ಕಲ್ಯಾಣ ಕರ್ನಾಟಕದ ಅದ್ಭುತ ಪ್ರೇಕ್ಷಣೀಯ ಸ್ಥಳಗಳು.......,....,...... ಬಳ್ಳಾರಿ,ಸೆ.15 : ಕಲ್ಯಾಣ ಕರ್ನಾಟಕವು ಕರ್ನಾಟಕದ ಆಡಳಿತ ವಿಭಾಗವಾಗಿದೆ ಇದು ಈಶಾನ್ಯ ಕರ್ನಾಟಕದಲ್ಲಿದೆ. ಇದು 1948ರ ವರೆಗೆ ಹೈದರಾಬಾದ್ ಕರ್ನಾಟಕ ರಾಜ್ಯದಲ್ಲಿ ಕನ್ನಡ-ಮಾತನಾಡುವ ಭಾಗವಾಗಿತ್ತು ಮತ್ತು ಹೈದರಾಬಾದ್ ನಿಜಾಮನ ಆಳ್ವಿಕೆಗೆ ಒಳಪಟ್ಟಿತ್ತು. ಭಾರತೀಯ ಒಕ್ಕೂಟದೊಂದಿಗೆ ವಿಲೀನಗೊಂಡ ನಂತರ ಈ ಪ್ರದೇಶವು 1956 ರವರೆಗೆ ಹೈದರಾಬಾದ್ ರಾಜ್ಯದ ಭಾಗವಾಗಿತ್ತು. ಹೈದರಾಬಾದ್-ಕರ್ನಾಟಕ ಪ್ರದೇಶವು ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ಕಲಬುರಗಿ ಇಂದಿನ ಕರ್ನಾಟಕ ರಾಜ್ಯದಲ್ಲಿವೆ. ಹೈದರಾಬಾದ್-ಕರ್ನಾಟಕ ಪ್ರದೇಶವು ಭಾರತದ ಎರಡನೇ ಅತಿದೊಡ್ಡ ಶುಷ್ಕ ಪ್ರದೇಶವಾಗಿದೆ. ಈ ಪ್ರದೇಶವನ್ನು ‘ಕಲ್ಯಾಣ ಕರ್ನಾಟಕ’ ಎಂದು ಘೋಷಿಸಲಾಗಿದೆ, 17 ಸೆಪ್ಟೆಂಬರ್ 1948 ಹೈದರಾಬಾದ್ ರಾಜ್ಯವು ಇತಿಹಾಸದಲ್ಲಿ ಕರ್ನಾಟಕ ರಾಜ್ಯವು ಭಾರತೀಯ ಒಕ್ಕೂಟದಲ್ಲಿ ವಿಲೀನಗೊಂಡಿತು. ನಾನು 2008-2011ರವರೆಗೆ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರಾಗಿ ಹಾಗೂ ಕೆಕೆಆರ್‌ಡಿಬಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದೆ. ಆಗ ಈ ಭಾಗವು ‘ಅತೀ ಹಿಂದುಳಿದ ಪ್ರದೇಶ' ಎಂಬ ಮಾತು ಜನ ಜನಿತವಾಗಿತ್ತು. ಆದರೆ ಇಲ್ಲಿ ಕೆಲಸ ಮಾಡುವಾಗ ಈ ಭಾಗದ ಸಾಂಸ್ಕೃತಿಕ, ಐತಿಹಾಸಿಕ ಮಹತ್ವದ ಅರಿವುಂಟಾಯಿತು. ಈ ಐತಿಹಾಸಿಕ ದಿನದ 78ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕದ ಪ್ರವಾಸೋದ್ಯಮದ ಸಾಧ್ಯತೆಗಳು ಹಾಗೂ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಹಂಚಿಕೊಳ್ಳಲು ನನಗೆ ಸಂತೋಷವಾಗುತ್ತಿದೆ. ಇಂದಿಗೂ ಅನೇಕರಿಗೆ ತಿಳಿದಿಲ್ಲದ ಈ ಭಾಗವು ತನ್ನ ವೈವಿಧ್ಯಮಯ ಇತಿಹಾಸ, ಕಲೆ, ಸಂಸ್ಕೃತಿ, ವಾಸ್ತುಶಿಲ್ಪ, ಪಾರಂಪರಿಕ ತಾಣಗಳು ಹಾಗೂ ನೈರ್ಗಿಕ ಸೌಂರ್ಯದಿAದ ಅಪಾರ ಪ್ರವಾಸೋದ್ಯಮ ಸಾಮರ್ಥ್ಯವನ್ನು ಹೊಂದಿದೆ. ಅದನ್ನು ಹಂಚಿಕೊಳ್ಳುವ ಪ್ರಯತ್ನವಾಗಿದೆ ಈ ಲೇಖನ. *7000 ವರ್ಷದ ಇತಿಹಾಸ-ರಾಮಾಯಣ ಕಾಲದ ಸ್ಮೃತಿಗಳು:* ಯುನೆಸ್ಕೋ ವಿಶ್ವ ಪಾರಂಪರಿಕ ತಾಣವಾದ ಹಂಪಿ ಜಗತ್ತಿನ ಪ್ರವಾಸಿಗರ ಮೆಚ್ಚಿನ ಹಾಗೂ ಹೆಮ್ಮೆಯ ತಾಣವಾಗಿದೆ. ವಿಶ್ವಪರಂಪರೆಯಲ್ಲಿ ಇದು ಪ್ರೇಕ್ಷಣೀಯ ಸ್ಥಳವಾಗಿದ್ದು, ದೇಶ-ವಿದೇಶಿಗರನ್ನು ಆಕರ್ಷಿಸುತ್ತಿದೆ. ಇಲ್ಲಿ ಸ್ಥಾಪಿಸಲಾಗಿರುವ ಹಂಪಿಯ ಕಲ್ಲಿನ ರಥ ಹಾಗೂ ಇತರ ಭವ್ಯ ಸ್ಮಾರಕಗಳು ಪ್ರವಾಸಿಗರ ಕಣ್ಮನ ಸೆಳೆಯುತ್ತದೆ. ಭಾರತದ ಹೆಮ್ಮೆಯ ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತವನ್ನು ತಿಳಿದ ಹೆಚ್ಚಿನ ಜನ ಅಯೋಧ್ಯಾ ನಗರಿ ಹಾಗೂ ರಾವಣನ ಲಂಕೆ ಬಗ್ಗೆ ತಿಳಿದು ಕೊಂಡಿರುತ್ತಾರೆ. ಇದಕ್ಕೆ ಸಂಬAಧಿಸಿದAತೆ ಮತ್ತೊಂದು ಮಹತ್ವದ ತಾಣ ಕರ್ನಾಟಕದಲ್ಲಿದೆ. ಕಿಷ್ಕಿಂಧೆ (ಕೊಪ್ಪಳ ಜಿಲ್ಲೆ) ನಗರಿಯಲ್ಲಿ ಶ್ರೀರಾಮನು ಸುಗ್ರೀವ ರಾಜನಿಗೆ ಭೇಟಿಯಾದನೆಂದು ಮತ್ತು ಶ್ರೀರಾಮನ ಪರಮಭಕ್ತನಾದ ಹನುಮಂತನು ಇಲ್ಲಿನ ಅಂಜನಾದ್ರಿ ಬೆಟ್ಟದಲ್ಲಿ ಜನ್ಮತಾಳಿದನೆಂದು ತಿಳಿದು ಬರುತ್ತದೆ. ಸುಮಾರು 600 ಮೆಟ್ಟಲುಗಳನ್ನೇರಿ ಅಂಜನಾದ್ರಿಯನ್ನು ಹತ್ತಿದರೆ ಬೆಣಚು ಕಲ್ಲಿನ ದೊಡ್ಡ ಬಂಡೆಗಲ್ಲುಗಳಿAದ ಕೂಡಿದ ಬೆಟ್ಟ ನಮಗೆ ಹನುಮಂತನ ಬೃಹತ್ ವ್ಯಕ್ತಿತ್ವದೊಂದಿಗೆ ಗೋಚರಿಸುತ್ತದೆ. ಅಲ್ಲದೇ ದಕ್ಷಿಣ ಭಾರತದ ಮಾನಸ ಸರೋವರವೆಂದು ಕರೆಸಿಕೊಳ್ಳುವ ಪಂಪಾಸರೋವರವು ಬಿಳಿಬಣ್ಣದ ತಾವರೆಗಳಿಂದ ಆವೃತವಾಗಿರುವ ಮನಮೋಹಕ ದೃಶ್ಯ ಲಭಿಸುತ್ತದೆ. *ಹಂಪಿ (ವಿಜಯನಗರ ಜಿಲ್ಲೆ):* ವಿಜಯನಗರ ಸಾಮ್ರಾಜ್ಯದ ಅವಶೇಷಗಳು, ವಿರೂಪಾಕ್ಷ ದೇವಸ್ಥಾನ ಮತ್ತು ಸುಗ್ರೀವನ ಗುಹೆ, ಹಜಾರರಾಮನ ದೇವಾಲಯ, ಪಂಪಾ ಸರೋವರ - ಇವು ರಾಮಾಯಣದ ಅನೇಕ ದೃಶ್ಯಗಳೊಂದಿಗೆ ಸಂಬAಧ ಹೊಂದಿವೆ. ಹಂಪಿಯು ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು ಘೋಷಿಸಿದ ಸ್ಮಾರಕಗಳ ಗುಂಪನ್ನು ಹೊಂದಿದೆ. ವಾರ್ಷಿಕ ಹಂಪಿ ಉತ್ಸವ ಅಥವಾ ‘ವಿಜಯ ಉತ್ಸವ’ವನ್ನು ವಿಜಯನಗರ ಆಳ್ವಿಕೆಯಿಂದಲೂ ಆಚರಿಸಲಾಗುತ್ತಿದೆ. ಇದನ್ನು ಕರ್ನಾಟಕ ಸರ್ಕಾರವು ನಾಡ ಹಬ್ಬ (ಹಬ್ಬ) ಎಂದು ಆಯೋಜಿಸುತ್ತದೆ. ಇನ್ನು ಹಂಪಿಯ ಶ್ರೀ ವಿರುಪಾಕ್ಷ ದೇವಾಲಯದ ಪಕ್ಕದಲ್ಲಿ ಹರಿಯುವ ತುಂಗಭದ್ರಾ ನದಿ ಪ್ರಕೃತಿ ಸೌಂದರ್ಯಕ್ಕೆ ಮಾರು ಹೋಗದವರುಂಟೆ? *3000 ವರ್ಷಗಳಷ್ಟು ಹಳೆಯದಾದ ಆದಿ ಮಾನವರ ನೆಲೆಗಳು:* ಭಾರತೀಯ ಪುರಾತತ್ವ ಮತ್ತು ಸರ್ವೇಕ್ಷಣಾ ಇಲಾಖೆಯ ವಿಶ್ವ ಪರಂಪರೆಯ ಪ್ರೇಕ್ಷಣೀಯ ಸ್ಥಳಗಳಲ್ಲಿ ಹಿರೇಬೆನಕಲ್ ಕೂಡ ಒಂದಾಗಿದೆ. ಗಂಗಾವತಿ ತಾಲೂಕಿನ ಹಿರೇಬೆನಕಲ್ ಗ್ರಾಮದ ಹತ್ತಿರ ಸುಮಾರು 10,000 ಹೆಕ್ಟೇರುಗಳಲ್ಲಿ ಹಬ್ಬಿಕೊಂಡಿರುವ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಆನೆಗುಂದಿಗೆ ಹತ್ತಿರದಲ್ಲಿರುವ ಬೆಟ್ಟದ ತುದಿಯಲ್ಲಿ ಸುಮಾರು 3000 ವರ್ಷಗಳಷ್ಟು ಹಳೆಯದಾದ ಆದಿಮಾನವರ ನಿವೇಶನಗಳಿವೆ. ಒಂದು ಭಾಗದಲ್ಲಿ ತುಂಗಭದ್ರಾ ಜಲಾಶಯದ ಬಲದಂಡೆ ಕಾಲುವೆ ಹರಿಯುತ್ತಿದ್ದು, ಇನ್ನೊಂದು ಭಾಗದಲ್ಲಿ ಬೆಟ್ಟಗಳಿಂದಾವೃತವಾಗಿರುವ ಭೂಭಾಗ, ಭತ್ತದ ಗದ್ದೆಗಳಿಂದ ಹಾಗೂ ತೆಂಗಿನ ತೋಪುಗಳಿಂದ ಹರಡಿಕೊಂಡಿದೆ. ಈ ನೆಲೆಗಳಿಗೆ ಶಿಲಾಸಮಾಧಿಗಳೆಂದು ಕರೆಯುತ್ತಾರೆ. ಆದರೆ, ಸ್ಥಳೀಯವಾಗಿ ಇದಕ್ಕೆ ಮೊರೆರ ಮನೆಗಳೆಂದು ಮತ್ತು ಅಲ್ಲಿರುವ ಬೆಟ್ಟಕ್ಕೆ ನಗಾರಿ ಗುಡ್ಡವೆಂದು ಕರೆಯುವುದುಂಟು. ಇದರಲ್ಲಿ ಆಶ್ಚರ್ಯಕರವಾದ ಸಂಗತಿ ಎಂದರೆ ನಮ್ಮ ಪೂರ್ವಿಕರು ದೊಡ್ಡ ಬಂಡೆಗಲ್ಲುಗಳನ್ನು ಕೊರೆದು 10*10 ಅಳತೆಯ ಕಲ್ಲುಗಳನ್ನು ಯಾವುದೇ ರೀತಿಯ ಭಾರ ಎತ್ತುವ ಯಂತ್ರಗಳ ಸಹಾಯವಿಲ್ಲದೆ ಜೋಡಿಸಿ ಸಮಾಧಿಗಳನ್ನು ನಿರ್ಮಾಣ ಮಾಡಿದ್ದು ಅವರ ತಂತ್ರಜ್ಞಾನಕ್ಕೆ ಸಾಕ್ಷಿಯಾಗಿದೆ. ಇವತ್ತಿನ ವೈಜ್ಞಾನಿಕ ಉಪಕರಣಗಳನ್ನು ಬಳಸಿಯೂ ನಮ್ಮ ಕಟ್ಟಡಗಳು ನೂರು ವರ್ಷ ಉಳಿಯುವುದು ಕಷ್ಟವಿದೆ. ಅಲ್ಲದೇ, ಅಲ್ಲಿನ ಬಂಡೆಗಲ್ಲಿನ ಮೇಲೆ ಸಿಕ್ಕಿರುವ ಸಂಗೀತ ವಿವರಗಳು ಮತ್ತು ಅವುಗಳಿಂದ ‘ನಗಾರಿ’ ಎಂಬ ವಾದ್ಯದ ಕಲ್ಪನೆ ಅದ್ಭುತವಾಗಿದೆ. *ಮಸ್ಕಿ (ರಾಯಚೂರು ಜಿಲ್ಲೆ):* ಅಶೋಕನ ನಾಮಾಂಕಿತವಿರುವ ಶಾಸನವಿರುವ ಸ್ಥಳ, ಜೊತೆಗೆ ಮೆಗಾಲಿಥಿಕ್ ಸಮಾಧಿಗಳು ಇತರೆ ಅವಶೇಷಗಳು ದೊರಕಿವೆ. 4000 ವರ್ಷಗಳ ಹಿಂದೆಯೆ ಜನವಸತಿ ಇದ್ದ ಬಗ್ಗೆ ಸಂಶೋಧನೆಗಳು ದೃಢಿಕರಿಸಿವೆ. *ಸಂಗನಕಲ್ಲು, ಕುಪ್ಪಗಲ್ಲು (ಬಳ್ಳಾರಿ ಜಿಲ್ಲೆ):* ನವಾಶಿಲಾಯುಗ ಸಂಸ್ಕೃತಿಯ ಕಲ್ಲಿನಾಯುಧಗಳು, ಕುಂಬಾರಿಕೆ ಮಾಡಿದ ಸ್ಥಳ, ಕಲ್ಲಿನಾಯುಧಗಳನ್ನು ತಯಾರಿಸುವ ಕರ್ಖಾನೆಯ ಸ್ಥಳವಾಗಿದೆ. ಕಲ್ಲಿನ ವೃತ್ತಗಳು, ಕಬ್ಬಿಣ ಯುಗದ ಕುರುಹುಗಳು ಶೋದವಾಗಿವೆ. ಇದು ದಕ್ಷಿಣ ಭಾರತದ ಅತ್ಯಂತ ಹಳೆಯ ನೆಲೆಯಾಗಿದೆ. ಆರಂಭಿಕ ಕೃಷಿ ಮಾಡಿದ ಸ್ಥಳವಾಗಿದೆ. ಸಾಕು ಪ್ರಾಣಿಗಳ ಸಾಕಾಣಿಕೆ ಮಾಡಿದ ನೆಲೆಯಾಗಿದೆ. ಬೂದಿ ದಿಬ್ಬಗಳು ಇಲ್ಲಿ ದೊರಕಿವೆ. ಬೃಹತ್ ಶಿಲಾಯುಗ ಸಂಸ್ಕೃತಿ ಸಮಾಧಿಗಳನ್ನು ಧಾರ್ಮಿಕ ಅಥವಾ ಖಗೋಳ ವೀಕ್ಷಣೆಗಾಗಿ ಈ ರಚನೆಗಳನ್ನು ಬಳಸಿರಬಹುದು. ಉದಾ: ಬ್ರಹ್ಮಗಿರಿಯಲ್ಲಿ ಸೂರ್ಯೋದಯದೊಂದಿಗೆ ಕಲ್ಲುಗಳು ಹೊಂದಾಣೆ ಹೊಂದುತ್ತವೆ. ನಿರ್ಮಾಣ ತಂತ್ರ: ಕಲ್ಲುಗಳನ್ನು ದೂರದಿಂದ ಸಾಗಿಸಿ ಎತ್ತಲಾಗಿದೆ. ಕರ್ನಾಟಕದಲ್ಲೂ ಬೃಹತ್ ಕಲ್ಲುಗಳನ್ನು ಸೈಡಿಂಗ್/ಲೆವರ್ ವಿಧಾನದಿಂದ ಸ್ಥಾಪಿಸಿರಬಹುದು. ಗಂಗಾವತಿ ಬಳಿ ಪತ್ತೆಯಾದ ತಾಮ್ರ ಯುಗದ ಗವಿಚಿತ್ರ ಮತ್ತು ಶಿಲಾಶಾಸನ ಸುಮಾರು 3000 ವರ್ಷ ಹಳೆಯದು ಎಂದು ಅಂದಾಜಿಸಲಾಗಿದೆ. ಇಲ್ಲಿ ಕೆಂಪು ವರ್ಣದ ಚಿತ್ರಗಳು, ಶಿಲಾ ಶಾಸನಗಳು ಮತ್ತು ಕಲ್ಲುಗುಳಿಗಳು ಕಂಡುಬAದಿವೆ, ಇದು ಆದಿಮಾನವನ ವಾಸಸ್ಥಾನ ಮತ್ತು ಸಂಸ್ಕೃತಿಯ ಸೂಚಕವಾಗಿದೆ. *2000 ವರ್ಷದ ಇತಿಹಾಸ – ಬೌದ್ಧಧರ್ಮ ಪ್ರಚಾರ:* ಕರ್ನಾಟಕದಲ್ಲಿ ಬೌದ್ಧಧರ್ಮದ ಉಗಮ ಮತ್ತು ಪ್ರಸಾರ ಕ್ರಿ.ಪೂ. 3ನೇ ಶತಮಾನದಿಂದ ಆರಂಭವಾಯಿತು. ಅಶೋಕನ ಕಾಲದಲ್ಲಿ ಬೌದ್ಧಧರ್ಮ ಭಾರತದಾದ್ಯಂತ ಹರಡಿದಂತೆ ಕರ್ನಾಟಕದಲ್ಲೂ ಅದರ ಚಿಹ್ನೆಗಳು ಕಾಣಿಸಿಕೊಂಡವು. ಸನ್ನತಿ ಒಂದು ಐತಿಹಾಸಿಕ ಮತ್ತು ಪ್ರೇಕ್ಷಣೀಯ ಸ್ಥಳವಾಗಿದ್ದು, ಇದು ಚಿತ್ತಾಪೂರ ತಾಲೂಕಿನ ನಾಲವಾರ ರೈಲ್ವೆ ನಿಲ್ದಾಣದಿಂದ ಸುಮಾರು 18 ಕಿ.ಮೀ. ದೂರದ ಭೀಮಾ ನದಿಯ ದಂಡೆಯ ಮೇಲಿದೆ. ಭಾರತ ಸರ್ಕಾರದ ಸರ್ವೇಕ್ಷಣಾ ಇಲಾಖೆ ಇಲ್ಲಿ ಭೂಉತ್ಪನನ ಕಾರ್ಯ ಕೈಗೊಂಡಿದ್ದು, ಹಲವಾರು ಪ್ರಾಚೀನ ಐತಿಹಾಸಿಕ ಅವಶೇಷಗಳು ದೊರೆತಿವೆ. ಇಲ್ಲಿ (ಕನಗನಹಳ್ಳಿ ಗ್ರಾಮ) ದೊರೆತ ಬೌದ್ಧ ಸ್ತೂಪ ಉತ್ತರ ಭಾರತದ ಸಾಂಚಿ ಸ್ತೂಪವನ್ನು ಹೋಲುವಂತಿದೆ. ಈ ಭಾಗ ಶಾತವಾಹನರ ಕಾಲದಿಂದಲೂ ಮತ್ತು ಮೌರ್ಯರ ಆಶೋಕನ ಕಾಲದಲ್ಲಿ ಪ್ರಸಿದ್ದಿ ಪಡೆದುದಾಗಿದೆಯೆಂದು ತಿಳಿದು ಬರುತ್ತದೆ. ಇಲ್ಲಿನ ಅವಶೇಷಗಳಲ್ಲಿ ಅಶೋಕರಾಯನ ಹೆಸರಿನ ಉಲ್ಲೇಖವಿದೆ. ಈ ಪ್ರದೇಶವನ್ನು ಜಾಗತಿಕ ಮಟ್ಟದಲ್ಲಿ “ಬುದ್ಧಿಸ್ಟ್ ಸರ್ಕ್ಯೂಟ್” ಆಗಿ ಮುಂಚೂಣಿಗೆ ತರಲು ಹಾಗೂ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ರಾಜ್ಯ ಸರ್ಕಾರದಿಂದ ಹಲವಾರು ಉಪಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. *ಸನ್ನತಿ (ಕಲಬುರಗಿ ಜಿಲ್ಲೆ):* ಮಹಾಸ್ತೂಪ (ಕ್ರಿ.ಪೂ. 2ನೇ ಶತಮಾನ), ಅಶೋಕನ ಶಾಸನಗಳು, ಬುದ್ಧನ ಅವಶೇಷಗಳು, ಇಲ್ಲಿ ಪತ್ತೆಯಾದ ಬುದ್ಧನ ಕಂಚಿನ ಪ್ರತಿಮೆ (1800 ವರ್ಷ ಹಳೆಯದು) ಪ್ರಸಿದ್ಧವಾಗಿದೆ *ಪಟ್ಟದಕಲ್ಲು:* ದೇವಸ್ಥಾನಗಳ ಶಿಲ್ಪಕಲೆಯ ಪ್ರಥಮ ಪ್ರಯೋಗಗಳನ್ನು ಪ್ರತಿನಿಧಿಸುವ ದೇವಾಲಯಗಳ ಗುಂಪಿಗೆ ಪಟ್ಟದಕಲ್ಲು ಸೇರಿದೆ. ಪಟ್ಟದಕಲ್ಲು ಎಂಬ ಹಳ್ಳಿ ಮಲಪ್ರಭಾ ನದಿಯ ದಂಡೆಯಲ್ಲಿದೆ. ಇದು ಬಾಗಲಕೋಟೆ ಜಿಲ್ಲೆಯಲ್ಲಿ ಇದೆ. ಯುನೆಸ್ಕೋ ವಿಶ್ವ ಪರಂಪರಾ ತಾಣ, ಚಾಲುಕ್ಯರ ವಾಸ್ತುಶಿಲ್ಪದ ಮಾಣಿಕ್ಯ. ವಿರೂಪಾಕ್ಷ, ಸಂಗಮೇಶ್ವರ, ಮಲ್ಲಿಕಾರ್ಜುನ ದೇವಾಲಯಗಳು ಕಲ್ಲಿನ ಕೆತ್ತನೆಗೆ ಹೆಸರುವಾಸಿಯಾಗಿವೆ. *ಐಹೊಳೆ:* ಭಾರತೀಯ ಶಿಲ್ಪಕಲೆಯ ತೊಟ್ಟಿಲು ಎನಿಸಿರುವ ಐಹೊಳೆ, ಮಲಪ್ರಭಾ ನದಿಯ ದಂಡೆಯಲ್ಲಿದೆ. ಬಾಗಲಕೊಟೆ ಜಿಲ್ಲೆಯ ಬಾದಾಮಿ ತಾಲೂಕಿಗೆ ಸೇರಿದ ಐಹೊಳೆ, ಚಾಲುಕ್ಯ ವಾಸ್ತುಶಿಲ್ಪದ ಒಂದು ಕೇಂದ್ರವಾಗಿದೆ. ಐಹೊಳೆಯು ಬಾದಾಮಿ ಚಾಲುಕ್ಯರ ಮೊದಲ ರಾಜಧಾನಿಯಾಗಿತ್ತು. ಇಲ್ಲಿ ಕಂಡು ಬರುವ ದೇವಾಲಯಗಳು ಮತ್ತು ವಾಸ್ತುಶಿಲ್ಪಗಳು ಪ್ರಾಚೀನವಾದವುಗಳಾಗಿವೆ. ಚಾಲುಕ್ಯರ ಕಾಲದಲ್ಲಿ ಇದು ವಿದ್ಯಾಕೇಂದ್ರವಾಗಿತ್ತು. ಇದನ್ನು ದೇವಾಲಯ ವಾಸ್ತು ನಿರ್ಮಾಣದ ತೊಟ್ಟಿಲು ಎಂದು ಕರೆಯುತ್ತಾರೆ. ಐಹೊಳೆಯ ಹೆಸರು ಕೆಲವು ಶಾಸನಗಳಲ್ಲಿ ಆರ್ಯಪುರ ಎಂದು ಉಲ್ಲೇಖಸಲ್ಪಟ್ಟಿದೆ. ಶಾಸನದ ಉಲ್ಲೇಖ ಹೆಸರನ್ನು ಮೊದಲು ಅಯ್ಯವೊಳೆ-ಆಯಿವೊಳೆ-ಐಯಾವೊಳಿ- ಆರ್ಯಪುರ ಎಂದು ಬರುಬರುತ್ತಾ ಅದನ್ನು ಐಹೊಳೆ ಎಂದು ಕರೆದಿರಬಹುದು ಎಂದು ನಂಬಲಾಗಿದೆ. ಚಾಲುಕ್ಯರ ಮೊದಲ ರಾಜಧಾನಿ, 100 ಕ್ಕೂ ಹೆಚ್ಚು ದೇವಾಲಯಗಳ ತಾಣ. ದೇವಾಲಯಗಳ ವಾಸ್ತು ನಿರ್ಮಾಣದ ತೊಟ್ಟಿಲು ಎಂದು ಕರೆಯುತ್ತಾರೆ. *ಬಾದಾಮಿ:* ಭಾರತದ ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿರುವ ಹಿಂದೂ ಮತ್ತು ಜೈನ ಗುಹಾ ದೇವಾಲಯಗಳ ಸಂಕೀರ್ಣವಾಗಿದೆ. ಈ ಗುಹೆಗಳು ಬಂಡೆಕಲ್ಲುಗಳಿAದ ಕೊರೆದು ಮಾಡಿರುವುದರಿಂದ ಭಾರತದಲ್ಲಿನ ವಾಸ್ತುಶಿಲ್ಪದ, ವಿಶೇಷವಾಗಿ ಬಾದಾಮಿ ಚಾಲುಕ್ಯ ವಾಸ್ತುಶಿಲ್ಪದ ಪ್ರಮುಖ ಉದಾಹರಣೆಗಳಾಗಿವೆ. ಅವುಗಳಲ್ಲಿ ಕೆಲವು 6ನೇ ಶತಮಾನದ್ದಾಗಿವೆ. ಬಾದಾಮಿಯು ಒಂದು ಮಾನವ ನಿರ್ಮಿತ ಸರೋವರದ ಪಶ್ಚಿಮ ದಂಡೆಯ ಮೇಲೆ ಇದ್ದು ಕಲ್ಲಿನ ಮೆಟ್ಟಿಲುಗಳನ್ನು ಹೊಂದಿರುವ ಮಣ್ಣಿನ ಗೋಡೆಯಿಂದ ಸುತ್ತುವರಿದಿದೆ, ನಂತರದ ಕಾಲದಲ್ಲಿ ಕಟ್ಟಲಾದ ಕೋಟೆಗಳಿಂದ ಉತ್ತರ ಮತ್ತು ದಕ್ಷಿಣದಲ್ಲಿ ಸುತ್ತುವರಿದಿದೆ. ಬಾದಾಮಿ ಗುಹಾದೇವಾಲಯಗಳು ಡೆಕ್ಕನ್ ಪ್ರದೇಶದ ಪ್ರಾಚೀನ ಹಿಂದೂ ದೇವಾಲಯಗಳ ಉದಾಹರಣೆಗಳಾಗಿವೆ. ಮೊದಲನೇ ಗುಹೆಯಲ್ಲಿ, ಹಿಂದೂ ದೈವಗಳ ಮತ್ತು ವಿಷಯಗಳ ವಿವಿಧ ಶಿಲ್ಪಗಳಿದ್ದು, ತಾಂಡವ ನೃತ್ಯದ ಶಿವನ ನಟರಾಜವಿಗ್ರಹವು ಪ್ರಮುಖವಾದ ಕೆತ್ತನೆಯಾಗಿದೆ. ಎರಡನೆಯ ಗುಹೆಯು ಅದರ ವಿನ್ಯಾಸ ಮತ್ತು ಆಯಾಮಗಳ ದೃಷ್ಟಿಯಿಂದ ಹೆಚ್ಚಾಗಿ ಮೊದಲನೆಯ ಗುಹೆಯನ್ನು ಹೋಲುತ್ತದೆ, ಇದರಲ್ಲಿ ಹಿಂದೂ ವಿಷಯಗಳಿವೆ, ಇದರಲ್ಲಿ ವಿಷ್ಣುವಿನ ತ್ರಿವಿಕ್ರಮನ ಮೂರ್ತಿಯು ದೊಡ್ಡದಾಗಿದೆ. ಮೂರನೇಯ ಗುಹೆಯು ಅತಿದೊಡ್ಡ ಗುಹೆಯಾಗಿದ್ದು, ಇದು ವಿಷ್ಣುವಿಗೆ ಸಂಬAಧಿಸಿದ್ದು ಇದು ಈ ಗುಹಾ ಸಂಕೀರ್ಣದಲ್ಲಿಯೇ ಅತ್ಯಂತ ನಾಜೂಕಾದ ಕೆತ್ತನೆಗಳನ್ನು ಹೊಂದಿದೆ. ನಾಲ್ಕನೇ ಗುಹೆಯು ಜೈನ ಧರ್ಮದ ಪೂಜ್ಯ ವ್ಯಕ್ತಿಗಳಿಗೆ ಸಮರ್ಪಿತವಾಗಿದೆ. ಸರೋವರದ ಸುತ್ತ, ಬಾದಾಮಿಯು ಹೆಚ್ಚುವರಿ ಗುಹೆಗಳನ್ನು ಹೊಂದಿದ್ದು ಅವುಗಳಲ್ಲಿ ಒಂದು ಬೌದ್ಧ ಗುಹೆಯಾಗಿರಬಹುದು. ಮತ್ತೊಂದು ಗುಹೆಯನ್ನು 2015 ರಲ್ಲಿ ಕಂಡುಹಿಡಿಯಲಾಯಿತು, ಇದು ನಾಲ್ಕು ಮುಖ್ಯ ಗುಹೆಗಳಿಂದ ಸುಮಾರು 500 ಮೀಟರ್ (1,600 ಅಡಿ) ದೂರದಲ್ಲಿದ್ದು, 27 ಹಿಂದೂ ಕೆತ್ತನೆಗಳನ್ನು ಹೊಂದಿದೆ. ಈ ಗುಹಾ ದೇವಾಲಯಗಳು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಪಟ್ಟದಕಲ್ಲಿನಿಂದ 14 ಮೈಲಿ ಮತ್ತು ನೂರಕ್ಕೂ ಹೆಚ್ಚು ಪ್ರಾಚೀನ ಮತ್ತು ಮಧ್ಯಕಾಲೀನ ಯುಗದ ಹಿಂದೂ, ಜೈನ ಮತ್ತು ಬೌದ್ಧ ಸ್ಮಾರಕಗಳನ್ನು ಹೊಂದಿರುವ ಇನ್ನೊಂದು ತಾಣವಾದ ಐಹೊಳೆಯಿಂದ 22 ಮೈಲಿ ದೂರದಲ್ಲಿವೆ. ಬಾದಾಮಿಯಲ್ಲಿ ಗುಹಾ ದೇವಾಲಯಗಳು, ಅಗಸ್ತö್ಯ ಸರೋವರ ಮತ್ತು ಬನಶಂಕರಿ ದೇವಸ್ಥಾನ. ಇನ್ನಿತರ ಸ್ಥಳಗಳು ವಿಶಿಷ್ಟವಾಗಿದೆ. *ಮಲಖೇಡಾ ಕೋಟೆ:* 9 ಮತ್ತು 10ನೇ ಶತಮಾನಗಳಲ್ಲಿ ಡೆಕ್ಕನ್ ಪ್ರದೇಶವನ್ನು ಆಳಿದ ರಾಷ್ಟçಕೂಟ ರಾಜವಂಶದ ರಾಜಧಾನಿಯಾಗಿದ್ದ ಮಾನ್ಯಖೇತವನ್ನು ಇಂದು ಮಲಖೇಡಾ ಎಂದು ಕರೆಯಲಾಗುತ್ತಿದೆ. ಸುಮಾರು 3000 ವರ್ಷಗಳಷ್ಟು ಹಳೆಯದಾದ ಕೋಟೆಯನ್ನು ನಾವು ಇಲ್ಲಿ ಕಾಣಬಹುದು. ಹಾಗೂ ಜೈನ ಧರ್ಮದ ಪ್ರಮುಖ ಮೂರ್ತಿಶಿಲ್ಪಗಳು ಇತರೆ ಸ್ಮಾರಕಗಳನ್ನು ಕಾಣಬಹುದು. *ಬನವಾಸಿ:* ಕರ್ನಾಟಕದ ಅತ್ಯಂತ ಹಳೆಯ ಪಟ್ಟಣಗಳಲ್ಲಿ ಒಂದಾಗಿದೆ. ಬನವಾಸಿ (ಉತ್ತರ ಕನ್ನಡ): ಕದಂಬರ ಕಾಲದಲ್ಲಿ (4ನೇ ಶತಮಾನ), ಮಧುಕೇಶ್ವರ ದೇವಾಲಯ, ಬೌದ್ಧ ವಿಹಾರಗಳು ಮತ್ತು ಚೈತ್ಯಗಳು ಶೋಧವಾಗಿವೆ. ಬೌದ್ಧಧರ್ಮ ಪ್ರಚಾರದ ಹಂತಗಳು: ಮೌರ್ಯ ಯುಗ (ಕ್ರಿ.ಪೂ. 3ನೇ ಶತಮಾನ): - ಅಶೋಕನ ಶಾಸನಗಳು (ಸನ್ನತಿ, ಮಾಸ್ಕಿ). - ಬೌದ್ಧ ಭಿಕ್ಷುಗಳು ದಕ್ಷಿಣ ಭಾರತಕ್ಕೆ ಪ್ರಯಾಣ. ಸಾತವಾಹನರು ಮತ್ತು ಕದಂಬರು (ಕ್ರಿ.ಶ. 2-5ನೇ ಶತಮಾನ): ಬನವಾಸಿ, ಬಾದಾಮಿ ಗುಹೆಗಳಲ್ಲಿ ಬೌದ್ಧ ಚೈತ್ಯಗಳು. ಚಾಲುಕ್ಯರು ಮತ್ತು ರಾಷ್ಟçಕೂಟರು (6-10ನೇ ಶತಮಾನ): ಧರ್ಮ ಕ್ಷೀಣಿಸುತ್ತಾ ಹೋಯಿತು, ಆದರೆ ಕೆಲವು ವಿಹಾರಗಳು ಉಳಿದವು. *ನಾಗಾವಿ:* 1200-1500 ವರ್ಷದ ಇತಿಹಾಸ- ದಕ್ಷಿಣದ ತಕ್ಷಶಿಲೆ ಚಿತ್ತಾಪುರ ಬಳಿ ಇರುವ ನಾಗಾವಿಯು ಒಂದು ಪ್ರಾಚೀನ ಊರಾಗಿದ್ದು, ರಾಷ್ಟçಕೂಟರ ಕಾಲದಲ್ಲಿ ಪ್ರಮುಖ ಶಿಕ್ಷಣ ಕೇಂದ್ರವಾಗಿತ್ತು. ಇಲ್ಲಿನ ಸಾವಿರ ವರ್ಷಗಳಷ್ಟು ಪುರಾತನವಾದ ದೇವಸ್ಥಾನದಲ್ಲಿನ ಯಲ್ಲಮ್ಮ ದೇವಿಯನ್ನು ರಾಷ್ಟçಕೂಟರ ಕುಲದೇವತೆ ಎಂದು ಆರಾಧಿಸಲಾಗುತ್ತದೆ. ನಾಗಾವಿಯ ಇತಿಹಾಸವು ರಾಷ್ಟçಕೂಟರು, ಕಲ್ಯಾಣದ ಚಾಲುಕ್ಯರು ಮತ್ತು ಬಹಮನಿ ಸುಲ್ತಾನರಂತಹ ವಿವಿಧ ರಾಜವಂಶಗಳ ಆಳ್ವಿಕೆಯನ್ನು ದಾಖಲಿಸುತ್ತದೆ. ಹಾಗಾಗಿಯೇ ಇದು ಮಿಶ್ರ ವಾಸ್ತುಶಿಲ್ಪ ಶೈಲಿಯಲ್ಲಿ ಗೋಚರಿಸುತ್ತದೆ. ಇಂದಿಗೂ ಭಕ್ತರು ದೂರದಿಂದಲೂ ಸಾವಿರಾರು ಜನ ಬರುತ್ತಾರೆ. *ರಾಜವಂಶಗಳ ಅನುಕ್ರಮ:* ರಾಷ್ಟçಕೂಟರು (753-974 ಕ್ರಿ.ಶ.) - ನಾಗಾವಿಯನ್ನು ಶಿಕ್ಷಣ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಿದರು. ಕಲ್ಯಾಣದ ಚಾಲುಕ್ಯರು (10-12ನೇ ಶತಮಾನ) – ನಾಗಾವಿಯ ದೇವಸ್ಥಾನಕ್ಕೆ ಕೊಡುಗೆ ನೀಡಿದರು. ಬಹಮನಿ ಸುಲ್ತಾನರು (14-16ನೇ ಶತಮಾನ) – ಇಸ್ಲಾಮಿಕ್ ಪ್ರಭಾವ, ಮಿಶ್ರ ವಾಸ್ತುಶೈಲಿ. ವಾಸ್ತುಶಿಲ್ಪದ ಮಿಶ್ರಣ: ದ್ರಾವಿಡ ಶೈಲಿ (ರಾಷ್ಟçಕೂಟ/ಚಾಲುಕ್ಯ) - ಗೋಪುರ, ಕಂಬಗಳು, ಕೆತ್ತನೆಗಳು, ಕಾಮಾನುಗಳು ಇತರೆ. ನಾಗಾವಿ: ಚಿತ್ತಾಪುರ (ಗದಗ-ಹುಬ್ಬಳ್ಳಿ ಸಮೀಪ) ಬಳಿಯ ನಾಗಾವಿ ಊರು ರಾಷ್ಟçಕೂಟರ ಕಾಲದಲ್ಲಿ (8ನೇ-10ನೇ ಶತಮಾನ) ತಕ್ಷಶಿಲೆ (ಆಧುನಿಕ ತಕ್ಷಶಿಲಾ, ಪಾಕಿಸ್ತಾನ) ಜಗತ್ತಿನ ಅತ್ಯಂತ ಹಳೆಯ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿತ್ತು. ನಾಗಾವಿಯಲ್ಲಿ ತೀವ್ರವಾದ ಶೈಕ್ಷಣಿಕ ಚಟುವಟಿಕೆಗಳು ನಡೆಯುತ್ತಿದ್ದವು ಎಂದು ಹೇಳಲಾಗುತ್ತದೆ. ಸಂಶೋಧಕರು ಇದನ್ನು ನಳಂದ ವಿಶ್ವವಿದ್ಯಾಲಯದ ಮಾದರಿಯಲ್ಲಿರುವುದರಿಂದ, ‘ದಕ್ಷಿಣದ ತಕ್ಷಶಿಲೆ’ ಎಂದು ಕರೆಯುತ್ತಾರೆ. ಈ ಪ್ರದೇಶದಲ್ಲಿ ಕಂಡುಬರುವ ಶಾಸನಗಳು ಮತ್ತು ಐತಿಹಾಸಿಕ ದಾಖಲೆಗಳ ಪ್ರಕಾರ, ಪ್ರಾಚೀನ ಪಟ್ಟಣವು ಆ ಕಾಲದ ಪ್ರಸಿದ್ಧ ಘಟಿಕಾಸ್ಥಾನವನ್ನು ಹೊಂದಿತ್ತು. ಘಟಿಕಾಸ್ಥಾನ, ಅಂದರೆ ಕಲಿಕೆಯ ಸ್ಥಳ, ಇಂದಿನ ವಿಶ್ವವಿದ್ಯಾಲಯದ ಸ್ಥಾನಮಾನವನ್ನು ಹೊಂದಿತ್ತು. *ಶಹಾಪೂರ ಪಟ್ಟಣ:* ಶಹಾಪೂರ ಪಟ್ಟಣದಲ್ಲಿರುವ ಕೋಟೆಯ ಬೆಟ್ಟದ ಮೇಲೆ ಪವಡಿಸಿರುವ ಮಲಗಿದ ಬುದ್ಧನ ದೃಶ್ಯ ಈ ಬೆಟ್ಟ ಪ್ರಕೃತಿದತ್ತವಾಗಿ ನೈಜವಾಗಿ ಬುದ್ಧನೇ ಮಲಗಿದ್ದಾನೆ ಎಂದು ಭಾಸವಾಗುತ್ತದೆ. ಬೆಟ್ಟವೇ ಬುದ್ಧನು ಮಲಗಿರುವಂತೆ ರೂಪುಗೊಂಡಿರುವುದು ಅದ್ಭುತವೇ ಸರಿ. ದೂರದಿಂದ ನೋಡಿದರೆ, ಬುದ್ಧನ ಹಣೆ, ಮೂಗು ಮತ್ತು ಎದೆಯ ಮೇಲೆ ಕೈ ಇಟ್ಟುಕೊಂಡು ನಿದ್ರಾವಸ್ಥೆಯಲ್ಲಿರುವಂತೆ ಗೋಚರಿಸುತ್ತದೆ. ಇದು ಪ್ರಕೃತಿಯ ಅದ್ಭುತ ಶಿಲ್ಪಕಲೆ ಅಲ್ಲವೇ? *ಸುರಪುರ:* ಕಲ್ಯಾಣ ಪ್ರದೇಶವು ನಿಜವಾಗಿಯೂ ಪ್ರಕೃತಿ ಸೌಂದರ್ಯದ ಗಣಿಯಾಗಿದೆ. ಗಂಗಾವತಿಯಿAದ ಸುರಪೂರ ಮಾರ್ಗದುದ್ದಕ್ಕೂ ಅನೇಕ ಅದ್ಭುತವಾದ ಶಿಲೆಗಳನ್ನು ಕಾಣಬಹುದು. ಈ ಬಂಡೆಗಲ್ಲಿನ ಶಿಲೆಗಳು ಒಂದರ ಮೇಲೊಂದು ಪವಡಿಸಿ ಸಾವಿರಾರು ವರ್ಷಗಳಿಂದ ತಮ್ಮ ಸಮತೋಲನೆಯನ್ನು ಕಾಪಾಡಿಕೊಂಡು ಉರುಳದೇ ನಿಂತಿರುವುದು ಆಶ್ಚರ್ಯಕರವಾಗಿದೆ. *ಬೋನಾಳ ಕೆರೆ: (ಯಾದಗಿರಿ ಜಿಲ್ಲೆಯಲ್ಲಿದೆ.)* ಈ ಭಾಗದ ಇನ್ನೊಂದು ಪ್ರೇಕ್ಷಣಿಯ ಸ್ಥಳವೆಂದರೆ ಬೋನಾಳ ಗ್ರಾಮದ ಹತ್ತಿರ ಇರುವ ಕೆರೆ ಹಾಗೂ ಅಲ್ಲಿನ ಪಕ್ಷಿಧಾಮ. ಸುಮಾರು ಎರಡು ಚದುರ ಮೈಲು ನೀರಿನಿಂದಾವೃತವಾದ ಈ ಕೆರೆಯನ್ನು ಕ್ರಿ.ಶ. 1844 ರಲ್ಲಿ ಬ್ರಿಟೀಷರು ಪುನಃ ನಿರ್ಮಾಣ ಮಾಡಿದ್ದರೆಂದು ತಿಳಿದು ಬರುತ್ತದೆ. ಇಲ್ಲಿ ಆಸ್ಟೆçÃಲಿಯಾ, ಅರ್ಜೆಂಟೈನಾ, ನೈಜೇರಿಯಾ ಮತ್ತು ಶ್ರೀಲಂಕಾ ದೇಶಗಳಿಂದ ವಲಸೆ ಬಂದ ಪಕ್ಷಿಗಳನ್ನು ನಾವು ಕಾಣಬಹುದು. ವಿಶೇಷವಾಗಿ ಈ ಪಕ್ಷಿಗಳ ಸಂಖ್ಯೆ ನವೆಂಬರ್ ತಿಂಗಳಿನಿAದ ಜನವರಿವರೆಗೆ ಹೆಚ್ಚಾಗಿರುತ್ತವೆ. ರಾಜ್ಯದ ಅತಿ ದೊಡ್ಡ ಪಕ್ಷಿಧಾಮವಾಗಿದೆ. *ಕೊಳ್ಳೂರು:* ಗುಲಬರ್ಗಾ ಮಾರ್ಗ ಮಧ್ಯದಲ್ಲಿ ಕೃಷ್ಣಾನದಿಯ ದಂಡೆಯ ಮೇಲೆ ಕೊಳ್ಳೂರು ಎಂಬ ಗ್ರಾಮವಿದೆ. ಇಲ್ಲಿ ಕೋಹಿನೂರು ವಜ್ರ ದೊರಕಿರುವುದು ತಿಳಿದು ಬರುತ್ತದೆ. ಇಂದಿಗೂ ಸಹ ಅನೇಕ ವಿದೇಶಿ ಕಂಪನಿಗಳು ಈ ಖನಿಜ ಸಂಪತ್ತಿನ ಹುಡುಕಾಟಕ್ಕೋಸ್ಕರ ಸರ್ವೇಕ್ಷಣೆ ಮಾಡುತ್ತಿರುವುದು ಈ ಭಾಗದ ಸಮೃದ್ಧಿಯ ದ್ಯೋತಕವಾಗಿದೆ. *ಕರ್ನಾಟಕದಲ್ಲಿ ಇಸ್ಲಾಮ್ ಧರ್ಮದ ಆಗಮನ ಮತ್ತು ಪಸಾರ:* 10ನೇ-12ನೇ ಶತಮಾನದಿಂದ ಆರಂಭವಾಯಿತು. ವಿಶೇಷವಾಗಿ ದಖ್ಯನ್ ಸುಲ್ತಾನರು, ವಿಜಯನಗರದ ನಂತರದ ಆಡಳಿತ ಮತ್ತು ಸೂಫಿ ಸಂತರ ಪ್ರಭಾವದಿಂದ ಇದು ಬೆಳೆಯಿತು. *ಪ್ರಮುಖ ಹಂತಗಳು:* ಮೊದಲ ಸಂಪರ್ಕ (10-11ನೇ ಶತಮಾನ): - ಅರಬ್ ವ್ಯಾಪಾರಿಗಳು ಕರಾವಳಿ ಪ್ರದೇಶಗಳಾದ ಮಂಗಳೂರು, ಉಡುಪಿ, ಕಾರವಾರ ಮೂಲಕ ಆಗಮಿಸಿದರು. - ಮಲಿಕ್ ಇಬ್ನ್ ದೀನಾರ್ (1000 ಕ್ರಿ.ಶ. ಸುಮಾರು) ಕಾಸರಗೋಡಿನಲ್ಲಿ ಮೊದಲ ಮಸೀದಿ ನಿರ್ಮಾಣ (ಮಸ್ಜಿದ್ ಜೀನತ್ ಬಕ್ಷ್). ದಖ್ಯನ್ ಸುಲ್ತಾನರು (14-16ನೇ ಶತಮಾನ): - ಬೀದರ್, ಬಿಜಾಪುರ, ಗುಲ್ಬರ್ಗಾಗಳಲ್ಲಿ ಬಹಮನಿ ಸುಲ್ತಾನರ ಆಳ್ವಿಕೆ. - ಅಲ್ಲಾವುದ್ದೀನ್ ಹಸನ್ ಬಹಮನಿ (1347) ಗುಲ್ಬರ್ಗಾವನ್ನು ರಾಜಧಾನಿಯನ್ನಾಗಿ ಮಾಡಿದ. - ಇಸ್ಲಾಮ್ ಧರ್ಮದ ಪ್ರಚಾರಕ್ಕೆ ಸೂಫಿ ದರ್ಗಾಗಳು (ಖ್ವಾಜಾ ಬಂದಾ ನವಾಜ್), ಬಿಜಾಪುರದ ಹಜರತ್ ಸೈಯದ್ ಶಾಹ್ ಹುಸೇನ್ ಕಾದ್ರಿ ಕೇಂದ್ರಗಳಾದವು. ವಿಜಯನಗರದ ನಂತರ (16ನೇ ಶತಮಾನ): - ಆದಿಲ್ ಶಾಹಿಗಳು (ಬಿಜಾಪುರ), ಹೈದರ್ ಆಲಿ-ಟಿಪ್ಪು ಸುಲ್ತಾನ್ (ಮೈಸೂರು) ಇಸ್ಲಾಮ್ ಬೆಳವಣಿಗೆಗೆ ಕಾರಣರಾದರು. ಬೀದರ್ ಕೋಟೆ: ಕರ್ನಾಟಕದ ಪ್ರಾಚೀನ ರಾಜವಂಶದ ಅಧಿಕೃತ ವಾಸ್ತುಶಿಲ್ಪದ ಭವ್ಯತೆಯನ್ನು ಹೊಂದಿರುವ ಐತಿಹಾಸಿಕ ಹೆಗ್ಗುರುತಾಗಿರುವ ಹಾಗೂ ದಕ್ಷಿಣಭಾರತದ ರಾಜವಂಶಗಳ ಹೆಮ್ಮೆಯ ಪ್ರತಿರೂಪಗಳಲ್ಲಿ ಬೀದರ್ ಕೋಟೆಯೂ ಒಂದು. ಈ ಕೋಟೆಯನ್ನು ಈಗ ಭಾರತದ ಒಂದು ಅಪರೂಪದ ಸ್ಥಳವೆಂದು ಪರಿಗಣಿಸಲಾಗಿದೆ. ಬೀದರ್ ಕೋಟೆಯು ತನ್ನ ಮೂಲರೂಪವನ್ನು ಕಳೆದುಕೊಂಡಿದ್ದರೂ ಕೂಡ ಈ ಭವ್ಯವಾದ ಕೋಟೆಯು ಅನೇಕ ರೋಮಾಂಚಕ ಇತಿಹಾಸವನ್ನು ಹೊಂದಿದೆ. ಈ ಕೋಟೆ ಬಹಮನಿ ಸುಲ್ತಾನರ ಕಾಲದ ವಾಸ್ತುಶಿಲ್ಪದ ಭವ್ಯತೆ. ಒಳಗೆ ಅರಮನೆಗಳು, ಮಸೀದಿಗಳು, ಸಮಾಧಿಗಳು ಮತ್ತು ವಿಶಾಲವಾದ ಬಾರಾ ಗಜಾ ತೋಪು ಇದೆ. *ಮದರಸಾ, ಬೀದರ್:* 1460 ರ ದಶಕದಲ್ಲಿ ನಿರ್ಮಿಸಲಾದ ಮೊಹಮ್ಮದ್ ಗವಾನ್ ಮದರಸಾ, ಒಂದು ಕಾಲದಲ್ಲಿ ಇಸ್ಲಾಮಿಕ್ ಕಾಲೇಜಾಗಿದ್ದ ಕಟ್ಟಡದ ಅವಶೇಷವಾಗಿದೆ. ಮೂರು ಅಂತಸ್ತಿನ ಸಂಕೀರ್ಣ ಕುರಾನ್ನ ಪದ್ಯಗಳ ಶಾಸನಗಳಿಂದ ಅಲಂಕರಿಸಲ್ಪಟ್ಟಿದೆ. ಈ ಪಾರಂಪರಿಕ ರಚನೆಯನ್ನು ರಾಷ್ಟಿçÃಯ ಪ್ರಾಮುಖ್ಯತೆಯ ಸ್ಮಾರಕಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. *ಕಲಬುರಗಿ ಕೋಟೆ:* ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಎನಿಸಿರುವ ಕಲಬುರಗಿ ಕೋಟೆ, ರಾಜ-ಮಹಾರಾಜರ ಕಾಲದ ಕಟ್ಟಡಗಳು, ಜುಮ್ಮಾ ಮಸೀದಿ, ಶರಣ ಬಸವೇಶ್ವರ ದೇವಸ್ಥಾನ, ಗುಂಬಜಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ. *ಜಾಮಾ ಮಸೀದಿ, ಬಿಜಾಪುರ:* 16 ನೇ ಶತಮಾನದಲ್ಲಿ ಬಿಜಾಪುರ ಸುಲ್ತಾನರ ಅಲಿ ಆದಿಲ್ ಷಾ ನಿರ್ಮಾಣವನ್ನು ಪ್ರಾರಂಭಿಸಿದನು, ಆದರೆ ಅದು ಎಂದಿಗೂ ಪೂರ್ಣಗೊಂಡಿಲ್ಲ. ಇದು ಬಿಜಾಪುರದ ಅತಿ ದೊಡ್ಡ ಮಸೀದಿಯಾಗಿದ್ದು, 4,000 ಭಕ್ತರಿಗೆ ಇಲ್ಲಿ ಪ್ರಾರ್ಥನೆ ಸಲ್ಲಿಸಬಹುದು. ಬಿಜಾಪುರ - ಗೋಲಗುಂಬಜ್: ಬಿಜಾಪುರದಲ್ಲಿರುವ ಈ ಕೋಟೆ ದಕ್ಷಿಣ ಭಾರತದ ಆಗ್ರಾ ಎಂದೇ ಪ್ರಸಿದ್ಧಿ ಪಡೆದಿದೆ. ಗೋಲ ಗುಂಬಜ್, ಆಸಾರ್ ಮಸೀದಿ, ಭೀಮಾ ನದಿ ತೀರದ ಸ್ಮಾರಕಗಳು ನೋಡಲೇ ಬೇಕಾದವು. ಬಿಜಾಪುರವಲ್ಲದೆ ಬೀದರ, ಗೊಲ್ಕೊಂಡ, ಗುಲ್ಬರ್ಗಾಗಳನ್ನೊಳಗೊಳ್ಳುವ ‘ಗೋಲಗುಂಬಜ್' ಬಿಜಾಪುರದ ಅತ್ಯಂತ ಆಕರ್ಷಕವಾದ ಸ್ಮಾರಕ. ಇದನ್ನು ಮುಹಮ್ಮದ್ ಆದಿಲ್ ಷಾ,(1627-56) ತನ್ನ ಸಮಾಧಿ ಹಾಗೂ ಸ್ಮಾರಕವಾಗಿ ನಿರ್ಮಿಸಿದನು. ಗೋಲ್ ಗುಂಬಜ್ ತಳಹದಿಯು 205 ಅಡಿಗಳ ಚಚೌಕ. ಅದರ ಸುತ್ತಲೂ ಇರುವ ಗೋಡೆಗಳು 198 ಅಡಿ ಎತ್ತರವಾಗಿವೆ. ಈ ಗೋಡೆಗಳ ಮೇಲೆ ಗುಂಬಜವು ಕಣ್ಣಿಗೆ ಕಾಣುವ ಯಾವುದೇ ಆಸರೆಯೂ ಇಲ್ಲದೆ ನಿಂತಿದೆ. ಇಲ್ಲಿ ಆಡಿದ ಮಾತು ಅಥವಾ ಮಾಡಿದ ಶಬ್ದವು ಹನ್ನೊಂದು ಬಾರಿ ಪ್ರತಿಧ್ವನಿಸುತ್ತದೆ. ಹಾಲ್‌ನಿಂದ 33.22 ಮೀಟರುಗಳ ಎತ್ತರದಲ್ಲಿ ಸುಮಾರು ಮೂರೂಕಾಲು ಅಡಿ ಅಗಲದ ಗ್ಯಾಲರಿಯಿದೆ. ಗುಂಬಜದ ಕೆಳಗಿರುವ ವಿಶಾಲವಾದ ಹಾಲಿನ ವಿಸ್ತೀರ್ಣವು 1833767 ಚದುರಡಿಗಳು. ಗೋಲಗುಂಬಜ್, ಜಗತ್ತಿನಲ್ಲಿರುವ ಅತ್ಯಂತ ದೊಡ್ಡ ಸಿಂಗಲ್ ಛೇಂಬರ್ ಸ್ಥಳಗಳಲ್ಲಿ ಒಂದು. ರೋಮ್ ನಗರದಲ್ಲಿರುವ ಸೈಂಟ್ ಪೀಟರ್ ಬ್ಯಾಸಿಲಿಕಾದ ಡೋಮನ್ನು ಹೊರತುಪಡಿಸಿದರೆ, ಇದು ವಿಶ್ವದ ಎರಡನೇ ದೊಡ್ಡ ಗುಮ್ಮಟ. *ಖಾಜಾ ಬಂದೇ ನವಾಜ ದರ್ಗಾ:* ಭಾರತದ ಅತಿದೊಡ್ಡ ದರ್ಗಾವಾಗಿರುವ ಅಜಮೇರಿನ ದರ್ಗಾದ ನಂತರ ಇನ್ನೊಂದು ಅತಿ ದೊಡ್ಡ ದರ್ಗಾ ಸೂಫಿ ಸಂತ ದರ್ಗಾವನ್ನು ಇಲ್ಲಿ ನೋಡಬಹುದು. ಧಾರವಾಡದ ಅಂಜುಮಾನ್ ಮಸೀದಿ: 15ನೇ ಶತಮಾನದ ನಿರ್ಮಾಣ. ಜುಮ್ಮಾ ಮಸೀದಿ: ಪರ್ಷಿಯನ್ ವಾಸ್ತುಶಿಲ್ಪ ಹೊಂದಿರುವ ಮಸೀದಿ ಗುಲಬರ್ಗಾ ಕೋಟೆಯ ಮಧ್ಯಭಾಗದಲ್ಲಿದೆ. ಈ ಮಸೀದಿಗೆ ಜುಮ್ಮಾ ಮಸೀದಿಯೆಂದು ಕರೆಯಲಾಗುತ್ತಿದ್ದು, 38016 ಚದುರ ಅಡಿಯಲ್ಲಿ ನಿರ್ಮಿಸಲ್ಪಟ್ಟಿದೆ. ಈ ಸ್ಮಾರಕದ ವಿಶೇಷವೆಂದರೆ ಸಂಪೂರ್ಣವಾಗಿ ಮೇಲ್ಮಾವಣಿ ಹೊಂದಿರುವ ಭಾರತದ ಏಕೈಕ ಮಸೀದಿ ಇದಾಗಿದೆ. ಇದರಲ್ಲಿ ಸುಮಾರು 5000 ಜನರು ಏಕ ಕಾಲದಲ್ಲಿ ಪ್ರಾರ್ಥನೆ ಮಾಡಲು ಸ್ಥಳಾವಕಾಶವಿದೆ. ಈ ಕಟ್ಟಡವು 1367 ಪರ್ಶಿಯಾ ದೇಶದ ವಾಸ್ತುಶಿಲ್ಪಕಾರರಿಂದ ನಿರ್ಮಿಸಲ್ಪಟ್ಟಿದೆ. ಇಲ್ಲಿ 250 ಕಮಾನುಗಳಿದ್ದು ಯಾವ ಬದಿಯಿಂದಲೂ ನಿಂತು ನೋಡಿದರೂ ಸಹ ನಮಗೆ ಸಮಾನಾಂತರವಾಗಿ ಗೋಚರಿಸುತ್ತವೆ. ಹಾಗೂ ಯಾವುದೇ ಧ್ವನಿವರ್ಧಕ ಇಲ್ಲದೇ, ಇಡೀ ಮಸೀದಿಯಲ್ಲಿ ಪ್ರಾರ್ಥನೆಯ ಶಬ್ದ ಕೇಳಿ ವಿಸ್ಮಯ ಉಂಟಾಗುತ್ತದೆ. *800 ವರ್ಷದ ಇತಿಹಾಸ- ಲೋಕತಂತ್ರದ ಬುನಾದಿ:* ಜಗದ್ಗುರು ಬಸವೇಶ್ವರರು (ಕ್ರಿ.ಶ. 1131-1167) 12 ನೇ ಶತಮಾನದ ತತ್ವಜ್ಞಾನಿ, ಕವಿ ಮತ್ತು ಸಮಾಜ ಸುಧಾರಕರಾಗಿದ್ದು, ಲಿಂಗಾಯತ ಧರ್ಮದ ಸ್ಥಾಪಕರಾಗಿದ್ದಾರೆ. ಅವರು ಕ್ರಿ.ಶ. 1131ರಲ್ಲಿ ಬಾಗೇವಾಡಿಯಲ್ಲಿ (ಇಂದಿನ ಬಿಜಾಪುರ ಜಿಲ್ಲೆ) ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಕಲ್ಯಾಣದ (ಇಂದಿನ ಬಸವಕಲ್ಯಾಣದ) ರಾಜ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು. ಬಸವೇಶ್ವರರು ಜಾತಿ ವ್ಯವಸ್ಥೆ ಮತ್ತು ಲಿಂಗ ತಾರತಮ್ಯವನ್ನು ವಿರೋಧಿಸಿದರು ಮತ್ತು ‘ಅನುಭವಮಂಟಪ’ ಸ್ಥಾಪಿಸುವ ಮೂಲಕ ಸಾಮಾಜಿಕ ಸಮಾನತೆಗಾಗಿ ಶ್ರಮಿಸಿದರು. 500ಕ್ಕೂ ಹೆಚ್ಚು ಶರಣರ ಸಮ್ಮಿಲನ, ಎಲ್ಲರಿಗೂ ಮುಕ್ತ ಚರ್ಚೆಗೆ ಅವಕಾಶ ಕಲ್ಪಿಸಿದರು. 12ನೇ ಶತಮಾನದಲ್ಲಿ ಸ್ವಾತಂತ್ರ‍್ಯ, ಸಮಾನತೆ ಮತ್ತು ಮಹಿಳಾ ಸಬಲೀಕರಣದ ಬಗ್ಗೆ ಹೋರಾಟ ಮಾಡಿದ ಬಸವಣ್ಣನವರು ಚಾಲುಕ್ಯ ಮತ್ತು ಕಳಚೂರಿ ವಂಶದ ಅರಸರ ಕಾಲದಲ್ಲಿದ್ದರು. "ಕಾಯಕವೇ ಕೈಲಾಸ" ಮತ್ತು "ದಯವೇ ಧರ್ಮದ ಮೂಲವಯ್ಯ" ಎಂಬ ತತ್ವಗಳನ್ನು ಬೋಧಿಸಿದರು. ಪುರುಷ ಮತ್ತು ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ನೀಡಿದರು. ಇವರ ಕಾಲದ ಸಮಾನ ಮಹಿಳಾ ಶರಣರೆಂದರೆ ಅಕ್ಕಮಹಾದೇವಿ, ಶರಣೆ ಚೆನ್ನಮ್ಮ, ಮಡಿವಾಳ ಮಾಚಿದೇವ ಮತ್ತು ಮುಂತಾದವರು. ಕನ್ನಡದಲ್ಲಿ 600ಕ್ಕೂ ಹೆಚ್ಚು ವಚನಗಳನ್ನು ರಚಿಸಿದ್ದಾರೆ. ಅಲ್ಲದೆ, ಷಟ್ಸ÷್ಥಲ ವಚನ, ಕಾಲಜ್ಞಾನ ವಚನ ಮುಂತಾದ ಗ್ರಂಥಗಳನ್ನು ಬರೆದಿದ್ದಾರೆ. ಜಗಜ್ಯೋತಿ ಬಸವೇಶ್ವರ, ಕ್ರಾಂತಿಯೋಗಿ ಬಸವಣ್ಣ, ಭಕ್ತಿ ಭಂಡಾರಿ ಬಸವಣ್ಣ ಎಂದೂ ಇವರನ್ನು ಕರೆಯಲಾಗುತ್ತದೆ. ಇಷ್ಟಲಿಂಗ ಧಾರಣೆ, ಶಿವನನ್ನು ಅರಿವಿನ ರೂಪದಲ್ಲಿ ಆರಾಧಿಸುತ್ತಿದ್ದರು. ಇವರಿಗೆ ಜಗಜ್ಯೋತಿ ಬಸವೇಶ್ವರ, ಕ್ರಾಂತಿಯೋಗಿ ಬಸವಣ್ಣ, ಭಕ್ತಿ ಭಂಡಾರಿ ಬಸವಣ್ಣ ಎಂಬ ಬಿರುದುಗಳು ಇದ್ದವು. ವಿಶ್ವದಲ್ಲಿ ಅಮೇರಿಕಾ / ಫ್ರಾನ್ಸ್ ದೇಶಗಳಿಂದ ಲೋಕ ತಂತ್ರ ಬಂದಿದೆ ಎಂದು ಎಲ್ಲರೂ ಹೇಳುತ್ತಾರೆ. ಆದರೆ, ಬಸವಣ್ಣ ಅವರ ಅನುಭವಮಂಟಪ ಇಂದಿನ ಲೋಕತಂತ್ರ ಎಂದು ಮರೆಯಲಾರೆ. ಕರ್ನಾಟಕದ ಇತಿಹಾಸದಲ್ಲಿ ಒಂದು ಮಹಾನ್ ಅಧ್ಯಾಯ. ಅವರ ಬದುಕು ಮತ್ತು ಕಾರ್ಯಗಳು ಇಂದಿಗೂ ಲೋಕತಂತ್ರ ಸಮಾನತೆ, ಮತ್ತು ಸಾಮಾಜಿಕ ನ್ಯಾಯದ ಪ್ರೇರಣೆಯಾಗಿ ನಿಲ್ಲುತ್ತವೆ. *18ನೇ ಶತಮಾನದ ಶ್ರೀ ಶರಣ ಬಸವೇಶ್ವರರ ದೇವಸ್ಥಾನ:* ಶರಣಬಸವೇಶ್ವರರು ಪ್ರಾಣಿ, ಪಕ್ಷಿಗಳನ್ನೊಳಗೊಂಡು ಸಹಸ್ರಾರು ಜನತೆಯನ್ನು ದಾಸೋಹದ ಮೂಲಕ ಹಸಿವಿನ ಬಳಲುವಿಕೆಯನ್ನು ಹೋಗಲಾಡಿಸಿದ್ದರು. ಅವರ ದಾಸೋಹದ ರೀತಿಯನ್ನು ನೋಡಿದರೆ ಭಗವಂತನಾದ ಶ್ರೀಕೃಷ್ಣನು ತನ್ನ ಆಪ್ತಮಿತ್ರ ಸುಧಾಮನಿಗೆ ಅಕ್ಷಯ ಪಾತ್ರೆಯನ್ನಿತ್ತ ಪ್ರಸಂಗ ನೆನಪಿಗೆ ಬರುತ್ತದೆ. ನಿಜವಾಗಿಯೂ ಈ ಭಾಗ ಧಾರ್ಮಿಕ ಸಹಿಷ್ಣುತೆ, ತಾಳ್ಮೆ ಹಾಗೂ ಸಹಬಾಳ್ವೆಯ ಕೇಂದ್ರವೆAದರೂ ಅತಿಶಯೋಕ್ತಿಯಾಗಲಾರದು. ಶರಣಬಸವೇಶ್ವರರು (ಶರಣ ಬಸವೇಶ್ವರ) 18ನೇ ಶತಮಾನದಲ್ಲಿ ಕರ್ನಾಟಕದ ಗುಲ್ಬರ್ಗಾ ಜಿಲ್ಲೆಯ ಬಸವ ಕಲ್ಯಾಣ ಸಮೀಪದ ಸವದಿ ಸೋಮನಾಥಪುರದಲ್ಲಿ ಅವತರಿಸಿದ ಮಹಾನ್ ಶರಣರು. ಅವರ ಜೀವನ ಮತ್ತು ದಾಸೋಹದ ಕಥೆಗಳು ಜನಮಾನಸದಲ್ಲಿ ಇಂದಿಗೂ ಜೀವಂತ. ಇವರು ಬ್ರಾಹ್ಮಣ ಕುಟುಂಬದಲ್ಲಿ ಜನಿಸಿ, ನಂತರ ಲಿಂಗಾಯತ ಶರಣರಾಗಿ ರೂಪಾಂತರಗೊAಡರು. *ಶರಣಬಸವೇಶ್ವರ ದೇವಸ್ಥಾನ:* ಬಸವ ಕಲ್ಯಾಣ (ಬಿಜಾಪುರ-ಗುಲ್ಬರ್ಗಾ ಮಾರ್ಗ)ದಲ್ಲಿ ಕರ್ನಾಟಕದ ಚಾಲುಕ್ಯ-ರಾಷ್ಟçಕೂಟ ವಾಸ್ತುಶಿಲ್ಪದ ಮಿಶ್ರಣ ಶೈಲಿಯಲ್ಲಿ ನಿರ್ಮಿಸಿದ್ದಾರೆ. ಪ್ರತಿ ವರ್ಷ ಶರಣಬಸವ ಜಯಂತಿ ಮತ್ತು ದಾಸೋಹ ಉತ್ಸವ ನಡೆಯುತ್ತದೆ. ಭಕ್ತರು ದೊಡ್ಡ ಸಂಖ್ಯೆಯಲ್ಲಿ ಅನ್ನದಾನ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಶರಣಬಸವೇಶ್ವರರು ಎಲ್ಲಾ ಜಾತಿ, ಧರ್ಮದ ಜನರಿಗೆ ಸೇವೆ ಮಾಡಿದರು. ಅವರ ದೇವಸ್ಥಾನದಲ್ಲಿ ಹಿಂದು-ಮುಸ್ಲಿA-ಜೈನ-ಲಿAಗಾಯತ ಭಕ್ತರು ಒಟ್ಟಾಗಿ ಪೂಜೆ ಸಲ್ಲಿಸುತ್ತಾರೆ. ಕಾಯಕವೇ ಕೈಲಾಸ – ಉದ್ಯೋಗವೇ ಧರ್ಮ, ದಯವೇ ಧರ್ಮದ ಮೂಲ, ಪ್ರೇಮ, ಸೇವೆ, ಮತ್ತು ಸಮಾನತೆ ಇವರ ತತ್ವಗಳು. *ವೈಷ್ಣೋದೇವಿ ಮಾದರಿ ನರಸಿಂಹ ಝರಾ ನೈಸರ್ಗಿಕ ಗುಹೆ ದೇವಾಲಯ:* ಬೀದರ್ ಕೋಟೆ ಭಾರತದ ಕರ್ನಾಟಕದ ಉತ್ತರ ಪ್ರಸ್ಥಭೂಮಿಯ ಬೀದರ್ ನಗರದಲ್ಲಿದೆ. ಬಹಮನಿ ರಾಜವಂಶದ ಸುಲ್ತಾನ್ ಅಲ್ಲಾದೀನ್ ಬಹ್ಮನಿ ತನ್ನ ರಾಜಧಾನಿಯನ್ನು ಗುಲ್ಬರ್ಗದಿಂದ 1427 ರಲ್ಲಿ ಬೀದರ್ಗೆ ಸ್ಥಳಾಂತರಿಸಿದರು ಮತ್ತು ಹಲವಾರು ಕೋಟೆಗಳ ಜೊತೆಗೆ ಇಸ್ಲಾಮಿಕ್ ಸ್ಮಾರಕಗಳನ್ನು ನಿರ್ಮಿಸಿದರು. ಅಲ್ಲದೇ ಬೀದರ್ ತನ್ನದೇ ಆದ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಆಹ್ಲಾದಕರವಾದ ವಾತಾವರಣ, ಅದ್ಭುತವಾದ ಕೋಟೆ, ಗುರುನಾನಕರ ಗುರುದ್ವಾರ, ಬಸವಕಲ್ಯಾಣದ ಅನುಭವ ಮಂಟಪವನ್ನು ಕಾಣಬಹುದು. ಹಾಗೂ ಈ ನಗರದ ಇನ್ನೊಂದು ಪ್ರಮುಖ ಸ್ಥಳವೆಂದರೆ, "ನರಸಿಂಹ ಝರಾ", ಬೀದರ್ ಕೋಟೆಯಿಂದ 2 ಕಿ.ಮೀ ದೂರದಲ್ಲಿರುವ ಗುಹೆ, ಇದು ಪುರಾಣ ಕಾಲದಿಂದಲೂ ಹೆಸರುವಾಸಿಯಾಗಿರುವ ಗುಹೆಯಲ್ಲಿ ನಿರ್ಮಿಸಲ್ಪಟ್ಟ ವಿಷ್ಣು/ನರಸಿಂಹ ದೇವರ ಗುಹಾಂತರ ದೇವಸ್ಥಾನ. ದರ್ಶನ ಪಡೆಯಲು ಹೋಗಬೇಕಾದರೆ ಸುಮಾರು 91 ಮೀಟರ್ ಗುಹೆಯೊಳಗೆ ಪ್ರವೇಶಿಸಬೇಕಾಗುತ್ತದೆ. ಮಾರ್ಗದುದ್ದಕ್ಕೂ 1.37 ಅಡಿ ಮೀಟರ್ ಆಳವಾಗಿರುವ ನೈಸರ್ಗಿಕವಾಗಿ ನೀರು ತುಂಬಿಕೊAಡಿದೆ. ಆ ನೀರಿನಲ್ಲಿಯೇ ನಡೆದುಕೊಂಡು ಹೋಗಿ ದೇವರ ದರ್ಶನ ಪಡೆದುಕೊಳ್ಳಬೇಕಾಗುತ್ತದೆ. ಈ ದೇವಾಲಯ ಜಮ್ಮು-ಕಾಶ್ಮೀರದಲ್ಲಿರುವ ಗುಹಾಂತರ ವೈಷ್ಣೋದೇವಿ ದೇವಸ್ಥಾನವನ್ನು ಹೋಲುವಂತಿದೆ. ಬೀದರಿನ ಪ್ರಾಚೀನ ಅಂತರ್ಜಲ ವ್ಯವಸ್ಥೆ ಅದನ್ನು ನಿರ್ಮಿಸಿದವರ ಅಸಾಧಾರಣ ಎಂಜಿನಿಯರಿAಗ್ ಕೌಶಲ್ಯ ಮತ್ತು ಧೈರ್ಯದ ಸಂಕೇತವಾಗಿದೆ. *1200 ವರ್ಷದ ಇತಿಹಾಸದ ಬ್ರಿಟೀಷ್ ಅದ್ಭುತ ವಾಸ್ತುಶಿಲ್ಪ:* ರಾಂಪುರ ಪಟ್ಟಣದ "ಟೈಲರ್ ಮಂಜಿಲ್' ಇದು ಬೋನಾಳ ಪಕ್ಷಿಧಾಮದಿಂದ (ಯಾದಗಿರಿ ಜಿಲ್ಲೆ) ಸುಮಾರು 10ಕಿ.ಮೀ. ದೂರದಲ್ಲಿದೆ. ಕ್ರಿ.ಶ. 1844 ರಲ್ಲಿ ನಿರ್ಮಿಸಿರುವ ಈ ಕಟ್ಟಡ ಬ್ರಿಟೀಷ್ ನಿವಾಸಿ ಆದ ಕರ್ನಲ್ ಮೆಡೋಸ್ ಟೈಲರ್ ಎಂಬುವವನ ವಾಸಗೃಹವಾಗಿತ್ತು. ಕಟ್ಟಡ ಬೆಟ್ಟದ ಮೇಲೆ ನಿರ್ಮಿಸಲಾಗಿದ್ದು, ಇಲ್ಲಿಂದ ಕಣ್ಣು ಹಾಯಿಸಿದರೆ ಸುರಪುರದ ಕೋಟೆ, ಅರಮನೆ ಮತ್ತು ವೇಣುಗೋಪಾಲಸ್ವಾಮಿ ದೇವಸ್ಥಾನವನ್ನು ವೀಕ್ಷಿಸಬಹುದು. ಈ ಕಟ್ಟಡದ ತಾಂತ್ರಿಕ ಕೌಶಲ್ಯ ಕಲ್ಪನಾತೀತವಾಗಿದೆ. ಇಲ್ಲಿ ಅಳವಡಿಸಿರುವ ಬಾಗಿಲುಗಳನ್ನು ಗಮನಿಸಿದರೆ ಪ್ರತಿಯೊಂದು ಬಾಗಿಲು ಒಂದಕ್ಕೊAದು ಅಂತರ ಜೋಡಣೆಯಿಂದ ಕೂಡಿವೆ. ನಾವು ಒಂದು ಬಾಗಿಲನ್ನು ತಳ್ಳಿ ತೆರೆದಾಗ ಕಟ್ಟಡದಲ್ಲಿರುವ ಎಲ್ಲಾ 7 ಬಾಗಿಲುಗಳು ತಾವಾಗಿಯೇ ಶಬ್ದಮಾಡಿ ತೆರೆದುಕೊಳ್ಳುತ್ತವೆ. 21ನೇ ಶತಮಾನದ ಆಧುನಿಕ ತಂತ್ರಜ್ಞಾನ ಕೂಡ ನಿಬ್ಬೆರಗಾಗುವಂತಹ ಈ ಕಟ್ಟಡದ ತಂತ್ರಗಾರಿಕೆ ಹಾಗೂ ಸುತ್ತಮುತ್ತಲಿನ ನೈಸರ್ಗಿಕ ಸೌಂದರ್ಯ ಶ್ಲಾಘನೀಯವಾಗಿದೆ. ಇಲ್ಲಿ ಕಳ್ಳತನ ಎಚ್ಚರಿಸುವ ಅಲಾರಂ ಅನ್ನು ಅಳವಡಿಸಲಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶವು ನಿಜವಾಗಿಯೂ ಪ್ರವಾಸಿಗರ ಆಕರ್ಷಣೀಯ ತಾಣವೆನ್ನುವುದರಲ್ಲಿ ಸಂದೇಹವಿಲ್ಲ. ಈ ಭಾಗದಲ್ಲಿರುವ ಕಿಷ್ಕಿಂಧ, ಭೂತಾಯಿಯ ಮಡಿಲಲ್ಲಿರುವ ಆದಿಮಾನವರ ವಾಸಗೃಹಗಳು-ಪ್ರಕೃತಿದತ್ತವಾಗಿ ಬೋನಾಳ ಪಕ್ಷಿಧಾಮ. ಆಧ್ಯಾತ್ಮಿಕ ರಂಗದಲ್ಲಿ ಕೃಪಾಶೀರ್ವಾದವನ್ನು ನೀಡುವ ದೇವಸ್ಥಾನಗಳು, ಅತ್ಯಾಕರ್ಷಕ ವಾಸ್ತುಶೈಲಿಗಳು, ನರಸಿಂಹ ಝರಾ, ಕಲ್ಲಿನ ರಥ, ಕೋಟೆಗಳು ಹಾಗೂ ಮಸೀದಿಗಳು, ದಾಸೋಹದ ಆದರಾತಿಥ್ಯ ಇವೆಲ್ಲವೂ ಈ ಭಾಗದ ಅದ್ಭುತಗಳೆಂದೇ ಹೇಳಿದರೆ ಅತಿಶಯೋಕ್ತಿಯಾಗಲಾರದು. ಈ ತಾಣಗಳೆಲ್ಲವೂ ಹೈದರಾಬಾದ್ ಕರ್ನಾಟಕದ ನಿಜ ಸೌಂದರ್ಯವನ್ನು ಜಗತ್ತಿಗೆ ಪರಿಚಯಿಸುತ್ತಿವೆ. ಬನ್ನಿ, ಈ ಕಣ್ಮನ ಸೆಳೆಯುವ ಅದ್ಭುತ ಪ್ರೇಕ್ಷಣೀಯ ಸ್ಥಳಗಳಿಗೆ ಒಮ್ಮೆ ಭೇಟಿ ನೀಡಿ. ರೋಮಾಂಚನ ಗೊಳಿಸುವ ನವಿರಾದ ಅನುಭವವನ್ನು ತಮ್ಮದಾಗಿಸಿ ಕೊಳ್ಳಿ ಹಾಗೂ ನಮ್ಮ ಕನ್ನಡನಾಡಿನ ಸಾಂಸ್ಕೃತಿಕ ಹಾಗೂ ಐತಿಹಾಸಿಕ ಶ್ರೀಮಂತಿಕೆ ಬಗ್ಗೆ ಹೆಮ್ಮೆ ಪಡೆದು ನಮ್ಮ ಕೊಡುಗೆಯು ಈ ನಾಡಿನ ನಿರಂತರ ಸಮೃದ್ಧಿಗೆ ಇರಲಿ ಎಂದು ಹಾರೈಸುತ್ತೇನೆ. ಕಲ್ಯಾಣ ಕರ್ನಾಟಕದ ಇತಿಹಾಸವನ್ನು ತಿಳಿಯೋಣ, ಪರಂಪರೆಯನ್ನು ಗೌರವಿಸೋಣ, ಪ್ರವಾಸೋದ್ಯಮದ ಮೂಲಕ ಅದರ ವೈಭವವನ್ನು ಜಗತ್ತಿಗೆ ಪರಿಚಯಿಸೋಣ. (ಡಾ. ಶಾಲಿನಿ ರಜನೀಶ್) ಸರ್ಕಾರದ ಮುಖ್ಯ ಕಾರ್ಯದರ್ಶಿ

- ಪಕ್ಕ ಲವರ್’ ಸಿನಿಮಾ ಶುರು! 🎬 ಸ್ಥಳೀಯ ಪ್ರತಿಭೆಗಳಿಗೆ ದೊಡ್ಡ ಅವಕಾಶ! ಸಿನಿಮಾ ನಿರ್ಮಾಣಕ್ಕಿಂತ ಪ್ರಮೋಷನ್ ಮುಖ್ಯ! ಬಳ್ಳಾರಿಯ ಸ್ಥಳೀಯ ಪ್ರತಿಭೆಗಳನ್ನೇ ಒಳಗೊಂಡು ನಿರ್ಮಾಣವಾಗುತ್ತಿರುವ ‘ಪಕ್ಕ ಲವರ್’ ಕನ್ನಡ ಚಲನಚಿತ್ರದ ಟೈಟಲ್ ಹಾಗೂ ಹಾಡು ಬಿಡುಗಡೆಗೊಂಡಿದೆ. 🎬 ಸ್ಥಳೀಯ ಕಲಾವಿದರು ಹಾಗೂ ಪ್ರತಿಭೆಗಳಿಗೆ ಅವಕಾಶ ನೀಡಿ ಪ್ರೋತ್ಸಾಹಿಸುವ ಅಗತ್ಯವಿದೆ ಎಂದು ಚಿತ್ರದ ನಿರ್ದೇಶಕ ಕೋಳೂರು ಶೇಖರ್ ಹೇಳಿದ್ದಾರೆ. ಚಿತ್ರದ ಶೇ.30ರಷ್ಟು ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದ್ದು, ಉಳಿದ ಚಿತ್ರೀಕರಣವನ್ನು ಬಳ್ಳಾರಿ ಮತ್ತು ಬೆಂಗಳೂರಿನಲ್ಲಿ ನಡೆಸಲಾಗಲಿದೆ. ಚಿತ್ರದ ನಾಯಕ ನಟ ಅವಿನಾಶ್, ‘ಪಕ್ಕ ಲವರ್’ ಸಿನಿಮಾ ಯಶಸ್ವಿಯಾಗುವ ಸಂಪೂರ್ಣ ವಿಶ್ವಾಸವಿದೆ ಎಂದು ಹೇಳಿದ್ದಾರೆ. ಉದ್ಯಮಿ ಹಾಗೂ ನಿರ್ಮಾಪಕ ಪೋಲಾ ಪ್ರವೀಣ್ ಕುಮಾರ್, ಸಿನಿಮಾ ನಿರ್ಮಾಣದಷ್ಟೇ ಪ್ರಮೋಷನ್‌ಗೂ ಆದ್ಯತೆ ನೀಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. 👉 ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ಸಿಗಬೇಕು ಎನ್ನುವ ನಿಮ್ಮ ಅಭಿಪ್ರಾಯವೇನು? ಕಾಮೆಂಟ್ ಮಾಡಿ. ASN NEWS24 ಕನ್ನಡ – ಸುತ್ತಮುತ್ತ ನಡೆಯುವ ಸುದ್ದಿ ನಿಮ್ಮ ಮುಂದೆ. #PakkaLover #PakkaLoverMovie #KannadaMovie #KannadaCinema #KannadaFilm #Ballari #BallariNews #Bellary #KannadaNews #KannadaFilmIndustry #LocalTalent #LocalArtists #Avinash #KannadaActor #FilmPromotion #Sandalwood #SandalwoodNews #KarnatakaNews #ASNNews24 #ASNNews24Kannada1
- *ಕೂಡ್ಲಿಗಿ : ನಾಗರೀಕ ಹಿತರಕ್ಷಣಾ ವೇದಿಕೆಯಿಂದ , ಅದ್ಧೂರಿ ಊರಗಣಪ ಪ್ರತಿಷ್ಠಾನೆ*-ವಿಜಯನಗರ ಜಿಲ್ಲೆ ಕೂಡ್ಲಿಗಿ : ಸೆಪ್ಟೆಂಬರ್ 14ರಂದು ಪಟ್ಟಣದ ಮೇನ್ ಬಾಯ್ಸ್ ಶಾಲೆಯ ಆವರಣದಲ್ಲಿ , ಶ್ರೀಗಣೇಶ ಚತುರ್ಥಿ ಪ್ರಯುಕ್ತ ನಾಗರೀಕ ಹಿತರಕ್ಷಣೆ ವೇದಿಕೆ ವತಿಯಿಂದ ಗಣೇಶ ಮೂರ್ತಿ ಪ್ರತಿಷ್ಠಾಮನೆ ಅದ್ಧೂರಿಯಾಗಿ ಜರುಗಿತು. ನಾಗರೀಕ ಹಿತರಕ್ಷಣ ವೇದಿಕೆ ಅಧ್ಯಕ್ಷರಾದ ಕಾವಲ್ಲಿ ಶಿವಪ್ಪನಾಯಕ ನೇತೃತ್ವದಲ್ಲಿ , ಪ್ರತಿ ವರ್ಷಗಳಂತೆಯೇ ಗಣೇಶ ಮೂರ್ತಿ ದಾನಿಗಳು. ಹಾಗೂ ಗೌಡ ಮನೆತನದ ಮುಖಂಡರಾದ , ಪಟ್ಟಣದ ಹೆಚ್.ವೀರನಗೌಡ ರವರ ಮನೆಯಿಂದ , ಗಣೇಶನ ಬೃಹತ್ ಗಾತ್ರದ ಗಣೇಶ ಮೂರ್ತಿಯನ್ನು. ಶಾಸ್ತ್ರೋಕ್ತವಾಗಿ ಪೂಜಿಸಿ ವಾಹನದಲ್ಲಿರಿಸಿಕೊಂಡು , ಪಟ್ಟಣದ ಪ್ರಮುಖ ರಸ್ತೆಯ ಮೂಲಕ ಬಹು ಅದ್ಧೂರಿಯಾಗಿ ಮೆರವಣಿಗೆ ಸಾಗಿ ವೇದಿಕೆಗೆ ಕರೆತರಲಾಯಿತು. ಪಟ್ಟಣದ ಶ್ರೀಚಂದ್ರಶೇಖರ ಆಜಾದ್ ರಂಗಮಂದಿರದ ವೇದಿಕೆ ಯಲ್ಲಿ , ಪುರೋಹಿತರಾದ ಎಮ್ ಎಮ್ ಉಮೇಶರವರ ನೇತೃತ್ವದಲ್ಲಿ. ಧಾರ್ಮಿಕ ವಿಧಿ ವಿಧಾನದೊಂದಿಗೆ ಪೂಜಿಸಿ ಪ್ರತಿಷ್ಠಾಪಿಸಲಾಯಿತು, ತದನಂತರ ಗಣೇಶ ಮೂರ್ತಿಯನ್ನು ಪ್ರತಿಷ್ಟಾಪಿಸಲಾಯಿತು. ನಂತರ ವೇದಭ್ರಾಹ್ಮಣ ಆರಾಧಕರಾದ ಬ್ರಹ್ಮಲಿಂಗಾಚಾರಿಗಳ ಪುರೋಹಿತ್ವದಲ್ಲಿ , ಪೂಜಾ ಕೈಂ ಕರ್ಯಗಳಾದಿಗಳನ್ನು ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ನಾಗರೀಕರ ಹಿತರಕ್ಷಣಾ ಸಮಿತಿಯ ಎಲ್ಲಾ ಪದಾಧಿಕಾರಿಗಳು ಸದಸ್ಯರು , ಹಿರಿಯನಾಗರೀಕರು , ಹಿರಿಯರು , ಗಣ್ಯರು ಮುಖಂಡರು , ನೂರಾರು ಸಾರ್ವಜನಿಕರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ - 9008937428 / 8151937428*4
- ಯುವಕರೇ, ನಿಮ್ಮ ಕನಸೇ ನನ್ನ ಭರವಸೆ: ಯುವಶಕ್ತಿಗೆ ಶಾಸಕ ಡಾ. ಶ್ರೀನಿವಾಸ್ ಎನ್.ಟಿ. ಕರೆ ಕೂಡ್ಲಿಗಿ: ಯುವಕರು ತಮ್ಮ ಭವಿಷ್ಯವನ್ನು ತಾವೇ ರೂಪಿಸಿಕೊಳ್ಳಬೇಕು. ಶಿಕ್ಷಣ, ಶ್ರಮ, ಶಿಸ್ತು ಹಾಗೂ ಉತ್ತಮ ಚಿಂತನೆಗಳನ್ನು ಬದುಕಿನ ಬಂಡವಾಳವನ್ನಾಗಿಸಿಕೊಂಡು ಮುನ್ನಡೆಯಬೇಕು ಎಂದು ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಶ್ರೀನಿವಾಸ್ ಎನ್.ಟಿ. ಅವರು ಯುವಜನತೆಗೆ ಕರೆ ನೀಡಿದರು. ಯುವಕರನ್ನು ಉದ್ದೇಶಿಸಿ ಮಾತನಾಡಿದ ಅವರು, “ನಿಮ್ಮ ಕಣ್ಣಲ್ಲಿ ನಾನು ಕೇವಲ ಯುವಕರನ್ನು ನೋಡುವುದಿಲ್ಲ; ಒಂದು ಹೊಸ ಕನಸನ್ನು ನೋಡುತ್ತೇನೆ. ನಿಮ್ಮ ಆಲೋಚನೆಗಳು ಒಂದು ಊರನ್ನೇ ಬೆಳಗಿಸುವ ಶಕ್ತಿ ಹೊಂದಿವೆ. ಆ ಶಕ್ತಿಯನ್ನು ರಾಜಕೀಯದ ಬಲೆಗೆ ಸಿಲುಕಿಸಿ, ನಿಮ್ಮನ್ನು ದಾರಿ ತಪ್ಪಿಸುವ ಕೆಲಸವನ್ನು ನಾನು ಎಂದಿಗೂ ಮಾಡುವುದಿಲ್ಲ. ಇದು ನನ್ನ ಮಾತಲ್ಲ, ನನ್ನ ಹೃದಯದ ಪ್ರತಿಜ್ಞೆ” ಎಂದು ಹೇಳಿದರು. ಯುವಕರು ತಮ್ಮ ಬದುಕಿನ ಶಿಲ್ಪಿಗಳಾಗಬೇಕು. ಯಾರೋ ಬಂದು ತಮ್ಮ ಬದುಕನ್ನು ಬದಲಿಸುತ್ತಾರೆ ಎಂದು ಕಾಯದೆ, ಸ್ವಂತ ಶ್ರಮ ಮತ್ತು ಪ್ರತಿಭೆಯ ಮೂಲಕ ಭವಿಷ್ಯ ಕಟ್ಟಿಕೊಳ್ಳಬೇಕು. ಕಾಲೇಜು ಶಿಕ್ಷಣ, ಪುಸ್ತಕ ಓದು, ಕಠಿಣ ಪರಿಶ್ರಮ ಹಾಗೂ ಉತ್ತಮ ನಡೆ-ನುಡಿಗಳೇ ಯುವಕರ ನಿಜವಾದ ಬಂಡವಾಳ ಎಂದು ಅವರು ತಿಳಿಸಿದರು. ದುಶ್ಚಟಗಳಿಂದ ದೂರವಿರಿ ದುಶ್ಚಟಗಳು ಯುವಕರ ಅಮೂಲ್ಯವಾದ ಯೌವನವನ್ನು ಹಾಳು ಮಾಡುವುದಲ್ಲದೆ, ಕುಟುಂಬದ ನೆಮ್ಮದಿಯನ್ನೂ ಕಸಿದುಕೊಳ್ಳುತ್ತವೆ. ಅವು ಕನಸುಗಳನ್ನು ಕಳ್ಳತನ ಮಾಡುತ್ತವೆ. ಆದ್ದರಿಂದ ಯುವಕರು ಯಾವುದೇ ದುಶ್ಚಟಗಳಿಗೆ ಒಳಗಾಗದೆ, ಆರೋಗ್ಯಕರ ಮತ್ತು ಸಕಾರಾತ್ಮಕ ಜೀವನಶೈಲಿಯನ್ನು ರೂಢಿಸಿಕೊಳ್ಳಬೇಕು ಎಂದು ಶಾಸಕ ಡಾ. ಶ್ರೀನಿವಾಸ್ ಎನ್.ಟಿ. ಸಲಹೆ ನೀಡಿದರು.1
- ಅಳವಂಡಿ-ಬೆಟ್ಟಗೇರಿ ಏತ ನೀರಾವರಿ ಯೋಜನೆಯಡಿ ಶೀಘ್ರವೇ 9000 ಎಕರೆ ಜಮೀನಿಗೆ ನೀರು: ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಕೊಪ್ಪಳ : ತಾಲೂಕಿನ ಬಹುನಿರೀಕ್ಷಿತ ಅಳವಂಡಿ-ಬೆಟ್ಟಗೇರಿ ಏತ ನೀರಾವರಿ ಯೋಜನೆಯ ಕಾಮಗಾರಿಗಳು ಭರದಿಂದ ಸಾಗುತ್ತಿದ್ದು, ಶೀಘ್ರದಲ್ಲೇ ಒಟ್ಟು 9000 ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು ಎಂದು ಕೊಪ್ಪಳ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ್ ಅವರು ಹೇಳಿದರು. ನಗರದ ಎಸ್.ಎಫ್. ಶಾಲೆಯ ಎದುರುಗಡೆಯಿರುವ ತಮ್ಮ ಕಾರ್ಯಾಲಯದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಅಳವಂಡಿ ಬೇಟಗೇರಿ ಏತ ನೀರಾವರಿ ಯೋಜನೆಯು ಕೊಪ್ಪಳ ತಾಲ್ಲೂಕಿನ ಹನಕುಂಟಿ ಗ್ರಾಮದಿಂದ 2 ಕಿ.ಮೀ. ಹತ್ತಿರದಲ್ಲಿರುತ್ತದೆ. ಸದರಿ ಯೋಜನೆಗೆ ಮೂಲತಃ ಕೃಷ್ಣ ಕೊಳ್ಳದ ವ್ಯಾಪ್ತಿಯಲ್ಲಿ ಬರುವ ತುಂಗಭದ್ರ ನದಿಯಿಂದ 0.50 ಟಿ.ಎಂ.ಸಿ ನೀರನ್ನು ಹಂಚಿಕೆ ಮಾಡಲಾಗಿದೆ. ಈ ಯೋಜನೆಯಿಂದ ಕೊಪ್ಪಳ ಜಿಲ್ಲೆಯ ವ್ಯಾಪ್ತಿಗೆ ಒಳಪಡುವ ಒಟ್ಟು 9000 ಏಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಬಹುದಾಗಿರುತ್ತದೆ. ಈ ಯೋಜನೆಗೆ ಈ ಹಿಂದೆ 87.10 ಕೋಟಿಗಳಿಗೆ ಡಿ.ಪಿ.ಆರ್ ಅನ್ನು ಸರ್ಕಾರಕ್ಕೆ ಸಲ್ಲಸಿ ದಿನಾಂಕ: 30.12.2014 ರಂದು ಆಡಳಿತಾತ್ಮಕ ಅನುಮೋದನೆ ನೀಡಲಾಗಿರುತ್ತದೆ ಎಂದರು. ಜಾಕ್‌ವೆಲ್, ಇನ್‌ಟೇಕ್ ಕಾಲುವೆ. ರೈಸಿಂಗ್ ಮೇನ್, ಡೆಲಿವರಿ ಚೇಂಬರ್ ಹಾಗೂ ಟ್ರಾನ್ಸ್‌ಮಿಷನ್ ಲೈನ್, 33 ಕೆವಿ ಸಬ್ ಸ್ಟೇಷನ್ ನಿರ್ಮಾಣ ಕಾಮಗಾರಿಗಳನ್ನು ಗುತ್ತಿಗೆದಾರರಾದ ಜಿ.ಶಂಕರ್ ರವರಿಗೆ ಟೆಂಡರ್ ಆಧಾರದ ಮೇಲೆ 61.30 ಕೋಟಿಗಳಿಗೆ 21.02.2016 ರಂದು ವಹಿಸಲಾಗಿತ್ತು. ಈ ಯೋಜನೆಯಡಿ ಜಾಕ್‌ವೆಲ್, ಇನ್‌ಟೀಕ್ ಕಾಲುವೆ ಉದ್ದ 1.02 ಕಿ.ಮೀ. 16.50ಕಿ.ಮೀ ಉದ್ದ ಎಂಎಸ್ ರೈಸಿಂಗ್ ಮೇನ್, 1760 ಹೆಚ್.ಪಿ ಸಾಮರ್ಥ್ಯದ 2+1 ಪಂಪ್ ಮತ್ತು ಮೋಟಾರಗಳು, 2 ಡೆಲವರಿ ಚೇಂಬರ್‌ಗಳು. ಜಾಕ್‌ವೆಲ್ ಪಕ್ಕದಲ್ಲಿ 33/6.6 ಕೆವಿ ಸಬ್ ಸ್ಟೇಷನ್, 6.10 ಕಿ.ಮೀ ಉದ್ದ ಟ್ರಾನ್ಸ್‌ಮಿಷನ್ ಲೈನ್ ಹಾಗೂ ಟರ್ಮಿನಲ್ ಬೇ ಸಿರ್ಮಿಸಲಾಗಿರುತ್ತದೆ. ದಿನಾಂಕ 10.09.2026 ರಂದು ಸಬ್ ಸ್ಟೇಷನ್ ಚಾರ್ಜ್ ಮಾಡಲಾಗಿರುತ್ತದೆ ಎಂದು ಹೇಳಿದರು. ಪ್ರತಿ ಪಂಪ್‌ನಿಂದ 28.28 ಕ್ಯೂಸೆಕ್ಸ್ ರಂತೆ ಒಟ್ಟು 56.56 ಕ್ಯೂಸೆಕ್ಸ್ ನೀರನ್ನು ಹರಿಸಲಾಗುವುದು ಹಾಗೂ ಜಲಾಶಯದ ನೀರಿನ ಮಟ್ಟ 1605.00 ಅಡಿ (ಜಲಾಶಯದ ಸಾಮರ್ಥ್ಯ 28.70 ಟಿ.ಎಂ.ಸಿ ವರೆಗು) ತಲುಪುವವರೆಗೆ ಲಭ್ಯವಿರುವ ನೀರನ್ನು ಪಡೆಯಬಹುದು. ಈ ಯೋಜನೆಯ ಹೆಚ್ಚುವರಿ 3000 ಎಕರೆ ಕ್ಷೇತ್ರದ ನೀರಾವರಿ ಕಲ್ಪಿಸುವ ಕಾಮಗಾರಿಯನ್ನು ಎ ವಿಆರ್ ಕನ್ಸಟ್ರಕ್ಷನ್ಸ್ ಇವರಿಗೆ ರೂ:4.59 ಕೋಟಿಗಳಿಗೆ ದಿನಾಂಕ: 30/03/2021 ರಂದು (9 ತಿಂಗಳ ಅವಧಿಗೆ) ಟರ್ನಕೀ ಆಧಾರದ ಮೇಲೆ ವಹಿಸಿದ್ದು, ಈ ಕಾಮಗಾರಿಯಲ್ಲಿ ರೈಸಿಂಗ್ ಮೇನ್ ಪೂರ್ಣಗೊಂಡಿದೆ ಮತ್ತು ಪಂಪುಗಳನ್ನು ಅಳವಡಿಸುವುದು ಹಾಗೂ ಸಬ್‌ಸ್ಟೇಷನ್ ಕಾಮಗಾರಿಗಳು ಬಾಕಿ ಉಳಿದಿರುತ್ತದೆ ಎಂದರು. ಪ್ರಸ್ತುತ ಅಳವಂಡಿ-ಬೆಟ್ಟಗೇರಿ ಏತ ನೀರಾವರಿ ಯೋಜನೆಯ ಪರಿಷ್ಕೃತ ಡಿ.ಪಿ.ಆರ್ ಅನ್ನು ಕರ್ನಾಟಕ ನೀರಾವರಿ ನಿಗಮದ ನಿರ್ದೇಶಕರ ಮಂಡಳಿಯ 105ನೇ ಸಭೆಯಲ್ಲಿ ಮಂಡಿಸಿದ್ದು. ರೂ.211.00 ಕೋಟಿಗಳಿಗೆ ಅನುಮೋದನೆ ನೀಡಿರುತ್ತಾರೆ. ಯೋಜನೆಯಡಿ 6000 ಎಕರೆ ಜಮೀನುಗಳಗೆ ಈಗಾಗಲೇ ಒಟ್ಟಾರೆ 39.78 ಕಿ.ಮೀ ಉದ್ದದ ಮುಖ್ಯ ಕಾಲುವೆ ಹಾಗೂ ಉಪ ಕಾಲುವೆಗಳ ನಿರ್ಮಾಣ ಪೂರ್ಣಗೊಂಡಿರುತ್ತದೆ ಎಂದು ತಿಳಿಸಿದರು. 3000 ಏಕರೆ ಜಮೀನುಗಳಗೆ ಮಧ್ಯ ಪ್ರದೇಶ ಮಾದರಿಯ ಮುಖ್ಯ ಪೈಪ್‌ಲೈನ್ ಹಾಗೂ ವಿತರಣಾ ಕಾಲುವೆ ಪೈಪ್‌ಲೈನ್ ಕಾಮಗಾರಿಯನ್ನು ರೂ. 11.50 ಕೋಟಿಗಳಿಗೆ ಟೆಂಡರ್ ಕರೆಯಲಾಗಿದ್ದು, ಚಿದು ಇನ್ಫ್ರಾಟೆಕ್ ಪ್ರೈ.ಲಿ (CHIDU INFRATECH PRIVATE LIMITED) ಇವರಿಗೆ ರೂ:11.80 ಕೋಟಿಗಳಿಗೆ ದಿನಾಂಕ: 22/08/2025 ರಂದು (9 ತಿಂಗಳ ಅವಧಿಗೆ) ಟರ್ನಕೀ ಆಧಾರದ ಮೇಲೆ ವಹಿಸಲಾಗಿರುತ್ತದೆ. ಈ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿರುತ್ತದೆ ಎಂದರು. ಡೆಲಿವರಿ ಚೇಂಬರ್ ನಿಂದ ಬ್ಲಾಕ್-1 ಗೆ ಹೆ.ಡಿ.ಪಿ.ಇ ಪೈಪ್ (Dia-355 to 125) ನ ಒಟ್ಟು ಉದ್ದ 8.7 ಕಿ.ಮೀ, ಪೈಪ್ ನೆಟ್‌ವರ್ಕ್ ನಿಂದ 1243 ಎಕರೆ ಬ್ಲಾಕ್-2 ಗೆ ಎಂಎಸ್ ಪೈಪ್ (Dia-380, 360, 330) ಹಾಗೂ ಹೆ.ಡಿ.ಪಿ.ಇ ಪೈಪ್ (Dia-355 to 125)ನ ಒಟ್ಟು ಉದ್ದ 16.82 ಕಿ.ಮೀ ಪೈಪ್ ನೆಟ್‌ವರ್ಕ್ ನಿಂದ 1757 ಎಕರೆ ಒಟ್ಟಾರೆ 3000 ಎಕರೆ ಪ್ರದೇಶಕ್ಕೆ ನೀರಾವರಿ ಕಲ್ಪಸಲು ಯೋಜಿಸಲಾಗಿರುತ್ತದೆ. ಪ್ರತಿ 20 ಹೆಕ್ಟೇರ್ ಜಮೀನುಗಳಗೆ ಪೈಪ್ ಗಳಂದ ಚೆಕ್ ಓಟ್ ಲೆಟ್ ನಿಂದಾ ನೀರನ್ನು ಒದಗಿಸಲಾಗುವುದು ಎಂದು ಹೇಳಿದರು. *ಒಟ್ಟು 9 ಹಳ್ಳಿಗಳಿಗೆ ಅನುಕೂಲ:* ಅಳವಂಡಿ-ಬೆಟ್ಟಗೇರಿ ಏತ ನೀರಾವರಿ ಯೋಜನೆಯಿಂದ ಕೊಪ್ಪಳ ತಾಲೂಕಿನ ಮೈನಾಳ್ಳಿ, ಹಂದ್ರಾಳ, ಅಳವಂಡಿ, ಕವಲೂರು, ಹಿರೇಸಿಂದೋಗಿ, ಬಿಕ್ಕನಹಳ್ಳಿ, ಬೆಟ್ಟಗೇರಿ ಹಾಗೂ ಕುಕನೂರು ತಾಲೂಕಿನ ತಳಕಲ್ಲು, ಕೋಮಲಾಪುರ ಸೇರಿದಂತೆ ಒಟ್ಟು 9 ಗ್ರಾಮಗಳ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ದೊರೆಯಲಿದೆ. ಅಲ್ಲದೆ, 9000 ಎಕರೆ ಹೊಲಗಾಲುವೆಗಳ ನಿರ್ಮಾಣಕ್ಕಾಗಿ 47 ಕೋಟಿ ರೂ. ಅನುದಾನ ಅಗತ್ಯವಿದೆ ಎಂದು ಶಾಸಕರು ವಿವರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಂಸದರಾದ ಕರಡಿ ಸಂಗಣ್ಣ, ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರಸನ್ನ ಗಡಾದ, ಜಿ.ಪಂ ಮಾಜಿ ಅಧ್ಯಕ್ಷರಾದ ಎಸ್.ಬಿ. ನಾಗರಳ್ಳಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.1
- ಮಸ್ಕಿ ಟಾಟಾ ಎಸಿ ಚಾಲಕರ–ಮಾಲಕರ ಸಂಘದಿಂದ ಅದ್ದೂರಿ ಗಣೇಶ ವಿಸರ್ಜನೆ ಟಾಟಾ ಎಸಿ ಚಾಲಕರ–ಮಾಲಕರ ಸಂಘದಿಂದ ಅದ್ದೂರಿ ಗಣೇಶ ವಿಸರ್ಜನೆ ಮಸ್ಕಿ: ಪಟ್ಟಣದ ಹಳೆ ಬಸ್ ನಿಲ್ದಾಣದಲ್ಲಿ ಮಲ್ಲಿಕಾರ್ಜುನ ಬಂಡೆ ಟಾಟಾ ಎಸಿ ಚಾಲಕರ ಹಾಗೂ ಮಾಲಕರ ಸಂಘದ ವತಿಯಿಂದ ಗಣೇಶ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಸಂಘದ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಗಣಪತಿ ಮೂರ್ತಿಯ ವಿಸರ್ಜನಾ ಕಾರ್ಯಕ್ರಮವನ್ನು ಸೋಮವಾರ ಸಂಜೆ ಸುಮಾರು 7 ಗಂಟೆಗೆ ಸಂಭ್ರಮದಿಂದ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಸದಸ್ಯರು, ಚಾಲಕರು ಹಾಗೂ ಮಾಲಕರು ಡಿಜೆ ಸಂಗೀತಕ್ಕೆ ಹೆಜ್ಜೆ ಹಾಕಿ, ನೃತ್ಯ ಮಾಡುವ ಮೂಲಕ ಹಬ್ಬದ ಸಂಭ್ರಮವನ್ನು ಹೆಚ್ಚಿಸಿದರು. ಗಣೇಶ ಮೂರ್ತಿಯನ್ನು ಮೆರವಣಿಗೆಯಲ್ಲಿ ಕೊಂಡೊಯ್ದು ಭಕ್ತಿಭಾವ ಹಾಗೂ ಸಡಗರದಿಂದ ವಿಸರ್ಜನೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸಂಘದ ಸದಸ್ಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.1
- ಗೌರಸಮುದ್ರ ಜಾತ್ರೆಗೆ ಆಗಮಿಸಿ ದೇವಿಯ ದರ್ಶನ ಪಡೆದ ಜಿಲ್ಲಾ ಉಸ್ತುವಾರಿ ಸಚಿವ ಟಿ .ರಘುಮೂರ್ತಿ ಚಳ್ಳಕೆರೆ ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳ ಜನರನ್ನು ಒಂದೆಡೆ ಬೆಸೆಯುವ ಜಾತ್ರೆ ಎಂಬ ಖ್ಯಾತಿ ಹೊಂದಿರುವ ಚಳ್ಳಕೆರೆ ತಾಲ್ಲೂಕಿನ ತಳಕು ಹೋಬಳಿಯ ಗೌರಸಮುದ್ರ ಮಾರಮ್ಮದೇವಿ ಜಾತ್ರೆ ಇಂದು ಸಡಗರ ಸಂಭ್ರಮದಿಂದ ಜರುಗಿತು. ಪ್ರತಿವರ್ಷ ಶ್ರಾವಣಮಾಸ ಆರಂಭದ ಪ್ರಥಮ ಮಂಗಳವಾರ ಇಲ್ಲಿ ದೇವಿಯ ದೊಡ್ಡ ಪರಿಷೆ ನಡೆಸಿಕೊಂಡು ಬರಲಾಗುತ್ತಿದೆ.ದೇವಿಯ ಮೂಲ ಆಂಧ್ರಪ್ರದೇಶದ ನಿಡಗಲ್ಲು ಆಗಿರುವ ಕಾರಣ ರಾಜ್ಯ ಮತ್ತು ಆಂಧ್ರದ ಸಾವಿರಾರು ಭಕ್ತರು ಜಂಟಿಯಾಗಿ ಜಾತ್ರೆಯಲ್ಲಿ ಭಾಗಿಯಾಗಿ ತಾಯಿ ಮಾರಮ್ಮಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ ಕನ್ನಡ, ತೆಲುಗು ಭಾಷೆಗಳ ಜುಗಲ್ ಬಂದಿಯನ್ನು ಜಾತ್ರೆಯಲ್ಲಿ ನಾವು ಕಾಣಬಹುದಾಗಿದಿ 15 ದಿನ ಮುಂಚಿತವಾಗಿ ದೇವಿಯ ಒಪ್ಪಿಗೆ ಪಡೆದು ಜಾತ್ರೆಗೆ ಚಾಲನೆ ನೀಡಲಾಗುತ್ತಿ. ಅನುಮತಿ ಕೋರುವ ದಿನ ಊರಿನಲ್ಲಿ ಸಾರು ಚೆಲ್ಲಲಾಗುತ್ತು ಇದಾದ ನಂತರ ಜಾತ್ರೆ ತನಕ ಗ್ರಾಮಸ್ಥರು ಸ್ನಾನ, ಅಡುಗೆ, ಉಡುಗೆ ತೊಡಿಗೆ ವಿಚಾರದಲ್ಲಿ ಹಲವು ಕಟ್ಟುಪಾಡುಗಳನ್ನು ಕಡ್ಡಾಯಪಾಲಿಸಿಕೊಂಡು ಬಂದಿದ್ದರು.. ಗೌರಸಮುದ್ರ ಮಾರಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ನಂತರ ದೊಡ್ಡ ಜಾತ್ರೆಗೆ ದೇವಿಯ ಉತ್ಸವ ಮೂರ್ತಿಯನ್ನು ಮೆರವಣಿಗೆಯಲ್ಲಿ ತುಂಬಲಿನ ಪ್ರದೇಶಕ್ಕೆ ವಾದ್ಯಗಳೊಂದಿಗೆ ದೇವಿಯಆಭರಣ, ವಸ್ತ್ರಗಳನ್ನು ಬುಡಕಟ್ಟು ಸಂಸ್ಕೃತಿಯ ವಾದ್ಯಗಳೊಂದಿಗೆ ತುಂಬಲಿಗೆ ದೇವಿಯನ್ನು ಕರೆತರಲಾಯಿತು . ಮಾರಮ್ಮ ದೇವಿ ತುಮುಲಗಿ ಬರುವ ದೃಶ್ಯವನ್ನು ನೋಡುವುದು ಜಾತ್ರೆಯ ಪ್ರಮುಖ ಘಟ್ಟ. ದೇವಿ ತುಮುಲು ತುಂಬಿಲಿನ ಲ್ಲಿ ಜಾತ್ರೆ ನಡೆಯುವ ಸ್ಥಳಕ್ಕೆ ಬರುತ್ತಿದ್ದಂತೆ ಭಕ್ತರು ಬೆಳೆದಂತಹ ಈರುಳ್ಳಿ ಕೋಳಿ ಕುರಿಮರಿ ಸೂರಮೆಣಸು ತಾಯಿಯ ಮೇಲೆ ತೂರುವುದು ಮೂಲಕ ತಮ್ಮ ಹರಕೆಯನ್ನಿ ತೀರಿಸಿದರು. ಮಾರಿದೇವತೆಯ ತವರ ಮನೆ ಎಂದು ಕರೆಯಲಾಗುವ ನೀಡಗಲ್ಲಿನಿಂದ ತಂದ ಮೀಸಲು ಹಸಿ ಹಾಲು, ಬೆಳ್ಳಿ ಕಣ್ಣು ಹಾಗೂ ಕೋರೆ ಮಿಸ್ಸೆಯನ್ನು ದೇವಿಗೆ ಭಕ್ತಿಯಿಂದ ಅರ್ಪಿಸಲಾಯಿತು . ನಂತರ ತುಂಬಲಿನ ಮುಂದೆ ಇರುವ ಬೊಮ್ಮಲಿಂಗ ದೇವರ ದೀಪದ ಕಂಬದ ಮೇಲೆ ಏರಿ ದೀಪ ಹಚ್ಚಿದ ಕಷ್ಟ ಕಾರ್ಪಣ್ಯಗಳು ದೂರವಾಗಲಿ, ಮಳೆ ಬೆಳೆ ಚೆನ್ನಾಗಿ ಬರಲಿ ಹಾಗೂ ಜಾನುವಾರುಗಳಿಗೆ ಯಾವುದೇ ರೋಗರುಚಿನ ಬಾರ್ದಿರಲಿ ಎಂದು ಪ್ರಾರ್ಥಿಸಿದರು ಲಕ್ಷಾಂತರ ಭಕ್ತರು ದೇವಿಯ ದರ್ಶನವನ್ನು ಪಡೆದರು. ದೇವಿಯ ದರ್ಶನಕ್ಕೆ ಬಂದಂತಹ ಲಕ್ಷಾಂತರ ಭಕ್ತರ ಯಾವುದೇ ತೊಂದರೆ ಆಗದಂತೆ ಪೊಲೀಸ್ ಇಲಾಖೆ ತಾಲೂಕು ಆಡಳಿತ ಮುಂಜಾಗ್ರತ ಕ್ರಮಗಳನ್ನು ಕೈಗೊಂಡು ಕುಡಿಯುವ ನೀರು ದೇವಯ ದರ್ಶನಕ್ಕೆ ಅನುಕೂಲ ಮಾಡಿಕೊಟ್ಟರು.. ಜಾತ್ರೆಗೆ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಟಿ ರಘುಮೂರ್ತಿ ಮೊಳಕಾಲ್ಮೂರು ಶಾಸಕ ಎನ್ ವೈ ಗೋಪಾಲಕೃಷ್ಣ ಜಿಲ್ಲಾಧಿಕಾರಿ ರಮ್ಯ ಜಿಲ್ಲಾ ಎಸ್ ಪಿ ರಂಜಿತ್ ಕುಮಾರ್ ಬಂಡವರು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಜನಪ್ರತಿನಿಧಿಗಳು ಭಕ್ತರು ಜಾತ್ರೆಯಲ್ಲಿ ಭಾಗವಹಿಸಿದರು. ತಕ್ಷಣವೇ ತುಮಲು ಪ್ರದೇಶ ಬಿಟ್ಟು ಖಾಲಿ ಖಾಲಿ ಮಾಡಿದರು. ಪ್ರತಿವರ್ಷದಂತೆ ಈ ವರ್ಷವೂ ಸಹ ಲಕ್ಷಾಂತರ ಭಕ್ತರು ಈ ಜಾತ್ರೆಯಲ್ಲಿ ಭಾಗಿಯಾದರು..2
- ಗೋನೂರಿನಲ್ಲಿ ಗಂಗಾಪೂಜೆ: ಭದ್ರೆಯನ್ನು ಸ್ವಾಗತಿಸಿದ ಹೋರಾಟಗಾರರು" 🚩 #ಭದ್ರಾನೀರು #ಚಿತ್ರದುರ್ಗ #ನೀರಾವರಿಹೋರಾಟ #ಗೋನೂರು #ಗಂಗಾಪೂಜೆ #ಭದ್ರಾಮೇಲ್ದಂಡೆ #ಸಮಗ್ರನೀರಾವರಿ #ಬರಡುನೆಲಹಸಿರು #ಕೋದಂಡರಾಮಯ್ಯ #ಎಂಜಯಣ್ಣ #ಮುರುಘರಾಜೇಂದ್ರಒಡೆಯರ್ #ಚಿತ್ರದುರ್ಗಜಿಲ್ಲೆ #ಮೊಳಕಾಲ್ಮೂರು #ಚಳ್ಳಕೆರೆ #ಈಚಘಟ್ಟ #ಬೇಡರರೆಡ್ಡಿಹಳ್ಳಿ #ಕಬೀರಾನಂದಮಠ #ಗೋನೂರುಭದ್ರಾ #ನೀರಾವರಿ #ರೈತಹೋರಾಟ #ಕೆರೆಕಟ್ಟೆ #ಅಣೆಕಟ್ಟು #ನೀರುಸ್ವಾಗತ #ಎರಡನೇಹಂತದಹೋರಾಟ #ಅರ್ಧಗೆಲುವು #ದಶಕಗಳಕನಸು #ರೋಮಾಂಚನದಕ್ಷ #ಪಿಕೋದಂಡರಾಮಯ್ಯ #ಬೇಡರರೆಡ್ಡಿಹಳ್ಳಿಬಸವರೆಡ್ಡಿ #ಕೆಎಸ್ನವೀನ್ #ಚಳ್ಳಕೆರೆಬಸವರಾಜ್ #ನರೇನಹಳ್ಳಿಅರುಣಕುಮಾರ್ #ಜೋಗಿಮಟ್ಟಿಮಹೇಶ್ಬಾಬು #ಗೌನಹಳ್ಳಿಗೋವಿಂದಪ್ಪ #ಶಿವಾಲಿಂಗಾನಂದಸ್ವಾಮೀಜಿ #ಹೋರಾಟಗಾರರಿಗೆನಮನ #ನೀರಿಗಾಗಿಬದುಕು #ಬರಡುನೆಲಕ್ಕೆಜೀವ #ಹಸಿರುಕ್ರಾಂತಿ #ನ್ಯಾಯಕ್ಕಾಗಿಹೋರಾಟ #ಸಂಕಲ್ಪ #BhadraWater #Chitradurga #IrrigationStruggle #Karnataka #BhadraUpperBank #WaterForAll #FarmersFight #GangaPooja #Gonuru #Molakalmuru #SaveFarmers #WaterRevolution #ಭದ್ರಾನೀರು #ಚಿತ್ರದುರ್ಗ #ನೀರಾವರಿಹೋರಾಟ #ಗೋನೂರು #ಗಂಗಾಪೂಜೆ #ಬರಡುನೆಲಹಸಿರು #ಕೋದಂಡರಾಮಯ್ಯ #ಎರಡನೇಹಂತದಹೋರಾಟ #BhadraWater #Chitradurga #Karnataka #IrrigationStruggle1
- ಗಣೇಶ ಮೂರ್ತಿಗೆ ವಿದ್ಯುತ್ ತಂತಿ ತಗುಲಿ ಅವಘಡ! ಇಬ್ಬರಿಗೆ ಗಾಯ; ತಪ್ಪಿದ ಭಾರೀ ದುರಂತ ಹೊಸಪೇಟೆ ನಗರದ ಹೊರವಲಯದಲ್ಲಿ ಗಣೇಶ ಮೂರ್ತಿಯನ್ನು ಟ್ರ್ಯಾಕ್ಟರ್ ಟ್ರಾಲಿಯಲ್ಲಿ ಸಾಗಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ಅವಘಡ ಸಂಭವಿಸಿದೆ. ವಿದ್ಯುತ್ ಪ್ರವಹಿಸಿದ ಪರಿಣಾಮ ಮೂರ್ತಿಗೆ ಬೆಂಕಿ ಹೊತ್ತಿಕೊಂಡಿದ್ದು, ಟ್ರಾಲಿಯಲ್ಲಿದ್ದ ಇಬ್ಬರು ಕೆಳಗೆ ಬಿದ್ದು ಗಾಯಗೊಂಡಿದ್ದಾರೆ. ಸ್ಥಳೀಯರು ತಕ್ಷಣ ಗಾಯಾಳುಗಳಿಗೆ ನೆರವು ನೀಡಿ ಆಸ್ಪತ್ರೆಗೆ ದಾಖಲಿಸಿದ್ದು, ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ರಸ್ತೆಗೆ ಇಳಿಬಿದ್ದಿದ್ದ ವಿದ್ಯುತ್ ತಂತಿಗಳ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಂತಹ ತಾಜಾ ಕರ್ನಾಟಕ ಸುದ್ದಿಗಳಿಗಾಗಿ ASN News24 Kannada ಅನ್ನು Follow & Subscribe ಮಾಡಿ. #ಹೊಸಪೇಟೆ #ವಿಜಯನಗರ #ಗಣೇಶೋತ್ಸವ #ಗಣೇಶಮೂರ್ತಿ #ವಿದ್ಯುತ್ ಅವಘಡ #ಕರ್ನಾಟಕಸುದ್ದಿ #KannadaNews #KarnatakaNews #Hospet #Vijayanagara #GaneshChaturthi #GaneshFestival #BreakingNews #LatestNews #NewsUpdate #ASNNews24Kannada1