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ ಎಂದು ಟ್ರಸ್ಟ್ ಅಧ್ಯಕ್ಷೆ ಡಾ:ಜ್ಯೋತಿ ಸೋಮಶೇಖರ್ ತಿಳಿಸಿದರು. ಅವರು ಮಂಗಳವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಕಳೆದ 5 ವರ್ಷಗಳಿಂದ ಟ್ರಸ್ಟ್ ವತಿಯಿಂದ ವೃದ್ಧಾಶ್ರಮ ಮತ್ತು ಅನಾಥಾಶ್ರಮ ಯಶಸ್ವಿಯಾಗಿ ನಡೆಸಿ ಕೊಂಡು ಬರಲಾಗುತ್ತಿದೆ ಎಂದರು. ಆಶ್ರಮದಲ್ಲಿ ವಯೋವೃದ್ಧರು ಹಾಗು ಅನಾಥರ ಬಗ್ಗೆ ಆಶ್ರಮದಲ್ಲಿ ಹೆಚ್ಚಿನ ಕಾಳಜಿ ವಹಿಸಲಾಗುತ್ತಿದೆ. ಟ್ರಸ್ಟ್ ಪದಾಧಿಕಾರಿಗಳು ಹಾಗು ಸೇವಾ ಮನೋಭಾವ ಹೊಂದಿ ರುವ ಕಾರ್ಯಕರ್ತರು ಯಾವುದೇ ಫಲಾಫೇಕ್ಷೆ ಇಲ್ಲದೆ ಕುಟುಂಬ ಸದಸ್ಯರಂತೆ ಒಗ್ಗಟ್ಟಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಟ್ರಸ್ಟ್ ಅಗತ್ಯ ವಿರುವ ಸೌಕರ್ಯಗಳನ್ನು ಹೊಂದಿದೆ. ಜನಪ್ರತಿನಿಧಿಗಳು, ದಾನಿಗಳು ಸೇರಿದಂತೆ ಸಮಾಜದ ಪ್ರತಿ ಯೊಬ್ಬರು ಹೆಚ್ಚಿನ ಸಹಕಾರ ನೀಡುವ ಮೂಲಕ ವೃದ್ದರು, ಅನಾಥರ ನೆರವಿಗೆ ಮುಂದಾಗ ಬೇಕೆಂದು ಮನವಿ ಮಾಡಿದರು. ಶಾಸಕ ಬಿ.ಕೆ ಸಂಗಮೇಶ್ವರ್ ವಾರ್ಷಿಕೋತ್ಸವ ಸಮಾರಂಭ ವನ್ನು ಉದ್ಘಾಟಿಸುವರು. ಗಣ್ಯರು ಸಮಾರಂಭದಲ್ಲಿ ಪಾಲ್ಗೊಳ್ಳಲಿ ದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು. ಟ್ರಸ್ಟ್ ಖಜಾಂಚಿ ಸೋಮಶೇಖರ್, ಪ್ರಮುಖರಾದ ಶಾರದ ಕುಮಾರಿ, ಶಕುಂತಲಾ ಪ್ರದೀಪ್, ಜಾಹ್ನವಿ ರೆಡ್ಡಿ ಪತ್ರಿಕಾಗೋಷ್ಠಿಯಲ್ಲಿದ್ದರು.1
- ಮಾನ್ಯ ಸಚಿವರೆ ಹಾಗೂ ಜಿಲ್ಲಾಧಿಕಾರಿಗಳೇ ಇತ್ತ ಒಮ್ಮೆ ತಿರುಗಿ ನೋಡಿ.. ನಮ್ಮ ಊರಿಗೆ ಕುಡಿಯುವ ನೀರಿನ ಸಮಸ್ಯೆ ಉದ್ಭವವಾಗಿದೆ ಎಂದು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ದಿಂಡವರ ಗ್ರಾಮದ ಮಹಿಳೆಯರು ಗ್ರಾಮಸ್ಥರು ತಮ್ಮ ನೋವನ್ನು ತೋಡಿಕೊಂಡಿದ್ದಾರೆ..1