ವಿಕಲಚೇತನ ಅರ್ಹ ಫಲಾನುಭವಿಗಳಿಗೆ ತ್ರಿಚಕ್ರ ವಾಹನ ಸೇರಿದಂತೆ ವಿವಿಧ ಸಲಕರಣೆಗಳನ್ನು ಶಾಸಕ ಎಂ.ಆರ್ ಮಂಜುನಾಥ್ ಅವರು ವಿತರಣೆ ಮಾಡಿದರು. ಈ ವೇಳೆ ಶಾಸಕ ಎಂ.ಆರ್ ಮಂಜುನಾಥ್ ಮಾತನಾಡಿ, ಎಲ್ಲರಂತೆ ವಿಕಲಚೇತನರು ಸಹ ಉತ್ತಮ ಬದುಕನ್ನು ಕಟ್ಟಿಕೊಳ್ಳಬೇಕು ಎಂಬ ಆಸೆ ಇರುತ್ತದೆ. ಇವರರಿಗೆ ನೆರವು ಹಾಗೂ ಸಹಕಾರಿಯಾಗುವಂತೆ ವಿವಿಧ ಪರಿಕರಗಳನ್ನು ವಿತರಣೆ ಮಾಡಲಾಗಿದೆ ಇದನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕು ಇದೊಂದು ಬೆಳವಣಿಯಾಗಿದೆ ಎಂದರು. ಇದೀಗ ಹನೂರಿನಲ್ಲಿ ವಿತರಣೆ ಯಾಗಿರುವ ವಿವಿಧ ಸಲಕರಣೆಗಳು ಜಿಲ್ಲೆಯಾದ್ಯಂತ ಇರುವ ಅರ್ಹ ವಿಕಲಚೇತನರಿಗು ಸಹ ದಕ್ಕ ಬೇಕಾಗಿದೆ ಮುಂದಿನ ದಿನಗಳಲ್ಲಿ ಹನೂರು ವಿಧಾನಸಭಾ ಕ್ಷೇತ್ರದ ಅರ್ಹ ಫಲವನುಗಳಿಗೆ ಮತ್ತಷ್ಟು ಪರಿಕರಗಳನ್ನು ಒದಗಿಸಿಕೊಡಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ ಎಂದು ಇದೆ ವೇಳೆ ಭರವಸೆ ನೀಡಿದರು. ಇದೆ ಸಮಯದಲ್ಲಿ ಜಿಲ್ಲಾ ವಿಕಲಚೇತನರ ಕಲ್ಯಾಣಧಿಕಾರಿ. ಡಾ ಕೆ ಎನ್ ಮಂಜುನಾಥ್, ಹಾಗೂ ಮುಖಂಡರುಗಳಾದ ಮಂಜೇಶ್ ಗೌಡ, ಚಿನ್ನವೆಂಕಟ್,ಎಸ್. ಆರ್ ಮಹದೇವ್,ಅಮೀನ್,ನಟರಾಜುಗೌಡ,ಗೋವಿಂದ,ರಾಚಪ್ಪ,ಶಿವು,ವೆಂಕಟೇಶ್,ಪ್ರಸನ್ನ, ಸೇರಿದಂತೆ ಇನ್ನಿತರರು ಇದ್ದರು.
ವಿಕಲಚೇತನ ಅರ್ಹ ಫಲಾನುಭವಿಗಳಿಗೆ ತ್ರಿಚಕ್ರ ವಾಹನ ಸೇರಿದಂತೆ ವಿವಿಧ ಸಲಕರಣೆಗಳನ್ನು ಶಾಸಕ ಎಂ.ಆರ್ ಮಂಜುನಾಥ್ ಅವರು ವಿತರಣೆ ಮಾಡಿದರು. ಈ ವೇಳೆ ಶಾಸಕ ಎಂ.ಆರ್ ಮಂಜುನಾಥ್ ಮಾತನಾಡಿ, ಎಲ್ಲರಂತೆ ವಿಕಲಚೇತನರು ಸಹ ಉತ್ತಮ ಬದುಕನ್ನು ಕಟ್ಟಿಕೊಳ್ಳಬೇಕು ಎಂಬ ಆಸೆ ಇರುತ್ತದೆ. ಇವರರಿಗೆ ನೆರವು ಹಾಗೂ ಸಹಕಾರಿಯಾಗುವಂತೆ ವಿವಿಧ ಪರಿಕರಗಳನ್ನು ವಿತರಣೆ ಮಾಡಲಾಗಿದೆ ಇದನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕು ಇದೊಂದು ಬೆಳವಣಿಯಾಗಿದೆ ಎಂದರು. ಇದೀಗ ಹನೂರಿನಲ್ಲಿ ವಿತರಣೆ ಯಾಗಿರುವ ವಿವಿಧ ಸಲಕರಣೆಗಳು ಜಿಲ್ಲೆಯಾದ್ಯಂತ ಇರುವ ಅರ್ಹ ವಿಕಲಚೇತನರಿಗು ಸಹ ದಕ್ಕ ಬೇಕಾಗಿದೆ ಮುಂದಿನ ದಿನಗಳಲ್ಲಿ ಹನೂರು ವಿಧಾನಸಭಾ ಕ್ಷೇತ್ರದ ಅರ್ಹ ಫಲವನುಗಳಿಗೆ ಮತ್ತಷ್ಟು ಪರಿಕರಗಳನ್ನು ಒದಗಿಸಿಕೊಡಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ ಎಂದು ಇದೆ ವೇಳೆ ಭರವಸೆ ನೀಡಿದರು. ಇದೆ ಸಮಯದಲ್ಲಿ ಜಿಲ್ಲಾ ವಿಕಲಚೇತನರ ಕಲ್ಯಾಣಧಿಕಾರಿ. ಡಾ ಕೆ ಎನ್ ಮಂಜುನಾಥ್, ಹಾಗೂ ಮುಖಂಡರುಗಳಾದ ಮಂಜೇಶ್ ಗೌಡ, ಚಿನ್ನವೆಂಕಟ್,ಎಸ್. ಆರ್ ಮಹದೇವ್,ಅಮೀನ್,ನಟರಾಜುಗೌಡ,ಗೋವಿಂದ,ರಾಚಪ್ಪ,ಶಿವು,ವೆಂಕಟೇಶ್,ಪ್ರಸನ್ನ, ಸೇರಿದಂತೆ ಇನ್ನಿತರರು ಇದ್ದರು.
- ಮಾಚಿದೇವರ ಜಯಂತಿ ದಿನವೇ ಸಮುದಾಯ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಲು ಶಾಸಕರ ದಿನಾಂಕವನ್ನು ನಿಗದಿಪಡಿಸಿ ಮುಂದಿನ ಕಾರ್ಯಕ್ರಮದ ಬಗ್ಗೆ ತಿಳಿಸಲಾಗುವುದು ಎಂದು ಮುಖಂಡ ವಿಜಯ್ ಕುಮಾರ್ ತಿಳಿಸಿದರು .... ಹನೂರು ಪಟ್ಟಣದ ಆರ್ ಎಂ ಸಿ ಆವರಣದಲ್ಲಿ ಜಿಲ್ಲಾ ಹಾಗೂ ತಾಲೂಕು ಘಟಕದ ಕಮಿಟಿ ಸಭೆ ಹಾಗೂ ಮಾಚಿದೇವರ ಜಯಂತಿ ಆಚರಣೆ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು . ಜಿಲ್ಲಾ ಕಮಿಟಿ ರಚನೆ ಮಾಡಲು ತಾಲೂಕಿನ ಸಮುದಾಯದ ಜನ ಅಭಿಪ್ರಾಯ ಸಂಗ್ರಹಿಸಿ ಮುಂದಿನ ಪದಾಧಿಕಾರಿಗಳ ಬಗ್ಗೆ ಆಯ್ಕೆ ಮಾಡಲು ಸಹಮತವಿದೆ ಜೊತೆಗೆ ಪಟ್ಟಣದಲ್ಲಿ ಫೆಬ್ರವರಿ 1,ರಂದು ಮಾಚಿದೇವರ ಜಯಂತಿ ದಿನವೇ ಪಟ್ಟಣದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲು ಶಾಸಕರ ದಿನಾಂಕವನ್ನು ನಿಗದಿಪಡಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು . ಸಮುದಾಯದ ದಶಕಗಳ ಬೇಡಿಕೆ : ಪಟ್ಟಣದಲ್ಲಿ ಸಮುದಾಯ ಭವನ ನಿರ್ಮಾಣ ಮಾಡಲು ಈ ಹಿಂದೆ ಜನಪ್ರತಿನಿಧಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು ಆದರೂ ಇಚ್ಛಾಶಕ್ತಿ ಕೊರತೆಯಿಂದ ನೆನೆಗುದಿಗೆ ಬಿದ್ದಿದ್ದ ಸಮುದಾಯ ಭವನಕ್ಕೆ ಶಾಸಕ ಎಂಆರ್ ಮಂಜುನಾಥ್ ಅವರು ಅನುದಾನ ನೀಡಿದ್ದಾರೆ ಅವರ ಉಪಸ್ಥಿತಿಯಲ್ಲಿಯೇ ಭವನ ನಿರ್ಮಾಣ ಮಾಡಲು ದಿನಾಂಕ ನಿಗದಿಪಡಿಸಿ ಹಲವು ವರ್ಷಗಳ ಬೇಡಿಕೆ ಈಡೇರಿಸಲು ತಳ ಸಮುದಾಯಗಳ ಬಗ್ಗೆ ಉತ್ತಮ ಅಭಿಪ್ರಾಯ ಹೊಂದಿರುವ ಶಾಸಕರು ಪಟ್ಟಣದಲ್ಲಿ ಉತ್ತಮವಾದ ಸಮುದಾಯ ಭವನ ನಿರ್ಮಾಣ ಮಾಡಲು ಸಮುದಾಯ ಜನತೆಗೆ ಭರವಸೆ ನೀಡಿದ್ದಾರೆ ಹೀಗಾಗಿ ಸರ್ಕಾರದಿಂದ ಸಿಗುವ ಅನುದಾನವನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಸಮುದಾಯ ಭವನ ನಿರ್ಮಾಣ ಮಾಡಲು ಸಹಕಾರ ನೀಡಬೇಕು ಪ್ರತಿಯೊಬ್ಬರು ಎಂದು ತಿಳಿಸಿದರು ಕಾರ್ಯಕ್ರಮದಲ್ಲಿ ಮೋಹನ್ ಕುಮಾರ್ ಕೃಷ್ಣಮೂರ್ತಿ ರುದ್ರಣ್ಣ ಮಾದೇವ್ ಕುಮಾರ್ ನಂದೀಶ್ ಶಾಂತರಾಜು ಹಾಗೂ ಜಿಲ್ಲೆಯ ತಾಲೂಕಿನ ವಿವಿಧ ಭಾಗದ ಮುಖಂಡರು ಉಪಸ್ಥಿತರಿದ್ದರು1
- ಶ್ರೀ ಬೈಯಮ್ಮ ತಾಯಿ ಹಾಗೂ ಆಂಜೆನೇಯ ಸ್ವಾಮಿ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ವಾಲಿ ಬಾಲ್ ಹಾಡುವ ಮೂಲಕ ಪಂದ್ಯಾವಳಿಗೆ ಶಾಸಕ ಎಂ.ಆರ್ ಮಂಜುನಾಥ್ ರವರು ಚಾಲನೆ ನೀಡಿದರು. ತಾಲೂಕಿನ ರಾಮಪುರದ ಶ್ರೀ ಬೈಯಮ್ಮ ತಾಯಿ ಹಾಗೂ ಆಂಜೆನೇಯ ಸ್ವಾಮಿ ಟ್ರಸ್ಟ್ ವತಿಯಿಂದ ಇಂದಿರಾ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ರಾಮಪುರದಲ್ಲಿ ಆಯೋಜಿಸಿದ್ದ ವಾಲಿ ಬಾಲ್ ಪಂದ್ಯಾವಳಿಗೆ ಚಾಲನೆ ನೀಡಿ ನಂತರ ಮಾತನಾಡಿದರು.. ಇದೆ ಸಮಯದಲ್ಲಿ ಮುನೇಶ್, ಕೃಷ್ಣಮೂರ್ತಿ,ಎಸ್ ಕುಮಾರ್, ವಿಶ್ವ , ಶಿವ, ಎಂ.ಆರ್ ಬಾಬು, ಮಾಜಿ ಸೈನಿಕರಾದ ಮಾದೇಶ್, ರಾಜೇಂದ್ರ, ಮುತ್ತುರಾಜಮ್ಮ, ಮೂರ್ತಿ,ಪಾಳ್ಯ ಸೀನಾ,ಚಿನ್ನವೆಂಕಟ್, ವಿಜಯ್ ಕುಮಾರ್, ನಟರಾಜು ಗೌಡ, ಗೋವಿಂದ ಸೇರಿದಂತೆ ಇನ್ನಿತರ ಮುಖಂಡರುಗಳು ಇದ್ದರು..4
- *ಭಾರತ ನಲ್ಲಿ ವೈರಲ್*1
- ಶಿಡ್ಲಘಟ್ಟ: ಜಯಂತಿಗಳ ಪೂರ್ವಭಾವಿ ಸಭೆಗೆ ಗೈರಾದ ಅಧಿಕಾರಿಗಳಿಗೆ ನೋಟಿಸ್ ಜಾರಿ! ಶಿಡ್ಲಘಟ್ಟ ತಹಶೀಲ್ದಾರ್ ಗಗನ ಸಿಂಧು ಕಟ್ಟುನಿಟ್ಟಿನ ಸೂಚನೆ!1
- ಶ್ರೀನಿವಾಸಪುರ ಪಟ್ಟಣದ ಎಂ.ಜಿ. ರಸ್ತೆಯಲ್ಲಿ ನಡೆಯುತ್ತಿರುವ ಅವರೆಕಾಯಿ ವಹಿವಾಟು ವಿರೋಧಿಸಿ ಸುದ್ದಿ ಗೋಷ್ಠಿ1
- ಮಲ್ಲೂರಹಟ್ಟಿ ಬಳಿ ಟ್ರ್ಯಾಕ್ಟರ್ ಮತ್ತು ಬೈಕ್ ನಡುವೆ ಬೀಕರ ಅಪಘಾತ ನಡೆದು ಮಲ್ಲೂರಹಟ್ಟಿ ಗ್ರಾಮದ ಬೈಕ್ ಸವಾರ 19 ವರ್ಷದ ತಿಪ್ಪೇಸ್ವಾಮಿ ಸ್ಥಳದಲ್ಲೆ ಮೃತಪಟ್ಟಿದ್ದು ಇನ್ನೊಬ್ಬ ಗಾಯಗೊಂಡಿದ್ದು ಚಿಕಿತ್ಸೆ ಪಡೆಯುತ್ತಿದ್ದಾನೆ1
- ಚಿತ್ರದುರ್ಗ ಜಿಲ್ಲೆಯ ಭದ್ರಾ ಮೇಲ್ದಂಡೆ ಯೋಜನೆ ಹಣ ಬಿಡುಗಡೆಗೆ ಒತ್ತಾಯಿಸಿ ಕೇಂದ್ರ ಸರ್ಕಾರದ ವಿರುದ್ಧ ದೆಹಲಿಯ ಜಂತರ್ ಮಂತರ್ ನಲ್ಲಿ ರೈತರಿಂದ ಪ್ರತಿಭಟನೆ: ರಾಜ್ಯ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ಚಳ್ಳಕೆರೆ:ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರಾಜಕೀಯ ಗುದ್ದಾಟಗಳಿಂದಾಗಿ ಭದ್ರಾ ಮೇಲ್ದಂಡೆ ಯೋಜನೆ ವಿಳಂಬವಾಗುತ್ತಿದ್ದು ಮಧ್ಯ ಕರ್ನಾಟಕದ ಚಿತ್ರದುರ್ಗ ತುಮಕೂರು ದಾವಣಗೆರೆ ಚಿಕ್ಕಮಗಳೂರು ಜಿಲ್ಲೆಗಳ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ಆಕ್ರೋಶ ವ್ಯಕ್ತಪಡಿಸಿದರು. ನಗರದ ಪ್ರವಾಸಿ ಮಂದಿರದಲ್ಲಿ ರೈತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಕೇಂದ್ರ ಸರ್ಕಾರ ಈಗಾಗಲೇ ಮೇಲ್ದಂಡೆ ಯೋಜನೆ ಕಾಮಗಾರಿಗೆ 5300 ಕೋಟಿ ಹಣವನ್ನು ಬಜೆಟ್ನಲ್ಲಿ ಘೋಷಣೆ ಮಾಡಿ ಹಲವು ವರ್ಷಗಳ ಕಳೆದರೂ ಸಹ ಇದುವರೆಗೂ ಬಿಡುಗಡೆ ಮಾಡಿಲ್ಲ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವುದರಿಂದ ಈ ಹಣ ಬಿಡುಗಡೆ ಮಾಡದೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರಾಜಕೀಯ ಬೆಳೆ ಬೇಯಿಸಿಕೊಂಡು ಕಾಲಹರಣ ಮಾಡಿಕೊಂಡು ರೈತರ ಜೀವನದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಈಗಾಗಲೇ ರೈತ ಸಂಘ ಜಿಲ್ಲೆಯ ಆರು ತಾಲೂಕುಗಳಲ್ಲಿ ಸಭೆ ನಡೆಸಿದ್ದು ಮುಂದಿನ ಕೇಂದ್ರ ಸರ್ಕಾರದ ಬಜೆಟ್ ಅಧಿವೇಶನದ ವೇಳೆಗೆ ದೆಹಲಿಯ ಜಂತರ್ ಮಂತರ್ ನಲ್ಲಿ ಎಲ್ಲಾ ರೈತ ಸಂಘಟನೆಗಳ ಸದಸ್ಯರು ಒಗ್ಗಟ್ಟಾಗಿ ಯೋಜನೆಯ ಹಣ ಬಿಡುಗಡೆ ಮಾಡುವಂತೆ ಪ್ರತಿಭಟನೆಯನ್ನು ನಡೆಸಲಾಗುವುದು ಎಂದು ತಿಳಿಸಿದರು. ಸಂಘಟನೆಯ ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ ಮಾತನಾಡಿ ಚಿತ್ರದುರ್ಗ ಜಿಲ್ಲೆ, ಬರಪೀಡಿತ ಜಿಲ್ಲೆಯಾಗಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದರು ರಾಜಕೀಯ ಮುಖಂಡರು ಕೇವಲ ಚುನಾವಣಾ ಸಂದರ್ಭದಲ್ಲಿ ಮಾತ್ರ ರೈತರನ್ನು ವಲೈಸಲು ಭದ್ರಾ ಮೇಲ್ದಂಡೆ ಯೋಜನೆ ಜಾರಿಯ ಬಗ್ಗೆ ಮಾತನಾಡುತ್ತಾರೆ ಆದರೆ ಇದುವರೆಗೂ ಜಾರಿಗೆ ತರುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಂಸದರು ಶಾಸಕರು ವಿಫಲರಾಗಿದ್ದಾರೆ ಈ ಭಾಗದ ರೈತರು ಶೇಂಗಾ ತೊಗರಿ ಮೆಕ್ಕೆಜೋಳ ಈರುಳ್ಳಿ ಟೊಮೆಟೊ ಗಳಂತಹ ಬೆಳೆಗಳನ್ನು ಅವಲಂಬಿಸಿದ್ದು ಮಳೆಯ ಅಭಾವದಿಂದ ರೈತರು ನಷ್ಟ ಅನುಭವಿಸುವಂತಾಗಿದೆ ಭದ್ರಾ ಮೇಲ್ದಂಡೆ ಯೋಜನೆ ಸಮರ್ಪಕವಾಗಿ ಜಿಲ್ಲೆಯಲ್ಲಿ ಜಾರಿಯಾದರೆ ಜಿಲ್ಲೆಯ ಕೆರೆಗಳು ತುಂಬಿ ರೈತರಿಗೆ ಜೀವನಾಡಿ ಯಾಗುತ್ತವೆ ಇದುವರೆಗೂ ಸುಮಾರು 10.000 ಕೋಟಿ ಭದ್ರಾ ಮೇಲ್ದಂಡೆ ಯೋಜನೆಗೆ ಖರ್ಚಾಗಿದ್ದು ಆದರೂ ಸಹ ಯೋಜನೆ ಪೂರ್ಣಗೊಳ್ಳದೆ ವಿಳಂಬವಾಗುತ್ತಿದೆ ಯೋಜನೆ ವಿಳಂಬವಾದಂತೆಲ್ಲ ಸರ್ಕಾರಕ್ಕೆ ಹೆಚ್ಚಿನ ಹೊರೆಯಾಗುತ್ತಿದ್ದು ತ್ವರಿತ ಗತಿಯಲ್ಲಿ ಕೇಂದ್ರ ಸರ್ಕಾರ ತನ್ನ ಪಾಲಿನ 5300 ಕೋಟಿ ಬಿಡುಗಡೆ ಮಾಡಬೇಕು ಹಾಗೂ ರಾಜ್ಯ ಸರ್ಕಾರ ತನ್ನ ಪಾಲಿನ ಹಣವನ್ನು ಬಿಡುಗಡೆಗೊಳಿಸಿದರೆ ಭದ್ರ ಮೇಲ್ದಂಡೆ ಯೋಜನೆ ಪೂರ್ಣಗೊಂಡು ರೈತರ ಬಾಳು ಹಸನಾಗುತ್ತದೆ ಭದ್ರಾ ಮೇಲ್ದಂಡೆ ಯೋಜನೆ ವಿಚಾರದಲ್ಲಿ ಮುಂದಿನ ದಿನಗಳಲ್ಲಿ ನೀರಾವರಿ ಸಂಘಟನೆಗಳ ಸದಸ್ಯರು ವಿವಿಧ ಸಂಘಟನೆಗಳ ರೈತರು ಒಗ್ಗಟ್ಟಾಗಿ ಹೋರಾಟ ಮಾಡಿ ಜಿಲ್ಲೆಯನ್ನು ಬಂದ್ ಮಾಡುವ ಮೂಲಕ ಸರ್ಕಾರಗಳಿಗೆ ಎಚ್ಚರಿಕೆ ನೀಡಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸಂಘಟನೆಯ ರೈತ ಮುಖಂಡರು ಉಪಸ್ಥಿತರಿದ್ದರು.1
- ಹನೂರು : ಹನೂರು ವಿಧಾನ ಸಭಾ ಕ್ಷೇತ್ರದ ಮಲೆ ಮಹದೇಶ್ವರ ಮಂಡಲದ ನೂತನ ಮಂಡಲ ಅಧ್ಯಕ್ಷರನ್ನಾಗಿ ಮಲೆ ಮಹದೇಶ್ವರ ಬೆಟ್ಟದ ಎಂ. ಮುರುಗೇಶ್ ರವರನ್ಮು ನೇಮಕ ಮಾಡಿ ಜಿಲ್ಲಾಧ್ಯಕ್ಷ ನಿರಂಜನ್ ಕುಮಾರ್ ಆದೇಶ ಪತ್ರವನ್ನು ವಿತರಿಸಿದ್ದಾರೆ. ಭಾರತೀಯ ಜನತಾ ಪಾರ್ಟಿ ಜಿಲ್ಲಾಧ್ಯಕ್ಷರಾದ ನಿರಂಜನ್ ಕುಮಾರ್ ರವರು ಶುಕ್ರವಾರ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಆದೇಶ ಪ್ರತಿ ವಿತರಣೆ ಮಾಡಿ ಶುಭ ಹಾರೈಸಿದರು. ಆದೇಶ ಪ್ರತಿ ಸ್ವೀಕರಿಸಿ ನಂತರ ಮಾತನಾಡಿದ ಮುರುಗೇಶ್ ಪಕ್ಷ ನನಗೆ ವಹಿಸಿದಂತಹ ಜವಾಬ್ದಾರಿಯನ್ನು ಅತ್ಯಂತ ಪ್ರಾಮಾಣಿಕತೆಯಿಂದ ನಿರ್ವಹಿಸುತ್ತೇನೆ. ಪಕ್ಷಕ್ಕೆ ನಿಷ್ಠೆಯಿಂದ ದುಡಿದು ಬೂತ್ ಮಟ್ಟದಲ್ಲೇ ಪಕ್ಷ ಸಂಘಟನೆಗೆ ಹೆಚ್ಚು ಒತ್ತುಕೊಟ್ಟು ನಮ್ಮ ಪಕ್ಷದ ಯಾವುದೇ ಅಭ್ಯರ್ಥಿಗಳಾದವರ ಪರವಾಗಿ ಅತ್ಯಂತ ಪ್ರಾಮಾಣಿಕತೆ ಕೆಲಸ ಮಾಡುತ್ತೇನೆ. ಪ್ರಮುಖವಾಗಿ ಹಳ್ಳಿ ಹಳ್ಳಿಗಳಲ್ಲಿ ಹಿರಿಯರ ಸಹಕಾರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆಗೆ ಮುಂದಾಗುತ್ತೇನೆ ಎಂದರು. ಈ ಸಂದರ್ಭದಲ್ಲಿ ಮಲೆ ಮಹದೇಶ್ವರ ಮಂಡಲ ಪ್ರಧಾನಕಾರ್ಯದರ್ಶಿ ಗಳಾದ ಬಿದರಳ್ಳಿ ಶಿವಕುಮಾರ, ದಂಟಳ್ಳಿ ಮುರುಗೇಶ್ ಚಾಮರಾಜನಗರ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರದ ಎಲ್ಲಾ ಮಂಡಲ ಅಧ್ಯಕ್ಷರು ಮತ್ತು ಪ್ರಧಾನಕಾರ್ಯದರ್ಶಿಗಳು ಉಪಸ್ಥಿತರಿದ್ದರು.1