ದೇಶದ ಮೂಲೆಮೂಲೆಗಳಲ್ಲಿ ಜಾತಿ-ಧರ್ಮದ ಗೋಡೆಗಳು ಸದ್ದು ಮಾಡುತ್ತಿದ್ದರೂ, ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಮಕ್ತುಂಪುರ ಗ್ರಾಮದಲ್ಲಿ ಈ ಎಲ್ಲ ಭೇದಗಳು ಧೂಳೀಪಟವಾಗಿವೆ. ಇಲ್ಲಿ ಮೊಹರಂ ಹಬ್ಬ ಬಂದಾಗ ಧರ್ಮದ ಬೇಲಿಗಳು ಕರಗಿ, ಕೇವಲ ಭಕ್ತಿ ಮತ್ತು ಸಹಬಾಳ್ವೆಯ ಸಾಮರಸ್ಯ ಮಾತ್ರ ಎದ್ದು ಕಾಣುತ್ತದೆ. ಮುಂಡರಗಿ ಪಟ್ಟಣದ ರಸ್ತೆಗಳಲ್ಲಿ ಕಂಡುಬಂದ ಅಪರೂಪದ ದೃಶ್ಯವು ಈ ಭಾವೈಕ್ಯತೆಗೆ ಸಾಕ್ಷಿಯಾಗಿದೆ. ಇದು ಸಮಾಜದಲ್ಲಿ ಶಾಂತಿ, ಸಹಬಾಳ್ವೆ ಮತ್ತು ಮುನಿಸುಗಳನ್ನು ಮರೆತು ಹೇಗೆ ಬದುಕಬೇಕು ಎಂಬುದನ್ನು ಸಾರುವ ಮೌನ ಕ್ರಾಂತಿಯಾಗಿ, ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದೆ. ಮೊಹರಂ ಹಬ್ಬದ ಪವಿತ್ರ ಹಾಗೂ ರಹಸ್ಯಮಯ 'ಕತ್ತಲರಾತ್ರಿ'ಯಂದು ಮಕ್ತುಂಪುರ ಗ್ರಾಮದಲ್ಲಿ ಅಪೂರ್ವ ಸಂಚಲನ ಮನೆ ಮಾಡುತ್ತದೆ. ಗ್ರಾಮದ ವಾಲ್ಮೀಕಿ ಸಮಾಜದವರು, ಉಪ್ಪಾರ ಸಮಾಜದ ಕಲ್ಲಪ್ಪನವರ ಮತ್ತು ಅಯ್ಯಪ್ಪನವರ ಮನೆತನದವರು ಹಾಗೂ ಮಕಾಂದಾರ ಕುಟುಂಬಸ್ಥರು ಸೇರಿ ಇಡೀ ಊರಿನ ವಿವಿಧ ಧರ್ಮ ಮತ್ತು ಜಾತಿಯ ಜನರೆಲ್ಲರೂ ಒಟ್ಟಾಗಿ ಸೇರುತ್ತಾರೆ. ಯಾವುದೇ ಭೇದವಿಲ್ಲದೆ ಕೇವಲ ಭಕ್ತಿಯಿಂದ, ಕಲ್ಲು-ಮುಳ್ಳಿನ ಹಾದಿಯನ್ನೂ ಲೆಕ್ಕಿಸದೆ, ಒಗ್ಗಟ್ಟಿನ ಮಂತ್ರ ಜಪಿಸುತ್ತಾ ಮಕ್ತುಂಪುರದಿಂದ ಮುಂಡರಗಿ ಪಟ್ಟಣಕ್ಕೆ ಬರಿಗಾಲಿನಲ್ಲಿ ಪಾದಯಾತ್ರೆ ಕೈಗೊಳ್ಳುತ್ತಾರೆ. ಮುಂಡರಗಿ ಪಟ್ಟಣದ ಮಾರುಕಟ್ಟೆಗೆ ಬರಿಗಾಲಿನಲ್ಲಿ ನಡೆದು ಬಂದ ಈ ಸೌಹಾರ್ದತೆಯ ದಂಡು, ಮೊದಲು ಒಂದು ಹೊಸ ಮಣ್ಣಿನ ಮಡಿಕೆಯನ್ನು ಖರೀದಿಸುತ್ತದೆ. ಈ ಮಡಿಕೆಯು ಕೇವಲ ಮಣ್ಣಿನದ್ದಲ್ಲ, ಅದು ಗ್ರಾಮದ ಒಗ್ಗಟ್ಟಿನ ಪ್ರತೀಕವಾಗಿದೆ. ಆ ಹೊಸ ಮಡಿಕೆಯನ್ನು ಅತ್ಯಂತ ಭಕ್ತಿ-ಗೌರವಗಳಿಂದ ಹಿಡಿದುಕೊಂಡು, ಮತ್ತೆ ಪಾದಯಾತ್ರೆಯ ಮೂಲಕವೇ ಗ್ರಾಮಕ್ಕೆ ಕೊಂಡೊಯ್ಯಲಾಗುತ್ತದೆ. ನಂತರ ಈ ಹೊಸ ಮಡಿಕೆಯಲ್ಲಿ ಜೋಳದ ಕಿಚಡಿ ಹಾಗೂ ತಂಪಾದ ಶರಬತ್ತನ್ನು ಸಿದ್ಧಪಡಿಸಲಾಗುತ್ತದೆ. ರಾತ್ರಿಯಾಗುತ್ತಿದ್ದಂತೆ ಗ್ರಾಮಸ್ಥರೆಲ್ಲರೂ ಒಟ್ಟಾಗಿ ಸೇರಿ 'ಅಲೈದೇವರಿಗೆ' ಭಕ್ತಿಯಿಂದ ದೀಡ ನಮಾಸ್ಕಾರ ಹಾಕುತ್ತಾರೆ. ಮಕನಾ ಹೂವು, ಸಕ್ಕರೆ, ಹಾಲು ಮುಂತಾದ ನೈವೇದ್ಯಗಳನ್ನು ದೇವರಿಗೆ ಅರ್ಪಿಸಿ, ಜಗತ್ತಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸುವುದು ತಲೆಮಾರುಗಳಿಂದ ನಡೆದುಬಂದ ನಂಬಿಕೆಯಾಗಿದೆ. ಈ ಇಡೀ ಆಚರಣೆಯ ಹಿಂದೆ ಪ್ರಕೃತಿಯ ನಿಯಮವನ್ನೇ ಮೀರಿಸುವ ಒಂದು ರೋಚಕ ಪವಾಡವಿದೆ. ಹೊಸ ಮಡಿಕೆಯಲ್ಲಿ ಜೋಳದ ಕಿಚಡಿಯನ್ನು ಬೇಯಿಸಲು ಒಮ್ಮೆ ಒಲೆ ಹಚ್ಚಿದರೆ, ಆ ಕಿಚಡಿ ಸಂಪೂರ್ಣವಾಗಿ ತಯಾರಾಗುವವರೆಗೂ ಹಚ್ಚಿದ ಒಲೆ ಆರುವುದೇ ಇಲ್ಲವಂತೆ! ಅಷ್ಟೇ ಅಲ್ಲ, ಆ ಕಿಚಡಿ ಬೇಯುವವರೆಗೂ ಯಾರೂ ಒಲೆಯನ್ನು ಊದುವುದೂ ಇಲ್ಲ. ಒಲೆ ಊದದೆಯೇ ಅನ್ನ ಬೇಯುವ ಈ ಅಪರೂಪದ ಆಚರಣೆ ಇಂದಿಗೂ ಮಕ್ತುಂಪುರ ಗ್ರಾಮದಲ್ಲಿ ಜೀವಂತವಾಗಿರುವುದು ವಿಶೇಷ.

- ಗದಗ ಜಿಲ್ಲೆಯಲ್ಲಿ ರೈತರು ಗೊಬ್ಬರ ಖರೀದಿಸುವಾಗ ಅದರ ಜೊತೆಗೆ 'ಲಿಂಕ್' ತೆಗೆದುಕೊಳ್ಳುವುದು ಕಡ್ಡಾಯವಲ್ಲ ಎಂದು ಕೃಷಿ ಜಂಟಿ ನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ. ಈ ಸಂದರ್ಭದಲ್ಲಿ ಮಾಧ್ಯಮದವರಿಗೆ ಮಾಹಿತಿ ನೀಡಿದ ಅವರು, ರೈತರು ಕೇವಲ ಗೊಬ್ಬರವನ್ನು ಮಾತ್ರ ಖರೀದಿಸಬಹುದು ಎಂದು ತಿಳಿಸಿದ್ದಾರೆ. ಗೊಬ್ಬರ ಖರೀದಿ ಜೊತೆ ಲಿಂಕ್ ಕಡ್ಡಾಯವಲ್ಲ ಎಂದು ಪುನರುಚ್ಚರಿಸಿದ ಜಂಟಿ ಕೃಷಿ ನಿರ್ದೇಶಕರು, ಈ ಕುರಿತು ಅಗ್ರೋ ಮಾಲೀಕರಿಗೆ ಕಡಕ್ ವಾರ್ನಿಂಗ್ ನೀಡಲಾಗಿದೆ ಎಂದು ಹೇಳಿದ್ದಾರೆ.1
- Post by Onlinetv24x71
- ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ ರೆಡ್ಡಿ ಅವರು ತುಂಗಭದ್ರಾ ಜಲಾಶಯಕ್ಕೆ ಆಗಮಿಸಿದ್ದಾರೆ. ಅವರು ಜಲಾಶಯದ ೩೩ ಸ್ಟೀಲ್ ವೆ ಗೇಟುಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದಾರೆ.1
- ವಿಜಯನಗರ ಜಿಲ್ಲೆಯ ಕೂಡ್ಲಿಗಿಯಲ್ಲಿ ಜೂನ್ 25 ರಂದು ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಅವರು ಪಟ್ಟಣದ ಪೀರಲದೇವರ ದರ್ಶನ ಪಡೆದು, ಸಕಲರ ಒಳಿತಿಗಾಗಿ ಹಾಗೂ ಲೋಕ ಕಲ್ಯಾಣಕ್ಕಾಗಿ ದೇವರಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಅವರು ಭಕ್ತಿಯಿಂದ ದೇವರಿಗೆ ನಮಸ್ಕರಿಸಿ, ಕ್ಷೇತ್ರದ ಜನತೆಗೆ, ಸಕಲ ಜೀವರಾಶಿಗಳಿಗೆ ಸುಖ, ಶಾಂತಿ, ನೆಮ್ಮದಿ ಹಾಗೂ ಸಮೃದ್ಧಿಯನ್ನು ಕರುಣಿಸುವಂತೆ ಬೇಡಿಕೊಂಡರು. ಈ ಸಂದರ್ಭದಲ್ಲಿ, ಪಟ್ಟಣ ಪಂಚಾಯ್ತಿ ಮಾಜಿ ಅಧ್ಯಕ್ಷ ಕಾವಲ್ಲಿ ಶಿವಪ್ಪನಾಯಕ, ಪ ಪಂ ಮಾಜಿ ಸದಸ್ಯ ಪೂರ್ಯಾನಾಯ್ಕ, ತಾಪಂ ನಿವೃತ್ತ ಅಧಿಕಾರಿ ಜರ್ಮಲಿ ಬಸಣ್ಣ, ಗುರುಸಿದ್ದನಗೌಡ, ರಾಘವೇಂದ್ರ ಸುರೇಶ ಸೇರಿದಂತೆ ಹಲವು ಮುಖಂಡರೊಂದಿಗೆ ಅವರು ದೇವರಿಗೆ ವಿಶೇಷ ಪೂಜೆ ನೆರವೇರಿಸಿದರು.4
- ಕುಷ್ಟಗಿ ಪಟ್ಟಣದಲ್ಲಿ ಮೊಹರಂ ಹಬ್ಬವನ್ನು ಅತಿ ವಿಶೇಷವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಜನರು ಹುಲಿ, ಕಡಬಡ, ಹೆಣ್ಣು ಹಾಗೂ ಕಳ್ಳ ಸೋಗುಗಳನ್ನು ಧರಿಸಿ, ಹಲಗೆಯ ನಾದಕ್ಕೆ ತಕ್ಕಂತೆ ಕುಣಿದು ಕುಪ್ಪಳಿಸಿದರು. ಮೈಗೆಲ್ಲಾ ಹುಲಿ ಬಣ್ಣ ಹಚ್ಚಿಕೊಂಡು, ಕಡಬಡ ವೇಷಧಾರಿಗಳು ಕಾಲಿಗೆ ಮತ್ತು ಸೊಂಟಕ್ಕೆ ಗೆಜ್ಜೆ ಕಟ್ಟಿ, ಹಲಗೆ ನಾದಕ್ಕೆ ಹೆಜ್ಜೆ ಹಾಕುತ್ತಾ ಪಟ್ಟಣದ ಐದು ಮಸೀದಿಗಳಿಗೆ ಭೇಟಿ ನೀಡಿದರು. ಅಲ್ಲಿ 'ಅಲಾಯಿ ದೇವರು'ಗೆ ತಮ್ಮ ಇಷ್ಟಾರ್ಥದ ಹರಕೆಗಳನ್ನು ‘ಸಕ್ಕೆಕರೆ ಮಾಲದಿ’ ನೈವೇದ್ಯದೊಂದಿಗೆ ತೀರಿಸಿದರು. ಈ ಆಚರಣೆಯ ಭಾಗವಾಗಿ, ಟಗರಿನ ವೇಷಧಾರಿಗಳು ಕೈಯಲ್ಲಿ ಆಯುಧಗಳನ್ನು ಹಿಡಿದು ತಮ್ಮ ಕುಟುಂಬದವರ ಮತ್ತು ಪರಿಚಯದವರ ಮನೆಗಳಿಗೆ ತೆರಳಿ ಭಿಕ್ಷಾಟನೆ ನಡೆಸುತ್ತಾರೆ. ಸಂಗ್ರಹಿಸಿದ ಹಣದಿಂದ ಅನ್ನ ಸಂತರ್ಪಣೆ ಮಾಡುವುದು ಇಲ್ಲಿನ ಜನರ ಸಂಪ್ರದಾಯವಾಗಿದೆ. ಹುಲಿ ಮತ್ತು ಕಡಬಡ ವೇಷಧಾರಿಗಳು ಒಬ್ಬರಿಂದೊಬ್ಬರು ವೇಷ ಹಾಕಿ ಕುಣಿಯುವುದನ್ನು ನೋಡಲು ಸಾರ್ವಜನಿಕರು, ಮಹಿಳೆಯರು, ಯುವಕರು ಮತ್ತು ಮಕ್ಕಳು ತಂಡೋಪತಂಡವಾಗಿ ಸೇರಿ ಅತ್ಯಂತ ಸೌಹಾರ್ದತೆಯಿಂದ, ಅಣ್ಣ-ತಮ್ಮ, ಅಕ್ಕ-ತಂಗಿಯರಂತೆ ದೇವರ ಮೇಲೆ ಭಕ್ತಿ ಇಟ್ಟು ಕಣ್ತುಂಬಿಕೊಳ್ಳುತ್ತಾರೆ. ಇಲ್ಲಿನ ಜನಪದ ಕಲೆಯ ವಿಶೇಷತೆಯನ್ನು ಹಲಗೆ ಬಾರಿಸುವ ಮೂಲಕ ಉಳಿಸಿ ಬೆಳೆಸಲು ಪಟ್ಟಣದ ಜನತೆ ಪ್ರತಿ ವರ್ಷ ಮುಂದಾಗುತ್ತಾರೆ. ನೂರಾರು ವರ್ಷಗಳಿಂದ ನಡೆದುಬಂದ ಈ ಪದ್ಧತಿಯನ್ನು ಮುಂದುವರಿಸಿಕೊಂಡು, ಈ ವರ್ಷವೂ ಮೊಹರಂ ಹಬ್ಬವನ್ನು ಬಹಳ ವಿಶಿಷ್ಟವಾಗಿ ಆಚರಿಸಲಾಯಿತು. ಈ ಹಬ್ಬದಲ್ಲಿ ಯಾವುದೇ ಭೇದಭಾವವಿಲ್ಲದೆ, ಯಾರಿಗೂ ತೊಂದರೆ ನೀಡದೆ, ಸರ್ವ ಜನಾಂಗದ ಜನರು ಸೌಹಾರ್ದತೆ ಮತ್ತು ಭಾವೈಕ್ಯತೆಯೊಂದಿಗೆ ಹಬ್ಬವನ್ನು ಆಚರಿಸುತ್ತಾ ಬಂದಿದ್ದಾರೆ. ಹುಲಿ ಮತ್ತು ಕಡಬಡ ಸೋಗುಗಳಿಗೆ ಹೆಸರಾದ ಕುಷ್ಟಗಿ ಪಟ್ಟಣದ ಮೊಹರಂ ಸಂಪ್ರದಾಯವು ಹೀಗೆ ವಿಶೇಷವಾಗಿ ಮುಂದುವರೆಯುತ್ತಿದೆ. ಪಟ್ಟಣದ ನಿವಾಸಿ ಶರಣಪ್ಪ ಚೂರಿ ಅವರ ಪ್ರಕಾರ, ಕುಷ್ಟಗಿ ಪಟ್ಟಣದಲ್ಲಿ ಈ ನೃತ್ಯ ಸಂಪ್ರದಾಯವನ್ನು ತಮ್ಮ ಹಿರಿಯರ ಕಾಲದಿಂದಲೂ ಆಚರಿಸುತ್ತಾ, ಈ ಕಲೆಯನ್ನು ಉಳಿಸಿಕೊಂಡು ಬಂದಿದ್ದಾರೆ. ಈ ಕಲೆಯಲ್ಲಿ ಅಲಾಯಿ ದೇವರ ಜೀವನ ಚರಿತ್ರೆ ಅಡಗಿದೆ ಎಂದು ಅವರು ವಿವರಿಸಿದರು. ಮತ್ತೊಬ್ಬರು, ಆಲಾಂಫಾಷಾ ಮೋದಿ ಅವರು, ವಿರೋಧಿಗಳನ್ನು ಸದೆಬಡಿಯಲು ಮತ್ತು ರಾಕ್ಷಸರ ನಾಶ ಮಾಡಲು ಅಲಾಯಿ ದೇವರು ನಾನಾ ವೇಷಭೂಷಣಗಳೊಂದಿಗೆ ಮುಂದಾಗುತ್ತಾರೆಂಬ ಉದ್ದೇಶದಿಂದ ಭಕ್ತರು ತಮ್ಮ ಇಷ್ಟಾರ್ಥದ ಹರಕೆಯನ್ನು ತೀರಿಸಲು ವಿವಿಧ ವೇಷಗಳನ್ನು ಧರಿಸಿ, ಹಲಗೆ ಬಾರಿಸುತ್ತಾ ಹೆಜ್ಜೆ ಹಾಕುತ್ತಾ ಕುಣಿಯುತ್ತಾರೆ ಎಂದು ತಿಳಿಸಿದರು. ಅಲಾಯಿ ದೇವರಿಗೆ ಸುಮಾರು 10 ದಿನಗಳವರೆಗೆ ರೋಜಾ ಆಚರಿಸಿ ಅನ್ನ ಸಂತರ್ಪಣೆ ಮಾಡಬೇಕೆಂದೂ, ಹುತಾತ್ಮರ ನೆನಪಿಗಾಗಿ ಪಂಜಾ ಗುಡಿಸಿ ಅಲಾಯಿ ದೇವರನ್ನು ಪ್ರತಿಷ್ಠಾಪಿಸಿ ಮೊಹರಂ ಹಬ್ಬವನ್ನು ಆಚರಿಸಲಾಗುತ್ತದೆ ಎಂದು ಅವರು ಹೇಳಿದರು.2
- ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ತಾಮ್ರಗುಂಡಿ ಮತ್ತು ಬಸಾಪುರ ಕೆರೆಗಳನ್ನು ತುಂಬಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘವು ಸಿಂಗಟಾಲೂರ್ ಏತ ನೀರಾವರಿ ಇಲಾಖೆಗೆ ಮನವಿ ಸಲ್ಲಿಸಿದೆ. ಮಳೆಯ ಕೊರತೆಯಿಂದ ರೈತರ ಬೆಳೆಗಳು ಹಾಳಾಗುತ್ತಿದ್ದು, ಬಿತ್ತಿದ ಬೆಳೆಗಳನ್ನು ಉಳಿಸಿಕೊಳ್ಳಲು ಕಾಲುವೆಯ ಮೂಲಕ ನೀರು ಹರಿಸುವಂತೆ ರೈತರು ಈ ಸಂದರ್ಭದಲ್ಲಿ ಅಧಿಕಾರಿಗಳಿಗೆ ಪಟ್ಟು ಹಿಡಿದರು. ಆದರೆ, ರಾಜ್ಯಾದ್ಯಂತ ಮಳೆಯಾಗದ ಹಿನ್ನೆಲೆಯಲ್ಲಿ ಡ್ಯಾಂಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿರುವುದರಿಂದ ನೀರು ಬಿಡಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ರೈತರಿಗೆ ಮನವರಿಕೆ ಮಾಡಿಕೊಟ್ಟರು.1
- ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುನಿರಾಬಾದ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ, ಕೊಪ್ಪಳ ಜಿಲ್ಲೆಯ ರೈತರು ಮತ್ತು ಸಾರ್ವಜನಿಕರು ತಮ್ಮ ವಿವಿಧ ಸಮಸ್ಯೆಗಳ ಕುರಿತು ಅವರಿಗೆ ಮನವಿ ಪತ್ರಗಳನ್ನು ಸಲ್ಲಿಸಿದರು. ಇದೇ ಸಮಯದಲ್ಲಿ, ನೆರೆದಿದ್ದ ರೈತರು ಮತ್ತು ಸಾರ್ವಜನಿಕರು ಬಲ್ನೋಟ ಕಂಪನಿಯ ವಿರುದ್ಧ ತೀವ್ರವಾಗಿ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಈ ಘಟನೆಯಿಂದಾಗಿ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.1