ಲಕ್ಷ್ಮಣತೀರ್ಥ ನದಿಗೆ ಕಲುಷಿತ ನೀರು ಸೇರುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯ ಯೋಜನೆ ರೂಪಿಸಿ ಮನವಿ ಹುಣಸೂರು: ಲಕ್ಷ್ಮಣತೀರ್ಥ ನದಿಗೆ ಕಲುಷಿತ ನೀರು ಸೇರುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯ ಯೋಜನೆ ರೂಪಿಸಿ ಮನವಿ ಸಲ್ಲಿಸಿದರೆ ಕೇಂದ್ರ ಸರ್ಕಾರದ ಅಗತ್ಯ ನೆರವು ಕೊಡಿಸಲು ಸಿದ್ಧನಿದ್ದೇನೆ ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಭರವಸೆ ನೀಡಿದರು. ನಗರದ ಕೆ.ಆರ್.ನಗರ ರಸ್ತೆಯಲ್ಲಿರುವ ತ್ಯಾಜ್ಯ ನೀರು ನಿರ್ವಹಣಾ ಘಟಕ(ಎಸ್‌ಟಿಪಿ)ಕ್ಕೆ ಗುರುವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಅವರು ಮಾತನಾಡಿದರು. ಹುಣಸೂರು ನಗರ ವ್ಯಾಪ್ತಿಯಲ್ಲಿ ಮೂರು ತ್ಯಾಜ್ಯ ನಿರ್ವಹಣಾ ಘಟಕಗಳಿದ್ದು ಎರಡು ಘಟಕಗಳನ್ನು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ವಹಿಸುತ್ತಿದ್ದರೆ, ಮತ್ತೊಂದನ್ನು ನಗರಸಭೆ ನಿರ್ವಹಿಸುತ್ತಿದೆ. ನಗರಸಭೆ ನಿರ್ವಹಿಸುತ್ತಿರುವ ಘಟಕ 2000ರಲ್ಲಿ ನಿರ್ಮಾಣವಾಗಿದ್ದು ತಾಂತ್ರಿಕ ತೊಂದರೆಯಾಗಿದೆ. ಹಾಗಾಗಿ ನೀರು ಬಡಾವಣೆಗಳ ಮನೆಯೊಳಗೆ ಮತ್ತು ಲಕ್ಷ್ಮಣತೀರ್ಥ ನದಿಗೆ ಸೇರಿ ಕಲುಷಿತವಾಗುತ್ತಿದೆ ಎಂದರು. ನದಿಗಳ ಶುದ್ಧೀಕರಣಕ್ಕಾಗಿ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿದೆ. ಸ್ಥಳೀಯ ಆಡಳಿತ ಮತ್ತು ರಾಜ್ಯ ಸರ್ಕಾರ ಈ ಕುರಿತು ಪ್ರಸ್ತಾವನೆ ಸಲ್ಲಿಸಿದರೆ ಅಗತ್ಯ ಆರ್ಥಿಕ ನೆರವು ಕೊಡಿಸಲು ನಾನು ಸಿದ್ಧನಿದ್ದೇನೆ. ನಗರ ನಿವಾಸಿಗಳ ಬವಣೆ ತಪ್ಪಿಸುವಲ್ಲಿ ಮತ್ತು ನದಿ ಉಳಿಸುವಲ್ಲಿ ಎಲ್ಲರ ಜವಾಬ್ದಾರಿ ಇದೆ ಎಂದರು. ಈ ವೇಳೆ ಒಳಚರಂಡಿ ಮಂಡಳಿಯ ಎಇಇ ದಿವ್ಯಶ್ರೀ ಮಾತನಾಡಿ, ನಗರ ವ್ಯಾಪ್ತಿಯಲ್ಲಿ ಮತ್ತೊಂದು ತ್ಯಾಜ್ಯ ನೀರು ನಿರ್ವಹಣಾ ಘಟಕ ಸ್ಥಾಪನೆಗೆ 72 ಕೋಟಿ ರೂ.ಗಳ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದರು. ಪ್ರಸ್ತಾವನೆ ಸಲ್ಲಿಸಲಿರಾಜ್ಯ ಸರ್ಕಾರಗಳು ಯೋಜನೆ ಜಾರಿಗೆ ಕೋರಿದಾಗಿ ಕೇಂದ್ರ ತನ್ನ ಪಾಲನ್ನು ನೀಡಲು ಸಿದ್ಧವಿದೆ. ಆದರೆ, ನಮ್ಮ ರಾಜ್ಯ ಸರ್ಕಾರೆ ಯಾವುದೇ ಪ್ರಸ್ತಾವನೆಯನ್ನೇ ಸಲ್ಲಿಸುತ್ತಿಲ್ಲ. ವನ್ಯಜೀವಿ ಮಾನವ ಸಂಘರ್ಷ ತಡೆಗೆ ಕೇಂದ್ರ ಹಲವು ಯೋಜನೆಗಳನ್ನು ರೂಪಿಸಿದ್ದರೂ ರಾಜ್ಯ ಸರ್ಕಾರ ತನಗೆ ಅಗತ್ಯವಿರುವ ಪ್ರಸ್ತಾವನೆಗಳನ್ನು ಸಲ್ಲಿಸುವಲ್ಲಿ ವಿಫಲವಾಗುತ್ತಿದೆ. ಇತ್ತೀಚೆಗೆ ದೆಹಲಿಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಯೋಜಿಸಿದ್ದ ಸಭೆಯಲ್ಲಿ ಕೂಡ ಈ ಕುರಿತು ಕೇಂದ್ರದ ಉದ್ದೇಶ ತಿಳಿಸಿದ್ದೇನೆ. ಹುಲಿ ಮತ್ತು ಆನೆ ಸಂರಕ್ಷಿತ ಪ್ರದೇಶಗಳಲ್ಲಿ ಟೆಲಿಮೆಟ್ರಿ ಮುಂತಾದ ಸೌಲಭ್ಯಗಳ ಕುರಿತು ಮಾಹಿತಿ ನೀಡಲಾಗಿದೆ. 350 ಕೋಟಿ ರೂ.ಗಳ 5 ವರ್ಷಗಳ ಯೋಜನೆ ಟೆಲಿಮೆಟ್ರಿ(ಸಮಸ್ಯೆ ಹೊಂದಿರುವ ಆನೆಗಳಿಗೆ ಕಾಲರ್ ಐಡಿ ಅಳವಡಿಸುವ ಇನ್ನಿತರ ಯೋಜನೆ)ಯೋಜನೆ, ರೈಲ್ವೆ ಬ್ಯಾರಿಕೇಡ್ ಅಳವಡಿಕೆ ಯೋಜನೆಗಳಿಗೆ ಪ್ರಸ್ತಾವನೆ ಸಲ್ಲಿಸಬೇಕಿದೆ. ಯಾವ ಉದ್ದೇಶಕ್ಕೆ ಹಣ ನೀಡಲಾಗಿದೆಯೋ ಅದಕ್ಕೆ ಬಳಸಬೇಕು ಎಂಬ ಕೇಂದ್ರದ ನಿರ್ಧಾರವನ್ನು ರಾಜ್ಯ ಸರ್ಕಾರಗಳು ಒಪ್ಪದಿರುವುದು ಬೇಸರದ ಸಂಗತಿ ಎಂದರು.ಹುಣಸೂರು ನಗರಸಭೆ ಮಾಜಿ ಅಧ್ಯಕ್ಷ ಗಣೇಶ್ ಕುಮಾರಸ್ವಾಮಿ, ಎಸ್.ಶರವಣ, ಮಾಜಿ ಸದಸ್ಯ ವಿವೇಕಾನಂದ, ಬಿಜೆಪಿ ತಾಲೂಕು ಅಧ್ಯಕ್ಷ ಕಾಂತರಾಜು, ನಗರಾಧ್ಯಕ್ಷ ನಾರಾಯಣ್, ರೈತಮೋರ್ಚಾ ಅಧ್ಯಕ್ಷ ಬಿಳಿಕೆರೆ ಪ್ರಸನ್ನ, ಮುಖಂಡರಾದ ನಾಗರಾಜ ಮಲ್ಲಾಡಿ, ದೇವರಹಳ್ಳಿ ಸೋಮಶೇಖರ್, ಮಲ್ನಾಡ್ ರವಿ, ಮುದ್ದುರಾಮು, ಕಮಲಮ್ಮ, ಯಶೋದಮ್ಮ, ಪೌರಾಯುಕ್ತೆ ಎಂ.ಮಾನಸಾ, ಪರಿಸರ ಇಂಜಿನಿಯರ್ ಸೌಮ್ಯಾ ಇತರರು ಇದ್ದರು.

- ಮೈಸೂರು : ಅರಣ್ಯ ಭವನದಲ್ಲಿ ನಮ್ಮ ದಸರಾ ಗಜಪಡೆ ಭರ್ಜರಿ ರಿಲ್ಯಾಕ್ಸ್ ನಾಡಹಬ್ಬ ದಸರಾ 2026 ಹಿನ್ನಲೆ ಮೈಸೂರಿಗೆ ಆಗಮಿಸಿದ ಗಜಪಡೆ ಅರಣ್ಯ ಭವನದಲ್ಲಿ ರಿಲ್ಯಾಕ್ಸ್ ಮೂಡ್ ನಲ್ಲಿದೆ.ಮೊದಲ ಹಂತದಲ್ಲಿ ಬಂದಿರುವ 9 ಆನೆಗಳ ತಂಡ ಅರಣ್ಯ ಭವನದಲ್ಲಿ ಬೀಡು ಬಿಟ್ಟಿವೆ. ಜಿಲ್ಲಾಡಳಿತ ಹಾಗೂ ಅರಮನೆ ಆಡಳಿತ ಮಂಡಳಿ ವತಿಯಿಂದ ಆನೆಗಳನ್ನ ಸಂಪ್ರದಾಯವಾಗಿ ಸ್ವಾಗತಿಸಲಾಗುತ್ತದೆ. ಅಕ್ಟೋಬರ್ 21 ರಂದು ನಡೆಯಲಿರುವ ಜಂಬೂಸವಾರಿಗೆ ಗಜಪಡೆ ಸಜ್ಜಾಗಲಿದೆ...1
- News by dailynews ಶಹೀನ್ ಷಾ ಅಹಮ್ಮದ್ ಬಹಿರಂಗ ಸವಾಲು: ಪೊಲೀಸರಿಗೆ ಬೆದರಿಕೆ ಹಾಕಿದ ಆಡಿಯೋ ಬಿಡುಗಡೆ ಮಾಡಿ ತೋರಿಸಿ! ಸಾಕ್ಷಿ ಎಲ್ಲಿದೆ?: ಪ್ರತಿಯೊಂದನ್ನೂ ರೆಕಾರ್ಡ್ ಮಾಡುವವರು, ಪೊಲೀಸರಿಗೆ ಧಮಕಿ ಹಾಕಿದ ವೀಡಿಯೊ ಅಥವಾ ಆಡಿಯೋ ಸಾಬೀತುಪಡಿಸಲಿ. #tanveersait #viral #mysuru #cmdkshivakumar #viralnews News by dailynews ಶಹೀನ್ ಷಾ ಅಹಮ್ಮದ್ ಬಹಿರಂಗ ಸವಾಲು: ಪೊಲೀಸರಿಗೆ ಬೆದರಿಕೆ ಹಾಕಿದ ಆಡಿಯೋ ಬಿಡುಗಡೆ ಮಾಡಿ ತೋರಿಸಿ! ಸಾಕ್ಷಿ ಎಲ್ಲಿದೆ?: ಪ್ರತಿಯೊಂದನ್ನೂ ರೆಕಾರ್ಡ್ ಮಾಡುವವರು, ಪೊಲೀಸರಿಗೆ ಧಮಕಿ ಹಾಕಿದ ವೀಡಿಯೊ ಅಥವಾ ಆಡಿಯೋ ಸಾಬೀತುಪಡಿಸಲಿ. #tanveersait #viral #mysuru #cmdkshivakumar #viralnews1
- ಹೆಬ್ಬಾಲೆಯಲ್ಲಿ 25 ಲಕ್ಷದಲ್ಲಿ ಪ್ರೇಕ್ಷಕ ಗ್ಯಾಲರಿ ಬನಶಂಕರಿ ಅಮ್ಮನವರ ರಂಗ ಮಂದಿರ ಉದ್ಘಾಟನಾ ಸಮಾರಂಭ. ಕೊಡಗು: ಕುಶಾಲನಗರ ತಾಲೂಕಿನ ಹೆಬ್ಬಾಲೆ ಗ್ರಾಮದ ಮಾದರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಮಾರಂಭದಲ್ಲಿ ಇನ್ನುಳಿಕೆ ಆಗಿರುವ ಪ್ರೇಕ್ಷಕ ಗ್ಯಾಲರಿಯನ್ನು 15 ಲಕ್ಷ ರೂ ವೆಚ್ಚದಲ್ಲಿ ಮುಂದಿನ ದಿನಗಳಲ್ಲಿ ವಿಸ್ತರಿಸಿಕೊಡುವುದಾಗಿ ಮಡಿಕೇರಿ ಕ್ಷೇತ್ರದ ಜನಪ್ರಿಯ ಶಾಸಕರಾದ ಡಾಕ್ಟರ್ ಮಂತರ್ ಗೌಡ ಭರವಸೆ ನೀಡಿದರು. ತಾಲೂಕಿನ ಹೆಬ್ಬಾಲೆ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಶಾಸಕರ ಅನುದಾನದಿಂದ 20 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಂಡ ಪ್ರೇಕ್ಷಕರ ಗ್ಯಾಲರಿ ಮತ್ತು 5 ಲಕ್ಷದಲ್ಲಿ ಬನಶಂಕರಿ ಅಮ್ಮನವರ ಬಯಲು ರಂಗಮಂದಿರವನ್ನು ಉದ್ಘಾಟಿಸಿ ಮಾತನಾಡಿ ಈ ವ್ಯಾಪ್ತಿಯಲ್ಲಿ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚು ಅಭಿವೃದ್ಧಿ ಕೆಲಸಗಳನ್ನು ಮಾಡುವುದಾಗಿ ಉದ್ಘಾಟನಾ ಸಮಾರಂಭದಲ್ಲಿ ಭರವಸೇನು ನೀಡಿದರು. ಸಮಾರಂಭದಲ್ಲಿ ಗ್ಯಾರಂಟಿ ಯೋಜನಾ ಅಧ್ಯಕ್ಷರಾದ ವಿಪಿ ಶಶಿಧರ್, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಚಂದ್ರಕಲಾ, ಶಾಲಾ ಅಭಿವೃದ್ಧಿ ಅಧ್ಯಕ್ಷರಾದ ಪ್ರದೀಪ್ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಅರುಣ್ ಕುಮಾರಿ, ದಿನೇಶ್, ರಾಜಶೇಖರ್ ಮುಖ್ಯ ಶಿಕ್ಷಕರಾದ ವೆಂಕಟೇಶ್ ಮುಂತಾದ ನಾಯಕರು ಹಾಜರಿದ್ದರು.4
- ಅಧಿಕಾರಿಗಳಿಗೆ ರಾಖಿ ಕಟ್ಟಿ ರಕ್ಷಾ ಬಂಧನ ಆಚರಿಸಿದ ಬಚಪನ್ ಶಾಲಾ ಮಕ್ಕಳು ಮೈಸೂರು: ರಕ್ಷಾ ಬಂಧನ ಹಬ್ಬದ ಅಂಗವಾಗಿ ನಗರದ ಬಚಪನ್ ಶಾಲೆಯ ಮಕ್ಕಳು ವಿಶೇಷ ರೀತಿಯಲ್ಲಿ ಹಬ್ಬವನ್ನು ಆಚರಿಸಿದರು. ಶಾಲೆಯ ಮಕ್ಕಳು ವಿವಿಧ ಸರ್ಕಾರಿ ಕಚೇರಿಗಳು ಹಾಗೂ ಸಾರ್ವಜನಿಕ ಸೇವಾ ಕೇಂದ್ರಗಳಿಗೆ ತೆರಳಿ ಅಲ್ಲಿನ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ರಾಖಿ ಕಟ್ಟಿ ಶುಭಾಶಯ ಕೋರಿದರು. ಮಕ್ಕಳು ಸರ್ಕಾರಿ ನೌಕರರು, ವೈದ್ಯರು, ಪೋಸ್ಟ್ ಆಫೀಸ್ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆಯ ಕಚೇರಿಗಳಿಗೆ ಭೇಟಿ ನೀಡಿ ಅಧಿಕಾರಿಗಳಿಗೆ ರಾಖಿ ಕಟ್ಟಿದರು. ಈ ಮೂಲಕ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವವರೊಂದಿಗೆ ಸಹೋದರತ್ವ ಹಾಗೂ ಪ್ರೀತಿಯ ಬಾಂಧವ್ಯವನ್ನು ಬೆಳೆಸುವ ಸಂದೇಶ ನೀಡಿದರು. ಪೊಲೀಸ್ ಇಲಾಖೆ ಕಚೇರಿಗೆ ತೆರಳಿದ ಮಕ್ಕಳು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ರಾಖಿ ಕಟ್ಟುವ ಮೂಲಕ ಅವರ ಸೇವೆಗೆ ಗೌರವ ಸಲ್ಲಿಸಿದರು. ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಹಗಲಿರುಳು ಶ್ರಮಿಸುವ ಪೊಲೀಸರೊಂದಿಗೆ ಮಕ್ಕಳು ಆತ್ಮೀಯವಾಗಿ ಬೆರೆತು ಸಂಭ್ರಮಿಸಿದರು. ಇದೇ ವೇಳೆ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿಗೂ ರಾಖಿ ಕಟ್ಟಿ, ಜನರ ಆರೋಗ್ಯ ಕಾಪಾಡುವ ಅವರ ಸೇವೆಯನ್ನು ಸ್ಮರಿಸಿದರು. ಪೋಸ್ಟ್ ಆಫೀಸ್‌ಗೆ ಭೇಟಿ ನೀಡಿದ ಮಕ್ಕಳು ಅಲ್ಲಿನ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ರಾಖಿ ಕಟ್ಟಿ ರಕ್ಷಾ ಬಂಧನದ ಶುಭಾಶಯ ತಿಳಿಸಿದರು. ಸರ್ಕಾರಿ ಕಚೇರಿಗಳಲ್ಲಿಯೂ ಅಧಿಕಾರಿಗಳು ಮಕ್ಕಳೊಂದಿಗೆ ಆತ್ಮೀಯವಾಗಿ ಮಾತನಾಡಿ, ರಾಖಿ ಕಟ್ಟಿಸಿಕೊಂಡು ಮಕ್ಕಳಿಗೆ ಶುಭ ಹಾರೈಸಿದರು. ಶಾಲಾ ಮಕ್ಕಳ ಈ ವಿಶೇಷ ಆಚರಣೆ ಅಧಿಕಾರಿಗಳಲ್ಲಿಯೂ ಸಂತಸ ಮೂಡಿಸಿತು. ರಕ್ಷಾ ಬಂಧನ ಕೇವಲ ಸಹೋದರ-ಸಹೋದರಿಯರ ನಡುವಿನ ಹಬ್ಬವಲ್ಲ, ಪರಸ್ಪರ ಪ್ರೀತಿ, ಗೌರವ, ಕಾಳಜಿ ಮತ್ತು ಸಹೋದರತ್ವದ ಭಾವನೆಯನ್ನು ಬೆಳೆಸುವ ಹಬ್ಬ ಎಂಬ ಸಂದೇಶವನ್ನು ಮಕ್ಕಳು ಸಾರಿದರು. ಬಚಪನ್ ಶಾಲೆಯ ಶಿಕ್ಷಕರು ಮಕ್ಕಳಿಗೆ ರಕ್ಷಾ ಬಂಧನದ ಮಹತ್ವವನ್ನು ತಿಳಿಸಿ, ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುವವರನ್ನು ಗೌರವಿಸುವ ಮನೋಭಾವ ಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಿದ್ದರು. ಮಕ್ಕಳ ಈ ವಿಭಿನ್ನ ಆಚರಣೆ ಸಾರ್ವಜನಿಕರ ಗಮನ ಸೆಳೆಯಿತು.1
- ಶಾಸಕ ಬಾಬು ಬಂಡಿಸಿದೇಗೌಡ ಕತ್ತೆ ಕೆಲಸ ಮಾಡುವ ವಿಡಿಯೋ ವೈರಲ್,ಏನಂದ್ರು ಗೊತ್ತಾ ನೆಟ್ಟಿಗರು ಮಂಡ್ಯ ಶ್ರೀರಂಗಪಟ್ಟಣ ಶಾಸಕ ಬಾಬು ಬಂಡಿ ಸಿದ್ದೇಗೌಡ ವ್ಯವಸಾಯ ಮಾಡುವ ವಿಡಿಯೋ ಆಗಿಸಿ ಸಾಮಾಜಿಕ ಜಾಲತಾಣದಲ್ಲಿ ಶಾಸಕರ ಗದ್ದೆ ಕೆಲಸ ಮಾಡುವ ವಿಡಿಯೋ ಬೈಕೇರಿ ಹೋಗುವ ಜೊತೆಯಲ್ಲಿ ಗುದ್ದಲಿ ಹಿಡಿದು ಗದ್ದೆಯಲ್ಲಿ ಕೆಲಸ ಮಾಡುವ ವಿಡಿಯೋಗೆ ನೆಟ್ಟಗಿರೋ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೆಲ್ಮೆಟ್ ಹಾಕದೆ ಗಾಡಿ ಓಡಿಸಬೇಕು ಕೆಲವರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ1
- ಗುಂಡ್ಲುಪೇಟೆ: ₹5 ಕೋಟಿ ವೆಚ್ಚದಲ್ಲಿ ಪಾದಚಾರಿ ಮಾರ್ಗ, ಚರಂಡಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ. ಗುಂಡ್ಲುಪೇಟೆ: ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ ಯೋಜನೆ (CMIDP) ಅಡಿಯಲ್ಲಿ ಗುಂಡ್ಲುಪೇಟೆ ಪುರಸಭೆಗೆ ಮಂಜೂರಾಗಿರುವ ₹50 ಕೋಟಿ ವಿಶೇಷ ಅನುದಾನದಲ್ಲಿ ₹5 ಕೋಟಿ ವೆಚ್ಚದಲ್ಲಿ ಕೆ.ಇ.ಬಿ. ರಸ್ತೆ, ಚರಂಡಿ ಅಭಿವೃದ್ಧಿ ಹಾಗೂ ಪಾದಚಾರಿ ಮಾರ್ಗ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಶಾಸಕ ಹೆಚ್.ಎಂ. ಗಣೇಶ್ ಪ್ರಸಾದ್ ಅವರ ಸೂಚನೆಯಂತೆ ಕೆ.ಆರ್.ಐ.ಡಿ.ಎಲ್. ವತಿಯಿಂದ ಕಾಮಗಾರಿ ಆರಂಭಿಸಲಾಗಿದೆ. ಪುರಸಭೆ ಮುಖ್ಯಾಧಿಕಾರಿ ಎಸ್. ಶರವಣ ಅವರು ಕೆ.ಆರ್.ಐ.ಡಿ.ಎಲ್. ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಪ್ರಸನ್ನ ಹಾಗೂ ಪುರಸಭೆ ಎಂಜಿನಿಯರ್ ಮಂಜುನಾಥ್ ಅವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದರು. ಮಳೆನೀರು ಸರಾಗವಾಗಿ ಹರಿಯುವಂತೆ ಚರಂಡಿಗೆ ಸೂಕ್ತ ಇಳಿಜಾರು ನೀಡಬೇಕು. ಪಾದಚಾರಿ ಮಾರ್ಗವನ್ನು ನೇರವಾಗಿ ಹಾಗೂ ಗುಣಮಟ್ಟದೊಂದಿಗೆ ನಿರ್ಮಿಸಬೇಕು. ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗದಂತೆ ಹಾಗೂ ಅಪಘಾತಗಳನ್ನು ತಡೆಗಟ್ಟುವ ರೀತಿಯಲ್ಲಿ ವ್ಯವಸ್ಥಿತ ಫುಟ್‌ಪಾತ್ ನಿರ್ಮಿಸುವಂತೆ ಎಂಜಿನಿಯರ್‌ಗಳಿಗೆ ಮುಖ್ಯಾಧಿಕಾರಿ ಸೂಚಿಸಿದರು. ಪಟ್ಟಣದ ಸೌಂದರ್ಯೀಕರಣ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಗೆ ಕಾಮಗಾರಿ ಪೂರಕವಾಗಲಿದೆ ಎಂದು ಅವರು ತಿಳಿಸಿದರು.3
- ಮಳವಳ್ಳಿ ತಾಲೂಕು ನಲ್ಲಿ ಅಕ್ರಮ ಮಣ್ಣು ದಂದೆ ಮಳವಳ್ಳಿ : ಮಳವಳ್ಳಿ ತಾಲೂಕಿನಲ್ಲಿ ಮಣ್ಣಿನ ದಂಧೆ ಅಕ್ರಮವಾಗಿ ನಡೆಯುತ್ತಿದ್ದು ಕೆಲ ಗ್ರಾಮಗಳಲ್ಲಿ ಅವೇರಳ್ಳಿ ಹೆಬ್ಬಣಿ ಮುಂತಾದ ಗ್ರಾಮಗಳಲ್ಲಿ ಮಣ್ಣಿನ ದಂಧೆ ಸಾಗುತ್ತಿದೆ ಇದಕ್ಕೆ ಗ್ರಾಮಸ್ಥರ ಆಕ್ರೋಶ ಹಾಗೂ ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿ ಇದಕ್ಕೆ ಸೂಕ್ತವಾದ ಕಾನೂನಿ ಕ್ರಮವನ್ನು ಜರಗಿಸಬೇಕು ಎಂದು ತಹಸಿಲ್ದಾರ್ ಜಿಲ್ಲಾ ಕಚೇರಿ ನಲ್ಲಿ ಮನವಿ ಮಾಡಲು ತೀರ್ಮಾನಿಸಿದ್ದಾರೆ1
- ಮೈಸೂರಿನ ಮೀಲಾದ್ ಬಾಗ್‌ನಲ್ಲಿ ಶ್ರದ್ಧಾ ಭಕ್ತಿಯ ಈದ್ ಮಿಲಾದ್ ಸಂಭ್ರಮ! #tanveersait #viral #eidmiladunnabiﷺ #kannadanews #todayviral ಮೈಸೂರಿನ ಮೀಲಾದ್ ಬಾಗ್‌ನಲ್ಲಿ ಶ್ರದ್ಧಾ ಭಕ್ತಿಯ ಈದ್ ಮಿಲಾದ್ ಸಂಭ್ರಮ! #tanveersait #viral #eidmiladunnabiﷺ #kannadanews #todayviral1