Shuru
Apke Nagar Ki App…
ರಾಷ್ಟ್ರೀಯ ಮತದಾರ ದಿನಾಚರಣೆ ಹಿನ್ನೆಲೆ ಪ್ರಬಂಧ ಸ್ಪರ್ಧೆ ಮೂಲಕ ಜಾಗೃತಿ ಮೂಡಿಸಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಸ್ವೀಪ್ ಸಮಿತಿ ಇವರ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಮತದಾರ ದಿನಾಚರಣೆಯ ಪ್ರಯುಕ್ತ ಜಿಲ್ಲಾಮಟ್ಟದ ಪ್ರಬಂಧ ಸ್ಪರ್ಧೆ ನಡೆಸಿ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಹಾಲಸಿದ್ದಪ್ಪ ಪೂಜಾರಿ ಹೇಳಿದರು. ಶನಿವಾರ 11 ಗಂಟೆಗೆ ನಗರದ ಜಲ ನಿರ್ಮಲ ಸಭಾಂಗಣದಲ್ಲಿ ಸಸಿಗೆ ನೀರು ಹಾಕಿ ಸಭೆ ಉದ್ಘಾಟಿಸಿದ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಹಾಲಸಿದ್ದಪ್ಪ ಪೂಜೇರಿ ಮಾತನಾಡಿ, ಪ್ರಜಾಪ್ರಭುತ್ವದಲಿ ಮತದಾನ ಮತ್ತು ಚುನಾವಣೆ ವಿಷಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಪ್ರಬಂಧದ ವಿಷಯ ನೀಡಿ, ಪ್ರೌಢಶಾಲೆ ವಿಭಾಗ, ಪದವಿ ಪೂರ್ವ ಕಾಲೇಜು ವಿಭಾಗ ಮತ್ತು ಪದವಿ ಮತ್ತು ವಿಶ್ವವಿದ್ಯಾಲಯಗಳ ವಿಭಾಗವಾರು ಪ್ರತ್ಯೇಕ ವಿಷಯಗಳ ಮೇಲೆ ಸ್ಪರ್ಧೆ ನಡೆಸುವಂತೆ ಸೂಚಿಸಿದರು.
K2 kannada News
ರಾಷ್ಟ್ರೀಯ ಮತದಾರ ದಿನಾಚರಣೆ ಹಿನ್ನೆಲೆ ಪ್ರಬಂಧ ಸ್ಪರ್ಧೆ ಮೂಲಕ ಜಾಗೃತಿ ಮೂಡಿಸಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಸ್ವೀಪ್ ಸಮಿತಿ ಇವರ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಮತದಾರ ದಿನಾಚರಣೆಯ ಪ್ರಯುಕ್ತ ಜಿಲ್ಲಾಮಟ್ಟದ ಪ್ರಬಂಧ ಸ್ಪರ್ಧೆ ನಡೆಸಿ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಹಾಲಸಿದ್ದಪ್ಪ ಪೂಜಾರಿ ಹೇಳಿದರು. ಶನಿವಾರ 11 ಗಂಟೆಗೆ ನಗರದ ಜಲ ನಿರ್ಮಲ ಸಭಾಂಗಣದಲ್ಲಿ ಸಸಿಗೆ ನೀರು ಹಾಕಿ ಸಭೆ ಉದ್ಘಾಟಿಸಿದ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಹಾಲಸಿದ್ದಪ್ಪ ಪೂಜೇರಿ ಮಾತನಾಡಿ, ಪ್ರಜಾಪ್ರಭುತ್ವದಲಿ ಮತದಾನ ಮತ್ತು ಚುನಾವಣೆ ವಿಷಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಪ್ರಬಂಧದ ವಿಷಯ ನೀಡಿ, ಪ್ರೌಢಶಾಲೆ ವಿಭಾಗ, ಪದವಿ ಪೂರ್ವ ಕಾಲೇಜು ವಿಭಾಗ ಮತ್ತು ಪದವಿ ಮತ್ತು ವಿಶ್ವವಿದ್ಯಾಲಯಗಳ ವಿಭಾಗವಾರು ಪ್ರತ್ಯೇಕ ವಿಷಯಗಳ ಮೇಲೆ ಸ್ಪರ್ಧೆ ನಡೆಸುವಂತೆ ಸೂಚಿಸಿದರು.
More news from ಕರ್ನಾಟಕ and nearby areas
- ನಮ್ಮ ತಂದೆ ರಾಜಾ ವೆಂಕಟಪ್ಪ ನಾಯಕ ಅವರು ಕಡಿಮೆ ಮಾತನಾಡುವ ವ್ಯಕ್ತಿತ್ವದವರಾಗಿದ್ದರು. ಅವರು ಯಾವುದೇ ಕೆಲಸಕ್ಕೆ ಕೈ ಹಾಕಿದರೆ ಅಪೂರ್ಣವಾಗುತ್ತಿರಲಿಲ್ಲ. ಹಾಗೆ ನಾನು ಸಹ ಕಡಿಮೆ ಮಾತನಾಡುವೆ ಸುರಪುರ ಮತಕ್ಷೇತ್ರದ ಅಭಿವೃದ್ಧಿಗೆ ಹೆಚ್ಚು ಕೆಲಸ ಮಾಡುವೆ ಎಂದು ಶಾಸಕ ರಾಜಾ ವೇಣುಗೋಪಾಲ್ ನಾಯಕ್ ಹೇಳಿದರು. ತಾಲೂಕಿನ ಅಮ್ಮಾಪುರ ಗ್ರಾಮದಲ್ಲಿ ಶಾಸಕ ರಾಜಾ ವೇಣುಗೋಪಾಲ್ ನಾಯಕ್ ಮತ್ತು ಕೆವೈಡಿಸಿಸಿ ನೂತನ ಅಧ್ಯಕ್ಷ ವಿಠ್ಠಲ್ ವಿ ಯಾದವ್ ಅವರಿಗೆ ಗ್ರಾಮಸ್ಥರು ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ನನಗೆ ಸನ್ಮಾನ ಸಮಾರಂಭಗಳಲ್ಲಿ ಹೆಚ್ಚು ಆಸಕ್ತಿ ಇಲ್ಲ. ಸನ್ಮಾನಕ್ಕಿಂತ ಕೆಲಸಗಳು ಮುಖ್ಯ, ಸನ್ಮಾನಗಳಿಂದ ಜವಾಬ್ದಾರಿಗಳು ಹೆಚ್ಚುತ್ತವೆ, ಕಲಬುರ್ಗಿ-ಯಾದಗಿರಿ ಸಚಿವರು, ಶಾಸಕರ ಸಹಕಾರದಿಂದ ಡಿಸಿಸಿ ಬ್ಯಾಂಕಿನ ಅಧಿಕಾರ ಲಭಿಸಿದೆ, ಈ ಭಾಗದ ರೈತರ ಏಳಿಗೆಗಾಗಿ ನೂತನ ಅಧ್ಯಕ್ಷರು ಶ್ರಮಿಸಲಿದ್ದಾರೆ ಎಂದು ಹೇಳಿದರು. ಈ ವೇಳೆ ಕೆವೈಡಿಸಿಸಿ ಬ್ಯಾಂಕಿನ ಅಧ್ಯಕ್ಷ vi ಬ್ಲ್ಯಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗರಾಜ ಬಾಚಿಮಟ್ಟಿ, ಮುಖಂಡ ಬಾಪುಗೌಡ ಮಾತನಾಡಿದರು. ಮಾಜಿ ಜಿ. ಪಂ ಅಧ್ಯಕ್ಷ ರಾಜಶೇಖರ ಗೌಡ ಪಾಟೀಲ್, ಮುಖಂಡ ಶಾಂತಗೌಡ ಪಾಟೀಲ್ ಚನ್ನಪಟ್ಟಣ, ರಾಜಾ ಸಂತೋಷ ನಾಯಕ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ರಾಜಾ ಕುಮಾರ ನಾಯಕ, ರಾಜಾ ವಾಸುದೇವ ನಾಯಕ, ರವಿಚಂದ್ರ ಹುದ್ದಾರ್, ಭೀಮರಾಯ ಮೂಲಿಮನಿ, ಬಸನಗೌಡ ಪಾಟೀಲ್, ಮರ್ಲಿಂಗಪ್ಪ ಕರ್ನಾಳ, ದೊಡ್ಡ ದೇಸಾಯಿ, ರಾಜಾಪಿಡ್ಡ ನಾಯಕ್, ಅಬ್ದುಲ್ ಗಫರ್ ನಗನೂರಿ, ದುರ್ಗಪ್ಪ ಗೋಗಿಕೆರ, ವೆಂಕಟೇಶ್ ಹೊಸ್ಮನಿ, ವೆಂಕೋಬ ಯಾದವ ಸೇರಿ ಅನೇಕರು ಉಪಸ್ಥಿತರಿದ್ದರು.1
- ಕೆಎಸ್ಸಾರ್ಟಿಸಿ ಬಸ್‌ಗೆ ಚಾಲನೆ ನೀಡಿದ ಸಚಿವ ಎಸ್ ಮಧು ಬಂಗಾರಪ್ಪ ಸೊರಬ: ಸೊರಬ-ಕರಡಿಗೆರೆ-ಜಂಬೆಹಳ್ಳಿ-ಕAತನಹಳ್ಳಿ-ಗುಡವಿ-ಬಳ್ಳಿಬೈಲು-ದುಗ್ಲಿಹೊಸೂರು-ಸAಪಗೋಡು-ನರೂರು-ಎಡ್ರಬೈಲು ಮಾರ್ಗದ ಕೆಎಸ್ಸಾರ್ಟಿಸಿ ಬಸ್‌ಗೆ ಸಚಿವ ಎಸ್ ಮಧುಬಂಗಾರಪ್ಪ ಶುಕ್ರವಾರ ಪಟ್ಟಣದ ಬಂಗಾರಧಾಮದ ಆವರಣದಲ್ಲಿ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಿಂದ ಶಕ್ತಿ ಯೋಜನೆಯಿಂದಾಗಿ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ. ಮಹಿಳೆಯರ ಪ್ರಯಾಣವು ಹೆಚ್ಚಾಗಿದ್ದು, ಸಾರಿಗೆ ನಿಗಮಗಳ ಆದಾಯದಲ್ಲಿ ಹೆಚ್ಚಳವಾಗಿದೆ. ದೈನಂದಿನ ಪ್ರಯಾಣ ವೆಚ್ಚ ಉಳಿತಾಯವಾಗಿ ಆ ಹಣವನ್ನು ಇತರೆ ಅಗತ್ಯತೆಗಳಿಗೆ ಬಳಸಿಕೊಳ್ಳಬಹುದಾಗಿದ್ದು, ಶಕ್ತಿ ಯೋಜನೆ ಪ್ರಯಾಣ ಅಷ್ಟೇ ಅಲ್ಲದೇ ಮಹಿಳೆಯರ ಆರ್ಥಿಕ ಸ್ವಾವಲಂಬನೆ ಹೊಂದಲು ಸಾಧ್ಯವಾಗಿದೆ. ಅಲ್ಲದೇ ವಿದ್ಯಾರ್ಥಿಗಳಿಗೂ ಅನುಕೂಲವಾಗಿದೆ. ಜನವರಿ ತಿಂಗಳ ಅಂತ್ಯದೊಳಗೆ ರಾಜ್ಯದ ಎಲ್ಲಾ ರಸ್ತೆಗಳನ್ನು ಗುಂಡಿಮುಕ್ತಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸೂಚಿಸಿದ್ದಾರೆ. ಹಾಗಾಗಿ ಸೊರಬ ಕ್ಷೇತ್ರದ ಅಭಿವೃದ್ಧಿ ಕಾರ್ಯಕ್ಕೆ ಬಿಡುಗಡೆಯಗಿರುವ 50 ಕೋಟಿ ರೂಪಾಯಿಗಳಲ್ಲಿ 45 ಕೋಟಿ ರೂಪಾಯಿಗಳನ್ನು ರಸ್ತೆ ಅಭಿವೃದ್ಧಿಗೆ ಬಳಸಲಾಗುತ್ತಿದ್ದು, ಈಗಾಗಲೇ ಕಾಮಗಾರಿ ಆರಂಭಿಸಲಾಗಿದೆ. ಗ್ರಾಮೀಣ ಜನರ ಬೇಡಿಕೆಯ ಹಿನ್ನೆಲೆಯಲ್ಲಿ ಕ್ಷೇತ್ರದಾದ್ಯಂತ ಇನ್ನೂ 15 ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು. ಈ ಸಂದರ್ಭದಲ್ಲಿ ವಿಭಾಗೀಯ ಸಂಚಲನಾಧಿಕಾರಿ ದಿನೇಶ ಕುಮಾರ್ ಚನ್ನಗಿರಿ, ಸಾಗರ ಘಟಕ ವ್ಯವಸ್ಥಾಪಕ ಶ್ರೀಶೈಲ ಬಿರಾದಾರ, ಸಂಚಾರ ನಿಯಂತ್ರಕ ರುದ್ರೇಶ ನಂದೂರು, ಶಿರಸಿ ಶಾಸಕ ಭೀಮಣ್ಣನಾಯ್ಕ್, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಚಂದ್ರಭೂಪಾಲ, ತಾಲೂಕು ಅಧ್ಯಕ್ಷ ಜಯಶೀಲಗೌಡ ಅಂಕರವಳ್ಳಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಡಿ.ಬಿ ಅಣ್ಣಪ್ಪ ಹಾಲಘಟ್ಟ, ಸದಾನಂದಗೌಡ ಬಿಳಗಲಿ, ಪ್ರಮುಖರಾದ ಹೆಚ್ ಗಣಪತಿ, ಎಂ.ಡಿ ಶೇಖರ್, ಕೆ.ವಿ ಗೌಡ, ಶಿವಲಿಂಗೇಗೌಡ, ಕಲ್ಲಂಬಿ ಹಿರಿಯಣ್ಣ, ಶ್ರೀಕಾಂತ ಚಿಕ್ಕಶಕುನ, ಅತಿಕುರ್ ರೆಹಮಾನ್ ಮತ್ತಿತರರಿದ್ದರು. ವರದಿ: ಸಂದೀಪ ಯು.ಎಲ್ ಸೊರಬ4
- *ಭಾರತ ನಲ್ಲಿ ವೈರಲ್*1
- ರಾಜ್ಯ ಕಾಂಗ್ರೆಸ್ ಸರಕಾರ ಜಾರಿಗೊಳಿಸುತ್ತಿರುವ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ವಿಧೇಯಕ -2025 ಮಸೂದೆಯನ್ನು ವಿರೋಧಿಸಿ ಬಿಜೆಪಿ ಕಾರ್ಯಕರ್ತರು ನಗರದ ಡಾ. ಬಿ ಆರ್ ಅಂಬೇಡ್ಕರ್ ವೃತ್ತದಲ್ಲಿ ನಡೆಸಿದರು. ಕರ್ನಾಟಕ ದ್ವೇಷ - ಭಾಷಣ ಮತ್ತು ದ್ವೇಷ ಅಪರಾಧಗಳ - ಮಸೂದೆಯ ಮೂಲಕ ವಾಕ್ ಸ್ವಾತಂತ್ರ್ಯ ಮತ್ತು ವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದರು1
- *ಭಾರತ ನಲ್ಲಿ ವೈರಲ್*1
- *ಭಾರತ ನಲ್ಲಿ ವೈರಲ್*1
- *ಭಾರತ ನಲ್ಲಿ ವೈರಲ್*1