ಭದ್ರಾವತಿ-ಸಹಕಾರ ಮಹಾ ಮಂಡಳಿ ನಿರ್ದೇಶಕರಾಗಿ ಬಿ.ಕೆ. ಶಿವಕುಮಾರ್ ಆಯ್ಕೆ ಭದ್ರಾವತಿ: ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳಿಯ ಶಿವಮೊಗ್ಗ ಜಿಲ್ಲಾ ಸಹಕಾರ ಕ್ಷೇತ್ರದ ಪ್ರತಿನಿಧಿ ಸ್ಥಾನಕ್ಕೆ ಮಂಗಳವಾರ ಬೆಂಗಳೂರಿನಲ್ಲಿ ನಡೆದ ಚುನಾವಣೆಯಲ್ಲಿ ಬಿ.ಕೆ.ಶಿವಕುಮಾರ್ ಅಭೂತ ಪೂರ್ವ ಗೆಲುವು ಸಾಧಿಸಿದ್ದಾರೆ. ಅವರಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಮತ್ತಿತರೆ ಸಹಕಾರಿ ಕ್ಷೇತ್ರದ ಗಣ್ಯರು ಅಭಿನಂದಿಸಿದ್ದಾರೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆದೇಶದಂತೆ ಹಾಗೂ ಶಾಸಕ ಬಿ.ಕೆ. ಸಂಗಮೇಶ್ವರ್ ಅವರ ಸಲಹೆ ಮೇರೆಗೆ ಜಿಲ್ಲಾ ಪ್ರತಿನಿಧಿ ಸ್ಥಾನಕ್ಕೆ ಸ್ಪರ್ಧಿಸಿದ ಜಿಲ್ಲಾ ಸಹಕಾರ ಬ್ಯಾಂಕಿನ ನಿರ್ದೇಶಕ ಹಾಗೂ ನಗರದ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ. ಕೆ.ಶಿವಕುಮಾರ್ ಗೆಲುವು ಸಾಧಿಸಿದ್ದಾರೆ. ಶಿವಕುಮಾರ್ ಅವರನ್ನು ಸಹಕಾರ ಸಚಿವ ಲಕ್ಷ್ಮಣ ಸವದಿ, ಮಹಾ ಮಂಡಳ ಅಧ್ಯಕ್ಷ ಜಿ.ಟಿ.ದೇವೇಗೌಡ, ಮಾಜಿ ಸಚಿವರಾದ ಎಸ್.ಟಿ.ಸೋಮ ಶೇಖರ್, ವಿನಯ್ ಕುಲಕರ್ಣಿ, ಶಾಸಕರಾದ ಬಿ.ಕೆ.ಸಂಗಮೇಶ್ವರ್, ಶಾಂತನಗೌಡ, ಚಿತ್ರದುರ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಗಿರೀಶ್ ಮತ್ತಿತರರು ಅಭಿನಂದಿಸಿದ್ದಾರೆ. ಈ ಸಂದರ್ಭ ಕ್ಷೇತ್ರದ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಎಚ್.ಎಲ್. ಷಡಾಕ್ಷರಿ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಮಲ್ಲಿಕಾರ್ಜುನ್, ತಾಲೂಕು ವಿದ್ಯುತ್ ಗ್ರಾಹಕರ ಸಮಿತಿ ಅಧ್ಯಕ್ಷ ಬಸವಂತಪ್ಪ, ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ದಶರಥಗಿರಿ, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಲೋಕೇಶ್ ಮತ್ತಿತರರು ಹಾಜರಿದ್ದರು.
ಭದ್ರಾವತಿ-ಸಹಕಾರ ಮಹಾ ಮಂಡಳಿ ನಿರ್ದೇಶಕರಾಗಿ ಬಿ.ಕೆ. ಶಿವಕುಮಾರ್ ಆಯ್ಕೆ ಭದ್ರಾವತಿ: ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳಿಯ ಶಿವಮೊಗ್ಗ ಜಿಲ್ಲಾ ಸಹಕಾರ ಕ್ಷೇತ್ರದ ಪ್ರತಿನಿಧಿ ಸ್ಥಾನಕ್ಕೆ ಮಂಗಳವಾರ ಬೆಂಗಳೂರಿನಲ್ಲಿ ನಡೆದ ಚುನಾವಣೆಯಲ್ಲಿ ಬಿ.ಕೆ.ಶಿವಕುಮಾರ್ ಅಭೂತ ಪೂರ್ವ ಗೆಲುವು ಸಾಧಿಸಿದ್ದಾರೆ. ಅವರಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
ಸೇರಿದಂತೆ ಮತ್ತಿತರೆ ಸಹಕಾರಿ ಕ್ಷೇತ್ರದ ಗಣ್ಯರು ಅಭಿನಂದಿಸಿದ್ದಾರೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆದೇಶದಂತೆ ಹಾಗೂ ಶಾಸಕ ಬಿ.ಕೆ. ಸಂಗಮೇಶ್ವರ್ ಅವರ ಸಲಹೆ ಮೇರೆಗೆ ಜಿಲ್ಲಾ ಪ್ರತಿನಿಧಿ ಸ್ಥಾನಕ್ಕೆ ಸ್ಪರ್ಧಿಸಿದ ಜಿಲ್ಲಾ ಸಹಕಾರ ಬ್ಯಾಂಕಿನ ನಿರ್ದೇಶಕ ಹಾಗೂ ನಗರದ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ. ಕೆ.ಶಿವಕುಮಾರ್
ಗೆಲುವು ಸಾಧಿಸಿದ್ದಾರೆ. ಶಿವಕುಮಾರ್ ಅವರನ್ನು ಸಹಕಾರ ಸಚಿವ ಲಕ್ಷ್ಮಣ ಸವದಿ, ಮಹಾ ಮಂಡಳ ಅಧ್ಯಕ್ಷ ಜಿ.ಟಿ.ದೇವೇಗೌಡ, ಮಾಜಿ ಸಚಿವರಾದ ಎಸ್.ಟಿ.ಸೋಮ ಶೇಖರ್, ವಿನಯ್ ಕುಲಕರ್ಣಿ, ಶಾಸಕರಾದ ಬಿ.ಕೆ.ಸಂಗಮೇಶ್ವರ್, ಶಾಂತನಗೌಡ, ಚಿತ್ರದುರ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಗಿರೀಶ್ ಮತ್ತಿತರರು ಅಭಿನಂದಿಸಿದ್ದಾರೆ. ಈ ಸಂದರ್ಭ ಕ್ಷೇತ್ರದ ಗ್ರಾಮಾಂತರ
ಕಾಂಗ್ರೆಸ್ ಅಧ್ಯಕ್ಷ ಎಚ್.ಎಲ್. ಷಡಾಕ್ಷರಿ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಮಲ್ಲಿಕಾರ್ಜುನ್, ತಾಲೂಕು ವಿದ್ಯುತ್ ಗ್ರಾಹಕರ ಸಮಿತಿ ಅಧ್ಯಕ್ಷ ಬಸವಂತಪ್ಪ, ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ದಶರಥಗಿರಿ, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಲೋಕೇಶ್ ಮತ್ತಿತರರು ಹಾಜರಿದ್ದರು.
- ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ಮಲೆನಾಡಿನ ರೈತರು ಆತಂಕ ಪಡುವ ಅಗತ್ಯವಿಲ್ಲ: ಸಚಿವ ಮಧು ಬಂಗಾರಪ್ಪ ಕಸ್ತೂರಿ ರಂಗನ್ ಸಮಿತಿ ವರದಿಯ ಹಿನ್ನೆಲೆಯಲ್ಲಿ ಪಶ್ಚಿಮ ಘಟ್ಟಗಳ ಸಂರಕ್ಷಣೆಗಾಗಿ ಕೇಂದ್ರ ಸರ್ಕಾರವು 7ನೇ ಬಾರಿಗೆ ಕರಡು ಅಧಿಸೂಚನೆ ಹೊರಡಿಸಿದೆ. ಈಗಾಗಲೇ ವಿಧಾನಸಭೆಯಲ್ಲಿ ಈ ವರದಿಯನ್ನು ತಿರಸ್ಕರಿಸುವ ತೀರ್ಮಾನವನ್ನು ತೆಗೆದುಕೊಂಡು ಕೇಂದ್ರಕ್ಕೆ ಕಳುಹಿಸಿರುವುದರಿಂದ ಈ ವರದಿಯ ಜಾರಿಗೆ ಬಗ್ಗೆ ಯಾರೂ ಆತಂಕ ಪಡಬೇಕಾಗಿಲ್ಲ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ರಾಜ್ಯ ಸರ್ಕಾರ ಈ ವರದಿಯನ್ನು ತಿರಸ್ಕರಿಸಿರುವುದಾಗಿ ಕೇಂದ್ರಕ್ಕೆ ಅಧಿಕೃತವಾಗಿ ಮಾಹಿತಿ ನೀಡಿದ್ದರೂ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಈಗ ಮತ್ತೆ ಪಶ್ಚಿಮ ಘಟ್ಟಗಳಲ್ಲಿನ ಪರಿಸರ ಸೂಕ್ಷ್ಮ ಪ್ರದೇಶ (ESA) ಗುರುತಿಸಿ, ಹೊಸ ಕರಡು ಅಧಿಸೂಚನೆ ಪ್ರಕಟಿಸಿದೆ. ಇದು ಖಂಡನೀಯ. ಈ ಕರಡು ಅಧಿಸೂಚನೆಯನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಈಗಾಗಲೇ ಈ ವಿಷಯದ ಕುರಿತು ರಾಜ್ಯ ಸರ್ಕಾರ ಸ್ಪಷ್ಟ ತೀರ್ಮಾನ ತೆಗೆದುಕೊಂಡಿದೆ. ಅರಣ್ಯ ಸಚಿವರಾದ ಶ್ರೀ ರಾಮಲಿಂಗರೆಡ್ಡಿಯವರು ಸಹ ವಿಧಾನಸಭೆಯಲ್ಲಿಯೇ ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿದ್ದಾರೆ. ಕಸ್ತೂರಿ ರಂಗನ್ ಸಮಿತಿ ವರದಿ ಹೇಳಿರುವಂತೆಯೇ ಕರ್ನಾಟಕದ ರಾಜ್ಯದ 1,576 ಗ್ರಾಮ ವ್ಯಾಪ್ತಿಯ 20,668 ಚದರ ಕಿ.ಮೀ. ಪ್ರದೇಶವನ್ನು ʻಪರಿಸರ ಸೂಕ್ಷ್ಮ ಪ್ರದೇಶʼ ಎಂದು ಈ ಕರಡು ಅಧಿಸೂಚನೆಯಲ್ಲಿ ಗುರುತಿಸಲಾಗಿದೆ. ಇದರಲ್ಲಿ ಶಿವಮೊಗ್ಗ ಜಿಲ್ಲೆಯ 484 ಗ್ರಾಮಗಳು ಪ್ರಸ್ತಾವಿತ ಪಟ್ಟಿಯಲ್ಲಿವೆ. ಜನವಸತಿ ಪ್ರದೇಶ, ಕೃಷಿ ಭೂಮಿ ಇರುವ ಪ್ರದೇಶವನ್ನೂ ʻಪರಿಸರ ಸೂಕ್ಷ್ಮ ಪ್ರದೇಶʼ ಎಂದು ಗುರುತಿಸಿರುವುದರಿಂದ ಮಲೆನಾಡಿನ ರೈತರು ಸಹಜವಾಗಿಯೇ ಆತಂಕಗೊಂಡಿದ್ದಾರೆ. ಆದರೆ ಸರ್ಕಾರ ಈ ವರದಿಯ ಜಾರಿಗೆ ಅವಕಾಶ ನೀಡುವುದಿಲ್ಲ. ಈ ಕರಡು ಅಧಿಸೂಚನೆಯನ್ನು ವಿರೋಧಿಸಲಿದೆ. ಹೀಗಾಗಿ ಮಲೆನಾಡಿನ ಜನರು ಆತಂಕ ಪಡುವ ಅಗತ್ಯ ಇಲ್ಲ. ಮಲೆನಾಡಿನ ರೈತರ ಹಿತಾಸಕ್ತಿಗೆ ಧಕ್ಕೆಯಾಗುವ ಯಾವುದೇ ಕ್ರಮಕ್ಕೆ ನಮ್ಮ ಸರ್ಕಾರ ಅವಕಾಶ ನೀಡುವುದಿಲ್ಲ. ನಮ್ಮ ಸರ್ಕಾರ ರೈತರ ಪರವಾಗಿದೆ. ಈ ವಿಚಾರವನ್ನು ಈಗಾಗಲೇ ನಮ್ಮ ಪಕ್ಷದ ಹಿರಿಯ ನಾಯಕರಾದ ಶ್ರೀ ಆರ್.ವಿ. ದೇಶಪಾಂಡೆ, ಶಾಸಕ ಮಿತ್ರರಾದ ಶ್ರೀ ಭೀಮಣ್ಣ ಟಿ. ನಾಯಕ್, ಶ್ರೀ ಟಿ.ಡಿ. ರಾಜೇಗೌಡ, ಶ್ರೀ ಎಚ್. ಡಿ. ತಮ್ಮಯ್ಯ ಹಾಗೂ ಶ್ರೀ ಎ.ಎಸ್. ಪೊನ್ನಣ್ಣ ಅವರು ಸದನದ ಒಳಗೂ ಮತ್ತು ಹೊರಗೆ ಪ್ರಸ್ತಾಪಿಸಿ ಚರ್ಚಿಸಿದ್ದಾರೆ. ಸರ್ಕಾರ ಈ ವರದಿ ಜಾರಿಗೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿಕೆ ನೀಡಿದೆ. ವಿಪಕ್ಷ ನಾಯಕರು ಈ ವಿಚಾರದಲ್ಲಿ ಕೇಂದ್ರ ಸರ್ಕಾರದ ತೀರ್ಮಾನವನ್ನು ಖಂಡಿಸುವುದಕ್ಕೆ ಬದಲಾಗಿ ಗೊಂದಲ ಉಂಟುಮಾಡುವ ಹೇಳಿಕೆ ನೀಡುತ್ತಿದ್ದಾರೆ. ಅನಗತ್ಯವಾಗಿ ಮಲೆನಾಡು ಭಾಗದ ರೈತರಲ್ಲಿ ಆತಂಕ ಸೃಷ್ಟಿಸುತ್ತಾ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ವಿಧಾನಸಭೆಯ ಮುಂಗಾರು ಅಧಿವೇಶನದಲ್ಲಿ ಅತ್ಯಂತ ಮಹತ್ವದ ಈ ವಿಷಯದ ಕುರಿತು ಚರ್ಚೆಗೆ ಮುಂದಾಗುವ ಬದಲು ಗದ್ದಲ ನಡೆಸಿ ಅಧಿವೇಶನದ ಕಲಾಪಕ್ಕೆ ಅಡ್ಡಿಪಡಿಸಿದ್ದಾರೆ. ಇದರಿಂದ ಅವರಿಗೆ ಜನರ ಸಮಸ್ಯೆಗಳ ಬಗ್ಗೆ ಕಾಳಜಿಯೇ ಇಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಈ ವಿಚಾರವಾಗಿ ನಾನು ವೈಯಕ್ತಿಕವಾಗಿಯೂ ಮುಖ್ಯಮಂತ್ರಿ ಸನ್ಮಾನ್ಯ ಡಿ.ಕೆ. ಶಿವಕುಮಾರ್ ಅವರೊಂದಿಗೆ ಚರ್ಚಿಸಿದ್ದೇನೆ. ಮುಖ್ಯಮಂತ್ರಿಗಳು ಸಹ ಈ ಕರಡು ಅಧಿಸೂಚನೆಯನ್ನು ವಿರೋಧಿಸುವ ತೀರ್ಮಾನ ಪ್ರಕಟಿಸಿದ್ದಾರೆ. ರೈತರ ಜೊತೆ ನಿಲ್ಲುವುದಾಗಿ ಅಭಯ ನೀಡಿದ್ದಾರೆ. ಹೀಗಾಗಿ ಮಲೆನಾಡಿನ ರೈತರ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ. ಆದ್ದರಿಂದ ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದಂತೆ ರೈತರು ಯಾವುದೇ ಆತಂಕ ಪಡಬಾರದು. ನಮ್ಮ ತಂದೆ ಎಸ್. ಬಂಗಾರಪ್ಪ ಅವರು ಸದಾ ರೈತರು ಹಾಗೂ ಜನಸಾಮಾನ್ಯರ ಪರವಾಗಿ ನಿಂತವರು. ಅವರ ಆಶಯಗಳನ್ನು ಎತ್ತಿಹಿಡಿಯುವುದೇ ನನ್ನ ಗುರಿ. ಅವರ ಮಾರ್ಗದಲ್ಲಿಯೇ ನಾನು ನಡೆಯುತ್ತಿದ್ದೇನೆ. ರೈತರಿಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗಲು ಬಿಡುವುದಿಲ್ಲ.1
- ನಮ್ಮ ಚನ್ನಗಿರಿ ತಾಲ್ಲೂಕು ತುಮಕೊಸ್ ಅಧ್ಯಕ್ಷರು ಸಗಾರಪೇಟೆಯಲ್ಲಿ ನೂತನ ವಾಗಿ ಸೂಪರ್ ಮಾರ್ಕೆಟ್ ಉದ್ಘಾಟನೆ ನೆರವೇರಿಸಿದರು.1
- ಚಿತ್ರದುರ್ಗ ಜಿಲ್ಲೆಯಲ್ಲಿ ಎರಡುವರೆ ಲಕ್ಷ ರೈತರು ಬೆಳೆ ವಿಮೆಯನ್ನು ಪಾವತಿ ಮಾಡಿದ್ದಾರೆ.:ಜಿಲ್ಲಾ ಉಸ್ತುವರಿ ಸಚಿವ ಟಿ ರಘುಮೂರ್ತಿ... ಬೆಳೆ ವಿಮೆ ಪಾವತಿ ಮಾಡುವುದರಲ್ಲಿ ಕರ್ನಾಟಕ ರಾಜ್ಯದಲ್ಲಿ ಚಿತ್ರದುರ್ಗ 5ನೇ ಸ್ಥಾನದಲ್ಲಿದೆ:. ಜಿಲ್ಲೆಯಲ್ಲಿ ಎರಡುವರೆ ಲಕ್ಷ ರೈತರು ಬೆಳೆ ವಿಮೆಯನ್ನು ಪಾವತಿ ಮಾಡಿದ್ದಾರೆ.:ಜಿಲ್ಲಾ ಉಸ್ತುವರಿ ಸಚಿವ ಟಿ ರಘುಮೂರ್ತಿ...1
- ಭದ್ರಾ ನೀರು ಹರಿಸದ ರಾಜ್ಯ ಸರ್ಕಾರದ ವಿರುದ್ಧ ಹೊಸದುರ್ಗದಲ್ಲಿ ಬೃಹತ್ ಪ್ರತಿಭಟನೆ ಶೀಘ್ರ ಭದ್ರಾ ಮೇಲ್ದಂಡೆ ಯೋಜನೆ ಮೂಲಕ ನೀರು ಹರಿಸಲು ಆಗ್ರಹಿಸಿ ಹೊಸದುರ್ಗದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಇನ್ನೂ ಬಿಜೆಪಿ ಪಕ್ಷ ಹಾಗೂ ಜೆ ಡಿ ಎಸ್ ಘಟಕದ ವತಿಯಿಂದ ಪ್ರತಿಭಟನೆ ನಡೆಸಿದ್ದು ಹೊಸದುರ್ಗ ಬಿಜೆಪಿ ಮುಖಂಡರು ಹಾಗೂ ಖನಿಜ ನಿಗಮದ ಮಾಜಿ ಅಧ್ಯಕ್ಷರಾದ ಲಿಂಗಮೂರ್ತಿ ಅವರ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದು ಎಂ ಎಲ್ ಸಿ ಕೆ ಎಸ್ ನವೀನ್ ಅವರು ಸಹ ಆಗಮಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಇನ್ನೂ ಎಸ್ ಲಿಂಗಮೂರ್ತಿ ಅವರು ಅಹ ಆಗಮಿಸಿ ಬಿಸಿಲನ್ನೂ ಸಹ ಲೆಕ್ಕಿಸದೆ ಪ್ರತಿಭಟನೆ ನೇತೃತ್ವ ವಹಿಸಿದ್ದು ಹುಳಿಯಾರು ರಸ್ತೆಯ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದಿಂದ ತಾಲ್ಲೂಕು ಕಚೇರಿ ವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಷ ಹೊರ ಹಾಕಿದ್ದು ಶೀಘ್ರ ಭದ್ರಾ ಮೇಲ್ದಂಡೆ ಯೋಜನೆ ಜಾರಿ ಮಾಡಿ ತಾಲ್ಲೂಕಿನ ಎಲ್ಲಾ ಕೆರೆಗಳಿಗೆ ನೀರು ಹರಿಸಲು ಆಗ್ರಹ ಮಾಡಿದರು. ತಕ್ಷಣವೇ ಹೊಸದುರ್ಗ ತಾಲ್ಲೂಕನ್ನ ಬರಪೀಡಿತ ಎಂದು ಘೋಷಣೆ ಮಾಡಿ ಕುಡಿಯುವ ನೀರಿನ ಯೋಜನೆಯನ್ನ ಶೀಘ್ರ ಜಾರಿಗೊಳಿಸಲು ಪ್ರತಿಭಟನೆ ಮೂಲಕ ಒತ್ತಾಯ ಮಾಡಿದರು. ಇದೇ ವೇಳೆ ಎಸ್ ಲಿಂಮೂರ್ತಿ ಅವರು ಮಾತನಾಡಿದ್ದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದರು. ಸರ್ಕಾರ ಈ ಬರದ ನಾಡು ಹೊಸದುರ್ಗಕ್ಕೆ ನೀರು ಕೊಡುವ ಬರವಸೆ ಇಟ್ಟಿದ್ದು ಬರವಸೆ ಹುಸಿಯಾಗಿದೆ. ಮೂರು ವರ್ಷಗಳು ಕಳೆದರು ಸಹ ಸರ್ಕಾರ ನೀರು ಹರಿಸುವ ಬಗ್ಗೆ ಸುಳ್ಳು ಬರವಸೆಯನ್ನ ಕೊಡುತ್ತಾ ಬಂದಿದೆ. ಈ ತಾಲ್ಲೂಕಿನ ಶಾಸಕರು ಕೂಡ ಬೆಂಬಲ ಕೋರಿದ್ದು ಕೈ ಜೋಡಿಸಿದ್ದೆವು. ಆದರೆ ಆಡಳಿತ ಪಕ್ಷದ ಶಾಸಕರಿಗೆ ಮಾನವೀಯತೆಯಿಂದ ಬೆಂಬಲ ಕೊಟ್ಟಿದ್ದೇವೆ. ಕಳೆದ ಆರೆಂಟು ತಿಂಗಳಾದರು ಸಹ ಸ್ಥಳೀಯ ಶಾಸಕರು ನೀರು ಕೊಡುವಲ್ಲಿ ವಿಫಲವಾಗಿದ್ದಾರೆ. ಆದ್ದರಿಂದ ನಾವು ಹೋರಾಟ ಮಾಡುತ್ತಿದ್ದೇವೆ. ನೀರಿಗಾಗಿ ಹೋರಾಟ ಮಾಡುವ ಸಮಯ ಬಂದಿದ್ದು ಈ ಮೂಲಕ ಸರ್ಕಾರದ ಕಣ್ಣನ್ನ ತೆರಯಬೇಕಿದೆ. ನಮ್ಮ ಸರ್ಕಾರದ ಅವದಿಯಲ್ಲಿ ಅರವತ್ತರಷ್ಟು ಹಣ ಮೀಸಲಿಟ್ಟು ಕೆಲಸ ಆಗಿದ್ದು ಈ ಸರ್ಕಾರ ಬಂದ ನಂತರ ಇಪ್ಪತ್ತರಷ್ಟು ಸಹ ಹಣ ಬಿಡುಗಡೆ ಮಾಡಿಲ್ಲ ಎಂದು ಲಿಂಗಮೂರ್ತಿ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬರಗಾಲ ಬಂದಿದ್ದರು ಸಹ ಸರ್ಕಾರ ಜವಾಬ್ದಾರಿ ತೋರದೆ ಅನ್ಯಾಯ ಮಾಡಿದೆ. ಕೇವಲ ಮಂತ್ರಿ ಸ್ಥಾನಕ್ಕಾಗಿ ಹೊಡೆದಾಟ ನಡೆಸುತ್ತಿದ್ದು ಬರಗಾಲದಿಂದ ಕಂಗೆಟ್ಟ ಜನರಿಗೆ ನೀರು ಕೊಡುವ ಕೆಲಸ ಮಾಡದೆ ತಾಲ್ಲೂಕನ್ನ ಬರಪೀಡಿತ ಎಂದು ಘೋಷಣೆ ಮಾಡದೆ ಇದ್ದು ಸರ್ಕಾರದ ವಿರುದ್ಧ ಹೋರಾಟ ಮಾಡಬೇಕಿದೆ ಎಂದು ಎಸ್ ಲಿಂಗಮೂರ್ತಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.1
- ಗಾಣದಾಳು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪ್ರತಿದಿನ ಪಡಿತರ (ರೇಷನ್) ಪಡೆಯಲು ಆಗಮಿಸುವ ಬಡ ರೈತರು ಮತ್ತು ಸಾರ್ವಜನಿಕರು ಎದುರಿಸುತ್ತಿರುವ ನೈಜ ನರಕಯಾತನೆ. ಪ್ರತಿದಿನ ಬೆಳಿಗ್ಗೆಯಿಂದ ಸಂಜೆಯವರೆಗೆ ಗದ್ದೆ-ಪೊಲಗಳಲ್ಲಿ ಬೆವರು ಹರಿಸಿ ದುಡಿಯುವ ರೈತರು, ರಾತ್ರಿ 8:30 ರಿಂದ 9:00 ಗಂಟೆಯಾದರೂ ಪಡಿತರ ಕೇಂದ್ರದ ಮುಂದೆ ಸರದಿಯಲ್ಲಿ ಕಾಯುತ್ತಾ ನಿಲ್ಲುವಂತಾಗಿದೆ. ಹಗಲಿನಲ್ಲಿ ಸರ್ವರ್ ಸಿಗುವುದಿಲ್ಲ ಎಂಬ ಒಂದೇ ಕಾರಣಕ್ಕೆ ರಾತ್ರಿ ವೇಳೆ ಪಡಿತರ ವಿತರಣೆ ಮಾಡಲಾಗುತ್ತಿದೆ. ಆದರೆ, ಈ ಕತ್ತಲಲ್ಲಿ ಪಡಿತರ ವಿತರಿಸುವ ಸ್ಥಳದಲ್ಲಿ ಕನಿಷ್ಠ ಒಂದು ಸರಿಯಾದ ಬೆಳಕಿನ (ಲೈಟ್) ವ್ಯವಸ್ಥೆಯೂ ಇಲ್ಲದಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.1
- ಉತ್ತಮ ಗುಣಮಟ್ಟದ ಆಹಾರ ಸೇವಿಸಿ ಕಿಡ್ನಿ(ಮೂತ್ರಪಿಂಡ)ಖಾಯಿಲೆಯಿಂದ ದೂರವಿರಿ : ಡಾ.ಪ್ರಮೋದ್ ಕುಮಾರ್ ಜಗಳೂರು.25 ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಮೂತ್ರಪಿಂಡ ಖಾಯಿಲೆಗೆ ಸಂಬಂಧಿಸಿದ ವೈಧ್ಯ ರೋಗಿಗಳ ಡೈಯಾಲೀಸಿಸ್ ಕೇಂದ್ರಕ್ಕೆ ಇತ್ತಿಚೇಗೆ ಭೇಟಿ ನೀಡಿ ಕಿಡ್ನಿ ವೈಪಲ್ಯ ರೋಗಿಗಳನ್ನು ಉದ್ದೇಶಿಸಿ ಮಾತನಾಡಿದರು. ಜಗಳೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಡಯಾಲೀಸಿಸ್ ಕೇಂದ್ರ ಅತ್ಯುತ್ತಮ ಕಾರ್ಯನಿರ್ವಹಣೆ ಮಾಡುತ್ತಿದ್ದು ಸಿಬ್ಬಂದಿಗಳು ಸಹ ರೋಗಿಗಳ ಮಧ್ಯೆ ಉತ್ತಮ ಬಾಂಧವ್ಯ ಹೊಂದಿದ್ದು ರೋಗಿಗಳು ಸಹ ಇವರ ಜೊತೆ ಸಹಕಾರ ನೀಡುವುದರಿಂದ ಯಾವುದೇ ತೊಂದೆರೆಯಿಲ್ಲ ಎಂದರು. ಜಿಲ್ಲೆಯಾದ್ಯಂತ ಸರಕಾರಿ ಸಾರ್ವಜನಿಕ ಆಸ್ಪತ್ರೆಯ ಲ್ಲಿ ಖಾಸಗಿ ಕಂಪನಿಯಿಂದ ನಡೆಯುತ್ತಿರುವ ಡಯಾಲೀಸ್ ಕೇಂದ್ರಗಳು ನಡೆಯುತ್ತಿವೆ ನಾವು ರೋಗಿಗಳನ್ನು ಪ್ರೀತಿಯಿಂದ ನೋಡಿಕೊಳ್ಳಬೇಕೆಂದರು. ಕಿಡ್ನಿ ವೈಫ್ಯಲ್ಯಕ್ಜೆ ಮುಖ್ಯ ಲಕ್ಷಣಗಳು :ಕಿಡ್ನಿ ಸ್ಟೋನ್ (ಮೂತ್ರಪಿಂಡದ ಕಲ್ಲು) ಇರುವಾಗ ಬೆನ್ನು, ಪಾರ್ಶ್ವ ಅಥವಾ ಹೊಟ್ಟೆಯ ಕೆಳಭಾಗದಲ್ಲಿ ತೀವ್ರವಾದ ಮತ್ತು ಅಲೆ ಅಲೆಯಾದ ನೋವು ಕಾಣಿಸಿಕೊಳ್ಳುವುದು ಮುಖ್ಯ ಲಕ್ಷಣವಾಗಿದೆ ಎಂದರು. ಮೂತ್ರಪಿಂಡದ ಕಲ್ಲುಗಳು ಮೂತ್ರಪಿಂಡದಲ್ಲಿ ಉಪ್ಪು ಮತ್ತು ಖನಿಜಗಳ ಗಟ್ಟಿಯಾದ ನಿಕ್ಷೇಪಗಳಾಗಿವೆ. ಈ ಕಲ್ಲುಗಳು ಸಾಮಾನ್ಯವಾಗಿ ಮೂತ್ರನಾಳವನ್ನು ಚಲಿಸಿದಾಗ ಅಥವಾ ಅಡ್ಡಿಪಡಿಸಿದಾಗ ಅಪಾರ ನೋವನ್ನು ಉಂಟುಮಾಡುತ್ತವೆ. ಮೂತ್ರಪಿಂಡದ ಕಲ್ಲುಗಳು ಗಾತ್ರದಲ್ಲಿ ಭಿನ್ನವಾಗಿರುತ್ತವೆ. ಕೆಲವು ಕಲ್ಲುಗಳು ಕೆಲವು ಮಿಮೀ ಗಾತ್ರದಲ್ಲಿರಬಹುದು, ಇನ್ನು ಕೆಲವು ಇಂಚುಗಳಷ್ಟು ಬೆಳೆಯಬಹುದು. ಕಿಡ್ನಿ ಕಲ್ಲುಗಳು ಸಾಕಷ್ಟು ಸಮಾನವಾಗಿ ಹರಡುತ್ತವೆ ಮತ್ತು ಪುರುಷರು ಮತ್ತು ಮಹಿಳೆಯರ ಮೇಲೆ ಪರಿಣಾಮ ಬೀರುತ್ತವೆ. ಕಿಡ್ನಿ ಕಲ್ಲುಗಳನ್ನು ನಾಲ್ಕು ಪ್ರಮುಖ ವಿಧಗಳಾಗಿ ವಿಂಗಡಿಸಬಹುದು- ಕ್ಯಾಲ್ಸಿಯಂ ಕಲ್ಲುಗಳು, ಯೂರಿಕ್ ಆಸಿಡ್ ಕಲ್ಲುಗಳು, ಸ್ಟ್ರುವೈಟ್ ಕಲ್ಲುಗಳು ಮತ್ತು ಸಿಸ್ಟೈನ್ ಕಲ್ಲುಗಳು ಲಕ್ಷಣಗಳು ಎದ್ದು ಕಾಣುತ್ತವೆಂದರು. ಬೆನ್ನು, ಹೊಟ್ಟೆ ಅಥವಾ ಬದಿಯಲ್ಲಿ ನೋವು ಮೂತ್ರಪಿಂಡದ ಕಲ್ಲಿನ ನೋವು - ಇದನ್ನು ಮೂತ್ರಪಿಂಡದ ಕೊಲಿಕ್ ಎಂದೂ ಕರೆಯುತ್ತಾರೆ - ಇದು ಊಹಿಸಬಹುದಾದ ಅತ್ಯಂತ ತೀವ್ರವಾದ ನೋವಿನ ವಿಧಗಳಲ್ಲಿ ಒಂದಾಗಿದೆ ಎಂದರು. ಮೂತ್ರಪಿಂಡದ ಕಲ್ಲಿನ ನೋವು ಹೆಚ್ಚಾಗಿ ಇದ್ದಕ್ಕಿದ್ದಂತೆ ಪ್ರಾರಂಭವಾಗುತ್ತದೆ. ಕಲ್ಲು ಚಲಿಸಿದಂತೆ ನೋವು ಸ್ಥಳ ಮತ್ತು ತೀವ್ರತೆಯನ್ನು ಬದಲಾಯಿಸುತ್ತದೆ. ನೋವು ಆಗಾಗ್ಗೆ ಅಲೆಗಳಲ್ಲಿ ಬಂದು ಹೋಗುತ್ತದೆ, ಮೂತ್ರನಾಳವು ಕಲ್ಲನ್ನು ಹೊರಗೆ ತಳ್ಳಲು ಪ್ರಯತ್ನಿಸುವಾಗ ಸಂಕುಚಿತಗೊಳ್ಳುವುದರಿಂದ ಇದು ಇನ್ನಷ್ಟು ಹದಗೆಡುತ್ತದೆ. ಪ್ರತಿಯೊಂದು ಅಲೆಯು ಕೆಲವು ನಿಮಿಷಗಳ ಕಾಲ ಇರುತ್ತದೆ, ಕಣ್ಮರೆಯಾಗಬಹುದು ಮತ್ತು ನಂತರ ಮತ್ತೆ ಬರಬಹುದು ಎಂದರು.2
- ಚಿತ್ರದುರ್ಗ:ಭದ್ರಾ ನೀರಿಗಾಗಿ ವಿರೋಧ ಪಕ್ಷಗಳಿಂದ ಬೃಹತ್ ಪ್ರತಿಭಟನೆ ಭದ್ರಾ ನೀರನ್ನು ಕಾಲುವೆಯಿಂದ ಹೊಸದುರ್ಗ ತಾಲೂಕಿನ ಕೆರೆಗೆ,ಹರಿಸುವುದರಿಂದ ಕೈ ಬಿಟ್ಟಿರುವುದು ಹಾಗೂ ಕಾಲುವೆ ಯೋಜನೆ ವಿಳಂಬ ನೀತಿ ವಿರೋಧಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಜೆಡಿಎಸ್ ಬಿಜೆಪಿ ಪಕ್ಷಗಳು ಒಟ್ಟಾಗಿ ಹೊಸದುರ್ಗದಲ್ಲಿ ಗುರುವಾರ ಬೃಹತ್ ಪ್ರತಿಭಟನೆ ನಡೆಸಿದವು. ಇದೇ ಸಮಯದಲ್ಲಿ ಮಾತಾಡಿದ ಎಂಎಲ್ ಸಿ ಕೆಎಸ್ ನವೀನ್,ಹೊಸದುರ್ಗದಿಂದಲೇ ಭದ್ರಾ ನೀರು ಚಿತ್ರದುರ್ಗ ಜಿಲ್ಲೆಗೆ ಹರಿಯಬೇಕಿದೆ. ಆದರೆ ಹೊಸದುರ್ಗ ತಾಲೂಕಿಗೆ ನೀರು ಕೊಟ್ಟಿಲ್ಲ. ಇದಕ್ಕಾಗಿ ಹೋರಾಟ ಮಾಡುವ ಬೀದಿಗೆ ಬರುವ ಸ್ಥಿತಿ ನಿರ್ಮಾಣವಾಗಿದೆ.ತಾಲೂಕಿಗೆ ನೀರು ಕೊಡದಿರುವುದು ನಮ್ಮ ರೈತರಿಗೆ ಮಾಡಿರುವ ಅನ್ಯಾಯವೆಂದರು. ಮತ್ತೊಬ್ಬ ಮುಖಂಡ ಲಿಂಗಮೂರ್ತಿ ಮಾತಾಡಿ,ಬರ ನಾಡಿಗೆ ನೀರು ಕೊಡುತ್ತಾರೆಂದು ಕಳೆದ ಮೂರು ವರ್ಷಗಳಿಮನದ ಕಾಯುತ್ತಿದ್ದೇವೆ. ಆದರೆ ಸರ್ಕಾರ ನಿರ್ಲಕ್ಷ ತಾಳಿದೆ. ಹಾಲಿ ಶಾಸಕರು ನಮ್ಮಗಳ ಬೆಂಬಲ ಕೋರಿದಾಗ ಬೆಂಬಲ ಕೊಟ್ಟು ಸಹಕರಿಸಿದ್ದೇವೆ.ಆದರೆ ನೀರು ಮಾತ್ರ ಬರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.1
- ಗುಟ್ಕಾ ನಿಷೇಧ ತಡೆಯಲು ಚನ್ನಗಿರಿ ಯಿಂದ ದಾವಣಗೆರೆ ಗೆ ದಿನಾಂಕ 26/8/2026 ರಿಂದ 28/8/2026 ರಾ ವರೆಗೆ ಬೃಹತ್ ಪಾದ ಯಾತ್ರೆ ಮಾಡುತ್ತಿರುವ ಮಾಡಳ್ ಮಲ್ಲಿಕಾರ್ಜುನ ರವರು ಮತ್ತು ರೈತರು1