logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಲಕ್ಷ್ಮೀನರಸಿಂಹಸ್ವಾಮಿ ತಟ್ಟಿದ ಚಂದ್ರಗ್ರಹಣ. ರಥೋತ್ಸವದ ವೇಳೆಗೆ ವೇಳೆಗೆ ಹಾರಿ ಬಂದ ಗರುಡ ಪಕ್ಷಿ..! ಲಕ್ಷ್ಮೀ ನರಸಿಂಹ ಸ್ವಾಮಿ ಜಾತ್ರೆಗೆ ತಟ್ಟಿದ ಕೇತಗ್ರಸ್ಥ ರಕ್ತ ಚಂದ್ರಗ್ರಹಣ.. ಚಿತ್ರದುರ್ಗ : ಚಂದ್ರ ಗ್ರಹಣ ಹಿನ್ನೆಲೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಹೆಚ್ ಡಿ ಪುರದ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದ ರಥೋತ್ಸವದ ಸಮಯವನ್ನು ಬದಲಾಯಿಸಲಾಗಿತ್ತು. ಸಮಯ ಬದಲಾದರೂ, ರಥೋತ್ಸವದ ವೇಳೆ ಗರುಡ ಪಕ್ಷಿ ಕಾಣಿಸಿಕೊಂಡಿದ್ದು, ಇದನ್ನು ಪವಾಡವೆಂದು ಭಾವಿಸಿದ ಸಾವಿರಾರು ಭಕ್ತರು ಸಂತಸ ವ್ಯಕ್ತಪಡಿಸಿದರು... ಇಂದು ಕೇತುಗ್ರಸ್ಥ ರಕ್ತ ಚಂದ್ರಗ್ರಹಣ ಹಿನ್ನೆಲೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಹೊರಕೇರಿದೇವಪುರದ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದ ರಥೋತ್ಸವ ಸಮಯ ಬದಲಾವಣೆ ಮಾಡಲಾಗಿತ್ತು. ಸಮಯ ಬದಲಾಗಿದ್ದರಿಂದ ಪ್ರತಿ ವರ್ಷ ಕಾಣುವ ಗರುಡ ಕಾಣಿಸುತ್ತಾ ಅನ್ನೋ ಆತಂಕ ಭಕ್ತರಲ್ಲಿ ಎದುರಾಗಿತ್ತು. ಸಮಯ ಬದಲಾದ್ರೂ ಗರುಡ ಕಾಣಿಸಿಕೊಂಡಿದ್ದಕ್ಕೆ ಭಕ್ತರು ಸಂತಸಗೊಂಡಿದ್ದಾರೆ.. ಸಾಮಾನ್ಯವಾಗಿ ಲಕ್ಷ್ಮೀನರಸಿಂಹಸ್ವಾಮಿ ರಥೋತ್ಸವ ಮಧ್ಯಾಹ್ನ 3 ಗಂಟೆಗೆ ನಡೆಯುತ್ತಿತ್ತು. ಆದ್ರೆ ಇಂದು ಚಂದ್ರಗ್ರಹಣ ಮಧ್ಯಾಹ್ನ 3:20ಕ್ಕೆ ಆರಂಭವಾಗಿ ಸಂಜೆ 6:48ಕ್ಕೆ ಕೊನೆಗೊಳ್ಳುತ್ತದೆ. ಗ್ರಹಣದ ಸಮಯವನ್ನು ಸೂತಕ ಎಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಯಾವುದೇ ಶುಭ ಮತ್ತು ಧಾರ್ಮಿಕ ಕಾರ್ಯಗಳನ್ನು ಮಾಡಲ್ಲ. ಆದ್ದರಿಂದ ಲಕ್ಷ್ಮೀನರಸಿಂಹಸ್ವಾಮಿ ರಥೋತ್ಸವ ಸಮಯ ಬದಲಾವಣೆ ಮಾಡಲಾಗಿತ್ತು...ಮಧ್ಯಾಹ್ನ 3 ಗಂಟೆ ಬದಲಾಗಿ 12 ಗಂಟೆಗೆಯೇ ರಥೋತ್ಸವ ಆರಂಭವಾಗಿತ್ತು. ವರ್ಷಕ್ಕೊಮ್ಮೆ ಹೋಳಿ ಹುಣ್ಣಿಮೆಯಂದು ನಡೆಯುವ ರಥೋತ್ಸವ ನೋಡಲು ಸಾವಿರಾರು ಭಕ್ತರು ಆಗಮಿಸಿದ್ದರು. ಆದ್ರೆ ಗರುಡ ಕಾಣಿಸುತ್ತಾ ಅಥವಾ ಇಲ್ಲವಾ ಎಂಬುದರ ಬಗ್ಗೆ ಭಕ್ತರಲ್ಲಿ ಆತಂಕ ಮನೆ ಮಾಡಿತ್ತು. ರಥೋತ್ಸವ ನಡೆಯುವ ಸರಿಯಾದ ಸಂದರ್ಭಕ್ಕೆ ಗರುಡ ಕಾಣಿಸಿಕೊಂಡಿದೆ. ನೆರೆದಿದ್ದ ಭಕ್ತರು ಗರುಡ ದರ್ಶನವನ್ನು ಪವಾಡ ಎಂದು ಉಲ್ಲೇಖಿಸುತ್ತಾರೆ. ರಥೋತ್ಸವಕ್ಕೆ ಹೆಚ್ ಡಿ ಪುರದ ಸುತ್ತಲಿನ ಗ್ರಾಮದ ಜನರು, ಅಕ್ಕ-ಪಕ್ಕದ ಜಿಲ್ಲೆಗಳಿಂದಲೂ ಭಕ್ತರು ಆಗಮಿಸುತ್ತಾರೆ. ಚಂದ್ರಗ್ರಹಣ ಆರಂಭಕ್ಕೂ ಮುನ್ನವೇ ಅದ್ಧೂರಿಯಾಗಿ ರಥೋತ್ಸವ ನಡೆದಿದೆ..

2 hrs ago
user_Suresh Belagere
Suresh Belagere
Video Creator ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
2 hrs ago

ಲಕ್ಷ್ಮೀನರಸಿಂಹಸ್ವಾಮಿ ತಟ್ಟಿದ ಚಂದ್ರಗ್ರಹಣ. ರಥೋತ್ಸವದ ವೇಳೆಗೆ ವೇಳೆಗೆ ಹಾರಿ ಬಂದ ಗರುಡ ಪಕ್ಷಿ..! ಲಕ್ಷ್ಮೀ ನರಸಿಂಹ ಸ್ವಾಮಿ ಜಾತ್ರೆಗೆ ತಟ್ಟಿದ ಕೇತಗ್ರಸ್ಥ ರಕ್ತ ಚಂದ್ರಗ್ರಹಣ.. ಚಿತ್ರದುರ್ಗ : ಚಂದ್ರ ಗ್ರಹಣ ಹಿನ್ನೆಲೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಹೆಚ್ ಡಿ ಪುರದ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದ ರಥೋತ್ಸವದ ಸಮಯವನ್ನು ಬದಲಾಯಿಸಲಾಗಿತ್ತು. ಸಮಯ ಬದಲಾದರೂ, ರಥೋತ್ಸವದ ವೇಳೆ ಗರುಡ ಪಕ್ಷಿ ಕಾಣಿಸಿಕೊಂಡಿದ್ದು, ಇದನ್ನು ಪವಾಡವೆಂದು ಭಾವಿಸಿದ ಸಾವಿರಾರು ಭಕ್ತರು ಸಂತಸ ವ್ಯಕ್ತಪಡಿಸಿದರು... ಇಂದು ಕೇತುಗ್ರಸ್ಥ ರಕ್ತ ಚಂದ್ರಗ್ರಹಣ ಹಿನ್ನೆಲೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಹೊರಕೇರಿದೇವಪುರದ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದ ರಥೋತ್ಸವ ಸಮಯ ಬದಲಾವಣೆ ಮಾಡಲಾಗಿತ್ತು. ಸಮಯ ಬದಲಾಗಿದ್ದರಿಂದ ಪ್ರತಿ ವರ್ಷ ಕಾಣುವ ಗರುಡ ಕಾಣಿಸುತ್ತಾ ಅನ್ನೋ ಆತಂಕ ಭಕ್ತರಲ್ಲಿ ಎದುರಾಗಿತ್ತು. ಸಮಯ ಬದಲಾದ್ರೂ ಗರುಡ ಕಾಣಿಸಿಕೊಂಡಿದ್ದಕ್ಕೆ ಭಕ್ತರು ಸಂತಸಗೊಂಡಿದ್ದಾರೆ.. ಸಾಮಾನ್ಯವಾಗಿ ಲಕ್ಷ್ಮೀನರಸಿಂಹಸ್ವಾಮಿ ರಥೋತ್ಸವ ಮಧ್ಯಾಹ್ನ 3 ಗಂಟೆಗೆ ನಡೆಯುತ್ತಿತ್ತು. ಆದ್ರೆ ಇಂದು ಚಂದ್ರಗ್ರಹಣ ಮಧ್ಯಾಹ್ನ 3:20ಕ್ಕೆ ಆರಂಭವಾಗಿ ಸಂಜೆ 6:48ಕ್ಕೆ ಕೊನೆಗೊಳ್ಳುತ್ತದೆ. ಗ್ರಹಣದ ಸಮಯವನ್ನು ಸೂತಕ ಎಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಯಾವುದೇ ಶುಭ ಮತ್ತು ಧಾರ್ಮಿಕ ಕಾರ್ಯಗಳನ್ನು ಮಾಡಲ್ಲ. ಆದ್ದರಿಂದ ಲಕ್ಷ್ಮೀನರಸಿಂಹಸ್ವಾಮಿ ರಥೋತ್ಸವ ಸಮಯ ಬದಲಾವಣೆ ಮಾಡಲಾಗಿತ್ತು...ಮಧ್ಯಾಹ್ನ 3 ಗಂಟೆ ಬದಲಾಗಿ 12 ಗಂಟೆಗೆಯೇ ರಥೋತ್ಸವ ಆರಂಭವಾಗಿತ್ತು. ವರ್ಷಕ್ಕೊಮ್ಮೆ ಹೋಳಿ ಹುಣ್ಣಿಮೆಯಂದು ನಡೆಯುವ ರಥೋತ್ಸವ ನೋಡಲು ಸಾವಿರಾರು ಭಕ್ತರು ಆಗಮಿಸಿದ್ದರು. ಆದ್ರೆ ಗರುಡ ಕಾಣಿಸುತ್ತಾ ಅಥವಾ ಇಲ್ಲವಾ ಎಂಬುದರ ಬಗ್ಗೆ ಭಕ್ತರಲ್ಲಿ ಆತಂಕ ಮನೆ ಮಾಡಿತ್ತು. ರಥೋತ್ಸವ ನಡೆಯುವ ಸರಿಯಾದ ಸಂದರ್ಭಕ್ಕೆ ಗರುಡ ಕಾಣಿಸಿಕೊಂಡಿದೆ. ನೆರೆದಿದ್ದ ಭಕ್ತರು ಗರುಡ ದರ್ಶನವನ್ನು ಪವಾಡ ಎಂದು ಉಲ್ಲೇಖಿಸುತ್ತಾರೆ. ರಥೋತ್ಸವಕ್ಕೆ ಹೆಚ್ ಡಿ ಪುರದ ಸುತ್ತಲಿನ ಗ್ರಾಮದ ಜನರು, ಅಕ್ಕ-ಪಕ್ಕದ ಜಿಲ್ಲೆಗಳಿಂದಲೂ ಭಕ್ತರು ಆಗಮಿಸುತ್ತಾರೆ. ಚಂದ್ರಗ್ರಹಣ ಆರಂಭಕ್ಕೂ ಮುನ್ನವೇ ಅದ್ಧೂರಿಯಾಗಿ ರಥೋತ್ಸವ ನಡೆದಿದೆ..

More news from ಕರ್ನಾಟಕ and nearby areas
  • ಡಾಬ್ ಸೆಡ್ ಗಳಿಗೆ ಆಕಸ್ಮಿಕ ಬೆಂಕಿ ಡಾಬಾ ಸತ್ತಮುತ್ತಲಿನ ಪ್ರದೇಶ ಅಪಾರ ಪ್ರಮಾಣದ ಹೊಗೆ.. ಚಳ್ಳಕೆರೆ: ನಗರದ ಹೊರಹೊಲಯದ ಹಿರಿಯೂರು ರಸ್ತೆಯ ನಿಸರ್ಗ ಡಾಬಾದ ಬೆಲಿಗ ಆಕಸ್ಮಿಕ ಬೆಂಕಿ ಬಿದ್ದು ನಿಸರ್ಗ ಡಬಾದ 8 ತೆಂಗಿನ ಗರಿಗಳಿಂದ ನಿರ್ಮಾಣ ಮಾಡಲಾಗಿದ್ದ ಸೆಡ್ಗಳು ಸುಟ್ಟಿದ್ದು ಸೆಡ್ಡಿನಲ್ಲಿ ಇದ್ದಂತಹ ಕುರ್ಚಿ ಹಾಗೂ ಚೇರುಗಳು ಸುಟ್ಟು ಸುಮಾರು ಒಂದುವರೆ ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ.. ಡಾಬದ ಹಿಂಭಾಗದ ಒಣ ಹುಲ್ಲಿಗೆ ಯಾರೋ ಕಿಡಿಗೆಡಿಗಳು ಬೆಂಕಿ ಹಚ್ಚಿದ್ದು ಡಾಬದ ಸುತ್ತಲೂ ಇದ್ದ ಬೇಲಿ ಸುಟ್ಟು ನಂತರ ಡಾಬದ ಒಳಗೆ ಇದ್ದಂತಹ ಸೆಡ್ ಗಳು ಸಹ ಬೆಂಕಿಗಾಹುತಿಯಾಗಿವೆ. ಇನ್ನು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಚಳ್ಳಕೆರೆ ಅಗ್ನಿಶಾಮಕ ಠಾಣಾ ಸಿಬ್ಬಂದಿಗಳು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದು ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದಾರೆ.. ಬೆಂಕಿ ಹೊತ್ತಿಕೊಂಡು ಈ ಸಂದರ್ಭದಲ್ಲಿ ಡಾಬದ ಸುತ್ತಮುತ್ತಲಿನ ಪ್ರದೇಶದಲ್ಲಿ ಅಪಾರ ಪ್ರಮಾಣದ ಹೊಗೆ ತುಂಬಿಕೊಂಡಿತ್ತು...
    1
    ಡಾಬ್ ಸೆಡ್  ಗಳಿಗೆ ಆಕಸ್ಮಿಕ ಬೆಂಕಿ ಡಾಬಾ ಸತ್ತಮುತ್ತಲಿನ ಪ್ರದೇಶ ಅಪಾರ ಪ್ರಮಾಣದ ಹೊಗೆ..
ಚಳ್ಳಕೆರೆ: ನಗರದ ಹೊರಹೊಲಯದ ಹಿರಿಯೂರು ರಸ್ತೆಯ ನಿಸರ್ಗ ಡಾಬಾದ  ಬೆಲಿಗ  ಆಕಸ್ಮಿಕ ಬೆಂಕಿ ಬಿದ್ದು  ನಿಸರ್ಗ ಡಬಾದ 8 ತೆಂಗಿನ ಗರಿಗಳಿಂದ ನಿರ್ಮಾಣ ಮಾಡಲಾಗಿದ್ದ ಸೆಡ್ಗಳು ಸುಟ್ಟಿದ್ದು ಸೆಡ್ಡಿನಲ್ಲಿ ಇದ್ದಂತಹ ಕುರ್ಚಿ ಹಾಗೂ ಚೇರುಗಳು ಸುಟ್ಟು ಸುಮಾರು ಒಂದುವರೆ ಲಕ್ಷಕ್ಕೂ  ಹೆಚ್ಚು ನಷ್ಟವಾಗಿದೆ..
ಡಾಬದ ಹಿಂಭಾಗದ ಒಣ ಹುಲ್ಲಿಗೆ  ಯಾರೋ ಕಿಡಿಗೆಡಿಗಳು ಬೆಂಕಿ ಹಚ್ಚಿದ್ದು ಡಾಬದ ಸುತ್ತಲೂ ಇದ್ದ ಬೇಲಿ ಸುಟ್ಟು ನಂತರ ಡಾಬದ ಒಳಗೆ ಇದ್ದಂತಹ ಸೆಡ್ ಗಳು ಸಹ ಬೆಂಕಿಗಾಹುತಿಯಾಗಿವೆ.
ಇನ್ನು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಚಳ್ಳಕೆರೆ ಅಗ್ನಿಶಾಮಕ ಠಾಣಾ ಸಿಬ್ಬಂದಿಗಳು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದು ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದಾರೆ..
ಬೆಂಕಿ ಹೊತ್ತಿಕೊಂಡು ಈ ಸಂದರ್ಭದಲ್ಲಿ ಡಾಬದ ಸುತ್ತಮುತ್ತಲಿನ ಪ್ರದೇಶದಲ್ಲಿ ಅಪಾರ ಪ್ರಮಾಣದ ಹೊಗೆ ತುಂಬಿಕೊಂಡಿತ್ತು...
    user_Suresh Belagere
    Suresh Belagere
    Video Creator ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    3 hrs ago
  • ‘ವಿಶ್ವಕ್ಕೆ ಉತ್ತಮ ಸಂದೇಶ ಸಾರಿದ ಶ್ರೀ ಯೋಗಿ ನಾರೇಯಣ ಯತೀಂದ್ರ ಅವರ ಆದರ್ಶ ಗುಣಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡು ಸನ್ಮಾರ್ಗದಲ್ಲಿ ಸಾಗಬೇಕು’ ಎಂದು ಶಾಸಕ ಟಿ. ರಘುಮೂರ್ತಿ ಹೇಳಿದರು. ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಹಾಗೂ ಬಲಿಜ ಸಮಾಜದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಶ್ರೀ ಯೋಗಿ ನಾರೇಯಣ ಯತೀಂದ್ರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಜಾತಿ–ಮತ, ಕುಲಗೋತ್ರಗಳ ವರ್ಣಭೇದವನ್ನು ಖಂಡಿಸಿ ದೀನ–ದಲಿತರು ಮತ್ತು ಶೋಷಿತರ ಉದ್ಧಾರಕ್ಕಾಗಿ ವಿಶ್ವಮಾನವ ಸಂದೇಶ ಸಾರಿದ ನಾರೇಯಣ ಯತೀಂದ್ರ ಅವರ ಜಯಂತಿ ಆಚರಣೆ ಅರ್ಥಪೂರ್ಣವಾಗಿದೆ. ಮಹಾನ್ ನಾಯಕರ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಹೇಳಿದರು. ಬಲಿಜ ಸಂಘದ ಅಧ್ಯಕ್ಷ ಬಿ.ಸಿ. ಸಂಜೀವಮೂರ್ತಿ ಮಾತನಾಡಿ, ರಾಷ್ಟ್ರೀಯ ಹಬ್ಬಗಳ ಸಮಿತಿಯಿಂದ ಆಚರಿಸಲಾಗುತ್ತಿರುವ ಬುದ್ಧ, ಬಸವ, ಅಂಬೇಡ್ಕರ್ ಸೇರಿದಂತೆ ವಿವಿಧ ದಿನಾಚರಣೆಗಳನ್ನು ಯಾವುದೇ ಒಂದು ಜಾತಿಗೆ ಸೀಮಿತಗೊಳಿಸದೆ, ಎಲ್ಲಾ ಸಮುದಾಯಗಳ ವಿಶ್ವಾಸದೊಂದಿಗೆ ಶಾಲಾ–ಕಾಲೇಜುಗಳು ಹಾಗೂ ಸರ್ಕಾರಿ ಕಚೇರಿಗಳಲ್ಲಿ ಸಮಗ್ರವಾಗಿ ಆಚರಿಸುವಂತೆ ಆಗಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ತಹಶೀಲ್ದಾರ್ ರೇಹಾನ್ ಪಾಷಾ, ಬಿ.ವಿ. ಚಿದಾನಂದ, ತಾಪಂ ಇಒ ಶಶಿಧರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಮಾಜಿ ನಗರಸಭೆ ಸದಸ್ಯರು ಹಾಗೂ ಬಲಿಜ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.
    1
    ‘ವಿಶ್ವಕ್ಕೆ ಉತ್ತಮ ಸಂದೇಶ ಸಾರಿದ ಶ್ರೀ ಯೋಗಿ ನಾರೇಯಣ ಯತೀಂದ್ರ ಅವರ ಆದರ್ಶ ಗುಣಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡು ಸನ್ಮಾರ್ಗದಲ್ಲಿ ಸಾಗಬೇಕು’ ಎಂದು ಶಾಸಕ ಟಿ. ರಘುಮೂರ್ತಿ ಹೇಳಿದರು.
ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಹಾಗೂ ಬಲಿಜ ಸಮಾಜದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಶ್ರೀ ಯೋಗಿ ನಾರೇಯಣ ಯತೀಂದ್ರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಜಾತಿ–ಮತ, ಕುಲಗೋತ್ರಗಳ ವರ್ಣಭೇದವನ್ನು ಖಂಡಿಸಿ ದೀನ–ದಲಿತರು ಮತ್ತು ಶೋಷಿತರ ಉದ್ಧಾರಕ್ಕಾಗಿ ವಿಶ್ವಮಾನವ ಸಂದೇಶ ಸಾರಿದ ನಾರೇಯಣ ಯತೀಂದ್ರ ಅವರ ಜಯಂತಿ ಆಚರಣೆ ಅರ್ಥಪೂರ್ಣವಾಗಿದೆ. ಮಹಾನ್ ನಾಯಕರ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಹೇಳಿದರು.
ಬಲಿಜ ಸಂಘದ ಅಧ್ಯಕ್ಷ ಬಿ.ಸಿ. ಸಂಜೀವಮೂರ್ತಿ ಮಾತನಾಡಿ, ರಾಷ್ಟ್ರೀಯ ಹಬ್ಬಗಳ ಸಮಿತಿಯಿಂದ ಆಚರಿಸಲಾಗುತ್ತಿರುವ ಬುದ್ಧ, ಬಸವ, ಅಂಬೇಡ್ಕರ್ ಸೇರಿದಂತೆ ವಿವಿಧ ದಿನಾಚರಣೆಗಳನ್ನು ಯಾವುದೇ ಒಂದು ಜಾತಿಗೆ ಸೀಮಿತಗೊಳಿಸದೆ, ಎಲ್ಲಾ ಸಮುದಾಯಗಳ ವಿಶ್ವಾಸದೊಂದಿಗೆ ಶಾಲಾ–ಕಾಲೇಜುಗಳು ಹಾಗೂ ಸರ್ಕಾರಿ ಕಚೇರಿಗಳಲ್ಲಿ ಸಮಗ್ರವಾಗಿ ಆಚರಿಸುವಂತೆ ಆಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ರೇಹಾನ್ ಪಾಷಾ, ಬಿ.ವಿ. ಚಿದಾನಂದ, ತಾಪಂ ಇಒ ಶಶಿಧರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಮಾಜಿ ನಗರಸಭೆ ಸದಸ್ಯರು ಹಾಗೂ ಬಲಿಜ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.
    user_ಗೋಪನಹಳ್ಳಿಶಿವಣ್ಣ
    ಗೋಪನಹಳ್ಳಿಶಿವಣ್ಣ
    Local News Reporter ಚಳ್ಳಕೆರೆ, ಚಿತ್ರದುರ್ಗ, ಕರ್ನಾಟಕ•
    6 hrs ago
  • ದಾವಣಗೆರೆ : ಶಾಸಕ ಶಾಮನೂರು ಶಿವಶಂಕರಪ್ಪ ನಿಧನದ ನಂತರ ದಾವಣಗೆರೆ ದಕ್ಷಿಣದಲ್ಲಿ ಚುನಾವಣಾ ಜಿದ್ದಾಜಿದ್ದಿ ಜೋರಾಗಿದೆ. ಈ ನಡುವೆ ಬಿಜೆಪಿ ಟಿಕೆಟ್ ಅಂತಿಮವಾಗಿಲ್ಲ. ಆದರೂ ಕಳೆದ ಒಂದು ವಾರದಿಂದ ಬಿಜೆಪಿ ಈ ಕ್ಷೇತ್ರದಲ್ಲಿ ಮೊಕ್ಕಾಂ ಹೂಡಿದ್ದು, ಪ್ರಚಾರ ಆರಂಭಿಸಿದೆ. ಅಂತೆಯೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಅಂಗವಾಗಿ ವಾರ್ಡ್ ನ0 20 (ಭಾರತ್ ಕಾಲೋನಿ) ಯಲ್ಲಿ ವಾರ್ಡ್ & ಬೂತ್ ಅಧ್ಯಕ್ಷರು, ಪ್ರಮುಖರರು ಹಾಗು ಕಾರ್ಯಕರ್ತರ ಜೊತೆಗೂಡಿ ಮನೆ ಮನೆಗೆ ತೆರಳಿ ಬಿಜೆಪಿ ಆಕಾಂಕ್ಷಿ ಅಭ್ಯರ್ಥಿ ಅಜೇಯ್ ಕುಮಾರ್ ಪ್ರಚಾರ ಮಾಡುತ್ತಿದ್ದಾರೆ.
    1
    ದಾವಣಗೆರೆ : ಶಾಸಕ ಶಾಮನೂರು ಶಿವಶಂಕರಪ್ಪ ನಿಧನದ ನಂತರ ದಾವಣಗೆರೆ ದಕ್ಷಿಣದಲ್ಲಿ ಚುನಾವಣಾ ಜಿದ್ದಾಜಿದ್ದಿ ಜೋರಾಗಿದೆ. ಈ ನಡುವೆ ಬಿಜೆಪಿ ಟಿಕೆಟ್ ಅಂತಿಮವಾಗಿಲ್ಲ. ಆದರೂ ಕಳೆದ ಒಂದು ವಾರದಿಂದ ಬಿಜೆಪಿ ಈ ಕ್ಷೇತ್ರದಲ್ಲಿ ಮೊಕ್ಕಾಂ ಹೂಡಿದ್ದು, ಪ್ರಚಾರ ಆರಂಭಿಸಿದೆ. ಅಂತೆಯೆ
ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಅಂಗವಾಗಿ ವಾರ್ಡ್ ನ0 20 (ಭಾರತ್ ಕಾಲೋನಿ) ಯಲ್ಲಿ ವಾರ್ಡ್ & ಬೂತ್ ಅಧ್ಯಕ್ಷರು, ಪ್ರಮುಖರರು ಹಾಗು ಕಾರ್ಯಕರ್ತರ ಜೊತೆಗೂಡಿ ಮನೆ ಮನೆಗೆ ತೆರಳಿ ಬಿಜೆಪಿ ಆಕಾಂಕ್ಷಿ ಅಭ್ಯರ್ಥಿ ಅಜೇಯ್ ಕುಮಾರ್ ಪ್ರಚಾರ ಮಾಡುತ್ತಿದ್ದಾರೆ.
    user_Nandheesh kumar ac
    Nandheesh kumar ac
    ದಾವಣಗೆರೆ, ದಾವಣಗೆರೆ, ಕರ್ನಾಟಕ•
    10 hrs ago
  • ಶಿವಮೊಗ್ಗ: ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ರವರ ಜನ್ಮ ದಿನಾಚರಣೆಯನ್ನು ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷರು, ಮುಖಂಡರು ಹಾಗೂ ಕಾರ್ಯಕರ್ತರೊಡನೆ ಪೌರಕಾರ್ಮಿಕರಿಗೆ ಕೇಕ್ ವಿತರಿಸುವ ಮೂಲಕ ಆಚರಿಸಿ ಸಂಭ್ರಮಿಸಿದರು.
    1
    ಶಿವಮೊಗ್ಗ: ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ರವರ ಜನ್ಮ ದಿನಾಚರಣೆಯನ್ನು ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷರು, ಮುಖಂಡರು ಹಾಗೂ ಕಾರ್ಯಕರ್ತರೊಡನೆ ಪೌರಕಾರ್ಮಿಕರಿಗೆ ಕೇಕ್ ವಿತರಿಸುವ ಮೂಲಕ ಆಚರಿಸಿ ಸಂಭ್ರಮಿಸಿದರು.
    user_ಆರ್.ವಿ.ಕೃಷ್ಣ
    ಆರ್.ವಿ.ಕೃಷ್ಣ
    Local News Reporter ಶಿವಮೊಗ್ಗ, ಶಿವಮೊಗ್ಗ, ಕರ್ನಾಟಕ•
    4 hrs ago
  • Post by ಗಿರೀಶ್ B
    1
    Post by ಗಿರೀಶ್ B
    user_ಗಿರೀಶ್ B
    ಗಿರೀಶ್ B
    Local News Reporter ತುಮಕೂರು, ತುಮಕೂರು, ಕರ್ನಾಟಕ•
    12 hrs ago
  • ಮಂಗಳೂರು ಬಸ್ ನಿಲ್ದಾಣ
    1
    ಮಂಗಳೂರು ಬಸ್ ನಿಲ್ದಾಣ
    user_Onlinetv24x7
    Onlinetv24x7
    ಹಾಸನ, ಹಾಸನ, ಕರ್ನಾಟಕ•
    12 hrs ago
  • ಪರಶುರಾಂಪುರ ಪರೀಕ್ಷಾ ಕೇಂದ್ರದಲ್ಲಿ ಒಬ್ಬ ವಿದ್ಯಾರ್ಥಿಗೆ 8 ಮಂದಿ ಸಿಬ್ಬಂದಿ ಭದ್ರತೆಯಲ್ಲಿ ಪರೀಕ್ಷೆ, ಅಪರೂಪದ ಘಟನೆ ನಡೆದಿದೆ. ಚಳ್ಳಕೆರೆ ತಾಲೂಕಿನ ಪರಶುರಾಮಪುರ ಈ ಒಂದು ವಿಧ್ಯಮಾನಕ್ಕೆ ಸಾಕ್ಷಿಯಾಗಿದೆ
    1
    ಪರಶುರಾಂಪುರ ಪರೀಕ್ಷಾ ಕೇಂದ್ರದಲ್ಲಿ ಒಬ್ಬ ವಿದ್ಯಾರ್ಥಿಗೆ 8 ಮಂದಿ ಸಿಬ್ಬಂದಿ ಭದ್ರತೆಯಲ್ಲಿ ಪರೀಕ್ಷೆ, ಅಪರೂಪದ ಘಟನೆ ನಡೆದಿದೆ.
ಚಳ್ಳಕೆರೆ ತಾಲೂಕಿನ ಪರಶುರಾಮಪುರ ಈ ಒಂದು ವಿಧ್ಯಮಾನಕ್ಕೆ ಸಾಕ್ಷಿಯಾಗಿದೆ
    user_Vinay P palekar
    Vinay P palekar
    ಮಾಧ್ಯಮ ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    23 hrs ago
  • ಹೊಸದುರ್ಗ ತಾಲೂಕು: ಹೆಗ್ಗೆರೆ ಸಮೀಪ ಟ್ರಾಕ್ಟರ್ ಪಲ್ಟಿ – ಬೆಂಕಿಗಾಹುತಿಯಾದ ವಾಹನ ಹೌದು ಇದು ಹೊಸದುರ್ಗ ತಾಲೂಕಿನ ಹೆಗ್ಗೆರೆ ಸಮೀಪ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಟ್ರಾಕ್ಟರ್ ರಸ್ತೆ ಬದಿಯ ಚರಂಡಿಗೆ ಬಿದ್ದು ಪಲ್ಟಿಯಾಗಿದೆ. ಅಪಘಾತದ ವೇಳೆ ರಸ್ತೆಯ ಪಕ್ಕದಲ್ಲಿದ್ದ ಆಕಸ್ಮಿಕ ಬೆಂಕಿಯ ಮೇಲೆ ಟ್ರಾಕ್ಟರ್ ಬಿದ್ದ ಕಾರಣ ವಾಹನಕ್ಕೆ ಬೆಂಕಿ ತಗುಲಿ ಸಂಪೂರ್ಣವಾಗಿ ಹೊತ್ತಿ ಉರಿದಿದೆ. ಘಟನೆಯ ತೀವ್ರತೆಗೆ ಟ್ರಾಕ್ಟರ್ ಬಹುತೇಕ ಸುಟ್ಟು ಭಸ್ಮವಾಗಿದೆ ಎಂದು ತಿಳಿದುಬಂದಿದೆ. ಅದೃಷ್ಟವಶಾತ್ ಚಾಲಕನಿಗೆ ಪ್ರಾಣಾಪಾಯವಾಗಿಲ್ಲ ಎನ್ನಲಾಗಿದ್ದು, ಹೆಚ್ಚಿನ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಿದೆ. ಘಟನಾ ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗುವ ಸಾಧ್ಯತೆ ಇದೆ.
    1
    ಹೊಸದುರ್ಗ ತಾಲೂಕು: ಹೆಗ್ಗೆರೆ ಸಮೀಪ ಟ್ರಾಕ್ಟರ್ ಪಲ್ಟಿ – ಬೆಂಕಿಗಾಹುತಿಯಾದ ವಾಹನ
ಹೌದು ಇದು ಹೊಸದುರ್ಗ ತಾಲೂಕಿನ ಹೆಗ್ಗೆರೆ ಸಮೀಪ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಟ್ರಾಕ್ಟರ್ ರಸ್ತೆ ಬದಿಯ ಚರಂಡಿಗೆ ಬಿದ್ದು ಪಲ್ಟಿಯಾಗಿದೆ. ಅಪಘಾತದ ವೇಳೆ ರಸ್ತೆಯ ಪಕ್ಕದಲ್ಲಿದ್ದ ಆಕಸ್ಮಿಕ ಬೆಂಕಿಯ ಮೇಲೆ ಟ್ರಾಕ್ಟರ್ ಬಿದ್ದ ಕಾರಣ ವಾಹನಕ್ಕೆ ಬೆಂಕಿ ತಗುಲಿ ಸಂಪೂರ್ಣವಾಗಿ ಹೊತ್ತಿ ಉರಿದಿದೆ.
ಘಟನೆಯ ತೀವ್ರತೆಗೆ ಟ್ರಾಕ್ಟರ್ ಬಹುತೇಕ ಸುಟ್ಟು ಭಸ್ಮವಾಗಿದೆ ಎಂದು ತಿಳಿದುಬಂದಿದೆ. ಅದೃಷ್ಟವಶಾತ್ ಚಾಲಕನಿಗೆ ಪ್ರಾಣಾಪಾಯವಾಗಿಲ್ಲ ಎನ್ನಲಾಗಿದ್ದು, ಹೆಚ್ಚಿನ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಿದೆ.
ಘಟನಾ ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗುವ ಸಾಧ್ಯತೆ ಇದೆ.
    user_ಗೋಪನಹಳ್ಳಿಶಿವಣ್ಣ
    ಗೋಪನಹಳ್ಳಿಶಿವಣ್ಣ
    Local News Reporter ಚಳ್ಳಕೆರೆ, ಚಿತ್ರದುರ್ಗ, ಕರ್ನಾಟಕ•
    10 hrs ago
  • ಶಿವಮೊಗ್ಗ: ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪನವರು ತಮ್ಮ ಹುಟ್ಟು ಹಬ್ಬದ ನಿಮ್ಮಿತ್ತ ಮಂಗಳವಾರ ಮಧ್ಯಾಹ್ನ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನಲ್ಲಿ 97 ಕ್ಕಿಂತಲೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ/ನಿ ಹಾಗೂ ಅವರ ಪೋಷಕರಿಗೆ ವಿಮಾನ ಪ್ರಯಾಣ ಸೌಭಾಗ್ಯ ಕಲ್ಪಿಸಿ, ಜೊತೆಗೆ ಶಿವಮೊಗ್ಗದಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು.
    1
    ಶಿವಮೊಗ್ಗ: ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪನವರು ತಮ್ಮ ಹುಟ್ಟು ಹಬ್ಬದ ನಿಮ್ಮಿತ್ತ ಮಂಗಳವಾರ ಮಧ್ಯಾಹ್ನ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನಲ್ಲಿ 97 ಕ್ಕಿಂತಲೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ/ನಿ ಹಾಗೂ ಅವರ ಪೋಷಕರಿಗೆ ವಿಮಾನ ಪ್ರಯಾಣ ಸೌಭಾಗ್ಯ ಕಲ್ಪಿಸಿ, ಜೊತೆಗೆ ಶಿವಮೊಗ್ಗದಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು.
    user_ಆರ್.ವಿ.ಕೃಷ್ಣ
    ಆರ್.ವಿ.ಕೃಷ್ಣ
    Local News Reporter ಶಿವಮೊಗ್ಗ, ಶಿವಮೊಗ್ಗ, ಕರ್ನಾಟಕ•
    5 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.