Shuru
Apke Nagar Ki App…
*ಭಾರತ ನಲ್ಲಿ ವೈರಲ್*
Md Aleemulla Shariff
*ಭಾರತ ನಲ್ಲಿ ವೈರಲ್*
More news from ಕರ್ನಾಟಕ and nearby areas
- ಡಿ ಹಲಸಹಳ್ಳಿ ಷಡಕ್ಷರ ಗವಿಮಠದಕಾರ್ಯಕ್ರಮದ ದಿವ್ಯಸಾನಿದ್ಯ ವಹಿಸಿದ್ದ ವಹಿಸಿದ್ದ ಸುತ್ತೂರು ವೀರ ಸಿಂಹಾಸನ ಮಠದ ಶ್ರೀ ಶಿವರಾತ್ರಿ ದೇಶಿಕೆಂದ್ರ ಮಹಾಸ್ವಾಮಿ ಮಾತನಾಡಿ ಹಲವು ಏಳು ಬೀಳುಗಳ ನಡುವೆಯೂ ಮೃದು ಸ್ವಾಭಾವದ ಷಡಕ್ಷರಸ್ವಾಮಿ ರಾಜ್ಯದ ಲಕ್ಷಾಂತರ ಭಕ್ತರ ಮನ ಗೆದ್ದಿದ್ದಾರೆ, ಕ್ಷೇತ್ರದ ಭಕ್ತಾಧಿಗಳಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಚಿಕ್ಕದಾಗಿ ಆರಂಭವಾದ ಕ್ಷೇತ್ರದಲ್ಲಿ ದಾಸೋಹ ಭವನ, ಷಡಕ್ಷರ ದೇವರ ಹೆಸರಿನಲ್ಲಿ ಮಂಗಳ ಮಂಟಪ ಮತ್ತು ಬೃಹತ್ ರಾಜ ಗೋಪುರ ನಿರ್ಮಿಸಿ ಗವಿಮಠದ ಕೀರ್ತಿಯನ್ನು ಬೆಳಗಿಸಿದ್ದಾರೆ ಎಂದು ಮೆಚ್ಚುಗೆ ಮಾತುಗಳನ್ನಾಡಿದರು. ಷಡಕ್ಷರ ಸ್ವಾಮಿ ದೀಕ್ಷೆ ಪಡೆದಾಗ ಕ್ಷೇತ್ರದಲ್ಲಿ ಖಾಲಿ ಜಾಗ ಹೊರತು ಪಡಿಸಿ ಎನು ಇರಲಿಲ್ಲ. ಆರಂಭದಲ್ಲಿ ಬಸವ ಮೂರ್ತಿ ಇಟ್ಟುಕೊಂಡು ಆರಂಭವಾದ ಕ್ಷೇತ್ರ, ಇಂದು ಬೃಹದಾಕಾರವಾಗಿ ಬೆಳೆಯುತ್ತಿದೆ. ಗುರುವಿನ ಬಗ್ಗೆ ಭಕ್ತಿ ಮತ್ತು ನಿಷ್ಠೆ ಇದ್ದಾಗ ಇಂತಹ ಸಾಧನೆ ಸಾಧ್ಯ. ಭಕ್ತಾಧಿಗಳ ಸಹಕಾರದಿಂದ ಕ್ಷೇತ್ರವು ಹಂತ ಹಂತವಾಗಿ ಅಭಿವೃದ್ಧಿ ಹೊಂದುತ್ತಿದೆ. ಮಠದ ಮೇಲೆ ಭಕ್ತಾಧಿಗಳ ವಿಶ್ವಾಸ ಹೀಗೆಯೇ ನಿರಂತವಾಗಿರಲಿ ಎಂದರು. ಈ ಸಂದರ್ಭದಲ್ಲಿ ಕನಕಪುರ ದೇಗುಲ ಮಠದ ಶ್ರೀ ಚನ್ನಬಸವಸ್ವಾಮಿ, ಕುದೇರು ಮಠದ ಪೀಠಾಧ್ಯಕ್ಷರಾದ ಗುರುಶಾಂತಸ್ವಾಮಿ, ಮರಳೆಗವಿ ಮಠದ ಶಿವರುದ್ರಸ್ವಾಮಿ, ರಾಜ್ಯದ ಹಲವೆಡೆಯಿಂದ ಬಂದ ಹಾಗೂ ತಾಲೂಕಿನ ಹರಗುರು ಚರಮೂರ್ತಿಗಳು,ಮಾಜಿ ಶಾಸಕ ಡಾ.ಕೆ.ಅನ್ನದಾನಿ, ಬಿಜೆಪಿ ರಾಜ್ಯ ಕಾರ್ಯದರ್ಶಿ ಎಚ್.ಆರ್.ಅಶೋಕ್, ಕುಮಾರ್, ಗರ್ಭಿಣಿ ಮತ್ತು ಪ್ರಸೂತಿ ತಜ್ಞ ಡಾ.ಚಂದ್ರಶೇಖರ್, ಮುಖಂಡರಾದ ಹಲಸಹಳ್ಳಿ ನವೀನ್, ಮಹೇಶ್,ಸಿದ್ದಾಚಾರಿ ಸೇರಿದಂತೆ ಹಲವರು ಭಾಗವಹಿಸಿದ್ದರು.1
- Post by Chintu1
- ಧ್ರುವ ಸರ್ಜಾ ಅಭಿಮಾನಿಯ ವಿಭಿನ್ನ ಅಭಿವ್ಯಕ್ತಿ ಎದೆ ಮೇಲೆ ಟ್ಯಾಟೂ, ನಟನಿಗೆ ಅಪಾರ ಪ್ರೀತಿ1
- ಮೇ 9ರಂದು ಚಿತ್ರದುರ್ಗದಲ್ಲಿ ನಡೆಯಲಿರುವ ಬಿ.ಎಸ್. ಯಡಿಯೂರಪ್ಪ ಅಭಿಮಾನೋತ್ಸವಕ್ಕೆ 10 ಲಕ್ಷ ಜನ ಸೇರಲಿದ್ದಾರೆ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪಕ್ಷವನ್ನು ಕಟ್ಟಿ ಬೆಳೆಸಿದ ಧೀಮಂತ ನಾಯಕ ಯಡಿಯೂರಪ್ಪ ಅವರನ್ನು ಬಲವಂತವಾಗಿ ಒಪ್ಪಿಸಿ ಸನ್ಮಾನಿಸಲಾಗುತ್ತಿದೆ. ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಆಗಮಿಸುತ್ತಿದ್ದಾರೆ. ಇದೇ ವೇಳೆ ಪಕ್ಷದ ಬೆಳವಣಿಗೆಗೆ ಶ್ರಮಿಸಿದ ಇತರ ಹಿರಿಯ ನಾಯಕರನ್ನೂ ಅವರು ಸ್ಮರಿಸಿದರು.1
- बेंगलुरु में 18 साल की छात्रा की पूजा के लिए पीरियड्स रोकने वाली हार्मोनल गोलियां (Norethisterone) लेने से मौत हो गई। बिना डॉक्टर की सलाह के 3 दिन तक गोलियां लेने से उसे डीप वेन थ्रोम्बोसिस (DVT) (नसों में खून का थक्का जमना) हुआ। खून का थक्का नाभि तक पहुंच गया, जिसके बाद इलाज में देरी के कारण लड़की की जान चली गई1
- ಕಡೂರು : ತಾಲ್ಲೂಕಿನಲ್ಲಿ ಸಮೃದ್ದಿ ಮಳೆಯಾಗಲೆಂದು ಪ್ರಾರ್ಥಿಸಿ ಮಳೆ ದೇವರೇಂದೆ ಖ್ಯಾತಿ ಪಡೆದಿರುವ ಶೃಂಗೇರಿ ತಾಲ್ಲೂಕಿನ ಕಿಗ್ಗಾದ ಋಷ್ಯಶೃಂಗೇಶ್ವರನಿಗೆ ತಾಲ್ಲೂಕಿನ ಚಿಕ್ಕಪಟ್ಟಣಗೆರೆ ಗ್ರಾಮಸ್ಥರು ಶನಿವಾರ ಶತಾರುದ್ರಾಭಿಷೇಕ ಪೂಜೆ ಮೂಲಕ ವಿಶೇಷ ಪೂಜೆ ಸಲ್ಲಿಸಿದರು. ಈಗಾಗಲೇ ಸುಡುಬಿಸಿಲಿನಿಂದ ತತ್ತರಿಸುತ್ತಿರುವ ಜನತೆಗೆ ಮಳೆಗಾಗಿ ಕಾಯುತ್ತಿದ್ದು, ಕೆರೆಕಟ್ಟೆಗಳಲ್ಲಿನ ಅಂತರ್ಜಲ ಮಟ್ಟ ಕುಸಿಯುತ್ತಿದೆ. ರೈತಾಪಿ ವರ್ಗಕ್ಕೆ ಉತ್ತಮ ಮಳೆ-ಬೆಳೆ ಕರುಣಿಸುವಂತೆ ಪ್ರಾರ್ಥಿಸಲಾಗಿದೆ ಎಂದು ಗ್ರಾಮದ ಮುಖಂಡ ಚಿಕ್ಕಪಟ್ಟಣಗೆರೆ ನಾಗರಾಜ್ ತಿಳಿಸಿದರು. ಈ ಸಂದರ್ಭದಲ್ಲಿ ಶಿವಮೂರ್ತಿ,ಸಿ.ಎಸ್. ರಮೇಶ್, ಶ್ರೀಧರ್, ವಿಜಯ್‌ಕುಮಾರ್, ಜಗದೀಶ್ ಇದ್ದರು.1
- ಧಾರ್ಮಿಕ ಸಭೆಯಲ್ಲಿ ಸಚಿವ ಈಶ್ವರ ಖಂಡ್ರೆ ಮಾತು: ಜಾತ್ರೆ, ಉತ್ಸವ,ರಾಜಗೋಪುರ ಲೋಕಾರ್ಪಣೆಯಂತಹ ಧಾರ್ಮಿಕ ಆಚರಣೆಗಳಿಂದ ಸಮುದಾಯದಲ್ಲಿ ಹೊಸ ಚೈತನ್ಯ ಮೂಡುವುದರ ಜೊತೆಗೆ ನಮ್ಮ ಸಂಸ್ಕೃತಿ, ಪರಂಪರೆಯ ಪುನರುತ್ಥಾನವಾಗುತ್ತದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ.ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ. ಡಿ.ಹಲಸಹಳ್ಳಿ ಇತಿಹಾಸ ಪ್ರಸಿದ್ದ ಷಡಕ್ಷರ ಗವಿಮಠದಲ್ಲಿ ಸುತ್ತೂರು ಪರಮಪೂಜ್ಯರ ದಿವ್ಯಸಾನಿಧ್ಯದಲ್ಲಿ ಅಯೋಜಿಸಿದ್ದ ಧಾರ್ಮಿಕ ಸಭೆ ಹಾಗೂ ರಾಜಗೋಪುರ ಮತ್ತು ಬಸವದ್ವಾರ ,ಷಡಕ್ಷರ ಮಂಗಳಮAಟಪ ಲೋಕಾರ್ಪಣೆಯ ಸಮಾರಂಭದಲ್ಲಿ ಬಾಗವಹಿಸಿ ಮಾತನಾಡಿದ ಅವರು, ಇಂತಹ ಕಾರ್ಯಕ್ರಮಗಳು ಗ್ರಾಮದಲ್ಲಿ ನಡೆದಾಗ ಬಂಧು ಮಿತ್ರರು ಒಗ್ಗೂಡುತ್ತಾರೆ. ಸಂಬAಧಗಳು ಗಟ್ಟಿಗೊಳ್ಳುತ್ತವೆ,ಸಮಾಜದಲ್ಲಿ ಒಗ್ಗಟ್ಟು ಹೆಚ್ಚಾಗಲಿದೆ ಎಂದರು. ನಡುಗನ್ನಡ ಮಹಾಕವಿ ಹಾಗೂ ಸಂಸ್ಕೃತ ಕನ್ನಡದಲ್ಲಿ ಪಾಂಡಿತ್ಯ ಹೊಂದಿದ್ದ ಶ್ರೀಷಡಕ್ಷರ ದೇವರು ರಾಜವಿಲಾಸ ಸೇರಿದಂತೆ ಹಲವು ಕೃತಿಗಳನ್ನು ರಚಿಸಿ ಈ ನಾಡಿಗೆ ಬೆಳಕು ನೀಡಿದ್ದಾರೆ, ಈ ಗವಿಮಠದಲ್ಲಿ ಬಸವೇಶ್ವರಸ್ವಾಮಿ ಗುಹೆಯಲ್ಲಿ ಮೂಡಿ ಈ ಕ್ಷೇತ್ರ ಪವಿತ್ರವಾಗಿದೆ ಎಂದರು. ಪರಿಸರ ಪ್ರೇಮಿಗಳಾಗಿದ್ದ ಪೂರ್ವಜರು: ನಮ್ಮ ಪೂರ್ವಜರು ಮಹಾನ್ ಪರಿಸರ ಪ್ರೇಮಿಗಳಾಗಿದ್ದರು. ನಮಗೆ ಈ ಭೂಮಿಯಲ್ಲಿ ಬದುಕುವ ಹಕ್ಕು ಇರುವಂತೆಯೇ ಖಗ, ಮೃಗ, ಕೀಟ, ಸಸ್ಯಗಳಿಗೂ ಬದುಕುವ ಹಕ್ಕಿದೆ ಎಂದು ತಿಳಿದಿದ್ದರು. ಬೆಟ್ಟ, ಗುಡ್ಡಗಳನ್ನೂ ಪೂಜಿಸುತ್ತಿದ್ದರು. ವನಮಹೋತ್ಸವ ಆಚರಿಸುವ ಮೂಲಕ ಕಾಡಿಗೆ ಗೌರವ ನೀಡುತ್ತಿದ್ದರು. ಪ್ರಕೃತಿ ಪರಿಸರ ಉಳಿಸಿದ್ದಾರೆ ಎಂದರು. ಆದರೆ ಇಂದು ಆಧುನಿಕ ಜೀವನಶೈಲಿ ನಮ್ಮ ನಿದ್ದೆ ಗೆಡಿಸಿದೆ. ನಮ್ಮ ಯುವಜನರು ನಮ್ಮ ಸಂಸ್ಕೃತಿ, ಪರಂಪರೆ ಮರೆಯುತ್ತಿದ್ದಾರೆ. ಮದ್ಯಪಾನ, ಧೂಮಪಾನ, ಮಾದಕ ದ್ರವ್ಯ ವ್ಯಸನಿಗಳಾಗಿ ತಮ್ಮ ಬದುಕನ್ನೇ ನಾಶ ಮಾಡಿಕೊಳ್ಳುತ್ತಿದ್ದಾರೆ. ಇಂತಹ ಯುವಜನರಲ್ಲಿ ಇಂತಹ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸಬೇಕು. ನಮ್ಮ ಯುವಜನರು ವ್ಯಸನ ಮುಕ್ತರಾಗಿ, ಶಾರೀರಿಕವಾಗಿ ಸದೃಢರಾಗಿ ಸರಿಯಾದ ಮಾರ್ಗದಲ್ಲಿ ಸಾಗಲು ಪೂಜ್ಯರು ದಾರಿ ತೋರಿಸಬೇಕು ಎಂದರು. ವೀರಶೈವ ಲಿಂಗಾಯತ ಸಮಾಜಕ್ಕೆ ಭವ್ಯ ಇತಿಹಾಸ ಇದೆ. ನಾವು ಕೇವಲ ನಮ್ಮ ಪೂರ್ವಜರ ಹಿರಿಮೆಯ ಬಗ್ಗೆ ಹೆಮ್ಮಪಟ್ಟರೆ ಸಾಲದು, ವರ್ತಮಾನದ ಜೀವಂತಿಕೆಯನ್ನೂ ಉಳಿಸಬೇಕು. ಇದಕ್ಕಾಗಿ ಶ್ರಮಿಸಿ ನಮ್ಮ ಸಮಾಜದ ಗರಿಮೆ ಎತ್ತಿಹಿಡಿಯಬೇಕು ಎಂದ ಅವರು ಬಸವಣ್ಣನವರು ಕಾಯಕವೇ ಕೈಲಾಸ ಎಂದರು, ದಾಸೋಹದ ಮಹತ್ವ ತಿಳಿಸಿದರು. ನಾವು ದುಡಿದು ಗಳಿಸಬೇಕು, ಗಳಿಸಿ ಉಳಿಸಬೇಕು, ಉಳಿಸಿದ್ದನ್ನು ದಾಸೋಹದ ಮೂಲಕ ಸಮಾಜಕ್ಕೆ ಮರಳಿ ನೀಡಬೇಕು ಎಂದು ಕರೆ ನೀಡಿದರು. ನುಡಿದಂತೆ ನಡೆ, ಈ ಜನ್ಮ ಕಡೆ ಎಂಬ ಶರಣವಾಣಿ ಸ್ಮರಿಸಿದ ಅವರು, ವೀರಶೈವ ಲಿಂಗಾಯತ ಮಠಮಾನ್ಯಗಳು ಈ ನಿಟ್ಟಿನಲ್ಲಿ ಅಕ್ಷರ, ಆಶ್ರಯ, ಅನ್ನ ದಾಸೋಹದ ಮೂಲಕ ಅದ್ಭುತ ಕಾರ್ಯ ಮಾಡುತ್ತಿವೆ. ಆಧುನಿಕ ಸಮಾಜದ ನಿರ್ಮಾಣಕ್ಕೆ ದೊಡ್ಡ ಕೊಡುಗೆ ನೀಡಿವೆ ಎಂದರು. ಎಲ್ಲ ಧರ್ಮ, ಜಾತಿ, ಭಾಷೆಯವರನ್ನೂ ಅಪ್ಪಿಕೊಂಡು, ಒಪ್ಪಿಕೊಂಡು, ಎಲ್ಲರಿಗೂ ಸಾಮಾಜಿಕ ನ್ಯಾಯಕೊಟ್ಟ ಸಮುದಾಯ ವೀರಶೈವ ಲಿಂಗಾಯತ ಸಮುದಾಯ. ಸಂಘಟನೆಯಲ್ಲಿ ಶಕ್ತಿ ಇದೆ. ವಿಘಟನೆಯಲ್ಲಿ ದೌರ್ಬಲ್ಯವಿದೆ. ಹೀಗಾಗಿ ನಾವು ಸಂಘಟಿತರಾಗಿ ನಮ್ಮ ಉಳಿವಿಗಾಗಿ ಶ್ರಮಿಸಬೇಕು ಎಂದರು. ಆಧ್ಯಾತ್ಮಿಕ, ಧಾರ್ಮಿಕ ಕ್ಷೇತ್ರವೂ ಕಲುಷಿತವಾಗುತ್ತಿದೆ: ಈಶ್ವರ ಖಂಡ್ರೆ ವಿಷಾದ ಇಂದು ಎಲ್ಲ ಕ್ಷೇತ್ರಗಳಂತೆ ಆಧ್ಯಾತ್ಮಿಕ, ಧಾರ್ಮಿಕ ಕ್ಷೇತ್ರವೂ ಕಲುಷಿತವಾಗುತ್ತಿರುವುದು ಆತಂಕದ ವಿಷಯ. ಈ ನಿಟ್ಟಿನಲ್ಲಿ ಪೂಜ್ಯರು, ಹಿರಿಯರು, ಮಠಾಧಿಪತಿಗಳು ಧಾರ್ಮಿಕ ಕ್ಷೇತ್ರದ ಪಾವಿತ್ರ‍್ಯ ಸಂರಕ್ಷಣೆಗೆ ಮಾರ್ಗದರ್ಶನ ಮಾಡಬೇಕು ಎಂದು ಮನವಿ ಮಾಡಿದರು. ಕೆಳಗೆ ಬಿದ್ದವರನ್ನು ಮೇಲೆತ್ತುವುದೇ ಧರ್ಮ ಎಂದ ಅವರು, ಇಂತಹ ಕಾರ್ಯವನ್ನು ಅಖಿಲ ಭಾರತ ವೀರಶೈವ ಮಹಾಸಭಾ ಮಾಡುತ್ತಿದೆ. ತಾಲೂಕು, ಜಿಲ್ಲಾ ಕೇಂದ್ರಗಳಲ್ಲಿ ವೀ.ಲಿಂ.ಭವನ, ವಿದ್ಯಾರ್ಥಿನಿಲಯ ನಿರ್ಮಾಣ ಮಾಡುವ ಸಂಕಲ್ಪ ಮಾಡಿದೆ ಎಂದು ತಿಳಿಸಿದರು. ತಮ್ಮನ್ನು ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಕ್ಕಾಗಿ ಧನ್ಯವಾದ ಅರ್ಪಿಸಿದ ಅವರು, ಇಂದು ಸಮಾಜ ಕವಲು ದಾರಿಯಲ್ಲಿದೆ. ಪ್ರಸಕ್ತ ಸನ್ನಿವೇಶದಲ್ಲಿ ಎಲ್ಲರಿಗೂ ಸಾಮಾಜಿಕ ನ್ಯಾಯ ಕೊಟ್ಟ ನಮ್ಮ ಸಮಾಜದ ಮುಂದೆಯೂ ಅನೇಕ ಸಮಸ್ಯೆಗಳಿವೆ. ಅನೇಕ ಸವಾಲುಗಳಿವೆ. ಆ ಸವಾಲುಗಳನ್ನು ಮೆಟ್ಟಿನಿಲ್ಲಲು ಶ್ರಮಿಸುವುದಾಗಿ ಹೇಳಿದರು. ಇದೇ ಸಂದರ್ಭದಲ್ಲಿ ಲೇಖಕಿ ಶಿಲ್ಪ ಮುತ್ತು ಬರೆದಿರುವ ಷಡಕ್ಷರ ಗವಿಮಠದ ಕಿರುಪರಿಚಯ ಪುಸ್ತಕವನ್ನು ಈಶ್ವರ್ ಕಂಡ್ರೆ ಬಿಡುಗಡೆ ಮಾಡಿದರು1
- Post by Chintu1
- ಮಠದಲ್ಲಿ ಗಲಾಟೆ, ಎಎಸ್‌ಪಿ ವರ್ತನೆ ವಿವಾದ ಮಾಧ್ಯಮ ತಡೆ ಆರೋಪ, ವಿಡಿಯೋ ವೈರಲ್1