ಗೌರಿಬಿದನೂರು ನಗರದ ಶ್ರೀ ನದೀದಡ ಶ್ರೀ ಆಂಜನೇಯ ಸ್ವಾಮಿ ಸನ್ನಿಧಿಯಲ್ಲಿ ಬಿಜೆಪಿ ಘಟಕದ ವತಿಯಿಂದ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಗೌರಿಬಿದನೂರು: ಕೇಂದ್ರ ಚುನಾವಣಾ ಆಯೋಗ ದೇಶದಾದ್ಯಂತ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ಜಾರಿಗೆ ತರುವಾಗ ಬಿಜೆಪಿ ಸಹಮತ ಸೂಚಿಸಿತು. ಆದರೆ ವಿರೋಧ ಪಕ್ಷ ಕಾಂಗ್ರೆಸ್ ವಿರೋಧಿಸಿತು. ಮತ ಚೋರಿ ಎಂದು ಆರೋಪ ಮಾಡುತ್ತಿರುವ ಕಾಂಗ್ರೆಸ್‌ನವರೇ ನಿಜವಾದ ಮತ ಚೋರಿಯ ಕೆಲಸ ಮಾಡುತ್ತಾ ಬಂದಿದ್ದಾರೆ. ಕೇರಳದಿಂದ ಬಂದವರಿಗೂ ಮತದಾನದ ಹಕ್ಕನ್ನು ನೀಡಿದ್ದು ಅವರು ಎರಡೂ ಕಡೆ ಮತದಾನ ಮಾಡುತ್ತಿದ್ದಾರೆ. ಆ ಮೂಲಕ ರಾಜ್ಯ, ದೇಶದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದೆ ಎಂದು ಬಿಜೆಪಿ ರಾಜ್ಯ ಸಂಚಾಲಕ ಜಗದೀಶ್ ಹಿರೇಮುನಿ ಆರೋಪಿಸಿದರು. ಗೌರಿಬಿದನೂರು ನಗರದ ಶ್ರೀ ನದೀದಡ ಶ್ರೀ ಆಂಜನೇಯ ಸ್ವಾಮಿ ಸನ್ನಿಧಿಯಲ್ಲಿ ಬಿಜೆಪಿ ಘಟಕದ ವತಿಯಿಂದ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಬಿಎಲ್ ಎ-2 ಕಾರ್ಯಾಗಾರವನ್ನು ದೀಪ ಬೆಳಗುವ ಮೂಲಕ ಉದ್ಗಾಟಿಸಿ ನಂತರ ಮಾತನಅಡಿದರು. ಕಾರ್ಯಾಗಾರದಲ್ಲಿ ಭಾಗವಹಿಸಿ ಮತದಾರರ ಪಟ್ಟಿ ಪರಿಷ್ಕರಣೆ, ಕಾರ್ಯಕರ್ತರು ಪಕ್ಷದ ಚಟುವಟಿಕೆಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾತನಾಡಿದ ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಮಹತ್ವ, ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ಅಕ್ರಮ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುವ ಬಗ್ಗೆ ಮಾಹಿತಿ ನೀಡುವುದು ಸೇರಿದಂತೆ ಕೆಲವು ಮಹತ್ವದ ವಿಷಯಗಳ ಬಗ್ಗೆ ತಿಳಿ ಹೇಳಿದರು. ದೇಶಾದ್ಯಂತ ಹಂತ ಹಂತವಾಗಿ ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆ ನಡೆಸಲು ಭಾರತೀಯ ಚುನಾವಣಾ ಆಯೋಗವು ನಿರ್ಧರಿಸಿದೆ. 2026ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳು ಸೇರಿದಂತೆ 10 ರಿಂದ 15 ರಾಜ್ಯಗಳನ್ನು ಒಳಗೊಂಡಿದೆ ಎಂದು ತಿಳಿಸಿದರು, ತಮಿಳುನಾಡಿನಲ್ಲಿ 74 ಲಕ್ಷ ನಕಲಿ ವೋಟುಗಳನ್ನು ಮತ್ತು ಕೇರಳ ರಾಜ್ಯದಲ್ಲಿ 5ಲಕ್ಷ ಜನರು ಮರಣ ಹೊಂದಿದ್ದಾರೆ, ಆದರೂ ಅವರೆಲ್ಲರೂ ಚುನಾವಣೆಯಲ್ಲಿ ಮತಗಳು ಚಲಾವಣೆ ಯಾಗಿದ್ದೇ ಅಂತಹ ನಕಲಿ ಮತಗಳನ್ನು ಡಿಲೀಟ್ ಮಾಡಲಾಗುವುದ ಎಂದರು. ದೇಶದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ಅಭಿಯಾನ ನಡೆಯಲಿರುವ ಹಿನ್ನೆಲೆಯಲ್ಲಿ ಮತದಾನದ ಅರ್ಹತೆ ಇದ್ದವರ ಹಕ್ಕನ್ನು ಕಿತ್ತುಕೊಳ್ಳಬಾರದು. ಒಬ್ಬ ವ್ಯಕ್ತಿ ಒಂದೇ ಕಡೆ ಮತದಾನ ಮಾಡಬೇಕು. ಎಂದರು ಮತದಾನದ ಹಕ್ಕಿಲ್ಲದವರಿಗೆ, ಎರಡು ಕಡೆ ಮತದಾನ ಮಾಡುವವರಿಗೆ ವಿಶೇಷ ತೀವ್ರ ಪರಿಷ್ಕರಣೆಯ ಮೂಲಕ ತಿರಸ್ಕಾರ ಮಾಡಿ ಚುನಾವಣಾ ಆಯೋಗವು ದೇಶಕ್ಕೆ ಭದ್ರ ಬುನಾದಿ ಹಾಕಲಿದೆ. ಒಬ್ಬ ವ್ಯಕ್ತಿ ಗೌರಿಬಿದನೂರಿನಲ್ಲ ಮತ್ತು ತುಮಕೂರಿನಲ್ಲಿಮತದಾನ ಮಾಡುತ್ತಿದ್ದಾರೆ. ಈ ಕಾರಣಕ್ಕೆ ಕಾಂಗ್ರೆಸ್ ಪರಿಸ್ಕರಣೆಯನ್ನು ವಿರೋಧಿಸುತ್ತಿದೆ. ಈಶಾನ್ಯ ಭಾರತದಲ್ಲಿಬಾಂಗ್ಲಾದೇಶದಿಂದ ಬಂದ ನುಸುಳುಕೋರರು ಮತದಾನದ ಹಕ್ಕು ಪಡೆದುಕೊಂಡಿದ್ದಾರೆ. ಕೆಲವು ಈಶಾನ್ಯ ರಾಜ್ಯಗಳಲ್ಲಿ ಶೇ.40 ಮತದಾರರು ನುಸುಳುಕೋರರೇ ಆಗಿದ್ದಾರೆ. ಇದನ್ನೆಲ್ಲ ತಡೆದು ನಿಜವಾಗಿಯೂ ಯಾರು ದೇಶದ ಪ್ರಜೆಗಳೋ ಅವರನ್ನು ಮಾತ್ರ ಮತದಾರರ ಪಟ್ಟಿಯಲ್ಲಿ ಉಳಿಸಿಕೊಳ್ಳಲು ಚುನಾವಣಾ ಆಯೋಗ ಮುಂದಾಗಿದೆ. ಇದರ ಯಶಸ್ಸಿನಲ್ಲಿ ನಮ್ಮ ಪಕ್ಷದ ಬಿಎಲ್ಎಗಳು ಸಕ್ರಿಯವಾಗಿ ತೊಡಗಿಸಿಕೊಂಡು ನೆರವು ನೀಡಬೇಕು ಎಂದು ಯುವಉತ್ಸಾಹಿ ಜಿಲ್ಲಾಅಧ್ಯಕ್ಷ ಸೀಕಲ್ ರಾಮಚಂದ್ರಗೌಡ ಹೇಳಿದರು. ಆಪರೇಶನ್ ಸಿಂದೂರ ಮತ್ತು ಸರ್ಜಿಕಲ್ ದಾಳಿಯ ನಂತರ ತಾಯಿ ಭಾರತಿ ವಿಶ್ವಮುಖದಲ್ಲಿ ಶಕ್ತಿ ಸ್ವರೂಪಿಣಿಯಾಗಿದ್ದಾಳೆ. ಕಾಶ್ಮೀರದಲ್ಲಿ ರಾಷ್ಟ್ರಧ್ವಜ ಆರೋಹಣ ಮಾಡಲು ಸಾಧ್ಯವಿಲ್ಲದ ಸ್ಥಿತಿ ಇತ್ತು. ಈಗ ಅಲ್ಲಿ ತ್ರಿವರ್ಣ ಧ್ವಜ ರಾರಾಜಿಸುತ್ತಿದೆ. 70 ವರ್ಷಗಳ ಆಡಳಿತದ ಅವಧಿಯಲ್ಲಿ ನಮಗೆಲ್ಲ ಒಂದು ಆತಂಕವಿತ್ತು. ನಮ್ಮ ದೇಶ ಪರಮ ವೈಭವದತ್ತ ಹೋಗುವುದೇ ಎಂಬ ಭಯವಿತ್ತು. ಆದರೆ ಕಳೆದ 11 ವರ್ಷಗಳಲ್ಲಿ ನರೇಂದ್ರ ಮೋದಿ ಅವರ ನಾಯಕತ್ವ ಸಿಕ್ಕಿದ ಮೇಲೆ ನಮ್ಮೆಲ್ಲ ಕನಸು ನನಸಾಗಿ ತಾಯಿ ಭಾರತಿ ಪರಮ ವೈಭವದತ್ತ ಸಾಗುತ್ತಿದ್ದಾಳೆ, ಭಾರತ ವಿಶ್ವಗುರುವಾಗುವುದರಲ್ಲಿ ಸಂಶಯವಿಲ್ಲ ಎಂದು ರಮೇಶ್ ರಾವ್ ಶಳ್ಕೆ ನುಡಿದರು. ಪಂಚ ಗ್ಯಾರಂಟಿ ಯೋಜನೆ ಮೂಲಕ ಜನರ ದಾರಿತಪ್ಪಿಸಿ ಅಧಿಕಾರಕ್ಕೆ ಬಂದ ರಾಜ್ಯ ಕಾಂಗ್ರೆಸ್ ಸರಕಾರ ಈಗ ಇದೇ ಪಂಚ ಗ್ಯಾರಂಟಿ ಯೋಜನೆಯಿಂದಾಗಿ ಬೊಕ್ಕಸ ಖಾಲಿ ಮಾಡಿಕೊಂಡು ಕೂತಿದೆ. ಜನರ ಗಮನ ಬೇರೆ ಕಡೆಗೆ ಸೆಳೆಯಲು ಇಲ್ಲಸಲ್ಲದ ವಿಚಾರ ಎತ್ತಿಕೊಂಡು ರಾಜ್ಯದ ಜನರಲ್ಲಿ ಗೊಂದಲ ಮೂಡಿಸುತ್ತಿದೆ. ಕಳೆದ ಚುನಾವಣೆಯಲ್ಲಿ ದಕ್ಷಿಣ ಕನ್ನಡದ ಜನ ಮತ ಮಾರಲಿಲ್ಲ. ಆದರೆ ರಾಜ್ಯದ ಇತರ ಕಡೆ ಆಮಿಷಗಳನ್ನು ನೀಡಿ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಮುಂದಿನ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಹಾಗೂ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತದಾರರು ಮತ್ತೆ ಜಾಗೃತರಾಗುವ ಅನಿವಾರ್ಯತೆ ಇದೆ ಎಂದರು. ಮೋದಿ ನಾಯಕತ್ವದಲ್ಲಿ ಹಳ್ಳಿಗಳ ವಿಕಾಸ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವವನ್ನು ಕೊಂಡಾಡಿ, “ಮೋದಿ ಅವರ ನೇತೃತ್ವದಲ್ಲಿ ಹಳ್ಳಿಗಳ ವಿಕಾಸಕ್ಕೆ ಹೊಸ ವೇಗ ದೊರೆಯುತ್ತಿದೆ. ಗ್ರಾಮೀಣ ಭಾಗದಲ್ಲಿ ಇಂದು ವಿಶ್ವಾಸ ಮತ್ತು ಭದ್ರತೆಯ ವಾತಾವರಣ ನಿರ್ಮಾಣವಾಗುತ್ತಿದ್ದು, ಅಭಿವೃದ್ಧಿಯ ಫಲಗಳು ಕಟ್ಟಕಡೆಯ ವ್ಯಕ್ತಿಗೂ ತಲುಪುತ್ತಿವೆ,” ಎಂದು ಬಿಎಲ್.ಎ-2 ಕಾರ್ಯಾಗಾರ ಸಂಚಾಲಕಿ ನಿಶ್ಚಿತಾ ವಿಶ್ವಾಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಬಿ.ಜೆ.ಪಿ.ಪಕ್ಷದ ಮಾಜಿ ನಗರಸಭೆಸದಸ್ಯ ಮಾರ್ಕೆಟ್ ಮೋಹನ್, ಜಿಲ್ಲಾಪ್ರಧಾನಕಾರ್ಯದರ್ಶಿ ಮುರಳಿ, ಜಿಲ್ಲಾ ಖಜಾಂಚಿ ನಾಗಭೂಷಣರಾವ್, ಪ್ರಧಾನಕಾರ್ಯದರ್ಶಿ ಹರೀಶ್, ಕೋಡೀರ್ಲಪ್ಪ, ವೇಣುಮಾಧವ್, ನದಿಗಡ್ಡೆ ಪರಮೇಶ್, ಅನಿಲ್,ವೆಂಕಟಾದ್ರಿ,ಭರತ್ ಮತ್ತು ಪಕ್ಷದ ಮುಖಂಡರು ಹಾಗೂ ಪಕ್ಷದ ಅಭಿಮಾನಿಗಳು ಪಾಲ್ಗೊಂಡಿದ್ದರು. ವರದಿ: ಸುಪ್ರಿಯಾ

- ಪವನ್ ಕಲ್ಯಾಣ್ ಶೀಘ್ರವಾಗಿ ಗುಣಮುಖರಾಗಲಿ ಎಂದು ಅಭಿಮಾನಿಗಳು, ಬೆಂಬಲಿಗರು ಮತ್ತು ಪಕ್ಷದ ಕಾರ್ಯಕರ್ತರಿಂದ ವಿಶೇಷ ಪೂಜೆ:- ಬಾಗೇಪಲ್ಲಿ:-ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಮತ್ತು ಜನಸೇನಾ ಪಕ್ಷದ ನಾಯಕ ಪವನ್ ಕಲ್ಯಾಣ್ ಅವರು ಇತ್ತೀಚೆಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಬಾಗೇಪಲ್ಲಿ ಅವರ ಅಭಿಮಾನಿಗಳು ಮತ್ತು ಜನಸೇನಾ ಕಾರ್ಯಕರ್ತರು ಅವರು ಶೀಘ್ರವೇ ಚೇತರಿಸಿಕೊಳ್ಳಲಿ ಎಂದು ಪಟ್ಟಣದ ಪ್ರಸಿದ್ಧ ಭೈರವೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆಗಳನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಜನಸೇನಾ ಪಕ್ಷದ ಮುಖಂಡ ಹಾಗೂ ವಕೀಲರಾದ ನರಸಿಂಹ ಮೂರ್ತಿ ಮಾತನಾಡಿ ಪಟ್ಟಣದ ಜಡಲ ಭೈರವೇಶ್ವರ ದೇವಾಲಯದಲ್ಲಿ ಪವನ್ ಕಲ್ಯಾಣ್ ಹೆಸರಿನಲ್ಲಿ ಅರ್ಚನೆ ಮಾಡಿಸಿದರು. ತದನಂತರ ದೇವಾಲಯದ ಮುಂದೆ ತೆಂಗಿನಕಾಯಿ ಒಡೆದು ಪವನ್ ಕಲ್ಯಾಣ್ ಅವರು ಬೇಗನೇ ಚೇತರಿಸಿಕೊಂಡು ಸಕ್ರಿಯ ರಾಜಕೀಯಕ್ಕೆ ಮರಳಲಿ ಎಂದು ಅಭಿಮಾನಿಗಳು ಪಟ್ಟಣದ ಭೈರವೇಶ್ವರ ಹಾಗೂ ಆಂಜನೇಯ ಸ್ವಾಮಿ ದೇವಾಲಯಗಳು ಮತ್ತು ಇತರ ಪ್ರಮುಖ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ದೀಪಾರಾಧನೆ ಮತ್ತು ಪ್ರಾರ್ಥನೆಗಳನ್ನು ಮಾಡಿದರು. ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಹಾಗೂ ಜನಸೇನಾ ಪಕ್ಷದ ನಾಯಕ ಪವನ್ ಕಲ್ಯಾಣ್ ಅವರು ಶೀಘ್ರವಾಗಿ ಗುಣಮುಖರಾಗಲಿ ಎಂದು ಅವರ ಅಭಿಮಾನಿಗಳು, ಬೆಂಬಲಿಗರು ಮತ್ತು ಪಕ್ಷದ ಕಾರ್ಯಕರ್ತರು ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಹಾಗೂ ಪ್ರಾರ್ಥನೆಗಳನ್ನು ಸಲ್ಲಿಸಿದ್ದೇವೆ ಎಂದು ಹೇಳಿದರು. ಆಂಧ್ರಪ್ರದೇಶ ಉಪಮುಖ್ಯಮಂತ್ರಿ, ನಟ ಪವನ್ ಕಲ್ಯಾಣ್ ಶನಿವಾರ ಸಂಜೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಚೇತರಿಸಿಕೊಳ್ಳುತ್ತಿರುವ ಅವರಿಗೆ 10 ದಿನಗಳ ವಿಶ್ರಾಂತಿಗೆ ವೈದ್ಯರು ಸಲಹೆ ನೀಡಿದ್ದಾರೆ. ಎಂದು ಹೇಳಿದರು. ಸಭೆಯಲ್ಲಿದ್ದಾಗಲೇ ತೀವ್ರ ಅಸ್ವಸ್ಥ ಶುಕ್ರವಾರ ಬೆಳಿಗ್ಗೆ ಅಧಿಕಾರಿಗಳೊಂದಿಗೆ ಆಡಳಿತ ಸಂಬಂಧಿತ ಸಭೆ ನಡೆಸುತ್ತಿದ್ದಾಗ ಪವನ್ ಕಲ್ಯಾಣ್ ಅವರು ಹಠಾತ್ ತೀವ್ರ ಅಸ್ವಸ್ಥರಾಗಿದ್ದರು. ತಕ್ಷಣವೇ ಎಲ್ಲಾ ಅಧಿಕೃತ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯಕೀಯ ಪರೀಕ್ಷೆ ಮತ್ತು ಎಂಆರ್‌ಐ ಸ್ಕ್ಯಾನಿಂಗ್ ನಂತರ ವೈದ್ಯರ ತಂಡವು ತುರ್ತು ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ಶಿಫಾರಸು ಮಾಡಿತು ಎಂದು ಅವರ ಕುಟುಂಬದ ಸದಸ್ಯರು ಹೇಳಿದ್ದಾರೆ ಎಂದು ಹೇಳಿದರು. ಆದ್ದರಿಂದ ಇಂದು ಬಾಗೇಪಲ್ಲಿ ಪಟ್ಟಣದಲ್ಲಿ ಪವನ್ ಕಲ್ಯಾಣ್ ಬೇಗ ಗುಣಮುಖರಾಗಲೆಂದು ಅಭಿಮಾನಿಗಳು ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಮತ್ತು ಹೋಮಗಳನ್ನು ನಡೆಸುತ್ತಿದ್ದಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಅಮೃತ ಕುಮಾರ್, ರಾಮು.ವಿ.ಅಜಯ್, ಮಂಜುನಾಥ್,ಅರುಣ್ ಕೆ.ಎನ್ ಹಾಗೂ ಸಾರ್ವಜನಿಕರು ಹಾಜರಿದ್ದರು.1
- Post by Vv Vv2
- Post by Venu Gopal2
- ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ MH ಪಟ್ಟಣ ಬಳಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಬೆಂಗಳೂರು ಕಡೆ ಚಲಿಸುತ್ತಿದ್ದ ಬಸ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಕ್ಸೆಲ್ ರಾಡ್ ಕಟ್ಟಾಗಿ ಬಸ್ ನಿಯಂತ್ರಣ ಕಳೆದು ಕೊಂಡು ಸರ್ವಿಸ್ ರಸ್ತೆ ಗೆ ಪಲ್ಟಿ ಯಾಗಿದೆ ಅಪಘಾತ ಸಂಭವಿಸಿದ ಕೂಡಲೇ ಸ್ಥಳೀಯ ಜನರು ರಕ್ಷಣೆ ಗೆ ಮುಂದಾಗಿದ್ದಾರೆ. ಸ್ಥಳಕ್ಕೆ ಗುಬ್ಬಿ ಪೊಲೀಸರು ಭೇಟಿ ನೀಡಿ ಪರಿಸ್ಥಿತಿ ಯನ್ನು ನಿಯಂತ್ರಣಕ್ಕೆ ತಂದರು ಗಾಯಾಳು ಗಳನ್ನು ಗುಬ್ಬಿ ಆಸ್ಪತ್ರೆಗೆ ಚಿಕಿತ್ಸೆ ಗೆ ದಾಖಲಿಸಿದರು1
- ದೇವಸ್ಥಾನದಲ್ಲಿ ಭಕ್ತಿಯ ನೆಪದಲ್ಲಿ ಕಳ್ಳತನ ಸಿಸಿಟಿವಿಯಲ್ಲಿ ಸೆರೆಯಾದ ಐಫೋನ್ ಕಳವು1
- *ಚಿಂತಾಮಣಿ:-ಹೆಲ್ಮೆಟ್ ವಿಚಾರಕ್ಕೆ ಪೊಲೀಸರು ಮತ್ತು ಸಾರ್ವಜನಿಕರ ನಡುವೆ ಮಾತಿನ ಚಕಮಕಿ* *ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವಿಡಿಯೋ* ಚಿಂತಾಮಣಿ ನಗರದ ಹೃದಯಭಾಗದಲ್ಲಿರುವ ಪಿ.ಸಿ.ಆರ್ ಕಾಂಪ್ಲೆಕ್ಸ್ ಬಳಿ ಹೆಲ್ಮೆಟ್ ಧರಿಸದ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತು ಸಾರ್ವಜನಿಕರ ನಡುವೆ ತೀವ್ರ ವಾಗ್ವಾದ ನಡೆದಿದೆ. ನಗರದ ಸಂಚಾರಿ ನಿಯಮಗಳ ಪಾಲನೆಗಾಗಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ.ಹೆಲ್ಮೆಟ್ ಧರಿಸದ ಸವಾರರನ್ನು ತಡೆದ ಪೊಲೀಸರು ದಂಡ ವಿಧಿಸಲು ಮುಂದಾದಾಗ,ಸಾರ್ವಜನಿಕರು ಮತ್ತು ಪೊಲೀಸರ ನಡುವೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ಪೊಲೀಸರು ಏಕವಚನದಲ್ಲಿ ಮಾತನಾಡುತ್ತಿದ್ದಾರೆ ಮತ್ತು ಅನಗತ್ಯವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ರಸ್ತೆ ಸುರಕ್ಷತೆ ಮತ್ತು ನಿಯಮಗಳ ಪಾಲನೆಗಾಗಿ ತಪಾಸಣೆ ನಡೆಸಲಾಗುತ್ತಿದೆ.ಸಾರ್ವಜನಿಕರು ಸಹಕರಿಸುವ ಬದಲು ಕರ್ತವ್ಯಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂಬುದು ಪೊಲೀಸರ ವಾದವಾಗಿದೆ. ಘಟನೆಯ ವೇಳೆ ಅಲ್ಲಿದ್ದವರು ತಮ್ಮ ಮೊಬೈಲ್‌ನಲ್ಲಿ ದೃಶ್ಯಗಳನ್ನು ಸೆರೆಹಿಡಿದಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಪೊಲೀಸರು ಮತ್ತು ಯುವಕರ ನಡುವೆ ತೀವ್ರ ಸ್ವರೂಪದ ಮಾತಿನ ಚಕಮಕಿ ನಡೆಯುತ್ತಿರುವುದು ಕಂಡುಬಂದಿದೆ. ವರದಿ:-ಸೀನ. ಟಿ ಚಿಂತಾಮಣಿ3
- ನಗರೇನಹಳ್ಳಿಯಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ಚಾಲನೆ. ಹೊಸಕೋಟೆ ವಿಧಾನಸಭಾ ಕ್ಷೇತ್ರದ ಸೂಲಿಬೆಲೆ ಹೋಬಳಿಯ ನಗರೇನಹಳ್ಳಿ ಗ್ರಾಮದಲ್ಲಿ ಸುಮಾರು 30 ಲಕ್ಷ ರೂ. ಆರ್‌ಡಿಪಿಆರ್ ಅನುದಾನದಲ್ಲಿ ಸಿಸಿ ರಸ್ತೆ ನಿರ್ಮಿಸುವ ಕಾಮಗಾರಿಯ ಭೂಮಿಪೂಜೆಯನ್ನು ಗಣ್ಯರೊಂದಿಗೆ ನೆರವೇರಿಸಲಾಯಿತು1
- ಜೈಪುರದಲ್ಲಿ ದೌರ್ಜನ್ಯ ಆರೋಪಿಗೆ ಗುಂಡೇಟು, ಬಂಧನ ಪಲಾಯನ ಯತ್ನ ವಿಫಲ, ಪೊಲೀಸರ ಕ್ರಮ1